Wednesday, 22 July 2026

|| *ಹುಡುಗಿಯರಿಗೆ ಕಂಕಣ ಬಲ ಕೂಡಿ ಬರಲು ಹೀಗೆ ಮಾಡಿ:*|| 1. ಮೊಲಗಳಿಗೆ ಆಹಾರವನ್ನು ನೀಡಿ. 2. ಗುರುವಾರ ಉಪವಾಸ ವ್ರತವನ್ನು ಆಚರಿಸಿ ವಿಷ್ಣು ಮತ್ತು ಗುರುವನ್ನು ಧ್ಯಾನಿಸಿ. 3. ದೇವಸ್ಥಾನದಲ್ಲಿ ಹಳದಿ ವಸ್ತುಗಳನ್ನು ದಾನ ಮಾಡಿ. 4. ಗುರುವಾರದಂದು ಆಲದ ಮರಕ್ಕೆ, ಅರಳಿ ಮರಕ್ಕೆ ಮತ್ತು ಬಾಳೆ ಮರಕ್ಕೆ ನೀರನ್ನು ಅರ್ಪಿಸಿ. 5. ಪ್ರತಿದಿನ ಹಣೆಗೆ ಕುಂಕುಮ ಅಥವಾ ಶ್ರೀಗಂಧದ ತಿಲಕವನ್ನು ಹಚ್ಚಿ, ತುಳಸಿ ಮಾಲೆಯನ್ನು ಧರಿಸಿ. 6. ಹೆಚ್ಚಿನ ಸಂದರ್ಭಗಳಲ್ಲಿ ಹಳದಿ ಬಟ್ಟೆಗಳನ್ನು ಧರಿಸಿ. 7. ಮನೆಯಲ್ಲಿ ಕರ್ಟನ್ ಮತ್ತು ಶೀಟ್ ಗಳ ಬಣ್ಣವನ್ನು ಗುಲಾಬಿ ಬಣ್ಣದಲ್ಲಿ ಇರಿಸಿ. 8. ಗುರುವಾರದಂದು ಅರಳಿ ಮರದ ಕೆಳಗೆ ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ. 9. ಹುಡುಗಿಯ ತಂದೆ ಅಥವಾ ಸಹೋದರನು ವಿವಾಹ ಸಂಬಂಧದ ಬಗ್ಗೆ ಮಾತನಾಡಲು ಮನೆಯಿಂದ ಹೊರಗೆ ಹೋದಾಗ, ಆ ಹುಡುಗಿಯು ಅವರು ಹಿಂತಿರುಗುವವರೆಗೂ ತನ್ನ ಕೂದಲನ್ನು ತೆರೆದಿರಬೇಕು. *ಹುಡುಗರಿಗೆ ಕಂಕಣ ಬಲ ಕೂಡಿ ಬರಲು ಹೀಗೆ ಮಾಡಿ:* 1. ಶುಕ್ರವಾರದಂದು ಉಪವಾಸ ವ್ರತವನ್ನು ಆಚರಿಸಬೇಕು. 2. ಹುಡುಗರು 21 ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕುಳಿತು ಪೂಜೆ ಮಾಡಿ - ಸೀತಾ ರಾಮರ ಪಾದಗಳಿಗೆ ಸಿಂಧೂರವನ್ನು ಅರ್ಪಿಸಬೇಕು. 3. ಪ್ರತಿ ಗುರುವಾರದಂದು ಸ್ನಾನದ ನೀರಿನಲ್ಲಿ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಸ್ನಾನ ಮಾಡಬೇಕು. 4. ಶುಕ್ಲ ಪಕ್ಷದ ಪ್ರತಿ ಸೋಮವಾರದಂದು ಉಪವಾಸವನ್ನು ಇಟ್ಟುಕೊಳ್ಳಿ ಮತ್ತು ಎಕ್ಕದ ಎಂಟು ಎಲೆಗಳನ್ನು ಪೂಜಿಸಿ, ಏಳು ಎಲೆಗಳಿಂದ ತಟ್ಟೆಯನ್ನು ಮಾಡಿ ಎಂಟನೇ ಎಲೆಯ ಮೇಲೆ ನಿಮ್ಮ ಹೆಸರನ್ನು ಬರೆದು ಶಿವನಿಗೆ ಅರ್ಪಿಸಿ. 5. ಮನೆಯ ದಕ್ಷಿಣ ಭಾಗದಲ್ಲಿ ಬೇವಿನ ಮರವನ್ನು ನೆಟ್ಟು ಅದಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸಿ. 6. ಮದುವೆಗೆ ಮೊದಲು ಕುಂಭ ವಿವಾಹ ಮಾಡಿ. 7. ಕಣ್ಣುಗಳಿಗೆ ಬಿಳಿ ಬಣ್ಣದ ಕಾಜಲ್‌ನ್ನು ಹಚ್ಚಬೇಕು. ಒಂದು ವೇಳೆ ಬಿಳಿ ಬಣ್ಣದ ಕಾಜಲ್‌ ಲಭ್ಯವಿಲ್ಲದಿದ್ದರೆ ಕಪ್ಪು ಬಣ್ಣದ ಕಾಜಲ್‌ನ್ನು ಕೂಡ ಹಚ್ಚಿಕೊಳ್ಳಬಹುದು 8. ಮನೆಯಲ್ಲಿ ವಾಸ್ತು ದೋಷವಿದೆಯೇ ಎಂದು ಪರಿಶೀಲಿಸಿ. ಒಂದು ವೇಳೆ ವಾಸ್ತು ದೋಷವಿದ್ದರೆ ಅದನ್ನು ಶೀಘ್ರದಲ್ಲೇ ಪರಿಹರಿಸಿಕೊಳ್ಳಿ. ಸೂಚನೆ: ಈ ಪರಿಹಾರ ಕ್ರಮಗಳನ್ನು ಕೇವಲ ಮಾಹಿತಿಗಾಗಿ ನೀಡಲಾಗಿದೆ. ವಿವಾಹ ವಿಳಂಬಕ್ಕೆ ಜಾತಕದಲ್ಲಿ ಬೇರೆ ಕಾರಣಗಳು ಸಹ ಇರಬಹುದು. ಆದ್ದರಿಂದ, ನಿಮ್ಮ ಜಾತಕವನ್ನು ಅರ್ಹ ಜ್ಯೋತಿಷಿಗಳಿಗೆ ಅಥವಾ ತಜ್ಞರಿಗೆ ತೋರಿಸಿ ನಂತರವೇ ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು. ಅಜ್ಜಹಳ್ಳಿ ಕೃಷ್ಣಮೂರ್ತಿ
27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು. ಗ್ರಹಣ ಕಾಲದಲ್ಲಿ ಇದನ್ನು ಜಪಿಸಿ. ನಕ್ಷತ್ರ ದೋಷ ನಿವಾಣೆಯಾಗುತ್ತದೆ. 1.ಅಶ್ವಿನಿ: ಓಂ ಶ್ವೇತವರ್ಣೈ ವಿದ್ಮಹೇl ಸುಧಾಕರಾಯೈ ಧೀಮಹಿl ತನ್ನೋ ಅಶ್ವಿನೇನ ಪ್ರಚೋದಯಾತ್ll 2. ಭರಣಿ: ಓಂ ಕೃಷ್ಣವರ್ಣೈ ವಿದ್ಮಹೇl ದಂಡಧರಾಯೈ ಧೀಮಹಿl ತನ್ನೋ ಭರಣೀ ಪ್ರಚೋದಯಾತ್ll 3. ಕೃತ್ತಿಕಾ: ಓಂ ವಣ್ಣಿದೇಹಾಯೈ ವಿದ್ಮಹೇl ಮಹಾತಪಾಯೈ ಧೀಮಹಿl ತನ್ನೋ ಕೃತ್ತಿಕಾ ಪ್ರಚೋದಯಾತ್ll 4.ರೋಹಿಣಿ: ಓಂ ಪ್ರಜಾವಿರುದ್ಧೈ ಚ ವಿದ್ಮಹೇl ವಿಶ್ವರೂಪಾಯೈ ಧೀಮಹಿl ತನ್ನೋ ರೋಹಿಣೀ ಪ್ರಚೋದಯಾತ್ll 5. ಮಗಶಿರಾ: ಓಂ ಶಶಿಶೇಖರಾಯ ವಿದ್ಮಹೇl ಮಹಾರಾಜಾಯ ಧೀಮಹಿl ತನ್ನೋ ಮಗಶೀರ್ಷಾಃ ಪ್ರಚೋದಯಾತ್ll 6. ಆರ್ದ್ರಾ: ಓಂ ಮಹಾಶ್ರೇಷ್ಠಾಯ ವಿದ್ಮಹೇl ಪಶುಂ ತನಾಯ ಧೀಮಹಿl ತನ್ನೋ ಆರ್ದ್ರಾ ಪ್ರಚೋದಯಾತ್ll 7. ಪುನರ್ವಸು: ಓಂ ಪ್ರಜಾವರುಧ್ಯೈ ಚ ವಿದ್ಮಹೇl ಅದಿತಿ ಪುತ್ರಾಯ ಧೀಮಹಿl ತನ್ನೋ ಪುನರ್ವಸು ಪ್ರಚೋದಯಾತ್ll 8. ಪುಷ್ಯಾ: ಓಂ ಬ್ರಹ್ಮವರ್ಚಸಾಯ ವಿದ್ಮಹೇl ಮಹಾದಿಶಾಯಾಯ ಧೀಮಹಿl ತನ್ನೋ ಪುಷ್ಯಃ ಪ್ರಚೋದಯಾತ್ll 9. ಆಶ್ಲೇಷಾ: ಓಂ ಸರ್ಪರಾಜಾಯ ವಿದ್ಮಹೇl ಮಹಾರೋಚನಾಯ ಧೀಮಹಿl ತನ್ನೋ ಆಶ್ಲೇಷಃ ಪ್ರಚೋದಯಾತ್ll 10. ಮಖಾ: ಓಂ ಮಹಾ ಅನಗಾಯ ವಿದ್ಮಹೇl ಪಿತ್ರಿಯಾದೇವಾಯ ಧೀಮಹಿl ತನ್ನೋ ಮಖಃ ಪ್ರಚೋದಯಾತ್ll 11. ಪುಬ್ಬಾ: ಓಂ ಅರಿಯಂನಾಯ ವಿದ್ಮಹೇl ಪಶುದೇಹಾಯ ಧೀಮಹಿl ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll 12. ಉತ್ತರಾ: ಓಂ ಮಹಾಬಕಾಯೈ ವಿದ್ಮಹೇl ಮಹಾಶ್ರೇಷ್ಠಾಯೈ ಧೀಮಹಿl ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll 13. ಹಸ್ತಾ: ಓಂ ಪ್ರಯಚ್ಚತಾಯೈ ವಿದ್ಮಹೇl ಪ್ರಕೃಪ್ರಣೀತಾಯೈ ಧೀಮಹಿl ತನ್ನೋ ಹಸ್ತಾ ಪ್ರಚೋದಯಾತ್ll 14. ಚಿತ್ತಾ: ಓಂ ಮಹಾದೃಷ್ಟಾಯೈ ವಿದ್ಮಹೇl ಪ್ರಜಾರಪಾಯೈ ಧೀಮಹಿl ತನ್ನೋ ಚೈತ್ರಾಃ ಪ್ರಚೋದಯಾತ್ll 15. ಸ್ವಾತಿ: ಓಂ ಕಾಮಸಾರಾಯೈ ವಿದ್ಮಹೇl ಮಹಾನಿಷ್ಠಾಯೈ ಧೀಮಹಿl ತನ್ನೋ ಸ್ವಾತಿ ಪ್ರಚೋದಯಾತ್ll 16. ವಿಶಾಖಾ: ಓಂ ಇಂದ್ರಾಗ್ನೇಸ್ಯೈ ವಿದ್ಮಹೇl ಮಹಾಶ್ರೇಷ್ಠಾಯೈ ಚ ಧೀಮಹಿl ತನ್ನೋ ವಿಶಾಖಾ ಪ್ರಚೋದಯಾತ್ll 17. ಅನೂರಾಧಾ: ಓಂ ಮಿತ್ರದೇಯಾಯೈ ವಿದ್ಮಹೇl ಮಹಾಮಿತ್ರಾಯ ಧೀಮಹಿl ತನ್ನೋ ಅನೂರಾಧಾ ಪ್ರಚೋದಯಾತ್ll 18. ಜ್ಯೇಷ್ಠಾ: ಓಂ ಜ್ಯೇಷ್ಠಾಯೈ ವಿದ್ಮಹೇl ಮಹಾಜ್ಯೇಷ್ಠಾಯೈ ಧೀಮಹಿl ತನ್ನೋ ಜ್ಯೇಷ್ಠಾ ಪ್ರಚೋದಯಾತ್ll 19 ಮೂಲಾ: ಓಂ ಪ್ರಜಾಧಿಪಾಯೈ ವಿದ್ಮಹೇl ಮಹಾಪ್ರಜಾಧಿಪಾಯೈ ಧೀಮಹಿl ತನ್ನೋ ಮೂಲಾ ಪ್ರಚೋದಯಾತ್ll 20. ಪೂರ್ವಾಷಾಢಾ: ಓಂ ಸಮುದ್ರಕಾಮಾಯೈ ವಿದ್ಮಹೇl ಮಹಾಬೀಜಿತಾಯೈ ಧೀಮಹಿl ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll 21. ಉತ್ತರಾಷಾಢಾ: ಓಂ ವಿಶ್ವೇದೇವಾಯ ವಿದ್ಮಹೇl ಮಹಾಷಾಢಾಯ ಧೀಮಹಿl ತನ್ನೋ ಉತ್ತರಾಷಾಢಾ ಪ್ರಚೋದಯಾತ್ll 22. ಶ್ರವಣಾ: ಓಂ ಮಹಾಶ್ರೇಷ್ಠಾಯೈ ವಿದ್ಮಹೇl ಪುಣ್ಯಶ್ಲೋಕಾಯ ಧೀಮಹಿl ತನ್ನೋ ಶ್ರವಣ ಪ್ರಚೋದಯಾತ್ll 23. ಧನಿಷ್ಠಾ: ಓಂ ಅಗ್ರನಾಥಾಯ ವಿದ್ಮಹೇl ವಸೂಪ್ರೀತಾಯ ಧೀಮಹಿl ತನ್ನೋ ಶರ್ವಿಷ್ಠಾ ಪ್ರಚೋದಯಾತ್ll 24. ಶತಭಿಷಾ: ಓಂ ಭೇಷಜಾಯ ವಿದ್ಮಹೇl ವರುಣದೇಹಾಯ ಧೀಮಹಿl ತನ್ನೋ ಶತಭಿಷಾ ಪ್ರಚೋದಯಾತ್ll 25. ಪೂರ್ವಾಭಾದ್ರ: ಓಂ ತೇಜಸ್ಕರಾಯ ವಿದ್ಮಹೇl ಅಜರಕ ಪಾದಾಯ ಧೀಮಹಿl ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll 26. ಉತ್ತರಾಭಾದ್ರ: ಓಂ ಅಹಿರಬುಧ್ನಾಯ ವಿದ್ಮಹೇl ಪ್ರತಿಷ್ಠಾಪನಾಯ ಧೀಮಹಿl ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ll 27. ರೇವತಿ: ಓಂ ವಿಶ್ವರೂಪಾಯ ವಿದ್ಮಹೇl ಪೂಷ್ಣ ದೇಹಾಯ ಧೀಮಹಿl ತನ್ನೋ ರೇವತಿ ಪ್ರಚೋದಯಾತ್!! ಅಜ್ಜಹಳ್ಳಿ ಕೃಷ್ಣಮೂರ್ತಿ
|| ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು|| ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ. ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾಹುಇದ್ದು ಮತ್ತೊಂದುಗ್ರಹ ೨೮ಡಿಗ್ರಿ ೩೦ ನಿಮಿಷದಲ್ಲಿ ಇದ್ದರೆ ) *ಜನ್ಮ ಕುಂಡಲಿಯಲ್ಲಿ ಮೂರು ಅಥವ ಮೂರಕ್ಕೂ ಹೆಚ್ಚು ಗ್ರಹಗಳು ಉಚ್ಚ ಅಥವ ಸ್ವಕ್ಷೇತ್ರಗತರಾಗಿದ್ದಲ್ಲಿ ಈ ಕಾಲಸರ್ಪದೋಷವು ಭಂಗವಾಗುತ್ತದೆ. *ಲಗ್ನಾಧಿಪತಿ,ಚಂದ್ರ,ರವಿ ಶುಭಭಾವಗಳಲ್ಲಿದ್ದಲ್ಲಿ ಅಂದರೆ ಈ ಗ್ರಹಗಳಲ್ಲಿ ಯಾರಾದರು(೧,೫,೯ರಲ್ಲಿ ಇದ್ದಲ್ಲಿ)ಕೇಂದ್ರಗಳಲ್ಲಿ ಇದ್ದಲ್ಲಿ ಕಾಳಸರ್ಪದೋಷ ಭಂಗವಾಗುತ್ತದೆ. *ದಶಮದಿಂದ ಚಥುರ್ಥದಲ್ಲಿ ಅಥವ ಚತುರ್ಥದಿಂದ ದಶಮದಲ್ಲಿ ಕಾಳಸರ್ಪದೋಷ ಉಂಟಾಗಿದ್ದರೆ ಹಾಗು ಆ ಎಲ್ಲಾ ಬಾವಗಳಲ್ಲಿ ಎಲ್ಲ ಗ್ರಹಗಳಿದ್ದರೆ ಕಾಳಸರ್ಪದೋಷ ನಿಶ್ಚಯವಾಗಿ ಭಂಗವಾಗುತ್ತದೆ. || ಹನ್ನೆರಡು ಕಾಳಸರ್ಪ ದೋಷಗಳು ಮತ್ತು ಅವುಗಳ ಪರಿಣಾಮ,ದೋಷಪರಿಹಾರೋಪಾಯಗಳು || 1.ಅನಂತ: ರಾಹು ಲಗ್ನದಲ್ಲಿ(೧ರಲ್ಲಿ)ಕೇತು ಸಪ್ತಮದಲ್ಲಿ ಉಳಿದೆಲ್ಲಗ್ರಹಗಳು ಇವುಗಳ ಮದ್ಯೆ ಇದ್ದರೆ ಈ ದೋಷ ಉಂಟಾಗುತ್ತದೆ. ದೋಷಕ್ಕೆ ಕಾರಣ:- ಹುತ್ತವನ್ನು ಹಾಳು ಮಾಡುವುದರಿಂದ, ಹುತ್ತವನ್ನು ಹಾಳುಮಾಡಿ ವ್ಯವಸಾಯ ಮಾಡಿದ್ದರೆ,ಹುತ್ತದಮೇಲೆ ವಾಹನ ಹತ್ತಿಸಿದ್ದರೆ,ಊಟಕ್ಕೆ ವಿಷಹಾಕಿದ್ದರೆ ಈ ದೋಷ ಉಂಟಾಗುತ್ತದೆ. ಪರಿಣಾಮಗಳು:- ಜನ್ಮದಿಂದಲೂಏಳಿಗೆಯಾಗುವುದಿಲ್ಲ,ಅವಮಾನ,ನಿಂದನೆ,ಸಂಸಾರ ಜೀವನ ಸುಖವಿರುವುದಿಲ್ಲ,ಮಕ್ಕಳಾಗುವುದಿಲ್ಲ, ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ,ಕೋರ್ಟು ಕಛೇರಿ ಸುತ್ತಬೇಕಾಗುತ್ತದೆ,ಅಂಡೊತ್ಪತ್ತಿಯಲ್ಲಿ ಸಮಸ್ಯೆ,ಹೆಂಡತಿಬಿಟ್ಟು ಹೋಗುವಿಕೆ. ಪರಿಹಾರ:- ಸರ್ಪಶಿರಮುದ್ರೆ ದಾರಣೆಮಾಡಿ ನಿತ್ಯ ಈ ಮಂತ್ರವನ್ನು೧೦೮ಸಲ ಜಪಿಸಿದರೆ ಈ ದೋಷ ನಿವಾರಣೆಯಾಗುತ್ತದೆ. ಮಂತ್ರ:- ಓಂ ಫೋ ಅನಂತಮುಖಿ ಸ್ವಾಹಾ 2.ಕುಲಿಕ ಕಾಳಸರ್ಪ ದೋಷ ಕಾರಣ:- ಸರ್ಪ ನಿದ್ರಾಭಂಗ ದೋಷದಿಂದ,ಸರ್ಪದ ಉದರಕ್ಕೆ ಹೊಡೆದು ಸಾಯಿಸಿದ್ದರೆ,ಈ ದೋಷ ಉಂಟಾಗುತ್ತದೆ. ಪರಿಣಾಮ:- ವೀರ್ಯಾಣುವಿನ ಸಮಸ್ಯೆ ಅಂಡಾಣು ಸಮಸ್ಯೆ ವೀರ್ಯದೋಷಗಳು ಉಂಟಾಗುತ್ತವೆ. ಪರಿಹಾರ:- ಕುಜ/ಸುಬ್ರಮಣ್ಯನ ಸೇವೆ ಮಾಡಿಸಿರಿ.ಈ ಮುದ್ರೆಯೊಂದಿಗೆ ಈ ಮಂತ್ರವನ್ನು ನಿತ್ಯ ೧೦೮ಸಲ ಜಪಿಸಿರಿ ನಿಮ್ಮ ದೋಷ ನಿವಾರಣೆಯಾಗುತ್ತದೆ. ಮಂತ್ರ:- ಓಂ ಪೂಂ ಪೂಂ ಪೂರ್ವ ಭೂಕಮುಖಿಸ್ವಾಹ. 3.ವಾಸುಕಿ ಕಾಳಸರ್ಪ ದೋಷ ಕಾರಣ:- ಸರ್ಪಗಳ ಅಂಡಗಳದ್ವಂಸ ದಿಂದ,ಹಾವಿನ ಸಂತತಿಯನ್ನುಹಾಳುಮಾಡುವುದರಿಂದ, ಹಾವಿನ ಮರಿಗಳನ್ನು ಸಾಯಿಸಿದ್ದರೆ. ಪರಿಣಾಮ:-ಚರ್ಮಕ್ಕೆ ಸಂಬಂದಿಸಿದ ರೋಗಗಳು ಮನೆಯವರಿಗೆಲ್ಲಾ ಬರುತ್ತದೆ ಇದು ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಹೆಚ್ಚಾಗಿ ತೊಂದರೆಕೊಡುತ್ತದೆ,ಸೋದರ-ಸೋದರಿಯರೊಡನೆ ವೈರತ್ವ,ಯಾವುದರಲ್ಲು ಏಳಿಗೆಯಾಗುವುದಿಲ್ಲ,ದಿಡೀರನೆ ಹಣ,ಆಸ್ತಿಗಳನ್ನು ಕಳೆದುಕೊಳ್ಳುವಿಕೆ,ದಾಂಪತ್ಯ ಸುಖವಿರುವುದಿಲ್ಲ,ರತಿಸುಖ ಸಿಗುವುದಿಲ್ಲ, ಇದರಿಂದಾಗಿ ದಂಪತಿಗಳು ಅಡ್ಡದಾರಿ ಹಿಡಿಯಬಹುದು,ಶೀಘ್ರವೀರ್ಯಸ್ಕಲನ. ಜನನೇಂದ್ರಿಯ ಸಮಸ್ಯೆಯಿಂದ ಗರ್ಭದರಿಸಲು ಸಾದ್ಯವಾಗುವುದಿಲ್ಲ. ಪರಿಹಾರ:- ಮುದ್ರೆಯೊಂದಿಗೆ ಈ ಮಂತ್ರವನ್ನು ೧೦೮ ಸಲ ನಿತ್ಯ ಜಪಿಸಿರಿ ನಿಮ್ಮ ವಾಸುಕಿ ಕಾಳಸರ್ಪದೊಷವು ನಿವಾರಣೆಯಾಗುತ್ತದೆ. ಮಂತ್ರ:- ಓಂ ವಾಸಕಿ ಮುಖಿ ಸ್ವಾಹಾ 4.ಪದ್ಮ ಕಾಳಸರ್ಪ ದೋಷ ಕಾರಣ:- ಹಾವಿನ ಬಾಲಕ್ಕೆ ಹೊಡೆದುಸಾಯಿಸಿದ್ದರೆ ಈ ದೋಷ ಬರುತ್ತದೆ. ಪರಿಣಾಮ:- ಗುಪ್ತ ಜನನಾಂಗಗಳ ರೋಗ,ರುಜಿನಗಳು ಬರುತ್ತವೆ ಕೀವು- ರಕ್ತಬರುವಂತಹ ಗಾಯ ಹುಣ್ಣುಗಳು ಈ ಅಂಗಗಳನ್ನು ಬಾದಿಸುತ್ತವೆ.ಶತೃಕಾಟ,ಗೃಹದಲ್ಲಿ ಜಗಳ, ಸರ್ಪಗಳ ದರ್ಶನ ಆಗಾಗ್ಗೆ ಆಗುತ್ತದೆ, ಕೆಲವೊಮ್ಮೆ ಸರ್ಪ ಮನೆಗೇ ಬರುತ್ತದೆ, ಯೋನಿ/ಶಿಶ್ನಗಳು ಗಾಯಗಳಿಂದಾಗಿ ಕೀವು-ರಕ್ತ ಸೋರುವಿಕೆ,ಇದರಿಂದ ರತಿಸುಖದಿಂದ ದೂರಾಗುವಿಕೆ,ದಾಂಪತ್ಯ ಕಲಹ, ವಿರಹಗಳು, ಪರಿಹಾರ:- ಷಷ್ಟಿದಿವಸ ಮುದ್ರೆ ಮಂತ್ರವನ್ನು ಜಪಿಸುವುದರಿಂದ ಈ ದೋಷ ನಿವಾರಣೆಯಾಗುತ್ತದೆ. 5.ಮಹಾಪದ್ಮ ಕಾಳಸರ್ಪ ದೋಷ ಕಾರಣ:- ಸರ್ಪಗಳ ಸಂಮ್ಮಿಲ(ಸರ್ಪ ಸಂಭೋಗ)ವನ್ನು ನೋಡಿದರೆ,ನೋಡಿ ಆಡಿಕೊಂಡರೆ, ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಈ ದೃಷ್ಯವನ್ನು ನೋಡಿದರೆ ಇಂತಹ ಸಮಯದಲ್ಲಿ ಸರ್ಪಗಳನ್ನು ದೂರಮಾಡಿದ್ದರೆ. ಪರಿಣಾಮ:- ಪ್ರೀತಿ-ಪ್ರೇಮ ವಿವಾಹಕ್ಕೆ ಅಡ್ಡಿ ಆತಂಕಗಳು ಪ್ರೇಮಿಗಳು ಬೇರಾಗುವಿಕೆ,ವಿವಾಹಾ ನಂತರ ದಂಪತಿಗಳು ದೂರಾಗುವಿಕೆ, ಪರಿಹಾರ:- ಮುದ್ರೆ ಯೊಂದಿಗೆ ಈ ಮಂತ್ರವನ್ನು ೨೦-೩೦ ನಿಮಿಷ ನಿತ್ಯ ಜಪಿಸುವುದರಿಂದ ಈ ದೋಷ ಪರಿಹಾರವಾಗುತ್ತದೆ ಮಂತ್ರ:- ಓಂ ಮಹಾಪದ್ಮಿನಿಮುಖಿಫೋಸ್ವಾಹಾ 6.ತಕ್ಷಕ ಕಾಳಸರ್ಪ ದೋಷ ಕಾರಣ:- ಪುರುಷಹತ್ಯೆ,ಶಿಶುಹತ್ಯೆ,ಅಪಹರಣ,ಮಾಡಿದ್ದರೆ ಪರಿಣಾಮ:- ಅಂತವರಿಗೆ ಗಂಡು ಸಂತಾನವಾಗದು, ಸ್ತ್ರೀಸುಖ/ಪುರುಷಸುಖ ಸಿಗುವುದಿಲ್ಲ. ಇಂತವರಿಗೆ ಅವಳಿ ಹೆಣ್ಣು ಮಕ್ಕಳಾಗುವ ಸಂಬವವಿರುತ್ತದೆ. ಪರಿಹಾರ:- ಮುದ್ರೆ ಮಂತ್ರವನ್ನು ಜಪಿಸುವುದು. 7.ಕಾರ್ಕೋಟಕ ಕಾಳಸರ್ಪ ದೋಷ (ಶಂಖಚೂಡ ಕಾಳಸರ್ಪ ದೋಷ ) ಕಾರಣ:- ಸ್ತ್ರೀ ಅಪಹರಣ,ವೇಶ್ಯಾವಾಟಿಕೆಗೆಬಲವಂತವಾಗಿ ಸ್ತ್ರೀಯನ್ನಾಗಲಿ ಪುರುಷರನ್ನಾಗಲಿ ದೂಡಿದ್ದರೆ, ಕಳೆದ ಜನ್ಮದಲ್ಲಿ ಈ ರೀತಿ ಮಾಡಿದ್ದರೆ.ಪರಸ್ತ್ರೀಯನ್ನು ಬಲವಂತವಾಗಿ ಅನುಭವಿಸಿದ್ದರೆ,ವಿವಾಹಕ್ಕೆ ಮುನ್ನ ಸ್ತ್ರೀ ಸುಖ ಪಡೆದಿದ್ದರೆ. ಪರಿಣಾಮ:- ಜೂಜು ಕೋರರಾಗುತ್ತಾರೆ,ರೇಸ್ ಹುಚ್ಚು,ಬೆಟ್ಟಿಂಗ್ ಹುಚ್ಚು,ಕಾಮಾಸಕ್ತಿ ಇರುವುದಿಲ್ಲ,ಪುರುಷನು ಸ್ತ್ರೀಯಂತೆ ವರ್ತಿಸುತ್ತಾನೆ, ಪರಿಹಾರ:- ಮುದ್ರೆ ಮಂತ್ರವನ್ನು ಜಪಿಸಿರಿ. 8.ಪಾತಕ(ಘಾತಕ)ಕಾಳಸರ್ಪ ದೋಷ ಕಾರಣ:- ಸಮಾಜದಲ್ಲಿ ೯೯ ಜನರಿಗೆ ಈ ದೋಷ ವಿರುತ್ತದೆ, ಪರಸ್ತ್ರೀಅಪಹರಣ,ನರಹತ್ಯ,ಹುತ್ತಕ್ಕೆ ಬೆಂಕಿ, ಕೆಮಿಕಲ್ಸ್ ಹಾಕಿದ್ದರೆ. ಪರಿಣಾಮ:- ವ್ಯವಹಾರಹಾನಿ,ಉದ್ಯೋಗಮಾಡಲಾಗದು,ಇಂತವರು ವ್ಯಾಪಾರವನ್ನೇ ಮಾಡಿ ಬದುಕಬೇಕು,ಆದರೆ ವ್ಯಾಪಾರದಲ್ಲಿ ದ್ರೋಹಗಳು ನಡೆಯುತ್ತಿರುತ್ತವೆ,ಅದರಲ್ಲುಹಿತಶತೃಗಳಿಂದದ್ರೋಹಗಳು,ಬುದ್ದಿ ಮಾಂದ್ಯ ಮಕ್ಕಳಜನನ,ಕಿಡ್ನಿಇಲ್ಲದ ಮಕ್ಕಳಜನನ. ಪರಿಹಾರ:- ಮುದ್ರೆ ಮಂತ್ರವನ್ನು ಜಪಿಸುವುದು. 9.ವಿಷದರ(ವಿಶಕ್ತ)ಕಾಳಸರ್ಪ ದೋಷ ಕಾರಣ:- ದಂಪತಿಗಳಅಗಲಿಸಿದ್ದರೆ,ವಿಷಹಾಕಿದ್ದರೆ. ಪರಿಣಾಮ:- ಅಣ್ಣನೊಂದಿಗೆವಾದ-ವಿವಾದಗಳು ಜರುಗುವುವು,ಅಣ್ಣನಿಂದಲೇತೊಂದರೆಉಂಟಾಗುತ್ತಿರುತ್ತದೆ,ದೂರಪ್ರದೇಶದಲ್ಲಿವಾಸ,ಕೋರ್ಟ್ ಕೇಸಿಗೆ ಅಲೆಯುವಿಕೆ,ವಿವಾಹಾನಂತರಕೂದಲು ಉದುರುತ್ತದೆ,ಚರ್ಮರೋಗ,ಕಜ್ಜಿ,ಉಂಟಾಗುತ್ತದೆ,ಹೆಂಡತಿ ಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗುವಿಕೆ,ಆಗಾಗ ಹಾವುಗಳು ಮನೆಗೆ ಬರುತ್ತವೆ,ಅಂಡಾಣು/ವೀರ್ಯಾಣುಗಳ ಚಲನೆಯಲ್ಲಿ ಮಂದಗತಿ ಉಂಟಾಗುತ್ತದೆ ಇದರಿಂದ ಸಂತಾನದೋಷ ಉಂಟಾಗುತ್ತದೆ, ಮಾತು ವಿಕೃತವಾಗುತ್ತದೆ,ರಾಹುದೋಷ ಉಂಟಾಗುತ್ತದೆ,ಅನಿದ್ರೆ,ಕಣ್ಣುಬೇನೆ,ಹೃದ್ರೋಗ ಪೀಡಿಸಲ್ಪಡುವವು ಜೀವನದ ಅಂತ್ಯವು ರಹಸ್ಯವಾಗಿರುವುದು. ಪರಿಹಾರ:- ಈ ಮುದ್ರೆ ಮಂತ್ರವನ್ನು ನಿತ್ಯ ೧೦೮ ಸಲ ಮುದ್ರೆಯೊಂದಿಗೆ ಜಪಿಸಿರಿ ಮಂತ್ರ:- ಓಂ ನವಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ವಿಷಧರ ಪ್ರಚೋದಯಾತ್ 10.ಶೇಷನಾಗ ಕಾಳಸರ್ಪ ದೋಷ ಕಾರಣ:- ಒಂದು ಬೀದಿಗೆ ಸಾಮಾನ್ಯವಾಗಿ ೨೫ ಜನರಿಗೆ ಈದೋಷವಿರುತ್ತದೆ,ಪುಣ್ಯಕ್ಷೇತ್ರಗಳಲ್ಲಿ,ಮಠ,ದೇವಾಲಯ, ನಧಿ,ಕೊಳಗಳ ತೀರದಲ್ಲಿ ರತಿಸುಖವನ್ನು ಪಡೆದಿದ್ದರೆ ಈ ದೋಷವು ಬರುತ್ತದೆ,ಇಂತಹ ಸ್ಥಳಗಳಲ್ಲಿ ಕಾಮ,ಪ್ರೇಮದ ಛೇಷ್ಟೆಯನ್ನು ಮಾಡಿದ್ದರೆ ಈ ದೋಷಬರುತ್ತದೆ. ಪರಿಣಾಮ:- ಕಣ್ಣಿನದೋಷ,ಹೃದಯದ ರೋಗ,ಅಂಗವಿಕಲ ಮಕ್ಕಳಜನನ,ತಲೆದಪ್ಪಮಕ್ಕಳಜನನ,ಕಣ್ಣು ದಪ್ಪ,ಕುಬ್ಜಮಕ್ಕಳ ಜನನ, ಪರಿಹಾರ:- ವಿಷ್ಣುವಿನ ಜಪವನ್ನು ನಿತ್ಯ ಜಪಿಸುವುದು ಮತ್ತು ಮುದ್ರೆ ಮಂತ್ರವನ್ನು ಜಪಿಸುವುದು. ಸಂಗ್ರಹ ಮಾಹಿತಿ ಅಜ್ಜಹಳ್ಳಿಕೃಷ್ಣಮೂರ್ತಿ
ವಿವಾಹ ವಿಳಂಬಕ್ಕೆ ಪರಿಹಾರೋಪಾಯಗಳು. 1) ಬೆಟ್ಟದ ನೆಲ್ಲಿಕಾಯಿ ೧೧ ಅಥವ ೨೧ ರಲ್ಲಿ ದೀಪವನ್ನು ಮಾಡಿ ತುಪ್ಪದಿಂದ ದೀಪವನ್ನು ಮಾಡಿ ೧೧ ಶುಕ್ರವಾರ ಅಥವ ಗುರುವಾರ ಮುಂಜಾನೆ ಅಥವ ಸಂಜೆ ಯಲ್ಲಿ ಅರಳಿ ಅಥವ ಅತ್ತಿ ಮರದ ಬುಡದಲ್ಲಿ ಇಟ್ಟು ೧೧ ಪ್ರದಕ್ಷಿಣೆ ಮಾಡಿ ಗುರು ಮತ್ತು ಶುಕ್ರರನ್ನು ಪ್ರಾರ್ಥಿಸಿಕೊಂಡು ಬರುವುದು ಮೊದಲ ಮತ್ತು ಕೊನೆಯ ದಿನ ಗಳಂದು ಹಣ್ಣು ಕಾಯಿ ನೈವೇದ್ಯಗಳಿಂದ ವೃಕ್ಷವನ್ನು ಪೂಜಿಸುವುದು 2)ಇದು ವಿಶೇಷವಾದ ಖಚಿತ ಫಲವನ್ನು ನೀಡುವ ಪರಿಹಾರವಾಗಿದೆ ನಂಬಿಕೆ,ಶ್ರದ್ದೆ,ಭಕ್ತಿ ಬಹಳ ಮುಖ್ಯ. ಪೂಜೆಗೆ ಬೇಕಾದ ವಸ್ತುಗಳು ಒಂದು ತಾಮ್ರದ ಚಂಬು,೫ ಕೆಂಪು ಕುಪ್ಪಸ,೫ ಬೊಗಸೆ ಅಕ್ಕಿ, (೧೫ ಹಿಡಿ ಅಕ್ಕಿ)೫ ಕಗ್ಗಲಿ ೯ ಅಂಗುಲದ ಗಟ್ಟಿಯಾದ ತುಂಡು (ಗಂಧಿಗೆ ಅಂಗಡಿಯಲ್ಲಿ ದೊರೆಯುತ್ತದೆ) ಒಂದು ಮರದ ಮಣೆ ಅಥವ ತಟ್ಟೆ ಪೂಜಾ ಸಾಮಗ್ರಿಗಳು (ಹೂವು,ಹಣ್ಣು,ಎಲೆ ಅಡಿಕೆ,ಕಡ್ಡಿ ಕರ್ಪೂರ ಅರಿಸಿನ ಕುಂಕುಮ ಇತ್ಯಾದಿ) ಮಂಗಳವಾರದ ದಿನ ಮೊದಲು ಮನೆ ಶುಚಿಗೊಳಿಸಿ ನಂತರ ತಾವು ಶುಚಿಯಾಗಿ ದೇವರಮನೆಯಲ್ಲಿ ಒಂದು ಮಣೆಯನ್ನು ಹಾಕಿ ಅದರ ಮೇಲೆ ಒಂದು ಕೆಂಪು ಕುಪ್ಪಸ ಹಾಕಿ ಅದರ ಮೇಲೆ ಒಂದು ಬೊಗಸೆ ಅಕ್ಕಿ ಹಾಕಿ ಅದರ ಮೇಲೆ ತಾಮ್ರದ ಚಂಬು ಇಟ್ಟು ಚಂಬಿನಲ್ಲಿ ತುಗರಿ ಬೇಳೆ ತುಂಬಿ ಅದರ ಮೇಲೆ ೧ ಕಗ್ಗಲಿ ತುಂಡನ್ನು ಇಟ್ಟು ಮೇಲೆ ಒಂದು ಕೆಂಪು ಕುಪ್ಪಸವನ್ನು ಹಾಕಿ ದೇವರ ಮುಂದೆ ತುಪ್ಪದ ದೀಪ ಬೆಳಗಿಸಿ ಯಾವುದಾದರು ಶತನಾಮಾವಳಿ (ದುರ್ಗ,ಚಾಮುಂಡಿ,ಲಕ್ಷ್ಮಿ) ಯನ್ನು ೧೦೮ ಸಲ ಹೇಳಿ ಮಂಗಳಾರತಿ ಮಾಡುವುದು ಸಂಜೆ ಬಟ್ಟೆ ಮತ್ತು ಚಂಬು ಇಟ್ಟು ಕೊಂಡು ಅಕ್ಕಿ ಮತ್ತು ಬೇಳೆಯನ್ನು ಯಾವುದಾದರು ಸ್ತ್ರೀದೇವಾಲಯಕ್ಕೆ ನೀಡುವುದು ಕಗ್ಗಲಿ ತುಂಡನ್ನು ಹಸಿರು ಗಿಡದ ಬಳಿ ಇಟ್ಟು ಬರುವುದು ಈ ರೀತಿ ೩ ದಿನ ಮಾಡಿ ೪ನೇ ದಿನ ೫ ಜನ ಮುತೈದೆಯರನ್ನು ಕರೆದು ಅವರಿಗೆ ಹೋಳಿಗೆ ಉಣಬಡಿಸಿ ಕೆಂಪು ಕುಪ್ಪಸ ನೀಡಿ ಅರಿಸಿನ ಕುಂಕುಮವನ್ನು ನೀಡಬೇಕು ಒಂದು ಕುಪ್ಪಸವನ್ನು ೫ ಜನರಿಂದ ಮುಟ್ಟಿಸಿಕೊಂಡು ಇಟ್ಟುಕೊಳ್ಳಬೇಕು ೫ನೇ ದಿನ ಪೂಜೆಯ ನಂತರ ಪೂಜೆಗೆ ಬಳಸಿದ ಎಲ್ಲಾ ವಸ್ತುಗಳನ್ನು ಅಂದರೆ ಚಂಬನ್ನು ಬಿಟ್ಟು ಉಳಿದ ಅರಿಸಿನ ಕುಂಕುಮ ಒಣಗಿದ ಹೂವು ಇತ್ಯಾದಿ ಗಳನ್ನು ಕುಪ್ಪಸದಲ್ಲಿ ಕಟ್ಟಿಕೊಂಡು ಹರಿವ ನೀರಲ್ಲಿ ಬಿಡುವುದು ಅದೇ ನೀರಲ್ಲಿ ಸ್ನಾನ ಮಾಡಿ ಬರುವುದು. ಕಟ್ಟಿಗೆಯನ್ನು ಹಸಿರು ಗಿಡದ ಬಳಿ ಇಡುವುದು ಅಕ್ಕಿ ಮತ್ತು ಬೇಳೆಯನ್ನು ದೇವಾಲಯದಲ್ಲಿ ನೀಡಿ ಬರುವುದು. 3)ಟಿ ನರಸೀ ಪುರದಲ್ಲಿರುವ ಅಗಸ್ತ್ಯೇಶ್ವರ ಸ್ವಾಮಿ ದೇವಾಲಯದಲ್ಲಿರುವ ದೇವಿ ರಕ್ಷಾಂಭರಿ ದೇವಿಯ ದೇವಾಲಯಕ್ಕೆ ಶುಕ್ರವಾರ ಅಥವ ಹುಣ್ಣಿಮೆಯಲ್ಲಿ ಹೋಗಿ ವಿವಾಹ ವಿಳಂಭವಾಗುತ್ತಿರುವ ಸ್ತ್ರೀಯ ಜಾತಕವನ್ನು ತಗೆದುಕೊಂಡು ಹೋಗಿ ದೇವಿಗೆ ೧ಕಿಲೋ ಅರಿಸಿನ ಮತ್ತು ೧ಕಿಲೋ ಕುಂಕುಮವನ್ನು ತಗೆದುಕೊಂಡು ಹೋಗಿ ದೇವಿಯ ಬಲಪಾದಕ್ಕೆ ಅರಿಸಿನ ವನ್ನು ದೇವಿಯ ಎಡಪಾದಕ್ಕೆ ಕುಂಕುಮವನ್ನು ಅರ್ಪಿಸಿ ದೇವಿಯ ಎರಡೂಪಾದದ ಮದ್ಯೆ ಜಾತಕವನ್ನಿಟ್ಟು ದೇವಿಗೆ ಅರ್ಚನೆ ಮಾಡಿಸಿ ನಂತರ ಜಾತಕ ಮತ್ತು ಸ್ವಲ್ಪ ಅರಿಸಿನ ಮತ್ತು ಕುಂಕುಮವನ್ನು ಮನೆಗೆ ತಂದು ದೇವರ ಮನೆಯಲ್ಲಿ ಇಟ್ಟುಕೊಳ್ಳಿ ಕುಂಕುಮವನ್ನು ಮನೆಯ ಎಲ್ಲಾ ಸ್ತ್ರೀಯರು ಇಟ್ಟುಕೊಳ್ಳಿ ಅರಿಸಿನವನ್ನು ವಿವಾಹ ವಿಳಂಭವಾಗಿರುವ ಸ್ತ್ರೀಯು ನಿತ್ಯ ಸ್ನಾನದಲ್ಲಿ ಬಳಸುತ್ತಿರಲಿ ವಿವಾಹ ಆಗುವವರೆಗು ಈ ಕಾರ್ಯ ನಿಲ್ಲಿಸಬಾರದು ವಿವಾಹಾ ನಂತರ ವಧು ವರರು ೩ ತಿಂಗಳ ವರೆಗೆ ಮಾಂಸ ಮದ್ಯವನ್ನು ಸೇವಿಸ ಬಾರದು ೩ ತಿಂಗಳ ನಂತರ ದಂಪತಿಗಳು ದೇವಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ನಂತರ ಮಾಂಸ ಮದ್ಯ ಸೇವಿಸಬಹುದು. ಈ ವಿಚಾರದಲ್ಲಿ ಅಸಡ್ಡೆ ತೋರಿದರೆ ಆಗುವ ತೊಂದರೆಗಳಿಗೆ ನೀವೇ ಜವಾಬ್ದಾರರಿರುತ್ತೀರಿ. 4)ಅಕ್ಕಿತೌಡು(ಅಕ್ಕಿತರಿ),ಬಿಳಿಜೋಳ,ಬಟಾಣಿ,ಕಡಲೆಬೀಜ,ಗೋಧಿ,ಮುಸುಕಿನಜೋಳ, ಇವುಗಳನ್ನು ತಲಾ ೧ಕಿಲೋ ತಗೆದುಕೊಂಡು ಶುದ್ದಗೊಳಿಸಿ ಎಲ್ಲವನ್ನು ಮಿಶ್ರಣ ಮಾಡಿ ಒಂದು ಪಾತ್ರೆಯಲ್ಲಿ ಇಟ್ಟುಕೊಂಡು ೨೧ ದಿನಗಳಕಾಲ ಬೆಳಗ್ಗೆ ತಮ್ಮ ಹಿಡಿಯಲ್ಲಿ ೭ ಹಿಡಿಯನ್ನು ತಗೆದುಕೊಂಡು ತಮ್ಮ ತಲೆಗೆ ೭ ಸಲ ೭ ಹಿಡಿಯನ್ನು ತಿರುಗಿಸಿ ಒಂದು ಚೀಲದಲ್ಲಿ ಹಾಕಿ ಕೊಂಡು ಎಲ್ಲಾದರು ಪಕ್ಷಿಗಳಿರುವ ಕಡೆಯಲ್ಲಿ ಹಾಕುವುದು ಈ ರೀತಿ ೨೧ ದಿನದಿಂದ ೪೧ ದಿನದ ವರೆಗೆ ಮಾಡಬೇಕು. ಸಂಗ್ರಹ ಮಾಹಿತಿ ಕೃಪೆ. ಅಂತರ್ಜಾಲ. ಅಜ್ಜಹಳ್ಳಿಕೃಷ್ಣಮೂರ್ತಿ
||ಜನ್ಮದಿನಾಂಕವನ್ನು ಆಧರಿಸಿ ನೀವು ಅರೇಂಜ್ಡ್‌ ಅಥವಾ ಲವ್‌ ಮ್ಯಾರೇಜ್‌ ಆಗುತ್ತೀರಾ ಎನ್ನುವುದನ್ನು ತಿಳಿದುಕೊಳ್ಳಿ..|| ನಿಮ್ಮ ಜನ್ಮದಿನಾಂಕವನ್ನು ಪ್ರಮುಖವಾಗಿ ಲೆಕ್ಕ ಹಾಕಿ ಮೂಲಾಂಕವನ್ನು ಕಂಡುಹಿಡಿಯಲಾಗುತ್ತದೆ. ಈ ಮೂಲಾಂಕದ ಆಧಾರದ ಮೇಲೆ ನೀವು ಪ್ರೇಮವಿವಾಹವಾಗುತ್ತೀರಾ ಅಥವಾ ಸಂಪ್ರದಾಯ ಬದ್ಧವಾಗಿ ವಿವಾಹವಾಗುತ್ತೀರಾ ಎನ್ನುವ ಮಾಹಿತಿ ಇಲ್ಲಿದೆ. ಜ್ಯೋತಿಷ್ಯದಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ. ಅಂತೆಯೇ, ಸಂಖ್ಯಾಶಾಸ್ತ್ರವು ವಿಭಿನ್ನ ಮಹತ್ವವನ್ನು ಹೊಂದಿದೆ. ಸಂಖ್ಯಾಶಾಸ್ತ್ರವು ಸಂಖ್ಯೆಗಳ ಸಹಾಯದಿಂದ ಜನರ ಭವಿಷ್ಯದ ಬಗ್ಗೆ ಹೇಳುತ್ತದೆ. ಆದ್ದರಿಂದ ಇಂದು ನಾವು ನಿಮ್ಮ ಮೂಲಾಂಕದ ಪ್ರಕಾರ ನೀವು ಪ್ರೇಮವಿವಾಹ ಆಗುತ್ತೀರಾ ಅಥವಾ ಅರೇಂಜ್‌ ಮ್ಯಾರೇಜ್‌ ಆಗುತ್ತೀರಾ ಎನ್ನುವುದನ್ನು ತಿಳಿದುಕೊಳ್ಳಬಹುದು. ಸಂಖ್ಯಾಜ್ಯೋತಿಷ್ಯದಲ್ಲಿ, ಮೂಲಾಂಕವನ್ನು ಒಂದು ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ, ಉದಾಹರಣೆಗೆ, ಒಬ್ಬ ವ್ಯಕ್ತಿಯು ತಿಂಗಳ 26 ರಂದು ಜನಿಸಿದರೆ, ಅವನ ಮೂಲಾಂಕ 2 + 6 = 8 ಆಗಿರುತ್ತದೆ. ಇದರಂತೆ ನಿಮ್ಮ ಮೂಲಾಂಕವನ್ನು ಆಧರಿಸಿ ನೀವು ಯಾವ ವಿವಾಹವಾಗುತ್ತೀರಿ ಎನ್ನುವ ಕುತೂಹಲಕಾರಿ ಸಂಗತಿಯನ್ನು ತಿಳಿದುಕೊಳ್ಳಿ. 01.ಸಂಖ್ಯಾಶಾಸ್ತ್ರದಲ್ಲಿ ಒಂದನ್ನು ಸೂರ್ಯನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಈ ಸಂಖ್ಯೆ ಹೊಂದಿರುವ ಜನರು ತುಂಬಾ ನಾಚಿಕೆ ಸ್ವಭಾವದವರು. ಮತ್ತು ತಮ್ಮ ಪ್ರೀತಿಯನ್ನು ಎಂದಿಗೂ ವ್ಯಕ್ತಪಡಿಸುವುದಿಲ್ಲ. ಆದ್ದರಿಂದಲೇ ಮೂಲಾಂಕ ಸಂಖ್ಯೆ 1 ಇರುವವರಿಗೆ ಪ್ರೇಮ ವಿವಾಹವಾಗುವುದು ಕಷ್ಟ. ಆದರೆ ಈ ಜನರಿಗೆ, ಸಂಖ್ಯೆಗಳು 2, 4 ಮತ್ತು 6 ರ ಸಂಗಾತಿಗಳು ಸಿಕ್ಕರೆ ತುಂಬಾ ಒಳ್ಳೆಯದು. 02.ಈ ಸಂಖ್ಯೆಯನ್ನು ಹೊಂದಿರುವ ಜನರು ಬಹಳ ಚಿಂತನಶೀಲವಾಗಿ ಪ್ರೀತಿಸುತ್ತಾರೆ. ಆದ್ದರಿಂದ, ಅವರು ಆ ಸಂಬಂಧವನ್ನು ಮದುವೆಗೆ ಬದಲಾಯಿಸಿಕೊಳ್ಳಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆ. ಸಂಖ್ಯೆ 2 ಅನ್ನು ಚಂದ್ರನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ಮೂಲಾಂಕ 2 ರ ಜನರು ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಜನರು ತಮ್ಮ ಮನಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. 03.ಮೂಲಾಂಕ 3 ಗುರುಗ್ರಹದ ಸಂಕೇತವಾಗಿದೆ. ಆದ್ದರಿಂದ ಈ ಸಂಖ್ಯೆಯನ್ನು ಹೊಂದಿರುವ ಜನರು ಪ್ರೇಮ ವಿವಾಹವಾಗುವಲ್ಲಿ ಯಶಸ್ವಿಯಾಗುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ವ್ಯಕ್ತಿಯು ತನ್ನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ಪ್ರತಿ ಹಂತದಲ್ಲೂ ಅವರನ್ನು ಬೆಂಬಲಿಸುತ್ತಾರೆ. ಯಾವುದೇ ತಿಂಗಳಲ್ಲಿ 3, 12, 21, 30 ರಂದು ಜನಿಸಿದ ಜನರು 3 ಮೂಲಾಂಕ ಸಂಖ್ಯೆಯನ್ನು ಹೊಂದಿರುತ್ತಾರೆ. 04.ಸಂಖ್ಯೆ 4 ಅನ್ನು ರಾಹುವಿನ ಸಂಕೇತವೆಂದು ಹೇಳಲಾಗುತ್ತದೆ. ಈ ಸಂಖ್ಯೆಯ ಜನರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧಗಳನ್ನು ಮಾಡುತ್ತಾರೆ. ಹಾಗಾಗಿಯೇ ತಮ್ಮ ಪ್ರೇಮ ಪ್ರಕರಣಗಳ ಬಗ್ಗೆ ಗಂಭೀರವಾಗಿರಲು ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ, ಈ ಸಂಖ್ಯೆ ಹೊಂದಿರುವ ಜನರು ತಮ್ಮ ಸ್ವಂತ ಆಯ್ಕೆಯ ಪ್ರಕಾರ ಮದುವೆಯಾಗುತ್ತಾರೆ. ಆದರೆ ಮದುವೆಯ ನಂತರವೂ, ಇತರರೊಂದಿಗೆ ಅವರ ಸಂಬಂಧಗಳು ಹಾಗೇ ಇರುತ್ತದೆ. ಇದಲ್ಲದೆ, 4, 13, 22, 31 ರಂದು ಜನಿಸಿದವರು 4 ಮೂಲ ಸಂಖ್ಯೆಗಳನ್ನು ಹೊಂದಿರುತ್ತಾರೆ. ಸಂಖ್ಯೆ 5 ಅನ್ನು ಬುಧದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ಮೂಲಾಂಕ ಹೊಂದಿರುವ ಜನರು ಸಾಂಪ್ರದಾಯಿಕವಾಗಿ ಮದುವೆಯಾಗಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿಯೇ ಈ ಜನರು ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಮಾತ್ರ ಮದುವೆಯಾಗುತ್ತಾರೆ. ಅವರು ಯಾರನ್ನಾದರೂ ಇಷ್ಟಪಟ್ಟರೂ, ಅವರು ತಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಲು ಬಯಸುತ್ತಾರೆ. 05.ಯಾವುದೇ ತಿಂಗಳ 5, 14, 23 ರಂದು ಜನಿಸಿದವರು, ಅವರ ಮೂಲಾಂಕ ಸಂಖ್ಯೆ 5 ಆಗಿದೆ. ಬಹು ಮುಖ್ಯವಾಗಿ, ಈ ಜನರು ತಮ್ಮ ಕುಟುಂಬವನ್ನು ತುಂಬಾ ಗೌರವಿಸುತ್ತಾರೆ. ಈ ಜನರು ಹೆಚ್ಚಾಗಿ ಪ್ರೇಮ ವಿವಾಹವಾಗುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧಗಳಿಂದಾಗಿ ಅವರು ಸೂಕ್ತ ವ್ಯಕ್ತಿಯನ್ನು ಕಳೆದುಕೊಳ್ಳುತ್ತಾರೆ. 06.ಯಾವುದೇ ತಿಂಗಳ 6, 15, 24 ರಂದು ಜನಿಸಿದವರ ಮೂಲಾಂಕ ಸಂಖ್ಯೆ 6 ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಜನರು ತುಂಬಾ ಆಕರ್ಷಕರಾಗಿದ್ದಾರೆ. ಅದಕ್ಕಾಗಿಯೇ ಅವರು ಬೇಗನೆ ಇತರರನ್ನು ತಮ್ಮ ಕಡೆಗೆ ಆಕರ್ಷಿಸುತ್ತಾರೆ. ಅಲ್ಲದೆ, ಈ ಮೂಲಾಂಕದ ಸ್ಥಳೀಯರು ಯಾವುದೇ ಮೂಲಾಂಕದ ವ್ಯಕ್ತಿಯನ್ನು ಮದುವೆಯಾಗಬಹುದು. 07.ಮೂಲಾಂಕ ಸಂಖ್ಯೆ 7 ಹೊಂದಿರುವ ಜನರು ತುಂಬಾ ನಾಚಿಕೆಪಡುತ್ತಾರೆ. ಹಾಗಾಗಿಯೇ ಪ್ರೇಮವಿವಾಹದಲ್ಲಿ ಆಸಕ್ತಿ ಮೂಡಿದರೂ ಪ್ರೇಮವಿವಾಹವಾಗಲು ಸಾಧ್ಯವಾಗುವುದಿಲ್ಲ. ಸಂಖ್ಯೆ 7 ಕೇತುವಿನ ಸಂಕೇತವಾಗಿದೆ. ಪ್ರೀತಿಸಿ ಮದುವೆಯಾದರೂ ಅಥವಾ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾದರೂ ನಿಮ್ಮ ಸಂಗಾತಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, 7, 16 ಅಥವಾ 25 ರಂದು ಜನಿಸಿದ ಜನರು ಮೂಲಾಂಕ ಸಂಖ್ಯೆ 7 ಅನ್ನು ಹೊಂದಿರುತ್ತಾರೆ.ಇವರಿಗೆಮೂಲಾಂಕ 2 ಸಂಖ್ಯೆಯವರು ಅತ್ಯುತ್ತಮ ಜೋಡಿಯಾಗಬಲ್ಲರು. 08.ಈ ಸಂಖ್ಯೆಯನ್ನು ಶನಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಸಂಖ್ಯೆಯನ್ನು ಹೊಂದಿರುವ ಜನರು ವಿರಳವಾಗಿ ಪ್ರೀತಿಯ ವ್ಯವಹಾರಗಳಲ್ಲಿ ಬೀಳುತ್ತಾರೆ. ಆದರೆ ನೀವು ಲವ್ ಮ್ಯಾರೇಜ್ ಆಗಬೇಕೆಂದಿದ್ದರೆ ಖಂಡಿತಾ ಲವ್ ಮ್ಯಾರೇಜ್ ಆಗಿ. 8, 17 ಅಥವಾ 26 ರಂದು ಜನಿಸಿದ ಜನರು ಮೂಲಾಂಕ ಸಂಖ್ಯೆ 8 ಅನ್ನು ಹೊಂದಿರುತ್ತಾರೆ. ಅದೇ ಸಮಯದಲ್ಲಿ, ಮೂಲಾಂಕ 8ರ ಸಂಖ್ಯೆಯವರು ಇವರಿಗೆ ಸೂಕ್ತ. ಈ ಜನರು ತಮ್ಮ ಸಂಬಂಧದಲ್ಲಿ ಬಹಳ ನಿಷ್ಠರಾಗಿರುತ್ತಾರೆ. 09.ಪ್ರೇಮವಿವಾಹದಲ್ಲಿ ಆಸಕ್ತಿಯಿರದ ಕಾರಣ 9 ನೇ ಸಂಖ್ಯೆಯ ಜನರು ಪ್ರೇಮ ವಿವಾಹವಾಗಲು ಒಪ್ಪಲಾರರು., ಈ ಜನರು ಅರೇಂಜ್ಡ್ ಮ್ಯಾರೇಜ್ ಆಗಲು ಇಷ್ಟಪಡುತ್ತಾರೆ. ಮೂಲಾಂಕ 9 ಅನ್ನು ಮಂಗಳದ ಸಂಕೇತವೆಂದು ಹೇಳಲಾಗುತ್ತದೆ. ಯಾವುದೇ ತಿಂಗಳಲ್ಲಿ 9, 18, 27 ರಂದು ಜನಿಸಿದವರ ಸಂಖ್ಯೆ 9. ಅದೇ ಸಮಯದಲ್ಲಿ, 2 ಮತ್ತು 6 ಅಂಕಗಳ ಜನರು ಇವರಿಗೆ ತುಂಬಾ ಒಳ್ಳೆಯ ಸಂಗಾತಿಯಾಗುವರು. ಬಹು ಮುಖ್ಯವಾಗಿ, ಈ ವ್ಯಕ್ತಿಯು ಮದುವೆಯ ನಂತರವೂ ಇತರರೊಂದಿಗೆ ಸಂಬಂಧ ಹೊಂದಿರುತ್ತಾರೆ.
ವಿವಾಹ ವಿಳಂಬಕ್ಕೆ ಪರಾಶರಿ ಯೋಗಗಳು 1. 7ನೇ ಮನೆ ಮತ್ತು / ಅಥವಾ 7ನೇ ಅಧಿಪತಿಗೆ ಶನಿಯು ಅಂಶವನ್ನು ನೀಡುವುದು ಹೆಚ್ಚಿನ ಸಂದರ್ಭಗಳಲ್ಲಿ ಮದುವೆಯಲ್ಲಿ ವಿಳಂಬವನ್ನು ನೀಡುವುದು ಕಂಡುಬಂದಿದೆ. ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಅದು ಹಿಮ್ಮುಖವಾಗಿ 7ನೇ ಮನೆ ಅಥವಾ ಅದರ ಅಧಿಪತಿಯ ಮೇಲೆ ದೃಷ್ಟಿ ನೆಟ್ಟರೆ ಅದು ಬಹಳ ನೋವಿನಿಂದ ಕೂಡಿದ ವಿವಾಹ ವಿಳಂಬಕ್ಕೆ ಕಾರಣವಾಗಬಹುದು, ಇದು ವ್ಯಕ್ತಿಯನ್ನು ಅತ್ಯಂತ ನಿಗೂಢ ರೀತಿಯಲ್ಲಿ ನಿರಾಶೆಗೊಳಿಸುತ್ತದೆ. 2. ರಾಶಿ ಮತ್ತು ನವಾಂಶಗಳಲ್ಲಿ ಕೇಂದ್ರ (ಚೌಕ) ಸ್ಥಾನದಲ್ಲಿ ದೋಷಪೂರಿತ ಗ್ರಹಗಳು ವಿವಾಹದಲ್ಲಿ ವಿಳಂಬವನ್ನು ತೋರಿಸುತ್ತವೆ. ಕೇಂದ್ರ ಮನೆಗಳು ರಾಶಿ ಮತ್ತು ನವಾಂಶ ಎರಡರಲ್ಲೂ ಯಾವುದೇ ಶುಭ ಗ್ರಹವನ್ನು ಹೊಂದಿಲ್ಲದಿದ್ದರೆ ಅದು ವಿವಾಹದಲ್ಲಿ ವಿಳಂಬವನ್ನು ಉಂಟುಮಾಡುತ್ತದೆ. 3. 7ನೇ ಅಧಿಪತಿ ದುರ್ಬಲನಾಗಿದ್ದು 6, 8 ಅಥವಾ 12ನೇ ಮನೆಯಲ್ಲಿದ್ದರೆ ಅಥವಾ ಅದು ದುರ್ಬಲ ಚಿಹ್ನೆಯಲ್ಲಿದ್ದರೆ ಅದು ವೈವಾಹಿಕ ಸಂತೋಷವನ್ನು ಹಾಳು ಮಾಡುತ್ತದೆ. (ಬ.ಪ.ಶ.) 4. ಪರಾಶರ ಶಕದ ಪ್ರಕಾರ 7ನೇ ಮನೆಯಲ್ಲಿ ಚಂದ್ರ ಮತ್ತು 7ನೇ ಅಧಿಪತಿ ಮತ್ತು ಶುಕ್ರ ಕೆಟ್ಟ ಸ್ಥಾನದಲ್ಲಿರುವುದರಿಂದ ಸಂಗಾತಿಯಿಂದ ಸಂತೋಷದ ಕೊರತೆ ಉಂಟಾಗುತ್ತದೆ. (ನಾನು ಹಲವಾರು ಜಾತಕಗಳನ್ನು ಗಮನಿಸಿದ್ದೇನೆ, 7ನೇ ಮನೆಯಲ್ಲಿ ಕ್ಷೀಣಿಸುತ್ತಿರುವ ಚಂದ್ರನು ಮದುವೆಯಲ್ಲಿ ವಿಳಂಬವನ್ನು ನೀಡುತ್ತದೆ. ಇದು ವ್ಯಕ್ತಿಯನ್ನು ತುಂಬಾ ಇಂದ್ರಿಯ, ಕೋಮಲ ಮತ್ತು ಕಾಮಪ್ರಚೋದಕನನ್ನಾಗಿ ಮಾಡುತ್ತದೆ.) 5. ಶುಕ್ರ-ಶನಿ, ಶುಕ್ರ-ಬುಧ ಮತ್ತು ಚಂದ್ರ-ಶನಿಯ ನಿಕಟ ಸಂಯೋಗವು ಮದುವೆಯಲ್ಲಿ ವಿಳಂಬವನ್ನು ನೀಡುತ್ತದೆ. 6. ಶುಕ್ರ-ಶನಿ ಮತ್ತು ಶನಿ-ಚಂದ್ರನ ವಿರೋಧವು ಮದುವೆಯಲ್ಲಿ ವಿಳಂಬವನ್ನು ನೀಡುತ್ತದೆ ಎಂದು ಸಹ ಗಮನಿಸಲಾಗಿದೆ. 7. ಚಂದ್ರನಿಂದ 7ನೇ ಮನೆಯಲ್ಲಿ ಮಂಗಳ, ಶನಿ ಮತ್ತು ಶುಕ್ರ ಇದ್ದರೆ ಅದು ಮದುವೆಯ ವಿಳಂಬ ಅಥವಾ ನಿರಾಕರಣೆಯನ್ನು ತೋರಿಸುತ್ತದೆ. (ಜಾತಕ ತತ್ವ) 8. ಶುಕ್ರನ 7ನೇ ಮನೆಯಲ್ಲಿ ಪಾಪ ಗ್ರಹಗಳಿದ್ದರೆ ಅದು ಮದುವೆ ವಿಳಂಬ ಅಥವಾ ನಿರಾಕರಣೆಯನ್ನು ಸಹ ನೀಡುತ್ತದೆ. (ಜಾತಕ ತತ್ವ) 9. ಇತರ ಅಂಶಗಳು ಸಹ ಉತ್ತಮವಾಗಿಲ್ಲದಿದ್ದರೆ ಮಂಗಲ ದೋಷ ಅಥವಾ ಕುಜದೋಷವು ಮದುವೆ ವಿಳಂಬದ ಸಂಯೋಜನೆಯಾಗಿದೆ. 4, 7, 8 ಅಥವಾ 12ನೇ ಮನೆಯಲ್ಲಿ ಮಂಗಳ ಸ್ಥಾನವು ಮಂಗಲ ದೋಷ ಅಥವಾ ಕುಜದೋಷಕ್ಕೆ ಕಾರಣವಾಗುತ್ತದೆ, (ನವಜಾತ ಜಾತಕದಲ್ಲಿ ಮಂಗಲ ದೋಷ ಹೊಂದಿರುವ ವ್ಯಕ್ತಿಯನ್ನು ಕಾಲಾತೀತ ಮಂಗಲಿಕ ಎಂದು ಕರೆಯಲಾಗುತ್ತದೆ. ಆಧುನಿಕ ಸಮಾಜದಲ್ಲಿ ಈ ದೋಷ ಹೊಂದಿರುವ ಹುಡುಗಿಯರು ತಮ್ಮ ಜಾತಕದಲ್ಲಿ ತಮಗಾಗಿ ಸೂಕ್ತವಾದ ಜೋಡಿಯನ್ನು ಕಂಡುಕೊಳ್ಳಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ ಎಂದು ಕಂಡುಬಂದಿದೆ.) 10. ಕೆಲವೊಮ್ಮೆ ಜಾತಕದಲ್ಲಿ ಸನ್ಯಾಸ ಯೋಗ ಅಥವಾ ಪ್ರವರಾಜ್ಯ ಯೋಗಗಳು ಸಹ ಮದುವೆ ನಿರಾಕರಣೆ ಅಥವಾ ವಿಳಂಬವನ್ನು ತೋರಿಸುತ್ತವೆ. ಈ ಯೋಗಗಳು ಮದುವೆಯಲ್ಲಿ ಆಸಕ್ತಿಯ ಕೊರತೆಯನ್ನು ನೀಡುತ್ತವೆ ಮತ್ತು ಇದರಿಂದಾಗಿ ಮದುವೆಯಲ್ಲಿ ತೀವ್ರ ವಿಳಂಬವನ್ನು ನೀಡುತ್ತದೆ. 11. ಚಂದ್ರನ ಶೇಖರಣಾಕಾರ ಅಂದರೆ ಚಂದ್ರ ಲಗ್ನದ ಅಧಿಪತಿ ಶನಿಯ ದೃಷ್ಟಿಯಲ್ಲಿ ಇದ್ದರೆ ವಿವಾಹ ವಿಳಂಬ ಅಥವಾ ವಿವಾಹದಲ್ಲಿ ಆಸಕ್ತಿ ಕೊರತೆಯನ್ನುಂಟುಮಾಡುತ್ತದೆ, ಆದ್ದರಿಂದ ಇದು ಬೃಹತ್ ಪರಾಶರ ಹೋರಾ ಶಾಸ್ತ್ರದ ಪ್ರಕಾರ ಸನ್ಯಾಸ ಯೋಗವಾಗಿದೆ. 12. 7ನೇ ಅಧಿಪತಿಯು ಸರ್ವಾರ್ಥ ಚಿಂತಾಮಣಿಯ ಪ್ರಕಾರ ತನ್ನದೇ ಆದ ನಕ್ಷತ್ರ ಅಥವಾ ನಕ್ಷತ್ರದಲ್ಲಿ ವಿವಾಹ ವಿಳಂಬ ಅಥವಾ ವಿವಾಹ ನಿರಾಕರಣೆಯನ್ನು ನೀಡುತ್ತದೆ. 13. ಬೃಹತ್ ಜಾತಕದ ಪ್ರಕಾರ ಸೂರ್ಯ ಮತ್ತು ಚಂದ್ರರು ಶನಿಯ ದೃಷ್ಟಿಯಲ್ಲಿ 7ನೇ ಮನೆಯಲ್ಲಿದ್ದರೆ ವಿವಾಹ ಅಥವಾ ಸಂಬಂಧದಿಂದ ಸಂತೋಷದ ಕೊರತೆಯನ್ನು ಸಹ ತೋರಿಸುತ್ತದೆ. 14. 7ನೇ ಮನೆ ಅಥವಾ ಅದರ ಅಧಿಪತಿ ಮತ್ತು/ಪ್ರ.ಶುಕ್ರನು ಪಾಪ ಗ್ರಹಗಳ ನಡುವೆ ಇದ್ದರೆ ಅದು ಮದುವೆಯಲ್ಲಿ ತೀವ್ರ ವಿಳಂಬವನ್ನು ನೀಡುತ್ತದೆ. 15. ಶುಕ್ರನು ಶನಿಯ ರಾಶಿ ಅಥವಾ ನವಾಂಶದಲ್ಲಿದ್ದರೆ ಅಥವಾ ಶುಕ್ರ ಮತ್ತು ಶನಿಯು ನವಾಂಶ ವಿನಿಮಯವನ್ನು ಹೊಂದಿದ್ದರೆ ಈ ಯೋಗವು ಜಾತಕರಲ್ಲಿ ವಿವಾಹ ವಿಳಂಬ ಮತ್ತು ಅಸಾಮಾನ್ಯ ಲೈಂಗಿಕ ನಡವಳಿಕೆಗಳನ್ನು ಉಂಟುಮಾಡುತ್ತದೆ. (ಬೃಹತ್ಪರಾಶರಹೋರಶಾಸ್ತ್ರ, ಮತ್ತು ಬೃಹತ್ ಜಾತಕ) 16. 12ನೇ ಮನೆಯು ಹಾಸಿಗೆಯ ಸೌಕರ್ಯದ ಮನೆಯಾಗಿದ್ದು, ಅದು ಪಾಪ ಗ್ರಹಗಳಿಂದ ಬಾಧಿತವಾಗಿದ್ದರೆ ಅದು ವಿಳಂಬ ಅಥವಾ ಅಪ್ರಸ್ತುತ ಅಥವಾ ವಿವಾಹವನ್ನು ತೋರಿಸುತ್ತದೆ. 17. 7ನೇ ಮನೆಯಲ್ಲಿ ಸೂರ್ಯನು ಪಾಪ ಗ್ರಹಗಳ ಅಂಶದ ಅಡಿಯಲ್ಲಿ ಇದ್ದರೆ ಅದು ಮದುವೆ ಅಥವಾ ಸಂಬಂಧದಿಂದ ಸಂತೋಷದ ಕೊರತೆಯನ್ನು ನೀಡುತ್ತದೆ ಎಂಬುದು ಪರೀಕ್ಷಿತ ಶಾಸ್ತ್ರೀಯ ತತ್ವವಾಗಿದೆ. 18. ಜಾತಕ ತತ್ವದ ಪ್ರಕಾರ 5ನೇ, 7ನೇ ಅಥವಾ 9ನೇ ಮನೆಯಲ್ಲಿ ಸೂರ್ಯ-ಶುಕ್ರ ಸಂಯೋಗವು ಸಂಗಾತಿಯಿಂದ ಸಂತೋಷದ ಕೊರತೆಯನ್ನು ತೋರಿಸುತ್ತದೆ. ವಿವಾಹ ವಿಳಂಬಕ್ಕೆ ಜಾಮಿನಿ ಯೋಗ 1. ದಾರಕಾರಕ ಮತ್ತು ಗಣತಿಕಾರಕಗಳ ನಿಕಟ ಪದವಿ ಸಂಯೋಗವು ವಿವಾಹ ಮತ್ತು ಸಂಬಂಧಗಳಲ್ಲಿ ವಿಳಂಬ ಅಥವಾ ತೊಂದರೆಗಳನ್ನು ತೋರಿಸುತ್ತದೆ. 2. ಕಾರಕಾ೦ಶ ಲಗ್ನದಿಂದ 7 ನೇ ಮನೆಯಲ್ಲಿ ಶನಿ ಸ್ಥಾನವು ವೃದ್ಧ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವ ಮೋಹವನ್ನು ನೀಡುತ್ತದೆ. 3. ಉಪಪಾದ ರಾಶಿಯಿಂದ ಎರಡನೇ ಮನೆಯು ಪಾಪ ಗ್ರಹ ಅಥವಾ ಪಾಪ ಅಂಶವನ್ನು ಹೊಂದಿದ್ದರೆ, ಜಾತಕನು ತನ್ನ ಸಂಗಾತಿಯನ್ನು ಕಳೆದುಕೊಳ್ಳುತ್ತಾನೆ ಅಥವಾ ತ್ಯಾಗ ಮಾಡುತ್ತಾನೆ. (ಜೈಮಿನಿ ಸೂತ್ರ, ಅಧ್ಯಾಯ 1 ಚತುರ್ಥ IV) 4. ಉಪಪಾದದಿಂದ 2 ನೇ ಮನೆಯಲ್ಲಿ ದುರ್ಬಲ ಗ್ರಹವು ವಿವಾಹದಲ್ಲಿ ಸಂಗಾತಿಯ ನಷ್ಟ ಅಥವಾ ಸಂಬಂಧಗಳಲ್ಲಿ ತೊಂದರೆಯನ್ನು ನೀಡುತ್ತದೆ. 5. ಉಪಪಾದದಿಂದ ಏಳನೇ, ನವಾಂಶದಿಂದ ಅಥವಾ ಕಾರಕಾ೦ಶ ಲಗ್ನದಿಂದ 7 ನೇ, ಪಾಪ ಗ್ರಹಗಳು ಸ೦ಗಮಿಸಿದರೆ, ಜಾತಕನು ವೈವಾಹಿಕ ಸುಖದಿಂದ ವಂಚಿತನಾಗುತ್ತಾನೆ ಅಥವಾ ಸಂಬಂಧಗಳಲ್ಲಿ ತೊಂದರೆಯನ್ನು ಅನುಭವಿಸುತ್ತಾನೆ. ಮೇಲಿನ ಯೋಗಗಳು ಮದುವೆ ಅಥವಾ ಸಂಬಂಧ ಸಮಾಲೋಚನೆ, ಪ್ರೇಮ ಜ್ಯೋತಿಷ್ಯ ಮತ್ತು/ಅಥವಾ ಜಾತಕ ಹೊಂದಾಣಿಕೆಯಲ್ಲಿ ಆಸಕ್ತಿ ಹೊಂದಿರುವ ಜ್ಯೋತಿಷಿಗಳಿಗೆ ಸಹಾಯಕವಾಗುತ್ತವೆ. ಮದುವೆ ವಿಳಂಬಕ್ಕೆ ಅನೇಕ ಕಾರಣಗಳಿರಬಹುದು, ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಪರಿಹಾರಗಳನ್ನು ಮಾಡುವುದರಿಂದ ಮದುವೆ ಬೇಗ ಆಗುತ್ತದೆ ಎಂದು ಹೇಳಲಾಗುತ್ತದೆ. ಸೋಮವಾರದಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ, ಪ್ರಾರ್ಥನೆ ಸಲ್ಲಿಸುವುದು, ಪ್ರತಿ ಗುರುವಾರ ವಿಷ್ಣುವಿನ ಪೂಜೆ ಮಾಡುವುದು, ತುಳಸಿ ಗಿಡಕ್ಕೆ ನೀರೆರೆದು ಪೂಜಿಸುವುದು, ಅಶ್ವತ್ಥ ಮರಕ್ಕೆ ನೀರೆರೆದು ಪೂಜಿಸುವುದು, ಇತ್ಯಾದಿ ಪರಿಹಾರಗಳನ್ನು ಮಾಡುವುದರಿಂದ ಮದುವೆಯಲ್ಲಿನ ವಿಳಂಬ ದೂರವಾಗುತ್ತದೆ. ವಿವರಣೆ: ಮದುವೆ ವಿಳಂಬಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಹೇಳಲಾಗಿದೆ. ಅವುಗಳಲ್ಲಿ ಕೆಲವು ಹೀಗಿವೆ: ಶಿವ ಪೂಜೆ: ಸೋಮವಾರದಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ, ಪಾರ್ವತಿ ದೇವಿಯೊಂದಿಗೆ ವಿವಾಹ ಪ್ರಾರ್ಥನೆ ಸಲ್ಲಿಸಬೇಕು. ಇದರಿಂದ ಶೀಘ್ರ ವಿವಾಹ ಯೋಗ ಕೂಡಿ ಬರುತ್ತದೆ. ಗುರು ವ್ರತ: ಪ್ರತಿ ಗುರುವಾರ ವಿಷ್ಣುವಿನ ಪೂಜೆ ಮಾಡಿ, ಹಳದಿ ಬಟ್ಟೆ ಧರಿಸುವುದರಿಂದ ಮದುವೆಯಲ್ಲಿನ ಅಡಚಣೆಗಳು ದೂರವಾಗುತ್ತವೆ. ತುಳಸಿ ಪೂಜೆ: ಪ್ರತಿದಿನ ತುಳಸಿ ಗಿಡಕ್ಕೆ ನೀರೆರೆದು ಪೂಜಿಸುವುದರಿಂದ ವಿವಾಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ಅಶ್ವತ್ಥ ವೃಕ್ಷ ಪೂಜೆ: ಮದುವೆ ವಿಳಂಬವಾಗುತ್ತಿದ್ದರೆ, ಅಶ್ವತ್ಥ ವೃಕ್ಷಕ್ಕೆ ನೀರು ಹಾಕಿ, ದೀಪ ಬೆಳಗಿ ಪ್ರಾರ್ಥಿಸುವುದರಿಂದ ವಿವಾಹ ಯೋಗ ಕೂಡಿ ಬರುತ್ತದೆ. ಬಾಳೆ ಗಿಡ ಪೂಜೆ: ಶುಭ ಮುಹೂರ್ತದಲ್ಲಿ ಬಾಳೆ ಗಿಡವನ್ನು ಪೂಜಿಸುವುದರಿಂದ ಮದುವೆ ವಿಳಂಬ ನಿವಾರಣೆಯಾಗುತ್ತದೆ. ಲಾಲ್ ಕಿತಾಬ್ ಪರಿಹಾರಗಳು: ಲಾಲ್ ಕಿತಾಬ್ ಪ್ರಕಾರ, ಚಂದ್ರ, ಮಂಗಳ ಮತ್ತು ಬುಧ ಗ್ರಹಗಳ ದೋಷದಿಂದ ಮದುವೆ ವಿಳಂಬವಾಗುತ್ತದೆ ಎಂದು ಹೇಳಲಾಗುತ್ತದೆ. ಈ ದೋಷಗಳನ್ನು ನಿವಾರಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಉದಾಹರಣೆಗೆ, ವರ್ಧಿಸುತ್ತಿರುವ ಚಂದ್ರನ ಮೊದಲ ಗುರುವಾರದಂದು ಎರಡು ನಾಣ್ಯಗಳನ್ನು (ಒಂದು ರೂಪಾಯಿ ನಾಣ್ಯ ಮತ್ತು ಬೆಳ್ಳಿಯ ನಾಣ್ಯ) ಆಲದ ಮರಕ್ಕೆ ಅರ್ಪಿಸಬೇಕು ಮತ್ತು ಮರುದಿನ ಶನಿವಾರ ಸ್ವಲ್ಪ ಸಿಹಿ ನೀರು ಮತ್ತು ಸಾಸಿವೆ ಎಣ್ಣೆಯೊಂದಿಗೆ ಗೋಧಿಯ ದೀಪವನ್ನು ಬೆಳಗಬೇಕು. ನಂತರ ತೆಂಗಿನಕಾಯಿಯನ್ನು ಏಳು ಬಾರಿ ಸುತ್ತು ಹಾಕಿ, ಮುಂದಿನ ಬುಧವಾರ ಹಣದೊಂದಿಗೆ ದಾನ ಮಾಡಬೇಕು. ಉತ್ತುತ್ತೆ ಪರಿಹಾರ: ಮದುವೆಯ ವಿಳಂಬವನ್ನು ಅನುಭವಿಸುತ್ತಿರುವ ಹುಡುಗಿಯರು ಪ್ರತಿ ಶುಕ್ರವಾರ ಮಲಗುವ ಮುನ್ನ ಎಂಟು ಒಣ ಖರ್ಜೂರ/ಉತ್ತುತ್ತೆಯನ್ನು ನೀರಿನಲ್ಲಿ ಬೇಯಿಸಿ, ಹಾಸಿಗೆಯ ತುದಿಯಲ್ಲಿಟ್ಟು ಮಲಗಬೇಕು ಮತ್ತು ಮುಂಜಾನೆ ಹರಿಯುವ ನದಿಗೆ ಬಿಡಬೇಕು. ನಾಗ ದೋಷ ಪರಿಹಾರ: ನಾಗ ದೋಷವಿದ್ದರೆ, ಸಾಮೂಹಿಕವಾಗಿ ಪರಿಹಾರ ಮಾಡಿಸುವುದರಿಂದ ದೋಷ ನಿವಾರಣೆಯಾಗುತ್ತದೆ. ಈ ಪರಿಹಾರಗಳನ್ನು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಮಾಡಿದರೆ, ಮದುವೆಯಲ್ಲಿನ ವಿಳಂಬ ದೂರವಾಗಿ, ಶೀಘ್ರ ವಿವಾಹ ಯೋಗ ಕೂಡಿ ಬರುತ್ತದೆ ಎಂದು ಹೇಳಲಾಗುತ್ತದೆ. ಮದುವೆಯ ವಿಳಂಬಕ್ಕೆ ಈ ಕಾರಣವೂ ಇರಬಹುದು..! ಪರಿಹಾರ ಕ್ರಮಗಳು ಇಲ್ಲಿದೆ ನೋಡಿ ಜಾತಕದಲ್ಲಿರುವ ಏಳನೇ ಮನೆಯು ಜೀವನದಲ್ಲಿನ ಎಲ್ಲಾ ರೀತಿಯ ಸಹಜೀವನವನ್ನು ಹೇಳುತ್ತದೆ. ಅದೇ ಏಳನೇ ಮನೆಯಲ್ಲಿ ಗ್ರಹಗಳ ಸ್ಥಾನಗಳಿಂದಾಗುವ ದೋಷಗಳಿಂದ ಮದುವೆಯಲ್ಲಿ ವಿಳಂಬವಾಗಬಹುದು. ತಡವಾದ ಮದುವೆಯ ಕಾರಣಗಳು ಮತ್ತು ಪರಿಹಾರ ಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. ಮದುವೆ ಎಂದರೆ ಹೆಣ್ಣು ಮತ್ತು ಗಂಡು ಪತಿ ಪತ್ನಿಯಾಗಿ ಜೀವಿತಾವಧಿಯವರೆಗೂ ಜೊತೆಗಿರುವೆನೆಂದು ಪ್ರಮಾಣ ಮಾಡುವ ಶುಭ ಗಳಿಗೆ. ಇದು ಎರಡು ಹೃದಯಗಳನ್ನು ಬೆಸೆಯುವುದು ಮಾತ್ರವಲ್ಲದೇ ಎರಡು ಕುಟುಂಬಗಳನ್ನೂ ಒಟ್ಟುಗೂಡಿಸುತ್ತದೆ. ಆದರೆ ಒಬ್ಬ ವ್ಯಕ್ತಿಯ ಮದುವೆಯ ಸಮಯವನ್ನು ಅವರ ಕುಂಡಲಿಯಲ್ಲಿರುವ ಗ್ರಹಗಳ ಆಧಾರದ ಮೇಲೆ ಹಾಗೂ ಜನನದ ಸಮಯದಲ್ಲಿ ಉಂಟಾದ ಗ್ರಹಗಳ ಚಲನೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇಷ್ಟು ಮಾತ್ರವಲ್ಲದೇ ವಿವಾಹದಲ್ಲಿನ ವಿಳಂಬಕ್ಕೆ ಗ್ರಹಗಳು ಹಾಗೂ ಕುಂಡಲಿಯಲ್ಲಿನ ಮನೆಗಳೂ ಕಾರಣವಾಗಬಹುದು. ಎಲ್ಲಾ ಗ್ರಹಗಳೆಂದು ಹೇಳುವುದಕ್ಕಿಂತಲೂ ಸೂರ್ಯ, ಶನಿ, ಮಂಗಳ, ರಾಹು ಮತ್ತು ಕೇತು ವಿವಾಹದಲ್ಲಿನ ವಿಳಂಬಕ್ಕೆ ಕಾರಣವಾಗುತ್ತವೆ. ಕುಂಡಲಿಯಲ್ಲಿನ ಏಳನೇ ಮನೆ ಮಾತ್ರವಲ್ಲದೇ ಎಂಟನೇ ಮತ್ತು ಹನ್ನೆರಡನೇ ಮನೆಯೂ ತಡವಾದ ಮದುವೆಗೆ ಕಾರಣವಾಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ. ವ್ಯಕ್ತಿಯ ಜಾತಕದಲ್ಲಿನ ಏಳನೇ ಮನೆಯಲ್ಲಿ ರಾಹು, ಕೇತು, ಮಂಗಳ ಅಥವಾ ಸೂರ್ಯನಂತಹ ಗ್ರಹಗಳು ಸ್ಥಿತವಾಗಿದ್ದರೆ ಇವುಗಳು ವಿವಾಹದಲ್ಲಿ ವಿಳಂಬವನ್ನು ಸೂಚಿಸುತ್ತದೆ. ಏಳನೇ ಮನೆಯಲ್ಲಿ ಶನಿ ಅಥವಾ ಒಂದು, ಐದು ಅಥವಾ ಹತ್ತನೇ ಮನೆಯಲ್ಲಿದ್ದರೂ ಮದುವೆಯಲ್ಲಿ ವಿಳಂಬವಾಗಬಹುದು. ವ್ಯಕ್ತಿಯ ಜಾತಕದಲ್ಲಿ ಏಳನೇ ಮನೆಯ ಅಧಿಪತಿಯೊಂದಿಗೆ ಇತರ ಗ್ರಹಗಳಾದ ಶನಿ, ರಾಹು, ಕೇತು ಮತ್ತು ಮಂಗಳನ ಸಂಯೋಗವೂ ಇದಕ್ಕೆ ಕಾರಣವಾಗಬಹುದು. ಎರಡು, ಆರು, ಎಂಟು ಹಾಗೂ ಹನ್ನೆರಡನೇ ಮನೆಯಲ್ಲಿ ಅಥವಾ ಬಾಲ್ಯಾವಸ್ಥ, ವೃದ್ಧಾವಸ್ಥ, ಮೃತಾವಸ್ಥೆಯಲ್ಲಿ ಏಳನೇ ಮನೆಯ ಅಧಿಪತಿ ಶುಕ್ರನ ಉಪಸ್ಥಿತಿಯು ವ್ಯಕ್ತಿಯ ಜೀವನದಲ್ಲಿ ತಡವಾದ ಮದುವೆಯನ್ನು ಸೂಚಿಸುತ್ತದೆ. ಇದರ ಜೊತೆಗೆ ಏಳನೇ ಮನೆಯ ಅಧಿಪತಿ ದುರ್ಬಲವಾಗಿದ್ದರೂ ವಿವಾಹದಲ್ಲಿನ ಸಮಸ್ಯೆಯನ್ನು ತೋರಿಸುತ್ತದೆ. ವ್ಯಕ್ತಿಯ ಕುಂಡಲಿಯಲ್ಲಿ ಆರನೇ ಮನೆಯ ಅಧಿಪತಿಯು ಐದನೇ ಮನೆಯಲ್ಲಿ ಅಥವಾ ಐದನೇ ಮನೆಯ ಅಧಿಪತಿಯು ಆರನೇ ಮನೆಯಲ್ಲಿ ಸ್ಥಿತನಾಗಿದ್ದರೆ ಅದು ಮದುವೆಯ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿಯಾಗಿ ಏಳು ಮತ್ತು ಎಂಟು, ಆರು ಮತ್ತು ಏಳು, ಹೀಗೆ ಐದರಿಂದ 8 ನೇ ಮನೆಗಳ ಅಧಿಪತಿಗಳ ನಡುವೆ ಇಂತಹ ಸಂಬಂಧವು ರೂಪುಗೊಂಡರೆ ವಿವಾಹದಲ್ಲಿ ವಿಳಂಬವನ್ನು ಕಾಣಬಹುದು. ಗುರು, ಮಂಗಳ, ಬುಧ, ಶುಕ್ರ ಮತ್ತು ಸೂರ್ಯನ ಸ್ಥಾನ ಏಳನೇ ಮನೆಯ ಅಧಿಪತಿ ಮಾತ್ರವಲ್ಲದೇ ಗುರು, ಮಂಗಳ, ಬುಧ, ಶುಕ್ರ ಹಾಗೂ ಸೂರ್ಯನೂ ಕೂಡಾ ಮದುವೆಗ ಕಾರಣವಾಗುವ ಗ್ರಹ. ಕುಂಡಲಿಯ ಎರಡು, ಆರು, ಎಂಟು ಮತ್ತು ಹನ್ನೆರಡನೇ ಮನೆಗಳಲ್ಲಿ ಈ ಗ್ರಹಗಳ ಸ್ಥಾನವು ವಿಳಂಬವಾದ ಮದುವೆಯನ್ನು ಪ್ರತಿನಿಧಿಸುತ್ತದೆ.ಕೆಲವೊಮ್ಮೆ ಗ್ರಹಗಳ ಚಲನೆಯ ಅವಧಿಯಲ್ಲಿ ರೂಪುಗೊಳ್ಳುವ ದುರುದ್ದೇಶಪೂರಿತ ಯೋಗಗಳ ಅವಧಿ, ಮಧ್ಯದ ಅವಧಿ ಹಾಗೂ ಕೊನೆಯ ಅವಧಿಯಲ್ಲಿ ಗ್ರಹಣ ಯೋಗ, ಚಾಂಡಲ ಯೋಗ, ಅಂಗಾರಕ ಯೋಗವು ದೋಷಪೂರಿತ ಯೋಗಗಳನ್ನು ರೂಪಿಸುತ್ತದೆ. ಇದು ಮದುವೆಯಲ್ಲಿನ ವಿಳಂಬಕ್ಕೂ ಕಾರಣವಾಗುತ್ತದೆ. ಈ ಯೋಗಗಳು ಮಾತ್ರವಲ್ಲದೇ ಕಾಲ ಸರ್ಪದೋಷ, ಮಾಂಗಲಿಕ ದೋಷ, ಪಿತ್ರ ದೋಷ, ಅಂಗಾರಕ ಯೋಗ ಹಾಗು ಕೇಂದ್ರ ಯೋಗದ ಋಣಾತ್ಮಕ ಪ್ರಭಾವವು ವೈವಾಹಿಕ ಜೀವನಕ್ಕೆ ಕಾಲಿಡಲು ತಡೆಯೊಡ್ಡುತ್ತದೆ. ಮದುವೆಗೆ ಸಂಬಂಧಿಸಿದಂತೆ 1,5,7 ಮತ್ತು 11ನೇ ಮನೆಯಲ್ಲಿ ಈ ಯೋಗಗಳು ರೂಪುಗೊಂಡರೆ ಇದರ ಋಣಾತ್ಮಕ ಪರಿಣಾಮಗಳು ಸ್ಪಷ್ಟವಾಗುತ್ತವೆ. ​ವಿವಾಹದಲ್ಲಿನ ವಿಳಂಬಕ್ಕೆ ಪರಿಹಾರ ಕ್ರಮಗಳು ನಿಮ್ಮ ಮದುವೆಯಲ್ಲಿ ವಿಳಂಬವಾಗುತ್ತಿದ್ದರೆ ರುಕ್ಮಿಣಿ ವಲ್ಲಭ ಎಂದು ಕರೆಯಲ್ಪಡುವ ಈ ಮಂತ್ರವನ್ನು ಪಠಿಸಬೇಕು. ಇದರ ಗರಿಷ್ಠ ಪ್ರಯೋಜನ ಪಡೆಯಲು ಮೂರು ತಿಂಗಳ ಕಾಲ ಈ ಮಂತ್ರವನ್ನು ಜಪಿಸಬೇಕು. ಮಂತ್ರ ಹೀಗಿದೆ ನೋಡಿ, " ಓಂ ನಮೋ ಭಗವತೇ ರುಕ್ಮಿಣಿ ವಲ್ಲಭಾಯ ಸ್ವಾಹಾ'' ಇನ್ನೊಂದು ಮಂತ್ರವೆಂದರೆ, "ಓಂ ಗೋಪೀಜನ ವಲ್ಲಭಾಯ ಸ್ವಾಹಾ" ತಡವಾದ ವಿವಾಹಕ್ಕೆ ಹರಳು ಜಾತಕದಲ್ಲಿ ಅಥವಾ ನವಾಂಶ ಜಾತಕದಲ್ಲಿ ಏಳನೇ ಮನೆಯು ದುರ್ಬಲವಾಗಿಲ್ಲದಿದ್ದರೆ ರತ್ನವನ್ನು ಧರಿಸಬಹುದು. ಗಂಡು ಮಕ್ಕಳಿಗೆ ಶುಕ್ರನ ಕಲ್ಲು ಧರಿಸಲು ಸೂಚಿಸಿದರೆ, ಹೆಣ್ಣು ಮಕ್ಕಳು ಗುರು ಗ್ರಹದ ಹರಳನ್ನು ಧರಿಸುವುವಂತೆ ಸಲಹೆ ನೀಡಲಾಗುತ್ತದೆ. ಧರಿಸುವ ಮುನ್ನ ತಜ್ಞ ಜ್ಯೋತಿಷ್ಯರ ಸಲಹೆ ಪಡೆಯುವುದು ಅತೀ ಮುಖ್ಯ. ಪೂಜೆಯ ಪರಿಹಾರ ಗ್ರಹಗಳ ಸ್ಥಾನಕ್ಕ ಅನುಗುಣವಾಗಿ ಸೋಮವಾರ ಮತ್ತು ಶುಕ್ರವಾರ ಉಪವಾಸವನ್ನು ಮಾಡಬೇಕು. ಒಂದು ವೇಳೆ ಮಂಗಲಿಕ ದೋಷದಿಂದಾಗಿ ಮದುವೆಯಲ್ಲಿ ಅಡೆತಡೆಗಳುಂಟಾದರೆ ಮಂಗಳವಾರದಂದು ಚಂಡಿಕಾ ಸ್ತೋತ್ರ ಪಠಿಸಬಹುದು ಅಥವಾ ಶನಿವಾರದಂದು ಸುಂದರಕಾಂಡವನ್ನು ಓದಬಹುದು. ಇದಲ್ಲದೇ ಮನೆಯ ಹೊರಗೆ ಅಥವಾ ಮನೆಯ ಹೂತೋಟದ ಹೊರಗೆ ಬಾಳೆಯ ಗಿಡವನ್ನು ನೆಡಬೇಕು ಹಾಗೂ ನೀರು ಹಾಕುವುದನ್ನು ಮರೆಯಬಾರದು. ಗುರುವಾರದಂದು ಉಪ್ಪಿನ ಸೇವನೆ ಮಾಡಬಾರದು ಹಾಗೂ ಮದುವೆಯ ಈಡೇರಿಕೆಗಾಗಿ ವಿಷ್ಣುವನ್ನು ಸ್ತುತಿಸಬೇಕು. ವಿವಾಹ ವಿಳಂಬವಾಗುತ್ತಿದೆಯೇ? ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಈ ಪರಿಹಾರಗಳನ್ನು ಅನುಸರಿಸಿ ವಿವಾಹವೆಂಬ ಬಾಂಧವ್ಯವನ್ನು ದೇವರು ಸ್ವರ್ಗದಲ್ಲೇ ನಿಶ್ಚಯಿಸಿರುತ್ತಾರೆ ಎಂಬುದು ಹಿರಿಯರ, ಅನುಭವಸ್ಥರ ಮಾತಾಗಿದೆ. ವಿವಾಹ (Marriage) ವಿಷಯದಲ್ಲಿ ಕೂಡ ಯೋಗಗಳು ಕೂಡಿ ಬರಬೇಕು ಎಂದು ಹೇಳಿರುವುದನ್ನು ನಾವು ಕೇಳಿರುತ್ತೇವೆ. ಈ ಜನ್ಮದಲ್ಲಿ ಸತಿಪತಿಗಳಾಗಿರಲು ಕುಂಡಲಿಗಳು ಹೊಂದಾಣಿಕೆಯಾಗಬೇಕು ಅಂತೆಯೇ ವಿವಾಹ ಯೋಗವೂ ಕೂಡಿಬರುವುದು ಮುಖ್ಯವಾಗಿದೆ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ವಿವಾಹದ ಕುರಿತು ಕೆಲವೊಂದು ಮಾಹಿತಿಗಳನ್ನು ಬಹಿರಂಗಗೊಳಿಸಲಾಗಿದೆ ಅದರಲ್ಲೊಂದು ತಡವಾಗಿ ವಿವಾಹವಾಗುವುದು ಹಾಗೂ ಬೇಗನೇ ವಿವಾಹವಾಗುವುದು. ತಡವಾಗಿ ವಿವಾಹವಾಗುವುದರಿಂದ ಹಾಗೂ ಬೇಗನೇ ವಿವಾಹವಾಗುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳಬಹುದಾಗಿದೆ. ಬೇಗನೇ ವಿವಾಹವಾಗುವುದರಿಂದ ನಿಮ್ಮ ಸಂಗಾತಿ ಹಾಗೂ ಮಕ್ಕಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯಬಹುದಾಗಿದೆ ಅಂತೆಯೇ ಸಂಗಾತಿಯನ್ನು ಆರಿಸುವುದರಲ್ಲೂ ಕೂಡ ನಿಮಗೆ ಸಾಕಷ್ಟು ಆಯ್ಕೆಗಳಿರುತ್ತವೆ. ನಿಮ್ಮನ್ನು ಸಂತೋಷಪಡಿಸುವ ವ್ಯಕ್ತಿಯನ್ನು ನೀವು ಅನ್ವೇಷಿಸಲು ಸಮಯ ದೊರೆಯುತ್ತದೆ. ಆದರೆ ಒಮ್ಮೊಮ್ಮೆ ಕೆಲವೊಂದು ಕಾರಣಾಂತರಗಳಿಂದ ವಿವಾಹ ಕಾರ್ಯದಲ್ಲಿ ವಿಳಂಬವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮದುವೆ ವಿಳಂಬವಾಗಲು ಕಾರಣವೇನು? ಜನ್ಮ ಕುಂಡಲಿಯಲ್ಲಿ ಮದುವೆಯು ಏಳನೇ ಮನೆಯಲ್ಲಿ ಸಂಭವಿಸುತ್ತದೆ ಎಂದು ಭಾವಿಸಲಾಗಿದೆ. ಇದಲ್ಲದೆ, ಪುರುಷರಿಗೆ ಶುಕ್ರ ಮತ್ತು ಮಹಿಳೆಯರಿಗೆ ಗುರುವಿನ ವೈವಾಹಿಕ ಹೊಂದಾಣಿಕೆಯನ್ನು ಪರಿಶೀಲಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಸೂರ್ಯನು ಏಳನೇ ಮನೆಯಲ್ಲಿ ಸ್ಥಾನ ಪಡೆದರೆ ಮದುವೆ ವಿಳಂಬವಾಗುವ ಸಂಭವವಿದೆ. ಇನ್ನು ಶಿಕ್ಷಣ, ಮಕ್ಕಳ ಯೋಗ, ವಿವಾಹ, ಅದೃಷ್ಟ, ಬುದ್ಧಿವಂತಿಕೆಗೆ ಗುರು ಅಧಿಪತಿಯಾಗಿದ್ದಾನೆ. ಈ ಗ್ರಹವು ದುರ್ಬಲಗೊಂಡಾಗ ಅಥವಾ ಹಿಮ್ಮುಖಗೊಂಡಾಗ ವಿವಾಹವು ವಿಳಂಬವಾಗುತ್ತದೆ. ಏಳನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ವ್ಯಕ್ತಿಯ ವಿವಾಹವನ್ನು ಮುಂದೂಡಬಹುದು. ಪ್ರೀತಿಯ ಸಂಕೇತವಾದ ಶುಕ್ರವು ಪ್ರತಿಕೂಲವಾದ ಗ್ರಹಗಳ ಜೊತೆಯಲ್ಲಿದ್ದರೆ ಮದುವೆಗಳು ವಿಳಂಬವಾಗಬಹುದು. ಶುಕ್ರ ಮತ್ತು ಸೂರ್ಯ ಒಟ್ಟಿಗೆ ದಾಂಪತ್ಯಕ್ಕೆ ಹಾನಿಕಾರಕವಾಗಬಹುದು. ಶುಕ್ರವು ಅವರ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸುತ್ತದೆ ಮತ್ತು ಅದು ಸೂರ್ಯ ಮತ್ತು ಶನಿಯ ನಡುವೆ ಸ್ಥಾನದಲ್ಲಿದ್ದರೆ ಮದುವೆಯಾಗಲು ವಿಳಂಬವಾಗುತ್ತದೆ. ಇದಕ್ಕೆ ಪರಿಹಾರಗಳೇನು? ಶೀಘ್ರ ವಿವಾಹಕ್ಕೆ ಕೆಲವೊಂದು ಪರಿಹಾರೋಪಾಯಗಳು · ಹೆಣ್ಣುಮಕ್ಕಳು ಸತತ ಹದಿನಾರು ಸೋಮವಾರಗಳಂದು ಶಿವನಿಗಾಗಿ ಉಪವಾಸವನ್ನಾಚರಿಸಿದರೆ ವಿವಾಹ ಕಾರ್ಯಗಳು ಬೇಗನೇ ನೆರವಾಗುತ್ತದೆ. ಶಿವಲಿಂಗಕ್ಕೆ ನೀರಿನ ಅಭಿಷೇಕ ಹಾಗೂ ಶಿವ ಪಾರ್ವತಿಯರನ್ನು ಪ್ರಾರ್ಥಿಸಬೇಕು. · ಕುಂಡಲಿಯಲ್ಲಿ ರಾಹು ದೋಷವಿದ್ದರೆ ದುರ್ಗಾ ದೇವಿಯನ್ನು ಪೂಜಿಸುವುದು ಉತ್ತಮ ಪರಿಹಾರವಾಗಿದೆ. ಇದರಿಂದ ಮದುವೆಗೆ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಬಹುದು. · ಶುಭ ಮುಹೂರ್ತವನ್ನು ನೋಡಿಕೊಂಡು ಬಾಳೆಯ ಬೇರನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾರ್ಥಿಸಿ ನಂತರ ಹಳದಿ ಬಟ್ಟೆಯಲ್ಲಿ ಸುರಕ್ಷಿತವಾಗಿ ಮುಚ್ಚಿಡಬೇಕು. · ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ಮತ್ತು ಉಪಾಹಾರದ ಮೊದಲು, ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ. · ತುಳಸಿ ವಿವಾಹವು ಮದುವೆಗೆ ಪ್ರಬಲವಾದ ಪೂಜೆಯಾಗಿದ್ದು ಅದು ಮದುವೆ ವಿಳಂಬದ ಸಮಸ್ಯೆಯನ್ನು ಪರಿಹರಿಸಲು ಅದ್ಭುತ ಸೂತ್ರಗಳನ್ನೊದಗಿಸುತ್ತದೆ. ಈ ಪೂಜೆಯನ್ನು ಮಾಡುವ ಮೊದಲು ಜ್ಯೋತಿಷಿಯನ್ನು ಸಂಪರ್ಕಿಸಿ. · ಮದುವೆಯಲ್ಲಿ ಯಾವುದೇ ರೀತಿಯ ತೊಂದರೆಯನ್ನು ಅನುಭವಿಸುತ್ತಿದ್ದರೆ ನಿಮ್ಮ ಸ್ನಾನದ ನೀರಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಬಹುದು. ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಕೊಳ್ಳಿ. · ಹಸುವಿಗೆ ಹಸಿರು ಹುಲ್ಲು ಅಥವಾ ಪಾಲಾಕ್ ಸೊಪ್ಪನ್ನು ನಿಯಮಿತವಾಗಿ ತಿನ್ನಿಸುವುದು ಮತ್ತು ಪ್ರತಿದಿನ ಸ್ನಾನದ ನಂತರ ಮತ್ತು ಊಟದ ಮೊದಲು ರಾಧಾ ಮತ್ತು ಕೃಷ್ಣನನ್ನು ಪ್ರಾರ್ಥಿಸುವುದು ಮದುವೆ ವಿಳಂಬವನ್ನು ತಡೆಯಲು ಸಹಾಯ ಮಾಡುತ್ತದೆ. · ಹೆಣ್ಣುಮಕ್ಕಳಿಗೆ ವಿವಾಹ ಮುಂದೂಡಲಾಗುತ್ತಿದ್ದರೆ ಗೌರಿ ಮಂತ್ರವನ್ನು ಪಠಿಸಬಹುದು. ಇದನ್ನು ಗೌರಿ ಶಂಕರ ಅರ್ಚನ ಎಂದೂ ಕರೆಯುತ್ತಾರೆ: ಹೇ ಗೌರಿ ಶಂಕರ ಅರ್ಧಾಂಗಿನಿ ಯಥಾ ತ್ವಂ ಶಂಕರ ಪ್ರಿಯ / ತಥಾ ಮಾ ಕುರು ಕಲ್ಯಾಣಿ ಕಾಂತ ಕಾಂತಂ ಸುದುರ್ ಲಾಭಂ ಎಂಬ ಮಂತ್ರ ಪಠಿಸಿ ಶೀಘ್ರ ವಿವಾಹಕ್ಕೆ ಲಾಲ್ ಕಿತಾಬ್ ಪರಿಹಾರಗಳು ಲಾಲ್ ಕಿತಾಬ್ ಟೋಟ್ಕಾಸ್ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಒದಗಿಸುತ್ತದೆ. ಇದು ಅನುಸರಿಸಲು ಸುಲಭವಾಗಿದೆ ಹಾಗೂ ಪರಿಣಾಮಕಾರಿ ಪರಿಹಾರಗಳನ್ನೊದಗಿಸುತ್ತದೆ. ಲಾಲ್ ಕಿತಾಬ್ ಮದುವೆಯ ವಿಳಂಬಕ್ಕೆ ಚಂದ್ರ, ಮಂಗಳ ಮತ್ತು ಬುಧವನ್ನು ಹೊಣೆಗಾರರನ್ನಾಗಿ ಮಾಡುತ್ತದೆ, ಆದರೆ ಇದು ಶೀಘ್ರದಲ್ಲೇ ಮದುವೆಯಾಗಲು ಮಾರ್ಗಗಳನ್ನು ಒದಗಿಸುತ್ತದೆ. · ಮೊದಲಿಗೆ ವರ್ಧಿಸುತ್ತಿರುವ ಚಂದ್ರನ ಮೊದಲ ಗುರುವಾರದಂದು , ಎರಡು ನಾಣ್ಯಗಳನ್ನು ತೆಗೆದುಕೊಳ್ಳಿ - ಒಂದು ರೂಪಾಯಿ ನಾಣ್ಯ ಮತ್ತು ಬೆಳ್ಳಿಯ ನಾಣ್ಯ ಇವುಗಳನ್ನು ಆಲದ ಮರಕ್ಕೆ ಅರ್ಪಿಸಿ. ವಿವಾಹದ ಕಾರ್ಯಕ್ಕಾಗಿ ಪ್ರಾರ್ಥಿಸಿಕೊಂಡು ನಾಣ್ಯಗಳನ್ನು ಆಲದ ಮರದ ಬುಡದ ಬಳಿ ಹೂತು ಹಾಕಿ. · ಎರಡನೆಯದಾಗಿ, ಮರುದಿನ ಶನಿವಾರ ಸ್ವಲ್ಪ ಸಿಹಿ ನೀರು ಮತ್ತು ಸಾಸಿವೆ ಎಣ್ಣೆಯೊಂದಿಗೆ ಗೋಧಿಯ ದೀಪದೊಂದಿಗೆ ಅದೇ ಆಲದ ಮರದ ಬಳಿಗೆ ಹಿಂತಿರುಗಿ. ನಿಮ್ಮ ಕೈಗಳನ್ನು ಮಡಚಿ ಪ್ರಾರ್ಥನೆಯನ್ನು ಪಠಿಸಿ, ನಂತರ ಅದರ ಮುಂದೆ ದೀಪವನ್ನು ಬೆಳಗಿಸಿ. · ಕೊನೆಯ ಹಂತವೆಂದರೆ ಒಂದು ತೆಂಗಿನಕಾಯಿಯನ್ನು ಅರ್ಪಿಸುವುದಾಗಿದೆ, ತೆಂಗಿನ ಕಾಯಿಯನ್ನು ನಿಮಗೆ ಏಳು ಬಾರಿ ಸುತ್ತು ಹಾಕಿ, ನಂತರ ಅದನ್ನು ಮುಂದಿನ ಬುಧವಾರ ಸ್ವಲ್ಪ ಹಣದೊಂದಿಗೆ ಯಾರಿಗಾದರೂ ದಾನವಾಗಿ ನೀಡಿ. · ಈ 3-ಹಂತದ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆಯು ಮದುವೆಯಲ್ಲಿ ವಿಳಂಬವನ್ನು ಉಂಟುಮಾಡುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. · ಇನ್ನೊಂದು ಪರಿಹಾರವೆಂದರೆ ಶೀಘ್ರದಲ್ಲೇ ಮದುವೆಯಾಗಲು ಬಯಸುವ ವ್ಯಕ್ತಿಯು ಈ ಕೆಳಗಿನ ದುರ್ಗಾ ಸಪ್ತಶಿಮಾತ್ರವನ್ನು 108 ಬಾರಿ ಪಠಿಸಬಹುದು ಮತ್ತು ನೀರಿನಿಂದ ಕೂಡಿರುವ ತಾಮ್ರದ ಸಾಧನವನ್ನು ಬಳಸಿ ಏಳು ಬಾರಿ ಆರತಿ ಮಾಡಬೇಕು. ಮಂತ್ರ ಹೀಗಿದೆ ಯಾ ದೇವೀ ಸರ್ವಭೂತೇಶೀ ಮಾ ಗೌರೀರೂಪೇನಸಂಸಿಹಿತಾ ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ ನಮೋ ನಮಃ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು · ಮೊದಲು ಜ್ಯೋತಿಷಿಯನ್ನು ಸಂಪರ್ಕಿಸದೆ ಲಾಕೆಟ್ ಅಥವಾ ಯಂತ್ರವನ್ನು ಧರಿಸಬೇಡಿ. · ನೀವು ಈಗಾಗಲೇ ಮಾಡುತ್ತಿರುವ ಪರಿಹಾರೋಪಾಯಗಳನ್ನು ನಿಲ್ಲಿಸಬೇಡಿ, ಉದಾಹರಣೆಗೆ ಪೂಜೆಗಳನ್ನು ಮಾಡುವುದು ಅಥವಾ ಮಂತ್ರಗಳನ್ನು ಪಠಿಸುವುದು. · ಅಡುಗೆ ಮನೆಯು ಮನೆಯ ಮಧ್ಯಭಾಗದಿಂದ ಈಶಾನ್ಯ ದಿಕ್ಕಿನಲ್ಲಿರದಂತೆ ನೋಡಿಕೊಳ್ಳಿ. ಶಾಸ್ತ್ರದಲ್ಲಿ ತಿಳಿಸುವ ಈ ಪರಿಹಾರಗಳು ವಿವಾಹ ವಿಳಂಬವಾಗುವುದಕ್ಕೆ ಸೂಕ್ತ ಪರಿಹಾರಗಳನ್ನೊದಗಿಸುತ್ತದೆ. ಜ್ಯೋತಿಷ್ಯವು ಕೇವಲ ಭವಿಷ್ಯವನ್ನು ಮುನ್ಸೂಚಿಸುವುದಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ಮನುಕುಲಕ್ಕೆ ಒದಗಿಸುತ್ತದೆ. ಇದು ಆತ್ಮದ ಆಳವಾದ ತಿಳುವಳಿಕೆಗೆ ಸಹಾಯ ಮಾಡುತ್ತದೆ. ವಸ್ತುನಿಷ್ಠತೆಯ ದೃಷ್ಟಿಕೋನದಿಂದ ತೀರ್ಪುಗಳನ್ನು ಮಾಡಲು ನಮಗೆ ಅನುವು ಮಾಡಿಕೊಡುತ್ತದೆ ನಮ್ಮ ಜೀವನದ ಉದ್ದೇಶದ ಬಗ್ಗೆ ಸ್ಪಷ್ಟತೆಯನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ.
ಜಾತಕದಲ್ಲಿ ಪ್ರೇಮ ವಿವಾಹದ ಯೋಗಗಳ ಬಗ್ಗೆ ತಿಳಿದುಕೊಳ್ಳಲು, ಜ್ಯೋತಿಷಿಗಳು ನಿಮ್ಮ ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಪರಿಶೀಲಿಸುತ್ತಾರೆ. ವಿಶೇಷವಾಗಿ ಐದನೇ ಮನೆ, ಏಳನೇ ಮನೆ, ಮತ್ತು ಒಂಬತ್ತನೇ ಮನೆಗಳು ಪ್ರೇಮ ಮತ್ತು ವಿವಾಹದೊಂದಿಗೆ ಸಂಬಂಧ ಹೊಂದಿವೆ. ಈ ಮನೆಗಳ ಅಧಿಪತಿಗಳು ಮತ್ತು ಅವುಗಳ ಸಂಯೋಜನೆಗಳು ಪ್ರೇಮ ವಿವಾಹದ ಸಾಧ್ಯತೆಗಳನ್ನು ಸೂಚಿಸುತ್ತವೆ. ಐದನೇ ಮನೆ: ಪ್ರೀತಿ, ಸಂಬಂಧ ಮತ್ತು ಭಾವನೆಗಳನ್ನು ಸೂಚಿಸುತ್ತದೆ. ಏಳನೇ ಮನೆ: ವಿವಾಹ ಮತ್ತು ಸಂಗಾತಿಯನ್ನು ಸೂಚಿಸುತ್ತದೆ. ಒಂಬತ್ತನೇ ಮನೆ: ಅದೃಷ್ಟ ಮತ್ತು ಉನ್ನತ ಸಂಬಂಧಗಳನ್ನು ಸೂಚಿಸುತ್ತದೆ. ಶುಕ್ರ ಮತ್ತು ಮಂಗಳ: ಈ ಎರಡು ಗ್ರಹಗಳು ಪ್ರೇಮ ಮತ್ತು ಆಕರ್ಷಣೆಯನ್ನು ಸೂಚಿಸುತ್ತವೆ. ಅವುಗಳ ಸಂಯೋಗವು ಪ್ರೇಮ ವಿವಾಹದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಶನಿಯ ಸ್ಥಾನ: ಶನಿಯು ಏಳನೇ ಮನೆಯಲ್ಲಿ ಅಥವಾ ಲಗ್ನದಲ್ಲಿ ಇದ್ದರೆ, ವಿವಾಹ ವಿಳಂಬವಾಗಬಹುದು ಅಥವಾ ಪ್ರೇಮ ವಿವಾಹದಲ್ಲಿ ಅಡೆತಡೆಗಳು ಉಂಟಾಗಬಹುದು. ರಾಹುವಿನ ಸ್ಥಾನ: ರಾಹುವಿನ ಪ್ರಭಾವವು ಪ್ರೇಮ ವಿವಾಹದಲ್ಲಿ ಗೊಂದಲ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಬಹುದು. ಈ ಮನೆಗಳು ಮತ್ತು ಗ್ರಹಗಳ ಸಂಯೋಜನೆಗಳು ಪ್ರೇಮ ವಿವಾಹದ ಯೋಗಗಳನ್ನು ಸೂಚಿಸುತ್ತವೆ, ಆದರೆ ಇವು ಕೇವಲ ಸಂಭವನೀಯತೆಗಳು ಮಾತ್ರ. ಮುಂದುವರಿದ ಆಧುನಿಕ ಯುಗದಲ್ಲಿ ಜನರ ಬಯಕೆಗಳು ಹಾಗೂ ಚಿಂತನೆಗಳು ಸಹ ವಿಭಿನ್ನತೆಯನ್ನು ಪಡೆದುಕೊಂಡಿದೆ. ಅವರು ಆಯ್ಕೆ ಮಾಡಿಕೊಳ್ಳುವ ವಿಷಯ ಹಾಗೂ ಅದಕ್ಕೆ ಸಂಬಂಧಪಟ್ಟ ದೃಷ್ಟಿಕೋನಗಳು ಭಿನ್ನವಾಗಿರುತ್ತವೆ. ಅಂತೆಯೇ ಅವರ ಜೀವನ, ವೃತ್ತಿ ಹಾಗೂ ವೈವಾಹಿಕ ಜೀವನದಲ್ಲಿಯೂ ನಿರ್ದಿಷ್ಟವಾದ ಬದಲಾವಣೆಯನ್ನು ಹಾಗೂ ಹೊಸತನವನ್ನು ಪಡೆದುಕೊಳ್ಳಲು ಬಯಸುವರು. ಅದರಲ್ಲೂ ತಮ್ಮ ಸ್ನೆಹಿತರು, ಪ್ರೀತಿಯ ಜೀವನ ಹಾಗೂ ಸಂಬಂಧಗಳಲ್ಲಿ ಸಾಕಷ್ಟು ಆಕಾಂಕ್ಷೆ ಹಾಗೂ ಭಾವನೆಗಳನ್ನು ಹೊಂದಲು ಬಯಸುತ್ತಾರೆ. ತಮ್ಮ ಅಭಿರುಚಿಗೆ ಸರಿಯಾದ ಹಾಗೂ ತಮ್ಮ ಮನಃಸ್ಥಿತಿಗೆ ಹೊಂದುವ ವ್ಯಕ್ತಿಗಳೊಂದಿಗೆ ಪ್ರೇಮ ವಿವಾಹ ಆಗಲು ಮೊದಲ ಆದ್ಯತೆ ನೀಡುತ್ತಾರೆ. ಮುಂದುವರಿದ ಆಧುನಿಕ ಯುಗದಲ್ಲಿ ಜನರ ಬಯಕೆಗಳು ಹಾಗೂ ಚಿಂತನೆಗಳು ಸಹ ವಿಭಿನ್ನತೆಯನ್ನು ಪಡೆದುಕೊಂಡಿದೆ. ಅವರು ಆಯ್ಕೆ ಮಾಡಿಕೊಳ್ಳುವ ವಿಷಯ ಹಾಗೂ ಅದಕ್ಕೆ ಸಂಬಂಧಪಟ್ಟ ದೃಷ್ಟಿಕೋನಗಳು ಭಿನ್ನವಾಗಿರುತ್ತವೆ. ಅಂತೆಯೇ ಅವರ ಜೀವನ, ವೃತ್ತಿ ಹಾಗೂ ವೈವಾಹಿಕ ಜೀವನದಲ್ಲಿಯೂ ನಿರ್ದಿಷ್ಟವಾದ ಬದಲಾವಣೆಯನ್ನು ಹಾಗೂ ಹೊಸತನವನ್ನು ಪಡೆದುಕೊಳ್ಳಲು ಬಯಸುವರು. ಅದರಲ್ಲೂ ತಮ್ಮ ಸ್ನೆಹಿತರು, ಪ್ರೀತಿಯ ಜೀವನ ಹಾಗೂ ಸಂಬಂಧಗಳಲ್ಲಿ ಸಾಕಷ್ಟು ಆಕಾಂಕ್ಷೆ ಹಾಗೂ ಭಾವನೆಗಳನ್ನು ಹೊಂದಲು ಬಯಸುತ್ತಾರೆ. ತಮ್ಮ ಅಭಿರುಚಿಗೆ ಸರಿಯಾದ ಹಾಗೂ ತಮ್ಮ ಮನಃಸ್ಥಿತಿಗೆ ಹೊಂದುವ ವ್ಯಕ್ತಿಗಳೊಂದಿಗೆ ಪ್ರೇಮ ವಿವಾಹ ಆಗಲು ಮೊದಲ ಆದ್ಯತೆ ನೀಡುತ್ತಾರೆ. ಪ್ರೇಮ ವಿವಾಹ ಯೋಗ ಇಂದಿನ ಯುವಕರು ತಮ್ಮ ವೈವಾಹಿಕ ಜೀವನ ಹಾಗೂ ಸಂಗಾತಿಯ ಬಗ್ಗೆ ಸಾಕಷ್ಟು ಚಿಂತನೆ ಮತ್ತು ಕನಸುಗಳನ್ನು ಹೊಂದಿರುತ್ತಾರೆ. ಅವರು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ ತಾವು ಬಯಸುವ ವ್ಯಕ್ತಿಗಳನ್ನು ಬಾಳ ಸಂಗಾತಿಯನ್ನಾಗಿ ಪಡೆದುಕೊಳ್ಳಲು ಹಂಬಲಿಸುವರು. ತಮ್ಮ ಕನಸಿನ ಸಂಗಾತಿಯು ಅಥವಾ ತಮ್ಮ ಭಾವನೆಗಳಿಗೆ ಸ್ಪಂದಿಸುವ ಸಂಗಾತಿಯೊಂದಿಗೆ ಜೀವನವನ್ನು ಕಳೆಯಲು ಬಯಸುತ್ತಾರೆ. ಹಿರಿಯರ ಸಮ್ಮುಖದಲ್ಲಿ ಸಂಗಾತಿಯನ್ನು ಆರಿಸಿಕೊಳ್ಳುವುದಕ್ಕಿಂತ, ತಾವೇ ತಮ್ಮ ಸಂಗಾತಿಯನ್ನು ಆರಿಸಿಕೊಂಡು ಪ್ರೇಮ ವಿವಾಹ ಆಗಲು ಬಯಸುತ್ತಾರೆ. ಆದರೆ ಆ ಕನಸಿನ ವ್ಯಕ್ತಿ ಅಥವಾ ಬಯಸಿದ ವ್ಯಕ್ತಿಯನ್ನೇ ಸಂಗಾತಿಯನ್ನಾಗಿ ಪಡೆಯಲು ಗ್ರಹಗಳ ಅನುಕೂಲ ಇರಬೇಕು. ನಮ್ಮ ಕುಂಡಲಿಯ ಪ್ರಕಾರ ಗ್ರಹಗಳ ಸಹಕಾರ ಅಥವಾ ಉತ್ತಮ ಪ್ರಭಾವ ಇಲ್ಲದೆ ಹೋದರೆ ಆ ಕನಸುಗಳು ನನಸಾಗಲು ಸಾಧ್ಯವಿಲ್ಲ. ಗ್ರಹಗಳು ಮತ್ತು ಅವುಗಳ ದೆಸೆಯ ಗುಣಗಳು ವ್ಯಕ್ತಿಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಗ್ರಹಗಳ ಕೆಲವು ಪರಿಣಾಮದಿಂದ ವ್ಯಕ್ತಿಯು ತಾನಾಗಿಯೇ ವಿವಾಹದತ್ತ ಮನಸ್ಸು ಮಾಡಬಹುದು. ಈ ಸಂಯೋಜನೆಯು ಭವಿಷ್ಯದ ಪ್ರೀತಿಯ ವಿವಾಹಕ್ಕೆ ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕುಂಡಲಿಯಲ್ಲಿ ಇರುವ ವಿವಾಹ ಯೋಗದ ಅನುಗುಣವಾಗಿಯೇ ವೈವಾಹಿಕ ಜೀವನ ಪ್ರಾರಂಭವಾಗುತ್ತದೆ. ಯಾರ ಭವಿಷ್ಯದಲ್ಲಿ ಪ್ರೇಮ ವಿವಾಹದ ಯೋಗ ಇರುತ್ತದೆಯೋ ಅಂತಹವರು ಮಾತ್ರ ಪ್ರೇಮಿಸಿದ ವ್ಯಕ್ತಿಯೊಂದಿಗೆ ವಿವಾಹವನ್ನು ಹೊಂದುತ್ತಾನೆ. ಯೋಗ ಇಲ್ಲದೆ ಹೋದರೆ ಪ್ರೇಮ ವಿವಾಹ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುವುದು. ಪ್ರೇಮ ವಿವಾಹದ ಯೋಗಗಳು ಪ್ರತಿಯೊಬ್ಬರ ಜಾತಕದಲ್ಲಿ ಅಥವಾ ಕುಂಡಲಿಯಲ್ಲಿ 5, 7 ಮತ್ತು 9ನೇ ಮನೆಯು ಸಂಬಂಧಗಳನ್ನು ಸೂಚಿಸುವ ಮನೆಗಳಾಗಿರುತ್ತವೆ. ಲಗ್ನದಲ್ಲಿ ಮತ್ತು ಐದನೇ ಮನೆಯ ಅಧಿಪತಿ ಮತ್ತು ಏಳನೇ ಮನೆಯ ಅಧಿಪತಿ ಬಂದರೆ ಅದು ಪ್ರೇಮ ಯೋಗವನ್ನು ಸೂಚಿಸುತ್ತದೆ. ಶುಕ್ರ ಮತ್ತು ಮಂಗಳನ ನಡುವೆ ಸಂಯೋಗವಿದ್ದರೆ ಅದು ಸಹ ಪ್ರೀತಿಯ ಯೋಗವನ್ನು ಸಂಕೇತಿಸುತ್ತದೆ. ಐದನೇ ಮನೆಯ ಅಧಿಪತಿ ಮತ್ತು ಏಳನೇ ಮನೆಯ ಅಧಿಪತಿಯು ಉತ್ತಮ ಸಂಯೋಗ ಹಾಗೂ ಪ್ರಭಾವವನ್ನು ಬೀರುತ್ತಿದ್ದರೆ ವ್ಯಕ್ತಿ ಪ್ರೇಮ ವಿವಾಹದ ಯೋಗವನ್ನು ಪಡೆದುಕೊಳ್ಳುತ್ತಾನೆ. ಇಲ್ಲವೇ ಪ್ರೇಮ ವಿವಾಹಕ್ಕೆ ಅನುಕೂಲಕರವಾದ ಸ್ಥಿತಿಯನ್ನು ಪಡೆದುಕೊಳ್ಳುವನು. ಲಗ್ನದಲ್ಲಿ ಗ್ರಹಗಳ ಪ್ರಭಾವ ಕುಂಡಲಿಯ ಲಗ್ನದಲ್ಲಿ ಅಂದರೆ ಮೊದಲ ಮನೆ, ಐದನೇ ಮನೆ, ಏಳನೇ ಮನೆ ಮತ್ತು ಒಂಬತ್ತನೇ ಮನೆಗಳೊಂದಿಗೆ ಶುಕ್ರ ಮತ್ತು ಚಂದ್ರನು ಸಂಯೋಗ ಅಥವಾ ಪ್ರಭಾವಿತರಾಗಿದ್ದರೆ ವ್ಯಕ್ತಿಯು ಪ್ರೇಮ ವಿವಾಹ ಹೊಂದುವ ಸಾಧ್ಯತೆಗಳಿವೆ. ಐದನೇ ಮನೆಯ ಅಧಿಪತಿಯು ಆರೋಹಣ ಕ್ರಮದಲ್ಲಿ ಪರಸ್ಪರ ಸಂಬಂಧವನ್ನು ಪಡೆದುಕೊಂಡಿದ್ದರೆ ಪ್ರೇಮ ವಿವಾಹವನ್ನು ಹೊಂದುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅವರ ಪ್ರೇಮ ವಿವಾಹಕ್ಕೆ ಯಾವುದೇ ರೀತಿಯ ಅಡ್ಡಿ ಮತ್ತು ಆತಂಕಗಳು ಎದುರಾಗದು ಎಂದು ಹೇಳಲಾಗುವುದು. ಏಳನೇ ಮನೆಯ ಅಧಿಪತಿ ದುರ್ಬಲನಾಗಿದ್ದರೆ ಕುಂಡಲಿಯಲ್ಲಿನ ಮೊದಲ ಮನೆಯ ಅಧಿಪತಿ ಅಥವಾ ಗ್ರಹಕ್ಕೆ ಹೋಲಿಸಿದರೆ ಏಳನೇ ಮನೆಯ ಅಧಿಪತಿ ದುರ್ಬಲನಾಗಿದ್ದರೆ ವ್ಯಕ್ತಿ ತನ್ನ ವರ್ಗಕ್ಕಿಂತ ಕೆಳ ವರ್ಗದವರನ್ನು ಪ್ರೇಮಿಸಿ ವಿವಾಹ ಆಗುತ್ತಾನೆ. ಏಳನೇ ಮನೆಯ ಅಧಿಪತಿಯು ಮಿತ್ರ ರಾಶಿಯಲ್ಲಿದ್ದು, ಒಂಬತ್ತನೇ ಮನೆಯ ಅಧಿಪತಿಯು ದುರ್ಬಲನಾಗಿದ್ದರೂ ವ್ಯಕ್ತಿ ಕೆಳ ವರ್ಗದವರನ್ನು ವಿವಾಹವಾಗುತ್ತಾರೆ. ಉನ್ನತ ವರ್ಗದವರೊಂದಿಗೆ ವಿವಾಹ ವ್ಯಕ್ತಿಯ ಜಾತಕ ಅಥವಾ ಕುಂಡಲಿಯಲ್ಲಿ ಮೊದಲ ಮನೆಯ ಅಧಿಪತಿಯು ಏಳನೇ ಮನೆಯ ಅಧಿಪತಿಗಿಂತ ಬಲಶಾಲಿಯಾಗಿದ್ದು, ಒಂಬತ್ತನೇ ಮನೆಯ ಅಧಿಪತಿಯು ಉತ್ತಮ ಚಿಹ್ನೆಗಳಿಂದ ಕಂಡು ಬಂದರೆ ವ್ಯಕ್ತಿಯು ತನ್ನ ವರ್ಗಕ್ಕಿಂತ ಉತ್ತಮ ವರ್ಗದ ವ್ಯಕ್ತಿಯನ್ನು ವಿವಾಹವಾಗುತ್ತಾನೆ. ಈ ಚಿಹ್ನೆಗಳನ್ನು ಅಥವಾ ಈ ರೀತಿಯ ಪ್ರಭಾವದಲ್ಲಿ ಗ್ರಹಗತಿಗಳು ಇದ್ದರೆ ಆಗ ವ್ಯಕ್ತಿಯು ಪ್ರೇಮ ವಿವಾಹ ಆಗುವ ಯೋಗವನ್ನು ಹೊಂದಿರುತ್ತಾನೆ ಎನ್ನುವುದನ್ನು ಊಹಿಸಲಾಗಿದೆ. ಇಚ್ಛಿತ ವ್ಯಕ್ತಿಯೊಂದಿಗೆ ಪ್ರೇಮ ವಿವಾಹ ಯೋಗ ಐದನೇ ಮನೆಯ ಅಧಿಪತಿ ಮತ್ತು ಏಳನೇ ಮನೆಯ ಅಧಿಪತಿಯ ಸ್ಥಾನಗಳು ಹಾಗೂ ಪ್ರಭಾವವನ್ನು ಪರಿಗಣಿಸಿ ಪ್ರೇಮ ವಿವಾಹದ ಯೋಗವನ್ನು ನಿರ್ಧರಿಸಲಾಗುವುದು. ಮೊದಲ ಮನೆಯ ಅಧಿಪತಿ ಮತ್ತು ಐದನೇ ಮನೆಯ ಅಧಿಪತಿಯು ಏಳನೇ ಮನೆಯಲ್ಲಿ ಇದ್ದರೆ ಅಥವಾ ಮಿತ್ರ ರಾಶಿಯಲ್ಲಿ ಇದ್ದು, ಒಂಬತ್ತನೇ ಮನೆಯ ಅಧಿಪತಿಯು ದುರ್ಬಲಗೊಂಡ ರಾಶಿಯ ಮನೆಯಲ್ಲಿ ಇದ್ದರೆ ವ್ಯಕ್ತಿ ಕೆಳ ವರ್ಗದ ವ್ಯಕ್ತಿಯೊಂದಿಗೆ ಪ್ರೇಮ ವಿವಾಹ ಆಗುವ ಯೋಗವನ್ನು ಹೊಂದಿರುತ್ತಾನೆ. ಅದೇ ಮೊದಲ ಮನೆಯ ಅಧಿಪತಿ ಬಲಶಾಲಿಯಾಗಿದ್ದು, ಏಳನೇ ಮನೆಯ ಅಧಿಪತಿಯು ಶುಭಕರ ಮನೆಯಲ್ಲಿ ಇದ್ದರೆ ವ್ಯಕ್ತಿ ಉನ್ನತ ವರ್ಗದವರೊಂದಿಗೆ ಪ್ರೇಮ ವಿವಾಹವನ್ನು ಹೊಂದುತ್ತಾನೆ ಎಂದು ಹೇಳಲಾಗುವುದು. ಐದನೇ ಮನೆಯಲ್ಲಿ ಮಂಗಳ ಕುಂಡಲಿಯ ಐದನೇ ಮನೆಯಲ್ಲಿ ಮಂಗಳ ಗ್ರಹ ಇದ್ದರೆ ಅದು ಪ್ರೇಮ ವಿವಾಹದ ಯೋಗವನ್ನು ಸೂಚಿಸುವುದು. ಐದನೇ ಮನೆ ಅಥವಾ ಏಳನೇ ಮನೆಯಲ್ಲಿ ರಾಹು ಇದ್ದರೆ ಪ್ರೇಮ ವಿವಾಹ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಏಳನೇ ಮನೆಯಲ್ಲಿ ಅಥವಾ ಮೇಷ ರಾಶಿಯಲ್ಲಿ ಮಂಗಳನಿದ್ದರೆ ಆಗ ಸಹ ಪ್ರೇಮ ವಿವಾಹ ಆಗುವ ಯೋಗವಿರುತ್ತದೆ ಎಂದು ಹೇಳಲಾಗುವುದು. ಏಳನೇ ಮನೆಯ ಅಧಿಪತಿ ಮತ್ತು ಐದನೇ ಮನೆಯ ಅಧಿಪತಿಯು ಪರಸ್ಪರ ನಕ್ಷತ್ರಗಳ ಪ್ರಭಾವಕ್ಕೆ ಒಳಗಾಗಿದ್ದರೆ ಪ್ರೇಮ ವಿವಾಹ ಆಗುವ ಸಾಧ್ಯತೆ ಇರುತ್ತದೆ. ಪ್ರೇಮ ವಿವಾಹಕ್ಕೆ ಉತ್ತಮ ಅವಕಾಶ ಕುಂಡಲಿಯ ಏಳನೇ ಮನೆಯ ಅಧಿಪತಿ ಮತ್ತು ಐದನೇ ಮನೆಯ ಅಧಿಪತಿಯು ಹನ್ನೆರಡನೇ ಮನೆಯ ಅಧಿಪತಿಯೊಂದಿಗೆ ಸಂಪರ್ಕವನ್ನು ಸಾಧಿಸಿದರೆ ಪ್ರೇಮ ವಿವಾಹ ಆಗಲು ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಮೊದಲನೇ ಮನೆಯ ಅಧಿಪತಿ ಮತ್ತು ಏಳನೇ ಮನೆಯ ಅಧಿಪತಿ ತಮ್ಮ ಸ್ಥಾನಗಳನ್ನು ಬದಲಿಸಿಕೊಂಡರೆ ಅಥವಾ ಪರಸ್ಪರ ಸಂಯೋಗದೊಂದಿಗೆ ಬಂದರೆ, ಪ್ರೀತಿಯ ಸಂಬಂಧದ ಚಿಹ್ನೆಗಳು ಮತ್ತು ಪ್ರೇಮ ವಿವಾಹದ ಅವಕಾಶಗಳನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಪ್ರೀತಿಯು ವಿವಾಹಕ್ಕೆ ಒಲವು ತೋರುವಂತೆ ಮಾಡುವುದು ಏಳನೇ ಮನೆಯ ಅಧಿಪತಿಯು ತನ್ನ ಮನೆಯಲ್ಲಿಯೇ ಇದ್ದು, ಹನ್ನೊಂದನೇ ಮನೆಯಲ್ಲಿ ದುರುದ್ದೇಶ ಪೂರಿತ ಗ್ರಹಗಳಿಂದ ಪ್ರಭಾವಿತವಾಗಿದ್ದರೆ, ಉತ್ತಮ ಫಲಿತಾಂಶವನ್ನು ಊಹಿಸಲಾಗುವುದು. ಶುಕ್ರನು ಮೊದಲ ಮನೆಯ ಅಧಿಪತಿಯ ಸಂಪರ್ಕವನ್ನು ಹೊಂದಿದ್ದರೆ ವ್ಯಕ್ತಿಯ ಮನಸ್ಸಿನಲ್ಲಿದ್ದ ಪ್ರೀತಿಯು ವಿವಾಹಕ್ಕೆ ಒಲವು ತೋರುವಂತೆ ಮಾಡುವುದು.