Thursday, 13 December 2018
ಜಾತಕದಲ್ಲಿರುವ ಮನೆಗಳ ಅರ್ಥವೇನು?
ಜಾತಕದಲ್ಲಿರುವ ಮನೆಗಳ ಅರ್ಥವೇನು?
ಜ್ಯೋತಿಷ ಶಾಸ್ತ್ರದ ಮಹಾ ಜ್ಞಾನಿ, ಋಷಿ ಸದೃಷ ವ್ಯಕ್ತಿ ವರಾಹ ಮಿಹಿರರು. ಅವರು ಬೃಹಜ್ಜಾತಕವನ್ನು ಬರೆಯುವಾಗ ಒಂದು ಮಾತನ್ನ ಹೇಳ್ತಾರೆ : ‘ಭೂಯೋಭಿ: ಪಟುಬುದ್ಧಿ: ಪಟುಧಿಯಾಂ ಹೋರಾ ಫಲಜ್ಞಪ್ತಯೇ ಶಬ್ದ ನ್ಯಾಯ ಸಮನ್ವಿತೇಷು ಬಹುಶ:ಶಾಸ್ತ್ರೇಷು ದೃಷ್ಟೇಶ್ವಪಿ, ಹೋರಾತಂತ್ರ ಮಹಾರ್ಣವ ಪ್ರತರಣೇ ಭಗ್ನೋದ್ಯಮಾನಾಮಹಂ ಸ್ವಲ್ಪಂ ವೃತ್ತ ವಿಚಿತ್ರಂ ಅರ್ಥ ಬಹುಲಂ ಶಾಸ್ತ್ರಂ ಪ್ಲವಂ ಪ್ರಾರಭೇ’ ಅಂತ. ಏನು ಇದರ ಅರ್ಥ?
ನೋಡಿ ನಮ್ಮಲ್ಲಿ ಆರು ಶಾಸ್ತ್ರಗಳಿವೆ 1. ಶಿಕ್ಷಾ 2 ವ್ಯಾಕರಣ 3 ಛಂದಸ್ಸು 4 ನಿರುಕ್ತ 5 ಜ್ಯೋತಿಷ್ಯ 6 ಕಲ್ಪ ಅಂತ ಇವುಗಳನ್ನ ವೇದಗಳ ಅಂಗಗಳು ಅಂತ ಕರೀತಾರೆ. ಇವುಗಳ ಸಹಾಯ ಇಲ್ಲದೆ ವೇದವನ್ನ ಅರ್ಥ ಮಾಡಿಕೊಳ್ಳುವುದು ಕಷ್ಟ.
ಈ ಆರು ಶಾಸ್ತ್ರಗಳಲ್ಲಿ ಮೊದಲನೆಯದಾದ ಶಿಕ್ಷಾ. ಇದು ವೇದಗಳ ವರ್ಣ, ಸ್ವರ, ಉದಾತ್ತ ಅನುದಾತ್ತ ಸ್ವರಿತ ಇವುಗಳ ಸ್ಪಷ್ಟತೆಯನ್ನ ಹಾಗೂ ಇವುಗಳ ಮಹತ್ವವನ್ನ ತಿಳಿಹೇಳತ್ತೆ. ಅಂದ್ರೆ ವೇದವನ್ನ ಹೇಗೆ ಹೇಳಬೇಕೆ ಎಷ್ಟು ಪ್ರಮಾಣದಲ್ಲಿ ಧ್ವನಿಸಬೇಕು ಇತ್ಯಾದಿ ಮಾಹಿತಿ ತಿಳಿಸುತ್ತೆ.
ಇನ್ನು ಎರಡನೆಯದ್ದು ವ್ಯಾಕರಣ. ಈ ಶಬ್ದವೇ ಹೇಳತ್ತೆ ವೇದದೊಳಗಿನ ಗ್ರಾಮರ್ ಹೇಳುವ ಶಾಸ್ತ್ರ. ಮೂರನೆಯದ್ದು ಛಂದಶ್ಶಾಸ್ತ್ರ ಅಕ್ಷರ ಸಮೂಹವನ್ನ ವಿವರಿಸುತ್ತೆ. ಮಂತ್ರಕ್ಕೆ ಎಷ್ಟು ಅಕ್ಷರಗಳ ಜೋಡಣೆ ಇರಬೇಕು. ಆ ಜೋಡಣೆಯ ಕ್ರಮ ಹಾಗೂ ಅದರ ಮಹತ್ವವನ್ನ ವಿವರಿಸುವ ಶಾಸ್ತ್ರ. ಗಾಯತ್ರೀ ಛಂದಸ್ಸಲ್ಲಿ ಎಂಟು ಅಕ್ಷರಗಳ ಮೂರು ಸಾಲಿನದ್ದು ಒಟ್ಟು 24 ಅಕ್ಷರಗಳ ಮಾಲೆ ಅದು. ಬೃಹತೀ ಛಂದಸ್ಸು, ಅನುಷ್ಟುಪ್, ತ್ರಷ್ಟುಪ್ ಹೀಗೆ ಸಾಕಷ್ಟು ಛಂದಸ್ಸುಗಳಿವೆ.
ನಿರುಕ್ತ ಶಾಸ್ತ್ರವು ಒಂದು ರೀತಿಯ ನಿಘಂಟು ಇದ್ದಹಾಗೆ. ಡಿಕ್ಷನರಿ ಅಂತೀರಲ್ಲ ಅದು. ವೇದಗಳಲ್ಲಿರುವ ಕ್ಲಿಷ್ಟಪದಗಳಿಗೆ ಇದು ಅರ್ಥವನ್ನ ಹೇಳತ್ತೆ. ಮುಂದಿನದ್ದೇ ಜ್ಯೋತಿಷ್ಯ ಅದನ್ನ ಕೊನೆಯಲ್ಲಿ ವಿಸ್ತಾರವಾಗಿ ವಿವರಿಸ್ತೇನೆ. ಈಗ ಆರನೇ ಶಾಸ್ತ್ರ ಕಲ್ಪ. ಈ ಕಲ್ಪ ನಮ್ಮ ಎಲ್ಲ ಆಚರಣೆಗಳ ವಿವರಣೆ ಕೊಡತ್ತೆ.
ನಾಮಕರಣ, ಮದುವೆ, ಗೃಹಪ್ರವೇಶ, ಇಂಥ ಆಚರಣೆಗಳ ಸ್ಪಷ್ಟ ಮಾಹಿತಿ ಕೊಡುವ ಶಾಸ್ತ್ರ ಅದು. ಈಗ ನಾವು ಗಮನಿಸ ಬೇಕಾದ್ದು ಜ್ಯೋತಿಷ್ಯ.
ನೋಡಿ ಬೇರೆಲ್ಲ ಶಾಸ್ತ್ರಗಳ ಗುರಿ ಒಂದೇ. ಒಂದು ವಸ್ತುವನ್ನ ಸವಿವರವಾಗಿ ವಿವರಿಸೋದು.
ಆದರೆ ಈ ಜ್ಯೋತಿಷ್ಯ ಇದೆಯಲ್ಲ. ಇದು ಮಹತ್ವತವಾದ ಶಾಸ್ತ್ರ. ಯಾಕೆ ಗೊತ್ತಾ..? ಈ ಜ್ಯೋತಿಷ್ಯದಲ್ಲಿ ಒಂದು ವಿಷ್ಯ ಅಲ್ಲ ಜೀವನಕ್ಕೆ ಬೇಕಾದ ಸಮಸ್ತವನ್ನೂ ತೆರೆದಿಡುವ ಶಾಸ್ತ್ರವಾಗಿದೆ. ಹೇಗೆ..?
ಇಲ್ಲಿ ಹನ್ನೆರಡು ಮನೆಗಳಿವೆ. ಒಂದೊಂದು ಮನೆಯೂ ನಮ್ಮ ಬದುಕಿನ ಸ್ವಾರಸ್ಯವನ್ನ ತೆರೆದಿಡುವ ಮನೆಯಾಗಿದೆ.
- ಒಂದನೇ ಮನೆಯನ್ನು ಲಗ್ನ ಅಂತಾರೆ. ಒಂದು ಮಗು ಹುಟ್ಟಿದ ಸಮಯಕ್ಕೆ ಸರಿಯಾಗಿ ಉದಯಕ್ಕೆ ಬರುವ ರಾಶಿಯೇ ಲಗ್ನವಾಗತ್ತೆ. ಆ ಲಗ್ನದಿಂದ ದೇಹವನ್ನು, ಆತ್ಮವನ್ನು, ರೂಪ, ಗುಣ, ತಲೆ, ವರ್ತಮಾನ, ಇತ್ಯಾದಿ ವಿಚಾರವನ್ನ ತಿಳಿಸುತ್ತೆ,
- ಎರಡನೇ ಮನೆಯಿಂದ - ಕುಟುಂಬ, ಹಣ, ಮಾತು, ಅನ್ನ, ನೀರು, ಬಲಗಣ್ಣು, ಪತ್ರಿಕೆ ಇತ್ಯಾದಿ ವಿಷಯಗಳನ್ನ ವಿವರಿಸುತ್ತೆ.
- ಮೂರನೇ ಮನೆ - ಕಷ್ಟ, ಎದೆ ಭಾಗ, ಬಲಕಿವಿ, ಧೈರ್ಯ, ಸಾಹಸ, ಪರಾಕ್ರಮ, ಇತ್ಯಾದಿಗಳನ್ನ ವಿವರಿಸುತ್ತೆ.
- ನಾಲ್ಕನೇ ಮನೆ - ಮನೆ, ಸುಖ, ನಿವೇಶನ, ಕಟ್ಟಡ, ಮಾವ, ಸೋದರಿಕೆ, ಬಂಧು, ವಾಹನ, ತಾಯಿ, ರಾಜ್ಯ, ಪಶು ಸಂಪತ್ತು, ಪರಿಮಳ ದ್ರವ್ಯ, ನೀರು, ಸೇತುವೆ, ಇತ್ಯಾದಿಗಳನ್ನ ವಿವರಿಸುತ್ತೆ.
- ಐದನೇ ಮನೆ - ರಾಜಚಿಹ್ನೆ, ಹಸ್ತ, ಆತ್ಮ, ಬುದ್ಧಿ, ಧೀ ಶಕ್ತಿ, ಸಂತಾನ, ಭವಿಷ್ಯ ಜ್ಞಾನ, ಶೃತಿ, ಇತ್ಯದಿ ವಿಷಯಗಳನ್ನ ವಿವರಿಸುತ್ತೆ.
- ಆರನೇ ಮನೆ - ಸಾಲ, ಅಸ್ತ್ರ, ಕಳ್ಳತನದ ವಿಷಯ, ರೋಗ, ಶತ್ರು, ಗೋತ್ರಜರು, ವಾದ-ವಿವಾದ, ಪಾಪ ಕರ್ಮ ಇದ್ಯಾದಿಗಳನ್ನು ವಿವರಿಸುತ್ತೆ.
-ಏಳನೇ ಮನೆ - ಹೆಂಡತಿ, ಬಯಕೆ, ಕಾಮ, ಆನಂದ, ವ್ಯಾಪಾರ, ಇತ್ಯಾದಿಗಳನ್ನ ವಿವರಿಸುತ್ತೆ.
- ಎಂಟನೇ ಮನೆ - ಮಾಂಗಲ್ಯ ಸೌಭಾಗ್ಯ, ಮಲಿನತೆ, ಆಯುಷ್ಯ, ಕ್ಲೇಶ, ಅಪವಾದ, ಅಶುಚಿ, ದಾಸ್ಯ, ವಿಘ್ನಗಳ ವಿವರ ನೀಡತ್ತೆ.
- ಒಂಭತ್ತನೇ ಮನೆ - ಗುರು, ದೇವತೆ, ಅದೃಷ್ಟ, ತಂದೆ, ಸುಕೃತ, ಮೊಮ್ಮಗ, ಜಪ, ಶ್ರೇಷ್ಠತೆ ಕುಲದೇವರ ಚಿಂತನೆಗಳ ವಿವರವನ್ನ ನೀಡುತ್ತೆ.
- ಹತ್ತನೇ ಮನೆ - ಪದವಿ, ವೃತ್ತಿ, ಸ್ಥಾನ-ಮಾನ, ಆಕಾಶ, ಗಮನ ಇತ್ಯಾದಿ ವಿಚಾರ ತಿಳಿಸುತ್ತದೆ.
- ಹನ್ನೊಂದನೆ ಮನೆ - ಪ್ರಾಪ್ತಿ, ಲಾಭ, ಸಿದ್ಧಿ, ಹಿರಿಯಣ್ಣ, ಅಕ್ಕ, ಶುಭವಾರ್ತೆ ಇತ್ಯಾದಿಗಳ ವಿವರ ನೀಡುತ್ತೆ.
- ಹನ್ನೆರಡನೇ ಮನೆ ದು:ಖ, ಎಡಗಣ್ಣು, ವ್ಯಯ, ಶಯನ, ಅಂತ್ಯ, ದಾರಿದ್ರ್ಯ ಇತ್ಯಾದಿಗಳ ವಿವರ ನೀಡತ್ತೆ.
ಹೀಗೆ ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲ ಭಾವಗಳನ್ನು ಅನುಭವಿಸುತ್ತಾನೋ ಆ ಸರ್ವ ಭಾವವನ್ನೂ ಈ ಜ್ಯೋತಿಷ್ಯ ವಿವರವಾಗಿ ತೆರೆದಿಡತ್ತೆ. ಇದೇ ಇತರೆ ಶಾಸ್ತ್ರಗಳಿಗೂ ಜ್ಯೋತಿಷ್ಯಕ್ಕೂ ಇರುವ ವ್ಯತ್ಯಾಸ. ನಮ್ಮ ಬದುಕಿಗೆ ಬೇಕಾದ ಸರ್ವ ವಿಷಯವೂ ಈ ಶಾಸ್ತ್ರದಲ್ಲಿದೆ.
ಇದನ್ನೇ ಮೇಲಿನ ಶ್ಲೋಕದಲ್ಲಿ ವರಾಹ ಮಿಹಿರರು ಹೇಳಿದ್ದು. ಮನುಷ್ಯ ತನ್ನ ಕರ್ಮ ಫಲಗಳಿಗೆ ಅನುಸಾರವಾಗಿ ಜೀವನದಲ್ಲಿ ಏರು ಪೇರುಗಳನ್ನ ಹೊಂದುತ್ತಾರೆ. ಇಂಥ ಏರು ಪೇರುಗಳನ್ನ ವಿವರಿಸಲಿಕ್ಕೆ ಗರ್ಗಾ, ಪರಾಶರಾದಿ ಅನೇಕ ಋಷಿಗಳು ಅನೇಕ ಗ್ರಂಥಗಳನ್ನ ರಚಿಸಿದ್ದಾರೆ, ಆದರೆ ಆ ಗ್ರಂಥಗಳನ್ನ ಓದಿ ಅರ್ಥೈಸುವಲ್ಲಿ ವಿಫುಲರಾದ ಕೆಲ ಮಂದಿಗೆ ನಾನು ಬೃಹಜ್ಜಾತಕ ಎಂಬ ಪುಟ್ಟ ಗ್ರಂಥವನ್ನ ರಚಿಸಿದ್ದೇನೆ. ಆ ಗ್ರಂಥ ದೋಣಿಯ ಸಹಾಯದಿಂದ ಈ ಕರ್ಮ ಸಾಗರವನ್ನ ದಾಟಲಿ ಅಂತ ವಿವರಿಸಿದ್ದಾರೆ. ಅವರ ಬೃಹಜ್ಜಾತಕವೊಂದನ್ನ ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ಭವಿಷ್ಯ ನಮ್ಮ ಕೈಯಲ್ಲಿರತ್ತೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ.
ಆದರೆ ಅದನ್ನ ಸೂಕ್ಷ್ಮವಾಗಿ ಗಮನಿಸುವ ಅನುಷ್ಠಾನ ಶಕ್ತಿ ನಮ್ಮಲ್ಲಿ ವೃದ್ಧಿಯಾಗಬೇಕು. ಈ ರಹಸ್ಯ ಬಗೆಯಲಿಕ್ಕೆ ನಿಮ್ಮಲ್ಲಿ ನಿತ್ಯ ಅನುಷ್ಠಾನ ಇರಲೇ ಬೇಕು. ಆ ದೈವ ಬಲವಿಲ್ಲದೆ ಹೋದರೆ ಯಾವ ವಿಚಾರವೂ ಹೊಳೆಯುವುದಿಲ್ಲ. ಹೇಗೆ ಅರ್ಥೈಸಬೇಕು ತೋಚುವುದಿಲ್ಲ. ಇರಲಿ. ಈಗ ಗ್ರಹಗಳ ಸ್ವರೂಪ ಅವುಗಳ ಬಲ, ಪ್ರಭಾವಾದಿಗಳ ಬಗ್ಗೆ ತಿಳಿಯೋಣ.
ಜ್ಯೋತಿಷ್ಯದಲ್ಲಿ ಮೊತ್ತಮೊದಲ ಗ್ರಹ. ಈ ಸೂರ್ಯನನ್ನ ಗ್ರಹರಾಜ ಅಂತ ಕರೀತಾರೆ. ಜೊತೆಗೆ ಆತನನ್ನ ಆತ್ಮ ಕಾರಕ ಅಂತಲೂ ಕರೀತಾರೆ. ಅಷ್ಟೇ ಅಲ್ಲ ನೀವೇನಾದ್ರೂ ಜ್ಯೋತಿಷ್ಯ ಕಲೀಬೇಕು, ಜ್ಯೋತಿಷ್ಯವನ್ನು ಕರಗತ ಮಾಡ್ಕೋಬೇಕು, ಈ ಶಾಸ್ತ್ರದ ತಳಸ್ಪರ್ಶವಾಗಬೇಕು ಅಂದ್ರೆ ರ್ಸೂನ ಅನುಗ್ರಹ ಬೇಕೇ ಬೇಕು. ಸೂರ್ಯನಿಲ್ಲದೇ ಜಗತ್ತೇ ಕತ್ತಲು. ಯಾರು ಸೂರ್ಯೋಪಾಸಕರೋ ಅವರಿಗಷ್ಟೇ ಜ್ಯೋತಿಷ್ಯ ಒಲಿಯೋದು.
ಜಾತಕದಲ್ಲಿ ಸೂರ್ಯನ ಪ್ರಭಾವ
ಜಾತಕದಲ್ಲಿ ಸೂರ್ಯನ ಪ್ರಭಾವ ಏಕೆ ಮುಖ್ಯ?
ಜಾತಕದಲ್ಲಿ ನವ ಗ್ರಹಗಳ ಪಾತ್ರ ಪ್ರಮುಖವಾದದ್ದು. ಅದರಲ್ಲಿಯೂ ಸೂರ್ಯ ಎಲ್ಲರ ಜಾತಕದಲ್ಲಿಯೂ ಮಹತ್ವದ ಪ್ರಭಾವ ಬೀರುತ್ತಾನೆ. ಹೇಗೆ? ಏಕೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಿನಿಗಿರೋ ಪ್ರಾಮುಖ್ಯತೆ ಏನು? ಓದಿ ಜಾತಕ ನೋಡುವುದ ಕಲಿಯಿರಿ...
ಅದು ವಿಕ್ರಮಾದಿತ್ಯನ ಆಸ್ಥಾನ. ರಾಜ ಸಭೆ ಪ್ರಾರಂಭವಾಗಿತ್ತು. ಸಭೆಯಲ್ಲಿ ಮಂತ್ರಿ ಒಂದು ವಿಷಯ ಪ್ರಸ್ತಾಪ ಮಾಡಿದ. ರಾಜನ್ ನಾವು ಸರಿಯಾದ ರೀತಿಯಲ್ಲಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಬೇಕಿದ್ದರೆ ನಾವೇ ಮಾರುವೇಶದಲ್ಲಿ ದೇಶ ಪರ್ಯಟನೆ ಮಾಡಬೇಕು. ಆಗಷ್ಟೇ ಪ್ರಜೆಗಳ ಸ್ಥಿತಿಗತಿಗಳನ್ನ ಯಥಾವತ್ತಾಗಿ ಅರ್ಥೈಸಲಿಕ್ಕೆ ಸಾಧ್ಯ ಅಂತ ಒಂದು ಸಲಹೆ ಕೊಟ್ಟ.
ಮಂತ್ರಿಯ ಮಾತು ನಿಜ ಅನ್ನಿಸಿ ಮಾರನೇ ದಿನವೇ ಮಾರುವೇಶದಲ್ಲಿ ಕುದುರೆಗಳನ್ನ ಹತ್ತಿ ಹೊರಟರು. ಪ್ರಯಾಣ ಮಧ್ಯದಲ್ಲಿ ಓರ್ವ ಭವಿಷ್ಯ ಹೇಳುವ ವ್ಯಕ್ತಿಯ ಬಗ್ಗೆ ಹಲವಾರು ಜನ ಮಾತನಾಡಿಕೊಳ್ಳುವುದು ಕೇಳಿಸಿತು. ಊರವರ ಮಾತುಗಳಿಂದ ರಾಜನಿಗೆ ಆ ವ್ಯಕ್ತಿಯ ಬಗೆಗೆ ಕುತೂಹಲ ಹುಟ್ಟಿತು.
ಆ ಭವಿಷ್ಯ ಪ್ರವೀಣನ ಹುಡುಕಾಟಕ್ಕೆ ನಿಂತ ರಾಜನಿಗೆ ಉಜ್ಜೈನಿ ಸಮೀಪದ ಅವನ ಊರು ಸಿಕ್ಕಿತು. ಅಲ್ಲಿ ಈ ಭವಿಷ್ಯ ಪ್ರವೀಣ ಇವರನ್ನು ಕಂಡು ನೀವು ಮಾರುವೇಶದಲ್ಲಿ ಬಂದಂತೆ ಕಾಣುತ್ತಿದೆ. ನೀವು ಇಂಥ ಕಡೆಯವರು ಇಂಥ ಉದ್ದೇಶದಲ್ಲಿ ಬಂದಿದ್ದೀರಿ ಅಂತೆಲ್ಲವನ್ನ ಇದ್ದಹಾಗೆ ವಿವರಿಸಿಬಿಟ್ಟ. ಅದನ್ನ ಕೇಳಿ ರಾಜನಿಗೆ ಪರಮಾಶ್ಚರ್ಯ..! ರಾಜ ಮರು ಮಾತನಾಡದೆ ಆಸ್ಥಾನಕ್ಕೆ ಬಂದು ಮಂತ್ರಿಯ ಬಳಿ ಆ ವ್ಯಕ್ತಿಯನ್ನು ಸಭೆಗೆ ಕರೆತರಲು ಹೇಳಿದ. ಮಾರನೇ ದಿನ ಆ ಭವಿಷ್ಯ ಪ್ರವೀಣ ಆಸ್ಥಾನಕ್ಕೆ ಬಂದ. ಆತನ ಮುಂದೆ ರಾಜ ತನ್ನ ಮಗನ ಜಾತಕವನ್ನ ಇಟ್ಟ. ಬಂದ ವ್ಯಕ್ತಿ ಆ ಜಾತಕವನ್ನ ಕೂಲಂಕಷವಾಗಿ ಪರಿಗಣಿಸಿ ಈ ಜಾತಕದವನು ಇಂಥ ದಿವಸ, ಇಂಥ ಘಳಿಗೆಯಲ್ಲಿ ಒಂದು ಹಂದಿಯಿಂದ ಮರಣವನ್ನಪ್ಪುತ್ತಾನೆ ಎಂದು ಭವಿಷ್ಯ ನುಡಿದ.
ಕೂತಿದ್ದ ರಾಜ ಎದ್ದು ನಿಂತ. ಆ ಭವಿಷ್ಯ ಪ್ರವೀಣನನ್ನು ಕುರಿತು ಬಾಯಿಗೆ ಬಂದಂತ ಬೈದ : ಅದು ನನ್ನ ಮಗನ ಜಾತಕ. ನಾನು ಇರುವಾಗಲೇ ಅವನ ಸಾವು ಸಾಧ್ಯವೇ? ಅದೂ ಯ:ಕಶ್ಚಿತ್ ಹಂದಿಯಿಂದ. ನೋಡೇ ಬಿಡೋಣ. ಭಟರೇ ಈ ಅಪವಾಣಿಯನ್ನು ನುಡಿದ ಈ ಅವಿವೇಕಿಯನ್ನು ಸೆರೆಯಲ್ಲಿಡಿ ಅಂತ ಆಜ್ಞಾಪಿಸಿದ. ಅಷ್ಟರಲ್ಲಿ ಮಂತ್ರಿ ರಾಜನನ್ನು ಸಮಾಧಾನಿಸಿ. ಆ ಭವಿಷ್ಯ ನಿಜವಾದರೆ ಓರ್ವ ನಿರಪರಾಧಿಯನ್ನು ಶಿಕ್ಷಿಸಿದ ಹಾಗಾಗುವುದಿಲ್ಲವೇ? ತಾಳ್ಮೆಯಿಂದ ಕಾಯೋಣ ಅಂತ ಸಮಾಧಾನ ಮಾಡಿದ.
ಆ ದಿನ ಬಂದೇ ಬಿಟ್ಟಿತು. ತನ್ನ ಮಗನ ಕಾವಲಿಗೆ ರಾಜನೇ ನಿಂತ. ಎಲ್ಲ ಭಟರೂ, ಆಳು ಕಾಳು ಸರ್ವರೂ ಆ ಮಗುವಿನ ರಕ್ಷಣೆಗೆ ನಿಂತರು. ಒಂದು ಇರುವೆಯೂ ಅವನನ್ನು ಮುತ್ತಲು ಸಾಧ್ಯವಿಲ್ಲ, ಅಷ್ಟು ಭದ್ರತೆ ಇತ್ತು ಆ ಅರಮನೆಯಲ್ಲಿ. ಇನ್ನೇನು ಆ ಸಮಯ ಹತ್ತಿರವಾಗುತ್ತಿದೆ. ರಾಜ ತದೇಕಚಿತ್ತದಿಂದಿ ಆ ಸಮಯವನ್ನೇ ಎದಿರು ನೋಡುತ್ತಿದ್ದ. ಆ ಸಮಯ ಬಂದೇ ಬಿಟ್ಟಿತು ರಾಜನ ಮಗ ಚಿಟಾರನೆ ಚೀರಿದ. ಇದ್ದ ಸ್ಥಳದಿಂದಲೇ ರಾಜ ಬೆವರಿ ಮಗುವಿನ ಬಳಿ ಓಡಿದ. ನೋಡಿದರೆ ಮಗುವಿನ ತಲೆಗೆ ಭೀಕರವಾದ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಮೃತಪಟ್ಟಿತ್ತು.
ರಾಜ ಬಂದು ನೋಡಿದರೆ ಬಲವಾದ ಕಬ್ಬಿಣದ ವಸ್ತು ಮಗುವಿನ ತಲೆ ಮೇಲೆ ಬಿದ್ದತ್ತು. ಬಿದ್ದ ವಸ್ತು ಏನು ಅಂತ ನೋಡಿದರೆ ಅದು ಆ ರಾಜ್ಯದ ಲಾಂಛನವಾಗಿತ್ತು. ಆ ಲಾಂಛನವನ್ನೇ ನೋಡುತ್ತಾ ಎಷ್ಟು ಕಾವಲಿದ್ದರೂ ಮಗನ ರಕ್ಷಣೆ ಮಾಡಲಾಗಲಿಲ್ಲವಲ್ಲಾ ಎಂದುಕೊಂಡ ರಾಜ ತುಂಬ ಮರುಗಿದ. ನಾನು ಹಂದಿ ಅಂಧರೆ ಪ್ರಾಣಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಮ್ಮ ಲಾಂಛನವೇ ಮಗನ ಮೃತ್ಯವಾಯಿತಲ್ಲಾ ಎಂದು ಗೋಳಿಟ್ಟ.
ಜ್ಯೋತಿಷ್ಯಗೆ ಮರ್ಯಾದೆ ನೀಡಿದ ರಾಜ:ತಕ್ಷಣ ರಾಜ ಆ ಭವಿಷ್ಯ ಪ್ರವೀಣನನ್ನು ಕರೆಸಿ ಸಂಭಾವ್ಯ ಮರ್ಯಾದೆ ಮಾಡಿದ. ಆ ಭವಿಷ್ಯ ಪ್ರವೀಣನೇ ಮಿಹಿರಾಚಾರ್ಯ. ನಿನ್ನ ಭವಿಷ್ಯ ನಿಜವಾಯಿತು. ನೀನು ಗೆದ್ದೆ. ಇನ್ನು ಮುಂದೆ ನಿನ್ನ ಹೆಸರು 'ವರಾಹಮಿಹಿರ' ಅಂತ ಪ್ರಸಿದ್ಧವಾಗಲಿ ಅಂತ ಘೋಷಿಸಿದ.
ಇದು ವರಾಹಮಿಹಿರರ ಭವಿಷ್ಯ ದೃಷ್ಟಿಯ ಸಾಮರ್ಥ್ಯ.
ಈ ಸಾಮರ್ಥ್ಯ ಅವರಲ್ಲಿ ಬರಲಿಕ್ಕೆ ಕಾರಣವೇ ಸೂರ್ಯ. ಮಿಹಿರರ ತಂದೆ ಆದಿತ್ಯ ದಾಸ ಅಂತ. ಅಂದರೆ ಸೂರ್ಯನ ದಾಸ ಅಂತ. ಆ ತಂದೆಯ ತಪ:ಶಕ್ತಿ ಮಗನಲ್ಲಿ ಪ್ರಕಾಶವಾಗಿತ್ತು. ಹಾಗಾಗಿ ಮಿಹಿರಾಚಾರ್ಯ ಅನ್ನುವ ಹೆಸರಿಟ್ಟಿದ್ದ. ಈತನೂ ಮಹಾ ಸೂರ್ಯೋಪಾಸಕನಾಗಿದ್ದ. ಇಂಥ ಮಹನೀಯರೇ ಮುಂದೆ ಪಂಚಸಿದ್ಧಾಂತ ಕೋವಿದ, ಬೃಹಜ್ಜಾತಕ, ಬೃಹತ್ಸಂಹಿತಾ ಮೊದಲಾದ ಮಹಾ ಗ್ರಂಥಗಳನ್ನ ರಚಿಸಿ ಮಾನವ ಕುಲಕ್ಕೆ ಉಪಕಾರ ಮಾಡಿಕೊಟ್ಟಿದ್ದಾರೆ.
ಇಂಥ ಸಮರ್ಥತೆ ಬರಬೇಕೆಂದರೆ ಅವರು ಸೂರ್ಯನ ಉಪಾಸಕರಾಗಿರಲೇ ಬೇಕು.
ಸೂರ್ಯ ಆತ್ಮಕಾರಕ ಹೇಗೆ..?
ಸೂರ್ಯಗ್ರಹದ ಅನುಗ್ರಹವಿದ್ದರಷ್ಟೇ ನಮ್ಮ ಆತ್ಮೋನ್ನತಿ ಸಾಧ್ಯ. ನಮ್ಮೊಳಗಿನ ಶಕ್ತಿ ಬೆಳಗ ಬೇಕಿದ್ದರೆ ಸೂರ್ಯ ಬೇಕು. ಸೂರ್ಯನನ್ನು ಆತ್ಮ ಕಾರಕ ಅಂತಲೂ ಕರೀತಾರೆ. ಸೂರ್ಯನನ್ನ ಸುಮ್ಮನೆ ಆತ್ಮಕಾರಕ ಅಂತ ಹೇಳಿಲ್ಲ. ಇದು ಅರ್ಥವಾಗಬೇಕಿದ್ದರೆ ನಾವು ಸ್ವಲ್ಪ ಅಂತರಾಳಕ್ಕೆ ಇಳಿಯಬೇಕು.
ಮೇಲ್ಮೈ ತಡಕಿದರೆ ಸಿಗದ ಮಾಹಿತಿ ಅದು. ಅದು ಅರ್ಥವಾಗಬೇಕಿದ್ದರೆ ನಾವು ವೇದಾಂತ ಅಂತ ಕರೆಯುವ ಉಪನಿಷತ್ತುಗಳಿಗೆ ಹೋಗಬೇಕು. ಅಲ್ಲಿ ಸೂರ್ಯನನ್ನು ಯಾಕೆ ಆತ್ಮ ಶಕ್ತಿ ಅಂತಾರೆ ಅನ್ನೋದು ಸ್ಪಷ್ಟವಾಗತ್ತೆ.
ವಿಜ್ಞಾನಕ್ಕೂ - ಉಪನಿಷತ್ತಿಗೂ ನಂಟೇನು..?
ಈ ಪ್ರಪಂಚ ಹೇಗಾಯಿತು ಅಂತ ಪ್ರಶ್ನೆ ಹಾಕಿಕೊಂಡರೆ. ವಿಜ್ಞಾನ ಉತ್ತರಿಸುವುದು ಬಿಗ್ ಬ್ಯಾಂಗ್ ಥಿಯರಿಯನ್ನು. ಈಗಿನವರು ಬಿಗ್ ಬ್ಯಾಂಗ್ ಥಿಯರಿ ಅಂತಾರೆ. ಹಿಂದಿನವರು ಅದನ್ನೇ ಆಸ್ಫೋಟ ಅಂತಾರೆ.
ಇದರ ಮಾಹಿತಿ ಸಿಗೋದು ಛಾಂದೋಗ್ಯೋಪನಿಷತ್‌ನಲ್ಲಿ. ಅಲ್ಲಿ ಆರುಣಿ ಉದ್ಧಾಲಕ ಎಂಬ ಋಷಿ ತನ್ನ ಮಗ ಶ್ವೇತಕೇತುವಿಗೆ ಹೇಳುವ ಉಪದೇಶದಲ್ಲಿ ಈ ಆತ್ಮ ಎನ್ನುವುದರ ಸ್ಪಷ್ಟ ವಿವರ ಇದೆ. ಅದರ ಪ್ರಕಾರ : ಪೂರ್ವದಲ್ಲಿ ಸತ್ ಅನ್ನುವ ವಸ್ತು ಇತ್ತು. ಅದನ್ನೇ ಆತ್ಮ ಶಕ್ತಿ ಅಂತಾರೆ.
ಸೂರ್ಯ ಸೃಷ್ಟಿಯಾಗಿದ್ದು ಹೇಗೆ?
ಅದು ಆಸ್ಫೋಟವಾಗಿ ಅದರಿಂದ ಬೃಹತ್ ಬೆಳಕಿನ ಉಂಡೆ ( ಬೆಂಕಿ ಉಂಡೆ ) ಹೊರಬಂತು. ಅದೇ ಸೂರ್ಯ. ಅದನ್ನ ತೇಜಸ್ ಅಂತ ಕರೆದ್ರು. ( ನಮ್ಮ ಮಿಲ್ಕಿ ವೇ ನಲ್ಲಿ ಸಾಕಷ್ಟು ಇಂಥ ಬೆಳಕಿನ ಉಂಡೆಗಳಿವೆ. ಅದನ್ನು ಹೊರತು ಪಡಿಸಿಯೂ ಅನೇಕಾನಿಕ ಉಂಡೆಗಳಿವೆ. ಅವುಗಳಲ್ಲಿ ನಮ್ಮ ಸೂರ್ಯ ಕೂಡ ಒಂದು ) ಆ ಸೂರ್ಯನಿಂದ ಬಂದದ್ದು ನೀರು ( ವಿಜ್ಞಾನದಲ್ಲಿ ನಾವು ಓದಿದ್ದೇವೆ. ಈ ಭೂಮಿ ಮುಂಚೆ ದ್ರವರೂಪದಲ್ಲಿತ್ತು ಇದೇ ಘನೀಕೃತವಾಯ್ತು ಅಂತ ). ಆ ನೀರಿನಿಂದ ಅನ್ನ ಉತ್ಪತ್ತಿಯಾಯ್ತು. ಮತ್ತೊಮ್ಮೆ ಗಮನಿಸೋಣ, ಸತ್ ನಿಂದ ಸೂರ್ಯ, ಸೂರ್ಯನಿಂದ ನೀರು, ನೀರಿನಿಂದ ಅನ್ನ ಬಂತು.
ಈ ಅನ್ನ ನಮ್ಮ ದೇಹ ಸೇರಿದ ಮೇಲೆ ಮೂರು ವಿಭಾಗವಾಗತ್ತೆ. ಹೇಗೆ ಅಂದ್ರೆ ಅನ್ನದ ಸ್ಥೂಲ ರೂಪ ವಿಸರ್ಜನೆಯಾಗತ್ತೆ. ಅದರ ಮಧ್ಯ ರೂಪ ಮಾಂಸವಾಗತ್ತೆ ಅದರ ಸೂಕ್ಷ್ಮ ರೂಪ ಮನಸ್ಸಾಗತ್ತೆ. ( ಮತ್ತೊಮ್ಮೆ ಓದಿಕೊಳ್ಳಿ ಅನ್ನ ಸೂಕ್ಷ್ಮದಲ್ಲಿ ಮನಸ್ಸಾಗತ್ತೆ. ) ಅನ್ನದ ಮೇಲಿನ ಅಂಶ ನೀರು. ನೀರಿನ ಸ್ಥೂಲ ರೂಪ ಮೂತ್ರವಾಗತ್ತೆ. ಮಧ್ಯಮ ರೂಪ ರಕ್ತವಾಗತ್ತೆ. ಸೂಕ್ಷ್ಮ ರೂಪ ಪ್ರಾಣವಾಗತ್ತೆ. (ಅಂದ್ರೆ ನೀರು ಪ್ರಾಣ ವಸ್ತು ಮತ್ತೊಮ್ಮೆ ಓದಿಕೊಳ್ಳಿ ). ಇನ್ನು ನೀರಿಗೂ ಮೇಲಿನ ಅಂಶ ತೇಜಸ್ ಅದೇ ಸೂರ್ಯ. ಆ ತೇಜಸ್ಸಿನ ಸ್ಥೂಲ ರೂಪ ಮೂಳೆಯಾಗುತ್ತೆ. ಮಧ್ಯಮ ರೂಪ ಕೊಬ್ಬು ಅನ್ನಿಸಿಕೊಳ್ಳತ್ತೆ. ಸೂಕ್ಷ್ಮ ರೂಪ ವಾಕ್ ಆಗತ್ತೆ. ಅಂದ್ರೆ
ಈಗ ಗಮನಿಸಿ ಸತ್ ಎಂಬ ಆತ್ಮವೇ ತೇಜಸ್ಸಾಯ್ತು ( ಸೂರ್ಯ ಶಕ್ತಿ ). ಆ ತೇಜೋ ಶಕ್ತಿಯಿಂದಲೇ ನಾವು ಕುಡಿಯುವ ನೀರು ( ಅಂದ್ರೆ ಪ್ರಾಣ ಶಕ್ತಿ ) ಆ ತೇಜೋ ಶಕ್ತಿಯಿಂದಲೇ ಅನ್ನವೂ ಬಂತು ಅದೇ ಮನಸ್ಸಾಯ್ತು. ಅದೇ ತೇಜೋ ಶಕ್ತಿಯಿಂದ ವಾಕ್ ಶಕ್ತಿ ಬಂತು. ಇದೆಲ್ಲವೂ ಸೇರಿ ಮನುಷ್ಯನ ಅಂತ: ತೇಜಸ್ಸು ಸೃಷ್ಟಿಯಾಯ್ತು. ಇದನ್ನೇ ಆತ್ಮ ಶಕ್ತಿ ಅಂತ ಕರೆಯುವುದು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ ನಾವು ಯಾರು..? ಉತ್ತರ ಹುಡುಕಿ ಹೊರಟರೆ ಅದರ ಮೂಲ ಸಿಗುತ್ತದೆ. ಗಮನಿಸಿ ಪ್ರಾಥಮಿಕವಾಗಿ ನಾವು ಅನ್ನ, ಅನ್ನದ ಮೂಲ ನೀರು, ನೀರಿನ ಮೂಲ ತೇಜಸ್ಸು, ತೇಜಸ್ಸಿನ ಮೂಲ ಆತ್ಮಶಕ್ತಿ. ಇದು ಬಂದದ್ದು ಎಲ್ಲಿಂದ ಆತ್ಮದಿಂದ. ಆತ್ಮದಿಂದ ತೇಜಸ್ಸು ಬಂತು, ತೇಜಸ್ಸಿನಿಂದ ಉಳಿದೆಲ್ಲವೂ ಬಂದವು.
ಸೂರ್ಯ ಮನುಷ್ಯನ ಜೀವಾಳ
ಸೂರ್ಯನೇ ಮನುಷ್ಯನ ಒಳ-ಹೊರಗಿನ ಜೀವಾಳ. ಇದಕ್ಕಾಗಿಯೇ ಸೂರ್ಯನನ್ನ ಆತ್ಮ ಕಾರಕ ಅಂದ್ರು. ವೇದಗಳಲ್ಲಿ ಸೂರ್ಯನ ಕುರಿತಾಗಿ ಅರುಣ ಪ್ರಶ್ನ, ಸೌರ ಸೂಕ್ತ ಇತ್ಯಾದಿ ಇತ್ಯಾದಿ ಮಹಾ ಮಂತ್ರ ಸಮುಚ್ಛಯವೇ ಇದೆ. ಅಲ್ಲಿ ಇನ್ನೂ ವಿಸ್ತಾರವಾಗಿ ಸೂರ್ಯ ವಿವರ ಬರುತ್ತದೆ. ಋಗ್ವೇದವಂತೂ ಸೂರ್ಯ ಆತ್ಮಾ ಜಗತತ್ಸತ್ಥುಷಶ್ಚ ಅನ್ನುತ್ತೆ. ಹಾಗಂದರೆ ಈ ಗತಿಶೀಲವಾದ ಜಗತ್ತಿನ ಸ್ಥಾವರ ಜಂಗಮಗಳಿಗೆ ಅವನೇ ಆತ್ಮ ಅಂತ. ಇಂಥ ಪರಮ ಗ್ರಹ ಸೂರ್ಯ. ಇಂಥ ಸೂರ್ಯನಿಗೆ ಜ್ಯೋತಿಷ್ಯದಲ್ಲಿ ಕೆಲ ಗುಣ ಲಕ್ಷಣ ಹೇಳಿದೆ. ಯಾರ ಜಾತಕದಲ್ಲಿ ಸೂರ್ಯ ಚೆನ್ನಾಗಿರ್ತಾನೋ ಅಂತವರಿಗೆ ಆ ಗುಣಗಳನ್ನು ಧಾರಾಳವಾಗಿ ಕೊಡ್ತಾನೆ. ಯಾರಿಗೆ ಅನುಕೂಲಕರವಾಗಿಲ್ಲವೋ ಅವರಿಗೆ ಆ ಗುಣಗಳ ಲೋಪ ಮಾಡ್ತಾನೆ ಅಂತ ಹೇಳತ್ತೆ.
ಜಾತಕ ನೋಡಲು ಕಲಿಯಿರಿ
ಜಾತಕ ನೋಡಲು ಕಲಿಯಿರಿ
ಶಾಸ್ತ್ರ ರೀತಿಯಲ್ಲಿ ಜಾತಕ ಅಧ್ಯಯನ ಮಾಡಿದರೆ ಅದು ತೋರಿಸುವ ಭವಿಷ್ಯದ ದಾರಿ ಅರ್ಥವಾಗುತ್ತದೆಯೇ ವಿನಾ ಇಲ್ಲದೇ ಹೋದರೆ ಅದು ಶಾಸ್ತ್ರವಾಗುವುದಿಲ್ಲ. ಅದರ ಹೂರಣವೂ ಸಿಗುವುದಿಲ್ಲ. ಜ್ಯೋತಿಷ್ಯವೆಂಬುವುದು ಕುತೂಹಲ ಶಾಸ್ತ್ರ. ಇಲ್ಲಿ ಎಲ್ಲವೂ ಇದೆ. ಅರ್ಥ ಮಾಡಿಕೊಳ್ಳುವ ಶ್ರದ್ಧೆ, ನಂಬಿಕೆ ಎರಡೂ ಬೇಕು.
ಒಂದು ಜಾತಕ ನೋಡಿದಾಗ ಅದರಲ್ಲಿ 12 ಮನೆ ಹಾಗೂ 9 ಗ್ರಹಗಳ ಸ್ಥಿತಿ ಕಾಣ್ಸತ್ತೆ. ಆದರೆ ಅದರ ಅರ್ಥ ಏನು..? ಆ ರಾಶಿಗೂ ನಮ್ಮ ಭವಿಷ್ಯಕ್ಕೂ ಹೇಗೆ ನಂಟು ಎಂಬುವುದು ಯಾವುದೂ ಅರ್ಥ ಆಗೋದಿಲ್ಲ. ಆದರೆ ಆ ಜಾತಕದಲ್ಲಿ ನಮ್ಮ ಇಡೀ ಜೀವನ ಭವಿಷ್ಯವೇ ಅಡಗಿರತ್ತೆ. ಆ ಭವಿಷ್ಯವನ್ನು ತಿಳಿಯುವ ಬಗೆ ಹೇಗೆ..?
ಒಂದು ಜಾತಕ ಕೂಲಂಕಶವಾಗಿ ನೋಡುವಾಗ ಕ್ಷೇತ್ರ ಬಲ, ಹೋರಾ ಬಲ, ದ್ರೇಕ್ಕಾಣ ಬಲ, ನವಾಂಶ, ತ್ರಿಂಶಾಂಶ, ದ್ವಾದಶಾಂಶ ಬಲ ಇಷ್ಟನ್ನು ಗಮನಿಸಲೇಬೇಕು. ಇದನ್ನೂ ಮೀರಿ ಪರಿಶೀಲಿಸುವುದು ಇನ್ನೂ ಹಲವು ಇರುತ್ತೆ. ಮುಖ್ಯವಾಗಿ ಇಷ್ಟನ್ನು ನಾವು ಗಮನಿಸದೇ ಹೋದರೆ ಆ ಜಾತಕದ ಭವಿಷ್ಯ ತಿಳಿಯುವುದಾದರೂ ಹೇಗೆ..?
ಜಾತಕದ ಭವಿಷ್ಯ ಬಿಡಿಸೋದು ಹೇಗೆ?
ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜಾತಕ ನೋಡಿಕೊಳ್ಳುವುದು ಹೇಗೆ..? ಹೇಗೆ ಆತ ತನ್ನ ಜಾತಕದೊಳಗೆ ಕಾಣುವ ಭವಿಷ್ಯವನ್ನ ಬಿಡಿಸಿ ನೋಡಿಕೊಳ್ಳಬೇಕು..? ಈ ರಹಸ್ಯ ಗೊತ್ತಾಗಿಬಿಟ್ಟರೆ ನಿಮ್ಮ ಭವಿಷ್ಯವನ್ನ ನೀವೇ ನೋಡಿಕೊಳ್ಳಬಹುದು. ಒಂದು ಜಾತಕ ಅಂದ್ರೆ ಹನ್ನೆರಡು ಮನೆಗಳಿದ್ದು, ಕಾಲಾನ್ವಯ ಆ ಮನೆಗಳಲ್ಲಿ ಒಂಭತ್ತು ಗ್ರಹಗಳಿರುತ್ತವೆ.
1. ಮೇಷ ರಾಶಿ
2. ವೃಷಭ ರಾಶಿ
3. ಮಿಥುನ ರಾಶಿ
4. ಕರ್ಕಟಕ ರಾಶಿ
5.ಸಿಂಹ ರಾಶಿ
6. ಕನ್ಯಾ ರಾಶಿ
7. ತುಲಾ ರಾಶಿ
8. ವೃಶ್ಚಿಕ ರಾಶಿ
9. ಧನಸ್ಸು ರಾಶಿ
10. ಮಕರ ರಾಶಿ
11. ಕುಂಭ ರಾಶಿ
12. ಮೀನ ರಾಶಿ
ಹೀಗೆ ಒಂದು ಜಾತಕದಲ್ಲಿ 12 ರಾಶಿಗಳಿರ್ತವೆ. ಒಂದೊಂದು ರಾಶಿಗೂ ಒಬ್ಬೊಬ್ಬ ಅಧಿಪತಿ ಇರುತ್ತಾನೆ. ಆ ಅಧಿಪತಿಗಳನ್ನೇ ಗ್ರಹಗಳು ಅಂತ ಕರಿಯೋದು.
ಗ್ರಹಗಳು:
ಸಂಸ್ಕೃತದಲ್ಲಿ ಗ್ರಹವನ್ನು ಗೃಹ್ಣಾತೀತಿ ಗ್ರಹ. ಗ್ರಹಗ್ರಹಣೇ ಅದು ಅರ್ಥೈಸಲಾಗುತ್ತದೆ. ಅಂದರೆ ಯಾವುದು ಹಿಡಿದುಕೊಳ್ಳುತ್ತದೆಯೋ, ಯಾವುದು ಆವರಿಸಿಕೊಳ್ಳುತ್ತದೆಯೋ ಅದು ಗ್ರಹ. ಇದು ಶಾಸ್ತ್ರೀಯವಾಗಿ ಸಮ್ಮತವಾದ ವಿವೇಚನೆ. ಗ್ರಹಗಳು ಮನುಷ್ಯನನ್ನು ತಮ್ಮ ಪ್ರಭಾವದಿಂದ ಹಿಡಿದುಹಾಕುತ್ತವೆ, ಆವರಿಸಿಬಿಡುತ್ತವೆ. ಗ್ರಹಗಳ ಪ್ರಭಾವದಲ್ಲಿ ಸಿಲುಕಿರುವ ವ್ಯಕ್ತಿಯು ತನ್ನ ಸ್ವಸ್ವಾತಂತ್ರ್ಯ, ಬುದ್ಧಿ, ವಿಚಾರಶಕ್ತಿಯನ್ನು ಗ್ರಹಗಳ ಗುಣಗಳಿಗೆ ಅನ್ವಯವಾಗಿ ಅನುಭವಿಸುತ್ತಾನೆ. ಅವು ಆಡಿಸಿದಂತೆ, ನಡೆಸಿದಂತೆ ವರ್ತಿಸುತ್ತಾನೆ. ಆಂಗ್ಲ ಭಾಷೆಯಲ್ಲಿ ಗ್ರಹಕ್ಕೆ ಪ್ಲಾನೆಟ್ ಎಂದು ಕರೆಯುತ್ತಾರೆ. ಗ್ರಹಗಳನ್ನು ಕೇವಲ ಆಕಾಶೀಯ ಕಾಯಗಳು ಎಂದು ಪಾಶ್ಚಾತ್ಯ ರೀತ್ಯಾ ಅರ್ಥೈಸಿದರೆ ಅವುಗಳ ಪ್ರಭಾವದ ವಿವರಣೆಯು ಸಮಂಜಸವಾಗುವುದಿಲ್ಲ. ಗ್ರಹಗಳು ಮನುಷ್ಯನ ಕರ್ಮಗಳಿಗನುವಾಗಿ ತಮ್ಮ ಪ್ರಭಾವವನ್ನು ಬೀರುತ್ತಾ ನಮ್ಮ ಆಯುರ್ಮಾನವಿಡೀ ಪ್ರೇರಕಶಕ್ತಿಗಳಾಗಿರುತ್ತವೆ.
ಹಾಗಾದರೆ ಆ ಗ್ರಹಗಳು ಯಾವುವು..?
ಪ್ರಕಾಶ ಗ್ರಹಗಳು
1. ಸೂರ್ಯ -
2. ಚಂದ್ರ
ತಾರಾ ಗ್ರಹಗಳು
3. ಕುಜ (ಮಂಗಳ )
4. ಬುಧ
5. ಗುರು
6. ಶುಕ್ರ
7. ಶನಿ.
ಛಾಯಾ ಗ್ರಹಗಳು
8. ರಾಹು
9. ಕೇತು
ಈ ಒಂಭತ್ತು ಗ್ರಹಗಳಲ್ಲಿ ರಾಹು ಕೇತುಗಳನ್ನು ಬಿಟ್ಟು ಉಳಿದ 7 ಗ್ರಹಗಳಿಗೆ ರಾಶಿ ಅಧಿಪತ್ಯವನ್ನು ಕೊಟ್ಟಿದ್ದಾರೆ. ಈ ರಾಹು ಕೇತುಗಳು ಛಾಯಾಗ್ರಹಗಳು. ಆದರೆ ಅವುಗಳಿಗೆ ಮನೆ ಇಲ್ಲದಿದ್ದರೂ ಅವು ಫಲ ಕೊಡುವಲ್ಲಿ ಪ್ರಭಾವ ಗ್ರಹಗಳಾಗಿವೆ.
ಯಾವ ರಾಶಿಗೆ ಯಾರು ಅಧಿಪತಿ?
12 ರಾಶಿಗಳಿಗೆ ಅಧಿಪತಿಗಳಿದ್ದಾರೆ. ಆಯಾ ರಾಶಿಗೆ ಈ ಗ್ರಹಗಳೇ ಸ್ಥಾನಾಧಿಪತಿಗಳಾಗಿರುತ್ತಾರೆ.
ಮೇಷ - ಕುಜ / ಮಂಗಳ
ವೃಷಭ - ಶುಕ್ರ
ಮಿಥುನ - ಬುಧ
ಕಟಕ - ಚಂದ್ರ
ಸಿಂಹ - ರವಿ
ಕನ್ಯಾ - ಬುಧ
ತುಲಾ - ಶುಕ್ರ
ವೃಶ್ಚಿಕ - ಕುಜ / ಮಂಗಳ
ಧನಸ್ಸು - ಗುರು
ಮಕರ - ಶನಿ
ಕುಂಭ- ಶನಿ
ಮೀನ - ಗುರು
Saturday, 1 December 2018
ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್
ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷ$ರ ಮಹಾಮಂತ್ರ ಹಾಗೂ ಅಷ್ಟಾಕ್ಷ$ರ ಮೂಲಮಂತ್ರಗಳನ್ನು ಒಳಗೊಂಡಿದೆ.
ಗಣಪತಿ ಅಥರ್ವಶೀರ್ಷ ಅಥವಾ ಗಣೇಶೋಪನಿಷತ್ ಎಂದು ಕರೆಯಲ್ಪಡುವ ಗಣಪತಿಸ್ತುತಿಯ ಮಂತ್ರ ಪ್ರಸಿದ್ಧವಾದುದು. ಇದನ್ನು ಕೇಳುತ್ತಿದ್ದರೆ, ಕರ್ಣಾನಂದದ ಜೊತೆಗೆ ಮನಸ್ಸಿಗೂ ಆನಂದವಾಗುತ್ತದೆ. ನಿರ್ವಿಘ್ನದಾಯಕನಾದ ಗಣಪತಿ ಆದಿಪೂಜಿತನಾಗಿರುವುದರ ಜೊತೆಗೆ, ಹೆಚ್ಚಿನ ಜನರು ಇಷ್ಟಪಡುವ ದೇವನಾಗಿದ್ದಾನೆ. ಹಾಗಾಗಿಯೇ ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕ ದಂತಂ ಭಕ್ತಾನಾಮ್ ಏಕದಂತಮುಪಾಸ್ಮಹೇ ||, ಎಂಬ ಶ್ಲೋಕ ಹುಟ್ಟಿಕೊಂಡಿದ್ದು.
ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷ$ರ ಮಹಾಮಂತ್ರ ಹಾಗೂ ಅಷ್ಟಾಕ್ಷ$ರ ಮೂಲಮಂತ್ರಗಳನ್ನು ಒಳಗೊಂಡಿದೆ. ಕೊನೆಯಲ್ಲಿ ಗಣಪತಿ ಧ್ಯಾನ ಅಥವಾ ಶ್ಲೋಕ ಮತ್ತು ಮಾಲಾಮಂತ್ರದ ಮೂಲಕ ಇದು ಪೂರ್ಣಗೊಳ್ಳುತ್ತದೆ. ಸ್ವರಪೂರ್ವಕವಾಗಿ ಇದನ್ನು ಉಚ್ಚರಿಸಿದರೆ ಕೇಳುಗರೂ ತನ್ಮಯತೆಯನ್ನು ಹೊಂದಿ ಗಣಪತಿಯ ಕೃಪೆಗೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ.
ಉಪನಿಷತ್ತಿನ ಮುಂದುವರಿದ ಭಾಗವಾಗಿ ಇದರ ಫಲಗಳನ್ನೂ ಹೇಳಲಾಗಿದೆ. ಈ ಅಥರ್ವಶೀರ್ಷವನ್ನು ಯಾರು ಅಧ್ಯಯನ ಮಾಡುತ್ತಾರೋ ಅವರು ಬ್ರಹ್ಮಸಾûಾತ್ಕಾರಕ್ಕೆ ಅರ್ಹರಾಗುತ್ತಾರೆ ಎನ್ನಲಾಗಿದೆ. ಅವರು ವಿಘ್ನಗಳಿಗೊಳಗಾದರೆ, ವಿಘ್ನಗಳೇ ಅವರಿಂದ ದೂರವಾಗಿಬಿಡುತ್ತವೆ. ಅವರು ಎÇÉಾ ಕಡೆಯಿಂಲೂ ಸುಖವನ್ನೇ ಹೊಂದುವವರಾಗುತ್ತಾರೆ. ಪಂಚ ಮಹಾಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಸಂಜೆ ಇದನ್ನು ಪಠಿಸಿದರೆ ಹಗಲಿನಲ್ಲಿ ಮಾಡಿದ ಪಾಪಗಳನೂ,° ಬೆಳಗ್ಗೆ ಪಠಿಸಿದರೆ ರಾತ್ರಿಯಲ್ಲಿ ಮಾಡಿದ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ. ಸಂಜೆ ಮತ್ತು ಬೆಳಗ್ಗೆ ಎರಡೂ ಸಮಯದಲ್ಲಿ ಪಠಿಸಿದರೆ ಪಾಪರಹಿತರಾಗುತ್ತಾರೆ. ಸದಾ ಇದನ್ನು ಪಠಿಸುವವರು ವಿಘ್ನರಹಿತರಾಗುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ$ ಎಂಬ ಪುರುಷಾರ್ಥಗಳನ್ನು ಹೊಂದುತ್ತಾರೆ.
ಅಥರ್ವೋಪನಿಷತ್ ವಿN°àಶನನ್ನು ಪಠಿಸಲು ಇರುವ ಮಹಾನ್ ಮಂತ್ರವಾದುದರಿಂದ ಸಾವಿರಕ್ಕೂ ಹೆಚ್ಚು ಬಾರಿ ಪಠಿಸಿದರೆ ನಮ್ಮೆಲ್ಲ ಇಷ್ಟಾರ್ಥಗಳು ನೆರವೇರುತ್ತದೆ. ಈ ಮಂತ್ರ ಪಠಣದಿಂದ, ವಿದ್ಯಾವಂತ, ಗುಣವಂತ ಮತ್ತು ಉತ್ತಮ ವಾಗ್ಮಿಯಾಗಲು ಸಾಧ್ಯ. ವ್ಯಕ್ತಿಯೊಬ್ಬ ಅಥರ್ವಶೀರ್ಷ ಮುಖೇನ ಯಜ್ಞವನ್ನು ಮಾಡುವುದರಿಂದ, ಐಶ್ವರ್ಯವಂತನೂ, ಕೀರ್ತಿವಂತನೂ, ಮೇಧಾವಿಯೂ ಆಗುತ್ತಾನಲ್ಲದೆ ಸಕಲ ಸುಫಲಗಳನ್ನು ಹೊಂದುತ್ತಾನೆ. ಹೀಗೆ ಸಕಲ ಸಿದ್ಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಸಿದ್ಧಿಯನ್ನು ಪಡೆಯಲು ಸಾಧನೆ ಬೇಕೇಬೇಕು. ದೇವರ ನಂಬಿಕೆಯೂ ಅಂತಹ ಸಾಧನೆಯನ್ನೇ ಹೇಳುತ್ತದೆ. ಮಂತ್ರಗಳಲ್ಲಿನ ತಲ್ಲೀನತೆಯೂ ಒಂದು ಸಾಧನೆಯೇ. ಯಾಕೆಂದರೆ ಮರ್ಕಟನಂತಾಡುವ ಮನಸ್ಸನ್ನು ನಿಯಂತ್ರಿಸಿದರಷ್ಟೇ ಪಠಣ, ತಲ್ಲೀನತೆ ಎಲ್ಲವೂ ಸಾಧ್ಯ. ನಾವು ಗೊತ್ತಿ¨ªೋ, ಗೊತ್ತಿಲ್ಲದೆಯೋ ಬದುಕಿನ ಅನಿವಾರ್ಯತೆಗಾಗಿಯೋ ಒಂದಲ್ಲ ಒಂದು ಪಾಪಕಾರ್ಯದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಳ್ಳುತ್ತೇವೆ. ಅಂತಹ ಪಾಪಗಳನ್ನು ಕಳೆಯುವವನು ಗಣನಾಯಕ. ಆತನನ್ನು ಪಠಿಸುವ ಮೂಲಕ ನಮ್ಮ ಮನಸ್ಸನ್ನು ಶುದ್ಧವಾಗಿಸಿಕೊಳ್ಳಲು ಈ ಉಪನಿಷತ್ತು ಸಹಕಾರಿಯಾಗಿದೆ. ಪರಮಾತ್ಮನ ಸ್ವರೂಪವನ್ನು ಹಲವು ಬಗೆಗಳಲ್ಲಿ ನಾವು ಕಾಣುವವರು. ಮತ್ತು ಮಂತ್ರ ತಂತ್ರ ಮುಖೇನ ಪೂಜಿಸುವವರು. ಮನುಷ್ಯನ ಪ್ರಾರ್ಥನೆಯೆಂದರೆ ಮುಖ್ಯವಾಗಿ ಇಷ್ಟಾರ್ಥ ಸಿದ್ಧಿ. ಇಂತಹ ಉಪನಿಷತ್ತುಗಳನ್ನು ದೇವರು ತೋರಿದದಾರಿ ಎಂದು ಪರಿಗಣಿಸಿ ಪಠಿಸಿದರೆ, ಆಲಿಸಿದರೆ ನಾವು ವಿಘ್ನರಹಿತವಾದ ಜೀವನ ನಡೆಸಬಹುದು.
ಓಂ ನಮೋ ವ್ರಾತಪತಯೇ ನಮೋ ಗಣಪತೆಯೇ ನಮಃ ಪ್ರಮಥಪತೆಯೇ ನಮಸ್ತೇಸ್ತು
ಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀ ವರವರದಮೂರ್ತಯೇ ನಮಃ||
ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ.
ಆತ್ಮವು ದೇವರನ್ನು ಸೇರಲು ಏನು ಮಾಡಬೇಕು?
ಆತ್ಮವು ದೇಹದ ಒಳಗೆ ಇದ್ದಷ್ಟು ಹೊತ್ತು ಮಾತ್ರ ನಮ್ಮ ದೇಹಕ್ಕೆ ಬೆಲೆ. ಆತ್ಮವು ದೇಹವನ್ನು ತ್ಯಜಿಸಿದ ತಕ್ಷಣ ಅದು ಜೀವ ಎಂದು ಕರೆಸಿಕೊಳ್ಳದೆ ಶವ, ಕಳೇಬರ ಮೊದಲಾದ ಶಬ್ದಗಳಿಂದ ಕರೆಸಿಕೊಳ್ಳುತ್ತದೆ. ಆ ಕ್ಷಣದಿಂದ, ಅದೊಂದು ಬೇಗನೆ ಕೆಡುವ ವಸ್ತುವಾಗಿಬಿಡುತ್ತದೆ. ಆತ್ಮವೆಂಬುದೇ ನಮ್ಮ ಅಸ್ತಿತ್ವ. ಹಾಗಾಗಿ, ಜೀವನದ ಅಂತ್ಯದಲ್ಲಿ ಆತ್ಮವು ದೇವರನ್ನು ಸೇರಲಿ ಎಂದು ಪ್ರತಿಯೊಬ್ಬನೂ ಪ್ರಾರ್ಥಿಸುತ್ತಾನೆ. ಯೋಚಿಸುತ್ತಾನೆ. ಮತ್ತೂಂದು ಜನ್ಮ ಈ ಭುವಿಯಲ್ಲಿ ಬೇಡ ಎಂಬ ನಿರ್ಧಾರ ತಳೆಯುವವರೇ ಹೆಚ್ಚು. ಮಾನವ ಜನ್ಮ ದೊಡ್ಡದು ಎಂಬ ಮಾತಿದೆ. ಆದರೂ, ಮಾನವನು ಕೊನೆಯಲ್ಲಿ ಬಯಸುವುದು ಈ ದೇಹದಿಂದ ಬಿಡುಗಡೆ ಪಡೆಯುವುದು ಮತ್ತು ತನ್ನ ಆತ್ಮ ದೇವರನ್ನು ಸೇರುವುದು. ನಮ್ಮ ಆತ್ಮ ದೇವರನ್ನು ಸೇರಲು ಏನು ಮಾಡಬೇಕು? ಎಂಬ ಪ್ರಶ್ನೆ ಕೊನೆಯ ಘಳಿಗೆಯಲ್ಲಿ ಎಲ್ಲರಿಗೂ ಬರುವಂಥದ್ದು. ಪ್ರತಿಯೊಬ್ಬ ಹಿರಿಯರೂ ಅಂದರೆ ಸಾವಿನಂಚಿನಲ್ಲಿರುವವರು ದೇವರಪಾದವನ್ನು ಸೇರಿದರೆ ಸಾಕಪ್ಪ! ಎಂದು ಉದ್ಗರಿಸುವುದೇ ಇದಕ್ಕೆ ಉದಾಹರಣೆ.
ಬದುಕಿನ ಕೊನೆಯಲ್ಲಿರುವ ಹಿರಿಯರು ಯಾವಾಗಲೂ ಶಿವಶಿವ ಅಂತಲೋ, ರಾಮರಾಮ ಅಂತಲೋ, ಕೃಷ್ಣಕೃಷ್ಣ ಅಂತಲೋ ಪ್ರಾಣ ಬಿಟ್ಟರೆ ಸಾಕು ಎಂದುಕೊಳ್ಳುವುದನ್ನು ಕೇಳಿರುತ್ತೇವೆ. ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆದರೆ, ಈ ದೇವರ ಸಾನಿಧ್ಯವನ್ನು ಸೇರಲು ಮಾಡಬೇಕಾದುದಾದರೂ ಏನು? ಹಿರಿಯರು ಅಂದುಕೊಂಡಂತೆ, ಪರಿಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸುತ್ತ ಸದ್ಭಾವವನ್ನು ಹೊಂದಿದ್ದಾಗ ಮಾತ್ರವೇ ನಮ್ಮ ಆತ್ಮ ದೇವರನ್ನ ಸೇರಲು ಸಾಧ್ಯ.
ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು,
ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು, ನೋಡಿಕೊಳ್ಳಿ...
ಜನ್ಮ ಕುಂಡಲಿಯ ವಿಷಯದಲ್ಲಿ ಒಳ್ಳೆಯದೆಷ್ಟು ಕೆಟ್ಟದು ಎಷ್ಟು ಎಂಬ ಲೆಕ್ಕಾಚಾರ ಜಾತಕದಲ್ಲಿನ ಯೋಗಗಳು ಯೋಗಗಳ ಶಕ್ತಿ ಯೋಗಗಳನ್ನು ನಿರ್ಮಿಸಿದ ಗ್ರಹಗಳ ಒಟ್ಟೂ ಶಕ್ತಿ ಏನು, ಯಾವಾಗ, ಇಂಥದೊಂದು ಒಳ್ಳೆಯ ಶಕ್ತಿಯನ್ನು ಪಡೆಯುತ್ತವೆ ಇತ್ಯಾದಿ ಇತ್ಯಾದಿ ವಿಚಾರಗಳನ್ನು ಪರಿಶೀಲಿಸಬೇಕು. ಯೋಗಗಳು ಇದ್ದ ಮಾತ್ರಕ್ಕೆ ಎಲ್ಲವೂ ಸರಿಹೋಗುತ್ತದೆ ಎಂದಲ್ಲ. ಆ ಯೋಗದ ಪರಮಾವಧಿ ಶಕ್ತಿ ಏನು, ಎಷ್ಟು ? ಎಂಬುದನ್ನು ತೀರ್ಮಾನಿಸಬೇಕು. ಈ ಯೋಗಗಳ ಸಂದರ್ಭದಲ್ಲಿ ಶನಿಕಾಟಗಳು ಬಾಧಿಸಬಾರದು.
ಗಜಕೇಸರಿ ಯೋಗ
ಗುರುಗ್ರಹ ಹಾಗೂ ಚಂದ್ರ ಗ್ರಹದ ಸ್ಥಿತಿ ಪೂರ್ವಕ ಜೋಡಣೆ ಈ ಯೋಗಕ್ಕೆ ಮುಖ್ಯ. ಚಂದ್ರನಿಂದ ಗುರುಗ್ರಹ ಕೇಂದ್ರದಲ್ಲಿರಬೇಕು. ಗುರುವಿಗೂ, ಚಂದ್ರನಿಗೂ ಉತ್ತಮ ಶಕ್ತಿ, ಉತ್ತಮ ಸ್ಥಳಗಳು ಉತ್ತಮ ಅಧಿಪತ್ಯಗಳು ದೊರೆತಿದ್ದಲ್ಲಿ ಗಜಕೇಸರಿ ಯೋಗಕ್ಕೆ ಹೆಚ್ಚಿನ ತೂಕ ಬರುತ್ತದೆ. ನಮ್ಮ ಸಂದರ್ಭದಲ್ಲಿ ಯಶಸ್ಸು ಪಡೆದು ಖ್ಯಾತಿವಂತರಾದ ರಾಹುಲ್, ಹೇಮಾ ಮಾಲಿನಿ, ಮಹೇಂದ್ರಸಿಂಗ್ ಧೋನಿ, ಕಳೆದ ಶತಮಾನದಲ್ಲಿ ನವ್ಯ ಕಾವ್ಯ ಪರಂಪರೆಗೆ ತೆರೆದುಕೊಂಡು ಹೊಸ ಅಲೆ ಎಬ್ಬಿಸಿದ ನೊಬೆಲ್ ಪ್ರ„ಸ್ ಪಡೆದ ಎಲಿಯಟ್, ನಮ್ಮ ಮಾಜಿ ಪ್ರಧಾನಿ ವಾಜಪೇಯಿ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮುಂತಾದವರು ಗಜಕೇಸರಿ ಯೋಗ ಹೊಂದಿದ್ದರು. ಇವರೆಲ್ಲರ ಬದುಕಿನ ಏಳುಬೀಳುಗಳನ್ನು ರೂಪಿಸುವಲ್ಲಿ ಗಜಕೇಸರಿ ಯೋಗ ತನ್ನ ಪಾಲನ್ನು ನೀಡಿದೆ ಎಂಬುದು ಗಮನಾರ್ಹ.
ಶಶಿಮಂಗಳ ಯೋಗ
ಕುಜನೂ, ಚಂದ್ರನೂ ಈ ಯೋಗಕ್ಕೆ ಕಾರಣರಾಗುತ್ತಾರೆ. ಕುಜ ಚಂದ್ರರು ಪರಸ್ಪರ ದೃಷ್ಟಿಸಿದ್ದರೆ ಒಂದೇ ಮನೆಯಲ್ಲಿ ಕೂಡಿದ್ದರೆ ಈ ಯೋಗ ಉಂಟಾಗುತ್ತದೆ. ಅನಿರೀಕ್ಷಿತ ಮೂಲದಿಂದ ಧನ ಸಂಪಾದನೆಗೆ ದೊಡ್ಡ ಮಟ್ಟದಲ್ಲಿ ಸಾಧ್ಯವಾಗುವ ಯೋಗ ಇದು. ಕುಜ ಯಾವಾಗಲೂ ಪಾಪ ಗ್ರಹ. ಹೀಗಾಗಿ ಕುಜನು ದುಷ್ಟ ಪ್ರವೃತ್ತಿಯನ್ನು ವ್ಯಕ್ತಿಯೊಳಗೆ ಕೆಲವು ವಿಷಮ ಸಂದರ್ಭದಲ್ಲಿ ರೂಪಿಸುವುದರಿಂದ ಪಾಪದ ಕೆಲಸಗಳ ಮೂಲಕವೂ ಧನಾರ್ಜನೆಯಾಗುತ್ತದೆ. ಕೆಟ್ಟ ಸ್ಥಳಗಳಲ್ಲಿ ಈ ಯೋಗ ಅಥವಾ ಇನ್ನಷ್ಟು ಕೆಟ್ಟಗ್ರಹಗಳ ಸಾಮೀಪ್ಯದಿಂದಾಗಿ ಈ ಯೋಗ ಒದಗಿ ಬಂದಿದ್ದರೆ ಹಣ ಬಂದಷ್ಟೇ ವೇಗದಲ್ಲಿ ಹರಿದು ಖರ್ಚಾಗಿ ಮೋಸಹೊಂದಿ ಹೊರಟೂ ಹೋಗುತ್ತದೆ. ಬರಬೇಕಾದ ಹಣವೇ ಬಾರದಿರುವ ದಾರುಣತೆ ಕೂಡಾ ಸಂಭವಿಸಬಹುದು.
ಈ ಯೋಗವನ್ನು ಹೊಂದಿದ ಜನರಯಾದಿ ನಾನಿಲ್ಲಿ ಕೊಡಹೋಗುವುದಿಲ್ಲ. ಭ್ರಷ್ಟಾಚಾರ ಪಾಪಮೂಲ, ತೋಳ್ಬಲ, ದುಷ್ಟ ಜನಬಲಗಳಿಂದ ಧನ ಸಂಪಾದಿಸಿದ ವಿಚಾರ ಇವರುಗಳ ವಿಚಾರದಲ್ಲಿ ಸ್ಪಷ್ಟವಾಗಿರುವುದರಿಂದ ಉದಾಹರಣೆಗಳನ್ನು ದಯಮಾಡಿ ನಿರೀಕ್ಷಿಸಬೇಡಿ. ಒಳ್ಳೆಯ ರೀತಿಯಲ್ಲಿ ಸಂಪಾದನೆಯಾಗಲಾರದು ಎಂದೇನಲ್ಲ. ಕಟಕ ಲಗ್ನ ಜಾತಕದವನಿಗೆ ವೃಷಭದಲ್ಲಿ ಬಲಾಡ್ಯ ಚಂದ್ರ, ಮಕರದಲ್ಲಿ ಯೋಗಕಾರಕ ಅಂಗಾರಕ ಇದ್ದಲ್ಲಿ ಸನ್ನಡತೆ, ಹಿರಿಯ ಸ್ಥಾನಗಳಿಂದಲೂ ಧನಾರ್ಜನೆಗೆ ನ್ಯಾಯ ಮಾರ್ಗದಲ್ಲೇ ಸಾಧ್ಯತೆ ಹೇರಳ.
ರಾಜಲಕ್ಷಣ ಯೋಗ
ಗುರು, ಶುಕ್ರ, ಬುಧ, ಚಂದ್ರರು ವ್ಯಕ್ತಿಯ ಜಾತಕದಲ್ಲಿ ಲಗ್ನಭಾವದಲ್ಲಾಗಲೀ ಪರಸ್ಪರ ಕೇಂದ್ರಗಳಲ್ಲಾಗಲೀ ಸಂಯೋಜನೆಗೊಂಡಿರಬೇಕು. ಆಕರ್ಷಕ ರೂಪವೂ ರಾಜಯೋಗಗಳು ಕೂಡಿ ಬರುತ್ತದೆ. ಇದು ಈ ಯೋಗದ ಸಿದ್ಧಿ. ಘನತೆ ಹಾಗೂ ಗೌರವಗಳನ್ನು ಒದಗಿಸುತ್ತದೆ. ಬಹುಮಂದಿಯಿಂದ ಶ್ಲಾ ಸಲ್ಪಡುವವರಾಗುತ್ತಾರೆ.
ಉದಾಹರಣೆಯಾಗಿ ರಾಹುಲ್ ದ್ರಾವಿಡ್ ಜಾತಕವನ್ನು ಪರೀಕ್ಷಿಸಬಹುದು. ದ್ರಾವಿಡ್ ಜಾತಕದಲ್ಲಿ ಚಂದ್ರನಿಗೆ ಶಕ್ತಿಯೇ ಇರದೇ ಹೋಗಿದ್ದಲ್ಲಿ ಇವರ ಜಾತಕಕ್ಕೆ ಯಾವ ತೂಕವೂ ಒದಗಿ ಬರುವ ಸಾಧ್ಯತೆ ಇದ್ದಿರಲಿಲ್ಲ. ಮೇಲಿಂದ ಭಾಗ್ಯಾಧಿಪತಿ ಕುಜ ಶನೈಶ್ಚರನ ಹಾಗೂ ರಾಹುವಿನ ಕರಿನೆರಳಿನ ಹೊರಗುಳಿದು ಬಲಾಡ್ಯತೆ ನೀಡಿದ. ಹೀಗಾಗಿ ಇವರ ಜಾತಕದ ರಾಜಲಕ್ಷಣ ಯೋಗಕ್ಕೆ ದೊಡ್ಡ ಶಕ್ತಿ ಕೂಡಿಬಂತು. ಇಷ್ಟಾದರೂ ದ್ರಾವಿಡ್ ಇಂಡಿಯಾದ ತಂಡದಲ್ಲಿ ಸೇರಿದ ಹೊಸದರಲ್ಲಿ ಶನಿಕಾಟವಿದ್ದುದರಿಂದ ಆರಂಭದ ದಿನಗಳಲ್ಲಿ ಒಳ್ಳೆಯ ಯೋಗವಿದ್ದೂ ಪರದಾಡಿದ್ದರು. ಒನ್ ಡೇ ಪಂದ್ಯಗಳಿಗೆ ನಾಲಾಯಕ್ ಎಂಬ ಟೀಕೆಗಳು ನಾಗರ ಹೆಡೆಯಂತೆ ಎದ್ದು ಅಪ್ಪಳಿಸಿದ್ದವು. ಆದರೆ ಶುಕ್ರ ದಶಾಕಾಲ ಎಷ್ಟರ ಮಟ್ಟಿಗೆ ಎತ್ತಿ ಹಿಡಿಯಿತೆಂದರೆ ದ್ರಾವಿಡ್ ರಕ್ಷಣೆಯ ಗೋಡೆಯೆಂದು ಹೆಸರಾದುದು. ಏಕದಿನ ಟೆಸ್ಟ್ ಪಂದ್ಯ ಈ ಎರಡೂ ಪ್ರಕಾರಗಳಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ರನ್ ಗಳಿಸಿದರು.
ಚತುಸ್ಸಾಗರ ಯೋಗ
ಜಾತಕದ ಎಲ್ಲಾ ಕೇಂದ್ರಗಳಲ್ಲೂ ಗ್ರಹಗಳಿದ್ದರೆ ಚತುಸ್ಸಾಗರ ಯೋಗ ಎನ್ನುತ್ತಾರೆ. ಖ್ಯಾತಿ, ಹಣ, ವರ್ಚಸ್ಸು ಒದಗಿ ಬರುತ್ತದೆ. ರಾಜನ ಸಮಾನ ಅಥವಾ ರಾಜನೇ ಆಗುವ ಸಿದ್ಧಿ ಕೂಡಿ ಬರುತ್ತದೆ. ಈ ಯೋಗಕ್ಕೆ ಉದಾಹರಣೆಯಾಗಿ ಭಾರತೀಯ ಕ್ರಿಕೆಟ್‌ನ ಶೈಶವಾವಸ್ಥೆ ದಾಟಿ ಕುಡಿ ಮೀಸೆಯ ಎಳಸು ತಾರುಣ್ಯದ ಅವಸ್ಥೆ ಬಂದಾಗ ಭಾರತೀಯ ಕ್ರಿಕೆಟ್‌ಗೆ ಉತ್ತಮ ಶಕ್ತಿಯನ್ನು ಹಂತಹಂತವಾಗಿ ಒದಗಿಸಿಕೊಟ್ಟ ಮನ್ಸೂರ್ ಆಲಿಖಾನ್ ಪಟೌಡಿ ಹಾಗೂ ಹಿಂದಿನ ಯುಗದ ಚಲನಚಿತ್ರರಂಗದ ಪ್ರಸಿದ್ಧ ನಾಯಕಿ ಶರ್ಮಿಳಾ ಟ್ಯಾಗೋರ್ ಪುತ್ರ ಸೈಫ್ ಆಲಿ ಖಾನ್‌ಗೆ ಚತುಸ್ಸಾಗರ ಯೋಗವಿದೆ. ಬಲಾಡ್ಯನಾದ ಚಂದ್ರ ತಾರುಣ್ಯಾವಸ್ಥೆಯಲ್ಲಿ ಸಂಭವಿಸಿದ ತೀವ್ರ ಅನಾರೋಗ್ಯದಲ್ಲೂ ಇವರನ್ನು ಬದುಕಿಸಿದ. ಇಂದು ಹಿಂದಿ ಚಿತ್ರರಂಗದ ಪ್ರಥಮ ಸಾಲಿನ ತಾರೆ ಸೈಫ್. ರಾಜ ಮನೆತನಕ್ಕೆ ಸೇರಿದ ಪ್ರಸಿದ್ಧ ದಂಪತಿಗಳ ಪುತ್ರ. ನೀಚಶುಕ್ರ ಮೊದಲ ಪತ್ನಿಯಿಂದ ವಿಚ್ಛೇದನಕ್ಕೆ ಕಾರಣನಾದರೂ ಬಾಳ ಸಂಗಾತಿಯ ವಿಷಯದಲ್ಲಿ ಸಮತೋಲನ ತಂದ ಗುರು ಈಗ ಕರೀನಾ ಕಪೂರ್ ಜೊತೆಯಲ್ಲಿ ಉತ್ತಮ ಸಂಬಂಧ ಒದಗಿಸಿದ್ದಾನೆ. ಜಾಹೀರಾತು ಪ್ರಪಂಚದಲ್ಲಿ ಮಿಲಿಯನ್ ಗಟ್ಟಲೆ ಹಣ ಸಂಪಾದಿಸುತ್ತಿರುವ ಬಾಕ್ಸ್ ಆಫೀಸಿನಲ್ಲಿ ತೂಕ ಎತ್ತರಿಸಿಕೊಂಡ ವರ್ಚಸ್ವೀ ವ್ಯಕ್ತಿ ಸೈಫ್. ಪದ್ಮಶ್ರೀ ಪ್ರಶಸ್ತಿ ಕೂಡಾ ಕಿರಿಯ ವಯಸ್ಸಿನಲ್ಲೇ ಒದಗಿ ಬಂತು.
ನಮ್ಮವರಾದ ರಾಮಕೃಷ್ಣ ಹೆಗಡೆಯವರಿಗೆ ಕೂಡಾ ಚತುಸ್ಸಾಗರ ಯೋಗವಿತ್ತು. ಕೇವಲ 28ನೇ ವಯಸ್ಸಿನಲ್ಲೇ ಮೈಸೂರು ರಾಜ್ಯದ ಕಿರಿಯ ಮಂತ್ರಿಗಳಾಗಿದ್ದು ಇವರ ಹೆಗ್ಗಳಿಕೆ ಏಳುಬೀಳುಗಳು ಬಂದರೂ ಹೆಗಡೆಯವರದ್ದು ವರ್ಚಸ್ಸು ಹಾಗೂ ಆಕರ್ಷಣೆಯ ವಿಷಯದಲ್ಲಿ ಎರಡು ಮಾತಿಲ್ಲ. ಪ್ರಧಾನಿಯಾಗುವ ಯೋಗ ಇತ್ತೆಂಬುದು ಬೇರೆ ಮಾತು. ಆಗಿದ್ದರೆ ಅವರಿಗೆ ಯೋಗ್ಯತೆ ಇತ್ತು ಎಂಬುದು ರಾಜಕೀಯ ವ್ಯಾಖ್ಯಾನಕಾರರ ಮಾತು. ಆದರೆ ಒಕ್ಕರಿಸುವ ಶನಿಕಾಟ ಆ ಸಂದರ್ಭದ ಅನಾನುಕೂಲ ಸಂಧಿ ಘಾತಕಗಳು ಮನುಷ್ಯನನ್ನು ಹಿಂದಕ್ಕೆ ಎಳೆಯುತ್ತವೆ. ಎಲ್ಲ ಇದ್ದೂ ಹೆಗಡೆ ಪ್ರಧಾನಿಯಾಗಲಿಲ್ಲ. ಆದರೂ ಹೆಗಡೆ ಇತಿಹಾಸದಲ್ಲಿ ಅಪರೂಪದ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಅದರಲ್ಲಿ ಸಂಶಯಲ್ಲ.
ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು!
ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು!
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸರ್ಪ ನಾಶದ ಸಂಕೇತವೂ ಹೌದು. ಫಲವಂತಿಕೆಗೆ ಕೂಡಾ ಸರ್ಪ ಸಂಕೇತವಾಗಿದೆ. ನಮ್ಮ ಪುರಾಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ನಂತರದ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ವಿಷ್ಣು ಮಹೇಶ್ವರರು ಕ್ರಮವಾಗಿ ಸರ್ಪವನ್ನು ಹಾಸಿಗೆಯನ್ನಾಗಿಯೂ, ಸರ್ಪವನ್ನೇ ಅಲಂಕಾರವಾಗಿ ಕೊರಳಿಗೆ ಹಾರವನ್ನಾಗಿಯೂ ಉಪಯೋಗಿಸಿಕೊಂಡಿದ್ದಾರೆ. ಹಾಲ್ಗಡಲಲ್ಲಿ ತಣ್ಣನೆಯ ಮೈ ಆದಿಶೇಷನೆಂಬ ಹಾವಿನ ಮೇಲೆ ಮಲಗಿದ ವಿಷ್ಣುವಿಗೆ ಲಕ್ಷ್ಮೀ ದೇವಿ ಯಾವಾಗಲೂ ಕಾಲು ಒತ್ತುತ್ತಿರುತ್ತಾಳೆ. ತಣ್ಣನೆಯ ಮೈಯ ಆದಿಶೇಷನ ತಣ್ಣನೆಯ ತಟಸ್ಥ ಸ್ಥಿತಿ ವಿಷ್ಣುವಿಗೆ ಬಾಧಿಸಬಾರದೆಂದಾರೆ ಕಾಲೊತ್ತುತ್ತ ಕಾವಿನ ಜೀವಂತಿಕೆಯ ಘಟಕಗಳನ್ನು ವಿಷ್ಣುವಿನಲ್ಲಿ ಅಭಾದಿತಳಾಗಿಸುತ್ತಾಳೆ. ಹಾಗೆಯೇ ನಂಜುಂಡ ನಂಜನ್ನು ಕುಡಿದಾಗ ಪಾರ್ವತಿ ಶಿವನ ಕಂಠ ಸವರುತ್ತ ವಿಷವು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತಾಳೆ. ಇದರಿಂದ ಶಿವನಿಗೆ ವಿಷದಿಂದ ಉಂಟಾಗುವ ಕಂಟಕ ತಪ್ಪುತ್ತದೆ. ಒಟ್ಟಿನಲ್ಲಿ ವಿಷಮಯವಾದ ಸರ್ಪ ಸೃಷ್ಟಿಯ ಸ್ಥಿತಿ ಹಾಗೂ ಲಯಗಳ ನಡುವೆ ಒಂದು ಸಮತೋಲನವನ್ನು ನೆರವೇರಿಸಿದೆ.
ನೋಡಿ, ನಮ್ಮ ಪುರಾಣದ ಪ್ರಕಾರ ಆದಿಶೇಷ ಭೂಮಿಯನ್ನು ನೆತ್ತಿಯ ಮೇಲೆ ಹೊತ್ತಿದ್ದಾನೆ. ಅದಕ್ಕೆ ಒಂದೆಡೆ ಒಂದೇ ಭಂಗಿಯಿಂದ ಎತ್ತಿದ ಹಾಗೆ ಚಡಪಡಿಕೆಯಾದಾಗ ಕೊರಳು ಕೊಂಕಿಸುತ್ತದೆ. ಆಗ ನಮಗೆ ಭೂಕಂಪನದ ಅನುಭವವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇಲ್ಲೂ ವಿನಾಶಕ್ಕೆ ಮತ್ತೆ ಸರ್ಪವೇ ಕಾರಣ. ಭೂಕಂಪ ಸರ್ಪದ ಕಾರಣದಿಂದಾಗಿ ಆಗುತ್ತದೆ.
ಏನು ಈ ಸರ್ಪ ಶಾಪ?
ಜಾತಕ ಶಾಸ್ತ್ರದಲ್ಲಿ 5ನೇ ಮನೆ ಸಂತಾನದ ಮನೆಯಾಗಿದೆ. ರಾಹು ಸರ್ಪದ ಸಂಕೇತವಾಗಿದ್ದಾನೆ. ಜಾತಕದಲ್ಲಿ ದೋಷ ಕಾರಕನಾದ ರಾಹುವು ಸಂತಾನದ ಮನೆಯನ್ನು ಬಾಧಿಸಿದ್ದಲ್ಲಿ ಹುಟ್ಟಿದ ಮಕ್ಕಳು ಸಾಯುವುದು, ಬಾಧೆ ಪಡುವುದು, ತಂದೆತಾಯಿಗಳನ್ನು ಗೋಳು ಹೊಯ್ದುಕೊಳ್ಳುವುದು ಸಂಭವಿಸುತ್ತದೆ. ಈ ರಾಹುವಿನ ಜೊತೆಗೆ ಕುಜ ಶನಿಗಳು ಕ್ಷೀಣ ಚಂದ್ರರು ಅಸ್ತಂಗತ ದೋಷ ಇರುವ ಸೂರ್ಯ ಇತ್ಯಾದಿ ವಿಚಾರಗಳಿಂದಾದ ಬಾಧೆ ಅಗಾಧವಾಗಿದ್ದಾಗ ಸಂತಾನ ಹೀನತೆ ಸಂತಾನನಾಶ ಮಕ್ಕಳಿಂದ ನಿರಂತರ ನೋವುಗಳು ಇತ್ಯಾದಿ ಸಂಭವಿಸುತ್ತ ಜೀವನಕ್ಕೆ ಅರ್ಥ ಕಳೆದುಬಿಡುತ್ತದೆ. ಬೇರೆಯವರ ಬಲಿ ಹೇಳಿಕೊಳ್ಳಲಾಗದ ತಮಗೆ ತಾವೇ ನಿಭಾಯಿಸಲಾಗದ ಸಮಸ್ಯೆಗಳಲ್ಲಿ ವ್ಯಕ್ತಿ ತೊಳಲಾಡುತ್ತಾನೆ.
ಸಂತಾನಭಾಗ್ಯಕ್ಕೆ ತೊಂದರೆ ಹಾಗೂ ವಿಳಂಬಕ್ಕೆ ಸರ್ಪಶಾಪ
ಮುಖ್ಯವಾಗಿ ಸಂತಾನ ಸ್ಥಾನಕ್ಕೆ ಸರ್ಪಶಾಪ ಅಂಟಿದಾಗ ಮಕ್ಕಳೂ ಹುಟ್ಟಿ ಬಾಧೆ ಹೊಂದುವುದು ಮಕ್ಕಳು ಸಾಯುವುದು ಇತ್ಯಾದಿಯಲ್ಲದೆ ಮಕ್ಕಳೇ ಆಗದಿರುವ ತಾಪತ್ರಯ ಎದುರಾಗಬಹುದು. ಸಂತಾನ ಸ್ಥಾನಕ್ಕೆ ದೋಷವಿದ್ದಾಗ ಎಂಬುದೇ ಅಲ್ಲ. ಭಾಗ್ಯ ಹಾಗೂ ಸುಖಸ್ಥಾನಗಳ ಸಂಬಂಧ ತಾನು ಪಡೆದ ದೋಷದಿಂದಾಗಿ ಯಾವುದೇ ರೀತಿಯಲ್ಲಿ, ಸಂತಾನ ಸ್ಥಾನದೊಂದಿಗೆ ಏನಾದರೂ ಬಹು ಮುಖ್ಯವಾದ ಕಿಂಚತ್ ಸಂಬಂದ ಹೊಂದಿದ್ದರೆ ಸಂತಾನ ಹೀನತೆ ಉಟಾಗಬಹುದು. ಹುಟ್ಟಿದ ಮಕ್ಕಳಿಂದ ಬಹುವಿಧವಾದ ಕಿರುಕುಳಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಶನೈಶ್ಚರನೂ ಚಂದ್ರನೂ, ತಂತಮ್ಮ ಒಟ್ಟಾಗಿರುವ ಸ್ಥಿತಿ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದಾಗಲೂ ಸಂತಾನದ ವಿಷಯದಲ್ಲಿ ಕಿರುಕುಳಗಳು ಕಟ್ಟಿಟ್ಟ ಬುತ್ತಿ. ಯಾವಾಗಲೂ ಶನೈಶ್ಚರನ ಜೊತೆಗಿನ ಚಂದ್ರಯುತಿ ಅನೇಕ ಕಿರಿಕಿರಿಗಳನ್ನು ಎದುರಿಗಿಡುತ್ತದೆ. ಶನಿಕಾಟದ ಸಂದರ್ಭದಲ್ಲಿ ವಿಪರೀತವಾಗಿ ಸಂತಾನದ ವಿಷಯದಲ್ಲಿ ಕಿರುಕುಳಗಳು ಎದುರಾದೀತು. ಅನೇಕ ಉದಾಹರಣೆಗಳೊಂದಿಗೆ ಈ ವಿಚಾರಗಳನ್ನು ಶ್ರುತಪಡಿಸಬಹುದಾಗಿದೆ. ಸ್ಪಷ್ಟವಾಗಿ ಇಂತ ಬವಣೆ, ಕಿರಕಿರಿ ಹೊಂದಿದವರ ಜಾತಕದಲ್ಲಿ ರಾಹು ದೋಷ, ಸರ್ಪದೋಷ ಖಂಡಿತಾ ಇರುತ್ತದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಸರ್ಪಶಾಪ ಅಥವಾ ಸರ್ಪದೋಷವನ್ನು ಬಹು ಪ್ರಮುಖವಾಗಿ ಪರಿಗಣಿಸುತ್ತಾರೆ.
ಸರ್ಪ ಪ್ರತಿಷ್ಠೆ, ಸರ್ಪ ಸಂಸ್ಕಾರ ಇತ್ಯಾದಿ ರಾಹು ಜಪ, ಸಂತಾನ ಗೋಪಾಲ ಜಪ ಇತ್ಯಾದಿ ಪರಿಹಾರ ಸ್ವರೂಪವಾಗಿ ನೆರವೇರಿಸುತ್ತಾರೆ. ಈ ಸರ್ಪಶಾಪ ಜನ್ಮ, ಜನ್ಮಾಂತರದಿಂದ ಅಂಟಿಕೊಂಡು ಬಂದ ಸೂಚನೆಗಳು ಜಾತಕದಲ್ಲಿ ದೊರಕುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಹಾವು ಹೊಡೆಯುವುದನ್ನಾಗಲೀ, ನೋಡುವುದಾಗಲೀ ಪಾಪ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇಂಥದೊಂದು ಮೂಢನಂಬಿಕೆಯಲ್ಲಿ ನಖಶಿಖಾಂಥವಾಗಿ ಮುಳುಗುವುದೂ ಬೇಡ. ಅನಿವಾರ್ಯವಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸರ್ಪವನ್ನು ಹೊಡೆಯಲೇ ಬೇಕಾಗುತ್ತದೆ. ಹೀಗೆ ಹೊಡೆದಿದ್ದರಿಂದಾಗಿ ಸರ್ರನೆ ಒಬ್ಬನ ಜಾತಕದಲ್ಲಿ ಸರ್ಪ ಶಾಪ ಬಂದು ಬೇರು ಬಿಟ್ಟಿತು ಎಂದು ಅರ್ಥವಲ್ಲ. ಸರ್ಪಶಾಪದ ಕಲ್ಪನೆಯೇ ಬೇರೆ. ಆ ಕಲ್ಪನೆಯ ಪ್ರಕಾರ ಸರ್ಪವನ್ನು ಸಂಕೇತಿಸುವ ರಾಹು, ರಾಹುವನ್ನು ಒಳಗೊಳ್ಳುವ ಗ್ರಹಗಳು ಒಟ್ಟಾರೆಯಾದ ಅವರ ದುರ್ಬಲ ಸ್ಥಿತಿಯ ಸಂದರ್ಭದಲ್ಲಿ ಒಂದಿಷ್ಟು ತಡೆಯಲು ತೊಡಕಾಗುವ ಅಗಾಧ ಚಡಪಡಿಕೆ ಅಸಹಾಯಕತೆಗಳಿಗೆ ಕಾರಣವಾಗುತ್ತದೆ. ಇದು ಸತ್ಯ.
ಯಾರು ಮಕ್ಕಳಿಂದ ತೊಂದರೆಗೊಳಗಾಗಿದ್ದಾರೆ ?
ಇಲ್ಲಿ ಅವರೆಲ್ಲ ಯಾರೆಂಬ ಹೆಸರುಗಳು ಬೇಡ. ಸೂಕ್ಷ್ಮವಾಗಿ ಅವರನ್ನು ಪ್ರಸ್ಥಾಪಿಸುತ್ತೇನೆ. ಜಾತಕಶಾಸ್ತ್ರದಲ್ಲಿ ಸರ್ಪದೋಷ ಶಾಪ ಹಾಗೂ ಇದನ್ನು ಸುತ್ತವರಿದು ಕಾಡುವ ಗ್ರಹಗಳು ಹೇಗೆ ಸಂತಾನದ ವಿಷಯದಲ್ಲಿ ವಿಳಂಬ, ಸಂತಾನಹೀನತೆ, ಮಕ್ಕಳ ಕಾಟ, ತಮ್ಮೆದುರೇ ಮಕ್ಕಳು ಪರದಾಡುವ ವಿಚಾರ ಗಮನಿಸುತ್ತಾರೆ. ಪರದಾಡುತ್ತಾರೆಂಬುದನ್ನು ಉದಾಹರಿಸಲು ಸರ್ಪಶಾಪ ಎಂಬುದು ಒಂದು ಕಟ್ಟುಕಥೆಯಲ್ಲ.
ಬಹಳ ಪ್ರಮುಖ ಹೆಸರು ಗಳಿಸಿದ ನಮ್ಮ ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳೊಬ್ಬರಿಗೆ ಸಂತಾನ ಭಾಗ್ಯವಿರಲಿಲ್ಲ. ಚಾಣಾಕ್ಯ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಜನಾಕರ್ಷಣೆಯಿಂದ ಮಿಂಚಿದ ಮತ್ತೂಂದು ರಾಜ್ಯದ ಮುಖ್ಯಮಂತ್ರಿ ಮಗನಿಂದ ಅಂತ್ಯಕಾಲದಲ್ಲಿ ಯಾತನೆ ಪಟ್ಟರು. ಬಹು ಪ್ರಖ್ಯಾತ ಮಹಿಳೆಯೊಬ್ಬರು ಮಗನಿಂದ ಇನ್ನಿಲ್ಲದ ಸಂಕಟಗಳನ್ನು ಎದುರುಹಾಕಿಕೊಂಡರು. ಜನಪ್ರಿಯ ನಟರೊಬ್ಬರಿಗೆ ಸಂತಾನ ಭಾಗ್ಯ ಕೂಡಿಬರಲೇ ಇಲ್ಲ. ಇನ್ನೊಬ್ಬರು ಇದೇ ರೀತಿಯ ಪ್ರಖ್ಯಾತ ನಟ ತನ್ನ ಸಾವಿನ ದಿನಗಳ ವರೆಗೂ ತಮ್ಮ ಮಗನಿಂದಾಗಿ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಸಾಹಿತಿಗಳು ಮಾಜಿ ಮುಖ್ಯಮಂತ್ರಿಗಳು ಸಾಂಸ್ಕೃತಿಕ ವಕ್ತಾರರು ಎಂಬೆಲ್ಲಾ ದೊಡ್ಡ ಯಾದಿಯೇ ಇದೆ. ಸರ್ಪದೋಷ ಸರ್ಪಶಾಪ ಇವರನ್ನೆಲ್ಲ ಕಾಡಿ ಹಣ್ಣುಗಾಯಿ ನೀರುಗಾಯಿಯಾಗಿಸಿದೆ.
ಜನ್ಮ ಕುಂಡಲಿಯಲ್ಲಿ ವೈವಾಹಿಕ ವೈಫಲ್ಯ ಏಕೆ ಗೊತ್ತಾ?
ಜನ್ಮ ಕುಂಡಲಿಯಲ್ಲಿ ವೈವಾಹಿಕ ವೈಫಲ್ಯ ಏಕೆ ಗೊತ್ತಾ?
ಶ್ರೀ ಭಗವದ್ಗೀತೆಯ ಜ್ಞಾನಯೋಗ ಅಧ್ಯಾಯನದಲ್ಲಿ 39 ನೇ ಶ್ಲೋಕ ಬಹು ಮುಖ್ಯವಾದ ವಿಚಾರವೊಂದನ್ನು ಪರಮಶಾಂತಿಯನ್ನು ಪಡೆಯುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ.
ಶ್ರದ್ಧಾವಲಂಬತೇ ನಂ ತತ್ಪರಃ ಸಂಯತೇಂದ್ರಿಯ ಜ್ಞಾನಂ ಲಬ್ಧಾಪರಾಂ ಶಾಂತಿಚಿರೇಣಾನಿಗಚ್ಛತಿ ಇದರ ಅರ್ಥ ಸರಳವಾಗಿದೆ. ಶ್ರದ್ಧೆ ಎಂಬುದು ಯಾರಿಗಿದೆಯೋ ಶ್ರದ್ಧೆಯಲ್ಲಿ ನಿರತನೂ, ತತ್ಪರನೂ ಆಗುತ್ತಾನೋ, ಅವನು ಜಿತೇಂದ್ರಿಯನಾಗಿ ಜ್ಞಾನವನ್ನು ಸಂಪಾದಿಸುತ್ತಾನೆ. ಜ್ಞಾನವನ್ನು ಪಡೆದಾಗ ಪರಮ ಅನುಭೂತಿಯನ್ನು ಹೊಂದುವ ದಿವ್ಯಶಾಂತಿಯನ್ನು ಅವನು ಪಡೆಯುತ್ತಾನೆ.
ಗೀತೆಯನ್ನು ಓದಿಯೇ ಈ ಮೇಲಿನ ವಿಚಾರವನ್ನು ತಿಳಿಯಬೇಕಾಗಿಲ್ಲ. ನಮ್ಮ ನಮ್ಮ ಅನುಭವಗಳ ನೆಲೆಯಲ್ಲಿ ಯಾವಾಗಲೂ ನಮ್ಮ ಕ್ರಿಯಾಶೀಲತೆಗಳ ಸೋಲಿಂದ ನಾವು ನಾವೇ ಪಾರ್ಥರಾದಾಗ, ಅರ್ಜುನರಾದಾಗ ವಿವೇಕ ಎಂಬ ನಮ್ಮೊಳಗಿನ ದ್ರವ್ಯ ಶ್ರೀಕೃಷ್ಣನಾಗಿ ಗೀತೆಯನ್ನು ನಿರಂತರವಾಗಿ ನಮ್ಮ ಜೀವನ ಸಂಗ್ರಾಮದ ಸಂದರ್ಭದಲ್ಲಿ ಬೋಧಿಸುತ್ತಲೇ ಇರುತ್ತದೆ.
ಒಂದು ಕಾಲವಿತ್ತು ಹೆಣ್ಣುಗಂಡು ಒಂದಾಗಿ ಬಾಳದಾರಿಯಲ್ಲಿ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಸತಿಪತಿಗಳಾದ ಮೇಲೆ ಈ ಬಂಧನವನ್ನು ಪರಮ ಪಾವಿತ್ರ್ಯದಿಂದ ಕಾಣುವ ವಿಚಾರ. ನಮ್ಮಗಳ ಮೇಲೆ ನಾವೇ ಹೇರಿಕೊಂಡ ಒಂದು ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕರ್ತವ್ಯವಾಗಿತ್ತು. ಈ ನಿಟ್ಟಿನಲ್ಲಿ ಹೆಣ್ಣು ಹಾಗೂ ಗಂಡಿನ ನಕ್ಷತ್ರಗಳ ವಿಶ್ಲೇಷಣೆಯಲ್ಲಿ ರಚಿತವಾದ ಕೋಷ್ಟಕದ ಪ್ರಕಾರ ಅಂಕಗಳ ಮೇಲಿಂದ ಈ ಮದುವೆಯನ್ನು ನಡೆಸಬಹುದು. ಈ ವಿಚಾರವನ್ನು ಮನೆಯ ಹಿರಿಯರು ಜೋತಿಷಿ ಹಾಗೂ ಪುರೋಹಿತರ ಸನ್ನಿಧಿಯಲ್ಲಿ ನಡೆಸುತ್ತಿದ್ದರು.
ಆದರೆ ಇಂದು ಈ ವಿಧಾನ ಸರಿಯೇ?
ಇಂದು ಇಂಥದೊಂದು ಕೋಷ್ಟಕದ ಪರಿಣಾಮವಾಗಿ ದೊರೆತ ಅಂಕಗಳು ಒಂದು ವಿವಾಹದ ಗಟ್ಟಿತನವನ್ನು, ತನ್ನ ಅರಿಕೆಗೆ ಒಳಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹು ಪುರಾತನವಾದ ವೈವಾಹಿಕ ಪಾವಿತ್ರ್ಯ ಬಸವಳಿದಿದೆ. ಅಂದರೆ ಈ ಕೋಷ್ಟಕ ತಪ್ಪಿದೆ. ಒಂದು ನಮ್ಮದಾದ ಸಂಸ್ಕೃತಿಯ ಬೇರುಗಳಿಗೆ ಬಂಧಕ್ಕೆ ಇನ್ನೊಂದು ಹೆಣ್ಣು ಹಾಗೂ ಗಂಡು ಸಮಾನ ಎಂಬ ಧೋರಣೆ. ನಾವು ಬಹುವಾಗಿ ನಂಬಿಕೆ ಇಟ್ಟ ಋತುಮಾನಗಳಲ್ಲೇ ಏರುಪೇರುಗಳು ಸಂಭವಿಸುತ್ತಿರುವಾಗ, ಸರಿಯಾದ ಕಾಲದಲ್ಲಿ, ಸರಿಯಾದ ಮಳೆಗಾಳಿ ಚಳಿ ಹಾಗೂ ಬೇಸಿಗೆಯ ಕಾಲ ಧರ್ಮ ದಾರಿ ತಪ್ಪಿರುವಾಗ ವೈವಾಹಿಕ ಜೀವನದ ಪಾವಿತ್ರ್ಯ ಹಾಗೂ ಸಂಯಮ ದಾರಿ ತಪ್ಪಬಾರದು ಎಂದರೆ ಹೇಗೆ? ಹೀಗಾಗಿ ನಕ್ಷತ್ರಗಳ ವಿಶ್ಲೇಷಣೆಯೊಂದಿಗೆ ಬಳಸಿಕೊಂಡ ಕೋಷ್ಟಕದ ಮೂಲಕವಾದ ಅಂಕಗಳನ್ನು ಪಡೆದು ಹಾಂ, ಇದು ಸರಿಹೊಂದಿತು ಎಂಬ ವಿಚಾರವನ್ನು ಮೀರಿ ಇನ್ನೂ ಇತರ ಅಂಶಗಳನ್ನು ಸೂಕ್ಷ್ಮವಾಗಿ ಹೆಣ್ಣುಗಂಡುಗಳ ಜಾತಕದ ಹೊಂದಾಣಿಕೆಗಾಗಿ ಅನುಸರಿಸುವುದು ಈಗ ಈ ಬದಲಾದ ಕಾಲಕ್ಕೆ ಅನಿವಾರ್ಯವಾಗಿದೆ.
ಹಾಗಾದರೆ ಮಿಕ್ಕಿದ್ದು ಯಾವ ದಾರಿ, ಯಾವ ವಿಧಾನ?
ಹೆಣ್ಣು ಗಂಡು ಸಮಾನರು ಎಂಬುದು ಈಗಿನ ವರ್ತಮಾನದಲ್ಲಿ ಹೌದು. ಇದು ಸತ್ಯ ಎಂಬಠಸ್ಸೆ
ಒತ್ತಿಬಿಟ್ಟಿದೆ. ಈ ವಿಚಾರದಲ್ಲೀಗ ಚರ್ಚೆ, ಅಸಹನೆ, ವಿರೋಧ, ಗೊಣಗುವಿಕೆಗಳಿಗೆ ಅರ್ಥವಿಲ್ಲ. ಕೆಲವು ಬಾರಿ ಆಖೈರಾದ ಸತ್ಯವನ್ನು ಹೇಳಲಿಕ್ಕೆ ಆಗುವುದಿಲ್ಲ. ಈ ಹಿಂಜರಿಕೆಯಿಂದ ನಮ್ಮ ವೇದ ಹಾಗೂ ಸುಭಾಷಿತಗಳು ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ ಎಂಬ ಮಾತನ್ನು ಉದ್ಘೋಷಿಸಿದೆ. ಅಂತೆಯೇ ನಸ್ತ್ರೀ ಸ್ವಾತಂತ್ರ್ಯ ಮರ್ಹತಿ ಎಂಬ ಮಾತೂ ಇದೆ. ಈ ವಿಭಿನ್ನ ಮಾತುಗಳು ಕೇವಲ ಸ್ತ್ರೀಯರನ್ನು ದೇವರೆಂದು ಉಬ್ಬಿಸಿ, ಅವರಿಂದ ಕೆಲಸ ಮಾಡಿಸಿಕೊಳ್ಳಲಾಗಲೀ, ಮಹಿಳೆಯರನ್ನು ಗೌಣವಾಗಿ ಕಾಣುವುದಕ್ಕಾಗಲೀ ಬಂದ ಮಾತುಗಳಲ್ಲ. ನಿಜಕ್ಕೂ ಈ ಮಾತುಗಳು ಬೇರೆ ಬೇರೆ ನೆಲೆಯಲ್ಲಿ ಬಂದ ಮಾತುಗಳು. ಒಂದರ್ಥದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪುರುಷರು ಸ್ವಲ್ಪ ಶ್ರೇಷ್ಠ. ಮಹಿಳೆಯರು ತಗ್ಗಿ ನಡೆಯುವ ಸೂಕ್ಷ್ಮ ಅರಿಯಬೇಕು ಎಂಬುದನ್ನು ಶಾಸನ ಎಂದಲ್ಲದಿದ್ದರೂ ಒಳನಿಯಮವನ್ನಾಗಿ ಸ್ವೀಕರಿಸಿಬಿಟ್ಟಿತ್ತು. ಅದೇ ಈಗ ಕಾಲ ಬದಲಾಗಿದೆ. ಸಂವಿಧಾನದ ಚೌಕಟ್ಟುಗಳು ಬೇರೆಯಾಗಿವೆ. ಆಧುನಿಕತೆ ಜಗತ್ತಿನ ವ್ಯಾಖ್ಯೆಯನ್ನು ಬದಲಾಯಿಸಿದೆ.
ಜಾತಕದ ಮೊದಲ ಹಾಗೂ ಎರಡನೇ ಮನೆ ಪರಿಶೀಲನೆ ಮುಖ್ಯ
ಜಾತಕ ಕುಂಡಲಿಯಲ್ಲಿ ಮೊದಲ ಮನೆ ಒಬ್ಬರ ಮನೋಭಾವಗಳನ್ನು, ಎರಡನೇ ಮನೆ ತಾಳ್ಮೆ ಹಾಗೂ ಸೂಕ್ಷ್ಮತೆಗಳೊಂದಿಗೆ ಮಾತನಾಡುವ ವಿಧಾನಗಳನ್ನು ಸೂಚಿಸುತ್ತದೆ. ಮನೋಭಾವದಲ್ಲಿ, ಮಾತಿನ ಮೃದುತ್ವ ಹಾಗೂ ಕಟುತನಗಳಲ್ಲಿ ಚಂದ್ರನ ಅಪಾರವಾದ ಪ್ರಭಾವವೂ ಸೇರ್ಪಡೆಗೊಳ್ಳುತ್ತದೆ. ಹೀಗಾಗಿ ಚಂದ್ರನ ಕಾರಣಕ್ಕಾಗಿ ಹೆಣ್ಣೂ ಗಂಡುಗಳ ನಕ್ಷತ್ರ ಜೋಡಣೆಗೆ ನಮ್ಮ ಹಿಂದಿನ ಕ್ರಮ ಯುಕ್ತವಾಗಿದೆಯಾದರೂ, ಈಗಿನ ಹೊಸ ಸಂವಿಧಾನಕ್ಕೂ ಗಮನ ನೀಡಬೇಕಾಗಿದೆ. ಹೊಸ ಸಂವಿಧಾನದಲ್ಲಿ ಹೆಣ್ಣು ಹಾಗೂ ಗಂಡು ಸಮಾನರು ಎಂಬ ನಿಯಮ ಪ್ರಧಾನವಾದುದರಿಂದ ಹೆಣ್ಣು ಹಾಗೂ ಗಂಡಿನ ಜಾತಕ ಜೋಡಣೆಯ ಸಂದಭದಲ್ಲಿ ಜೋತಿಷಿಯ ಜವಾಬ್ದಾರಿ ಹೆಚ್ಚಾಗಿದೆ. ಬರೇ ನಕ್ಷತ್ರ ಜೋಡಣೆಯೊಂದೇ ಅಲ್ಲದೆ ಒಬ್ಬರ ಮನೋವೇದಿಕೆಯ ಶಕ್ತಿ ಹಾಗೂ ಮಿತಿ ಅಂತೆಯೇ ಅಭಿವ್ಯಕ್ತಿಗೆ ಬೇಕಾದ ಮಾತಿನ ಶಕ್ತಿ, ಅದರ ಮಿತಿಗಳನ್ನು ವಿಶ್ಲೇಷಿಸಲೇ ಬೇಕಾಗುತ್ತದೆ. ಮನೋವೈಜಾnನಿಕ ವಿಚಾರಗಳ ಕುರಿತಂತೆ ಜೋತಿಷಿ ಜಾತಕದಲ್ಲಿರುವ ಹೆಣ್ಣು ಹಾಗೂ ಗಂಡಿನ ಸೂಕ್ಷ್ಮಗಳನ್ನು ವಿಶ್ಲೇಷಿಸಿಯೇ ಜಾತಕಗಳನ್ನು ಹೊಂದಿಸಬೇಕಾಗುತ್ತದೆ. ಮನುಷ್ಯ ಧರ್ಮ, ಮಾನವೀಯತೆಗಳ ನಿಕ್ಷೇಪಕ್ಕೆ ಹೆಣ್ಣು ಗಂಡುಗಳಲ್ಲಿ ಒಂದು ಜೀವಂತಿಕೆ ದೊರೆತಾಗ ಅಹಂ ಕೆಲಸ ಮಾಡುವುದಿಲ್ಲ. ಅಹಂ ಎಂಬ ಘಟಕದ ಹೆಡೆ ನಾಗರ ವಿಷವನ್ನು ಕಕ್ಕಲು ಮುಂದಾಗದಿದ್ದರೆ ದಾಂಪತ್ಯ ಉಳಿಯುತ್ತದೆ
ಸಂಸ್ಕೃತಿ ಅವಶ್ಯ ಎಂದಾದರೆ ಸ್ವಂತಿಕೆ ಬೇಕು
ಭಾರತೀಯ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆಗೆ ದಾಂಪತ್ಯದಲ್ಲಿನ ಸಂಪನ್ನತೆಗೆ ಶಕ್ತಿ ಬೇಕು. ಭಾರತದ ಮೇಲೆ ಅನ್ಯರ ದಾಳಿ, ಬ್ರಿಟೀಷರು ಹೇರಿದ ದಾಸ್ಯ ಎಲ್ಲಾ ಇತರ ಸಂಕಟಗಳು ಕಾಲಕಾಲಕ್ಕೆ ಎರಗಿ ನಮ್ಮನ್ನು ಘಾಸಿ ಗೊಳಿಸಿದ್ದರೂ, ಭಾರತೀಯ ಸಂಸ್ಕೃತಿಯ ಬೇರುಗಳು ಅದುರಿರಲಿಲ್ಲ. ಆದರೆ ಇಂದಿನ ಜಾಗತೀಕರಣದ ಕ್ರಿಯೆಯಲ್ಲಿ ಜಗತ್ತೆಲ್ಲಾ ಅಮೆರಿಕಾ ಆಗುತ್ತಿದೆ. ಕೇವಲ ಹಣ ಮಾತ್ರ ಮುಖ್ಯವಾಗಿದೆ. ಹಣಕ್ಕಾಗಿ ಪ್ರತಿಯೊಂದು ವಿದ್ಯೆಯನ್ನು, ಸಂಸ್ಕಾರವನ್ನು, ಭಾಷಾಶಕ್ತಿಯನ್ನು ಕೊಂಡುಕೊಳ್ಳುತ್ತಿದ್ದೇವೆ. ಹಿಂದೆ ವಿದ್ಯೆಎಂಬುದು ಭಾರತದಲ್ಲಿ ಮಾರಾಟದ ಸರಕಾಗಿರಲಿಲ್ಲ. ಆದರೆ ತಂದೆತಾಯಿಗಳು ವಿದ್ಯೆಯನ್ನು ಖರೀದಿಸುತ್ತಿದ್ದಾರೆ. ಟಿವಿ, ಮೋಬೈಲ್, ಕಂಪ್ಯೂಟರ್‌ಗಳು ಅನ್ಯವಾದ ಒಂದು ಮಾಯಾಜಾಲ ಬೀಸಿದೆ. ಮಾಯೆಯ ವಿನಾ ಜಗತ್ತಿಲ್ಲ. ಆದರೆ ಜಾnನಕ್ಕೆ ಸಮಾನವಾದುದು ಯಾವುದಿದೂ ಇಲ್ಲ ಹೀಗಾಗಿ ಮಾಯೆಯನ್ನೂ ಜಾnನವನ್ನೂ ಯುಕ್ತವಾಗಿ ಸಂಭಾಳಿಸಬೇಕಾಗಿದೆ. ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಮಾಯೆಯಾಗಿರುವುದರಿಂದಲೇ ಜಾnನದ ಅಂಕುಶ ದಾಂಪತ್ಯಕ್ಕೆ ಬೇಕು.
Subscribe to:
Posts (Atom)