Wednesday, 6 December 2017
ಮೂಲಾ ನಕ್ಷತ್ರದ ಸ್ತ್ರೀಯರಿಗೆ ತೊಂದರೆ ಆಗುತ್ತದೆ ಅನ್ನೋದು ಸತ್ಯವೇ?
ವಾಸ್ತವಗಳು ಏನೋ ಇರುತ್ತವೆ. ನಂಬಿಕೆಗಳು ನಮ್ಮನ್ನು ಹಣ್ಣು ಮಾಡುತ್ತವೆ. ವಿಜಾnನಿಗಳು ಭೂಕಂಪ ನಡೆದಾಗ ಸುನಾಮಿ ಅಲೆಗಳು ಅಪ್ಪಳಿಸಬಹುದೆಂಬ ಸೂಚನೆ ಕೊಡುತ್ತಲೇ ಇರುತ್ತಾರೆ. ಕೊಟ್ಟ ಸೂಚನೆಗಳೆಲ್ಲ ನೂರಾರು ಸಲ ಸುಳ್ಳೇ ಆದ ಉದಾಹರಣೆಗಳು ಇವೆ. ಇದರ ಅರ್ಥ ವಿಜಾnನವನ್ನು ಮೂರ್ಖತನದಿಂದ, ಅಜಾnನದ ಪರಮಾವಧಿ ಮೊತ್ತವನ್ನು ನಮ್ಮ ಮೇಲೆ ಹೇರಿದ ಅನರ್ಥಕಾರಕ ವಿಚಾರ ಎಂದು ಮೂದಲಿಸಲಾಗದು. ಯಾಕೆಂದರೆ ಸಮುದ್ರದ ಆಳದಿಂದ ಎದ್ದೇಳುವ ನೀರಿನ ಅಲೆಗಳನ್ನ ತಡೆಯುವ ದೈತ್ಯ ಶಕ್ತಿಯ ವಿಚಾರವನ್ನು ವಿಜಾnನ ತಿಳಿದಿರುವುದಿಲ್ಲ. ಅದನ್ನು ತಿಳಿಯಲು ಅದು ಇನ್ನೂ ಸ್ವಲ್ಪ ಕಾಲವನ್ನು ತೆಗೆದುಕೊಳ್ಳಬಹುದು. ಜೋತಿಷ್ಯ-ವಿಜಾnನವೂ ಹಲವಾರು ವಿಚಾರಗಳನ್ನು ಪ್ರತಿಪಾದಿಸಿದೆ. ನಷ್ಟ, ಕಷ್ಟ, ವ್ಯಕ್ತಿತ್ವಕ್ಕೆ ಧಕ್ಕೆ, ಸಾಲ ಶೂಲ ಅವಘಡ, ರೋಗ ರುಜಿನ, ಬಂಧನ ಭಯ, ಧನನಷ್ಟ, ಏಳ್ಗೆಯೇ ಇರದ ಶುಷ್ಕ ಕಾಲಾವಧಿ ಎಲ್ಲಾ ಇದ್ದು ಏನೂ ಇಲ್ಲ ಎಂದು ಸಂಚು ಹೂಡುವ ಏನೋ ಒಂದು ಪ್ರಾರಬ್ಧಕ್ಕೆ ಹಲವು ತೀವ್ರವಾದ ದೋಷ, ಯಾರದೋ ಶಾಪ, ಆತ್ಮೀಯರ ಅಗಲಿಕೆ ಕಟ್ಟಕಡೆಗೆ ವ್ಯಕ್ತಿಯ ಸಾವು ಸಂಭವಿಸಲಿದೆ ಎಂಬುದನ್ನೆಲ್ಲ ಮುಂಚೆಯೇ ತಿಳಿದು ವಿಶ್ಲೇಷಿಸಿ ಭಾರತೀಯ ಜೋತಿಷ್ಯ ಜಾnನ ತಿಳಿಸುತ್ತದೆ. ಇವು ಇನ್ನೂ ಕೆಲವು ಅನ್ಯ ಕಾರಣದಿಂದ ಊಹಿಸಿದಂತೆ ಸಂಭವಿಸದೆ ಉಳಿದ ಉದಾಹರಣೆಗಳು ಇವೆ. ಹೀಗಂತ ಮಾತ್ರಕ್ಕೆ ಜೋತಿಷ್ಯ ವಿಜಾnನವನ್ನು ನಿರಾಕರಿಸುವುದು ಸೂಕ್ತವಲ್ಲ.
ಮೂಲಾ ನಕ್ಷತ್ರದ ಕೇತು ಮತ್ತು ನಕ್ಷತ್ರ ದೇವತೆ
ಮೂಲಾ ನಕ್ಷತ್ರದ ವ್ಯಾಪ್ತಿ ಧನುಸ್ಸು ರಾಶಿಯಲ್ಲಿ ಸಮಾವೇಶಗೊಳ್ಳುತ್ತದೆ. ಧನುಸ್ಸು ಯುದ್ಧಗಳಿಂದಾಗಿ, ಭಯವನ್ನೂ ಆಯುಧವಾಗಿ ರಕ್ಷೆಯನೂ,° ಯುದ್ಧ ಅಥವಾ ರಕ್ಷಣೆಯ ಸಂದರ್ಭದಲ್ಲಿ ಜೀವನಾಶವನ್ನಾಗಲೀ, ರಕ್ತಪಾತ ನೋವು ಇತ್ಯಾದಿಗಳನ್ನು ಉಂಟು ಮಾಡುವುದರಿಂದ ಇದು ಅಗ್ನಿರಾಶಿ. ಆದರೆ ಈ ರಾಶಿಯ ಯಜಮಾನ ಜಾnನಕ್ಕೆ ಕಾರಣನಾಗಿರುವ, ಸಂತಾನಕ್ಕೆ ಕೊಂಡಿ ಕೂಡಿಸುವ ಧನಾಗಮನಕ್ಕೆ ಸಿದ್ಧಿ ಕೊಡುವ ಕೃತಿಗಳನ್ನು ಆಕೃತಿಗೆ ತಂದು ನಿಲ್ಲಿಸುವ ಗುರು. ಗುರುವು ಒಡೆಯನಾದ ಈ ರಾಶಿ ಒಟ್ಟೂ ಕ್ಷೇತ್ರವ್ಯಾಪ್ತಿ 30
ಡಿಗ್ರಿಗಳಲ್ಲಿ ಮೊದಲ 13 ಅಂಶ 20
ಕಲೆಗಳನ್ನು ಮೂಲಾ ನಕ್ಷತ್ರ ಹೊಂದಿರುತ್ತದೆ. ಮೂಲಾ ನಕ್ಷತ್ರವು ಸ್ತ್ರೀಯರ ಪಾಳಿಗೆ ಒಳಿತಿನ ನಕ್ಷತ್ರವಲ್ಲ ಎಂಬುದಾಗಿ ನಮ್ಮ ಜೋತಿಷ್ಯ ಶಾಸ್ತ್ರ ಪ್ರತಿಪಾದಿಸುತ್ತದೆ ಎಂದು ಹಲವರು ಹೇಳುತ್ತಾರೆ. ಆದರೆ ಹೀಗೆ ಹೇಳಿದ ಶಾಸ್ತ್ರವೇ ಕೆಲವು ಅಪವಾದಗಳನ್ನು ಒತ್ತಿ ಹೇಳುತ್ತದೆ. ಮೂಲಾ ನಕ್ಷತ್ರದ ಸ್ತ್ರೀಯೋರ್ವಳು ಅತ್ತೆ-ಮಾವನ ಮದುವೆಯಾಗಿ ಬಂದರೆ ಜೀವಕ್ಕೆ ಕೇಡು ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ ಎಂಬುದು ಸತ್ಯ. ಆದರೂ ವಾಸ್ತವವಾಗಿ ಇನ್ನಿತರ ಎಷ್ಟೋ ಕಾರಣಗಳಿಂದ ದೋಷಗಳು ನಿವಾರಣೆ ಆಗುತ್ತದೆ ಎಂಬುದೂ ಅಷ್ಟೇ ಸತ್ಯ.
ಮೊತ್ತ ಮೊದಲಾಗಿ ಮೂಲಾ ನಕ್ಷತ್ರದ ಸೊಸೆಯಂದಿರು ತಾವು ಮದುವೆಯಾಗಿ ಬಂದ ಮನೆಯ ಆರ್ಥಿಕ ಬಲಾಡ್ಯತೆಯನ್ನು ಸಂಸಾರದೊಳಗಿನ ಸಂತೋಷವನ್ನು ಜಾಸ್ತಿ ಮಾಡಿದ ಉದಾಹರಣೆಗಳೆ ಹೇರಳವಾಗಿದೆ. ಕಾರಣ ಇಷ್ಟೇ ಮೂಲಾ ನಕ್ಷತ್ರವನ್ನು ಒಳಗೊಳ್ಳುವ ಮನೆಯ ಧನುಸ್ಸು ರಾಶಿಯ ಅಧಿಪತಿ, ಗುರು ಇಡೀ ಜಾತಕವನ್ನು ತನ್ನ ಶಕ್ತಿ ಪ್ರಭಾವಗಳಿಂದ ಮೂಲಾ ನಕ್ಷತ್ರದ ದೋಷಗಳನ್ನು ನಿಯಂತ್ರಿಸಿ ಬಿಡುವುದಲ್ಲದೆ, ತನ ದೃಷ್ಟಿಯ ಫಲವಾದ ಸಾಮರ್ಥ್ಯದ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಒದಗಿಸುತ್ತಾನೆ. ಗುರು ಹಾಗೂ ಕೇತುವಿನ ಶಾಂತಿಯನ್ನು ಮಾಡಿಸುವುದರ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಗುರು ಹಾಗೂ ಕೇತು ಪೀಡಾ ಪರಿಹಾರ ಸ್ತೋತ್ರ ಪಠಣಗಳ ಮೂಲಕ ಮೂಲಾ ನಕ್ಷತ್ರ ದೋಷ ಪರಿಹಾರವಾಗುತ್ತದೆ. ಜಾತಕದಲ್ಲಿ ಗುರುವೂ, ಕೇತು ಬಲವಾಗಿ ಇದ್ದಾಗ ಗುರು ಶಾಂತಿ, ಕೇತು ಶಾಂತಿಯೂ ಆದಾಗ ನಕ್ಷತ್ರ ದೇವತೆ ನಿಯತಿಯ ದೋಷಗಳೂ ಕರಗಿ ಹೊಸದೇ ಬದಲಾವಣೆಗೆ ತೆರೆದುಕೊಳ್ಳಲು ಸಹಾಯವಾಗುತ್ತದೆ.
ಅಲಕ್ಷಿ$¾ ಮತ್ತು ಮೂಲಾ ನಕ್ಷತ್ರ:
ನಮ್ಮಲ್ಲಿ ಅಲಕ್ಷಿ$¾ ಎಂಬ ಶಬ್ದವೊಂದು ಭಾರಿ ಸದ್ದು ಮಾಡುತ್ತಿರುತ್ತದೆ. ಲಕ್ಷಿ$¾ ಎಂಬುದು ಇದೆ. ಅವಳೇ ಮಹಾಮಾಯೆ. ಜಗತ್ತಿನ ಜನನಕ್ಕೆ ಕಾರಣಳಾಗಿ ಇಂಥ ಒಂದು ಬೃಹತ್ ವಿಶ್ವವನ್ನು ತನ್ನ ಮಾಯೆಯಿಂದ ಸ್ಪಷ್ಟಗೊಳಿಸಿದ ಮಹಾನ್ ತಾಯಿ. ಇವಳೇ (ನಮ್ಮ ಆಧುನಿಕ ಜಾnನ ಪ್ರತಿಪಾದಿಸುತ್ತಿರುವ, ಕಾಳ ವ್ಯಾಪ್ತಿ ಹಾಗೂ ಸಂಘರ್ಷ ಹಾಗೂ ಶಕ್ತಿಯುತವಾದ ಸ್ಫೋಟವೊಂದರಿಂದಾಗಿ ಮೈತಳೆದ, ಊಹಿಸಲು ಸಾಧ್ಯವಾಗದ ಆಕಾಶದೊಳಗಿನ ಅತಿಸೂಕ್ಷ್ಮಗಳನ್ನು) ಪ್ರಪಂಚಕ್ಕೆ ಎಲ್ಲವನ್ನೂ ಒದಗಿಸುವ ಪ್ರಚಂಡ ಶಕ್ತಿಯಾಗಿ, ಮಾತೆಯಾಗಿ ಹರಿಹರಬ್ರಹ್ಮಾದಿಗಳು ಅಣುವಿನ ರೂಪದಲ್ಲಿದ್ದವರನ್ನು ವಿರಾಟ ರೂಪಕ್ಕೆ ಹಿಗ್ಗಿಸಿದವಳು ಎಂಬ ವಿಸ್ತಾರವಾದ ವಿವರಣೆ ನಮ್ಮ ಪುರಾಣಗಳಲ್ಲಿ ಬರುತ್ತದೆ. ಇವಳು ಶಂಖ, ಚಕ್ರ, ಗದಾ, ಹಸ್ತಳಾಗಿದ್ದಾಳೆ. ಎಂಬುದು ನಮ್ಮ ಭಾರತೀಯ ನಂಬಿಕೆ. ಜಗತ್ತಿನಲ್ಲಿ ಸಕಲ ಗ್ರಹ ನಕ್ಷತ್ರಾದಿಗಳ ಚಲನಶೀಲತೆಯ ವೇಗದಿಂದಾಗಿ ಒಂದು ರೀತಿಯ ಶಂಖನಾದ ಕೇಳಿ ಬರುತ್ತದೆ. ಸೂರ್ಯನ ಪರಿಭ್ರಮಣದ ಸುತ್ತಲಿನ ಬಿರುಸುತನದ ಕಾರಣವಾಗಿ ಸೂರ್ಯನ ಮೂಲಕವೇ ಓಂ ಎನ್ನುವ ಶಬ್ಧಚೈತನ್ಯದ ಮೂಲಕ ಚಿಮ್ಮಿಕೊಳ್ಳುತ್ತದೆ ಎಂಬುದನ್ನು ಇತ್ತೀಚೆಗೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ವರದಿಯಲ್ಲಿ ತಿಳಿಸಿದೆ. ವಿಜಾnನದ ಸಂಶೋಧನೆಗಳು ಆಶ್ಚರ್ಯಕಾರಕ ರೀತಿಯಲ್ಲಿ ಭಾರತೀಯರು ನಂಬಿರುವ ವಿಚಾರಗಳನ್ನೇ ವಿಶ್ವದ ವಿಚಾರವಾಗಿ ಹೌದು ಇದು ಸತ್ಯ ಎಂಬಂತೆ ಆಗಾಗ ಹೊರಹಾಕುತ್ತಿರುತ್ತದೆ. ಹೀಗಾಗಿ ಭಾರತೀಯರ ನಂಬಿಕೆ ಕಥೆಗಳ ಮೂಲಕವಾಗಲಿ, ಪುರಾಣಗಳ ಮೂಲಕವಾಗಲಿ ಒಂದು ಮಂತ್ರದೃಷ್ಟಾರ ವಿಶೇಷತೆಯಿಂದಾಗಿ ಗ್ರಹಿಸಿದ ವಿಚಾರಗಳು ಅಂದರೆ ನಮ್ಮ ಕಲ್ಪನೆಯಾ ತಪಸ್ಸು, ಧ್ಯಾನ ಇತ್ಯಾದಿಗಳು ಕೇವಲ ಮಂತ್ರಗಳ ಸಹಾಯದಿಂದಲೇ ಜಾnನವನ್ನು ಅತಿ ಪೂರ್ವದಲ್ಲೇ ಹೊರಹೊಮ್ಮಿಸಿದೆ.
ಅಲಕ್ಷಿ$¾ ಎಂಬ ಕಲ್ಪನೆಯನ್ನು ಕೂಡಾ ಕ್ರಿಯಾಶೀಲತೆಯಿಂದ ಇರದಿದ್ದರೆ ಲಕ್ಷಿ$¾ಯೇ ಅಲಕ್ಷಿ$¾ಯಾಗಿ ದರಿದ್ರವು ಆವರಿಸಿಕೊಳ್ಳುತ್ತದೆ ಎಂಬುದನ್ನೂ ವ್ಯಾಖ್ಯಾನಿಸಿದೆ ಹೊರತು, ಅಲಕ್ಷಿ$¾ ಎಂಬುದು ವಾಸ್ತವದಲ್ಲಿ ಇಲ್ಲ. ನಮ್ಮ ದುರಾದೃಷ್ಟಗಳೆಲ್ಲ ಅಲಕ್ಷಿ$¾ ಎಂಬ ಶಬ್ದದಿಂದ ಗುರುತಿಸಲ್ಪಟ್ಟಿದೆ. ಮೂಲಾ ನಕ್ಷತ್ರದ ಅಧಿಪತಿ ನಿಯತಿ ಎಂಬ ದೇವತೆ. ಆದರೆ ಅದು ಅಲಕ್ಷಿ$¾ಯಲ್ಲ. ದುರದೃಷ್ಟದ ನಕ್ಷತ್ರವಲ್ಲ. ಮೂಲಾ ಎಂದರೆ ಎಲ್ಲಕ್ಕಿಂತ ಮೊದಲು ಎಂದರ್ಥ. ಎಲ್ಲಕ್ಕಿಂತ ಮೊದಲಲ್ಲಿ ಕೆಲವು ಅಡಚಣೆಗಳು ಎಲ್ಲಾ ಕೆಲಸದಲ್ಲೂ ಇರುತ್ತದೆ. ಅದನ್ನು ತೊಡೆದು ಒಳಿತಿಗೆ ದಾರಿ ಮಾಡಿಕೊಳ್ಳುವ ಕ್ರಿಯಾಶೀಲತೆ ಜೀವನ ಶೈಲಿಯಲ್ಲಿ ಸಮ್ಮಿಳಿತವಾದಾಗ, ಹೆಣ್ಣು ಮೂಲಾ ನಕ್ಷತ್ರದಲ್ಲಿ ಜನಿಸಿದ ಮಾತ್ರಕ್ಕೆ ಕೆಟ್ಟದ್ದನ್ನು ಅತ್ತೆ ಮಾವಂದಿರ ಸಾವನ್ನು, ಗಂಡನ ಸಹೋದರರಿಗೆ ಕೇಡನ್ನು ತರುವುದಿಲ್ಲ. ಗುರು ಹಾಗೂ ಇತರ ಉತ್ತಮ ಯೋಗಕಾರಕ ಗ್ರಹಗಳು ಅಕಸ್ಮಾತಾಗಿ ದೋಷ ಒದಗಿದರೂ ತೊಡೆದು ಹಾಕು ಶಕ್ತಿ ಪಡೆದಿರುತ್ತಾರೆ.
ಸುನಾಮಿ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತದೆ ಎಂಬ ಎಚ್ಚರಿಕೆಯಂತೆ ಆದರೆ ಸುನಾಮಿಯನ್ನು ತಡೆಯುವ ಶಕ್ತಿಗಳು ಇನ್ನೆಷ್ಟೋ ಕಾರ್ಯಕಾರಣ ಸಂಬಂಧಗಳಿಂದ ನಿಷ್ಕ್ರಿಯವಾಗುತ್ತದೆ. ಮೂಲಾ ನಕ್ಷತ್ರದ ದೋಷಗಳು ಕೂಡಾ ಇದೇ ರೀತಿ ಅನ್ಯ ಅನೇಕ ಅಧಿಕ ಸಂಯೋಜನೆಗಳ ಫಲವಾಗಿ ಜಾತಕದಲ್ಲಿ ನಿವಾರಣೆಯಾಗಿರುತ್ತದೆ. ಸೂಕ್ತವಾದುದನ್ನು ಗ್ರಹಿಸಿ ಹೇಳುವ ಜ್ಯೋತಿಷ ದೋಷಗಳು ಪರಿಹಾರವಾಗಿದೆ ಎಂಬುದನ್ನು ಗುರುತಿಸಿ ಹೇಳಬಲ್ಲ. ಸೂಕ್ತ ಸರಳ ಪರಿಹಾರಗಳನ್ನು ಸೂಚಿಸಬಲ್ಲ.
-sangraha
Read more at https://www.udayavani.com/kannada/news/astrology-articles/218202/is-it-true-that-the-women-of-the-mula-star-are-in-trouble#iqhemcK2sGY7iTl7.99
ಜಾತಕ ಕುಂಡಲಿಯಲ್ಲಿ ನಿಮ್ಮ ಮಾತಿನ ನೈಪುಣ್ಯತೆ ಕಾಣುತ್ತದೆ
ಮಾತಿನ ಸ್ಥಾನದ ಹಿರಿತನ ತಾಯಿ ಶ್ರೀ ಸರಸ್ವತಿಯದ್ದು. ಆದರೆ ದುರ್ದೈವವಶಾತ್ ಈ ಮಾತಿನ ಸ್ಥಾನವಾದ ಎರಡನೇ ಮನೆಗೆ ಜಾತಕ ಕುಂಡಲಿಯಲ್ಲಿ ಸರಿಯಾದ ಶುಭಗ್ರಹಗಳ ಅನುಪಮ ಸುಹಾಸಕರೆತೆ ಸಿಗದಿರುವುದು, ದುಷ್ಟಗ್ರಹಗಳು ತಮ್ಮ ಅಧಿಪತ್ಯವನ್ನು ತಮ್ಮ ಮಾತಿನ ವಿಷಯವಾಗಿ ಹೊಂದಿರುವುದು ದುಷ್ಟಗ್ರಹಗಳ ಸಂಸರ್ಗ ದೃಷ್ಟಿಗಳಿಂದ ಮಾತಿನ ಮನೆ, ಮಾತಿನ ಮನೆಯ ಅಧಿಪತಿ ಭ್ರಷ್ಟಗೊಳ್ಳುವುದು ಸಾಮಾನ್ಯ. ಆದರೆ ಎಲ್ಲವೂ ಒಳಿತೆನಿಸಿವ ಮಟ್ಟದಲ್ಲಿದ್ದಾಗ ಮಾತು
ಒಬ್ಬನಿಗೆ ವರವಾಗಿ ಪರಿಣಮಿಸುತ್ತದೆ.
ಭಾರತೀಯ ಜೋತಿಷ್ಯದಲ್ಲಿ ಒಬ್ಬ ವ್ಯಕ್ತಿಯ ಜನ್ಮಕುಂಡಲಿಯ ಮೇಲಿಂದ ಆ ವ್ಯಕ್ತಿಯ ಮಾತಿನ ವೈಖರಿಯನ್ನು ಮಾತಿನಿಂದಾಗಿ ತನ್ನ ಜೀವನದ ಯಶಸ್ಸು ಅಥವಾ ಅಪಯಶಸ್ಸನ್ನು ನಿಷ್ಕರ್ಷೆ ಮಾಡಬಹುದು. ಮಾತು ಮಾಣಿಕ್ಯ, ಮಾತೇ ಸಕಲ ಸಂಪದಕ್ಕೆ ದಾರಿ ಎಂದು ತಿಳಿದವರು ಹೇಳುತ್ತಾರೆ. ಬಸವಣ್ಣನವರು ಕೂಡಾ ತಮ್ಮ ವಚನದಲ್ಲಿ ಮಾತಿನ ವೈಶಿಷ್ಟ್ಯವನ್ನು ಬಣ್ಣಿಸುತ್ತಾ ಮಾತು ಮುತ್ತಿನ ಹಾರದಂತಿರಬೇಕು ಎನ್ನುತ್ತಾರೆ. ಮಾತು ಸ್ಫಟಿಕದ ಶಲಾಕೆಯಂತೆ ಮನೋಹರವಾಗಿರಬೇಕು ಎಂದು ಹೇಳುತ್ತಾರೆ. ಮಾತಿನ ಸೊಗಸು ಕಲ್ಲಾಗಿರುವ ಲಿಂಗ ಕೂಡಾ ಅಹುದಹುದು ಎನ್ನಬೇಕು ಎನ್ನುತ್ತಾರೆ.
ಇದೆಲ್ಲ ಸರಿ, ಆದರೆ ಬಲ್ಲವರು ಮಾತೇ ಜೋತಿರ್ಲಿಂಗ ಎಂದು ಹೇಳುವುದು ಒಂದೆಡೆಯಾದರೆ, ಮಾತು ಬೆಳ್ಳಿ ಮೌನ ಬಂಗಾರ ಎಂಬ ಬಲ್ಲವರ ಇನ್ನೊಂದು ಅಭಿಪ್ರಾಯ ಕೂಡಾ ಮಾತಿನ ಬಗೆಗಾಗಿ ಇದೆ. ಒಟ್ಟಿನಲ್ಲಿ ತಿಳಿದವರ ಮಾತುಗಳು ಮಾತಿನ ಬಗೆಗೆ ಹೀಗೆಲ್ಲ ಬಂತೆಂಬುದು ಒಂದೆಡೆಯಾದರೆ, ಜಾನಪದರು ಮಾತಿನ ಬಗೆಗೆ ಹೇಳುವ ಇನ್ನೊಂದು ನಾಣ್ನುಡಿ ಅದ್ಭುತವಾಗಿದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು. ನಿಜ ಒಂದೇ ಒಂದು ಮಾತಿನಿಂದ ಮನೆತನಕ್ಕೆ ಮನೆತನವೇ ತಾಪತ್ರಯಕ್ಕೆ ಬೀಳುವ ಜತೆ ಕುಟುಂಬದ ಒಬ್ಬ ವ್ಯಕ್ತಿಯ ಮಾತಿನಿಂದ ಮನೆ ಇಬ್ಭಾಗವಾಗಿ, ಕುಟುಂಬದ ಮಂದಿ ಎಲ್ಲ ಬೇರಾಗುವ ದುರಂತವನ್ನುನಾವು ಕಂಡಿದ್ದೇವೆ.
ಜನ್ಮ ಕುಂಡಲಿಯಲ್ಲಿ ಎರಡನೇ ಮನೆ ಮಾತಿನ ಮನೆ ಜನ್ಮ ಕುಂಡಲಿಯಲ್ಲಿ ಎರಡನೇ ಮನೆ ಮಾತನ್ನು ಆ ವ್ಯಕ್ತಿಯ ಕುರಿತಾಗಿ ಪ್ರತಿಫಲಿಸುತ್ತದೆ. ಇದು ಕುಂಡಲಿಯಲ್ಲಿ ಮಾರಕ ಸ್ಥಾನವೂ ಹೌದು. ಈ ಮನೆಯ ಅಧಿಪತಿ ಮಾರಕನೂ ಆಗಿರುತ್ತಾನೆ. ಎರಡನೇ ಮನೆಯಲ್ಲಿರುವ ಗ್ರಹ ಕೂಡಾ ಮಾರಕ ಅಂಶಗಳನ್ನು ಪಡೆದುಬಿಡುತ್ತಾನೆ. ಎರಡನೇ ಮನೆಯ ಅಧಿಪತ್ಯವಾಗಲೀ, ಎರಡನೇ ಮನೆಯಲ್ಲಿರುವ ಗ್ರಹವೇ ಇರಲಿ, ಶುಭ ಗ್ರಹಗಳಾದರೂ ತಮ್ಮ ಅಂತರಂಗದಲ್ಲಿ ಮಾರಕ ಸ್ಪಂದನಗಳನ್ನು ಹೊಂದಿರುತ್ತವೆ. ಹೀಗಾಗಿ ಮೇಧಾ ಶಕ್ತಿ ಮತ್ತು ಪ್ರಸಂಗಾವಧಾನಗಳು ಮಾತಿನ ವಿಷಯದಲ್ಲಿ ಈ ಗ್ರಹಗಳ ಮೂಲಕ ವ್ಯಕ್ತಿಯೊಬ್ಬನಿಗೆ ಅವರ ಜಾತಕದಲ್ಲಿ ಒದಗಿಬಂದರೆ ಮಾತುಗಳು ಬಂಗಾರವಾಗುತ್ತವೆ.
ಅತಿಯಾದ ಮಾತು ಅಪಾಯಕಾರಿಯಾದದ್ದು. ಪೂರ್ತಿ ಮಾತನಾಡಲು ಬಾರದೆ ಚಡಪಡಿಸುವ ಮಾತೇ ಯುಕ್ತ ಸಂದರ್ಭದಲ್ಲಿ ಹೊರಡದೆ ಮೂಕವಾಗಿ ಮಹತ್ವದ್ದೊಂದು ಚರ್ಚೆ ಹಾಗೂ ಕಾಗದ ಪತ್ರಗಳ ಒಡಂಬಡಿಕೆಯ ಸಂದರ್ಭದಲ್ಲಿ ಕಳೆದುಕೊಳ್ಳುವ ಆಮೇಲೆ ಹಳಹಳಿಸುವ ದುರ್ಭರ ಸ್ಥಿತಿಗೆ ಸಿಲುಕಿಕೊಳ್ಳುವುದೂ ತಪ್ಪು.
ಮಾತಿನ ಸ್ಥಾನದ ಹಿರಿತನ ತಾಯಿ ಶ್ರೀ ಸರಸ್ವತಿಯದ್ದು. ಆದರೆ ದುರ್ದೈವವಶಾತ್ ಈ ಮಾತಿನ ಸ್ಥಾನವಾದ ಎರಡನೇ ಮನೆಗೆ ಜಾತಕ ಕುಂಡಲಿಯಲ್ಲಿ ಸರಿಯಾದ ಶುಭಗ್ರಹಗಳೊಂದಿಗೆ ಹೊಂದಾಣಿಕೆ ಯಾಗದಿರುವುದು, ದುಷ್ಟಗ್ರಹಗಳು ತಮ್ಮ ಅಧಿಪತ್ಯವನ್ನು ತಮ್ಮ ಮಾತಿನ ವಿಷಯವಾಗಿ ಹೊಂದಿರುವುದು ದುಷ್ಟಗ್ರಹಗಳ ಸಂಸರ್ಗ ದೃಷ್ಟಿಗಳಿಂದ ಮಾತಿನ ಮನೆ, ಮಾತಿನ ಮನೆಯ ಅಧಿಪತಿ ಭ್ರಷ್ಟಗೊಳ್ಳುವುದು ಸಾಮಾನ್ಯ. ಆದರೆ ಎಲ್ಲವೂ ಒಳಿತೆನಿಸಿವ ಮಟ್ಟದಲ್ಲಿದ್ದಾಗ ಮಾತು ಒಬ್ಬನಿಗೆ ವರವಾಗಿ ಪರಿಣಮಿಸುತ್ತದೆ.
ಆಡಿದ್ದು ಮಾಡಲಾಗದೆ ಸೋತ ಜುಲ್ಫಿಕರ್ ಭುಟ್ಟೋ
ಭುಟ್ಟೋ ಕುಟುಂಬ ಯಾರಿಗೆ ತಾನೆ ತಿಳಿದಿಲ್ಲ? ಭಾರತೀಯರಿಗಂತೂ ಭುಟ್ಟೋ ಒಂದರ್ಥದಲ್ಲಿ ಆಪ್ತರ ಸಾಲಿಗೆ ಸೇರುವ ಹಾಗೆ ಕಂಡರೂ ಭಾರತದೊಂದಿಗಿನ ದ್ವೇಷವನ್ನು ಪ್ರತಿಪಾದಿಸುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಕುಟುಂಬವಾಗಿ, ಕಾರಣವಲ್ಲದ ಕಾರಣಕ್ಕೆ ಹುತಾತ್ಮರಾಗುವ ಸ್ಥಿತಿ ಕಂಡು ಕನಿಕರ ಸಿಟ್ಟು ಭಾರತೀಯರಿಂದ ಪಡೆಯುವ ವಿಪರ್ಯಾಸ ಹೊಂದಿದ ಕುಟುಂಬ. ಭಾರತೀಯರನ್ನು ವಿಶ್ವಸಂಸ್ಥೆಯ ತನ್ನ ಭಾಷಣದಲ್ಲಿ ನಾಯಿಗಳು ಎಂದು ಕರೆದ ವ್ಯಕ್ತಿ ಜುಲ್ಫಿಕರ್ ಆಲಿ ಭುಟ್ಟೋ. ಭಾರತೀಯರ ವಿರುದ್ಧ ಧರ್ಮಯುದ್ಧ ಸಾರಿ 1971ರಲ್ಲಿ ನಡೆದ ಯುದ್ಧದಲ್ಲಿ ಸೋತು ಸುಣ್ಣಾಗಿ ಲಕ್ಷಕ್ಕೂ ಮೀರಿ ಸೆರೆಸಿಕ್ಕ ತನ್ನ ಯೋಧರನ್ನು ಬಿಡುಗಡೆ ಮಾಡಿ ಎಂದು ಅಂಗಲಾಚಿದ ವ್ಯಕ್ತಿ.
ಜಾತಕದಲ್ಲಿ ಕರ್ಕಾಟಕ ರಾಶಿ ಇವರ ಮಾತಿನ ಮನೆ. ಇದರ ಅಧಿಪತಿಗೆ ರಾಹುದೋಷ ಬೇರೆ. ಯುಕ್ತವಲ್ಲದ ಸ್ಥಾನದಲ್ಲಿ ಚಂದ್ರ ದುರ್ಬಲಾತಿ ದುರ್ಬಲ. ಮೇಲಿಂದ ಚಂದ್ರನಿಗೆ ದುರ್ದೈವದಿಂದ ಹತ್ತಿದ ಕೇಮದ್ರುಮದಂಥ ಕೆಟ್ಟ ಯೋಗ ದುಷ್ಟರಾದ ಶನಿ ಕೇತು ಕುಜರ ದೃಷ್ಟಿಯ ಪ್ರಭಾವ ಕೂಡಾ ಚಂದ್ರನ ಮೇಲೆ.
ಮನೋಹರತೆಯನ್ನು ಮಾತಿಗೆ ಕಲ್ಪಿಸಿಕೊಡಬೇಕಾದ ಚಂದ್ರ ನಷ್ಟದ ಮನೆಯಲ್ಲಿ ಸ್ಥಿತನಾಗಿ ದುಷ್ಟರ ಪ್ರಭಾವದಿಂದ ಮಾತಿಗೂ, ನಡವಳಿಕೆಗೂ ಹೊಂದಾಣಿಕೆ ಇರದೆ ಭುಟ್ಟೋ ಪರದಾಡಿದ್ದು ಅತಿಂಥ ರೀತಿಯಲ್ಲಲ್ಲ. ಮರಣಾಧಿಪತಿಯಾದ ಶನೈಶ್ಚರನ ಮುಖ್ಯ ದಶಾಕಾಲವೂ ಚಂದ್ರನ ಭುಕ್ತಿಯೂ ಇದ್ದಾಗ ಇದೇ ಚಂದ್ರನ ಸಕಾರಾತ್ಮಕವಲ್ಲದ ಸ್ಪಂದನಗಳು ಶನೈಶ್ಚರನು ಸೂಚಿಸುವ ಸೆರೆಮನೆಯ ಗೋಳು ಇತ್ಯಾದಿ ಸೇರಿ ಆಕಾಲದ ಸರ್ವಾಧಿಕಾರಿ ಪಾಕಿಸ್ತಾನದ ಜಿಯಾ ಉಲ್ ಹಕ್‌ರಿಂದ ನೇಳುಗಂಬ ಏರಿದ್ದು ಭುಟ್ಟೋ ಸ್ಥಿತಿಯಾಯ್ತು. ಭುಟ್ಟೋ ಆಡಿದ ಕೊನೆಯ ಮಾತು ನಾನು ನಿಷ್ಪಾಪಿ ಮುಗ್ಧ ಎಂದು. ಜಿಯಾ ವೈಯುಕ್ತಿಕವಾಗಿ ಆಡಿದ ಖಾಸಗಿ ಸ್ವರೂಪದ ಭುಟ್ಟೋ ಮಾತುಗಳಿಂದ ಅಪಮಾನಕ್ಕೊಳಗಾಗಿ ಭುಟ್ಟೋ ಎಂದರೆ ವ್ಯಾಗ್ರರಾಗುತ್ತಿದ್ದರು ಎಂಬ ವದಂತಿಯೂ ಇದೆ. ಇದು ಹೌದಾದರೆ ಮಾತು ಒಬ್ಬ ವ್ಯಕ್ತಿಯ
ಜೀವನ್ಮರಣದ ಪರಿಸ್ಥಿತಿಯಲ್ಲಿ ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ.
ಮಾತಿನ ಮಲ್ಲ ಚರ್ಚಿಲ್
ಭಾರತೀಯರಿಗೆ ಸ್ವಾತಂತ್ರ್ಯ ನೀಡಿದರೆ ಅದು ಸ್ವಾರ್ಥ, ರಕ್ತ ಹೀರುವ ಲಂಪಟರ ಕೈಗೆ ಸಿಕ್ಕಿ ದೇಶ ನರಳುವಂತಾಗುತ್ತದೆ ಎಂದು ಚರ್ಚಿಲ್ ಗುಡುಗಿ ತನ್ನ ದೇಶದ ಸಂಸತ್ತಿನಲ್ಲಿ ಭಾರತದ ಸ್ವಾತಂತ್ರ್ಯದ ವಿಚಾರದಲ್ಲಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದರು. ಭಾರತೀಯರಿಗಿದು ಕಾದಸೀಸದಂತಿದ್ದರೂ ಇಂದಿನ ಪರಿಸ್ಥಿತಿ ಗಮನಿಸಿದಾಗ ಚರ್ಚಿಲ್ ಮಾತು ಸತ್ಯವಾಯ್ತಲ್ಲ ಎಂದು ಅನಿಸದಿರದು.
ಹಿಟ್ಲರ್ ದಾಳಿಯಿಂದ ಬ್ರಿಟನ್ ತತ್ತರಿಸಿ ಕಂಗಾಲಾದರೂ, ಪ್ರಧಾನಿಯಾಗಿ ದೇಶದ ಜನರಲ್ಲಿ ಸೋಲುತ್ತಿರುವುದು ದೇಶ ಬ್ರಿಟನ್ ಅಲ್ಲ ಎಂದು ದೈರ್ಯ ಹಾಗೂ ಆತ್ಮವಿಶ್ವಾಸವನ್ನು ತನ್ನ ವಾಕ್ ಶಕ್ತಿಯಿಂದ ಸದಾ ತುಂಬುತ್ತಲೇ ಇದ್ದ. ಭರವಸೆ ಕೊಡುತ್ತಿದ್ದ. ಚರ್ಚಿಲ್ ಬಗ್ಗೆ ಜನಕ್ಕೆ ವಿಶ್ವಾಸವಿತ್ತು. ಅವನ ಮಾತಿನ ಶಕ್ತಿ ಅದು. ನಿಜ, ಚರ್ಚಿಲ್ ಮಾತು ಉಳಿಸಿಕೊಂಡಿದ್ದ. ಶುಭ ಗ್ರಹಗಳಾದ ಗುರು, ಶುಕ್ರ ಹಾಗೂ ಬುಧ ಗ್ರಹಗಳ ಶಕ್ತಿ ಮಾತಿನ ಮಂಟಪದಲ್ಲಿ ಚರ್ಚಿಲ್ ಅದ್ಭುತನೆನಿಸಲು ಅವಕಾಶ ನೀಡಿದವು. ಕೇತುದೋಷ ಕೆಲವೊಮ್ಮೆ ಮಾತಿನಲ್ಲಿ ಉಗ್ಗು ತರುತ್ತಿತ್ತು. ಬಾಲ್ಯದಲ್ಲಿನ ತಂದೆತಾಯಿಗಳ ಆರೈಕೆಯ ಕೊರತೆ ಹಾಗೂ ಕೇತುದೋಷ ಈ ಉಗ್ಗನ್ನು ಆಗಾಗ ಕಾಡುತ್ತಿತ್ತು.
sangraha
Read more at https://www.udayavani.com/kannada/news/multifaceted/223010/your-speech-skills-can-be-found-in-horoscope-kundali#7pv5tv1lSHjD5bWX.99
ದತ್ತಾತ್ರೇಯ ಆರಾಧನೆ ಏಕೆ ಮಾಡುತ್ತಾರೆ ಗೊತ್ತಾ?
ಬ್ರಹ್ಮಜ್ಞಾನವನ್ನು ತರ್ಕದಿಂದಾಗಲೀ, ಚರ್ಚೆಯ ನೆಲೆಯಲ್ಲಾಗಲೀ ಪೂರ್ತಿ ತಿಳಿದುಕೊಂಡೆ ಎಂದು ಹೇಳಲಾಗದು. ಬ್ರಹ್ಮನನ್ನು ತಿಳಿದುಕೊಳ್ಳುವ ಮುನ್ನ ನಮ್ಮ,ನಮ್ಮ ಮಿತಿ ನಮಗೆ ಮೊತ್ತ ಮೊದಲಿನ ಗೋಡೆಯೊಂದನ್ನು ನಿರ್ಮಿಸುತ್ತದೆ.ಹಾಗಾದರೆ ಈ ಮಿತಿಗಳೇನು? ಅವು ನಮ್ಮ ಪಂಚೇಂದ್ರಿಯಗಳು. ಪಂಚೇಂದ್ರಿಯಗಳು ಧರ್ಮ, ಅರ್ಥ,ಕಾಮ ಮೋಕ್ಷಗಳನ್ನು ಸಂಪನ್ನ ಗೊಳಿಸಿಕೊಳ್ಳಲು ವಜ್ರಾಯುಧಗಳೇ ಆದರೂ ಕಣ್ಣು, ಮೂಗು, ನಾಲಿಗೆ, ಚರ್ಮಗಳು ಬ್ರಹ್ಮನನ್ನು ಹುಡುಕಿ ಹಿಡಿಯಲು ಹೊರಟಾಗ ತಂತಮ್ಮ ಕೆಲಸಗಳಲ್ಲಿ ಸೋಲುತ್ತವೆ. ಪಂಚೇದ್ರಿಯಗಳು ಪಂಚಭೂತಗಳನ್ನು ಸಮನಾಗಿ ಗುರುತಿಸಲಾರವು. ಮಣ್ಣನ್ನು ಗುರುತಿಸಬಹುದು. ಬೆಂಕಿಯನ್ನು ಗುರುತಿಸಬಹುದು. ನೀರನ್ನು ಗುರುತಿಸಬಹುದು. ಆದರೆ ಗಾಳಿಯನ್ನು ಕೇವಲ ಚರ್ಮ ಮಾತ್ರ ಗ್ರಹಿಸಬಲ್ಲದು. ಕಣ್ಣಿನ ಸೋಲು ಗಾಳಿಯನ್ನು ಗುರುತಿಸುವಾಗ ಅನಿವಾರ್ಯ.
ಗಾಳಿಯನ್ನು ಅದು ನೋಡಲಾರದು. ನಾಲಿಗೆ, ಕಿವಿ, ಮೂಗುಗಳ ಸೋಲು ಕಣ್ಣಿನ ಸೋಲಿಗಿಂತ ಜಾಸ್ತಿ. ಮಣ್ಣನ್ನು ನಾಲಿಗೆ ಗುರುತಿಸಲಾರದು. ಕಿವಿಯಾಗಿ ಗುರುತಿಸದು. ಹೀಗೆ ನಮ್ಮ ವಾದಸರಣಿ ನಮ್ಮ ಬಗ್ಗೆ ಪಂಚೇಂದ್ರಿಯಗಳ ಮೂಲಕ ಪಂಚಭೂತಗಳನ್ನು ಬಯಸುತ್ತದೆ. ಪಂಚಭೂತಗಳಿಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುವುದರತ್ತ ಪ್ರಯತ್ನ ಇದ್ದಂತಿದೆ. ಹೀಗಾಗಿ ಇಲ್ಲಿ ಎಲ್ಲವೂ ಒಂದು ನಾಣ್ಯದಂತೆ ವರ್ತಿಸುತ್ತ ಹೋಗುತ್ತದೆ. ದೇವರನ್ನು ತಿಳಿಯುವಾಗ ಒಂದು ಬಿಂದುವಿನ ಮೂಲಕವೇ ಅನಂತ ವ್ಯಾಪ್ತಿಯ ಬ್ರಹ್ಮನನ್ನು ಅರಿಯಬೇಕು. ಉದ್ದ ಅಗಲ ದಪ್ಪಗಳಿಲ್ಲದ ಸೂಕ್ಷ್ಮವೇ ಬಿಂದು ಎಂಬುದನ್ನು ನಾವು ಜಾnನದ ಪಾಠದಲ್ಲಿ ಬಾಯಿಪಾಠ ಮಾಡುತ್ತ ಬಂದಿದ್ದೇವೆ. ಹಾಗಾದರೆ ಬಿಂದು ಎಂದರೆ ಏನು? ಒಂದು ಕಲ್ಪನಾ ಅಸ್ತಿತ್ವ. ಆದರೆ ಕಲ್ಪನೆಯ ಆಸ್ತಿತ್ವದಲ್ಲಿ ಸಮಾವೇಶಗೊಳ್ಳುವ ಬಿಂದುವಿನ ಚಲನೆ ರೇಖೆಯಾಗುತ್ತದೆ. ಇದು ಕಣ್ಣಿಗೆ ಕ್ಷೀಣವಾಗಿ ಕಾಣಿಸುತ್ತದೆ.
ದತ್ತಾತ್ರೇಯನು ಶಕ್ತಿ ಕೊಡುವ ಬಗೆ
ಒಂದು ಕತೆ ಇದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ್ಯದ ಅಧಿಪತಿ. ಮಧ್ಯ ಪ್ರದೇಶದಲ್ಲಿ ಹೈಹಯಸ ರಾಜವಂಶ ನರ್ಮದಾ ನದಿ ತೀರೆದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮದಿಂದಲೂ ಜನರಿಗೆ ಪ್ರಿಯರಾದವರಾಗಿಯೂ ಆಡಳಿತ ನಡೆಸಿಕೊಂಡು ಬಂದಿದ್ದರು. ಕೃತವೀರ್ಯನಿಗೆ ಮಕ್ಕಳಿರದೆ ಚಿಂತೆಯಾದಾಗ ಸುಕೃತ ಫಲವಾಗಿ ಎಂಬಂತೆ ಕಾರ್ತವೀರ್ಯಾರ್ಜುನನ ಜನನವಾಯಿತು. ದುರ್ದೈವವಶಾತ್ ವಿಳಂಬದಿಂದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೆ ಇದ್ದಿರದ ಮಗುವನ್ನು ಕಂಡು ಕೃತವರ್ಮ ದಂಪತಿಗೆ ಅಪಾರವಾದ ಬೇಸರ, ಜುಗುಪ್ಸೆಗಳು ಮೂಡಿ ಇನ್ನು ಈ ವಿಪ್ಲವಕ್ಕೆ ಪರಿಹಾರವೆಂದರೆ ದತ್ತಾತ್ರೇಯ ಮುನಿಗಳೆ ಪರಿಹಾರ ಮಾಡಿಸಿ ಕೊರತೆಯನ್ನು ದೂರಮಾಡುವ ಅನುಪಮವಾದ ತಂತ್ರಶಕ್ತಿ ಪಡೆದ ಮಹಾದೈವ ಎಂಬುದನ್ನು ಮನಗಂಡು ದತ್ತಾತ್ರೇಯ ಮುನಿಗಳ ಬಳಿ ಮಗುವನ್ನು ಎತ್ತೋಯ್ದರು. ಅವರ ಪಾದಕಮಲದ ಬಳಿ ಇಡುತ್ತಾರೆ.
ದತ್ತ ಗುರುಗಳಿಗೆ ದಂಪತಿಯ ದುಃಖವು ಅರ್ಥವಾಗುತ್ತದೆ. ಸಾಧಕರಾದ ಮುನಿಗಳಿಗೆ ಪಂಚಭೂತಗಳನ್ನು ನಿಯಂತ್ರಿಸುವ ಮಹಾನ್ ವಿದ್ಯೆ ಗೊತ್ತು. ಏಕೆಂದರೆ ಅವರು ಲೀಲಾ ಚರಿತನಾದ ದೇವರು. ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ, ಸ್ಥಿತಿ, ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ನಿಯಂತ್ರಿಸುತ್ತಾರೆ.
ದತ್ತಾತ್ರೇಯ ಮುನಿಗಳು ಬ್ರಹ್ಮ,ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ರೂಪ. ತ್ರಿಮೂರ್ತಿಗಳು ಒಂದೇ ದೇಹವಾಗಿ ಶಿರೋಭಾಗದಲ್ಲಿ ಮೂರು ಪ್ರತ್ಯೇಕ ಸ್ವರೂಪಗಳನ್ನು ತಳೆದಿದ್ದಾರೆ. ಈ ಸ್ವರೂಪವೇ ದತ್ತಾತ್ರೇಯ ಸ್ವರೂಪ. ಈ ಸ್ವರೂಪವನ್ನು ಪಡೆಯುವುದು ಅವರ ಶಕ್ತಿಯ ಫಲವಾಗಿ ಅಲ್ಲ.
ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣೀಯ ಸಂಕಲ್ಪ ಶಕ್ತಿಯ ಬಲದಿಂದಾಗಿ. ತ್ರಿಮೂರ್ತಿಗಳನ್ನು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ಪರಿವರ್ತನೆಗೊಳ್ಳುವ ಸ್ಥಿತಿ ಕೂಡಿ ಬರುತ್ತದೆ. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡಿಸಿಕೊಳ್ಳಬೇಕೆಂದು ಚಡಪಡಿಸಿ ತಮ್ಮ ವಿನಯನಯ ಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗಿ, ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ.
ಆದರೆ ತ್ರಿಮೂರ್ತಿ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಕಷ್ಟದಲ್ಲಿರುವವರಿಗೆ ವರ ಕೊಡುವವನೆ ದತ್ತಾತ್ರೇಯ.ಮಾಹಿಷ್ಮತಿಯ ಅರಸ ಕೃತವೀರ್ಯ ದತ್ತಮುನಿಗಳನ್ನು ಆರಾಧಿಸಿ, ಪ್ರಸನ್ನಗೊಳಿಸಿ, ಅವರಿಂದ ತನ್ನ ಕೈಗಳೇ ಇರದ ಮಗನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ . ರಾವಣನನ್ನೂ ಮೀರಿದ ಶಕ್ತಿ ಕಾರ್ತಿವೀರ್ಯಾರ್ಜುನನಿಗೆ ಬರುತ್ತದೆ. ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತಿವೀರ್ಯಾರ್ಜುನ ಸೆರೆಡಿಯುತ್ತಾನೆ.
ಅನುಪಮವಾದ ಪವಾಡ ಸದೃಶ ಪರಿಹಾರ ದತ್ತಾತ್ರೇಯನಿಂದ ಲಭ್ಯ
ವಾಮಾಚಾರ, ಯಕ್ಷಿಣಿ, ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಒಂದು ಮಿತಿ ಇರಲು ಸಾಧ್ಯ. ಆದರೆ ದತ್ತಾತ್ರೇಯನ ಆರಾಧನೆ ತಂತ್ರ ಸಿದ್ಧಿ, ಧ್ಯಾನ ಏಕಾಗ್ರತೆಗಳು ಒಂದು ನಿರ್ದಿಷ್ಟ ಬಗೆಯಲ್ಲಿ ಸಾಧ್ಯವಾದಾಗ ಮನುಷ್ಯನಲ್ಲಿ ಅಂತರ್ಗತವಾದ ಷಟcಕ್ರಗಳನ್ನು ಜಾಗ್ರತಗೊಳಿಸುವ ಯೋಗ ಸಿದ್ಧಿಗೆ ರೂಪಾಂತರಗೊಳ್ಳುತ್ತದೆ. ಬದುಕಿನ ಸಂದರ್ಭದ ಪೀಡೆಗಳಿಂದ ನಮಗೆ ನಾವೇ ರಕ್ಷಣೆ ಪಡೆದು ಹೊರಬರಲು ಚೈತನ್ಯ ಒದಗುತ್ತದೆ.
ಕುಂಡಲಿನಿ ಶಕ್ತಿ ಸಂಪ್ರಾಪ್ತಿಯಾದಾಗ ದೇಹ ಮತ್ತು ಆತ್ಮಗಳ ನಡುವಣ ಅಂತರ ಸಮತೋಲನ ತಪ್ಪದ ರೀತಿಯಲ್ಲಿ ಘನೀಕರಿಸಿ ದಿವ್ಯವಾದ ಅನುಭವಕ್ಕೆ ಇಚ್ಛಾಶಕ್ತಿಯ ಮೂಲಕ ಪಡೆಯಬೇಕಾದ್ದನ್ನು ಪಡೆಯಲು ಸಾಧ್ಯ. ಹಾಗಂದ ಮಾತ್ರಕ್ಕೆ ನ್ಯಾಯದ ಹಳಿಗಳನ್ನು ಮೀರುವ ಕುಹಕತನಗಳು ಶಕ್ತಿ ಒದಗಿಸಲಾರವು. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಅನಾಹತ ಚಕ್ರ, ಮಣಿಪುರ ಚಕ್ರ ಶುದ್ಧ ಛಕ್ರ, ಆಜಾn ಚಕ್ರ, ಸಹಸ್ರಾರ ಚಕ್ರಗಳೇ ಈ ಷಟcಕ್ರಗಳು. ಇವನ್ನು ನಿಯಂತ್ರಿಸುವುದು ಧ್ಯಾನದ ಮೂಲಕ ಸಾಧ್ಯ. ದತ್ತಾತ್ರೇಯನ ಬಗೆಗಿನ ಧ್ಯಾನ ಇಂಥ ಬಗೆಗಾಗಿನ ಅವಧೂತಶಕ್ತಿಯನ್ನು ಪ್ರಾಪ್ತಿಗೊಳಿಸುತ್ತದೆ. ದತ್ತನ ಬಗೆಗಿನ ಹುಡುಕಾಟ ಜಾnನ
ಭವದ ಜಂಜಡಗಳನ್ನು ನೀಗಿಕೊಳ್ಳಲು ದತ್ತೋಪಾಸನೆ ಉತ್ತಮವಾದ ಕಲ್ಪವನ್ನು ಒದಗಿಸುತ್ತದೆ.
ಮಾಯೆಯ ಫಲವಾದ ಜಗತ್ತು ಮತ್ತು ಆನಂದದಾಯಕವಾದ ಪರಾತ್ಪರ ಶಕ್ತಿ
ಮೂಲ ಬೀಜಾಕ್ಷರ ಮಂತ್ರಗಳು ನಮಗೆ ಪುಟ್ಟದಾದ ಶಕ್ತಿಕೋಶಗಳನ್ನು ಒದಗಿಸುತ್ತದೆ. ಇಡಿಯಾದ ದೇಹದ ಮೂಲದ ಬಿಂದು ಸ್ವರೂಪ ಪುಟ್ಟ ಜೀವಕೋಶ. ಪ್ರತಿ ಜೀವಕೋಶಗಳು ಬಲಗೊಂಡಾಗ ಶಕ್ತಿ ಸಂಗ್ರಸಿಕೊಂಡಾಗ ದೇಹದಲ್ಲಿ ಹುರುಪು ಉತ್ಸಾಹ ಹಾಗೂ ಚೈತನ್ಯಗಳು ವೃದ್ಧಿಗೊಳ್ಳುತ್ತವೆ. ಆಸೆಗಳು, ಕಾಮನೆಗಳು ಆತ್ಮವನ್ನು ನೀಚತನಕ್ಕೆ ಒಯ್ಯುತ್ತದೆ. ಆತ್ಮ ಶುದ್ಧ ವಸ್ತುವಾದಾಗ ಪರಮಾತ್ಮ ನೆಲೆಸುತ್ತಾನೆ. ಆತೀಂದ್ರಿಯ ಶಕ್ತಿಯಿಂದಾಗಿ ದೇಹ ಸೊರಗಲಾರದು. ಧರ್ಮಾರ್ಥ ಕಾಮ ಮೋಕ್ಷಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.
ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳು ನಮ್ಮನ್ನು ಪಾಶಕ್ಕೆ ತಳ್ಳುತ್ತದೆ. ಜಗದಲ್ಲಿನ ಪುರುಷಾರ್ಥಗಳನ್ನು ಸಾಧಿಸಲು ಹಿಂಜರಿಯದೆ ಜಿತೇಂದ್ರಿಯನಾದಾಗ ಓಂ ತತ್ ಸತ್ ಗಳ ಮೂಲಕ ಈ ಮೂರೂ ಅವಿಚ್ಚಿನ್ನವಾದಾಗ ಅದೇ ಪರಬ್ರಹ್ಮ. ಬೇರೆ ಬೇರೆಯಾದಾಗ ಬ್ರಹ್ಮ, ವಿಷ್ಣು, ಮಹೇಶ್ವರ. ಅತುಲ ಬಲ ಪಡೆಯುವಾಗ ಪರಬ್ರಹ್ಮನನ್ನು ಛೇದಿಸುವ ಒಗ್ಗೂಡಿಸುವ ಕೆಲಸವನ್ನು ಧ್ಯಾನದಿಂದ ಮಾಡಬೇಕು. ಇದು ಸಾಧ್ಯವಾದಾಗ ಬದುಕಿನ ಜಂಜಡ ಖನ್ನತೆ ಸೋಲು ನಿರಾಸೆಗಳಿಂದ ಹೊರಬರಲು ಸಾಧ್ಯ. ನಾಶಕ್ಕೆ ಕಾರಣವಾಗುವ ಮಹಾರೋಗಗಳನ್ನು ನಿಯಂತ್ರಿಸಬಹುದು. ಜೀವನದ ಸಾರ್ಥಕತೆಗಳನ್ನು ಗೆಲುವುಗಳನ್ನು ಸಂಪಾದಿಸಿಕೊಳ್ಳಬಹುದು. ಗ್ರಹನಕ್ಷತ್ರಗಳ ದೋಷ ನಿವಾರಿಸಿಕೊಳ್ಳಬಹುದು. ಮುಂದಿನ ವಾರ ಇನ್ನಷ್ಟು ಚರ್ಚಿಸೋಣ.
sangraha
Read more at https://www.udayavani.com/kannada/news/astrology-articles/228147/dattatreya-worship#cTR8VdmITVAF2LoJ.99
ಮಕ್ಕಳಲ್ಲಿ ಕಾಣಿಸುವ ಬಾಲಾರಿಷ್ಟ, ಗ್ರಹಚಾರ ನಿಜವೇ?
ಕೆಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರವಾದ ಚೂಟಿತನ ಹೊಂದಿದ್ದು ಚೆನ್ನಾಗಿಯೇ ಬೆಳೆಯುತ್ತಾರೆ. ಆದರೆ ನಂತರ ಯಾವುದೋ ಕಾರಣಗಳಿಂದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆದರೆ ಹಲವು ಮಕ್ಕಳು ಹುಟ್ಟಿದಾಗಿನಿಂದಲೇ ತೀವ್ರತರವಾದ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ನಮ್ಮ ದೇಶದಲ್ಲಿ ಬಾಲ್ಯದ ಸಮಯದ ತಾಪತ್ರಯದಾಯಕವಾದ ಕ್ರಿಯಾಶೀಲತೆಯ ಕೊರತೆಗಳನ್ನು ಬಾಲಾರಿಷ್ಟ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಪೌಷ್ಟಿಕಾಂಶದ ಕೊರತೆಯೇ ಗರ್ಭವಸ್ಥೆಯಲ್ಲಿ ಬಿದ್ದ ಕೆಲವು ಏಟು, ನೋವು, ಜಾರಿ ಬಿದ್ದದ್ದೇ ನೆಪವಾಗಿ ಭ್ರೂಣಾವಸ್ಥೆಯಲ್ಲೇ ಮಗು ಕೆಲವು ಕಗ್ಗಂಟುಗಳನ್ನು ಪಡೆದುಕೊಂಡು ಬಿಡುತ್ತದೆ. ಇದು ಬಿದ್ದ ಪೆಟ್ಟೋ, ಆಘಾತವೋ ಪೌಷ್ಟಿಕಾಂಶದ ಕೊರತೆಯೋ ಇತ್ಯಾದಿಗಳ ಕಾರಣವೂ ಇರದೆಯೇ ಕೆಲವು ಮಕ್ಕಳು ದುರ್ಬಲರಾಗಿ ಜನಿಸುತ್ತಾರೆ. ಸಶಕ್ತ ತಾಯಿ ತಂದೆಯರ ಮಕ್ಕಳು ಕ್ರಿಯಾಶೀಲತೆ ಕಳೆದುಕೊಂಡು ಹುಟ್ಟುವುದುಂಟು. ಇದಕ್ಕೆ ವೈದ್ಯಕೀಯ ಲೋಕ ಅನೇಕ ಕಾರಣಗಳನ್ನು ಕೊಡಬಹುದು. ಆದರೆ ಬುದ್ಧಿಗೆ ಅಧೀಶನಾದ ಬುಧಗ್ರಹವು ಮಾನಸಿಕ ವಿಸ್ತಾರದ ಮೇಲೆ ಅಲೆಗಳನ್ನು ಸುಳಿಗಳನ್ನು ಎಬ್ಬಿಸಿ ಮನಃಶಾಂತಿಯನ್ನು ಕದಡುವ ಚಂದ್ರನು ಪರಸ್ಪರ ವೈಷಮ್ಯದ ಸಂಯೋಜನೆ ಹರಳುಗಟ್ಟಿದಾಗ ಬಾಲಾರಿಷ್ಟ ಗೋಚರವಾಗುತ್ತದೆ.
ಮಂಕು ಕವಿದು ಸದಾ ನಿಷ್ಕ್ರಿಯರಾಗಿರುವ ಮಕ್ಕಳು ಎಷ್ಟೋ ಮನೆಯಲ್ಲಿ ಮಂಕು ಕವಿದಂತೆ ಇರುವ ಮಕ್ಕಳು ಕಾಣಸಿಗುತ್ತಾರೆ. ಇವರ ಜಾತಕಗಳಲ್ಲಿ ನಿಸ್ಸಂದೇಹವಾಗಿ ಬುಧ ಮತ್ತು ಚಂದ್ರ ವಿಷಮ ಸಂಯೋಜನೆಗಳು ಹರಳು ಗಟ್ಟಿರುತ್ತದೆ. ಬುದ್ಧಿಮಾಂದ್ಯ ಎಂದರೆ ಹುಚ್ಚು ಹಿಡಿದ ಮಕ್ಕಳು ಎಂದು ಪರಿಗಣಿಸಬಾರದು. ಆದರೆ ಅವರ ಬಾಲ್ಯದಲ್ಲಿ ಸಹಜವಾಗಿ ಇರಬೇಕಾದ ಲವಲವಿಕೆ, ಚೂಟಿತನ, ಹುರುಪು ಉತ್ಸಾಹಗಳು ಕಾಣಸಿಗುವುದಿಲ್ಲ. ಎಲ್ಲೋ ನೋಡುತ್ತಿರುವ ಮಕ್ಕಳು, ಬೆದರಿದಂತೆ ಸಪ್ಪೆ ಮೋರೆ ಹಾಕಿರುವ ಮಕ್ಕಳು, ಎದ್ದು ಲಗುಬಗೆಯಿಂದ ಹಿರಿಯರ ಸಹಾಯವಿಲ್ಲದೆ ಚಿನಕುರುಳಿಯಂತೆ ಓಡಾಡುವ ಮಕ್ಕಳಾಗಿ ಇವರು ಇರುವುದಿಲ್ಲ. ಬೌದ್ಧಿಕ ಕ್ಷಮತೆ ಇರದೆಯೇ ಚಂದ್ರ ಮಂಡಲವನ್ನು ಸಂವೇದನೆಗಳಿಗೆ ದೂಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನಿಶ್ಚಲರಾಗಿರುತ್ತಾರೆ. ಎಷ್ಟು ಜಡತ್ವ ಬಂದು ಬಿಡಬಹುದೆಂದರೆ ಅನ್ಯರ ಮಾತು ಬಾಯಿ, ತುಟಿ ಚಲನೆಗಳನ್ನು ಗಮನಿಸದೆ ಈ ಮಕ್ಕಳು ಯುಕ್ತ ವಯಸ್ಸಿನಲ್ಲಿ ಮಾತನಾಡಲು ಹಿಂದೇಟು ಹಾಕಬಹುದು. ಹೇಳಿದ್ದು ಅರ್ಥವಾದರೂ ತಮಗನಿಸಿದ್ದನ್ನು ವ್ಯಕ್ತ ಪಡಿಸಲು ಸಾಧ್ಯವಾಗದೆ ಹೋಗುವ ಅಸಹನೀಯ ಸ್ಥಿತಿಗೆ ತಲುಪುತ್ತಾರೆ. ತೇಜಸ್ಸೇ ಇರದ ಕಣ್ಣುಗಳಲ್ಲಿ ಪೇಲವವಾಗಿ ಕಾಣಿಸಿಕೊಳ್ಳುತ್ತಾರೆ. ಅರಿವಿಗೆ ಬರದೆ ಬಾಯಲ್ಲಿ ಜೊಲ್ಲು ಸುರಿಯುವ ಸಾಧ್ಯತೆ ಕೂಡಾ ಇರುತ್ತದೆ.
ಬುಧಗ್ರಹ ಮತ್ತು ಬೌದ್ಧಿಕ ಚಾತುರ್ಯ
ಬಹುತೇಕವಾಗಿ ಬೌದ್ಧಿಕ ಬೆಳವಣಿಗೆಗೆ ಬುಧ ಕಾರಣನಾಗಿರುತ್ತಾನೆ. ಸೂರ್ಯನ ಸಮೀಪದಲ್ಲಿಯೇ ಇವನ ಸಂಚಲನ ನಡೆಯುತ್ತಿರುತ್ತದೆ. ಹೀಗಾಗಿ ನಮ್ಮ ಆಷೇìಯ ವ್ಯಾಖ್ಯಾನಗಳು ಬುಧನನ್ನು ಸೂರ್ಯ ಪ್ರಿಯಕರೋ ವಿದ್ವಾನ್ ಎಂದು ಕರೆದಿವೆ. ಸೂರ್ಯನ ಬಳಿ ಭಾರತೀಯ ಪರಂಪರೆ ಬುದ್ಧಿಯನ್ನು ಪ್ರಚೋದಿಸಿ ಎಂದು ಪ್ರಾರ್ಥಿಸುತ್ತದೆ. ಉತ್ಪಾತ ರೂಪಿ ಜಗತಾ ಚಂದ್ರಪುತ್ರೋ ಮಹಾದ್ಯುತಿ ಎಂದು ಕೂಡಾ ನಮ್ಮ ಪ್ರಾರ್ಥನೆಗಳು, ಬುಧನ ಸಲುವಾಗಿಯೇ ವಿಶೇಷವಾಗಿ ಉಲ್ಲೇಖೀಸುತ್ತದೆ. ಬುಧನ ಹೊಳಪು ರೂಪದಲ್ಲಿ ಅಪ್ರತಿಮ ಎಂಬ ವಿಶ್ಲೇಷಣೆಯನ್ನು ಭಾರತೀಯ ಶಾಸ್ತ್ರ ಸ್ತೋತ್ರ ಮೀಮಾಂಸೆಗಳಲ್ಲಿ ನಡೆಸುವಂತೆ ಮಾಡಿದೆ. ಬುಧ ಮತ್ತು ಸೂರ್ಯರು ಒಂದೇ ಮನೆಯಲ್ಲಿ ಒಗ್ಗೂಡಿದ್ದರೆ ಬುಧಾದಿತ್ಯ ಯೋಗ ಎಂದು ಕರೆಯುತ್ತಾರೆ. ಜಾತಕ ಶಾಸ್ತ್ರತಜ್ಞರು ಭಾರತೀಯ ಜೋತಿಷ್ಯದಲ್ಲಿ ಈ ವಿಚಾರಗಳು ಇವೆ. ಬುಧನು ಕನಿಷ್ಟ 9 ಡಿಗ್ರಿಗಳಷ್ಟಾದರೂ ಅಂತರವನ್ನು ಕಾಯ್ದುಕೊಳ್ಳದೆ ಇದ್ದರೆ ಸೂರ್ಯನ ಪ್ರಭೆಯ ಎದುರು ಮಂಕಾಗಿ ಬಿಡುತ್ತಾನೆ. ಇದನ್ನು ಅಸ್ತಂಗತ ದೋಷ ಎಂಬುದಾಗಿ ಜೋತಿಷ್ಯ ಶಾಸ್ತ್ರ ಹೇಳುತ್ತದೆ.
ಬುಧಾದಿತ್ಯ ಯೋಗಯೋಗದ ಬಗ್ಗೆ ಮುಂದೊಂದು ಬಾರಿ ಇದೇ ಅಂಕಣದಲ್ಲಿ ಚರ್ಚಿಸೋಣ. ಹಸ್ತಂಗತ ದೋಷದ ಒಳಿತು ಕೆಡಕುಗಳ ಬಗ್ಗೆ ಸೂಕ್ತವಾದ ವಿವರಗಳ ಬಗ್ಗೆ ಯೂ ಇನ್ನೊಂದು ಬಾರಿ ಚರ್ಚಿಸೋಣ.
ಸದ್ಯ ಪ್ರಮುಖವಾಗಿ ಹೇಳಬೇಕಾದ್ದು ವಿದ್ವತ್ತನ್ನು ಕೊಡಬೇಕಾದ ಬುಧ, ವಿಷಮ ಸಂಯೋಜನೆಗಳ ಸಂದರ್ಭದಲ್ಲಿ ಮಂಕುತನ ಕವಿಸುತ್ತಾನೆ. ಧೀಃ ಶಕ್ತಿಗೆ ಚಾತುರ್ಯಕ್ಕೆ ಬೇಕಾದ ಸಂವೇದನೆಗಳು ಸೊರಗುತ್ತವೆ. ಚಂದ್ರನೂ ದುರ್ಬಲನಾಗಿದ್ದರೆ ಬುಧನ ಉಪಟಳದಲ್ಲಿ ಇನ್ನಿಷ್ಟು ಗಾಢವಾದ ಮೊನಚು ಉದ್ಭವಿಸುತ್ತದೆ. ಇದರಿಂದ ಬಾಲಾರಿಷ್ಟದ ಬಿಕ್ಕಟ್ಟುಗಳು ಉಲ್ಬಣವಾಗುತ್ತದೆ. ಚಂದ್ರನಿಗೆ ಮನಸ್ಸನ್ನು ನಿಗ್ರಹಿಸುವ ದೃಢತೆ ಒದಗದು.
ಚಂದ್ರ ಮತ್ತು ಯೋಚನಾ ಶಕ್ತಿ
ಚಂದ್ರ ನೋಡಲು ಗಾತ್ರದಲ್ಲಿ ಪುಟ್ಟ ಬಟಾಣಿ ಕಾಳು ಆದರೂ ಆತನ ಭೂಮಿಯ ಅತಿ ಹತ್ತಿರವೇ ಇರುವ ಸಾಮಿಪ್ಯದಿಂದ ಭೂಮಿಯ ಮೇಲೆ ಅಗಾಧ ಪರಿಣಾಮ ಬೀರುತ್ತಾನೆ. ಇದು ಬರೀ ಮನುಷ್ಯನ ಮೇಲಲ್ಲ ಭೂಮಿಯ ಸರ್ವ ಜೀವಿಗಳ ಮೇಲೂ ಆತನ ಪ್ರಭಾವವಿದೆ. ಸೂರ್ಯನಿಂದ ಪಡೆದ ಬೆಳಕನ್ನು ಹೊರಹೊಮ್ಮಿಸುವ ವಿಧಾನದಲ್ಲಿ ಅವನು ಯೋಚನಾಶಕ್ತಿಯು ಪ್ರವಹಿಸುವ ಮೆದುಳಿನ ಮೇಲೆ ನಿಯಂತ್ರಣ ಪಡೆಯಲು ಕಾರಣನಾಗುತ್ತಾನೆ. ಹೀಗಾಗಿಯೇ ಅವನ ಶೀತಲ ಬೆಳ್ಳಿಯ ಬೆಳಕಿನ ಸೌರಭಕ್ಕಾಗಿ ನಮ್ಮ ಶಾಸ್ತ್ರ ಅವನನ್ನು ರೋಹಿಣೀಶ ಎಂದು ಕರೆದಿದೆ. ರೋಹಿಣಿ ನಕ್ಷತ್ರ ಅವನ ಅಧಿಪತ್ಯಕ್ಕೆ ಬರುವ ಪ್ರಧಾನವಾಗಿ ಸ್ತ್ರೀ ಗುಣಧರ್ಮಗಳನ್ನು ಹೊಂದಿದೆ ಎಂಬುದು ನಮ್ಮ ನಂಬಿಕೆ. ಈ ನಕ್ಷತ್ರದ ವಿಸ್ತಾರದ ಪ್ರಭಾವ ಏನು ಎನ್ನುವುದನ್ನು ನಾವು ಗಮನಿಸಬೇಕು. ರೋಹಿಣಿ ನಕ್ಷತ್ರದಲ್ಲಿ ಚಂದ್ರ ಉಚ್ಚನಾಗಿ, ಪರಮಾಧಿಕ ಬಲ ಪಡೆದಿರುತ್ತಾನೆ. ಹೀಗಾಗಿ ಚಂದ್ರ ರೋಹಿಣಿಯ ಅಧೀನ. ಈತ ಸುಧಾಮೂರ್ತಿ, ಸುಧಾಗಾತ್ರ, ಸುಧಾಶನನೂ ಹೌದು. ಅಂದರೆ ಸೊಗಸಾದ ಸುಧೆಗೆ ಸಮಾನವಾದ ಸುಹಾಸಕರತೆ ಸಂಪನ್ನತೆ ಇತ್ಯಾದಿಗಳನ್ನು ಚಂದ್ರ ಪ್ರಚಂಡ ಬಲಯುತನಾದಾಗ ಒದಗಿಸುತ್ತಾನೆ. ಆದರೆ ಚಂದ್ರ ದುಷ್ಟನಾಗುವುದು ದುರ್ಬಲನಾದಾಗ.
ಶನೈಶ್ಚರ, ರಾಹು, ಕೇತು, ಕುಜ, ಸೂರ್ಯರ ಸಂಪರ್ಕ ಬಂದಾಗ ಕ್ರಮವಾಗಿ ವಿಳಂಬವಾಗುವ ಕೆಲಸಗಳ ಸಂದರ್ಭದಲ್ಲಿ ಮೈಪರಚಿಕೊಳ್ಳುವ ದುರ್ಬಲತೆ ಮನೊ ವೇದಿಕೆಯಲ್ಲಿ ಉನ್ಮಾದ ಅಸಹನೆ ಧನನಷ್ಟ ಬುದ್ಧಿ ಕಲ್ಪಗಳಿಗೆ ಕಾರಣನಾಗುತ್ತಾನೆ. ಬಾಲಾರಿಷ್ಟದ ಸಂದರ್ಭದಲ್ಲಿ ಬುಧನೂ, ಚಂದ್ರನೂ, ತಾಳಮೇಳ ಕಳೆದುಕೊಂಡು ಕ್ರಿಯಾಶೀಲತೆಯಿಂದ ಮುಖರಾಗುತ್ತಾರೆ. ಕ್ರಿಯಾಶೂನ್ಯತೆ ಕಾಂತಿಮಯ ತೇಜೋಮಯ ವ್ಯಕ್ತಿತ್ವಗಳನ್ನು ಒದಗಿಸದಿರುವ ದುರ್ಭರತೆಗಳಿಗೆ ಕಾರಣರಾಗುತ್ತಾರೆ. ಯಾವ ಧನಬಲವಿರಲಿ ತಿಂದುಂಡು ಸುಖೀಸುವ ಅವಕಾಶವಿದ್ದರು ದೇಹದಲ್ಲಿ ಚಟುವಟಿಕೆಗಳಿಲ್ಲದೆ ಮಕ್ಕಳಿಗೆ ಬಾಲಾರಿಷ್ಟ ಕಾಡುತ್ತದೆ. ಬಾಲ್ಯದ ಅರಿಷ್ಟ ಎಂದರೆ ತೊಡಕು, ಅಭಾವ ಅಲೆದಾಟ, ದೈನೇಸಿ ಸ್ಥಿತಿ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಈ ಅರ್ಥಗಳನ್ನು ಮೀರಿ ಇದು ಕೊರತೆಗಳನ್ನು ವಿಸ್ತರಿಸುತ್ತದೆ. ಮಾತುಗಳನ್ನು ತೊದಲಿಸಬಹುದು. ನಡೆದಾಡಲು ವಿಳಂಬ ಮಾಡಬಹುದು. ಆಡಲು ವಿಳಂಬಗೊಳಿಸಬಹುದು. ಶಿಕ್ಷಣಕ್ಕೆ ಎಂದು ಶಾಲೆಗೆ ಸೇರಿಸಿದರೂ ಅನ್ಯ ಮಕ್ಕಳಂತೆ ಬೇಗ ಕಲಿಯಲು ಸಾಧ್ಯವಾಗದೆ ಇರಬಹುದು. ಮೆದುಳಿಗೂ ಬೆನ್ನುಹುರಿಯ ನರ ತಂತು ಜಾಲಗಳಿಗೂ ಹೊಂದಾಣಿಕೆ ಇರದೆ, ನಿಜಕ್ಕೂದಾರುಣ ಸ್ಥಿತಿಗತಿ ಎದುರಾಗಬುದು.
ಈ ಸ್ಥಿತಿಯಿಂದ ಹೊರಬರಲು ಸಾಧ್ಯವೇ?
ಸಾಧ್ಯವಾಗುವಂತೆ ಕ್ರಮೇಣ ಅನ್ಯ ಗ್ರಹಗಳ ಪ್ರಭಾವದಿಂದಾಗಿ ಉತ್ತಮ ಸ್ಥಿತಿಯ ಸಂಪನ್ನ ಆವರಣಗಳೂ ತಮ್ಮ ಸುಹಾಸಕರತೆಯನ್ನು ಬೀರಬಲ್ಲವು. ಜಾತಕದ ಉಳಿದ ವಿಚಾರಗಳು ಎಷ್ಟು ಗಟ್ಟಿಯಾಗಿವೆ ಎಂಬುದರ ಮೇಲೆ ಇವು ತಿಳಿಯಬೇಕು. ರಾಹು, ಕೇತು, ಕುಜ, ಶನೈಶ್ಚರ ಸೂರ್ಯರಂಥ ಅಶುಭ ಗ್ರಹಗಳು ದುರ್ದೈವವಶಾತ್ ಹಲವು ಸಲ ನಿರಂತರ ವೈಕಲ್ಯಕ್ಕೆ ಕಾರಣವಾಗುತ್ತಾರೆ. ದುರ್ಗಾ, ಗಣಪತಿ ದತ್ತಾತ್ರೇಯ ಮಾರುತಿ ಅಥವಾ ರಾಮರûಾಸ್ತೋತ್ರ ಆರಾಧನೆ ಶಕ್ತಿ ಪೂಜಾ ಕೈಂಕರ್ಯ ಪರಿಕ್ರಮಗಳು ಒಂದು ವಿಧವಾದ ಪವಾಡಗಳನ್ನು ನಿರ್ಮಿಸುವ ಸಂಜೀನಿಯಾಗಿದೆ. ಆಧುನಿಕ ಚಿಕಿತ್ಸೆಗಳು ಆರೋಗ್ಯ ಸಂವರ್ಧನ ವಿಧಾನಗಳು ಸೋತಲ್ಲಿ, ಈ ಆಷೇìಯ ಶಕ್ತಿಗಳು ಪ್ರಯೋಜನಕ್ಕೆ ಒದಗಿದ ಉದಾಹರಣೆಗಳಿವೆ.
sangraha
ವಿಷ್ಣು ಸಹಸ್ರನಾಮ ಪಠಿಸಿದರೆ ಎಲ್ಲವೂ ಸರಿಹೋಗುತ್ತದೆಯೇ?
ಯಾವುದೇ ದೇವರುಗಳು ಇರಲಿ, ಒಬ್ಬ ವ್ಯಕ್ತಿಯ ಮೇಲೆ ಮಾಡುವ ಪರಿಣಾಮ ಭಿನ್ನ ನೆಲೆಗಳದ್ದು. ಒಬ್ಬರಿಗೆ ಗಣಪತಿ, ಇನ್ನೊಬ್ಬರಿಗೆ ಶಿವ, ಮಗದೊಬ್ಬರಿಗೆ ಮಾರುತಿ, ಇನ್ಯಾರಿಗೋ ನರಸಿಂಹ, ಹಲವರಿಗೆ ಶ್ರೀಹರಿ ನಂತರ ಕೃಷ್ಣ, ರಾಮ, ರಾಘವೇಂದ್ರಸ್ವಾಮಿ, ಚೌಡಮ್ಮ, ಎಲ್ಲಮ್ಮ, ಲಕ್ಷ್ಮೀ,ಶಾರದೆ ಇತ್ಯಾದಿ ಇತ್ಯಾದಿ ಇಷ್ಟವಾಗಬಹುದು. ಭಕ್ತಿಯ ಪರಾಕಾಷ್ಠೆಯ ಪ್ರದರ್ಶನ ಎಂಬ ವಿಚಾರ ಟೀಕೆ ಏನೇ ಇರಲಿ, ಆದರೆ ಕೋಟ್ಯಂತರ ಜನ ಮನಸಾ, ಕಾಯಾ, ವಾಚಾ ದೇವರನ್ನು ಆರಾಧಿಸುತ್ತಾರೆ. ತಮ್ಮ ತಂದೆ ತಾಯಂದಿರನ್ನು ಕಂಡಂತೆ, ದೇವರನ್ನು ಕಂಡು ಪರವಶರಾಗುತ್ತಾರೆ. ತಮ್ಮ ಮಕ್ಕಳ ಆರೈಕೆ ಮಾಡಿದಂಥ ದೇವರನ್ನು ಮಮತೆಯಿಂದ ಕಂಡು ಸಂಭ್ರಮಿಸುತ್ತಾರೆ. ದೇವರ ಸಿದ್ಧಿಗಾಗಿ ದೇವರ ಸ್ತೋತ್ರಪಠಣ, ಧ್ಯಾನ, ಜಪದಲ್ಲಿ ತಮ್ಮನ್ನು ತಾವು ಮರೆತು ಶರಣಾಗುತ್ತಾರೆ. ಜೀವನಕ್ಕೆ ಬಂದ ನಂತರ ಧರ್ಮಾರ್ಥ ಕಾಮ ಮೋಕ್ಷಗಳಿಗಾಗಿನ ದೂರವನ್ನು ಕ್ರಮಿಸಲೇ ಬೇಕು. ಇಲ್ಲಿ ಚತುರ್ ಸಿದ್ಧಿಯನ್ನು ಪಡೆಯುವ ದಿಕ್ಕಿನಲ್ಲಿ ದೌರ್ಬಲ್ಯಗಳು, ನಮ್ಮನ್ನು ಅನೇಕ ಅಗ್ನಿದಿವ್ಯಗಳನ್ನು ಎದುರಿಸುವಂತೆ ಸವಾಲು ಹಾಕುತ್ತಲೇ ಇರುತ್ತವೆ. ಅನಾಗರಿಕತೆ ಒಂದು ಶಾಪವಾದರೆ, ನಮ್ಮ ಅರಿಷಡ್ವರ್ಗಗಳ ಕಾರಣದಿಂದಾಗಿ ನಾಗರೀಕತೆಯೂ ಒಂದು ಶಾಪವಾಗುತ್ತದೆ.ಒಳ್ಳೆಯ ಮನುಷ್ಯ ಇದ್ದಿಕ್ಕಿದ್ದಂತೆ ಕಟ್ಟವ ಎಂದು ಟೀಕೆಗೊಳಲ್ಪಡುತ್ತಾನೆ. ದುಷ್ಟನೇ ವಿಜೃಂಭಿಸುತ್ತಾನೆ. ಆಡುವುದೇ ಒಂದು, ನಡೆಯುವುದೇ ಒಂದು ಎಂದು ಹೇಳಲು, ಆಚಾರ ತಿನ್ನುವುದು ಬದನೇಕಾಯಿ ಎಂಬ ಮಾತು ನೆನಪಾಗುತ್ತದೆ. ಆದರೆ ಜೀವನ ಕೇವಲ ಅನರ್ಥಗಳ ಕೂಪವೇ.
ಜೀವನ ಕೇವಲ ಅರ್ಥಹೀನ ಕಾಲಘಟ್ಟವಲ್ಲ. ಕೆಲವರು ಅತಿ ಆಸೆ ಧೂರ್ತತನ, ಹಣಬಲ ಎಲ್ಲರನ್ನೂ ದಮನಿಸುವ ತೋಳ್ಬಲ ಇತ್ಯಾದಿಗಳಿಂದ ಹೆಚ್ಚಿದ ಜನರನ್ನು ತೊಂದರೆಗೆ ತಳ್ಳುತ್ತಾರೆ.
ನಮ್ಮ ಕರ್ಮಫಲಗಳು ನಮ್ಮನ್ನು ಆರ್ಥಿಕ ದುರವಸ್ಥೆಗೆ ಆಯಸ್ಸು ಆರೋಗ್ಯಗಳ ವಿಷಮತೆಗೆ ಕಾರಣವನ್ನು ಉಂಟಾಗಿಸಿ ಬವಣೆಗೆ ತಳ್ಳುತ್ತದೆ. ಆದರ ದೋಷಗಳು ಜಾತಕದಲ್ಲಿ ಇದ್ದುದ್ದು ಕಂಡು ಬರುತ್ತವೆ. ಆ ಗ್ರಹಗಳು ವಿಷಮ ಪರಿಸ್ಥಿತಿಯಲ್ಲಿ ಸಂಯೋಜನೆ ಗೊಂಡಾಗಲೇ. ಹಾಗಾದರೆ ಯಾಕೆ ಆಗಬಾರದ್ದು ಆಗಿ ಬಿಡುತ್ತದೆ? ಗ್ರಹಗಳಿಗೆ ಕಷ್ಟ ಕೊಡುವುದೇ ಒಂದು ಕಾಯಕವೇ?
ಇಲ್ಲ ಖಂಡಿತವಾಗಿ ಗ್ರಹಗಳ ಕೆಲಸ ಕಾಡುವುದೇ ಅಲ್ಲ. ಒಳಿತುಗಳು ಸಂಭ್ರಮಿಸುತ್ತಿರುವಾಗ ನಮಗೆ ಗ್ರಹಗಳ ನೆನಪೇ ಆಗುವುದಿಲ್ಲ. ಉದಾಹರಣೆಗೆ ತಮ್ಮ ಮಕ್ಕಳೂ ತಾವಾಗಿಯೇ ವಿದ್ಯಾಬುದ್ಧಿ ಹಾಗೂ ವಿನಯವನ್ನು ರೂಢಿಸಿಕೊಂಡು ಮುಂದುವರೆಯುತ್ತಿರುವಾಗ, ಯಾರೂ ಗ್ರಹಗಳ ಸಂಯೋಜನೆ ಸರಿಯಾಗಿದೆ. ಗ್ರಹಗಳ ಅನುಗ್ರಹದ ಕಾರಣದಿಂದ ಒಳಿತಿನೆಡೆಗೆ, ಹೆಜ್ಜೆ ಹಾಕಿದ್ದಾರೆ ಎಂದು ಯೋಚಿಸುವುದಿಲ್ಲ. ದೈವಾನುಗ್ರಹದಿಂದ ಸಧ್ಯಕ್ಕೆ ಚೆನ್ನಾಗಿದ್ದೇವೆ. ಚೆನ್ನಾಗಿದ್ದಾರೆ. ಮುಂದೇನೋ ತಿಳಿಯದು. ಎಲ್ಲವೂ ದಯಾಮಯನಾದ ದೇವರಿಂದ, ದಯಾಮಯಿಯಾದ ಸರ್ವೇಶ್ವರಿ ಕೃಪೆಯಿಂದ ಚೆನ್ನಾಗಿದ್ದೇವೆ ಎಂದು ಹೇಳುವವರು ಇಲ್ಲವೇ ಇಲ್ಲ ಎಂದಲ್ಲ, ಆದರೂ ಹೀಗೆ ಹೇಳುವವರ ಸಂಖ್ಯೆ ಕಡಿಮೆ.
ಆದರೆ ಜ್ಯೋತಿಷಿಯ ಬಳಿ ಎಲ್ಲರೂ ಸುಖವಾಗಿದ್ದಾಗ ಬರುವವರು ಜಾತಕ ವಿಶ್ಲೇಷಣೆ ಮಾಡಿಸುವುದು ಕಡಿಮೆಯೇ. ಆರೋಗ್ಯ ಸರಿ ಇರುವಾಗಲೂ, ಯಾರೂ ಡಾಕ್ಟರರ ಹತ್ತಿರ ಹೋಗುವುದಿಲ್ಲ. ಹಾಗೊಂದು ಪಕ್ಷ ಹೋದರೆ ತಲೆ ಸರಿ ಇಲ್ಲ ಎಂದೇ ಇತರರು ನಗಬಹುದು. ಏನಾದರೂ, ಬಂದರೆ ಕಷ್ಟವಲ್ಲವೇ? ಎಂದು ಹಲವರು ಹೋಗಲೂ ಬಹುದು. ಹೋಗಲಾರರು ಎಂದೇನಲ್ಲ. ವಿರಳವಾದರೂ ಸರಿ ಇದ್ದಾಗಲೂ ವೈದ್ಯರ ಸಲಹೆ ಪಡೆಯುವವರು ಇದ್ದಾರೆ.
ಮಾಸ್ಟರ್ ಚೆಕಪ್ ಅಂತ ಪರೀಕ್ಷಿಸಿಕೊಂಡು ಆರೋಗ್ಯ ಸರಿ ಇದೆ ಎಂದು ನಿಟ್ಟುಸಿರು ಬಿಡುವವರು ಕಮ್ಮಿ ಸಂಖ್ಯೆಯಾದರೂ ಇದ್ದಾರೆ. ಆದರೆ ಜ್ಯೋತಿಷಿಯ ಬಳಿ ಮುಂದೂ ಸರಿಯಾಗಿಯೇ ಇರಬಹುದೆ ಎಲ್ಲವೂ ಎಂದು ಯೋಚಿಸಿ ತಿಳಿಯಲು, ಜಾತಕ ಪರೀಕ್ಷಿಸಲು ಹೋಗುವವರು ಕಡಿಮೆಯೇ. ಇಲ್ಲಾ ಯಾರೂ ಎಂಬುದೇ ಸತ್ಯ. ಯಾರೂ ಹೋಗಲಾರರು. ಫಕ್ಕನೆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟವಾದಾಗ, ಓದಿದ ನಂತರವೂ ಕೆಲಸ ಸಿಗುವುದು ಕಷ್ಟವಾದಾಗ, ಕೆಲಸ ಸಿಕ್ಕಿದರೂ ಮನಃ ಸಂತೃಪ್ತಿ ಇರದಿರುವಾಗ, ಹಿಡಿದ ಕೆಲಸದಲ್ಲಿ ಕೈ ಹತ್ತದಿದ್ದಾಗ, ದುಡಿದರೂ ಹಣ ನಿಲ್ಲದೇ ಪರದಾಟವಾದಾಗ ಜ್ಯೋತಿಷಿಯ ಬಳಿ ಗಾಬರಿಬಿದ್ದು ಬರುತ್ತಾರೆ. ಈ ಸಂದರ್ಭ ಉಪಯೋಗಿಸಿಕೊಂಡು ಪರಿಹಾರದ ಮಾರ್ಗ ಎಂದು ಶೋಷಣೆಯೂ ಆದೀತು. ಒಬ್ಬ ಗುರು ಸ್ವರೂಪಿ ಜ್ಯೋತಿಷಿ ದಾರಿ ತಪ್ಪಿಸಲಾರ. ನಂಬಿಕೆ ಇಟ್ಟು ಬಂದವರನ್ನು ಸೂಕ್ತ ದಾರಿಗೆ ಮುಮ್ಮುಖವಾಗಿಸುತ್ತಾನೆ.
ಶ್ರೀ ವಿಷ್ಣುಸಹಸ್ರ ನಾಮಾವಳಿ ಪಠಣ ತೊಂದರೆ ಪರಿಹರಿಸುವುದೇ?
ವಿಷ್ಣುವಿನ ಬಗೆಗಿನ, ಶಿವನ ಬಗೆಗಿನ, ಶ್ರೀ ಲಲಿತಾಂಬಿಕಾ ಬಗೆಗಿನ, ಗಣಪತಿ, ಮಾರುತಿ, ಮಂಗಳ ಕಾರಕಿ ಶಾರದಾ ಪ್ರಯುಕ್ತವಾದ ಶ್ರೀ ವರಲಕ್ಷ್ಮೀ ಭೃಗು ಕನ್ಯೆಯ, ದತ್ತಾತ್ರೇಯ ಆರಾಧನಾ ಶಕ್ತಿ ಮಂತ್ರಗಳ ಪ್ರಭಾವಳಿ ವಿಶೇಷ ಬಹಳಷ್ಟು ಅವಘಡಗಳನ್ನು, ಅನಿಷ್ಟ, ದಾರುಣ ಸ್ಥಿತಿ, ದರಿದ್ರಾವಸ್ಥೆಗಳನ್ನು ತಪ್ಪಿಸಿ ಸಕಾರಾತ್ಮಕ ದಾರಿಗೆ ನಮ್ಮನ್ನು ತಂದು ನಿಲ್ಲಿಸುವ ಚೈತನ್ಯ ಹೊಂದಿದಂಥದ್ದು. ಒಂದೇ ದೇವರ ಸಹಸ್ರನಾಮಾವಳಿಗಳು ನಮ್ಮ ಜೈವಿಕ ರಾಸಾಯನ ವ್ಯವಸ್ಥೆಯನ್ನು ಪುಷ್ಟಿಗೊಳಿಸುತ್ತದೆ. ದೇಹ ಧರ್ಮದ ಕೊರತೆಗಳನ್ನು ನಿವಾರಿಸಿ ದೇಹದ ಕಾಂತಿ ಹಾಗೂ ವರ್ಚಸ್ಸನ್ನು ಸಂವರ್ಧನಗೊಳಿಸುತ್ತದೆ. ಹತಾಶ ಮನೋಭಾವದಿಂದ ದೂರ ಮಾಡಿ ಲವಲವಿಕೆಯನ್ನು ಚಿಗುರಿಸುತ್ತದೆ. ಮೂಕನನ್ನು ಮಾತನಾಡುವಂತೆ ಪವಾಡ ಜರುಗಿಸುತ್ತದೆ. ಕೀಳರಿಮೆಯನ್ನು ತೊಡೆದು ಹಾಕಿ, ಸಮಾಧಾನದಿಂದ ಜನರೊಡನೆ ಬೆರೆತು ಅನ್ಯರ ಗಮನ ಸೆಳೆಯುವ ಪರಿವರ್ತನೆಗೆ ಶಕ್ತಿ ಒದಗಿಸುತ್ತದೆ. ಆಯುಷ್ಯ ವೃದ್ಧಿಗಾಗಿನ ತೇಜಸ್ಸನ್ನು ಒದಗಿಸುತ್ತವೆ.
ಹಲವರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಲು ಧೈರ್ಯ ಬರುವುದಿಲ್ಲ. ಬಂದರೂ ಸುಸಂಬದ್ಧವಾಗಿ ಮಾತನಾಡಲಾರರು. ವಿಷ್ಣು ಸಹಸ್ರನಾಮಾವಳಿ ಪಠಣದಿಂದ ಅಚ್ಚುಕಟ್ಟಾಗಿ ನಿಮ್ಮ ಮನಸ್ಸಿನ ಇಂಗಿತವನ್ನ, ಅನ್ಯರು ನಿಮ್ಮನ್ನು ಆದರಿಸಬಹುದಾದ ರೀತಿಯ ಅಕ್ಕರೆಯ, ಗಟ್ಟಿಯಾದ ವಾದ ಮಂಡನೆಯನ್ನು ಮಾಡಬಲ್ಲರು. ಸ್ತವ ಪ್ರಿಯಾಯ ನಮಃ ಎಂಬ ಒಂದೇ ನಾಮವನ್ನು ಲಕ್ಷಗಟ್ಟಲೆ ಸಲ ಧ್ಯಾನಿಸಿ ಮಾತಿನ ಜಾಣ್ಮೆಯನ್ನು ಪಡೆದು ನ್ಯಾಯಾಲಯದಲ್ಲಿ ಪ್ರಕಾಂಡ ವಾಗ್ಮಿಗಳಾಗಿ ವಾದಿಸಿ ಪ್ರಸಿದ್ಧಿ ಪಡೆದವರಿದ್ದಾರೆ. ವ್ಯಾಪ್ತಾಯ ನಮಃ ಎಂಬುದನ್ನೇ ಲಕ್ಷಗಟ್ಟಲೆ ಬಾರಿ ಪಠಿಸಿ, ಶಕ್ತಿ ಸಂಚಯನ ಗೊಳಿಸಿಕೊಂಡು ಅನಂತ ವ್ಯಾಪ್ತಿಯ ವರ್ಚಸ್ಸು, ಸಿದ್ಧಿ, ಅಧಿಕಾರ ಪಡೆದುಕೊಂಡವರಿದ್ದಾರೆ.
ಜಾತಕದಲ್ಲಿ ಸೂರ್ಯ, ಗುರು, ಬುಧ, ರಾಹು ಗ್ರಹಗಳ ಸಿದ್ಧಿ ಜೋರಾಗಿ ದಕ್ಕಿದೆ ಎಂದಾಗ, ಇಲ್ಲ ಈ ಗ್ರಹಗಳಿಂದ ದೋಷವಿದೆ ಎಂದಾದರೆ ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣ ಲಾಭದಾಯಕ. "ಜಗತøಭುಂ ದೇವ ದೇವಮನಂತಂ ಪುರುಷೋತ್ತಮ್, ಸ್ತುವನ್ನಾಮ ಸಹಸ್ರೇಣ ಪುರುಷಃ ಸತತೋತಿ§ತಃ- ಎಂಬ ಇಷ್ಟೇ ಸಾಲಿನ ಪಠಣ ಒಳಗಿನ ಹೊರಗಿನ ಶತ್ರುಗಳನ್ನು ನಿವಾರಿಸಿ ತೀವ್ರತರವಾದ ಯಶಸ್ಸನ್ನು ಬದುಕಿನಲ್ಲಿ ಸಂಪಾದಿಸಿಕೊಂಡು ಅನೇಕರಿದ್ದಾರೆ. ಈಗ ಅವರ ಹೆಸರಿನ ಪ್ರಸ್ತಾಪಬೇಡ. ದಕ್ಷಿಣ ಕನ್ನಡದ ರಾಜಕಾರಣಿ ಇವರು. ಶ್ರೀ ವಿಷ್ಣು ಸಹಸ್ರನಾಮಾವಳಿ ಪಠಣದಿಂದ ತಮ್ಮ ಪಕ್ಷದ ದೊಡ್ಡ ಯಶಸ್ಸು ಜಿಲ್ಲೆಯಲ್ಲಿ ಸಿಗಲು ಕಾರಣರಾಗಿ ಪ್ರಾಮಾಣಿಕರಾಗಿ, ದೊಡ್ಡ ನಾಯಕರಾಗಿ ಬೆಳೆದರು. ಇವರ ಬಗೆಗೆ ಜನರು (ಇವರ ಜಿಲ್ಲೆಯಲ್ಲಿ ಮಾತ್ರವಲ್ಲ) ದೇಶ ವ್ಯಾಪಿ ಸಾದರ ಪೂರ್ವಕವಾದ ಪ್ರಶಂಸೆಯ ಮಾತುಗಳನ್ನು ಆಡುತ್ತಾರೆ. ಕಿಂಚಿತ್ತೂ ಸ್ವಾರ್ಥವಿರದೆ ಜನರ ಬಗೆಗೆ ದುಡಿದರು. ಯಾವುದನ್ನೂ ಅತಿಯಾಗಿ ಯೋಚಿಸದೆ ಅಜಾತ ಶತ್ರುತ್ವವನ್ನ ನಿರ್ಮಿಸಿಕೊಂಡರು.
ಜ್ಯೋತಿಷಿಯನ್ನು ಸಂಧಿಸಿದೆಯೇ ವಿಷ್ಣು ಸಹಸ್ರನಾಮ ಪಠಣದ ಮೂಲಕ ಕಷ್ಟಗಳ ನಿವಾರಣೆ ಮಾಡಿಕೊಳ್ಳುವ ಬಗೆಗೆ ಇನ್ನಿಷ್ಟನ್ನು ಮುಂದಿನ ವಾರ ಚರ್ಚಿಸೋಣ.
sangraha
ಕುಜಗ್ರಹ ದೋಷ ಮತ್ತು ದಾರಿದ್ರ್ಯ ಅಂದರೆ ಏನು?
ಕುಜ ಗ್ರಹವು ಅನೇಕ ಉಪಟಳಗಳನ್ನು ನೀಡುವ ದುಷ್ಟ ಗ್ರಹ. ಕುಜನ ಜೊತೆಗಿನ ರಾಹು, ಕುಜನ ಜೊತೆಗಿನ ಶನೈಶ್ಚರ, ರವಿ ಹಾಗೂ ಕ್ಷೀಣ ಚಂದ್ರರು ಜೀವನವನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಬಲ್ಲ ರು. ಶುಕ್ರ ಗ್ರಹ ವಂತೂ ಲೈಂಗಿಕ ಜೀವನವನ್ನು ಸಾಕ್ಷಾತ್ ನರಕವನ್ನಾಗಿಸಬಲ್ಲದು. ಮೇಲ್ನೋಟಕ್ಕೆ ಏನೂ ತಿಳಿಯದೇ ಹೋದರೂ ಒಳಗೊಳಗೇ ಸುಡುವ ಕುದಿ ಎಣ್ಣೆಯ ತಾಪವನ್ನು ಕುಜ ಗ್ರಹವು ಕೆಲ ಗ್ರಹಗಳ ಜೊತೆ ಸೇರಿ ಬದುಕನ್ನು ಬವಣೆಗಳ ಕೂಪವನ್ನಾಗಿಸಬಲ್ಲದು. ಭಾರತದ ಬಹು ಬಲಾಡ್ಯ ನಾಯಕನೊಬ್ಬನಿಗೆ ಕುಜ ಗ್ರಹ ದೋಷವು ಇರದಿದ್ದರೆ, ಸಾಧನೆಯ ಶಿಖರ ಏರಲು ತುಂಬಾ ಅವಕಾಶಗಳು ಕೂಡಿ ಬರುತ್ತಿದ್ದವು. ಆದರೆ ಈ ರಾಷ್ಟ್ರ ನಾಯಕನಿಗೆ ಮೂಲತಃ ತನ್ನ ವೈಯಕ್ತಿಕ ಸಮಸ್ಯೆಗಳನ್ನೇ ನೀಗಿಸಿಕೊಳ್ಳಲು ಸಾಧ್ಯವಾಗದೇ ಹೋಗಿದ್ದು ಜನ್ಮ ಕುಂಡಲಿಯಲ್ಲಿ ಅಂಟಿಕೊಂಡಿದ್ದ ಕುಜ ದೋಷದ ಪರಿಣಾಮದಿಂದ ಎನ್ನಬಹುದು. ಜೊತೆಗೆ ದೋಷಪೂರ್ಣ ಕುಜಗ್ರಹವನ್ನು ಶನಿ ತನ್ನ ಕ್ರೂರ ದೃಷ್ಟಿಯಿಂದ ನೋಡಿರುವುದು, ವೈಯಕ್ತಿಕ ಬದುಕಿನಲ್ಲಿ ಎಲ್ಲಾ ಇದ್ದೂ ಏನನ್ನೂ ಪಡೆದಿಲ್ಲವೆಂಬ ಮನೋ ಸ್ಥಿತಿಯಲ್ಲಿ ಈ ನಾಯಕನನ್ನು ಅತಂತ್ರವಾಗಿಸಿದೆ. ಕ್ಷೀಣನಾದ ಚಂದ್ರನಿಂದಾಗಿ ಮಾತಿನ ಶಕ್ತಿ ಯಾಗಲೀ, ಸ್ಥೈರ್ಯವಾಗಲೀ ಇಲ್ಲವಾಗಿದೆ.
ಈ ನಾಯಕ ಯಾರು ಎಂಬುದು ಇಲ್ಲಿ ಮುಖ್ಯವಲ್ಲ. ನಾಯಕನ ಪರ ದಾಟಗಳು ಮುಖ್ಯ. ಒಂದು ರೀತಿಯ ದಾರಿದ್ರ್ಯ ಆತನ ಜೀವನವನ್ನು ಸುತ್ತುವರಿದಿದೆ. ಧನಕನಕಗಳ ಕೊರತೆಯೊಂದೇ ದಾರಿದ್ರ್ಯವಲ್ಲ. ಧನಕನಕಗಳಿದ್ದೂ, ಆಳುಗಳು, ಸಹಾಯಕರು, ಆಜ್ಞಾಧಾರಕರು ಇದ್ದೂ ಶೂನ್ಯ ಸ್ಥಿತಿ. ಇದ ಕ್ಕೆ ಕುಜ ದೋಷ ವೇ ಪ್ರಧಾನ ಕಾರಣ.ಇನ್ನು ಕುಜ ದೋಷ ಕ್ಕೆ ಸರ್ಪ, ಶನಿ, ಕ್ಷೀಣ ಚಂದ್ರರು ಇನ್ನಿಷ್ಟು ಕೆಂಡ ಸುರಿದು ಯಾತನೆಯ ಕೆಂಡಗಳು ಪ್ರಜ್ವಲಿಸುವಂತೆ ಮಾಡಿದ್ದಾರೆ.
ಕುಜ ಗ್ರಹ ಮತ್ತು ಸಂತಾನ ಉಪಟಳ
ಸಂತಾನವೇ ಆಗದಿರುವುದು ಒಂದು ಬಾಧೆ. ಆದರೆ ಸಂತಾನ ಭಾಗ್ಯ ಇದ್ದೂ ಪುತ್ರನ, ಪುತ್ರಿಯ ಉಪ ಟಳಗಳನ್ನು ಎದುರಿಸುತ್ತಿರುವ ಕೋಟಿಗಟ್ಟಲೆ ಜನರಿದ್ದಾರೆ. ಶ್ರದ್ಧೆ, ಮೇಧಾ ಶಕ್ತಿ, ಯಶಸ್ಸು, ಪ್ರಜ್ಞಾ ಬ ಲ, ವಿದ್ಯೆ, ಬುದ್ಧಿ, ಸಂಪತ್ತು, ತೇಜಸ್ಸು, ಆರೋಗ್ಯ, ಆಯಸ್ಸು ಇತ್ಯಾದಿ ಎಲ್ಲಾ ಸಮೃದ್ಧಿಯ ದಿಕ್ಕಿನಲ್ಲಿ ಸ್ವಸ್ಥವಾಗಿದೆ ಎಂದು ತಿಳಿದು ಕೊಂಡ ಸರಿಯಾದ ಸಂದರ್ಭದಲ್ಲಿಯೇ ಪುತ್ರನ, ಪುತ್ರಿಯ ಉಪಟಳ ಶುರುವಾದಾಗ ಎಲ್ಲಾ ಯಶಸ್ಸುಗಳನ್ನು ಪಡೆದು ಏನು ಬಂತು? ಇಡೀ ಜೀವನದಲ್ಲಿ ಕಾಪಿಟ್ಟು ಕೊಂಡು ಬಂದ ವಂಶದ ಮರ್ಯಾದೆ, ವರ್ಚಸ್ಸು ಇತ್ಯಾದಿ ಬೀದಿಗೆ ಬಂದು ಇನ್ನಿಲ್ಲದ ತಾಪತ್ರಯಗಳ ಗೋಜ ಲಿಗೆ ಬದುಕನ್ನು ತಂದು ನಿಲ್ಲಿಸಬಹುದಾಗಿದೆ. ಏನೇ ಮಾಡಿದರೂ ಪುತ್ರನಿಗೋ, ಪುತ್ರಿ ಗೋ ತಂದೆ-ತಾಯಿಯನ್ನು ಬಿಟ್ಟು ಅನ್ಯ ರೇಹಿತವಾಗಿ, ಹಿತೈಷಿಗಳಾ ಗಿ ಕಾಣುತ್ತಾ ರೆ.
ಎಂತೆಂಥ ಸಮರ್ಥ ಶಕ್ತಿ ಶಾಲಿ ಜನರು ಈ ಬಳಲಿಕೆಯನ್ನು ಪಡೆದಿಲ್ಲ? ಬಹು ಮನ್ನಣೆ ಪಡೆದ ವ್ಯಕ್ತಿಗಳು ತಮ್ಮ ಸಾರ್ವಜನಿಕ ಜೀವನದ ಯಶಸ್ಸಿನ ನಾಗಾಲೋಟದಲ್ಲಿ ಮುಗ್ಗರಿಸಿನಗೆ ಪಾಟಲಿಗೆ ಈಡಾದ ದ್ದು ಸಂತಾನವೇ ಶನಿಯಾಗಿ ಕಾಡಿದಾಗ. ಇದಕ್ಕೆ ಸಾವಿರಾರು ಉದಾಹರಣೆ ಕೊಡಬಹುದು. ಇವರ ಜಾತಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುಜನ ಬಾಧೆ ಅಪಾರಮಟ್ಟದ್ದಾಗಿರುತ್ತದೆ. ತಣ್ಣಗೆ ಹರಿತ ವಾದ ಚೂರಿಯೊಂದನ್ನು ಬೆನ್ನಿಗಿರಿಸಿ ಕುಜನು ವಿರೋಧಿಗಳ ಮೂಲಕ ತಂದೆ -ತಾಯಿಗಳಿಗೆ ಈ ಯಾತನೆ ಕೊಡುತ್ತಿರುತ್ತಾನೆ. ಯಾರ ಬಳಿ ಯೂ ಹೇಳಿಕೊಳ್ಳಲಾಗದು. ಬವಣೆಯನ್ನು ತಣ್ಣಗೆ ಒಳಗೇ ಅನುಭವಿಸಲೂ ಆಗದು. ಇಂಥ ಯಾತನೆ ದೇವರಿಗೇ ಪ್ರಿಯ.
ವಿವಾಹೇತರ ಸಂಬಂಧಗಳು ಮತ್ತು ನರಕ ಕೂಪ
ಯಾವುದೋಮಾಯೆಯು ಸರ್ರನೆ ವ್ಯಕ್ತಿಗಳನ್ನು ವಿವಾಹೇತರ ಬಾಹ್ಯ ಸಂಬಂಧಗಳಿಗೆ ತಳ್ಳಿ ಬಿಡುತ್ತವೆ. ಸುಸ್ಥಿತ ಸಂಯೋಜನೆ ಹೊಂದಿರದಿದ್ದಲ್ಲಿ ಕುಜ-ಶುಕ್ರ ರು ಇಂಥದ್ದೊದು ಯಾತ ನೆ ಗೆ ಒಬ್ಬ ವ್ಯಕ್ತಿಯನ್ನು ತಳ್ಳಿ ಬಿಡಬಹುದು. ಈಗ ದೇಶಾದ್ಯಂತ ಅತ್ಯಾಚಾರದ ಸಂಬಂಧವಾಗಿ ಬಹುದೊಡ್ಡ ಚರ್ಚೆ, ಹೆಚ್ಚು ಹೆಚ್ಚು ಸ್ಫೋಟಕ ಸುದ್ದಿಗಳು ಕೇಳಿ ಬರುತ್ತಿವೆ. ಕುಜ ಗ್ರಹದ ಉಪಟಳ ವೇ ಇರ ದೆ ಸಹ ಜ ವ ಲ್ಲದ ಲೈಂಗಿಕ ಹಗರಣಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಘಟಿಸಲಾರವು. ಪ್ರಾರಂಭದಲ್ಲಿ ಅತ್ಯಂತ ಮನೋಲ್ಲಾಸದ ಸಂಗತಿಯಾಗಿ ಏರ್ಪಡುವ ಲೈಂಗಿಕ ಸಂಪರ್ಕಗಳು ಕಾಲ ಕ್ರಮೇಣ ಬಾಯೆ¤ರೆದು ನುಂಗುವ ಸರ್ಪದ, ಹೆಬ್ಟಾವಿನ ದುರ್ಗಮ ಗುಹೆಗಳಾಗುತ್ತವೆ. ಕ್ಷಣ ಮಾತ್ರದ ವಿವೇಚನಾರಹಿತ ಅಚಾ ತುರ್ಯ ಜೀವನದ ಸುಖವನ್ನೇ ಆಪೋಶನ ಪಡೆದು ಬಿಡುತ್ತವೆ. ಇಳಿ ವಯಸ್ಸಿನಲ್ಲಿ ಎಷ್ಟೆಲ್ಲಾ ಪಾಡು ಗ ಳನ್ನು ಪಡುತ್ತಾ, ಬವಣೆ ಹೊಂದಿ ನರಳುತ್ತಿರುವ ವ್ಯಕ್ತಿಗಳಲ್ಲಿ ಶುಕ್ರ ಹಾಗೂ ಕುಜ, ಕುಜ ಹಾಗೂ ರಾಹು, ಕುಜ ಹಾಗೂ ಶನಿ ಗ್ರಹಗಳು ನಿರ್ದಿಷ್ಟ ಸುಯೋಜನೆ ಗೋ, ದುಷ್ಟದೋಷಕ್ಕೋ ಒಳಗಾದಾಗ ಪಡಿ ಪಾಟಲುಗಳಿಗೆ ಸುಲಭವಾಗಿ ಲೈಸೆನ್ಸ್ ಸಿಕ್ಕಿತು ಎಂದೇ ಅರ್ಥ.
ಭಾರ ತೀ ಯ ಚಿತ್ರ ರಂಗ ದ ಮೇರು ನ ಟ ನೊ ಬ್ಬ ಅನು ಭ ವಿ ಸು ತ್ತಿ ರು ವ ಕುಜ ಶುಕ್ರ ಯುತಿ ದೋಷ ಅಂತಿಂಥ ದ್ದ ಲ್ಲ. ತನ್ನ ಸೂಕ್ಷ್ಮ ವಾ ದ ಮಂಡ ನೆ, ತೂಕ ದ ಮಾ ತು, ವಾಗ್ಮಿ ಯಾ ಗಿ, ಎಷ್ಟೆ ಲ್ಲಾ ಕೋರ್ಟ್ ಕೇಸು ಗ ಳ ನ್ನು ಗೆದ್ದ ಬಹು ದೊ ಡ್ಡ ಲಾಯ ರ್ ಒಬ್ಬ ರು, ವೈಯ ಕ್ತಿ ಕ ಜೀವ ನ ದ ಲ್ಲಿ ಕುಜ ಶುಕ್ರ ಯುತಿ ದೋಷ ದಿಂದ ಪ ಟ್ಟ, ಪಡು ತ್ತಿ ರು ವ ಬವ ಣೆ ಅಂತಿಂಥ ದ್ದ ಲ್ಲ. ಈಗ ನಿಧ ನ ರಾ ಗಿ ರು ವ ಬಹು ಚಾ ಣಾ ಕ್ಷ, ಸೂಕ್ಷ್ಮ ಸಂವೇ ದ ನೆ ಯ, ಪರ ರಾ ಜ್ಯ ದ ಮುಖ್ಯ ಮಂತ್ರಿ ಯೊ ಬ್ಬ ರು ಜೀವ ನ ದ ಅಂತ್ಯ ದ ಲ್ಲಿ ಅನು ಭ ವಿ ಸಿ ದ ಮನೋ ವೇ ದ ನೆ ಗೆ ಆ ಸಂದ ರ್ಭ ದ ಲ್ಲಿ ಕೂಡಿ ಬಂದ ದೋಷ ಯು ಕ್ತ ಕುಜ ನ ದಶಾ ಕಾ ಲವೇ ಆದದ್ದು ಒಂದು ಆಕಸ್ಮಿಕವೇನಲ್ಲ. ಅಕ್ರಮ ದೈಹಿಕ ಸಂಬಂಧ, ಸ್ತ್ರೀ ಶಾಪ, ಸ್ತ್ರೀಯರಿಗೆ ಪುರುಷ ರೂಕ್ಷ ದೋಷ ಇತ್ಯಾದಿಗಳು ಇನ್ನಿಲ್ಲದ ಯಾತನೆಗಳ ಸುರಿಮಳೆಯನ್ನೇ ಸುರಿದಾವು.
ವೈವಾಹಿಕ ವಿಳಂಬ, ಬಾಳ ಸಂಗಾತಿಗಳ ಬವಣೆ ಇತ್ಯಾದಿ
ಬದುಕು ಎಲ್ಲಾ ಘಟ್ಟದಲ್ಲೂ ಸೂಕ್ಷ್ಮವಾದ ಒಂದು ಪರೀಕ್ಷೆ ಇದ್ದಂತೆ. ಜಟಿಲವಾದ ಗಣಿತವಿ ದ್ದಂತೆ. ಹೀಗಾಗಿ ಆಚಾ ರ, ವಿಚಾರಗಳನ್ನು, ರೂಢಿಯಲ್ಲಿನ ಸಂವಿಧಾನವನ್ನು ಮೀರಿ ವರ್ತಿಸಬಾರದು. ಹಾಗೆ ಅತಿ ಕ್ರಮಿಸಿ, ದುರ್ವರ್ತನೆ ತೋರಿದರೆ ಒಂದು ಘಟ್ಟದಲ್ಲಿ ಯಶಸ್ಸು ಸಿಕ್ಕಂತೆ ಅನಿಸಿದರೂ, ಪರಿಸ್ಥಿತಿ ಕೈ ಮೀರಿದಾಗ ಬಳಲಿಕೆ ಕಟ್ಟಿಟ್ಟದ್ದು. ಕುಜ ದೋಷ ವಿವಾಹ ನೆರವೇರದಂತೆ ಮಾಡಬಹುದು. ವಿವಾಹವಾದರೂ ವೈವಾಹಿಕ ಸುಖಕ್ಕೆಸವ ಕಳಿ ತಲೆ ದೋರಬಹುದು. ಮನೆಯಲ್ಲಿಯೇ ಎಲ್ಲ ವೂ ಸರಿಯಿಲ್ಲದಿದ್ದರೆ ಹೊರಗಿನದನ್ನು ನಿಯಂತ್ರಿಸಲು ಕಷ್ಟವಾದೀತು. ಅವಹೇಳನ, ವ್ಯಂಗ್ಯ, ನಗೆ ಪಾಟಲುಗಳಿಗೆ ಗುರಿಯಾಗಬಹುದು. ಗಂಡ ಹೆಂಡತಿಯರ ನಡುವಣ ಅಸ ಮ ತೋಲ ನ ಸ್ಥಿತಿ ಮಕ್ಕ ಳ ಮನೋ ಬಲವನ್ನು ಕುಸಿಯುವಂತೆ ಮಾಡ ಬಹುದು. ಚಿಕ್ಕ ತಪ್ಪೂ ಬದು ಕ ನ್ನು ಹಾಳು ಮಾಡ ಬ ಹು ದು. ಇಂದಿ ನ ವಿವಾಹಗಳು ಬೇಗ ಮುರಿದು ಬೀಳುತ್ತಿವೆ. ತಂದೆ-ತಾಯಿ ಗಳ ಸ್ವೇಚ್ಛೆ ಮಕ್ಕಳನ್ನು ಮಾನಸಿಕ ಯಾತನೆಗೆ ತಳ್ಳುತ್ತವೆ. ತಲೆ ಮಾರಿನ ಪ್ರಶ್ನೆ ನಿತ್ಯದ ಬವಣೆಗಳಾಗಿರಾಷ್ಟ್ರೀ ಯ ಸಮ ಸ್ಯೆಗಳಿಗೆ ಮೂಲವಾದೀತು. ಎಚ್ಚರ ಇರಲಿ.
-SANGRAHA
Wednesday, 29 November 2017
ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ
ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ
ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್
ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II
ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್
ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ II೨II
ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ
ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II
ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ
ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ II೪II
ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್
ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II
ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ
ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II
ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ
ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ II೭II
ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ
ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್II ೮II
Iಇತಿ ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ಸಂಪೂರ್ಣಂI
IIಶ್ರೀಕೃಷ್ಣಾರ್ಪಣಮಸ್ತು II
Subscribe to:
Posts (Atom)