Friday, 24 November 2017
ನವಗ್ರಹ ಸ್ತೋತ್ರ
ನವಗ್ರಹ ಸ್ತೋತ್ರ
ಸೂರ್ಯ
ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ|
ತಮೋಘ್ನಂ ಪ್ರಣತೋಸ್ಮಿ ದಿವಾಕರಂ|
ಕಾಶ್ಯಪ ಮುನಿಗಳ ವಂಶದಲ್ಲಿ ಜನಿಸಿ ಕೆಂಪು ದಾಸವಾಳ ಹೂವಿನಂತೆ ರಕ್ತವರ್ಣವುಳ್ಳವನಾಗಿ ಪ್ರಚಂಡ ಪ್ರಕಾಶಪುಂಜನಾಗಿ ದರ್ಶನ ವಿತ್ತು ತನ್ನನ್ನು ಪೂಜಿಸುವವರ ಪಾಪರಾಶಿಯನ್ನು ಭಸ್ಮಮಾಡುವ ಅಂಧಕಾರಕ್ಕೆ ವೈರಿಯಾದ ಸೂರ್ಯದೇವನಿಗೆ ನಮಸ್ಕರಿಸುತ್ತೇನೆ.
ಚಂದ್ರ
ಧದಿಶಂಖ ತುಷಾರಾಭಂಕ್ಷೀರೋದಾರ್ಣವ ಸಂಭವಂ|
ನಮಾಮಿ ಶಶಿನಂ ದೇವಂ ಶಂಭೋ ಮುರ್ಕುಟಭೂಷಣಂ||
ಕ್ಷೀರ ಸಾಗರದಲ್ಲಿ ಉದಿಸಿ ಧದಿ ಶಂಖ ಹಿಮ ಬಿಂದುಗಳಂತೆ ಬಿಳುಪಾದ ಕಾಂತಿಯುಳ್ಳವನಾಗಿ ಪರಮೇಶ್ವರನ ಶಿರೋಭರಣನಾಗಿ ಸಕಲ ಸಂಪತ್ತನ್ನೂ ನೀಡುವ ಚಂದ್ರನನ್ನು ನಮಸ್ಕರಿಸುತ್ತೇನೆ.
ಮಂಗಳ
ಧರಣೀಗರ್ಭ ಸಂಭೂತಂ ವಿಧ್ಯುತ್ಕಾಂತಿ ಸಮಪ್ರಭಂ|
ಕುಮಾರಂ ಶಕ್ತಿಹಸ್ತಂಚ ಮಂಗಳಂ ಪ್ರಣಮಾಮ್ಯಹಂ||
ಭೂದೇವಿಯ ಗರ್ಭದಲ್ಲಿ ಜನಿಸಿ ಮಿಂಚಿನಂತೆ ಪ್ರಕಾಶವುಳ್ಳವನಾಗಿ ಹಸ್ತದಲ್ಲಿ ಶಕ್ತ್ಯಾಯುಧವನ್ನು ಧರಿಸಿ ಕುಮಾರ ರೂಪವುಳ್ಳವನಾಗಿ "ಮಂಗಳ"ಎಂಬ ನಾಮಧ್ಯೇಯನಾಗಿರುವ ಅಂಗಾರಕನನ್ನು ನಮಸ್ಕರಿಸುತ್ತೇನೆ.
ಬುಧ
ಪ್ರಿಯಾಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಾ ಬುಧಂ|
ಸೌಮ್ಯಂ ಸೌಮ್ಯ ಗುಣೋಪೇತಂ ನಮಾಮಿ ಶಶಿನ ಸುತಂ||
ಪ್ರಿಯಾಂಗು ಪುಷ್ಪದ ಮೊಗ್ಗಿನಂತೆ ಕೃಷ್ಣವರ್ಣನಾಗಿ ಅನುಪಮನಾಗಿ ಅತಿ ಸುಂದರಾಕಾರನಾಗಿ ಉತ್ತಮ ಜ್ಞನವೇ ಮೊದಲಾದ ಗುಣಗಳಿಗೆಲ್ಲಾ ಕಾರಣ ಭೂತನಾಗಿ ಇರುವ ಚಂದ್ರನ ಪುತ್ರನಾದ ಬುಧನನ್ನು ನಮಸ್ಕರಿಸುತ್ತೇನೆ.
ಗುರು
ದೇವಾನಾಂಚ ಋಷೀಣಾಂಚ ಗುರುಕಾಂಚನ ಸನ್ನಿಭಂ|
ಗುರುಚೈವ ತ್ರಿಲೋಕಸ್ಯ ತಂಗುರು ಪ್ರಣಮಾಮ್ಯಹಂ||
ದೇವತೆಗಳಿಗೂ ಋಷಿಗಳಿಗೂ ಗುರುವಾಗಿ ಪರಿಶುದ್ದವಾದ ಸ್ವರ್ಣದಂತೆ ಕಾಂತಿಯುತನಾಗಿ ಜ್ಞಾನರೂಪನಾಗಿ ತ್ರಿಲೋಕೇಶನಾಗಿ ದರ್ಶನವೀವ ಬೃಹಸ್ಪತಿಯನ್ನು ನಮಸ್ಕರಿಸುತ್ತೇನೆ.
ಶುಕ್ರ
ಹಿಮಕುಂದ ಮೃಣಲಾಭಂ ದೈತ್ಯಾನಾಂ ಪರಮಗುರುಂ|
ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ||
ಬೃಗು ವಂಶೋದ್ಬವನಾಹಿ ಹಿಮಕಿರಣ ಕುಂದಪುಷ್ಪ ಕಮಲನಾಳ ಮೊದಲಾದವುಗಳಂತೆ ಕಾಂತಿಯುತನಾಗಿ ರಾಕ್ಷಸರಿಗೆ ಶ್ರೇಷ್ಟವಾದ ಆಚಾರ್ಯನಾಗಿ ಎಲ್ಲಾ ಶಾಸ್ತ್ರಗಳನ್ನು ಭೋದಿಸುವ ಪ್ರತಿಭೆಯನ್ನು ಪಡೆದಿರುವ ಶುಕ್ರಾಚಾರ್ಯನನ್ನು ನಮಸ್ಕರಿಸುತ್ತೇನೆ.
ಶನಿ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|
ಛಾಯಾ ಮಾರ್ತಾಂಡ ಸಂಭೂತಂ ವಂದೇಹಂ ತಂಶನೈಶ್ಚರಂ||
ಛಾಯಾ ದೇವಿಯಲ್ಲಿ ಸೂರ್ಯನಿಂದ ಜನಿಸಿದ ಸುಪುತ್ರನಾಗಿ ನೀಲಾಂಜನದಂತೆ ಕಾಂತಿಯಿಂದ ಕೂಡಿದ ಶರೀರವುಳ್ಳವನಾಗಿ ಯಮನಿಗೆ ಅಗ್ರಜನಾದ ಶ್ರೀ ಶನೀಶ್ವರನನ್ನು ನಮಸ್ಕರಿಸುತ್ತೇನೆ.
ರಾಹು
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯಾದಿ ಮರ್ದನಂ|
ಸಿಂಹಿಕಾಗರ್ಭ ಸಂಭೂತಂ ತಂರಾಹುಂ ಪ್ರಣಮಾಮ್ಯಹಂ||
ಸಿಂಹಿಕೆಯ ಗರ್ಭದಲ್ಲಿ ಉದಿಸಿ ತಲೆಯಯೊಂದಿಗೆ ಶೋಭಿಸುವ ಅರ್ಧಕಾಯನಾದರೂ ಮಹಾವೀರನಾಗಿ ಚಂದ್ರ-ಸೂರ್ಯರನ್ನು ತೊಂದರೆಗೊಳಿಸುವ ರಾಹುಗ್ರಹವನ್ನು ನಾನು ನಮಸ್ಕರಿಸುತ್ತೇನೆ.
ಕೇತು
ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ|
ರೌದ್ರಂ ರೌದ್ರಾತ್ಮಕಂ ಘೋರಂ ತಂಕೇತುಂ ಪ್ರಣಮಾಮ್ಯಹಂ||
ಪಲಾಶಪುಷ್ಪಕ್ಕೆ ಸಮಾನವಾದ ರಕ್ತಕಾಂತಿಯುಳ್ಳವನಾಗಿ ಶಿರೋಭಾಗನಾಗಿ ನಕ್ಷತ್ರಗಳನ್ನು ಗ್ರಹಗಳನ್ನು ಉಳ್ಳವನಾಗಿ ರೌದ್ರನಾಗಿ ಪಾಪಿಗಳಲ್ಲಿ ಅತ್ಯಂತ ಕುಪಿತನಾಗಿ ಭಯಂಕರಾಕಾರಕನಾಗಿ ತೋರುವ ಕೇತುವನ್ನು ನಮಸ್ಕರಿಸುತ್ತೇನೆ.
ಸರಸ್ವತಿ ಸ್ತೋತ್ರ ನಿತ್ಯ ಪ್ರಾರ್ಥನೆಗೆ
ಸರ್ವ ಸ್ವರೂಪೇ ಸರ್ವೇಶೆ ಸರ್ವಶಕ್ತಿ ಸಮನಿತೆ
ಭಯೋಭ್ಯಶ್ತ್ರಾಹಿ ನೋ ದೇವಿ ದುರ್ಗೆದೇವಿ ನಮೋಸ್ತುತೆ
ರೋಗಾನಾಶೇನ ಪಹಂಸಿತುಷ್ಟಾ ರೋಷ್ಟಾತುಕಾಮಾನ್ ಸಕಲಾನಭೀಷ್ಟಾನ್
ಸರ್ವಭಾಧಾ ಪ್ರಕಾಶಮಾನಾ ತ್ರೈಲೋಕ್ಯಾಸಾಬಿಲೇಶ್ವರಿ
ಏವ ಮೇವತ್ವ ಯಾಕಾರ್ಯ ಸುಸ್ಮದ್ವರಿ ವಿನಾಶನಮ್.
ಅಥವ ಓದಲು ಕುಳಿತುಕೊಳ್ಳುವ ಮುನ್ನ ಬರೆಯುವ ಮುನ್ನ ೧೧ಸಲ ಈ ಮಂತ್ರವನ್ನು ಜಪಿಸುವುದು.
*ಓಂ ವವ ವದ ವಾಗ್ದೇವಿಯೇ ಸ್ವಾಹಾ*
ಸರ್ವಗ್ರಹ ಪೀಡೆ ನಿವಾರಣೆಗೆ ಗ್ರಹದೋಷಗಳಿಗೆ ದರಿದ್ರನಾಶಕ್ಕೆ ಜನ್ಮಪರ್ಯಂತ ಯಾವುದೇ ದೋಷ ಇರದಂತೆ ಮಾಡಲು.
"ಓಂನಮೋ ಭಾಸ್ಕರಾಯ ಮಮ ಸರ್ವ ಗ್ರಹಪೀಡಾ ನಿವಾರಣಂ ಕುರುಕುರು ಸ್ವಾಹಾ" ೧೦೮ಸಲ ಜಪಿಸಿರಿ ನಂತರಈ ಕೆಳಗಿನ ವಸ್ತುಗಳನ್ನು ಒಂದು ಮುಚ್ಚಳ ಸಹಿತ ಗಡಿಗೆ ಅಥವ ಮಡಿಕೆಯಲ್ಲಿ ಹಾಕಿ ಅರಳಿ ಮರದ ಬುಡದಲ್ಲಿ ಶನಿವಾರ ಸಾಯಂಕಾಲದ ನಂತರ ಇಟ್ಟು ಬರಬೇಕು.ಅಥವ ಅರಳಿ ಮರದ ಬೇರಿನ ಕೆಳಗೆ ಗುಂಡಿ ತೆಗೆದು ಮುಚ್ಚಬೇಕು.
ಗಡಿಗೆ ಅಥವ ಮಡಿಕೆಯಲ್ಲಿ ಹಾಕಬೇಕಾದ ವಸ್ತುಗಳು.
ಎಕ್ಕದಬೇರು,ಉಮ್ಮತ್ತಿ ಬೇರು,ಉತ್ತರಾಣಿ ಬೇರು,ಧರ್ಭೆಬೇರು,ರಾಗಿ ಬೇರು,ನೇರಳೇಬೆರು,ಮತ್ತು ಎಲೆ ಅತ್ತಿ ಎಲೆ ಮಾವಿನ ಎಲೆ ಒಂದು ಹೊಸ ಗಡಿಗೆ ಅಥವ ಮಡಿಕೆ ಹಾಲು
ತುಪ್ಪ ಜೇನು, ಅಕ್ಕಿ ಗೋದಿ ಹೆಸರುಕಾಳು,ಎಳ್ಳು, ಬಿಳಿಸಾಸಿವೆ,ಧರ್ಭೆ,ಚಂದನ,ಗೋಮೂತ್ರ ಎಲ್ಲವನ್ನು ಸೇರಿಸಿ ಶನಿವಾರ ಸಾಯಂಕಾಲ ಸ್ನಾನ ಮಾಡಿ ದೇವರ ಮುಂದಿಟ್ಟು ಮೇಲಿನ ಮಂತ್ರವನ್ನು ೧೦೮ಸಲ ಜಪಿಸುತ್ತಾ ಈ ಎಲ್ಲಾ ವಸ್ತುಗಳನ್ನು ಗಡಿಗೆಯಲ್ಲಿ ಹಾಕಿ ಕೊನೆಯಲ್ಲಿ ಮಂಗಳಾರತಿ ಮಾಡಿ ಮನೆಯವರೆಲ್ಲರೂ ಅದಕ್ಕೆ ನಮಿಸಿ ನಂತರ ಅದನ್ನು ಅರಳಿ ಮರದ ಬುಡದಲ್ಲಿ ಇಟ್ಟು ಬರಬೇಕು.
ಈ ರೀತಿ ಮಾಡುವುದರಿಂದ ಯಾವುದೇ ಗ್ರಹದೋಶ ಮತ್ತು ದರಿದ್ರತೆ ನಿವಾರಣೆಯಾಗುತ್ತದೆ.ಜನ್ಮಾಂತರದಲ್ಲಿ ಇನ್ನುಮುಂದೆ ಯಾವುದೇ ಕಾಟ ತಟ್ಟುವುದಿಲ್ಲ.
ಜೊತೆಯಲ್ಲಿ ಈ ರೀತಿ ಮಾಡುವುದು,
ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಈ ಕೆಳಗಿನ ವಸ್ತುಗಳಿಂದ ದೂಪದ ಹೊಗೆಹಾಕಿದರೆ ದುಷ್ಟಶಕ್ತಿಗಳ ಕಾಟ,ಭೂತ,ಪ್ರೇತ,ಶಾಕಿನಿ,ಡಾಕಿಣಿ,ಮಾಟ,ಇತ್ಯಾದಿಗಳಕಾಟ ದೂರವಾಗುತ್ತದೆ.
ವಸ್ತುಗಳು:-
ಗರಿಕೆ,ಧರ್ಬೆ,ಬಿಳಿಸಾಸಿವೆ,ಹಿಪ್ಪೇಬೀಜ(ಬೀಜ ಸಿಗದಿದ್ದಾಗ ಹಿಪ್ಪೆ ಎಣ್ಣೆ)ಧಶಾಂಗಧೂಪ,ಕವಡೆ ಸಾಂಬ್ರಾಣಿ,ಪಚ್ಚಕರ್ಪೂರ,(ಇಲ್ಲವೇ ಬಿಲ್ಲೆ ಕರ್ಪೂರ)ಎಲ್ಲವನ್ನೂ ಸೇರಿಸಿ ಒಂದು ಅಗಲವಾದ ತಾಮ್ರದ ಬಟ್ಟಲಲ್ಲಿ ಹಾಕಿ ಕರ್ಪೂರ ಹಚ್ಚಿ ಹೊಗೆಯನ್ನು ಮನೆಯಲ್ಲಿ ಎಲ್ಲಾಕಡೆ ಹರಡಬೇಕು ಸ್ವಲ್ಪ ಸಮಯ ಈ ದೂಪವನ್ನು ಹಾಕಿ ನಂತರ ಕದ ಮುಚ್ಚಿ ಒಂದೆರಡು ನಿಮಿಷದನಂತರ ಕಿಟಕಿ ಬಾಗಿಲು ತೆರೆಯುವುದು.
Subscribe to:
Post Comments (Atom)
No comments:
Post a Comment