Wednesday, 29 November 2017
ಭಕ್ತಿಸಾಗರ ಮಂತ್ರಗಳು
ಭಕ್ತಿಸಾಗರ
ಪ್ರಾಮಾಣಿಕತೆ ಮತ್ತು ನಿರಾಡಂಬರ ದೈವಭಕ್ತಿಯೇ ಭೂಲೋಕದಲ್ಲಿ ಸ್ವರ್ಗ ಗಳಿಸುವ ರಹದಾರಿ
ಗಾಯತ್ರಿ ಮಂತ್ರಗಳು
ಗಾಯತ್ರಿ ದೇವಿ ಗಾಯತ್ರಿ ಮಂತ್ರ
ಓಂ ಭೂರ್ಭುವ: ಸ್ವ:
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನ: ಪ್ರಚೋದಯಾತ್
ಶ್ರೀ ಗಣೇಶ ಗಾಯತ್ರಿ ಮಂತ್ರಗಳು
ಓಂ ಲಂಬೋದರಾಯ ವಿದ್ಮಹೇ,
ಮಹೋದರಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಓಂ ಏಕದಂತಾಯ ವಿದ್ಮಹೇ,
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಓಂ ತತ್ಪುರುಷಾಯ ವಿದ್ಮಹೇ,
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಶ್ರೀ ಅಗ್ನಿ ಗಾಯತ್ರಿ ಮಂತ್ರಗಳು
ಓಂ ಮಹಾಜ್ವಾಲಾಯ ವಿದ್ಮಹೇ,
ಅಗ್ನಿದೇವಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್
ಓಂ ವೈಶ್ವಾನರಾಯ ವಿದ್ಮಹೇ,
ಲಾಲೀಲಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್
ಶ್ರೀ ಬ್ರಹ್ಮ ಗಾಯತ್ರಿ ಮಂತ್ರ
ಓಂ ಚತುರ್ಮುಖಾಯ ವಿದ್ಮಹೇ,
ಹಂಸಾರೂಢಾಯ ಧೀಮಹೀ
ತನ್ನೋ ಬ್ರಹ್ಮ ಪ್ರಚೋದಯಾತ್
ಶ್ರೀ ದುರ್ಗಾ ಗಾಯತ್ರಿ ಮಂತ್ರ
ಓಂ ಕಾತ್ಯಾಯನಾಯ ವಿದ್ಮಹೇ,
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್
ಶ್ರೀ ವಾಸವಿ ಗಾಯತ್ರಿ ಮಂತ್ರ
ಓಂ ಕುಸುಮ ಪುತ್ರೀಚ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹಿ
ತನ್ನೋ ವಾಸವಿ ಪ್ರಚೋದಯಾತ್
ಶ್ರೀ ಹಯಗ್ರೀವ ಗಾಯತ್ರಿ ಮಂತ್ರ
ಓಂ ವಾಣಿಸ್ವರಾಯ ವಿದ್ಮಹೇ,
ಹಯಗ್ರೀವಾಯ ಧೀಮಹೀ
ತನ್ನೋ ಹಯಗ್ರೀವ ಪ್ರಚೋದಯಾತ್
ಶ್ರೀ ಕೃಷ್ಣ ಗಾಯತ್ರಿ ಮಂತ್ರಗಳು
ಓಂ ದಾಮೋದರಾಯ ವಿದ್ಮಹೇ,
ರುಕ್ಮಿಣಿ ವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಓಂ ಗೋವಿಂದಾಯ ವಿದ್ಮಹೇ,
ಗೋಪಿವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಶ್ರೀ ನರಸಿಂಹ ಗಾಯತ್ರಿ ಮಂತ್ರ
ಓಂ ನರಸಿಂಹಾಯ ವಿದ್ಮಹೇ,
ವಜ್ರನಖಾಯ ಧೀಮಹೀ
ತನ್ನೋ ನರಸಿಂಹ ಪ್ರಚೋದಯಾತ್
ನಾರಾಯಣ ಗಾಯತ್ರಿ ಮಂತ್ರ
ಓಂ ನಾರಾಯಣಾಯ ವಿದ್ಮಹೇ,
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್
ಶ್ರೀ ಪೃಥ್ವಿ ಗಾಯತ್ರಿ ಮಂತ್ರ
ಓಂ ಪೃಥ್ವಿದೇವಾಯ ವಿದ್ಮಹೇ,
ಸಹಸ್ರ ಮೂರ್ತಯೇಚ ಧೀಮಹೀ
ತನ್ನೋ ಪೃಥ್ವಿ ಪ್ರಚೋದಯಾತ್
ಶ್ರೀ ರಾಮ ಗಾಯತ್ರಿ ಮಂತ್ರ
ಓಂ ದಶರಥಾಯ ವಿದ್ಮಹೇ,
ಸೀತಾವಲ್ಲಭಾಯ ಧೀಮಹೀ
ತನ್ನೋ ರಾಮ ಪ್ರಚೋದಯಾತ್
ಶ್ರೀ ಆಂಜನೇಯ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮಾನ್ ಪ್ರಚೋದಯಾತ್
ಶ್ರೀ ಇಂದ್ರ ಗಾಯತ್ರಿ ಮಂತ್ರ
ಓಂ ದೇವರಾಜಾಯ ವಿದ್ಮಹೇ
ವಜ್ರ ಹಸ್ತಾಯ ಧೀಮಹಿ
ತನ್ನೋ ಇಂದ್ರ ಪ್ರಚೋದಯಾತ್
ಶ್ರೀ ಬ್ರಹ್ಮ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ
ಚತುರ್ಮುಖಾಯ ಧೀಮಹಿ
ತನ್ನೋ ಬ್ರಹ್ಮ ಪ್ರಚೋದಯಾತ್
ಶ್ರೀ ಸರಸ್ವತಿ ಗಾಯತ್ರಿ ಮಂತ್ರ
ಓಂ ವಾಗ್ದೇವಿಯೈಚ ವಿದ್ಮಹೇ,
ವಿರಿಂಜಿ ಪತ್ನಿಯೈಚ ಧೀಮಹೀ
ತನ್ನೋ ವಾಣಿ ಪ್ರಚೋದಯಾತ್
ಶ್ರೀ ಸೀತಾ ಗಾಯತ್ರಿ ಮಂತ್ರ
ಓಂ ಜಾನಕಿನಂದಿನ್ಯೆ ವಿದ್ಮಹೇ,
ಭೂಮಿಜಾಯೈ ಧೀಮಹೀ
ತನ್ನೋ ಸೀತಾ ಪ್ರಚೋದಯಾತ್
ಶ್ರೀ ಶಿರಿಡಿಸಾಯಿ ಗಾಯತ್ರಿ ಮಂತ್ರ
ಓಂ ಶಿರಡಿವಾಸಾಯ ವಿದ್ಮಹೇ,
ಸಚ್ಚಿತಾನಂತಾಯ ಧೀಮಹೀ
ತನ್ನೋ ಸಾಯಿ ಪ್ರಚೋದಯಾತ್
ಶ್ರೀ ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ,
ಮಹಾದೇವಾಯ ಧೀಮಹೀ
ತನ್ನೋ ರುದ್ರ ಪ್ರಚೋದಯಾತ್
ಶ್ರೀ ಸುಬ್ರಮಣ್ಯ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ,
ಮಹಾಸೇನಾಯ ಧೀಮಹೀ
ತನ್ನೋ ಶನ್ಮುಗ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ವಲ್ಲಿನಾಥಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ಸಿಕಿವಾಹನಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ಶಕ್ತಿಹಸ್ತಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಶ್ರೀ ಸುದರ್ಶನ ಗಾಯತ್ರಿ ಮಂತ್ರ
ಓಂ ಸುದರ್ಶನಾಯ ವಿದ್ಮಹೇ,
ಮಹಾಜ್ವಾಲಾಯ ಧೀಮಹೀ
ತನ್ನೋ ಚಕ್ರ ಪ್ರಚೋದಯಾತ್
ಶ್ರೀ ತುಲಸಿ ಗಾಯತ್ರಿ ಮಂತ್ರ
ಓಂ ತುಲಸೀ ದೇವ್ಯಾಯೈಚ ವಿದ್ಮಹೇ,
ವಿಷ್ಣುಪ್ರಿಯಾಯೈಚ ಧೀಮಹೀ
ತನ್ನೋ ಬೃಂದ ಪ್ರಚೋದಯಾತ್
ಶ್ರೀ ವರುಣ ಗಾಯತ್ರಿ ಮಂತ್ರ
ಓಂ ಜಲಬಿಂಬಾಯ ವಿದ್ಮಹೇ,
ನೀಲಪುರುಷಾಯ ಧೀಮಹೀ
ತನ್ನೋ ವರುಣ ಪ್ರಚೋದಯಾತ್
ಶ್ರೀ ವೆಂಕಟೇಶ್ವರ ಗಾಯತ್ರಿ ಮಂತ್ರ
ಓಂ ನಿರಂಜನಾಯ ವಿದ್ಮಹೇ,
ನಿರಾಭಾಸಾಯ ಧೀಮಹೀ
ತನ್ನೋ ಶ್ರೀನಿವಾಸ ಪ್ರಚೋದಯಾತ್
ಶ್ರೀ ಯಮ ಗಾಯತ್ರಿ ಮಂತ್ರ
ಓಂ ಸೂರ್ಯಪುತ್ರಾಯ ವಿದ್ಮಹೇ,
ಮಹಾಕಾಲಾಯ ಧೀಮಹೀ
ತನ್ನೋ ಯಮ ಪ್ರಚೋದಯಾತ್
ಶ್ರೀ ದತ್ತಾತ್ರೇಯ ಗಾಯತ್ರಿ ಮಂತ್ರಗಳು
ಓಂ ದತ್ತಾತ್ರೇಯ ವಿದ್ಮಹೇ
ಅತ್ರಿ ಪುತ್ರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದಿಗಂಬರಾಯ ವಿದ್ಮಹೇ
ಯೋಗೀಶ್ವರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದತ್ತಾತ್ರೇಯ ವಿದ್ಮಹೇ
ದಿಗಂಬರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದತ್ತಾತ್ರೇಯ ವಿದ್ಮಹೇ
ಅವಧೂತಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಶ್ರೀ ಕುಬೇರ ಗಾಯತ್ರಿ ಮಂತ್ರ
ಓಂ ಯಕ್ಷರಾಜಾಯ ವಿದ್ಮಹೇ
ವೈಶ್ರಾವನಾಯ ಧೀಮಹಿ
ತನ್ನೋ ಕುಬೇರ ಪ್ರಚೋದಯಾತ್
ಶ್ರೀ ತುಳಸಿ ಗಾಯತ್ರಿ ಮಂತ್ರ
ಓಂ ತುಳಸಿಯಾಯ ವಿದ್ಮಹೇ
ತ್ರಿಪುರಾರ್ಯಾಯ ಧೀಮಹಿ
ತನ್ನೋ ತುಳಸಿ ಪ್ರಚೋದಯಾತ್
ಶ್ರೀ ನವಗ್ರಹ ಗಾಯತ್ರಿ ಮಂತ್ರಗಳು
ಶ್ರೀ ಸೂರ್ಯ ಗಾಯತ್ರಿ ಮಂತ್ರ
ಓಂ ಭಾಸ್ಕರಾಯ ವಿದ್ಮಹೇ
ದಿವಾಕರಾಯ ಧೀಮಹಿ
ತನ್ನೋ ಸೂರ್ಯ ಪ್ರಚೋದಯಾತ್
ಶ್ರೀ ಚಂದ್ರ ಗಾಯತ್ರಿ ಮಂತ್ರ
ಓಂ ಕೃಷ್ಣ ಪುತ್ರಾಯ ವಿದ್ಮಹೇ
ಅಮೃತದ್ವಾಯ ಧೀಮಹಿ
ತನ್ನೋ ಚಂದ್ರ ಪ್ರಚೋದಯಾತ್
ಶ್ರೀ ಅಂಗಾರಕ ಗಾಯತ್ರಿ ಮಂತ್ರ
ಓಂ ಅಂಗಾರಕಾಯ ವಿದ್ಮಹೇ
ಶಕ್ತಿ ಹಸ್ತಾಯ ಧೀಮಹಿ
ತನ್ನೋ ಕುಜ ಪ್ರಚೋದಯಾತ್
ಶ್ರೀ ಬುಧ ಗಾಯತ್ರಿ ಮಂತ್ರ
ಓಂ ಗಜಧ್ವಜಾಯ ವಿದ್ಮಹೇ
ಸುಖ ಹಸ್ತಾಯ ಧೀಮಹಿ
ತನ್ನೋ ಬುಧ ಪ್ರಚೋದಯಾತ್
ಶ್ರೀ ಗುರು ಗಾಯತ್ರಿ ಮಂತ್ರ
ಓಂ ಸುರಾಚಾರ್ಯಾಯ ವಿದ್ಮಹೇ
ದೇವ ಪೂಜ್ಯಾಯ ಧೀಮಹಿ
ತನ್ನೋ ಗುರು ಪ್ರಚೋದಯಾತ್
ಶ್ರೀ ಶುಕ್ರ ಗಾಯತ್ರಿ ಮಂತ್ರ
ಓಂ ಅಶ್ವಧ್ವಜಾಯ ವಿದ್ಮಹೇ
ದೈತ್ಯಾಚಾರ್ಯಾಯ ಧೀಮಹಿ
ತನ್ನೋ ಶುಕ್ರ ಪ್ರಚೋದಯಾತ್
ಶ್ರೀ ಶನಿ ಗಾಯತ್ರಿ ಮಂತ್ರ
ಓಂ ಕಾಕಧ್ವಜಾಯ ವಿದ್ಮಹೇ
ಖಡ್ಗ ಹಸ್ತಾಯ ಧೀಮಹಿ
ತನ್ನೋ ಶನಿ ಪ್ರಚೋದಯಾತ್
ಶ್ರೀ ರಾಹು ಗಾಯತ್ರಿ ಮಂತ್ರ
ಓಂ ನಾಗಧ್ವಜಾಯ ವಿದ್ಮಹೇ
ಪದ್ಮಹಸ್ತಾಯ ಧೀಮಹಿ
ತನ್ನೋ ರಾಹು ಪ್ರಚೋದಯಾತ್
ಶ್ರೀ ಕೇತು ಗಾಯತ್ರಿ ಮಂತ್ರ
ಓಂ ಅಶ್ವಧ್ವಜಾಯ ವಿದ್ಮಹೇ
ಶೂಲಹಸ್ತಾಯ ಧೀಮಹಿ
ತನ್ನೋ ಕೇತು ಪ್ರಚೋದಯಾತ್
ಶಮೀ ವೃಕ್ಷ ಪ್ರದಕ್ಷಿಣೆ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಮಂತ್ರ
ಶಮೀ ಶಮಯತೇ ಪಾಪಂ ಶಮೀ ಶತೃ ವಿನಾಶಿನೀ
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ
ಬೆಳಿಗ್ಗೆ ಎದ್ದ ಕೂಡಲೇ ಹೇಳಿಕೊಳ್ಳಬೇಕಾದ ಸ್ತೋತ್ರ
ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರಮೂಲೇ ಸ್ಥಿತೇಗೌರಿ ಪ್ರಭಾತೇ ಕರದರ್ಶನಂ
ಸ್ನಾನ ಮಾಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಅಶ್ವತ್ಥವೃಕ್ಷ ದರ್ಶನ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣಿ
ಅಗ್ರತೋ ಶಿವರೂಪಾಯ ವೃಕ್ಷರಾಜಾಯತೇ ನಮ:
ಅಶ್ವತ್ಥ ಹುತಭುಕ್ ವ್ಯಾಸೋ ಗೋವಿಂದಶ್ಚ ಸದಾಶ್ರಯ:
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಸ್ತುತೇ
ಅಭ್ಯಂಜನ ಸ್ನಾನ ಮಾಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅಶ್ವತ್ಥಾಮ: ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣ:
ಕೃಪಾ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ:
ಭೋಜನ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅನ್ನಪೂರ್ಣೇ ಸದಾಪೂರ್ಣೇ ಶಂಕರ: ಪ್ರಾಣವಲ್ಲಭೇ
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹೀಚ ಪಾರ್ವತಿ
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ:
ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ
ಮಲಗುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ರಾಮಂಸ್ಕಂಧಂ ಹನುಮಂತಂ ವೈನತೇಯಂ ವೃಕೋದರಂ
ಶಯನೇ ಯ: ಸ್ಮರೇನ್ನಿತ್ಯಂ ದುಸ್ಸ್ವಪ್ನಂ ತಸ್ಯನಶ್ಯತಿ
ತೀರ್ಥ ಸೇವಿಸುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅಕಾಲ ಮೃತ್ಯುಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣುಪಾದೋದಕಂ ಪಾವನಂ ಶುಭಂ
ಅಗ್ನಿಗೆ ನಮಸ್ಕರಿಸುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಸ್ವಸ್ತಿ ಶ್ರದ್ಧಾಂ ಮೇಧಾಂ ಯಶ: ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ
ಆಯುಷ್ಯಂ ತೇಜಮಾರೋಗ್ಯಂ ದೇಹಿ ಮೇ ಹವ್ಯವಾಹನ
ಬೇವು ಬೆಲ್ಲ ಸ್ವೀಕರಿಸುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ
ಶತಾಯು ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಲಭಕ್ಷಣಂ
ವಿಜಯದಶಮಿ ಹಬ್ಬದ ದಿನ ಶಮೀ ಪತ್ರೆಯನ್ನು ಹಂಚುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನೀ
ತುಳಸೀ ಪೂಜೆಯ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ
ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ
ನಮೋ ಮೋಕ್ಷಪ್ರದೇ ದೇವೀ ನಮ: ಸಂಪತ್ಪ್ರದಾಯಕೇ
ಪ್ರಸೀದ ತುಲಸೀ ದೇವೀ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೂದ್ಭೂತೇ ತುಲಸಿತ್ವಾಂ ನಮಾಮ್ಯಹಂ
ಯಜ್ಞೋಪವೀತಧಾರಣೆ ಸಂದರ್ಭ ಹೇಳಿಕೊಳ್ಳಬೇಕಾದ ಸ್ತೋತ್ರ
ಯಜ್ಞೋಪವೀತಂ ಪರಮ ಪವಿತ್ರಂ
ಪ್ರಜಾಪತೇರ್ಯತ್ಸಹಜಂ ಪುರಸ್ತಾತ್
ಆಯುಷ್ಯಮಗ್ರ್ಯಂ ಪ್ರತಿಮುಂಚಂ ಶುಭ್ರಂ
ಯಜ್ಞೋಪವೀತಂ ಬಲಮಸ್ತು ತೇಜ:
ಹೊಸ್ತಿಲ ಪೂಜೆಯ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಸರಸಿಜನಿಲಯೇ ಸರೋಜಹಸ್ತೇ ಧವಲತರಾಂಕುಶ ಗಂಧಮಾಲ್ಯ ಶೋಭೇ
ಭಗವತೀ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದಮಹ್ಯಂ
ಗೋಗ್ರಾಸ ಕೊಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಸುರಭಿ ವೈಷ್ಣವೀಮಾತಃ ಸುರಲೋಕೇ ಮಹೀಯಸೇ
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಂ
ಮಹಾನ್ ಪತಿವ್ರತೆಯರನ್ನು ಸ್ಮರಿಸಿಕೊಳ್ಳುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂದೋದರೀ ತಥಾ
ಪಂಚಕಂ ನಾ ಸ್ಮರೇನಿತ್ಯಂ ಮಹಾಪಾತಕನಾಶನಂ
ದೀಪ ಹೊತ್ತಿಸುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದ:
ಶತೃ ಬುದ್ಧಿ ವಿನಾಶಾಯ ದೀಪಂಜ್ಯೋತಿ ನಮೋಸ್ತುತೇ
ದೀಪಂಜ್ಯೋತಿ ಪರಬ್ರಹ್ಮ ದೀಪಂಜ್ಯೋತಿ ಜನಾರ್ಧನ:
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ
ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಪ್ರದಕ್ಷಿಣತ್ರಯಂ ಕೃತ್ವಾ ನಮಸ್ಕಾರಂ ಚ
ಪಂಚ ಚ ಪುನ: ಪ್ರದಕ್ಷಿಣಂ ಕೃತ್ವಾ ಪುನರ್ಜನ್ಮಂ ನ ವಿದ್ಯತೆ
ಔಷಧ ಸೇವಿಸುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ
ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವೀತೋಯಂ ವೈದ್ಯೋನಾರಾಯಣೋ ಹರಿಃ
ಧನ್ವಂತರಿ ಗರುತ್ಮಂತಂ ಫಣಿರಾಜಂಚ ಕೌಸ್ತುಭಂ
ಅಚ್ಯುತಂಚಾಮೃತಂ ಚ ಚಂದ್ರಂ ಸ್ಮರೇದೌಷಧ ಕರ್ಮಿಣಿ
ಪ್ರಶ್ನೋತ್ತರ ಪ್ರಪಂಚ
ಕೆಲವು ದೇವರ ಪೂಜಾ ಸಂದರ್ಭಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿನ್ನಬಾರದೆನ್ನುತ್ತಾರೆ ಏಕೆ?
ಈ ಪ್ರಶ್ನೆಯನ್ನು ಕೇಳಿದರೆ ಒಬ್ಬೊಬ್ಬರ ಮಾತಿನಲ್ಲೂ ಒಂದೊಂದು ರೀತಿಯ ಉತ್ತರ ಬರುತ್ತದೆ. ಆದರೆ ಹೆಚ್ಚಾಗಿ ಕೇಳಿಬರುವ ಉತ್ತರವೆಂದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾಂಸಾಹಾರವೆಂದು. ಆದರೆ ನಿಜವಾದ ಕಾರಣವೆಂದರೆ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಎರೆಡೂ ಕಾಮೋತ್ತೇಜಕಗಳು. ಆದುದರಿಂದ ಪೂಜಾ ಹಾಗೂ ವ್ರತಗಳ ಸಂದರ್ಭಗಳಲ್ಲಿ ಈರುಳ್ಳಿಯನ್ನು ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದೆನ್ನುತ್ತಾರೆ.
ಈಶ್ವರ ಹಾಗೂ ನಂದಿಯ ನಡುವೆ ನಡೆಯಬಾರದು ಎನ್ನಲಾಗುತ್ತದೆ ಏಕೆ?
ನಂದಿ ಈಶ್ವರನ ಪರಮಭಕ್ತ. ಸದಾಕಾಲವೂ ನಂದಿಯು ಈಶ್ವರನನ್ನು ದರ್ಶಿಸುತ್ತಾ ಧ್ಯಾನಿಸುತ್ತಿರುತ್ತಾನೆ ಹಾಗೂ ಶಿವನೂ ಸಹ ತನ್ನ ಭಕ್ತಾಗ್ರಣ್ಯನಾದ ನಂದಿಯನ್ನು ವೀಕ್ಷಿಸುತ್ತ ತನ್ನ ಕರುಣಾಪೂರಿತ ಅನುಗ್ರಹವನ್ನು ತೋರುತ್ತಿರುತ್ತಾನೆ. ಆದುದರಿಂದ ಇವರೀರ್ವರ ನಡುವೆ ನಡೆದು ಅವರ ಪರಸ್ಪರ ಭಕ್ತಿ ಹಾಗೂ ಅನುಗ್ರಹಕ್ಕೆ ಧಕ್ಕೆಯುಂಟುಮಾಡಿದರೆ, ಅವರೀರ್ವರ ಕೋಪಕ್ಕೆ ತುತ್ತಾಗಬಹುದೆಂಬ ಕಾಳಜಿಯಿಂದ ಹೀಗೆ ಹೇಳಲಾಗುತ್ತದೆ.
ಸುಬ್ರಮಣ್ಯ ಮೂಲಮಂತ್ರಗಳು
ಓಂ ಶಂ ಶರವಣಭವಾಯ ನಮ:
ಓಂ ಶ್ರೂಂ ಸ್ಕಂದಾಯ ನಮ:
ಓಂ ಶೌಂ ಸುಬ್ರಮಣ್ಯಾಯ ನಮ:
ಕುಮಾರ ಮೂಲಮಂತ್ರ
ಓಂ ಕ್ರೌಂ ಕುಮಾರಾಯ ನಮ:
ಗುಹ ಮೂಲಮಂತ್ರ
ಓಂ ಸೂಂ ಸ್ವಾಮಿನ್ ಗುಹಾಯಾಯ ನಮ:
ಶಣ್ಮುಖ ಮೂಲಮಂತ್ರ
ಓಂ ಹ್ರೀಂ ಶಂ ಶಣ್ಮುಖಾಯ ನಮ:
ವಲ್ಲಿ ಮೂಲಮಂತ್ರ
ಓಂ ಶ್ರೀಂ ಮಹಾವಲ್ಲಾಯೈ ನಮ:
ದೇವಸೇನ ಮೂಲಮಂತ್ರ (ದೇವಸೇನ ಶ್ರೀ ಸುಬ್ರಮಣ್ಯ ಸ್ವಾಮಿಯ ಪತ್ನಿ)
ಓಂ ಹ್ರೀಂ ದೇವಸೇನಾಯೈ ನಮ:
ಮಯೂರ ಮೂಲಮಂತ್ರ (ನವಿಲು-ಸುಬ್ರಮಣ್ಯ ಸ್ವಾಮಿಯ ವಾಹನ)
ಓಂ ಮ್ರೀಂ ಮಯೂರಾಯ ನಮ:
ದೇವರುಗಳು ಬಳಸುತ್ತಿದ್ದ ವಾಹನಗಳು
ಸೂರ್ಯ – ಏಳು ಕುದುರೆಗಳುಳ್ಳ ರಥ (7 Horses)
ಬ್ರಹ್ಮ – ಏಳು ಹಂಸಗಳು (Sevven Swans)
ದುರ್ಗಿ – ಸಿಂಹ ಮತ್ತು ಹುಲಿ (Lion and Tiger)
ಗಣೇಶ – ಇಲಿ (Big Mouse)
ಇಂದ್ರ – ಆನೆ (Elephant)
ಕಾರ್ತಿಕೇಯ ಅಥವಾ ಸುಬ್ರಮಣ್ಯ – ನವಿಲು (Peacock)
ಲಕ್ಷ್ಮಿ – ಗೂಬೆ (Owl)
ಸರಸ್ವತಿ – ಹಂಸ ಮತ್ತು ನವಿಲು (Swan and Peacock)
ಶಕ್ತಿ ಅಥವಾ ಶಿವ – ಗೂಳಿ (ವೃಷಭ) (Bull)
ಶನಿದೇವ – ಕಾಗೆ (Crow)
ಶೀತಲಾಂಬ ದೇವಿ – ಕತ್ತೆ (Donkey)
ಶಿವ – ನಂದಿ (ಗೂಳಿ) (Bull)
ವರುಣ – ಮೊಸಳೆ (Crocodile)
ವಾಯುದೇವರು – ಸಾವಿರ ಕುದುರೆಗಳು (Thousand Horses)
ವಿಷ್ಣುದೇವ – ಗರುಡ ಪಕ್ಷಿ, ಆದಿಶೇಷ (ಹಾವು) (Adishesha, Serpent)
ವಿಶ್ವಕರ್ಮ – ಆನೆ (Elephant)
ಯಮದೇವ – ಕೋಣ (Male Buffalo)
ಚಂದ್ರ – ಚಿಗರೆ (ಜಿಂಕೆಯ ಜಾತಿ) (Antelope)
ಕಾಮದೇವ – ಗಿಳಿ (Parrot)
ಅಗ್ನಿ – ಟಗರು (ಗಂಡು ಕುರಿ) (Ram)
ನೈವೇದ್ಯದ ತೆಂಗಿನಕಾಯಿಯನ್ನು ಇಡುವ ಬಗೆ ಹೇಗೆ?
ತೆಂಗಿನಕಾಯಿಯನ್ನು ನೈವೇದ್ಯವಾಗಿ ಇಡುವಾಗ ದೇವರಿಗೆ ಅಭಿಮುಖವಾಗಿ ಅಂದರೆ ಚಿಪ್ಪಿನ ಮುಖ ದೇವರಿಗೆ ಕಾಣುವಂತೆ ಹಾಗೂ ನಮಗೆ ಕಾಣದಂತೆ ಇಡಬೇಕು ಇದು ಶುಭ.
ಸ್ವರ್ಗ ಲೋಕದ ದೇವತಾ ವೃಕ್ಷಗಳೆಂದು ಹೆಸರಾದ ವೃಕ್ಷಗಳಾವುವು?
ಕಲ್ಪವೃಕ್ಷ, ಪಾರಿಜಾತ, ಮಂದಾರ, ಹರಿಚಂದನ, ಸಂತಾನ.
ದೇವತಾ ವೃಕ್ಷಗಳೆಂದು ಹೆಸರಾದ ಇತರೆ ವೃಕ್ಷಗಳಾವುವು?
ಕಪಿಥ್ಥ, ತುಳಸಿ, ನೆಲ್ಲಿ, ಆಲ, ಅಶ್ವತ್ಥ, ಬಿಲ್ವ, ಮುತ್ತುಗ, ಬೇವು, ಮೋದುಗ, ಅತ್ತಿ (ಔದುಂಬರ)
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಏಕೆ?
ಭೂಮಿಯ ಅಯಸ್ಕಾಂತೀಯ ಶಕ್ತಿ ಅತ್ಯಂತ ಪ್ರಭಲವಾಗಿ ಉತ್ತರ ದಿಕ್ಕಿನ ಭಾಗದಲ್ಲಿಯೇ ಕೇಂದ್ರೀಕೃತಗೊಂಡಿರುತ್ತದೆ. ಒಂದೊಮ್ಮೆ ನಾವು ಉತ್ತರ ದಿಕ್ಕಿನೆಡೆ ತಲೆಹಾಕಿ ಮಲಗಿದಲ್ಲಿ ಪ್ರಭಲ ಅಯಸ್ಕಾಂತೀಯ ತರಂಗಗಳು ತಮ್ಮ ಮೆದುಳಿಗೆ ಹಾನಿಮಾಡಿ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ. ಇದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು.
ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು, ತುಳಿಯಬಾರದು ಏಕೆ?
ಮಹಾ ವಿಷ್ಣುವು ನರಸಿಂಹಾವತಾರವನ್ನು ತಾಳಿ ಹಿರಣ್ಯಕಷಿಪುವನ್ನು ಹೊಸ್ತಿಲ ಮೇಲೆ ಕುಳಿತೇ ಸಂಹರಿಸಿ ಪ್ರಹ್ಲಾದನಿಗೆ ಅಭಯವನ್ನಿತ್ತನು. ಅಂತಹ ಮಹಾವಿಷ್ಣುವಿನ ಸ್ಥಾನವೆಂದೇ ಪರಿಗಣಿಸಿ ಹೊಸ್ತಿಲಿಗೆ ಪಾವಿತ್ರ್ಯ ಸ್ಥಾನವನ್ನು ನೀಡಲಾಗಿದೆ. ಆದುದರಿಂದಲೇ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಹಾಗೂ ತುಳಿಯುವುದು ನಿಷಿದ್ದ. ಅಲ್ಲದೆ ಹೂಸ್ತಿಲನ್ನು ಸಾಕ್ಷಾತ್ ಲಕ್ಷ್ಮೀದೇವಿ ಎಂದೇ ಪರಿಗಣಿಸಲಾಗುತ್ತದೆಯಾದ್ದರಿಂದ ಹೊಸ್ತಿಲನ್ನು ತುಳಿಯುವುದು ಒದೆಯುವುದು ಮಾಡಬಾರದು.
ಹರಿದಿರುವ ಮತ್ತು ಒಣಗಿರುವ ವೀಳ್ಯದೆಲೆ ದೇವತಾ ಕಾರ್ಯಕ್ಕೆ ನಿಷಿದ್ದವೇ?
ಹೌದು, ವೀಳ್ಯದೆಲೆ ಭಿನ್ನವಾಗಿದ್ದರೆ, ಒಣಗಿದ್ದರೆ, ಬಾಡಿದ್ದರೆ ಅದು ದೇವತಾ ಕಾರ್ಯಗಳಿಗೆ ಬಳಸಬಾರದು. ವೀಳ್ಯದೇಲೆಯ ಅಗ್ರದಲ್ಲಿ ಲಕ್ಷ್ಮೀದೇವಿ, ಮಧ್ಯದಲ್ಲಿ ಸಾಕ್ಷಾತ್ ಪಾರ್ವತಿ ಮಾತೆ ಹಾಗೂ ತುದಿಯ ಭಾಗದಲ್ಲಿ ಸರಸ್ವತಿ ಎಂದೇ ಹೆಸರಾದ ವಿದ್ಯಾ ಲಕ್ಷೀಯರೇ ಅಸೀನರಾಗಿರುತ್ತಾರೆ ಅಲ್ಲದೇ ಸಾಕ್ಷಾತ್ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೂ ಸಹ ವೀಳ್ಯದೆಲೆಯಲ್ಲಿನ ಭಾಗವಾಗಿರುತ್ತಾರೆ. ಆದುದರಿಂದಲೇ ಯಾವುದೇ ಶುಭಕಾರ್ಯದಲ್ಲಿಯೂ ವೀಳ್ಯದೆಲೆ ಅತಿ ಮಹತ್ವದ ಸ್ಥಾನಗಳಿಸಿದೆ. ಅಲ್ಲದೇ ವೀಳ್ಯದೆಲೆ ತೋಟಕ್ಕೆ, ಚಪ್ಪಲಿ ಹಾಕಿ ಹೋಗಬಾರದೆಂಬ ನಿಯಮವನ್ನೂ, ವೀಳ್ಯದೆಲೆ ತೋಟದಲ್ಲಿ ಮಾತನಾಡುವಾಗ ಎಚ್ಚರದಿಂದ ಮಾತನಾಡುವಂತೆಯೂ, ಮಾತಿಗೆ ತಪ್ಪಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.
ದಶಾವತಾರಗಳು ಯಾವುವು ?
ಮತ್ಸ್ಯಾವತಾರ
ಕೂರ್ಮಾವತಾರ
ವರಾಹಾವತಾರ
ನರಸಿಂಹಾವತಾರ
ವಾಮನಾವತಾರ
ಪರಶುರಾಮಾವತಾರ
ಶ್ರೀರಾಮವತಾರ
ಶ್ರೀಕೃಷ್ಣಾವತಾರ
ಬುದ್ದಾವತಾರ
ಕಲ್ಕಿ ಅವತಾರ
ಗರ್ಭಿಣಿ ಸ್ತ್ರೀಯರು ರಾತ್ರಿಯ ವೇಳೆ ಹೊರ ಹೋಗಬಾರದೇ?
ರಾತ್ರಿ ಎಂಬುದು ಕತ್ತಲಿನಿಂದ ಕೂಡಿದ್ದು, ದುಷ್ಟಶಕ್ತಿಗಳ ಬಲ ಹೆಚ್ಚುವ ಕಾಲವಾಗಿರುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀ ಹೊರ ಹೋದಲ್ಲಿ ಕತ್ತಲಿನಲ್ಲಿ ಕೇಳಿ ಬರುವ ಅಸಹಜವಾದ ಶಬ್ದಗಳಿಂದ ಗರ್ಭಿಣಿಯರು ಹೆದರಿಕೊಂಡಲ್ಲಿ ಹುಟ್ಟಬಹುದಾದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಹುಟ್ಟುವ ಮಗು ಮಾನಸಿಕವಾಗಿ ಅಸಹಜವಾಗಿ, ಪುಕ್ಕಲುತನದಿಂದ ಹುಟ್ಟುವ ಸಂಭವಿರುತ್ತದೆ.
ಹಣೆಯಲ್ಲಿ ಕುಂಕುಮ ಇಡಬೇಕೆನ್ನುವುದು ಏತಕ್ಕಾಗಿ?
ಹಣೆಯನ್ನು ಭ್ರೂಮಧ್ಯ ಸ್ಥಾನ ಎಂದು ಕರೆಯಲಾಗುತ್ತದೆ. ಅಲ್ಲದೇ ಹಣೆಯಲ್ಲಿನ ಕುಂಕುಮ ಇಡುವ ಭಾಗವನ್ನು ಲಲಾಟ ಎಂದೂ ಸಹ ಕರೆಯಲಾಗುತ್ತದೆ. ಲಲಾಟ ಎಂಬ ಸ್ಥಳವು ಪರ ಬ್ರಹ್ಮನ ಸ್ಥಾನವಾಗಿದೆ. ಬ್ರಹ್ಮನ ಬಣ್ಣ ಕೆಂಪು. ಅದುದರಿಂದ ಹಣೆಯಲ್ಲಿ ಆ ಭಾಗದ ದೇವರಾದ ಬ್ರಹ್ಮನ ಬಣ್ಣವಾದ ಕೆಂಪನ್ನು ಅಂದರೆ ಕುಂಕುಮವನ್ನು ಇಡಲಾಗುತ್ತದೆ.
ದೇಗುಲದಲ್ಲಿ ದರ್ಶನವಾದ ನಂತರ ಕುಳಿತುಕೊಳ್ಳಲೇಬೇಕೇ?
ಇದೊಂದು ಬೆಳೆದು ಬಂದಿರುವ ನಂಬಿಕೆಯಷ್ಟೇ ಆಗಿದೆ. ವಾಸ್ತವವಾಗಿ ದೇಗುಲಕ್ಕೆ ತೆರಳಿ, ಅಲ್ಲಿನ ದೈವದರ್ಶನ ಸಂಧರ್ಭ ಅಲ್ಲಿನ ವಾತಾವರಣದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ದೊರೆಯುತ್ತದೆ. ಜೀವನದ ಜಂಜಾಟಗಳಿಂದ ಮುಕ್ತರಾಗಿ ಶಾಂತಿ, ನೆಮ್ಮದಿಗಳಿಸಿಕೊಳ್ಳುವ ವಾತಾವರಣದಲ್ಲಿ ಕೆಲ ಹೊತ್ತು ಕುಳಿತುಕೊಂಡಲ್ಲಿ ಮನಸ್ಸು ಪ್ರಫುಲ್ಲ ವಾಗುತ್ತದೆ ಎಂಬುದು ನಿಜವಾದ ಉದ್ದೇಶವಾಗಿದೆ.
ಮಂಗಳವಾರದಂದು ಭೂಮಿಯನ್ನುಅಗೆಯವಾರದೇ?
ಭೂಮಿಯನ್ನು ಭೂಮಿತಾಯಿಎಂದು ಪೂಜಿಸುತ್ತಾರೆ. ಅಂದರೆ ಭೂಮಿಗೆ ಸ್ತ್ರೀ ಸ್ಥಾನವನ್ನೇ ನೀಡಲಾಗಿದೆ. ಹೀಗಿರುವಾಗ ಭೂಮಿತಾಯಿಯ ಪುತ್ರಕುಜ. ಹಾಗೂ ಪ್ರತಿಯೊಂದು ವಾರಕ್ಕೂ ಒಂದು ಗ್ರಹ ಅಧಿಪತಿಯಾಗಿದ್ದು, ಮಂಗಳವಾರಕ್ಕೆ ಕುಜನೇ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಮಂಗಳವಾರದಂದು ತನ್ನ ತಾಯಿಯನ್ನೇ, ತಾಯಿಯ ಒಡಲನ್ನೇ ಅಗಿದರೆ ಕುಜನ ವಕ್ರದೃಷ್ಟಿಗೊಳಗಾಗಬೇಕಾಗುತ್ತದೆ. ಅಲ್ಲದೇ ಕುಜ ಅಗ್ನಿತತ್ವವಾಗಿದ್ದು, ಮಂಗಳವಾರದಂದು ಭೂಮಿಯಲ್ಲಿ ನೀರಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಿದರೂ ಕುಜನ ಅಗ್ನಿತತ್ವದ ಪರಿಣಾಮದಿಂದಾಗಿ ಯಶಸ್ಸು ದೊರೆಯುವುದು. ಅಸಾಧ್ಯ ಎಂದು ಹೇಳಲಾಗುತ್ತದೆ.
‘ಪಕ್ಷಿರಾಜ’ ಗರುಡ, ವಿಷ್ಣು ದೇವನ ವಾಹನ ಆಗಿದ್ದು ಹೇಗೆ?
ಗರುಡ ಹಾಗು ಆತನ ತಾಯಿಯಾದ ವಿನತ, ಗರುಡನ ಮಲತಾಯಿಯಾದ ಕದ್ರು (ಸರ್ಪಗಳ ತಾಯಿ) ವಿನ ದಾಸ-ದಾಸಿಯರಾಗಿದ್ದರು. ತಾನು ಮತ್ತು ತನ್ನ ತಾಯಿಯನ್ನು, ಕದ್ರುವಿನ ಗುಲಾಮಗಿರಿಯಿಂದ ಮುಕ್ತಗೊಳ್ಳಲು – ಸ್ವತಃ ಗರುಡನು ಇಂದ್ರನ ದೇವಲೋಕಕ್ಕೆ ಹಾರಿ, ಅಮೃತವನ್ನು ತಂದು ಸರ್ಪಗಳಿಗೆ ನೀಡುವ ಪ್ರಸ್ತಾಪವನ್ನು ಮಾಡಿ ಕದ್ರುವಿನ ಅಪ್ಪಣೆ ಪಡೆದನು.ದೇವರುಗಳಿಗೆ ಇದರ ಸುಳಿವು ಸಿಕ್ಕಿತು, ಭೀಕರ ಯುದ್ಧವೂ ನಡೆಯಿತು, ಆದರೆ ಈ ಯುದ್ಧದಲ್ಲಿ ಗರುಡನು ಅವರನ್ನು ಸೋಲಿಸಿದನು. ನಂತರ, ತನ್ನ ಬುದ್ಧಿ ಮತ್ತು ಶಕ್ತಿ ಬಳಸಿ, ದೊಡ್ಡ ಗಂಡಾಂತರಗಳನ್ನು ದಾಟಿ, ಎಲ್ಲಾ ಕಾವಲುಗಳನ್ನು ಹಾರಿ, ಅಮೃತದ ಕಲಶವನ್ನು ಪಡೆದೇ ಬಿಟ್ಟ.ಗರುಡನು ಬಯಸಿದ್ದಲ್ಲಿ ಅಮೃತವನ್ನು ತಾನೇ ಕುಡಿಯಬಹುದಾಗಿತ್ತು, ಅಮರನಾಗ ಬಹುದಿತ್ತು. ಆದರೆ ತನ್ನ ತಾಯಿಯಾದ ವಿನತಳನ್ನು ಕದ್ರುವಿನಿಂದ ಬಿಡುಗಡೆ ಪಡಿಸಲು, ತಾನುಕೊಟ್ಟ ಮಾತನ್ನು ಉಳಿಸಿಕೊಳ್ಳಲು – ಹಾವುಗಳಿಗೇ ಅದನ್ನು ನೀಡಲು ಮುಂದಾದನು. ಈ ನಿಸ್ವಾರ್ಥ ಕಾರ್ಯವನ್ನು ಕಂಡ ವಿಷ್ಣು ಗರುಡನಿಗೆ ವರವನ್ನು ನೀಡಿದನು. ಆ ವರವೇನೆಂದರೆ, ಅಮೃತ ಕುಡಿಯದೆ, ಗರುಡನನ್ನು ಅಮರನನ್ನಾಗಿ ಮಾಡಿತು. ಇಲ್ಲದೆ ಅಮರ ಆಯಿತು ಒಂದು ಪ್ರಸಾದ ನೀಡಲಾಗುತ್ತದೆ ವಿಷ್ಣುವಿನ ಪ್ರಭಾವಿಸಿತು. ಆದರೆ ವಿಷ್ಣು, ಹಾವುಗಳು ಈ ಅಮೃತವನ್ನು ಕುಡಿಯುವುದನ್ನು ತಡೆಯಲು ಕೇಳಿಕೊಂಡನು. ಹಾವುಗಳೆಲ್ಲಾ ಗರುಡನು ಅಮೃತದೊಂದಿಗೆ ಆಗಮಿಸಿದ್ದನ್ನು ಕಂಡು, ಗರುಡನ ತಾಯಿಯನ್ನು ಬಿಡುಗಡೆ ಮಾಡಿದರು.ಅವರೆಲ್ಲಾ ಅಮೃತವನ್ನು ಸೇವಿಸಲು ಮುಂದಾದಗ, ಉಪಾಯದಿಂದ ಗರುಡ ಅಡ್ಡಿಮಾಡಿ, ಕುಡಿಯುವ ಮುನ್ನ, ಹಾವುಗಳು ಸ್ವಚ್ಛಗೊಳ್ಳುವುದು ಉತ್ತಮ ಎಂದು ಅವುಗಳಿಗೆ ನೆನಪು ಮಾಡಿದನು. ಹಾವುಗಳು ಇದಕ್ಕೆ ಒಪ್ಪಿಕೊಂಡು, ಸ್ವಚ್ಛಗೊಳ್ಳಲು ನೀರಿನ ಬಳಿ ಹೋದರು. ಅಷ್ಟರಲ್ಲಿ, ತಕ್ಷಣ ಇಂದ್ರನು ಕೆಳಗಿಳಿದು ಬಂದು, ಗರುಡನ ಮೇಲೆ ದಾಳಿ ನೆಡೆಸಿ, ಗರುಡನ ಮೇಲೆ ಸಿಡಿಲು ಎಸೆದು, ಇಂದ್ರನು ಅಮೃತ ಮರುಪಡೆದುಕೊಂಡು ಹೋದನು. ಸರ್ಪಗಳಿಗೆ ಅಮೃತ ಇಲ್ಲದಂತಾಯಿತು. ದನ್ನೆಲ್ಲಾ ದೂರದಿಂದ ನೋಡುತ್ತಿದ್ದ ವಿಷ್ಣು, ಗರುಡನ ಧೈರ್ಯ, ಸಾಹಸ ಮತ್ತು ಧೃತಿಯಿಂದ ಸಂತಸಗೊಂಡು, ಗರುಡನನ್ನು ಎಲ್ಲಾ ಪಕ್ಷಿಗಳ ರಾಜ ‘ಪಕ್ಷಿರಾಜ’ ಗರುಡ ಎಂದು ಘೋಷಿಸಿದನು. ಇದಕ್ಕೆ ಪ್ರತಿಯಾಗಿ ಗರುಡ, ವಿಷ್ಣು ದೇವನ ವಾಹನನಾಗಲು ಒಪ್ಪಿಕೊಂಡನು. (ಮಾಹಿತಿ ಕೃಪೆ : ವ್ಯಾಟ್ಸಪ್ ಸಂದೇಶ)
“ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ”?
ನಿಜಕ್ಕೂ ಅಚ್ಚರಿಯಾಗಬಹುದು… ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ.. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ… ಹೇಗೆ ಗೊತ್ತೇ…?? ದೇವರ ಮೂಲಸ್ಥಾನ ಗರ್ಭಗುಡಿ… ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು… ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ… ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ… ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು… ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ… ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ… ಮುಖ್ಯದ್ವಾರವೊಂದೇ ತೆರೆದಿರುತ್ತದೆ… ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ… ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ… ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ… ಹೇಗಿದೆ ನೋಡಿ..!!
ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy), ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ..!! ಇನ್ನು ತೀರ್ಥಸೇವನೆ… ತೀರ್ಥವನ್ನು ಮಾಡುವುದು ಹೇಗೆ…??? ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ… ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ… ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ… ಚೈತನ್ಯ ಮೂಡುತ್ತದೆ… ಆರೋಗ್ಯಕರವೂ ಹೌದು… ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ… ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ… ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು – ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ… ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು… ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ… ಆ ಕಾರಣದಿಂದಲೇ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು… ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು… ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ.. ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ…?? ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ.. ( ಮಾಹಿತಿ ಕೃಪೆ : ಶ್ರೀ ಗಂಗಾಧರ್, ಪಳವಳ್ಳಿ)
ರುದ್ರಾಕ್ಷಿಗಳನ್ನು ಧರಿಸಬೇಕಾದ ಮೂಲ ಮಂತ್ರ ಯಾವುದು?
ರುದ್ರಾಕ್ಷಿಯನ್ನು ಧರಿಸುವಾಗ ಈ ಕೆಳಗಿನ ಮೂಲ ಮಂತ್ರವನ್ನು ಉಚ್ಚರಿಸಬೇಕಿರುತ್ತದೆ
ಓಂ ಹ್ರೀಂ ನಮ: ಓಂ ನಮ:
ಕ್ಲೀಂ ನಮ: ಓಂ ಹ್ರೀಂ ನಮ:
ಓಂ ಹ್ರೀಂ ನಮ: ಓಂ ಹ್ರೀಂ ಶ್ರುಂ ನಮ:
ಓಂ ಹ್ರೂಂ ನಮ: ಓಂ ಹ್ರುಂ ನಮ:
ಓಂ ಹ್ರೀಂ ಶ್ರುಂ ನಮ: ಓಂ ಹ್ರಿಂ ನಮ:
ಓಂ ಹ್ರೀಂ ಶ್ರಂ ನಮ: ಓಂ ಕ್ರೊಂ ಕ್ಷೊಂ ರೌ ನಮ:
ಓಂ ಹ್ರೀಂ ನಮ: ಓಂ ನಮ: ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ದೇಹದ ಯಾವ ಭಾಗಗಳಲ್ಲಿ ಎಷ್ಟು ರುದ್ರಾಕ್ಷಿಗಳನ್ನು ಧರಿಸಿದರೆ ಫಲ?
ರುದ್ರಾಕ್ಷಿಯನ್ನು ದೇಹದ ಬೇರೆ ಬೇರೆ ಭಾಗಗಳಲ್ಲಿ ಧರಿಸಿರುವುದನ್ನು ನೀವು ನೋಡಿರಬಹುದು. ಆದರೆ ಯಾವ ಯಾವ ಭಾಗಗಳಲ್ಲಿ ಎಷ್ಟು ರುದ್ರಾಕ್ಷಿ ಧರಿಸಿದರೆ ಅದರ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ನಿಯಮಗಳಿದ್ದು ಅದನ್ನು ಈ ಕೆಳಗಿನಂತೆ ಕಾಣಬಹುದು.
ಕಿವಿಯಲ್ಲಿ ಆರು ರುದ್ರಾಕ್ಷಿ, ಚಂಡಿಕೆಯಲ್ಲಿ ಮೂರು ರುದ್ರಾಕ್ಷಿ, ಸೊಂಟದ ಭಾಗದಲ್ಲಿ ಐದು ರುದ್ರಾಕ್ಷಿ, ಕಂಠದಲ್ಲಿ ನೂರ ಎಂಟು ರುದ್ರಾಕ್ಷಿ, ಭುಜದಲ್ಲಿ ಧರಿಸುವುದಾದರೆ ಹನ್ನೊಂದು ರುದ್ರಾಕ್ಷಿ, ಜನಿವಾರದಲ್ಲಿ ಮೂರು ರುದ್ರಾಕ್ಷಿಗಳನ್ನು ಧರಿಸಿದರೆ ಅದನ್ನು ಧರಿಸಿದ ಸಂಪೂರ್ಣ ಫಲವು ಪ್ರಾಪ್ತಿಯಾಗುತ್ತದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ – ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ರುದ್ರಾಕ್ಷಿಯ ವಿವಿಧ ಮುಖಗಳು ಹಾಗೂ ಅದರಿಂದ ದೊರೆಯಬಹುದಾದ ಫಲಗಳೇನು?
ರುದ್ರಾಕ್ಷಿಗೆ ಇರುವ ಮುಖಗಳ ಆಧಾರದಲ್ಲಿ ಅದನ್ನು ಧರಿಸುವ ವ್ಯಕ್ತಿ ಪಡೆಯಬಹುದಾದ ಫಲವನ್ನು ನಿರ್ಧರಿಸಲಾಗುತ್ತದೆ ರುದ್ರಾಕ್ಷಿಯ ವಿವಿಧ ಮುಖಗಳ ಫಲಾಫಲಗಳನ್ನು ಈ ಕೆಳಗಿನಂತೆ ನೋಡಬಹುದು.
ಒಂದು ಮುಖವಿದ್ದರೆ – ಮುಕ್ತಿ ದೊರೆಯುವುದು
ಎರಡು ಮುಖವಿದ್ದರೆ – ಪಾಪಗಳಿಂದ ವಿಮುಕ್ತಿ ದೊರೆಯುತ್ತದೆ
ಮೂರು ಮುಖವಿದ್ದರೆ – ಸಾಧನ ತ್ರಯವೂ
ನಾಲ್ಕು ಮುಖವಿದ್ದರೆ – ಅದು ಸಾಕ್ಷಾತ್ ಪರಬ್ರಹ್ಮನ ಸ್ವರೂಪವೂ ಆಗಿರುತ್ತದೆ.
ದಪ್ಪನೆಯ ರುದ್ರಾಕ್ಷಿ ಧಾರಣೆಯಿಂದ ಸೌಭಾಗ್ಯವೂ, ನೆಲ್ಲಿಕಾಯಿ ಗಾತ್ರದ ರುದ್ರಾಕ್ಷಿಯಿಂದ ಸರ್ವಾರಿಷ್ಟ ನಿವಾರಣೆಯೂ, ಗುಲಗಂಜಿ ಗಾತ್ರದ ರುದ್ರಾಕ್ಷಿಯಿಂದ ಇಷ್ಟಾರ್ಥ ಸಿದ್ಧಿಯೂ, ರಂದ್ರವುಳ್ಳ ರುದ್ರಾಕ್ಷಿಯಿಂದ ಉತ್ತಮ ಗುಣಗಳೂ ಮನುಷ್ಯನಿಗೆ ಪ್ರಾಪ್ತಿಯಾಗುತ್ತದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ಸಾಮಾನ್ಯವಾಗಿ ಯಾವುದೇ ದೇವರ ಮಂತ್ರವನ್ನು ಉಚ್ಚರಿಸುವ ಮುನ್ನ ಓಂ ಎಂದು ಉಚ್ಚರಿಸಲಾಗುತ್ತದೆ ಏಕೆ?
ಓಂ ಎಂಬುದನ್ನು ಪ್ರಣವಾಕ್ಷರ ಎಂದು ಕರೆಯಲಾಗುತ್ತದೆ. ಅ ಕಾರ, ಉ ಕಾರ ಮತ್ತು ಮ ಕಾರಗಳ ಸಂಗಮವೇ ಓಂ ಆಗಿದೆ.
ಅ ಕಾರ ಎಂದರೆ – ಅರಿಷಡ್ವರ್ಗಗಳ ಭ್ರಮೆಯನ್ನು ಬಿಡಿಸಿ
ಉ ಕಾರ ಎಂದರೆ – ಉಪಾದಿಗಳನ್ನು ದೂರಗೊಳಿಸಿ
ಮ ಕಾರ ಎಂದರೆ – ಮಾಯ ಮೋಹಾದಿಗಳನ್ನು ದೂರಗೊಳಿಸಿ ದೈವಸನ್ನಿಧಿ ಅಥವಾ ಶಿವಪದವನ್ನು ದೊರಕಿಸಿಕೊಡುವುದೇ ಈ ಪ್ರಣವಾಕ್ಷರ ಮಂತ್ರ ಓಂ. ಒಂದು ಕೋಟಿ ಪ್ರಣವ ಮಂತ್ರವನ್ನು ನಿರಂತರವಾಗಿ ಜಪಿಸುವವರು ಈಶತ್ವವನ್ನು ಗಳಿಸುತ್ತಾರೆ. ಓಂ ಪ್ರಣವಾಕ್ಷರವಾದರೆ ನಮ: ಶಿವಾಯ ಪಂಚಾಕ್ಷರಿ ಮಂತ್ರ (ಶಿವನಿಗೆ ಅತ್ಯಂತ ಪ್ರಿಯವಾದ ಮಂತ್ರ) ಈ ಎರೆಡೂ ಸೇರಿ ಪ್ರಣವ ಪಂಚಾಕ್ಷರಿ ಮಂತ್ರವಾಗಿದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ರುದ್ರಾಕ್ಷಿಯು ಉಗಮವಾದದ್ದು ಮತ್ತು ಪೂಜಾರ್ಹವಾದದ್ದು ಹೇಗೆ?
ಪರಶಿವನು ಒಮ್ಮೆ ಪಾರ್ವತಿಯೊಂದಿಗೆ ತನ್ನ ಹಿಂದಿನ ವೃತ್ತಾಂತವನ್ನು ತಿಳಿಸುತ್ತಾ ರುದ್ರಾಕ್ಷಿ ವೃಕ್ಷದ ಕುರಿತು ತಿಳಿಸಿದನು. ಶಿವನು ಒಮ್ಮೆ ನಿರಂತರವಾಗಿ ತಪಸ್ಸನ್ನಾಚರಿಸಿದರೂ ಸಹ ತಪೋಸಿದ್ಧಿಗಳಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಭಕ್ತರ ಭಕ್ತಿಗೆ ತಕ್ಷಣವೇ ಒಲಿದು ಬರುವ ಪರಶಿವನ ಗಮನವೆಲ್ಲವೂ ಭಕ್ತರ ಕಡೆಗೆ ಹೆಚ್ಚಾಗಿದ್ದ ಕಾರಣ ಶಿವನ ತಪಸ್ಸು ಫಲಿಸಲಿಲ್ಲ. ಇದರಿಂದ ಶಿವನ ಕಣ್ಣಿನಿಂದ ಜಲಬಿಂದುಗಳು ಉದುರಲಾರಂಭಿಸಿದವು. ಈ ಬಿಂದುಗಳೇ ರುದ್ರಾಕ್ಷಿ ವೃಕ್ಷಗಳಾದವು. ಶಿವನು ಈ ರುದ್ರಾಕ್ಷಿಗಳನ್ನು ನಾಲ್ಕು ವರ್ಣದವರಿಗೂ ಸಮಾನವಾಗಿ ಹಂಚಿದನು. ಇದರಿಂದ ಯಾವುದೇ ವರ್ಣಬೇಧಗಳಿಲ್ಲದೇ ರುದ್ರಾಕ್ಷಿಯನ್ನು ಬಳಸಬಹುದಾಗಿದೆ. ರುದ್ರಾಕ್ಷಿಗಳು ಶಿವನಿಗೆ ಅತ್ಯಂತ ಪ್ರಿಯವಾದವುಗಳಾದುದರಿಂದ ಯಾರು ರುದ್ರಾಕ್ಷಿಯನ್ನು ಭಕ್ತಿ ಶ್ರದ್ಧೆಗಳಿಂದ ಧರಿಸುತ್ತಾರೋ ಅವರು ಶಿವನ ಅನುಗ್ರಹವನ್ನು ಪಡೆಯುತ್ತಾರೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ಬಾಳೆ ಎಲೆಯು ಊಟಕ್ಕೆ ಶ್ರೇಷ್ಟವಾದುದು ಏಕೆ?
ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ epigallocatechin gallate ಎಂಬ ಪಾಲಿ ಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದ ತಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆಚನ್ನಗಿರುತ್ತದೆ. ಬಾಳೆಎಲೆಯ ಮೇಲೆ ಬ್ಯಾಕ್ಟೀರಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತದೆ. ಅದರಲ್ಲೂ ಕ್ಯಾನ್ಸ್ರ್ ರೋಗಕ್ಕೆ ಕಾರಣವಾಗುವ ಫ್ರೀರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ. ಚೆನ್ನೈನ ಆಯುರ್ವೇದ ತಜ್ಷರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಂಶ ಸಿಗುತ್ತದೆ. ತಟ್ಟೆಗಳಲ್ಲಿ ಊಟಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ಹೊಟ್ಟೆಸೇರುತ್ತವೆ. ಆದರೆ ಬಾಳೆಎಲೆಯಲ್ಲಿ ಊಟಮಾಡಿದರೆ ಆ ಯಾವ ಸಮಸ್ಯೆಗಳು ಬರುವುದಿಲ್ಲ. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರದಲ್ಲಿ ಸೇರಿಕೊಳ್ಳುವ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ. (ಮೂಲ ವಿವಿಧ ವೆಬ್ ಪುಟಗಳಿಂದ)
ಈಶ್ವರನ ಜ್ಯೋತಿರ್ಲಿಂಗಗಳ ಕುರಿತು ತಿಳಿಸಿ?
ಮಾತೆ ಆದಿಶಕ್ತಿಗೆ ಕುರಿತಂತೆ ೫೨ ಶಕ್ತಿಪೀಠಗಳಿರುವುದನ್ನು ನಾವೆಲ್ಲರೂ ಕೇಳಿದ್ದೇವೆ. ಅದೇ ರೀತಿಯಲ್ಲಿ ಮಹಾದೇವ ಈಶ್ವರನ ಕುರಿತು ತಿಳಿಯುವ ಸಂದರ್ಭದಲ್ಲಿ ಜ್ಯೋತಿರ್ಲಿಂಗಗಳ ಕುರಿತು ಪ್ರಸ್ತಾಪ ಬರುತ್ತದೆ. ಈಶ್ವರನಿಗೆ ಸಂಬಂಧಿಸಿದಂತೆ ಒಟ್ಟು 12 ಜ್ಯೋತಿರ್ಲಿಂಗಗಳನ್ನು ಕಾಣಬಹುದು. ಅವುಗಳನ್ನು ಈ ಕೆಳಗಿನಂತೆ ಕಾಣಬಹುದಾಗಿದೆ.
ಸೋಮನಾಥ ದೇವಾಲಯ – ಗುಜರಾತ್ ರಾಜ್ಯದ ಜುನಾಘಡ್ ಜಿಲ್ಲೆಯಲ್ಲಿರುವ ವೆರಾವಲ್ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನು ಸೋಮ (ಚಂದ್ರ)ನು ನಿರ್ಮಾಣ ಮಾಡಿದ ಕಾರಣದಿಂದ ಈ ದೇವಾಲಯಕ್ಕೆ ಸೋಮನಾಥ ದೇವಾಲಯ ಎಂಬ ಹೆಸರು ಬಂತೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಶೈಲ ಮಲ್ಲಿಕಾರ್ಜುನ ದೇವಾಲಯ – ಈ ದೇವಾಲಯವನ್ನು ಆಂದ್ರಪ್ರದೇಶ ರಾಜ್ಯದ ಕರ್ನೂಲು ಜಿಲ್ಲೆಯಲ್ಲಿ ಕಾಣಬಹುದಾಗಿದ್ದು, ಶ್ರೀಪರ್ವತ ಎಂಬಾತನು ಕಾರುಣ್ಯರೂಪಿಯಾದ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಈ ಸ್ಥಳದಲ್ಲಿಯೇ ನೆಲೆಸಬೇಕೆಂದು ಸಲ್ಲಿಸಿದ ಕೋರಿಕೆಯಿಂದ ಶಿವನು ಅಲ್ಲಿ ನೆಲೆಸಿದನು. ಹಾಗಾಗಿ ಈ ದೇವಾಲಯವನ್ನು ಹೊಂದಿರುವ ಪರ್ವತವನ್ನು ಶ್ರೀಶೈಲ ಎಂದು ಕರೆಯುತ್ತಾರೆ.
ಉಜ್ಜೈನಿಯ ಮಹಾಕಾಲೇಶ್ವರ ದೇವಾಲಯ – ಮದ್ಯಪ್ರದೇಶ ರಾಜ್ಯದ ಉಜ್ಜೈನಿ ಎಂಬ ನಗರದಲ್ಲಿ ಈ ದೇವಾಲಯವನ್ನು ಕಾಣಬಹುದು. ಶ್ರೀಕರ ಎಂಬ ಬಾಲಕನ ಕಲ್ಮಶರಹಿತ ಭಕ್ತಿ, ಪ್ರೀತಿಗೆ ಮೆಚ್ಚಿ ಶಿವನು ಈ ಸ್ಥಳದಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆನಿಂತನೆಂಬುದು ಪ್ರತೀತಿ. ಈ ದೇವಾಲಯದಲ್ಲಿನ ಶಿವನನ್ನು ದಕ್ಷಿಣಾಮೂರ್ತಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಏಕೆಂದರೆ ಈ ದೇವಾಲಯದಲ್ಲಿ ಶಿವನು ದಕ್ಷಿಣಾಭಿಮುಖವಾಗಿರುವುದು. ಈ ದೇವಾಲಯವನ್ನು ಮುಕ್ತಿಧಾಮಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಓಂಕಾರೇಶ್ವರ ದೇವಾಲಯ – ಮದ್ಯಪ್ರದೇಶ ರಾಜ್ಯದ ನರ್ಮದಾ ನದಿಯ ದಂಡೆಯ ಮೇಲೆ ಈ ದೇವಾಲಯವನ್ನು ಕಾಣಬಹುದು. ಈ ದೇವಾಲಯದ ಸುತ್ತಲೂ ನರ್ಮದಾ ನದಿ ಆವರಿಸಿಕೊಂಡಿದ್ದು, ಈ ಸ್ಥಳವನ್ನು ಪಾಕ್ಷಿಕ ರೂಪದಲ್ಲಿ ನೋಡಿದಾಗ ಓಂ ಎಂಬ ಆಕಾರ ಕಂಡುಬರುವುದರಿಂದ ಈ ದೇವಾಲಯವನ್ನು ಓಂಕಾರೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಅಹಲ್ಯಾಬಾಯಿ ಎಂಬ ಮಹಾರಾಣಿ (ಇಂಧೋರ್ ಆಸ್ಥಾನದ) ನಿರ್ಮಾಣ ಮಾಡಿರುವಳೆಂಬ ಪ್ರತೀತಿಯಿದೆ.
ಕೇದಾರನಾಥ ದೇವಾಲಯ – ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಎಂಬ ಜಿಲ್ಲೆಯಲ್ಲಿ (ರುದ್ರಪ್ರಯಾಗ ಎಂಬ ಸ್ಥಳವು ಈ ಹಿಂದೆ ಅತ್ಯಂತ ಕ್ರೂರ ನರಭಕ್ಷಕನಾಗಿ ಪರಿವರ್ತನೆಗೊಂಡು ಅಸಂಖ್ಯಾತ ಜನರನ್ನು ಹತ್ಯೆಮಾಡಿ, ಬೇಟೆಗಾರರಿಗೂ ಚಳ್ಳೆಹಣ್ಣು ತಿನ್ನಿಸಿ ಮೆರೆದ ಚಿರತೆಯ ಕಾರಣದಿಂದ ಕುಖ್ಯಾತಿ ಗಳಿಸಿದ ಸ್ಥಳವಾಗಿದೆ. ಈ ಕುರಿತು ಕನ್ನಡದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿಂದ ಅನುವಾದಿತವಾದ ಮೈ ನವಿರೇಳಿಸುವ ರುದ್ರಪ್ರಯಾಗದ ಭಯಾನಕ ನರಭಕ್ಶಕ ಕೃತಿಯನ್ನು ಓದಿ) ಕಾಣಬಹುದಾಗಿದೆ.ಏಪ್ರಿಲ್-ಅಕ್ಟೋಬರ್ ನಡುವಿನ ಆರು ತಿಂಗಳು ಮಾತ್ರವೇ ಈ ದೇವಾಲಯವನ್ನು ದರ್ಶಿಸುವ ಅವಕಾಶವಿದ್ದು, ನಂತರದ ಆರು ತಿಂಗಳುಗಳೂ ಈ ದೇವಾಲಯವು ಮಂಜಿನಿಂದ ಆವೃತವಾಗಿರುತ್ತದೆ. ಕೇದಾರ ಎಂಬ ಅರಸನಿಂದ ನಿರ್ಮಾಣಗೊಂಡ ಕಾರಣದಿಂದ ಈ ದೇವಾಲಯಕ್ಕೆ ಕೇದಾರನಾಥ ದೇವಾಲಯ ಎಂಬ ಹೆಸರು ಬಂದಿದೆ. ಕುರುಕ್ಶೇತ್ರ ಯುದ್ದದಲ್ಲಿ ತಮ್ಮವರನ್ನೇ ಹತ್ಯೆ ಮಾಡಿ ನೊಂದಿದ್ದ ಪಾಂಡವರು ಈ ಸ್ಥಳಕ್ಕೆ ಆಗಮಿಸಿ ಶಿವನ ದರ್ಶನ ಪಡೆದು, ಇಲ್ಲಿಯೇ ನೆಲೆನಿಲ್ಲುವಂತೆ ಕೇಳಿದ ಬೇಡಿಕೆಯನ್ನು ಮನ್ನಿಸಿ ಶಿವನು ಇಲ್ಲಿಯೇ ಜ್ಯೋತಿರ್ಲಿಂಗವಾಗಿನೆಲೆನಿಂತನೆಂದು ಪುರಾಣದಲ್ಲಿ ಹೇಳಲಾಗಿದೆ.
ಭೀಮಾಶಂಕರ ದೇವಾಲಯ – ಮಹಾರಾಷ್ಟ ರಾಜ್ಯದಲ್ಲಿನ ಖೇಡ್ ಎಂಬ ಜಿಲ್ಲೆಯ ಭೋರಗಿರಿ ಎಂಬ ಹಳ್ಳಿಯಲ್ಲಿ ಈ ದೇವಾಲಯವನ್ನು ಕಾಣಬಹುದು. ಈ ದೇವಾಲಯವು ಸಹ್ಯಾದ್ರಿ ಬೆಟ್ಟಗಳ ತಪ್ಪಲಲ್ಲಿದ್ದು ಅದ್ಭುತ ಸೌಂದರ್ಯವನ್ನು ಹೊಂದಿದೆ. ಕರ್ಕತಿ ಎಂಬ ರಾಕ್ಷಸಿಯ ಮಗನಾದ ಭೀಮ ಎಂಬುವವನು ಕುಂಭಕರ್ಣನ ಮಗನಾಗಿದ್ದು, ಈತನ ಹತ್ಯೆಯು ಶ್ರೀರಾಮನಿಂದಾಯಿತೆಂದು ತಿಳಿದು ಕುಪಿತಗೊಂಡು ಮುನಿವರೇಣ್ಯರಿಗೆ ತೊಂದರೆ ಕೊಡುವುದಲ್ಲದೇ ಶಿವಭಕ್ತನಾದ ಕಾಮರೂಪನು ಶಿವಧ್ಯನದಲ್ಲಿರುವ ಸಂದರ್ಭದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಲು ಹೋದ ಸಂದರ್ಭದಲ್ಲಿ ಶಿವನೇ ಪ್ರತ್ಯಕ್ಷನಾಗಿ ಭೀಮನನ್ನು ಭಸ್ಮಗೊಳಿಸಿದ್ದಲ್ಲದೇ ಕಾಮರೂಪನ ಬೇಡಿಕೆಯಂತೆ ಅಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿದನೆಂದು ಹೇಳಲಾಗಿದೆ.
ತ್ರ್ಯಯಂಬಕೇಶ್ವರ ದೇವಾಲಯ – ಮಹಾರಾಷ್ಟ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿನ ತ್ರ್ಯಂಬಕ್ ಎಂಬ ಸ್ಥಳದಲ್ಲಿ ಹರಿಯುತ್ತಿರುವ ಗೋದಾವರಿ ನದಿಯ ದಡದಲ್ಲಿ ಈ ದೇವಾಲಯವನ್ನು ಕಾಣಬಹುದು.
ವಿಶ್ವೇಶ್ವರ ದೇವಾಲಯ – ಉತ್ತರಪ್ರದೇಶ ರಾಜ್ಯದ ಕಾಶಿ ಅಥವಾ ವಾರಣಾಸಿ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ.ಕ್ರಿ.ಶ 490 ರಲ್ಲಿ ಈ ದೇವಾಲಯದ ನಿರ್ಮಾಣವಾಗಿದೆಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗೈದೆ. ಓಂಕಾರೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಇಂಧೋರ್ನ ರಾಣಿ ಅಹಲ್ಯಾಬಾಯಿಯೇ ಮುಸ್ಲಿಂ ದೊರೆಗ್ಳಿಂದ ಹಾನಿಗೀಡಾಗಿದ್ದ ಈ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದಳೆಂದು ಪ್ರತೀತಿಯಿದೆ.
ವೈದ್ಯನಾಥೇಶ್ವರ ದೇವಾಲಯ – ಜಾರ್ಖಂಡ್ ರಾಜ್ಯದ ದೇವಘಡ ಬಳಿಯಲ್ಲಿ ಈದೇವಾಲಯವನ್ನು ಕಾಣಬಹುದು. ರಾವಣನು ಪಡೆದ ಆತ್ಮಲಿಂಗವನ್ನು ಗಣಪತಿಯು ಬುದ್ದಿವಂತಿಕೆಯಿಂದ ಭೂ ಸ್ಥಾಪನೆಗೈದಾಗ, ಕುಪಿತಗೊಂಡ ರಾವಣನು ಶಿವನಿಗಾಗಿ ಎಷ್ಟೇ ತಪಸ್ಸನ್ನಾಚರಿಸಿದರೂ ಪ್ರತ್ಯಕ್ಷನಾಗದಿದ್ದಾಗ ಬೇಸರಗೊಂಡ ರಾವಣನು ತನ್ನ ಒಂದೊಂದೇ ತಲೆಗಳನ್ನು ಕಡಿದು ಅರ್ಪಿಸತೊಡಗಿದನು, ಇದರಿಂದ ಶಿವನು ಪ್ರತ್ಯಕ್ಷನಾಗಿ ಕಡಿಯಲಾಗಿದ್ದ ತಲೆಗಳನ್ನು ಮರುಜೋಡಿಸಿ ಹರಸಿದ ಕಾರಣದಿಂದ ಈ ದೇವಾಲಯಕ್ಕೆ ವೈದ್ಯನಾಥೇಶ್ವರ ದೇವಾಲಯವೆಂಬ ಹೆಸರು ಬಂತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ನಾಗೇಶ್ವರ ಅಥವಾ ನಾಗನಾಥ ದೇವಾಲಯ – ಗುಜರಾತ್ ರಾಜ್ಯದ ದ್ವಾರಕ ನಗರದಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಈ ಸ್ಥಳವು ನಾಗಾಸಾಧುಗಳಿಗೆ ಅತಿಮುಖ್ಯ ಸ್ಥಳವಾಗಿದ್ದು, ಬಾಲ್ಹ್ಯ ಎಂಬ ಋಷಿಯು ನಗ್ನ ಸಾಧುವಿನ ರೂಪದಲ್ಲಿ ಬಂದ ಶಿವನಿಗೆ ನೀಡಿದ ಶಾಪದಿಂದಾಗಿ ಈ ಸ್ಥಳದಲ್ಲಿ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿದ ಎಂಬುದು ಪ್ರತೀತಿ.
ಘೃಷ್ಣೇಶ್ವರ ದೇವಾಲಯ – ಮಹಾರಾಷ್ಟ ರಾಜ್ಯದ ಔರಂಗಾಬಾದ್ ಬಳಿಯಲ್ಲಿ ಈ ದೇವಲಯವನ್ನು ಕಾಣಬಹುದಾಗಿದ್ದು, ಕುಸುಮೇಶ್ವರ ದೇವಾಲಯ ಎಂಬ ಹೆಸರಿನಿಂದಲೂ ಈ ದೇಗುಲವನ್ನು ಕರೆಯಲಾಗುತ್ತದೆ. ಕುಸುಮಾ ಎಂಬ ಶಿವಭಕ್ತೆಯ ಮಗನು ತ್ನ್ನ ಸ್ವಂತ ಅಕ್ಕನಿಂದಲೇ ಹತ್ಯೆಯಾದ ಕಾರಣದಿಂದ ಮನನೊಂದು ಶಿವನನ್ನು ಪ್ರಾರ್ಥಿಸಿದ ಪರಿಣಾಮ ಶಿವನು ಪ್ರತ್ತ್ಯಕ್ಷನಾಗಿ ಈಕೆಯ ಮಗನನ್ನು ಬದುಕಿಸಿದ ಕಾರಣ ಈ ದೇವಾಲಯಕ್ಕೆ ಕುಸುಮೇಶ್ವರ ದೇವಾಲಯವೆಂಬ ಹೆಸರು ಬಂದಿತು.ಎಲ್ಲೋರಾ ಗುಹೆಗಳಿಗೆ ಸಮೀಪದಲ್ಲಿಯೇ ಈ ದೇವಾಲಯವನ್ನು ಕಾಣಬಹುದಾಗಿದೆ.
ರಾಮೇಶ್ವರ ದೇವಾಲಯ – ತಮಿಳುನಾಡು ರಾಜ್ಯದಲ್ಲಿನ ರಾಮೇಶ್ವರಂ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಮಹಾಶಿವಭಕ್ತನಾದ ರಾವಣನನ್ನು ಕೊಂದ ಪಾಪದ ಪರಿಹಾರಾರ್ಥವಾಗಿ ಶಿವಲಿಂಗವನ್ನು ಪ್ರತಿಷ್ಟಾಪಿಸಲು ನಿರ್ಧರಿಸಿದ ರಾಮ ಹನುಮನಿಗೆ ಉತ್ತಮ ಶಿಲೆಯನ್ನು ತರಲು ಆದೇಶಿಸಿದನಾದರೂ, ಹನುಮನು ಶಿಲೆ ತರುವ ವೇಳೆಗೆ ಲಿಂಗ ಪ್ರತಿಷ್ಟಾಪನೆ ಮುಗಿದಿದ್ದ ಕಾರಣ ಹನುಮ ತಂದ ಲಿಂಗಕ್ಕೆ ಪ್ರಥಮ ಪೂಜೆ ಸಲ್ಲಬೇಕೆಂದು ಆದೇಶಿಸಿದನು. ರಾಮನಿಂದ ನಿರ್ಮಾಣಾವಾದ ದೇವಾಲಯ ಹಾಗೂ ಪ್ರತಿಷ್ಟಾಪಿತಗೊಂಡ ಲಿಂಗವಾದ ಕಾರಣ ಈ ದೇವಾಲಯಕ್ಕೆ ರಮೇಶ್ವರ ದೇವಾಲಯಾವೆಂಬ ಹೆಸರು ಬಂದಿದೆಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಮುಕ್ತಿಧಾಮಗಳು ಯಾವುವು?
ಒಟ್ಟು ಏಳು ಮುಕ್ತಿಧಾಮಗಳನ್ನು ಕಾಣಬಹುದು. ಅವುಗಳೆಂದರೆ…
ಮಥುರಾ
ಅಯೋಧ್ಯಾ
ಬನಾರಸ್
ಕಂಚಿ
ದ್ವಾರಕಾನಗರ
ಹರಿದ್ವಾರ
ಉಜ್ಜೈನಿ
ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಪರಮಶ್ರೇಷ್ಟ ನೈವೇದ್ಯದ ಫಲಗಳೆಂದು ಪರಿಗಣಿಸಲಾಗುತ್ತದೆ ಏಕೆ? ಯಾವುದೇ ಹಣ್ಣಿನ ಸಸಿಗಳೂ ಸಹ ಬೀಜದಿಂದ ಹುಟ್ಟುವವುಗಳಾಗಿದ್ದು, ತಿಂದು ಎಂಜಲು ಮಾಡಿ ಬಿಸಾಡಿದ ಬೀಜಗಳಿಂದ ಹುಟ್ಟುತ್ತವೆಯಾದ್ದರಿಂದ, ಯವುದೇ ಬೀಜರಹಿತವಾಗಿ ಹುಟ್ಟಿ ಬೆಳೆದು ಫಲ ನೀಡುವ ವೃಕ್ಷಗಳಾದ ಬಾಳೆ ಹಾಗೂ ತೀಂಗಿನಿಂದ ಪಡೆಯುವ ಫಲಗಳು ಪರಮಶ್ರೇಷ್ಟ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಬಾಳೆಯ ಬುಡದಲ್ಲಿಯೇ ಸಸಿಗಳು ಹುಟ್ಟುತ್ತವೆಯೇ ಹೊರತು ಯಾವುದೇ ಬಳೆ ಬೀಜವನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿಯೇ ತೆಂಗಿನ ಕಾಯಿಯನ್ನು ಸಿಪ್ಪೆಸಹಿತವಾಗಿ ಮಣ್ಣಿನಲ್ಲಿ ಹೂತರೆ ಮಾತ್ರವೇ ತೆಂಗಿನಸಸಿಯನ್ನು ಪಡೆಯಬಹುದಾಗಿದ್ದು, ಈ ಎರೆಡು ಫಲಗಳು ಎಂಜಲುರಹಿತವಾಗಿವೆ.ಆದುದರಿಂದಲೇ ನೈವೇದ್ಯಕ್ಕೆ ಈ ಎರೆಡು ಫಲಗಳು ಪರಮಶ್ರೇಷ್ಟವಾಗಿವೆ.
ಅನ್ನಪೂರ್ಣ ದೇವಿಯು ಉಗಮವಾದ ಬಗೆ ಹೇಗೆ?
ಒಮ್ಮೆ ಶಿವನ ಮೂರೂ ಕಣ್ಣುಗಳನ್ನು ಪಾರ್ವತಿಯು ತನ್ನ ಕೈಗಳಿಂದ ಮುಚ್ಚಿಬಿಟ್ಟಳು. ಶಿವನ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಹಾಗೂ ಅಗ್ನಿ ಆಗಿದ್ದು, ಇಡೀ ಜಗತ್ತಿಗೆ ಬೆಳಕನ್ನು ದಯಪಾಲಿಸುವ ಈ ಮೂರೂ ಕಣ್ಣುಗಳನ್ನು ಮುಚ್ಚಿದ್ದರಿಂದ ಬೆಳಕಿಲ್ಲದೆ ಇಡೀ ಜಗತ್ತು ಅಂಧಕಾರಮಯವಾಯಿತು, ಆಹಾರದ ಉತ್ಪಾದನೆಯಿಲ್ಲದಂತಾಯಿತು. ಭೀಕರ ಬರಗಾಲ ಆವರಿಸಿತು. ಇದಲ್ಲದೆ ಪಾರ್ವತಿಯ ಮುಖವು ಕಪ್ಪನೆಯ ಬಣ್ಣಕ್ಕೆ ತಿರುಗಿತು. ಈ ಸಮಸ್ಯೆಯನ್ನು ನಿವಾರಿಸುವ ಬಗೆ ಹೇಗೆಂದು ಪಾರ್ವತಿಯು ಈಶ್ವರನಲ್ಲಿ ಕೇಳಿಕೊಂಡಾಗ, ಶಿವನು ನೀನು ಅನ್ನಪೂರ್ಣೆಯ ರೂಪವನ್ನು ತಾಳಿ ಅನ್ನದಾನವನ್ನು ಮಾಡಬೇಕೆಂದು, ಇದರಿಂದ ಕ್ರಮೇಣ ಈ ಸಮಸ್ಯೆ ನಿವಾರಣೆಯಾಗುವುದೆಂದು ತಿಳಿಸಿದನು. ಮೊಟ್ಟಮೊದಲಿಗೆ ಶಿವನೇ ಅನ್ನಪೂರ್ಣೆಯಲ್ಲಿ ಬಿಕ್ಷೆಯನ್ನು ಬೇಡಿದನು. ಅಂದಿನಿಂದ ಇಂದಿನವರೆಗೂ ಪಾರ್ವತಿದೇವಿಯೇ ಅನ್ನಪೂರ್ಣೆಯಾಗಿ ಜಗತ್ತಿನ ಹಸಿವನ್ನು ನೀಗಿಸುತ್ತಿದ್ದಾಳೆ.
ಆಂಜನೇಯನಿಗೆ ಹನುಮಂತ ಎಂಬ ಹೆಸರು ಬಂದದ್ದು ಹೇಗೆ?
ಬಾಲ್ಯವಸ್ಥೆಯಲ್ಲಿದ್ದಾಗ ಆಂಜನೇಯನು ಚೆಂಡು ಎಂದು ತಿಳಿದು ಸೂರ್ಯನನ್ನು ಹಿಡಿಯಲು ಹೋದಾಗ ಸಿಟ್ಟಿಗೆದ್ದ ಸೂರ್ಯದೇವ್ನು ಆಂಜನೇಯನ ದವಡೆಗೆ ಗುದ್ದು ನೀಡಿದನು. ಸಂಸ್ಕೃತದಲ್ಲಿ ಹನು ಎಂದರೆ ದವಡೆಯಾಗಿದ್ದು, ಆಂಜನೇಯನ ದವಡೆಗೆ ಸೂರ್ಯದೇವನು ಮಂಥನ ಮಾಡಿದ್ದರಿಂದ ಹನುಮಂತ ಎಂಬ ಹೆಸರು ಬಂದಿತು.
ಮಹಾಬಲೇಶ್ವರಕ್ಕೆ ಆ ಹೆಸರು ಬರಲು ಕಾರಣವೇನು?
ಮಹಾ ಬ್ರಾಹ್ಮಣನಾದ ರಾವಣನು ತನ್ನ ನಿಷ್ಟೆಯುತ ಉಗ್ರ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ ಶಿವನ ಆತ್ಮಲಿಂಗವನ್ನು ಪಡೆದನು. ಶಿವನ ಸೂಚನೆಯ ಪ್ರಕಾರ ಅದನ್ನು ದಾರಿಯ ಮಧ್ಯದಲ್ಲಿ ಎಲ್ಲಿಯೂ ನೆಲಕ್ಕೆ ಸ್ಪರ್ಶಿಸಕೂಡದು. ಒಂದೊಮ್ಮೆ ಸ್ಪರ್ಶಿಸಿದಲ್ಲಿ ಅದು ಅಲ್ಲಿಯೇ ಭೂಸ್ಥಾಪನೆಗೊಳ್ಳುತ್ತದೆ. ಆತ್ಮಲಿಂಗವನ್ನು ಪಡೆದ ರಾವಣನು ಲಂಕಗೆ ತೆರಳುತ್ತಿದ್ದಾಗ ಸಾಯಂಕಾಲದ ಸಂಧ್ಯಾವಂದನೆಯ ಸಮಯವಾಯಿತು. ರಾವನನು ಸಂಧ್ಯಾವಂದನೆಯ ಕರ್ಮವನ್ನು ನಿಲ್ಲಿಸುವಂತಿರಲಿಲ್ಲ. ಅದೇ ಸಮಯಕ್ಕೆ ಪುಟ್ಟ ಬಾಲಕನ ರೂಪದಲ್ಲಿ ಬಂದ ಗಣಪತಿಯ ಕೈಗೆ ಆತ್ಮಲಿಂಗವನ್ನು ನೀಡಿ ಸಂಧ್ಯಾವಂದನೆಗೆ ತೆರಳಿದನು. ಈ ಮೊದಲೇ ನಿರ್ಧರಿಸಿದಂತೆ ಗಣೇಶನು ಇನ್ನೇನು ಸಂಧ್ಯಾವಂದನೆ ಮುಗಿಯುವ ಹೊತ್ತಿನಲ್ಲಿ ಆತ್ಮಲಿಂಗದ ಭಾರ ತಾಳೆನೆಂದು ನೆಲದ ಮೇಲಿಟ್ಟನು. ಯಾವಾಗ ಅದು ಭೂ-ಸ್ಪರ್ಶವಾಯಿತೋ ಅದು ಅಲ್ಲಿಯೇ ಭೂ ಸ್ಥಾಪಿತವಾಯಿತು. ರಾವಣ ಮಹಾ ಪರಾಕ್ರಮಿಯಾಗಿದ್ದರೂ ಸಹ ಎಷ್ಟೇ ಪ್ರಯತ್ನಿಸಿದರೂ ಸಹ ಲಿಂಗವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದಲೇ ಆ ಸ್ಥಳಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿದೆ.
ಸ್ವಾಮಿ ಸುಬ್ರಮಣ್ಯ ದೇವರ ಇತರ ಹೆಸರುಗಳುಮುರುಗನ್, ಸ್ಕಂದ, ಕಂದ, ಸುಬ್ರಾಮಣ್ಯ, ಶಣ್ಮುಖ, ಸರವಣ, ಕಾರ್ತಿಕೇಯ, ಗುಹ, ವೇಲಾಯುಧನ್, ಕುಮಾರಸ್ವಾಮಿ
ಸುಭಾಷಿತಗಳು
ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು
ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ
ನ್ಯಾಯಾತ್ಪಥಃ ಪ್ರವಿಚಲಂತಿ ಪದಂ ನ ಧೀರಾಃ
ನೀತಿನಿಪುಣರು ನಿಂದಿಸಲಿ ಹೊಗಳಲಿ, ಸಂಪತ್ತು ಬರಲಿ ಅಥವಾ ಹೊರಟುಹೋಗಲಿ, ಸಾವು ಈಗಲೇ ಬರಲಿ ಅಥವಾ ಯುಗಾಂತರದಲ್ಲಿ ಉಂಟಾಂಗಲಿ, ಧೀರರಾದವರು ನ್ಯಾಯಮಾರ್ಗವನ್ನು ಬಿಟ್ಟು ಸ್ವಲ್ಪವೂ ಕದಲುವದಿಲ್ಲ.
ನೈವ ಕಿಂಚಿತ್ಕರೋಮೀತಿ
ಯುಕ್ತೋ ಮನ್ಯೇತ ತತ್ತ್ವವಿತ್
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್
ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್
ಪ್ರಲಪನ್ವಿಸೃಜನ್ ಗ್ರಹ್ಣನ್
ಉನ್ಮಿಷನ್ನಿಮಿಷನ್ನಪಿ
ಇಂದ್ರಿಯಾಣೀಂದ್ರಿಯಾರ್ಥೇಷು
ವರ್ತಂತ ಇತಿ ಧಾರಯನ್
ತತ್ತ್ವಜ್ಞಾನಿಯಾದ ಸಾಂಖ್ಯಯೋಗಿಯು ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ಊಟ ಮಾಡುವಾಗ, ಓಡಾಡುವಾಗ, ನಿದ್ರಿಸುವಾಗ,ಉಸಿರಾಡುವಾಗ,ಮಾತನಾಡುವಾಗ,ತ್ಯಜಿಸುವಾಗ ಹಾಗೂ ಸ್ವೀಕರಿಸುವಾಗ,ಕಣ್ಣು ತಿಳಿಯುವಾಗ ಹಾಗೂ ಕಣ್ಣು ಮುಚ್ಚುವಾಗಲೂ ಸಹ ಇಂದ್ರಿಯಗಳೆಲ್ಲವೂ ತಮ್ಮ- ತಮ್ಮ ಸ್ವಾಭಾವಿಕ ವಿಷಯಗಳಲ್ಲಿ ಪ್ರವೃತ್ತವಾಗಿರುತ್ತವೆ ಎಂದು ತಿಳಿದುಕೊಳ್ಳುತ್ತಾ, ನಾನು ಏನನ್ನೂ ಸಹ ಮಾಡುತ್ತಾ ಇಲ್ಲ ಎಂದು ನಿಃಸಂದೇಹವಾಗಿ ತಿಳಿಯಬೇಕು
ತ್ಯಾಜ್ಯಂ ಧೈರ್ಯಂ ವಿದುರೇಪಿ ಕಾಲೇ
ಧೈರ್ಯಾತ್ಕದಾಚಿದ್ಗತಿಮಾಪ್ನುಯಾತ್ಸಃ
ಯಥಾ ಸಮುದ್ರೇಪಿ ಚ ಪೋತಭಂಗೇ
ಸಾಯಾಂತ್ರಿಕೋ ವಾಂಛತಿ ತರ್ತುಮೇವ
ಸಮುದ್ರದಲ್ಲಿ ಹಡಗು ಮುರಿದರೂ ನಾವಿಕನು ಸಾಗರವನ್ನು ದಾಟಲು ಹೇಗೆ ಬಯಸುವನೋ ಹಾಗೆ ಕಷ್ಟಕಾಲದಲ್ಲಿಯೂ ಧೈರ್ಯವನ್ನು ಎಂದೂ ಬಿಡಬಾರದು. ಧೈರ್ಯದಿಂದ ಎಂದಾದರೂ ಒಳ್ಳೆಯ ಗತಿಯನ್ನು ಹೊಂದಿಯಾನು.
ಯಃ ಪಠತಿ ಲಿಖತಿ ಪಷ್ಯತಿ
ಪರಿಪೃಚ್ಛತಿ ಪಂಡಿತಾನುಪಾಶ್ರಯತಿ
ತಸ್ಯ ದಿವಾಕರಕಿರಣೈಃ ನಲಿನೀದಲಮಿವ ವಿಕಾಸ್ಯತೇ ಬುದ್ಧಿಃ
ಯಾವನು ಓದಿ, ಬರೆದು, ನೋಡಿ, ಬಗೆಬಗೆಯಾಗಿ ಪ್ರಶ್ನೆಮಾಡಿ, ಪಂಡಿತರನ್ನು ಆಶ್ರಯಿಸುವನೋ ಅವನ ಬುದ್ಧಿಯು ಸೂರ್ಯಕಿರಣಗಳಿಂದ ತಾವರೆಯ ದಳ ಅರಳುವಂತೆ ವಿಕಾಸಗೊಳ್ಳುವುದು
ಸರ್ವಕರ್ಮಾಣಿ ಮನಸಾ
ಸಂನ್ಯಸ್ಯಾಸ್ತೇ ಸುಖಂ ವಶೀ
ನವದ್ವಾರೇ ಪುರೇ ದೇಹೀ
ನೈವ ಕುರ್ವನ್ನ ಕಾರಯನ್
ತನ್ನ ಅಂತಃಕರಣವನ್ನು ವಶದಲ್ಲಿಟ್ಟುಕೊಂಡು ಸಾಂಖ್ಯಯೋಗದ ಆಚರಣೆ ಮಾಡುವ ಪುರುಷನು ನಿಸ್ಸಂದೇಹವಾಗಿ ಏನನ್ನೂ ಮಾಡದೆ ಮತ್ತು ಏನನ್ನೂ ಮಾಡಿಸದೇ ಒಂಭತ್ತು ದ್ವಾರಗಳುಳ್ಳ ಶರೀರರೂಪೀ ಮನೆಯಲ್ಲಿ ಎಲ್ಲಾ ಕರ್ಮಗಳನ್ನೂ ಮನಸ್ಸಿನಿಂದಲೇ ತ್ಯಜಿಸಿ ಅರ್ಥಾತ್ ಇಂದ್ರಿಯಗಳು ಅವುಗಳ ವಿಷಯಗಳಲ್ಲಿ ಪ್ರವರ್ತಿಸುತ್ತಿವೆ ಎಂದು ತಿಳಿಸಿದುಕೊಳ್ಳುತ್ತಾ ಆನಂದವಾಗಿ ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಸ್ಥಿರಗೊಂಡಿರುತ್ತಾನೆ
ಯುಕ್ತಂ ಕರ್ಮಫಲಂ ತ್ಯಕ್ತ್ವಾ
ಶಾಂತಿಮಾಪ್ನೋತಿ ನೈಷ್ಠಿಕೀಮ್
ಅಯುಕ್ತಃ ಕಾಮಕಾರೇಣ
ಫಲೇ ಸಕ್ತೋ ನಿಬಧ್ಯತೇ
ನಿಷ್ಕಾಮ ಕರ್ಮಯೋಗಿಯು ಕರ್ಮಗಳ ಫಲವನ್ನು ತ್ಯಾಗ ಮಾಡಿ ಅರ್ಥಾತ್ ಪರಮಾತ್ಮನಿಗೆ ಸಮರ್ಪಿಸಿ ಭಗವತ್ಸಾಕ್ಷಾತ್ಕಾರ ರೂಪೀ ಶಾಂತಿಯನ್ನು ಪಡೆಯುತ್ತಾನೆ ಮತ್ತು ಸಕಾಮೀ ಪುರುಷನು ಫಲದಲ್ಲಿ ಆಸಕ್ತನಾಗಿ ಕಾಮಪ್ರೇರಣೆಯಿಂದ ಬಂಧಿಸಲ್ಪಡುತ್ತಾನೆ
ಶ್ರದ್ಧಯಾ ಧಾರ್ಯತೇ ಧರ್ಮೋ
ಬಹುಭಿರ್ನಾರ್ಥರಾಶಿಭಿಃ
ನಿಷ್ಕಿಂಚನಾ ಹಿ ಮುನಯಃ
ಶ್ರದ್ಧಾವಂತೋ ದಿವಂಗತಾಃ
ಶ್ರದ್ಧೆಯಿಂದಲೇ ಧರ್ಮವು ಬೆಳಗುತ್ತದೆ. ಹೇರಳವಾದ ಹಣವಿದ್ದರೂ ಧರ್ಮವನ್ನು ಸಂಪಾದಿಸಲಾಗದು. ಏನೂ ಹಣವಿಲ್ಲದ ಋಷಿಗಳು ಶ್ರದ್ಧೆಯಿಂದ ಸದ್ಗತಿ ಪಡೆದಿದ್ದಾರೆ. ( ಗರುಡಪುರಾಣ)
ಯಃ ಸರ್ವತ್ರಾನಭಿಸ್ನೇಹಃ
ತತ್ತತ್ ಪ್ರಾಪ್ಯ ಶುಭಾಶುಭಮ್
ನಾಭಿನಂದತಿ ನ ದ್ವೇಷ್ಟಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ
" ಯಾರು ಎಲ್ಲ ವಸ್ತುಗಳಲ್ಲಿಯೂ ಆಸಕ್ತಿ ರಹಿತನಾಗಿ ಇದ್ದು, ಬಂದ ಶುಭ ಫಲಗಳಿಗೆ ಸಂತೋಷಪಡದೇ, ಅಶುಭ ಫಲಗಳಿಗೆ ದುಃಖ - ದ್ವೇಷ ಪಡದೇ ಇರುತ್ತಾನೋ ಅವನೇ ಸ್ಥಿತಪ್ರಜ್ಞನು." ಹೀಗೆ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಸ್ಥಿತಪ್ರಜ್ಞನ ಸ್ವಭಾವದ ಪರಿಚಯ ಮಾಡಿಕೊಡುತ್ತಾನೆ. ಸುಖ ಬಂದಾಗ ಹಿಗ್ಗುವುದಿಲ್ಲ. ದುಃಖವಾದಾಗ ಕುಗ್ಗುವುದಿಲ್ಲ. ಹೀಗೆ ಸಮತ್ವ ಬುದ್ಧಿಯಲ್ಲಿ ಇರುವವನು ಸ್ಥಿತಪ್ರಜ್ಞ ಎನಿಸಿಕೊಳ್ಳುತ್ತಾನೆ. ಅವನಿಗೆ ಲಾಭದ ಮೇಲೆ ಆಸಕ್ತಿ ಇರುವುದಿಲ್ಲ. ಹಾಗೆಯೇ ನಷ್ಟದ ಬಗ್ಗೆ ದುಃಖವೂ ಇರುವುದಿಲ್ಲ. ಅವನನ್ನೇ ಯೋಗಿ ಅಥವಾ ಯೋಗಸ್ಥ ಮನಸ್ಸಿನವನು ಎನ್ನುತ್ತಾರೆ. ಹೀಗೆ ಸ್ಥಿತಪ್ರಜ್ಞನಾಗಿದ್ದರೆ ಮಾನಸಿಕ ನೆಮ್ಮದಿ ಮತ್ತು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಆಸಕ್ತಿ, ತೃಪ್ತಿ ಇರುತ್ತದೆ. ಅದರಿಂದ ಆನಂದ ಸಿಗುತ್ತದೆ. ಚಿಂತೆ ಮತ್ತು ಮಾನಸಿಕ ಕ್ಲೇಶ - ತೊಳಲಾಟ ಇರುವುದಿಲ್ಲ. ನಾವೂ ಸಹ ಹೀಗೆ ಸ್ಥಿತಪ್ರಜ್ಞರಾಗಲು ಪ್ರಯತ್ನಿಸೋಣ. ಜೀವನದಲ್ಲಿ ಆನಂದ ಮತ್ತು ನೆಮ್ಮದಿ ಪಡೆಯೋಣ.
ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು
ಮುಂದೆ ತಾನೇಳುವುದು ಬೇರೆ ಗಾತ್ರದಲಿ
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ
ಮುಂದಹುದು ಬೆರಗೊಂದೆ - ಮಂಕುತಿಮ್ಮ
ಇಂದು ಎದ್ದ ತೆರೆ ಬೀಳುವುದು ಮತ್ತೆ ಮರುದಿವಸ ಇನ್ನೊಂದು ತೆರೆ ಬೇರೆ ಗಾತ್ರದಲಿ ಏಳುವುದು. ಹಾಗೆ ಇಂದು ನಾಳೆಗಳ ಬೇರೆ ಬೇರೆ ಗಾತ್ರದ ತೆರೆಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಹಿಂದೆ ನಮಗೆ ಒಂದು ವಿಶಾಲವಾದ ಕಡಲು ಕಾಣುವಂತೆ, ನಮ್ಮ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ, ರೂಪದಲ್ಲಿ, ಗಾತ್ರದಲ್ಲಿ ಮತ್ತು ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಗಳಿಗೆ ಎದ್ದಂತಹ ಪರತತ್ವದ ಭಾವಗಳನ್ನೆಲ್ಲ ಒಟ್ಟು ಮಾಡಿದರೆ ನಮಗೆ ಆ ಪರತತ್ವದಿಂದ ಪ್ರತಿರೂಪವಾದ ಪರಮಾತ್ಮನ ಅರಿವು ಮೂಡುತ್ತದೆ.
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ
ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ
ತಿಳಿವುಮೊಳ್ತನಮುಂ ವಿರಕ್ತಿಯಂ ಮುಕ್ತಿಯುಂ
ಗಳಿಗೆ ಸರಿಸೇರ್ದಂದು ಮಂಕುತಿಮ್ಮ
ಮಳೆ, ಬೆಳೆ ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ಕಾಲ ಋತುಗಳಿರುವಂತೆಯೇ ತಿಳುವಳಿಕೆ, ಸಜ್ಜನಿಕೆ, ವಿರಕ್ತಿ ಮತ್ತು ಮೋಕ್ಷಗಳಿಗೂ ಸಹ ಆಯಾ ಸಮಯದಲ್ಲಿ ಒದಗುತ್ತದೆ.ಈ ರೀತಿ ಜೀವ ಎಂಬ ಮರವನ್ನು ಕಾಲನಿಯಮವು ಬೆಳೆಸುತ್ತದೆ
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ?
ತಾಳುಮೆಯ ಪರಿಪಾಕ ಮಂಕುತಿಮ್ಮ
ಬೆಳಿಗ್ಗೆ ಕಾಳುಬಿತ್ತಿ ಸಂಜೆಗಾಗಲೇ ಅದು ಬೆಳೆದು ಪೈರಾಗಲೆಂದು ಬಯಸಿದರೆ ಅದು ಸಾಧ್ಯವೇ? ಅಗತ್ಯವಿರುವಷ್ಟು ಸಮಯ ಅಕ್ಕಿಯನ್ನು ಬೇಯಿಸದೇ ಹೋದಲ್ಲಿ ಅನ್ನವಾಗುವುದಿಲ್ಲ, ಆದುದರಿಂದ ತಾಳೆ ಎಂಬುದು ಜೀವನದಲ್ಲಿ ಬಹಳ ಮುಖ್ಯ, ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ ಕಾಲನೇ ಮುಖ್ಯ ಕಾರಣ, ಆದುದರಿಂದ ಪ್ರತಿಯೊಂದಕ್ಕೂ ತಾಳ್ಮೆಯಿಂದ ಕಾಯುವುದು ಅತ್ಯಂತ ಅಗತ್ಯ.
ಸಾಮಾನ್ಯರೂಪದಲಿ, ಸಂಸಾರಿ ವೇಷದಲಿ
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು
ತಾಮಸಿಗೆ ವರವೆಲ್ಲಿ? ಮಂಕುತಿಮ್ಮ
ಭಗವಂತನು ನಿನ್ನ ಬಳಿಗೆ ಯಾವುದೇ ರೂಪದಲ್ಲಿಯಾದರೂ ಬರಬಹುದು (ಸಾಮಾನ್ಯನ ರೂಪದಲ್ಲಿ, ಸಂಸಾರಿಯ ರೂಪದಲ್ಲಿ ಹೀಗೆ). ವರ ನೀಡಬಹುದು. ಆದರೆ ಅವನ ಇರುವಿಕೆಯನ್ನು, ಅವನ ಮಹಿಮೆಯನ್ನು ಗುರುತಿಸಬೇಕಿದ್ದರೆ ನಿನ್ನಲ್ಲಿ ಸಂಸ್ಕಾರವಿರಬೇಕು, ತಾಮಸ ಮನೋಸ್ಥಿತಿಯನ್ನು ಹೊಂದಿದ್ದರೆ ಭಗವಂತನು ನಿನ್ನ ಪಕ್ಕದಲ್ಲಿಯೇ ಇದ್ದರೂ ಗುರುತಿಸಲಾಗದು.
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ
ಹೊರಗೆ ಕಾರ್ಯಧ್ಯಾನವೊಳಗುದಾಸೀನ
ಹೊರಗೆ ಸಂಸ್ಕೃತಿಭಾರವೊಳಗದರ ತಾತ್ಸಾರ
ವರಯೋಗಮಾರ್ಗವಿದು ಮಂಕುತಿಮ್ಮ
ಜೀವನದಲ್ಲಿ ನೋವು ರಹಿತವಾಗಿ ಜೀವನ ನಡೆಸಬೇಕಾದಲ್ಲಿ ನಾವು ಹೊರಜಗತ್ತಿನೊಂದಿಗೆ ವ್ಯವಹಾರದಲ್ಲಿ ನಿರತರಾಗಿದ್ದರೂ ಅದರ ಕುರಿತು ಮನಸ್ಸಿನಲ್ಲಿ ವಿರಕ್ತಿಭಾವವನ್ನು ಹೊಂದಿರಬೇಕು, ಸಂಸಾರ, ಹುಟ್ಟು, ಸಾವು ಎಲ್ಲ ಸಂಸ್ಕೃತಿ, ಸಂಪ್ರದಾಯಗಳ ಭಾರವನ್ನು ಹೊತ್ತರೂ ಮನಸ್ಸಿನಲ್ಲಿ ಅವುಗಳ ಬಗ್ಗೆ ತಿರಸ್ಕಾರ, ಉದಾಸೀನತೆಯ ಮನೋಭಾವವನ್ನು ಹೊಂದಿರಬೇಕು, ಜ್ಞಾನಿಯೆನಿಸಿದವನು ಮಾತ್ರವೇ ಈ ಹಾದಿಯನ್ನು ಅನುಸರಿಸುತ್ತಾನೆ.
ಪ್ರಸಾದಾದೇವ ಸಾ ಭಕ್ತಿ: ಪ್ರಸಾದೋ ಭಕ್ತಿಸಂಭವ:
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರ:
ಅಂಕುರದಿಂದ ಬೀಜ ಬೀಜದಿಂದ ಅಂಕುರವು ಹೇಗೆ ಉತ್ಪನ್ನವಾಗುತ್ತದೆಯೋ ಹಾಗೆಯೇ ಶಿವನ ಪ್ರಸಾದದಿಂದ ಭಕ್ತಿ, ಭಕ್ತಿಯಿಂದ ಶಿವನ ಪ್ರಸಾದ ಉಂಟಾಗುತ್ತದೆ. ಶಿವಾನುಗ್ರಹವಿಲ್ಲದೇ ಭಕ್ತಿಯು ಮೂಡದು, ಶಿವಭಕ್ತಿರಹಿತನಿಗೆ ಶಿವಾನುಗ್ರಹವಾಗದು, ಶಿವಾನುಗ್ರಹವೆಂಬುದು ಶಿವನ ಕೈಯಲ್ಲಿದೆ, ಶಿವಭಕ್ತಿಯು ನಮ್ಮ ಕೈಯಲ್ಲಿರುತ್ತದೆ. ಆದುದರಿಂದ ನಮ್ಮ ಮನದಲ್ಲಿ ಭಕ್ತಿಯನ್ನು ಅಳವಡಿಸಿಕೊಂಡು ಶಿವನ ಅನುಗ್ರಹವನ್ನು ಪಡೆಯಬೇಕು.
ಯಥಾವೃಷ್ಟಿ: ಸಮುದ್ರೇಷು ವೃಥಾತೃಪ್ತಸ್ಯ ಭೋಜನಂವೃಥಾದಾನಂ ಸಮರ್ಥಸ್ಯ ವೃಥದೀಪೋ ಈ ದಿವಾ ಚ
ಸಮುದ್ರದಲ್ಲಿ ಸುರಿಯುವ ಮಳೆ, ತೃಪ್ತನಾದ ವ್ಯಕ್ತಿಗೆ ಇಡುವ ಭೋಜನ, ಶಕ್ತರಿಗೆ ನೀಡುವ ದಾನ, ಉತ್ತಮ ಬೆಳಕಿರುವ ಹಗಲಿನಲ್ಲಿ ಉರಿಯುವ ದೀಪ ಇವೆಲ್ಲವೂ ಸಂಪೂರ್ಣ ವ್ಯರ್ಥವಾದವುಗಳಾಗಿವೆ.
ಆದರೇಣ ಯಥಾಸ್ತೌತಿ ಧನವಂತಂ ಧನೇಚ್ಛಯಾತಥಾಚೇತ್ಪರಮಾತ್ಮಾನಂ ಕೋನಮುಚ್ಯೇತ ಬಂಧನಾತ್
ಸಿರಿವಂತನ ಬಳಿ ಸಾಲ ಪಡೆಯಲು ನಾವು ಎಷ್ಟೆಲ್ಲಾ ವಿನಯದಿಂದ, ಆದರಾಭಿಮಾನದಿಂದ ಸ್ತುತಿ ಮಾಡುತ್ತೇವೆಯೋ, ಅದೇ ರೀತಿ ಪರಮಾತ್ಮನನ್ನು ಸ್ತುತಿ ಮಾಡಿದರೆ ಯಾರು ತಾನೇ ತಮ್ಮ ಬಂಧನಗಳಿಂದ ಮುಕ್ತನಾಗಲಾರೆವು.
ಪ್ರಾರಬ್ಧವೇ ನಿರುದ್ಯೋಗ: ಜಾಗರ್ತವ್ಯೇ ಪ್ರಸುಪ್ತಕ:
ವಿಶ್ವಸ್ತವ್ಯೇ ಭಯಸ್ಥಾನೇ ಹಾ ನರ: ಕೋ ನ ಹನ್ಯತೇ
ಅತ್ಯಂತ ಅಗತ್ಯವಾಅಗಿ ಕಾರ್ಯಾರಂಭ ಮಾಡಲೇಬೇಕಾದ ಪರಿಸ್ಥಿತಿ ಇದ್ದಾಗ್ಯೂ ಸಹ ಮನುಷ್ಯನಾದವನು ಸೋಮಾರಿಯಾಗಿ ಕುಳಿತುಕೊಳ್ಳುತ್ತಾನೆ. ಅವನು ಮಾಡುವ ದೊಡ್ಡ ತಪ್ಪೆಂದರೆ ಕೇವಲ ಕೆಲಸವಾರಂಭಿಸುವ ವಿಷಯದ ಕುರಿತಾದ ಭಯವನ್ನುಂಟು ಮಾಡುವ ವಿಷಯಗಳ ಕುರಿತೇ ಅತಿಯಾದ ವಿಶ್ವಾಸವಿಡುತ್ತಾನೆ. ಆದರೆ ಅವನು ಇದನ್ನು ಶಾಶ್ವತ ಎಂದು ಭಾವಿಸದೆಯೇ ಯಶಸ್ಸಿನ ರಹಸ್ಯವನ್ನರಿತು ಮುಂದುವರಿಯಬೇಕು, ಇಲ್ಲವಾದರೆ ಅವನ ನಾಶ ಖಂಡಿತ.
ಜನ್ಮನಾ ಜಾಯತೇ ಶೂದ್ರ: ಕರ್ಮಣಾ ಜಾಯತೇ ದ್ವಿಜ:
ವಿದ್ಯಯಾ ಯಾತಿ ವಿಪ್ರತ್ವಂ ತ್ರಿಭಿ: ಶ್ರೋತ್ರೀಯ ಉಚ್ಯತೇ
ಹುಟ್ಟಿನಿಂದ ಶೂದ್ರನಾದರೂ ಸಂಧ್ಯಾವಂದನೆ, ದೇವಪೂಜೆ ಇತ್ಯಾದಿಗಳಿಂದ ದ್ವಿಜನೆನಿಸಬಹುದು. ವೇದವಿದ್ಯೆಯಿಂದ ವಿಪ್ರತ್ವ ಪಡೆದಿದ್ದರೂ ಈ ಮೂರೂ ಗುಣವುಳ್ಳವನು ಶ್ರೋತ್ರಿಯೆನಿಸಿಕೊಳ್ಳುತ್ತಾನೆ.
ದೈವತ್ವ ಕಾಣುವುದು ಯಾವಾಗ
ನಾವೆಲ್ಲರೂ ಪ್ರಾಪಂಚಿಕ ಸುಖ ಭೋಗಗಳಲ್ಲಿ ದ್ವೇಷ, ಅಸೂಯೆ ನಾನು ಎಂಬ ಅಹಂನಲ್ಲಿ ಮುಳುಗಿ ಹೋಗಿದ್ದೇವೆ. ನಮ್ಮ ನಮ್ಮಲ್ಲಿಯೇ ಹೊಂದಾಣಿಕೆ ಇಲ್ಲದ ಬದುಕನ್ನು ಸೃಷ್ಟಿಸಿಕೊಂಡಿದ್ದೇವೆ. ಹಲವಾರು ಜಾತಿ, ಧರ್ಮಗಳ ಪದ್ಧತಿಗಳ ಗೋಡೆಗಳನ್ನು ಕಟ್ಟಿಕೊಂಡು ನಮ್ಮನ್ನು ನಾವು ಬಂಧಿಸಿಕೊಂಡಿದ್ದೇವೆ. ಆದರೆ ಮಗುವೊಂದನ್ನು ಗಮನಿಸಿ, ಅದಕ್ಕೆ ತಾನ್ಯಾರೆಂಬುದೇ ತಿಳಿದಿರುವುದಿಲ್ಲ. ಇವರು ನಮ್ಮವರು, ಇವರು ನಮ್ಮವರಲ್ಲ ಎಂಬ ಬೇಧ ಭಾಅವಗಳಿರುವುದಿಲ್ಲ. ಸಾಂದರ್ಭಿಕವಾಗಿ ಅತ್ತರೂ, ಕೋಪಿಸಿಕೊಂಡರೂ ಸಹ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಮರೆತು ಎಲ್ಲರೊಂದಿಗೆ ಬೆರೆತು ನಗುತ್ತಿರುತ್ತದೆ. ಯಾವುದೇ ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತದೆ, ಆಡಿ ನಲಿಯುತ್ತದೆ. ಹೀಗೆ ನಮ್ಮ ಅಜ್ಞಾನ, ಅಹಂಕಾರದಿಂದ ಸೃಷ್ಟಿಸಿಕೊಂಡ ಎಲ್ಲ ಬಂಧನಗಳನ್ನೂ ದಾಟಿ ನಮ್ಮ ಮನಸ್ಸು ಮಗುವಿನಂತೆ ನಲಿದಾಡಿ ಬಂದದ್ದೆಲ್ಲವನ್ನೂ ಸಂತಸದಿಂದ ಸ್ವೀಕರಿಸಿದಲ್ಲಿ ಆಗ ಮಾತ್ರ ನಾವು ನಿಜವಾದ ದೈವತ್ವವನ್ನು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಕಾಣಬಹುದು. ಹೀಗೆ ಆಗಬೇಕಾದಲ್ಲಿ ಇರುವುದೊಂದೇ ದಾರಿ ಮೊದಲು ನಾವು ಮಗುವಾಗಬೇಕು. ನಿಷ್ಕಲ್ಪಷವಾದ ಮನಸ್ಸು ನಮ್ಮದಾಗಬೇಕು.
ನಾಳೆ ಎನ್ನುವುದು ಶಾಶ್ವತ, ಖಂಡಿತ ನಾಳೆ ಎಂಬುದು ಬಂದೇ ಬರುತ್ತದೆ. ಆದರೆ ಆ ನಾಳೆಯನ್ನು ನೋಡಲು ನಾವಿರುತ್ತೇವೆಯೇ? ಈ ಪ್ರಶ್ನೆಗೆ ಉತ್ತರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ನಮ್ಮದಾಗಿರುವ ಈ ದಿನವನ್ನು ಮಗುವಿನಂತಹ ಮನಸ್ಸಿನಿಂದ ಅರ್ಥಪೂರ್ಣವಾಗಿ ಜೀವಿಸಬೇಕು.
ಪಾರದರ್ಶಕತೆ ಮತ್ತು ನಿರ್ಭೀತ ಸ್ಥಿತಿ
ಜೀವನದಲ್ಲಿ ಎಂದಿಗೂ ಪಾರದರ್ಶಕತೆ ಅತ್ಯಂತ ಅವಶ್ಯಕ. ಯಾವುದೇ ಮುಚ್ಚುಮರೆಯಿಲ್ಲದ ಜೀವನದಿಂದ ಮನಸ್ಸು ನಿರ್ಭೀತವಾಗಿರುತ್ತದೆ. ಸುಳ್ಳು ಹೇಳುವ ಅನಿವಾರ್ಯತೆ ಇರುವುದಿಲ್ಲ. ಸುಳ್ಳು ಹೇಳದೇ ಇರುವುದರಿಂದ ಅತಿಯಾದ ನೆನಪಿನ ಶಕ್ತಿಯ ಅವಶ್ಯಕತೆಯೂ ಇರುವುದಿಲ್ಲ. ಪಾರದರ್ಶಕತೆಯಿಂದ ಜೀವನ, ಮನಸ್ಸು ಹಗುರಾಗುತ್ತದೆ. ಅಸತ್ಯದ ಬೇಲಿಯಿಂದ ಉಂಟಾಗಬಹುದಾದ ತೊಳಲಾಟಗಳು, ಭಯ ಇಲ್ಲವಾಗಿ ನೆಮ್ಮದಿ ಮನೆ ಮಾಡುತ್ತದೆ. ನಮಗೆ ಸರಿಯೆನಿಸಿದ್ದನ್ನು ಹೇಳಿದಾಗ ಇತರರಿಗೆ ನೋವಾಗುತ್ತದೆಂದು ಪ್ರಿಯವಾದ ಸುಳ್ಳು ಹೇಳಿದರೆ ಒಂದಕ್ಕೆ ಒಂದರಂತೆ ಸುಳ್ಳಿನ ಸರಪಳಿಯಿಂದ ನಮ್ಮ ಉಸಿರು ಬಿಗಿದು ಜೀವನ ದುರ್ಭರವಾಗುತ್ತದೆ.
ನಿಜವಾದ ಆರೋಗ್ಯನಮ್ಮಲ್ಲಿನ ಆರು ಇಂದ್ರಿಯಗಳೂ ಆರೋಗ್ಯವಾಗಿರುವುದೇ ನಿರ್ಮಲವಾಗಿರುವುದೇ ಆರೋಗ್ಯ. ಅರೆ ಇರುವುದು ಐದೇ ಇಂದ್ರಿಯಗಳಲ್ಲವೇ? ಎಂದು ನಿಮಗನ್ನಿಸಬಹುದು, ಹೌದು ಕಿವಿ, ಚರ್ಮ, ಕಣ್ಣು, ನಾಲಗೆ ಹಾಗೂ ಮೂಗು ಈ ಐದು ಪಂಚೇಂದ್ರಿಯಗಳಾದರೆ ಕಣ್ಣಿಗೆ ಕಾಣದ ಹಾಗೂ ಅತ್ಯಂತ ಮಹತ್ವವಾದ ಮನಸ್ಸು ನಮ್ಮ ಆರನೆಯ ಇಂದ್ರಿಯವಾಗಿದೆ. ನಮ್ಮ ಈ ಆರೂ ಇಂದ್ರಿಯಗಳೂ ಪರಿಶುದ್ಧವಾಗಿದ್ದಲ್ಲಿ ಮಾತ್ರ ನಮ್ಮ ಜೀವನದಲ್ಲಿನ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಲಭಿಸಲು ಸಾಧ್ಯ. ನಮ್ಮ ಈ ಆರು ಇಂದ್ರಿಯಗಳಲ್ಲಿ ಯಾವುದೇ ಒಂದು ಇಂದ್ರಿಯಕ್ಕೆ ಸಮಸ್ಯೆಯಾದರೂ ಆರೋಗ್ಯ ಇರುವುದಿಲ್ಲ.
ನಿಜವಾದ ಗೆಲುವು
ಘನಘೋರ ಯುದ್ಧಗಳನ್ನು ಮಾಡಿ ಹಲವಾರು ಜನರನ್ನು ಸೋಲಿಸಿ, ರಾಜ್ಯಗಳನ್ನು ಗೆದ್ದರೂ, ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಅವನು ಜೀವನದಲ್ಲಿ ಗೆಲ್ಲಲಾರ, ಗೆದ್ದ ಗೆಲುವನ್ನು ಗೆಲುವಿನ ಫಲವನ್ನು ಉಳಿಸಿಕೊಳ್ಳಲಾರ. ಎಂಥಹ ಕಠಿಣ ಪರಿಸ್ಥಿತಿಯಲ್ಲಿಯೂ, ಎಂಥಹ ಸಂತಸದ ಸನ್ನಿವೇಶದಲ್ಲಿಯೂ ತನ್ನ ಮನಸ್ಸನ್ನು ತಾನು ನಿಯಂತ್ರಿಸಿದಲ್ಲಿ ಜೀವನದಲ್ಲಿ ಅಂತಹ ವ್ಯಕ್ತಿ ಬಹುಪಾಲು ಗೆದ್ದಂತೆಯೇ ಸರಿ ಆದುದರಿಂದಲೇ ಭಗವಾನ್ ಗೌತಮ ಬುದ್ಧ ಹೀಗೆ ಹೇಳಿದ್ದಾರೆ. "ನೀನು 1000 ಯುದ್ಧಗಳನ್ನು ಮಾಡಿ ಲಕ್ಷಾಂತರ ಜನರನ್ನು ಗೆಲ್ಲಬಹುದು, ಆದರೆ ನಿನ್ನನ್ನು ನೀನು ಗೆಲ್ಲದ ಹೊರತು ಉಳಿದೆಲ್ಲಾ ಗೆಲುವುಗಳೂ ನಿರರ್ಥಕ"
ಆನಂದಮಯವಾದ ಬದುಕು
ಏನಿದು ಆನಂದಮಯವಾದ ಬದುಕು? ಬದುಕಿನಲ್ಲಿ ನಮಗೆ ದೊರೆಯುವುದು ಯಾವಾಗ? ಯಾವುದರಿಂದ ಅಂತಹ ಬದುಕು ನಮಗೆ ದೊರೆಯುತ್ತದೆ? ಬಹುಶ: ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವುದು ಲೌಕಿಕ ಬದುಕಿನ ಬಂಧನಗಳಿಗೆ ಸಿಲುಕಿದವರಿಗೆ ಅತ್ಯಂತ ಕಷ್ಟಕರ. ನೇರವಾಗಿ ಹೇಳುವುದಾದರೆ ನಮ್ಮ ಮನಸ್ಸಿನಲ್ಲಿ ಎಂದು ಶಾಂತಿ, ಸಮಾಧಾನಗಳು ನೆಲೆಸುತ್ತವೆಯೋ? ಯಾವಾಗ ನಮ್ಮ ಮನಸ್ಸು ಲಭ್ಯವಿರುವುದಕ್ಕೆ ತೃಪ್ತಿ ಪಡುತ್ತದೆಯೋ? ಯಾವಾಗ ದ್ವೇಷ-ಅಸೂಯೆಗಳನ್ನು ಮರೆತು ಶತೃಗಳನ್ನೂ ಸಹ ಕ್ಷಮಿಸಿ ಪ್ರೀತಿಸುವ ಗುಣ ಬೆಳೆಸಿಕೊಳ್ಳುತ್ತೇವೆಯೋ? ಎಂದು ಇತರರ ಕಷ್ಟ-ನೋವುಗಳಿಗೆ ಮಿಡಿಯುವ ಮಾನವೀಯ ಹೃದಯ ನಮ್ಮದಾಗುತ್ತದೆಯೋ? ಯಾವಾಗ ನಾನು ಎಂಬ ಅಹಂ ನಮ್ಮಿಂದ ದೂರವಾಗುತ್ತದೆಯೋ? ಯಾವಾಗ ನಮ್ಮ ಮನಸ್ಸುಗಳು ಮಗುವಿನ ಮನಸ್ಥಿತಿಗೆ ಮರಳುತ್ತವೆಯೋ? ಆಗ ನೋಡಿ ನಮ್ಮ ಜೀವನದಲ್ಲಿ ನಿಜವಾದ ಆನಂದ ಸಂತೋಷ ನಮಗೆ ಲಭಿಸುತ್ತದೆ.
ವಯಮಿಹ ಪರಿತುಷ್ಟಾಃ ವಲ್ಕಲೈಸ್ತ್ವಂ ದುಕೂಲೈಃ
ಸಮ ಇವ ಪರಿತೋಷೋ ನಿರ್ವಿಶೇಷೋ ವಿಶೇಷಃ
ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ
ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ
ಬಡವನಾದರೂ, ಕೇವಲ ನಾರುಮಡಿ ಧಿರಿಸುಗಳನ್ನು ಧರಿಸಿದರೂಹ ಅತ್ಯುತ್ತಮ ಬಟ್ಟೆಗಳನ್ನು ಉಡುವ ನಿಮಗಿರುವಷ್ಟೇ ತೃಪ್ತಿ ನಮಗಿದೆ, ಆಕೆಂದರೆ ಆಸೆ ಯಾವಾಗ ಹೆಚ್ಚುತ್ತದೆಯೋ ಆಗ ಮಾತ್ರ ನಮಗೆ ನಾವು ಬಡವ ಎಂದೆನಿಸುತ್ತದೆ. ಒಂದೊಮ್ಮೆ ಆಸೆ ಇಲ್ಲದೆಯೇ ಹೋದಲ್ಲಿ ಆಗ ಬಡವ-ಶ್ರೀಮಂತರೆಂಬ ಯಾವುದೇ ಬೇಧಭಾವಗಳೇ ಇರುವುದಿಲ್ಲ.
ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ
ನಿನ್ನಲ್ಲಿರುವ ಹಣವನ್ನು ಯಾರಿಗಾದರೂ ಸದುದ್ದೇಶಕ್ಕಾಗಿ ನೀಡು, ಇಲ್ಲವೇ ನೀನೇ ಏತಕ್ಕಾದರೂ ಬಳಸು,ಅದನ್ನು ಹೊರತುಪಡಿಸಿ ಕೂಡಿಡಬೇಡ, ಯಾರಿಗೂ ಉಪಯೋಗಕ್ಕೆ ಬಾರದೇ ಸುಮ್ಮನೇ ಕೂಡಿಟ್ಟ ಹಣವು ಜೇನುಹುಳುಗಳು ಕೂಡಿಟ್ಟ ಜೇನು ಮತ್ತ್ಯಾರದೋ ಪಾಲಾಗುವಂತಾಗುವುದು.
ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ?
ಕಣ್ಣೆದುರಿನಲ್ಲಿಯೇ ಇರುವಾಯಿ, ತಂದೆ ಹಾಗೂ ಗುರುಗಳನ್ನು ಬಿಟ್ಟು ಕೈಗೆಂದೂ ನಿಲುಕದ, ಎಟುಕದ ದೇವರುಗಳನ್ನು ಏತಕ್ಕಾಗಿ ನೆಚ್ಚಿಕೊಳ್ಳುವೆ ಅಂದರೆ ಇಲ್ಲಿ ಕಣ್ಣಿಗೆ ಕಾಣುವ ದೇವರುಗಳನ್ನೇ ಗೌರವಿಸದವನು, ಅವರಲ್ಲಿ ದೇವರಲ್ಲಿ ಕಾಣದವನು, ಬೇರ್ಯಾವ ದೇವರುಗಳನ್ನು ತಾನೇ ನೋಡಲು ಸಾಧ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ.
ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ
ಚೇಳಿಗೆ ಕೇವಲ ತನ್ನ ಬಾಲದ ತುದಿಯಲ್ಲಿ ಮಾತ್ರವೇವಿಷವಿರುತ್ತದೆ, ನೊಣಕ್ಕೆ ಬಾಯಿಯಲ್ಲ್ಲಿ ಮಾತ್ರವೇ ವಿಷವಿರುತ್ತದೆ, ಇನ್ನು ಹಾವಿಗೆ ತನ್ನ ಹಲ್ಲಿನಲ್ಲಿ ಮಾತ್ರವೇ ವಿಷವಿರುತ್ತದೆ, ಆದರೆ ಇಡೀ ಮೈಯೆಲ್ಲ ವಿಷವನ್ನು ಹೊಂದಿರುವಿಷಕಾರಿ ಪ್ರಾಣಿ ಎಂದರೆ ದುರ್ಜನನಾದ ಮನುಷ್ಯ ಮಾತ್ರವೇ ಆಗಿದೆ.
ನಷ್ಟಂ ದ್ರವ್ಯಂ ಲಭ್ಯತೇ ಕಷ್ಟಸಾಧ್ಯಂ , ನಷ್ಟಾ ವಿದ್ಯಾ ಲಭ್ಯತೇಭ್ಯಾಸಯುಕ್ತಾ
ನಷ್ಟಾರೋಗ್ಯಂ ಸೂಪಚಾರೈಃ ಸುಸಾಧ್ಯಮ್ ನಷ್ಟಾ ವೇಲಾ ಯಾ ಗತಾ ಸಾ ಗತೈವ
ಕಳೆದುಕೊಂಡ ಎಲ್ಲಾ ಸಂಪತ್ತನ್ನು ಮರಳಿ ಗಳಿಸಬಹುದು. ಮರೆತುಹೋದ ವಿದ್ಯೆಯನ್ನು ಸತತ ಪರಿಶ್ರಮಯುತ ಅಧ್ಯಯನದಿಂದ ಮತ್ತೆ ಪಡೆಯಬಹುದು. ಆರೋಗ್ಯದಲ್ಲಿನ ಏರುಪೇರುಗಳನ್ನು ವೈದ್ಯರ ಮುಖೇನ ಗುಣಪಡಿಸಿಕೊಳ್ಳಬಹುದು. ಆದರೆ, ಮಂದಬುದ್ದಿಯಿಂದ ಆಲಸ್ಯತನದಿಂದ ಕಳೆದುಕೊಂಡ ಕಾಲವನ್ನು ಎಂದಿಗೂ ಸಹ ಮರಳಿಪಡೆಯಲು ಸಾಧ್ಯವಿಲ್ಲ. ಆದುದರಿಂದಲೇ ಹಿರಿಯರು ಹೇಳುತ್ತಾರೆ ಒಡೆದ ಮುತ್ತನ್ನು ಹಾಗೂ ಮಿಂಚಿಹೋದ ಕಾಲವನ್ನು ಎಂದಿಗೂ ಮರಳಿ ಸಾಧ್ಯವಿಲ್ಲ. ಜೀವನದ ಮಹಾ ಪಯಣದ ಹಾದಿಯಲ್ಲಿ ಇರುವ ಅಲ್ಪ ಸಮಯವನ್ನು ಎಷ್ಟು ಸಾಧ್ಯವೋ ಅಷ್ಟು ಸದುಪಯೋಗಪಡಿಸಿಕೊಳ್ಳುವುದು ಜಾಣತನ.
ವಿರೂಪೋ ಯಾವದಾದರ್ಶೇ ನಾತ್ಮನ: ಪಶ್ಯತೇ ಮುಖಂ
ಮನ್ಯತೇ ತಾವದಾತ್ಮಾನಮನ್ಯೇಭ್ಯೋ ರೂಪವತ್ತರಂ
ಎಂಥಹ ವಿಕಾರ ಮುಖವುಳ್ಳವನೂ ಸಹ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವವರೆಗೂ ಎಲ್ಲರಿಗಿಂತಲೂ ತಾನೇ ರೂಪವಂತನೆಂಬ ಭ್ರಮೆಯಲ್ಲಿರುತ್ತಾನೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ದೇಹ ಅಥವಾ ಮುಖದ ಸೌಂದರ್ಯದ ಕುರಿತಲ್ಲ. ನಮ್ಮ ಒಳ-ಹೊರಗುಗಳು, ಆಳ-ಅಗಲಗಳನ್ನು ಹಾಗೂ ಈ ಹಿಂದಿನ ನಮ್ಮ ಜೀವನವನ್ನು ನೋಡಿ ಅರಿತುಕೊಳ್ಳುವವರೆಗೂ ಮನುಷ್ಯನಲ್ಲಿನ ನಾನು ಎಂಬ ಅಹಂಕಾರವನ್ನು ತೊರೆದುಕೊಳ್ಳಲು ಸಾಧ್ಯವಿಲ್ಲ. ಆದುದರಿಂದಲೇ ಹಿರಿಯರು ಹೇಳುತ್ತಾರೆ, ಎಂದಿಗೂ ಸಹ ನಾವು ನಡೆದುಬಂದ ಹಾದಿಯನ್ನು ಮರೆಯಬಾರದು, ಹತ್ತಿದ ಏಣಿಯನ್ನು ಒದೆಯಬಾರದೆಂದು
ಸಹವಾಸದ ಪ್ರಭಾವ
ಕಾದಿರುವ ಹೆಂಚಿನ ಮೇಲೆ ನೀರಿನ ಹನಿ ಬಿದ್ದರೆ ಅದು ಶಾಖಕ್ಕೆ ಖಾದು ಆವಿಯಾಗಿ ತನ್ನ ರೂಪವನ್ನೇ ಕಳೆದುಕೊಳ್ಳುತ್ತದೆ. ಆದರೆ ತಾವರೆಯ ಎಲೆಯಮೇಲೆ ಅದೇ ನೀರಿನ ಹನಿ ಬಿದ್ದರೆ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಮುತ್ತಿನಂತೆ ಕಂಗೊಳಿಸುತ್ತದೆ. ಕಪ್ಪೆ ಚಿಪ್ಪನೊಳಗೆ ಹೋದ ನೀರ ಹನಿಯು ಅತ್ಯಂತ ಬೆಲೆ ಬಾಳುವ ಮುತ್ತೇ ಆಗುತ್ತದೆ. ಈ ಮೇಲಿನ ವಿಷಯಗಳನ್ನು ಗಮನಿಸಿದಾಗ ನಮಗೆ ತಿಳಿದುಬರುವುದೇನೆಂದರೆ ಗುಣಗಳಲ್ಲಿ ಮುಖ್ಯವಾಗಿ ಗುರುತಿಸಲ್ಪಡುವ ಉತ್ತಮ, ಮಧ್ಯಮ ಹಾಗೂ ಅಧಮ ಎಂಬ ಗುಣಗಳು ನಾವು ಎಂಥಹ ಜನರೊಂದಿಗೆ ಸಹವಾಸವನ್ನು ಮಾಡಿದ್ದೇವೆ ಎಂಬುದನ್ನು ಅವಲಂಬಿಸಿರುತ್ತದೆ. ಅಂದರೆ ನಾವು ಉತ್ತಮರ ಸಹವಾಸವನ್ನು ಮಾಡಿದರೆ ಉತ್ತಮ ಹಾಗೂ ನೀಚ ಜನರ ಸಹವಾಸ ಮಾಡಿದರೆ ಅಧಮ ಗುಣಗಳೇ ನಮ್ಮನ್ನು ಆವರಿಸಿಕೊಳ್ಳುತ್ತದೆ.
ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ
ವ್ಯಯೇಕೃತೇ ವರ್ಧತ ಏವ ನಿತ್ಯಂ
ವಿದ್ಯಾಧನಂ ಸರ್ವಧನಪ್ರಧಾನಂ
ಅಂದರೆ ಯಾವುದೇ ಕಳ್ಳನಿಂದಲೂ ಕದಿಯಲಾಗದ, ರಾಜನಿಂದಲೂ ಕಸಿದುಕೊಳ್ಳಲು ಸಾಧ್ಯವಾಗದ, ಅಣ್ಣ-ತಮ್ಮಂದಿರ ನಡುವೆ ಭಾಗ ಮಾಡಿ ಹಂಚಿಕೊಳ್ಳಲು ಸಾಧ್ಯವಾಗದ ವ್ಯಯಿಸಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯೆಯೆಂಬ ಧನವೇ ಎಲ್ಲಾ ಧನಗಳಲ್ಲಿ ಪರಮಶ್ರೇಷ್ಟವಾದುದು.
ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ
ಕ್ರೋಧಶ್ಚ್ಯ ಧ್ರುಧವದಶ್ಚ್ಯ ಪರ ವಾಕ್ಯೇ ಚ ಅನಾದರ
ತಾನೇ ತಿಳಿದವನೆಂಬ ಗರ್ವವನ್ನು ಹೊಂದಿದವನು, ಇತರರ ಮಾತಿಗೆ ಗೌರವವನ್ನೇ ನೀಡದವನು, ಆಧಾರರಹಿತವಾಗಿ ಗಟ್ಟಿಯಾಗಿ ವಾದಿಸುವವನು, ಭಯಂಕರ ಕೋಪದಲ್ಲಿ ಮುಳುಗಿರುವವನು, ಯಾವಾಗಲೂ ಅವಾಚ್ಯ ಕೀಳು ಶಬ್ಧಗಳಿಂದ ನಿಂದಿಸುತ್ತಾ ತಿರುಗುವವನು, ಈ ಐದು ಗುಣ ಹೊಂದಿರುವವನೇ ಮೂರ್ಖ
ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾಂ
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ
ಇವರು ಮಾತ್ರವೇ ನಮ್ಮವರು, ಇವರು ಪರಕೀಯರೆಂಬುಣವು ಕೀಳು ಜನರ ಮುಖ್ಯ ಲಕ್ಷಣ, ಎಲ್ಲರೂ ಒಂದೇ ಎಂಬ ಉದಾತ್ತ ಮನೋಭಾವನೆಯನ್ನು ಹೊಂದಿದವರಿಗೆ ಈ ಜಗತ್ತೇ ಒಂದು ಸುಂದರವಾದ ಕುಟುಂಬದಂತೆ.
ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ
ಇಂತಹ ಕಾರ್ಯವನ್ನು ಮಾಡಬೇಕೆಂದು ಮನಸಿನಲ್ಲಿ ಅಂದುಕೊಂಡಾಕ್ಷಣ, ಮಾಡಬೇಕೆಂದುಕೊಂಡ ಕೆಲಸವು ಕಾರ್ಯಗತವಾಗಲು ಸಾಧ್ಯವೇ?, ಸಿಂಹ ಕಾಡಿನ ರಾಜನಾದಾಕ್ಷಣ ಮಲಗಿರುವ ಸಿಂಹದ ಬಾಯಿಗೆ ಜಿಂಕೆ ಬಂದು ಆಹಾರವಾಗಿ ಬೀಳುವುದೇ? ಯಾವುದೇ ಕಾರ್ಯ, ಉದ್ದೇಶ ಫಲಿಸಬೇಕಾದರೆ ನಿಶ್ಚಲ ಮನಸ್ಸು, ಧೃಢವಾದ ಪ್ರಯತ್ನ ಅತ್ಯಗತ್ಯ.
ಹಿರಿತನ
ಮೊದಲು ಹಾಲು, ನಂತರದಲ್ಲಿ ಮೊಸರು, ಕೊನೆಯದಾಗಿ ತುಪ್ಪ ಹುಟ್ಟಿದರೂ, ತುಪ್ಪವು ಈ ಮೂರರಲ್ಲಿಯೂ ಪರಮಶ್ರೇಷ್ಟವೆನಿಸಿಕೊಳ್ಳುತ್ತದೆಯೋ ಹಾಗೆಯೇ ಹಿರಿತನ ಎಂಬುದು ಕೇವಲ ವಯಸ್ಸಿನಿಂದ ಬರುವುದಿಲ್ಲ ಅವನಲ್ಲಿರುವ ಉತ್ತಮವಾದ ಗುಣ-ನಡತೆಗಳಿಂದ ಮಾತ್ರವೇ ಲಭಿಸುತ್ತದೆ.
ಜಡಸಂಗೇಪಿ ನ ಲಿಪ್ತಾ: ಶ್ರೀ ಸದ್ಭಾವೇಪಿ ನೋತ್ತರಲಾ:
ಅಂಭೋಜಕೋರಕಾ ಇವ ವಿಜ್ಞಾವಿಕಸತಿ ವಿಶ್ವಸ್ಮೈ
ಉತ್ತಮ ಗುಣ-ನಡತೆಯುಳ್ಳವರು ಮತ್ತು ಉತ್ತಮ ತಿಳುವಳಿಕೆಯುಳ್ಳವರು ಮೂರ್ಖರ ಅಥವಾ ದುಷ್ಟರ ಸಹವಾಸದಲ್ಲಿಯೇ ಇದ್ದರೂ ಸಹ ತಮ್ಮ ಸದ್ಗುಣಗಳನ್ನು ಕಳೆದುಕೊಳ್ಳುವುದಿಲ್ಲ, ಇಂತಹವರ ಬಳಿ ಎಷ್ಟೇ ಹಣ ಸಂಗ್ರಹವಾದರೂ ಸಹ ಇವರಿಗೆ ಹಣದ ಅಮಲೇರುವುದಿಲ್ಲ. ಕೆಸರಿನಲ್ಲಿಯೇ ಇದ್ದರೂ ಕಮಲದ ಹೂವು ಒಂದು ಹನಿ ಕೆಸರನ್ನೂ ಅಂಟಿಸಿಕೊಳ್ಳದೇ ಹೇಗೆ ಬದುಕುವುದೋ ಹಾಗೆಯೇ ತಿಳುವಳಿಕೆಯುಳ್ಳವರೂ ಸಹ ದುಷ್ಟರ ನಡುವೆಯೇ ಪರಿಶುದ್ಧರಾಗಿ ಜೀವಿಸುತ್ತಾರೆ.
ಅಕಾರಣಂ ರೂಪಮಕಾರಣಂ ಕುಲಂ
ಮಹತ್ಸು ನೀಚೇಷು ಚ ಕರ್ಮ ಶೋಭತೇ
ನಮ್ಮ ಕುಲವಾಗಲೀ, ನಮ್ಮಲ್ಲಿನ ರೂಪವಾಗಲೀ ಜನರಿಂದ ನಮಗೆ ಸಿಗುತ್ತಿರುವ ಅಥವಾ ಸಿಗಬಹುದಾದ ಘನತೆ-ಗೌರವ ಮರ್ಯಾದೆಗಳಿಗೆ ಕಾರಣವಲ್ಲ. ನಮಗೆ ಜನರು ಗೌರವ ಮರ್ಯಾದೆಗಳನ್ನು ನೀಡುತ್ತಿದ್ದಾರೆಂದರೆ ಅದು ಕೇವ ನಾವು ಈ ಹಿಂದೆ ಮಾಡಿರುವ ಮತ್ತು ಪ್ರಸ್ತುತ ಮಾಡುತ್ತಿರುವ ಉತ್ತಮ ಕಾರ್ಯಗಳಿಂದ ಮಾತ್ರವೇ ಆಗಿದೆ.
ಉದ್ಯೋಗ: ಖಲು ಕರ್ತವ್ಯ: ಫಲಂ ಮಾರ್ಜಾಲವತ್ ಭವೇತ್
ಜನ್ಮಪ್ರಭೃತಿ: ಗೌರ್ನಾಸ್ತಿ ಪಯ: ಪಿಬತಿ ನಿತ್ಯಶ:
ಹಸುವನ್ನು ಮಾನವರಾದ ನಾವು ಸಾಕುತ್ತೇವೆ ಆದರೆ ಬೆಕ್ಕು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುತ್ತದೆ. ಅಂದರೆ ಬೆಕ್ಕು ತನ್ನ ಸತತ ಪ್ರಯತ್ನದ ಫಲವಾಗಿ ಹಲವು ಬಾರಿ ವಿಫಲವಾದರೂ, ಹಲವು ಬಾರಿ ಹೊಡೆತಗಳನ್ನು ತಿಂದರೂ ಒಮ್ಮೆಯಾದರೂ ಹಾಲು ಕುಡಿಯುವಲ್ಲಿ ಯಶಸ್ವಿಯಾಗುತ್ತದೆ.
ಅದೇ ರೀತಿ ಮನುಷ್ಯನಾದವನು ಒಮೆ ಸೋಲು ಕಂಡಾಕ್ಷಣ ಎದೆಗುಂದದೇ ತನ್ನ ಸತತ ಪ್ರಯತ್ನಗಳ ಮೂಲಕ ಮುನ್ನುಗ್ಗಿದಲ್ಲಿ ಒಂದು ದಿನ ಯಶಸ್ಸು ಸಾಧಿಸುವುದು ನಿಶ್ಚಿತ. ಇದಕ್ಕೆ ಎದೆಗುಂದದೇ ಪ್ರಯತ್ನಿಸುವ ಮನಸ್ಸು, ತನ್ನಿಂದಾಗದೆಂಬ ಹೇಡಿತನದಿಂದ ಹೊರಬರುವಿಕೆ ಎರೆಡೂ ಅತ್ಯವಶ್ಯಕ. ಆದುದರಿಂದಲೇ ಹಿರಿಯರು ಮರಳಿಯತ್ನವ ಮಾಡು ಎಂದು ಹೇಳಿದ್ದಾರೆ.
ಏಕಮಪ್ಯಕ್ಷರಂ ಯಸ್ತು ಗುರು: ಶಿಷ್ಯೇ ನಿವೇದಯೇತ್
ಪೃಥಿವ್ಯಾಂ ನಾಸ್ತಿ ತದ್ರವ್ಯಂ ಯದ್ವತ್ತಾ ಹ್ಯನೃಣೀಭವೇತ್
ವಿದ್ಯೆ ಎಂಬುದು ಪರಮ ಪವಿತ್ರವಾದ ಯಾರಿಂದಲೂ ಅಪಹರಿಸಲಾಗದ ಅಮೂಲ್ಯ ಸಂಪತ್ತು. ಇಂತಹ ಸಂಪತ್ತನ್ನು ಧಾರೆಯೆರೆಯುವವನನ್ನು ಗುರು ಎಂದು ಭಕ್ತಿಪೂರ್ವಕವಾಗಿ ಸಂಭೋಧಿಸಲಾಗುತ್ತದೆ. ಕೇವಲ ಒಂದೇ ಅಕ್ಷರವನ್ನು ಕಲಿಸಿದರೂ ಅವನು ಗುರುವಿನ ಸ್ಥಾನವನ್ನು ಪಡೆಯುತ್ತಾನೆ. ವಿದ್ಯೆ ಎಂಬುದು ಅಕ್ಷರಾಭ್ಯಾಸ ಮಾತ್ರವೇ ಅಲ್ಲ, ಉತ್ತಮ ಉಪದೇಶ, ಅನುಭವ, ಉತ್ತಮ ನುಡಿ, ಉತ್ತಮ ಹಾದಿಯಲ್ಲಿ ನಡೆಯಲು ಸೂಕ್ತ ಮಾರ್ಗದರ್ಶನವೂ ಸಹ ವಿದ್ಯೆಯೇ. ಆದುದರಿಂದ ಇಂತಹ ಸಂಪತ್ತನ್ನು ಧಾರೆಯೆರೆದು ನಮ್ಮ ಬಾಳನ್ನು ಹಸನುಗೊಳಿಸುವ ಗುರುವಿನ ಋಣವನ್ನು ಯಾವುದೇ ರೀತಿಯಿಂದಲೂ ತೀರಿಸಲು ಸಾಧ್ಯವಿಲ್ಲ.
ಅನುಭವಿಸಿದಷ್ಟೂ ಆಸೆ-ಅಮಲು ಹೆಚ್ಚಿಸುವುದು
ಸಂಪತ್ತು, ಜಗಳ, ಜೂಜು, ಮದ್ಯ, ಸ್ತ್ರೀ-ಸಂಗ, ಆಹಾರ, ನಿದ್ರೆ ಇವುಗಳನ್ನು ಅನುಭವಿಸಿದಷ್ಟೂ ಅವುಗಳ ಕುರಿತಾದ ನಮ್ಮ ಆಸೆ-ಆಸಕ್ತಿ ಇನ್ನೂ ಹೆಚ್ಚ್ಚುತ್ತಲೇ ಹೋಗುತ್ತದೆ. ಅದೇ ರೀತಿ ವಿದ್ಯೆಯೂ ಸಹ. ಆದರೆ ವಿದ್ಯೆಯ ಕುರಿತಾದ ನಮ್ಮ ಆಸಕ್ತಿ ಅಧಿಕವಾದಂತೆಲ್ಲಾ ಅದರ ಮೇಲಿನ ಹಿಡಿತ ಹೆಚ್ಚುವುದಲ್ಲದೇ ಅನೇಕ ಹೊಸಹೊಸ ವಿಷಯಗಳು ಅರಿವಿಗೆ ಬರುತ್ತದೆ ಮತ್ತು ಮಾನಸಿಕವಾಗಿ ನಮಗೆ ನಾವೇ ಪಕ್ವವಾಗುತ್ತೇವೆ. ಆದರೆ ವಿದ್ಯೆಯನ್ನು ಹೊರತುಪಡಿಸಿದ ಮೇಲೆ ತಿಳಿಸಿದ ವಿಷಯಗಳ ಮೇಲೆ ಅತಿಯಾದ ಆಸಕ್ತಿ ಬೆಳೆಸಿಕೊಂಡಲ್ಲಿ ಅದರಿಂದ ನಮ್ಮ ಜೀವನವನ್ನು ನಾವೇ ಅವನತಿಯತ್ತ ದೂಡುತ್ತೇವೆ. ಆದುದರಿಂದ ಉತ್ತಮವಾದುದರೆಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು
ಒಳ್ಳೆಯದನ್ನು ಬಯಸುವ ಗುಣ
ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ, ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ. ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ. ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ.
ಭಗವದ್ಗೀತೆಯ ಸುಭಾಷಿತ
ಆದುದೆಲ್ಲಾ ಒಳ್ಳೆಯದಕ್ಕೇ ಆಗಿದೆ
ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ.
ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ
ರೋಧಿಸಲು ನೀನೇನು ಕಳೆದುಕೊಂಡಿರುವೆ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ನಾಶವಾಗಲು ನೀನು ಮಾಡಿರುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ.
ಏನನ್ನು ಅರ್ಪಿಸಿದ್ದರೂ ಅದನ್ನು ಇಲ್ಲಿಗೇ ಅರ್ಪಿಸಿರುವೆ.
ನಿನ್ನೆ ಬೇರೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ.
ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ.
ಪರಿವರ್ತನೆ ಜಗದ ನಿಯಮ
Subscribe to:
Post Comments (Atom)
No comments:
Post a Comment