Friday, 24 November 2017
ಪ್ರದಕ್ಷಿಣನಮಸ್ಕಾರ - ಯಾರಿಗೆ ಎಷ್ಟು ಪ್ರದಕ್ಷಿಣೆ?
ಪ್ರದಕ್ಷಿಣನಮಸ್ಕಾರ -
ಯಾರಿಗೆ ಎಷ್ಟು ಪ್ರದಕ್ಷಿಣೆ?
ಏಕಾಂ ವಿನಾಯಕೇ ಕುರ್ಯಾತ್ ದ್ವೇ ಸೂರ್ಯೇ ತಿಸ್ರ ಈಶ್ವರೇ |
ಚತಸ್ರಃ ಕೇಶವೇ ಪಂಚ ದುರ್ಗಾಯಾಂ ಷಟ್ ಕುಮಾರಕೇ ||
ಸಪ್ತಾಶ್ವತ್ಥೇ ವಿಧಿವನ್ನಮಸ್ಕಾರಪ್ರದಕ್ಷಿಣಮ್ ||
ಗಣಪತಿಗೆ ಒಂದು, ಸೂರ್ಯನಿಗೆ ಎರಡು, ಈಶ್ವರನಿಗೆ ಮೂರು, ವಿಷ್ಣುವಿಗೆ ನಾಲ್ಕು, ದುರ್ಗೆಗೆ ಐದು, ಸ್ಕಂದನಿಗೆ ಆರು, ಅಶ್ವತ್ಥಕ್ಕೆ ಏಳು-
ವಿಧಿಪ್ರಕಾರ ಪ್ರದಕ್ಷಿಣನಮಸ್ಕಾರ ಮಾಡಬೇಕು.
ಪ್ರದಕ್ಷಿಣೆ ಹೇಗೆ ಮಾಡಬೇಕು?
ಪದೇ ಪದಾಂತರಂ ಕೃತ್ವಾ ಕರೌ ಚಲನವರ್ಜಿತೌ |
ಸ್ತುತಿರ್ವಾಚಾ ಹೃದಿ ಧ್ಯಾನಂ ಚತುರಂಗಂ ಪ್ರದಕ್ಷಿಣೇ ||
ಹೆಜ್ಜೆಗೆ ತಾಗಿ ಮುಂದಿನ ಹೆಜ್ಜೆ ಇಡಬೇಕು. ಚಲನೆಯಿಲ್ಲದ ಕೈಗಳು, ನಾಲಗೆಯಲ್ಲಿ ಸ್ತುತಿ, ಹೃದಯದಲ್ಲಿ ಧ್ಯಾನ- ಇವುಗಳು ಪ್ರದಕ್ಷಿಣೆಯ ನಾಲ್ಕು ಅಂಗಗಳು. ಹೀಗೆ ಪ್ರದಕ್ಷಿಣೆ ಮಾಡಬೇಕು.
ಪುರುಷರಿಗೆ ಅಷ್ಟಾಂಗ ನಮಸ್ಕಾರ-
ಉರಸಾ ಶಿರಸಾ ದೃಷ್ಟ್ಯಾ ಮನಸಾ ವಚಸಾ ತಥಾ |
ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋSಷ್ಟಾಂಗ ಉಚ್ಯತೇ ||
ನಮಸ್ಕಾರಕ್ಕೆ ಎಂಟು ಅಂಗಗಳು- ಎದೆ, ಶಿರಸ್ಸು, ದೃಷ್ಟಿ, ಮನಸ್ಸು, ಮಾತು, ಕೈಗಳೆರಡು, ಕಾಲುಗಳೆರಡು, ಮೊಣಕಾಲುಗಳೆರಡು, ಇವೇ ಅಷ್ಟ ಅಂಗಗಳು.
ಸ್ತ್ರೀಯರಿಗೆ ಪಂಚಾಂಗ ನಮಸ್ಕಾರ-
ಬಾಹುಭ್ಯಾಮಥ ಜಾನುಭ್ಯಾಂ ಶಿರಸಾ ಮನಸಾ ಧಿಯಾ |
ಪಂಚಾಂಗಕಃ ಪ್ರಣಾಮಃ ಸ್ಯಾತ್ ಸ್ತ್ರೀಣಾಂ ನಮನಲಕ್ಷಣಮ್ ||
ಸ್ತ್ರೀಯರು ನಮಸ್ಕರಿಸುವಾಗ ಕೈಗಳೆರಡು, ಮೊಣಕಾಲುಗಳೆರಡು ಮತ್ತು ತಲೆ ನೆಲಕ್ಕೆ ಮುಟ್ಟಬೇಕು. ಮನಸ್ಸು ಬುದ್ಧಿಯಲ್ಲಿ ಭಗವಂತನನ್ನು ಧ್ಯಾನಿಸಿ ನೆನೆಯಬೇಕು. ಇವು ಸ್ತ್ರೀಯರ ನಮಸ್ಕಾರದ ಐದು ಅಂಗಗಳು.
Subscribe to:
Post Comments (Atom)
No comments:
Post a Comment