Friday, 24 November 2017

ಮದುವೆ ರೇಖೆ ತಿಳಿಸುವ ವೈವಾಹಿಕ ಜೀವನ, ಯಾರ ಬದುಕು ಹೇಗಿರುತ್ತದೆ?

ಮದುವೆ ರೇಖೆ ತಿಳಿಸುವ ವೈವಾಹಿಕ ಜೀವನ, ಯಾರ ಬದುಕು ಹೇಗಿರುತ್ತದೆ? ಹಸ್ತ ಸಾಮುದ್ರಿಕಾ ಶಾಸ್ತ್ರವೇ ತುಂಬ ಆಸಕ್ತಿಕರವಾದದ್ದು. ಅದರಲ್ಲಿ ಮದುವೆಯ ರೇಖೆಯ ಬಗ್ಗೆ ಹೇಳುವುದು ತುಂಬ ಸುಲಭ ಹಾಗೂ ಆಸಕ್ತಿ ಮೂಡಿಸುವಂಥದ್ದು. ಈ ಮದುವೆಯ ರೇಖೆ ಎಲ್ಲಿರುತ್ತದೆ ಎಂಬುದು ತಕ್ಷಣದ ಪ್ರಶ್ನೆ ಅಲ್ಲವೆ? ನಿಮ್ಮ ಕಿರು ಬೆರಳಿನ ಕೆಳಗೆ ಇರುವ ರೇಖೆಯೇ ಮದುವೆಗೆ ಸಂಬಂಧಿಸಿದ್ದು. ಕೆಲವರಿಗೆ ಮದುವೆ ರೇಖೆಯೇ ಇಲ್ಲದಿರಬಹುದು ಅಥವಾ ಮದುವೆ ರೇಖೆಯು ಬೆರಳಿನ ಕಡೆಗೆ ಮೇಲ್ಭಾಗಕ್ಕೆ ಬಾಗಿದಂತಿರಬಹುದು. ಒಂದಕ್ಕಿಂತ ಹೆಚ್ಚು ಮದುವೆ ರೇಖೆ ಕೂಡ ಇರುವ ಸಾಧ್ಯತೆ ಇದೆ. ಇಷ್ಟೊಂದು ಬಗೆಯಲ್ಲಿರುವ ಮದುವೆ ರೇಖೆಯ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಯೋಚನೆ ಮಾಡಬೇಡಿ, ತುಂಬ ಸರಳವಾಗಿ ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ. ನೀವು ಶ್ರದ್ಧೆಯಿಂದ ನೋಡಿಕೊಳ್ಳಿ ಮತ್ತು ಯಾವ ಗೊಂದಲ ಮಾಡಿಕೊಳ್ಳಬೇಡಿ. ಇನ್ನೊಂದು ವಿಚಾರವನ್ನು ಮನದಲ್ಲಿಟ್ಟುಕೊಳ್ಳಬೇಕು. ಪುರುಷರಿಗಾದರೆ ಎಡಗೈನಲ್ಲಿರುವ ಮದುವೆ ರೇಖೆಯನ್ನು ಹಾಗೂ ಮಹಿಳೆಯರಿಗಾದರೆ ಬಲಗೈನಲ್ಲಿರುವ ಮದುವೆ ರೇಖೆಯನ್ನು ನೋಡಬೇಕು. ಇಷ್ಟು ತಿಳಿದುಕೊಂಡರಲ್ಲ, ಇನ್ನು ಯಾವ ರೀತಿಯ ರೇಖೆ ಏನು ಭವಿಷ್ಯ ಹೇಳುತ್ತದೆ ಎಂಬುದನ್ನು ಓದಿಕೊಳ್ಳಿ. ಮದುವೆ ರೇಖೆ ಮೇಲ್ಮುಖವಾಗಿ ಬಾಗಿದ್ದರೆ ಮದುವೆ ರೇಖೆ ಹೆಚ್ಚು ಪ್ರಮಾಣದಲ್ಲಿ ಮೇಲ್ಮುಖವಾಗಿ ಬಾಗಿದಂತೆ ಇದ್ದರೆ ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ಅದರರ್ಥ ಮದುವೆ ವಿಚಾರವಾಗಿ ತುಂಬ ಚಿಂತೆಗಳಿರುವುದಿಲ್ಲ. ಕೌಟುಂಬಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಬಾಳಸಂಗಾತಿಯನ್ನು ನೀವು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಅವರು ನಿಮ್ಮನ್ನು ಪ್ರೀತಿ ಮಾಡುತ್ತಾರೆ. ನಿಮಗೆ ಪ್ರಸ್ತಾವ ಬಂದ ಸಂಗಾತಿಯ ರೇಖೆಯೂ ಹಾಗೇ ಇದ್ದರೆ ಅತ್ಯುತ್ತಮ ದಾಂಪತ್ಯಕ್ಕೆ ಉದಾಹರಣೆ ಆಗುತ್ತೀರಿ. ಮದುವೆ ರೇಖೆ ಕೆಳಮುಖವಾಗಿ ಬಾಗಿದ್ದರೆ ಈ ರೀತಿಯ ರೇಖೆ ಇದ್ದರೆ ವೈವಾಹಿಕ ಜೀವನದಲ್ಲಿ ಅಸಮಾಧಾನ ಇರುತ್ತದೆ. ಇಂಥವರ ಮದುವೆ ಬದುಕು ಯಶಸ್ವಿಯಾಗುವುದು ಕಷ್ಟ. ಕೆಳಮುಖವಾಗಿ ಬಾಗಿದಂತೆ ರೇಖೆ ಇದ್ದರೆ ಸಮಸ್ಯೆಗಳು ನಿಶ್ಚಿತ. ಈ ರೀತಿ ರೇಖೆಯಿರುವವರಿಗೆ ಮದುವೆ ಬಗ್ಗೆಯೇ ನಂಬಿಕೆ ಇರಲ್ಲ ಅಥವಾ ಮದುವೆ ಬಗ್ಗೆ ನಕಾರಾತ್ಮಕ ಭಾವನೆ ಇರುತ್ತದೆ. ಇಂಥವರು ಮದುವೆ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೂ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಮದುವೆ ರೇಖೆ ಕೆಳ ಮುಖವಾಗಿ ಬಾಗಿ ಹೃದಯ ರೇಖೆಯನ್ನು ಛೇದಿಸಿದ್ದರೆ ಈ ರೀತಿಯ ರೇಖೆ ಇದ್ದರೆ ವೈವಾಹಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ. ಪರ್ಯಾಯ ಆಲೋಚನೆಗಳು ಹೊಳೆಯುತ್ತವೆ. ಮದುವೆ ಎಂಬುದರಲ್ಲಿ ನಂಬಿಕೆ ಇರುವುದಿಲ್ಲ. ಉಂಗುರದ ಬೆರಳವರೆಗೆ ಇರುವ ನೇರ ರೇಖೆ ಮದುವೆ ರೇಖೆ ನೇರವಾಗಿದ್ದು, ಉಂಗುರದ ಬೆರಳನ್ನೂ ದಾಟಿ, ಮೇಲ್ಭಾಗದಿಂದ ಉದ್ದನೆಯ ರೇಖೆಯೊಂದು ಮದುವೆ ರೇಖೆಯನ್ನು ಛೇದಿಸಿದ್ದರೆ ಇಂಥವರ ಬಾಳ ಸಂಗಾತಿ ಅಗಾಧವಾದ ಸಂಪತ್ತನ್ನು ತರುತ್ತಾರೆ. ಮದುವೆ ಮೂಲಕ ಇವರು ಶ್ರೀಮಂತರಾಗುತ್ತಾರೆ. ಒಂದು ವೇಳೆ ಬಾಳಸಂಗಾತಿ ಶ್ರೀಮಂತರಲ್ಲದಿದ್ದರೆ, ಮದುವೆ ನಂತರ ಸಿರಿವಂತಿಕೆ ಬರುತ್ತದೆ ಅಥವಾ ವಿವಾಹದ ನಂತರ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಒಂದಕ್ಕಿಂತ ಹೆಚ್ಚು ಮದುವೆ ರೇಖೆ ಒಂದಕ್ಕಿಂತ ಹೆಚ್ಚು ಮದುವೆ ರೇಖೆಗಳಿದ್ದರೆ ಪದೇಪದೇ ಒನ್ ವೇ ಪ್ರೀತಿ ಆಗುತ್ತದೆ. ಒಂದಕ್ಕಿಂತ ಹೆಚ್ಚು ರೇಖೆಗಳು ಪರಸ್ಪರ ದಾಟಿ ಮುಂದೆ ಸಾಗಿದ್ದರೆ ಒಂದಕ್ಕಿಂತ ಹೆಚ್ಚು ಮದುವೆ ರೇಖೆಗಳು ಒಂದನ್ನೊಂದು ಪರಸ್ಪರ ದಾಟಿ ಮುಂದೆ ಸಾಗಿದ್ದರೆ ಇಂಥವರಿಗೆ ಪ್ರೀತಿಯ ವಿಚಾರದಲ್ಲಿ ಬೇಜವಾಬ್ದಾರಿ ಇರುತ್ತದೆ. ಸದಾ ಹೊಸ ಸಂಗಾತಿಗಾಗಿ ಹುಡುಕಾಡುತ್ತಲೇ ಇರುತ್ತಾರೆ. ಮದುವೆ ರೇಖೆ ಕೊನೆಯಲ್ಲಿ ಕವಲೊಡೆದಿದ್ದರೆ ಮದುವೆಯ ರೇಖೆ ಕೊನೆಯಲ್ಲಿ ಕವಲೊಡೆದಿದ್ದರೆ ಇಂಥವರಿಗೆ ವಿವಾಹ ವಿಚ್ಛೇದನ ಆಗುತ್ತದೆ. ಎರಡು ರೇಖೆಗಳು ಒಂದಾಗಿ ಸಾಗಿದ್ದರೆ ಈ ರೀತಿಯ ವ್ಯಕ್ತಿಗಳಿಗೆ ಕಾರಣವೇ ಇಲ್ಲದೆ ಮದುವೆ ವಿಳಂಬವಾಗುತ್ತದೆ. ಮದುವೆಯೇ ಆಗದ ದೀರ್ಘಾವಧಿಯ ಸಂಬಂಧಗಳಲ್ಲಿ ಇರುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿಗೆ ಈ ರೀತಿಯ ರೇಖೆ ಇದ್ದರೆ ಮದುವೆಗಾಗಿ ದೀರ್ಘ ಕಾಲ ಕಾಯಬೇಕಾಗುತ್ತದೆ. ಮದುವೆ ರೇಖೆಯ ಮೇಲೆ ಅಡ್ಡ ರೇಖೆಯಿದ್ದರೆ ಮದುವೆಯ ರೇಖೆ ಮೇಲೆ ಅಡ್ಡರೇಖೆಯಿದ್ದರೆ ವಿಪರೀತ ಸಾಮರ್ಥ್ಯ ಮತ್ತು ಉತ್ಕಟವಾದ ಲೈಂಗಿಕ ಆಸಕ್ತಿ ಇರುತ್ತದೆ. ಮದುವೆ ರೇಖೆಯೇ ಇಲ್ಲದಿದ್ದರೆ ಒಂದು ವೇಳೆ ಮದು ರೇಖೆಯೇ ಇಲ್ಲದಿದ್ದರೆ ಇಂಥವರಿಗೆ ಲೌಕಿಕ ಜೀವನದಲ್ಲಿ ಆಸಕ್ತಿ ಇರುವುದಿಲ್ಲ. ಆದರೂ ಮದುವೆ ಆಗಿದ್ದಲ್ಲಿ ಲೈಂಗಿಕ ಜೀವನದಲ್ಲಿ ನಿರಾಸಕ್ತರಾಗಿರುತ್ತಾರೆ. ಪ್ರೀತಿಸಿ ಮದುವೆಯಾದವರು, ಬಹಳ ವರ್ಷ ಕಾದು, ಹೆತ್ತವರನ್ನು- ಸಮಾಜವನ್ನು ಎದುರು ಹಾಕಿಕೊಂಡು ಮದುವೆಯಾದವರು ಸಹ ವೈಮನಸ್ಯ ಎದುರಾಗಿ ಬೇರೆಯಾಗಿದ್ದಿದೆ. ಕೆಲ ಸಲ ಯಾರೇನು ಅಂದುಕೊಂಡಾರು ಎಂಬ ಚಿಂತೆಯಲ್ಲಿ ಹೇಗೋ ಸಹಿಸಿಕೊಂಡು ಬದುಕು ನಡೆಸುತ್ತಿರುವವರು ಇರುತ್ತಾರೆ. ಪ್ರೀತಿ- ವೈವಾಹಿಕ ವಿಚಾರವಾಗಿ ಹಸ್ತ ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಹಸ್ತ ಸಾಮುದ್ರಿಕಕ್ಕೆ ಸಂಬಂಧಿಸಿದಂತೆ ಹೃದಯ ರೇಖೆ ಮತ್ತು ಬುದ್ಧಿ ರೇಖೆ ಎಂಬುದು ಬಹಳ ಮುಖ್ಯವಾದದ್ದು. ಹೃದಯ ರೇಖೆಯನ್ನು ಪ್ರೀತಿ ರೇಖೆ ಅಂತಲೂ ಕರೆಯಲಾಗುತ್ತದೆ. ಈ ರೇಖೆ ಮೂಲಕ ನಿಮ್ಮ ಆರೋಗ್ಯ, ಭಾವನಾತ್ಮಕ ವಿಚಾರ, ಇತರರ ಜತೆಗಿನ ದೈಹಿಕ ಸಂಬಂಧಗಳನ್ನು ತಿಳಿಯಬಹುದು. ಈ ರೇಖೆಯು ಹೃದಯದ ಆರೋಗ್ಯ ಬಗ್ಗೆ ಕೂಡ ಸುಳಿವನ್ನು ನೀಡುತ್ತದೆ. ಈ ರೇಖೆ ಮೂಲಕ ಭವಿಷ್ಯದಲ್ಲಿ ನಿಮಗೆ ಏನಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಬಹುದು. ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ? ಹೃದಯ ರೇಖೆಯು ಯಾವುದೇ ವ್ಯಕ್ತಿಗೆ ಮುಖ್ಯವಾದದ್ದು. ನಿಮ್ಮ ಬಲಗೈನಲ್ಲಿ ಕಿರು ಬೆರಳಿನ ಕೆಳಗೆ ಎಡದಿಂದ ಬಲಕ್ಕೆ ಸಾಗಿರುವ ರೇಖೆಯೇ ಹೃದಯ ರೇಖೆ. ಕೆಲ ಸಂದರ್ಭಗಳಲ್ಲಿ ಅಂಗೈನ ಹೊರಗಿನವರೆಗೂ ಚಾಚಿರುವ ಅಥವಾ ಹೊರಗಿನಿಂದ ಆರಂಭವಾದ ರೇಖೆಯನ್ನೂ ಕಾಣಬಹುದು. ಇರಲಿ, ಈ ರೇಖೆಯ ಮಹತ್ವ ಮತ್ತು ರೇಖೆ ಹೇಗಿದ್ದರೆ ಏನು ಫಲ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ. ವಿವಾಹ ಜೀವನ ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಗಂಡ- ಹೆಂಡತಿಗೆ ಒಂದೇ ರೀತಿಯ ಹೃದಯ ರೇಖೆ ಇದ್ದರೆ ಅದು ಯಶಸ್ವಿ ವಿವಾಹ ಆಗುತ್ತದೆ. ಒಂದೇ ರೀತಿಯದ್ದು ಅಂತ ಗೊತ್ತಾಗುವುದು ಹೇಗೆ ಅಂದರೆ, ರೇಖೆ ಆರಂಭವಾದ ರೀತಿ ಹಾಗೂ ಅದು ಕೊನೆಗೊಂಡಿರುವ ರೀತಿ ಎರಡನ್ನೂ ಗಮನಿಸಿದರೆ ಗೊತ್ತಾಗುತ್ತದೆ. ಬಾಗಿರುವ ಹೃದಯ ರೇಖೆ ಬಾಗಿದಂತೆ ಹೃದಯ ರೇಖೆ ಇರುವವರು ಬಹಳ ರೊಮ್ಯಾಂಟಿಕ್ ಆದ ಸ್ವಭಾವ ಹೊಂದಿರುತ್ತಾರೆ. ಅವರ ಪ್ರೀತಿಯನ್ನು ಹಾಗೆಲ್ಲ ಸುಮ್ಮ ಸುಮ್ಮನೆ ತೋರಗೊಡುವುದಿಲ್ಲ. ಆದರೆ ಪ್ರೀತಿಯನ್ನು ತೋರಿಸಿಕೊಳ್ಳಬೇಕು ಅಂತ ಅವರಿಗೇ ಅನ್ನಿಸಿದರೆ ಆಕ್ರಮಣಕಾರಿ ಧೋರಣೆ ಅವರದಾಗಿರುತ್ತದೆ. ನೇರ ಹೃದಯ ರೇಖೆ ಈ ರೀತಿ ನೇರ ಹೃದಯ ರೇಖೆ ಇರುವವರು ಪ್ರಣಯದ ವಿಚಾರದಲ್ಲಿ ತುಂಬ ಆಸಕ್ತಿ ವ್ಯಕ್ತಪಡಿಸಲ್ಲ. ಅಂದರೆ ಅವರಾಗಿಯೇ ಆಸಕ್ತಿ ತೋರುವುದಿಲ್ಲ. ಎದುರಿನವರೇ ಇವರ ಬಳಿ ಪ್ರೀತಿ ನಿವೇದನೆ ಮಾಡಬೇಕಾಗುತ್ತದೆ. ಢಾಳಾದ ಬಾಗಿದ ರೇಖೆ ಢಾಳಾದ ಬಾಗಿದ ಹೃದಯ ರೇಖೆಯು ತೋರುಬೆರಳು ಹಾಗೂ ಮಧ್ಯದ ಬೆರಳಿನ ಮಧ್ಯೆ ಕೊನೆಗೊಂಡರೆ ಅಂಥ ವ್ಯಕ್ತಿಗೆ ತೀವ್ರ ಹಾಗೂ ಪ್ರಬಲವಾದ ಲೈಂಗಿಕ ಆಸಕ್ತಿಗಳಿರುತ್ತವೆ. ತೋರು ಬೆರಳಿನಡಿ ರೇಖೆ ಅಂತ್ಯ ಯಾರಿಗೆ ಹೃದಯ ರೇಖೆಯು ತೋರು ಬೆರಳಿನ ಅಡಿಯಲ್ಲಿ ಅಂತ್ಯವಾಗುತ್ತದೋ ಅಂತಹವರು ಸ್ನೇಹಿತರು ಹಾಗೂ ಸಂಗಾತಿ ಆಯ್ಕೆ ವಿಚಾರದಲ್ಲಿ ತುಂಬ ನಿರ್ದಿಷ್ಟವಾಗಿರುತ್ತಾರೆ. ಮಧ್ಯದ ಬೆರಳ ಕೆಳಗೆ ರೇಖೆ ಕೊನೆ ಯಾರಿಗೆ ಹೃದಯ ರೇಖೆಯು ಮಧ್ಯದ ಬೆರಳಿನ ಕೆಳಗೆ ಕೊನೆಯಾಗುತ್ತದೋ ಅಂಥವರು ಅಪರೂಪ. ಇಂತಹ ವ್ಯಕ್ತಿಗಳ ಜತೆಗೆ ಒಡನಾಟಕ್ಕೆ ಬರುವವರು ಇವರನ್ನು ಬಹಳ ಪ್ರೀತಿ ಮಾಡುತ್ತಾರೆ. ಕವಲೊಡೆದ ಹೃದಯ ರೇಖೆ ಒಂದು ವೇಳೆ ಹೃದಯ ರೇಖೆಯು ಎರಡು- ಮೂರು ಕವಲೊಡೆದಿದ್ದರೆ ಇಂಥವರ ಭಾವನೆಗಳಿಗೆ ಹೆಚ್ಚು ಮುಖಗಳಿರುತ್ತವೆ. ಅದರರ್ಥ ಇವರ ಭಾವನೆಗಳಲ್ಲಿ ಬದಲಾವಣೆಗಳು, ಏರಿಳಿತಗಳು ಇರುತ್ತವೆ.

No comments:

Post a Comment