Wednesday, 29 November 2017

ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:-

ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ರಚಿಸಿದವರು: ವಿದ್ಯಾವಿಶಾರದ ಕೀಳಾತ್ತೂರು ಶ್ರೀನಿವಾಸಾಚಾರ್ಯ,ಪಿ.ಓ.ಎಲ್ ಶಿರೋಮಣಿ ಮತ್ತು ಹಿಂದಿ ವಿಶಾರದ ಮುನ್ನುಡಿ:- ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು.ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತಮಣಿಗಳು ಅಮೇರಿಕಾ,ಬ್ರಿಟನ್,ಜರ್ಮನಿ,ಜಪಾನ್ ಮೊದಲಾದ ದೇಶಗಳಲ್ಲಿ ಈಗಲೂ ಇರುವರು,ಎಂದರೆ ಅತಿಶಯೋಕ್ತಿಯಾಗಲಾರದು. ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾ ಶಾಸ್ತ್ರ(ನ್ಯೂಮರಾಲಜಿ)ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ. ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:- ಆಕಾಶದಲ್ಲಿ ಸಂಚರಿಸುವ ಗ್ರಹಗಳಿಗೆ ಭೂಮಿಯಲ್ಲಿ ಒಂದರಿಂದ ಒಂಬತ್ತರವರೆಗೆ ಪ್ರಚಾರದಲ್ಲಿರುವ ಸಂಖ್ಯೆಗಳೊಂದಿಗೆ ನಿಕಟ ಸಂಬಂಧವಿದೆ. ಇದನ್ನು ಗ್ರಹಿಸಿ ಪ್ರತಿಯೊಂದು ಗ್ರಹಕ್ಕೂ ಸಂಬಂದ ಸಂಖ್ಯೆಯನ್ನು ನಿರ್ಣಯಿಸಿದ್ದಾರೆ. ಇದನ್ನು ನಿರ್ಣಯಿಸಿದವರಲ್ಲಿ ಚಲ್ದಿಯಾ ಎಂಬ ದೇಶದವರು ಗ್ರೀಸ್ ದೇಶದವರು ಅಗ್ರಗಣ್ಯರೆಂದು ಹೇಳಬಹುದು. ನಂತರ ಗ್ರೀಸ್ ದೇಶದ ವೇದಾಂತಿಯಾದ ಪೈಥಾಗರಸ್ ಎಂಬುವರು ಈ ಸಂಖ್ಯಾಶಾಸ್ತ್ರವನ್ನು ಅಭಿವೃದ್ದಿಗೆ ತಂದದ್ದು ಅಲ್ಲದೆ ನಿಯಮಬದ್ದವನ್ನಾಗಿ ಮಾಡಿ ಮಾನವನ ನಿತ್ಯಜೀವನಕ್ಕೆ ಉಪಯೋಗವಾಗುವಂತೆ ಈ ಶಾಸ್ತ್ರವನ್ನು ಪ್ರಚಾರಮಾಡಿಕೊಂಡು ಬಂದರು. ಆಮೇಲೆ ಹಲವು ಪಾಶ್ಚಾತ್ಯ ಪಂಡಿತರು ವಿಶೇಷವಾಗಿ ಚಿರೋ ರಂತಹ ವಿದ್ವಾಂಸರು ಈ ಶಾಸ್ತ್ರವನ್ನು ಯೋಗ್ಯರೀತಿಯಲ್ಲಿ ಉಪಯೋಗಿಸುತ್ತಾ ಪ್ರಚಾರಕ್ಕೆ ತಂದರು. ಸಂಖ್ಯೆಗಳೇ ಜಗತ್ತು:- ಸಂಖ್ಯೆಗಳಿಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯಲು ಸಾದ್ಯವಿಲ್ಲ. ಅಂದರೆ ಲೋಕದ ವ್ಯವಹಾರಕ್ಕೆ ಸಂಖ್ಯೆಗಳೇ ಆಧಾರವೆಂದು ಅರ್ಥ ಸಂಖ್ಯೆಗಳು ಎಲ್ಲಕ್ಕೂ ಹೇಗೆ ಆಧಾರವಾಗಿವೆ ಎಂಬುದನ್ನು ಕೆಲವು ಉದಾಹರಣೆಯೊಂದಿಗೆ ತಿಳಿಯೋಣ:- (೧)ಎಲ್ಲಾ ಕಾಲಗಳಲ್ಲಿಯೂ ಲೋಕದ ಸೃಷ್ಟಿ,ಸ್ಥಿತಿ,ಲಯಗಳನ್ನು ತಿಳಿಯುವುದು ಸಂಖ್ಯೆಗಳ ಮೂಲಕವೇ ತಾನೆ?ಕೃತಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗ ಎಂಬುದಾಗಿ ಕಾಲವನ್ನು ನಾಲ್ಕುಭಾಗಗಳಾಗಿ ವಿಭಾಗಿಸಿ,ಒಂದೊಂದು ಯುಗಗಳಿಗೂ ಕ್ಲಿಪವಾದ ವರ್ಷಗಳನ್ನು ನಿಯಮಿಸಿ,ಒಂದು ಯುಗವು ಕಳೆದುಹೋದನಂತರ ಮತ್ತೊಂದು ಯುಗವು ಆರಂಭವಾಗುವುದೆಂದು ಕೊನೆಗೆ ಪ್ರಳಯ ಎಂದೂ ಲೆಕ್ಕಮಾಡಿ ನಿಷ್ಕರ್ಷಿಸಿರುವುದು ಸಂಖ್ಯೆಗಳ ಸಹಾಯದಿಂದಲೇ ಅಲ್ಲವೇ?. (೨)ಮನುಷ್ಯನ ಪರಮ ಆಯಸ್ಸು ನೂರು ವರ್ಷವೆಂದು ಲೆಕ್ಕಹಾಕುವುದು ಸಂಖ್ಯೆಯೇ.ಮನುಷ್ಯನ ಶ್ವಾಸೋಚ್ವಾಸದ ಗಾಳಿಯ ಮೂಲಕ ಅವನ ಆಯಸ್ಸನ್ನು ನಿರ್ಣಯಿಸಿರುವುದೆಂಬುದು ಪರಮಾಶ್ಚರ್ಯಕರವಾದ ವಿಷಯ. (೩)ಒಬ್ಬರ ತಿಂಗಳ ಸಂಬಳ ಇಂತಿಷ್ಟೆಂದು ಲೆಕ್ಕಹಾಕಿ ಕೊಡುವುದು ಸಂಖ್ಯೆಗಳ ಮೂಲಕ. (೪)ಅಂಗಡಿಗಳಲ್ಲಿ ಸಾಮಾನುಗಳನ್ನು ಕೊಂಡುಕೊಳ್ಳುವಾಗಲೂಸಹ ಇಷ್ಟು ಸಾಮಾನುಗಳು ಬಂದವು ಎಂದು ಲೆಕ್ಕಮಾಡಿ ನೋಡಿದರೇನೇ ಮನಸ್ಸಿಗೆ ಸಮಾದಾನವಾಗುವುದು. (೫)ಕಾಲವನ್ನು ಕ್ಷಣ,ಗಳಿಗೆ,ಗಂಟೆ,ದಿನ,ತಿಂಗಳು,ವರ್ಷಎಂಬರೀತಿಯಾಗಿ ಅದಕ್ಕೆ ಬೇಕಾದ ಸಂಖ್ಯೆಯಿಂದ ಎಣಿಸಿಯೇ ತೀರ್ಮಾನಿಸುತ್ತೇವೆ. (೬)ಬಟ್ಟೆ ಬರೆ ನೆಲ-ಹೊಲಗಳನ್ನು ಇಷ್ಟು ಮೀಟರ್,ಸೆಂಟೀಮೀಟರ್ ಎಂಬ ಲೆಕ್ಕದೊಂದಿಗೆ ಅಳೆಯುತ್ತೇವೆ. (೭)ದವಸ ದಾನ್ಯಗಳನ್ನು ಒಂದು ಗ್ರಾಂ ನಿಂದ ಹಲವು ಕಿಲೋ ತೂಕದಲ್ಲಿ ಅಳೆಯುತ್ತೇವೆ. ಈ ಪ್ರಕಾರ ಎಷ್ಟೋ ವಿಷಯಗಳನ್ನು ಹೇಳಿಕೋಡೇ ಹೋಗಬಹುದು. ಪ್ರಾತಃಕಾಲ ಹಾಸಿಗೆ ಬಿಟ್ಟು ಏಳುವುದರಿಂದ ಆರಂಬಿಸಿ ರಾತ್ರಿ ಮಲಗುವವರೆಗೂ ಪ್ರಪಂಚದ ವ್ಯವಹಾರಗಳು ನಡೆಯುತ್ತಲೇ ಇರುವುದು ಸಂಖ್ಯೆಗಳನ್ನು ಅನುಸರಿಸಿಯೇ ಮುಂದುವರಿಯುತ್ತದೆ. ಆದುದರಿಂದ ಸಂಖ್ಯೆಯೇ ಜಗತ್ತು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಒಂದರಿಂದ ಒಂಬತ್ತರ ವರೆಗೆ:- ಒಂದರಿಂದ ಕೋಟಿ ವರೆಗಿನ ಸಂಖ್ಯೆಗಳಾದರೂ ಅವುಗಳು ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳೊಳಗೆ ಅಡಗಿಬಿಡುವುದು. ಅಂದರೆ,ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳನ್ನು ಒಂದರ ಪಕ್ಕದಲ್ಲಿ ಇನ್ನೋಂದನ್ನು ಬರೆಯುವುದರಿಂದಲೇ ಲೋಕದಲ್ಲಿರುವ ಸಂಖ್ಯೆಗಳು ಎಲ್ಲವೂ ತಿಳಿದುಬರುವುದು. ಉದಾ:-೮೫೨೯೬೩೪೧೭ ಮೇಲೆಕೊಟ್ಟ ದೊಡ್ಡಲೆಕ್ಕದಲ್ಲಿ ಒಂಬತ್ತರ ಒಳಗೇ ಇರುವ ಸಂಖ್ಯೆಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದನ್ನು ಬರೆದುದು ಕಂಡುಬರುತ್ತದೆ ಆದುದರಿಂದಲೇ ಇಷ್ಟು ದೊಡ್ಡಲೆಕ್ಕವೂ ೯ ರ ಅಂತರ್ಗತವಾಗಿರುವ ಸಂಖ್ಯೆಯನ್ನೇ ಸ್ಥಾನ ಭೇದದಿಂದ ಉಪಯೋಗಿಸಿರುವುದೆಂಬುದನ್ನು ಸುಲಬವಾಗಿ ತಿಳಿದುಕೊಳ್ಳಬಹುದು. ಸೊನ್ನೆ ಮತ್ತು ಅದರ ಸ್ಥಾನ:- ಸೊನ್ನೆಗೆ ಸ್ವತಃ ಸ್ಥಾನ-ಮಾನಗಳಿಲ್ಲ. ಅಂದರೆ,ಬೇರೊಂದು ಸಂಖ್ಯೆಯೊಂದಿಗೆ ಸೇರಿದಾಗಲೇ ಸೊನ್ನೆಗೆ ಬೆಲೆ ಇರುವುದು.ಹಾಗೆ ಸಂಖ್ಯೆಯೊಂದಿಗೆ ಸೇರಿದಾಗಲೂ ಒಂದು ಸಂಖ್ಯೆಯನ್ನು ಅದರ ಪಕ್ಕದಲ್ಲಿ ಬರುವ ಸೊನ್ನೆಗೆ ಸ್ಥಾನ ಇರುವುದು. ಉದಾ:- ೦-ಇದಕ್ಕೆ ಬೆಲೆ ಇಲ್ಲ. ೦೧-ಈ ಸೊನ್ನೆಗೂ ಬೆಲೆ ಇಲ್ಲ. ೧೦-ಇದಕ್ಕೆ ಬೆಲೆ ಇದೆ. ಅಂದರೆ,ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳ ನಂತರ ಬರುವ ಸೊನ್ನೆಗೆ ಮಾತ್ರವೇ ಬೆಲೆ ಇರುವುದು. ಆದರೆ ಸಂಖ್ಯಾಶಾಸ್ತ್ರದಲ್ಲಿ ಸೊನ್ನೆಯನ್ನು ತೆಗೆದುಕೊಂಡು ಇತ್ಯರ್ಥ ಮಾಡಬೇಕಾದ ಸ್ಥಾನ ಮಾನಗಳಿಲ್ಲವೆಂದು ತೀರ್ಮಾನಿಸೋಣ. ಜ್ಯೋತಿಷ್ಯವೂ ಸಂಖ್ಯೆಗಳೂ:- ಒಂದರಿಂದ ಒಂಬತ್ತರವರೆಗಿನ ಒಂಬತ್ತು ಸಂಖ್ಯೆಗಳನ್ನು ಮಾತ್ರ(ಅಂದರೆ ಆಧಾರ ಸಂಖ್ಯೆಗಳು ಮಾತ್ರ) ಈ ಶಾಸ್ತ್ರದಲ್ಲಿ ತೆಗೆದುಕೊಂಡಿರುವುದಕ್ಕೆ ಕಾರಣವು ಇಲ್ಲದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂದವಿದೆ ಎಂಬುದನ್ನು ಮೊದಲೇ ಸೂಚಿಸಿದ್ದೇವೆ. ೧೨ರಾಶಿಗಳು,೯ಗ್ರಹಗಳು,೨೭ನಕ್ಷತ್ರಗಳು-ಈ ಮೂರನ್ನೂ ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯಶಾಸ್ತ್ರವು ಮುಂದುವರಿಯುತ್ತದೆ. ಇದರಲ್ಲಿರುವ ವಿಚಿತ್ರವನ್ನು ನೋಡಿರಿ:- ೧೨ರಾಶಿಗಳಲ್ಲಿ ೨೭ ನಕ್ಷತ್ರಗಳಿವೆ.ಅಂದರೆ ಒಂದೊಂದು ರಾಶಿಗೂ ಸರಾಸರಿ೨ ೧/೪ನಕ್ಷತ್ರಗಳು. ಒಂದೊಂದು ನಕ್ಷತ್ರಕ್ಕೂ ೪ಪಾದಗಳು,೨ ೧/೪ನಕ್ಷತ್ರಗಳಿಗೆ ೯ಪಾದಗಳು.ಅಂದರೆ,ಒಂದೊಂದು ರಾಶಿಯಲ್ಲಿಯೂ೯ಪಾದಗಳು ಇವೆ. ೧೨ರಾಶಿಗಳಿಗೆ ಒಟ್ಟು ೧೦೮ಪಾದಗಳು. ಅಂದರೆ,೨೭ ನಕ್ಷತ್ರ ಎಂದರೆ ೨+೭=೯ ೧೦೮ಪಾದಗಳು ಎಂದರೆ ೧+೦+೮=೯ ಡಿಗ್ರಿ ಎಂಬ ಲೆಕ್ಕವನ್ನು ತೆಗೆದುಕೊಂಡರೂ ರಾಶಿಗೆ ೩೦ಡಿಗ್ರಿಗಳಂತೆ ೧೨ರಾಶಿಗಳಿಗೆ ೩೬೦ಡಿಗ್ರಿಗಳು.ಹೀಗೆ ಇವುಗಳ ಆಕಾರ ಲೆಕ್ಕ ೩+೬+೦=೯.ಈ ಡಿಗ್ರಿಗಳನ್ನು ಕಲೆ(ಮಿನಿಟ್ಟು)ಗಳಾಗಿ ಪರಿವರ್ತಿಸಿದರೆ೩೬೦*೬೦=೨೧೬೦೦ಅಂದರೆ ೨+೧+೬+೦+೦=೯ ಮಾತ್ರವೇ ಬರುತ್ತದೆ. ಆದುದರಿಂದಲೇ ಒಂಬತ್ತು ಗ್ರಹಗಳನ್ನೂ ೧೨ರಾಶಿಗಳನ್ನೂ ೨೭ನಕ್ಷತ್ರಗಳನ್ನೂ ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯಶಾಸ್ತ್ರದಲ್ಲಿಯೂ ಸಂಖ್ಯೆಗಳಲ್ಲಿ ಪ್ರಧಾನಗಿರುವುದೂ ಉತ್ತಮವಾಗಿರುವುದೂ ೯ರ ಸಂಖ್ಯೆ ಎಂದೇ ತಿಳಿದು ಬರುತ್ತದೆ. ಇದರಿಂದ ಜ್ಯೋತಿಷ್ಯಕ್ಕೂ ಸಂಖ್ಯೆಗಳಿಗೂ ಇರುವ ಸಂಬಂಧವು ಚೆನ್ನಾಗಿ ಅರ್ಥವಾಗುತ್ತದೆ. ಆಧಾರ ಸಂಖ್ಯೆಗಳೂ- ವಿಸ್ತಾರ ಸಂಖ್ಯೆಗಳೂ ಸಂಖ್ಯೆಗಳನ್ನು ಆಧಾರ ಸಂಖ್ಯೆ ಮತ್ತು ವಿಸ್ತಾರ ಸಂಖ್ಯೆಗಳೆಂದು ಎರಡು ಬಗೆಯಾಗಿ ವಿಂಗಡಿಸಬಹುದು. ಆಧಾರ ಸಂಖ್ಯೆಗಳು:೧ರಿಂದ ೯ರವರೆಗಿನ ೯ಸಂಖ್ಯೆಗಳು ಆಧಾರ ಸಂಖ್ಯೆಗಳು.ಈ ಸಂಖ್ಯೆಗಳು ಹಿಂದೆ ಮುಂದೆ ಬಂದು ಕೂತರೇನೇ ಇತರ ಸಂಖ್ಯೆಗಳು ರೂಪಾಂತರವನ್ನು ಹೊಂದುತ್ತವೆ. ಅಲ್ಲದೆ ಅಷ್ಟು ಸಂಖ್ಯೆಗಳನ್ನೂ ಸೇರಿಸಿ ಕೂಡಿಸಿದರೂ ಒಂಬತ್ತರ ಒಳಗೇ ಅಡಗಿಬಿಡುತ್ತದೆ. ವಿಸ್ತಾರ ಸಂಖ್ಯೆಗಳು:೧೦ರಿಂದ ಹಿಡಿದು ಕೋಟಿವರೆಗಿನ ಸಂಖ್ಯೆಗಳು ಎಲ್ಲವೂ ವಿಸ್ತಾರ ಸಂಖ್ಯೆಗಳು.ಅಂದರೆ,ಒಂದರಿಂದ ಒಂಬತ್ತರವರೆಗಿನ ಸಂಖ್ಯೆಗಳನ್ನು ಪಕ್ಕದಲ್ಲಿಯೇ ಬರೆದುಕೊಂಡು ಹೋದರೆ ಈ ಸಂಖ್ಯೆಗಳು ವಿಸ್ತಾರವನ್ನೂ ಅರ್ಥಾತ್ ವ್ಯಾಪಕತ್ವವನ್ನೂ ಹೊಂದುತ್ತವೆ.ಆದುದರಿಂದ ಇವುಗಳನ್ನು ವಿಸ್ತಾರ ಸಂಖ್ಯೆಗಳು ಎನ್ನುತ್ತಾರೆ. ಉದಾ:- ೧,೨,೩,೪,೫,೬,೭,೮,೯-ಇವು ಆಧಾರ ಸಂಖ್ಯೆಗಳು. ೧೦ರಿಂದ ಕೋಟಿವರೆಗಿರುವ ಸಂಖ್ಯೆಗಳು ಎಲ್ಲವೂ ವಿಸ್ತಾರಸಂಖ್ಯೆಗಳು. ನ್ಯೂಮರಾಲಜಿ ಎಂಬ ಸಂಖ್ಯಾ ಶಾಸ್ತ್ರಕ್ಕೆ ವಿಸ್ತಾರ ಸಂಖ್ಯೆಗಳ ಅವಶ್ಯಕತೆಯೇ ಇಲ್ಲ. ಅದಕ್ಕೆ ಆಧಾರ ಸಂಖ್ಯೆಯೇ ಬೇಕಾಗಿರುವುದು. ಅದು ಎಷ್ಟು ದೊಡ್ದ ಸಂಖ್ಯೆಯಾಗಿದ್ದರೂ ಅದನ್ನು ಆಧಾರ ಸಂಖ್ಯೆಗೆ ಬದಲಾಯಿಸಿಕೊಳ್ಳಬೇಕು. ಉದಾ:- ಒಂದು ವಿಸ್ತಾರ ಸಂಖ್ಯೆ ೨೧೨೧೯೭೦ಆಗಿದ್ದರೆ ಇದನ್ನು ೨+೧+೨+೧+೯+೭+೦=೨೨=೨+೨=೪ ಹೀಗೆ ಇದನ್ನು ನಾಲ್ಕು ಎಂಬ ಆಧಾರ ಸಂಖ್ಯೆಯನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಇದೇ ರೀತಿಯಾಗಿ ಒಬ್ಬರ ಜನ್ಮದಿನ,ತಿಂಗಳು,ವರ್ಷ,ಈ ಮೂರನ್ನೊ ಸೇರಿಸಿ ಆಧಾರ ಸಂಖ್ಯೆಯನ್ನಾಗಿ ಮಾರ್ಪಡಿಸಿಕೊಂಡನಂತರವೇ ಅವರ ಭವಿಷ್ಯ ಫಲವನ್ನು ಹೇಳಬೇಕು. ಮೂರುವಿಧವಾದ ಆಧಾರ ಸಂಖ್ಯೆಗಳು:- ಈ ಶಾಸ್ತ್ರದಲ್ಲಿ ಮೂರುವಿಧವಾದ ಆಧಾರ ಸಂಖ್ಯೆಗಳನ್ನು ಇಟ್ಟುಕೊಂಡು ಫಲಗಳನ್ನು ಹೇಳಿರುತ್ತಾರೆ:- ೧) ಹುಟ್ಟಿದ ದಿನಾಂಕ(ಇಂಗ್ಲೀಷ್ ತಾರೀಖು) ೨)ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಒಟ್ಟು ಸಂಖ್ಯೆ. ೩)ಒಬ್ಬರ ಹೆಸರಿನಲ್ಲಿರುವ ಅಕ್ಷರಗಳನ್ನು ಕೂಡಿಸಿದರೆ ಬರುವ ಸಮಷ್ಟಿ ಸಂಖ್ಯೆ. (ಸೂಚನೆ: ಈ ಸಮಷ್ಟಿ ಸಂಖ್ಯೆಯು ದೊಡ್ಡದಾಗಿದ್ದರೆ ಅದನ್ನು ಆಧಾರ ಸಂಖ್ಯೆಯನ್ನಾಗಿ ಬದಲಾಯಿಸಿಕೊಳ್ಳಬೇಕು.) ಉದಾ:- ಒಬ್ಬರು ಹುಟ್ಟಿದ ದಿನಾಂಕ ೨-೫-೧೯೬೯. ಇವರ ಹೆಸರು ಕಾಮಯ್ಯ(ಇಂಗ್ಲೀಷ್) ಇವರ- ೧)ದಿನಾಂಕ ಸಂಖ್ಯೆ-೨ ೨)ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆ ೨+೫+೧+೯+೬+೯=೩೨=೩+೨=೫ ೩) ಹೆಸರಿನ ಸಂಖ್ಯೆ:ಕಾಮಯ್ಯ(ಇಂಗ್ಲೀಷ್) ೨+೧+೪+೧+೧+೫=೧೪=೧+೪=೫ ಮೇಲೆ ಹೇಳಿದ ಪ್ರಕಾರ ಮೂರು ವಿಧವಾದ ಸಂಖ್ಯೆಗಳನ್ನು ಇಟ್ಟುಕೊಂಡು ಈ ಶಾಸ್ತ್ರ ರೀತ್ಯಾ ಫಲಗಳನ್ನು ಹೇಳಬೇಕು. ಆದರೆ ಮನುಷ್ಯನ ಭವಿಷ್ಯವನ್ನು ಹೇಳುವುದಕ್ಕೆ ಹುಟ್ಟಿದ ದಿನಾಂಕ ಮಾತ್ರವೇ ಸಾಕೆಂದು ಸಂಖ್ಯಾಶಾಸ್ತ್ರ ನಿಪುಣರು ನಿರ್ಣಯಿಸಿದ್ದಾರೆ. ಆದುದರಿಂದ ಈ ಗ್ರಂಥದಲ್ಲಿ ಪ್ರತಿಯೊಬ್ಬರ ಹುಟ್ಟಿದ ದಿನಾಂಕವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಫಲವನ್ನು ಬರೆಯಲ್ಪಟ್ಟಿದೆ. ಈ ರೀತಿ ಕೊಟ್ಟಿರುವ ಫಲಗಳಲ್ಲಿ ಏನಾದರೂ ಹೆಚ್ಚು ಕಡಿಮೆ ಕಾಣಬಂದರೆ ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಆಧಾರ ಸಂಖ್ಯೆಗಳ ಮೂಲಕ ಬರಬಹುದಾದ ಫಲಗಳನ್ನು ಸೇರಿಸಿ ಹೊಂದಿಸಿಕೊಂಡು ನೋಡಿದರೆ ಸರಿ ಹೋಗುವುದು. ನಾಮದ ಸಂಖ್ಯೆ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಹೆಸರು ಇದೆ. ಆ ಹೆಸರು ಏತಕ್ಕಾಗಿ ಇಡಬೇಕೆಂದು ನಮಗೆ ತಿಳಿಯದು. ಅದು ದೈವಾದೀನವಾಗಿಯೂ ಕರ್ಮಧೀನವಾಗಿಯೂ ಬಂದ ಹೆಸರು.ಆದುದರಿಂದ ಆ ಹೆಸರಿನ ಅಕ್ಷರಗಳಿಗೆ ಇರುವ ಒಟ್ಟು ಸಂಖ್ಯೆಯ ಆಧಾರ ದಿಂದ ಫಲವನ್ನು ಹೇಳಲಾಗುತ್ತದೆ. ಅಲ್ಲದೆ ಹೆಸರಿನಲ್ಲಿರುವ ಅಕ್ಷರಗಳನ್ನು ಆಂಗ್ಲ ಭಾಷೆಯ ಅಕ್ಷರಗಳನ್ನಾಗಿ ಇಟ್ಟುಕೊಳ್ಳಬೇಕು. ಆಗ ಮಾತ್ರ ಈ ಕಾಲದ ಶಾಸ್ತ್ರ ಪ್ರಮಾಣದಿಂದ ಫಲವನ್ನು ಹೇಳಲು ಸಾಧ್ಯವಾಗುವುದು. ಉದಾ: ಒಬ್ಬರ ಹೆಸರು ಕೆ ರಾಮಯ್ಯ,ಇದು ಆಂಗ್ಲ ಭಾಷೆಯಲ್ಲಿ ಕೆ.ರಾಮಯ್ಯ ಎಂದು ಬರೆಯ ಬಹುದು.ಇದೇ ರೀತಿ ಇವರು ಹಸ್ತಾಕ್ಷರವನ್ನು(ಸಹಿ)ಹಾಕುತ್ತಾರೆ.ಆದುದರಿಂದಲೇ ಈ ಹೆಸರಿನಲ್ಲಿ ಇರತಕ್ಕ ಅಕ್ಷರಗಳಿಗೆ ಆಧಾರ ಸಂಖ್ಯೆಗಳು ಇವೆ. ಆ ಸಂಖ್ಯೆಗಳನ್ನು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು. ಈ ಪಟ್ಟಿಗನುಸಾರವಾಗಿ ಕೆ.ರಾಮಯ್ಯ ಎಂಬ ಹೆಸರಿಗೆ ಕೆಳಗೆ ಕಾಣಿಸಿದಂತೆ ಸಮಷ್ಟಿ ಸಂಖ್ಯೆಯನ್ನು ಕಂಡು ಹಿಡಿಯಬೇಕು. ಆರ್.ಕಾ ಮ ಯ್ಯ( R. K A M A I A H ) ೨.೨.೧.೪.೧.೧.೧.೫=೧೭=೧+೭=೮ ಅಂದರೆ ಈ ಹೆಸರಿನ ಸಮಷ್ಟಿ ಸಂಖ್ಯೆ ೮. ಇದೇ ಇವರ ಹೆಸರಿನ ಸಂಖ್ಯೆ.ಆದುದರಿಂದಲೇ(೧)ಜನ್ಮ ದಿನಾಂಕ ಸಂಖ್ಯೆ(೨)ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿಸಂಖ್ಯೆ(೩)ಹೆಸರಿನ ಸಂಖ್ಯೆ-ಈ ಮೂರು ಸಂಖ್ಯೆಗಳೂ ಸಂಖ್ಯಾ ಶಾಸ್ತ್ರ ರೀತಿಯಾಗಿ ಜೀವನದ ಫಲವನ್ನು ಹೇಳುವಾಗ ಸಹಾಯವಾಗುತ್ತದೆ.ಈ ಮೂರು ಸಂಖ್ಯೆಗಳು ಒಂದೇ ವಿಧವಾಗಿಯೂ ಅನುಕೂಲ ಸಂಖ್ಯೆಗಳಾಗಿಯೋ ಇದ್ದರೆ ಅವರಿಗೆ ಒಳ್ಳೆಯದು, ಕೆಟ್ಟದ್ದು ಆಗುವ ಕಾಲವನ್ನು ಸರಿಯಾಗಿ ನಿರ್ಣಯಿಸಿ ಹೇಳಲು ಅನುಕೂಲವಾಗುವುದು. ಆದುದರಿಂದ ಈ ಶಾಸ್ತ್ರವನ್ನು ಬಲ್ಲವರು ಒಬ್ಬರ ಹುಟ್ಟಿದ ದಿನಾಂಕವನ್ನು ಇಟ್ಟುಕೊಂಡು ಸ್ವಬಾವ,ಗುಣ,ನಡತೆ ಮೊದಲಾದವುಗಳನ್ನು ತಿಳಿದುಕೊಳ್ಳಬೇಕು.ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆಯನ್ನು ಇಟ್ಟುಕೊಂಡು ಅದೃಷ್ಟ,ಯೋಗಗಳನ್ನು ತಿಳಿದುಕೊಳ್ಳಬೇಕು.ಹೆಸರಿನ ಸಂಖ್ಯೆಗಳ ಮೂಲಕ ಮೇಲೆ ಹೇಳಿದ ಫಲಗಳು ಉತ್ತಮವಾಗಿ ಕೂಡಿಬರುವುದೆಂದು ತಿಳಿಯಬೇಕು. ಇನ್ನೂ ಹುಟ್ಟಿದ ದಿನಾಂಕ ಸಂಖ್ಯೆ,ಹುಟ್ಟಿದ ದಿನ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆ,ಹೆಸರಿನ ಸಂಖ್ಯೆ ಈ ಮೂರಕ್ಕೂ ಸಮಾನತೆ(ಹೊಂದಾಣಿಕೆ)ಯನ್ನು ತರಬೇಕು.ಆದರೆ ಹುಟ್ಟಿದ ದಿನಾಂಕವನ್ನಾಗಲೀ ಇವುಗಳ ಸಮಷ್ಟಿ ಸಂಖ್ಯೆಯನ್ನಾಗಲೀ ಬದಲಾಯಿಸಬಾರದು. ಆದುದರಿಂದ ಹೆಸರಿನಲ್ಲಿರುವ ಸಮಷ್ಟಿ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿದೆ.ಅದು ಹೇಗೆಂದರೆ,ಮೇಲೆ ಉದಾಹರಿಸಿದ: ಆರ್ ಕಾಮಯ್ಯ( R. K A M A I A H ) ಎಂಬ ಹೆಸರಿನಲ್ಲಿ ಒಂದು ಅಕ್ಷರವನ್ನು ಕಡಿಮೆಮಾಡಿಯೋ ಅಥವ ಸೇರಿಸಿಯೋ ಬದಲಾಯಿಸಿದರೆ ಆ ಹೆಸರಿನ ಸಂಖ್ಯೆಯು ಬದಲಾಗುವುದು.ಉದಾ: ಮೇಲೆ ಕೊಟ್ಟಿರುವ ಹೆಸರಿನಲ್ಲಿ ಎಂ ಎಂಬ ಅಕ್ಷರದ ನಂತರ ಇರುವ ಎ- ಯನ್ನು ಕಡಿಮೆ ಮಾಡಿದರೆ ಹೆಸರಿನ ಸಂಖ್ಯೆ ೭ ಬರುವುದು. R K A M A Y Y A ಎಂದು ಬದಲಾಯಿಸಿದರೆ ೨೨೧೪೧೧೧೧=೪ ಬರುವುದು. ಇದೇ ರೀತಿಯಾಗಿ ತಮ್ಮ ಹೆಸರಿನಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬಹುದು. ವಿವಾಹ ಘಟನೆ ವಿವಾಹವು ಆಗಬೇಕಾಗಿರುವ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿವಾಹ ಯೋಗ್ಯವಾದ ಘಟನೆಗಳನ್ನು ನೋಡುವ ಕ್ರಮವೂ ಈ ಶಾಸ್ತ್ರದಲ್ಲಿ ಹೇಳಿದೆ. ಈ ಘಟನೆಗಳನ್ನು ಅವರವರು ಹುಟ್ಟಿದ ದಿನಾಂಕ,ತಿಂಗಳು,ವರ್ಷ,ಇವುಗಳ ಸಮಷ್ಟಿ ಸಂಖ್ಯೆಯನ್ನು ತಗೆದುಕೊಂಡೇ ನೋಡಬೇಕು ಎಂದು ಶಾಸ್ತ್ರಜ್ಞರು ತೀರ್ಮಾನಿಸಿರುವ ಪ್ರಕಾರ ಇದರಲ್ಲಿ ಹೇಳಿದೆ.ಈ ಘಟನೆಗಳನ್ನು ಮದುವೆಯಾಗಲಿರುವ ಮಕ್ಕಳಿಗೆ ಮಾತ್ರವಲ್ಲದೆ,ವ್ಯಾಪಾರ ವ್ಯವಹಾರಗಳು ಮತ್ತು ಇತರ ಕಾರ್ಯ ಕಲಾಪಗಳಲ್ಲಿಯೂ ಪಾಲುದಾರರು(.......)ಸಾವುಕಾರರು-ಸೇವಕರು ಮೊದಲಾದವರಿಗೂ ಅನ್ವಯಿಸಿಕೊಳ್ಳಬಹುದು. ಈ ರೀತಿ ಪಾಲುಗಾರರಾಗುವವರು ಈ ಶಾಸ್ತ್ರದಲ್ಲಿ ಪ್ರತ್ಯೇಕವಾಗಿ ನಿರೂಪಿಸಿದ ಪ್ರಕಾರ ಅವರುಗಳು ಹುಟ್ಟಿದ ದಿನಾಂಕಗಳನ್ನು ಮೊದಲೇ ತಿಳಿದುಕೊಂಡು ಅವರ ಸ್ವಭಾವದೊಂದಿಗೆ ತಮ್ಮ ಸ್ವಭಾವವನ್ನು ಹೊಂದಿಸಿ ನಿರ್ಣಯಿಸುವುದಕ್ಕೆ ಈ ಭಾಗವು ಸಹಕಾರಿಯಾಗುತ್ತದೆ. ಗ್ರಹ ಪ್ರೀತಿ ಈ ರೀತಿ ಸಂಖ್ಯೆಗಳುಳ್ಳ ಒಬ್ಬೊಬ್ಬರೂ ತಮಗೆ ಅನುಕೂಲರಾಗಿರುವ ಗ್ರಹಗಳು ಇನ್ನೂ ಹೆಚ್ಚು ಸುಖವನ್ನು ಅನುಗ್ರಹಿಸುವಂತೆ ಮತ್ತು ಪ್ರತಿಕೂಲವಾಗಿರುವ(ಅಶುಭವಾಗಿರುವಾಗ)ಗ್ರಹಗಳ ಶಾಂತಿಯೂ ಪ್ರತಿ ದಿನವೂ ದೇವರ ಪ್ರಾರ್ಥನೆ,ಪೂಜೆ,ವ್ರತ ಮೊದಲಾದವನ್ನು ಮಾಡಬೇಕಾದ ಕ್ರಮಗಳನ್ನು ಆಯಾಯ ಸಂಖ್ಯೆಗಳಿಗಿರುವ ಫಲಗಳನ್ನು ಜೊತೆಗೆ ಕೊಡಲಾಗಿದೆ ಅವುಗಳನ್ನು ನಿಷ್ಟೆಯಿಂದ ಮಾಡುವುದು ಅತಿ ಅವಶ್ಯಕವೆಂದು ಆಸ್ತಿಕ ಮಹಾಜನರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿ ಒಬ್ಬರೂ ತಾನು ಮಾಡಿದ ಅಥವ ಮಾಡಲಿರುವ ಪುಣ್ಯ-ಪಾಪ ಕರ್ಮಗಳ ಫಲವನ್ನು ಅನುಭವಿಸಿಯೇ ತೀರಬೇಕು.ಗಿಡನೆಟ್ಟರೆ ಅದು ಬೆಳದು ಮರವಾಗಿ ಫಲವನ್ನು ಕೊಡುವುದು. ಅದೇ ರೀತಿ ನಾವು ಮಾಡಿದ ಕರ್ಮಕ್ಕೆ ತಕ್ಕ ಫಲವು ಇದ್ದೇ ಇರುತ್ತದೆ.ಇದನ್ನು ಪ್ರಕೃತಿಯ ನಿಯಮವೆಂದೂ ದೈವ ಸಂಕಲ್ಪವೆಂದೂ ಹೇಳಬಹುದು. ಯಾವುದು ಹೇಗಿದ್ದರೂ ಮಾಡಿದ ಕೃತ್ಯಕ್ಕೆ ಫಲವನ್ನು ಅನುಭವಿಸ್ಯೇ ತೀರಬೇಕು."ಅವಶ್ಯಮನು ಭೋಕ್ತವ್ಯಂ ಕೃತಂ ಕರ್ಮ ಶುಭಾ ಶುಭಂ" ಎಂದು ಗೀತಾಚಾರ್ಯರು ಹೇಳಿಲ್ಲವೆ.? ಈ ಕರ್ಮಕ್ಕೆ ತಕ್ಕ ಫಲವನ್ನು ಕೊಡುವವನು ಪರಮಾತ್ಮನು.ಪ್ರಪಂಚದಲ್ಲಿ ಹುಟ್ಟಿಬೆಳೆದು ವಾಸಿಸುವ ನಮ್ಮೊಡನೆ ಆಕರ್ಷಣ ಶಕ್ತಿಯ ಮೂಲಕ ಸಂಬಂಧವನ್ನು ಇಟ್ಟುಕೊಂಡಿರುವ ಗ್ರಹಗಳು ಪರಮಾತ್ಮನ ಪ್ರತಿನಿಧಿಯಾಗಿ ನಮಗೆ ಕರ್ಮಕ್ಕೆ ತಕ್ಕ ಫಲವನ್ನು ಕೊಡುತ್ತಿರುತ್ತವೆ. ಅಲ್ಲದೆ ಶಾಸ್ತ್ರಗಳ ಮೂಲಕ ಆ ರೀತಿಯಾದ ಶುಭಾ ಶುಭ ಫಲಗಳನ್ನು ವಿವರಿಸಿ ನಮ್ಮನ್ನು ಎಚ್ಚರಿಸುತ್ತವೆ. ಆದುದರಿಂದ ನಮ್ಮೊಡನೆ ಪ್ರತ್ಯಕ್ಷ ಸಂಬಂಧವನ್ನು ಇಟ್ಟುಕೊಂಡಿರುವ ಗ್ರಹಗಳು ಸಂಖ್ಯಾಶಾಸ್ತ್ರ(ನ್ಯೂಮರಾಲಜಿ)ಗಳ ಮೂಲಕವೂ ರೇಖಾಶಾಸ್ತ್ರ ರೀತಿಯೂ ಜ್ಯೋತಿಷ್ಯಶಾಸ್ತ್ರಗಳ ಪ್ರಕಾರವೂ ನಮಗೆ ಒದಗಲಿರುವ ಕಷ್ಟಗಳನ್ನು ತಿಳಿಸುತ್ತವೆ. ಆಗ ಸಂಬಂಧಪಟ್ಟ ಗ್ರಹಗಳಿಗಿರುವ ಪ್ರಕೋಪವನ್ನು ತಗ್ಗಿಸಲು ಅಂದರೆ ಗ್ರಹಶಾಂತಿ ಮಾಡಲು ಪ್ರಾರ್ಥನೆ,ಜಪ,ದಾನಗಳನ್ನು ಮಾಡಬೇಕು.ಈ ಪ್ರಾರ್ಥನೆಗಳ ಮೂಲಕ ನಮ್ಗೆ ಬರಲಿರುವ ವಿಪತ್ತು ಕಡಿಮೆಯಾಗಿ ಧೈರ್ಯದಿಂದ ಎದುರಿಸಿ ಸಹಿಸುವಂತೆ ಆಗುವುದು.ಅದೇರೀತಿಯಾಗಿ ಗ್ರಹಗಳು ಅನುಕೂಲವಾಗಿದ್ದರೆ ಅವು ಇನ್ನೂ ಹೆಚ್ಚಾಗಿ ಅನುಕೂಲವಾಗಿರುವುದಕ್ಕಾಗಿ ಸ್ತೋತ್ರಗಳನ್ನು ಪಾರಾಯಣಮಾಡುತ್ತಿರಬೇಕು. ಪರಮಾತ್ಮನ ಪ್ರಾರ್ಥನೆ ಎಂಬುದು ಸರ್ವ ಧರ್ಮದವರಿಗೂ ಇದ್ದೇ ಇದೆ.ಅವರವರು ತಾವು ನಮಸ್ಕರಿಸುವ ದೇವರನ್ನು ತಮ್ಮ ತಮ್ಮ ಭಾಷೆಯಲ್ಲಿರುವ ಪ್ರಾರ್ಥನೆ,ಸ್ತೋತ್ರಗಳ ಮೂಲಕ ಪ್ರಾರ್ಥಿಸಬಹುದು. ಈ ಗ್ರಂಥವು ಎಲ್ಲಾ ಧರ್ಮದವರಿಗೂ ಸಂಬಂಧ ಪಟ್ಟದ್ದಾಗಿರುತ್ತದೆ.ಆದರೂ ಹಿಂದುಗಳಿಗಾಗಿ ನವಗ್ರಹ ಸ್ತೋತ್ರಗಳನ್ನು ಕೊಡಲಾಗಿದೆ.ಅದರ ಸದುಪಯೋಗ ಮಾಡಿಕೊಂಡು ಸಕಲ ಸೌಭಾಗ್ಯ ಸಂಪತ್ತನ್ನು ಪಡೆದು ಎಲ್ಲರೂ ಸಂತೋಷವನ್ನು ಪಡೆಯಲೆಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇವೆ. ಸರ್ವೇ ಭದ್ರಾಣಿ ಪಶ್ಯಂತು! ಒಂದು ಸಂಖ್ಯೆ (೧) ಒಂದು ಎನ್ನುವ ಸಂಖ್ಯೆಯು ಎಲ್ಲಾ ಸಂಖ್ಯೆಗಳಿಗೂ ಆಧಾರವಾಗಿದೆ.ಹಲವು ಒಂದುಗಳು ಸೇರಿದರೇ ತಾನೆ ಎಲ್ಲಾ ಸಂಖ್ಯೆಗಳು ರೂಪುಗೊಳ್ಳುವುದು? ನೋಡಿರಿ:- ೧+೧=೨ ೨+೧=೩ ೩+೧=೪ ಇದೇ ರೀತಿ ಕೋಟಿ ವರೆಗೂ ಇರುವ ಸಕಲ ಸಂಖ್ಯೆಗಳೂ ಕೂಡಿಯೇ ರೂಪುಗೊಳ್ಲುತ್ತವೆ.ಮತ್ತು ಒಂದರಿಂದ ಒಂಬತ್ತರವರೆಗಿರುವ ಸಂಖ್ಯೆಗಳಲ್ಲಿ ಒಂದು ಎಂಬ ಸಂಖ್ಯೆಯ ಮಹತ್ವ ಅದಿಕ. ನಿತ್ಯ-ಸತ್ಯ-ಸನಾತನವಾಗಿ ಎಂದೆಂದಿಗೂ ನಿಂತು ನೆಲೆಸಿರುವ ಪರಬ್ರಹ್ಮ ವಸ್ತುವು ಒಂದೇ. ಲೋಕವೆಲ್ಲಾ ಅದೇ ಒಂದಾದ ಪರಬ್ರಹ್ಮವೆಂಬ ವಸ್ತುವಿನಿಂದಲೇ ಸೃಷ್ಟಿಯಾಗಿದೆ. ಹೀಗೆ ಹಲವು ಬಗೆಗಳಾಗಿ ತೋರಿಬರುವ ವಸ್ತುವು ಎಲ್ಲವೂ ಅದೇ ಒಂದರಲ್ಲಿ ಅಡಗಿ ಐಕ್ಯವಾಗುತ್ತದೆ.ಆದುದರಿಂದಲೇ,ಸಂಖ್ಯೆಗಳಲ್ಲಿ ಒಂದು ಎಂಬುದು ಬಹಳ ಮಹತ್ವವುಳ್ಳದ್ದಾಗಿದೆ. ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳಲ್ಲವೇ? ಆ ಹನ್ನೆರಡುತಿಂಗಳುಗಳನ್ನು ಜನವರಿ ಮೊದಲು ಡಿಸೆಂಬರ್ ಕೊನೆ ಎಂದು ಲೆಕ್ಕವಿಟ್ಟುಕೊಳ್ಳೋಣ.ಇದು ಇಂದಿನ ಪ್ರಪಂಚದಲ್ಲೆಲ್ಲಾ ವ್ಯವಹಾರದಲ್ಲಿರುವದರಿಂದಲೂ ಪಾಶ್ಚಾತ್ಯ ಮತ್ತು ಪೌರ್ವಾತ್ಯ ದೇಶದ ಸಂಖ್ಯಾಶಾಸ್ತ್ರ ನಿಪುಣರೂ,ರೇಖಾಶಾಸ್ತ್ರ ಪಾರಂಂಗತರೂ ಇಂಗ್ಲೀಷು ತಿಂಗಳಿನ ದಿನಾಂಕಗಳು ಇವುಗಳನ್ನೇ ಆಧಾರವಾಗಿಟ್ಟುಕೊಂಡು ಮಾನವನ ಜೀವನದ ಫಲಿತಾಂಶವನ್ನು ಹೇಳುತ್ತಿರುವುದರಿಂದಲೂ ನಾವು ಕೂಡ ಅದೇ ಆಂಗ್ಲ ದಿನಾಂಕ,ಮಾಸ,ವರ್ಷಗಳನ್ನೇ ಆಧಾರವಾಗಿಟ್ಟುಕೊಂಡು ಫಲಗಳನ್ನು ನೋಡಬೇಕು. ಒಂದು ಸಂಖ್ಯೆಯವರು ಯಾರು ? ಜನವರಿಯಿಂದ ಡಿಸೆಂಬರ್ ವರೆಗಿನ ಹನ್ನೇರಡು ತಿಂಗಳಿನಲ್ಲಿ ಯಾವ ತಿಂಗಳಲ್ಲಾದರೂ ಸರಿ ೧,೧೦,೧೯,೨೮ಈ ದಿನಾಂಕದಲ್ಲಿ ಜನಿಸಿದವರನ್ನು ೧ ಸಂಖ್ಯೆಯುಳ್ಲವರೆಂದು ನಾವು ನೆನಪಿನಲ್ಲಿಡಬೇಕು. ಒಂದು ಗ್ರಹಕ್ಕೆ ಸಂಬಂದ ಪಟ್ಟ ಗ್ರಹ ಸೂರ್ಯನೇ ಮೊದಲಾದ ಒಂಬತ್ತು ಗ್ರಹಗಳಲ್ಲಿ ಒಂದು ಸಂಖ್ಯೆಗೆ ಸೂರ್ಯನು ಅಧಿಪತಿಯಾಗಿದ್ದಾನೆ.ಅವನು ನವಗ್ರಹಗಳ ನಾಯಕನು.ಸಮಸ್ತ ಜೀವರಾಶಿಗಳಿಗೂ ಸೂರ್ಯನೇ ಆತ್ಮಸ್ವರೂಪನೆಂದು ಶಾಸ್ತ್ರಗಳು ಹೇಳುತ್ತವೆ. ಆದುದರಿಂದ ಗ್ರಹನಾಯಕನಾದ ಸೂರ್ಯನು ಸಂಖ್ಯೆಗಳಲ್ಲಿ ಪ್ರಥಮವಾದ ಒಂದನೇ ಸಂಖ್ಯೆಗೆ ಸೇರಿದವನೆಂದು ಹೇಳುವುದು ಯುಕ್ತವಾಗಿದೆ. ಒಂದು ಸಂಖ್ಯೆಗೆ ಸೇರಿದ ಗ್ರಹವು ಸೂರ್ಯ ನಾಗಿರುವುದರಿಂದ ಆ ಸಂಖ್ಯೆಯ ದಿನ ಜನಿಸಿದವರಲ್ಲಿ ಜ್ಯೋತಿಷ್ಯ ಶಾಸ್ತ್ರ ರೀತ್ಯ ಸೂರ್ಯಗ್ರಹಕ್ಕೆ ಕೊಟ್ಟಿರುವ ಸ್ವರೂಪ,ಸ್ವಭಾವ,ಗುಣಗಳೆಲ್ಲಾ ಇರುತ್ತವೆ. ರೂಪ ಮತ್ತು ಆಕಾರ ಒಂದು ಸಂಖ್ಯೆಯವರು ಸಾಮಾನ್ಯವಾದ ಎತ್ತರವುಳ್ಳವರಾಗಿರುವರು.ಇವರಿಗೆ ದೀರ್ಘವಾದ ಭುಜಗಳೂ ವಿಶಾಲವಾದ ಲಲಾಟವೂ ಇರುವುದು.ತಲೆ ಕೂದಲು ದಟ್ಟವಾಗಿ ಕಪ್ಪಾಗಿಹೊಳಪಿನಿಂದ ಕೂಡಿ ನಯವಾಗಿ ಇರುವುದು.ಅಂದವಾಗಿ ಬಿಲ್ಲಿನಂತೆ ಬಾಗಿದ ಹುಬ್ಬುಗಳು ದೃಡವಾದ ದಂತಪಂಕ್ತಿಯು ಇರುವುವು. ಗುಣ ನಡತೆಗಳು ಸಿಂಹದ ಹಾಗೆ ಧೈರ್ಯ,ಸಾಹಸ ಉಳ್ಳವರು.ತಮ್ಮ ವಿಚಾರವನ್ನು ಧ್ಯೇಯವನ್ನೂ ಬಿಟ್ಟುಕೊಡದೆ ಸಾಧಿಸುವ ಸ್ವಭಾವವುಳ್ಳವರು.ತಾವು ಅನ್ಯರ ಅದೀನರಾಗಿರುವುದಕ್ಕಿಂತಲೂ ತಮಗೇ ಇತರರು ಅಧೀನರಾಗಿರಬೇಕೆಂಬ ಮನೋಭಾವವುಳ್ಳವರು.ಎಲ್ಲದರಲ್ಲೂ ತಾನೇ ಮುಂದಾಗಿ ಮುಂದಾಳಾಗಿ ಕೆಲಸ-ಕಾರ್ಯಗಳನ್ನು ಸಾಧಿಸುವ ಸಾಮರ್ಥ್ಯವುಳ್ಳವರು.ಸೇವಾವೃತ್ತಿಗಿಂತ ಸ್ವತಂತ್ರ ಜೀವನ ನಡೆಸುವುದೇ ಇವರಿಗೆ ಪ್ರಿಯವಾದುದು. ಇವರು ಹೆಚ್ಚು ಮಾತನಾಡುವವರಲ್ಲ,ಮಿತಭಾಷಿಗಳು.ಮಾತನಾಡಬೇಕಾಗಿ ಬಂದರೆಮಾತ್ರ ಭಾವ,ಅರ್ಥ,ಹಾಸ್ಯರಸ ಒಂದುಮಾಡಿ ಕೊಂಡು ಮಧುರೋಕ್ತಿಗಳನ್ನು ಆಡುವರು. ಇವರನ್ನು ಸಕಲ ಕಲಾವಿದರೆಂದು ಹೇಳಬಹುದು.ಯಾವಕಲೆಯಾದರೂ ಸರಿ ಅದನ್ನು ಬೇಗನೆ ಗ್ರಹಿಸುವ ಶಕ್ತಿ,ಉತ್ಸಾಹ ಮತ್ತು ನೈಪುಣ್ಯತೆ ಇವರಲ್ಲಿ ಕಂಡುಬರುತ್ತದೆ.ಇವರ ಹೃದಯವು ಸ್ಪಟಿಕದಂತೆ ನಿರ್ಮಲವಾಗಿರುವುದು.ಕಪಟ ಇಲ್ಲದೆ ಸ್ನೇಹಭಾವದಿಂದ ಎಲ್ಲರೊಂದಿಗೆ ಒಡನಾಡುವರು.ಇವರಿಗೆ ಯಾವುದನ್ನೂ ರಹಸ್ಯವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಅಸಾದ್ಯವಾದುದರಿಂದ ಎಲ್ಲವನ್ನೂ ಇತರರಲ್ಲಿ ಹೇಳಿಬಿಡುತ್ತಾರೆ. ತಾವು ಮಾಡಿದ ತಪ್ಪು-ಸರಿಗಳನ್ನು ಇತರರಿಗೆ ಹೇಳಿ ಯಾವಾಗಲೂ ತಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಬೇಕೆಂಬ ಪ್ರಯತ್ನದಲ್ಲಿಯೇ ಇರುವರು.ತಾವು ಯಾವುದೇ ಕಳಂಕವಿಲ್ಲದ ನಿರ್ಮಲ ಮನಸಿನವರಾಗಿರುವುದರಿಂದ ಸುಳ್ಳುಹೇಳುವವರನ್ನು ,ಮೋಸಮಾಡುವವರನ್ನೂ ಕಂಡರೆ ಇವರಿಗಾಗದು. ತಮಗೆ ಸಹಾಯ ಮಾದಬೇಕೆಂದು ಪರರ ಬಳಿ ಹೋಗುವುದು ಇವರ ಸ್ವಭಾವಕ್ಕೆ ವಿರುದ್ದವಾದುದು.ಆದರೆ ಇವರ ಪರಿಸ್ಥಿತಿ ನೋಡಿ ಇತರರು ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುವರು. ಬಿಳಿಯ ವಸ್ತ್ರವನ್ನು ಧರಿಸುವುದೆಂದರೆ ಇವರಿಗೆ ಬಹಳಪ್ರೀತಿ ಜನಸಮುದಾಯದೊಂದಿಗೆ ಇರುವುದಕ್ಕಿಂತಲೂ ಏಕಾಂತ ವಾಸವು ಇಅವ್ರಿಗೆ ಪ್ರಿಯವಾದುದು.ರಾತ್ರಿಹೊತ್ತು ಬೇಗನೆ ಮಲಗುವುದು ಇವರಿಗೆ ಹಿಡಿಸದು.ಎಂದಾದರೂ ಹೆಚ್ಚು ನಿದ್ದೆಹೋದರೆ ಸಮಯವು ವ್ಯರ್ಥವಾಯಿತೆಂದು ವ್ಯಸನಪಡುವರು. ಪ್ರಯಾಣ ಮಾಡುವುದರಲ್ಲೂ ಪರ್ವತ,ಕಾಡು,ಪ್ರಪಾತ ಮೊದಲಾದ ಪ್ರಾಕೃತಿಕ ದೃಶ್ಯಗಳನ್ನು ನೋಡುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ದೈವ ನಂಬಿಕೆಯುಳ್ಳ ಆಸ್ತಿಕರು ಇವರು. ಆದರೆ ದೇವರ ಮ್ರ‍್ಲೆಯೇ ಎಲ್ಲಾ ಭಾರವನ್ನು ಹೊರಿಸಿ ಜೀವಿಸಬೇಕೆಂಬ ಹುಚ್ಚುತನವಿಲ್ಲ. ಗೃಹಸ್ಥ ಜೀವನ ಇವರಿಗೆ ವಯಸ್ಸಾದ ಮೆಲೆಯೇ ವಿವಾಹವು ಆಗುವುದು.ಇವರ ಸಾಂಸಾರಿಕ ಜೀವನವು ಸಾಕಷ್ಟು ಸುಖಮಯವಾಗಿ ಇರಲಾರದು. ಯಾವಾಗಲೂ ಸತಿ-ಪತಿಗಳಲ್ಲಿ ಯಾವುದಾದರೊಂದು ಮನಸ್ತಾಪವು ಬರುತ್ತಲೇ ಇರುವುದರಿಂದ ಗೃಹಶಾಂತಿ-ಸಮಾಧಾನವು ನೆಲೆಸಿರಲಾರದು. ಮುಖ್ಯವಾಗಿ ಈ ಒಂದು ಎಂಬ ಸಂಖ್ಯೆಯುಳ್ಳವರು ಇದೆ ಒಂದುಸಂಖ್ಯೆಯುಳ್ಳ ಸತಿಯನ್ನೋ ಅಥವ ಪತಿಯನ್ನೋ ವಿವಾಹವಾದರೆ ಮೇಲೆ ಹೇಳಿದ ವಿಡಂಬನೆಗಳು ಹೆಚ್ಚಾಗುವುವು.ಆದುದರಿಂದ ಒಂದು ಸಂಖ್ಯೆಯವರು ಪುನಃ ಒಂದು ಸಂಖ್ಯೆಯವರನ್ನು ವಿವಾಹವಾಗಬಾರದೆಂದು ಈ ಶಾಸ್ತ್ರವು ವಿಚಾರಪೂರ್ವಕವಾಗಿ ಎಚ್ಚರಿಸುತ್ತದೆ. ಆರ್ಥಿಕ ಪರಿಸ್ಥಿತಿ ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿರಲಾರದು.ಯಾವಾಗಲೂ ಹಣಕ್ಕಾಗಿ ಕಷ್ಟಪಟ್ಟು ತಮ್ಮ ಕೊರತೆಗಳನ್ನು ನೀಗಿ,ಅವಶ್ಯಕತೆಗಳನ್ನು ಪೂರ್ತಿ ಮಾಡಿಕೊಳ್ಳಲಾರದೆ ಇರುವ ಪರಿಸ್ಥಿತಿಯು ಒದಗಿ ಬರುವುದು.ಸಮಯಕ್ಕೆ ಸಹಾಯವಾಗುವಂತೆ ಇವರ ಬಳಿ ಕೂಡಿಟ್ಟ ಹಣವು ಇರಲಾರದು;ಆದರೆ ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿ ಇರದಿದ್ದರೂ ದೈವಾನುಗ್ರಹವು ಸಂತೋಷಜನಕವಾಗಿದೆ.ಜೀವನದ ಉತ್ತರಾರ್ಧದಲ್ಲಿ ಇವರು ಒಂದು ರೀತಿಯಲ್ಲಿ ಸುಖಮಯವಾಗಿ ಜೀವನವನ್ನು ನಡೆಸುವರು.ಅಂದರೆ ಸುಮಾರು ೪೦ ವರ್ಷಗಳ ನಂತರ ಇವರ ಉದ್ಯೋಗದಲ್ಲಿ ,ವ್ಯಾಪಾರದಲ್ಲಿ ಸ್ಥಿರವಾಗಿ ನಿಂತು ಜೀವನವು ಸುಗಮವಾಗಿ ಸಾಗುವು ಅದುವರೆಗೆ ಜೀವನವು ಗಾಳಿಯಲ್ಲಿ ಸಿಕ್ಕಿದ ನೌಕೆಯಂತೆ ಅನಿಶ್ಚಿತವಾದ ದಾರಿಯಲ್ಲಿ ಸಾಗುವುದು. ದೇಹಾರೋಗ್ಯ ಒಂದು ಸಂಖ್ಯೆಯುಳ್ಲವರು ಆಹಾರದ ವಿಷಯದಲ್ಲಿ ಮುಂಜಾಗ್ರತೆಯುಳ್ಳವರಾಗಿರುತ್ತಾರೆ,ಆದುದರಿಂದ ಇವರಿಗೆ ಹೊಟ್ಟೆನೋವು ಮೊದಲಾದ ಕಾಯಿಲೆಯು ಬರುವುದಿಲ್ಲ.ಆದರೂ ಕೂಡ ಇವರುಗಳಿಗೆ ಹಲವುವೇಳೆ ಹೃದಯ ವೇದನೆಯಿಂದ ನರಳುವರು. ಅಲ್ಲದೆ ವಾತ,ಪಿತ್ತ,ಶ್ಲೇಷ್ಮ ಎಂಬ ತ್ರಿಧಾತುಗಳಲ್ಲಿ ಪಿತ್ತಕ್ಕೆ ಸಂಬಂಧಪಟ್ಟ ರೋಗಗಳು,ಉಷ್ಣಪ್ರಕೋಪವೂ ಇವರಿಗೆ ಆಗಾಗ ತಲೆದೋರುತ್ತದೆ.ಈ ಒಂದು ಸಂಖ್ಯೆಯವರಿಗೆ ದೃಷ್ಟಿದೋಷವೂ ಇರಬಹುದುದಾದರಿಂದ ಬಹುಮಂದಿ ಸಣ್ಣವಯಸ್ಸಿನಲ್ಲೇ ಕನ್ನಡಕಗಳನ್ನು ಹಾಕಿಕೊಳ್ಳಬೇಕಾದ ಸಮಯ ಬರಬಹುದು. ಉದ್ಯೋಗ ಮತ್ತು ವ್ಯಾಪಾರ ಒಂದು ಸಂಖ್ಯೆಯುಳ್ಳವರು ಉದ್ಯೋಗದಲ್ಲಿದ್ದರೆ ಆಫೀಸು ಮೇನೇಜರ್ ಅಥವ ಐ ಎ ಎಸ್ ನಂತಹ ದೊಡ್ಡ ಅಧಿಕಾರಿಯಾಗಿಯೋ ಧಾರ್ಮಿಕ ಸಂಸ್ಥೆಗಳಲ್ಲಿ ಟ್ರಸ್ಟಿಗಳಾಗಿಯೋ ದೊಡ್ಡ ಅಧಿಕಾರವುಳ್ಳ ಒಂದು ಪದವಿಯಲ್ಲಿದ್ದು ಅದನ್ನು ಚೆನ್ನಾಗಿ ನಿರ್ವಹಿಸುವವರಾಗಿ ಇರುವರು.ಇವರು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸರಕಾರದ ಉದ್ಯೋಗದಲ್ಲಿಯೋ ಅಥವ ಸರಕಾರದೊಂದಿಗೆ ನಿಕಟಸಂಬಂಧವನ್ನು ಇಟ್ಟುಕೊಂಡಿರುವ ಉದ್ಯೋಗದಲ್ಲಿಯೋ ಇರುತ್ತಾರೆ. ಸೂರ್ಯನ ಕಾಲ(ಸಮಯ) ಜುಲೈ ೨೨ರಿಂದ ಆಗಸ್ಟ್ ೨೨ ವರೆಗಿನ ಒಂದುತಿಂಗಳು ಕಾಲವು ಸೂರ್ಯನಿಗೆ ಸಂಬಂಧಪಟ್ಟ ಕಾಲವು. ಒಂದು ಸಂಖ್ಯೆಯುಳ್ಲವರು ಈ ಒಂದು ತಿಂಗಳ ಅವಧಿಯಲ್ಲಿ ಜನಿಸಿದವರಾಗಿದ್ದರೆ ಬಹಳ ಅದೃಷ್ಟಶಾಲಿಗಳಾಗಿ ಇರುತ್ತಾರೆ. ಭಾನುವಾರವು ಸೂರ್ಯನಿಗೆ ಸಂಬಂಧಪಟ್ಟದ್ದು. ಕಾಲ ಪರಿಮಾಣದಲ್ಲಿ ಆರುತಿಂಗಳು ಕಾಲವು ಸೂರ್ಯನಿಗೆ ಸೇರಿದೆ.ಸೂರ್ಯನು ಹಗಲಲ್ಲಿ ಶಕ್ತಿವಂತನಾಗಿರುತ್ತಾನೆ.ಈ ವಿಷಯಗಳನ್ನು ಒಂದು ಸಂಖ್ಯೆಯುಳ್ಳವರಿಗೆ ಅನ್ವಯಿಸಿಕೊಳ್ಳಬೇಕು. ಸೂರ್ಯನ ದಿಕ್ಕು ಮತ್ತು ಪ್ರದೇಶ ಸೂರ್ಯನ ದಿಕ್ಕುಪೂರ್ವ.ಪ್ರಾರ್ಥನಾ ಮಂದಿರ,ಭೋಜನಶಾಲೆ ಯಂತಹವು ಸೂರ್ಯನಿಗೆ ಸಂಬಂಧಪಟ್ಟ ಪ್ರದೇಶಗಳು.ಯಾವ ಕಾರ್ಯವನ್ನೂ ಯಾವ ಪ್ರಯಾಣವನ್ನೂ ಕೈಗೊಳ್ಳಬೇಕಾದರೂ ಪೂರ್ವಾಭಿಮುಖವಾಗಿ ಆರಂಭಿಸುವುದು ಉತ್ತಮ.ಕಾರ್ಯಾಲಯಗಳಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವುದರಿಂದ ಅಭಿವೃದ್ದಿಯುಂಟಾಗಿ ಪ್ರಭಾವವನ್ನು ಬೀರುವರು. ಅದೃಷ್ಟ ರತ್ನಗಳು ಸೂರ್ಯಗಹದ ಅನುಗ್ರಹ ಪಡೆಯಲು ಅಂದರೆ ಸೂರ್ಯ ಪ್ರೀತ್ಯರ್ಥವಾಗಿ ಮಾಣಿಕ್ಯ ಎಂಬ ಹೆಸರಿನ ರತ್ನವನ್ನು ಧರಿಸಿಕೊಳ್ಳಬೇಕೆಂದು ಹೇರ‍್ಳಿದೆ.ಮಾಣಿಕ್ಯವು ಸಿಗುವುದು ಕಷ್ಟಸಾಧ್ಯವಾದುದರಿಂದ ಅರಿಸಿನ ಬಣ್ಣದ ಕಾಂತಿಯುಳ್ಳ ವಜ್ರವನ್ನು ಉಂಗುರದಲ್ಲಿಆಗಲಿ ಸರದಲ್ಲಾಗಲಿ ಇಟ್ಟು ಧರಿಸುವುದರಿಂದ ಇಚ್ಚಿಸಿದ ಎಲ್ಲಾ ಕಾರ್ಯಗಳು ನೆರೆವೇರುವುದು ಮತ್ತು ಆರೋಗ್ಯ ಉತ್ತಮವಾಗುವುದು,ತಾಮ್ರ ಲೋಹವು ಸೂರ್ಯನಿಗೆ ಸಂಬಂಧಪಟ್ಟ ಲೋಹವಾಗಿದೆ. ಅದೃಷ್ಟದ ವರ್ಣ(ಬಣ್ಣ) ಸಂಜೆಯ ಸೂರ್ಯನ ಕಾಂತಿಯಂತೆ ಹಳದಿ,ಕೆಂಪು ಮಿಶ್ರವಾದ ವರ್ಣವೇ ಸೂರ್ಯಗ್ರಹದ ವರ್ಣವು.ಆದುದರಿಂದ ಈ ಬಣ್ಣದ ವಸ್ತ್ರಾಭರಣಗಳನ್ನು ಧರಿಸಿದರೆ ಕಾರ್ಯದಲ್ಲಿ ಜಯವಾಗುವುದು. ಅನುಕೂಲದಿನಾಂಕಗಳು ಒಂದು ಸಂಖ್ಯೆಯವರಿಗೆ ಎಲ್ಲಾ ತಿಂಗಳಲ್ಲಿಯೂ ೧,೪,೧೦.೧೯.೨೨,೨೮(೧,೪) ಈ ದಿನಾಂಕಗಳು ಬಹಳ ಅನುಕೂಲಕರವಾಗಿರುವುವು. ಯಾವುದೇಕಾರ್ಯ ಆರಂಭಿಸಲು ಈ ದಿನಾಂಕಗಳು ಸೂಕ್ತ. ಅನಾನುಕೂಲದಿನಾಂಕಗಳು(ಪ್ರತಿಕೂಲದಿನಾಂಕಗಳು) ಎಲ್ಲ ತಿಂಗಳಲ್ಲಿನ ೮,೧೭,೨೬ ಈ ದಿನಾಂಕಗಳು ಅನಾನುಕೂಲವಾದವು.(೮) ಸಂಖ್ಯೆಯು ಅನಾನುಕೂಲ ವಾಗಿರುತ್ತದೆ ಆದುದರಿಂದ ಈ ದಿನಾಂಕದಲ್ಲಿ ಯಾವುದೇ ಶುಭಕಾರ್ಯಾರಂಭಮಾಡಬಾರದು. ಗ್ರಹಪ್ರೀತಿ ಒಂದು ಸಂಖ್ಯೆಯವರು ಸೂರ್ಯನ ತೃಪ್ತಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಾರಾಯಣವನ್ನು ಮಾದಬೇಕು.ಅದರಿಂದ ಆರೋಗ್ಯಭಾಗ್ಯವೂ ಇಷ್ಟಾರ್ಥ ಸಿದ್ದಿಯು ಉಂಟಾಗುತ್ತದೆ. ಎರಡು ಸಂಖ್ಯೆ ೨ ೨,೧೧,೨೦,೨೯ ದಿನಾಂಕದವರು ೨ಮೂಲಾಕ್ಷರಕ್ಕೆ ಬರುತ್ತಾರೆ.ಈ ಎರಡು ಸಂಖ್ಯೆಗೆ ಅಧಿಪತಿ ಚಂದ್ರ ನಾಗಿದ್ದಾನೆ ಸೂರ್ಯನು ಆತ್ಮ ಕಾರಕನಾದರೆ ಚಂದ್ರನು "ಚಂದ್ರಮಾಮನಸೋಜಾತ"ನಾಗಿದ್ದಾನೆ. ರೂಪ ಆಕಾರ ಇವರಲ್ಲಿ ಹಲವರು ಒಳ್ಳೆಯ ರೂಪ ಶರೀರ ಹೊಂದಿ ಆಕರ್ಷಕವಾದ ಸೌಂದರ್ಯದವರಾಗಿರುತ್ತಾರೆ.ದೇಹಕ್ಕೆ ತಕ್ಕ ಎತ್ತರವೂ ಇವರಿಗಿರುತ್ತದೆ.ಚಿಕ್ಕಕಿವಿಗಳು,ಸುಂದರವಾದ,ಗುಂಡಾದ ನೇತ್ರಗಳು,ದಪ್ಪವಾದ ತುಟಿಗಳು,ನಯವಾದ ಕೂದಲು,ಮುಂದೆಬಂದಿರುವ ಉದರ ಇವೆಲ್ಲವುಗಳೂ ಎರಡು ಸಂಖ್ಯೆಯವರೆಂಬುದನ್ನು ವ್ಯಕ್ತಪಡಿಸುತ್ತದೆ. ಗುಣ-ನಡತೆ ಚಂಚಲವಾದ ಮನಸ್ಸುಳ್ಳವರು,ಸದಾಸಂದೇಹಸ್ವಬಾವದವರು ಆಗಿರುವರು.ಆದುದರಿಂದ ಯಾವ ಕಾರ್ಯವನ್ನು ಮಾಡಬೇಕಾದರೂ ಮೊದಲು ಚೆನ್ನಾಗಿ ಯೋಚಿಸಿ,ನಂತರ ನಿಧಾನವಾಗಿ ಕಾರ್ಯಗತರಾಗಬೇಕೆಂಬ ಗುಣವು ಇವರಲ್ಲಿರಲಾರದು ಪ್ರತಿಯೊಂದು ವಿಚಾರದಲ್ಲೂ ಅವಸರಪಟ್ಟು ಪ್ರವೇಶಿಸಿ ನಂತರ ಅದನ್ನು ಕೈ ಬಿಡುವುದು ಇವರ ಗುಣ.ತಾವಾಗಿಯೇ ನಿರ್ಣಯಿಸಿ ಆಮೇಲೆ ನಿಧಾನವಾಗಿ ಕಾರ್ಯದಲ್ಲಿ ಪ್ರವರ್ತಿಸುವ ಸ್ವಭಾವವು ಇವರಲ್ಲಿ ಇಲ್ಲದಿದ್ದರೂ ಇತರರೌ ಹೇಳುವ ಆಲೋಚನೆಗಾದರೂ ಕಿವಿಗೊಟ್ಟು ಅವರು ಹೇಳುವ ದಾರಿಯಲ್ಲಿ ಕೆಲಸಮಾಡಿಕೊಳ್ಳಬಹುದು,ಆದರೆ ಇವರು ಪರರನ್ನು ನಂಬಿಯೂ ನಂಬದೆಯೂ ಇರುವಸ್ವಬಾವವುಳ್ಳವರಾಗಿ ಕಂಡುಬರುತ್ತಾರೆ ಇದು ಇವರ ಸಹಜ ಗುಣ. ತಮ್ಮ ಕೆಲಸಗಳನ್ನು ಬದಿಗೆ ಸರಿಸಿ ಪರರಿಗೆ ತಮ್ಮಿಂದ ಏನಾದರೂ ಉಪಕಾರ ಮಾಡಲು ಸಾದ್ಯವಿದೆಯೇ ಎಂಬಯೋಚನೆಯಲ್ಲಿಯೇ ಇರುತ್ತಾರೆ.ಪ್ರಾಪಂಚಿಕ ವಿಷಯದ ಚಿಂತನೆಗಿಂತ ಆಧ್ಯಾತ್ಮಿಕ ವಿಷಯವಾದ ಪಿಪಾಸೆಯೇ ಅಧಿಕವಾಗಿರುವುದು ಆಧ್ಯಾತ್ಮಿಕ ಚರ್ಚೆಯನ್ನು ಮಾಡುವಾಗ ಇವರಿಗೆ ಸಮಯವು ಕಳೆದುದೇ ತಿಳಿಯದು ತಮ್ಮ ಸಮಸ್ಯೆಗಳನ್ನು ಬೇರೆಯವರಿಗೆ ಸಿಲುಕಿಸಿ ತಾವು ತಪ್ಪಿಸಿಕೊಳ್ಳುವ ಸ್ವಪ್ನಕಾಣದೆ ಏಕಾಂತದಲ್ಲಿ ತಾವೇ ಸ್ವತಃ ಚಿಂತಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅಭ್ಯಾಸ ವುಳ್ಳವರು. ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸುವ ಜೊತೆಗೆ ಈಜುವುದರಲ್ಲಿಯೂ ಅಭಿರುಚಿಯುಳ್ಳವರು,ಇವರಿಗೆ ಸ್ವಬಾವಿಕವಾಗಿರುವ ಮುಂಗೋಪವು,ಅವಸರದಲ್ಲಿ ಆರಂಭಿಸುವ ಕೆಲಸವೂ ಇವರು ಕೈಗೊಳ್ಳುವ ಕಾರ್ಯಗಳಲ್ಲಿ ಜಯಶೀಲರಾಗಲು ಭಾದಕವಾಗಬಹುದು.ಜೀವನದ ತೊಡಕುಗಳಲ್ಲಿ ನೊಂದು-ಬೆಂದು ಹೋಗಿರುವ ಎರಡು ಸಂಖ್ಯೆಯವರು ಕೆಲವರು ಜಲಸಮಾಧಿಗೆ ಶರಣು ಹೋಗುವುದೂ ಇದೆ. ಸ್ವತಂತ್ರವಾಗಿ ಜೀವಿಸುವುದರಲ್ಲಿ ನಂಬಿಕೆ ಸಾಲದುದರಿಂದ ಇತರರ ಅಧೀನದಲ್ಲಿ ಸೇವಕರಾಗಿ,ಇರುವುದಕ್ಕೂ ಸಿದ್ದರಾಗಿ ಕಾಲತಳ್ಳುವಸ್ವಭಾವ ಇವರ ಸಹಜಗುಣ. ಭೂತ,ಪಿಶಾಚಿಗಳೆಂದರೆ ಇವರಿಗೆ ಭಯಜಾಸ್ತಿ,ಎರಡುಸಂಖ್ಯೆಯ ಸ್ತ್ರೀಯರು ಬಹಳ ಹೇಡಿಗಳು ಸ್ವಲ್ಪಗದರಿಸಿದರೂ ಭಯಬೀತರಾಗುವರು ಹಸಿರು ಬಣ್ಣಗಳುಳ್ಳ ವಸ್ತುಗಳನ್ನು,ವಸ್ತ್ರಆಭರಣಗಳನ್ನೂ ಉಪಯೋಗಿಸುವುದೆಂದರೆ ಇವರಿಗೆ ಪ್ರೀತಿ,ಹೆಮ್ಗಸರು ಹೆಚ್ಚಾಗಿ ಸೌಂದರ್ಯ ವೃದ್ದಿಗಾಗಿ ಸಮಯ ಕಳೆಯುತ್ತಾರೆ. ಗೃಹಸ್ಥ ಜೀವನ ಇವರ ಸಾಂಸಾರಿಕ ಜೀವನ ಸುಖವಾಗಿರುತ್ತದೆ,ಇಅವರು ಜನಿಸಿದ ದಿನಾಂಕ,ತಿಂಗಳು,ವರ್ಷಗಳ ಸಮಷ್ಟಿ ಸಂಖ್ಯೆಯು ಎರಡು ಆಗಿರುವುದರಿಂದ ೩,೫,೮ ಸಮಷ್ಟಿ ಸಂಖ್ಯೆಯುಳ್ಳವರನ್ನು ವಿವಾಹ ಮಾಡಿಕೊಂಡರೆ ದಾಂಪತ್ಯ ಜೀವನವು ಬಹಳ ಆನಂದವಾಗಿರುತ್ತದೆ,ಅಲ್ಲದೆ ೨೫ರಿಂದ ೩೦ವರ್ಷಗಳ ನಡುವೆ ಮದುವೆ ಮಾಡಿಕೊಂಡರೆ ಒಳ್ಳೆಯದು,ಪ್ರೇಮವ್ಯವಹಾರದಲ್ಲಿ ಇವರಿಗೆ ಶತಪ್ರತಿಶತ ಜಯವೇ ಲಭಿಸುವುದು. ಆರ್ಥಿಕ ಪರಿಸ್ಥಿತಿ ಚಂದ್ರನಿಗೆ,ಶುಕ್ಲಪಕ್ಷ,ಕೃಷ್ಣಪಕ್ಷ ಇರುವಂತೆ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಸಹಜವಾಗಿರಿತ್ತದೆ ಆದರೆ ಇವರು ನಡೆಸಿಕೊಂಡು ಬರುವ ವ್ಯಾಪಾರವು ಇವರಿಗೆ ಲಾಭದಾಯಕವಾಗಿಯೇ ಇರುವುದು. ದೇಹಾರೋಗ್ಯ ಎರಡು ಸಂಖ್ಯೆಯವರಿಗೆ ಉದರಕ್ಕೆ ಸಂಬಂಧಪಟ್ಟ ವ್ಯಾಧಿಗಳು ಆಗಾಗ್ಗೆ ಭಾದಿಸುತ್ತವೆ,ಕೆಲವರಿಗೆ "ಗನೇರಿಯಾ"ದಂತಹ ರೋಗವು ಬರಬಹುದು.ಕೆಲವರಿಗೆ ಮನೋವ್ಯಾಧಿಯು ಭಾದಿಸುವುದು ಆದುದರಿಂದ ದುಃಖಕರವಾದ ಸಮಾಚಾರವನ್ನು ಇಂಥವರಿಗೆ ಹೇಳದೇ ಇರುವುದೇ ಉತ್ತಮವಾದುದು.ಒಂದು ವೇಳೆ ಹೇಳಿದರೂ ನಿಧಾನವಾಗಿ ಗಾಬರಿಯಾಗದಂತೆ ಹೇಳಬೇಕು.ಚಂದ್ರಗ್ರಹವು ತಂಪಾದ ಗ್ರಹವಾದ್ದರಿಂದ ಇವರಿಗೆ ಶೈತ್ಯ ಸಂಬಂದವಾದ ವ್ಯಾಧಿಗಳು ಹೆಚ್ಚಾಗಿ ಬರಬಹುದು.ಚಂದ್ರಗ್ರಹವು ಕೆಲವರಿಗೆ ದುರ್ಬಲವಾಗಿರುವುದು ಅಂತಹವರಿಗೆ ಜಲಗಂಡಾಂತರವು ಬರುವ ಸಂಬವ ವಿರುತ್ತದೆ.ಅಂಗೈಯಲ್ಲಿರುವ ಚಂದ್ರನ ಸ್ಥಾನದಲ್ಲಿ ವಲಯದಂತಿರುವ ರೇಖೆಗಳಿದ್ದರೆ ಜಲಸಮಾಧಿಯನ್ನು ತಪ್ಪಿಸಲು ಸಾಧ್ಯವಿಲ್ಲ.ಆದುದರಿಂದ ಇವರು ನೀರಿನ ಬಳಿ ಜಾಗೃತರಾಗಿರುವುದೇ ಲೇಸು. ಉದ್ಯೋಗ ಮತ್ತು ವ್ಯಾಪಾರ ಈ ಸಂಖ್ಯೆಯವರು ಹಲವರು ವ್ಯಾಪಾರವನ್ನೇ ಮಾಡಿಕೊಂಡಿರುವರು.ಇತರರೊಡನೆ ಪಾಲುಗಾರರಾಗುದು ಇವರಿಗೆ ಸರಿಯಾಗುವುದಿಲ್ಲ ಆದುದರಿಂದ ಪ್ರತ್ಯೇಕವಾಗಿ ವ್ಯಾಪಾರ ನಡೆಯಿಸುವುದೇ ಇವರಿಗೆ ಲಾಭದಾಯಕವಾಗಿರುವುದು.ವಸ್ತ್ರದಗಿರಣಿ ಮತ್ತು ಕಾರ್ಖಾನೆಗಳು ನಡೆಯಿಸುವುವರು,ಪರಿಮಳ ದ್ರವ್ಯಗಳನ್ನು ತಯಾರುಮಾಡುವವರು ಹಲವರು ಇರುವರು. ಉದ್ಯೋಗಗಳಲ್ಲಿ ಕೆಲವರು ಸರ್ಕಾರದ ಕೆಲಸಗಳಲ್ಲಿ ದೊಡ್ಡಪದವಿಯನ್ನು ಅಲಂಕರಿಸಬಹುದು.ಅವರು ಅದಕ್ಕೆ ಯೋಗ್ಯವಾದ ಸಂಬಳದೊಂದಿಗೆ ಕೆಲಸದ ಆಳುಗಳು,ಸೇವಕರು ಮೊದಲಾದವರೊಡನೆ ಆಡಂಬರದ ಜೀವನ ನಡೆಸುವರು. ಇವರು ಸೊಗಸಾದ ಕವಿತೆಗಳನ್ನು ಇಂಪಾದ ಹಾಡುಗಳನ್ನು ರಚಿಸುವವರೂ ಹರಿಕಥೆಗಳನ್ನು ಮಾಡುವವರು,ಪುರಾಣ ಪುಣ್ಯಪ್ರವಚನಗಳನ್ನು ಹೇಳುವವರು ಈ ಎರಡು ಸಂಖ್ಯೆಯಲ್ಲಿ ಜನಿಸಿದವರಾಗಿರುತ್ತಾರೆ. ಚಂದ್ರಬಲವಿಲ್ಲದ ಈ ಎರಡು ಸಂಖ್ಯೆಯವರು ಕೆಲವರು ಮನೆಕೆಲಸ ಮಾಡುವ ಸೇವಕರಾಗಿಯೋ,ದೋಣಿ,ಹಡಗು ನಡೆಸುವರಾಗಿಯೋಮಿಡ್ ವೈಫ್-ನರ್ಸ್ಗಳಾಗಿಯೋ ಕೆಲಸಮಾಡುತ್ತಾರೆ.ಅಲ್ಲದೆ ಕೆಲವರು ಲೋಕಸಂಚಾರ ಮಾಡಿಬರಬೇಕೆಂಬ ಉತ್ಸಾಹದೊಂದಿಗೆ ದೇಶಾಟನೆ ಮಾಡುವವರು ಇರುತ್ತಾರೆ. ಚಂದ್ರನ ಕಾಲ ಜೂನ್ ೨೧ರಿಂದ ಜುಲೈ ೨೨ಈ ವೇಳೆಯಲ್ಲಿ ೨,೧೧.೨೯ಈ ದಿನಾಂಕಗಳಲ್ಲಿ ಸೋಮವಾರ,ಶುಕ್ರವಾರ ಜನಿಸಿದವರಿಗೆ ವಿಶೇಷವಾಗಿ ಚಂದ್ರ ಬಲಶಾಲಿಯಾಗಿರುತ್ತಾನೆ ಅಂತವರು ತುಂಬಾ ಹೆಸರುವಾಸಿಯಾದ(ಪ್ರಖ್ಯಾತಿಹೊಂದಿ) ವ್ಯಕ್ತಿಗಳಾಗಿ ಬಾಳುತ್ತಾರೆ, ಚಂದ್ರನ ದಿಕ್ಕು-ಪ್ರದೇಶ ಉತ್ತರದಿಕ್ಕು,ಏರಿಗಳು,ಕೊಳಗಳು,ಬಾವಿಗಳು,ಸ್ನಾನಗೃಹಗಳು,ಶೀತಪ್ರದೇಶಗಳು ಎರಡು ಸಂಖ್ಯೆಯವರಿಗೆ ಉತ್ತರದಿಕ್ಕಿಗೆ ಪ್ರಯಾಣ,ಯಾವುದೇಕಾರ್ಯರಂಭವನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಿದರೆ ಒಳ್ಳೆಯದು,ಕಛೇರಿಯಲ್ಲಿ ಉತ್ತರಾಭಿಮುಖವಾಗಿ ಕುಳಿತುಕೊಳ್ಳುವುದು ಒಳ್ಳೆಯ ಪ್ರಭಾವಮತ್ತು ಜಯವನ್ನು ತರುತ್ತದೆ. ಅದೃಷ್ಟದ ರತ್ನ ಮುತ್ತು ಇಲ್ಲವೇ ಚಂದ್ರಕಾಂತಮಣಿ ಧರಿಸಿದರೆ ಚಂದ್ರನ ಲೋಹವಾದ ಬೆಳ್ಳಿಯಲ್ಲಿ,ಗ್ರಹಪೀಡೆ,ಶತೃಭಾದೆ,ಋಣಭಾದೆ,ನಿವಾರಣೆಯಾಗುತ್ತದೆ. ಅದೃಷ್ಟದ ವರ್ಣ ಬಿಳಿ,ಎಲೆ ಹಸಿರು ಈ ಬಣ್ಣಗಳ ವಸ್ತ್ರ,ಆಭರಣಗಳನ್ನು ಧರಿಸಿದರೆ ಶುಭ. ಅನುಕೂಲದಿನಾಂಕಗಳು:- ೨,೭,೧೧,೨೦,೨೫,೨೯(೨,೭)ಶುಭವಾದವು. ಅನಾನುಕೂಲದಿನಾಂಕಗಳು:-೪,೮,೯,೧೮,೨೭(೪,೮,೯) ಗ್ರಹಪ್ರೀತಿಗೆ:- ಸೋಮವಾರ ವ್ರತ,ದುರ್ಗಾಪೂಜೆ,ಸ್ತೋತ್ರ ಪಾರಾಯಣ,ಅಥವ ಲಕ್ಷ್ಮಿಸ್ತೋತ್ರ,ಪಾರಾಯಣ ಮಾಡಿದರೆ ಸೂಕ್ತ. ಮೂರು ೩ ೩,೧೨,೨೧,೩೦ ದಿನಾಂಕದವರಿಗೆ ಗುರು ಅಧಿಪತಿ ಆಗಿರುತಾರೆ. ರೂಪಮತ್ತು ಆಕಾರ ಈ ಸಂಖ್ಯೆಯವರು ಸಾದಾರಣ ಎತ್ತರವುಳ್ಳವರಾಗಿದ್ದು ಗಾಂಭೀರ್ಯವು ಮುಖದಲ್ಲಿ ಕಂಡುಬರುವುದು,ಗುಂಡಾಗಿ ಎತ್ತರವಾಗಿರುವ ಹಣೆಯವರು,ಪ್ರಾಯಶಃ ಬೆಕ್ಕಿನಕಣ್ಣು ಇಅರುತ್ತದೆ.ಇವರ ನೋಟದಲ್ಲೇ ಪ್ರಜ್ಞೆಯು ಕಂಡುಬರುತ್ತದೆ ಇವರಿಗೆ ಹೆಚ್ಚು ಕೂದಲು ಇರಲಾರದು ಇರುವಕೂದಲಿ ಸಹ ಕೆಂಚುಬಣ್ಣದಲ್ಲಿರುವುದು,ವಿಶಾಲವಾದ ಎದೆಯು,ಆಕರ್ಷಕವಾದ ಶರೀರವು ಇವರಿಗಿರುತ್ತದೆ. ಗುಣ ನಡತೆ ಒಳ್ಳೆಯ ನಡತೆಯವರು,ಆತ್ಮಚಿಂತಕರು.ಸ್ವತಂತ್ರ ಮನೋಭಾವದವರು,ಕರುಣಿಗಳು ಪರದುಃಖ ಕಾತರತೆ ಇವರಲ್ಲಿ ಹೆಚ್ಚಾಗಿರುವುದು ಪರಾದೀನತೆಯಲ್ಲಿರುವುದಾಗಲೀ ಇತರರ ಅಭಿಪ್ರಾಯದಂತೆ ನಡೆಯುವುದಾಗಲೀ ಇವರಿಗೆ ಹಿಡಿಸದು ಪಾಲಿಟಿಕ್ಸ್ ಗಿಂತ ಪಾರಮಾರ್ಥಿಕವೇ ಬಲು ಇಷ್ಟ ನೀತಿ ನಿಯಮಗಳ ಮೇಲೂ ಸದಾ ಮನಸ್ಸಿರುತ್ತದೆ,ದೃಢಮನಸ್ಸಿನವರಾಗಿರುತ್ತರೆ.ಇವರಿಗೆ ಹೆಚ್ಚಿನ ಶ್ರಮ,ಕಷ್ಟ ಬರಲಾರದು.ಬಂದರೂ ಹೆಚ್ಚು ಸಮಯ ಇರಲಾರದು. ಬಂದೊದಗಿದ ಸುಖ ದುಃಖವನ್ನು ಸಮನಾಗಿ ಎದುರಿಸಲು ಸಮರ್ಥರಾಗಿರುವರು,ಧರ್ಮ ಕಾರ್ಯಗಳಲ್ಲಿ,ಧಾರ್ಮಿಕ ಸಂಸ್ಥೆಗಳ ನಿರ್ವಾಹಕ ಕಾರ್ಯವೆಂದರೂ ಇವರಿಗೆ ತುಂಬಾ ಇಷ್ಟ.ಆದುದರಿಂದ ಇವರಲ್ಲಿ ಕೆಲವರು ಧರ್ಮಸಂಸ್ಥೆಗಳಿಗೆ ಅಧಿಕಾರಿಗಳಾಗಿ ಇರಬೇಕಾದ ಸಂದರ್ಭವು ಒದಗಿಬರುವುದು. ಕೆಲವರು ಪರಸ್ಪರ ಆಸ್ತಿಯ ವಿಷಯವಾಗಿಯೋ ಅಥವ ಬೇರೆಯಾವುದಾರರೂ ಕಾರಣದಿಂದಲೋ ಜಗಳವಾಡಿಕೊಂಡು ತೀರ್ಮಾನಮಾಡಿಕೊಳ್ಳಲು ಸಾದ್ಯವಾಗದಿದ್ದಾಗ ಆ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಇವರನ್ನು ಮಧ್ಯಸ್ಥರಾಗಿ ಇರುವಂತೆ ಪ್ರಾರ್ಥಿಸುತ್ತಾರೆ.ಇವರೂ ಸಹ ಅವರಿಗೆ ಸಮಾದಾನಕರವಾಗುವಂತೆ ನಿರ್ಣಯಿಸುವ ಸಾಮರ್ಥ್ಯವುಳ್ಳವರು.ಪುರಾಣಪುಣ್ಯಕತೆಗಳು,ಹರಿಕಥಾಕಲಾಕ್ಷೇಪಗಳು ಮೊದಲಾದವು ಎಂದರೆ ಇವರಿಗೆ ತುಂಬಾಪ್ರೀತಿ.ಇವರಲ್ಲಿ ಕೆಲವರು ಪ್ರಸಿದ್ದ ಲೇಖಕರಾಗಿಯೋ ಶ್ರೇಷ್ಟ ಕಲಾವಿದರಾಗಿಯೋ ಪ್ರಕಾಶಿಸುವರು. ಗೃಹಸ್ಥಜೀವನ ಪ್ರೇಮವ್ಯವಹಾರದಲ್ಲಿ ಇವರಿಗೆ ಸಂಪೂರ್ಣ ಜಯವೆಂದು ಹೇಳಲು ಬರುವುದಿಲ್ಲ,ಕೆಲವುಕಾಲ ಜಯವು,ಮತ್ತೆ ಕೆಲವುಕಾಲ ಅಪಜಯವು ಇರುತ್ತದೆ.ಇವರಿಗೆ ಪತ್ನಿಯಾಗಿ ಬರುವವಳು ಸುರದ್ರೂಪಿಯೂ,ಸದಾಚಾರ ಸಂಪನ್ನಳೂ,ಸುಶೀಲೆಯೂ ಆಗಿರುವಳು.ಅನುಕೂಲವಾದ ಗೃಹಸ್ಥಜೀವನವೆಂದು ಹೇಳಬಹುದು.೬,೮.೯ ಸಂಖ್ಯೆಯುಳ್ಳವರನನ್ನೋ ಅಥವ ವಧುವನ್ನೋ ವರಿಸಿದರೆ ಈ ಸಂಖ್ಯೆಯವರ ದಾಂಪತ್ಯಜೀವನವು ಸುಖಕರವಾಗುವುದೆಂದು ತಿಳಿಯಬೇಕು. ಆರ್ಥಿಕ ಪರಿಸ್ಥಿತಿ ಇವರುಗಳ ಆರ್ಥಿಕ ಪರಿಸ್ಥಿತಿ ತುಂಬಾ ತೃಪ್ತಿಕರವಾಗಿರುವುದು.ಇವರಲ್ಲಿ ಕೆಲವರು ಆಗರ್ಭ ಶ್ರೀಮಂತರಾಗಿಯೇ ಜನಿಸಿರುವುದರಿಂದ ಬಾಲ್ಯಕಾಲದಿಂದಲೂ ಜೀವನವೆಲ್ಲಾ ಯಾವಕೊರತೆ ಇಲ್ಲದೆ ಸಂಸಾರವು ಸುಖಮಯವಾಗಿರುವುದು. ತಮ್ಮದು-ಪರರದು ಎಂಬ ಭೇಧ-ಬಾವವಿಲ್ಲದೆ ಇವರಬಳಿ ಯಾವಾಗಲೂ ಹಣದ ಚಲಾವಣೆಯು ಆಗುತ್ತಲೇ ಇರುತ್ತದೆ.ಕಷ್ಟಪಟ್ಟು ಸಂಪಾದಿಸಬೇಕೆಂಬ ಯೋಚನೆಯುಳ್ಳವರಾದರೂ ಕೆಲವು ಸಮಯದಲ್ಲಿ ರೇಸು,ಲಾಟರಿ ಮೊದಲಾದವುಗಳ ಮೂಲಕ ಇವರಿಗೆ ಆದಾಯವು ಇರುವುದು. ದೇಹಾರೋಗ್ಯ:- ಶರೀರದಲ್ಲಿ ರಕ್ತ,ಜೀರ್ಣಕೋಶ ಇವುಗಳು ಬೃಹಸ್ಪತಿಗೆ ಸೇರಿದ ಭಾಗಗಳು ಇವರಿಗೆ ಬರಬಹುದಾದ ಕಾಯಿಲೆಗಳು ಅರಿಸಿನಕಾಮಾಲೆ,ನರಗಳ ದುರ್ಬಲತೆ,ಮೊಣಕಾಲಿಗೆ ವಾತ ಪ್ರಕೋಪ ಮೊದಲಾದವುಗಳು,ಶೀತ ಪ್ರದೇಶದ ಜಲವಾಯು ಇವರಿಗೆ ಹೊಂದಿಕೊಳ್ಳಲಾರದು.ಸಕಾಲಬೋಜನ,ಶರೀರವ್ಯಾಯಾಮ ಮಾಡುತ್ತಿದ್ದರೆ ಇಂತಹ ರೋಗಗಳನ್ನು ತಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಚರ್ಮರೋಗಗಳಿಂದ ಕಷ್ಟಪಡುವವರೂ ಕೆಲವರು ಈ ಮೂರುಸಂಖ್ಯೆಯಲ್ಲಿ ಬರುತ್ತಾರೆ, ಉದ್ಯೋಗ ವ್ಯಾಪಾರ:- ಮುಖ್ಯವಾಗಿ ೩ಸಂಖ್ಯೆಯವರು ನ್ಯಾಯಾದೀಶರು,ವಕೀಲರುಗಳಾಗಿ ಕಾನೂನಿನ ಕಾರ್ಯಗಳಾಲ್ಲಿ ನಿರತರಾಗಿರುವರು.ಕೆಲವರು ಬ್ಯಾಂಕಿನಲ್ಲಿಯೂ ಉದ್ಯೋಗಸ್ಥರಾಗಿರುವರು,ಅಲ್ಲದೆಕೆಲವರು ಪುರಾಣಪ್ರವಚನಗಳ್ಯ್,ಹರಿಕಥಾ ಕಲಾಕ್ಷೇಪಗಳ್ಯ್ ಮೊದಲಾದವನ್ನು ಮಾಡಿಕೊಂಡು ಜೀವನವನ್ನು ನಡೆಸುವರು.ಧಾರ್ಮಿಕ ಸಂಸ್ಥೆಗಳಲ್ಲಿ ದೇವಾಲಯಗಳಲ್ಲಿಯೂ ಕಾರ್ಯಗಳನ್ನು ನಿರ್ವಹಿಸುವವರಾಗಿ ಇರುವರು.ಇವರು ತಮ್ಮ ಕೆಲಸವನ್ನು ಒಳ್ಳೆಸಾಮರ್ಥ್ಯದಿಂದ ತೃಪ್ತಿಕರವಾಗಿ ಮಾಡುವರು ಕೆಲವರು ಪ್ರಭುತ್ವದಲ್ಲಿ ಶೇಷ್ಟವಾದ ಉದ್ಯೋಗದಲ್ಲಿರುವರು.ಅಂತವರೂ ಸಹ ತಮ್ಮ ಕರ್ತ್ಯವ್ಯವನ್ನು ಚೆನ್ನಾಗಿ ನೆರವೇರಿಸುವವರಾಗಿರುವರು. ಜ್ಯೋತಿಷ್ಯ ಎಂಬ ವಿದ್ಯೆಗೆ ಅಧಿದೇವತೆಯೇ ಗುರು.ಆದುದರಿಂದ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇವರಿಗೆ ಜ್ಯೋತಿಷ್ಯವಿದ್ಯೆಯ ಅಭಿರುಚಿ ಇರುವುದು.ಇವರಲ್ಲಿ ಕೆಲವರು ಜ್ಯೋತಿಷ್ಯದಿಂದಲೇ ಜೀವನವೃತ್ತಿಯನ್ನು ಕಲ್ಪಿಸಿಕೊಳ್ಳುವರು. ಗುರುವಿನ ಕಾಲ ಫೆಬ್ರವರಿ ೧೯ರಿಂದಮಾರ್ಚ್ ೨೦ ಮತ್ತು ನವೆಂಬರ್೨೨ರಿಂದ ಡಿಸೆಂಬರ್೨೧ರವರೆಗೆ ಈ ಸಮಯದಲ್ಲಿ ೩,೧೨,೨೧,೩೦ಈ ದಿನಾಂಕಗಳಲ್ಲಿ ಗುರುವಾರ ದಂದು ಜನಿಸಿದವರು ವಿಶೇಷ ವ್ಯಕ್ತಿಗಳಾಗುತ್ತಾರೆ ಸದಾಕಾಲ ಗುರುವು ಶುಭನಾಗಿರುತ್ತಾನೆ. ಗುರುವಿನ ದಿಕ್ಕುಮತ್ತು ಪ್ರದೇಶ ಬೃಹಸ್ಪತಿಗೆ ಈಶಾನ್ಯಮೂಲೆ ಉತ್ತಮವಾದುದು.ದೇವಾಲಯಗಳು,ಪ್ರಾರ್ಥನಾಗೃಹಗಳು,ನ್ಯಾಯಸ್ಥಾನಗಳು,ಜ್ಞಾನಪೀಠಗಳು ಮೊದಲಾದವುಗಳು ಬೃಹಸ್ಪತಿಗೆ ಸೇರಿದವುಗಳಾಗಿವೆ. ಅದೃಷ್ಟ ರತ್ನ:- ಗುರುವಿಗೆ ಸಂಬಂಧ ಪಟ್ಟ ರತ್ನ ಪುಷ್ಯರಾಗ(ಕನಕಪುಷ್ಯರಾಗ) ಇದನ್ನು ಬಂಗಾರದಲ್ಲಿ ಸೇರಿಸಿ ಧರಿಸಿದರೆ ಸರ್ವತೋಮುಖ ಜಯವು ಹುಡುಕಿಕೊಂಡು ಬರುವುದು. ಅದೃಷ್ಟ ವರ್ಣ(ಬಣ್ಣ) ಗುರುವಿಗೆ ಹಳದಿ,ಹಾಗು ಬಂಗಾರದ ಬಣ್ಣದ ವಸ್ತ್ರ,ಆಭರಣಗಳನ್ನು ಧರಿಸುವುದು ಶುಭತರುತ್ತದೆ. ಅನುಕೂಲದಿನಾಂಕಗಳು:-೨,೩,೭,೯,೧೨,೧೮,೨೦,೨೧,ಈ ದಿನಾಂಕಗಳಲ್ಲಿ ಯಾವುದೇ ಕೆಲಸಗಳನ್ನು ಆರಂಭಿಸಿದರೂ ಅದರಲ್ಲಿ ಜಯ ಉಂಟಾಗುತ್ತದೆ. ಅನಾನುಕೂಲದಿನಾಂಕಗಳು:-೬,೧೫,೨೪ಈದಿನಾಂಕಗಳಲ್ಲಿ ಯಾವುದೇ ಹೊಸಕಾರ್ಯವನ್ನು ಆರಂಭಿಸದೇ ಇರುವುದು ಉತ್ತಮ. ಗ್ರಹಪ್ರೀತಿ:- ಗುರುವಾರ ಕಡಲೆದಾನ,ಪುಷ್ಯರಾಗ ಧಾರಣೆ,ಶ್ರೀಮದ್ ರಾಮಾಯಣ ಪಾರಾಯಣ,ದಕ್ಷಿಣಾಮೂರ್ತಿ ಸ್ತೋತ್ರ ಪಾರಾಯಣವನ್ನು ಮಾಡುತ್ತಾ ಬಂದರೆ ಉತ್ತರೋತ್ತರ ಅಭಿವೃದ್ದಿಯನ್ನು ಪಡೆಯುವರು. ೪ ನಾಲ್ಕು ದಿನಾಂಕ ೪,೧೩,೨೨,೩೧ ರಂದು ಜನಿಸಿದವರು ಈ ನಾಲ್ಕು ಸಂಖ್ಯೆಯಲ್ಲಿ ಬರುತ್ತಾರೆ. ಈ ಸಂಖ್ಯೆಗೆ ಅಧಿಪತಿ ರಾಹು ಆಗಿದ್ದಾನೆ. ರೂಪ ಮತ್ತು ಆಕಾರ:- ಸಾದಾರಣ ಎತ್ತರ ವಿಶಾಲವಾದ ಭುಜಗಳು,ಸಣ್ಣದಾಗಿ ಕಪ್ಪಾದ ನೇತ್ರಗಳು,ದೊಡ್ಡಕಿವಿಗಳು ಉಳ್ಳವರಾಗಿರುತ್ತಾರೆ.ಕಪ್ಪು ಅಥವ ಎಣ್ಣೆಗೆಂಪಿನಂತೆ ಇರುವರು.ಇವರ ಕಾಲುಗಳು ದೇಹಕ್ಕೆ ಸರಿಯಾಗಿ ಇರದೆ ಚಿಕ್ಕದಾಗಿ ಇರುವುವು.ವಿಚಿತ್ರವಾದ ದೇಹರಚನೆಯಿಂದ ಎಲ್ಲರನ್ನೂ ತಮ್ಮ ಕಡೆಗೆ ಆಕರ್ಷಿಸುವರು. ಗುಣ ನಡತೆ:- ಈ ಸಂಖ್ಯೆಯವರು ಬಹು ವಿದೇಯರು ಅಷ್ಟೇಅಲ್ಲ ಕುಟುಂಬದಲ್ಲಿರುವ ಎಲ್ಲರೊಡನೆ ವಿಶ್ವಾಸದಿಂದ ಇರುವವರು.ಮೇಲಾಧಿಕಾರಿಗಳೊಂದಿಗೆ ವಿನಯದಿಂದ ವರ್ತಿಸುವರು,ಇವರಲ್ಲಿ ನಡತೆಯಿಂದಲೂ ಮಾತಿನಿಂದಲೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಆಕರ್ಷಣಾ ಶಕ್ತಿಯು ಸ್ವಭಾವ ಸಿದ್ದವಾಗಿದೆ. ಯಾವುದನ್ನಾದರೂ ಒಡನೆಯೇ ನಂಬಿ ಇವರು ಕಾರ್ಯದಲ್ಲಿ ಪ್ರವರ್ತಿಸುವವರಲ್ಲ ಪ್ರತಿಯೊಂದನ್ನೂ ಇವರು ಸಂದೇಹಾತ್ಮಕವಾಗಿ ನೋಡುವರು,ಆದರೆ ಯಾವುದರಲ್ಲೂ ಹಿಂಜರಿಯುವ ಸ್ವಭಾವವುಳ್ಳವರಲ್ಲ. ಅದೃಷ್ಟಕ್ಕಿಂತಲೂ ಸ್ವಪ್ರಯತ್ನದಿಂದಲೇ ಮುಂದುವರಿಯಬೇಕೆಂಬ ಸ್ವಾತಂತ್ರವಾದ ಮನೋಧರ್ಮವುಳ್ಲವರು.ನೀತಿನಿಯಮಗಳ ಜಾತಿ ನಿಯಮಗಳ ಬಂಧನಕ್ಕೆ ಒಳಗಾಗಿರಬೇಕೆಂಬ ಶ್ರೇಷ್ಟವಾದ ಮನೋಭಾವನೆಯುಳ್ಳವರು.ಇವರ ಭಕ್ತಿ ಆಡಂಬರಪೂರ್ಣವಾಗಿಯೂ ಕೃತಕವಾಗಿಯೂ ಇರದೆ ಸದಾ ದೈವನಂಬಿಕೆಯುಳ್ಳವರಾಗಿ ಇರುವರು. ಆತ್ಮಗೌರವವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯು ಇವರಲ್ಲಿ ತುಂಬಿ ತುಳುಕುತ್ತಿರುತ್ತದೆ.ಅಹಂಕಾರವಿಲ್ಲದೆ ಸಾದಾರಣ ಉಡುಪನ್ನೇ ಧರಿಸುವರು. ಗೃಹಸ್ಥ ಜೀವನ:- ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಾಹವು ನಡೆಯುವುದು.ಆದುದರಿಂದ ಕುಟುಂಬವನ್ನು ಸುಸೂತ್ರವಾಗಿ ನಿರ್ವಹಿಸುವ ಭಾರವು ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ಸಂಬವಿಸುತ್ತದೆ.ಸತಿಪತಿಗಳ ಮದ್ಯೆಪ್ರೇಮ ಬಂಧನವು ಸ್ವಾಬಾವಿಕವಾಗಿ ಇರುವಂತೆ ಕಂಡುಬಂದರೂ ಆಗಾಗ್ಗೆ ಇವರ ಮದ್ಯೆ ಮನಸ್ಥಾಪವು,ಬಿನ್ನಾಬಿಪ್ರಾಯವು ಉಂಟಾದರೂ ಕೂಡಲೇ ಎಲ್ಲವೂ ಸರಿಹೋಗುತ್ತದೆ. ಆರ್ಥಿಕ ಪರಿಸ್ಥಿತಿ:- ಈ ಸಂಖ್ಯೆಯವರಲ್ಲಿ ಹಲವರು ಲಕ್ಷ್ಮಿಪುತ್ರರಾಗಿ ಇರುವರು,ಪಿತ್ರಾರ್ಜಿತವಾದ ಆಸ್ತಿಯೊಂದಿಗೆ ಸ್ವಯಾರ್ಜಿತವೂ ಬೇಕಾದಷ್ಟಿದ್ದರೂ ಕೈಗಳು ಮನಸ್ಸು ಧಾರಾಳವಾಗಿರುವುದರಿಂದ ಧನವನ್ನು ಕೂಡಿಡುವ ಅವಕಾಶವೇ ಇವರಿಗೆ ಒದಗದು.ಆದರೆ ಇವರುಗಳು ಮಾಡುವ ಖರ್ಚುವ್ಯರ್ಥ ಖರ್ಚಾಗಿರದೆ ಪರೋಪಕಾರಕ್ಕಾಗಿಯೇ ಖರ್ಚಾಗುವುದು. ದೇಹಾರೋಗ್ಯ:- ನಾಲ್ಕು ಸಂಖ್ಯೆಯವರಲ್ಲಿ ಪಿತ್ತದ ಉಪದ್ರವವು ಹೆಚ್ಚಾಗಿ ಇರುವುದು.ಆದುದರಿಂದ ಇದನ್ನು ಉದ್ರೇಕಿಸುವ ಹಸಿರು ಪದಾರ್ಥಗಳನ್ನು ಅಥವ ಅದಕ್ಕೆ ಸಂಬಂದಿಸಿದ ಆಹಾರವಸ್ತುಗಳನ್ನು ಉಪಯೋಗಿಸದಿರುವುದು ಒಳ್ಳೆಯದು.ಮೆದುಳಿಗೆ ಸಂಬಂದಿಸಿದ ಕಾಯಿಲೆ,ಅನೀಮಿಯಾ ಮೊದಲಾದ ವ್ಯಾಧಿಗಳುಮತ್ತು ಅರಿಸಿನ ಕಾಮಾಲೆಯೂ ಇವರಿಗೆ ಬರುವ ಕಾಯಿಲೆಗಳು. ಉದ್ಯೋಗಮತ್ತು ವ್ಯಾಪಾರ:- ಈ ಸಂಖ್ಯೆಯುಳ್ಳವರಲ್ಲಿ ಕೆಲವರನ್ನುಳಿದು ಇತರರು ಪರಾಧೀನರಾಗಿದ್ದು ಕೆಲಸ ಮಾಡುವವರಾಗಿರುವರು,ತಾವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವಂತೆ ತೃಪ್ತಿಕರವಾಗಿ ಮಾಡಿಸತ್ಯ ಸಂದರೆನಿಸಿಕೊಳ್ಳುವರು ಕೆಲವರು ಸರ್ಕಾರದ ಉದ್ಯೋಗದಲ್ಲಿ ಸೇರಿದವರಾಗಿಯೂ ವಕೀಲರಾಗಿಯೂ ಇಬ್ಬರ ಮದ್ಯೆ ನಿಂತು ಆಸ್ತಿ-ಪಾಸ್ತಿಗಳನ್ನು ವಿಕ್ರಯಿಸಿ ಕಮಿಷನ್ ತಗೆದುಕೊಳ್ಳುವ ಬ್ರೋಕರರಾಗಿಯೋ ಇರುವರು.ಹಾಸ್ಟೆಲ್,ಹೋಟೆಲ್ ಗಳನ್ನು ನಡೆಸುವವರು.ಹಾಲ್ಕೋಹಾಲ್ ಮೊದಲಾದವುಗಳನ್ನು ಬೆರೆಸಿದ ಔಷಧಗಳನ್ನು ಮಾರುವವರು ಕೂಡ ಈ ನಾಲ್ಕು ಸಂಖ್ಯೆಯವರಾಗಿರುತ್ತಾರೆ. ರಾಹುವಿನ ಕಾಲ:- ರಾಹುವಿಗೆ ಪ್ರತ್ಯೇಕವಾದ ಕಾಲವಿಲ್ಲ ಆದರೆ ಶನಿವಾರ ರಾಹುವಿಗೆ ಸೂಕ್ತವಾದ ವಾರ,ರಾಹುಕಾಲ ಪ್ರತಿದಿನದಲ್ಲಿಯೂ ಇರುತ್ತದೆ ಆ ಒಂದು ಕಾಲವನ್ನು ಅಂದರೆ ೧.೧/೨(ಒಂದುವರೆಗಂಟೆ)ರಾಹುಕಾಲದಲ್ಲಿ ಮಾಡುವ ಎಲ್ಲಕಾರ್ಯಗಳು.ಫಲಿಸಲಾರವು.ಶನಿಯಕಾಲವೇ ರಾಹುವಿಗೂ ನಿರ್ಣಯಿಸಿಕೊಳ್ಳಬೇಕು. ರಾಹುವಿನ ದಿಕ್ಕು ಮತ್ತು ಪ್ರದೇಶ:- ತೆಂಕಣ ದಿಕ್ಕು(ದಕ್ಷಿಣ)ರಾಹುವಿಗೆ ಸೇರಿದ್ದು,ಗುಹೆಗಳು,ಸ್ಮಶಾನಗಳು,ಸುರಂಗಗಳು ಹೆಂಚಿನಮನೆಗಳು ಹಾಳುಬಿದ್ದ ಕಟ್ಟಡಗಳು,ಶುಷ್ಕಕ್ಷೇತ್ರಗಳು ರಾಹುವಿಗೆ ಸ್ವಂತವಾದ ಸ್ಥಳಗಳು.ಇದರಿಂದ ನಾಲ್ಕು ಸಂಖ್ಯೆಯವರು ವಾಸಿಸುವ ಅಥವ ಸಂಚರಿಸುವ ಸ್ಥಳಗಳನ್ನು ತಿಳಿದುಕೊಳ್ಳಬಹುದು. ಅದೃಷ್ಟದ ರತ್ನ:- ರಾಹುವಿಗೆ ಗೋಮೇಧಕ ಶುಭರತ್ನವಾಗಿದೆ,ಅರಿಸಿನವುಳ್ಳ ರತ್ನವನ್ನು ಉಂಗುರದಲ್ಲಾಗಲಿ ಕೊರಳಲ್ಲಾಗಲಿ ಧರಿಸುವುದರಿಂದ ಇವರುಗಳಿಗೆ ಬರಬಹುದ ರೋಗಗಳನ್ನು ತಡೆದು ಕಾಪಾಡುತ್ತದೆ.ಜಯವನ್ನು ತರುತ್ತದೆ. ಅದೃಷ್ಟದ ವರ್ಣ:- ಬೂದುಬಣ್ಣ(ಗ್ರೇಕಲ್ಲರ್)ಸಾದಾರಣ ಅರಿಸಿನ ಬಣ್ಣವು ನಾಲ್ಕು ಸಂಖ್ಯೆಯವರಿಗೆ ಶುಭ ತರುತ್ತವೆ. ಅನುಕೂಲದಿನಾಂಕಗಳು:-೧,೧೦.೧೯.೨೮ ದಿನಾಂಕಗಳು ಲಾಭತರುತ್ತವೆ,ಯಾವುದೇ ಶುಭಕಾರ್ಯ ಆರಂಭಮತ್ತು ಹೊಸ ಉದ್ಯೋಗಾರಂಭಕ್ಕೆ ಈ ದಿನಾಂಕದಂದು ಆರಂಬಿಸುವುದು ಅನುಕೂಲವುಂಟಾಗುತ್ತದೆ. ಅನಾನುಕೂಲ ದಿನಾಂಕಗಳು:-ಒಂದನ್ನು ಬಿಟ್ಟು ಉಳಿದೆಲ್ಲಾ ದಿನಾಂಕಗಳು ಅನಾನುಕೂಲವಾದವುಗಳಾಗಿವೆ. ಐದು ಸಂಖ್ಯೆ ೫ ೫,೧೪,೨೩,ಈ ದಿನಾಂಕದವರು ಈ ಸಂಖ್ಯೆಗೆ ಬರುತ್ತಾರೆ.ಈ ಸಂಖ್ಯೆಯ ಅಧಿಪತಿ ಬುಧನಾಗಿರುತ್ತಾನೆ. ರೂಪಮತ್ತು ಆಕಾರ:- ಐದು ಸಂಖ್ಯೆಯವರು ಆಕಾರದಲ್ಲಿ ಎತ್ತರವಾಗಿ ಇರುವರು.ಭುಜಗಳು ಕೈಗಳು ಬಲಿಷ್ಟವಾಗಿಯೂ ನೀಳವಾಗಿಯೂ ಇರುವುವು ಹನೆಯು ವಿಶಾಲವಾಗಿರುವುದಿಲ್ಲ ಕಿರಿದಾಗಿರುವುದು ಚುಚುವಂತೆ ನೋಡುವ ತೀಕ್ಷಣವಾದ ಕಣ್ಣುಗಳು,ವೇಗವಾಗಿ ನಡೆಯುವ ಕಾಲುಗಳು ದೇಹ ಬಲಕ್ಕಿಂತಲೂ ಸೂಕ್ಷ್ಮವಾದ ಬುದ್ದಿಬಲವು ಇದ್ದು ವಾಕ್ಚಾತುರ್ಯವನ್ನು ಹೆಚ್ಚಾಗಿ ಪಡೆದವರು ಇವರನ್ನು ಕಂಡಾಗ ಇವರು ಭುಧಗ್ರಹಕ್ಕೆ ಸಂಬಂಧಪಟ್ಟ ಐದು ಸಂಖ್ಯೆಯವರೆಂದು ತಿಳಿಯಬಹುದು. ಗುಣ ನಡತೆ:- ಇವರು ತಮ್ಮನ್ನು ಇತರರು ಮೆಚ್ಚುವಂತೆ ಚಮತ್ಕಾರವಾಗಿ ಮಾತನಾಡುವ ಸಾಮರ್ಥ್ಯವುಳ್ಳವರು ಕೆಲವು ಸಲ ಇವರು ಮಾತನಾಡುವುದು ವಿತಂಡವಾದವಾಗಿ ಕಂಡುಬರುವುದು,ಆದರೂ ಕೂಡ ಮಾತು ಬೆಳೆಸಿ ಸಮಯವನ್ನು ವ್ಯರ್ಥಗೊಳಿಸುವುದು ಇವರಿಗೆ ಸರಿ ಬರುವುದಿಲ್ಲ ಹೇಗಾದರೂ ಜೀವನದಲ್ಲಿ ಮುಂದುವರಿಯಬೇಕೆಂಬ ಉತ್ಕಟವಾದ ಅಭಿಲಾಷೆಯು ಇವರಿಗೆ ಇರುವುದು.ಸಾಮಾನ್ಯವಾದ ಜೀವನದಲ್ಲಿಯೂ ಸ್ಥಿರತೆಗಿಂತ,ಪರಿವರ್ತನೆಯು ಉತ್ತರೋತ್ತರ ಅಭಿವೃದ್ದಿಯು ಕಂಡುಬರುವುದು. ಕಲೆಗಳಲ್ಲಿ ತತ್ವವಿಚಾರದಲ್ಲಿ ಹೆಚ್ಚಿನ ಪ್ರವೃತ್ತಿ ಇರುವುದು.ವಿಜ್ಞಾನ ವಿಭಾಗದಲ್ಲಿಯೂ ಹೆಚ್ಚಾದ ಪರಿಶ್ರಮದಿಂದ ಯಾವುದಾದರೂ ನೂತನ ವಸ್ತುಗಳನ್ನು ಕಂಡು ಹಿಡಿದು ಸಂಸಾರದಲ್ಲಿ ಪ್ರಶಂಸೆಗೆ ಪಾತ್ರರಾಗಬೇಕೆಂಬ ಮನೋರಥ ಇವರಿಗಿರುತ್ತದೆ.ಇತರರ ಸಹಾಯವನ್ನು ಆಪೇಕ್ಷಿಸದೆ ಸ್ವತಃ ತಾನೇ ಮುಂದುವರಿಯಬೇಕು ಎಂಬ ಉತ್ಸಾಹವನ್ನು ಪಡೆದಿರುವರು. ವಸ್ತ್ರಾಭರಣ ಭೂಷಣಗಳಿಂದಲೂ ಅಲಂಕಾರ ಪ್ರಸಾಧನಗಳಿಂದಲೂ ಅಲಂಕರಿಸಿಕೊಳ್ಳುವುದೆಂದರೆ ಇವರಿಗೆ ಬಹು ಪ್ರೀತಿ. ಸಂಘ ಸಂಸ್ಥೆಗಳಲ್ಲಿದ್ದು ಜೀವನವನ್ನು ನಿರ್ವಹಿಸುವುದಕ್ಕಿಂತಲೂ ಏಕಾಂತದಲ್ಲಿದ್ದು ಮನನ-ಚಿಂತೆಯಲ್ಲಿ ತನ್ನನ್ನು ತೇಲಿಬಿಡುವುದೆಂದರೆ ಇವರಿಗೆ ಅತ್ಯಂತ ಇಷ್ಟ.ಆದುದರಿಂದ ಏನಾದರೊಂದು ನೆಪಹೇಳಿ ಏಕಾಂತಕ್ಕೆ ಹೋಗಿ ಬಿಡುವರು.ಸೋಮಾರಿತನವೆಂಬುದು ಇವರಬಳಿ ಸುಳಿಯದು,ಸದಾಕಾರ್ಯ ತತ್ಪರರಾಗಿರುವರು. ಗೃಹಸ್ಥ ಜೀವನ:- ಇವರ ಜೀವನವು ಹೆಚ್ಚು ತೃಪ್ತಿಕರವಾಗಿರಲಾರದು.ಸತಿ-ಪತಿಗಳಲ್ಲಿ ಆಗಾಗ ತೋರಿಬರುವ ಮನಸ್ಥಾಪದಿಂದ ಪರಸ್ಪರ ಅತೃಪ್ತಿಹೊಂದಿ ಅನೇಕ ಸಂದರ್ಭಗಳಲ್ಲಿ ಈ ಜೀವನಕ್ಕಿಂತಲೂ ಸನ್ಯಾಸವೇ ಮೇಲು ಎಂದು ಕಂಡು ಬರುವುದು,ಮನೆಯ ಹೊರಗೂ ಏಕಾಂತದಲ್ಲಿಯೂ ಎಷ್ಟೋ ಚೆನ್ನಾಗಿ ಕಾಲಕಳೆಯುವ ಐದು ಸಂಖ್ಯೆಯವರು.ಇವರಿಗೆ ಮನೆಯಲ್ಲಿ ಅಶಾಂತಿ,ಚಿಂತೆ,ವೇದನೆ ಮೊದಲಾದವುಗಳು ಎಲ್ಲಿಂದಲಾದರೂ ಬಂದು ಒದಗಿಕೊಳ್ಳುವುವು ಒಟ್ಟಿನಲ್ಲಿ ಐದು ಸಂಖ್ಯೆಯವರು ಗೃಹಸ್ಥಜೀವನಕ್ಕಿಂತ ಸಾಮಾಜಿಕ ಜೀವನ ಮತ್ತು ವೈಜ್ಞಾನಿಕ ಜೀವನದಲ್ಲಿ ಆಕರ್ಷಣೆಯು ಇರುತ್ತದೆ. ಆರ್ಥಿಕ ಪರಿಸ್ಥಿತಿ:- ಸರಸ್ವತಿ ವಾಸಿಸುವಲ್ಲಿ ಲಕ್ಷ್ಮಿ ನಿಲ್ಲಲಾರಳು ಆದುದರಿಂದ ಅರಿವು,ಯೋಗ್ಯತೆಯುಳ್ಳವರಾದರೂ ಸಂಪತ್ತು ತೃಪ್ತಿಕರವಾಗಿರಲಾರದು.ಉಳಿಸುವ ಗೊಡವೆ ಇರದವರು,"ನಾಳೆಯದು ನಾಳೆಗೆ" ಎನ್ನುವ ಇವರು ಇಂದಿನದನ್ನು ಚೆನ್ನಾಗಿ ಉಪಯೋಗಿಸಿಕೊಂಡು ಬಾಳುತ್ತಾರೆ. ದೇಹಾರೋಗ್ಯ:- ಬುದ್ದಿಗೆ ಪರಿಶ್ರಮವು ಅದಿಕವಾಗಿರುವುದರಿಂದ ಇವರಿಗೆ ದೇಹ ದಾರ್ಡ್ಯವು ಕಡಿಮೆ ಎಂದು ಕಾಣುತ್ತದೆ.ನರಗಳಿಗೆ ಸಂಬಂದಪಟ್ಟ ಕಾಯಿಲೆಗಳು ಇವರಿಗೆ ಬರುತ್ತಲೇ ಇರುವುದು.ಇವರಲ್ಲಿ ಹಲವರು ಉಗುರುಗಳನ್ನು ಕಚ್ಚುತ್ತಲೇ ಇರುತ್ತಾರೆ.ಈ ಅಭ್ಯಾಸವು ನರಗಳ ಬಲ ಕುಂದಿದವರಿಗೆ ಎಂದು ತಿಳಿಯುಬೇಕು.ವಾತಎನ್ನುವ ವಾಯು ಸಂಬಂಧವಾದ ಬಾಧೆಯು ಇವರಿಗೆ ಬರಬಹುದು.ನಾಲಿಗೆಯ ನೋವಿನಿಂದ ಕೆಲವರು ನರಳುವರು.ಈ ಸಂಖ್ಯೆಯುಳ್ಳ ಕೆಲವರಿಗೆ ಜ್ಞಾಪಕ ಶಕ್ತಿಯೂ ಕಡಿಮೆಯಾಗಿ ಮರವೆ ಜಾಸ್ತಿಯಾಗುವುದು. ಉದ್ಯೋಗ ಮತ್ತು ವ್ಯಾಪಾರ:- ಈ ಸಂಖ್ಯೆಯವರು ಹಲವರು ಬುದ್ದಿಯನ್ನು ಯೋಗ್ಯತೆಯನ್ನು ಉಪಯೋಗಿಸುವುದಕ್ಕಾಗಿ ವಿಜ್ಞಾನ ಮತ್ತು ವಿಜ್ಞಾನದ ವಿಭಾಗದಲ್ಲಿ ಸೇರಿ ಉದ್ಯೋಗ ಮಾಡುವರು.ಕಲೆಯನ್ನು ಸಂಪೂರ್ಣವಾಗಿ ಅವಲಂಬಿಸಿರುವ,ನಟ-ನಟಿಯರು ಕೂದ ಕೆಲವರು ಈ ಸಂಖ್ಯೆಯವರು ಈ ಸಂಖ್ಯೆಯವರು ಇರುವರು.ಕೋರ್ಟು-ಕಛೇರಿಗಳಲ್ಲಿ ವಾದಿಸುವ ಸಮರ್ಥರಾದ ವಕೀಲರು ಕೂಡ ಈ ಸಂಖ್ಯೆಯವರೇ. ಜ್ಯೋತಿಷ್ಯ ಶಾಸ್ತ್ರವನ್ನು ಪ್ರದಾನ ವೃತ್ತಿಯನ್ನಾಗಿಯೋ ಅಥವ ಸಹಾಯ ವೃತ್ತಿಯನ್ನಾಗಿಯೋ ಇಟ್ಟುಕೊಂಡವರು ಕೂದ ಹಲವರಿದ್ದಾರೆ.ಕೆಲವರು ಗಣಿತ ಶಾಸ್ತ್ರದಲ್ಲಿ ಮೇಧಾವಿಗಳಾಗಿ ನಿಪುಣರಾದ ಗಣಿತಾಧ್ಯಾಪಕರೂ ,ಲೆಕ್ಕಪತ್ರಗಳನ್ನು ನಿರೀಕ್ಷಿಸುವ ಆಡಿಟರುಗಳು ಕೂಡ ಈ ಸಂಖ್ಯೆಗೆ ಸೇರಿದವರು.ವ್ಯಾಪಾರ ಕ್ಷೇತ್ರದಲ್ಲಿಯೂ ಒಳ್ಳೆ ಸಾಮರ್ಥ್ಯ ದಿಂದ ಕುಶಲರಾಗಿ ವಾಣಿಜ್ಯ ವೃತ್ತಿಯಲ್ಲಿ ಬಹಳ ಹೆಸರುವಾಸಿ ಯಾಗುವರು ಈ ಐದು ಸಂಖ್ಯೆಯವರಾಗಿರುತ್ತಾರೆ. ಬುಧನ ಕಾಲ:- ಮೇತಿಂಗಳ೨೧ರಿಂದ ಜೂನ್ ತಿಂಗಳ ೨೨ರವರೆಗೆ ಮತ್ತು ಆಗಷ್ಟ್೨೩ರಿಂದ ಸೆಪ್ಟೆಂಬರ್ ೨೨ರವರೆಗೆ ಬುಧವಾರ ಜನಿಸಿದರೆ ಬುಧನು ಶ್ರೇಷ್ಟನಾಗಿರುತ್ತಾನೆ.ಇಂತಹ ಕಾಲದಲ್ಲಿ ಜನಿಸಿದರಾಗಿದ್ದರೆ ಅತ್ಯಂತ ಅದೃಷ್ಟ ಶಾಲಿಗಳಾಗಿ ಇರುವರು. ದಿಕ್ಕು ಮತ್ತು ಪ್ರದೇಶ:- ಬಡಗಣ ದಿಕ್ಕು(ಉತ್ತರ)ಬುಧನದು,ಬೆಟ್ಟಗಳು,ಆಟದಮೈದಾನ,ವಿದ್ಯಾಪೀಠಗಳು,ವಾಚನಾಲಯಗಳು,ಐದು ಸಂಖ್ಯೆಯವರು ಉತ್ತರಾಭಿಮುಖವಾಗಿ ಕುಳಿತುಕೊಂಡು ತಮ್ಮ ಕಾರ್ಯ ಆರಂಭಿಸಿದರೆ ಜಯವು ನಿಶ್ಚಿತ. ಅದೃಷ್ಟ ರತ್ನ,ಮತ್ತು ವರ್ಣ:- ಕಡು ಹಸಿರು ಪಚ್ಚೆ,ಬುಧನ ರತ್ನ,ಇದರ ಧಾರಣೆಯಿಂದ ಸಕಲ ವಿಧದಲ್ಲಿಯೂ ಜೀವನವು ಸುಖಮಯವಾಗಿ ಅಧಿಕವಾದ ಪ್ರಭಾವವನ್ನು ಬೀರುವವರಾಗುವರು. ಅದೃಷ್ಟ ವರ್ಣ:-ಎಲೆ ಹಸಿರು ಈ ಬಣ್ಣದ ಬಟ್ಟೆ ಆಭರಣ ಧರಿಸಿದರೆ ಅಭಿವೃದ್ದಿಯು ಕರತಲಾಮಲಕವಾಗಿರುವುದು. ಅನುಕೂಲದಿನಾಂಕಗಳು:- ೫,೧೪,೨೩ ಈ ದಿನಾಂಕಗಳು ಅನುಕೂಲವಾದವು ಶುಭಕಾರ್ಯಾರಂಭಕ್ಕೆ ಈ ದಿನಾಂಕಮತ್ತು ಬುಧವಾರವನ್ನು ಆರಿಸಿಕೊಳ್ಳುವುದು ಶುಭ,ಮತ್ತು ಕಾರ್ಯ ಜಯವು,ಧನಲಾಭವು,ಎಲ್ಲ ಕಾರ್ಯ ಸಪಲವು ಆಗುವುವು. ಅನಾನುಕೂಲದಿನಾಂಕಗಳು:-ಮೇಲಿನ ದಿನಾಂಕಗಳನ್ನು ಬಿಟ್ಟು ಉಳಿದವು ಅನಾನುಕೂಲದಿನಾಂಕಗಳು ಯಾವುದೇ ಶುಭಕಾರ್ಯ ಆರಂಭಿಸಬಾರದು ನಷ್ಟ ಅನುಭವಿಸುವಿರಿ. ಗ್ರಹಪ್ರೀತಿ:- ಐದು ಸಂಖ್ಯೆಯುಳ್ಳವರು ವಿಷ್ಣುಸಹಸ್ರನಾಮ ಪಾರಾಯಣ,ಗಾಯತ್ರಿಜಪ,ಮಹಾಮೃತ್ಯುಂಜಯ ಜಪ ಮಾಡುತ್ತಾಬಂದರೆ ಕಷ್ಟಗಳು ದೂರಾಗಿ ಇಷ್ಟಾರ್ಥ ಸಿದ್ದಿಯು ಉಂಟಾಗುವುದು. ಆರ‍್ರು ೬ಸಂಖ್ಯೆ:- ೬,೧೫,೨೪ ಈ ದಿನಾಂಕದವರು ಆರು ಸಂಖ್ಯೆಯಲ್ಲಿ ಬರುತ್ತಾರೆ. ಆರು ಸಂಖ್ಯೆಯ ಅಧಿಪತಿ ಗ್ರಹ ಶುಕ್ರನಾಗಿದ್ದಾನೆ. ರೂಪ ಮತ್ತು ಆಕಾರ:- ಈ ಸಂಖ್ಯೆಯವರು ನೋಡಲು ಬಹಳ ಸುಂದರವಾಗಿರುವರು.ಬರಿ ಬಿಳುಪಾಗಿಯು ಅಥವ ಕಪ್ಪಾಗಿಯೋ ಇರದೆ ಎಣ್ಣೆಗೆಂಪಾದ ಬಣ್ಣವುಳ್ಳವರಾಗಿರುವರು.ಸಾದಾರಣ ಎತ್ತರ ತಲೆಯಲ್ಲಿ ಮೃದುವಾದ ಗುಂಗುರು ಕೂದಲು.ನೀಲವರ್ಣವುಳ್ಳ ನೇತ್ರಗಳು,ಮದುರವಾದ ಕಂಠವು ಇವರಲ್ಲಿ ಇರುವುದು. ಇವೆಲ್ಲಾ ಇವರು ಆರು ಸಂಖ್ಯೆಯವರೆಂದು ನಮಗೆ ಸೂಚಿಸುತ್ತದೆ. ಗುಣ ನಡತೆ:- ಇವರಲ್ಲಿ ಹಲವರು ಪ್ರೀತಿಗೂ-ಸೌಂದರ್ಯಕ್ಕೂ ವಾಸಸ್ಥಾನದಂತೆ ತಿಳಿದು ಬರುತ್ತದೆ.ಪಾದಾದಿಕೇಶಾಂತ ಸೌಂದರ್ಯ ಮೂರ್ತಿಯಾದ ಇವರು ಪುರುಷರಾಗಲಿ ಸ್ತ್ರೀಯರಾಗಲಿ ತಮ್ಮನ್ನು ತಮ್ಮಸುತ್ತಮುತ್ತಲಿರುವ ಪ್ರದೇಶವನ್ನು ಓರಣವಾಗಿಯೂ ಅಂದವಾಗಿಯೂ ಆಕರ್ಷಕವಾಗಿಯೂ ಇಟ್ಟುಕೊಳ್ಳಬೇಕೆಂಬ ಸ್ವಭಾವದವರು. ನಾನಾ ವಿಧವಾದ ವಸ್ತ್ರಗಳನ್ನು ಪರಿಮಳ ದ್ರವ್ಯಗಳನ್ನು ಧರಿಸುವುದೆಂದರೆ ಇವರಿಗೆ ಅತ್ಯಂತ ಆಸೆ. ಸಂಗೀತ-ಸಾಹಿತ್ಯದಲ್ಲಿಯೂ ಇವರಿಗೆ ಹೆಚ್ಚಿನ ಅಭಿರುಚಿಯು ಪಾಂಡಿತ್ಯವು ಇರುವುದು.ಹಲವು ಸುಪ್ರಸಿದ್ದ ವಿದ್ವಾಂಸರು ಈ ಆರು ಸಂಖ್ಯೆಗೆ ಸೇರಿದವರು. ಪ್ರತ್ಯುಪಕಾರವನ್ನು ಅಥವ ಪ್ರತಿಫಲವನ್ನೂ ಅಪೇಕ್ಷಿಸದೆ ಪರರಿಗೆ ಸಹಾಯವನ್ನು ಮಾಡುವುದು ಇವರ ಸ್ವಭಾವ ತನ್ನ ಅವಸ್ಥೆಯ ಹೀನಸ್ಥಿತಿಯಲ್ಲಿದ್ದರೂ ಪರಹಿತಕ್ಕಾಗಿ ಕಷ್ಟಪಡುವ ತ್ಯಾಗಮಯಿಗಳು ಇವರು. ಬಿಳಿಬಣ್ನದ ವಸ್ತ್ರಗಳು,ರತ್ನಗಳು ಇವುಗಳಲ್ಲಿ ಬಹಳ ಆಸೆ. ಕಾಮಪ್ರವೃತ್ತಿಯು ಅಧಿಕವಾಗಿರುವುದರಿಂದ ಸನ್ಮಾರ್ಗ ಸತ್ಪವರ್ತನೆಗೆ ಅಷ್ಟು ಪ್ರಾದಾನ್ಯತೆ ಇಲ್ಲ.ಪ್ರೇಮ ವ್ಯವಹಾರದಲ್ಲಿ ಇವರಿಗೆ ಸೋಲೆಂಬುದಿಲ್ಲ.ಇಅದಕ್ಕೆ ಇವರ ಶರೀರ ಸೌಷ್ಟವವೂ ಮುಖಸೌಂದರ್ಯವೂ ಆಕರ್ಷಕ ವಾಗಿಯೂ ಇರುವುದೇ ಕಾರಣ.ಇವರು ಮೃದುಮದುರವಾಗಿ ಮಾತನಾಡಿ ಇತರರನ್ನು ತಮ್ಮ ಕಡೆ ಒಲಿಸಿಕೊಳ್ಳುವುದರಲ್ಲಿ ಚಾಣಾಕ್ಷರು. ಗೃಹಸ್ಥ ಜೀವನ:- ಒಳ್ಳೆಯ ರೂಪ-ಗುಣಗಳು ಇರುವ ಸತಿ-ಪತಿ ದೊರಕುವರು,ಇವರ ದಾಂಪತ್ಯ ಜೀವನ ಸುಖಮಯ ವಾಗಿರುವುದು. ಆರ್ಥಿಕ ಪರಿಸ್ಥಿತಿ:- ಇವರ ಆರ್ಥಿಕ ಪರಿಸ್ಥಿತಿ ಬಹಳ ತೃಪ್ತಿಕರವಾಗಿರುವುದು,ವೆಚ್ಚವು ಹೆಚ್ಚಾದರೂ ಅದಕ್ಕೆ ಬೇಕಾದ ಆದಾಯವೂ ಇದ್ದೇ ಇರುವುದು ಕೆಲವರು ಆಗರ್ಭಶ್ರೀಮಂತರಾಗಿರುವುದರಿಂದ ಎಷ್ಟು ಖರ್ಚಾದರೂ ಗಣನೆಗೆ ಬಾರದೆ ಇರುವುದು. ದೇಹಾರೋಗ್ಯ:- ಇವರ ಆರೋಗ್ಯವು ಹೆಚ್ಚು ಸಂತೋಷಜನಕವಾಗಿರುವುದಿಲ್ಲ.ಮೈಕೈನೋವು,ನರಗಳ ದುರ್ಬಲತೆ,ನೀರು,ಅಗ್ನಿ,ಆಯುಧ ಮೊದಲಾದವುಗಳಿಂದ ಗಂಡಾಂತರಗಳು ಒದಗಿ ಬರುತ್ತಿರುತ್ತವೆ.ಕೆಲವರು ಆಗಾಗ ಗಂಟಲು,ಮೂಗು,ತಲೆನೋವಿನಿಂದ ಬಾಧೆಪಡುತ್ತಿರುವರು ಕೆಲಸಂದರ್ಬಗಳಲ್ಲಿ ಪ್ರಾಣಾಪಾಯ ಒದಗುವ ಸೂಚನೆಗಳಿದ್ದರೂ ತಪ್ಪಿಸಿಕೊಳ್ಳುವರು,"ಗನೇರಿಯಾ"ಎಂಬವ್ಯಾಧಿಯಿಂದ ಬಾಧೆಪಡುವವರು ಇದರಿಂದ ಮುಕ್ತರಾಗಲು ಪ್ರಯತ್ನಿಸುವುದು ಜಾಗ್ರತೆ,ಇರುವುದು ಅತ್ಯವಶ್ಯಕ. ಉದ್ಯೋಗಮತ್ತು ವ್ಯಾಪಾರ:- ಈ ಸಂಖ್ಯೆಯವರುಗಳನ್ನು ೩ವಿಧವಾಗಿ ವಿಂಗಡಿಸಬಹುದು.ನಾಟಕ,ಸಿನಿಮಾ ಮೊದಲಾದವುಗಳಲ್ಲಿನ ನಟ,ನಟಿಗಳು ಹಲವರುಈ ಸಂಖ್ಯೆಯವರಾಗಿರುತ್ತಾರೆ.ಅಲ್ಲದೆ ನಾಟಕ,ಸಿನಿಮಾ ಹಿನ್ನೆಲೆಗಾಯಕರು,ಕಲಾವಿದರೂ ಈ ಗುಂಪಿಗೆ ಸೇರಿದವರಾಗಿರುತ್ತಾರೆ.ಚಿತ್ರಗಾರರು,ಶಿಲ್ಪಿಗಳು ಅಲಂಕಾರದ ಉಡುಪುಗಳನ್ನು ತಯಾರಿಸುವವರೇ ಮೊದಲಾದವರಲ್ಲಿ ಹಲವರು ಆರುಸಂಖ್ಯೆಗೆ ಸೇರಿದವರಾಗಿದ್ದಾರೆ.ಶಾಸನ ವಿಧಾನಗಳನ್ನು ಚೆನ್ನಾಗಿ ಮನ ಮಾಡುವ ವಕೀಲರು,ನೀತಿಪತಿಗಳು,ಪ್ರಸಿದ್ದವೈದ್ಯರುಗಳು ಕೆಲವರು ಇರುವರು.ಇವರು ಎರಡನೇ ಗುಂಪಿಗೆ ಸೇರುತ್ತಾರೆ. ರತ್ನಗಳು,ಮಧುರಪದಾರ್ಥಗಳು ಸ್ತ್ರೀಯರಿಗೆ ಉಪಯೋಗವಾಗುವ ಅಲಂಕಾರಿಕಾ ವಸ್ತುಗಳು ಮೊದಲಾದವನ್ನು ಇಟ್ಟುಕೊಂಡು ವ್ಯಾಪಾರಮಾಡಿ ಅದರ ಮೂಲಕ ಐಶ್ವರ್ಯ,ಕೀರ್ತಿಯನ್ನು ಸಂಪಾದಿಸಿಕೊಂಡ ದೊಡ್ಡ ವ್ಯಾಪಾರಿಗಳು ಮೂರನೇ ವರ್ಗದವರಾಗಿದ್ದಾರೆ. ಶುಕ್ರನ ಕಾಲ:- ಏಪ್ರಿಲ್ ೨೦ರಿಂದ ಮೇ೨೦ಮತ್ತು ಸೆಪ್ಟೆಂಬರ್೨೩ರಿಂದ ಅಕ್ಟೋಬರ್ ೨೨ರವರೆಗೆ ಶುಕ್ರನ ಕಾಲವಾಗಿರುತ್ತದೆ.ಈ ಕಾಲದಲ್ಲಿ ೬,೧೫,೨೪ಈ ದಿನಾಂಕಗಳಲ್ಲಿ ಶುಕ್ರವಾರ,ಸೋಮವಾರ ಜನಿಸಿದವರು ಅಪಾರವಾದ ಉನ್ನತಿಯನ್ನು ಶ್ರೀಮಂತಿಕೆಯನ್ನು ಸೌಂದರ್ಯವನ್ನೂ ಹೊಂದಿ ಉನ್ನತವಾಗಿ ಬಾಳುವರು. ಅದೃಷ್ಟ ರತ್ನ,ಮತ್ತು ವರ್ಣ:- ವಜ್ರ ಶುಕ್ರನಿಗೆ ಶುಭರತ್ನವಾಗಿದೆ,ಇದರ ಧಾರಣೆಯಿಂದ ಎಲ್ಲಾ ವಿಧಗಳಲ್ಲಿ ಜಯವು ಲಾಭವು ಉಂಟಾಗುತ್ತದೆ.ಮತ್ತು ಶುಭ್ರವಾದ ಬಿಳಿ ಬಣ್ಣದ ವಸ್ತ್ರವು ಶುಭ,ಮತ್ತು ನೀಲಿಯುಕೂಡ ಶುಭವನ್ನು ತರುತ್ತದೆ.ಹೆಚ್ಚು ಪ್ರಭಾವವನ್ನು ತೋರಿಸಲು ಅನುಕೂಲವಾಗುವುದು. ಅನುಕೂಲದಿನಾಂಕಗಳು:-೬,೯,೧೫,೧೮,೨೪,೨೭ ಈ ದಿನಾಂಕಗಳಲ್ಲಿ ನೂತನ ಕಾರ್ಯಗಳನ್ನು ಆರಂಭಿಸಲು ಜಯವುಂಟಾಗುವುದು,ಎಲ್ಲಾ ರೀತಿಯ ಶುಭಕಾರ್ಯಗಳನ್ನು ಮಾಡಬಹುದು. ಅನಾನುಕೂಲದಿನಾಂಕಗಳು:- ಮೇಲೆ ಹೇಳಿದ ದಿನಾಂಕಗಳನ್ನು ಬಿಟ್ಟು ಉಳಿದೆಲ್ಲಾ ದಿನಾಂಕಗಳು ಇವರಿಗೆ ಅನಾನುಕೂಲದಿನಾಂಕಗಳು,ಯಾವ ಶುಭಕಾರ್ಯಗಳನ್ನು ಮಾಡಲು ಅಪಜಯವುಂಟಾಗುವುದು. ಗ್ರಹಪ್ರೀತಿ:- ಶುಕ್ರಗ್ರಹದ ಪ್ರೀತಿಗಾಗಿ.ಲಕ್ಷ್ಮಿಸ್ತೋತ್ರ ಪಾರಾಯಣ,ಶುಕ್ರವಾರದಿನ ಸುಮಂಗಲಿಯರಿಗೆ ಅರಿಸಿನ ಕುಂಕುಮ,ಫಲತಾಂಬೂಲವನ್ನು ನೀಡುವುದು .ಈ ರೀತಿ ಮಾಡಿಕೊಂಡು ಬಂದರೆ ಗ್ರಹಶಾಂತವಾಗಿ ಕಷ್ಟಗಳು ತೊಲಗಿ ಧನಲಾಭವಾಗುವುದು.ಸರ್ವಕ್ಷೇಮ ಉಂಟಾಗುವುದು. ಏಳು ೭ ೭,೧೬,೨೫ ಈ ದಿನಾಂಕದಲ್ಲಿ ಜನಿಸಿದವರು ೭ರ ಸಂಖ್ಯೆಯಲ್ಲಿ ಬರುತ್ತಾರೆ ೭ರ ಗ್ರಹಧಿಪತಿ ಚಂದ್ರನೆಂದು ವಿದ್ವಾಂಸರು ನಿರ್ಣಯಿಸಿದ್ದಾರೆ.ಈ ಚಂದ್ರನೇ ಎರಡನೇ ಸಂಖ್ಯೆಗೂ ಅಧಿಪತಿಯುಎಂಬುದನ್ನು ಈ ಮೊದಲೇ ತಿಳಿಸಲಾಗಿದೆ.ಆದ್ದರಿಂದ ಚಂದ್ರನು ೨,೭ ಈ ಎರಡು ಸಂಖ್ಯೆಗಳಿಗೂ ಅಧಿಪತಿ ಎಂಬುದನ್ನು ಚೆನ್ನಾಗಿ ಜ್ಞಾಪಕದಲ್ಲಿಡಬೇಕು. ಒಂದೇ ಗ್ರಹವು ಎರಡು ಮತ್ತು ಏಳು ಸಂಖ್ಯೆಗೆ ಅಧಿಪತಿಯಾಗಿದ್ದರೆ ಈ ಸಂಖ್ಯೆಯುಳ್ಳವ್ಯಕ್ತಿಗಳಗುಣ ನಡತೆ ಅದೃಷ್ಟಗಳನ್ನು ಪ್ರತ್ಯೇಕವಾಗಿ ಹೇಗೆ ವಿವರಿಸುವುದು? ಈ ವಿಚಾರವನ್ನು ಶಾಸ್ತ್ರಜ್ಞರು ಸೇರಿ ಸಂದಾನಮಾಡಿ ವಿಮರ್ಶಿಸಿದ್ದಾರೆ.ಹಾಗೆ ವಿಮರ್ಶಿಸಿ ನಿರ್ದರಿಸಿದ ನಂತರ ಚಂದ್ರನ ಸ್ವರೂಪವನ್ನು ಎರಡುವಿಧವಾಗಿ ನೆಗೆಟಿವ್,ಮತ್ತು ಪಾಸಿಟೀವ್ ಎಂದು ಇಟ್ಟುಕೊಂಡು ಫಲವನ್ನು ಹೇಳಿದ್ದಾರೆ. ರೂಪ ಮತ್ತು ಆಕಾರ. ಗುಂಡಾದ ಮುಖ,ಸಣ್ಣ ಹುಬ್ಬು,ಕಠಿಣ ಪಾದಗಳು,ದಪ್ಪವಾಗಿ ಮಾಂಸದ ಶರೀರವು,ಗಿಡ್ದನೆ ಭುಜಗಳು,ಕಂದುಬಣ್ಣಆಕರ್ಷಣೀಯವಾದ ಅಂಗಸೌಷ್ಟವ ಇವುಗಳೇ ಏಳನೇ ಸಂಖ್ಯೆಯವರ ಆಕಾರವು. ಗುಣ-ನಡತೆ ಒಂದುಕಡೆ ಸ್ಥಿರವಾಗಿ ನಿಲ್ಲದ ಜೀವಮತ್ತು ಚಂಚಲವಾದ ಮನಸ್ಸುಳ್ಳವರು.ಸದಾಏನನ್ನಾದರೂ ಮಾಡಿಕೊಂದೇ ಇರುವವರು ಆಗಾಗ್ಗೆ ಪ್ರಯಾಣವನ್ನು,ಯಾತ್ರೆಯನ್ನು ಮಾಡಲು ಹೊರಡುವವರು ತಮ್ಮನ್ನು ನಂಬಿದವರನ್ನು ಕಾಪಾಡುವುದರಲ್ಲಿ ಬಹುಮತುವರ್ಜಿ ವಹಿಸುವರು. ದೊಡ್ದ ಆಸೆಗಳನ್ನು ಉನ್ನತವಾದ ಧ್ಯೇಯಗಳನ್ನು ಇಟ್ಟುಕೊಂಡಿದ್ದು ಕನಸುಕಾಣುತ್ತಾ ಇರುವರು.ಇವರ ನಡೆ ನುಡಿ ಕಂಡು ವಿಮರ್ಶಿಸುವುದಕ್ಕಿಂತಲೂ ತಡೆದು ನಿರ್ಬಂದಿಸುವುದಕ್ಕಿಂತಲೂ ಮಾಡಿತ್ತಿರುವ ಕಾರ್ಯವನ್ನು ಹಾಕುತ್ತಿರುವ ಪ್ಲಾನನ್ನು ಆಮೋದಿಸುತ್ತಾ ಬಂದರೆ ಸಾಕು ಅವರಿಗೆ ಬಹಳ ಪ್ರೋತ್ಸಾಹವನ್ನು ಕೊಟ್ಟೂ ಹುರಿದುಂಬಿಸಿ ಕಾರ್ಯ ಕುಶಲಿಗಳನ್ನಾಗಿ ಮಾಡುವುದು. ಅನ್ಯರಿಗಿಂತ ತಮ್ಮ ಕುಟುಂಬದವರನ್ನು ಸಂಬಂದಿಗಳನ್ನು ತುಂಬಾ ಪ್ರೀತಿಸುವರು.ಇವರ ಜೀವನದಲ್ಲಿ ಸುಖದುಖಗಳ ಕಷ್ಟ ನಷ್ಟಗಳ ಏರುತಗ್ಗುಗಳ ಆಗಮನವು ಚಕ್ರದಂತೆ ಸುತ್ತುತ್ತಾ ಇರುವುದು ಅವುಗಳನ್ನು ಸಹಜವಾದ ಸಂಭವವಾಗಿ ತಿಳಿದುಕೊಳ್ಳುವ ಧೃಡಮನಸ್ಸು ಇವರುಗಳಿಗೆ ಇರುವುದು. ಕೆಲವರಲ್ಲಿ ಸಾಹಿತ್ಯಾಅಭಿರುಚಿಯುಳ್ಳವರು ಕವಿಗಳೂ,ಸಂಗೀತ ರಸಿಕರೂ,ಆಗಿರುವ ಹಲವರು ಈ ಏಳು ಸಂಖ್ಯೆಗೆ ಸೇರಿದವರಾಗಿದ್ದಾರೆ. ಗೃಹಸ್ಥ ಜೀವನ. ಇವರ ಸಾಂಸಾರಿಕ ಜೀವನ ವು ಅಷ್ಟೊಂದು ಸುಖಕರವಾಗಿರುವುದೆಂದು ಹೇಳಲಾಗದು.ಆದರೂ ಅದನ್ನೇ ಆ ಬಿರುಗಾಳಿಯನ್ನೇ ಮಲಯಾನಿಲದಂತೆ ಶಾಂತವಾಗಿ ಇರಿಸಿಕೊಳ್ಳಬೇಕೆಂದು ಇವರು ಮಾಡುವ ಪ್ರಯತ್ನವು ಸಫಲವಾಗದೆ ಇರಲಾರದು ಸ್ವಾರ್ಥವನ್ನೇ ಹೆಚ್ಚಾಗಿ ಬಯಸುವ ಇವರು ಗೃಹಸ್ಥ ಜೀವನಕ್ಕೆ ಹೆಚ್ಚು ಗಮನಕೊಡುವುದಿಲ್ಲ. ಆರ್ಥಿಕ ಪರಿಸ್ಥಿತಿ ಇವರ ಆರ್ಥಿಕ ಪರಿಸ್ಥಿತಿ ಏರುತಗ್ಗು,ಲಾಭ ನಷ್ಟ ಗಳಿಂದ ಸುತ್ತುಕೊಂಡಿರುವುದು.ಆದರೂ ತಮ್ಮ ಅವಶ್ಯಕತೆಗಳನ್ನೆಲ್ಲಾ ಪೂರೈಸಿಕೊಳ್ಳಲು ಆಕಸ್ಮಿಕ ಸಹಾಯವು ಬಂದೊದಗುವುದರಿಂದ ಸ್ಥಿರವಾದ ಉತ್ಪನ್ನವಿಲ್ಲದಿದ್ದರೂ ಅದಕ್ಕಾಗಿ ಚಿಂತಿಸುವವರಲ್ಲ ರೇಸು ಲಾತರಿಯಂತವುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಶ್ರೀಮಂತರಾಗಿ ಬಿಡಬೇಕೆಂದು ಇವರು ಮಾಡುವ ಪ್ರಯತ್ನವು ಸಫಲವಾಗುವುದಿಲ್ಲ.ಆದರೆ ವ್ಯಾಪಾರದ ಕ್ಷೇತ್ರದಲ್ಲಿ ಇವರು ಮಾಡುವ ಕೆಲಸವು ಲಾಭದಾಯಕವಾಗಿರುವುದು. ದೇಹಾರೋಗ್ಯ. ಇವರಿಗೆ ಚರ್ಮ ಸಂಬಂದವಾದ ರೋಗಗಳು ಬರಬಹುದು ಪಕ್ಷವಾತವೆಂಬ ವ್ಯಾಧಿಯಿಂದ ಬಳಲುವವರು ಕೆಲವರು ಇವರು ಶ್ವಾಸಕ್ಕೆ ಸಂಬಂಧವಾದ ರೋಗವು ಕೆಲವು ಸಂದರ್ಬಗಳಲ್ಲಿ ಇವರನ್ನು ಭಾಧಿಸುವುದು.ಮಲಬದ್ದತೆಯು ಇಲ್ಲದಂತೆ ನೋಡಿಕೊಳ್ಳುವುದು ಮೇಲು. ವ್ಯಾಪಾರ ಮತ್ತು ಉದ್ಯೋಗ:- ಈ ಏಳು ಸಂಖ್ಯೆಯವರಿಗೆ ವ್ಯಾಪಾರದ ಮೂಲಕವೇ ಉತ್ತಮ ಲಾಭದೊರೆಯುವುದು.ನೀರಿನಲ್ಲಿ ಉತ್ಪನ್ನವಾಗುವ ವಸ್ತು ದೋಣಿಗಳು,ಹಡಗು ಇವುಗಳ ಮೂಲಕ ನಡೆಸುವ ವ್ಯಾಪಾರವು,ದ್ರವ ಪದಾರ್ಥಗಳು ಮತ್ತು ಇಂತಹ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರವನ್ನು ನಡೆಸುವವರು. ಉದ್ಯೋಗಕ್ಷೇತ್ರದಲ್ಲಿ ಇರುವವರು ಕೆಲವರು ಬಹು ಸಾದಾರಣವಾದ ಕೆಲಸವನ್ನು ಮಾಡುವವರು.ಮನೆಗೆಲಸ ಮಾಡುವವರು ಅಡಿಗೆಯವರು ಮೊದಲಾದವರು ಇರುವರು.ನೀರಿನಲ್ಲಿ ಮೀನು ಹಿಡಿಯುವ ಉದ್ಯೋಗದಲ್ಲಿ ಕೆಲವರು ಇರುವುದು ಇದೆ.ಇನ್ನೂ ಇತರ ನೀಚಕೆಲಸವನ್ನು ಮಾಡುವವರು ಇರುವರು. ಚಂದ್ರನ ಕಾಲ:- ಸೋಮವಾರ ಚಂದ್ರನದು ರಾತ್ರಿಯಲ್ಲಿ ಬಲಶಾಲಿಯಾಗಿರುವನು ಒಂದುಗಂಟೆಕಾಲವು ಚಂದ್ರನಿಗೆ ಸೇರಿದ ಕಾಲಪರಿಮಿತಿ. ದಿಕ್ಕು ಮತ್ತು ಪ್ರದೇಶ:- ಉತ್ತರದಿಕ್ಕು ಚಂದ್ರನಿಗೆ ಸೇರಿದ್ದು ನೀರಿಗೆ ಸಂಬಂದಪಟ್ಟ ಏರಿಗಳು,ಕೆರೆಗಳು,ತಟಗಳು(ನದಿದಂಡೆ)ಬಾವಿಗಳು ಸ್ನಾನಗೃಹಗಳು,ಒದ್ದೆಯಾದ ಪ್ರದೇಶಗಳು ಚಂದ್ರನ ಪ್ರದೇಶಗಳು ಈ ವಿಷಯಗಳನ್ನು ಅನ್ವಯಿಸಿ ಕೊಂಡು ಏಳು ಸಂಖ್ಯೆಯವರ ವಾಸಸ್ಥಾನ ಸಂಚರಿಸುವ ಪ್ರದೇಶಗಳನ್ನು ಅರಿತುಕೊಳ್ಳಬಹುದು. ಅದೃಷ್ಟದ ರತ್ನ:- ಮುತ್ತು ಅಥವ ವಜ್ರವನ್ನು ದರಿಸಿದರೆ ಕಷ್ಟಗಳು ತೊಲಗಿ ಹೋಗುವುವು.ವ್ಯಾಪಾರ ಉದ್ಯೋಗದಲ್ಲಿ ಜಯವು ಲಾಭವೂ ದೊರೆಯುವುದು. ಅದೃಷ್ಟದ ವರ್ಣ:- ಬಿಳಿ ಮತ್ತು ಎಲೆ ಹಸಿರು ಈ ಬಣ್ಣದ ವಸ್ತ್ರ,ಆಭರಣವನ್ನು ಧರಿಸುವುದು ಶುಭವನ್ನು ತರುತ್ತದೆ. ಅನುಕೂಲದಿನಾಂಕಗಳು:-೨,೪,೧೧,೧೩,೨೦.೨೨,೨೫. ಅನಾನುಕೂಲದಿನಾಂಕಗಳು:- ಮೇಲಿನವು ಬಿಟ್ಟು ಉಳಿದೆಲ್ಲವು. ಗ್ರಹಪ್ರೀತಿ:- ದುರ್ಗಾಸ್ತೋತ್ರ ಪಾರಾಯಣ,ವಿಘ್ನೇಶ್ವರನ ಪೂಜೆ,ಸ್ತೋತ್ರ ಪಾರಾಯಣ,ಮಾಡುವುದರಿಂದ ಕಾರ್ಯಸಿದ್ದಿಮತ್ತು ಸಂಪತ್ತು ಉಂಟಾಗುವುದು. ಎಂಟು ೮ ಸಂಖ್ಯೆ ಈ ಎಂಟು ಸಂಖ್ಯೆಯವರು ೮,೧೭,೧೬ಈ ದಿನಾಂಕದಲ್ಲಿ ಜನಿಸಿದವರಾಗಿರುತ್ತಾರೆ ೮ಕ್ಕೆ ಗ್ರಹಾದಿಪತಿ ಶನೇಶ್ವರನಾಗಿದ್ದಾನೆ. ರೂಪ ಮತ್ತು ಆಕಾರ:- ಇವರು ನೋಡಲು ಅಷ್ಟೊಂದು ಎತ್ತರವಾಗಿರದೆ ಸಾದಾರಣ ಮದ್ಯಮ ತೆರವಾದ ಎತ್ತರವುಳ್ಳವರಾಗಿರುವರು.ಇವರ ಕೂದಲು ದಟ್ಟವಾಗಿ ಇರುವುದು.ವಿಶಾಲವಾದ ಭುಜಗಳು, ಅಗಲವಾದ ಹುಬ್ಬುಗಳು,ಸಣ್ಣ ಕಾಲುಗಳು ದೊಡ್ದಕಿವಿ ಲಕ್ಷಣವುಳ್ಲವರು ಕಪ್ಪು ಅಥವ ಎಣ್ಣೆಗೆಂಪು ಬಣ್ಣವುಳ್ಳವರಾಗಿರುವರು.ಇವರನ್ನು ಎಂಟು ಸಂಖ್ಯೆಯವರೆಂದು ಸುಲಬವಾಗಿ ಕಂಡು ಹಿಡಿಯ ಬಹುದು. ಗುಣ ನಡತೆ:- ಶನೇಶ್ವರನನ್ನೇ ಅಧಿಪತಿಯನ್ನಾಗಿ ಪಡೆದಿರುವ ಈ ಎಂಟು ಸಂಖ್ಯೆಯವರು ನೀತಿ ನಿಯಮಗಳ ಬಂಧನಕ್ಕೆ ಒಳಗಾಗಿರುವರು ಇವರುಗಳಿಗೆ ನಿಧಾನವೇ ಪ್ರಧಾನವಾಗಿರುತ್ತದೆ.ಎಂಥಹ ಕಾರ್ಯವಾದರೂ ನಿಂತು ನಿದಾನಿಸಿ ಚೆನ್ನಾಗಿ ಯೋಚಿಸಿದ ನಂತರವೇ ಕಾರ್ಯರಂಗಕ್ಕೆ ಇಳಿಯುವರು. ಯಾವಾಗಲೂ ತಲೆ ಎತ್ತಿ ಮೇಲೆ ನೋಡದೆ ನೆಲವನ್ನು ನೋಡಿಯೇ ನಡೆಯುವರು ದೈವಭಕ್ತಿಯು,ಹಿರಿಯರಲ್ಲಿ ಗೌರವವು ತನ್ನ ಮೇಲೆ ಅಪಾರವಾದ ನಂಬಿಕೆಯು ಅಭಿಲಾಷೆಯೂ ಉಳ್ಲವರು ಆದರೂ ಸಮಯದ ಪ್ರಭಾವದಿಂದ ಜಗಳ,ಕದನಗಳು ಮುಂದೆ ಬಂದರೂ ಹಿಂಜರಿಯುವ ಹೇಡಿಗಳಲ್ಲ. ಕೆಲವು ಸಂದರ್ಭಗಳಲ್ಲಿ ತಮ್ಮೊಳಗೇ ಜಗಳ ಮಾಡಿಕೊಂಡು ತಾವೇ ಅದನ್ನು ನ್ಯಾಯವಾಗಿ ಪರಿಹರಿಸಿಕೊಳ್ಳಲು ಸಾದ್ಯವಾಗದೆ ಇದ್ದಾಗ ಇವರನ್ನು ಮದ್ಯಸ್ಥರನ್ನಾಗಿ ಇರಬೇಕೆಂದು ಇಷ್ಟಪಟ್ಟು ಕೇಳಿಕೊಂಡರೆ ಇವರು ಅವರುಗಳಿಗೆ ನ್ಯಾಯಸಮ್ಮತವಾದ ತೀರ್ಮಾನ ನೀಡಿ ಅವರ ವೈಮನಸ್ಸನ್ನು ಪರಿಹರಿಸಿ ಧರ್ಮಾತ್ಮರೆಂಬ ಹೆಸರುಗಳಿಸುವರು. ಇವರಲ್ಲಿ ವಿರೋಧವನ್ನು ಮಾಡಿಕೊಂಡವರು ಸ್ನೇಹವನ್ನು ಸಂಪಾದಿಸಿದರೂ ಎರಡನ್ನೂ ಯಾವ ಜೀವವೂ ಮರೆಯಲಾರದು.ಯಾರಾದರೂ ಇವರನ್ನು ಹೊಗಳಿದರೆ ಸರಿ ಆ ಹೊಗಳಿಕೆಗೆ ಮುಳ್ಳಾಗಿ ಅವರಿಗೆ ಯಾವ ವಿಧವಾದ ಸಹಾಯವನ್ನಾದರೂ ಮಾಡಲು ಸಿದ್ದರಿರುವರು. ಶಾರೀರಿಕ ಶ್ರಮದಿಂದ ಕೆಲಸ ಮಾಡುವುದೆಂದರೆ ಇವರಿಗೆ ಅತಿ ಪ್ರೀತಿ ಎಂತಹ ಕೆಲಸವಾದರೂ ಎಷ್ಟು ಕಷ್ಟವಾದರೂ ಅವಸರ ಪಡದೆ ನಿಧಾನವಾಗಿ ಸರಿಯಾಗಿ ಮಾಡಿಮುಗಿಸುತ್ತಾರೆ. ಇವರಿಗೆ ಜನಸಂದಣಿಯಲ್ಲಿರುವುದಕ್ಕಿಂತಲೂ ಏಕಾಂತದಲ್ಲಿ ಇರುವುದೆಂದರೆ ಎಲ್ಲಿಲ್ಲದ ತೃಪ್ತಿ ಹಲವು ವಿಧದಲ್ಲಿ ಜೀವನವನ್ನು ಅಳವಡಿಸಿಕೊಳ್ಳಬಯಸಿ ಅದಕ್ಕಾಗಿ ಪ್ರಯತ್ನಶೀಲರಾದರೂ ಯಾವುದೇ ಒಂದು ವಿಧವಾಗಿ ಲಕ್ಷವನ್ನು ಮಾತ್ರವೇ ನೆರವೇರಿಸುವುದರಲ್ಲಿ ತಾವು ಐಕ್ಯವಾಗಿ ಬಿಡುತ್ತಾರೆ.ಮುಂದೆ ಪ್ರಯತ್ನ ಪಡುವುದಕ್ಕಿಂತಲೂ ದೈವ ಸಂಕಲ್ಪವೇ ಬಲವತ್ತರವಾಗಿರುವುದೆಂಬ ನಿರ್ಣಯಕ್ಕೆ ಬಂದು ಬಿಡುತ್ತಾರೆ. ಗೃಹಸ್ಥ ಜೀವನ:- ಇವರ ಸಾಂಸಾರಿಕ ಜೀವನ ಚೆನ್ನಾಹಿರುವುದು ಅನುಕೂಲವಾದ ಪತ್ನಿ(ಪತಿ) ದೊರೆಯುವರು ಪ್ರೇಮವ್ಯವಹಾರದಲ್ಲಿ ಇವರು ಸಫಲರಾಗುವುದಿಲ್ಲ.ಪ್ರಯತ್ನ ವಿಪಲವಾದ ನಂತರ ತಾವು ಮಾಡಿದ ಕಾರ್ಯ ನ್ಯಾಯ ಸಮ್ಮತವಲ್ಲ ಎಂಬ ತೀರ್ಮಾನಕ್ಕೆ ಬಂದು ಮನಸ್ಸನ್ನು ಸಮಾದಾನ ಮಾಡಿಕೊಳ್ಳುವರು. ಆರ್ಥಿಕ ಪರಿಸ್ಥಿತಿ:- ಇವರ ಆರ್ಥಿಕ ಪರಿಸ್ಥಿತಿ ಹೆಚ್ಚು ಕಡಿಮೆ ಯಾಗಿಯೇ ಇರುವುದು.ಕೆಲವು ಸಮಯ ಹೆಚ್ಚು ನಷ್ಟವಾದರೂ ಕೊನೆಗೆಆ ಸ್ಥಿತಿ ಯು ಸುದಾರಿಸುವುದು.ಮೂವತ್ತು ವಯಸ್ಸಿನ ವರೆಗೆ ಸ್ವಲ್ಪ ಶ್ರಮ ಕಂಡುಬಂದರೂ ಇವರ ಜೀವನವು ಸುಗಮವಾಗಿ ಸಾಗುವುದು. ಸಕಲ ಸುಖಃ ಸೌಭಾಗ್ಯಗಳನ್ನು ಅನುಬವಿಸುವರು. ದೇಹಾರೋಗ್ಯ:- ಈ ಸಂಖ್ಯೆಯವರಿಗೆ ಜೀರ್ಣಕೋಶಕ್ಕೆ ಸಂಬಂಧಪಟ್ಟವ್ಯಾಧಿಗಳು ಬರುವವು.ಹೊಟ್ಟೆನೋವು,ನರಗಳ ದೌರ್ಬಲ್ಯ ಮೊದಲಾದ ರೋಗಗಳು ಕೆಲವರನ್ನು ಕಷ್ಟಪಡಿಸುವುದು.ಕೆಲವರು ಹಲ್ಲುನೋವಿನಿಂದ ಅವಸ್ಥೆ ಪಟ್ಟರೆ ಕೆಲವರು ಕುಷ್ಟರೋಗದಂತಹ ಚರ್ಮರೋಗಗಳಿಂದ ಬಾಧೆ ಪಡುವರು ಕೆಲವರು ಬಧಿರರಾಗಿಯೂ ಇರಬಹುದು,ಇವಲ್ಲದೆ ರಕ್ತ ಸಂಬಂದವಾದ ಕಾಯಿಲೆಗಳಿಂದ ಕೆಲವರು ನರಳಬಹುದು. ಉದ್ಯೋಗ-ವ್ಯಾಪಾರ:- ಸ್ವತಂತ್ರವಾದ ಉದ್ಯೋಗಕ್ಕಿಂತಲೂ ಒಬ್ಬರ ಅಧೀನದಲ್ಲಿದ್ದು ಸೇವೆ ಸಲ್ಲಿಸುವವರೇ ಈ ಸಂಖ್ಯೆಯಲ್ಲಿ ಅನೇಕ ಮಂದಿ ಇರುವರು.ವ್ಯವಸಾಯವನ್ನು ಮಾಡುವವರು ಎರಡನೇ ವರ್ಗದವರು ಅಲ್ಲದೆ ನೆಲ,ಹೊಲ,ದೊಡ್ದಕಟ್ಟಡಗಳು ಇವುಗಳಿಗೆ ಸಂಬಂದಪಟ್ಟ ಕಂಟ್ರಾಕ್ಟರ್,ಭೂಮಾಲೀಕರು,ಕಲ್ಲಿದ್ದಲು ಮತ್ತು ಇತರೆ ಖನಿಜ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರು ಪ್ರಸಿದ್ದ ಭೂಗರ್ಭಶಾಸ್ತ್ರಜ್ಞರೂ,ಇಂಜಿನಿಯರುಗಳು ಈ ಸಂಖ್ಯೆಯಲ್ಲಿ ಒಳಪಡುತ್ತಾರೆ. ಶನಿಯ ಕಾಲ:- ಶನಿವಾರ ಶನಿಗೆ ಪ್ರಿಯವಾದ ವಾರ ಡಿಸೆಂಬರ್ ೨೨ರಿಂದ ಜನವರಿ ೧೯ ಶನೇಶ್ವರನ ಕಾಲ ೮ ಸಂಖ್ಯೆಯವರು ಈ ಅವದಿಯಲ್ಲಿ ಜನಿಸಿದ್ದರೆ ಬಹಳ ಪ್ರಸಿದ್ದಿ ಹೊಂದುವರು ರಾತ್ರಿಕಾಲ ಬಲಿಷ್ಟನಾಗಿರುವನು ಶನೀಶ್ವರನು. ದಿಕ್ಕು ಮತ್ತು ಪ್ರದೇಶ:- ದಕ್ಷಿಣ ದಿಕ್ಕು ಮತ್ತು ಆಗ್ನೇಯದಿಕ್ಕು,ಗುಹೆಗಳು,ದಟ್ಟವಾದ ಅರಣ್ಯಗಳು,ಮರುಭೂಮಿ ಹಾಳುಬಿದ್ದ ಕಟ್ಟಡಗಳು ಅಶುದ್ದ ಸ್ಥಳಗಳು ಶನೇಶ್ವರನಿಗೆ ಸೇರಿದ ಪ್ರದೇಶಗಳು ಇದರ ಮೂಲಕ ಈ ಸಂಖ್ಯೆಯವರು ವಾಸಿಸುವ ಅಥವ ಸಂಚರಿಸುವ ಸ್ಥಳಗಳನ್ನು ತಿಳಿಯಬಹುದು. ಅದೃಷ್ಟದ ರತ್ನ:- ನೀಲರತ್ನವನ್ನು ಚೆನಾಗಿ ಪರೀಕ್ಷಿಸಿ ಧರಿಸಿದರೆ ಬಹಳ ಭಾಗ್ಯಶಾಲಿಗಳಾಗಿರುವರು,ಇದರಿಂದ ಒಳ್ಳೆ ಪ್ರಭಾವಾನ್ವಿತರಾಗಿ ಕೈಗೊಂಡ ಕಾರ್ಯದಲ್ಲಿ ಜಯಶೀಲರಾಗುವರು. ಅದೃಷ್ಟದ ವರ್ಣ:- ಕಪ್ಪು ೮ಜನ್ಮದಿನಾಂಕದವರು ಕಪ್ಪು ವಸ್ತ್ರ,ಆಭರಣವನ್ನು ಧರಿಸುವುದು ಶುಭವನ್ನು ತರುತ್ತದೆ. ಅನುಕೂಲದಿನಾಂಕಗಳು:-೧,೧೧,೧೯,೨೮ಮತ್ತು೮,೧೭,೨೬ಈ ದಿನಾಂಕಗಳಲ್ಲಿ ಯಾವುದೇ ಶುಭಕಾರ್ಯ ಆರಂಭಿಸುವುದು ಲಾಭವನ್ನು ತರುತ್ತದೆ. ಅನಾನುಕೂಲದಿನಾಂಕಗಳು:- ಮೇಲೆ ಹೇಳಿರುವ ಸಂಖ್ಯೆಗಳನ್ನು ಬಿಟ್ಟು ಉಳಿದೆಲ್ಲವು. ಗ್ರಹಪ್ರೀತಿ:- ಶನಿವಾರ ಶನೇಶ್ವರ ಸ್ತೋತ್ರ ಪಾರಾಯಣ,ದುರ್ಗಾಸ್ತೋತ್ರ ಪರಾಯಣ,ವೆಂಕಟೇಶ್ವರ ಸ್ವಾಮಿಯ ದರ್ಶನ,ಶನಿವಾರ ನವಗ್ರಹ ಸನ್ನಿಧಿಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿಟ್ಟು ತಮ್ಮ ಶಕ್ತ್ಯಾನುಸಾರ ಪ್ರದಕ್ಷಿಣೆ ಮಾಡಿದರೆ ಸಕಲವಿಧವಾದ ಸೌಖ್ಯವನ್ನು ದಯಪಾಲಿಸುವರು.(ಸಾಡೆಸಾತ ಶನಿ,ಅಷ್ಟಮ ಶನಿ ಇರುವವೇಳೆಯೂ ಈ ರೀತಿ ಪೂಜೆ,ಪಾರಾಯಣ ಮಾಡಿದರೆ ದೋಷಪರಿಹಾರವಾಗುತ್ತದೆ) ಒಂಬತ್ತು ಸಂಖ್ಯೆ ೯ ಈ ಸಂಖ್ಯೆಯವರು ೯,೧೮,೨೭ಈ ದಿನಾಂಕದವರಾಗಿರುತ್ತಾರೆ.ಒಂಬತ್ತರ ಅಧಿಪತಿ ಕುಜಗ್ರಹ(ಮಂಗಳ)ಆಗಿರುತ್ತಾನೆ. ರೂಪ ಮತ್ತು ಆಕಾರ:- ಒಳ್ಳೆ ಗಂಭೀರವಾದ ಆಕಾರದಿಂದ ಕೂಡಿ ಸಾದಾರಣ ಎತ್ತರವಾಗಿ ಇರುವರು.ಬಲಿಷ್ಟವಾದ ಎಲುಬುಗಳಿದ್ದು ದಷ್ಟಪುಷ್ಟವಾದ ಶರೀರವಿರುವುದರಿಂದ ಸುರದ್ರೂಪಿಯಾಗಿ ಕಾಣುವರು ತೀಕ್ಷಣವಾದ ನೋಟ,ಕೆಂಚಗಿರುವ ತಲೆಕೂದಲು.ಶರೀರದಲ್ಲಿ ಗಾಯಗಳು ಮೊದಲಾದ ಗುರುತುಗಳು ಇರುತ್ತವೆ.೯ಸಂಖ್ಯೆಯವರು ಭಾಗ್ಯಶಾಲಿಗಳೆಂದು ಸುಲಭವಾಗಿ ಕಂಡುಹಿಡಿಯಬಹುದು. ಗುಣನಡತೆ:- ಈ ಸಂಖ್ಯೆಯವರಲ್ಲಿ ಧೈರ್ಯಮತ್ತು ಸಾಹಸವನ್ನು ಕಾಣಬಹುದು.ಯಾವಕಾರ್ಯದಲ್ಲಾದರೂ ಸಾಹಸದಿಂದ ಮುಂದೆನುಗ್ಗುವರು.ಜಯಪರಾಜಯಗಳನ್ನು ಪೂರ್ವಬಾವಿಯಾಗಿಯೇ ಯೋಚಿಸಿ ನಂತರ ಕಾರ್ಯರಂಗಕ್ಕೆ ಇಳಿಯುವುದೆಂಬ ಸ್ವಬಾವವು ಇವರಲ್ಲಿಲ್ಲ ಆರಂಭಿಸಿದ ಕಾರ್ಯದಲ್ಲಿ ಪರಾಜಯವಾದರೂ ಮನಸ್ಸಿನಲ್ಲಿ ಕಿಂಚಿತ್ತೂ ಚಿಂತೆ ಇಲ್ಲದೆ ಎನೂ ನಡೆಯದ ರೀತಿಯಲ್ಲಿ ಇದ್ದುಬಿಡುವರು. ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳಗ್ರಹವನ್ನು ತರುಣನಾಗಿಯು ಸೇನಾಧಿಪತಿಯಾಗಿಯೂ ವರ್ಣಿಸಿದೆ.ಆದುದರಿಂದ ೯ಸಂಖ್ಯೆಯವರು ತಮ್ಮ ವೃದ್ದಾಪ್ಯದಲ್ಲೂ ಒಳ್ಳೆ ಹುರುಪಿನಿಂದ ಆಲಸ್ಯವಿಲ್ಲದೆ ವಿಶ್ರಾಂತಿ ಆಪೇಕ್ಷಿಸದೆ ಉತ್ಸಾಹದಿಂದಲೇ ಇರುವರು.ಇವರಿಗೆ "ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು" ಎಂಬುದಿರಲಾರದು ಯಾವುದಾದರೂ ವ್ಯವಹಾರದಲ್ಲಿ ತಪ್ಪುಗಳು ಏರ್ಪಟ್ಟರೆ ಜಗಳಕ್ಕೂ ಹಿಂಜರಿಯದವರು ಇವರೊಂದಿಗೆ ಬಹು ಜಾಗ್ರತೆಯಿಂದ ನಡೆದುಕೊಳ್ಳಬೇಕು. ನಿತ್ಯನೂತನವಾದ ಅನುಸಂಧಾನಗಳನ್ನು,ಪರೀಕ್ಷೆಗಳನ್ನು ಮಾಡುವುದಾದರೆ ಇವರಿಗೆ ಬಹಳ ಉತ್ಸಾಹ ಈ ಸಂಖ್ಯೆಯವರು ಮಹಿಳೆಯಾಗಿದ್ದರೆ ಅವರ ಮನೋಭಾವವನ್ನು ಕಂಡುಹಿಡಿಯುವುದು ಬಲು ಕಷ್ಟ.ಆದರೆ ಸಾಮಾನ್ಯವಾಗಿ ಸಹನಶೀಲೆಯರು,ಸದ್ಗುಣಿಗಳು ಆಗಿರುವರು. ಗೃಹಸ್ಥ ಜೀವನ:- ಇವರು ಪ್ರೇಮವ್ಯವಹಾರದಲ್ಲಿ ಪರಂಪರಾಗತವಾದ ಕಟ್ಟುನಿಟ್ಟುಗಳಿಗೆ ವಿರುದ್ದವಾಗಿ ಪ್ರವರ್ತಿಸುವರು ಇದರಿಂದ ಇವರ ಪ್ರತಿಷ್ಟೆಗೆ ಕುಂದು ಬಂದರೂ ಬರಬಹುದು,ಆಗಲೂ ಅದನ್ನು ಸರಿಪಡಿಸಿಕೊಳ್ಳುವ ಸ್ವಬಾವ ಇವರಿಗೆ ಇರುವುದಿಲ್ಲ ಇವರ ಕೌಟುಂಬಿಕ ಜೀವನವು ಅಷ್ಟೊಂದು ಪ್ರಶಾಂತವಾಗಿರುವುದೆಂದು ಹೇಳಲು ಸಾದ್ಯವಿಲ್ಲ.ಇವರಿಗೆ ಸ್ವಾಬಾವಿಕವಾಗಿರುವ ಮುಂಗೋಪದಿಂದ ಸತಿ-ಪತಿಗಳಲ್ಲಿ ವೈಮನಸ್ಸು ಉಂಟಾದರೂ ಕೊನೆಗೆ ಒಂದು ವಿಧವಾದ ಶಾಂತಿಯು ನೆಲೆಸುವುದು. ಆರ್ಥಿಕ ಪರಿಸ್ಥಿತಿ:- ಇವರ ಆರ್ಥಿಕ ಪರಿಸ್ಥಿತಿ ಹೆಚ್ಚು ತೃಪ್ತಿಕರವಾಗಿಲ್ಲದಿದ್ದರೂ ಅವಶ್ಯಕತೆಗಳಿಗೆ ಬೇಕಾಗುವ ಹಣವು ಮಾತ್ರ ಇವರಿಗೆ ಸಿಗುತ್ತಲೇ ಇರುತ್ತದೆ.ಕೈ ಉದ್ದವಾಗಿದ್ದು ಮಿತವ್ಯಯವೇನೆಂದೇ ತಿಳಿಯದ ಸ್ವಬಾವವುಳ್ಲವರಾದುದರಿಂದ ಕೆಲವು ಬಾರಿ ಹಣಕ್ಕಾಗಿ ಪರದಾಡಬೇಕಾಗುವುದು. ದೇಹಾರೋಗ್ಯ:- ಇವರು ಆರೋಗ್ಯವಂತರಾಗಿದ್ದರೂ ನರಗಳ ದೌರ್ಬಲ್ಯ ದಿಂದಲೂ ತಲೆನೋವಿನಿಂದಲೂ ಕಷ್ಟಪಡುವರು.ಕೆಲವರಿಗೆ ಉದರ ಶೂಲೆ,ಮೂತ್ರಾಶಯಕ್ಕೆ ಸಂಬಂಧಪಟ್ಟ ನೋವುಗಳು ಆಗಾಗ್ಗೆ ಉಂಟಾಗುತ್ತಿರುತ್ತವೆ.ಅಲ್ಲದೆ ಕೆಲವು ಸಲ ಏಟುಗಳು ತಗುಲುತ್ತಲೇ ಇರುವುದರಿಂದ ಶರೀರದಲ್ಲಿ ಗಾಯಗಳಾಗುವುವು ಇದು ಒಂದು ಸಹಜವಾದ ಸಂಬಂದವಾದರೂ ದೈವ ಪ್ರಾರ್ಥನೆಗಳ ಮೂಲಕ ಈ ನೋವುಗಳನ್ನು ಇಲ್ಲದಂತೆ ಮಾಡಲು ಸಾಧ್ಯವಿಲ್ಲವಾದರೂ ಕಡಿಮೆಮಾಡಿಕೊಳ್ಳಬಹುದು. ಉದ್ಯೋಗ-ವ್ಯಾಪಾರ:- ಅಂಗಾರಕನನ್ನು ಅಧಿಪತಿಯಾಗಿರುವ ೯ಸಂಖ್ಯೆಯವರಲ್ಲಿ ಹಲವರು ಆಯುಧಗಳನ್ನು ಧರಿಸುವ ಮಿಲಿಟರಿಮತ್ತು ಪೋಲೀಸ್ ವಿಭಾಗದಲ್ಲಿ ಸಾಹಸ ಕಾರ್ಯಗಳನ್ನು ಮಾಡುವ ಉದ್ಯೋಗದಲ್ಲಿರುವರು.ಕೆಲವರು ಸರ್ಕಾರಿ ಉದ್ಯೋಗಿಗಳಾಗಿರುವರು ಕೆಲವರು ಶಸ್ತ್ರಚಿಕಿತ್ಸಾ ವೈದ್ಯರುಗಳಾಗಿರುತ್ತಾರೆ.ತುಂಬಾ ಪ್ರಸಿದ್ದಿಕೂಡ ಆಗಿರುತ್ತಾರೆ. ಅಲ್ಲದೆ ಈ ಸಂಖ್ಯೆಯವರು ಅಗ್ನಿ,ವಿದ್ಯುತ್ ಸಂಬಂದಪಟ್ಟ ದೊಡ್ಡ ಭವನಗಳು,ಅಣೆಕಟ್ಟುಗಳು,ಸೇತುವೆಗಳು ಮೊದಲಾದವನ್ನು ನಿರ್ಮಿಸುವ ಇಂಜಿನಿಯರುಗಳಾಗೂ ಕೆಲವರುಈ ಸಂಖ್ಯೆಯವರಾಗಿರುತ್ತಾರೆ. ಮಂಗಳನ ಕಾಲ:- ಮಾರ್ಚ್ ೨೧ರಿಂದ ಏಪ್ರಿಲ್ ೧೯ರವರೆಗೆ ೯ಕ್ಕೆ ಸಂಬಂದಪಟ್ಟವರು ಈ ಅವಧಿಯಲ್ಲಿ ಮಂಗಳವಾರ ರಾತ್ರಿಯಲ್ಲಿ ಜನಿಸಿದ್ದರೆ ತುಂಬಾ ಬಾಗ್ಯಶಾಲಿಗಳಾಗಿರುವರು. ಮಂಗಳವಾರ ಯಾವ ಕಾರ್ಯವನ್ನೂ ಆರಂಭಿಸದೇ ಇರುವುದು ಕ್ಷೇಮ.ಆದರೆ ಅಗ್ನಿಗೆ ಸಂಬಂದಪಟ್ಟ ಕಾರ್ಯಗಳನ್ನು ಮಂಗಳ ಹೋರೆಯಲ್ಲಿ ಮಾಡಬಹುದು. ದಿಕ್ಕು ಮತ್ತು ಪ್ರದೇಶ:- ಕುಜನಿಗೆ ದಕ್ಷಿಣದಿಕ್ಕು ಶುಭಕರವಾದ ದಿಕ್ಕು ಅಡಿಗೇ ಮನೆ,ಕಸಾಯಿಕಾನೆ,ಸಮರಭೂಮಿ ಯಂತವು ಕುಜನ ಪ್ರದೇಶಗಳು. ಅದೃಷ್ಟ ರತ್ನ:-ಹವಳ,ಅಂಗಾರಕ ದೋಷ ಪರಿಹಾರಕ್ಕೂ,ಕಾರ್ಯಸಿದ್ದಿಗೂ ಚೆನ್ನಾಗಿ ಪರಿಶೀಲಿಸಿದ ಉತ್ತಮವಾದ ಹವಳವನ್ನು ಉಂಗುರ,ಸರ,ಮೊದಲಾದವುಗಳಲ್ಲಿ ಧರಿಸುವುದು ಎಲ್ಲಾಕಡೆಗಳಿಂದ ಜಯವು ಸಿಗುವುದು. ಅದೃಷ್ಟದ ವರ್ಣ:- ಕೆಂಪು,ಅಂದರೆ ರಕ್ತವರ್ಣ ಈ ಬಣ್ಣದ ವಸ್ತ್ರ,ಆಭರಣಗಳನ್ನು ಧರಿಸುವುದು ಶುಭತರುತ್ತದೆ. ಅನುಕೂಲದಿನಾಂಕಗಳು:-೨,೩,೭,೯,೧೧,೧೨,೧೮,೨೦,೨೧,೨೫,೨೯,೩೦,ಈದಿನಾಂಕಗಳು ಅನುಕೂಲವಾದವು ಆದುದರಿಂದ ಈ ದಿನಾಂಕಗಳಲ್ಲಿ ಆರಂಬಿಸುವ ಯಾವ ಕೆಲಸವಾದರೂ ತೃಪ್ತಿಕರವಾಗಿ ಕೊನೆಗೊಳ್ಳುತ್ತದೆ. ಅನಾನುಕೂಲದಿನಾಂಕಗಳು:- ಮೇಲೆ ಹೇಳಿರುವ ದಿನಾಂಕಗಳನ್ನು ಬಿಟ್ಟು ಉಳಿದೆಲ್ಲವು.ಆದರೆ ಅವುಗಳಲ್ಲಿ ೬,೧೫,೨೪ ಈ ದಿನಾಂಕಗಳು ಬಹಳ ಶುಭಕಾರಕ ವಾಗಿರುತ್ತವೆ.ಈ ದಿನಾಂಕಗಳಲ್ಲಿ ಯಾವ ಕಾರ್ಯ ಮಾಡಿದರೂ ಯಶಸ್ವಿಯಾಗದಿರಲಾರದು. ಗ್ರಹಪ್ರೀತಿ:- ಶ್ರೀ ಸುಬ್ರಹ್ಮಣ್ಯಸ್ವಾಮಿಯ ಸ್ತೋತ್ರಗಳನ್ನು ಪಾರಾಯಣ ಮಾಡಿ ಅಭಿಷೇಕ ಅರ್ಚನೆಗಳನ್ನು ಮಾಡುತ್ತಾ ಬಂದರೆ ಇವರಿಗೆ ಕಾರ್ಯಸಿದ್ದಿ ಉಂಟಾಗಿ ಅಂಗಾರಕ ದೋಷವು ಪರಿಹಾರವಾಗುವುದು. ಹಿಂಧೂಗಳು ತಮ್ಮ ರಾಶಿಗನುಗುಣವಾಗಿ ಯಾವ ಗ್ರಹ ದೋಷವು ಉಂಟಾಗಿರುವುದೋ ಅದನ್ನು ಕ್ರಮವರಿತು ಪೂಜಿಸುವುದರಿಂದ ಸ್ತೋತ್ರ ಪಠಣ,ಪಾರಾಯಣ ಮಾಡುವುದರಿಂದ ಆಯಾ ಗ್ರಹಕ್ಕೆ ಸಂಬಂದಪಟ್ಟ ವಾರ,ನಕ್ಷತ್ರ,ಧಾನ್ಯ,ವಸ್ತ್ರ,ರತ್ನ,ಸ್ತೋತ್ರಗಳನ್ನು ಜಪಿಸಿ ನಿಯಮ ರೀತಿ ನಡೆಯುವುದರಿಂದ ಸಕಲ ಗ್ರಹದೋಷವು ನಿವಾರಣೆಯಾಗುವುದು. ನವಗ್ರಹ ಗೋಚಾರ ಮತ್ತು ಲಗ್ನದಲ್ಲಿ ನವಗ್ರಹಗಳ ಸ್ಥಾನ ಇವುಗಳನ್ನು ಪರಿಶೀಲಿಸಿ ಯಾವ ಗ್ರಹ ತಮಗೆ ಕ್ರೂರವಾಗಿದೆಯೋ ಅದರ ಪೂಜೆ,ಜಪ,ಧಾನ್ಯ,ವಸ್ತ್ರ ದಾನ ಮಾಡುವುದರಿಂದ ದೋಷವು ಪರಿಹಾರವಾಗುವುದು. ಈ ಕೆಳಗಿನ ಗ್ರಹ ಮಂತ್ರದೊಂದಿಗೆ ಗ್ರಹಶಾಂತಿ ಮಾಡಿಕೊಳ್ಳಿ. ನವಗ್ರಹ ಸ್ತೋತ್ರ ಸೂರ್ಯ ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ| ತಮೋಘ್ನಂ ಪ್ರಣತೋಸ್ಮಿ ದಿವಾಕರಂ| ಕಾಶ್ಯಪ ಮುನಿಗಳ ವಂಶದಲ್ಲಿ ಜನಿಸಿ ಕೆಂಪು ದಾಸವಾಳ ಹೂವಿನಂತೆ ರಕ್ತವರ್ಣವುಳ್ಳವನಾಗಿ ಪ್ರಚಂಡ ಪ್ರಕಾಶಪುಂಜನಾಗಿ ದರ್ಶನ ವಿತ್ತು ತನ್ನನ್ನು ಪೂಜಿಸುವವರ ಪಾಪರಾಶಿಯನ್ನು ಭಸ್ಮಮಾಡುವ ಅಂಧಕಾರಕ್ಕೆ ವೈರಿಯಾದ ಸೂರ್ಯದೇವನಿಗೆ ನಮಸ್ಕರಿಸುತ್ತೇನೆ. ಚಂದ್ರ ಧದಿಶಂಖ ತುಷಾರಾಭಂಕ್ಷೀರೋದಾರ್ಣವ ಸಂಭವಂ| ನಮಾಮಿ ಶಶಿನಂ ದೇವಂ ಶಂಭೋ ಮುರ್ಕುಟಭೂಷಣಂ|| ಕ್ಷೀರ ಸಾಗರದಲ್ಲಿ ಉದಿಸಿ ಧದಿ ಶಂಖ ಹಿಮ ಬಿಂದುಗಳಂತೆ ಬಿಳುಪಾದ ಕಾಂತಿಯುಳ್ಳವನಾಗಿ ಪರಮೇಶ್ವರನ ಶಿರೋಭರಣನಾಗಿ ಸಕಲ ಸಂಪತ್ತನ್ನೂ ನೀಡುವ ಚಂದ್ರನನ್ನು ನಮಸ್ಕರಿಸುತ್ತೇನೆ. ಮಂಗಳ ಧರಣೀಗರ್ಭ ಸಂಭೂತಂ ವಿಧ್ಯುತ್ಕಾಂತಿ ಸಮಪ್ರಭಂ| ಕುಮಾರಂ ಶಕ್ತಿಹಸ್ತಂಚ ಮಂಗಳಂ ಪ್ರಣಮಾಮ್ಯಹಂ|| ಭೂದೇವಿಯ ಗರ್ಭದಲ್ಲಿ ಜನಿಸಿ ಮಿಂಚಿನಂತೆ ಪ್ರಕಾಶವುಳ್ಳವನಾಗಿ ಹಸ್ತದಲ್ಲಿ ಶಕ್ತ್ಯಾಯುಧವನ್ನು ಧರಿಸಿ ಕುಮಾರ ರೂಪವುಳ್ಳವನಾಗಿ "ಮಂಗಳ"ಎಂಬ ನಾಮಧ್ಯೇಯನಾಗಿರುವ ಅಂಗಾರಕನನ್ನು ನಮಸ್ಕರಿಸುತ್ತೇನೆ. ಬುಧ ಪ್ರಿಯಾಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಾ ಬುಧಂ| ಸೌಮ್ಯಂ ಸೌಮ್ಯ ಗುಣೋಪೇತಂ ನಮಾಮಿ ಶಶಿನ ಸುತಂ|| ಪ್ರಿಯಾಂಗು ಪುಷ್ಪದ ಮೊಗ್ಗಿನಂತೆ ಕೃಷ್ಣವರ್ಣನಾಗಿ ಅನುಪಮನಾಗಿ ಅತಿ ಸುಂದರಾಕಾರನಾಗಿ ಉತ್ತಮ ಜ್ಞನವೇ ಮೊದಲಾದ ಗುಣಗಳಿಗೆಲ್ಲಾ ಕಾರಣ ಭೂತನಾಗಿ ಇರುವ ಚಂದ್ರನ ಪುತ್ರನಾದ ಬುಧನನ್ನು ನಮಸ್ಕರಿಸುತ್ತೇನೆ. ಗುರು ದೇವಾನಾಂಚ ಋಷೀಣಾಂಚ ಗುರುಕಾಂಚನ ಸನ್ನಿಭಂ| ಗುರುಚೈವ ತ್ರಿಲೋಕಸ್ಯ ತಂಗುರು ಪ್ರಣಮಾಮ್ಯಹಂ|| ದೇವತೆಗಳಿಗೂ ಋಷಿಗಳಿಗೂ ಗುರುವಾಗಿ ಪರಿಶುದ್ದವಾದ ಸ್ವರ್ಣದಂತೆ ಕಾಂತಿಯುತನಾಗಿ ಜ್ಞಾನರೂಪನಾಗಿ ತ್ರಿಲೋಕೇಶನಾಗಿ ದರ್ಶನವೀವ ಬೃಹಸ್ಪತಿಯನ್ನು ನಮಸ್ಕರಿಸುತ್ತೇನೆ. ಶುಕ್ರ ಹಿಮಕುಂದ ಮೃಣಲಾಭಂ ದೈತ್ಯಾನಾಂ ಪರಮಗುರುಂ| ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ|| ಬೃಗು ವಂಶೋದ್ಬವನಾಹಿ ಹಿಮಕಿರಣ ಕುಂದಪುಷ್ಪ ಕಮಲನಾಳ ಮೊದಲಾದವುಗಳಂತೆ ಕಾಂತಿಯುತನಾಗಿ ರಾಕ್ಷಸರಿಗೆ ಶ್ರೇಷ್ಟವಾದ ಆಚಾರ್ಯನಾಗಿ ಎಲ್ಲಾ ಶಾಸ್ತ್ರಗಳನ್ನು ಭೋದಿಸುವ ಪ್ರತಿಭೆಯನ್ನು ಪಡೆದಿರುವ ಶುಕ್ರಾಚಾರ್ಯನನ್ನು ನಮಸ್ಕರಿಸುತ್ತೇನೆ. ಶನಿ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ| ಛಾಯಾ ಮಾರ್ತಾಂಡ ಸಂಭೂತಂ ವಂದೇಹಂ ತಂಶನೈಶ್ಚರಂ|| ಛಾಯಾ ದೇವಿಯಲ್ಲಿ ಸೂರ್ಯನಿಂದ ಜನಿಸಿದ ಸುಪುತ್ರನಾಗಿ ನೀಲಾಂಜನದಂತೆ ಕಾಂತಿಯಿಂದ ಕೂಡಿದ ಶರೀರವುಳ್ಳವನಾಗಿ ಯಮನಿಗೆ ಅಗ್ರಜನಾದ ಶ್ರೀ ಶನೀಶ್ವರನನ್ನು ನಮಸ್ಕರಿಸುತ್ತೇನೆ. ರಾಹು ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯಾದಿ ಮರ್ದನಂ| ಸಿಂಹಿಕಾಗರ್ಭ ಸಂಭೂತಂ ತಂರಾಹುಂ ಪ್ರಣಮಾಮ್ಯಹಂ|| ಸಿಂಹಿಕೆಯ ಗರ್ಭದಲ್ಲಿ ಉದಿಸಿ ತಲೆಯಯೊಂದಿಗೆ ಶೋಭಿಸುವ ಅರ್ಧಕಾಯನಾದರೂ ಮಹಾವೀರನಾಗಿ ಚಂದ್ರ-ಸೂರ್ಯರನ್ನು ತೊಂದರೆಗೊಳಿಸುವ ರಾಹುಗ್ರಹವನ್ನು ನಾನು ನಮಸ್ಕರಿಸುತ್ತೇನೆ. ಕೇತು ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ| ರೌದ್ರಂ ರೌದ್ರಾತ್ಮಕಂ ಘೋರಂ ತಂಕೇತುಂ ಪ್ರಣಮಾಮ್ಯಹಂ|| ಪಲಾಶಪುಷ್ಪಕ್ಕೆ ಸಮಾನವಾದ ರಕ್ತಕಾಂತಿಯುಳ್ಳವನಾಗಿ ಶಿರೋಭಾಗನಾಗಿ ನಕ್ಷತ್ರಗಳನ್ನು ಗ್ರಹಗಳನ್ನು ಉಳ್ಳವನಾಗಿ ರೌದ್ರನಾಗಿ ಪಾಪಿಗಳಲ್ಲಿ ಅತ್ಯಂತ ಕುಪಿತನಾಗಿ ಭಯಂಕರಾಕಾರಕನಾಗಿ ತೋರುವ ಕೇತುವನ್ನು ನಮಸ್ಕರಿಸುತ್ತೇನೆ. ವಧೂ-ವರರಿಗೆ ವಿವಾಹಕ್ಕೆ ಶುಭಾ-ಅಶುಭ ಹೊಂದಾಣಿಕೆ:- ಘಟನೆಯನ್ನು ನೋಡುವ ವಿಧಾನ:- ಒಂದು ನಿರ್ದಿಷ್ಟವಾದ ಸಂಖ್ಯೆಯವರಿಗೆ ಇನ್ನೊಂದು ಸಂಖ್ಯೆಯವರೊಡನೆ ಘಟನೆಯನ್ನು ನೋಡಬೇಕಾದರೆ ಅವರು ಇಬ್ಬರೂ ಹುಟ್ಟಿದ ಇಂಗ್ಲೀಷ್ ದಿನಾಂಕದ ಮೂಲಕ ನೇಡಬಹುದು.ಅಲ್ಲದೆ ಅವರು ಹುಟ್ಟಿದ ದಿನಾಂಕ+ತಿಂಗಳು+ವರ್ಷ ಇವುಗಳ ನೆಲ್ಲಾ ಕೂಡಿಸಿದರೆ ಬರುವ ಸಮುಷ್ಟಿ ಸಂಖ್ಯೆಯ ಮೂಲಕ ಘಟನೆಯನ್ನು ಹೊಂದಿಸಿ ಕೊಳ್ಳುವುದು ಉತ್ತಮವೆಂದು ಸಂಖ್ಯಾ ಶಾಸ್ತ್ರಜ್ಞರು ನಿರ್ಣಯಿಸಿದ್ದಾರೆ. ಉದಾ:- ವರನು ಹುಟ್ಟಿದ ದಿನಾಂಕ ೨೦-೦೫-೧೯೭೦ ವಧುವಿನ ಹುಟ್ಟಿದ ದಿನಾಂಕ ೨೧-೯-೧೦೮೧ ಇದರಲ್ಲಿ ಎರಡನೇ ದಿನಾಂಕದಲ್ಲಿ ಹುಟ್ಟಿದ ಸಂಖ್ಯೆಯುಳ್ಳ ವರನಿಗೆ ೨,೭ನೇ ದಿನಾಂಕದಂದು ಹುಟ್ಟಿದ ಕನ್ಯೆಯು ಸರಿಹೋಗುತ್ತಾಳೆ ಏಕೆಂದರೆ ೨ ಸಂಖ್ಯೆಗೆ ೨,೭ ಅನುಕೂಲ ಸಂಖ್ಯೆಯಾಗಿವೆ. ಆದುದರಿಂದ ದಿನಾಂಕ ಸಂಖ್ಯೆಯನ್ನು ಮಾತ್ರ ಇಟ್ಟುಕೊಂಡರೆ ಈ ವಿವಾಹವು ಕೂಡಿಬರುವುದು.ಇದರ ದಿನಾಂಕ,ತಿಂಗಳು,ವರ್ಷದ ಸಮುಷ್ಟಿ ಸಂಖ್ಯೆಯು ಈ ಕೆಳಗಿನಂತೆ ಇರುವುದು:- ವರ ೨+೦+೦+೫+೧+೯+೭+೦=೨೪=೬ ವಧು೨+೧+೯+೧+೯+೮+೧=೪=೩೫=೮ ಹೀಗೆ ೬ ಸಂಖ್ಯೆಯುಳ್ಳವರಿಗೆ ೩,೬,೯ ಸಂಖ್ಯೆಯುಳ್ಳವರು ಅನುಕೂಲಳು ೮ ಸಂಖ್ಯೆಯ ವರು ಅನುಕೂಲರಲ್ಲ. ಅದೇ ರೀತಿ ೮ ಸಂಖ್ಯೆಯವರಿಗೆ ೨,೪,೫ ಸಂಖ್ಯೆಯುಳ್ಳವರು ಅನುಕೂಲವಾಗಿರುವರು.ಈ ರೀತಿಯಲ್ಲಿ ಎರಡೂ ರೀತಿಯಲ್ಲಿ ನೋಡಬಹುದು. ಒಂದು ಸಂಖ್ಯೆಗೆ ಜನ್ಮ ದಿನಾಂಕ೧ ಹಾಗು ಜನ್ಮದಿನಾಂಕ,ಮಾಸ,ವರ್ಷಗಳ ಸಮುಷ್ಟಿ ಸಂಖ್ಯೆ ೧ ವುಳ್ಳವರ ವರ ಅಥವ ವಧು ವಿಗೆ ೪,೬,೭ ಸಂಖ್ಯೆಯವರು ಘಟನೆಯು ಸರಿಯಾಗುವುದು.೨,೩,೫,೮,೯ಈ ಸಂಖ್ಯೆಯವರು ಸರಿಹೊಂದುವುದಿಲ್ಲ.ಇಂತಹವರೊಂದಿಗೆ ವಿವಾಹ ಮಾಡಿದರೆ ಆಗಾತವಾಗುತ್ತದೆ. ಎರಡು ೨:- ೩,೫,೮ ಸಂಖ್ಯೆಯವರು ಅನುಕೂಲರು ೧,೨,೪,೬,೭,೯ ಈ ಸಂಖ್ಯೆಯವರು ಅನಾನುಕೂಲರು ಆದ್ದರಿಂದ ೨ ಸಂಖ್ಯೆಯವರಿಗೆ ೩,೫,೮ ಸಂಖ್ಯೆಯವರನ್ನು ವಿವಾಹ ಮಾಡಬೇಕು ಆಗ ಅವರ ಜೀವನ ಬಹಳ ಉತ್ತಮವಾಗಿರುತ್ತದೆ. ೩ ಮೂರು:- ಸಮುಷ್ಟಿ ಸಂಖ್ಯೆ ೩ ಉಳ್ಳವರಿಗೆ ಅನುಕೂಲ ಸಂಖ್ಯೆಗಳು ೬,೮,೯ ಅನಾನುಕೂಲ ಸಂಖ್ಯೆಗಳು ೧,೨,೩,೪,೫.೭( ೬,೮ ರ ಸಂಖ್ಯೆಯವರು ವಿಶೇಷವಾಗಿ ಶುಭ.) ೪ನಾಲ್ಕು:- ಸಮುಷ್ಟಿ ಸಂಖ್ಯೆ ೪ಕ್ಕೆ ಅನುಕೂಲ ಸಂಖ್ಯೆಗಳು ೧,೭,೯ ಅನಾನುಕೂಲ ಸಂಖ್ಯೆಗಳು ೨,೩,೫,೬,೮. ೫ ಐದು:- ಸಮುಷ್ಟಿ ಸಂಖ್ಯೆ ೫ಕ್ಕೆ ಅನುಕೂಲಸಂಖ್ಯೆಗಳು,೨,೩,೮ ಯೋಗ್ಯರು. ಅನಾನುಕೂಲ ಸಂಖ್ಯೆಗಳು,೧,೪,,೫,೬,೯.(೨,೩ ವಿಶೇಷ ಲಾಭ) ಆರು ಸಂಖ್ಯೆಯವರು ೬:- ಸಮುಷ್ಟಿ ಸಂಖ್ಯೆ ೬ ಕ್ಕೆ ೩,೬,೯ ಉತ್ತಮ.ಅನಾನುಕೂಲ ಸಂಖ್ಯೆಗಳು.೧,೨,೪,೫,೭,೮.(೬ವಿಶೇಷ ಶುಭ) ೭ ಏಳು :- ಸಮುಷ್ಟಿ ಸಂಖ್ಯೆ ೭ಕ್ಕೆ ೧,೪,೮ ಅನುಕೂಲ,೨,೩,೫,೭,೯ ಅನಾನುಕೂಲ (೧ವಿಶೇಷ) ಎಂಟು ೮:= ಸಮುಷ್ಟಿ ಸಂಖ್ಯೆ ೮ಕ್ಕೆ ೨,೪,೫ ಅನುಕೂಲ, ೧,೩,೬,೭,೮,೯ ಅನಾನುಕೂಲ. ಒಂಬತ್ತು ೯:- ಸಮುಷ್ಟಿ ಸಂಖ್ಯೆ ೯ಕ್ಕೆ ೩,೬,೭ ಅನುಕೂಲ,೧,೨,೪,೫,೮,೯ ಅನಾನುಕೂಲ. ***** ****** ******* ****** ******* ಕೆಲವು ಉಪಯುಕ್ತ ಮಂತ್ರಗಳು. ಸರಸ್ವತಿ ಸ್ತೋತ್ರ ನಿತ್ಯ ಪ್ರಾರ್ಥನೆಗೆ ಸರ್ವ ಸ್ವರೂಪೇ ಸರ್ವೇಶೆ ಸರ್ವಶಕ್ತಿ ಸಮನಿತೆ ಭಯೋಭ್ಯಶ್ತ್ರಾಹಿ ನೋ ದೇವಿ ದುರ್ಗೆದೇವಿ ನಮೋಸ್ತುತೆ ರೋಗಾನಾಶೇನ ಪಹಂಸಿತುಷ್ಟಾ ರೋಷ್ಟಾತುಕಾಮಾನ್ ಸಕಲಾನಭೀಷ್ಟಾನ್ ಸರ್ವಭಾಧಾ ಪ್ರಕಾಶಮಾನಾ ತ್ರೈಲೋಕ್ಯಾಸಾಬಿಲೇಶ್ವರಿ ಏವ ಮೇವತ್ವ ಯಾಕಾರ್ಯ ಸುಸ್ಮದ್ವರಿ ವಿನಾಶನಮ್. ಅಥವ ಓದಲು ಕುಳಿತುಕೊಳ್ಳುವ ಮುನ್ನ ಬರೆಯುವ ಮುನ್ನ ೧೧ಸಲ ಈ ಮಂತ್ರವನ್ನು ಜಪಿಸುವುದು. *ಓಂ ವವ ವದ ವಾಗ್ದೇವಿಯೇ ಸ್ವಾಹಾ* ಸರ್ವಗ್ರಹ ಪೀಡೆ ನಿವಾರಣೆಗೆ ಗ್ರಹದೋಷಗಳಿಗೆ ದರಿದ್ರನಾಶಕ್ಕೆ ಜನ್ಮಪರ್ಯಂತ ಯಾವುದೇ ದೋಷ ಇರದಂತೆ ಮಾಡಲು. "ಓಂನಮೋ ಭಾಸ್ಕರಾಯ ಮಮ ಸರ್ವ ಗ್ರಹಪೀಡಾ ನಿವಾರಣಂ ಕುರುಕುರು ಸ್ವಾಹಾ" ೧೦೮ಸಲ ಜಪಿಸಿರಿ ನಂತರಈ ಕೆಳಗಿನ ವಸ್ತುಗಳನ್ನು ಒಂದು ಮುಚ್ಚಳ ಸಹಿತ ಗಡಿಗೆ ಅಥವ ಮಡಿಕೆಯಲ್ಲಿ ಹಾಕಿ ಅರಳಿ ಮರದ ಬುಡದಲ್ಲಿ ಶನಿವಾರ ಸಾಯಂಕಾಲದ ನಂತರ ಇಟ್ಟು ಬರಬೇಕು.ಅಥವ ಅರಳಿ ಮರದ ಬೇರಿನ ಕೆಳಗೆ ಗುಂಡಿ ತೆಗೆದು ಮುಚ್ಚಬೇಕು. ಗಡಿಗೆ ಅಥವ ಮಡಿಕೆಯಲ್ಲಿ ಹಾಕಬೇಕಾದ ವಸ್ತುಗಳು. ಎಕ್ಕದಬೇರು,ಉಮ್ಮತ್ತಿ ಬೇರು,ಉತ್ತರಾಣಿ ಬೇರು,ಧರ್ಭೆಬೇರು,ರಾಗಿ ಬೇರು,ನೇರಳೇಬೆರು,ಮತ್ತು ಎಲೆ ಅತ್ತಿ ಎಲೆ ಮಾವಿನ ಎಲೆ ಒಂದು ಹೊಸ ಗಡಿಗೆ ಅಥವ ಮಡಿಕೆ ಹಾಲು ತುಪ್ಪ ಜೇನು, ಅಕ್ಕಿ ಗೋದಿ ಹೆಸರುಕಾಳು,ಎಳ್ಳು, ಬಿಳಿಸಾಸಿವೆ,ಧರ್ಭೆ,ಚಂದನ,ಗೋಮೂತ್ರ ಎಲ್ಲವನ್ನು ಸೇರಿಸಿ ಶನಿವಾರ ಸಾಯಂಕಾಲ ಸ್ನಾನ ಮಾಡಿ ದೇವರ ಮುಂದಿಟ್ಟು ಮೇಲಿನ ಮಂತ್ರವನ್ನು ೧೦೮ಸಲ ಜಪಿಸುತ್ತಾ ಈ ಎಲ್ಲಾ ವಸ್ತುಗಳನ್ನು ಗಡಿಗೆಯಲ್ಲಿ ಹಾಕಿ ಕೊನೆಯಲ್ಲಿ ಮಂಗಳಾರತಿ ಮಾಡಿ ಮನೆಯವರೆಲ್ಲರೂ ಅದಕ್ಕೆ ನಮಿಸಿ ನಂತರ ಅದನ್ನು ಅರಳಿ ಮರದ ಬುಡದಲ್ಲಿ ಇಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಯಾವುದೇ ಗ್ರಹದೋಶ ಮತ್ತು ದರಿದ್ರತೆ ನಿವಾರಣೆಯಾಗುತ್ತದೆ.ಜನ್ಮಾಂತರದಲ್ಲಿ ಇನ್ನುಮುಂದೆ ಯಾವುದೇ ಕಾಟ ತಟ್ಟುವುದಿಲ್ಲ. ಜೊತೆಯಲ್ಲಿ ಈ ರೀತಿ ಮಾಡುವುದು, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಈ ಕೆಳಗಿನ ವಸ್ತುಗಳಿಂದ ದೂಪದ ಹೊಗೆಹಾಕಿದರೆ ದುಷ್ಟಶಕ್ತಿಗಳ ಕಾಟ,ಭೂತ,ಪ್ರೇತ,ಶಾಕಿನಿ,ಡಾಕಿಣಿ,ಮಾಟ,ಇತ್ಯಾದಿಗಳಕಾಟ ದೂರವಾಗುತ್ತದೆ. ವಸ್ತುಗಳು:- ಗರಿಕೆ,ಧರ್ಬೆ,ಬಿಳಿಸಾಸಿವೆ,ಹಿಪ್ಪೇಬೀಜ(ಬೀಜ ಸಿಗದಿದ್ದಾಗ ಹಿಪ್ಪೆ ಎಣ್ಣೆ)ಧಶಾಂಗಧೂಪ,ಕವಡೆ ಸಾಂಬ್ರಾಣಿ,ಪಚ್ಚಕರ್ಪೂರ,(ಇಲ್ಲವೇ ಬಿಲ್ಲೆ ಕರ್ಪೂರ)ಎಲ್ಲವನ್ನೂ ಸೇರಿಸಿ ಒಂದು ಅಗಲವಾದ ತಾಮ್ರದ ಬಟ್ಟಲಲ್ಲಿ ಹಾಕಿ ಕರ್ಪೂರ ಹಚ್ಚಿ ಹೊಗೆಯನ್ನು ಮನೆಯಲ್ಲಿ ಎಲ್ಲಾಕಡೆ ಹರಡಬೇಕು ಸ್ವಲ್ಪ ಸಮಯ ಈ ದೂಪವನ್ನು ಹಾಕಿ ನಂತರ ಕದ ಮುಚ್ಚಿ ಒಂದೆರಡು ನಿಮಿಷದನಂತರ ಕಿಟಕಿ ಬಾಗಿಲು ತೆರೆಯುವುದು.

No comments:

Post a Comment