Friday, 24 November 2017

ನವಗ್ರಹಗಳಿಗೆ ಯಾವ ಪುಷ್ಪ ಅರ್ಪಿಸಬೇಕು ಗೊತ್ತಾ ?

ನವಗ್ರಹಗಳಿಗೆ ಯಾವ ಪುಷ್ಪ ಅರ್ಪಿಸಬೇಕು ಗೊತ್ತಾ ? ಪುಷ್ಪಗಳು ದೇವತೆಗಳಿಗೆ ಮನುಷ್ಯನು ಸಮರ್ಪಣೆ ಮಾಡುವುದರಲ್ಲಿ ಪ್ರಧಾನವಾದ ಪಾತ್ರವನ್ನು ವಹಿಸಿವೆ. ಹೂಗಳನ್ನು ಅರ್ಪಿಸುವುವಾಗ ಅಥವಾ ಹಾರವಾಗಿ ತಮ್ಮ ಇಷ್ಟ ದೇವರಿಗೆ ತೊಡಿಸುವುವಾಗ ಭಕ್ತರಿಗೆ ಮನಸ್ಸಿಗೆ ಶಾಂತಿ ಲಭಿಸುವುದರೊಂದಿಗೆ ಸಂತೋಷವು ಪ್ರಾಪ್ತಿಯಾಗುವುದು. ಪ್ರತಿಯೊಂದು ದೇವರಿಗೂ ಪ್ರತ್ಯೇಕವಾದ ಪುಷ್ಪ ಮತ್ತು ಹಾರಗಳನ್ನು ಅರ್ಪಿಸಿದರೆ ಮಾತ್ರ ಅದರ ಪರಿಣಾಮ ಲಭಿಸುವುದು. ಹೂವಿನ ಬಣ್ಣ, ಸುವಾಸನೆ, ಗಾತ್ರ, ಔಷಧೀಯ ಗುಣ ಮೊದಲಾದುವುಗಳ ಆಧಾರದ ಮೇಲೆ ಪುಷ್ಪಾರ್ಪಣೆಯು ಪ್ರಧಾನ ಪಾತ್ರ ವಹಿಸುತ್ತದೆ. ಇದೇ ರೀತಿ ನವಗ್ರಹಗಳಿಗೆ ಯಾವ ತರದ ಹೂಗಳನ್ನು ಮತ್ತು ಹಾರಗಳನ್ನು ಅರ್ಪಿಸಬೇಕೆಂದು ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖನವನ್ನು ನೀಡಲಾಗಿದೆ. ಗ್ರಹಗಳಿಗೆ ಅರ್ಪಿಸಬೇಕಾದ ಹೂಗಳನ್ನು ಮತ್ತು ಹಾರಗಳನ್ನು ಕೆಳಗೆ ಕೊಡಲಾಗಿದೆ. ಗ್ರಹಗಳು : ಹೂವಿನ ಹಾರ 1. ಸೂರ್ಯ: ಕೆಂಪುತಾವರೆ, ದಾಸವಾಳಗಳಿಂದ ಹೆಣೆದ, ಕಿಸ್ಕಾರ ಹೂವಿನ ಹಾರ 2 ಚಂದ್ರ : ಮಲ್ಲಿಗೆ, ಮಂದಾರ, ಬಿಳಿ ದಾಸವಾಳ ಮೊದಲಾದ ಶ್ವೇತ ಪುಷ್ಪಗಳ ಹಾರ 3 ಗುರು :ಮಂದಾರ, ಸಂಪಿಗೆ ಹೂವಿನ ಮಾಲೆ 4.ಶುಕ್ರ : ಬಿಳಿದಾಸವಾಳ, ಬಿಳಿ ಶಂಖಪುಷ್ಪ, ಮಲ್ಲಿಗೆ ಹಾರ 5.ಶನಿ :ನೀಲಿ ಶಂಖಪುಷ್ಪ,ನೀಲಿ ದಾಸವಾಳಗಳ ಹಾರ 6.ಮಂಗಳ: ಕೆಂಪು ತಾವರೆ, ದಾಸವಾಳದ ಹಾರ 7.ಬುಧ : ಹಸಿರು ಬಣ್ಣದ ಹೂಗಳು ಮತ್ತು ತುಳಸಿ ಮಾಲೆ 8.ರಾಹು :ನೀಲಿ ದಾಸವಾಳದ ಮಾಲೆ 9.ಕೇತು : ಕೆಂದಾವರೆ,ಕಿಸ್ಕಾರ, ದಾಸವಾಳದ ಮಾಲೆ

No comments:

Post a Comment