Wednesday, 29 November 2017
ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ
ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ
ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್
ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II
ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್
ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ II೨II
ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ
ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II
ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ
ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ II೪II
ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್
ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II
ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ
ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II
ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ
ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ II೭II
ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ
ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್II ೮II
Iಇತಿ ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ಸಂಪೂರ್ಣಂI
IIಶ್ರೀಕೃಷ್ಣಾರ್ಪಣಮಸ್ತು II
ಭಕ್ತಿಸಾಗರ ಮಂತ್ರಗಳು
ಭಕ್ತಿಸಾಗರ
ಪ್ರಾಮಾಣಿಕತೆ ಮತ್ತು ನಿರಾಡಂಬರ ದೈವಭಕ್ತಿಯೇ ಭೂಲೋಕದಲ್ಲಿ ಸ್ವರ್ಗ ಗಳಿಸುವ ರಹದಾರಿ
ಗಾಯತ್ರಿ ಮಂತ್ರಗಳು
ಗಾಯತ್ರಿ ದೇವಿ ಗಾಯತ್ರಿ ಮಂತ್ರ
ಓಂ ಭೂರ್ಭುವ: ಸ್ವ:
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನ: ಪ್ರಚೋದಯಾತ್
ಶ್ರೀ ಗಣೇಶ ಗಾಯತ್ರಿ ಮಂತ್ರಗಳು
ಓಂ ಲಂಬೋದರಾಯ ವಿದ್ಮಹೇ,
ಮಹೋದರಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಓಂ ಏಕದಂತಾಯ ವಿದ್ಮಹೇ,
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಓಂ ತತ್ಪುರುಷಾಯ ವಿದ್ಮಹೇ,
ವಕ್ರತುಂಡಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಶ್ರೀ ಅಗ್ನಿ ಗಾಯತ್ರಿ ಮಂತ್ರಗಳು
ಓಂ ಮಹಾಜ್ವಾಲಾಯ ವಿದ್ಮಹೇ,
ಅಗ್ನಿದೇವಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್
ಓಂ ವೈಶ್ವಾನರಾಯ ವಿದ್ಮಹೇ,
ಲಾಲೀಲಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್
ಶ್ರೀ ಬ್ರಹ್ಮ ಗಾಯತ್ರಿ ಮಂತ್ರ
ಓಂ ಚತುರ್ಮುಖಾಯ ವಿದ್ಮಹೇ,
ಹಂಸಾರೂಢಾಯ ಧೀಮಹೀ
ತನ್ನೋ ಬ್ರಹ್ಮ ಪ್ರಚೋದಯಾತ್
ಶ್ರೀ ದುರ್ಗಾ ಗಾಯತ್ರಿ ಮಂತ್ರ
ಓಂ ಕಾತ್ಯಾಯನಾಯ ವಿದ್ಮಹೇ,
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್
ಶ್ರೀ ವಾಸವಿ ಗಾಯತ್ರಿ ಮಂತ್ರ
ಓಂ ಕುಸುಮ ಪುತ್ರೀಚ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹಿ
ತನ್ನೋ ವಾಸವಿ ಪ್ರಚೋದಯಾತ್
ಶ್ರೀ ಹಯಗ್ರೀವ ಗಾಯತ್ರಿ ಮಂತ್ರ
ಓಂ ವಾಣಿಸ್ವರಾಯ ವಿದ್ಮಹೇ,
ಹಯಗ್ರೀವಾಯ ಧೀಮಹೀ
ತನ್ನೋ ಹಯಗ್ರೀವ ಪ್ರಚೋದಯಾತ್
ಶ್ರೀ ಕೃಷ್ಣ ಗಾಯತ್ರಿ ಮಂತ್ರಗಳು
ಓಂ ದಾಮೋದರಾಯ ವಿದ್ಮಹೇ,
ರುಕ್ಮಿಣಿ ವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಓಂ ಗೋವಿಂದಾಯ ವಿದ್ಮಹೇ,
ಗೋಪಿವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ಶ್ರೀ ನರಸಿಂಹ ಗಾಯತ್ರಿ ಮಂತ್ರ
ಓಂ ನರಸಿಂಹಾಯ ವಿದ್ಮಹೇ,
ವಜ್ರನಖಾಯ ಧೀಮಹೀ
ತನ್ನೋ ನರಸಿಂಹ ಪ್ರಚೋದಯಾತ್
ನಾರಾಯಣ ಗಾಯತ್ರಿ ಮಂತ್ರ
ಓಂ ನಾರಾಯಣಾಯ ವಿದ್ಮಹೇ,
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್
ಶ್ರೀ ಪೃಥ್ವಿ ಗಾಯತ್ರಿ ಮಂತ್ರ
ಓಂ ಪೃಥ್ವಿದೇವಾಯ ವಿದ್ಮಹೇ,
ಸಹಸ್ರ ಮೂರ್ತಯೇಚ ಧೀಮಹೀ
ತನ್ನೋ ಪೃಥ್ವಿ ಪ್ರಚೋದಯಾತ್
ಶ್ರೀ ರಾಮ ಗಾಯತ್ರಿ ಮಂತ್ರ
ಓಂ ದಶರಥಾಯ ವಿದ್ಮಹೇ,
ಸೀತಾವಲ್ಲಭಾಯ ಧೀಮಹೀ
ತನ್ನೋ ರಾಮ ಪ್ರಚೋದಯಾತ್
ಶ್ರೀ ಆಂಜನೇಯ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮಾನ್ ಪ್ರಚೋದಯಾತ್
ಶ್ರೀ ಇಂದ್ರ ಗಾಯತ್ರಿ ಮಂತ್ರ
ಓಂ ದೇವರಾಜಾಯ ವಿದ್ಮಹೇ
ವಜ್ರ ಹಸ್ತಾಯ ಧೀಮಹಿ
ತನ್ನೋ ಇಂದ್ರ ಪ್ರಚೋದಯಾತ್
ಶ್ರೀ ಬ್ರಹ್ಮ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ
ಚತುರ್ಮುಖಾಯ ಧೀಮಹಿ
ತನ್ನೋ ಬ್ರಹ್ಮ ಪ್ರಚೋದಯಾತ್
ಶ್ರೀ ಸರಸ್ವತಿ ಗಾಯತ್ರಿ ಮಂತ್ರ
ಓಂ ವಾಗ್ದೇವಿಯೈಚ ವಿದ್ಮಹೇ,
ವಿರಿಂಜಿ ಪತ್ನಿಯೈಚ ಧೀಮಹೀ
ತನ್ನೋ ವಾಣಿ ಪ್ರಚೋದಯಾತ್
ಶ್ರೀ ಸೀತಾ ಗಾಯತ್ರಿ ಮಂತ್ರ
ಓಂ ಜಾನಕಿನಂದಿನ್ಯೆ ವಿದ್ಮಹೇ,
ಭೂಮಿಜಾಯೈ ಧೀಮಹೀ
ತನ್ನೋ ಸೀತಾ ಪ್ರಚೋದಯಾತ್
ಶ್ರೀ ಶಿರಿಡಿಸಾಯಿ ಗಾಯತ್ರಿ ಮಂತ್ರ
ಓಂ ಶಿರಡಿವಾಸಾಯ ವಿದ್ಮಹೇ,
ಸಚ್ಚಿತಾನಂತಾಯ ಧೀಮಹೀ
ತನ್ನೋ ಸಾಯಿ ಪ್ರಚೋದಯಾತ್
ಶ್ರೀ ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ,
ಮಹಾದೇವಾಯ ಧೀಮಹೀ
ತನ್ನೋ ರುದ್ರ ಪ್ರಚೋದಯಾತ್
ಶ್ರೀ ಸುಬ್ರಮಣ್ಯ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ,
ಮಹಾಸೇನಾಯ ಧೀಮಹೀ
ತನ್ನೋ ಶನ್ಮುಗ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ವಲ್ಲಿನಾಥಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ಸಿಕಿವಾಹನಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಓಂ ಕಾರ್ತಿಕೇಯಾಯ ವಿದ್ಮಹೇ
ಶಕ್ತಿಹಸ್ತಾಯ ಧೀಮಹೀ
ತನ್ನೋ ಸ್ಕಂದ ಪ್ರಚೋದಯಾತ್
ಶ್ರೀ ಸುದರ್ಶನ ಗಾಯತ್ರಿ ಮಂತ್ರ
ಓಂ ಸುದರ್ಶನಾಯ ವಿದ್ಮಹೇ,
ಮಹಾಜ್ವಾಲಾಯ ಧೀಮಹೀ
ತನ್ನೋ ಚಕ್ರ ಪ್ರಚೋದಯಾತ್
ಶ್ರೀ ತುಲಸಿ ಗಾಯತ್ರಿ ಮಂತ್ರ
ಓಂ ತುಲಸೀ ದೇವ್ಯಾಯೈಚ ವಿದ್ಮಹೇ,
ವಿಷ್ಣುಪ್ರಿಯಾಯೈಚ ಧೀಮಹೀ
ತನ್ನೋ ಬೃಂದ ಪ್ರಚೋದಯಾತ್
ಶ್ರೀ ವರುಣ ಗಾಯತ್ರಿ ಮಂತ್ರ
ಓಂ ಜಲಬಿಂಬಾಯ ವಿದ್ಮಹೇ,
ನೀಲಪುರುಷಾಯ ಧೀಮಹೀ
ತನ್ನೋ ವರುಣ ಪ್ರಚೋದಯಾತ್
ಶ್ರೀ ವೆಂಕಟೇಶ್ವರ ಗಾಯತ್ರಿ ಮಂತ್ರ
ಓಂ ನಿರಂಜನಾಯ ವಿದ್ಮಹೇ,
ನಿರಾಭಾಸಾಯ ಧೀಮಹೀ
ತನ್ನೋ ಶ್ರೀನಿವಾಸ ಪ್ರಚೋದಯಾತ್
ಶ್ರೀ ಯಮ ಗಾಯತ್ರಿ ಮಂತ್ರ
ಓಂ ಸೂರ್ಯಪುತ್ರಾಯ ವಿದ್ಮಹೇ,
ಮಹಾಕಾಲಾಯ ಧೀಮಹೀ
ತನ್ನೋ ಯಮ ಪ್ರಚೋದಯಾತ್
ಶ್ರೀ ದತ್ತಾತ್ರೇಯ ಗಾಯತ್ರಿ ಮಂತ್ರಗಳು
ಓಂ ದತ್ತಾತ್ರೇಯ ವಿದ್ಮಹೇ
ಅತ್ರಿ ಪುತ್ರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದಿಗಂಬರಾಯ ವಿದ್ಮಹೇ
ಯೋಗೀಶ್ವರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದತ್ತಾತ್ರೇಯ ವಿದ್ಮಹೇ
ದಿಗಂಬರಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಓಂ ದತ್ತಾತ್ರೇಯ ವಿದ್ಮಹೇ
ಅವಧೂತಾಯ ಧೀಮಹಿ
ತನ್ನೋ ದತ್ತ ಪ್ರಚೋದಯಾತ್
ಶ್ರೀ ಕುಬೇರ ಗಾಯತ್ರಿ ಮಂತ್ರ
ಓಂ ಯಕ್ಷರಾಜಾಯ ವಿದ್ಮಹೇ
ವೈಶ್ರಾವನಾಯ ಧೀಮಹಿ
ತನ್ನೋ ಕುಬೇರ ಪ್ರಚೋದಯಾತ್
ಶ್ರೀ ತುಳಸಿ ಗಾಯತ್ರಿ ಮಂತ್ರ
ಓಂ ತುಳಸಿಯಾಯ ವಿದ್ಮಹೇ
ತ್ರಿಪುರಾರ್ಯಾಯ ಧೀಮಹಿ
ತನ್ನೋ ತುಳಸಿ ಪ್ರಚೋದಯಾತ್
ಶ್ರೀ ನವಗ್ರಹ ಗಾಯತ್ರಿ ಮಂತ್ರಗಳು
ಶ್ರೀ ಸೂರ್ಯ ಗಾಯತ್ರಿ ಮಂತ್ರ
ಓಂ ಭಾಸ್ಕರಾಯ ವಿದ್ಮಹೇ
ದಿವಾಕರಾಯ ಧೀಮಹಿ
ತನ್ನೋ ಸೂರ್ಯ ಪ್ರಚೋದಯಾತ್
ಶ್ರೀ ಚಂದ್ರ ಗಾಯತ್ರಿ ಮಂತ್ರ
ಓಂ ಕೃಷ್ಣ ಪುತ್ರಾಯ ವಿದ್ಮಹೇ
ಅಮೃತದ್ವಾಯ ಧೀಮಹಿ
ತನ್ನೋ ಚಂದ್ರ ಪ್ರಚೋದಯಾತ್
ಶ್ರೀ ಅಂಗಾರಕ ಗಾಯತ್ರಿ ಮಂತ್ರ
ಓಂ ಅಂಗಾರಕಾಯ ವಿದ್ಮಹೇ
ಶಕ್ತಿ ಹಸ್ತಾಯ ಧೀಮಹಿ
ತನ್ನೋ ಕುಜ ಪ್ರಚೋದಯಾತ್
ಶ್ರೀ ಬುಧ ಗಾಯತ್ರಿ ಮಂತ್ರ
ಓಂ ಗಜಧ್ವಜಾಯ ವಿದ್ಮಹೇ
ಸುಖ ಹಸ್ತಾಯ ಧೀಮಹಿ
ತನ್ನೋ ಬುಧ ಪ್ರಚೋದಯಾತ್
ಶ್ರೀ ಗುರು ಗಾಯತ್ರಿ ಮಂತ್ರ
ಓಂ ಸುರಾಚಾರ್ಯಾಯ ವಿದ್ಮಹೇ
ದೇವ ಪೂಜ್ಯಾಯ ಧೀಮಹಿ
ತನ್ನೋ ಗುರು ಪ್ರಚೋದಯಾತ್
ಶ್ರೀ ಶುಕ್ರ ಗಾಯತ್ರಿ ಮಂತ್ರ
ಓಂ ಅಶ್ವಧ್ವಜಾಯ ವಿದ್ಮಹೇ
ದೈತ್ಯಾಚಾರ್ಯಾಯ ಧೀಮಹಿ
ತನ್ನೋ ಶುಕ್ರ ಪ್ರಚೋದಯಾತ್
ಶ್ರೀ ಶನಿ ಗಾಯತ್ರಿ ಮಂತ್ರ
ಓಂ ಕಾಕಧ್ವಜಾಯ ವಿದ್ಮಹೇ
ಖಡ್ಗ ಹಸ್ತಾಯ ಧೀಮಹಿ
ತನ್ನೋ ಶನಿ ಪ್ರಚೋದಯಾತ್
ಶ್ರೀ ರಾಹು ಗಾಯತ್ರಿ ಮಂತ್ರ
ಓಂ ನಾಗಧ್ವಜಾಯ ವಿದ್ಮಹೇ
ಪದ್ಮಹಸ್ತಾಯ ಧೀಮಹಿ
ತನ್ನೋ ರಾಹು ಪ್ರಚೋದಯಾತ್
ಶ್ರೀ ಕೇತು ಗಾಯತ್ರಿ ಮಂತ್ರ
ಓಂ ಅಶ್ವಧ್ವಜಾಯ ವಿದ್ಮಹೇ
ಶೂಲಹಸ್ತಾಯ ಧೀಮಹಿ
ತನ್ನೋ ಕೇತು ಪ್ರಚೋದಯಾತ್
ಶಮೀ ವೃಕ್ಷ ಪ್ರದಕ್ಷಿಣೆ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಮಂತ್ರ
ಶಮೀ ಶಮಯತೇ ಪಾಪಂ ಶಮೀ ಶತೃ ವಿನಾಶಿನೀ
ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನಿ
ಬೆಳಿಗ್ಗೆ ಎದ್ದ ಕೂಡಲೇ ಹೇಳಿಕೊಳ್ಳಬೇಕಾದ ಸ್ತೋತ್ರ
ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ
ಕರಮೂಲೇ ಸ್ಥಿತೇಗೌರಿ ಪ್ರಭಾತೇ ಕರದರ್ಶನಂ
ಸ್ನಾನ ಮಾಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು
ಅಶ್ವತ್ಥವೃಕ್ಷ ದರ್ಶನ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣುರೂಪಿಣಿ
ಅಗ್ರತೋ ಶಿವರೂಪಾಯ ವೃಕ್ಷರಾಜಾಯತೇ ನಮ:
ಅಶ್ವತ್ಥ ಹುತಭುಕ್ ವ್ಯಾಸೋ ಗೋವಿಂದಶ್ಚ ಸದಾಶ್ರಯ:
ಅಶೇಷಂ ಹರ ಮೇ ಶೋಕಂ ವೃಕ್ಷರಾಜ ನಮೋಸ್ತುತೇ
ಅಭ್ಯಂಜನ ಸ್ನಾನ ಮಾಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅಶ್ವತ್ಥಾಮ: ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣ:
ಕೃಪಾ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನ:
ಭೋಜನ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅನ್ನಪೂರ್ಣೇ ಸದಾಪೂರ್ಣೇ ಶಂಕರ: ಪ್ರಾಣವಲ್ಲಭೇ
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹೀಚ ಪಾರ್ವತಿ
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತ:
ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ
ಮಲಗುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ರಾಮಂಸ್ಕಂಧಂ ಹನುಮಂತಂ ವೈನತೇಯಂ ವೃಕೋದರಂ
ಶಯನೇ ಯ: ಸ್ಮರೇನ್ನಿತ್ಯಂ ದುಸ್ಸ್ವಪ್ನಂ ತಸ್ಯನಶ್ಯತಿ
ತೀರ್ಥ ಸೇವಿಸುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅಕಾಲ ಮೃತ್ಯುಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣುಪಾದೋದಕಂ ಪಾವನಂ ಶುಭಂ
ಅಗ್ನಿಗೆ ನಮಸ್ಕರಿಸುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಸ್ವಸ್ತಿ ಶ್ರದ್ಧಾಂ ಮೇಧಾಂ ಯಶ: ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರಿಯಂ ಬಲಂ
ಆಯುಷ್ಯಂ ತೇಜಮಾರೋಗ್ಯಂ ದೇಹಿ ಮೇ ಹವ್ಯವಾಹನ
ಬೇವು ಬೆಲ್ಲ ಸ್ವೀಕರಿಸುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ
ಶತಾಯು ವಜ್ರದೇಹಾಯ ಸರ್ವಸಂಪತ್ಕರಾಯಚ
ಸರ್ವಾರಿಷ್ಟ ವಿನಾಶಾಯ ನಿಂಬಕಂದಲಭಕ್ಷಣಂ
ವಿಜಯದಶಮಿ ಹಬ್ಬದ ದಿನ ಶಮೀ ಪತ್ರೆಯನ್ನು ಹಂಚುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ
ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶಿನೀ
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನೀ
ತುಳಸೀ ಪೂಜೆಯ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ
ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ
ನಮೋ ಮೋಕ್ಷಪ್ರದೇ ದೇವೀ ನಮ: ಸಂಪತ್ಪ್ರದಾಯಕೇ
ಪ್ರಸೀದ ತುಲಸೀ ದೇವೀ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೂದ್ಭೂತೇ ತುಲಸಿತ್ವಾಂ ನಮಾಮ್ಯಹಂ
ಯಜ್ಞೋಪವೀತಧಾರಣೆ ಸಂದರ್ಭ ಹೇಳಿಕೊಳ್ಳಬೇಕಾದ ಸ್ತೋತ್ರ
ಯಜ್ಞೋಪವೀತಂ ಪರಮ ಪವಿತ್ರಂ
ಪ್ರಜಾಪತೇರ್ಯತ್ಸಹಜಂ ಪುರಸ್ತಾತ್
ಆಯುಷ್ಯಮಗ್ರ್ಯಂ ಪ್ರತಿಮುಂಚಂ ಶುಭ್ರಂ
ಯಜ್ಞೋಪವೀತಂ ಬಲಮಸ್ತು ತೇಜ:
ಹೊಸ್ತಿಲ ಪೂಜೆಯ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಸರಸಿಜನಿಲಯೇ ಸರೋಜಹಸ್ತೇ ಧವಲತರಾಂಕುಶ ಗಂಧಮಾಲ್ಯ ಶೋಭೇ
ಭಗವತೀ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದಮಹ್ಯಂ
ಗೋಗ್ರಾಸ ಕೊಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಸುರಭಿ ವೈಷ್ಣವೀಮಾತಃ ಸುರಲೋಕೇ ಮಹೀಯಸೇ
ಗ್ರಾಸಮುಷ್ಟಿರ್ಮಯಾ ದತ್ತಾ ಸುರಭೇ ಪ್ರತಿಗೃಹ್ಯತಾಂ
ಮಹಾನ್ ಪತಿವ್ರತೆಯರನ್ನು ಸ್ಮರಿಸಿಕೊಳ್ಳುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂದೋದರೀ ತಥಾ
ಪಂಚಕಂ ನಾ ಸ್ಮರೇನಿತ್ಯಂ ಮಹಾಪಾತಕನಾಶನಂ
ದೀಪ ಹೊತ್ತಿಸುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದ:
ಶತೃ ಬುದ್ಧಿ ವಿನಾಶಾಯ ದೀಪಂಜ್ಯೋತಿ ನಮೋಸ್ತುತೇ
ದೀಪಂಜ್ಯೋತಿ ಪರಬ್ರಹ್ಮ ದೀಪಂಜ್ಯೋತಿ ಜನಾರ್ಧನ:
ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ
ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಹೇಳಿಕೊಳ್ಳಬೇಕಾದ ಸ್ತೋತ್ರ
ಪ್ರದಕ್ಷಿಣತ್ರಯಂ ಕೃತ್ವಾ ನಮಸ್ಕಾರಂ ಚ
ಪಂಚ ಚ ಪುನ: ಪ್ರದಕ್ಷಿಣಂ ಕೃತ್ವಾ ಪುನರ್ಜನ್ಮಂ ನ ವಿದ್ಯತೆ
ಔಷಧ ಸೇವಿಸುವಾಗ ಹೇಳಿಕೊಳ್ಳಬೇಕಾದ ಸ್ತೋತ್ರ
ಶರೀರೇ ಜರ್ಝರೀಭೂತೇ ವ್ಯಾಧಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವೀತೋಯಂ ವೈದ್ಯೋನಾರಾಯಣೋ ಹರಿಃ
ಧನ್ವಂತರಿ ಗರುತ್ಮಂತಂ ಫಣಿರಾಜಂಚ ಕೌಸ್ತುಭಂ
ಅಚ್ಯುತಂಚಾಮೃತಂ ಚ ಚಂದ್ರಂ ಸ್ಮರೇದೌಷಧ ಕರ್ಮಿಣಿ
ಪ್ರಶ್ನೋತ್ತರ ಪ್ರಪಂಚ
ಕೆಲವು ದೇವರ ಪೂಜಾ ಸಂದರ್ಭಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ತಿನ್ನಬಾರದೆನ್ನುತ್ತಾರೆ ಏಕೆ?
ಈ ಪ್ರಶ್ನೆಯನ್ನು ಕೇಳಿದರೆ ಒಬ್ಬೊಬ್ಬರ ಮಾತಿನಲ್ಲೂ ಒಂದೊಂದು ರೀತಿಯ ಉತ್ತರ ಬರುತ್ತದೆ. ಆದರೆ ಹೆಚ್ಚಾಗಿ ಕೇಳಿಬರುವ ಉತ್ತರವೆಂದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮಾಂಸಾಹಾರವೆಂದು. ಆದರೆ ನಿಜವಾದ ಕಾರಣವೆಂದರೆ, ಈರುಳ್ಳಿ ಹಾಗೂ ಬೆಳ್ಳುಳ್ಳಿ ಎರೆಡೂ ಕಾಮೋತ್ತೇಜಕಗಳು. ಆದುದರಿಂದ ಪೂಜಾ ಹಾಗೂ ವ್ರತಗಳ ಸಂದರ್ಭಗಳಲ್ಲಿ ಈರುಳ್ಳಿಯನ್ನು ಹಾಗೂ ಬೆಳ್ಳುಳ್ಳಿಯನ್ನು ಸೇವಿಸಬಾರದೆನ್ನುತ್ತಾರೆ.
ಈಶ್ವರ ಹಾಗೂ ನಂದಿಯ ನಡುವೆ ನಡೆಯಬಾರದು ಎನ್ನಲಾಗುತ್ತದೆ ಏಕೆ?
ನಂದಿ ಈಶ್ವರನ ಪರಮಭಕ್ತ. ಸದಾಕಾಲವೂ ನಂದಿಯು ಈಶ್ವರನನ್ನು ದರ್ಶಿಸುತ್ತಾ ಧ್ಯಾನಿಸುತ್ತಿರುತ್ತಾನೆ ಹಾಗೂ ಶಿವನೂ ಸಹ ತನ್ನ ಭಕ್ತಾಗ್ರಣ್ಯನಾದ ನಂದಿಯನ್ನು ವೀಕ್ಷಿಸುತ್ತ ತನ್ನ ಕರುಣಾಪೂರಿತ ಅನುಗ್ರಹವನ್ನು ತೋರುತ್ತಿರುತ್ತಾನೆ. ಆದುದರಿಂದ ಇವರೀರ್ವರ ನಡುವೆ ನಡೆದು ಅವರ ಪರಸ್ಪರ ಭಕ್ತಿ ಹಾಗೂ ಅನುಗ್ರಹಕ್ಕೆ ಧಕ್ಕೆಯುಂಟುಮಾಡಿದರೆ, ಅವರೀರ್ವರ ಕೋಪಕ್ಕೆ ತುತ್ತಾಗಬಹುದೆಂಬ ಕಾಳಜಿಯಿಂದ ಹೀಗೆ ಹೇಳಲಾಗುತ್ತದೆ.
ಸುಬ್ರಮಣ್ಯ ಮೂಲಮಂತ್ರಗಳು
ಓಂ ಶಂ ಶರವಣಭವಾಯ ನಮ:
ಓಂ ಶ್ರೂಂ ಸ್ಕಂದಾಯ ನಮ:
ಓಂ ಶೌಂ ಸುಬ್ರಮಣ್ಯಾಯ ನಮ:
ಕುಮಾರ ಮೂಲಮಂತ್ರ
ಓಂ ಕ್ರೌಂ ಕುಮಾರಾಯ ನಮ:
ಗುಹ ಮೂಲಮಂತ್ರ
ಓಂ ಸೂಂ ಸ್ವಾಮಿನ್ ಗುಹಾಯಾಯ ನಮ:
ಶಣ್ಮುಖ ಮೂಲಮಂತ್ರ
ಓಂ ಹ್ರೀಂ ಶಂ ಶಣ್ಮುಖಾಯ ನಮ:
ವಲ್ಲಿ ಮೂಲಮಂತ್ರ
ಓಂ ಶ್ರೀಂ ಮಹಾವಲ್ಲಾಯೈ ನಮ:
ದೇವಸೇನ ಮೂಲಮಂತ್ರ (ದೇವಸೇನ ಶ್ರೀ ಸುಬ್ರಮಣ್ಯ ಸ್ವಾಮಿಯ ಪತ್ನಿ)
ಓಂ ಹ್ರೀಂ ದೇವಸೇನಾಯೈ ನಮ:
ಮಯೂರ ಮೂಲಮಂತ್ರ (ನವಿಲು-ಸುಬ್ರಮಣ್ಯ ಸ್ವಾಮಿಯ ವಾಹನ)
ಓಂ ಮ್ರೀಂ ಮಯೂರಾಯ ನಮ:
ದೇವರುಗಳು ಬಳಸುತ್ತಿದ್ದ ವಾಹನಗಳು
ಸೂರ್ಯ – ಏಳು ಕುದುರೆಗಳುಳ್ಳ ರಥ (7 Horses)
ಬ್ರಹ್ಮ – ಏಳು ಹಂಸಗಳು (Sevven Swans)
ದುರ್ಗಿ – ಸಿಂಹ ಮತ್ತು ಹುಲಿ (Lion and Tiger)
ಗಣೇಶ – ಇಲಿ (Big Mouse)
ಇಂದ್ರ – ಆನೆ (Elephant)
ಕಾರ್ತಿಕೇಯ ಅಥವಾ ಸುಬ್ರಮಣ್ಯ – ನವಿಲು (Peacock)
ಲಕ್ಷ್ಮಿ – ಗೂಬೆ (Owl)
ಸರಸ್ವತಿ – ಹಂಸ ಮತ್ತು ನವಿಲು (Swan and Peacock)
ಶಕ್ತಿ ಅಥವಾ ಶಿವ – ಗೂಳಿ (ವೃಷಭ) (Bull)
ಶನಿದೇವ – ಕಾಗೆ (Crow)
ಶೀತಲಾಂಬ ದೇವಿ – ಕತ್ತೆ (Donkey)
ಶಿವ – ನಂದಿ (ಗೂಳಿ) (Bull)
ವರುಣ – ಮೊಸಳೆ (Crocodile)
ವಾಯುದೇವರು – ಸಾವಿರ ಕುದುರೆಗಳು (Thousand Horses)
ವಿಷ್ಣುದೇವ – ಗರುಡ ಪಕ್ಷಿ, ಆದಿಶೇಷ (ಹಾವು) (Adishesha, Serpent)
ವಿಶ್ವಕರ್ಮ – ಆನೆ (Elephant)
ಯಮದೇವ – ಕೋಣ (Male Buffalo)
ಚಂದ್ರ – ಚಿಗರೆ (ಜಿಂಕೆಯ ಜಾತಿ) (Antelope)
ಕಾಮದೇವ – ಗಿಳಿ (Parrot)
ಅಗ್ನಿ – ಟಗರು (ಗಂಡು ಕುರಿ) (Ram)
ನೈವೇದ್ಯದ ತೆಂಗಿನಕಾಯಿಯನ್ನು ಇಡುವ ಬಗೆ ಹೇಗೆ?
ತೆಂಗಿನಕಾಯಿಯನ್ನು ನೈವೇದ್ಯವಾಗಿ ಇಡುವಾಗ ದೇವರಿಗೆ ಅಭಿಮುಖವಾಗಿ ಅಂದರೆ ಚಿಪ್ಪಿನ ಮುಖ ದೇವರಿಗೆ ಕಾಣುವಂತೆ ಹಾಗೂ ನಮಗೆ ಕಾಣದಂತೆ ಇಡಬೇಕು ಇದು ಶುಭ.
ಸ್ವರ್ಗ ಲೋಕದ ದೇವತಾ ವೃಕ್ಷಗಳೆಂದು ಹೆಸರಾದ ವೃಕ್ಷಗಳಾವುವು?
ಕಲ್ಪವೃಕ್ಷ, ಪಾರಿಜಾತ, ಮಂದಾರ, ಹರಿಚಂದನ, ಸಂತಾನ.
ದೇವತಾ ವೃಕ್ಷಗಳೆಂದು ಹೆಸರಾದ ಇತರೆ ವೃಕ್ಷಗಳಾವುವು?
ಕಪಿಥ್ಥ, ತುಳಸಿ, ನೆಲ್ಲಿ, ಆಲ, ಅಶ್ವತ್ಥ, ಬಿಲ್ವ, ಮುತ್ತುಗ, ಬೇವು, ಮೋದುಗ, ಅತ್ತಿ (ಔದುಂಬರ)
ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಏಕೆ?
ಭೂಮಿಯ ಅಯಸ್ಕಾಂತೀಯ ಶಕ್ತಿ ಅತ್ಯಂತ ಪ್ರಭಲವಾಗಿ ಉತ್ತರ ದಿಕ್ಕಿನ ಭಾಗದಲ್ಲಿಯೇ ಕೇಂದ್ರೀಕೃತಗೊಂಡಿರುತ್ತದೆ. ಒಂದೊಮ್ಮೆ ನಾವು ಉತ್ತರ ದಿಕ್ಕಿನೆಡೆ ತಲೆಹಾಕಿ ಮಲಗಿದಲ್ಲಿ ಪ್ರಭಲ ಅಯಸ್ಕಾಂತೀಯ ತರಂಗಗಳು ತಮ್ಮ ಮೆದುಳಿಗೆ ಹಾನಿಮಾಡಿ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ. ಇದರಿಂದ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು.
ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು, ತುಳಿಯಬಾರದು ಏಕೆ?
ಮಹಾ ವಿಷ್ಣುವು ನರಸಿಂಹಾವತಾರವನ್ನು ತಾಳಿ ಹಿರಣ್ಯಕಷಿಪುವನ್ನು ಹೊಸ್ತಿಲ ಮೇಲೆ ಕುಳಿತೇ ಸಂಹರಿಸಿ ಪ್ರಹ್ಲಾದನಿಗೆ ಅಭಯವನ್ನಿತ್ತನು. ಅಂತಹ ಮಹಾವಿಷ್ಣುವಿನ ಸ್ಥಾನವೆಂದೇ ಪರಿಗಣಿಸಿ ಹೊಸ್ತಿಲಿಗೆ ಪಾವಿತ್ರ್ಯ ಸ್ಥಾನವನ್ನು ನೀಡಲಾಗಿದೆ. ಆದುದರಿಂದಲೇ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಹಾಗೂ ತುಳಿಯುವುದು ನಿಷಿದ್ದ. ಅಲ್ಲದೆ ಹೂಸ್ತಿಲನ್ನು ಸಾಕ್ಷಾತ್ ಲಕ್ಷ್ಮೀದೇವಿ ಎಂದೇ ಪರಿಗಣಿಸಲಾಗುತ್ತದೆಯಾದ್ದರಿಂದ ಹೊಸ್ತಿಲನ್ನು ತುಳಿಯುವುದು ಒದೆಯುವುದು ಮಾಡಬಾರದು.
ಹರಿದಿರುವ ಮತ್ತು ಒಣಗಿರುವ ವೀಳ್ಯದೆಲೆ ದೇವತಾ ಕಾರ್ಯಕ್ಕೆ ನಿಷಿದ್ದವೇ?
ಹೌದು, ವೀಳ್ಯದೆಲೆ ಭಿನ್ನವಾಗಿದ್ದರೆ, ಒಣಗಿದ್ದರೆ, ಬಾಡಿದ್ದರೆ ಅದು ದೇವತಾ ಕಾರ್ಯಗಳಿಗೆ ಬಳಸಬಾರದು. ವೀಳ್ಯದೇಲೆಯ ಅಗ್ರದಲ್ಲಿ ಲಕ್ಷ್ಮೀದೇವಿ, ಮಧ್ಯದಲ್ಲಿ ಸಾಕ್ಷಾತ್ ಪಾರ್ವತಿ ಮಾತೆ ಹಾಗೂ ತುದಿಯ ಭಾಗದಲ್ಲಿ ಸರಸ್ವತಿ ಎಂದೇ ಹೆಸರಾದ ವಿದ್ಯಾ ಲಕ್ಷೀಯರೇ ಅಸೀನರಾಗಿರುತ್ತಾರೆ ಅಲ್ಲದೇ ಸಾಕ್ಷಾತ್ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೂ ಸಹ ವೀಳ್ಯದೆಲೆಯಲ್ಲಿನ ಭಾಗವಾಗಿರುತ್ತಾರೆ. ಆದುದರಿಂದಲೇ ಯಾವುದೇ ಶುಭಕಾರ್ಯದಲ್ಲಿಯೂ ವೀಳ್ಯದೆಲೆ ಅತಿ ಮಹತ್ವದ ಸ್ಥಾನಗಳಿಸಿದೆ. ಅಲ್ಲದೇ ವೀಳ್ಯದೆಲೆ ತೋಟಕ್ಕೆ, ಚಪ್ಪಲಿ ಹಾಕಿ ಹೋಗಬಾರದೆಂಬ ನಿಯಮವನ್ನೂ, ವೀಳ್ಯದೆಲೆ ತೋಟದಲ್ಲಿ ಮಾತನಾಡುವಾಗ ಎಚ್ಚರದಿಂದ ಮಾತನಾಡುವಂತೆಯೂ, ಮಾತಿಗೆ ತಪ್ಪಿದರೆ ಗಂಡಾಂತರ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತದೆ.
ದಶಾವತಾರಗಳು ಯಾವುವು ?
ಮತ್ಸ್ಯಾವತಾರ
ಕೂರ್ಮಾವತಾರ
ವರಾಹಾವತಾರ
ನರಸಿಂಹಾವತಾರ
ವಾಮನಾವತಾರ
ಪರಶುರಾಮಾವತಾರ
ಶ್ರೀರಾಮವತಾರ
ಶ್ರೀಕೃಷ್ಣಾವತಾರ
ಬುದ್ದಾವತಾರ
ಕಲ್ಕಿ ಅವತಾರ
ಗರ್ಭಿಣಿ ಸ್ತ್ರೀಯರು ರಾತ್ರಿಯ ವೇಳೆ ಹೊರ ಹೋಗಬಾರದೇ?
ರಾತ್ರಿ ಎಂಬುದು ಕತ್ತಲಿನಿಂದ ಕೂಡಿದ್ದು, ದುಷ್ಟಶಕ್ತಿಗಳ ಬಲ ಹೆಚ್ಚುವ ಕಾಲವಾಗಿರುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀ ಹೊರ ಹೋದಲ್ಲಿ ಕತ್ತಲಿನಲ್ಲಿ ಕೇಳಿ ಬರುವ ಅಸಹಜವಾದ ಶಬ್ದಗಳಿಂದ ಗರ್ಭಿಣಿಯರು ಹೆದರಿಕೊಂಡಲ್ಲಿ ಹುಟ್ಟಬಹುದಾದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಹುಟ್ಟುವ ಮಗು ಮಾನಸಿಕವಾಗಿ ಅಸಹಜವಾಗಿ, ಪುಕ್ಕಲುತನದಿಂದ ಹುಟ್ಟುವ ಸಂಭವಿರುತ್ತದೆ.
ಹಣೆಯಲ್ಲಿ ಕುಂಕುಮ ಇಡಬೇಕೆನ್ನುವುದು ಏತಕ್ಕಾಗಿ?
ಹಣೆಯನ್ನು ಭ್ರೂಮಧ್ಯ ಸ್ಥಾನ ಎಂದು ಕರೆಯಲಾಗುತ್ತದೆ. ಅಲ್ಲದೇ ಹಣೆಯಲ್ಲಿನ ಕುಂಕುಮ ಇಡುವ ಭಾಗವನ್ನು ಲಲಾಟ ಎಂದೂ ಸಹ ಕರೆಯಲಾಗುತ್ತದೆ. ಲಲಾಟ ಎಂಬ ಸ್ಥಳವು ಪರ ಬ್ರಹ್ಮನ ಸ್ಥಾನವಾಗಿದೆ. ಬ್ರಹ್ಮನ ಬಣ್ಣ ಕೆಂಪು. ಅದುದರಿಂದ ಹಣೆಯಲ್ಲಿ ಆ ಭಾಗದ ದೇವರಾದ ಬ್ರಹ್ಮನ ಬಣ್ಣವಾದ ಕೆಂಪನ್ನು ಅಂದರೆ ಕುಂಕುಮವನ್ನು ಇಡಲಾಗುತ್ತದೆ.
ದೇಗುಲದಲ್ಲಿ ದರ್ಶನವಾದ ನಂತರ ಕುಳಿತುಕೊಳ್ಳಲೇಬೇಕೇ?
ಇದೊಂದು ಬೆಳೆದು ಬಂದಿರುವ ನಂಬಿಕೆಯಷ್ಟೇ ಆಗಿದೆ. ವಾಸ್ತವವಾಗಿ ದೇಗುಲಕ್ಕೆ ತೆರಳಿ, ಅಲ್ಲಿನ ದೈವದರ್ಶನ ಸಂಧರ್ಭ ಅಲ್ಲಿನ ವಾತಾವರಣದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ದೊರೆಯುತ್ತದೆ. ಜೀವನದ ಜಂಜಾಟಗಳಿಂದ ಮುಕ್ತರಾಗಿ ಶಾಂತಿ, ನೆಮ್ಮದಿಗಳಿಸಿಕೊಳ್ಳುವ ವಾತಾವರಣದಲ್ಲಿ ಕೆಲ ಹೊತ್ತು ಕುಳಿತುಕೊಂಡಲ್ಲಿ ಮನಸ್ಸು ಪ್ರಫುಲ್ಲ ವಾಗುತ್ತದೆ ಎಂಬುದು ನಿಜವಾದ ಉದ್ದೇಶವಾಗಿದೆ.
ಮಂಗಳವಾರದಂದು ಭೂಮಿಯನ್ನುಅಗೆಯವಾರದೇ?
ಭೂಮಿಯನ್ನು ಭೂಮಿತಾಯಿಎಂದು ಪೂಜಿಸುತ್ತಾರೆ. ಅಂದರೆ ಭೂಮಿಗೆ ಸ್ತ್ರೀ ಸ್ಥಾನವನ್ನೇ ನೀಡಲಾಗಿದೆ. ಹೀಗಿರುವಾಗ ಭೂಮಿತಾಯಿಯ ಪುತ್ರಕುಜ. ಹಾಗೂ ಪ್ರತಿಯೊಂದು ವಾರಕ್ಕೂ ಒಂದು ಗ್ರಹ ಅಧಿಪತಿಯಾಗಿದ್ದು, ಮಂಗಳವಾರಕ್ಕೆ ಕುಜನೇ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಮಂಗಳವಾರದಂದು ತನ್ನ ತಾಯಿಯನ್ನೇ, ತಾಯಿಯ ಒಡಲನ್ನೇ ಅಗಿದರೆ ಕುಜನ ವಕ್ರದೃಷ್ಟಿಗೊಳಗಾಗಬೇಕಾಗುತ್ತದೆ. ಅಲ್ಲದೇ ಕುಜ ಅಗ್ನಿತತ್ವವಾಗಿದ್ದು, ಮಂಗಳವಾರದಂದು ಭೂಮಿಯಲ್ಲಿ ನೀರಿಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಿದರೂ ಕುಜನ ಅಗ್ನಿತತ್ವದ ಪರಿಣಾಮದಿಂದಾಗಿ ಯಶಸ್ಸು ದೊರೆಯುವುದು. ಅಸಾಧ್ಯ ಎಂದು ಹೇಳಲಾಗುತ್ತದೆ.
‘ಪಕ್ಷಿರಾಜ’ ಗರುಡ, ವಿಷ್ಣು ದೇವನ ವಾಹನ ಆಗಿದ್ದು ಹೇಗೆ?
ಗರುಡ ಹಾಗು ಆತನ ತಾಯಿಯಾದ ವಿನತ, ಗರುಡನ ಮಲತಾಯಿಯಾದ ಕದ್ರು (ಸರ್ಪಗಳ ತಾಯಿ) ವಿನ ದಾಸ-ದಾಸಿಯರಾಗಿದ್ದರು. ತಾನು ಮತ್ತು ತನ್ನ ತಾಯಿಯನ್ನು, ಕದ್ರುವಿನ ಗುಲಾಮಗಿರಿಯಿಂದ ಮುಕ್ತಗೊಳ್ಳಲು – ಸ್ವತಃ ಗರುಡನು ಇಂದ್ರನ ದೇವಲೋಕಕ್ಕೆ ಹಾರಿ, ಅಮೃತವನ್ನು ತಂದು ಸರ್ಪಗಳಿಗೆ ನೀಡುವ ಪ್ರಸ್ತಾಪವನ್ನು ಮಾಡಿ ಕದ್ರುವಿನ ಅಪ್ಪಣೆ ಪಡೆದನು.ದೇವರುಗಳಿಗೆ ಇದರ ಸುಳಿವು ಸಿಕ್ಕಿತು, ಭೀಕರ ಯುದ್ಧವೂ ನಡೆಯಿತು, ಆದರೆ ಈ ಯುದ್ಧದಲ್ಲಿ ಗರುಡನು ಅವರನ್ನು ಸೋಲಿಸಿದನು. ನಂತರ, ತನ್ನ ಬುದ್ಧಿ ಮತ್ತು ಶಕ್ತಿ ಬಳಸಿ, ದೊಡ್ಡ ಗಂಡಾಂತರಗಳನ್ನು ದಾಟಿ, ಎಲ್ಲಾ ಕಾವಲುಗಳನ್ನು ಹಾರಿ, ಅಮೃತದ ಕಲಶವನ್ನು ಪಡೆದೇ ಬಿಟ್ಟ.ಗರುಡನು ಬಯಸಿದ್ದಲ್ಲಿ ಅಮೃತವನ್ನು ತಾನೇ ಕುಡಿಯಬಹುದಾಗಿತ್ತು, ಅಮರನಾಗ ಬಹುದಿತ್ತು. ಆದರೆ ತನ್ನ ತಾಯಿಯಾದ ವಿನತಳನ್ನು ಕದ್ರುವಿನಿಂದ ಬಿಡುಗಡೆ ಪಡಿಸಲು, ತಾನುಕೊಟ್ಟ ಮಾತನ್ನು ಉಳಿಸಿಕೊಳ್ಳಲು – ಹಾವುಗಳಿಗೇ ಅದನ್ನು ನೀಡಲು ಮುಂದಾದನು. ಈ ನಿಸ್ವಾರ್ಥ ಕಾರ್ಯವನ್ನು ಕಂಡ ವಿಷ್ಣು ಗರುಡನಿಗೆ ವರವನ್ನು ನೀಡಿದನು. ಆ ವರವೇನೆಂದರೆ, ಅಮೃತ ಕುಡಿಯದೆ, ಗರುಡನನ್ನು ಅಮರನನ್ನಾಗಿ ಮಾಡಿತು. ಇಲ್ಲದೆ ಅಮರ ಆಯಿತು ಒಂದು ಪ್ರಸಾದ ನೀಡಲಾಗುತ್ತದೆ ವಿಷ್ಣುವಿನ ಪ್ರಭಾವಿಸಿತು. ಆದರೆ ವಿಷ್ಣು, ಹಾವುಗಳು ಈ ಅಮೃತವನ್ನು ಕುಡಿಯುವುದನ್ನು ತಡೆಯಲು ಕೇಳಿಕೊಂಡನು. ಹಾವುಗಳೆಲ್ಲಾ ಗರುಡನು ಅಮೃತದೊಂದಿಗೆ ಆಗಮಿಸಿದ್ದನ್ನು ಕಂಡು, ಗರುಡನ ತಾಯಿಯನ್ನು ಬಿಡುಗಡೆ ಮಾಡಿದರು.ಅವರೆಲ್ಲಾ ಅಮೃತವನ್ನು ಸೇವಿಸಲು ಮುಂದಾದಗ, ಉಪಾಯದಿಂದ ಗರುಡ ಅಡ್ಡಿಮಾಡಿ, ಕುಡಿಯುವ ಮುನ್ನ, ಹಾವುಗಳು ಸ್ವಚ್ಛಗೊಳ್ಳುವುದು ಉತ್ತಮ ಎಂದು ಅವುಗಳಿಗೆ ನೆನಪು ಮಾಡಿದನು. ಹಾವುಗಳು ಇದಕ್ಕೆ ಒಪ್ಪಿಕೊಂಡು, ಸ್ವಚ್ಛಗೊಳ್ಳಲು ನೀರಿನ ಬಳಿ ಹೋದರು. ಅಷ್ಟರಲ್ಲಿ, ತಕ್ಷಣ ಇಂದ್ರನು ಕೆಳಗಿಳಿದು ಬಂದು, ಗರುಡನ ಮೇಲೆ ದಾಳಿ ನೆಡೆಸಿ, ಗರುಡನ ಮೇಲೆ ಸಿಡಿಲು ಎಸೆದು, ಇಂದ್ರನು ಅಮೃತ ಮರುಪಡೆದುಕೊಂಡು ಹೋದನು. ಸರ್ಪಗಳಿಗೆ ಅಮೃತ ಇಲ್ಲದಂತಾಯಿತು. ದನ್ನೆಲ್ಲಾ ದೂರದಿಂದ ನೋಡುತ್ತಿದ್ದ ವಿಷ್ಣು, ಗರುಡನ ಧೈರ್ಯ, ಸಾಹಸ ಮತ್ತು ಧೃತಿಯಿಂದ ಸಂತಸಗೊಂಡು, ಗರುಡನನ್ನು ಎಲ್ಲಾ ಪಕ್ಷಿಗಳ ರಾಜ ‘ಪಕ್ಷಿರಾಜ’ ಗರುಡ ಎಂದು ಘೋಷಿಸಿದನು. ಇದಕ್ಕೆ ಪ್ರತಿಯಾಗಿ ಗರುಡ, ವಿಷ್ಣು ದೇವನ ವಾಹನನಾಗಲು ಒಪ್ಪಿಕೊಂಡನು. (ಮಾಹಿತಿ ಕೃಪೆ : ವ್ಯಾಟ್ಸಪ್ ಸಂದೇಶ)
“ದೇವಸ್ಥಾನಗಳಿಗೆ ಹೆಚ್ಚೆಚ್ಚು ಹೋಗುವುದರಿಂದ ಆರೋಗ್ಯ ವರ್ಧಿಸುತ್ತದೆ”?
ನಿಜಕ್ಕೂ ಅಚ್ಚರಿಯಾಗಬಹುದು… ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ.. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು (Magnetic Waves) ಸದಾ ಪ್ರವಹಿಸುತ್ತಲೇ ಇರುತ್ತವೆ… ಹೇಗೆ ಗೊತ್ತೇ…?? ದೇವರ ಮೂಲಸ್ಥಾನ ಗರ್ಭಗುಡಿ… ಆ ಗರ್ಭಗುಡಿಗೆ ಅಥವಾ ಮೇಲ್ಛಾವಣಿಗೆ ಹೊದೆಸಿರುವ ತಾಮ್ರದ ಹೊದಿಕೆಗಳನ್ನು ನೀವು ನೋಡಿರಬಹುದು… ಆ ತಾಮ್ರದ ಹೊದಿಕೆಗಳಲ್ಲೇ ಸದಾ ಸಕಾರಾತ್ಮಕ ಶಕ್ತಿ (Positive energy) ಪ್ರವಹಿಸುತ್ತಲೇ ಇರುತ್ತದೆ… ನಾವು ದೇವಸ್ಥಾನಕ್ಕೆ ಅಥವಾ ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಈ ಶಕ್ತಿ ನಮ್ಮ ಶರೀರದಲ್ಲೂ ಪ್ರವಹಿಸುತ್ತದೆ… ದೇವಸ್ಥಾನದಲ್ಲಿ ಜಾಸ್ತಿ ಹೊತ್ತು ಕುಳಿತು ಜಪ ಅಥವಾ ಧ್ಯಾನ ಮಾಡುವುದರಿಂದ ದೇಹದ ಆಯಾಸ ಕಡಿಮೆಯಾಗಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು… ಅದಕ್ಕೆ ಕಾರಣ ಇದೇ Positive energy. ದೇವಸ್ಥಾನದಲ್ಲಿನ ಶಾಂತತೆಯಿಂದ ನಮ್ಮ ಮನಸ್ಸೂ ಪ್ರಶಾಂತವಾಗುತ್ತದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ. ಇನ್ನೂ ಇದೆ… ಪವಿತ್ರವಾದ ಗರ್ಭಗೃಹ ಮೂರೂ ಕಡೆಯಿಂದ ಮುಚ್ಚಲಾಗಿರುತ್ತದೆ… ಮುಖ್ಯದ್ವಾರವೊಂದೇ ತೆರೆದಿರುತ್ತದೆ… ಗರ್ಭಗುಡಿಯಲ್ಲಿ ಪ್ರವಹಿಸುವ ಅಯಸ್ಕಾಂತೀಯ ತರಂಗಗಳು (Magnetic Waves) ಮುಖ್ಯದ್ವಾರದ ಮೂಲಕ ಜೋರಾಗಿ ಚಿಮ್ಮುತ್ತದೆ… ಆದ್ದರಿಂದ ಮುಖ್ಯದ್ವಾರದ ಮುಂದೆ ನಿಂತಷ್ಟೂ ನಮಗೆ ಸಮಾಧಾನವಾಗುತ್ತದೆ… ಒಂದೆಡೆ ದೇವರ ದರ್ಶನ , ಇನ್ನೊಂದೆಡೆ ಆಯಾಸ ಪರಿಹಾರ… ಹೇಗಿದೆ ನೋಡಿ..!!
ಹಾಗೇ ದೀಪಗಳಿಂದ ಬೆಳಕಿನ ಶಕ್ತಿ (Light energy), ಘಂಟಾನಾದದಿಂದ ಹಾಗೂ ಮಂತ್ರಘೋಷಗಳಿಂದ ಶಬ್ದ ಶಕ್ತಿ (Sound Energy), ಹೂಗಳ ಪರಿಮಳದಿಂದ, ಕರ್ಪೂರದ ಸುವಾಸನೆಯಿಂದ ರಾಸಾಯನಿಕ ಶಕ್ತಿ (Chemical Energy), ಇವೆಲ್ಲಕ್ಕಿಂತಲೂ ಪ್ರಮುಖವಾದದ್ದು ದೇವರ ಪ್ರತಿಮೆಯಿಂದ ಹಾಗೂ ಗರ್ಭಗುಡಿಯಲ್ಲಿ ಇಟ್ಟಿರುವ ತಾಮ್ರದ ಹರಿವಾಣ, ತಾಮ್ರದ ಪೂಜಾಸಾಮಗ್ರಿಗಳಿಂದ ಬರುವ, ಉತ್ತರ ದಕ್ಷಿಣ ಧೃವಗಳಿಂದ (South north pole) ಪ್ರವಹಿಸುವ ಸಕಾರಾತ್ಮಕ ಶಕ್ತಿ..!! ಇನ್ನು ತೀರ್ಥಸೇವನೆ… ತೀರ್ಥವನ್ನು ಮಾಡುವುದು ಹೇಗೆ…??? ಯಾಲಕ್ಕಿ , ತುಳಸಿ , ಲವಂಗ ಮುಂತಾದವುಗಳಿಂದ… ಇವುಗಳನ್ನು ನೀರಿಗೆ ಹಾಕುವುದರಿಂದ ನೀರಿನಲ್ಲಿಯೂ ಸಕಾರಾತ್ಮಕ ಶಕ್ತಿಯ ಉದ್ಭವವಾಗುತ್ತದೆ… ತೀರ್ಥಸೇವನೆಯಿಂದ ದೇಹ ಆಹ್ಲಾದವಾಗುತ್ತದೆ… ಚೈತನ್ಯ ಮೂಡುತ್ತದೆ… ಆರೋಗ್ಯಕರವೂ ಹೌದು… ಹೇಗೆಂದರೆ, ಲವಂಗ ನಮ್ಮ ಹಲ್ಲುಗಳ ಆರೋಗ್ಯವನ್ನು ವರ್ಧಿಸುತ್ತದೆ, ತುಳಸಿ ನೆಗಡಿ, ಕೆಮ್ಮು, ಬರದಂತೇ ತಡೆಯುತ್ತದೆ, ಯಾಲಕ್ಕಿ ಅಥವಾ ಪಂಚಕರ್ಪೂರ ಬಾಯಿಯನ್ನು ಶುದ್ಧವಾಗಿಸುತ್ತದೆ… ಇನ್ನೂ ಅನೇಕ ಔಷದೀಯ ಗುಣಗಳು ತೀರ್ಥದಲ್ಲಿರುತ್ತವೆ… ದೀಪಾರಾಧನೆ, ವಿಶೇಷಪೂಜೆಗಳ ದಿನಗಳಲ್ಲಿ ದೇವಾಲಯಗಳಲ್ಲಿ ಹೆಚ್ಚು – ಹೆಚ್ಚು ಸಕಾರಾತ್ಮಕಶಕ್ತಿಯ ಸಂಚಾರವಾಗುತ್ತಿರುತ್ತದೆ… ಇನ್ನು ದೇವಸ್ಥಾನಗಳಲ್ಲಿ ಶುದ್ಧಿಗಾಗಿ ನೀರನ್ನು ದೇಹದ ಮೇಲೆ ಚಿಮುಕಿಸುತ್ತಿರುವುದನ್ನು ನೋಡಿರಬಹುದು… ಇದರಿಂದ ನಮ್ಮ ಶರೀರದ ಶುದ್ಧಿ ಹಾಗೂ ಆಯಾಸದ ನಿವಾರಣೆಯಾಗುತ್ತದೆ… ಆ ಕಾರಣದಿಂದಲೇ ಪುರುಷರು ದೇವಸ್ಥಾನಕ್ಕೆ ಹೋಗುವಾಗ ಅಂಗಿಯನ್ನು ಕಳಚಿಟ್ಟು ಹೋಗುವುದು ಒಳ್ಳೆಯದು… ಮಹಿಳೆಯರು ಜಾಸ್ತಿ ಒಡವೆಗಳನ್ನು ಹಾಕಿಕೊಂಡು ಹೋಗುವುದು ಒಳ್ಳೆಯದು… ಏಕೆಂದರೆ ಲೋಹಗಳಿಂದ ಶಕ್ತಿಯ ಸಂಚಾರ ದೇಹದಲ್ಲಾಗುತ್ತದೆ.. ಸಾಕಲ್ಲವೇ ಇಷ್ಟು ವೈಜ್ಞಾನಿಕ ಆಧಾರ…?? ಆದ್ದರಿಂದ ಸ್ನೇಹಿತರೇ ದೇವಸ್ಥಾನಗಳಿಗೆ ಹೆಚ್ಚೆಚ್ಚು ಭೇಟಿ ನೀಡಿ.. ( ಮಾಹಿತಿ ಕೃಪೆ : ಶ್ರೀ ಗಂಗಾಧರ್, ಪಳವಳ್ಳಿ)
ರುದ್ರಾಕ್ಷಿಗಳನ್ನು ಧರಿಸಬೇಕಾದ ಮೂಲ ಮಂತ್ರ ಯಾವುದು?
ರುದ್ರಾಕ್ಷಿಯನ್ನು ಧರಿಸುವಾಗ ಈ ಕೆಳಗಿನ ಮೂಲ ಮಂತ್ರವನ್ನು ಉಚ್ಚರಿಸಬೇಕಿರುತ್ತದೆ
ಓಂ ಹ್ರೀಂ ನಮ: ಓಂ ನಮ:
ಕ್ಲೀಂ ನಮ: ಓಂ ಹ್ರೀಂ ನಮ:
ಓಂ ಹ್ರೀಂ ನಮ: ಓಂ ಹ್ರೀಂ ಶ್ರುಂ ನಮ:
ಓಂ ಹ್ರೂಂ ನಮ: ಓಂ ಹ್ರುಂ ನಮ:
ಓಂ ಹ್ರೀಂ ಶ್ರುಂ ನಮ: ಓಂ ಹ್ರಿಂ ನಮ:
ಓಂ ಹ್ರೀಂ ಶ್ರಂ ನಮ: ಓಂ ಕ್ರೊಂ ಕ್ಷೊಂ ರೌ ನಮ:
ಓಂ ಹ್ರೀಂ ನಮ: ಓಂ ನಮ: ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ದೇಹದ ಯಾವ ಭಾಗಗಳಲ್ಲಿ ಎಷ್ಟು ರುದ್ರಾಕ್ಷಿಗಳನ್ನು ಧರಿಸಿದರೆ ಫಲ?
ರುದ್ರಾಕ್ಷಿಯನ್ನು ದೇಹದ ಬೇರೆ ಬೇರೆ ಭಾಗಗಳಲ್ಲಿ ಧರಿಸಿರುವುದನ್ನು ನೀವು ನೋಡಿರಬಹುದು. ಆದರೆ ಯಾವ ಯಾವ ಭಾಗಗಳಲ್ಲಿ ಎಷ್ಟು ರುದ್ರಾಕ್ಷಿ ಧರಿಸಿದರೆ ಅದರ ಪೂರ್ಣ ಫಲ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ನಿಯಮಗಳಿದ್ದು ಅದನ್ನು ಈ ಕೆಳಗಿನಂತೆ ಕಾಣಬಹುದು.
ಕಿವಿಯಲ್ಲಿ ಆರು ರುದ್ರಾಕ್ಷಿ, ಚಂಡಿಕೆಯಲ್ಲಿ ಮೂರು ರುದ್ರಾಕ್ಷಿ, ಸೊಂಟದ ಭಾಗದಲ್ಲಿ ಐದು ರುದ್ರಾಕ್ಷಿ, ಕಂಠದಲ್ಲಿ ನೂರ ಎಂಟು ರುದ್ರಾಕ್ಷಿ, ಭುಜದಲ್ಲಿ ಧರಿಸುವುದಾದರೆ ಹನ್ನೊಂದು ರುದ್ರಾಕ್ಷಿ, ಜನಿವಾರದಲ್ಲಿ ಮೂರು ರುದ್ರಾಕ್ಷಿಗಳನ್ನು ಧರಿಸಿದರೆ ಅದನ್ನು ಧರಿಸಿದ ಸಂಪೂರ್ಣ ಫಲವು ಪ್ರಾಪ್ತಿಯಾಗುತ್ತದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ – ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ರುದ್ರಾಕ್ಷಿಯ ವಿವಿಧ ಮುಖಗಳು ಹಾಗೂ ಅದರಿಂದ ದೊರೆಯಬಹುದಾದ ಫಲಗಳೇನು?
ರುದ್ರಾಕ್ಷಿಗೆ ಇರುವ ಮುಖಗಳ ಆಧಾರದಲ್ಲಿ ಅದನ್ನು ಧರಿಸುವ ವ್ಯಕ್ತಿ ಪಡೆಯಬಹುದಾದ ಫಲವನ್ನು ನಿರ್ಧರಿಸಲಾಗುತ್ತದೆ ರುದ್ರಾಕ್ಷಿಯ ವಿವಿಧ ಮುಖಗಳ ಫಲಾಫಲಗಳನ್ನು ಈ ಕೆಳಗಿನಂತೆ ನೋಡಬಹುದು.
ಒಂದು ಮುಖವಿದ್ದರೆ – ಮುಕ್ತಿ ದೊರೆಯುವುದು
ಎರಡು ಮುಖವಿದ್ದರೆ – ಪಾಪಗಳಿಂದ ವಿಮುಕ್ತಿ ದೊರೆಯುತ್ತದೆ
ಮೂರು ಮುಖವಿದ್ದರೆ – ಸಾಧನ ತ್ರಯವೂ
ನಾಲ್ಕು ಮುಖವಿದ್ದರೆ – ಅದು ಸಾಕ್ಷಾತ್ ಪರಬ್ರಹ್ಮನ ಸ್ವರೂಪವೂ ಆಗಿರುತ್ತದೆ.
ದಪ್ಪನೆಯ ರುದ್ರಾಕ್ಷಿ ಧಾರಣೆಯಿಂದ ಸೌಭಾಗ್ಯವೂ, ನೆಲ್ಲಿಕಾಯಿ ಗಾತ್ರದ ರುದ್ರಾಕ್ಷಿಯಿಂದ ಸರ್ವಾರಿಷ್ಟ ನಿವಾರಣೆಯೂ, ಗುಲಗಂಜಿ ಗಾತ್ರದ ರುದ್ರಾಕ್ಷಿಯಿಂದ ಇಷ್ಟಾರ್ಥ ಸಿದ್ಧಿಯೂ, ರಂದ್ರವುಳ್ಳ ರುದ್ರಾಕ್ಷಿಯಿಂದ ಉತ್ತಮ ಗುಣಗಳೂ ಮನುಷ್ಯನಿಗೆ ಪ್ರಾಪ್ತಿಯಾಗುತ್ತದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ಸಾಮಾನ್ಯವಾಗಿ ಯಾವುದೇ ದೇವರ ಮಂತ್ರವನ್ನು ಉಚ್ಚರಿಸುವ ಮುನ್ನ ಓಂ ಎಂದು ಉಚ್ಚರಿಸಲಾಗುತ್ತದೆ ಏಕೆ?
ಓಂ ಎಂಬುದನ್ನು ಪ್ರಣವಾಕ್ಷರ ಎಂದು ಕರೆಯಲಾಗುತ್ತದೆ. ಅ ಕಾರ, ಉ ಕಾರ ಮತ್ತು ಮ ಕಾರಗಳ ಸಂಗಮವೇ ಓಂ ಆಗಿದೆ.
ಅ ಕಾರ ಎಂದರೆ – ಅರಿಷಡ್ವರ್ಗಗಳ ಭ್ರಮೆಯನ್ನು ಬಿಡಿಸಿ
ಉ ಕಾರ ಎಂದರೆ – ಉಪಾದಿಗಳನ್ನು ದೂರಗೊಳಿಸಿ
ಮ ಕಾರ ಎಂದರೆ – ಮಾಯ ಮೋಹಾದಿಗಳನ್ನು ದೂರಗೊಳಿಸಿ ದೈವಸನ್ನಿಧಿ ಅಥವಾ ಶಿವಪದವನ್ನು ದೊರಕಿಸಿಕೊಡುವುದೇ ಈ ಪ್ರಣವಾಕ್ಷರ ಮಂತ್ರ ಓಂ. ಒಂದು ಕೋಟಿ ಪ್ರಣವ ಮಂತ್ರವನ್ನು ನಿರಂತರವಾಗಿ ಜಪಿಸುವವರು ಈಶತ್ವವನ್ನು ಗಳಿಸುತ್ತಾರೆ. ಓಂ ಪ್ರಣವಾಕ್ಷರವಾದರೆ ನಮ: ಶಿವಾಯ ಪಂಚಾಕ್ಷರಿ ಮಂತ್ರ (ಶಿವನಿಗೆ ಅತ್ಯಂತ ಪ್ರಿಯವಾದ ಮಂತ್ರ) ಈ ಎರೆಡೂ ಸೇರಿ ಪ್ರಣವ ಪಂಚಾಕ್ಷರಿ ಮಂತ್ರವಾಗಿದೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ರುದ್ರಾಕ್ಷಿಯು ಉಗಮವಾದದ್ದು ಮತ್ತು ಪೂಜಾರ್ಹವಾದದ್ದು ಹೇಗೆ?
ಪರಶಿವನು ಒಮ್ಮೆ ಪಾರ್ವತಿಯೊಂದಿಗೆ ತನ್ನ ಹಿಂದಿನ ವೃತ್ತಾಂತವನ್ನು ತಿಳಿಸುತ್ತಾ ರುದ್ರಾಕ್ಷಿ ವೃಕ್ಷದ ಕುರಿತು ತಿಳಿಸಿದನು. ಶಿವನು ಒಮ್ಮೆ ನಿರಂತರವಾಗಿ ತಪಸ್ಸನ್ನಾಚರಿಸಿದರೂ ಸಹ ತಪೋಸಿದ್ಧಿಗಳಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಭಕ್ತರ ಭಕ್ತಿಗೆ ತಕ್ಷಣವೇ ಒಲಿದು ಬರುವ ಪರಶಿವನ ಗಮನವೆಲ್ಲವೂ ಭಕ್ತರ ಕಡೆಗೆ ಹೆಚ್ಚಾಗಿದ್ದ ಕಾರಣ ಶಿವನ ತಪಸ್ಸು ಫಲಿಸಲಿಲ್ಲ. ಇದರಿಂದ ಶಿವನ ಕಣ್ಣಿನಿಂದ ಜಲಬಿಂದುಗಳು ಉದುರಲಾರಂಭಿಸಿದವು. ಈ ಬಿಂದುಗಳೇ ರುದ್ರಾಕ್ಷಿ ವೃಕ್ಷಗಳಾದವು. ಶಿವನು ಈ ರುದ್ರಾಕ್ಷಿಗಳನ್ನು ನಾಲ್ಕು ವರ್ಣದವರಿಗೂ ಸಮಾನವಾಗಿ ಹಂಚಿದನು. ಇದರಿಂದ ಯಾವುದೇ ವರ್ಣಬೇಧಗಳಿಲ್ಲದೇ ರುದ್ರಾಕ್ಷಿಯನ್ನು ಬಳಸಬಹುದಾಗಿದೆ. ರುದ್ರಾಕ್ಷಿಗಳು ಶಿವನಿಗೆ ಅತ್ಯಂತ ಪ್ರಿಯವಾದವುಗಳಾದುದರಿಂದ ಯಾರು ರುದ್ರಾಕ್ಷಿಯನ್ನು ಭಕ್ತಿ ಶ್ರದ್ಧೆಗಳಿಂದ ಧರಿಸುತ್ತಾರೋ ಅವರು ಶಿವನ ಅನುಗ್ರಹವನ್ನು ಪಡೆಯುತ್ತಾರೆ. ಸಂಪೂರ್ಣ ವಿವರಗಳಿಗೆ ಓದಿ ಮೂಲ- ಶಿವಮಹಾಪುರಾಣ (ಲೇಖಕರು ಶ್ರೀಯುತ ಮಾಗಡಿ ನರಸಿಂಹಯ್ಯ)
ಬಾಳೆ ಎಲೆಯು ಊಟಕ್ಕೆ ಶ್ರೇಷ್ಟವಾದುದು ಏಕೆ?
ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ epigallocatechin gallate ಎಂಬ ಪಾಲಿ ಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರದ ಎಲೆಗೆ ಬಿದ್ದ ತಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆಚನ್ನಗಿರುತ್ತದೆ. ಬಾಳೆಎಲೆಯ ಮೇಲೆ ಬ್ಯಾಕ್ಟೀರಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತದೆ. ಅದರಲ್ಲೂ ಕ್ಯಾನ್ಸ್ರ್ ರೋಗಕ್ಕೆ ಕಾರಣವಾಗುವ ಫ್ರೀರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ. ಚೆನ್ನೈನ ಆಯುರ್ವೇದ ತಜ್ಷರ ಪ್ರಕಾರ ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಇದ್ದವರು ನಿತ್ಯ ಬಾಳೆ ಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಂಶ ಸಿಗುತ್ತದೆ. ತಟ್ಟೆಗಳಲ್ಲಿ ಊಟಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ಹೊಟ್ಟೆಸೇರುತ್ತವೆ. ಆದರೆ ಬಾಳೆಎಲೆಯಲ್ಲಿ ಊಟಮಾಡಿದರೆ ಆ ಯಾವ ಸಮಸ್ಯೆಗಳು ಬರುವುದಿಲ್ಲ. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರದಲ್ಲಿ ಸೇರಿಕೊಳ್ಳುವ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ. (ಮೂಲ ವಿವಿಧ ವೆಬ್ ಪುಟಗಳಿಂದ)
ಈಶ್ವರನ ಜ್ಯೋತಿರ್ಲಿಂಗಗಳ ಕುರಿತು ತಿಳಿಸಿ?
ಮಾತೆ ಆದಿಶಕ್ತಿಗೆ ಕುರಿತಂತೆ ೫೨ ಶಕ್ತಿಪೀಠಗಳಿರುವುದನ್ನು ನಾವೆಲ್ಲರೂ ಕೇಳಿದ್ದೇವೆ. ಅದೇ ರೀತಿಯಲ್ಲಿ ಮಹಾದೇವ ಈಶ್ವರನ ಕುರಿತು ತಿಳಿಯುವ ಸಂದರ್ಭದಲ್ಲಿ ಜ್ಯೋತಿರ್ಲಿಂಗಗಳ ಕುರಿತು ಪ್ರಸ್ತಾಪ ಬರುತ್ತದೆ. ಈಶ್ವರನಿಗೆ ಸಂಬಂಧಿಸಿದಂತೆ ಒಟ್ಟು 12 ಜ್ಯೋತಿರ್ಲಿಂಗಗಳನ್ನು ಕಾಣಬಹುದು. ಅವುಗಳನ್ನು ಈ ಕೆಳಗಿನಂತೆ ಕಾಣಬಹುದಾಗಿದೆ.
ಸೋಮನಾಥ ದೇವಾಲಯ – ಗುಜರಾತ್ ರಾಜ್ಯದ ಜುನಾಘಡ್ ಜಿಲ್ಲೆಯಲ್ಲಿರುವ ವೆರಾವಲ್ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಈ ದೇವಾಲಯವನ್ನು ಸೋಮ (ಚಂದ್ರ)ನು ನಿರ್ಮಾಣ ಮಾಡಿದ ಕಾರಣದಿಂದ ಈ ದೇವಾಲಯಕ್ಕೆ ಸೋಮನಾಥ ದೇವಾಲಯ ಎಂಬ ಹೆಸರು ಬಂತೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ.
ಶ್ರೀ ಶೈಲ ಮಲ್ಲಿಕಾರ್ಜುನ ದೇವಾಲಯ – ಈ ದೇವಾಲಯವನ್ನು ಆಂದ್ರಪ್ರದೇಶ ರಾಜ್ಯದ ಕರ್ನೂಲು ಜಿಲ್ಲೆಯಲ್ಲಿ ಕಾಣಬಹುದಾಗಿದ್ದು, ಶ್ರೀಪರ್ವತ ಎಂಬಾತನು ಕಾರುಣ್ಯರೂಪಿಯಾದ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಈ ಸ್ಥಳದಲ್ಲಿಯೇ ನೆಲೆಸಬೇಕೆಂದು ಸಲ್ಲಿಸಿದ ಕೋರಿಕೆಯಿಂದ ಶಿವನು ಅಲ್ಲಿ ನೆಲೆಸಿದನು. ಹಾಗಾಗಿ ಈ ದೇವಾಲಯವನ್ನು ಹೊಂದಿರುವ ಪರ್ವತವನ್ನು ಶ್ರೀಶೈಲ ಎಂದು ಕರೆಯುತ್ತಾರೆ.
ಉಜ್ಜೈನಿಯ ಮಹಾಕಾಲೇಶ್ವರ ದೇವಾಲಯ – ಮದ್ಯಪ್ರದೇಶ ರಾಜ್ಯದ ಉಜ್ಜೈನಿ ಎಂಬ ನಗರದಲ್ಲಿ ಈ ದೇವಾಲಯವನ್ನು ಕಾಣಬಹುದು. ಶ್ರೀಕರ ಎಂಬ ಬಾಲಕನ ಕಲ್ಮಶರಹಿತ ಭಕ್ತಿ, ಪ್ರೀತಿಗೆ ಮೆಚ್ಚಿ ಶಿವನು ಈ ಸ್ಥಳದಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆನಿಂತನೆಂಬುದು ಪ್ರತೀತಿ. ಈ ದೇವಾಲಯದಲ್ಲಿನ ಶಿವನನ್ನು ದಕ್ಷಿಣಾಮೂರ್ತಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಏಕೆಂದರೆ ಈ ದೇವಾಲಯದಲ್ಲಿ ಶಿವನು ದಕ್ಷಿಣಾಭಿಮುಖವಾಗಿರುವುದು. ಈ ದೇವಾಲಯವನ್ನು ಮುಕ್ತಿಧಾಮಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
ಓಂಕಾರೇಶ್ವರ ದೇವಾಲಯ – ಮದ್ಯಪ್ರದೇಶ ರಾಜ್ಯದ ನರ್ಮದಾ ನದಿಯ ದಂಡೆಯ ಮೇಲೆ ಈ ದೇವಾಲಯವನ್ನು ಕಾಣಬಹುದು. ಈ ದೇವಾಲಯದ ಸುತ್ತಲೂ ನರ್ಮದಾ ನದಿ ಆವರಿಸಿಕೊಂಡಿದ್ದು, ಈ ಸ್ಥಳವನ್ನು ಪಾಕ್ಷಿಕ ರೂಪದಲ್ಲಿ ನೋಡಿದಾಗ ಓಂ ಎಂಬ ಆಕಾರ ಕಂಡುಬರುವುದರಿಂದ ಈ ದೇವಾಲಯವನ್ನು ಓಂಕಾರೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಅಹಲ್ಯಾಬಾಯಿ ಎಂಬ ಮಹಾರಾಣಿ (ಇಂಧೋರ್ ಆಸ್ಥಾನದ) ನಿರ್ಮಾಣ ಮಾಡಿರುವಳೆಂಬ ಪ್ರತೀತಿಯಿದೆ.
ಕೇದಾರನಾಥ ದೇವಾಲಯ – ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಎಂಬ ಜಿಲ್ಲೆಯಲ್ಲಿ (ರುದ್ರಪ್ರಯಾಗ ಎಂಬ ಸ್ಥಳವು ಈ ಹಿಂದೆ ಅತ್ಯಂತ ಕ್ರೂರ ನರಭಕ್ಷಕನಾಗಿ ಪರಿವರ್ತನೆಗೊಂಡು ಅಸಂಖ್ಯಾತ ಜನರನ್ನು ಹತ್ಯೆಮಾಡಿ, ಬೇಟೆಗಾರರಿಗೂ ಚಳ್ಳೆಹಣ್ಣು ತಿನ್ನಿಸಿ ಮೆರೆದ ಚಿರತೆಯ ಕಾರಣದಿಂದ ಕುಖ್ಯಾತಿ ಗಳಿಸಿದ ಸ್ಥಳವಾಗಿದೆ. ಈ ಕುರಿತು ಕನ್ನಡದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರಿಂದ ಅನುವಾದಿತವಾದ ಮೈ ನವಿರೇಳಿಸುವ ರುದ್ರಪ್ರಯಾಗದ ಭಯಾನಕ ನರಭಕ್ಶಕ ಕೃತಿಯನ್ನು ಓದಿ) ಕಾಣಬಹುದಾಗಿದೆ.ಏಪ್ರಿಲ್-ಅಕ್ಟೋಬರ್ ನಡುವಿನ ಆರು ತಿಂಗಳು ಮಾತ್ರವೇ ಈ ದೇವಾಲಯವನ್ನು ದರ್ಶಿಸುವ ಅವಕಾಶವಿದ್ದು, ನಂತರದ ಆರು ತಿಂಗಳುಗಳೂ ಈ ದೇವಾಲಯವು ಮಂಜಿನಿಂದ ಆವೃತವಾಗಿರುತ್ತದೆ. ಕೇದಾರ ಎಂಬ ಅರಸನಿಂದ ನಿರ್ಮಾಣಗೊಂಡ ಕಾರಣದಿಂದ ಈ ದೇವಾಲಯಕ್ಕೆ ಕೇದಾರನಾಥ ದೇವಾಲಯ ಎಂಬ ಹೆಸರು ಬಂದಿದೆ. ಕುರುಕ್ಶೇತ್ರ ಯುದ್ದದಲ್ಲಿ ತಮ್ಮವರನ್ನೇ ಹತ್ಯೆ ಮಾಡಿ ನೊಂದಿದ್ದ ಪಾಂಡವರು ಈ ಸ್ಥಳಕ್ಕೆ ಆಗಮಿಸಿ ಶಿವನ ದರ್ಶನ ಪಡೆದು, ಇಲ್ಲಿಯೇ ನೆಲೆನಿಲ್ಲುವಂತೆ ಕೇಳಿದ ಬೇಡಿಕೆಯನ್ನು ಮನ್ನಿಸಿ ಶಿವನು ಇಲ್ಲಿಯೇ ಜ್ಯೋತಿರ್ಲಿಂಗವಾಗಿನೆಲೆನಿಂತನೆಂದು ಪುರಾಣದಲ್ಲಿ ಹೇಳಲಾಗಿದೆ.
ಭೀಮಾಶಂಕರ ದೇವಾಲಯ – ಮಹಾರಾಷ್ಟ ರಾಜ್ಯದಲ್ಲಿನ ಖೇಡ್ ಎಂಬ ಜಿಲ್ಲೆಯ ಭೋರಗಿರಿ ಎಂಬ ಹಳ್ಳಿಯಲ್ಲಿ ಈ ದೇವಾಲಯವನ್ನು ಕಾಣಬಹುದು. ಈ ದೇವಾಲಯವು ಸಹ್ಯಾದ್ರಿ ಬೆಟ್ಟಗಳ ತಪ್ಪಲಲ್ಲಿದ್ದು ಅದ್ಭುತ ಸೌಂದರ್ಯವನ್ನು ಹೊಂದಿದೆ. ಕರ್ಕತಿ ಎಂಬ ರಾಕ್ಷಸಿಯ ಮಗನಾದ ಭೀಮ ಎಂಬುವವನು ಕುಂಭಕರ್ಣನ ಮಗನಾಗಿದ್ದು, ಈತನ ಹತ್ಯೆಯು ಶ್ರೀರಾಮನಿಂದಾಯಿತೆಂದು ತಿಳಿದು ಕುಪಿತಗೊಂಡು ಮುನಿವರೇಣ್ಯರಿಗೆ ತೊಂದರೆ ಕೊಡುವುದಲ್ಲದೇ ಶಿವಭಕ್ತನಾದ ಕಾಮರೂಪನು ಶಿವಧ್ಯನದಲ್ಲಿರುವ ಸಂದರ್ಭದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಲು ಹೋದ ಸಂದರ್ಭದಲ್ಲಿ ಶಿವನೇ ಪ್ರತ್ಯಕ್ಷನಾಗಿ ಭೀಮನನ್ನು ಭಸ್ಮಗೊಳಿಸಿದ್ದಲ್ಲದೇ ಕಾಮರೂಪನ ಬೇಡಿಕೆಯಂತೆ ಅಲ್ಲಿಯೇ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿದನೆಂದು ಹೇಳಲಾಗಿದೆ.
ತ್ರ್ಯಯಂಬಕೇಶ್ವರ ದೇವಾಲಯ – ಮಹಾರಾಷ್ಟ ರಾಜ್ಯದ ನಾಸಿಕ್ ಜಿಲ್ಲೆಯಲ್ಲಿನ ತ್ರ್ಯಂಬಕ್ ಎಂಬ ಸ್ಥಳದಲ್ಲಿ ಹರಿಯುತ್ತಿರುವ ಗೋದಾವರಿ ನದಿಯ ದಡದಲ್ಲಿ ಈ ದೇವಾಲಯವನ್ನು ಕಾಣಬಹುದು.
ವಿಶ್ವೇಶ್ವರ ದೇವಾಲಯ – ಉತ್ತರಪ್ರದೇಶ ರಾಜ್ಯದ ಕಾಶಿ ಅಥವಾ ವಾರಣಾಸಿ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ.ಕ್ರಿ.ಶ 490 ರಲ್ಲಿ ಈ ದೇವಾಲಯದ ನಿರ್ಮಾಣವಾಗಿದೆಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗೈದೆ. ಓಂಕಾರೇಶ್ವರ ದೇವಾಲಯವನ್ನು ನಿರ್ಮಾಣ ಮಾಡಿದ ಇಂಧೋರ್ನ ರಾಣಿ ಅಹಲ್ಯಾಬಾಯಿಯೇ ಮುಸ್ಲಿಂ ದೊರೆಗ್ಳಿಂದ ಹಾನಿಗೀಡಾಗಿದ್ದ ಈ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದಳೆಂದು ಪ್ರತೀತಿಯಿದೆ.
ವೈದ್ಯನಾಥೇಶ್ವರ ದೇವಾಲಯ – ಜಾರ್ಖಂಡ್ ರಾಜ್ಯದ ದೇವಘಡ ಬಳಿಯಲ್ಲಿ ಈದೇವಾಲಯವನ್ನು ಕಾಣಬಹುದು. ರಾವಣನು ಪಡೆದ ಆತ್ಮಲಿಂಗವನ್ನು ಗಣಪತಿಯು ಬುದ್ದಿವಂತಿಕೆಯಿಂದ ಭೂ ಸ್ಥಾಪನೆಗೈದಾಗ, ಕುಪಿತಗೊಂಡ ರಾವಣನು ಶಿವನಿಗಾಗಿ ಎಷ್ಟೇ ತಪಸ್ಸನ್ನಾಚರಿಸಿದರೂ ಪ್ರತ್ಯಕ್ಷನಾಗದಿದ್ದಾಗ ಬೇಸರಗೊಂಡ ರಾವಣನು ತನ್ನ ಒಂದೊಂದೇ ತಲೆಗಳನ್ನು ಕಡಿದು ಅರ್ಪಿಸತೊಡಗಿದನು, ಇದರಿಂದ ಶಿವನು ಪ್ರತ್ಯಕ್ಷನಾಗಿ ಕಡಿಯಲಾಗಿದ್ದ ತಲೆಗಳನ್ನು ಮರುಜೋಡಿಸಿ ಹರಸಿದ ಕಾರಣದಿಂದ ಈ ದೇವಾಲಯಕ್ಕೆ ವೈದ್ಯನಾಥೇಶ್ವರ ದೇವಾಲಯವೆಂಬ ಹೆಸರು ಬಂತೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ನಾಗೇಶ್ವರ ಅಥವಾ ನಾಗನಾಥ ದೇವಾಲಯ – ಗುಜರಾತ್ ರಾಜ್ಯದ ದ್ವಾರಕ ನಗರದಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಈ ಸ್ಥಳವು ನಾಗಾಸಾಧುಗಳಿಗೆ ಅತಿಮುಖ್ಯ ಸ್ಥಳವಾಗಿದ್ದು, ಬಾಲ್ಹ್ಯ ಎಂಬ ಋಷಿಯು ನಗ್ನ ಸಾಧುವಿನ ರೂಪದಲ್ಲಿ ಬಂದ ಶಿವನಿಗೆ ನೀಡಿದ ಶಾಪದಿಂದಾಗಿ ಈ ಸ್ಥಳದಲ್ಲಿ ಜ್ಯೋತಿರ್ಲಿಂಗದ ರೂಪದಲ್ಲಿ ನೆಲೆಸಿದ ಎಂಬುದು ಪ್ರತೀತಿ.
ಘೃಷ್ಣೇಶ್ವರ ದೇವಾಲಯ – ಮಹಾರಾಷ್ಟ ರಾಜ್ಯದ ಔರಂಗಾಬಾದ್ ಬಳಿಯಲ್ಲಿ ಈ ದೇವಲಯವನ್ನು ಕಾಣಬಹುದಾಗಿದ್ದು, ಕುಸುಮೇಶ್ವರ ದೇವಾಲಯ ಎಂಬ ಹೆಸರಿನಿಂದಲೂ ಈ ದೇಗುಲವನ್ನು ಕರೆಯಲಾಗುತ್ತದೆ. ಕುಸುಮಾ ಎಂಬ ಶಿವಭಕ್ತೆಯ ಮಗನು ತ್ನ್ನ ಸ್ವಂತ ಅಕ್ಕನಿಂದಲೇ ಹತ್ಯೆಯಾದ ಕಾರಣದಿಂದ ಮನನೊಂದು ಶಿವನನ್ನು ಪ್ರಾರ್ಥಿಸಿದ ಪರಿಣಾಮ ಶಿವನು ಪ್ರತ್ತ್ಯಕ್ಷನಾಗಿ ಈಕೆಯ ಮಗನನ್ನು ಬದುಕಿಸಿದ ಕಾರಣ ಈ ದೇವಾಲಯಕ್ಕೆ ಕುಸುಮೇಶ್ವರ ದೇವಾಲಯವೆಂಬ ಹೆಸರು ಬಂದಿತು.ಎಲ್ಲೋರಾ ಗುಹೆಗಳಿಗೆ ಸಮೀಪದಲ್ಲಿಯೇ ಈ ದೇವಾಲಯವನ್ನು ಕಾಣಬಹುದಾಗಿದೆ.
ರಾಮೇಶ್ವರ ದೇವಾಲಯ – ತಮಿಳುನಾಡು ರಾಜ್ಯದಲ್ಲಿನ ರಾಮೇಶ್ವರಂ ಎಂಬಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ. ಮಹಾಶಿವಭಕ್ತನಾದ ರಾವಣನನ್ನು ಕೊಂದ ಪಾಪದ ಪರಿಹಾರಾರ್ಥವಾಗಿ ಶಿವಲಿಂಗವನ್ನು ಪ್ರತಿಷ್ಟಾಪಿಸಲು ನಿರ್ಧರಿಸಿದ ರಾಮ ಹನುಮನಿಗೆ ಉತ್ತಮ ಶಿಲೆಯನ್ನು ತರಲು ಆದೇಶಿಸಿದನಾದರೂ, ಹನುಮನು ಶಿಲೆ ತರುವ ವೇಳೆಗೆ ಲಿಂಗ ಪ್ರತಿಷ್ಟಾಪನೆ ಮುಗಿದಿದ್ದ ಕಾರಣ ಹನುಮ ತಂದ ಲಿಂಗಕ್ಕೆ ಪ್ರಥಮ ಪೂಜೆ ಸಲ್ಲಬೇಕೆಂದು ಆದೇಶಿಸಿದನು. ರಾಮನಿಂದ ನಿರ್ಮಾಣಾವಾದ ದೇವಾಲಯ ಹಾಗೂ ಪ್ರತಿಷ್ಟಾಪಿತಗೊಂಡ ಲಿಂಗವಾದ ಕಾರಣ ಈ ದೇವಾಲಯಕ್ಕೆ ರಮೇಶ್ವರ ದೇವಾಲಯಾವೆಂಬ ಹೆಸರು ಬಂದಿದೆಯೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಮುಕ್ತಿಧಾಮಗಳು ಯಾವುವು?
ಒಟ್ಟು ಏಳು ಮುಕ್ತಿಧಾಮಗಳನ್ನು ಕಾಣಬಹುದು. ಅವುಗಳೆಂದರೆ…
ಮಥುರಾ
ಅಯೋಧ್ಯಾ
ಬನಾರಸ್
ಕಂಚಿ
ದ್ವಾರಕಾನಗರ
ಹರಿದ್ವಾರ
ಉಜ್ಜೈನಿ
ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನು ಪರಮಶ್ರೇಷ್ಟ ನೈವೇದ್ಯದ ಫಲಗಳೆಂದು ಪರಿಗಣಿಸಲಾಗುತ್ತದೆ ಏಕೆ? ಯಾವುದೇ ಹಣ್ಣಿನ ಸಸಿಗಳೂ ಸಹ ಬೀಜದಿಂದ ಹುಟ್ಟುವವುಗಳಾಗಿದ್ದು, ತಿಂದು ಎಂಜಲು ಮಾಡಿ ಬಿಸಾಡಿದ ಬೀಜಗಳಿಂದ ಹುಟ್ಟುತ್ತವೆಯಾದ್ದರಿಂದ, ಯವುದೇ ಬೀಜರಹಿತವಾಗಿ ಹುಟ್ಟಿ ಬೆಳೆದು ಫಲ ನೀಡುವ ವೃಕ್ಷಗಳಾದ ಬಾಳೆ ಹಾಗೂ ತೀಂಗಿನಿಂದ ಪಡೆಯುವ ಫಲಗಳು ಪರಮಶ್ರೇಷ್ಟ ಎಂದು ಪರಿಗಣಿಸಲಾಗುತ್ತದೆ. ಉದಾಹರಣೆಗೆ ಬಾಳೆಯ ಬುಡದಲ್ಲಿಯೇ ಸಸಿಗಳು ಹುಟ್ಟುತ್ತವೆಯೇ ಹೊರತು ಯಾವುದೇ ಬಳೆ ಬೀಜವನ್ನು ಪಡೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿಯೇ ತೆಂಗಿನ ಕಾಯಿಯನ್ನು ಸಿಪ್ಪೆಸಹಿತವಾಗಿ ಮಣ್ಣಿನಲ್ಲಿ ಹೂತರೆ ಮಾತ್ರವೇ ತೆಂಗಿನಸಸಿಯನ್ನು ಪಡೆಯಬಹುದಾಗಿದ್ದು, ಈ ಎರೆಡು ಫಲಗಳು ಎಂಜಲುರಹಿತವಾಗಿವೆ.ಆದುದರಿಂದಲೇ ನೈವೇದ್ಯಕ್ಕೆ ಈ ಎರೆಡು ಫಲಗಳು ಪರಮಶ್ರೇಷ್ಟವಾಗಿವೆ.
ಅನ್ನಪೂರ್ಣ ದೇವಿಯು ಉಗಮವಾದ ಬಗೆ ಹೇಗೆ?
ಒಮ್ಮೆ ಶಿವನ ಮೂರೂ ಕಣ್ಣುಗಳನ್ನು ಪಾರ್ವತಿಯು ತನ್ನ ಕೈಗಳಿಂದ ಮುಚ್ಚಿಬಿಟ್ಟಳು. ಶಿವನ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಹಾಗೂ ಅಗ್ನಿ ಆಗಿದ್ದು, ಇಡೀ ಜಗತ್ತಿಗೆ ಬೆಳಕನ್ನು ದಯಪಾಲಿಸುವ ಈ ಮೂರೂ ಕಣ್ಣುಗಳನ್ನು ಮುಚ್ಚಿದ್ದರಿಂದ ಬೆಳಕಿಲ್ಲದೆ ಇಡೀ ಜಗತ್ತು ಅಂಧಕಾರಮಯವಾಯಿತು, ಆಹಾರದ ಉತ್ಪಾದನೆಯಿಲ್ಲದಂತಾಯಿತು. ಭೀಕರ ಬರಗಾಲ ಆವರಿಸಿತು. ಇದಲ್ಲದೆ ಪಾರ್ವತಿಯ ಮುಖವು ಕಪ್ಪನೆಯ ಬಣ್ಣಕ್ಕೆ ತಿರುಗಿತು. ಈ ಸಮಸ್ಯೆಯನ್ನು ನಿವಾರಿಸುವ ಬಗೆ ಹೇಗೆಂದು ಪಾರ್ವತಿಯು ಈಶ್ವರನಲ್ಲಿ ಕೇಳಿಕೊಂಡಾಗ, ಶಿವನು ನೀನು ಅನ್ನಪೂರ್ಣೆಯ ರೂಪವನ್ನು ತಾಳಿ ಅನ್ನದಾನವನ್ನು ಮಾಡಬೇಕೆಂದು, ಇದರಿಂದ ಕ್ರಮೇಣ ಈ ಸಮಸ್ಯೆ ನಿವಾರಣೆಯಾಗುವುದೆಂದು ತಿಳಿಸಿದನು. ಮೊಟ್ಟಮೊದಲಿಗೆ ಶಿವನೇ ಅನ್ನಪೂರ್ಣೆಯಲ್ಲಿ ಬಿಕ್ಷೆಯನ್ನು ಬೇಡಿದನು. ಅಂದಿನಿಂದ ಇಂದಿನವರೆಗೂ ಪಾರ್ವತಿದೇವಿಯೇ ಅನ್ನಪೂರ್ಣೆಯಾಗಿ ಜಗತ್ತಿನ ಹಸಿವನ್ನು ನೀಗಿಸುತ್ತಿದ್ದಾಳೆ.
ಆಂಜನೇಯನಿಗೆ ಹನುಮಂತ ಎಂಬ ಹೆಸರು ಬಂದದ್ದು ಹೇಗೆ?
ಬಾಲ್ಯವಸ್ಥೆಯಲ್ಲಿದ್ದಾಗ ಆಂಜನೇಯನು ಚೆಂಡು ಎಂದು ತಿಳಿದು ಸೂರ್ಯನನ್ನು ಹಿಡಿಯಲು ಹೋದಾಗ ಸಿಟ್ಟಿಗೆದ್ದ ಸೂರ್ಯದೇವ್ನು ಆಂಜನೇಯನ ದವಡೆಗೆ ಗುದ್ದು ನೀಡಿದನು. ಸಂಸ್ಕೃತದಲ್ಲಿ ಹನು ಎಂದರೆ ದವಡೆಯಾಗಿದ್ದು, ಆಂಜನೇಯನ ದವಡೆಗೆ ಸೂರ್ಯದೇವನು ಮಂಥನ ಮಾಡಿದ್ದರಿಂದ ಹನುಮಂತ ಎಂಬ ಹೆಸರು ಬಂದಿತು.
ಮಹಾಬಲೇಶ್ವರಕ್ಕೆ ಆ ಹೆಸರು ಬರಲು ಕಾರಣವೇನು?
ಮಹಾ ಬ್ರಾಹ್ಮಣನಾದ ರಾವಣನು ತನ್ನ ನಿಷ್ಟೆಯುತ ಉಗ್ರ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ ಶಿವನ ಆತ್ಮಲಿಂಗವನ್ನು ಪಡೆದನು. ಶಿವನ ಸೂಚನೆಯ ಪ್ರಕಾರ ಅದನ್ನು ದಾರಿಯ ಮಧ್ಯದಲ್ಲಿ ಎಲ್ಲಿಯೂ ನೆಲಕ್ಕೆ ಸ್ಪರ್ಶಿಸಕೂಡದು. ಒಂದೊಮ್ಮೆ ಸ್ಪರ್ಶಿಸಿದಲ್ಲಿ ಅದು ಅಲ್ಲಿಯೇ ಭೂಸ್ಥಾಪನೆಗೊಳ್ಳುತ್ತದೆ. ಆತ್ಮಲಿಂಗವನ್ನು ಪಡೆದ ರಾವಣನು ಲಂಕಗೆ ತೆರಳುತ್ತಿದ್ದಾಗ ಸಾಯಂಕಾಲದ ಸಂಧ್ಯಾವಂದನೆಯ ಸಮಯವಾಯಿತು. ರಾವನನು ಸಂಧ್ಯಾವಂದನೆಯ ಕರ್ಮವನ್ನು ನಿಲ್ಲಿಸುವಂತಿರಲಿಲ್ಲ. ಅದೇ ಸಮಯಕ್ಕೆ ಪುಟ್ಟ ಬಾಲಕನ ರೂಪದಲ್ಲಿ ಬಂದ ಗಣಪತಿಯ ಕೈಗೆ ಆತ್ಮಲಿಂಗವನ್ನು ನೀಡಿ ಸಂಧ್ಯಾವಂದನೆಗೆ ತೆರಳಿದನು. ಈ ಮೊದಲೇ ನಿರ್ಧರಿಸಿದಂತೆ ಗಣೇಶನು ಇನ್ನೇನು ಸಂಧ್ಯಾವಂದನೆ ಮುಗಿಯುವ ಹೊತ್ತಿನಲ್ಲಿ ಆತ್ಮಲಿಂಗದ ಭಾರ ತಾಳೆನೆಂದು ನೆಲದ ಮೇಲಿಟ್ಟನು. ಯಾವಾಗ ಅದು ಭೂ-ಸ್ಪರ್ಶವಾಯಿತೋ ಅದು ಅಲ್ಲಿಯೇ ಭೂ ಸ್ಥಾಪಿತವಾಯಿತು. ರಾವಣ ಮಹಾ ಪರಾಕ್ರಮಿಯಾಗಿದ್ದರೂ ಸಹ ಎಷ್ಟೇ ಪ್ರಯತ್ನಿಸಿದರೂ ಸಹ ಲಿಂಗವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದಲೇ ಆ ಸ್ಥಳಕ್ಕೆ ಮಹಾಬಲೇಶ್ವರ ಎಂಬ ಹೆಸರು ಬಂದಿದೆ.
ಸ್ವಾಮಿ ಸುಬ್ರಮಣ್ಯ ದೇವರ ಇತರ ಹೆಸರುಗಳುಮುರುಗನ್, ಸ್ಕಂದ, ಕಂದ, ಸುಬ್ರಾಮಣ್ಯ, ಶಣ್ಮುಖ, ಸರವಣ, ಕಾರ್ತಿಕೇಯ, ಗುಹ, ವೇಲಾಯುಧನ್, ಕುಮಾರಸ್ವಾಮಿ
ಸುಭಾಷಿತಗಳು
ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು
ಲಕ್ಷ್ಮೀಃ ಸಮಾವಿಶತು ಗಚ್ಛತು ವಾ ಯಥೇಷ್ಟಮ್
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ
ನ್ಯಾಯಾತ್ಪಥಃ ಪ್ರವಿಚಲಂತಿ ಪದಂ ನ ಧೀರಾಃ
ನೀತಿನಿಪುಣರು ನಿಂದಿಸಲಿ ಹೊಗಳಲಿ, ಸಂಪತ್ತು ಬರಲಿ ಅಥವಾ ಹೊರಟುಹೋಗಲಿ, ಸಾವು ಈಗಲೇ ಬರಲಿ ಅಥವಾ ಯುಗಾಂತರದಲ್ಲಿ ಉಂಟಾಂಗಲಿ, ಧೀರರಾದವರು ನ್ಯಾಯಮಾರ್ಗವನ್ನು ಬಿಟ್ಟು ಸ್ವಲ್ಪವೂ ಕದಲುವದಿಲ್ಲ.
ನೈವ ಕಿಂಚಿತ್ಕರೋಮೀತಿ
ಯುಕ್ತೋ ಮನ್ಯೇತ ತತ್ತ್ವವಿತ್
ಪಶ್ಯನ್ ಶೃಣ್ವನ್ ಸ್ಪೃಶನ್ ಜಿಘ್ರನ್
ಅಶ್ನನ್ ಗಚ್ಛನ್ ಸ್ವಪನ್ ಶ್ವಸನ್
ಪ್ರಲಪನ್ವಿಸೃಜನ್ ಗ್ರಹ್ಣನ್
ಉನ್ಮಿಷನ್ನಿಮಿಷನ್ನಪಿ
ಇಂದ್ರಿಯಾಣೀಂದ್ರಿಯಾರ್ಥೇಷು
ವರ್ತಂತ ಇತಿ ಧಾರಯನ್
ತತ್ತ್ವಜ್ಞಾನಿಯಾದ ಸಾಂಖ್ಯಯೋಗಿಯು ನೋಡುವಾಗ, ಕೇಳುವಾಗ, ಮುಟ್ಟುವಾಗ, ಮೂಸುವಾಗ, ಊಟ ಮಾಡುವಾಗ, ಓಡಾಡುವಾಗ, ನಿದ್ರಿಸುವಾಗ,ಉಸಿರಾಡುವಾಗ,ಮಾತನಾಡುವಾಗ,ತ್ಯಜಿಸುವಾಗ ಹಾಗೂ ಸ್ವೀಕರಿಸುವಾಗ,ಕಣ್ಣು ತಿಳಿಯುವಾಗ ಹಾಗೂ ಕಣ್ಣು ಮುಚ್ಚುವಾಗಲೂ ಸಹ ಇಂದ್ರಿಯಗಳೆಲ್ಲವೂ ತಮ್ಮ- ತಮ್ಮ ಸ್ವಾಭಾವಿಕ ವಿಷಯಗಳಲ್ಲಿ ಪ್ರವೃತ್ತವಾಗಿರುತ್ತವೆ ಎಂದು ತಿಳಿದುಕೊಳ್ಳುತ್ತಾ, ನಾನು ಏನನ್ನೂ ಸಹ ಮಾಡುತ್ತಾ ಇಲ್ಲ ಎಂದು ನಿಃಸಂದೇಹವಾಗಿ ತಿಳಿಯಬೇಕು
ತ್ಯಾಜ್ಯಂ ಧೈರ್ಯಂ ವಿದುರೇಪಿ ಕಾಲೇ
ಧೈರ್ಯಾತ್ಕದಾಚಿದ್ಗತಿಮಾಪ್ನುಯಾತ್ಸಃ
ಯಥಾ ಸಮುದ್ರೇಪಿ ಚ ಪೋತಭಂಗೇ
ಸಾಯಾಂತ್ರಿಕೋ ವಾಂಛತಿ ತರ್ತುಮೇವ
ಸಮುದ್ರದಲ್ಲಿ ಹಡಗು ಮುರಿದರೂ ನಾವಿಕನು ಸಾಗರವನ್ನು ದಾಟಲು ಹೇಗೆ ಬಯಸುವನೋ ಹಾಗೆ ಕಷ್ಟಕಾಲದಲ್ಲಿಯೂ ಧೈರ್ಯವನ್ನು ಎಂದೂ ಬಿಡಬಾರದು. ಧೈರ್ಯದಿಂದ ಎಂದಾದರೂ ಒಳ್ಳೆಯ ಗತಿಯನ್ನು ಹೊಂದಿಯಾನು.
ಯಃ ಪಠತಿ ಲಿಖತಿ ಪಷ್ಯತಿ
ಪರಿಪೃಚ್ಛತಿ ಪಂಡಿತಾನುಪಾಶ್ರಯತಿ
ತಸ್ಯ ದಿವಾಕರಕಿರಣೈಃ ನಲಿನೀದಲಮಿವ ವಿಕಾಸ್ಯತೇ ಬುದ್ಧಿಃ
ಯಾವನು ಓದಿ, ಬರೆದು, ನೋಡಿ, ಬಗೆಬಗೆಯಾಗಿ ಪ್ರಶ್ನೆಮಾಡಿ, ಪಂಡಿತರನ್ನು ಆಶ್ರಯಿಸುವನೋ ಅವನ ಬುದ್ಧಿಯು ಸೂರ್ಯಕಿರಣಗಳಿಂದ ತಾವರೆಯ ದಳ ಅರಳುವಂತೆ ವಿಕಾಸಗೊಳ್ಳುವುದು
ಸರ್ವಕರ್ಮಾಣಿ ಮನಸಾ
ಸಂನ್ಯಸ್ಯಾಸ್ತೇ ಸುಖಂ ವಶೀ
ನವದ್ವಾರೇ ಪುರೇ ದೇಹೀ
ನೈವ ಕುರ್ವನ್ನ ಕಾರಯನ್
ತನ್ನ ಅಂತಃಕರಣವನ್ನು ವಶದಲ್ಲಿಟ್ಟುಕೊಂಡು ಸಾಂಖ್ಯಯೋಗದ ಆಚರಣೆ ಮಾಡುವ ಪುರುಷನು ನಿಸ್ಸಂದೇಹವಾಗಿ ಏನನ್ನೂ ಮಾಡದೆ ಮತ್ತು ಏನನ್ನೂ ಮಾಡಿಸದೇ ಒಂಭತ್ತು ದ್ವಾರಗಳುಳ್ಳ ಶರೀರರೂಪೀ ಮನೆಯಲ್ಲಿ ಎಲ್ಲಾ ಕರ್ಮಗಳನ್ನೂ ಮನಸ್ಸಿನಿಂದಲೇ ತ್ಯಜಿಸಿ ಅರ್ಥಾತ್ ಇಂದ್ರಿಯಗಳು ಅವುಗಳ ವಿಷಯಗಳಲ್ಲಿ ಪ್ರವರ್ತಿಸುತ್ತಿವೆ ಎಂದು ತಿಳಿಸಿದುಕೊಳ್ಳುತ್ತಾ ಆನಂದವಾಗಿ ಸಚ್ಚಿದಾನಂದ ಘನ ಪರಮಾತ್ಮನಲ್ಲಿ ಸ್ಥಿರಗೊಂಡಿರುತ್ತಾನೆ
ಯುಕ್ತಂ ಕರ್ಮಫಲಂ ತ್ಯಕ್ತ್ವಾ
ಶಾಂತಿಮಾಪ್ನೋತಿ ನೈಷ್ಠಿಕೀಮ್
ಅಯುಕ್ತಃ ಕಾಮಕಾರೇಣ
ಫಲೇ ಸಕ್ತೋ ನಿಬಧ್ಯತೇ
ನಿಷ್ಕಾಮ ಕರ್ಮಯೋಗಿಯು ಕರ್ಮಗಳ ಫಲವನ್ನು ತ್ಯಾಗ ಮಾಡಿ ಅರ್ಥಾತ್ ಪರಮಾತ್ಮನಿಗೆ ಸಮರ್ಪಿಸಿ ಭಗವತ್ಸಾಕ್ಷಾತ್ಕಾರ ರೂಪೀ ಶಾಂತಿಯನ್ನು ಪಡೆಯುತ್ತಾನೆ ಮತ್ತು ಸಕಾಮೀ ಪುರುಷನು ಫಲದಲ್ಲಿ ಆಸಕ್ತನಾಗಿ ಕಾಮಪ್ರೇರಣೆಯಿಂದ ಬಂಧಿಸಲ್ಪಡುತ್ತಾನೆ
ಶ್ರದ್ಧಯಾ ಧಾರ್ಯತೇ ಧರ್ಮೋ
ಬಹುಭಿರ್ನಾರ್ಥರಾಶಿಭಿಃ
ನಿಷ್ಕಿಂಚನಾ ಹಿ ಮುನಯಃ
ಶ್ರದ್ಧಾವಂತೋ ದಿವಂಗತಾಃ
ಶ್ರದ್ಧೆಯಿಂದಲೇ ಧರ್ಮವು ಬೆಳಗುತ್ತದೆ. ಹೇರಳವಾದ ಹಣವಿದ್ದರೂ ಧರ್ಮವನ್ನು ಸಂಪಾದಿಸಲಾಗದು. ಏನೂ ಹಣವಿಲ್ಲದ ಋಷಿಗಳು ಶ್ರದ್ಧೆಯಿಂದ ಸದ್ಗತಿ ಪಡೆದಿದ್ದಾರೆ. ( ಗರುಡಪುರಾಣ)
ಯಃ ಸರ್ವತ್ರಾನಭಿಸ್ನೇಹಃ
ತತ್ತತ್ ಪ್ರಾಪ್ಯ ಶುಭಾಶುಭಮ್
ನಾಭಿನಂದತಿ ನ ದ್ವೇಷ್ಟಿ
ತಸ್ಯ ಪ್ರಜ್ಞಾ ಪ್ರತಿಷ್ಠಿತಾ
" ಯಾರು ಎಲ್ಲ ವಸ್ತುಗಳಲ್ಲಿಯೂ ಆಸಕ್ತಿ ರಹಿತನಾಗಿ ಇದ್ದು, ಬಂದ ಶುಭ ಫಲಗಳಿಗೆ ಸಂತೋಷಪಡದೇ, ಅಶುಭ ಫಲಗಳಿಗೆ ದುಃಖ - ದ್ವೇಷ ಪಡದೇ ಇರುತ್ತಾನೋ ಅವನೇ ಸ್ಥಿತಪ್ರಜ್ಞನು." ಹೀಗೆ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಸ್ಥಿತಪ್ರಜ್ಞನ ಸ್ವಭಾವದ ಪರಿಚಯ ಮಾಡಿಕೊಡುತ್ತಾನೆ. ಸುಖ ಬಂದಾಗ ಹಿಗ್ಗುವುದಿಲ್ಲ. ದುಃಖವಾದಾಗ ಕುಗ್ಗುವುದಿಲ್ಲ. ಹೀಗೆ ಸಮತ್ವ ಬುದ್ಧಿಯಲ್ಲಿ ಇರುವವನು ಸ್ಥಿತಪ್ರಜ್ಞ ಎನಿಸಿಕೊಳ್ಳುತ್ತಾನೆ. ಅವನಿಗೆ ಲಾಭದ ಮೇಲೆ ಆಸಕ್ತಿ ಇರುವುದಿಲ್ಲ. ಹಾಗೆಯೇ ನಷ್ಟದ ಬಗ್ಗೆ ದುಃಖವೂ ಇರುವುದಿಲ್ಲ. ಅವನನ್ನೇ ಯೋಗಿ ಅಥವಾ ಯೋಗಸ್ಥ ಮನಸ್ಸಿನವನು ಎನ್ನುತ್ತಾರೆ. ಹೀಗೆ ಸ್ಥಿತಪ್ರಜ್ಞನಾಗಿದ್ದರೆ ಮಾನಸಿಕ ನೆಮ್ಮದಿ ಮತ್ತು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಆಸಕ್ತಿ, ತೃಪ್ತಿ ಇರುತ್ತದೆ. ಅದರಿಂದ ಆನಂದ ಸಿಗುತ್ತದೆ. ಚಿಂತೆ ಮತ್ತು ಮಾನಸಿಕ ಕ್ಲೇಶ - ತೊಳಲಾಟ ಇರುವುದಿಲ್ಲ. ನಾವೂ ಸಹ ಹೀಗೆ ಸ್ಥಿತಪ್ರಜ್ಞರಾಗಲು ಪ್ರಯತ್ನಿಸೋಣ. ಜೀವನದಲ್ಲಿ ಆನಂದ ಮತ್ತು ನೆಮ್ಮದಿ ಪಡೆಯೋಣ.
ಇಂದೆದ್ದ ತೆರೆ ನಾಳೆ ಬೀಳುವುದು; ಮರುವಗಲು
ಮುಂದೆ ತಾನೇಳುವುದು ಬೇರೆ ಗಾತ್ರದಲಿ
ಇಂದು ನಾಳೆಗಳನೆಲ್ಲವ ಕೂಡಿ ನೋಡಿದೊಡೆ
ಮುಂದಹುದು ಬೆರಗೊಂದೆ - ಮಂಕುತಿಮ್ಮ
ಇಂದು ಎದ್ದ ತೆರೆ ಬೀಳುವುದು ಮತ್ತೆ ಮರುದಿವಸ ಇನ್ನೊಂದು ತೆರೆ ಬೇರೆ ಗಾತ್ರದಲಿ ಏಳುವುದು. ಹಾಗೆ ಇಂದು ನಾಳೆಗಳ ಬೇರೆ ಬೇರೆ ಗಾತ್ರದ ತೆರೆಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಹಿಂದೆ ನಮಗೆ ಒಂದು ವಿಶಾಲವಾದ ಕಡಲು ಕಾಣುವಂತೆ, ನಮ್ಮ ಮನಸ್ಸುಗಳಲ್ಲಿ ಬೇರೆ ಬೇರೆ ರೀತಿಯಲ್ಲಿ, ರೂಪದಲ್ಲಿ, ಗಾತ್ರದಲ್ಲಿ ಮತ್ತು ಬೇರೆ ಸಮಯದಲ್ಲಿ, ಬೇರೆ ಬೇರೆ ಕಾರಣಗಳಿಗೆ ಎದ್ದಂತಹ ಪರತತ್ವದ ಭಾವಗಳನ್ನೆಲ್ಲ ಒಟ್ಟು ಮಾಡಿದರೆ ನಮಗೆ ಆ ಪರತತ್ವದಿಂದ ಪ್ರತಿರೂಪವಾದ ಪರಮಾತ್ಮನ ಅರಿವು ಮೂಡುತ್ತದೆ.
ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ
ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ
ತಿಳಿವುಮೊಳ್ತನಮುಂ ವಿರಕ್ತಿಯಂ ಮುಕ್ತಿಯುಂ
ಗಳಿಗೆ ಸರಿಸೇರ್ದಂದು ಮಂಕುತಿಮ್ಮ
ಮಳೆ, ಬೆಳೆ ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ಕಾಲ ಋತುಗಳಿರುವಂತೆಯೇ ತಿಳುವಳಿಕೆ, ಸಜ್ಜನಿಕೆ, ವಿರಕ್ತಿ ಮತ್ತು ಮೋಕ್ಷಗಳಿಗೂ ಸಹ ಆಯಾ ಸಮಯದಲ್ಲಿ ಒದಗುತ್ತದೆ.ಈ ರೀತಿ ಜೀವ ಎಂಬ ಮರವನ್ನು ಕಾಲನಿಯಮವು ಬೆಳೆಸುತ್ತದೆ
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ?
ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ
ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ?
ತಾಳುಮೆಯ ಪರಿಪಾಕ ಮಂಕುತಿಮ್ಮ
ಬೆಳಿಗ್ಗೆ ಕಾಳುಬಿತ್ತಿ ಸಂಜೆಗಾಗಲೇ ಅದು ಬೆಳೆದು ಪೈರಾಗಲೆಂದು ಬಯಸಿದರೆ ಅದು ಸಾಧ್ಯವೇ? ಅಗತ್ಯವಿರುವಷ್ಟು ಸಮಯ ಅಕ್ಕಿಯನ್ನು ಬೇಯಿಸದೇ ಹೋದಲ್ಲಿ ಅನ್ನವಾಗುವುದಿಲ್ಲ, ಆದುದರಿಂದ ತಾಳೆ ಎಂಬುದು ಜೀವನದಲ್ಲಿ ಬಹಳ ಮುಖ್ಯ, ನಮ್ಮ ಜೀವನದ ಎಲ್ಲ ಆಗುಹೋಗುಗಳಿಗೂ ಕಾಲನೇ ಮುಖ್ಯ ಕಾರಣ, ಆದುದರಿಂದ ಪ್ರತಿಯೊಂದಕ್ಕೂ ತಾಳ್ಮೆಯಿಂದ ಕಾಯುವುದು ಅತ್ಯಂತ ಅಗತ್ಯ.
ಸಾಮಾನ್ಯರೂಪದಲಿ, ಸಂಸಾರಿ ವೇಷದಲಿ
ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು
ತಾಮಸಿಗೆ ವರವೆಲ್ಲಿ? ಮಂಕುತಿಮ್ಮ
ಭಗವಂತನು ನಿನ್ನ ಬಳಿಗೆ ಯಾವುದೇ ರೂಪದಲ್ಲಿಯಾದರೂ ಬರಬಹುದು (ಸಾಮಾನ್ಯನ ರೂಪದಲ್ಲಿ, ಸಂಸಾರಿಯ ರೂಪದಲ್ಲಿ ಹೀಗೆ). ವರ ನೀಡಬಹುದು. ಆದರೆ ಅವನ ಇರುವಿಕೆಯನ್ನು, ಅವನ ಮಹಿಮೆಯನ್ನು ಗುರುತಿಸಬೇಕಿದ್ದರೆ ನಿನ್ನಲ್ಲಿ ಸಂಸ್ಕಾರವಿರಬೇಕು, ತಾಮಸ ಮನೋಸ್ಥಿತಿಯನ್ನು ಹೊಂದಿದ್ದರೆ ಭಗವಂತನು ನಿನ್ನ ಪಕ್ಕದಲ್ಲಿಯೇ ಇದ್ದರೂ ಗುರುತಿಸಲಾಗದು.
ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ
ಹೊರಗೆ ಕಾರ್ಯಧ್ಯಾನವೊಳಗುದಾಸೀನ
ಹೊರಗೆ ಸಂಸ್ಕೃತಿಭಾರವೊಳಗದರ ತಾತ್ಸಾರ
ವರಯೋಗಮಾರ್ಗವಿದು ಮಂಕುತಿಮ್ಮ
ಜೀವನದಲ್ಲಿ ನೋವು ರಹಿತವಾಗಿ ಜೀವನ ನಡೆಸಬೇಕಾದಲ್ಲಿ ನಾವು ಹೊರಜಗತ್ತಿನೊಂದಿಗೆ ವ್ಯವಹಾರದಲ್ಲಿ ನಿರತರಾಗಿದ್ದರೂ ಅದರ ಕುರಿತು ಮನಸ್ಸಿನಲ್ಲಿ ವಿರಕ್ತಿಭಾವವನ್ನು ಹೊಂದಿರಬೇಕು, ಸಂಸಾರ, ಹುಟ್ಟು, ಸಾವು ಎಲ್ಲ ಸಂಸ್ಕೃತಿ, ಸಂಪ್ರದಾಯಗಳ ಭಾರವನ್ನು ಹೊತ್ತರೂ ಮನಸ್ಸಿನಲ್ಲಿ ಅವುಗಳ ಬಗ್ಗೆ ತಿರಸ್ಕಾರ, ಉದಾಸೀನತೆಯ ಮನೋಭಾವವನ್ನು ಹೊಂದಿರಬೇಕು, ಜ್ಞಾನಿಯೆನಿಸಿದವನು ಮಾತ್ರವೇ ಈ ಹಾದಿಯನ್ನು ಅನುಸರಿಸುತ್ತಾನೆ.
ಪ್ರಸಾದಾದೇವ ಸಾ ಭಕ್ತಿ: ಪ್ರಸಾದೋ ಭಕ್ತಿಸಂಭವ:
ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರ:
ಅಂಕುರದಿಂದ ಬೀಜ ಬೀಜದಿಂದ ಅಂಕುರವು ಹೇಗೆ ಉತ್ಪನ್ನವಾಗುತ್ತದೆಯೋ ಹಾಗೆಯೇ ಶಿವನ ಪ್ರಸಾದದಿಂದ ಭಕ್ತಿ, ಭಕ್ತಿಯಿಂದ ಶಿವನ ಪ್ರಸಾದ ಉಂಟಾಗುತ್ತದೆ. ಶಿವಾನುಗ್ರಹವಿಲ್ಲದೇ ಭಕ್ತಿಯು ಮೂಡದು, ಶಿವಭಕ್ತಿರಹಿತನಿಗೆ ಶಿವಾನುಗ್ರಹವಾಗದು, ಶಿವಾನುಗ್ರಹವೆಂಬುದು ಶಿವನ ಕೈಯಲ್ಲಿದೆ, ಶಿವಭಕ್ತಿಯು ನಮ್ಮ ಕೈಯಲ್ಲಿರುತ್ತದೆ. ಆದುದರಿಂದ ನಮ್ಮ ಮನದಲ್ಲಿ ಭಕ್ತಿಯನ್ನು ಅಳವಡಿಸಿಕೊಂಡು ಶಿವನ ಅನುಗ್ರಹವನ್ನು ಪಡೆಯಬೇಕು.
ಯಥಾವೃಷ್ಟಿ: ಸಮುದ್ರೇಷು ವೃಥಾತೃಪ್ತಸ್ಯ ಭೋಜನಂವೃಥಾದಾನಂ ಸಮರ್ಥಸ್ಯ ವೃಥದೀಪೋ ಈ ದಿವಾ ಚ
ಸಮುದ್ರದಲ್ಲಿ ಸುರಿಯುವ ಮಳೆ, ತೃಪ್ತನಾದ ವ್ಯಕ್ತಿಗೆ ಇಡುವ ಭೋಜನ, ಶಕ್ತರಿಗೆ ನೀಡುವ ದಾನ, ಉತ್ತಮ ಬೆಳಕಿರುವ ಹಗಲಿನಲ್ಲಿ ಉರಿಯುವ ದೀಪ ಇವೆಲ್ಲವೂ ಸಂಪೂರ್ಣ ವ್ಯರ್ಥವಾದವುಗಳಾಗಿವೆ.
ಆದರೇಣ ಯಥಾಸ್ತೌತಿ ಧನವಂತಂ ಧನೇಚ್ಛಯಾತಥಾಚೇತ್ಪರಮಾತ್ಮಾನಂ ಕೋನಮುಚ್ಯೇತ ಬಂಧನಾತ್
ಸಿರಿವಂತನ ಬಳಿ ಸಾಲ ಪಡೆಯಲು ನಾವು ಎಷ್ಟೆಲ್ಲಾ ವಿನಯದಿಂದ, ಆದರಾಭಿಮಾನದಿಂದ ಸ್ತುತಿ ಮಾಡುತ್ತೇವೆಯೋ, ಅದೇ ರೀತಿ ಪರಮಾತ್ಮನನ್ನು ಸ್ತುತಿ ಮಾಡಿದರೆ ಯಾರು ತಾನೇ ತಮ್ಮ ಬಂಧನಗಳಿಂದ ಮುಕ್ತನಾಗಲಾರೆವು.
ಪ್ರಾರಬ್ಧವೇ ನಿರುದ್ಯೋಗ: ಜಾಗರ್ತವ್ಯೇ ಪ್ರಸುಪ್ತಕ:
ವಿಶ್ವಸ್ತವ್ಯೇ ಭಯಸ್ಥಾನೇ ಹಾ ನರ: ಕೋ ನ ಹನ್ಯತೇ
ಅತ್ಯಂತ ಅಗತ್ಯವಾಅಗಿ ಕಾರ್ಯಾರಂಭ ಮಾಡಲೇಬೇಕಾದ ಪರಿಸ್ಥಿತಿ ಇದ್ದಾಗ್ಯೂ ಸಹ ಮನುಷ್ಯನಾದವನು ಸೋಮಾರಿಯಾಗಿ ಕುಳಿತುಕೊಳ್ಳುತ್ತಾನೆ. ಅವನು ಮಾಡುವ ದೊಡ್ಡ ತಪ್ಪೆಂದರೆ ಕೇವಲ ಕೆಲಸವಾರಂಭಿಸುವ ವಿಷಯದ ಕುರಿತಾದ ಭಯವನ್ನುಂಟು ಮಾಡುವ ವಿಷಯಗಳ ಕುರಿತೇ ಅತಿಯಾದ ವಿಶ್ವಾಸವಿಡುತ್ತಾನೆ. ಆದರೆ ಅವನು ಇದನ್ನು ಶಾಶ್ವತ ಎಂದು ಭಾವಿಸದೆಯೇ ಯಶಸ್ಸಿನ ರಹಸ್ಯವನ್ನರಿತು ಮುಂದುವರಿಯಬೇಕು, ಇಲ್ಲವಾದರೆ ಅವನ ನಾಶ ಖಂಡಿತ.
ಜನ್ಮನಾ ಜಾಯತೇ ಶೂದ್ರ: ಕರ್ಮಣಾ ಜಾಯತೇ ದ್ವಿಜ:
ವಿದ್ಯಯಾ ಯಾತಿ ವಿಪ್ರತ್ವಂ ತ್ರಿಭಿ: ಶ್ರೋತ್ರೀಯ ಉಚ್ಯತೇ
ಹುಟ್ಟಿನಿಂದ ಶೂದ್ರನಾದರೂ ಸಂಧ್ಯಾವಂದನೆ, ದೇವಪೂಜೆ ಇತ್ಯಾದಿಗಳಿಂದ ದ್ವಿಜನೆನಿಸಬಹುದು. ವೇದವಿದ್ಯೆಯಿಂದ ವಿಪ್ರತ್ವ ಪಡೆದಿದ್ದರೂ ಈ ಮೂರೂ ಗುಣವುಳ್ಳವನು ಶ್ರೋತ್ರಿಯೆನಿಸಿಕೊಳ್ಳುತ್ತಾನೆ.
ದೈವತ್ವ ಕಾಣುವುದು ಯಾವಾಗ
ನಾವೆಲ್ಲರೂ ಪ್ರಾಪಂಚಿಕ ಸುಖ ಭೋಗಗಳಲ್ಲಿ ದ್ವೇಷ, ಅಸೂಯೆ ನಾನು ಎಂಬ ಅಹಂನಲ್ಲಿ ಮುಳುಗಿ ಹೋಗಿದ್ದೇವೆ. ನಮ್ಮ ನಮ್ಮಲ್ಲಿಯೇ ಹೊಂದಾಣಿಕೆ ಇಲ್ಲದ ಬದುಕನ್ನು ಸೃಷ್ಟಿಸಿಕೊಂಡಿದ್ದೇವೆ. ಹಲವಾರು ಜಾತಿ, ಧರ್ಮಗಳ ಪದ್ಧತಿಗಳ ಗೋಡೆಗಳನ್ನು ಕಟ್ಟಿಕೊಂಡು ನಮ್ಮನ್ನು ನಾವು ಬಂಧಿಸಿಕೊಂಡಿದ್ದೇವೆ. ಆದರೆ ಮಗುವೊಂದನ್ನು ಗಮನಿಸಿ, ಅದಕ್ಕೆ ತಾನ್ಯಾರೆಂಬುದೇ ತಿಳಿದಿರುವುದಿಲ್ಲ. ಇವರು ನಮ್ಮವರು, ಇವರು ನಮ್ಮವರಲ್ಲ ಎಂಬ ಬೇಧ ಭಾಅವಗಳಿರುವುದಿಲ್ಲ. ಸಾಂದರ್ಭಿಕವಾಗಿ ಅತ್ತರೂ, ಕೋಪಿಸಿಕೊಂಡರೂ ಸಹ ಕ್ಷಣಮಾತ್ರದಲ್ಲಿ ಎಲ್ಲವನ್ನೂ ಮರೆತು ಎಲ್ಲರೊಂದಿಗೆ ಬೆರೆತು ನಗುತ್ತಿರುತ್ತದೆ. ಯಾವುದೇ ಜಾತಿ-ಧರ್ಮಗಳ ಬೇಧವಿಲ್ಲದೆ ಎಲ್ಲರೊಂದಿಗೂ ಬೆರೆಯುತ್ತದೆ, ಆಡಿ ನಲಿಯುತ್ತದೆ. ಹೀಗೆ ನಮ್ಮ ಅಜ್ಞಾನ, ಅಹಂಕಾರದಿಂದ ಸೃಷ್ಟಿಸಿಕೊಂಡ ಎಲ್ಲ ಬಂಧನಗಳನ್ನೂ ದಾಟಿ ನಮ್ಮ ಮನಸ್ಸು ಮಗುವಿನಂತೆ ನಲಿದಾಡಿ ಬಂದದ್ದೆಲ್ಲವನ್ನೂ ಸಂತಸದಿಂದ ಸ್ವೀಕರಿಸಿದಲ್ಲಿ ಆಗ ಮಾತ್ರ ನಾವು ನಿಜವಾದ ದೈವತ್ವವನ್ನು ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ಕಾಣಬಹುದು. ಹೀಗೆ ಆಗಬೇಕಾದಲ್ಲಿ ಇರುವುದೊಂದೇ ದಾರಿ ಮೊದಲು ನಾವು ಮಗುವಾಗಬೇಕು. ನಿಷ್ಕಲ್ಪಷವಾದ ಮನಸ್ಸು ನಮ್ಮದಾಗಬೇಕು.
ನಾಳೆ ಎನ್ನುವುದು ಶಾಶ್ವತ, ಖಂಡಿತ ನಾಳೆ ಎಂಬುದು ಬಂದೇ ಬರುತ್ತದೆ. ಆದರೆ ಆ ನಾಳೆಯನ್ನು ನೋಡಲು ನಾವಿರುತ್ತೇವೆಯೇ? ಈ ಪ್ರಶ್ನೆಗೆ ಉತ್ತರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದುದರಿಂದ ನಮ್ಮದಾಗಿರುವ ಈ ದಿನವನ್ನು ಮಗುವಿನಂತಹ ಮನಸ್ಸಿನಿಂದ ಅರ್ಥಪೂರ್ಣವಾಗಿ ಜೀವಿಸಬೇಕು.
ಪಾರದರ್ಶಕತೆ ಮತ್ತು ನಿರ್ಭೀತ ಸ್ಥಿತಿ
ಜೀವನದಲ್ಲಿ ಎಂದಿಗೂ ಪಾರದರ್ಶಕತೆ ಅತ್ಯಂತ ಅವಶ್ಯಕ. ಯಾವುದೇ ಮುಚ್ಚುಮರೆಯಿಲ್ಲದ ಜೀವನದಿಂದ ಮನಸ್ಸು ನಿರ್ಭೀತವಾಗಿರುತ್ತದೆ. ಸುಳ್ಳು ಹೇಳುವ ಅನಿವಾರ್ಯತೆ ಇರುವುದಿಲ್ಲ. ಸುಳ್ಳು ಹೇಳದೇ ಇರುವುದರಿಂದ ಅತಿಯಾದ ನೆನಪಿನ ಶಕ್ತಿಯ ಅವಶ್ಯಕತೆಯೂ ಇರುವುದಿಲ್ಲ. ಪಾರದರ್ಶಕತೆಯಿಂದ ಜೀವನ, ಮನಸ್ಸು ಹಗುರಾಗುತ್ತದೆ. ಅಸತ್ಯದ ಬೇಲಿಯಿಂದ ಉಂಟಾಗಬಹುದಾದ ತೊಳಲಾಟಗಳು, ಭಯ ಇಲ್ಲವಾಗಿ ನೆಮ್ಮದಿ ಮನೆ ಮಾಡುತ್ತದೆ. ನಮಗೆ ಸರಿಯೆನಿಸಿದ್ದನ್ನು ಹೇಳಿದಾಗ ಇತರರಿಗೆ ನೋವಾಗುತ್ತದೆಂದು ಪ್ರಿಯವಾದ ಸುಳ್ಳು ಹೇಳಿದರೆ ಒಂದಕ್ಕೆ ಒಂದರಂತೆ ಸುಳ್ಳಿನ ಸರಪಳಿಯಿಂದ ನಮ್ಮ ಉಸಿರು ಬಿಗಿದು ಜೀವನ ದುರ್ಭರವಾಗುತ್ತದೆ.
ನಿಜವಾದ ಆರೋಗ್ಯನಮ್ಮಲ್ಲಿನ ಆರು ಇಂದ್ರಿಯಗಳೂ ಆರೋಗ್ಯವಾಗಿರುವುದೇ ನಿರ್ಮಲವಾಗಿರುವುದೇ ಆರೋಗ್ಯ. ಅರೆ ಇರುವುದು ಐದೇ ಇಂದ್ರಿಯಗಳಲ್ಲವೇ? ಎಂದು ನಿಮಗನ್ನಿಸಬಹುದು, ಹೌದು ಕಿವಿ, ಚರ್ಮ, ಕಣ್ಣು, ನಾಲಗೆ ಹಾಗೂ ಮೂಗು ಈ ಐದು ಪಂಚೇಂದ್ರಿಯಗಳಾದರೆ ಕಣ್ಣಿಗೆ ಕಾಣದ ಹಾಗೂ ಅತ್ಯಂತ ಮಹತ್ವವಾದ ಮನಸ್ಸು ನಮ್ಮ ಆರನೆಯ ಇಂದ್ರಿಯವಾಗಿದೆ. ನಮ್ಮ ಈ ಆರೂ ಇಂದ್ರಿಯಗಳೂ ಪರಿಶುದ್ಧವಾಗಿದ್ದಲ್ಲಿ ಮಾತ್ರ ನಮ್ಮ ಜೀವನದಲ್ಲಿನ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯ ಲಭಿಸಲು ಸಾಧ್ಯ. ನಮ್ಮ ಈ ಆರು ಇಂದ್ರಿಯಗಳಲ್ಲಿ ಯಾವುದೇ ಒಂದು ಇಂದ್ರಿಯಕ್ಕೆ ಸಮಸ್ಯೆಯಾದರೂ ಆರೋಗ್ಯ ಇರುವುದಿಲ್ಲ.
ನಿಜವಾದ ಗೆಲುವು
ಘನಘೋರ ಯುದ್ಧಗಳನ್ನು ಮಾಡಿ ಹಲವಾರು ಜನರನ್ನು ಸೋಲಿಸಿ, ರಾಜ್ಯಗಳನ್ನು ಗೆದ್ದರೂ, ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಅವನು ಜೀವನದಲ್ಲಿ ಗೆಲ್ಲಲಾರ, ಗೆದ್ದ ಗೆಲುವನ್ನು ಗೆಲುವಿನ ಫಲವನ್ನು ಉಳಿಸಿಕೊಳ್ಳಲಾರ. ಎಂಥಹ ಕಠಿಣ ಪರಿಸ್ಥಿತಿಯಲ್ಲಿಯೂ, ಎಂಥಹ ಸಂತಸದ ಸನ್ನಿವೇಶದಲ್ಲಿಯೂ ತನ್ನ ಮನಸ್ಸನ್ನು ತಾನು ನಿಯಂತ್ರಿಸಿದಲ್ಲಿ ಜೀವನದಲ್ಲಿ ಅಂತಹ ವ್ಯಕ್ತಿ ಬಹುಪಾಲು ಗೆದ್ದಂತೆಯೇ ಸರಿ ಆದುದರಿಂದಲೇ ಭಗವಾನ್ ಗೌತಮ ಬುದ್ಧ ಹೀಗೆ ಹೇಳಿದ್ದಾರೆ. "ನೀನು 1000 ಯುದ್ಧಗಳನ್ನು ಮಾಡಿ ಲಕ್ಷಾಂತರ ಜನರನ್ನು ಗೆಲ್ಲಬಹುದು, ಆದರೆ ನಿನ್ನನ್ನು ನೀನು ಗೆಲ್ಲದ ಹೊರತು ಉಳಿದೆಲ್ಲಾ ಗೆಲುವುಗಳೂ ನಿರರ್ಥಕ"
ಆನಂದಮಯವಾದ ಬದುಕು
ಏನಿದು ಆನಂದಮಯವಾದ ಬದುಕು? ಬದುಕಿನಲ್ಲಿ ನಮಗೆ ದೊರೆಯುವುದು ಯಾವಾಗ? ಯಾವುದರಿಂದ ಅಂತಹ ಬದುಕು ನಮಗೆ ದೊರೆಯುತ್ತದೆ? ಬಹುಶ: ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವುದು ಲೌಕಿಕ ಬದುಕಿನ ಬಂಧನಗಳಿಗೆ ಸಿಲುಕಿದವರಿಗೆ ಅತ್ಯಂತ ಕಷ್ಟಕರ. ನೇರವಾಗಿ ಹೇಳುವುದಾದರೆ ನಮ್ಮ ಮನಸ್ಸಿನಲ್ಲಿ ಎಂದು ಶಾಂತಿ, ಸಮಾಧಾನಗಳು ನೆಲೆಸುತ್ತವೆಯೋ? ಯಾವಾಗ ನಮ್ಮ ಮನಸ್ಸು ಲಭ್ಯವಿರುವುದಕ್ಕೆ ತೃಪ್ತಿ ಪಡುತ್ತದೆಯೋ? ಯಾವಾಗ ದ್ವೇಷ-ಅಸೂಯೆಗಳನ್ನು ಮರೆತು ಶತೃಗಳನ್ನೂ ಸಹ ಕ್ಷಮಿಸಿ ಪ್ರೀತಿಸುವ ಗುಣ ಬೆಳೆಸಿಕೊಳ್ಳುತ್ತೇವೆಯೋ? ಎಂದು ಇತರರ ಕಷ್ಟ-ನೋವುಗಳಿಗೆ ಮಿಡಿಯುವ ಮಾನವೀಯ ಹೃದಯ ನಮ್ಮದಾಗುತ್ತದೆಯೋ? ಯಾವಾಗ ನಾನು ಎಂಬ ಅಹಂ ನಮ್ಮಿಂದ ದೂರವಾಗುತ್ತದೆಯೋ? ಯಾವಾಗ ನಮ್ಮ ಮನಸ್ಸುಗಳು ಮಗುವಿನ ಮನಸ್ಥಿತಿಗೆ ಮರಳುತ್ತವೆಯೋ? ಆಗ ನೋಡಿ ನಮ್ಮ ಜೀವನದಲ್ಲಿ ನಿಜವಾದ ಆನಂದ ಸಂತೋಷ ನಮಗೆ ಲಭಿಸುತ್ತದೆ.
ವಯಮಿಹ ಪರಿತುಷ್ಟಾಃ ವಲ್ಕಲೈಸ್ತ್ವಂ ದುಕೂಲೈಃ
ಸಮ ಇವ ಪರಿತೋಷೋ ನಿರ್ವಿಶೇಷೋ ವಿಶೇಷಃ
ತು ಭವತು ದರಿದ್ರೋ ಯಸ್ಯ ತೃಷ್ಣಾ ವಿಶಾಲಾ
ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ
ಬಡವನಾದರೂ, ಕೇವಲ ನಾರುಮಡಿ ಧಿರಿಸುಗಳನ್ನು ಧರಿಸಿದರೂಹ ಅತ್ಯುತ್ತಮ ಬಟ್ಟೆಗಳನ್ನು ಉಡುವ ನಿಮಗಿರುವಷ್ಟೇ ತೃಪ್ತಿ ನಮಗಿದೆ, ಆಕೆಂದರೆ ಆಸೆ ಯಾವಾಗ ಹೆಚ್ಚುತ್ತದೆಯೋ ಆಗ ಮಾತ್ರ ನಮಗೆ ನಾವು ಬಡವ ಎಂದೆನಿಸುತ್ತದೆ. ಒಂದೊಮ್ಮೆ ಆಸೆ ಇಲ್ಲದೆಯೇ ಹೋದಲ್ಲಿ ಆಗ ಬಡವ-ಶ್ರೀಮಂತರೆಂಬ ಯಾವುದೇ ಬೇಧಭಾವಗಳೇ ಇರುವುದಿಲ್ಲ.
ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ
ನಿನ್ನಲ್ಲಿರುವ ಹಣವನ್ನು ಯಾರಿಗಾದರೂ ಸದುದ್ದೇಶಕ್ಕಾಗಿ ನೀಡು, ಇಲ್ಲವೇ ನೀನೇ ಏತಕ್ಕಾದರೂ ಬಳಸು,ಅದನ್ನು ಹೊರತುಪಡಿಸಿ ಕೂಡಿಡಬೇಡ, ಯಾರಿಗೂ ಉಪಯೋಗಕ್ಕೆ ಬಾರದೇ ಸುಮ್ಮನೇ ಕೂಡಿಟ್ಟ ಹಣವು ಜೇನುಹುಳುಗಳು ಕೂಡಿಟ್ಟ ಜೇನು ಮತ್ತ್ಯಾರದೋ ಪಾಲಾಗುವಂತಾಗುವುದು.
ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ?
ಕಣ್ಣೆದುರಿನಲ್ಲಿಯೇ ಇರುವಾಯಿ, ತಂದೆ ಹಾಗೂ ಗುರುಗಳನ್ನು ಬಿಟ್ಟು ಕೈಗೆಂದೂ ನಿಲುಕದ, ಎಟುಕದ ದೇವರುಗಳನ್ನು ಏತಕ್ಕಾಗಿ ನೆಚ್ಚಿಕೊಳ್ಳುವೆ ಅಂದರೆ ಇಲ್ಲಿ ಕಣ್ಣಿಗೆ ಕಾಣುವ ದೇವರುಗಳನ್ನೇ ಗೌರವಿಸದವನು, ಅವರಲ್ಲಿ ದೇವರಲ್ಲಿ ಕಾಣದವನು, ಬೇರ್ಯಾವ ದೇವರುಗಳನ್ನು ತಾನೇ ನೋಡಲು ಸಾಧ್ಯ ಎಂಬ ಅರ್ಥದಲ್ಲಿ ಹೇಳಲಾಗಿದೆ.
ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ
ಚೇಳಿಗೆ ಕೇವಲ ತನ್ನ ಬಾಲದ ತುದಿಯಲ್ಲಿ ಮಾತ್ರವೇವಿಷವಿರುತ್ತದೆ, ನೊಣಕ್ಕೆ ಬಾಯಿಯಲ್ಲ್ಲಿ ಮಾತ್ರವೇ ವಿಷವಿರುತ್ತದೆ, ಇನ್ನು ಹಾವಿಗೆ ತನ್ನ ಹಲ್ಲಿನಲ್ಲಿ ಮಾತ್ರವೇ ವಿಷವಿರುತ್ತದೆ, ಆದರೆ ಇಡೀ ಮೈಯೆಲ್ಲ ವಿಷವನ್ನು ಹೊಂದಿರುವಿಷಕಾರಿ ಪ್ರಾಣಿ ಎಂದರೆ ದುರ್ಜನನಾದ ಮನುಷ್ಯ ಮಾತ್ರವೇ ಆಗಿದೆ.
ನಷ್ಟಂ ದ್ರವ್ಯಂ ಲಭ್ಯತೇ ಕಷ್ಟಸಾಧ್ಯಂ , ನಷ್ಟಾ ವಿದ್ಯಾ ಲಭ್ಯತೇಭ್ಯಾಸಯುಕ್ತಾ
ನಷ್ಟಾರೋಗ್ಯಂ ಸೂಪಚಾರೈಃ ಸುಸಾಧ್ಯಮ್ ನಷ್ಟಾ ವೇಲಾ ಯಾ ಗತಾ ಸಾ ಗತೈವ
ಕಳೆದುಕೊಂಡ ಎಲ್ಲಾ ಸಂಪತ್ತನ್ನು ಮರಳಿ ಗಳಿಸಬಹುದು. ಮರೆತುಹೋದ ವಿದ್ಯೆಯನ್ನು ಸತತ ಪರಿಶ್ರಮಯುತ ಅಧ್ಯಯನದಿಂದ ಮತ್ತೆ ಪಡೆಯಬಹುದು. ಆರೋಗ್ಯದಲ್ಲಿನ ಏರುಪೇರುಗಳನ್ನು ವೈದ್ಯರ ಮುಖೇನ ಗುಣಪಡಿಸಿಕೊಳ್ಳಬಹುದು. ಆದರೆ, ಮಂದಬುದ್ದಿಯಿಂದ ಆಲಸ್ಯತನದಿಂದ ಕಳೆದುಕೊಂಡ ಕಾಲವನ್ನು ಎಂದಿಗೂ ಸಹ ಮರಳಿಪಡೆಯಲು ಸಾಧ್ಯವಿಲ್ಲ. ಆದುದರಿಂದಲೇ ಹಿರಿಯರು ಹೇಳುತ್ತಾರೆ ಒಡೆದ ಮುತ್ತನ್ನು ಹಾಗೂ ಮಿಂಚಿಹೋದ ಕಾಲವನ್ನು ಎಂದಿಗೂ ಮರಳಿ ಸಾಧ್ಯವಿಲ್ಲ. ಜೀವನದ ಮಹಾ ಪಯಣದ ಹಾದಿಯಲ್ಲಿ ಇರುವ ಅಲ್ಪ ಸಮಯವನ್ನು ಎಷ್ಟು ಸಾಧ್ಯವೋ ಅಷ್ಟು ಸದುಪಯೋಗಪಡಿಸಿಕೊಳ್ಳುವುದು ಜಾಣತನ.
ವಿರೂಪೋ ಯಾವದಾದರ್ಶೇ ನಾತ್ಮನ: ಪಶ್ಯತೇ ಮುಖಂ
ಮನ್ಯತೇ ತಾವದಾತ್ಮಾನಮನ್ಯೇಭ್ಯೋ ರೂಪವತ್ತರಂ
ಎಂಥಹ ವಿಕಾರ ಮುಖವುಳ್ಳವನೂ ಸಹ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವವರೆಗೂ ಎಲ್ಲರಿಗಿಂತಲೂ ತಾನೇ ರೂಪವಂತನೆಂಬ ಭ್ರಮೆಯಲ್ಲಿರುತ್ತಾನೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ದೇಹ ಅಥವಾ ಮುಖದ ಸೌಂದರ್ಯದ ಕುರಿತಲ್ಲ. ನಮ್ಮ ಒಳ-ಹೊರಗುಗಳು, ಆಳ-ಅಗಲಗಳನ್ನು ಹಾಗೂ ಈ ಹಿಂದಿನ ನಮ್ಮ ಜೀವನವನ್ನು ನೋಡಿ ಅರಿತುಕೊಳ್ಳುವವರೆಗೂ ಮನುಷ್ಯನಲ್ಲಿನ ನಾನು ಎಂಬ ಅಹಂಕಾರವನ್ನು ತೊರೆದುಕೊಳ್ಳಲು ಸಾಧ್ಯವಿಲ್ಲ. ಆದುದರಿಂದಲೇ ಹಿರಿಯರು ಹೇಳುತ್ತಾರೆ, ಎಂದಿಗೂ ಸಹ ನಾವು ನಡೆದುಬಂದ ಹಾದಿಯನ್ನು ಮರೆಯಬಾರದು, ಹತ್ತಿದ ಏಣಿಯನ್ನು ಒದೆಯಬಾರದೆಂದು
ಸಹವಾಸದ ಪ್ರಭಾವ
ಕಾದಿರುವ ಹೆಂಚಿನ ಮೇಲೆ ನೀರಿನ ಹನಿ ಬಿದ್ದರೆ ಅದು ಶಾಖಕ್ಕೆ ಖಾದು ಆವಿಯಾಗಿ ತನ್ನ ರೂಪವನ್ನೇ ಕಳೆದುಕೊಳ್ಳುತ್ತದೆ. ಆದರೆ ತಾವರೆಯ ಎಲೆಯಮೇಲೆ ಅದೇ ನೀರಿನ ಹನಿ ಬಿದ್ದರೆ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಮುತ್ತಿನಂತೆ ಕಂಗೊಳಿಸುತ್ತದೆ. ಕಪ್ಪೆ ಚಿಪ್ಪನೊಳಗೆ ಹೋದ ನೀರ ಹನಿಯು ಅತ್ಯಂತ ಬೆಲೆ ಬಾಳುವ ಮುತ್ತೇ ಆಗುತ್ತದೆ. ಈ ಮೇಲಿನ ವಿಷಯಗಳನ್ನು ಗಮನಿಸಿದಾಗ ನಮಗೆ ತಿಳಿದುಬರುವುದೇನೆಂದರೆ ಗುಣಗಳಲ್ಲಿ ಮುಖ್ಯವಾಗಿ ಗುರುತಿಸಲ್ಪಡುವ ಉತ್ತಮ, ಮಧ್ಯಮ ಹಾಗೂ ಅಧಮ ಎಂಬ ಗುಣಗಳು ನಾವು ಎಂಥಹ ಜನರೊಂದಿಗೆ ಸಹವಾಸವನ್ನು ಮಾಡಿದ್ದೇವೆ ಎಂಬುದನ್ನು ಅವಲಂಬಿಸಿರುತ್ತದೆ. ಅಂದರೆ ನಾವು ಉತ್ತಮರ ಸಹವಾಸವನ್ನು ಮಾಡಿದರೆ ಉತ್ತಮ ಹಾಗೂ ನೀಚ ಜನರ ಸಹವಾಸ ಮಾಡಿದರೆ ಅಧಮ ಗುಣಗಳೇ ನಮ್ಮನ್ನು ಆವರಿಸಿಕೊಳ್ಳುತ್ತದೆ.
ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ
ವ್ಯಯೇಕೃತೇ ವರ್ಧತ ಏವ ನಿತ್ಯಂ
ವಿದ್ಯಾಧನಂ ಸರ್ವಧನಪ್ರಧಾನಂ
ಅಂದರೆ ಯಾವುದೇ ಕಳ್ಳನಿಂದಲೂ ಕದಿಯಲಾಗದ, ರಾಜನಿಂದಲೂ ಕಸಿದುಕೊಳ್ಳಲು ಸಾಧ್ಯವಾಗದ, ಅಣ್ಣ-ತಮ್ಮಂದಿರ ನಡುವೆ ಭಾಗ ಮಾಡಿ ಹಂಚಿಕೊಳ್ಳಲು ಸಾಧ್ಯವಾಗದ ವ್ಯಯಿಸಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯೆಯೆಂಬ ಧನವೇ ಎಲ್ಲಾ ಧನಗಳಲ್ಲಿ ಪರಮಶ್ರೇಷ್ಟವಾದುದು.
ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ
ಕ್ರೋಧಶ್ಚ್ಯ ಧ್ರುಧವದಶ್ಚ್ಯ ಪರ ವಾಕ್ಯೇ ಚ ಅನಾದರ
ತಾನೇ ತಿಳಿದವನೆಂಬ ಗರ್ವವನ್ನು ಹೊಂದಿದವನು, ಇತರರ ಮಾತಿಗೆ ಗೌರವವನ್ನೇ ನೀಡದವನು, ಆಧಾರರಹಿತವಾಗಿ ಗಟ್ಟಿಯಾಗಿ ವಾದಿಸುವವನು, ಭಯಂಕರ ಕೋಪದಲ್ಲಿ ಮುಳುಗಿರುವವನು, ಯಾವಾಗಲೂ ಅವಾಚ್ಯ ಕೀಳು ಶಬ್ಧಗಳಿಂದ ನಿಂದಿಸುತ್ತಾ ತಿರುಗುವವನು, ಈ ಐದು ಗುಣ ಹೊಂದಿರುವವನೇ ಮೂರ್ಖ
ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾಂ
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ
ಇವರು ಮಾತ್ರವೇ ನಮ್ಮವರು, ಇವರು ಪರಕೀಯರೆಂಬುಣವು ಕೀಳು ಜನರ ಮುಖ್ಯ ಲಕ್ಷಣ, ಎಲ್ಲರೂ ಒಂದೇ ಎಂಬ ಉದಾತ್ತ ಮನೋಭಾವನೆಯನ್ನು ಹೊಂದಿದವರಿಗೆ ಈ ಜಗತ್ತೇ ಒಂದು ಸುಂದರವಾದ ಕುಟುಂಬದಂತೆ.
ಉದ್ಯಮೇ ನ್ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಸಂತಿ ಮುಕೇ ಮೃಗಾಃ
ಇಂತಹ ಕಾರ್ಯವನ್ನು ಮಾಡಬೇಕೆಂದು ಮನಸಿನಲ್ಲಿ ಅಂದುಕೊಂಡಾಕ್ಷಣ, ಮಾಡಬೇಕೆಂದುಕೊಂಡ ಕೆಲಸವು ಕಾರ್ಯಗತವಾಗಲು ಸಾಧ್ಯವೇ?, ಸಿಂಹ ಕಾಡಿನ ರಾಜನಾದಾಕ್ಷಣ ಮಲಗಿರುವ ಸಿಂಹದ ಬಾಯಿಗೆ ಜಿಂಕೆ ಬಂದು ಆಹಾರವಾಗಿ ಬೀಳುವುದೇ? ಯಾವುದೇ ಕಾರ್ಯ, ಉದ್ದೇಶ ಫಲಿಸಬೇಕಾದರೆ ನಿಶ್ಚಲ ಮನಸ್ಸು, ಧೃಢವಾದ ಪ್ರಯತ್ನ ಅತ್ಯಗತ್ಯ.
ಹಿರಿತನ
ಮೊದಲು ಹಾಲು, ನಂತರದಲ್ಲಿ ಮೊಸರು, ಕೊನೆಯದಾಗಿ ತುಪ್ಪ ಹುಟ್ಟಿದರೂ, ತುಪ್ಪವು ಈ ಮೂರರಲ್ಲಿಯೂ ಪರಮಶ್ರೇಷ್ಟವೆನಿಸಿಕೊಳ್ಳುತ್ತದೆಯೋ ಹಾಗೆಯೇ ಹಿರಿತನ ಎಂಬುದು ಕೇವಲ ವಯಸ್ಸಿನಿಂದ ಬರುವುದಿಲ್ಲ ಅವನಲ್ಲಿರುವ ಉತ್ತಮವಾದ ಗುಣ-ನಡತೆಗಳಿಂದ ಮಾತ್ರವೇ ಲಭಿಸುತ್ತದೆ.
ಜಡಸಂಗೇಪಿ ನ ಲಿಪ್ತಾ: ಶ್ರೀ ಸದ್ಭಾವೇಪಿ ನೋತ್ತರಲಾ:
ಅಂಭೋಜಕೋರಕಾ ಇವ ವಿಜ್ಞಾವಿಕಸತಿ ವಿಶ್ವಸ್ಮೈ
ಉತ್ತಮ ಗುಣ-ನಡತೆಯುಳ್ಳವರು ಮತ್ತು ಉತ್ತಮ ತಿಳುವಳಿಕೆಯುಳ್ಳವರು ಮೂರ್ಖರ ಅಥವಾ ದುಷ್ಟರ ಸಹವಾಸದಲ್ಲಿಯೇ ಇದ್ದರೂ ಸಹ ತಮ್ಮ ಸದ್ಗುಣಗಳನ್ನು ಕಳೆದುಕೊಳ್ಳುವುದಿಲ್ಲ, ಇಂತಹವರ ಬಳಿ ಎಷ್ಟೇ ಹಣ ಸಂಗ್ರಹವಾದರೂ ಸಹ ಇವರಿಗೆ ಹಣದ ಅಮಲೇರುವುದಿಲ್ಲ. ಕೆಸರಿನಲ್ಲಿಯೇ ಇದ್ದರೂ ಕಮಲದ ಹೂವು ಒಂದು ಹನಿ ಕೆಸರನ್ನೂ ಅಂಟಿಸಿಕೊಳ್ಳದೇ ಹೇಗೆ ಬದುಕುವುದೋ ಹಾಗೆಯೇ ತಿಳುವಳಿಕೆಯುಳ್ಳವರೂ ಸಹ ದುಷ್ಟರ ನಡುವೆಯೇ ಪರಿಶುದ್ಧರಾಗಿ ಜೀವಿಸುತ್ತಾರೆ.
ಅಕಾರಣಂ ರೂಪಮಕಾರಣಂ ಕುಲಂ
ಮಹತ್ಸು ನೀಚೇಷು ಚ ಕರ್ಮ ಶೋಭತೇ
ನಮ್ಮ ಕುಲವಾಗಲೀ, ನಮ್ಮಲ್ಲಿನ ರೂಪವಾಗಲೀ ಜನರಿಂದ ನಮಗೆ ಸಿಗುತ್ತಿರುವ ಅಥವಾ ಸಿಗಬಹುದಾದ ಘನತೆ-ಗೌರವ ಮರ್ಯಾದೆಗಳಿಗೆ ಕಾರಣವಲ್ಲ. ನಮಗೆ ಜನರು ಗೌರವ ಮರ್ಯಾದೆಗಳನ್ನು ನೀಡುತ್ತಿದ್ದಾರೆಂದರೆ ಅದು ಕೇವ ನಾವು ಈ ಹಿಂದೆ ಮಾಡಿರುವ ಮತ್ತು ಪ್ರಸ್ತುತ ಮಾಡುತ್ತಿರುವ ಉತ್ತಮ ಕಾರ್ಯಗಳಿಂದ ಮಾತ್ರವೇ ಆಗಿದೆ.
ಉದ್ಯೋಗ: ಖಲು ಕರ್ತವ್ಯ: ಫಲಂ ಮಾರ್ಜಾಲವತ್ ಭವೇತ್
ಜನ್ಮಪ್ರಭೃತಿ: ಗೌರ್ನಾಸ್ತಿ ಪಯ: ಪಿಬತಿ ನಿತ್ಯಶ:
ಹಸುವನ್ನು ಮಾನವರಾದ ನಾವು ಸಾಕುತ್ತೇವೆ ಆದರೆ ಬೆಕ್ಕು ಹಸುವನ್ನು ಸಾಕದಿದ್ದರೂ ಹಾಲು ಕುಡಿಯುತ್ತದೆ. ಅಂದರೆ ಬೆಕ್ಕು ತನ್ನ ಸತತ ಪ್ರಯತ್ನದ ಫಲವಾಗಿ ಹಲವು ಬಾರಿ ವಿಫಲವಾದರೂ, ಹಲವು ಬಾರಿ ಹೊಡೆತಗಳನ್ನು ತಿಂದರೂ ಒಮ್ಮೆಯಾದರೂ ಹಾಲು ಕುಡಿಯುವಲ್ಲಿ ಯಶಸ್ವಿಯಾಗುತ್ತದೆ.
ಅದೇ ರೀತಿ ಮನುಷ್ಯನಾದವನು ಒಮೆ ಸೋಲು ಕಂಡಾಕ್ಷಣ ಎದೆಗುಂದದೇ ತನ್ನ ಸತತ ಪ್ರಯತ್ನಗಳ ಮೂಲಕ ಮುನ್ನುಗ್ಗಿದಲ್ಲಿ ಒಂದು ದಿನ ಯಶಸ್ಸು ಸಾಧಿಸುವುದು ನಿಶ್ಚಿತ. ಇದಕ್ಕೆ ಎದೆಗುಂದದೇ ಪ್ರಯತ್ನಿಸುವ ಮನಸ್ಸು, ತನ್ನಿಂದಾಗದೆಂಬ ಹೇಡಿತನದಿಂದ ಹೊರಬರುವಿಕೆ ಎರೆಡೂ ಅತ್ಯವಶ್ಯಕ. ಆದುದರಿಂದಲೇ ಹಿರಿಯರು ಮರಳಿಯತ್ನವ ಮಾಡು ಎಂದು ಹೇಳಿದ್ದಾರೆ.
ಏಕಮಪ್ಯಕ್ಷರಂ ಯಸ್ತು ಗುರು: ಶಿಷ್ಯೇ ನಿವೇದಯೇತ್
ಪೃಥಿವ್ಯಾಂ ನಾಸ್ತಿ ತದ್ರವ್ಯಂ ಯದ್ವತ್ತಾ ಹ್ಯನೃಣೀಭವೇತ್
ವಿದ್ಯೆ ಎಂಬುದು ಪರಮ ಪವಿತ್ರವಾದ ಯಾರಿಂದಲೂ ಅಪಹರಿಸಲಾಗದ ಅಮೂಲ್ಯ ಸಂಪತ್ತು. ಇಂತಹ ಸಂಪತ್ತನ್ನು ಧಾರೆಯೆರೆಯುವವನನ್ನು ಗುರು ಎಂದು ಭಕ್ತಿಪೂರ್ವಕವಾಗಿ ಸಂಭೋಧಿಸಲಾಗುತ್ತದೆ. ಕೇವಲ ಒಂದೇ ಅಕ್ಷರವನ್ನು ಕಲಿಸಿದರೂ ಅವನು ಗುರುವಿನ ಸ್ಥಾನವನ್ನು ಪಡೆಯುತ್ತಾನೆ. ವಿದ್ಯೆ ಎಂಬುದು ಅಕ್ಷರಾಭ್ಯಾಸ ಮಾತ್ರವೇ ಅಲ್ಲ, ಉತ್ತಮ ಉಪದೇಶ, ಅನುಭವ, ಉತ್ತಮ ನುಡಿ, ಉತ್ತಮ ಹಾದಿಯಲ್ಲಿ ನಡೆಯಲು ಸೂಕ್ತ ಮಾರ್ಗದರ್ಶನವೂ ಸಹ ವಿದ್ಯೆಯೇ. ಆದುದರಿಂದ ಇಂತಹ ಸಂಪತ್ತನ್ನು ಧಾರೆಯೆರೆದು ನಮ್ಮ ಬಾಳನ್ನು ಹಸನುಗೊಳಿಸುವ ಗುರುವಿನ ಋಣವನ್ನು ಯಾವುದೇ ರೀತಿಯಿಂದಲೂ ತೀರಿಸಲು ಸಾಧ್ಯವಿಲ್ಲ.
ಅನುಭವಿಸಿದಷ್ಟೂ ಆಸೆ-ಅಮಲು ಹೆಚ್ಚಿಸುವುದು
ಸಂಪತ್ತು, ಜಗಳ, ಜೂಜು, ಮದ್ಯ, ಸ್ತ್ರೀ-ಸಂಗ, ಆಹಾರ, ನಿದ್ರೆ ಇವುಗಳನ್ನು ಅನುಭವಿಸಿದಷ್ಟೂ ಅವುಗಳ ಕುರಿತಾದ ನಮ್ಮ ಆಸೆ-ಆಸಕ್ತಿ ಇನ್ನೂ ಹೆಚ್ಚ್ಚುತ್ತಲೇ ಹೋಗುತ್ತದೆ. ಅದೇ ರೀತಿ ವಿದ್ಯೆಯೂ ಸಹ. ಆದರೆ ವಿದ್ಯೆಯ ಕುರಿತಾದ ನಮ್ಮ ಆಸಕ್ತಿ ಅಧಿಕವಾದಂತೆಲ್ಲಾ ಅದರ ಮೇಲಿನ ಹಿಡಿತ ಹೆಚ್ಚುವುದಲ್ಲದೇ ಅನೇಕ ಹೊಸಹೊಸ ವಿಷಯಗಳು ಅರಿವಿಗೆ ಬರುತ್ತದೆ ಮತ್ತು ಮಾನಸಿಕವಾಗಿ ನಮಗೆ ನಾವೇ ಪಕ್ವವಾಗುತ್ತೇವೆ. ಆದರೆ ವಿದ್ಯೆಯನ್ನು ಹೊರತುಪಡಿಸಿದ ಮೇಲೆ ತಿಳಿಸಿದ ವಿಷಯಗಳ ಮೇಲೆ ಅತಿಯಾದ ಆಸಕ್ತಿ ಬೆಳೆಸಿಕೊಂಡಲ್ಲಿ ಅದರಿಂದ ನಮ್ಮ ಜೀವನವನ್ನು ನಾವೇ ಅವನತಿಯತ್ತ ದೂಡುತ್ತೇವೆ. ಆದುದರಿಂದ ಉತ್ತಮವಾದುದರೆಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು
ಒಳ್ಳೆಯದನ್ನು ಬಯಸುವ ಗುಣ
ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ, ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ. ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ. ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ.
ಭಗವದ್ಗೀತೆಯ ಸುಭಾಷಿತ
ಆದುದೆಲ್ಲಾ ಒಳ್ಳೆಯದಕ್ಕೇ ಆಗಿದೆ
ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ.
ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ
ರೋಧಿಸಲು ನೀನೇನು ಕಳೆದುಕೊಂಡಿರುವೆ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ನಾಶವಾಗಲು ನೀನು ಮಾಡಿರುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ.
ಏನನ್ನು ಅರ್ಪಿಸಿದ್ದರೂ ಅದನ್ನು ಇಲ್ಲಿಗೇ ಅರ್ಪಿಸಿರುವೆ.
ನಿನ್ನೆ ಬೇರೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ.
ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ.
ಪರಿವರ್ತನೆ ಜಗದ ನಿಯಮ
ಪಂಚಾಂಗ
ಕನ್ನಡ ಚಂದ್ರ ತಿಂಗಳದ ಹೆಸರು
01. ಚೈತ್ರ 02. ವೈಶಾಖ 03. ಜ್ಯೇಷ್ಠ04. ಆಷಾಢ
05. ಶ್ರಾವಣ 06. ಭಾದ್ರಪದ07. ಆಶ್ವಯುಜ 08. ಕಾರ್ತಿಕ
09. ಮಾರ್ಗಶಿರ 10. ಪುಷ್ಯ11. ಮಾಘ 12. ಫಾಲ್ಗುಣ
ಕನ್ನಡ ನಕ್ಷತ್ರದ ಹೆಸರು
01. ಅಶ್ವಿನಿ 02. ಭರಣಿ 03. ಕೃತ್ತಿಕ 04. ರೋಹಿಣಿ
05. ಮಾರ್ಗಶಿರ 06. ಆರಿದ್ರ 07. ಪುನರ್ವಸು 08. ಪುಷ್ಯ
09. ಆಶ್ಲೇಷ 10. ಮಖಾ 11. ಹುಬ್ಬ 12. ಉತ್ತರ ಫಾಲ್ಗುಣಿ
13. ಹಸ್ತ 14. ಚೈತ್ರ 15. ಸ್ವಾತಿ 16. ವಿಶಾಖ
17. ಅನುರಾಧ 18. ಜ್ಯೆಷ್ಟ್ಯ 19. ಮೂಲ 20. ಪೂರ್ವ ಆಷಾಢ
21. ಉತ್ತರ ಆಷಾಢ 22. ಶ್ರವಣ 23. ಧನಿಷ್ಠ 24. ಶತಭಿಷ
25. ಪೂರ್ವಾ ಭಾದ್ರ 26. ಉತ್ತರಾ ಭಾದ್ರ 27. ರೇವತಿ 28.
ಕನ್ನಡ ಯೋಗದ ಹೆಸರು
01. ವಿಷ್ಕುಂಭ 02. ಪ್ರೀತಿ 03. ಆಯುಷ್ಮಾನ್ 04. ಸೌಭಾಗ್ಯ
05. ಶೋಭಾನ 06. ಅತಿಗಂಡ 07. ಸುಕರ್ಮ 08. ಧೃತಿ
09. ಶೂಲ 10. ಗಂಡ 11. ವೃದ್ಧಿ 12. ಧ್ರುವ
13. ವ್ಯಾಘಾತ 14. ಹರ್ಷಣ 15. ವಜ್ರ 16. ಸಿದ್ಧಿ
17. ವ್ಯತೀಪಾತ 18. ವರಿಯಾನ್ 19. ಪರಿಘ 20. ಶಿವ
21. ಸಿದ್ದಿ 22. ಸಾಧ್ಯ 23. ಶುಭ 24. ಶುಕ್ಲ
25. ಬ್ರಹ್ಮ 26. ಇಂದ್ರ 27. ವೈಧೃತಿ 28.
ಕನ್ನಡ ಕರಣದ ಹೆಸರು
01. ಕಿಂಸ್ತುಘ್ನ 02. ಬವ 03. ಬಾಲವ 04. ಕೌಲವ
05. ತೈತಲೆ 06. ಗರಜ 07. ವಣಿಜ 08. ವಿಷ್ಟಿ
09. ಶಕುನಿ 10. ಚತುಷ್ಪಾದ 11. ನಾಗವ 12.
ಕನ್ನಡ ತಿಥಿಯ ಹೆಸರು
01. ಪಾಡ್ಯ (ಪ್ರತಿಪತ್) 02. ಬಿದಿಗೆ (ದ್ವಿತೀಯಾ) 03. ತದಿಗೆ (ತೃತೀಯಾ) 04. ಚೌತಿ (ಚತುರ್ಥಿ)
05. ಪಂಚಮೀ 06. ಷಷ್ಠೀ 07. ಸಪ್ತಮೀ 08. ಅಷ್ಟಮೀ
09. ನವಮೀ 10. ದಶಮೀ 11. ಏಕಾದಶೀ 12. ದ್ವಾದಶೀ
13. ತ್ರಯೋದಶೀ 14. ಚತುರ್ದಶೀ 15. ಹುಣ್ಣಿಮೆ (ಪೌರ್ಣಮೀ) 16. ಅಮಾವಾಸ್ಯೆ
ಕನ್ನಡ ರಾಶಿಯ ಹೆಸರು
01. ಮೇಷ 02. ವೃಷಭ 03. ಮಿಥುನ 04. ಕರ್ಕ
05. ಸಿಂಹ 06. ಕನ್ಯಾ 07. ತುಲಾ 08. ವೃಶ್ಚಿಕ
09. ಧನು 10. ಮಕರ 11. ಕುಂಭ 12. ಮೀನ
ಕನ್ನಡ ಅನಂದಾದಿ ಯೋಗದ ಹೆಸರು
01. ಆನಂದ (ಸಿದ್ದಿ) 02. ಕಾಲದಂಡ (ಮರಣ) 03. ಧೂಮ್ರ (ಅಸುಖ ) 04. ಪ್ರಜಾಪತಿ (ಅದೃಷ್ಟ)
05. ಸೌಮ್ಯ (ಬಹು ಸುಖ) 06. ಥುಲಂಕ್ಷ (ಧನಕ್ಷಯ ) 07. ಧ್ವಜ (ಅದೃಷ್ಟ) 08. ಶ್ರೀವತ್ಸ (ಸುಖ ಸಂಪತ್ತು )
09. ವಜ್ರ (ಕ್ಷಯ ) 10. ಮುದ್ಕರ (ಲಕ್ಷ್ಮಿಕ್ಷಯ) 11. ಛತ್ರ (ರಾಜ ಗೌರವ) 12. ಮಿತ್ರ (ಸಾಮರ್ಥ್ಯ)
13. ಮಾನಸ (ಅದೃಷ್ಟ) 14. ಪದ್ಮ (ಧನಗಮ ) 15. ಲಂಬಕ (ಧನಕ್ಷಯ ) 16. ಉತ್ಪತ (ಪ್ರಾಣನಾಶ )
17. ಮರಣ (ಮರಣ) 18. ಕಾಣ (ಯಾತನೆ) 19. ಸಿದ್ದಿ (ಕಾರ್ಯಸಿದ್ದಿ) 20. ಶುಭಂ (ಕಲ್ಯಾಣ)
21. ಅಮೃತ (ರಾಜ ಗೌರವ) 22. ಮುಸಲ (ಧನಕ್ಷಯ ) 23. ಗಡ (ಭಯ ) 24. ಮಾತಂಗ (ಕುಲವೃದ್ಧಿ )
25. ರಾಕ್ಷಸ (ಮಹಾಕಷ್ಟ ) 26. ಚರ (ಕಾರ್ಯಸಿದ್ದಿ) 27. ಸ್ಥಿರ (ಗ್ರಹ ಆರಂಭ ) 28. ವರ್ಥಮಾನ (ಮದುವೆ)
ಕನ್ನಡ ಸಂವತ್ಸರದ ಹೆಸರು
01. ಪ್ರಭವ 02. ವಿಭವ 03. ಶುಕ್ಲ 04. ಪ್ರಮೋದ
05. ಪ್ರಜಾಪತಿ 06. ಆಂಗೀರಸ 07. ಶ್ರೀಮುಖ 08. ಭಾವ
09. ಯುವ 10. ಧಾತು /ಧಾತೃ 11. ಈಶ್ವರ 12. ಬಹುಧಾನ್ಯ
13. ಪ್ರಮಾಥಿ 14. ವಿಕ್ರಮ 15. ವಿಷು 16. ಚಿತ್ರಭಾನು
17. ಸ್ವಭಾನು 18. ತಾರಣ 19. ಪಾರ್ಥಿವ 20. ವ್ಯಯ
21. ಸರ್ವಜಿತ್ 22. ಸರ್ವಧಾರಿ 23. ವಿರೋಧಿ 24. ವಿಕೃತಿ
25. ಖರ 26. ನಂದನ 27. ವಿಜಯ 28. ಜಯ
29. ಮನ್ಮಥ 30. ದುರ್ಮುಖಿ 31. ಹೇವಿಲಂಬಿ 32. ವಿಲಂಬಿ
33. ವಿಕಾರಿ 34. ಶಾರ್ವರಿ 35. ಪ್ಲವ 36. ಶುಭಕೃತ್
37. ಶೋಭಕೃತ್ 38. ಕ್ರೋಧಿ 39. ವಿಶ್ವವಸು 40. ಪರಾಭವ
41. ಪ್ಲವಂಗ 42. ಕೀಲಕ 43. ಸೌಮ್ಯ 44. ಸಾಧಾರಣ
45. ವಿರೋಧಿಕೃತ್ 46. ಪರಿಧಾವಿ 47. ಪ್ರಮಾಧಿ 48. ಆನಂದ
49. ರಾಕ್ಷಸ 50. ನಳ 51. ಪಿಂಗಳ 52. ಕಾಳಯುಕ್ತಿ
53. ಸಿದ್ಧಾರ್ಥಿ 54. ರೌದ್ರಿ 55. ದುರ್ಮತಿ 56. ದುಂದುಭಿ
57. ರುಧಿರೋದ್ಗಾರೀ 58. ರಕ್ತಾಕ್ಷಿ 59. ಕ್ರೋಧನ 60. ಕ್ಷಯ
ಹಿಂದೂ ಕ್ಯಾಲೆಂಡರ್
ಹಿಂದೂ ಕ್ಯಾಲೆಂಡರ್ ದಿನದ ಸ್ಥಳೀಯ ಸೂರ್ಯೋದಯ ಆರಂಭವಾಗಿ ಮರುದಿನ ಸ್ಥಳೀಯ ಸೂರ್ಯೋದಯ ಕೊನೆಗೊಳ್ಳುತ್ತದೆ. ಸೂರ್ಯೋದಯ ಸಮಯ ಎಲ್ಲಾ ನಗರಗಳಿಗೆ ವಿಭಿನ್ನವಾಗಿದೆ, ಆದ್ದರಿಂದ ಹಿಂದೂ ಕ್ಯಾಲೆಂಡರ್ ಒಂದು ನಗರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಗರಕ್ಕೆ ಮಾನ್ಯವಾಗುವುದಿಲ್ಲ. ಆದ್ದರಿಂದ ಆ ಸ್ಥಳಗಳಿಗೆ ತಕ್ಕಂತೆ ಹಿಂದೂ ಕ್ಯಾಲೆಂಡರ್, ರೆಚಿಸಲಾಗಿದೆ. ಆದ್ದರಿಂದ ಈ ಸ್ಥಳ ಆಧಾರಿತ ದ್ರಿಕ್ ಪಂಚಾಂಗವನ್ನು ಬಳಸುವುದು ಮುಖ್ಯವಾಗಿದೆ. ಇದಲ್ಲದೆ, ಪ್ರತಿ ಹಿಂದೂ ದಿನದ ಭಾಗಗಳು ಎಂದು ಕರೆಯಲ್ಪಡುತ್ತದೆ. ಐದು ಅಂಶಗಳನ್ನು ಒಳಗೊಂಡಿದೆ. ಈ ಐದು ಅಂಶಗಳು
1. ತಿಥಿ
2. ನಕ್ಷತ್ರ
3. ಯೋಗ
4. ಕರಣ
5. ವಾರ (ವಾರದ ಏಳು ದಿನಗಳ ಹೆಸರುಗಳು)
ಪಂಚಾಂಗ
ಹಿಂದೂ ಕ್ಯಾಲೆಂಡರ್ ಎಲ್ಲಾ ಐದು ಅಂಶಗಳನ್ನು ಪಂಚಾಂಗ ಎಂದು ಕರೆಯಲಾಗುತ್ತದೆ. (ಸಂಸ್ಕೃತದಲ್ಲಿ: ಪಂಚಾಂಗ = ಪಂಚ (ಐದು) + ಅಂಗ್ (ಭಾಗ)). ಆದ್ದರಿಂದ ಪ್ರತಿ ದಿನದ ಎಲ್ಲಾ ಐದು ಅಂಶಗಳನ್ನು ತೋರಿಸುತ್ತದೆ ಆದ್ದರಿಂದ ಇದನ್ನು ಹಿಂದೂ ಕ್ಯಾಲೆಂಡರ್ ಪಂಚಾಂಗ ಎಂದು ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಪಂಚಾಂಗ ಕ್ಕೆ ಪಂಚಾಂಗಂ ಎಂದು ಕರೆಯುತ್ತಾರೆ.
ನಾಗ ದೋಷ ಎಂದರೇನು?
ಒಂದು ನಿಗೂಢ ಗೊಂದಲ ನಾಗ ದೋಷದ ಬಗ್ಗೆ. ಅನೇಕರು ತಮ್ಮ ಯಾವುದೇ ಸಮಸ್ಯೆಗೆ '. ನಾಗ ದೋಷ ವಿದೆಯೇ' ಎಂದು ಮೊದಲಾಗಿ ತಮ್ಮ ಮನದೊಳಗಿನ ಗೊಂದಲ ಮುಂದಿಡುತ್ತಾರೆ. ಸರ್ಪ ಸಂಸ್ಕಾರ, ಆಶ್ಲೇಷಾಬಲಿ ಇತ್ಯಾದಿ ಸೇವೆಗಳನ್ನು ಮಾಡಿಸುತ್ತಾರೆ. ಯಾಕೆಂದರೆ ನಾಗದೋಷ ಪರಿಹಾರವಾಗಲಿ ಎಂಬ ಉದ್ದೇಶ. ಆದರೆ ಇವರಿಗೆ ನಾಗದೋಷ ಎಂದರೆ ಏನು ಎಂಬುದು ಗೊತ್ತಿಲ್ಲ. ನಾಗ ಬನಗಳನ್ನು ಮಲಿನ ಮಾಡಿದ್ದೋ, ನಾಶಮಾಡಿದ್ದೋ, ಸರ್ಪ ಹತ್ಯೆಯೋ ಇತ್ಯಾದಿಗಳಿಂದ. ದೋಷಗಳು ಉಂಟಾಗುವುದೇ ನಾಗದೋಷ ಎಂದು ತಿಳಿದುಕೊಳ್ಳುತ್ತಾರೆ.ಇಂತಹ ತಿಳುವಳಿಕೆಯಲ್ಲಿ ಮೇಲೆ ಹೇಳಿದ ಪೂಜೆ ಮಾಡಿದರೆ ಏನೋ ಶೇಕಡಾ.5ಭಾಗ ಸರಿಯಾದೀತಷ್ಟೆ. ಹಾಗಾದರೆ ಹಾಗಾದರೆ ನಾಗದೋಷದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಾಗ ದೋಷಗಳನ್ನು ತಿಳಿಯುವುದು ರಾಹು ಗ್ರಹದ ಮೂಲಕ. ಈ ರಾಹು ಗ್ರಹನು ೧.ಯಾವ ಗ್ರಹ ಸಂಬಂಧಿ ನಕ್ಷತ್ರದಲ್ಲಿ ಇರುತ್ತಾನೋ ೨. ಯಾವ ಗ್ರಹನ ಕ್ಷೇತ್ರದಲ್ಲಿ ಇರುತ್ತಾನೋ ೩. ಯಾವ ಗ್ರಹನ ಯುತಿ ಯಲ್ಲಿ ಇರುತ್ತಾನೋ ೪. ರಾಶಿಯಲ್ಲಿ ಯಾವ ಗ್ರಹನ ಅಂಶದಲ್ಲಿ ಇರುತ್ತಾನೋ( ಇಲ್ಲಿ ಸಾಮಾನ್ಯವಾಗಿಕೇವಲ ನವಾಂಶ ಮಾತ್ರ ನೋಡುತ್ತಾರೆ.ಎಲ್ಲಾ ಅಂಶ ಶೋಧಿಸಿದರೆ ಉತ್ತಮ. ಆದರೆ ಅದು ಬಹಳ ಕಷ್ಟದ ಕೆಲಸ) ೫. ಯಾವ ಗ್ರಹನ ದೃಷ್ಟಿಗೊಳಗಾಗಿರುತ್ತಾನೋ - ಆ ಫಲಗಳನ್ನು ಕೊಡುತ್ತಾನೆ ಎಂದು ಹೇಳಿದೆ..ಆದರೆ ಕೊಡುವುದಲ್ಲ. ಆ ಫಲವನ್ನು ಉದ್ಧೀಪನ ಗೊಳಿಸುತ್ತಾನೆ ಎಂದರ್ಥ. ಇದು ರಾಹುವಿನ ಬಲಿಷ್ಟತೆಯ ಆಧಾರದಲ್ಲಿ ಇರುತ್ತದೆ. ಇನ್ನು ಮೇಲಿನ ವಿಚಾರದ ಉದ್ಧೀಪನಗೊಳ್ಳುವ ಭಾವದ ಆಧಾರದಲ್ಲಿ ನೋಡಬೇಕು. ಅಲ್ಲದೆ ಆಭಾ ವವು ಯಾವ ಸ್ವರೂಪದ್ದು ಎಂಬ ಚಿಂತನೆಯನ್ನೂ ಮಾಡಬೇಕು. ಉದಾಃ ಲಗ್ನದ ದ್ವಿತೀಯ ದಲ್ಲಿ ರಾಹು ಕುಜನ ಯುತಿಯಲ್ಲಿದ್ದರೆ- ಅದು ಚಂದ್ರ ಕ್ಷೇತ್ರ ಕರ್ಕವಾಗಿದ್ದರೆ - ದ್ವಿತೀಯವು ವಾಕ್ ಕ್ಷೇತ್ರ. ಇವರು ಉತ್ತಮ ವಾಗ್ಮಿ. ವಿಮರ್ಶಾತ್ಮಕ ಮಾತುಗಳಿರುತ್ತದೆ. ತನಗೆ ಇತರರ ಮಾತು ಹಿಡಿಸದಿದ್ದರೆ ಇವರು ಆ ಸಂಭಾಷಣೆಗೆ ಬೆಲೆ ಕೊಡುವುದಿಲ್ಲ.ಕುಜ ಯುತಿ ಇರುವುದರಿಂದ ಅನೀತಿ ಮಾತುಗಳನ್ನು ಕೇಳಿ ಕೋಪಗೊಂಡು ಕಡಕ್ ಉತ್ತರ ನೀಡಬಹುದು.ಅಥವಾ ಎದ್ದು ಹೋಗ ಬಹುದು. ಎದ್ದು ಹೋಗುವ ಮನಸ್ಸು ಬರುವುದು ಇವರಿಗೆ ಗುರು ಚೆನ್ನಾಗಿದ್ದರೆ ಮಾತ್ರ. ಗುರು ಸರಿ ಇಲ್ಲದಿದ್ದರೆ ಜಗಳ ಮಾಡಬಹುದು. ಕುಜ ಯುತಿಯಲ್ಲಿ ಇರುವು ದರಿಂದ ಋಣ ವಿಚಾರ, ಪ್ರತಿಷ್ಟೆ ಗೌರವಾದರಗಳ ವಿಚಾರದಲ್ಲಿ ಆಸಕ್ತರಾಗಿರುತ್ತಾರೆ. ಕುಜ ರೋಗ ಸ್ಥಾನಾಧಿಪನಾಗಿಯೂ ಇರುವುದರಿಂದ ಔಷಧಿ ಸಲಹೆಯಲ್ಲಿ ನಿಪುಣತೆ ಇವರಿಗಿರುತ್ತದೆ. ಜಲ ರಾಶಿಯಾಗಿರುವುದರಿಂದ ಇವರು ಸ್ವಚ್ಛ ನೀರಿನ ಹರಿವನ್ನು ಪ್ರೀತಿಸುತ್ತಾರೆ. ಕುಜ ಯುತಿಯಲ್ಲಿ ಇರುವುದರಿಂದ ಶತ್ರುಗಳನ್ನು ಮಾತಿನಲ್ಲೇ ಮುಗಿಸುತ್ತಾರೆ. ಇವರ ಮಾತಿಗೆ ಎದುರಾಡುವ ಸಾಮರ್ಥ್ಯ ಇತರರಿಗೆ ಇರುವುದಿಲ್ಲ.ಆಗ ಶತ್ರುಗಳು ಹಿಂದಿನಿಂದ ಇವರ image, ಹಾಳುಮಾಡಲು ಪ್ರಯತ್ನಿಸುತ್ತಾರೆ. ಇಂತಹ ಗುಣಗಳು ಸಮಯೋಚಿತವಾಗಿದ್ದಾಗ ಒಳ್ಳೆಯದಾಗಬಹುದು. wrong application ಆದಾಗ ಅಭಿವೃದ್ಧಿಗೆ ಹಾನಿಯೂ ಆಗಬಹುದು. ಆಗ ಕೆಲವೊಮ್ಮೆ, ಕೆಲವೊಂದು ವಿಚಾರಗಳಲ್ಲಿ ಕಣ್ಮುಚ್ಚಿ ಕುಳಿತು ಕೊಳ್ಳಬೇಕು.ಅಂದರೆ ಒಂದು ರೀತಿಯ compromise ಬೇಕು. ಇವರಿಗೆ ಇವನ ದಶಾಭುಕ್ತಿಗಳು ಉತ್ತಮ ಫಲ ನೀಡುತ್ತದೆ.ಆದರೆ ಇವನ ಚತುರ್ಥ ಕೇಂದ್ರದಲ್ಲಿ ಪಾಪ ಗ್ರಹರಿರಬಾರದು. ಇಂತಹ ಉದ್ಧೀಪನ (exiting nature, ambitious) ಇರುವ ವ್ಯಕ್ತಿಗಳು ಈ ಭಾವದ ವಿಚಾರ ಅಂದರೆ ಮಾತು, ಹಣಕಾಸು,ಕುಟುಂಬ ವಿಚಾರಗಳಲ್ಲಿ ಕೆಲವೊಮ್ಮೆ compromise ಮಾಡಿಕೊಂಡರೆ ಉತ್ತಮ. 'ಹೋಗಲಿ ನನಗೆ ಗೌರವ ಈ ಸಾರಿ ಸಿಕ್ಕದಿದ್ದರೂ ಪರವಾಗಿಲ್ಲ.ನನ್ನ ಕೆಲಸವಾದರೆ ಸಾಕು 'ಎಂಬ ಸ್ವಾರ್ಥದಲ್ಲಿ ಸುಮ್ಮನಾ ಗಬೇಕು. ಇವರು ರಾಹು ಪ್ರೀತ್ಯರ್ಥ ಅಂದರೆ ವಾಕ್ ಸ್ಥಾನದ ದೋಷ ನಿವಾರಣೆ ಗಾಗಿ,ಅಥವಾ ಉತ್ತಮ ಪರಿಣಾಮಕ್ಕಾಗಿ ವಾಣಿಕಾರಕಿ ಶಾರದೆಯ ಮಂತ್ರದ ಸಂಪುಟೀಕರಣದಲ್ಲಿ ನಾಗ ಮಂತ್ರ ಜಪಿಸಬೇಕು. ಅಥವಾ ದುರ್ಗಾ ಮಂತ್ರದಲ್ಲಿ ಸಂಪುಟೀಕರಣ ಮಾಡಿಕೊಂಡರೂ ಆಗುತ್ತದೆ.ಅದು ಹೇಗೆಂದರೆ- ಓಂ ದುಂ ದುರ್ಗಾಯೆಯೈನಮಃ ಎಂದು ಹನ್ನೆರಡು ಸಲ ಜಪಿಸಿಕೊಂಡು - ಒಂ ನಮೋ ಭಗವತೇ ಕಾಮ ರೂಪಿಣಿ ಮಹಾಬಲಾಯ ನಾಗಾಧಿಪತಯೇ ಅನಂತಾಯ ನಮಃ ' ಎಂದು ಇಷ್ಟ ಪಟ್ಟ ಸಂಖ್ಯೆಯಲ್ಲಿ(12,24,48, 108 ಇತ್ಯಾದಿ) ಜಪಮಾಡಿ ಕೊನೆಗೆ ಮತ್ತೆ ಹನ್ನೆರಡು ಸಲ ದುರ್ಗಾ ಜಪ ಮಾಡಬೇಕು.ಇದು ನೇರವಾಗಿ ದ್ವಿತೀಯ ಭಾವ ಸಂಬಂಧಿತ ನಾಡಿಗಳ ಜಾಗೃತಿಯನ್ನು ಮಾಡುತ್ತದೆ. ಇದನ್ನು ಸಾಮಾನ್ಯ ಭಾಷೆಯಲ್ಲಿ 'ನಾಗದೋಷ' ಎಂದು ಕರೆದರು. ಉದ್ಧೀಪನ ಅಥವಾ ನಿರುತ್ಸಾಹಿ ಯಾಗುವಿಕೆಯ ನಿಯಂತ್ರಣ ಇರುವುದು ನಾಗದೇವರಲ್ಲಿ.ಅವನ ಸ್ಮರಣೆಯನ್ನು ನಿಯಮ ಪೂರ್ವಕವಾಗಿ ಮಾಡಿದರೆ ಕ್ಷೇಮವಾಗುತ್ತದೆ. ಹೀಗೆಯೇ ಭಾವಕ್ಕನುಗುಣವಾಗಿ ಚಿಂತನೆ ಬೇಕು.ಕೇವಲ ನಾಗನೇ ಸಾಲದು.ಹಲವು ದೇವತಾ ಶಕ್ತಿಗಳ ದರ್ಶನ ಉಪಾಸನೆಗಳು ರಾಹು ಸ್ಥಿತಿಗನುಗುಣವಾಗಿ ನೋಡಬೇಕು.ಇಲ್ಲಿ ಕೇವಲ ಒಂದು ಉದಾಹರಣೆ ಹೇಳಿದ್ದೇನೆ. ಅಂತೂ ನಾಗನು ಎಲ್ಲರಿಗೂ ಒಂದಲ್ಲ ಒಂದು ಭಾವಕ್ಕೆ ಇದ್ದೇ ಇರುತ್ತಾನೆ. ಇದನ್ನು ಸಕಲ ದೇವರ ಚಿತ್ರಗಳಲ್ಲಿ ನೋಡಬಹುದು.ಕೈಯಲ್ಲಿ ಹಿಡಿದ ಭದ್ರಕಾಳಿ,ಕುತ್ತಿಗೆಗೆ ಸುತ್ತಿಕೊಂಡ ಶಿವ,ಹೊಟ್ಟೆಗೆ ಸುತ್ತಿಕೊಂಡ ಗಣಪ ಹೀಗೇ ಹಲವು ಸಂಕೇತಗಳಿವೆ.ಇದರಲ್ಲಿ ಸಕಲವನ್ನೂ ನಿಯಂತ್ರಿಸಿಕೊಂಡವನೇ ಭಗವಾನ್ ಶ್ರೀಹರಿ. ನಾಗರಾಜನನ್ನೇ ಸುರುಳಿಹಾಕಿ ಹಾಸಿಗೆ ಮಾಡಿ ಮಲಗಿದವ. ಇದಕ್ಕಾಗಿ 'ನಾಗಾಂತರ್ಯಾಮಿ ಪ್ರದ್ಯುಮ್ನಾನಿರುದ್ಧ ಸಂಕರ್ಷಣ ಮೂರ್ತಿ ಭಗವಾನ್ ವಾಸುದೇವ ಪ್ರಿಯಂತಾಂ' ಎಂದು ಪ್ರಾಜ್ಞರು ತಿಳಿಸಿದರು. ಪ್ರತಿಯೊಬ್ಬರೂ ಅಂದರೆ ನಾಗದೇವರನ್ನು ನಂಬುವವರು ನಾಗದೇವರ ಉಪಾಸನೆ ಮಾಡಲೇ ಬೇಕು. ಅಂತಹ ಜ್ಞಾನಿಗಳು,ತಪಸ್ವಿಗಳಿಗೆ ಇದೆಲ್ಲಾ ಬೇಕಾಗಿಲ್ಲ.ಆದರೆ ಅವರ ಪಾಠವೇ ಇದಾಗಿದೆ.
ಕಾಲಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು
ಕಾಳಸರ್ಪ ದೋಷಕ್ಕೆ ವಿನಾಯತಿ(ಯೋಗಭಂಗ)ಗಳು ಮತ್ತು ಕಾಳಸರ್ಪದೋಷಕ್ಕೆ ಪರಿಹಾರೋಪಾಯಗಳು ಸಾದಾರಣವಾಗಿ ಯಾರದೇ ಜನ್ಮಕುಂಡಲಿಯಲ್ಲಿ (ಯಾವುದೇರೀತಿಯ)ಹನ್ನೆರಡು ಕಾಳಸರ್ಪದೋಷಗಳಿದ್ದಾಗ್ಯು ಕೂಡ ಅದನ್ನು ಭಂಗಗೊಳಿಸಬಲ್ಲ ಕೆಲವು ಯೋಗಗಳಿದ್ದಾಗ ಈ ಸರ್ಪದೋಷಗಳು ನಿವಾರಣೆಯಾಗುತ್ತವೆ ಅಥವ ಈ ಯೋಗದಿಂದ ಉಂಟಾಗುವ ಕೆಟ್ಟಫಲಗಳು ನಾಶವಾಗುತ್ತವೆ.ಅಂತಹ ಬಲವಾದ ಯೋಗಗಳೆಂದರೆ:- ಯಾರ ಜನ್ಮಕುಂಡಲಿಯಲ್ಲಿ ಪಂಚಮಹಾಪುರುಷಯೋಗಗಳಲ್ಲಿ ಯಾವುದಾದರು ಒಂದು ಯೋಗವಿದ್ದಾಗ್ಗೆ ಈ ಕಾಳಸರ್ಪದೋಷವು ಉಂಟುಮಾಡುವ ಕೆಟ್ಟಫಲವನ್ನು ನಾಶಮಾಡುತ್ತದೆ. ಆ ಪಂಚ ಮಹಾಪುರುಷ ಯೋಗಗಳು ಯಾವುವೆಂದರೆ:- *ಕುಜನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ರುಚಕಯೋಗದಿಂದ* *ಬುದನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಭದ್ರಯೋಗದಿಂದ *ಗುರುವಿನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಹಂಸಯೋಗದಿಂದ* *ಶುಕ್ರನಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಮಾಳವ್ಯಯೋಗದಿಂದ* *ಶನಿಯಿಂದ*ಉಚ್ಚನಿದ್ದರೆ ಅಥವ ಸ್ವಕ್ಷೇತ್ರದಲ್ಲಿರುವುದರಿಂದ*ಶಶ(ಸಸ)ಯೋಗದಿಂದ* *ಜನ್ಮ ಕುಂಡಲಿಯಲ್ಲಿ ಕೇಂದ್ರಗಳಾದ ೧ ೪ ೭ ೧೦ ನೇ ಮನೆಯಲ್ಲಿ ಶುಭಗ್ರಹಗಳಿದ್ದರೆ* *ಪ್ರಭಲವಾದ ಯೋಗಗಳು ಇರುವುದರಿಂದ* *ರಾಹುವುನೊಂದಿಗೆ ಯಾವುದೇ ಇತರೆ ಗ್ರಹವಿದ್ದು ಆ ಗ್ರಹ ಹೆಚ್ಚಿನ ಅಂತರದಲ್ಲಿ(ಡಿಗ್ರಿಯಲ್ಲಿ) ಇದ್ದಲ್ಲಿ ಈ ಯೋಗ ಭಂಗವಾಗುತ್ತದೆ(ಉದಾ:-೬ಡಿಗ್ರಿ೨೫ ನಿಮಿಷದಲ್ಲಿ ರಾಹುಇದ್ದು ಮತ್ತೊಂದುಗ್ರಹ ೨೮ಡಿಗ್ರಿ ೩೦ ನಿಮಿಷದಲ್ಲಿ ಇದ್ದರೆ ) *ಜನ್ಮ ಕುಂಡಲಿಯಲ್ಲಿ ಮೂರು ಅಥವ ಮೂರಕ್ಕೂ ಹೆಚ್ಚು ಗ್ರಹಗಳು ಉಚ್ಚ ಅಥವ ಸ್ವಕ್ಷೇತ್ರಗತರಾಗಿದ್ದಲ್ಲಿ ಈ ಕಾಲಸರ್ಪದೋಷವು ಭಂಗವಾಗುತ್ತದೆ. *ಲಗ್ನಾಧಿಪತಿ,ಚಂದ್ರ,ರವಿ ಶುಭಭಾವಗಳಲ್ಲಿದ್ದಲ್ಲಿ ಅಂದರೆ ಈ ಗ್ರಹಗಳಲ್ಲಿ ಯಾರಾದರು(೧,೫,೯ರಲ್ಲಿ ಇದ್ದಲ್ಲಿ)ಕೇಂದ್ರಗಳಲ್ಲಿ ಇದ್ದಲ್ಲಿ ಕಾಳಸರ್ಪದೋಷ ಭಂಗವಾಗುತ್ತದೆ. *ದಶಮದಿಂದ ಚಥುರ್ಥದಲ್ಲಿ ಅಥವ ಚತುರ್ಥದಿಂದ ದಶಮದಲ್ಲಿ ಕಾಳಸರ್ಪದೋಷ ಉಂಟಾಗಿದ್ದರೆ ಹಾಗು ಆ ಎಲ್ಲಾ ಬಾವಗಳಲ್ಲಿ ಎಲ್ಲ ಗ್ರಹಗಳಿದ್ದರೆ ಕಾಳಸರ್ಪದೋಷ ನಿಶ್ಚಯವಾಗಿ ಭಂಗವಾಗುತ್ತದೆ. ಹನ್ನೆರಡು ಕಾಳಸರ್ಪ ದೋಷಗಳು ಮತ್ತು ಅವುಗಳ ಪರಿಣಾಮ,ದೋಷಪರಿಹಾರೋಪಾಯಗಳು ಅನಂತ: ರಾಹು ಲಗ್ನದಲ್ಲಿ(೧ರಲ್ಲಿ)ಕೇತು ಸಪ್ತಮದಲ್ಲಿ ಉಳಿದೆಲ್ಲಗ್ರಹಗಳು ಇವುಗಳ ಮದ್ಯೆ ಇದ್ದರೆ ಈ ದೋಷ ಉಂಟಾಗುತ್ತದೆ. ದೋಷಕ್ಕೆ ಕಾರಣ:- ಹುತ್ತವನ್ನು ಹಾಳು ಮಾಡುವುದರಿಂದ, ಹುತ್ತವನ್ನು ಹಾಳುಮಾಡಿ ವ್ಯವಸಾಯ ಮಾಡಿದ್ದರೆ,ಹುತ್ತದಮೇಲೆ ವಾಹನ ಹತ್ತಿಸಿದ್ದರೆ,ಊಟಕ್ಕೆ ವಿಷಹಾಕಿದ್ದರೆ ಈ ದೋಷ ಉಂಟಾಗುತ್ತದೆ. ಪರಿಣಾಮಗಳು:-ಜನ್ಮದಿಂದಲೂ ಏಳಿಗೆಯಾಗುವುದಿಲ್ಲ,ಅವಮಾನ,ನಿಂದನೆ,ಸಂಸಾರ ಜೀವನ ಸುಖವಿರುವುದಿಲ್ಲ,ಮಕ್ಕಳಾಗುವುದಿಲ್ಲ,ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ,ಕೋರ್ಟು ಕಛೇರಿ ಸುತ್ತಬೇಕಾಗುತ್ತದೆ,ಅಂಡೊತ್ಪತ್ತಿಯಲ್ಲಿ ಸಮಸ್ಯೆ,ಹೆಂಡತಿಬಿಟ್ಟು ಹೋಗುವಿಕೆ. ಪರಿಹಾರ:- ಸರ್ಪಶಿರಮುದ್ರೆ ದಾರಣೆಮಾಡಿ ನಿತ್ಯ ಈ ಮಂತ್ರವನ್ನು೧೦೮ಸಲ ಜಪಿಸಿದರೆ ಈ ದೋಷ ನಿವಾರಣೆಯಾಗುತ್ತದೆ. ಮಂತ್ರ:-ಓಂ ಫೋ ಅನಂತಮುಖಿ ಸ್ವಾಹಾ ಕುಲಿಕ ಕಾಳಸರ್ಪ ದೋಷ ಕಾರಣ:-ಸರ್ಪ ನಿದ್ರಾಭಂಗ ದೋಷದಿಂದ,ಸರ್ಪದ ಉದರಕ್ಕೆ ಹೊಡೆದು ಸಾಯಿಸಿದ್ದರೆ,ಈ ದೋಷ ಉಂಟಾಗುತ್ತದೆ. ಪರಿಣಾಮ:-ವೀರ್ಯಾಣುವಿನ ಸಮಸ್ಯೆ ಅಂಡಾಣು ಸಮಸ್ಯೆ ವೀರ್ಯದೋಷಗಳು ಉಂಟಾಗುತ್ತವೆ. ಪರಿಹಾರ:- ಕುಜ/ಸುಬ್ರಮಣ್ಯನ ಸೇವೆ ಮಾಡಿಸಿರಿ.ಈ ಮುದ್ರೆಯೊಂದಿಗೆ ಈ ಮಂತ್ರವನ್ನು ನಿತ್ಯ ೧೦೮ಸಲ ಜಪಿಸಿರಿ ನಿಮ್ಮ ದೋಷ ನಿವಾರಣೆಯಾಗುತ್ತದೆ.ಮಂತ್ರ:-ಓಂ ಪೂಂ ಪೂಂ ಪೂರ್ವ ಭೂಕಮುಖಿಸ್ವಾಹ. ವಾಸುಕಿ ಕಾಳಸರ್ಪ ದೋಷ ಕಾರಣ:-ಸರ್ಪಗಳ ಅಂಡಗಳದ್ವಂಸ ದಿಂದ,ಹಾವಿನ ಸಂತತಿಯನ್ನು ಹಾಳುಮಾಡುವುದರಿಂದ,ಹಾವಿನ ಮರಿಗಳನ್ನು ಸಾಯಿಸಿದ್ದರೆ. ಪರಿಣಾಮ:-ಚರ್ಮಕ್ಕೆ ಸಂಬಂದಿಸಿದ ರೋಗಗಳು ಮನೆಯವರಿಗೆಲ್ಲಾ ಬರುತ್ತದೆ ಇದು ಅಮವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಹೆಚ್ಚಾಗಿ ತೊಂದರೆ ಕೊಡುತ್ತದೆ,ಸೋದರ-ಸೋದರಿಯರೊಡನೆ ವೈರತ್ವ,ಯಾವುದರಲ್ಲು ಏಳಿಗೆಯಾಗುವುದಿಲ್ಲ,ದಿಡೀರನೆ ಹಣ,ಆಸ್ತಿಗಳನ್ನು ಕಳೆದುಕೊಳ್ಳುವಿಕೆ,ದಾಂಪತ್ಯ ಸುಖವಿರುವುದಿಲ್ಲ,ರತಿಸುಖ ಸಿಗುವುದಿಲ್ಲ,ಇದರಿಂದಾಗಿ ದಂಪತಿಗಳು ಅಡ್ಡದಾರಿ ಹಿಡಿಯಬಹುದು,ಶೀಘ್ರ ವೀರ್ಯಸ್ಕಲನ.ಜನನೇಂದ್ರಿಯ ಸಮಸ್ಯೆಯಿಂದ ಗರ್ಭದರಿಸಲು ಸಾದ್ಯವಾಗುವುದಿಲ್ಲ. ಪರಿಹಾರ:- ಮುದ್ರೆಯೊಂದಿಗೆ ಈ ಮಂತ್ರವನ್ನು ೧೦೮ ಸಲ ನಿತ್ಯ ಜಪಿಸಿರಿ ನಿಮ್ಮ ವಾಸುಕಿ ಕಾಳಸರ್ಪದೊಷವು ನಿವಾರಣೆಯಾಗುತ್ತದೆ.ಮಂತ್ರ:- ಓಂ ವಾಸಕಿ ಮುಖಿ ಸ್ವಾಹಾ ಪದ್ಮ ಕಾಳಸರ್ಪ ದೋಷ ಕಾರಣ:-ಹಾವಿನ ಬಾಲಕ್ಕೆ ಹೊಡೆದುಸಾಯಿಸಿದ್ದರೆ ಈ ದೋಷ ಬರುತ್ತದೆ. ಪರಿಣಾಮ:-ಗುಪ್ತ ಜನನಾಂಗಗಳ ರೋಗ,ರುಜಿನಗಳು ಬರುತ್ತವೆ ಕೀವು- ರಕ್ತಬರುವಂತಹ ಗಾಯ ಹುಣ್ಣುಗಳು ಈ ಅಂಗಗಳನ್ನು ಬಾದಿಸುತ್ತವೆ.ಶತೃಕಾಟ,ಗೃಹದಲ್ಲಿ ಜಗಳ, ಸರ್ಪಗಳ ದರ್ಶನ ಆಗಾಗ್ಗೆ ಆಗುತ್ತದೆ,ಕೆಲವೊಮ್ಮೆ ಸರ್ಪ ಮನೆಗೇ ಬರುತ್ತದೆ,ಯೋನಿ/ಶಿಶ್ನಗಳು ಗಾಯಗಳಿಂದಾಗಿ ಕೀವು-ರಕ್ತ ಸೋರುವಿಕೆ,ಇದರಿಂದ ರತಿಸುಖದಿಂದ ದೂರಾಗುವಿಕೆ,ದಾಂಪತ್ಯ ಕಲಹ, ವಿರಹಗಳು, ಪರಿಹಾರ:-ಷಷ್ಟಿದಿವಸ ಮುದ್ರೆ ಮಂತ್ರವನ್ನು ಜಪಿಸುವುದರಿಂದ ಈ ದೋಷ ನಿವಾರಣೆಯಾಗುತ್ತದೆ. ಮಹಾಪದ್ಮ ಕಾಳಸರ್ಪ ದೋಷ ಕಾರಣ:-ಸರ್ಪಗಳ ಸಂಮ್ಮಿಲ(ಸರ್ಪ ಸಂಭೋಗ)ವನ್ನು ನೋಡಿದರೆ,ನೋಡಿ ಆಡಿಕೊಂಡರೆ,ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಈ ದೃಷ್ಯವನ್ನು ನೋಡಿದರೆ ಇಂತಹ ಸಮಯದಲ್ಲಿ ಸರ್ಪಗಳನ್ನು ದೂರಮಾಡಿದ್ದರೆ. ಪರಿಣಾಮ:-ಪ್ರೀತಿ-ಪ್ರೇಮ ವಿವಾಹಕ್ಕೆ ಅಡ್ಡಿ ಆತಂಕಗಳು ಪ್ರೇಮಿಗಳು ಬೇರಾಗುವಿಕೆ,ವಿವಾಹಾ ನಂತರ ದಂಪತಿಗಳು ದೂರಾಗುವಿಕೆ, ಪರಿಹಾರ:-ಮುದ್ರೆ ಯೊಂದಿಗೆ ಈ ಮಂತ್ರವನ್ನು ೨೦-೩೦ ನಿಮಿಷ ನಿತ್ಯ ಜಪಿಸುವುದರಿಂದ ಈ ದೋಷ ಪರಿಹಾರವಾಗುತ್ತದೆ ಮಂತ್ರ:- ಓಂ ಮಹಾ ಪದ್ಮಿನಿ ಮುಖಿ ಫೋ ಸ್ವಾಹಾ ತಕ್ಷಕ ಕಾಳಸರ್ಪ ದೋಷ ಕಾರಣ:-ಪುರುಷ ಹತ್ಯೆ,ಶಿಶುಹತ್ಯೆ,ಅಪಹರಣ,ಮಾಡಿದ್ದರೆ. ಪರಿಣಾಮ:-ಅಂತವರಿಗೆ ಗಂಡು ಸಂತಾನವಾಗದು,ಸ್ತ್ರೀಸುಖ/ಪುರುಷಸುಖ ಸಿಗುವುದಿಲ್ಲ.ಇಂತವರಿಗೆ ಅವಳಿ ಹೆಣ್ಣು ಮಕ್ಕಳಾಗುವ ಸಂಬವವಿರುತ್ತದೆ. ಪರಿಹಾರ:-ಮುದ್ರೆ ಮಂತ್ರವನ್ನು ಜಪಿಸುವುದು. ಕಾರ್ಕೋಟಕ ಕಾಳಸರ್ಪ ದೋಷ ಶಂಖಚೂಡ ಕಾಳಸರ್ಪ ದೋಷ ಕಾರಣ:-ಸ್ತ್ರೀ ಅಪಹರಣ,ವೇಶ್ಯಾವಾಟಿಕೆಗೆ ಬಲವಂತವಾಗಿ ಸ್ತ್ರೀಯನ್ನಾಗಲಿ ಪುರುಷರನ್ನಾಗಲಿ ದೂಡಿದ್ದರೆ, ಕಳೆದ ಜನ್ಮದಲ್ಲಿ ಈ ರೀತಿ ಮಾಡಿದ್ದರೆ.ಪರಸ್ತ್ರೀಯನ್ನು ಬಲವಂತವಾಗಿ ಅನುಭವಿಸಿದ್ದರೆ,ವಿವಾಹಕ್ಕೆ ಮುನ್ನ ಸ್ತ್ರೀ ಸುಖ ಪಡೆದಿದ್ದರೆ. ಪರಿಣಾಮ:-ಜೂಜು ಕೋರರಾಗುತ್ತಾರೆ,ರೇಸ್ ಹುಚ್ಚು,ಬೆಟ್ಟಿಂಗ್ ಹುಚ್ಚು,ಕಾಮಾಸಕ್ತಿ ಇರುವುದಿಲ್ಲ,ಪುರುಷನು ಸ್ತ್ರೀಯಂತೆ ವರ್ತಿಸುತ್ತಾನೆ, ಪರಿಹಾರ:-ಮುದ್ರೆ ಮಂತ್ರವನ್ನು ಜಪಿಸಿರಿ. ಪಾತಕ(ಘಾತಕ)ಕಾಳಸರ್ಪ ದೋಷ ಕಾರಣ:-ಸಮಾಜದಲ್ಲಿ ೯೯ ಜನರಿಗೆ ಈ ದೋಷ ವಿರುತ್ತದೆ, ಪರಸ್ತ್ರೀ ಅಪಹರಣ,ನರಹತ್ಯ,ಹುತ್ತಕ್ಕೆ ಬೆಂಕಿ, ಕೆಮಿಕಲ್ಸ್ ಹಾಕಿದ್ದರೆ. ಪರಿಣಾಮ:-ವ್ಯವಹಾರ ಹಾನಿ,ಉದ್ಯೋಗಮಾಡಲಾಗದು,ಇಂತವರು ವ್ಯಾಪಾರವನ್ನೇ ಮಾಡಿ ಬದುಕಬೇಕು,ಆದರೆ ವ್ಯಾಪಾರದಲ್ಲಿ ದ್ರೋಹಗಳು ನಡೆಯುತ್ತಿರುತ್ತವೆ,ಅದರಲ್ಲು ಹಿತಶತೃಗಳಿಂದ ದ್ರೋಹಗಳು,ಬುದ್ದಿಮಾಂದ್ಯ ಮಕ್ಕಳಜನನ,ಕಿಡ್ನಿಇಲ್ಲದ ಮಕ್ಕಳಜನನ. ಪರಿಹಾರ:-ಮುದ್ರೆ ಮಂತ್ರವನ್ನು ಜಪಿಸುವುದು. ವಿಷದರ(ವಿಶಕ್ತ)ಕಾಳಸರ್ಪ ದೋಷ ಕಾರಣ:-ದಂಪತಿಗಳ ಅಗಲಿಸಿದ್ದರೆ,ವಿಷಹಾಕಿದ್ದರೆ. ಪರಿಣಾಮ:-ಅಣ್ಣನೊಂದಿಗೆ ವಾದ-ವಿವಾದಗಳು ಜರುಗುವುವು, ಅಣ್ಣನಿಂದಲೇ ತೊಂದರೆ ಉಂಟಾಗುತ್ತಿರುತ್ತದೆ,ದೂರಪ್ರದೇಶದಲ್ಲಿವಾಸ,ಕೋರ್ಟ್ ಕೇಸಿಗೆ ಅಲೆಯುವಿಕೆ,ವಿವಾಹಾ ನಂತರ ಕೂದಲು ಉದುರುತ್ತದೆ,ಚರ್ಮರೋಗ,ಕಜ್ಜಿ,ಉಂಟಾಗುತ್ತದೆ,ಹೆಂಡತಿ ಮಕ್ಕಳು ವೇಶ್ಯಾವಾಟಿಕೆಯಲ್ಲಿ ತೊಡಗುವಿಕೆ,ಆಗಾಗ ಹಾವುಗಳು ಮನೆಗೆ ಬರುತ್ತವೆ,ಅಂಡಾಣು/ವೀರ್ಯಾಣುಗಳ ಚಲನೆಯಲ್ಲಿ ಮಂದಗತಿ ಉಂಟಾಗುತ್ತದೆ ಇದರಿಂದ ಸಂತಾನ ದೋಷ ಉಂಟಾಗುತ್ತದೆ,ಮಾತು ವಿಕೃತವಾಗುತ್ತದೆ,ರಾಹುದೋಷ ಉಂಟಾಗುತ್ತದೆ,ಅನಿದ್ರೆ,ಕಣ್ಣುಬೇನೆ,ಹೃದ್ರೋಗ ಪೀಡಿಸಲ್ಪಡುವವು ಜೀವನದ ಅಂತ್ಯವು ರಹಸ್ಯವಾಗಿರುವುದು. ಪರಿಹಾರ:- ಈ ಮುದ್ರೆ ಮಂತ್ರವನ್ನು ನಿತ್ಯ ೧೦೮ ಸಲ ಮುದ್ರೆಯೊಂದಿಗೆ ಜಪಿಸಿರಿ ಮಂತ್ರ:- ಓಂ ನವಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ವಿಷಧರ ಪ್ರಚೋದಯಾತ್ ಶೇಷನಾಗ ಕಾಳಸರ್ಪ ದೋಷ ಕಾರಣ:-ಒಂದು ಬೀದಿಗೆ ಸಾಮಾನ್ಯವಾಗಿ ೨೫ ಜನರಿಗೆ ಈ ದೋಷವಿರುತ್ತದೆ,ಪುಣ್ಯಕ್ಷೇತ್ರಗಳಲ್ಲಿ,ಮಠ,ದೇವಾಲಯ, ನಧಿ,ಕೊಳಗಳ ತೀರದಲ್ಲಿ ರತಿಸುಖವನ್ನು ಪಡೆದಿದ್ದರೆ ಈ ದೋಷವು ಬರುತ್ತದೆ,ಇಂತಹ ಸ್ಥಳಗಳಲ್ಲಿ ಕಾಮ,ಪ್ರೇಮದ ಛೇಷ್ಟೆಯನ್ನು ಮಾಡಿದ್ದರೆ ಈ ದೋಷಬರುತ್ತದೆ. ಪರಿಣಾಮ:-ಕಣ್ಣಿನದೋಷ,ಹೃದಯದ ರೋಗ,ಅಂಗವಿಕಲ ಮಕ್ಕಳ ಜನನ,ತಲೆದಪ್ಪ ಮಕ್ಕಳಜನನ,ಕಣ್ಣುದಪ್ಪ,ಕುಬ್ಜಮಕ್ಕಳ ಜನನ, ಪರಿಹಾರ:-ವಿಷ್ಣುವಿನ ಜಪವನ್ನು ನಿತ್ಯ ಜಪಿಸುವುದು ಮತ್ತು ಮುದ್ರೆ ಮಂತ್ರವನ್ನು ಜಪಿಸುವುದು. -sangraha
ಮಾಟ,ಮಂತ್ರ ದೋಷನಿವಾರಣೆಗೆ ಮಂತ್ರಗಳು
ಅಯ್ಯಪ್ಪ ಗಾಯತ್ರಿ ಓಂ ಭೂತನಾತಾಯ ವಿದ್ಮಹೇ ಮಹಾದೇವಾಯ ಧೀಮಹೀ ತನ್ನೋ ಶಾಸ್ತ್ರ ಪ್ರಚೋದಯಾತ್ ಸುದರ್ಶನ ಗಾಯತ್ರಿ ಮಂತ್ರ ಓಂ ಸುದರ್ಶನಾಯ ವಿದ್ಮಹೇ ಮಹಾಜ್ವಾಲಾಯ ಧೀಮಹೀ ತನ್ನೋ ಚಕ್ರಪ್ರಚೋದಯಾತ್
ಓಂ ನಮೋ ಭಗವತಿ ರಾಜರಾಜೇಶ್ವರಿ ಸಾಗರತೀರೇ ಮಹಾಮದ್ಯರ್ನಿವಾಸಿನಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಅನ್ನಪೂರ್ಣ ಅಂಬೇ ಮಾತಾ ಉದಯೋಸ್ತು ಉದಯೋಸ್ತು ಐಂ ಹ್ರೀಂ ಶ್ರೀಂ ಯಾಂ ರಂ ಲಂ ಶಂ ದಂ ವಂ ತಂ ಓಂ ||ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ ಸ್ವಾಹಾ||
||ಓಂ ಹ್ರೀಂ ಹ್ರೀಂ ಹುಂ ಹುಂ ಕ್ರೀಂ ಕ್ರೀಂ ಕ್ರೀಂ ದಕ್ಷಿಣ ಕಾಳಿಕೆ ಕ್ರೀಂ ಕ್ರೀಂ ಕ್ರೀಂ ಹುಂ ಹುಂ ಹ್ರೀಂ ಹ್ರೀಂ || ||
ಓಂ ನಮೋ ಭಗವತೇ ಮಹಾಕಾಲಬೈರವಾಯ (ಅಮುಕಂ) ಶತೃ ಮಾರಯ|ಕಾಲಾಗ್ನಿತೇಜಸೇ ಫೋತಯ ಹುಂ ಫಟ್ ಸ್ವಾಹಾ|| ಓಂ ಮಹಾಕಾಳೇಶ್ವರಾಯ ನಮಃ ಓಂ ಮಹಾಂ ಕಾಲಾಯ ನಮಃ
ಅಮಾವಾಸ್ಯೆ ಹುಣ್ಣಿಮೆಯಂದು ರಾತ್ರಿ ಸ್ವಲ್ಪ ಅಕ್ಕಿ, ಮೊಸರು,ಗುಲಾಲ್ ಅನ್ನು ಒಂದು ಬಿಳಿ ಹಾಳೆಯಲ್ಲಿ ಹಾಕಿ ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ನೆತ್ತಿಯಿಂದ ಪಾದದ ವರೆಗೆ ೯ ಬಾರಿ ಅಥವ ಆ ವ್ಯಕ್ತಿಗೆ ಆಗಿರುವ ವಯಸ್ಸಿನಷ್ಟು ಸಲ ಇಳಿತಗೆದು ೪ದಾರಿ ಕೂಡಿರುವಕಡೇ ಎಸೆದು ಬರಬೇಕು. ಅಥವ ಮೊಟ್ಟೆಗಾತ್ರದ ಒಂದು ಉತ್ತಮವಾದ ನಿಂಬೆಹಣ್ಣು ತಗೆದುಕೊಂಡು ಮಾಟ ಆಗಿರುವ ವ್ಯಕ್ತಿಯನ್ನು ನೆಲದಮೇಲೆ ಕೂರಿಸಿ ಆತನ ತಲೆಯ ಮೇಲೆ ನಿಂಬೆಹಣ್ಣನ್ನು ಎಡಕೈಯಲ್ಲಿ ಹಿಡಿದು ಬಲಗೈಯಲ್ಲಿ ಚಾಕುವಿನಿಂದ ಎರಡು ಹೋಳು ಮಾಡಿ ಒಂದಕ್ಕೆ ಅರಿಸಿಣ ಮತ್ತೊಂದಕ್ಕೆ ಕುಂಕುಮ ಹಚ್ಚಿ ಹೋಳುಗಳನ್ನು ಬಲಕೈಯಲ್ಲಿ ಹಿಡಿದು ವ್ಯಕ್ತಿಗೆ ಮೇಲಿಂದ ಕೇಳಗೆ ೭ಬಾರಿ ಇಳೆತಗೆಯಬೇಕು ನಿಂಬೆ ಹೋಳು ಈ ಸಮಯದಲ್ಲಿ ನೆಲಕ್ಕೆ ತಾಕದಂತೆ ನೋಡಿಕೊಳ್ಳಿ ನಂತರ ಈ ಹೋಳನ್ನು ೪ ದಾರಿ ಕೂಡಿರುವಕಡೇ ಅಥವ ಮನೆಯಿಂದ ದೂರದಲ್ಲಿರುವ ಕಸಕಡ್ಡಿ ಇರುವ ಜಾಗದಲ್ಲಿ ಎಸೆದು ಬರಬೇಕು ಹೋಗುವಾಗ ದಾರಿಯಲ್ಲಿ ಯಾರೊಂದಿಗೂ ಮಾತನಾಡಬಾರದು ಮತ್ತು ಆ ವ್ಯಕ್ತಿ ನೀವು ನಿಂಬೆಹಣ್ಣು ಎಸೆದು ಬರುವವರೆಗೂ ಮನೆಯಲ್ಲೇ ಇರಬೇಕು. ಎಸೆದು ಬಂದನೀವು ಕೈಕಾಲು ತೊಳೆದುಕೊಂಡು ದೇವರಿಗೆ ವಂದಿಸಬೇಕು.
|| ಶ್ರೀ ಪ್ರತ್ಯಂಗಿರಾ ಮಾಲ ಮಂತ್ರ ||
ಓಂ ನಮಃ ಕ್ರಿಷ್ಣವಾಸಸೆ ಶತ ಸಹಸ್ರ ಕೋಟಿ ಸಿಂಹಾಸನೆ ಸಹಸ್ರ ವದನೆ ಅಷ್ಟಾದಶಬುಜೆ ಮಹಾಬಲೆ ಮಹಾಬಲ ಪರಾಕ್ರಮೆ ಅಜಿತೆ ಅಪರಾಜಿತೆ ಮಹಾ ಪ್ರತ್ಯಂಗಿರೆ ಪ್ರತ್ಯಂಗಿರಸೆ ಅನ್ಯ ಪರ ಕರ್ಮ ವಿದ್ವಂಸಿನಿ ಪರ ಮಂತ್ರೊಚ್ಚಾಟಿನಿ ಪರ ಮಂತ್ರೊತ್ಸಾಹಿನಿ ಸರ್ವ ಬೂತ ಧಮನಿ ಘೆಂ ಸಃ ಉಂ ಪ್ರೇಂ ಗ್ರೀಂ ಗ್ರೊಂ ಮಮ ಸರ್ವ ಉಪದ್ರವೇಪ್ಯಹಃ ಸರ್ವ ಆಪತ್ಯೋ ರಕ್ಷ ರಕ್ಷ ರಾಂ ಗ್ರೀಂ ಶ್ರೀಂ ಗ್ರೊಂ ಸರ್ವ ದೇವನಾಂ ಮುಖಂ ಸ್ತಂಬಯ ಸ್ತಂಬಯ ಸರ್ವ ವಿಘ್ನಂ ಛಿಂಧಿ ಛಿಂಧಿ ಸರ್ವ ದುಷ್ಟಾನ್ ಬಕ್ಷಯ ಬಕ್ಷಯ ವಕ್ತ್ರಾಲಯ ಜ್ವಾಲಾಜಿಹ್ವೆ ಕರಾಳವದನೆ ಸರ್ವ ಯಂತ್ರಾನಿ ಸ್ಪೊಟಯ ಸ್ಪೊಟಯ ತ್ರೊಟಯ ತ್ರೊಟಯ ಪ್ರತ್ಯಸುರ ಸಮುದ್ರಾನ್ ವಿದ್ರಾವಯ ವಿದ್ರಾವಯ ಸಂ ರೌದ್ರ ಮೂರ್ತೇ ಮಹಾಪ್ರತ್ಯಂಗಿರೆ, ಮಹಾವಿದ್ಯೆ, ಶಾಂತಿಂ ಕುರುಕುರು ಮಮ ಶತೃನಾಂ ಬಕ್ಷಯ ಬಕ್ಷಯ ಓಂ ಕ್ರಾಂ ಕ್ರೀಂ ಕೃಂ ಜಂಬೆ ಜಂಬೆ ಮೋಹೇ ಮೋಹೇ ಸ್ತಂಬೇ ಸ್ತಂಬೇ ಓಂ ಕ್ರೀಂ ಹುಂ ಪಟ್ ಸ್ವಾಹಾ ಓಂ ಕ್ರೀಂ ಈಂ ಗ್ಲಂ ಶ್ರೀಂ ಸೌಂ ಐಂ ಹುಂ ಕ್ರಿಷ್ಣವಸನೆ ಶತ ಸಹಸ್ರ ಸಿಂಹ ವಧನೆ ಅಷ್ಟಾದಶ ಬುಜೆ ಮಹಾಬಲೆ ಶತ ಪರಾಕ್ರಮ ಪೂಜಿತೇ ಅಜಿತೆ ಅಪರಾಜಿತೆ ದೇವಿಯೇ ಪ್ರತ್ಯಂಗಿರೇ ಪರಸೈನ್ಯ ಪರಕರ್ಮ ವಿದ್ವಂಸಿನಿ ಪರ ಮಂತ್ರ ಪರ ಯಂತ್ರ ಪರ ತಂತ್ರ ಉಚ್ಚಾಟಿನಿ ಪರ ವಿದ್ಯಾ ಗ್ರಾಸಕರೇ ಸರ್ವ ಭೂತ ದಮನಿ ಕ್ಷಾಂ ಗ್ಲೌಂ ಸೌಂ ಈಂ ಗ್ರೀಂ ಗ್ಲೀಂ ಗ್ಲಾಂ ಯೇಹಿ ಯೇಹಿ ಪ್ರತ್ಯಂಗಿರೇ ಚಿತ ಚಿತ್ ರೂಪೇ ಸರ್ವ ಉಪದ್ರವೇಭ್ಯಹ ಸರ್ವ ಗ್ರಹ ದೋಷೇಭ್ಯಹ ಸರ್ವ ರೋಗೋಭ್ಯಹ ಪ್ರತ್ಯಂಗಿರೇ ಮಮ ರಕ್ಷ ರಕ್ಷ ಗ್ರಾಂ ಗ್ರೀಂ ಗ್ರೂಂ ಗ್ರೈಂ ಗ್ರೌಂ ಗ್ರಃ ಕ್ಷಾಂ ಕ್ಷೀಂ ಕ್ಷೂಂ ಕ್ಷೈಂ ಕ್ಷೌಂ ಕ್ಷಃ ಗ್ಲಾಂ ಗ್ಲೀಂ ಗ್ಲೌಂ ಗ್ಲೈಂ ಗ್ಲೌಂ ಗಃ ಪ್ರತ್ಯಂಗಿರೇ ಪರ ಬ್ರಹ್ಮ ಮಹಿಷಿ ಪರಮ ಕಾರುಣಿಕೆ ಏಹಿ ಮಮ ಶರೀರೇ ಆವೇಶಯ ಆವೇಶಯ ಮಮ ಹೃದಯೇ ಸ್ಪುರ ಸ್ಪುರ ಮಮಾಂಶೇ ಪ್ರಸ್ಕುರ ಪ್ರಸ್ಕುರ ಸರ್ವ ದೋಷಾನಾಂ ವಾಚಂ ಮುಖಂ ವದಂ ಸ್ತಂಬಯ ಸ್ತಂಬಯ ಜಿಹ್ವಾಂ ಕೀಲಯ ಕೀಲಯ ಬುದ್ದಿಂ ವಿನಾಶಯ ವಿನಾಶಯ ಪ್ರತ್ಯಂಗಿರೇ ಮಹಾ ಕುಂಡಲಿನಿ ಚಂದ್ರಕಳಾವತಂಸಿನಿ ಬೇತಾಳ ವಾಹನೇ ಪ್ರತ್ಯಂಗಿರೇ ಕಪಾಲಮಾಲಾ ಧಾರಿಣಿ ತ್ರಿಶೂಲ ವಜ್ರಾಂಕುಶಬಾಣ ಬಾಣಸನ ಪಾಣಿಪಾತ್ರ ಭೂರಿತಂ ಮಮ ಶತೃ ಶ್ರೋಣಿದಂ ಮಿಬ ಮಿಬ ಮಮ ಶತೃನ್ ಮಾಂಸಂ ಕಾದಯ ಕಾದಯ ಮಮ ಶತೃನ್ ತಾಡಯ ತಾಡಯ ಮಮ ವೈರಿಜನಾನ್ ದಹ ದಹ ಮಮ ವಿಧ್ವೇಶ ಕಾರಿಣಂ ಶೀಘ್ರಮೇವ ಬಕ್ಷಯ ಬಕ್ಷಯ ಶ್ರೀ ಪ್ರತ್ಯಂಗಿರೇ ಭಕ್ತಕಾರುಣಿಕೆ ಶೀಘ್ರಮೇವ ದಯಾಂ ಕುರುಕುರು ಸತ್ಯೋಜ್ವಲ ಜಾತಯ ಮುಕ್ತಿಂ ಕುರುಕುರು ಬೇತಾಳ ಬ್ರಂಹ್ಮ ರಾಕ್ಷಸ ಶಕ್ತಿಂ ಜಗಿ ಜಗಿ ಮಮ ಶತೃನ್ ತಾಡಯ ತಾಡಯ ಪ್ರಾರಬ್ದಸಂಚಿತ ಕ್ರಿಯಾಮಾನ್ ದಹ ದಹ ತೂಶಗಾನ್ ಶಕ್ತ್ಯೋತೀರ್ಥ ರೋಗ ಯುಕ್ತಾನ್ ಕುರು ಕುರು ಪ್ರತ್ಯಂಗಿರೆ ಪ್ರಾಣಶಕ್ತಿಮಯೇ ಮಮ ವೈರಿಜನ ಪ್ರಾಣಾನ್ ಹನ ಹನ ಮರ್ಧಯ ಮರ್ಧಯ ನಾಶಯ ನಾಶಯ ಓಂ ಶ್ರೀಂ ಗ್ರೀಂ ಗ್ಲೀಂ ಸೌಂ ಗ್ಲೌಂ ಪ್ರತ್ಯಂಗಿರೆ ಮಹಾ ಮಾಯೆ ದೇವಿಯೇ ದೇವಿಯೇ ಮಮ ವಾಂಚಿತಂ ಕುರು ಕುರು ಮಾಂ ರಕ್ಷ ರಕ್ಷ ಪ್ರತ್ಯಂಗಿರೆ ಸ್ವಾಹ || ಈ ಮಂತ್ರವನ್ನು ಪ್ರತ್ಯಂಗಿರಾ ಮುದ್ರೆ ಯೊಂದಿಗೆ ನಿತ್ಯ ೨ವೇಳೆ ೧೦೮ ಸಲದಂತೆ ೨೧ ದಿನಗಳ ಕಾಲ ಜಪಿಸುವುದರಿಂದ ಮಾಟ ಮಂತ್ರ ಎಂತಹುದೇ ಆಗಲಿ ಖಚಿತವಾಗಿ ಪರಿಹಾರವಾಗುತ್ತದೆ ಶ್ರದ್ದೆ,ಭಕ್ತಿ,ನಂಬಿಕೆಯಿಂದ ಮಾಡಿದರೆ ಪರಿಹಾರ ಸಾದ್ಯವಾಗುತ್ತದೆ. ಪ್ರತ್ಯಂಗಿರಾ ದೇವಿ ದ್ಯಾನಮಂತ್ರ "ಓಂ ಕ್ಷಂ ಕ್ರಿಷ್ಣವಾಸಸೇ ಸಿಂಹವದನೇ ಮಹಾವದನೆ ಮಹಾಬೈರವಿ ಸರ್ವ ಶತೃ ವಿದ್ವಂಶಿನಿ ಪರಮಂತ್ರ ಛೇಧಿನಿ ಸರ್ವ ಭೂತ ದಮನಿ ಸರ್ವ ಭೂತಂ ಪಂಡ ಪಂಡ ಸರ್ವ ವಿಘ್ನಯಾನ್ ಚಿ೦ಧಿ ಚಿ೦ಧಿ ಸರ್ವ ವ್ಯಾಧಿ ನಿಕ್ರಿಂಧ ನಿಕ್ರಿಂಧ ಸರ್ವ ದುಷ್ಟ ಪಕ್ಷ ಪಕ್ಷ ಜ್ವಾಲ ಜಿಹ್ವೆ ಕರಾಳವಕ್ತ್ರೆ ಕರಾಳದ್ವಂಷ್ಟ್ರೆ ಪ್ರತ್ಯಂಗಿರೇ ಹ್ರೀಂ ಸ್ವಾಹಾ" ಪ್ರತ್ಯಂಗಿರಾ ಗಾಯತ್ರಿ ಮಂತ್ರ ಓಂ ಅಪರಾಜಿತಾಯ ವಿದ್ಮಹೇ ಪ್ರತ್ಯಂಗಿರಾಯ ಧೀಮಹೀ ತನ್ನೋ ಉಗ್ರ ಪ್ರಚೋದಯಾತ್ ಓಂ ಪ್ರತ್ಯಂಗಿರಾಯ ವಿದ್ಮಹೇ ಶತ್ರು ನಿಶುತಿನ್ಯಾಯ ಧೀಮಹೀ ತನ್ನೋ ದೇವಿ ಪ್ರಚೋದಯಾತ್
ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:-
ನೀವು ಹುಟ್ಟಿದ ದಿನ ಮತ್ತು ಜೀವನದ ರಹಸ್ಯ(ನ್ಯೂಮರಾಲಜಿ) ರಚಿಸಿದವರು: ವಿದ್ಯಾವಿಶಾರದ ಕೀಳಾತ್ತೂರು ಶ್ರೀನಿವಾಸಾಚಾರ್ಯ,ಪಿ.ಓ.ಎಲ್ ಶಿರೋಮಣಿ ಮತ್ತು ಹಿಂದಿ ವಿಶಾರದ ಮುನ್ನುಡಿ:-
ಜ್ಯೋತಿಷ್ಯ,ಹಸ್ತರೇಖೆ,ಸಂಖ್ಯಾ,ಈ ಮೂರು ಶಾಸ್ತ್ರಗಳು ಒಂದಕ್ಕೊಂದು ಹೆಣೆದುಕೊಂಡು ಇರುವ ಶಾಸ್ತ್ರಗಳು.ಕ್ರೈಸ್ತನಿಗಿಂತಲೂ ಪೂರ್ವದಲ್ಲಿಯೇ ಈ ಮೂರು ಶಾಸ್ತ್ರಗಳೂ ಭಾರತದಲ್ಲಿಯೂ ಗ್ರೀಸ್ ದೇಶದಲ್ಲಿಯೂ ಒಂದೇ ರೀತಿಯಾಗಿ ಅಭಿವೃದ್ದಿ ಹೊಂದುತ್ತಾ ಪ್ರಸಿದ್ದಿಗೆ ಬಂದಿತು. ಆದರೆ ಈ ಕಾಲದಲ್ಲಿ ಈ ಮೂರು ಶಾಸ್ತ್ರಗಳನ್ನು ಆಧಾರವಾಗಿಟ್ಟುಕೊಂಡು ಅತ್ಯಾಶ್ಚರ್ಯಕರವಾದ ರೀತಿಯಲ್ಲಿ ಭೂತ,ಭವಿಷ್ಯ,ವರ್ತಮಾನ ಕಾಲಗಳ ಫಲಗಳನ್ನು ತಿಳಿಸುವ ಪಂಡಿತಮಣಿಗಳು ಅಮೇರಿಕಾ,ಬ್ರಿಟನ್,ಜರ್ಮನಿ,ಜಪಾನ್ ಮೊದಲಾದ ದೇಶಗಳಲ್ಲಿ ಈಗಲೂ ಇರುವರು,ಎಂದರೆ ಅತಿಶಯೋಕ್ತಿಯಾಗಲಾರದು. ಮಾನವನ ಭವಿಷ್ಯವನ್ನು ತಿಳಿಸುವ ಈ ಮೂರು ಶಾಸ್ತ್ರಗಳ ಮಹತ್ವವು ಸಮಾನವಾಗಿಯೇ ಇದ್ದರೂ ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡಕ್ಕಿಂತಲೂ ಸಂಖ್ಯಾ ಶಾಸ್ತ್ರ(ನ್ಯೂಮರಾಲಜಿ)ದಲ್ಲಿ ಮಾತ್ರ ಒಂದು ವೈಶಿಷ್ಟ್ಯ ಇದೆ. ಜ್ಯೋತಿಷ್ಯ ಮತ್ತು ರೇಖಾಶಾಸ್ತ್ರ ಇವು ಎರಡೂ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರಾ ಆ ಬಗೆಯ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪ ಮಟ್ಟಿಗೆ ಹೆಚ್ಚು ಕಡಿಮೆ ಮಾಡಿಕೊಳ್ಳಲು ಬೇಕಾದ ಸಲಹೆಗಳನ್ನು ಕೊಡುತ್ತದೆ. ಸಂಖ್ಯಾ ಶಾಸ್ತ್ರದ ಪೂರ್ವೋತ್ತರಗಳು:- ಆಕಾಶದಲ್ಲಿ ಸಂಚರಿಸುವ ಗ್ರಹಗಳಿಗೆ ಭೂಮಿಯಲ್ಲಿ ಒಂದರಿಂದ ಒಂಬತ್ತರವರೆಗೆ ಪ್ರಚಾರದಲ್ಲಿರುವ ಸಂಖ್ಯೆಗಳೊಂದಿಗೆ ನಿಕಟ ಸಂಬಂಧವಿದೆ. ಇದನ್ನು ಗ್ರಹಿಸಿ ಪ್ರತಿಯೊಂದು ಗ್ರಹಕ್ಕೂ ಸಂಬಂದ ಸಂಖ್ಯೆಯನ್ನು ನಿರ್ಣಯಿಸಿದ್ದಾರೆ. ಇದನ್ನು ನಿರ್ಣಯಿಸಿದವರಲ್ಲಿ ಚಲ್ದಿಯಾ ಎಂಬ ದೇಶದವರು ಗ್ರೀಸ್ ದೇಶದವರು ಅಗ್ರಗಣ್ಯರೆಂದು ಹೇಳಬಹುದು. ನಂತರ ಗ್ರೀಸ್ ದೇಶದ ವೇದಾಂತಿಯಾದ ಪೈಥಾಗರಸ್ ಎಂಬುವರು ಈ ಸಂಖ್ಯಾಶಾಸ್ತ್ರವನ್ನು ಅಭಿವೃದ್ದಿಗೆ ತಂದದ್ದು ಅಲ್ಲದೆ ನಿಯಮಬದ್ದವನ್ನಾಗಿ ಮಾಡಿ ಮಾನವನ ನಿತ್ಯಜೀವನಕ್ಕೆ ಉಪಯೋಗವಾಗುವಂತೆ ಈ ಶಾಸ್ತ್ರವನ್ನು ಪ್ರಚಾರಮಾಡಿಕೊಂಡು ಬಂದರು. ಆಮೇಲೆ ಹಲವು ಪಾಶ್ಚಾತ್ಯ ಪಂಡಿತರು ವಿಶೇಷವಾಗಿ ಚಿರೋ ರಂತಹ ವಿದ್ವಾಂಸರು ಈ ಶಾಸ್ತ್ರವನ್ನು ಯೋಗ್ಯರೀತಿಯಲ್ಲಿ ಉಪಯೋಗಿಸುತ್ತಾ ಪ್ರಚಾರಕ್ಕೆ ತಂದರು. ಸಂಖ್ಯೆಗಳೇ ಜಗತ್ತು:- ಸಂಖ್ಯೆಗಳಿಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯಲು ಸಾದ್ಯವಿಲ್ಲ. ಅಂದರೆ ಲೋಕದ ವ್ಯವಹಾರಕ್ಕೆ ಸಂಖ್ಯೆಗಳೇ ಆಧಾರವೆಂದು ಅರ್ಥ ಸಂಖ್ಯೆಗಳು ಎಲ್ಲಕ್ಕೂ ಹೇಗೆ ಆಧಾರವಾಗಿವೆ ಎಂಬುದನ್ನು ಕೆಲವು ಉದಾಹರಣೆಯೊಂದಿಗೆ ತಿಳಿಯೋಣ:- (೧)ಎಲ್ಲಾ ಕಾಲಗಳಲ್ಲಿಯೂ ಲೋಕದ ಸೃಷ್ಟಿ,ಸ್ಥಿತಿ,ಲಯಗಳನ್ನು ತಿಳಿಯುವುದು ಸಂಖ್ಯೆಗಳ ಮೂಲಕವೇ ತಾನೆ?ಕೃತಯುಗ,ತ್ರೇತಾಯುಗ,ದ್ವಾಪರಯುಗ,ಕಲಿಯುಗ ಎಂಬುದಾಗಿ ಕಾಲವನ್ನು ನಾಲ್ಕುಭಾಗಗಳಾಗಿ ವಿಭಾಗಿಸಿ,ಒಂದೊಂದು ಯುಗಗಳಿಗೂ ಕ್ಲಿಪವಾದ ವರ್ಷಗಳನ್ನು ನಿಯಮಿಸಿ,ಒಂದು ಯುಗವು ಕಳೆದುಹೋದನಂತರ ಮತ್ತೊಂದು ಯುಗವು ಆರಂಭವಾಗುವುದೆಂದು ಕೊನೆಗೆ ಪ್ರಳಯ ಎಂದೂ ಲೆಕ್ಕಮಾಡಿ ನಿಷ್ಕರ್ಷಿಸಿರುವುದು ಸಂಖ್ಯೆಗಳ ಸಹಾಯದಿಂದಲೇ ಅಲ್ಲವೇ?. (೨)ಮನುಷ್ಯನ ಪರಮ ಆಯಸ್ಸು ನೂರು ವರ್ಷವೆಂದು ಲೆಕ್ಕಹಾಕುವುದು ಸಂಖ್ಯೆಯೇ.ಮನುಷ್ಯನ ಶ್ವಾಸೋಚ್ವಾಸದ ಗಾಳಿಯ ಮೂಲಕ ಅವನ ಆಯಸ್ಸನ್ನು ನಿರ್ಣಯಿಸಿರುವುದೆಂಬುದು ಪರಮಾಶ್ಚರ್ಯಕರವಾದ ವಿಷಯ. (೩)ಒಬ್ಬರ ತಿಂಗಳ ಸಂಬಳ ಇಂತಿಷ್ಟೆಂದು ಲೆಕ್ಕಹಾಕಿ ಕೊಡುವುದು ಸಂಖ್ಯೆಗಳ ಮೂಲಕ. (೪)ಅಂಗಡಿಗಳಲ್ಲಿ ಸಾಮಾನುಗಳನ್ನು ಕೊಂಡುಕೊಳ್ಳುವಾಗಲೂಸಹ ಇಷ್ಟು ಸಾಮಾನುಗಳು ಬಂದವು ಎಂದು ಲೆಕ್ಕಮಾಡಿ ನೋಡಿದರೇನೇ ಮನಸ್ಸಿಗೆ ಸಮಾದಾನವಾಗುವುದು. (೫)ಕಾಲವನ್ನು ಕ್ಷಣ,ಗಳಿಗೆ,ಗಂಟೆ,ದಿನ,ತಿಂಗಳು,ವರ್ಷಎಂಬರೀತಿಯಾಗಿ ಅದಕ್ಕೆ ಬೇಕಾದ ಸಂಖ್ಯೆಯಿಂದ ಎಣಿಸಿಯೇ ತೀರ್ಮಾನಿಸುತ್ತೇವೆ. (೬)ಬಟ್ಟೆ ಬರೆ ನೆಲ-ಹೊಲಗಳನ್ನು ಇಷ್ಟು ಮೀಟರ್,ಸೆಂಟೀಮೀಟರ್ ಎಂಬ ಲೆಕ್ಕದೊಂದಿಗೆ ಅಳೆಯುತ್ತೇವೆ. (೭)ದವಸ ದಾನ್ಯಗಳನ್ನು ಒಂದು ಗ್ರಾಂ ನಿಂದ ಹಲವು ಕಿಲೋ ತೂಕದಲ್ಲಿ ಅಳೆಯುತ್ತೇವೆ. ಈ ಪ್ರಕಾರ ಎಷ್ಟೋ ವಿಷಯಗಳನ್ನು ಹೇಳಿಕೋಡೇ ಹೋಗಬಹುದು. ಪ್ರಾತಃಕಾಲ ಹಾಸಿಗೆ ಬಿಟ್ಟು ಏಳುವುದರಿಂದ ಆರಂಬಿಸಿ ರಾತ್ರಿ ಮಲಗುವವರೆಗೂ ಪ್ರಪಂಚದ ವ್ಯವಹಾರಗಳು ನಡೆಯುತ್ತಲೇ ಇರುವುದು ಸಂಖ್ಯೆಗಳನ್ನು ಅನುಸರಿಸಿಯೇ ಮುಂದುವರಿಯುತ್ತದೆ. ಆದುದರಿಂದ ಸಂಖ್ಯೆಯೇ ಜಗತ್ತು ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ಒಂದರಿಂದ ಒಂಬತ್ತರ ವರೆಗೆ:- ಒಂದರಿಂದ ಕೋಟಿ ವರೆಗಿನ ಸಂಖ್ಯೆಗಳಾದರೂ ಅವುಗಳು ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳೊಳಗೆ ಅಡಗಿಬಿಡುವುದು. ಅಂದರೆ,ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳನ್ನು ಒಂದರ ಪಕ್ಕದಲ್ಲಿ ಇನ್ನೋಂದನ್ನು ಬರೆಯುವುದರಿಂದಲೇ ಲೋಕದಲ್ಲಿರುವ ಸಂಖ್ಯೆಗಳು ಎಲ್ಲವೂ ತಿಳಿದುಬರುವುದು. ಉದಾ:-೮೫೨೯೬೩೪೧೭ ಮೇಲೆಕೊಟ್ಟ ದೊಡ್ಡಲೆಕ್ಕದಲ್ಲಿ ಒಂಬತ್ತರ ಒಳಗೇ ಇರುವ ಸಂಖ್ಯೆಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದನ್ನು ಬರೆದುದು ಕಂಡುಬರುತ್ತದೆ ಆದುದರಿಂದಲೇ ಇಷ್ಟು ದೊಡ್ಡಲೆಕ್ಕವೂ ೯ ರ ಅಂತರ್ಗತವಾಗಿರುವ ಸಂಖ್ಯೆಯನ್ನೇ ಸ್ಥಾನ ಭೇದದಿಂದ ಉಪಯೋಗಿಸಿರುವುದೆಂಬುದನ್ನು ಸುಲಬವಾಗಿ ತಿಳಿದುಕೊಳ್ಳಬಹುದು. ಸೊನ್ನೆ ಮತ್ತು ಅದರ ಸ್ಥಾನ:- ಸೊನ್ನೆಗೆ ಸ್ವತಃ ಸ್ಥಾನ-ಮಾನಗಳಿಲ್ಲ. ಅಂದರೆ,ಬೇರೊಂದು ಸಂಖ್ಯೆಯೊಂದಿಗೆ ಸೇರಿದಾಗಲೇ ಸೊನ್ನೆಗೆ ಬೆಲೆ ಇರುವುದು.ಹಾಗೆ ಸಂಖ್ಯೆಯೊಂದಿಗೆ ಸೇರಿದಾಗಲೂ ಒಂದು ಸಂಖ್ಯೆಯನ್ನು ಅದರ ಪಕ್ಕದಲ್ಲಿ ಬರುವ ಸೊನ್ನೆಗೆ ಸ್ಥಾನ ಇರುವುದು. ಉದಾ:- ೦-ಇದಕ್ಕೆ ಬೆಲೆ ಇಲ್ಲ. ೦೧-ಈ ಸೊನ್ನೆಗೂ ಬೆಲೆ ಇಲ್ಲ. ೧೦-ಇದಕ್ಕೆ ಬೆಲೆ ಇದೆ. ಅಂದರೆ,ಒಂದರಿಂದ ಒಂಬತ್ತರ ವರೆಗಿನ ಸಂಖ್ಯೆಗಳ ನಂತರ ಬರುವ ಸೊನ್ನೆಗೆ ಮಾತ್ರವೇ ಬೆಲೆ ಇರುವುದು. ಆದರೆ ಸಂಖ್ಯಾಶಾಸ್ತ್ರದಲ್ಲಿ ಸೊನ್ನೆಯನ್ನು ತೆಗೆದುಕೊಂಡು ಇತ್ಯರ್ಥ ಮಾಡಬೇಕಾದ ಸ್ಥಾನ ಮಾನಗಳಿಲ್ಲವೆಂದು ತೀರ್ಮಾನಿಸೋಣ. ಜ್ಯೋತಿಷ್ಯವೂ ಸಂಖ್ಯೆಗಳೂ:- ಒಂದರಿಂದ ಒಂಬತ್ತರವರೆಗಿನ ಒಂಬತ್ತು ಸಂಖ್ಯೆಗಳನ್ನು ಮಾತ್ರ(ಅಂದರೆ ಆಧಾರ ಸಂಖ್ಯೆಗಳು ಮಾತ್ರ) ಈ ಶಾಸ್ತ್ರದಲ್ಲಿ ತೆಗೆದುಕೊಂಡಿರುವುದಕ್ಕೆ ಕಾರಣವು ಇಲ್ಲದಿಲ್ಲ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದೊಂದಿಗೆ ಸಂಬಂದವಿದೆ ಎಂಬುದನ್ನು ಮೊದಲೇ ಸೂಚಿಸಿದ್ದೇವೆ. ೧೨ರಾಶಿಗಳು,೯ಗ್ರಹಗಳು,೨೭ನಕ್ಷತ್ರಗಳು-ಈ ಮೂರನ್ನೂ ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯಶಾಸ್ತ್ರವು ಮುಂದುವರಿಯುತ್ತದೆ. ಇದರಲ್ಲಿರುವ ವಿಚಿತ್ರವನ್ನು ನೋಡಿರಿ:- ೧೨ರಾಶಿಗಳಲ್ಲಿ ೨೭ ನಕ್ಷತ್ರಗಳಿವೆ.ಅಂದರೆ ಒಂದೊಂದು ರಾಶಿಗೂ ಸರಾಸರಿ೨ ೧/೪ನಕ್ಷತ್ರಗಳು. ಒಂದೊಂದು ನಕ್ಷತ್ರಕ್ಕೂ ೪ಪಾದಗಳು,೨ ೧/೪ನಕ್ಷತ್ರಗಳಿಗೆ ೯ಪಾದಗಳು.ಅಂದರೆ,ಒಂದೊಂದು ರಾಶಿಯಲ್ಲಿಯೂ೯ಪಾದಗಳು ಇವೆ. ೧೨ರಾಶಿಗಳಿಗೆ ಒಟ್ಟು ೧೦೮ಪಾದಗಳು. ಅಂದರೆ,೨೭ ನಕ್ಷತ್ರ ಎಂದರೆ ೨+೭=೯ ೧೦೮ಪಾದಗಳು ಎಂದರೆ ೧+೦+೮=೯ ಡಿಗ್ರಿ ಎಂಬ ಲೆಕ್ಕವನ್ನು ತೆಗೆದುಕೊಂಡರೂ ರಾಶಿಗೆ ೩೦ಡಿಗ್ರಿಗಳಂತೆ ೧೨ರಾಶಿಗಳಿಗೆ ೩೬೦ಡಿಗ್ರಿಗಳು.ಹೀಗೆ ಇವುಗಳ ಆಕಾರ ಲೆಕ್ಕ ೩+೬+೦=೯.ಈ ಡಿಗ್ರಿಗಳನ್ನು ಕಲೆ(ಮಿನಿಟ್ಟು)ಗಳಾಗಿ ಪರಿವರ್ತಿಸಿದರೆ೩೬೦*೬೦=೨೧೬೦೦ಅಂದರೆ ೨+೧+೬+೦+೦=೯ ಮಾತ್ರವೇ ಬರುತ್ತದೆ. ಆದುದರಿಂದಲೇ ಒಂಬತ್ತು ಗ್ರಹಗಳನ್ನೂ ೧೨ರಾಶಿಗಳನ್ನೂ ೨೭ನಕ್ಷತ್ರಗಳನ್ನೂ ಆಧಾರವಾಗಿಟ್ಟುಕೊಂಡು ಜ್ಯೋತಿಷ್ಯಶಾಸ್ತ್ರದಲ್ಲಿಯೂ ಸಂಖ್ಯೆಗಳಲ್ಲಿ ಪ್ರಧಾನಗಿರುವುದೂ ಉತ್ತಮವಾಗಿರುವುದೂ ೯ರ ಸಂಖ್ಯೆ ಎಂದೇ ತಿಳಿದು ಬರುತ್ತದೆ. ಇದರಿಂದ ಜ್ಯೋತಿಷ್ಯಕ್ಕೂ ಸಂಖ್ಯೆಗಳಿಗೂ ಇರುವ ಸಂಬಂಧವು ಚೆನ್ನಾಗಿ ಅರ್ಥವಾಗುತ್ತದೆ. ಆಧಾರ ಸಂಖ್ಯೆಗಳೂ- ವಿಸ್ತಾರ ಸಂಖ್ಯೆಗಳೂ ಸಂಖ್ಯೆಗಳನ್ನು ಆಧಾರ ಸಂಖ್ಯೆ ಮತ್ತು ವಿಸ್ತಾರ ಸಂಖ್ಯೆಗಳೆಂದು ಎರಡು ಬಗೆಯಾಗಿ ವಿಂಗಡಿಸಬಹುದು. ಆಧಾರ ಸಂಖ್ಯೆಗಳು:೧ರಿಂದ ೯ರವರೆಗಿನ ೯ಸಂಖ್ಯೆಗಳು ಆಧಾರ ಸಂಖ್ಯೆಗಳು.ಈ ಸಂಖ್ಯೆಗಳು ಹಿಂದೆ ಮುಂದೆ ಬಂದು ಕೂತರೇನೇ ಇತರ ಸಂಖ್ಯೆಗಳು ರೂಪಾಂತರವನ್ನು ಹೊಂದುತ್ತವೆ. ಅಲ್ಲದೆ ಅಷ್ಟು ಸಂಖ್ಯೆಗಳನ್ನೂ ಸೇರಿಸಿ ಕೂಡಿಸಿದರೂ ಒಂಬತ್ತರ ಒಳಗೇ ಅಡಗಿಬಿಡುತ್ತದೆ. ವಿಸ್ತಾರ ಸಂಖ್ಯೆಗಳು:೧೦ರಿಂದ ಹಿಡಿದು ಕೋಟಿವರೆಗಿನ ಸಂಖ್ಯೆಗಳು ಎಲ್ಲವೂ ವಿಸ್ತಾರ ಸಂಖ್ಯೆಗಳು.ಅಂದರೆ,ಒಂದರಿಂದ ಒಂಬತ್ತರವರೆಗಿನ ಸಂಖ್ಯೆಗಳನ್ನು ಪಕ್ಕದಲ್ಲಿಯೇ ಬರೆದುಕೊಂಡು ಹೋದರೆ ಈ ಸಂಖ್ಯೆಗಳು ವಿಸ್ತಾರವನ್ನೂ ಅರ್ಥಾತ್ ವ್ಯಾಪಕತ್ವವನ್ನೂ ಹೊಂದುತ್ತವೆ.ಆದುದರಿಂದ ಇವುಗಳನ್ನು ವಿಸ್ತಾರ ಸಂಖ್ಯೆಗಳು ಎನ್ನುತ್ತಾರೆ. ಉದಾ:- ೧,೨,೩,೪,೫,೬,೭,೮,೯-ಇವು ಆಧಾರ ಸಂಖ್ಯೆಗಳು. ೧೦ರಿಂದ ಕೋಟಿವರೆಗಿರುವ ಸಂಖ್ಯೆಗಳು ಎಲ್ಲವೂ ವಿಸ್ತಾರಸಂಖ್ಯೆಗಳು. ನ್ಯೂಮರಾಲಜಿ ಎಂಬ ಸಂಖ್ಯಾ ಶಾಸ್ತ್ರಕ್ಕೆ ವಿಸ್ತಾರ ಸಂಖ್ಯೆಗಳ ಅವಶ್ಯಕತೆಯೇ ಇಲ್ಲ. ಅದಕ್ಕೆ ಆಧಾರ ಸಂಖ್ಯೆಯೇ ಬೇಕಾಗಿರುವುದು. ಅದು ಎಷ್ಟು ದೊಡ್ದ ಸಂಖ್ಯೆಯಾಗಿದ್ದರೂ ಅದನ್ನು ಆಧಾರ ಸಂಖ್ಯೆಗೆ ಬದಲಾಯಿಸಿಕೊಳ್ಳಬೇಕು. ಉದಾ:- ಒಂದು ವಿಸ್ತಾರ ಸಂಖ್ಯೆ ೨೧೨೧೯೭೦ಆಗಿದ್ದರೆ ಇದನ್ನು ೨+೧+೨+೧+೯+೭+೦=೨೨=೨+೨=೪ ಹೀಗೆ ಇದನ್ನು ನಾಲ್ಕು ಎಂಬ ಆಧಾರ ಸಂಖ್ಯೆಯನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಇದೇ ರೀತಿಯಾಗಿ ಒಬ್ಬರ ಜನ್ಮದಿನ,ತಿಂಗಳು,ವರ್ಷ,ಈ ಮೂರನ್ನೊ ಸೇರಿಸಿ ಆಧಾರ ಸಂಖ್ಯೆಯನ್ನಾಗಿ ಮಾರ್ಪಡಿಸಿಕೊಂಡನಂತರವೇ ಅವರ ಭವಿಷ್ಯ ಫಲವನ್ನು ಹೇಳಬೇಕು. ಮೂರುವಿಧವಾದ ಆಧಾರ ಸಂಖ್ಯೆಗಳು:- ಈ ಶಾಸ್ತ್ರದಲ್ಲಿ ಮೂರುವಿಧವಾದ ಆಧಾರ ಸಂಖ್ಯೆಗಳನ್ನು ಇಟ್ಟುಕೊಂಡು ಫಲಗಳನ್ನು ಹೇಳಿರುತ್ತಾರೆ:- ೧) ಹುಟ್ಟಿದ ದಿನಾಂಕ(ಇಂಗ್ಲೀಷ್ ತಾರೀಖು) ೨)ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಒಟ್ಟು ಸಂಖ್ಯೆ. ೩)ಒಬ್ಬರ ಹೆಸರಿನಲ್ಲಿರುವ ಅಕ್ಷರಗಳನ್ನು ಕೂಡಿಸಿದರೆ ಬರುವ ಸಮಷ್ಟಿ ಸಂಖ್ಯೆ. (ಸೂಚನೆ: ಈ ಸಮಷ್ಟಿ ಸಂಖ್ಯೆಯು ದೊಡ್ಡದಾಗಿದ್ದರೆ ಅದನ್ನು ಆಧಾರ ಸಂಖ್ಯೆಯನ್ನಾಗಿ ಬದಲಾಯಿಸಿಕೊಳ್ಳಬೇಕು.) ಉದಾ:- ಒಬ್ಬರು ಹುಟ್ಟಿದ ದಿನಾಂಕ ೨-೫-೧೯೬೯. ಇವರ ಹೆಸರು ಕಾಮಯ್ಯ(ಇಂಗ್ಲೀಷ್) ಇವರ- ೧)ದಿನಾಂಕ ಸಂಖ್ಯೆ-೨ ೨)ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆ ೨+೫+೧+೯+೬+೯=೩೨=೩+೨=೫ ೩) ಹೆಸರಿನ ಸಂಖ್ಯೆ:ಕಾಮಯ್ಯ(ಇಂಗ್ಲೀಷ್) ೨+೧+೪+೧+೧+೫=೧೪=೧+೪=೫ ಮೇಲೆ ಹೇಳಿದ ಪ್ರಕಾರ ಮೂರು ವಿಧವಾದ ಸಂಖ್ಯೆಗಳನ್ನು ಇಟ್ಟುಕೊಂಡು ಈ ಶಾಸ್ತ್ರ ರೀತ್ಯಾ ಫಲಗಳನ್ನು ಹೇಳಬೇಕು. ಆದರೆ ಮನುಷ್ಯನ ಭವಿಷ್ಯವನ್ನು ಹೇಳುವುದಕ್ಕೆ ಹುಟ್ಟಿದ ದಿನಾಂಕ ಮಾತ್ರವೇ ಸಾಕೆಂದು ಸಂಖ್ಯಾಶಾಸ್ತ್ರ ನಿಪುಣರು ನಿರ್ಣಯಿಸಿದ್ದಾರೆ. ಆದುದರಿಂದ ಈ ಗ್ರಂಥದಲ್ಲಿ ಪ್ರತಿಯೊಬ್ಬರ ಹುಟ್ಟಿದ ದಿನಾಂಕವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಫಲವನ್ನು ಬರೆಯಲ್ಪಟ್ಟಿದೆ. ಈ ರೀತಿ ಕೊಟ್ಟಿರುವ ಫಲಗಳಲ್ಲಿ ಏನಾದರೂ ಹೆಚ್ಚು ಕಡಿಮೆ ಕಾಣಬಂದರೆ ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಆಧಾರ ಸಂಖ್ಯೆಗಳ ಮೂಲಕ ಬರಬಹುದಾದ ಫಲಗಳನ್ನು ಸೇರಿಸಿ ಹೊಂದಿಸಿಕೊಂಡು ನೋಡಿದರೆ ಸರಿ ಹೋಗುವುದು. ನಾಮದ ಸಂಖ್ಯೆ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಹೆಸರು ಇದೆ. ಆ ಹೆಸರು ಏತಕ್ಕಾಗಿ ಇಡಬೇಕೆಂದು ನಮಗೆ ತಿಳಿಯದು. ಅದು ದೈವಾದೀನವಾಗಿಯೂ ಕರ್ಮಧೀನವಾಗಿಯೂ ಬಂದ ಹೆಸರು.ಆದುದರಿಂದ ಆ ಹೆಸರಿನ ಅಕ್ಷರಗಳಿಗೆ ಇರುವ ಒಟ್ಟು ಸಂಖ್ಯೆಯ ಆಧಾರ ದಿಂದ ಫಲವನ್ನು ಹೇಳಲಾಗುತ್ತದೆ. ಅಲ್ಲದೆ ಹೆಸರಿನಲ್ಲಿರುವ ಅಕ್ಷರಗಳನ್ನು ಆಂಗ್ಲ ಭಾಷೆಯ ಅಕ್ಷರಗಳನ್ನಾಗಿ ಇಟ್ಟುಕೊಳ್ಳಬೇಕು. ಆಗ ಮಾತ್ರ ಈ ಕಾಲದ ಶಾಸ್ತ್ರ ಪ್ರಮಾಣದಿಂದ ಫಲವನ್ನು ಹೇಳಲು ಸಾಧ್ಯವಾಗುವುದು. ಉದಾ: ಒಬ್ಬರ ಹೆಸರು ಕೆ ರಾಮಯ್ಯ,ಇದು ಆಂಗ್ಲ ಭಾಷೆಯಲ್ಲಿ ಕೆ.ರಾಮಯ್ಯ ಎಂದು ಬರೆಯ ಬಹುದು.ಇದೇ ರೀತಿ ಇವರು ಹಸ್ತಾಕ್ಷರವನ್ನು(ಸಹಿ)ಹಾಕುತ್ತಾರೆ.ಆದುದರಿಂದಲೇ ಈ ಹೆಸರಿನಲ್ಲಿ ಇರತಕ್ಕ ಅಕ್ಷರಗಳಿಗೆ ಆಧಾರ ಸಂಖ್ಯೆಗಳು ಇವೆ. ಆ ಸಂಖ್ಯೆಗಳನ್ನು ಕೆಳಗಿನ ಕೋಷ್ಟಕದಲ್ಲಿ ಕಾಣಬಹುದು. ಈ ಪಟ್ಟಿಗನುಸಾರವಾಗಿ ಕೆ.ರಾಮಯ್ಯ ಎಂಬ ಹೆಸರಿಗೆ ಕೆಳಗೆ ಕಾಣಿಸಿದಂತೆ ಸಮಷ್ಟಿ ಸಂಖ್ಯೆಯನ್ನು ಕಂಡು ಹಿಡಿಯಬೇಕು. ಆರ್.ಕಾ ಮ ಯ್ಯ( R. K A M A I A H ) ೨.೨.೧.೪.೧.೧.೧.೫=೧೭=೧+೭=೮ ಅಂದರೆ ಈ ಹೆಸರಿನ ಸಮಷ್ಟಿ ಸಂಖ್ಯೆ ೮. ಇದೇ ಇವರ ಹೆಸರಿನ ಸಂಖ್ಯೆ.ಆದುದರಿಂದಲೇ(೧)ಜನ್ಮ ದಿನಾಂಕ ಸಂಖ್ಯೆ(೨)ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿಸಂಖ್ಯೆ(೩)ಹೆಸರಿನ ಸಂಖ್ಯೆ-ಈ ಮೂರು ಸಂಖ್ಯೆಗಳೂ ಸಂಖ್ಯಾ ಶಾಸ್ತ್ರ ರೀತಿಯಾಗಿ ಜೀವನದ ಫಲವನ್ನು ಹೇಳುವಾಗ ಸಹಾಯವಾಗುತ್ತದೆ.ಈ ಮೂರು ಸಂಖ್ಯೆಗಳು ಒಂದೇ ವಿಧವಾಗಿಯೂ ಅನುಕೂಲ ಸಂಖ್ಯೆಗಳಾಗಿಯೋ ಇದ್ದರೆ ಅವರಿಗೆ ಒಳ್ಳೆಯದು, ಕೆಟ್ಟದ್ದು ಆಗುವ ಕಾಲವನ್ನು ಸರಿಯಾಗಿ ನಿರ್ಣಯಿಸಿ ಹೇಳಲು ಅನುಕೂಲವಾಗುವುದು. ಆದುದರಿಂದ ಈ ಶಾಸ್ತ್ರವನ್ನು ಬಲ್ಲವರು ಒಬ್ಬರ ಹುಟ್ಟಿದ ದಿನಾಂಕವನ್ನು ಇಟ್ಟುಕೊಂಡು ಸ್ವಬಾವ,ಗುಣ,ನಡತೆ ಮೊದಲಾದವುಗಳನ್ನು ತಿಳಿದುಕೊಳ್ಳಬೇಕು.ಹುಟ್ಟಿದ ದಿನಾಂಕ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆಯನ್ನು ಇಟ್ಟುಕೊಂಡು ಅದೃಷ್ಟ,ಯೋಗಗಳನ್ನು ತಿಳಿದುಕೊಳ್ಳಬೇಕು.ಹೆಸರಿನ ಸಂಖ್ಯೆಗಳ ಮೂಲಕ ಮೇಲೆ ಹೇಳಿದ ಫಲಗಳು ಉತ್ತಮವಾಗಿ ಕೂಡಿಬರುವುದೆಂದು ತಿಳಿಯಬೇಕು. ಇನ್ನೂ ಹುಟ್ಟಿದ ದಿನಾಂಕ ಸಂಖ್ಯೆ,ಹುಟ್ಟಿದ ದಿನ,ತಿಂಗಳು,ವರ್ಷ ಇವುಗಳ ಸಮಷ್ಟಿ ಸಂಖ್ಯೆ,ಹೆಸರಿನ ಸಂಖ್ಯೆ ಈ ಮೂರಕ್ಕೂ ಸಮಾನತೆ(ಹೊಂದಾಣಿಕೆ)ಯನ್ನು ತರಬೇಕು.ಆದರೆ ಹುಟ್ಟಿದ ದಿನಾಂಕವನ್ನಾಗಲೀ ಇವುಗಳ ಸಮಷ್ಟಿ ಸಂಖ್ಯೆಯನ್ನಾಗಲೀ ಬದಲಾಯಿಸಬಾರದು. ಆದುದರಿಂದ ಹೆಸರಿನಲ್ಲಿರುವ ಸಮಷ್ಟಿ ಸಂಖ್ಯೆಯನ್ನು ಬದಲಾಯಿಸಲು ಸಾಧ್ಯವಿದೆ.ಅದು ಹೇಗೆಂದರೆ,ಮೇಲೆ ಉದಾಹರಿಸಿದ: ಆರ್ ಕಾಮಯ್ಯ( R. K A M A I A H ) ಎಂಬ ಹೆಸರಿನಲ್ಲಿ ಒಂದು ಅಕ್ಷರವನ್ನು ಕಡಿಮೆಮಾಡಿಯೋ ಅಥವ ಸೇರಿಸಿಯೋ ಬದಲಾಯಿಸಿದರೆ ಆ ಹೆಸರಿನ ಸಂಖ್ಯೆಯು ಬದಲಾಗುವುದು.ಉದಾ: ಮೇಲೆ ಕೊಟ್ಟಿರುವ ಹೆಸರಿನಲ್ಲಿ ಎಂ ಎಂಬ ಅಕ್ಷರದ ನಂತರ ಇರುವ ಎ- ಯನ್ನು ಕಡಿಮೆ ಮಾಡಿದರೆ ಹೆಸರಿನ ಸಂಖ್ಯೆ ೭ ಬರುವುದು. R K A M A Y Y A ಎಂದು ಬದಲಾಯಿಸಿದರೆ ೨೨೧೪೧೧೧೧=೪ ಬರುವುದು. ಇದೇ ರೀತಿಯಾಗಿ ತಮ್ಮ ಹೆಸರಿನಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳಬಹುದು. ವಿವಾಹ ಘಟನೆ ವಿವಾಹವು ಆಗಬೇಕಾಗಿರುವ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿವಾಹ ಯೋಗ್ಯವಾದ ಘಟನೆಗಳನ್ನು ನೋಡುವ ಕ್ರಮವೂ ಈ ಶಾಸ್ತ್ರದಲ್ಲಿ ಹೇಳಿದೆ. ಈ ಘಟನೆಗಳನ್ನು ಅವರವರು ಹುಟ್ಟಿದ ದಿನಾಂಕ,ತಿಂಗಳು,ವರ್ಷ,ಇವುಗಳ ಸಮಷ್ಟಿ ಸಂಖ್ಯೆಯನ್ನು ತಗೆದುಕೊಂಡೇ ನೋಡಬೇಕು ಎಂದು ಶಾಸ್ತ್ರಜ್ಞರು ತೀರ್ಮಾನಿಸಿರುವ ಪ್ರಕಾರ ಇದರಲ್ಲಿ ಹೇಳಿದೆ.ಈ ಘಟನೆಗಳನ್ನು ಮದುವೆಯಾಗಲಿರುವ ಮಕ್ಕಳಿಗೆ ಮಾತ್ರವಲ್ಲದೆ,ವ್ಯಾಪಾರ ವ್ಯವಹಾರಗಳು ಮತ್ತು ಇತರ ಕಾರ್ಯ ಕಲಾಪಗಳಲ್ಲಿಯೂ ಪಾಲುದಾರರು(.......)ಸಾವುಕಾರರು-ಸೇವಕರು ಮೊದಲಾದವರಿಗೂ ಅನ್ವಯಿಸಿಕೊಳ್ಳಬಹುದು. ಈ ರೀತಿ ಪಾಲುಗಾರರಾಗುವವರು ಈ ಶಾಸ್ತ್ರದಲ್ಲಿ ಪ್ರತ್ಯೇಕವಾಗಿ ನಿರೂಪಿಸಿದ ಪ್ರಕಾರ ಅವರುಗಳು ಹುಟ್ಟಿದ ದಿನಾಂಕಗಳನ್ನು ಮೊದಲೇ ತಿಳಿದುಕೊಂಡು ಅವರ ಸ್ವಭಾವದೊಂದಿಗೆ ತಮ್ಮ ಸ್ವಭಾವವನ್ನು ಹೊಂದಿಸಿ ನಿರ್ಣಯಿಸುವುದಕ್ಕೆ ಈ ಭಾಗವು ಸಹಕಾರಿಯಾಗುತ್ತದೆ. ಗ್ರಹ ಪ್ರೀತಿ ಈ ರೀತಿ ಸಂಖ್ಯೆಗಳುಳ್ಳ ಒಬ್ಬೊಬ್ಬರೂ ತಮಗೆ ಅನುಕೂಲರಾಗಿರುವ ಗ್ರಹಗಳು ಇನ್ನೂ ಹೆಚ್ಚು ಸುಖವನ್ನು ಅನುಗ್ರಹಿಸುವಂತೆ ಮತ್ತು ಪ್ರತಿಕೂಲವಾಗಿರುವ(ಅಶುಭವಾಗಿರುವಾಗ)ಗ್ರಹಗಳ ಶಾಂತಿಯೂ ಪ್ರತಿ ದಿನವೂ ದೇವರ ಪ್ರಾರ್ಥನೆ,ಪೂಜೆ,ವ್ರತ ಮೊದಲಾದವನ್ನು ಮಾಡಬೇಕಾದ ಕ್ರಮಗಳನ್ನು ಆಯಾಯ ಸಂಖ್ಯೆಗಳಿಗಿರುವ ಫಲಗಳನ್ನು ಜೊತೆಗೆ ಕೊಡಲಾಗಿದೆ ಅವುಗಳನ್ನು ನಿಷ್ಟೆಯಿಂದ ಮಾಡುವುದು ಅತಿ ಅವಶ್ಯಕವೆಂದು ಆಸ್ತಿಕ ಮಹಾಜನರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿ ಒಬ್ಬರೂ ತಾನು ಮಾಡಿದ ಅಥವ ಮಾಡಲಿರುವ ಪುಣ್ಯ-ಪಾಪ ಕರ್ಮಗಳ ಫಲವನ್ನು ಅನುಭವಿಸಿಯೇ ತೀರಬೇಕು.ಗಿಡನೆಟ್ಟರೆ ಅದು ಬೆಳದು ಮರವಾಗಿ ಫಲವನ್ನು ಕೊಡುವುದು. ಅದೇ ರೀತಿ ನಾವು ಮಾಡಿದ ಕರ್ಮಕ್ಕೆ ತಕ್ಕ ಫಲವು ಇದ್ದೇ ಇರುತ್ತದೆ.ಇದನ್ನು ಪ್ರಕೃತಿಯ ನಿಯಮವೆಂದೂ ದೈವ ಸಂಕಲ್ಪವೆಂದೂ ಹೇಳಬಹುದು. ಯಾವುದು ಹೇಗಿದ್ದರೂ ಮಾಡಿದ ಕೃತ್ಯಕ್ಕೆ ಫಲವನ್ನು ಅನುಭವಿಸ್ಯೇ ತೀರಬೇಕು."ಅವಶ್ಯಮನು ಭೋಕ್ತವ್ಯಂ ಕೃತಂ ಕರ್ಮ ಶುಭಾ ಶುಭಂ" ಎಂದು ಗೀತಾಚಾರ್ಯರು ಹೇಳಿಲ್ಲವೆ.? ಈ ಕರ್ಮಕ್ಕೆ ತಕ್ಕ ಫಲವನ್ನು ಕೊಡುವವನು ಪರಮಾತ್ಮನು.ಪ್ರಪಂಚದಲ್ಲಿ ಹುಟ್ಟಿಬೆಳೆದು ವಾಸಿಸುವ ನಮ್ಮೊಡನೆ ಆಕರ್ಷಣ ಶಕ್ತಿಯ ಮೂಲಕ ಸಂಬಂಧವನ್ನು ಇಟ್ಟುಕೊಂಡಿರುವ ಗ್ರಹಗಳು ಪರಮಾತ್ಮನ ಪ್ರತಿನಿಧಿಯಾಗಿ ನಮಗೆ ಕರ್ಮಕ್ಕೆ ತಕ್ಕ ಫಲವನ್ನು ಕೊಡುತ್ತಿರುತ್ತವೆ. ಅಲ್ಲದೆ ಶಾಸ್ತ್ರಗಳ ಮೂಲಕ ಆ ರೀತಿಯಾದ ಶುಭಾ ಶುಭ ಫಲಗಳನ್ನು ವಿವರಿಸಿ ನಮ್ಮನ್ನು ಎಚ್ಚರಿಸುತ್ತವೆ. ಆದುದರಿಂದ ನಮ್ಮೊಡನೆ ಪ್ರತ್ಯಕ್ಷ ಸಂಬಂಧವನ್ನು ಇಟ್ಟುಕೊಂಡಿರುವ ಗ್ರಹಗಳು ಸಂಖ್ಯಾಶಾಸ್ತ್ರ(ನ್ಯೂಮರಾಲಜಿ)ಗಳ ಮೂಲಕವೂ ರೇಖಾಶಾಸ್ತ್ರ ರೀತಿಯೂ ಜ್ಯೋತಿಷ್ಯಶಾಸ್ತ್ರಗಳ ಪ್ರಕಾರವೂ ನಮಗೆ ಒದಗಲಿರುವ ಕಷ್ಟಗಳನ್ನು ತಿಳಿಸುತ್ತವೆ. ಆಗ ಸಂಬಂಧಪಟ್ಟ ಗ್ರಹಗಳಿಗಿರುವ ಪ್ರಕೋಪವನ್ನು ತಗ್ಗಿಸಲು ಅಂದರೆ ಗ್ರಹಶಾಂತಿ ಮಾಡಲು ಪ್ರಾರ್ಥನೆ,ಜಪ,ದಾನಗಳನ್ನು ಮಾಡಬೇಕು.ಈ ಪ್ರಾರ್ಥನೆಗಳ ಮೂಲಕ ನಮ್ಗೆ ಬರಲಿರುವ ವಿಪತ್ತು ಕಡಿಮೆಯಾಗಿ ಧೈರ್ಯದಿಂದ ಎದುರಿಸಿ ಸಹಿಸುವಂತೆ ಆಗುವುದು.ಅದೇರೀತಿಯಾಗಿ ಗ್ರಹಗಳು ಅನುಕೂಲವಾಗಿದ್ದರೆ ಅವು ಇನ್ನೂ ಹೆಚ್ಚಾಗಿ ಅನುಕೂಲವಾಗಿರುವುದಕ್ಕಾಗಿ ಸ್ತೋತ್ರಗಳನ್ನು ಪಾರಾಯಣಮಾಡುತ್ತಿರಬೇಕು. ಪರಮಾತ್ಮನ ಪ್ರಾರ್ಥನೆ ಎಂಬುದು ಸರ್ವ ಧರ್ಮದವರಿಗೂ ಇದ್ದೇ ಇದೆ.ಅವರವರು ತಾವು ನಮಸ್ಕರಿಸುವ ದೇವರನ್ನು ತಮ್ಮ ತಮ್ಮ ಭಾಷೆಯಲ್ಲಿರುವ ಪ್ರಾರ್ಥನೆ,ಸ್ತೋತ್ರಗಳ ಮೂಲಕ ಪ್ರಾರ್ಥಿಸಬಹುದು. ಈ ಗ್ರಂಥವು ಎಲ್ಲಾ ಧರ್ಮದವರಿಗೂ ಸಂಬಂಧ ಪಟ್ಟದ್ದಾಗಿರುತ್ತದೆ.ಆದರೂ ಹಿಂದುಗಳಿಗಾಗಿ ನವಗ್ರಹ ಸ್ತೋತ್ರಗಳನ್ನು ಕೊಡಲಾಗಿದೆ.ಅದರ ಸದುಪಯೋಗ ಮಾಡಿಕೊಂಡು ಸಕಲ ಸೌಭಾಗ್ಯ ಸಂಪತ್ತನ್ನು ಪಡೆದು ಎಲ್ಲರೂ ಸಂತೋಷವನ್ನು ಪಡೆಯಲೆಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇವೆ. ಸರ್ವೇ ಭದ್ರಾಣಿ ಪಶ್ಯಂತು! ಒಂದು ಸಂಖ್ಯೆ (೧) ಒಂದು ಎನ್ನುವ ಸಂಖ್ಯೆಯು ಎಲ್ಲಾ ಸಂಖ್ಯೆಗಳಿಗೂ ಆಧಾರವಾಗಿದೆ.ಹಲವು ಒಂದುಗಳು ಸೇರಿದರೇ ತಾನೆ ಎಲ್ಲಾ ಸಂಖ್ಯೆಗಳು ರೂಪುಗೊಳ್ಳುವುದು? ನೋಡಿರಿ:- ೧+೧=೨ ೨+೧=೩ ೩+೧=೪ ಇದೇ ರೀತಿ ಕೋಟಿ ವರೆಗೂ ಇರುವ ಸಕಲ ಸಂಖ್ಯೆಗಳೂ ಕೂಡಿಯೇ ರೂಪುಗೊಳ್ಲುತ್ತವೆ.ಮತ್ತು ಒಂದರಿಂದ ಒಂಬತ್ತರವರೆಗಿರುವ ಸಂಖ್ಯೆಗಳಲ್ಲಿ ಒಂದು ಎಂಬ ಸಂಖ್ಯೆಯ ಮಹತ್ವ ಅದಿಕ. ನಿತ್ಯ-ಸತ್ಯ-ಸನಾತನವಾಗಿ ಎಂದೆಂದಿಗೂ ನಿಂತು ನೆಲೆಸಿರುವ ಪರಬ್ರಹ್ಮ ವಸ್ತುವು ಒಂದೇ. ಲೋಕವೆಲ್ಲಾ ಅದೇ ಒಂದಾದ ಪರಬ್ರಹ್ಮವೆಂಬ ವಸ್ತುವಿನಿಂದಲೇ ಸೃಷ್ಟಿಯಾಗಿದೆ. ಹೀಗೆ ಹಲವು ಬಗೆಗಳಾಗಿ ತೋರಿಬರುವ ವಸ್ತುವು ಎಲ್ಲವೂ ಅದೇ ಒಂದರಲ್ಲಿ ಅಡಗಿ ಐಕ್ಯವಾಗುತ್ತದೆ.ಆದುದರಿಂದಲೇ,ಸಂಖ್ಯೆಗಳಲ್ಲಿ ಒಂದು ಎಂಬುದು ಬಹಳ ಮಹತ್ವವುಳ್ಳದ್ದಾಗಿದೆ. ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳಲ್ಲವೇ? ಆ ಹನ್ನೆರಡುತಿಂಗಳುಗಳನ್ನು ಜನವರಿ ಮೊದಲು ಡಿಸೆಂಬರ್ ಕೊನೆ ಎಂದು ಲೆಕ್ಕವಿಟ್ಟುಕೊಳ್ಳೋಣ.ಇದು ಇಂದಿನ ಪ್ರಪಂಚದಲ್ಲೆಲ್ಲಾ ವ್ಯವಹಾರದಲ್ಲಿರುವದರಿಂದಲೂ ಪಾಶ್ಚಾತ್ಯ ಮತ್ತು ಪೌರ್ವಾತ್ಯ ದೇಶದ ಸಂಖ್ಯಾಶಾಸ್ತ್ರ ನಿಪುಣರೂ,ರೇಖಾಶಾಸ್ತ್ರ ಪಾರಂಂಗತರೂ ಇಂಗ್ಲೀಷು ತಿಂಗಳಿನ ದಿನಾಂಕಗಳು ಇವುಗಳನ್ನೇ ಆಧಾರವಾಗಿಟ್ಟುಕೊಂಡು ಮಾನವನ ಜೀವನದ ಫಲಿತಾಂಶವನ್ನು ಹೇಳುತ್ತಿರುವುದರಿಂದಲೂ ನಾವು ಕೂಡ ಅದೇ ಆಂಗ್ಲ ದಿನಾಂಕ,ಮಾಸ,ವರ್ಷಗಳನ್ನೇ ಆಧಾರವಾಗಿಟ್ಟುಕೊಂಡು ಫಲಗಳನ್ನು ನೋಡಬೇಕು. ಒಂದು ಸಂಖ್ಯೆಯವರು ಯಾರು ? ಜನವರಿಯಿಂದ ಡಿಸೆಂಬರ್ ವರೆಗಿನ ಹನ್ನೇರಡು ತಿಂಗಳಿನಲ್ಲಿ ಯಾವ ತಿಂಗಳಲ್ಲಾದರೂ ಸರಿ ೧,೧೦,೧೯,೨೮ಈ ದಿನಾಂಕದಲ್ಲಿ ಜನಿಸಿದವರನ್ನು ೧ ಸಂಖ್ಯೆಯುಳ್ಲವರೆಂದು ನಾವು ನೆನಪಿನಲ್ಲಿಡಬೇಕು. ಒಂದು ಗ್ರಹಕ್ಕೆ ಸಂಬಂದ ಪಟ್ಟ ಗ್ರಹ ಸೂರ್ಯನೇ ಮೊದಲಾದ ಒಂಬತ್ತು ಗ್ರಹಗಳಲ್ಲಿ ಒಂದು ಸಂಖ್ಯೆಗೆ ಸೂರ್ಯನು ಅಧಿಪತಿಯಾಗಿದ್ದಾನೆ.ಅವನು ನವಗ್ರಹಗಳ ನಾಯಕನು.ಸಮಸ್ತ ಜೀವರಾಶಿಗಳಿಗೂ ಸೂರ್ಯನೇ ಆತ್ಮಸ್ವರೂಪನೆಂದು ಶಾಸ್ತ್ರಗಳು ಹೇಳುತ್ತವೆ. ಆದುದರಿಂದ ಗ್ರಹನಾಯಕನಾದ ಸೂರ್ಯನು ಸಂಖ್ಯೆಗಳಲ್ಲಿ ಪ್ರಥಮವಾದ ಒಂದನೇ ಸಂಖ್ಯೆಗೆ ಸೇರಿದವನೆಂದು ಹೇಳುವುದು ಯುಕ್ತವಾಗಿದೆ. ಒಂದು ಸಂಖ್ಯೆಗೆ ಸೇರಿದ ಗ್ರಹವು ಸೂರ್ಯ ನಾಗಿರುವುದರಿಂದ ಆ ಸಂಖ್ಯೆಯ ದಿನ ಜನಿಸಿದವರಲ್ಲಿ ಜ್ಯೋತಿಷ್ಯ ಶಾಸ್ತ್ರ ರೀತ್ಯ ಸೂರ್ಯಗ್ರಹಕ್ಕೆ ಕೊಟ್ಟಿರುವ ಸ್ವರೂಪ,ಸ್ವಭಾವ,ಗುಣಗಳೆಲ್ಲಾ ಇರುತ್ತವೆ. ರೂಪ ಮತ್ತು ಆಕಾರ ಒಂದು ಸಂಖ್ಯೆಯವರು ಸಾಮಾನ್ಯವಾದ ಎತ್ತರವುಳ್ಳವರಾಗಿರುವರು.ಇವರಿಗೆ ದೀರ್ಘವಾದ ಭುಜಗಳೂ ವಿಶಾಲವಾದ ಲಲಾಟವೂ ಇರುವುದು.ತಲೆ ಕೂದಲು ದಟ್ಟವಾಗಿ ಕಪ್ಪಾಗಿಹೊಳಪಿನಿಂದ ಕೂಡಿ ನಯವಾಗಿ ಇರುವುದು.ಅಂದವಾಗಿ ಬಿಲ್ಲಿನಂತೆ ಬಾಗಿದ ಹುಬ್ಬುಗಳು ದೃಡವಾದ ದಂತಪಂಕ್ತಿಯು ಇರುವುವು. ಗುಣ ನಡತೆಗಳು ಸಿಂಹದ ಹಾಗೆ ಧೈರ್ಯ,ಸಾಹಸ ಉಳ್ಳವರು.ತಮ್ಮ ವಿಚಾರವನ್ನು ಧ್ಯೇಯವನ್ನೂ ಬಿಟ್ಟುಕೊಡದೆ ಸಾಧಿಸುವ ಸ್ವಭಾವವುಳ್ಳವರು.ತಾವು ಅನ್ಯರ ಅದೀನರಾಗಿರುವುದಕ್ಕಿಂತಲೂ ತಮಗೇ ಇತರರು ಅಧೀನರಾಗಿರಬೇಕೆಂಬ ಮನೋಭಾವವುಳ್ಳವರು.ಎಲ್ಲದರಲ್ಲೂ ತಾನೇ ಮುಂದಾಗಿ ಮುಂದಾಳಾಗಿ ಕೆಲಸ-ಕಾರ್ಯಗಳನ್ನು ಸಾಧಿಸುವ ಸಾಮರ್ಥ್ಯವುಳ್ಳವರು.ಸೇವಾವೃತ್ತಿಗಿಂತ ಸ್ವತಂತ್ರ ಜೀವನ ನಡೆಸುವುದೇ ಇವರಿಗೆ ಪ್ರಿಯವಾದುದು. ಇವರು ಹೆಚ್ಚು ಮಾತನಾಡುವವರಲ್ಲ,ಮಿತಭಾಷಿಗಳು.ಮಾತನಾಡಬೇಕಾಗಿ ಬಂದರೆಮಾತ್ರ ಭಾವ,ಅರ್ಥ,ಹಾಸ್ಯರಸ ಒಂದುಮಾಡಿ ಕೊಂಡು ಮಧುರೋಕ್ತಿಗಳನ್ನು ಆಡುವರು. ಇವರನ್ನು ಸಕಲ ಕಲಾವಿದರೆಂದು ಹೇಳಬಹುದು.ಯಾವಕಲೆಯಾದರೂ ಸರಿ ಅದನ್ನು ಬೇಗನೆ ಗ್ರಹಿಸುವ ಶಕ್ತಿ,ಉತ್ಸಾಹ ಮತ್ತು ನೈಪುಣ್ಯತೆ ಇವರಲ್ಲಿ ಕಂಡುಬರುತ್ತದೆ.ಇವರ ಹೃದಯವು ಸ್ಪಟಿಕದಂತೆ ನಿರ್ಮಲವಾಗಿರುವುದು.ಕಪಟ ಇಲ್ಲದೆ ಸ್ನೇಹಭಾವದಿಂದ ಎಲ್ಲರೊಂದಿಗೆ ಒಡನಾಡುವರು.ಇವರಿಗೆ ಯಾವುದನ್ನೂ ರಹಸ್ಯವಾಗಿ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಅಸಾದ್ಯವಾದುದರಿಂದ ಎಲ್ಲವನ್ನೂ ಇತರರಲ್ಲಿ ಹೇಳಿಬಿಡುತ್ತಾರೆ. ತಾವು ಮಾಡಿದ ತಪ್ಪು-ಸರಿಗಳನ್ನು ಇತರರಿಗೆ ಹೇಳಿ ಯಾವಾಗಲೂ ತಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಬೇಕೆಂಬ ಪ್ರಯತ್ನದಲ್ಲಿಯೇ ಇರುವರು.ತಾವು ಯಾವುದೇ ಕಳಂಕವಿಲ್ಲದ ನಿರ್ಮಲ ಮನಸಿನವರಾಗಿರುವುದರಿಂದ ಸುಳ್ಳುಹೇಳುವವರನ್ನು ,ಮೋಸಮಾಡುವವರನ್ನೂ ಕಂಡರೆ ಇವರಿಗಾಗದು. ತಮಗೆ ಸಹಾಯ ಮಾದಬೇಕೆಂದು ಪರರ ಬಳಿ ಹೋಗುವುದು ಇವರ ಸ್ವಭಾವಕ್ಕೆ ವಿರುದ್ದವಾದುದು.ಆದರೆ ಇವರ ಪರಿಸ್ಥಿತಿ ನೋಡಿ ಇತರರು ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸುವರು. ಬಿಳಿಯ ವಸ್ತ್ರವನ್ನು ಧರಿಸುವುದೆಂದರೆ ಇವರಿಗೆ ಬಹಳಪ್ರೀತಿ ಜನಸಮುದಾಯದೊಂದಿಗೆ ಇರುವುದಕ್ಕಿಂತಲೂ ಏಕಾಂತ ವಾಸವು ಇಅವ್ರಿಗೆ ಪ್ರಿಯವಾದುದು.ರಾತ್ರಿಹೊತ್ತು ಬೇಗನೆ ಮಲಗುವುದು ಇವರಿಗೆ ಹಿಡಿಸದು.ಎಂದಾದರೂ ಹೆಚ್ಚು ನಿದ್ದೆಹೋದರೆ ಸಮಯವು ವ್ಯರ್ಥವಾಯಿತೆಂದು ವ್ಯಸನಪಡುವರು. ಪ್ರಯಾಣ ಮಾಡುವುದರಲ್ಲೂ ಪರ್ವತ,ಕಾಡು,ಪ್ರಪಾತ ಮೊದಲಾದ ಪ್ರಾಕೃತಿಕ ದೃಶ್ಯಗಳನ್ನು ನೋಡುವುದೆಂದರೆ ಇವರಿಗೆ ಎಲ್ಲಿಲ್ಲದ ಉತ್ಸಾಹ. ದೈವ ನಂಬಿಕೆಯುಳ್ಳ ಆಸ್ತಿಕರು ಇವರು. ಆದರೆ ದೇವರ ಮ್ರ‍್ಲೆಯೇ ಎಲ್ಲಾ ಭಾರವನ್ನು ಹೊರಿಸಿ ಜೀವಿಸಬೇಕೆಂಬ ಹುಚ್ಚುತನವಿಲ್ಲ. ಗೃಹಸ್ಥ ಜೀವನ ಇವರಿಗೆ ವಯಸ್ಸಾದ ಮೆಲೆಯೇ ವಿವಾಹವು ಆಗುವುದು.ಇವರ ಸಾಂಸಾರಿಕ ಜೀವನವು ಸಾಕಷ್ಟು ಸುಖಮಯವಾಗಿ ಇರಲಾರದು. ಯಾವಾಗಲೂ ಸತಿ-ಪತಿಗಳಲ್ಲಿ ಯಾವುದಾದರೊಂದು ಮನಸ್ತಾಪವು ಬರುತ್ತಲೇ ಇರುವುದರಿಂದ ಗೃಹಶಾಂತಿ-ಸಮಾಧಾನವು ನೆಲೆಸಿರಲಾರದು. ಮುಖ್ಯವಾಗಿ ಈ ಒಂದು ಎಂಬ ಸಂಖ್ಯೆಯುಳ್ಳವರು ಇದೆ ಒಂದುಸಂಖ್ಯೆಯುಳ್ಳ ಸತಿಯನ್ನೋ ಅಥವ ಪತಿಯನ್ನೋ ವಿವಾಹವಾದರೆ ಮೇಲೆ ಹೇಳಿದ ವಿಡಂಬನೆಗಳು ಹೆಚ್ಚಾಗುವುವು.ಆದುದರಿಂದ ಒಂದು ಸಂಖ್ಯೆಯವರು ಪುನಃ ಒಂದು ಸಂಖ್ಯೆಯವರನ್ನು ವಿವಾಹವಾಗಬಾರದೆಂದು ಈ ಶಾಸ್ತ್ರವು ವಿಚಾರಪೂರ್ವಕವಾಗಿ ಎಚ್ಚರಿಸುತ್ತದೆ. ಆರ್ಥಿಕ ಪರಿಸ್ಥಿತಿ ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿರಲಾರದು.ಯಾವಾಗಲೂ ಹಣಕ್ಕಾಗಿ ಕಷ್ಟಪಟ್ಟು ತಮ್ಮ ಕೊರತೆಗಳನ್ನು ನೀಗಿ,ಅವಶ್ಯಕತೆಗಳನ್ನು ಪೂರ್ತಿ ಮಾಡಿಕೊಳ್ಳಲಾರದೆ ಇರುವ ಪರಿಸ್ಥಿತಿಯು ಒದಗಿ ಬರುವುದು.ಸಮಯಕ್ಕೆ ಸಹಾಯವಾಗುವಂತೆ ಇವರ ಬಳಿ ಕೂಡಿಟ್ಟ ಹಣವು ಇರಲಾರದು;ಆದರೆ ಇವರ ಆರ್ಥಿಕ ಪರಿಸ್ಥಿತಿಯು ತೃಪ್ತಿಕರವಾಗಿ ಇರದಿದ್ದರೂ ದೈವಾನುಗ್ರಹವು ಸಂತೋಷಜನಕವಾಗಿದೆ.ಜೀವನದ ಉತ್ತರಾರ್ಧದಲ್ಲಿ ಇವರು ಒಂದು ರೀತಿಯಲ್ಲಿ ಸುಖಮಯವಾಗಿ ಜೀವನವನ್ನು ನಡೆಸುವರು.ಅಂದರೆ ಸುಮಾರು ೪೦ ವರ್ಷಗಳ ನಂತರ ಇವರ ಉದ್ಯೋಗದಲ್ಲಿ ,ವ್ಯಾಪಾರದಲ್ಲಿ ಸ್ಥಿರವಾಗಿ ನಿಂತು ಜೀವನವು ಸುಗಮವಾಗಿ ಸಾಗುವು ಅದುವರೆಗೆ ಜೀವನವು ಗಾಳಿಯಲ್ಲಿ ಸಿಕ್ಕಿದ ನೌಕೆಯಂತೆ ಅನಿಶ್ಚಿತವಾದ ದಾರಿಯಲ್ಲಿ ಸಾಗುವುದು. ದೇಹಾರೋಗ್ಯ ಒಂದು ಸಂಖ್ಯೆಯುಳ್ಲವರು ಆಹಾರದ ವಿಷಯದಲ್ಲಿ ಮುಂಜಾಗ್ರತೆಯುಳ್ಳವರಾಗಿರುತ್ತಾರೆ,ಆದುದರಿಂದ ಇವರಿಗೆ ಹೊಟ್ಟೆನೋವು ಮೊದಲಾದ ಕಾಯಿಲೆಯು ಬರುವುದಿಲ್ಲ.ಆದರೂ ಕೂಡ ಇವರುಗಳಿಗೆ ಹಲವುವೇಳೆ ಹೃದಯ ವೇದನೆಯಿಂದ ನರಳುವರು. ಅಲ್ಲದೆ ವಾತ,ಪಿತ್ತ,ಶ್ಲೇಷ್ಮ ಎಂಬ ತ್ರಿಧಾತುಗಳಲ್ಲಿ ಪಿತ್ತಕ್ಕೆ ಸಂಬಂಧಪಟ್ಟ ರೋಗಗಳು,ಉಷ್ಣಪ್ರಕೋಪವೂ ಇವರಿಗೆ ಆಗಾಗ ತಲೆದೋರುತ್ತದೆ.ಈ ಒಂದು ಸಂಖ್ಯೆಯವರಿಗೆ ದೃಷ್ಟಿದೋಷವೂ ಇರಬಹುದುದಾದರಿಂದ ಬಹುಮಂದಿ ಸಣ್ಣವಯಸ್ಸಿನಲ್ಲೇ ಕನ್ನಡಕಗಳನ್ನು ಹಾಕಿಕೊಳ್ಳಬೇಕಾದ ಸಮಯ ಬರಬಹುದು. ಉದ್ಯೋಗ ಮತ್ತು ವ್ಯಾಪಾರ ಒಂದು ಸಂಖ್ಯೆಯುಳ್ಳವರು ಉದ್ಯೋಗದಲ್ಲಿದ್ದರೆ ಆಫೀಸು ಮೇನೇಜರ್ ಅಥವ ಐ ಎ ಎಸ್ ನಂತಹ ದೊಡ್ಡ ಅಧಿಕಾರಿಯಾಗಿಯೋ ಧಾರ್ಮಿಕ ಸಂಸ್ಥೆಗಳಲ್ಲಿ ಟ್ರಸ್ಟಿಗಳಾಗಿಯೋ ದೊಡ್ಡ ಅಧಿಕಾರವುಳ್ಳ ಒಂದು ಪದವಿಯಲ್ಲಿದ್ದು ಅದನ್ನು ಚೆನ್ನಾಗಿ ನಿರ್ವಹಿಸುವವರಾಗಿ ಇರುವರು.ಇವರು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸರಕಾರದ ಉದ್ಯೋಗದಲ್ಲಿಯೋ ಅಥವ ಸರಕಾರದೊಂದಿಗೆ ನಿಕಟಸಂಬಂಧವನ್ನು ಇಟ್ಟುಕೊಂಡಿರುವ ಉದ್ಯೋಗದಲ್ಲಿಯೋ ಇರುತ್ತಾರೆ. ಸೂರ್ಯನ ಕಾಲ(ಸಮಯ) ಜುಲೈ ೨೨ರಿಂದ ಆಗಸ್ಟ್ ೨೨ ವರೆಗಿನ ಒಂದುತಿಂಗಳು ಕಾಲವು ಸೂರ್ಯನಿಗೆ ಸಂಬಂಧಪಟ್ಟ ಕಾಲವು. ಒಂದು ಸಂಖ್ಯೆಯುಳ್ಲವರು ಈ ಒಂದು ತಿಂಗಳ ಅವಧಿಯಲ್ಲಿ ಜನಿಸಿದವರಾಗಿದ್ದರೆ ಬಹಳ ಅದೃಷ್ಟಶಾಲಿಗಳಾಗಿ ಇರುತ್ತಾರೆ. ಭಾನುವಾರವು ಸೂರ್ಯನಿಗೆ ಸಂಬಂಧಪಟ್ಟದ್ದು. ಕಾಲ ಪರಿಮಾಣದಲ್ಲಿ ಆರುತಿಂಗಳು ಕಾಲವು ಸೂರ್ಯನಿಗೆ ಸೇರಿದೆ.ಸೂರ್ಯನು ಹಗಲಲ್ಲಿ ಶಕ್ತಿವಂತನಾಗಿರುತ್ತಾನೆ.ಈ ವಿಷಯಗಳನ್ನು ಒಂದು ಸಂಖ್ಯೆಯುಳ್ಳವರಿಗೆ ಅನ್ವಯಿಸಿಕೊಳ್ಳಬೇಕು. ಸೂರ್ಯನ ದಿಕ್ಕು ಮತ್ತು ಪ್ರದೇಶ ಸೂರ್ಯನ ದಿಕ್ಕುಪೂರ್ವ.ಪ್ರಾರ್ಥನಾ ಮಂದಿರ,ಭೋಜನಶಾಲೆ ಯಂತಹವು ಸೂರ್ಯನಿಗೆ ಸಂಬಂಧಪಟ್ಟ ಪ್ರದೇಶಗಳು.ಯಾವ ಕಾರ್ಯವನ್ನೂ ಯಾವ ಪ್ರಯಾಣವನ್ನೂ ಕೈಗೊಳ್ಳಬೇಕಾದರೂ ಪೂರ್ವಾಭಿಮುಖವಾಗಿ ಆರಂಭಿಸುವುದು ಉತ್ತಮ.ಕಾರ್ಯಾಲಯಗಳಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವುದರಿಂದ ಅಭಿವೃದ್ದಿಯುಂಟಾಗಿ ಪ್ರಭಾವವನ್ನು ಬೀರುವರು. ಅದೃಷ್ಟ ರತ್ನಗಳು ಸೂರ್ಯಗಹದ ಅನುಗ್ರಹ ಪಡೆಯಲು ಅಂದರೆ ಸೂರ್ಯ ಪ್ರೀತ್ಯರ್ಥವಾಗಿ ಮಾಣಿಕ್ಯ ಎಂಬ ಹೆಸರಿನ ರತ್ನವನ್ನು ಧರಿಸಿಕೊಳ್ಳಬೇಕೆಂದು ಹೇರ‍್ಳಿದೆ.ಮಾಣಿಕ್ಯವು ಸಿಗುವುದು ಕಷ್ಟಸಾಧ್ಯವಾದುದರಿಂದ ಅರಿಸಿನ ಬಣ್ಣದ ಕಾಂತಿಯುಳ್ಳ ವಜ್ರವನ್ನು ಉಂಗುರದಲ್ಲಿಆಗಲಿ ಸರದಲ್ಲಾಗಲಿ ಇಟ್ಟು ಧರಿಸುವುದರಿಂದ ಇಚ್ಚಿಸಿದ ಎಲ್ಲಾ ಕಾರ್ಯಗಳು ನೆರೆವೇರುವುದು ಮತ್ತು ಆರೋಗ್ಯ ಉತ್ತಮವಾಗುವುದು,ತಾಮ್ರ ಲೋಹವು ಸೂರ್ಯನಿಗೆ ಸಂಬಂಧಪಟ್ಟ ಲೋಹವಾಗಿದೆ. ಅದೃಷ್ಟದ ವರ್ಣ(ಬಣ್ಣ) ಸಂಜೆಯ ಸೂರ್ಯನ ಕಾಂತಿಯಂತೆ ಹಳದಿ,ಕೆಂಪು ಮಿಶ್ರವಾದ ವರ್ಣವೇ ಸೂರ್ಯಗ್ರಹದ ವರ್ಣವು.ಆದುದರಿಂದ ಈ ಬಣ್ಣದ ವಸ್ತ್ರಾಭರಣಗಳನ್ನು ಧರಿಸಿದರೆ ಕಾರ್ಯದಲ್ಲಿ ಜಯವಾಗುವುದು. ಅನುಕೂಲದಿನಾಂಕಗಳು ಒಂದು ಸಂಖ್ಯೆಯವರಿಗೆ ಎಲ್ಲಾ ತಿಂಗಳಲ್ಲಿಯೂ ೧,೪,೧೦.೧೯.೨೨,೨೮(೧,೪) ಈ ದಿನಾಂಕಗಳು ಬಹಳ ಅನುಕೂಲಕರವಾಗಿರುವುವು. ಯಾವುದೇಕಾರ್ಯ ಆರಂಭಿಸಲು ಈ ದಿನಾಂಕಗಳು ಸೂಕ್ತ. ಅನಾನುಕೂಲದಿನಾಂಕಗಳು(ಪ್ರತಿಕೂಲದಿನಾಂಕಗಳು) ಎಲ್ಲ ತಿಂಗಳಲ್ಲಿನ ೮,೧೭,೨೬ ಈ ದಿನಾಂಕಗಳು ಅನಾನುಕೂಲವಾದವು.(೮) ಸಂಖ್ಯೆಯು ಅನಾನುಕೂಲ ವಾಗಿರುತ್ತದೆ ಆದುದರಿಂದ ಈ ದಿನಾಂಕದಲ್ಲಿ ಯಾವುದೇ ಶುಭಕಾರ್ಯಾರಂಭಮಾಡಬಾರದು. ಗ್ರಹಪ್ರೀತಿ ಒಂದು ಸಂಖ್ಯೆಯವರು ಸೂರ್ಯನ ತೃಪ್ತಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಾರಾಯಣವನ್ನು ಮಾದಬೇಕು.ಅದರಿಂದ ಆರೋಗ್ಯಭಾಗ್ಯವೂ ಇಷ್ಟಾರ್ಥ ಸಿದ್ದಿಯು ಉಂಟಾಗುತ್ತದೆ. ಎರಡು ಸಂಖ್ಯೆ ೨ ೨,೧೧,೨೦,೨೯ ದಿನಾಂಕದವರು ೨ಮೂಲಾಕ್ಷರಕ್ಕೆ ಬರುತ್ತಾರೆ.ಈ ಎರಡು ಸಂಖ್ಯೆಗೆ ಅಧಿಪತಿ ಚಂದ್ರ ನಾಗಿದ್ದಾನೆ ಸೂರ್ಯನು ಆತ್ಮ ಕಾರಕನಾದರೆ ಚಂದ್ರನು "ಚಂದ್ರಮಾಮನಸೋಜಾತ"ನಾಗಿದ್ದಾನೆ. ರೂಪ ಆಕಾರ ಇವರಲ್ಲಿ ಹಲವರು ಒಳ್ಳೆಯ ರೂಪ ಶರೀರ ಹೊಂದಿ ಆಕರ್ಷಕವಾದ ಸೌಂದರ್ಯದವರಾಗಿರುತ್ತಾರೆ.ದೇಹಕ್ಕೆ ತಕ್ಕ ಎತ್ತರವೂ ಇವರಿಗಿರುತ್ತದೆ.ಚಿಕ್ಕಕಿವಿಗಳು,ಸುಂದರವಾದ,ಗುಂಡಾದ ನೇತ್ರಗಳು,ದಪ್ಪವಾದ ತುಟಿಗಳು,ನಯವಾದ ಕೂದಲು,ಮುಂದೆಬಂದಿರುವ ಉದರ ಇವೆಲ್ಲವುಗಳೂ ಎರಡು ಸಂಖ್ಯೆಯವರೆಂಬುದನ್ನು ವ್ಯಕ್ತಪಡಿಸುತ್ತದೆ. ಗುಣ-ನಡತೆ ಚಂಚಲವಾದ ಮನಸ್ಸುಳ್ಳವರು,ಸದಾಸಂದೇಹಸ್ವಬಾವದವರು ಆಗಿರುವರು.ಆದುದರಿಂದ ಯಾವ ಕಾರ್ಯವನ್ನು ಮಾಡಬೇಕಾದರೂ ಮೊದಲು ಚೆನ್ನಾಗಿ ಯೋಚಿಸಿ,ನಂತರ ನಿಧಾನವಾಗಿ ಕಾರ್ಯಗತರಾಗಬೇಕೆಂಬ ಗುಣವು ಇವರಲ್ಲಿರಲಾರದು ಪ್ರತಿಯೊಂದು ವಿಚಾರದಲ್ಲೂ ಅವಸರಪಟ್ಟು ಪ್ರವೇಶಿಸಿ ನಂತರ ಅದನ್ನು ಕೈ ಬಿಡುವುದು ಇವರ ಗುಣ.ತಾವಾಗಿಯೇ ನಿರ್ಣಯಿಸಿ ಆಮೇಲೆ ನಿಧಾನವಾಗಿ ಕಾರ್ಯದಲ್ಲಿ ಪ್ರವರ್ತಿಸುವ ಸ್ವಭಾವವು ಇವರಲ್ಲಿ ಇಲ್ಲದಿದ್ದರೂ ಇತರರೌ ಹೇಳುವ ಆಲೋಚನೆಗಾದರೂ ಕಿವಿಗೊಟ್ಟು ಅವರು ಹೇಳುವ ದಾರಿಯಲ್ಲಿ ಕೆಲಸಮಾಡಿಕೊಳ್ಳಬಹುದು,ಆದರೆ ಇವರು ಪರರನ್ನು ನಂಬಿಯೂ ನಂಬದೆಯೂ ಇರುವಸ್ವಬಾವವುಳ್ಳವರಾಗಿ ಕಂಡುಬರುತ್ತಾರೆ ಇದು ಇವರ ಸಹಜ ಗುಣ. ತಮ್ಮ ಕೆಲಸಗಳನ್ನು ಬದಿಗೆ ಸರಿಸಿ ಪರರಿಗೆ ತಮ್ಮಿಂದ ಏನಾದರೂ ಉಪಕಾರ ಮಾಡಲು ಸಾದ್ಯವಿದೆಯೇ ಎಂಬಯೋಚನೆಯಲ್ಲಿಯೇ ಇರುತ್ತಾರೆ.ಪ್ರಾಪಂಚಿಕ ವಿಷಯದ ಚಿಂತನೆಗಿಂತ ಆಧ್ಯಾತ್ಮಿಕ ವಿಷಯವಾದ ಪಿಪಾಸೆಯೇ ಅಧಿಕವಾಗಿರುವುದು ಆಧ್ಯಾತ್ಮಿಕ ಚರ್ಚೆಯನ್ನು ಮಾಡುವಾಗ ಇವರಿಗೆ ಸಮಯವು ಕಳೆದುದೇ ತಿಳಿಯದು ತಮ್ಮ ಸಮಸ್ಯೆಗಳನ್ನು ಬೇರೆಯವರಿಗೆ ಸಿಲುಕಿಸಿ ತಾವು ತಪ್ಪಿಸಿಕೊಳ್ಳುವ ಸ್ವಪ್ನಕಾಣದೆ ಏಕಾಂತದಲ್ಲಿ ತಾವೇ ಸ್ವತಃ ಚಿಂತಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಅಭ್ಯಾಸ ವುಳ್ಳವರು. ಪ್ರಾಕೃತಿಕ ಸೌಂದರ್ಯವನ್ನು ಅನುಭವಿಸುವ ಜೊತೆಗೆ ಈಜುವುದರಲ್ಲಿಯೂ ಅಭಿರುಚಿಯುಳ್ಳವರು,ಇವರಿಗೆ ಸ್ವಬಾವಿಕವಾಗಿರುವ ಮುಂಗೋಪವು,ಅವಸರದಲ್ಲಿ ಆರಂಭಿಸುವ ಕೆಲಸವೂ ಇವರು ಕೈಗೊಳ್ಳುವ ಕಾರ್ಯಗಳಲ್ಲಿ ಜಯಶೀಲರಾಗಲು ಭಾದಕವಾಗಬಹುದು.ಜೀವನದ ತೊಡಕುಗಳಲ್ಲಿ ನೊಂದು-ಬೆಂದು ಹೋಗಿರುವ ಎರಡು ಸಂಖ್ಯೆಯವರು ಕೆಲವರು ಜಲಸಮಾಧಿಗೆ ಶರಣು ಹೋಗುವುದೂ ಇದೆ. ಸ್ವತಂತ್ರವಾಗಿ ಜೀವಿಸುವುದರಲ್ಲಿ ನಂಬಿಕೆ ಸಾಲದುದರಿಂದ ಇತರರ ಅಧೀನದಲ್ಲಿ ಸೇವಕರಾಗಿ,ಇರುವುದಕ್ಕೂ ಸಿದ್ದರಾಗಿ ಕಾಲತಳ್ಳುವಸ್ವಭಾವ ಇವರ ಸಹಜಗುಣ. ಭೂತ,ಪಿಶಾಚಿಗಳೆಂದರೆ ಇವರಿಗೆ ಭಯಜಾಸ್ತಿ,ಎರಡುಸಂಖ್ಯೆಯ ಸ್ತ್ರೀಯರು ಬಹಳ ಹೇಡಿಗಳು ಸ್ವಲ್ಪಗದರಿಸಿದರೂ ಭಯಬೀತರಾಗುವರು ಹಸಿರು ಬಣ್ಣಗಳುಳ್ಳ ವಸ್ತುಗಳನ್ನು,ವಸ್ತ್ರಆಭರಣಗಳನ್ನೂ ಉಪಯೋಗಿಸುವುದೆಂದರೆ ಇವರಿಗೆ ಪ್ರೀತಿ,ಹೆಮ್ಗಸರು ಹೆಚ್ಚಾಗಿ ಸೌಂದರ್ಯ ವೃದ್ದಿಗಾಗಿ ಸಮಯ ಕಳೆಯುತ್ತಾರೆ. ಗೃಹಸ್ಥ ಜೀವನ ಇವರ ಸಾಂಸಾರಿಕ ಜೀವನ ಸುಖವಾಗಿರುತ್ತದೆ,ಇಅವರು ಜನಿಸಿದ ದಿನಾಂಕ,ತಿಂಗಳು,ವರ್ಷಗಳ ಸಮಷ್ಟಿ ಸಂಖ್ಯೆಯು ಎರಡು ಆಗಿರುವುದರಿಂದ ೩,೫,೮ ಸಮಷ್ಟಿ ಸಂಖ್ಯೆಯುಳ್ಳವರನ್ನು ವಿವಾಹ ಮಾಡಿಕೊಂಡರೆ ದಾಂಪತ್ಯ ಜೀವನವು ಬಹಳ ಆನಂದವಾಗಿರುತ್ತದೆ,ಅಲ್ಲದೆ ೨೫ರಿಂದ ೩೦ವರ್ಷಗಳ ನಡುವೆ ಮದುವೆ ಮಾಡಿಕೊಂಡರೆ ಒಳ್ಳೆಯದು,ಪ್ರೇಮವ್ಯವಹಾರದಲ್ಲಿ ಇವರಿಗೆ ಶತಪ್ರತಿಶತ ಜಯವೇ ಲಭಿಸುವುದು. ಆರ್ಥಿಕ ಪರಿಸ್ಥಿತಿ ಚಂದ್ರನಿಗೆ,ಶುಕ್ಲಪಕ್ಷ,ಕೃಷ್ಣಪಕ್ಷ ಇರುವಂತೆ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಸಹಜವಾಗಿರಿತ್ತದೆ ಆದರೆ ಇವರು ನಡೆಸಿಕೊಂಡು ಬರುವ ವ್ಯಾಪಾರವು ಇವರಿಗೆ ಲಾಭದಾಯಕವಾಗಿಯೇ ಇರುವುದು. ದೇಹಾರೋಗ್ಯ ಎರಡು ಸಂಖ್ಯೆಯವರಿಗೆ ಉದರಕ್ಕೆ ಸಂಬಂಧಪಟ್ಟ ವ್ಯಾಧಿಗಳು ಆಗಾಗ್ಗೆ ಭಾದಿಸುತ್ತವೆ,ಕೆಲವರಿಗೆ "ಗನೇರಿಯಾ"ದಂತಹ ರೋಗವು ಬರಬಹುದು.ಕೆಲವರಿಗೆ ಮನೋವ್ಯಾಧಿಯು ಭಾದಿಸುವುದು ಆದುದರಿಂದ ದುಃಖಕರವಾದ ಸಮಾಚಾರವನ್ನು ಇಂಥವರಿಗೆ ಹೇಳದೇ ಇರುವುದೇ ಉತ್ತಮವಾದುದು.ಒಂದು ವೇಳೆ ಹೇಳಿದರೂ ನಿಧಾನವಾಗಿ ಗಾಬರಿಯಾಗದಂತೆ ಹೇಳಬೇಕು.ಚಂದ್ರಗ್ರಹವು ತಂಪಾದ ಗ್ರಹವಾದ್ದರಿಂದ ಇವರಿಗೆ ಶೈತ್ಯ ಸಂಬಂದವಾದ ವ್ಯಾಧಿಗಳು ಹೆಚ್ಚಾಗಿ ಬರಬಹುದು.ಚಂದ್ರಗ್ರಹವು ಕೆಲವರಿಗೆ ದುರ್ಬಲವಾಗಿರುವುದು ಅಂತಹವರಿಗೆ ಜಲಗಂಡಾಂತರವು ಬರುವ ಸಂಬವ ವಿರುತ್ತದೆ.ಅಂಗೈಯಲ್ಲಿರುವ ಚಂದ್ರನ ಸ್ಥಾನದಲ್ಲಿ ವಲಯದಂತಿರುವ ರೇಖೆಗಳಿದ್ದರೆ ಜಲಸಮಾಧಿಯನ್ನು ತಪ್ಪಿಸಲು ಸಾಧ್ಯವಿಲ್ಲ.ಆದುದರಿಂದ ಇವರು ನೀರಿನ ಬಳಿ ಜಾಗೃತರಾಗಿರುವುದೇ ಲೇಸು. ಉದ್ಯೋಗ ಮತ್ತು ವ್ಯಾಪಾರ ಈ ಸಂಖ್ಯೆಯವರು ಹಲವರು ವ್ಯಾಪಾರವನ್ನೇ ಮಾಡಿಕೊಂಡಿರುವರು.ಇತರರೊಡನೆ ಪಾಲುಗಾರರಾಗುದು ಇವರಿಗೆ ಸರಿಯಾಗುವುದಿಲ್ಲ ಆದುದರಿಂದ ಪ್ರತ್ಯೇಕವಾಗಿ ವ್ಯಾಪಾರ ನಡೆಯಿಸುವುದೇ ಇವರಿಗೆ ಲಾಭದಾಯಕವಾಗಿರುವುದು.ವಸ್ತ್ರದಗಿರಣಿ ಮತ್ತು ಕಾರ್ಖಾನೆಗಳು ನಡೆಯಿಸುವುವರು,ಪರಿಮಳ ದ್ರವ್ಯಗಳನ್ನು ತಯಾರುಮಾಡುವವರು ಹಲವರು ಇರುವರು. ಉದ್ಯೋಗಗಳಲ್ಲಿ ಕೆಲವರು ಸರ್ಕಾರದ ಕೆಲಸಗಳಲ್ಲಿ ದೊಡ್ಡಪದವಿಯನ್ನು ಅಲಂಕರಿಸಬಹುದು.ಅವರು ಅದಕ್ಕೆ ಯೋಗ್ಯವಾದ ಸಂಬಳದೊಂದಿಗೆ ಕೆಲಸದ ಆಳುಗಳು,ಸೇವಕರು ಮೊದಲಾದವರೊಡನೆ ಆಡಂಬರದ ಜೀವನ ನಡೆಸುವರು. ಇವರು ಸೊಗಸಾದ ಕವಿತೆಗಳನ್ನು ಇಂಪಾದ ಹಾಡುಗಳನ್ನು ರಚಿಸುವವರೂ ಹರಿಕಥೆಗಳನ್ನು ಮಾಡುವವರು,ಪುರಾಣ ಪುಣ್ಯಪ್ರವಚನಗಳನ್ನು ಹೇಳುವವರು ಈ ಎರಡು ಸಂಖ್ಯೆಯಲ್ಲಿ ಜನಿಸಿದವರಾಗಿರುತ್ತಾರೆ. ಚಂದ್ರಬಲವಿಲ್ಲದ ಈ ಎರಡು ಸಂಖ್ಯೆಯವರು ಕೆಲವರು ಮನೆಕೆಲಸ ಮಾಡುವ ಸೇವಕರಾಗಿಯೋ,ದೋಣಿ,ಹಡಗು ನಡೆಸುವರಾಗಿಯೋಮಿಡ್ ವೈಫ್-ನರ್ಸ್ಗಳಾಗಿಯೋ ಕೆಲಸಮಾಡುತ್ತಾರೆ.ಅಲ್ಲದೆ ಕೆಲವರು ಲೋಕಸಂಚಾರ ಮಾಡಿಬರಬೇಕೆಂಬ ಉತ್ಸಾಹದೊಂದಿಗೆ ದೇಶಾಟನೆ ಮಾಡುವವರು ಇರುತ್ತಾರೆ. ಚಂದ್ರನ ಕಾಲ ಜೂನ್ ೨೧ರಿಂದ ಜುಲೈ ೨೨ಈ ವೇಳೆಯಲ್ಲಿ ೨,೧೧.೨೯ಈ ದಿನಾಂಕಗಳಲ್ಲಿ ಸೋಮವಾರ,ಶುಕ್ರವಾರ ಜನಿಸಿದವರಿಗೆ ವಿಶೇಷವಾಗಿ ಚಂದ್ರ ಬಲಶಾಲಿಯಾಗಿರುತ್ತಾನೆ ಅಂತವರು ತುಂಬಾ ಹೆಸರುವಾಸಿಯಾದ(ಪ್ರಖ್ಯಾತಿಹೊಂದಿ) ವ್ಯಕ್ತಿಗಳಾಗಿ ಬಾಳುತ್ತಾರೆ, ಚಂದ್ರನ ದಿಕ್ಕು-ಪ್ರದೇಶ ಉತ್ತರದಿಕ್ಕು,ಏರಿಗಳು,ಕೊಳಗಳು,ಬಾವಿಗಳು,ಸ್ನಾನಗೃಹಗಳು,ಶೀತಪ್ರದೇಶಗಳು ಎರಡು ಸಂಖ್ಯೆಯವರಿಗೆ ಉತ್ತರದಿಕ್ಕಿಗೆ ಪ್ರಯಾಣ,ಯಾವುದೇಕಾರ್ಯರಂಭವನ್ನು ಉತ್ತರಾಭಿಮುಖವಾಗಿ ಕುಳಿತು ಮಾಡಿದರೆ ಒಳ್ಳೆಯದು,ಕಛೇರಿಯಲ್ಲಿ ಉತ್ತರಾಭಿಮುಖವಾಗಿ ಕುಳಿತುಕೊಳ್ಳುವುದು ಒಳ್ಳೆಯ ಪ್ರಭಾವಮತ್ತು ಜಯವನ್ನು ತರುತ್ತದೆ. ಅದೃಷ್ಟದ ರತ್ನ ಮುತ್ತು ಇಲ್ಲವೇ ಚಂದ್ರಕಾಂತಮಣಿ ಧರಿಸಿದರೆ ಚಂದ್ರನ ಲೋಹವಾದ ಬೆಳ್ಳಿಯಲ್ಲಿ,ಗ್ರಹಪೀಡೆ,ಶತೃಭಾದೆ,ಋಣಭಾದೆ,ನಿವಾರಣೆಯಾಗುತ್ತದೆ. ಅದೃಷ್ಟದ ವರ್ಣ ಬಿಳಿ,ಎಲೆ ಹಸಿರು ಈ ಬಣ್ಣಗಳ ವಸ್ತ್ರ,ಆಭರಣಗಳನ್ನು ಧರಿಸಿದರೆ ಶುಭ. ಅನುಕೂಲದಿನಾಂಕಗಳು:- ೨,೭,೧೧,೨೦,೨೫,೨೯(೨,೭)ಶುಭವಾದವು. ಅನಾನುಕೂಲದಿನಾಂಕಗಳು:-೪,೮,೯,೧೮,೨೭(೪,೮,೯) ಗ್ರಹಪ್ರೀತಿಗೆ:- ಸೋಮವಾರ ವ್ರತ,ದುರ್ಗಾಪೂಜೆ,ಸ್ತೋತ್ರ ಪಾರಾಯಣ,ಅಥವ ಲಕ್ಷ್ಮಿಸ್ತೋತ್ರ,ಪಾರಾಯಣ ಮಾಡಿದರೆ ಸೂಕ್ತ. ಮೂರು ೩ ೩,೧೨,೨೧,೩೦ ದಿನಾಂಕದವರಿಗೆ ಗುರು ಅಧಿಪತಿ ಆಗಿರುತಾರೆ. ರೂಪಮತ್ತು ಆಕಾರ ಈ ಸಂಖ್ಯೆಯವರು ಸಾದಾರಣ ಎತ್ತರವುಳ್ಳವರಾಗಿದ್ದು ಗಾಂಭೀರ್ಯವು ಮುಖದಲ್ಲಿ ಕಂಡುಬರುವುದು,ಗುಂಡಾಗಿ ಎತ್ತರವಾಗಿರುವ ಹಣೆಯವರು,ಪ್ರಾಯಶಃ ಬೆಕ್ಕಿನಕಣ್ಣು ಇಅರುತ್ತದೆ.ಇವರ ನೋಟದಲ್ಲೇ ಪ್ರಜ್ಞೆಯು ಕಂಡುಬರುತ್ತದೆ ಇವರಿಗೆ ಹೆಚ್ಚು ಕೂದಲು ಇರಲಾರದು ಇರುವಕೂದಲಿ ಸಹ ಕೆಂಚುಬಣ್ಣದಲ್ಲಿರುವುದು,ವಿಶಾಲವಾದ ಎದೆಯು,ಆಕರ್ಷಕವಾದ ಶರೀರವು ಇವರಿಗಿರುತ್ತದೆ. ಗುಣ ನಡತೆ ಒಳ್ಳೆಯ ನಡತೆಯವರು,ಆತ್ಮಚಿಂತಕರು.ಸ್ವತಂತ್ರ ಮನೋಭಾವದವರು,ಕರುಣಿಗಳು ಪರದುಃಖ ಕಾತರತೆ ಇವರಲ್ಲಿ ಹೆಚ್ಚಾಗಿರುವುದು ಪರಾದೀನತೆಯಲ್ಲಿರುವುದಾಗಲೀ ಇತರರ ಅಭಿಪ್ರಾಯದಂತೆ ನಡೆಯುವುದಾಗಲೀ ಇವರಿಗೆ ಹಿಡಿಸದು ಪಾಲಿಟಿಕ್ಸ್ ಗಿಂತ ಪಾರಮಾರ್ಥಿಕವೇ ಬಲು ಇಷ್ಟ ನೀತಿ ನಿಯಮಗಳ ಮೇಲೂ ಸದಾ ಮನಸ್ಸಿರುತ್ತದೆ,ದೃಢಮನಸ್ಸಿನವರಾಗಿರುತ್ತರೆ.ಇವರಿಗೆ ಹೆಚ್ಚಿನ ಶ್ರಮ,ಕಷ್ಟ ಬರಲಾರದು.ಬಂದರೂ ಹೆಚ್ಚು ಸಮಯ ಇರಲಾರದು. ಬಂದೊದಗಿದ ಸುಖ ದುಃಖವನ್ನು ಸಮನಾಗಿ ಎದುರಿಸಲು ಸಮರ್ಥರಾಗಿರುವರು,ಧರ್ಮ ಕಾರ್ಯಗಳಲ್ಲಿ,ಧಾರ್ಮಿಕ ಸಂಸ್ಥೆಗಳ ನಿರ್ವಾಹಕ ಕಾರ್ಯವೆಂದರೂ ಇವರಿಗೆ ತುಂಬಾ ಇಷ್ಟ.ಆದುದರಿಂದ ಇವರಲ್ಲಿ ಕೆಲವರು ಧರ್ಮಸಂಸ್ಥೆಗಳಿಗೆ ಅಧಿಕಾರಿಗಳಾಗಿ ಇರಬೇಕಾದ ಸಂದರ್ಭವು ಒದಗಿಬರುವುದು. ಕೆಲವರು ಪರಸ್ಪರ ಆಸ್ತಿಯ ವಿಷಯವಾಗಿಯೋ ಅಥವ ಬೇರೆಯಾವುದಾರರೂ ಕಾರಣದಿಂದಲೋ ಜಗಳವಾಡಿಕೊಂಡು ತೀರ್ಮಾನಮಾಡಿಕೊಳ್ಳಲು ಸಾದ್ಯವಾಗದಿದ್ದಾಗ ಆ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಇವರನ್ನು ಮಧ್ಯಸ್ಥರಾಗಿ ಇರುವಂತೆ ಪ್ರಾರ್ಥಿಸುತ್ತಾರೆ.ಇವರೂ ಸಹ ಅವರಿಗೆ ಸಮಾದಾನಕರವಾಗುವಂತೆ ನಿರ್ಣಯಿಸುವ ಸಾಮರ್ಥ್ಯವುಳ್ಳವರು.ಪುರಾಣಪುಣ್ಯಕತೆಗಳು,ಹರಿಕಥಾಕಲಾಕ್ಷೇಪಗಳು ಮೊದಲಾದವು ಎಂದರೆ ಇವರಿಗೆ ತುಂಬಾಪ್ರೀತಿ.ಇವರಲ್ಲಿ ಕೆಲವರು ಪ್ರಸಿದ್ದ ಲೇಖಕರಾಗಿಯೋ ಶ್ರೇಷ್ಟ ಕಲಾವಿದರಾಗಿಯೋ ಪ್ರಕಾಶಿಸುವರು. ಗೃಹಸ್ಥಜೀವನ ಪ್ರೇಮವ್ಯವಹಾರದಲ್ಲಿ ಇವರಿಗೆ ಸಂಪೂರ್ಣ ಜಯವೆಂದು ಹೇಳಲು ಬರುವುದಿಲ್ಲ,ಕೆಲವುಕಾಲ ಜಯವು,ಮತ್ತೆ ಕೆಲವುಕಾಲ ಅಪಜಯವು ಇರುತ್ತದೆ.ಇವರಿಗೆ ಪತ್ನಿಯಾಗಿ ಬರುವವಳು ಸುರದ್ರೂಪಿಯೂ,ಸದಾಚಾರ ಸಂಪನ್ನಳೂ,ಸುಶೀಲೆಯೂ ಆಗಿರುವಳು.ಅನುಕೂಲವಾದ ಗೃಹಸ್ಥಜೀವನವೆಂದು ಹೇಳಬಹುದು.೬,೮.೯ ಸಂಖ್ಯೆಯುಳ್ಳವರನನ್ನೋ ಅಥವ ವಧುವನ್ನೋ ವರಿಸಿದರೆ ಈ ಸಂಖ್ಯೆಯವರ ದಾಂಪತ್ಯಜೀವನವು ಸುಖಕರವಾಗುವುದೆಂದು ತಿಳಿಯಬೇಕು. ಆರ್ಥಿಕ ಪರಿಸ್ಥಿತಿ ಇವರುಗಳ ಆರ್ಥಿಕ ಪರಿಸ್ಥಿತಿ ತುಂಬಾ ತೃಪ್ತಿಕರವಾಗಿರುವುದು.ಇವರಲ್ಲಿ ಕೆಲವರು ಆಗರ್ಭ ಶ್ರೀಮಂತರಾಗಿಯೇ ಜನಿಸಿರುವುದರಿಂದ ಬಾಲ್ಯಕಾಲದಿಂದಲೂ ಜೀವನವೆಲ್ಲಾ ಯಾವಕೊರತೆ ಇಲ್ಲದೆ ಸಂಸಾರವು ಸುಖಮಯವಾಗಿರುವುದು. ತಮ್ಮದು-ಪರರದು ಎಂಬ ಭೇಧ-ಬಾವವಿಲ್ಲದೆ ಇವರಬಳಿ ಯಾವಾಗಲೂ ಹಣದ ಚಲಾವಣೆಯು ಆಗುತ್ತಲೇ ಇರುತ್ತದೆ.ಕಷ್ಟಪಟ್ಟು ಸಂಪಾದಿಸಬೇಕೆಂಬ ಯೋಚನೆಯುಳ್ಳವರಾದರೂ ಕೆಲವು ಸಮಯದಲ್ಲಿ ರೇಸು,ಲಾಟರಿ ಮೊದಲಾದವುಗಳ ಮೂಲಕ ಇವರಿಗೆ ಆದಾಯವು ಇರುವುದು. ದೇಹಾರೋಗ್ಯ:- ಶರೀರದಲ್ಲಿ ರಕ್ತ,ಜೀರ್ಣಕೋಶ ಇವುಗಳು ಬೃಹಸ್ಪತಿಗೆ ಸೇರಿದ ಭಾಗಗಳು ಇವರಿಗೆ ಬರಬಹುದಾದ ಕಾಯಿಲೆಗಳು ಅರಿಸಿನಕಾಮಾಲೆ,ನರಗಳ ದುರ್ಬಲತೆ,ಮೊಣಕಾಲಿಗೆ ವಾತ ಪ್ರಕೋಪ ಮೊದಲಾದವುಗಳು,ಶೀತ ಪ್ರದೇಶದ ಜಲವಾಯು ಇವರಿಗೆ ಹೊಂದಿಕೊಳ್ಳಲಾರದು.ಸಕಾಲಬೋಜನ,ಶರೀರವ್ಯಾಯಾಮ ಮಾಡುತ್ತಿದ್ದರೆ ಇಂತಹ ರೋಗಗಳನ್ನು ತಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಚರ್ಮರೋಗಗಳಿಂದ ಕಷ್ಟಪಡುವವರೂ ಕೆಲವರು ಈ ಮೂರುಸಂಖ್ಯೆಯಲ್ಲಿ ಬರುತ್ತಾರೆ, ಉದ್ಯೋಗ ವ್ಯಾಪಾರ:- ಮುಖ್ಯವಾಗಿ ೩ಸಂಖ್ಯೆಯವರು ನ್ಯಾಯಾದೀಶರು,ವಕೀಲರುಗಳಾಗಿ ಕಾನೂನಿನ ಕಾರ್ಯಗಳಾಲ್ಲಿ ನಿರತರಾಗಿರುವರು.ಕೆಲವರು ಬ್ಯಾಂಕಿನಲ್ಲಿಯೂ ಉದ್ಯೋಗಸ್ಥರಾಗಿರುವರು,ಅಲ್ಲದೆಕೆಲವರು ಪುರಾಣಪ್ರವಚನಗಳ್ಯ್,ಹರಿಕಥಾ ಕಲಾಕ್ಷೇಪಗಳ್ಯ್ ಮೊದಲಾದವನ್ನು ಮಾಡಿಕೊಂಡು ಜೀವನವನ್ನು ನಡೆಸುವರು.ಧಾರ್ಮಿಕ ಸಂಸ್ಥೆಗಳಲ್ಲಿ ದೇವಾಲಯಗಳಲ್ಲಿಯೂ ಕಾರ್ಯಗಳನ್ನು ನಿರ್ವಹಿಸುವವರಾಗಿ ಇರುವರು.ಇವರು ತಮ್ಮ ಕೆಲಸವನ್ನು ಒಳ್ಳೆಸಾಮರ್ಥ್ಯದಿಂದ ತೃಪ್ತಿಕರವಾಗಿ ಮಾಡುವರು ಕೆಲವರು ಪ್ರಭುತ್ವದಲ್ಲಿ ಶೇಷ್ಟವಾದ ಉದ್ಯೋಗದಲ್ಲಿರುವರು.ಅಂತವರೂ ಸಹ ತಮ್ಮ ಕರ್ತ್ಯವ್ಯವನ್ನು ಚೆನ್ನಾಗಿ ನೆರವೇರಿಸುವವರಾಗಿರುವರು. ಜ್ಯೋತಿಷ್ಯ ಎಂಬ ವಿದ್ಯೆಗೆ ಅಧಿದೇವತೆಯೇ ಗುರು.ಆದುದರಿಂದ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇವರಿಗೆ ಜ್ಯೋತಿಷ್ಯವಿದ್ಯೆಯ ಅಭಿರುಚಿ ಇರುವುದು.ಇವರಲ್ಲಿ ಕೆಲವರು ಜ್ಯೋತಿಷ್ಯದಿಂದಲೇ ಜೀವನವೃತ್ತಿಯನ್ನು ಕಲ್ಪಿಸಿಕೊಳ್ಳುವರು. ಗುರುವಿನ ಕಾಲ ಫೆಬ್ರವರಿ ೧೯ರಿಂದಮಾರ್ಚ್ ೨೦ ಮತ್ತು ನವೆಂಬರ್೨೨ರಿಂದ ಡಿಸೆಂಬರ್೨೧ರವರೆಗೆ ಈ ಸಮಯದಲ್ಲಿ ೩,೧೨,೨೧,೩೦ಈ ದಿನಾಂಕಗಳಲ್ಲಿ ಗುರುವಾರ ದಂದು ಜನಿಸಿದವರು ವಿಶೇಷ ವ್ಯಕ್ತಿಗಳಾಗುತ್ತಾರೆ ಸದಾಕಾಲ ಗುರುವು ಶುಭನಾಗಿರುತ್ತಾನೆ. ಗುರುವಿನ ದಿಕ್ಕುಮತ್ತು ಪ್ರದೇಶ ಬೃಹಸ್ಪತಿಗೆ ಈಶಾನ್ಯಮೂಲೆ ಉತ್ತಮವಾದುದು.ದೇವಾಲಯಗಳು,ಪ್ರಾರ್ಥನಾಗೃಹಗಳು,ನ್ಯಾಯಸ್ಥಾನಗಳು,ಜ್ಞಾನಪೀಠಗಳು ಮೊದಲಾದವುಗಳು ಬೃಹಸ್ಪತಿಗೆ ಸೇರಿದವುಗಳಾಗಿವೆ. ಅದೃಷ್ಟ ರತ್ನ:- ಗುರುವಿಗೆ ಸಂಬಂಧ ಪಟ್ಟ ರತ್ನ ಪುಷ್ಯರಾಗ(ಕನಕಪುಷ್ಯರಾಗ) ಇದನ್ನು ಬಂಗಾರದಲ್ಲಿ ಸೇರಿಸಿ ಧರಿಸಿದರೆ ಸರ್ವತೋಮುಖ ಜಯವು ಹುಡುಕಿಕೊಂಡು ಬರುವುದು. ಅದೃಷ್ಟ ವರ್ಣ(ಬಣ್ಣ) ಗುರುವಿಗೆ ಹಳದಿ,ಹಾಗು ಬಂಗಾರದ ಬಣ್ಣದ ವಸ್ತ್ರ,ಆಭರಣಗಳನ್ನು ಧರಿಸುವುದು ಶುಭತರುತ್ತದೆ. ಅನುಕೂಲದಿನಾಂಕಗಳು:-೨,೩,೭,೯,೧೨,೧೮,೨೦,೨೧,ಈ ದಿನಾಂಕಗಳಲ್ಲಿ ಯಾವುದೇ ಕೆಲಸಗಳನ್ನು ಆರಂಭಿಸಿದರೂ ಅದರಲ್ಲಿ ಜಯ ಉಂಟಾಗುತ್ತದೆ. ಅನಾನುಕೂಲದಿನಾಂಕಗಳು:-೬,೧೫,೨೪ಈದಿನಾಂಕಗಳಲ್ಲಿ ಯಾವುದೇ ಹೊಸಕಾರ್ಯವನ್ನು ಆರಂಭಿಸದೇ ಇರುವುದು ಉತ್ತಮ. ಗ್ರಹಪ್ರೀತಿ:- ಗುರುವಾರ ಕಡಲೆದಾನ,ಪುಷ್ಯರಾಗ ಧಾರಣೆ,ಶ್ರೀಮದ್ ರಾಮಾಯಣ ಪಾರಾಯಣ,ದಕ್ಷಿಣಾಮೂರ್ತಿ ಸ್ತೋತ್ರ ಪಾರಾಯಣವನ್ನು ಮಾಡುತ್ತಾ ಬಂದರೆ ಉತ್ತರೋತ್ತರ ಅಭಿವೃದ್ದಿಯನ್ನು ಪಡೆಯುವರು. ೪ ನಾಲ್ಕು ದಿನಾಂಕ ೪,೧೩,೨೨,೩೧ ರಂದು ಜನಿಸಿದವರು ಈ ನಾಲ್ಕು ಸಂಖ್ಯೆಯಲ್ಲಿ ಬರುತ್ತಾರೆ. ಈ ಸಂಖ್ಯೆಗೆ ಅಧಿಪತಿ ರಾಹು ಆಗಿದ್ದಾನೆ. ರೂಪ ಮತ್ತು ಆಕಾರ:- ಸಾದಾರಣ ಎತ್ತರ ವಿಶಾಲವಾದ ಭುಜಗಳು,ಸಣ್ಣದಾಗಿ ಕಪ್ಪಾದ ನೇತ್ರಗಳು,ದೊಡ್ಡಕಿವಿಗಳು ಉಳ್ಳವರಾಗಿರುತ್ತಾರೆ.ಕಪ್ಪು ಅಥವ ಎಣ್ಣೆಗೆಂಪಿನಂತೆ ಇರುವರು.ಇವರ ಕಾಲುಗಳು ದೇಹಕ್ಕೆ ಸರಿಯಾಗಿ ಇರದೆ ಚಿಕ್ಕದಾಗಿ ಇರುವುವು.ವಿಚಿತ್ರವಾದ ದೇಹರಚನೆಯಿಂದ ಎಲ್ಲರನ್ನೂ ತಮ್ಮ ಕಡೆಗೆ ಆಕರ್ಷಿಸುವರು. ಗುಣ ನಡತೆ:- ಈ ಸಂಖ್ಯೆಯವರು ಬಹು ವಿದೇಯರು ಅಷ್ಟೇಅಲ್ಲ ಕುಟುಂಬದಲ್ಲಿರುವ ಎಲ್ಲರೊಡನೆ ವಿಶ್ವಾಸದಿಂದ ಇರುವವರು.ಮೇಲಾಧಿಕಾರಿಗಳೊಂದಿಗೆ ವಿನಯದಿಂದ ವರ್ತಿಸುವರು,ಇವರಲ್ಲಿ ನಡತೆಯಿಂದಲೂ ಮಾತಿನಿಂದಲೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಆಕರ್ಷಣಾ ಶಕ್ತಿಯು ಸ್ವಭಾವ ಸಿದ್ದವಾಗಿದೆ. ಯಾವುದನ್ನಾದರೂ ಒಡನೆಯೇ ನಂಬಿ ಇವರು ಕಾರ್ಯದಲ್ಲಿ ಪ್ರವರ್ತಿಸುವವರಲ್ಲ ಪ್ರತಿಯೊಂದನ್ನೂ ಇವರು ಸಂದೇಹಾತ್ಮಕವಾಗಿ ನೋಡುವರು,ಆದರೆ ಯಾವುದರಲ್ಲೂ ಹಿಂಜರಿಯುವ ಸ್ವಭಾವವುಳ್ಳವರಲ್ಲ. ಅದೃಷ್ಟಕ್ಕಿಂತಲೂ ಸ್ವಪ್ರಯತ್ನದಿಂದಲೇ ಮುಂದುವರಿಯಬೇಕೆಂಬ ಸ್ವಾತಂತ್ರವಾದ ಮನೋಧರ್ಮವುಳ್ಲವರು.ನೀತಿನಿಯಮಗಳ ಜಾತಿ ನಿಯಮಗಳ ಬಂಧನಕ್ಕೆ ಒಳಗಾಗಿರಬೇಕೆಂಬ ಶ್ರೇಷ್ಟವಾದ ಮನೋಭಾವನೆಯುಳ್ಳವರು.ಇವರ ಭಕ್ತಿ ಆಡಂಬರಪೂರ್ಣವಾಗಿಯೂ ಕೃತಕವಾಗಿಯೂ ಇರದೆ ಸದಾ ದೈವನಂಬಿಕೆಯುಳ್ಳವರಾಗಿ ಇರುವರು. ಆತ್ಮಗೌರವವನ್ನು ಕಾಪಾಡಿಕೊಳ್ಳುವ ಪ್ರವೃತ್ತಿಯು ಇವರಲ್ಲಿ ತುಂಬಿ ತುಳುಕುತ್ತಿರುತ್ತದೆ.ಅಹಂಕಾರವಿಲ್ಲದೆ ಸಾದಾರಣ ಉಡುಪನ್ನೇ ಧರಿಸುವರು. ಗೃಹಸ್ಥ ಜೀವನ:- ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ವಿವಾಹವು ನಡೆಯುವುದು.ಆದುದರಿಂದ ಕುಟುಂಬವನ್ನು ಸುಸೂತ್ರವಾಗಿ ನಿರ್ವಹಿಸುವ ಭಾರವು ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ಸಂಬವಿಸುತ್ತದೆ.ಸತಿಪತಿಗಳ ಮದ್ಯೆಪ್ರೇಮ ಬಂಧನವು ಸ್ವಾಬಾವಿಕವಾಗಿ ಇರುವಂತೆ ಕಂಡುಬಂದರೂ ಆಗಾಗ್ಗೆ ಇವರ ಮದ್ಯೆ ಮನಸ್ಥಾಪವು,ಬಿನ್ನಾಬಿಪ್ರಾಯವು ಉಂಟಾದರೂ ಕೂಡಲೇ ಎಲ್ಲವೂ ಸರಿಹೋಗುತ್ತದೆ. ಆರ್ಥಿಕ ಪರಿಸ್ಥಿತಿ:- ಈ ಸಂಖ್ಯೆಯವರಲ್ಲಿ ಹಲವರು ಲಕ್ಷ್ಮಿಪುತ್ರರಾಗಿ ಇರುವರು,ಪಿತ್ರಾರ್ಜಿತವಾದ ಆಸ್ತಿಯೊಂದಿಗೆ ಸ್ವಯಾರ್ಜಿತವೂ ಬೇಕಾದಷ್ಟಿದ್ದರೂ ಕೈಗಳು ಮನಸ್ಸು ಧಾರಾಳವಾಗಿರುವುದರಿಂದ ಧನವನ್ನು ಕೂಡಿಡುವ ಅವಕಾಶವೇ ಇವರಿಗೆ ಒದಗದು.ಆದರೆ ಇವರುಗಳು ಮಾಡುವ ಖರ್ಚುವ್ಯರ್ಥ ಖರ್ಚಾಗಿರದೆ ಪರೋಪಕಾರಕ್ಕಾಗಿಯೇ ಖರ್ಚಾಗುವುದು. ದೇಹಾರೋಗ್ಯ:- ನಾಲ್ಕು ಸಂಖ್ಯೆಯವರಲ್ಲಿ ಪಿತ್ತದ ಉಪದ್ರವವು ಹೆಚ್ಚಾಗಿ ಇರುವುದು.ಆದುದರಿಂದ ಇದನ್ನು ಉದ್ರೇಕಿಸುವ ಹಸಿರು ಪದಾರ್ಥಗಳನ್ನು ಅಥವ ಅದಕ್ಕೆ ಸಂಬಂದಿಸಿದ ಆಹಾರವಸ್ತುಗಳನ್ನು ಉಪಯೋಗಿಸದಿರುವುದು ಒಳ್ಳೆಯದು.ಮೆದುಳಿಗೆ ಸಂಬಂದಿಸಿದ ಕಾಯಿಲೆ,ಅನೀಮಿಯಾ ಮೊದಲಾದ ವ್ಯಾಧಿಗಳುಮತ್ತು ಅರಿಸಿನ ಕಾಮಾಲೆಯೂ ಇವರಿಗೆ ಬರುವ ಕಾಯಿಲೆಗಳು. ಉದ್ಯೋಗಮತ್ತು ವ್ಯಾಪಾರ:- ಈ ಸಂಖ್ಯೆಯುಳ್ಳವರಲ್ಲಿ ಕೆಲವರನ್ನುಳಿದು ಇತರರು ಪರಾಧೀನರಾಗಿದ್ದು ಕೆಲಸ ಮಾಡುವವರಾಗಿರುವರು,ತಾವು ಮಾಡುವ ಕೆಲಸವನ್ನು ಎಲ್ಲರೂ ಮೆಚ್ಚುವಂತೆ ತೃಪ್ತಿಕರವಾಗಿ ಮಾಡಿಸತ್ಯ ಸಂದರೆನಿಸಿಕೊಳ್ಳುವರು ಕೆಲವರು ಸರ್ಕಾರದ ಉದ್ಯೋಗದಲ್ಲಿ ಸೇರಿದವರಾಗಿಯೂ ವಕೀಲರಾಗಿಯೂ ಇಬ್ಬರ ಮದ್ಯೆ ನಿಂತು ಆಸ್ತಿ-ಪಾಸ್ತಿಗಳನ್ನು ವಿಕ್ರಯಿಸಿ ಕಮಿಷನ್ ತಗೆದುಕೊಳ್ಳುವ ಬ್ರೋಕರರಾಗಿಯೋ ಇರುವರು.ಹಾಸ್ಟೆಲ್,ಹೋಟೆಲ್ ಗಳನ್ನು ನಡೆಸುವವರು.ಹಾಲ್ಕೋಹಾಲ್ ಮೊದಲಾದವುಗಳನ್ನು ಬೆರೆಸಿದ ಔಷಧಗಳನ್ನು ಮಾರುವವರು ಕೂಡ ಈ ನಾಲ್ಕು ಸಂಖ್ಯೆಯವರಾಗಿರುತ್ತಾರೆ. ರಾಹುವಿನ ಕಾಲ:- ರಾಹುವಿಗೆ ಪ್ರತ್ಯೇಕವಾದ ಕಾಲವಿಲ್ಲ ಆದರೆ ಶನಿವಾರ ರಾಹುವಿಗೆ ಸೂಕ್ತವಾದ ವಾರ,ರಾಹುಕಾಲ ಪ್ರತಿದಿನದಲ್ಲಿಯೂ ಇರುತ್ತದೆ ಆ ಒಂದು ಕಾಲವನ್ನು ಅಂದರೆ ೧.೧/೨(ಒಂದುವರೆಗಂಟೆ)ರಾಹುಕಾಲದಲ್ಲಿ ಮಾಡುವ ಎಲ್ಲಕಾರ್ಯಗಳು.ಫಲಿಸಲಾರವು.ಶನಿಯಕಾಲವೇ ರಾಹುವಿಗೂ ನಿರ್ಣಯಿಸಿಕೊಳ್ಳಬೇಕು. ರಾಹುವಿನ ದಿಕ್ಕು ಮತ್ತು ಪ್ರದೇಶ:- ತೆಂಕಣ ದಿಕ್ಕು(ದಕ್ಷಿಣ)ರಾಹುವಿಗೆ ಸೇರಿದ್ದು,ಗುಹೆಗಳು,ಸ್ಮಶಾನಗಳು,ಸುರಂಗಗಳು ಹೆಂಚಿನಮನೆಗಳು ಹಾಳುಬಿದ್ದ ಕಟ್ಟಡಗಳು,ಶುಷ್ಕಕ್ಷೇತ್ರಗಳು ರಾಹುವಿಗೆ ಸ್ವಂತವಾದ ಸ್ಥಳಗಳು.ಇದರಿಂದ ನಾಲ್ಕು ಸಂಖ್ಯೆಯವರು ವಾಸಿಸುವ ಅಥವ ಸಂಚರಿಸುವ ಸ್ಥಳಗಳನ್ನು ತಿಳಿದುಕೊಳ್ಳಬಹುದು. ಅದೃಷ್ಟದ ರತ್ನ:- ರಾಹುವಿಗೆ ಗೋಮೇಧಕ ಶುಭರತ್ನವಾಗಿದೆ,ಅರಿಸಿನವುಳ್ಳ ರತ್ನವನ್ನು ಉಂಗುರದಲ್ಲಾಗಲಿ ಕೊರಳಲ್ಲಾಗಲಿ ಧರಿಸುವುದರಿಂದ ಇವರುಗಳಿಗೆ ಬರಬಹುದ ರೋಗಗಳನ್ನು ತಡೆದು ಕಾಪಾಡುತ್ತದೆ.ಜಯವನ್ನು ತರುತ್ತದೆ. ಅದೃಷ್ಟದ ವರ್ಣ:- ಬೂದುಬಣ್ಣ(ಗ್ರೇಕಲ್ಲರ್)ಸಾದಾರಣ ಅರಿಸಿನ ಬಣ್ಣವು ನಾಲ್ಕು ಸಂಖ್ಯೆಯವರಿಗೆ ಶುಭ ತರುತ್ತವೆ. ಅನುಕೂಲದಿನಾಂಕಗಳು:-೧,೧೦.೧೯.೨೮ ದಿನಾಂಕಗಳು ಲಾಭತರುತ್ತವೆ,ಯಾವುದೇ ಶುಭಕಾರ್ಯ ಆರಂಭಮತ್ತು ಹೊಸ ಉದ್ಯೋಗಾರಂಭಕ್ಕೆ ಈ ದಿನಾಂಕದಂದು ಆರಂಬಿಸುವುದು ಅನುಕೂಲವುಂಟಾಗುತ್ತದೆ. ಅನಾನುಕೂಲ ದಿನಾಂಕಗಳು:-ಒಂದನ್ನು ಬಿಟ್ಟು ಉಳಿದೆಲ್ಲಾ ದಿನಾಂಕಗಳು ಅನಾನುಕೂಲವಾದವುಗಳಾಗಿವೆ. ಐದು ಸಂಖ್ಯೆ ೫ ೫,೧೪,೨೩,ಈ ದಿನಾಂಕದವರು ಈ ಸಂಖ್ಯೆಗೆ ಬರುತ್ತಾರೆ.ಈ ಸಂಖ್ಯೆಯ ಅಧಿಪತಿ ಬುಧನಾಗಿರುತ್ತಾನೆ. ರೂಪಮತ್ತು ಆಕಾರ:- ಐದು ಸಂಖ್ಯೆಯವರು ಆಕಾರದಲ್ಲಿ ಎತ್ತರವಾಗಿ ಇರುವರು.ಭುಜಗಳು ಕೈಗಳು ಬಲಿಷ್ಟವಾಗಿಯೂ ನೀಳವಾಗಿಯೂ ಇರುವುವು ಹನೆಯು ವಿಶಾಲವಾಗಿರುವುದಿಲ್ಲ ಕಿರಿದಾಗಿರುವುದು ಚುಚುವಂತೆ ನೋಡುವ ತೀಕ್ಷಣವಾದ ಕಣ್ಣುಗಳು,ವೇಗವಾಗಿ ನಡೆಯುವ ಕಾಲುಗಳು ದೇಹ ಬಲಕ್ಕಿಂತಲೂ ಸೂಕ್ಷ್ಮವಾದ ಬುದ್ದಿಬಲವು ಇದ್ದು ವಾಕ್ಚಾತುರ್ಯವನ್ನು ಹೆಚ್ಚಾಗಿ ಪಡೆದವರು ಇವರನ್ನು ಕಂಡಾಗ ಇವರು ಭುಧಗ್ರಹಕ್ಕೆ ಸಂಬಂಧಪಟ್ಟ ಐದು ಸಂಖ್ಯೆಯವರೆಂದು ತಿಳಿಯಬಹುದು. ಗುಣ ನಡತೆ:- ಇವರು ತಮ್ಮನ್ನು ಇತರರು ಮೆಚ್ಚುವಂತೆ ಚಮತ್ಕಾರವಾಗಿ ಮಾತನಾಡುವ ಸಾಮರ್ಥ್ಯವುಳ್ಳವರು ಕೆಲವು ಸಲ ಇವರು ಮಾತನಾಡುವುದು ವಿತಂಡವಾದವಾಗಿ ಕಂಡುಬರುವುದು,ಆದರೂ ಕೂಡ ಮಾತು ಬೆಳೆಸಿ ಸಮಯವನ್ನು ವ್ಯರ್ಥಗೊಳಿಸುವುದು ಇವರಿಗೆ ಸರಿ ಬರುವುದಿಲ್ಲ ಹೇಗಾದರೂ ಜೀವನದಲ್ಲಿ ಮುಂದುವರಿಯಬೇಕೆಂಬ ಉತ್ಕಟವಾದ ಅಭಿಲಾಷೆಯು ಇವರಿಗೆ ಇರುವುದು.ಸಾಮಾನ್ಯವಾದ ಜೀವನದಲ್ಲಿಯೂ ಸ್ಥಿರತೆಗಿಂತ,ಪರಿವರ್ತನೆಯು ಉತ್ತರೋತ್ತರ ಅಭಿವೃದ್ದಿಯು ಕಂಡುಬರುವುದು. ಕಲೆಗಳಲ್ಲಿ ತತ್ವವಿಚಾರದಲ್ಲಿ ಹೆಚ್ಚಿನ ಪ್ರವೃತ್ತಿ ಇರುವುದು.ವಿಜ್ಞಾನ ವಿಭಾಗದಲ್ಲಿಯೂ ಹೆಚ್ಚಾದ ಪರಿಶ್ರಮದಿಂದ ಯಾವುದಾದರೂ ನೂತನ ವಸ್ತುಗಳನ್ನು ಕಂಡು ಹಿಡಿದು ಸಂಸಾರದಲ್ಲಿ ಪ್ರಶಂಸೆಗೆ ಪಾತ್ರರಾಗಬೇಕೆಂಬ ಮನೋರಥ ಇವರಿಗಿರುತ್ತದೆ.ಇತರರ ಸಹಾಯವನ್ನು ಆಪೇಕ್ಷಿಸದೆ ಸ್ವತಃ ತಾನೇ ಮುಂದುವರಿಯಬೇಕು ಎಂಬ ಉತ್ಸಾಹವನ್ನು ಪಡೆದಿರುವರು. ವಸ್ತ್ರಾಭರಣ ಭೂಷಣಗಳಿಂದಲೂ ಅಲಂಕಾರ ಪ್ರಸಾಧನಗಳಿಂದಲೂ ಅಲಂಕರಿಸಿಕೊಳ್ಳುವುದೆಂದರೆ ಇವರಿಗೆ ಬಹು ಪ್ರೀತಿ. ಸಂಘ ಸಂಸ್ಥೆಗಳಲ್ಲಿದ್ದು ಜೀವನವನ್ನು ನಿರ್ವಹಿಸುವುದಕ್ಕಿಂತಲೂ ಏಕಾಂತದಲ್ಲಿದ್ದು ಮನನ-ಚಿಂತೆಯಲ್ಲಿ ತನ್ನನ್ನು ತೇಲಿಬಿಡುವುದೆಂದರೆ ಇವರಿಗೆ ಅತ್ಯಂತ ಇಷ್ಟ.ಆದುದರಿಂದ ಏನಾದರೊಂದು ನೆಪಹೇಳಿ ಏಕಾಂತಕ್ಕೆ ಹೋಗಿ ಬಿಡುವರು.ಸೋಮಾರಿತನವೆಂಬುದು ಇವರಬಳಿ ಸುಳಿಯದು,ಸದಾಕಾರ್ಯ ತತ್ಪರರಾಗಿರುವರು. ಗೃಹಸ್ಥ ಜೀವನ:- ಇವರ ಜೀವನವು ಹೆಚ್ಚು ತೃಪ್ತಿಕರವಾಗಿರಲಾರದು.ಸತಿ-ಪತಿಗಳಲ್ಲಿ ಆಗಾಗ ತೋರಿಬರುವ ಮನಸ್ಥಾಪದಿಂದ ಪರಸ್ಪರ ಅತೃಪ್ತಿಹೊಂದಿ ಅನೇಕ ಸಂದರ್ಭಗಳಲ್ಲಿ ಈ ಜೀವನಕ್ಕಿಂತಲೂ ಸನ್ಯಾಸವೇ ಮೇಲು ಎಂದು ಕಂಡು ಬರುವುದು,ಮನೆಯ ಹೊರಗೂ ಏಕಾಂತದಲ್ಲಿಯೂ ಎಷ್ಟೋ ಚೆನ್ನಾಗಿ ಕಾಲಕಳೆಯುವ ಐದು ಸಂಖ್ಯೆಯವರು.ಇವರಿಗೆ ಮನೆಯಲ್ಲಿ ಅಶಾಂತಿ,ಚಿಂತೆ,ವೇದನೆ ಮೊದಲಾದವುಗಳು ಎಲ್ಲಿಂದಲಾದರೂ ಬಂದು ಒದಗಿಕೊಳ್ಳುವುವು ಒಟ್ಟಿನಲ್ಲಿ ಐದು ಸಂಖ್ಯೆಯವರು ಗೃಹಸ್ಥಜೀವನಕ್ಕಿಂತ ಸಾಮಾಜಿಕ ಜೀವನ ಮತ್ತು ವೈಜ್ಞಾನಿಕ ಜೀವನದಲ್ಲಿ ಆಕರ್ಷಣೆಯು ಇರುತ್ತದೆ. ಆರ್ಥಿಕ ಪರಿಸ್ಥಿತಿ:- ಸರಸ್ವತಿ ವಾಸಿಸುವಲ್ಲಿ ಲಕ್ಷ್ಮಿ ನಿಲ್ಲಲಾರಳು ಆದುದರಿಂದ ಅರಿವು,ಯೋಗ್ಯತೆಯುಳ್ಳವರಾದರೂ ಸಂಪತ್ತು ತೃಪ್ತಿಕರವಾಗಿರಲಾರದು.ಉಳಿಸುವ ಗೊಡವೆ ಇರದವರು,"ನಾಳೆಯದು ನಾಳೆಗೆ" ಎನ್ನುವ ಇವರು ಇಂದಿನದನ್ನು ಚೆನ್ನಾಗಿ ಉಪಯೋಗಿಸಿಕೊಂಡು ಬಾಳುತ್ತಾರೆ. ದೇಹಾರೋಗ್ಯ:- ಬುದ್ದಿಗೆ ಪರಿಶ್ರಮವು ಅದಿಕವಾಗಿರುವುದರಿಂದ ಇವರಿಗೆ ದೇಹ ದಾರ್ಡ್ಯವು ಕಡಿಮೆ ಎಂದು ಕಾಣುತ್ತದೆ.ನರಗಳಿಗೆ ಸಂಬಂದಪಟ್ಟ ಕಾಯಿಲೆಗಳು ಇವರಿಗೆ ಬರುತ್ತಲೇ ಇರುವುದು.ಇವರಲ್ಲಿ ಹಲವರು ಉಗುರುಗಳನ್ನು ಕಚ್ಚುತ್ತಲೇ ಇರುತ್ತಾರೆ.ಈ ಅಭ್ಯಾಸವು ನರಗಳ ಬಲ ಕುಂದಿದವರಿಗೆ ಎಂದು ತಿಳಿಯುಬೇಕು.ವಾತಎನ್ನುವ ವಾಯು ಸಂಬಂಧವಾದ ಬಾಧೆಯು ಇವರಿಗೆ ಬರಬಹುದು.ನಾಲಿಗೆಯ ನೋವಿನಿಂದ ಕೆಲವರು ನರಳುವರು.ಈ ಸಂಖ್ಯೆಯುಳ್ಳ ಕೆಲವರಿಗೆ ಜ್ಞಾಪಕ ಶಕ್ತಿಯೂ ಕಡಿಮೆಯಾಗಿ ಮರವೆ ಜಾಸ್ತಿಯಾಗುವುದು. ಉದ್ಯೋಗ ಮತ್ತು ವ್ಯಾಪಾರ:- ಈ ಸಂಖ್ಯೆಯವರು ಹಲವರು ಬುದ್ದಿಯನ್ನು ಯೋಗ್ಯತೆಯನ್ನು ಉಪಯೋಗಿಸುವುದಕ್ಕಾಗಿ ವಿಜ್ಞಾನ ಮತ್ತು ವಿಜ್ಞಾನದ ವಿಭಾಗದಲ್ಲಿ ಸೇರಿ ಉದ್ಯೋಗ ಮಾಡುವರು.ಕಲೆಯನ್ನು ಸಂಪೂರ್ಣವಾಗಿ ಅವಲಂಬಿಸಿರುವ,ನಟ-ನಟಿಯರು ಕೂದ ಕೆಲವರು ಈ ಸಂಖ್ಯೆಯವರು ಈ ಸಂಖ್ಯೆಯವರು ಇರುವರು.ಕೋರ್ಟು-ಕಛೇರಿಗಳಲ್ಲಿ ವಾದಿಸುವ ಸಮರ್ಥರಾದ ವಕೀಲರು ಕೂಡ ಈ ಸಂಖ್ಯೆಯವರೇ. ಜ್ಯೋತಿಷ್ಯ ಶಾಸ್ತ್ರವನ್ನು ಪ್ರದಾನ ವೃತ್ತಿಯನ್ನಾಗಿಯೋ ಅಥವ ಸಹಾಯ ವೃತ್ತಿಯನ್ನಾಗಿಯೋ ಇಟ್ಟುಕೊಂಡವರು ಕೂದ ಹಲವರಿದ್ದಾರೆ.ಕೆಲವರು ಗಣಿತ ಶಾಸ್ತ್ರದಲ್ಲಿ ಮೇಧಾವಿಗಳಾಗಿ ನಿಪುಣರಾದ ಗಣಿತಾಧ್ಯಾಪಕರೂ ,ಲೆಕ್ಕಪತ್ರಗಳನ್ನು ನಿರೀಕ್ಷಿಸುವ ಆಡಿಟರುಗಳು ಕೂಡ ಈ ಸಂಖ್ಯೆಗೆ ಸೇರಿದವರು.ವ್ಯಾಪಾರ ಕ್ಷೇತ್ರದಲ್ಲಿಯೂ ಒಳ್ಳೆ ಸಾಮರ್ಥ್ಯ ದಿಂದ ಕುಶಲರಾಗಿ ವಾಣಿಜ್ಯ ವೃತ್ತಿಯಲ್ಲಿ ಬಹಳ ಹೆಸರುವಾಸಿ ಯಾಗುವರು ಈ ಐದು ಸಂಖ್ಯೆಯವರಾಗಿರುತ್ತಾರೆ. ಬುಧನ ಕಾಲ:- ಮೇತಿಂಗಳ೨೧ರಿಂದ ಜೂನ್ ತಿಂಗಳ ೨೨ರವರೆಗೆ ಮತ್ತು ಆಗಷ್ಟ್೨೩ರಿಂದ ಸೆಪ್ಟೆಂಬರ್ ೨೨ರವರೆಗೆ ಬುಧವಾರ ಜನಿಸಿದರೆ ಬುಧನು ಶ್ರೇಷ್ಟನಾಗಿರುತ್ತಾನೆ.ಇಂತಹ ಕಾಲದಲ್ಲಿ ಜನಿಸಿದರಾಗಿದ್ದರೆ ಅತ್ಯಂತ ಅದೃಷ್ಟ ಶಾಲಿಗಳಾಗಿ ಇರುವರು. ದಿಕ್ಕು ಮತ್ತು ಪ್ರದೇಶ:- ಬಡಗಣ ದಿಕ್ಕು(ಉತ್ತರ)ಬುಧನದು,ಬೆಟ್ಟಗಳು,ಆಟದಮೈದಾನ,ವಿದ್ಯಾಪೀಠಗಳು,ವಾಚನಾಲಯಗಳು,ಐದು ಸಂಖ್ಯೆಯವರು ಉತ್ತರಾಭಿಮುಖವಾಗಿ ಕುಳಿತುಕೊಂಡು ತಮ್ಮ ಕಾರ್ಯ ಆರಂಭಿಸಿದರೆ ಜಯವು ನಿಶ್ಚಿತ. ಅದೃಷ್ಟ ರತ್ನ,ಮತ್ತು ವರ್ಣ:- ಕಡು ಹಸಿರು ಪಚ್ಚೆ,ಬುಧನ ರತ್ನ,ಇದರ ಧಾರಣೆಯಿಂದ ಸಕಲ ವಿಧದಲ್ಲಿಯೂ ಜೀವನವು ಸುಖಮಯವಾಗಿ ಅಧಿಕವಾದ ಪ್ರಭಾವವನ್ನು ಬೀರುವವರಾಗುವರು. ಅದೃಷ್ಟ ವರ್ಣ:-ಎಲೆ ಹಸಿರು ಈ ಬಣ್ಣದ ಬಟ್ಟೆ ಆಭರಣ ಧರಿಸಿದರೆ ಅಭಿವೃದ್ದಿಯು ಕರತಲಾಮಲಕವಾಗಿರುವುದು. ಅನುಕೂಲದಿನಾಂಕಗಳು:- ೫,೧೪,೨೩ ಈ ದಿನಾಂಕಗಳು ಅನುಕೂಲವಾದವು ಶುಭಕಾರ್ಯಾರಂಭಕ್ಕೆ ಈ ದಿನಾಂಕಮತ್ತು ಬುಧವಾರವನ್ನು ಆರಿಸಿಕೊಳ್ಳುವುದು ಶುಭ,ಮತ್ತು ಕಾರ್ಯ ಜಯವು,ಧನಲಾಭವು,ಎಲ್ಲ ಕಾರ್ಯ ಸಪಲವು ಆಗುವುವು. ಅನಾನುಕೂಲದಿನಾಂಕಗಳು:-ಮೇಲಿನ ದಿನಾಂಕಗಳನ್ನು ಬಿಟ್ಟು ಉಳಿದವು ಅನಾನುಕೂಲದಿನಾಂಕಗಳು ಯಾವುದೇ ಶುಭಕಾರ್ಯ ಆರಂಭಿಸಬಾರದು ನಷ್ಟ ಅನುಭವಿಸುವಿರಿ. ಗ್ರಹಪ್ರೀತಿ:- ಐದು ಸಂಖ್ಯೆಯುಳ್ಳವರು ವಿಷ್ಣುಸಹಸ್ರನಾಮ ಪಾರಾಯಣ,ಗಾಯತ್ರಿಜಪ,ಮಹಾಮೃತ್ಯುಂಜಯ ಜಪ ಮಾಡುತ್ತಾಬಂದರೆ ಕಷ್ಟಗಳು ದೂರಾಗಿ ಇಷ್ಟಾರ್ಥ ಸಿದ್ದಿಯು ಉಂಟಾಗುವುದು. ಆರ‍್ರು ೬ಸಂಖ್ಯೆ:- ೬,೧೫,೨೪ ಈ ದಿನಾಂಕದವರು ಆರು ಸಂಖ್ಯೆಯಲ್ಲಿ ಬರುತ್ತಾರೆ. ಆರು ಸಂಖ್ಯೆಯ ಅಧಿಪತಿ ಗ್ರಹ ಶುಕ್ರನಾಗಿದ್ದಾನೆ. ರೂಪ ಮತ್ತು ಆಕಾರ:- ಈ ಸಂಖ್ಯೆಯವರು ನೋಡಲು ಬಹಳ ಸುಂದರವಾಗಿರುವರು.ಬರಿ ಬಿಳುಪಾಗಿಯು ಅಥವ ಕಪ್ಪಾಗಿಯೋ ಇರದೆ ಎಣ್ಣೆಗೆಂಪಾದ ಬಣ್ಣವುಳ್ಳವರಾಗಿರುವರು.ಸಾದಾರಣ ಎತ್ತರ ತಲೆಯಲ್ಲಿ ಮೃದುವಾದ ಗುಂಗುರು ಕೂದಲು.ನೀಲವರ್ಣವುಳ್ಳ ನೇತ್ರಗಳು,ಮದುರವಾದ ಕಂಠವು ಇವರಲ್ಲಿ ಇರುವುದು. ಇವೆಲ್ಲಾ ಇವರು ಆರು ಸಂಖ್ಯೆಯವರೆಂದು ನಮಗೆ ಸೂಚಿಸುತ್ತದೆ. ಗುಣ ನಡತೆ:- ಇವರಲ್ಲಿ ಹಲವರು ಪ್ರೀತಿಗೂ-ಸೌಂದರ್ಯಕ್ಕೂ ವಾಸಸ್ಥಾನದಂತೆ ತಿಳಿದು ಬರುತ್ತದೆ.ಪಾದಾದಿಕೇಶಾಂತ ಸೌಂದರ್ಯ ಮೂರ್ತಿಯಾದ ಇವರು ಪುರುಷರಾಗಲಿ ಸ್ತ್ರೀಯರಾಗಲಿ ತಮ್ಮನ್ನು ತಮ್ಮಸುತ್ತಮುತ್ತಲಿರುವ ಪ್ರದೇಶವನ್ನು ಓರಣವಾಗಿಯೂ ಅಂದವಾಗಿಯೂ ಆಕರ್ಷಕವಾಗಿಯೂ ಇಟ್ಟುಕೊಳ್ಳಬೇಕೆಂಬ ಸ್ವಭಾವದವರು. ನಾನಾ ವಿಧವಾದ ವಸ್ತ್ರಗಳನ್ನು ಪರಿಮಳ ದ್ರವ್ಯಗಳನ್ನು ಧರಿಸುವುದೆಂದರೆ ಇವರಿಗೆ ಅತ್ಯಂತ ಆಸೆ. ಸಂಗೀತ-ಸಾಹಿತ್ಯದಲ್ಲಿಯೂ ಇವರಿಗೆ ಹೆಚ್ಚಿನ ಅಭಿರುಚಿಯು ಪಾಂಡಿತ್ಯವು ಇರುವುದು.ಹಲವು ಸುಪ್ರಸಿದ್ದ ವಿದ್ವಾಂಸರು ಈ ಆರು ಸಂಖ್ಯೆಗೆ ಸೇರಿದವರು. ಪ್ರತ್ಯುಪಕಾರವನ್ನು ಅಥವ ಪ್ರತಿಫಲವನ್ನೂ ಅಪೇಕ್ಷಿಸದೆ ಪರರಿಗೆ ಸಹಾಯವನ್ನು ಮಾಡುವುದು ಇವರ ಸ್ವಭಾವ ತನ್ನ ಅವಸ್ಥೆಯ ಹೀನಸ್ಥಿತಿಯಲ್ಲಿದ್ದರೂ ಪರಹಿತಕ್ಕಾಗಿ ಕಷ್ಟಪಡುವ ತ್ಯಾಗಮಯಿಗಳು ಇವರು. ಬಿಳಿಬಣ್ನದ ವಸ್ತ್ರಗಳು,ರತ್ನಗಳು ಇವುಗಳಲ್ಲಿ ಬಹಳ ಆಸೆ. ಕಾಮಪ್ರವೃತ್ತಿಯು ಅಧಿಕವಾಗಿರುವುದರಿಂದ ಸನ್ಮಾರ್ಗ ಸತ್ಪವರ್ತನೆಗೆ ಅಷ್ಟು ಪ್ರಾದಾನ್ಯತೆ ಇಲ್ಲ.ಪ್ರೇಮ ವ್ಯವಹಾರದಲ್ಲಿ ಇವರಿಗೆ ಸೋಲೆಂಬುದಿಲ್ಲ.ಇಅದಕ್ಕೆ ಇವರ ಶರೀರ ಸೌಷ್ಟವವೂ ಮುಖಸೌಂದರ್ಯವೂ ಆಕರ್ಷಕ ವಾಗಿಯೂ ಇರುವುದೇ ಕಾರಣ.ಇವರು ಮೃದುಮದುರವಾಗಿ ಮಾತನಾಡಿ ಇತರರನ್ನು ತಮ್ಮ ಕಡೆ ಒಲಿಸಿಕೊಳ್ಳುವುದರಲ್ಲಿ ಚಾಣಾಕ್ಷರು. ಗೃಹಸ್ಥ ಜೀವನ:- ಒಳ್ಳೆಯ ರೂಪ-ಗುಣಗಳು ಇರುವ ಸತಿ-ಪತಿ ದೊರಕುವರು,ಇವರ ದಾಂಪತ್ಯ ಜೀವನ ಸುಖಮಯ ವಾಗಿರುವುದು. ಆರ್ಥಿಕ ಪರಿಸ್ಥಿತಿ:- ಇವರ ಆರ್ಥಿಕ ಪರಿಸ್ಥಿತಿ ಬಹಳ ತೃಪ್ತಿಕರವಾಗಿರುವುದು,ವೆಚ್ಚವು ಹೆಚ್ಚಾದರೂ ಅದಕ್ಕೆ ಬೇಕಾದ ಆದಾಯವೂ ಇದ್ದೇ ಇರುವುದು ಕೆಲವರು ಆಗರ್ಭಶ್ರೀಮಂತರಾಗಿರುವುದರಿಂದ ಎಷ್ಟು ಖರ್ಚಾದರೂ ಗಣನೆಗೆ ಬಾರದೆ ಇರುವುದು. ದೇಹಾರೋಗ್ಯ:- ಇವರ ಆರೋಗ್ಯವು ಹೆಚ್ಚು ಸಂತೋಷಜನಕವಾಗಿರುವುದಿಲ್ಲ.ಮೈಕೈನೋವು,ನರಗಳ ದುರ್ಬಲತೆ,ನೀರು,ಅಗ್ನಿ,ಆಯುಧ ಮೊದಲಾದವುಗಳಿಂದ ಗಂಡಾಂತರಗಳು ಒದಗಿ ಬರುತ್ತಿರುತ್ತವೆ.ಕೆಲವರು ಆಗಾಗ ಗಂಟಲು,ಮೂಗು,ತಲೆನೋವಿನಿಂದ ಬಾಧೆಪಡುತ್ತಿರುವರು ಕೆಲಸಂದರ್ಬಗಳಲ್ಲಿ ಪ್ರಾಣಾಪಾಯ ಒದಗುವ ಸೂಚನೆಗಳಿದ್ದರೂ ತಪ್ಪಿಸಿಕೊಳ್ಳುವರು,"ಗನೇರಿಯಾ"ಎಂಬವ್ಯಾಧಿಯಿಂದ ಬಾಧೆಪಡುವವರು ಇದರಿಂದ ಮುಕ್ತರಾಗಲು ಪ್ರಯತ್ನಿಸುವುದು ಜಾಗ್ರತೆ,ಇರುವುದು ಅತ್ಯವಶ್ಯಕ. ಉದ್ಯೋಗಮತ್ತು ವ್ಯಾಪಾರ:- ಈ ಸಂಖ್ಯೆಯವರುಗಳನ್ನು ೩ವಿಧವಾಗಿ ವಿಂಗಡಿಸಬಹುದು.ನಾಟಕ,ಸಿನಿಮಾ ಮೊದಲಾದವುಗಳಲ್ಲಿನ ನಟ,ನಟಿಗಳು ಹಲವರುಈ ಸಂಖ್ಯೆಯವರಾಗಿರುತ್ತಾರೆ.ಅಲ್ಲದೆ ನಾಟಕ,ಸಿನಿಮಾ ಹಿನ್ನೆಲೆಗಾಯಕರು,ಕಲಾವಿದರೂ ಈ ಗುಂಪಿಗೆ ಸೇರಿದವರಾಗಿರುತ್ತಾರೆ.ಚಿತ್ರಗಾರರು,ಶಿಲ್ಪಿಗಳು ಅಲಂಕಾರದ ಉಡುಪುಗಳನ್ನು ತಯಾರಿಸುವವರೇ ಮೊದಲಾದವರಲ್ಲಿ ಹಲವರು ಆರುಸಂಖ್ಯೆಗೆ ಸೇರಿದವರಾಗಿದ್ದಾರೆ.ಶಾಸನ ವಿಧಾನಗಳನ್ನು ಚೆನ್ನಾಗಿ ಮನ ಮಾಡುವ ವಕೀಲರು,ನೀತಿಪತಿಗಳು,ಪ್ರಸಿದ್ದವೈದ್ಯರುಗಳು ಕೆಲವರು ಇರುವರು.ಇವರು ಎರಡನೇ ಗುಂಪಿಗೆ ಸೇರುತ್ತಾರೆ. ರತ್ನಗಳು,ಮಧುರಪದಾರ್ಥಗಳು ಸ್ತ್ರೀಯರಿಗೆ ಉಪಯೋಗವಾಗುವ ಅಲಂಕಾರಿಕಾ ವಸ್ತುಗಳು ಮೊದಲಾದವನ್ನು ಇಟ್ಟುಕೊಂಡು ವ್ಯಾಪಾರಮಾಡಿ ಅದರ ಮೂಲಕ ಐಶ್ವರ್ಯ,ಕೀರ್ತಿಯನ್ನು ಸಂಪಾದಿಸಿಕೊಂಡ ದೊಡ್ಡ ವ್ಯಾಪಾರಿಗಳು ಮೂರನೇ ವರ್ಗದವರಾಗಿದ್ದಾರೆ. ಶುಕ್ರನ ಕಾಲ:- ಏಪ್ರಿಲ್ ೨೦ರಿಂದ ಮೇ೨೦ಮತ್ತು ಸೆಪ್ಟೆಂಬರ್೨೩ರಿಂದ ಅಕ್ಟೋಬರ್ ೨೨ರವರೆಗೆ ಶುಕ್ರನ ಕಾಲವಾಗಿರುತ್ತದೆ.ಈ ಕಾಲದಲ್ಲಿ ೬,೧೫,೨೪ಈ ದಿನಾಂಕಗಳಲ್ಲಿ ಶುಕ್ರವಾರ,ಸೋಮವಾರ ಜನಿಸಿದವರು ಅಪಾರವಾದ ಉನ್ನತಿಯನ್ನು ಶ್ರೀಮಂತಿಕೆಯನ್ನು ಸೌಂದರ್ಯವನ್ನೂ ಹೊಂದಿ ಉನ್ನತವಾಗಿ ಬಾಳುವರು. ಅದೃಷ್ಟ ರತ್ನ,ಮತ್ತು ವರ್ಣ:- ವಜ್ರ ಶುಕ್ರನಿಗೆ ಶುಭರತ್ನವಾಗಿದೆ,ಇದರ ಧಾರಣೆಯಿಂದ ಎಲ್ಲಾ ವಿಧಗಳಲ್ಲಿ ಜಯವು ಲಾಭವು ಉಂಟಾಗುತ್ತದೆ.ಮತ್ತು ಶುಭ್ರವಾದ ಬಿಳಿ ಬಣ್ಣದ ವಸ್ತ್ರವು ಶುಭ,ಮತ್ತು ನೀಲಿಯುಕೂಡ ಶುಭವನ್ನು ತರುತ್ತದೆ.ಹೆಚ್ಚು ಪ್ರಭಾವವನ್ನು ತೋರಿಸಲು ಅನುಕೂಲವಾಗುವುದು. ಅನುಕೂಲದಿನಾಂಕಗಳು:-೬,೯,೧೫,೧೮,೨೪,೨೭ ಈ ದಿನಾಂಕಗಳಲ್ಲಿ ನೂತನ ಕಾರ್ಯಗಳನ್ನು ಆರಂಭಿಸಲು ಜಯವುಂಟಾಗುವುದು,ಎಲ್ಲಾ ರೀತಿಯ ಶುಭಕಾರ್ಯಗಳನ್ನು ಮಾಡಬಹುದು. ಅನಾನುಕೂಲದಿನಾಂಕಗಳು:- ಮೇಲೆ ಹೇಳಿದ ದಿನಾಂಕಗಳನ್ನು ಬಿಟ್ಟು ಉಳಿದೆಲ್ಲಾ ದಿನಾಂಕಗಳು ಇವರಿಗೆ ಅನಾನುಕೂಲದಿನಾಂಕಗಳು,ಯಾವ ಶುಭಕಾರ್ಯಗಳನ್ನು ಮಾಡಲು ಅಪಜಯವುಂಟಾಗುವುದು. ಗ್ರಹಪ್ರೀತಿ:- ಶುಕ್ರಗ್ರಹದ ಪ್ರೀತಿಗಾಗಿ.ಲಕ್ಷ್ಮಿಸ್ತೋತ್ರ ಪಾರಾಯಣ,ಶುಕ್ರವಾರದಿನ ಸುಮಂಗಲಿಯರಿಗೆ ಅರಿಸಿನ ಕುಂಕುಮ,ಫಲತಾಂಬೂಲವನ್ನು ನೀಡುವುದು .ಈ ರೀತಿ ಮಾಡಿಕೊಂಡು ಬಂದರೆ ಗ್ರಹಶಾಂತವಾಗಿ ಕಷ್ಟಗಳು ತೊಲಗಿ ಧನಲಾಭವಾಗುವುದು.ಸರ್ವಕ್ಷೇಮ ಉಂಟಾಗುವುದು. ಏಳು ೭ ೭,೧೬,೨೫ ಈ ದಿನಾಂಕದಲ್ಲಿ ಜನಿಸಿದವರು ೭ರ ಸಂಖ್ಯೆಯಲ್ಲಿ ಬರುತ್ತಾರೆ ೭ರ ಗ್ರಹಧಿಪತಿ ಚಂದ್ರನೆಂದು ವಿದ್ವಾಂಸರು ನಿರ್ಣಯಿಸಿದ್ದಾರೆ.ಈ ಚಂದ್ರನೇ ಎರಡನೇ ಸಂಖ್ಯೆಗೂ ಅಧಿಪತಿಯುಎಂಬುದನ್ನು ಈ ಮೊದಲೇ ತಿಳಿಸಲಾಗಿದೆ.ಆದ್ದರಿಂದ ಚಂದ್ರನು ೨,೭ ಈ ಎರಡು ಸಂಖ್ಯೆಗಳಿಗೂ ಅಧಿಪತಿ ಎಂಬುದನ್ನು ಚೆನ್ನಾಗಿ ಜ್ಞಾಪಕದಲ್ಲಿಡಬೇಕು. ಒಂದೇ ಗ್ರಹವು ಎರಡು ಮತ್ತು ಏಳು ಸಂಖ್ಯೆಗೆ ಅಧಿಪತಿಯಾಗಿದ್ದರೆ ಈ ಸಂಖ್ಯೆಯುಳ್ಳವ್ಯಕ್ತಿಗಳಗುಣ ನಡತೆ ಅದೃಷ್ಟಗಳನ್ನು ಪ್ರತ್ಯೇಕವಾಗಿ ಹೇಗೆ ವಿವರಿಸುವುದು? ಈ ವಿಚಾರವನ್ನು ಶಾಸ್ತ್ರಜ್ಞರು ಸೇರಿ ಸಂದಾನಮಾಡಿ ವಿಮರ್ಶಿಸಿದ್ದಾರೆ.ಹಾಗೆ ವಿಮರ್ಶಿಸಿ ನಿರ್ದರಿಸಿದ ನಂತರ ಚಂದ್ರನ ಸ್ವರೂಪವನ್ನು ಎರಡುವಿಧವಾಗಿ ನೆಗೆಟಿವ್,ಮತ್ತು ಪಾಸಿಟೀವ್ ಎಂದು ಇಟ್ಟುಕೊಂಡು ಫಲವನ್ನು ಹೇಳಿದ್ದಾರೆ. ರೂಪ ಮತ್ತು ಆಕಾರ. ಗುಂಡಾದ ಮುಖ,ಸಣ್ಣ ಹುಬ್ಬು,ಕಠಿಣ ಪಾದಗಳು,ದಪ್ಪವಾಗಿ ಮಾಂಸದ ಶರೀರವು,ಗಿಡ್ದನೆ ಭುಜಗಳು,ಕಂದುಬಣ್ಣಆಕರ್ಷಣೀಯವಾದ ಅಂಗಸೌಷ್ಟವ ಇವುಗಳೇ ಏಳನೇ ಸಂಖ್ಯೆಯವರ ಆಕಾರವು. ಗುಣ-ನಡತೆ ಒಂದುಕಡೆ ಸ್ಥಿರವಾಗಿ ನಿಲ್ಲದ ಜೀವಮತ್ತು ಚಂಚಲವಾದ ಮನಸ್ಸುಳ್ಳವರು.ಸದಾಏನನ್ನಾದರೂ ಮಾಡಿಕೊಂದೇ ಇರುವವರು ಆಗಾಗ್ಗೆ ಪ್ರಯಾಣವನ್ನು,ಯಾತ್ರೆಯನ್ನು ಮಾಡಲು ಹೊರಡುವವರು ತಮ್ಮನ್ನು ನಂಬಿದವರನ್ನು ಕಾಪಾಡುವುದರಲ್ಲಿ ಬಹುಮತುವರ್ಜಿ ವಹಿಸುವರು. ದೊಡ್ದ ಆಸೆಗಳನ್ನು ಉನ್ನತವಾದ ಧ್ಯೇಯಗಳನ್ನು ಇಟ್ಟುಕೊಂಡಿದ್ದು ಕನಸುಕಾಣುತ್ತಾ ಇರುವರು.ಇವರ ನಡೆ ನುಡಿ ಕಂಡು ವಿಮರ್ಶಿಸುವುದಕ್ಕಿಂತಲೂ ತಡೆದು ನಿರ್ಬಂದಿಸುವುದಕ್ಕಿಂತಲೂ ಮಾಡಿತ್ತಿರುವ ಕಾರ್ಯವನ್ನು ಹಾಕುತ್ತಿರುವ ಪ್ಲಾನನ್ನು ಆಮೋದಿಸುತ್ತಾ ಬಂದರೆ ಸಾಕು ಅವರಿಗೆ ಬಹಳ ಪ್ರೋತ್ಸಾಹವನ್ನು ಕೊಟ್ಟೂ ಹುರಿದುಂಬಿಸಿ ಕಾರ್ಯ ಕುಶಲಿಗಳನ್ನಾಗಿ ಮಾಡುವುದು. ಅನ್ಯರಿಗಿಂತ ತಮ್ಮ ಕುಟುಂಬದವರನ್ನು ಸಂಬಂದಿಗಳನ್ನು ತುಂಬಾ ಪ್ರೀತಿಸುವರು.ಇವರ ಜೀವನದಲ್ಲಿ ಸುಖದುಖಗಳ ಕಷ್ಟ ನಷ್ಟಗಳ ಏರುತಗ್ಗುಗಳ ಆಗಮನವು ಚಕ್ರದಂತೆ ಸುತ್ತುತ್ತಾ ಇರುವುದು ಅವುಗಳನ್ನು ಸಹಜವಾದ ಸಂಭವವಾಗಿ ತಿಳಿದುಕೊಳ್ಳುವ ಧೃಡಮನಸ್ಸು ಇವರುಗಳಿಗೆ ಇರುವುದು. ಕೆಲವರಲ್ಲಿ ಸಾಹಿತ್ಯಾಅಭಿರುಚಿಯುಳ್ಳವರು ಕವಿಗಳೂ,ಸಂಗೀತ ರಸಿಕರೂ,ಆಗಿರುವ ಹಲವರು ಈ ಏಳು ಸಂಖ್ಯೆಗೆ ಸೇರಿದವರಾಗಿದ್ದಾರೆ. ಗೃಹಸ್ಥ ಜೀವನ. ಇವರ ಸಾಂಸಾರಿಕ ಜೀವನ ವು ಅಷ್ಟೊಂದು ಸುಖಕರವಾಗಿರುವುದೆಂದು ಹೇಳಲಾಗದು.ಆದರೂ ಅದನ್ನೇ ಆ ಬಿರುಗಾಳಿಯನ್ನೇ ಮಲಯಾನಿಲದಂತೆ ಶಾಂತವಾಗಿ ಇರಿಸಿಕೊಳ್ಳಬೇಕೆಂದು ಇವರು ಮಾಡುವ ಪ್ರಯತ್ನವು ಸಫಲವಾಗದೆ ಇರಲಾರದು ಸ್ವಾರ್ಥವನ್ನೇ ಹೆಚ್ಚಾಗಿ ಬಯಸುವ ಇವರು ಗೃಹಸ್ಥ ಜೀವನಕ್ಕೆ ಹೆಚ್ಚು ಗಮನಕೊಡುವುದಿಲ್ಲ. ಆರ್ಥಿಕ ಪರಿಸ್ಥಿತಿ ಇವರ ಆರ್ಥಿಕ ಪರಿಸ್ಥಿತಿ ಏರುತಗ್ಗು,ಲಾಭ ನಷ್ಟ ಗಳಿಂದ ಸುತ್ತುಕೊಂಡಿರುವುದು.ಆದರೂ ತಮ್ಮ ಅವಶ್ಯಕತೆಗಳನ್ನೆಲ್ಲಾ ಪೂರೈಸಿಕೊಳ್ಳಲು ಆಕಸ್ಮಿಕ ಸಹಾಯವು ಬಂದೊದಗುವುದರಿಂದ ಸ್ಥಿರವಾದ ಉತ್ಪನ್ನವಿಲ್ಲದಿದ್ದರೂ ಅದಕ್ಕಾಗಿ ಚಿಂತಿಸುವವರಲ್ಲ ರೇಸು ಲಾತರಿಯಂತವುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಶ್ರೀಮಂತರಾಗಿ ಬಿಡಬೇಕೆಂದು ಇವರು ಮಾಡುವ ಪ್ರಯತ್ನವು ಸಫಲವಾಗುವುದಿಲ್ಲ.ಆದರೆ ವ್ಯಾಪಾರದ ಕ್ಷೇತ್ರದಲ್ಲಿ ಇವರು ಮಾಡುವ ಕೆಲಸವು ಲಾಭದಾಯಕವಾಗಿರುವುದು. ದೇಹಾರೋಗ್ಯ. ಇವರಿಗೆ ಚರ್ಮ ಸಂಬಂದವಾದ ರೋಗಗಳು ಬರಬಹುದು ಪಕ್ಷವಾತವೆಂಬ ವ್ಯಾಧಿಯಿಂದ ಬಳಲುವವರು ಕೆಲವರು ಇವರು ಶ್ವಾಸಕ್ಕೆ ಸಂಬಂಧವಾದ ರೋಗವು ಕೆಲವು ಸಂದರ್ಬಗಳಲ್ಲಿ ಇವರನ್ನು ಭಾಧಿಸುವುದು.ಮಲಬದ್ದತೆಯು ಇಲ್ಲದಂತೆ ನೋಡಿಕೊಳ್ಳುವುದು ಮೇಲು. ವ್ಯಾಪಾರ ಮತ್ತು ಉದ್ಯೋಗ:- ಈ ಏಳು ಸಂಖ್ಯೆಯವರಿಗೆ ವ್ಯಾಪಾರದ ಮೂಲಕವೇ ಉತ್ತಮ ಲಾಭದೊರೆಯುವುದು.ನೀರಿನಲ್ಲಿ ಉತ್ಪನ್ನವಾಗುವ ವಸ್ತು ದೋಣಿಗಳು,ಹಡಗು ಇವುಗಳ ಮೂಲಕ ನಡೆಸುವ ವ್ಯಾಪಾರವು,ದ್ರವ ಪದಾರ್ಥಗಳು ಮತ್ತು ಇಂತಹ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರವನ್ನು ನಡೆಸುವವರು. ಉದ್ಯೋಗಕ್ಷೇತ್ರದಲ್ಲಿ ಇರುವವರು ಕೆಲವರು ಬಹು ಸಾದಾರಣವಾದ ಕೆಲಸವನ್ನು ಮಾಡುವವರು.ಮನೆಗೆಲಸ ಮಾಡುವವರು ಅಡಿಗೆಯವರು ಮೊದಲಾದವರು ಇರುವರು.ನೀರಿನಲ್ಲಿ ಮೀನು ಹಿಡಿಯುವ ಉದ್ಯೋಗದಲ್ಲಿ ಕೆಲವರು ಇರುವುದು ಇದೆ.ಇನ್ನೂ ಇತರ ನೀಚಕೆಲಸವನ್ನು ಮಾಡುವವರು ಇರುವರು. ಚಂದ್ರನ ಕಾಲ:- ಸೋಮವಾರ ಚಂದ್ರನದು ರಾತ್ರಿಯಲ್ಲಿ ಬಲಶಾಲಿಯಾಗಿರುವನು ಒಂದುಗಂಟೆಕಾಲವು ಚಂದ್ರನಿಗೆ ಸೇರಿದ ಕಾಲಪರಿಮಿತಿ. ದಿಕ್ಕು ಮತ್ತು ಪ್ರದೇಶ:- ಉತ್ತರದಿಕ್ಕು ಚಂದ್ರನಿಗೆ ಸೇರಿದ್ದು ನೀರಿಗೆ ಸಂಬಂದಪಟ್ಟ ಏರಿಗಳು,ಕೆರೆಗಳು,ತಟಗಳು(ನದಿದಂಡೆ)ಬಾವಿಗಳು ಸ್ನಾನಗೃಹಗಳು,ಒದ್ದೆಯಾದ ಪ್ರದೇಶಗಳು ಚಂದ್ರನ ಪ್ರದೇಶಗಳು ಈ ವಿಷಯಗಳನ್ನು ಅನ್ವಯಿಸಿ ಕೊಂಡು ಏಳು ಸಂಖ್ಯೆಯವರ ವಾಸಸ್ಥಾನ ಸಂಚರಿಸುವ ಪ್ರದೇಶಗಳನ್ನು ಅರಿತುಕೊಳ್ಳಬಹುದು. ಅದೃಷ್ಟದ ರತ್ನ:- ಮುತ್ತು ಅಥವ ವಜ್ರವನ್ನು ದರಿಸಿದರೆ ಕಷ್ಟಗಳು ತೊಲಗಿ ಹೋಗುವುವು.ವ್ಯಾಪಾರ ಉದ್ಯೋಗದಲ್ಲಿ ಜಯವು ಲಾಭವೂ ದೊರೆಯುವುದು. ಅದೃಷ್ಟದ ವರ್ಣ:- ಬಿಳಿ ಮತ್ತು ಎಲೆ ಹಸಿರು ಈ ಬಣ್ಣದ ವಸ್ತ್ರ,ಆಭರಣವನ್ನು ಧರಿಸುವುದು ಶುಭವನ್ನು ತರುತ್ತದೆ. ಅನುಕೂಲದಿನಾಂಕಗಳು:-೨,೪,೧೧,೧೩,೨೦.೨೨,೨೫. ಅನಾನುಕೂಲದಿನಾಂಕಗಳು:- ಮೇಲಿನವು ಬಿಟ್ಟು ಉಳಿದೆಲ್ಲವು. ಗ್ರಹಪ್ರೀತಿ:- ದುರ್ಗಾಸ್ತೋತ್ರ ಪಾರಾಯಣ,ವಿಘ್ನೇಶ್ವರನ ಪೂಜೆ,ಸ್ತೋತ್ರ ಪಾರಾಯಣ,ಮಾಡುವುದರಿಂದ ಕಾರ್ಯಸಿದ್ದಿಮತ್ತು ಸಂಪತ್ತು ಉಂಟಾಗುವುದು. ಎಂಟು ೮ ಸಂಖ್ಯೆ ಈ ಎಂಟು ಸಂಖ್ಯೆಯವರು ೮,೧೭,೧೬ಈ ದಿನಾಂಕದಲ್ಲಿ ಜನಿಸಿದವರಾಗಿರುತ್ತಾರೆ ೮ಕ್ಕೆ ಗ್ರಹಾದಿಪತಿ ಶನೇಶ್ವರನಾಗಿದ್ದಾನೆ. ರೂಪ ಮತ್ತು ಆಕಾರ:- ಇವರು ನೋಡಲು ಅಷ್ಟೊಂದು ಎತ್ತರವಾಗಿರದೆ ಸಾದಾರಣ ಮದ್ಯಮ ತೆರವಾದ ಎತ್ತರವುಳ್ಳವರಾಗಿರುವರು.ಇವರ ಕೂದಲು ದಟ್ಟವಾಗಿ ಇರುವುದು.ವಿಶಾಲವಾದ ಭುಜಗಳು, ಅಗಲವಾದ ಹುಬ್ಬುಗಳು,ಸಣ್ಣ ಕಾಲುಗಳು ದೊಡ್ದಕಿವಿ ಲಕ್ಷಣವುಳ್ಲವರು ಕಪ್ಪು ಅಥವ ಎಣ್ಣೆಗೆಂಪು ಬಣ್ಣವುಳ್ಳವರಾಗಿರುವರು.ಇವರನ್ನು ಎಂಟು ಸಂಖ್ಯೆಯವರೆಂದು ಸುಲಬವಾಗಿ ಕಂಡು ಹಿಡಿಯ ಬಹುದು. ಗುಣ ನಡತೆ:- ಶನೇಶ್ವರನನ್ನೇ ಅಧಿಪತಿಯನ್ನಾಗಿ ಪಡೆದಿರುವ ಈ ಎಂಟು ಸಂಖ್ಯೆಯವರು ನೀತಿ ನಿಯಮಗಳ ಬಂಧನಕ್ಕೆ ಒಳಗಾಗಿರುವರು ಇವರುಗಳಿಗೆ ನಿಧಾನವೇ ಪ್ರಧಾನವಾಗಿರುತ್ತದೆ.ಎಂಥಹ ಕಾರ್ಯವಾದರೂ ನಿಂತು ನಿದಾನಿಸಿ ಚೆನ್ನಾಗಿ ಯೋಚಿಸಿದ ನಂತರವೇ ಕಾರ್ಯರಂಗಕ್ಕೆ ಇಳಿಯುವರು. ಯಾವಾಗಲೂ ತಲೆ ಎತ್ತಿ ಮೇಲೆ ನೋಡದೆ ನೆಲವನ್ನು ನೋಡಿಯೇ ನಡೆಯುವರು ದೈವಭಕ್ತಿಯು,ಹಿರಿಯರಲ್ಲಿ ಗೌರವವು ತನ್ನ ಮೇಲೆ ಅಪಾರವಾದ ನಂಬಿಕೆಯು ಅಭಿಲಾಷೆಯೂ ಉಳ್ಲವರು ಆದರೂ ಸಮಯದ ಪ್ರಭಾವದಿಂದ ಜಗಳ,ಕದನಗಳು ಮುಂದೆ ಬಂದರೂ ಹಿಂಜರಿಯುವ ಹೇಡಿಗಳಲ್ಲ. ಕೆಲವು ಸಂದರ್ಭಗಳಲ್ಲಿ ತಮ್ಮೊಳಗೇ ಜಗಳ ಮಾಡಿಕೊಂಡು ತಾವೇ ಅದನ್ನು ನ್ಯಾಯವಾಗಿ ಪರಿಹರಿಸಿಕೊಳ್ಳಲು ಸಾದ್ಯವಾಗದೆ ಇದ್ದಾಗ ಇವರನ್ನು ಮದ್ಯಸ್ಥರನ್ನಾಗಿ ಇರಬೇಕೆಂದು ಇಷ್ಟಪಟ್ಟು ಕೇಳಿಕೊಂಡರೆ ಇವರು ಅವರುಗಳಿಗೆ ನ್ಯಾಯಸಮ್ಮತವಾದ ತೀರ್ಮಾನ ನೀಡಿ ಅವರ ವೈಮನಸ್ಸನ್ನು ಪರಿಹರಿಸಿ ಧರ್ಮಾತ್ಮರೆಂಬ ಹೆಸರುಗಳಿಸುವರು. ಇವರಲ್ಲಿ ವಿರೋಧವನ್ನು ಮಾಡಿಕೊಂಡವರು ಸ್ನೇಹವನ್ನು ಸಂಪಾದಿಸಿದರೂ ಎರಡನ್ನೂ ಯಾವ ಜೀವವೂ ಮರೆಯಲಾರದು.ಯಾರಾದರೂ ಇವರನ್ನು ಹೊಗಳಿದರೆ ಸರಿ ಆ ಹೊಗಳಿಕೆಗೆ ಮುಳ್ಳಾಗಿ ಅವರಿಗೆ ಯಾವ ವಿಧವಾದ ಸಹಾಯವನ್ನಾದರೂ ಮಾಡಲು ಸಿದ್ದರಿರುವರು. ಶಾರೀರಿಕ ಶ್ರಮದಿಂದ ಕೆಲಸ ಮಾಡುವುದೆಂದರೆ ಇವರಿಗೆ ಅತಿ ಪ್ರೀತಿ ಎಂತಹ ಕೆಲಸವಾದರೂ ಎಷ್ಟು ಕಷ್ಟವಾದರೂ ಅವಸರ ಪಡದೆ ನಿಧಾನವಾಗಿ ಸರಿಯಾಗಿ ಮಾಡಿಮುಗಿಸುತ್ತಾರೆ. ಇವರಿಗೆ ಜನಸಂದಣಿಯಲ್ಲಿರುವುದಕ್ಕಿಂತಲೂ ಏಕಾಂತದಲ್ಲಿ ಇರುವುದೆಂದರೆ ಎಲ್ಲಿಲ್ಲದ ತೃಪ್ತಿ ಹಲವು ವಿಧದಲ್ಲಿ ಜೀವನವನ್ನು ಅಳವಡಿಸಿಕೊಳ್ಳಬಯಸಿ ಅದಕ್ಕಾಗಿ ಪ್ರಯತ್ನಶೀಲರಾದರೂ ಯಾವುದೇ ಒಂದು ವಿಧವಾಗಿ ಲಕ್ಷವನ್ನು ಮಾತ್ರವೇ ನೆರವೇರಿಸುವುದರಲ್ಲಿ ತಾವು ಐಕ್ಯವಾಗಿ ಬಿಡುತ್ತಾರೆ.ಮುಂದೆ ಪ್ರಯತ್ನ ಪಡುವುದಕ್ಕಿಂತಲೂ ದೈವ ಸಂಕಲ್ಪವೇ ಬಲವತ್ತರವಾಗಿರುವುದೆಂಬ ನಿರ್ಣಯಕ್ಕೆ ಬಂದು ಬಿಡುತ್ತಾರೆ. ಗೃಹಸ್ಥ ಜೀವನ:- ಇವರ ಸಾಂಸಾರಿಕ ಜೀವನ ಚೆನ್ನಾಹಿರುವುದು ಅನುಕೂಲವಾದ ಪತ್ನಿ(ಪತಿ) ದೊರೆಯುವರು ಪ್ರೇಮವ್ಯವಹಾರದಲ್ಲಿ ಇವರು ಸಫಲರಾಗುವುದಿಲ್ಲ.ಪ್ರಯತ್ನ ವಿಪಲವಾದ ನಂತರ ತಾವು ಮಾಡಿದ ಕಾರ್ಯ ನ್ಯಾಯ ಸಮ್ಮತವಲ್ಲ ಎಂಬ ತೀರ್ಮಾನಕ್ಕೆ ಬಂದು ಮನಸ್ಸನ್ನು ಸಮಾದಾನ ಮಾಡಿಕೊಳ್ಳುವರು. ಆರ್ಥಿಕ ಪರಿಸ್ಥಿತಿ:- ಇವರ ಆರ್ಥಿಕ ಪರಿಸ್ಥಿತಿ ಹೆಚ್ಚು ಕಡಿಮೆ ಯಾಗಿಯೇ ಇರುವುದು.ಕೆಲವು ಸಮಯ ಹೆಚ್ಚು ನಷ್ಟವಾದರೂ ಕೊನೆಗೆಆ ಸ್ಥಿತಿ ಯು ಸುದಾರಿಸುವುದು.ಮೂವತ್ತು ವಯಸ್ಸಿನ ವರೆಗೆ ಸ್ವಲ್ಪ ಶ್ರಮ ಕಂಡುಬಂದರೂ ಇವರ ಜೀವನವು ಸುಗಮವಾಗಿ ಸಾಗುವುದು. ಸಕಲ ಸುಖಃ ಸೌಭಾಗ್ಯಗಳನ್ನು ಅನುಬವಿಸುವರು. ದೇಹಾರೋಗ್ಯ:- ಈ ಸಂಖ್ಯೆಯವರಿಗೆ ಜೀರ್ಣಕೋಶಕ್ಕೆ ಸಂಬಂಧಪಟ್ಟವ್ಯಾಧಿಗಳು ಬರುವವು.ಹೊಟ್ಟೆನೋವು,ನರಗಳ ದೌರ್ಬಲ್ಯ ಮೊದಲಾದ ರೋಗಗಳು ಕೆಲವರನ್ನು ಕಷ್ಟಪಡಿಸುವುದು.ಕೆಲವರು ಹಲ್ಲುನೋವಿನಿಂದ ಅವಸ್ಥೆ ಪಟ್ಟರೆ ಕೆಲವರು ಕುಷ್ಟರೋಗದಂತಹ ಚರ್ಮರೋಗಗಳಿಂದ ಬಾಧೆ ಪಡುವರು ಕೆಲವರು ಬಧಿರರಾಗಿಯೂ ಇರಬಹುದು,ಇವಲ್ಲದೆ ರಕ್ತ ಸಂಬಂದವಾದ ಕಾಯಿಲೆಗಳಿಂದ ಕೆಲವರು ನರಳಬಹುದು. ಉದ್ಯೋಗ-ವ್ಯಾಪಾರ:- ಸ್ವತಂತ್ರವಾದ ಉದ್ಯೋಗಕ್ಕಿಂತಲೂ ಒಬ್ಬರ ಅಧೀನದಲ್ಲಿದ್ದು ಸೇವೆ ಸಲ್ಲಿಸುವವರೇ ಈ ಸಂಖ್ಯೆಯಲ್ಲಿ ಅನೇಕ ಮಂದಿ ಇರುವರು.ವ್ಯವಸಾಯವನ್ನು ಮಾಡುವವರು ಎರಡನೇ ವರ್ಗದವರು ಅಲ್ಲದೆ ನೆಲ,ಹೊಲ,ದೊಡ್ದಕಟ್ಟಡಗಳು ಇವುಗಳಿಗೆ ಸಂಬಂದಪಟ್ಟ ಕಂಟ್ರಾಕ್ಟರ್,ಭೂಮಾಲೀಕರು,ಕಲ್ಲಿದ್ದಲು ಮತ್ತು ಇತರೆ ಖನಿಜ ಪದಾರ್ಥಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರು ಪ್ರಸಿದ್ದ ಭೂಗರ್ಭಶಾಸ್ತ್ರಜ್ಞರೂ,ಇಂಜಿನಿಯರುಗಳು ಈ ಸಂಖ್ಯೆಯಲ್ಲಿ ಒಳಪಡುತ್ತಾರೆ. ಶನಿಯ ಕಾಲ:- ಶನಿವಾರ ಶನಿಗೆ ಪ್ರಿಯವಾದ ವಾರ ಡಿಸೆಂಬರ್ ೨೨ರಿಂದ ಜನವರಿ ೧೯ ಶನೇಶ್ವರನ ಕಾಲ ೮ ಸಂಖ್ಯೆಯವರು ಈ ಅವದಿಯಲ್ಲಿ ಜನಿಸಿದ್ದರೆ ಬಹಳ ಪ್ರಸಿದ್ದಿ ಹೊಂದುವರು ರಾತ್ರಿಕಾಲ ಬಲಿಷ್ಟನಾಗಿರುವನು ಶನೀಶ್ವರನು. ದಿಕ್ಕು ಮತ್ತು ಪ್ರದೇಶ:- ದಕ್ಷಿಣ ದಿಕ್ಕು ಮತ್ತು ಆಗ್ನೇಯದಿಕ್ಕು,ಗುಹೆಗಳು,ದಟ್ಟವಾದ ಅರಣ್ಯಗಳು,ಮರುಭೂಮಿ ಹಾಳುಬಿದ್ದ ಕಟ್ಟಡಗಳು ಅಶುದ್ದ ಸ್ಥಳಗಳು ಶನೇಶ್ವರನಿಗೆ ಸೇರಿದ ಪ್ರದೇಶಗಳು ಇದರ ಮೂಲಕ ಈ ಸಂಖ್ಯೆಯವರು ವಾಸಿಸುವ ಅಥವ ಸಂಚರಿಸುವ ಸ್ಥಳಗಳನ್ನು ತಿಳಿಯಬಹುದು. ಅದೃಷ್ಟದ ರತ್ನ:- ನೀಲರತ್ನವನ್ನು ಚೆನಾಗಿ ಪರೀಕ್ಷಿಸಿ ಧರಿಸಿದರೆ ಬಹಳ ಭಾಗ್ಯಶಾಲಿಗಳಾಗಿರುವರು,ಇದರಿಂದ ಒಳ್ಳೆ ಪ್ರಭಾವಾನ್ವಿತರಾಗಿ ಕೈಗೊಂಡ ಕಾರ್ಯದಲ್ಲಿ ಜಯಶೀಲರಾಗುವರು. ಅದೃಷ್ಟದ ವರ್ಣ:- ಕಪ್ಪು ೮ಜನ್ಮದಿನಾಂಕದವರು ಕಪ್ಪು ವಸ್ತ್ರ,ಆಭರಣವನ್ನು ಧರಿಸುವುದು ಶುಭವನ್ನು ತರುತ್ತದೆ. ಅನುಕೂಲದಿನಾಂಕಗಳು:-೧,೧೧,೧೯,೨೮ಮತ್ತು೮,೧೭,೨೬ಈ ದಿನಾಂಕಗಳಲ್ಲಿ ಯಾವುದೇ ಶುಭಕಾರ್ಯ ಆರಂಭಿಸುವುದು ಲಾಭವನ್ನು ತರುತ್ತದೆ. ಅನಾನುಕೂಲದಿನಾಂಕಗಳು:- ಮೇಲೆ ಹೇಳಿರುವ ಸಂಖ್ಯೆಗಳನ್ನು ಬಿಟ್ಟು ಉಳಿದೆಲ್ಲವು. ಗ್ರಹಪ್ರೀತಿ:- ಶನಿವಾರ ಶನೇಶ್ವರ ಸ್ತೋತ್ರ ಪಾರಾಯಣ,ದುರ್ಗಾಸ್ತೋತ್ರ ಪರಾಯಣ,ವೆಂಕಟೇಶ್ವರ ಸ್ವಾಮಿಯ ದರ್ಶನ,ಶನಿವಾರ ನವಗ್ರಹ ಸನ್ನಿಧಿಯಲ್ಲಿ ಎಳ್ಳೆಣ್ಣೆ ದೀಪವನ್ನು ಹಚ್ಚಿಟ್ಟು ತಮ್ಮ ಶಕ್ತ್ಯಾನುಸಾರ ಪ್ರದಕ್ಷಿಣೆ ಮಾಡಿದರೆ ಸಕಲವಿಧವಾದ ಸೌಖ್ಯವನ್ನು ದಯಪಾಲಿಸುವರು.(ಸಾಡೆಸಾತ ಶನಿ,ಅಷ್ಟಮ ಶನಿ ಇರುವವೇಳೆಯೂ ಈ ರೀತಿ ಪೂಜೆ,ಪಾರಾಯಣ ಮಾಡಿದರೆ ದೋಷಪರಿಹಾರವಾಗುತ್ತದೆ) ಒಂಬತ್ತು ಸಂಖ್ಯೆ ೯ ಈ ಸಂಖ್ಯೆಯವರು ೯,೧೮,೨೭ಈ ದಿನಾಂಕದವರಾಗಿರುತ್ತಾರೆ.ಒಂಬತ್ತರ ಅಧಿಪತಿ ಕುಜಗ್ರಹ(ಮಂಗಳ)ಆಗಿರುತ್ತಾನೆ. ರೂಪ ಮತ್ತು ಆಕಾರ:- ಒಳ್ಳೆ ಗಂಭೀರವಾದ ಆಕಾರದಿಂದ ಕೂಡಿ ಸಾದಾರಣ ಎತ್ತರವಾಗಿ ಇರುವರು.ಬಲಿಷ್ಟವಾದ ಎಲುಬುಗಳಿದ್ದು ದಷ್ಟಪುಷ್ಟವಾದ ಶರೀರವಿರುವುದರಿಂದ ಸುರದ್ರೂಪಿಯಾಗಿ ಕಾಣುವರು ತೀಕ್ಷಣವಾದ ನೋಟ,ಕೆಂಚಗಿರುವ ತಲೆಕೂದಲು.ಶರೀರದಲ್ಲಿ ಗಾಯಗಳು ಮೊದಲಾದ ಗುರುತುಗಳು ಇರುತ್ತವೆ.೯ಸಂಖ್ಯೆಯವರು ಭಾಗ್ಯಶಾಲಿಗಳೆಂದು ಸುಲಭವಾಗಿ ಕಂಡುಹಿಡಿಯಬಹುದು. ಗುಣನಡತೆ:- ಈ ಸಂಖ್ಯೆಯವರಲ್ಲಿ ಧೈರ್ಯಮತ್ತು ಸಾಹಸವನ್ನು ಕಾಣಬಹುದು.ಯಾವಕಾರ್ಯದಲ್ಲಾದರೂ ಸಾಹಸದಿಂದ ಮುಂದೆನುಗ್ಗುವರು.ಜಯಪರಾಜಯಗಳನ್ನು ಪೂರ್ವಬಾವಿಯಾಗಿಯೇ ಯೋಚಿಸಿ ನಂತರ ಕಾರ್ಯರಂಗಕ್ಕೆ ಇಳಿಯುವುದೆಂಬ ಸ್ವಬಾವವು ಇವರಲ್ಲಿಲ್ಲ ಆರಂಭಿಸಿದ ಕಾರ್ಯದಲ್ಲಿ ಪರಾಜಯವಾದರೂ ಮನಸ್ಸಿನಲ್ಲಿ ಕಿಂಚಿತ್ತೂ ಚಿಂತೆ ಇಲ್ಲದೆ ಎನೂ ನಡೆಯದ ರೀತಿಯಲ್ಲಿ ಇದ್ದುಬಿಡುವರು. ಜ್ಯೋತಿಷ್ಯಶಾಸ್ತ್ರದಲ್ಲಿ ಮಂಗಳಗ್ರಹವನ್ನು ತರುಣನಾಗಿಯು ಸೇನಾಧಿಪತಿಯಾಗಿಯೂ ವರ್ಣಿಸಿದೆ.ಆದುದರಿಂದ ೯ಸಂಖ್ಯೆಯವರು ತಮ್ಮ ವೃದ್ದಾಪ್ಯದಲ್ಲೂ ಒಳ್ಳೆ ಹುರುಪಿನಿಂದ ಆಲಸ್ಯವಿಲ್ಲದೆ ವಿಶ್ರಾಂತಿ ಆಪೇಕ್ಷಿಸದೆ ಉತ್ಸಾಹದಿಂದಲೇ ಇರುವರು.ಇವರಿಗೆ "ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು" ಎಂಬುದಿರಲಾರದು ಯಾವುದಾದರೂ ವ್ಯವಹಾರದಲ್ಲಿ ತಪ್ಪುಗಳು ಏರ್ಪಟ್ಟರೆ ಜಗಳಕ್ಕೂ ಹಿಂಜರಿಯದವರು ಇವರೊಂದಿಗೆ ಬಹು ಜಾಗ್ರತೆಯಿಂದ ನಡೆದುಕೊಳ್ಳಬೇಕು. ನಿತ್ಯನೂತನವಾದ ಅನುಸಂಧಾನಗಳನ್ನು,ಪರೀಕ್ಷೆಗಳನ್ನು ಮಾಡುವುದಾದರೆ ಇವರಿಗೆ ಬಹಳ ಉತ್ಸಾಹ ಈ ಸಂಖ್ಯೆಯವರು ಮಹಿಳೆಯಾಗಿದ್ದರೆ ಅವರ ಮನೋಭಾವವನ್ನು ಕಂಡುಹಿಡಿಯುವುದು ಬಲು ಕಷ್ಟ.ಆದರೆ ಸಾಮಾನ್ಯವಾಗಿ ಸಹನಶೀಲೆಯರು,ಸದ್ಗುಣಿಗಳು ಆಗಿರುವರು. ಗೃಹಸ್ಥ ಜೀವನ:- ಇವರು ಪ್ರೇಮವ್ಯವಹಾರದಲ್ಲಿ ಪರಂಪರಾಗತವಾದ ಕಟ್ಟುನಿಟ್ಟುಗಳಿಗೆ ವಿರುದ್ದವಾಗಿ ಪ್ರವರ್ತಿಸುವರು ಇದರಿಂದ ಇವರ ಪ್ರತಿಷ್ಟೆಗೆ ಕುಂದು ಬಂದರೂ ಬರಬಹುದು,ಆಗಲೂ ಅದನ್ನು ಸರಿಪಡಿಸಿಕೊಳ್ಳುವ ಸ್ವಬಾವ ಇವರಿಗೆ ಇರುವುದಿಲ್ಲ ಇವರ ಕೌಟುಂಬಿಕ ಜೀವನವು ಅಷ್ಟೊಂದು ಪ್ರಶಾಂತವಾಗಿರುವುದೆಂದು ಹೇಳಲು ಸಾದ್ಯವಿಲ್ಲ.ಇವರಿಗೆ ಸ್ವಾಬಾವಿಕವಾಗಿರುವ ಮುಂಗೋಪದಿಂದ ಸತಿ-ಪತಿಗಳಲ್ಲಿ ವೈಮನಸ್ಸು ಉಂಟಾದರೂ ಕೊನೆಗೆ ಒಂದು ವಿಧವಾದ ಶಾಂತಿಯು ನೆಲೆಸುವುದು. ಆರ್ಥಿಕ ಪರಿಸ್ಥಿತಿ:- ಇವರ ಆರ್ಥಿಕ ಪರಿಸ್ಥಿತಿ ಹೆಚ್ಚು ತೃಪ್ತಿಕರವಾಗಿಲ್ಲದಿದ್ದರೂ ಅವಶ್ಯಕತೆಗಳಿಗೆ ಬೇಕಾಗುವ ಹಣವು ಮಾತ್ರ ಇವರಿಗೆ ಸಿಗುತ್ತಲೇ ಇರುತ್ತದೆ.ಕೈ ಉದ್ದವಾಗಿದ್ದು ಮಿತವ್ಯಯವೇನೆಂದೇ ತಿಳಿಯದ ಸ್ವಬಾವವುಳ್ಲವರಾದುದರಿಂದ ಕೆಲವು ಬಾರಿ ಹಣಕ್ಕಾಗಿ ಪರದಾಡಬೇಕಾಗುವುದು. ದೇಹಾರೋಗ್ಯ:- ಇವರು ಆರೋಗ್ಯವಂತರಾಗಿದ್ದರೂ ನರಗಳ ದೌರ್ಬಲ್ಯ ದಿಂದಲೂ ತಲೆನೋವಿನಿಂದಲೂ ಕಷ್ಟಪಡುವರು.ಕೆಲವರಿಗೆ ಉದರ ಶೂಲೆ,ಮೂತ್ರಾಶಯಕ್ಕೆ ಸಂಬಂಧಪಟ್ಟ ನೋವುಗಳು ಆಗಾಗ್ಗೆ ಉಂಟಾಗುತ್ತಿರುತ್ತವೆ.ಅಲ್ಲದೆ ಕೆಲವು ಸಲ ಏಟುಗಳು ತಗುಲುತ್ತಲೇ ಇರುವುದರಿಂದ ಶರೀರದಲ್ಲಿ ಗಾಯಗಳಾಗುವುವು ಇದು ಒಂದು ಸಹಜವಾದ ಸಂಬಂದವಾದರೂ ದೈವ ಪ್ರಾರ್ಥನೆಗಳ ಮೂಲಕ ಈ ನೋವುಗಳನ್ನು ಇಲ್ಲದಂತೆ ಮಾಡಲು ಸಾಧ್ಯವಿಲ್ಲವಾದರೂ ಕಡಿಮೆಮಾಡಿಕೊಳ್ಳಬಹುದು. ಉದ್ಯೋಗ-ವ್ಯಾಪಾರ:- ಅಂಗಾರಕನನ್ನು ಅಧಿಪತಿಯಾಗಿರುವ ೯ಸಂಖ್ಯೆಯವರಲ್ಲಿ ಹಲವರು ಆಯುಧಗಳನ್ನು ಧರಿಸುವ ಮಿಲಿಟರಿಮತ್ತು ಪೋಲೀಸ್ ವಿಭಾಗದಲ್ಲಿ ಸಾಹಸ ಕಾರ್ಯಗಳನ್ನು ಮಾಡುವ ಉದ್ಯೋಗದಲ್ಲಿರುವರು.ಕೆಲವರು ಸರ್ಕಾರಿ ಉದ್ಯೋಗಿಗಳಾಗಿರುವರು ಕೆಲವರು ಶಸ್ತ್ರಚಿಕಿತ್ಸಾ ವೈದ್ಯರುಗಳಾಗಿರುತ್ತಾರೆ.ತುಂಬಾ ಪ್ರಸಿದ್ದಿಕೂಡ ಆಗಿರುತ್ತಾರೆ. ಅಲ್ಲದೆ ಈ ಸಂಖ್ಯೆಯವರು ಅಗ್ನಿ,ವಿದ್ಯುತ್ ಸಂಬಂದಪಟ್ಟ ದೊಡ್ಡ ಭವನಗಳು,ಅಣೆಕಟ್ಟುಗಳು,ಸೇತುವೆಗಳು ಮೊದಲಾದವನ್ನು ನಿರ್ಮಿಸುವ ಇಂಜಿನಿಯರುಗಳಾಗೂ ಕೆಲವರುಈ ಸಂಖ್ಯೆಯವರಾಗಿರುತ್ತಾರೆ. ಮಂಗಳನ ಕಾಲ:- ಮಾರ್ಚ್ ೨೧ರಿಂದ ಏಪ್ರಿಲ್ ೧೯ರವರೆಗೆ ೯ಕ್ಕೆ ಸಂಬಂದಪಟ್ಟವರು ಈ ಅವಧಿಯಲ್ಲಿ ಮಂಗಳವಾರ ರಾತ್ರಿಯಲ್ಲಿ ಜನಿಸಿದ್ದರೆ ತುಂಬಾ ಬಾಗ್ಯಶಾಲಿಗಳಾಗಿರುವರು. ಮಂಗಳವಾರ ಯಾವ ಕಾರ್ಯವನ್ನೂ ಆರಂಭಿಸದೇ ಇರುವುದು ಕ್ಷೇಮ.ಆದರೆ ಅಗ್ನಿಗೆ ಸಂಬಂದಪಟ್ಟ ಕಾರ್ಯಗಳನ್ನು ಮಂಗಳ ಹೋರೆಯಲ್ಲಿ ಮಾಡಬಹುದು. ದಿಕ್ಕು ಮತ್ತು ಪ್ರದೇಶ:- ಕುಜನಿಗೆ ದಕ್ಷಿಣದಿಕ್ಕು ಶುಭಕರವಾದ ದಿಕ್ಕು ಅಡಿಗೇ ಮನೆ,ಕಸಾಯಿಕಾನೆ,ಸಮರಭೂಮಿ ಯಂತವು ಕುಜನ ಪ್ರದೇಶಗಳು. ಅದೃಷ್ಟ ರತ್ನ:-ಹವಳ,ಅಂಗಾರಕ ದೋಷ ಪರಿಹಾರಕ್ಕೂ,ಕಾರ್ಯಸಿದ್ದಿಗೂ ಚೆನ್ನಾಗಿ ಪರಿಶೀಲಿಸಿದ ಉತ್ತಮವಾದ ಹವಳವನ್ನು ಉಂಗುರ,ಸರ,ಮೊದಲಾದವುಗಳಲ್ಲಿ ಧರಿಸುವುದು ಎಲ್ಲಾಕಡೆಗಳಿಂದ ಜಯವು ಸಿಗುವುದು. ಅದೃಷ್ಟದ ವರ್ಣ:- ಕೆಂಪು,ಅಂದರೆ ರಕ್ತವರ್ಣ ಈ ಬಣ್ಣದ ವಸ್ತ್ರ,ಆಭರಣಗಳನ್ನು ಧರಿಸುವುದು ಶುಭತರುತ್ತದೆ. ಅನುಕೂಲದಿನಾಂಕಗಳು:-೨,೩,೭,೯,೧೧,೧೨,೧೮,೨೦,೨೧,೨೫,೨೯,೩೦,ಈದಿನಾಂಕಗಳು ಅನುಕೂಲವಾದವು ಆದುದರಿಂದ ಈ ದಿನಾಂಕಗಳಲ್ಲಿ ಆರಂಬಿಸುವ ಯಾವ ಕೆಲಸವಾದರೂ ತೃಪ್ತಿಕರವಾಗಿ ಕೊನೆಗೊಳ್ಳುತ್ತದೆ. ಅನಾನುಕೂಲದಿನಾಂಕಗಳು:- ಮೇಲೆ ಹೇಳಿರುವ ದಿನಾಂಕಗಳನ್ನು ಬಿಟ್ಟು ಉಳಿದೆಲ್ಲವು.ಆದರೆ ಅವುಗಳಲ್ಲಿ ೬,೧೫,೨೪ ಈ ದಿನಾಂಕಗಳು ಬಹಳ ಶುಭಕಾರಕ ವಾಗಿರುತ್ತವೆ.ಈ ದಿನಾಂಕಗಳಲ್ಲಿ ಯಾವ ಕಾರ್ಯ ಮಾಡಿದರೂ ಯಶಸ್ವಿಯಾಗದಿರಲಾರದು. ಗ್ರಹಪ್ರೀತಿ:- ಶ್ರೀ ಸುಬ್ರಹ್ಮಣ್ಯಸ್ವಾಮಿಯ ಸ್ತೋತ್ರಗಳನ್ನು ಪಾರಾಯಣ ಮಾಡಿ ಅಭಿಷೇಕ ಅರ್ಚನೆಗಳನ್ನು ಮಾಡುತ್ತಾ ಬಂದರೆ ಇವರಿಗೆ ಕಾರ್ಯಸಿದ್ದಿ ಉಂಟಾಗಿ ಅಂಗಾರಕ ದೋಷವು ಪರಿಹಾರವಾಗುವುದು. ಹಿಂಧೂಗಳು ತಮ್ಮ ರಾಶಿಗನುಗುಣವಾಗಿ ಯಾವ ಗ್ರಹ ದೋಷವು ಉಂಟಾಗಿರುವುದೋ ಅದನ್ನು ಕ್ರಮವರಿತು ಪೂಜಿಸುವುದರಿಂದ ಸ್ತೋತ್ರ ಪಠಣ,ಪಾರಾಯಣ ಮಾಡುವುದರಿಂದ ಆಯಾ ಗ್ರಹಕ್ಕೆ ಸಂಬಂದಪಟ್ಟ ವಾರ,ನಕ್ಷತ್ರ,ಧಾನ್ಯ,ವಸ್ತ್ರ,ರತ್ನ,ಸ್ತೋತ್ರಗಳನ್ನು ಜಪಿಸಿ ನಿಯಮ ರೀತಿ ನಡೆಯುವುದರಿಂದ ಸಕಲ ಗ್ರಹದೋಷವು ನಿವಾರಣೆಯಾಗುವುದು. ನವಗ್ರಹ ಗೋಚಾರ ಮತ್ತು ಲಗ್ನದಲ್ಲಿ ನವಗ್ರಹಗಳ ಸ್ಥಾನ ಇವುಗಳನ್ನು ಪರಿಶೀಲಿಸಿ ಯಾವ ಗ್ರಹ ತಮಗೆ ಕ್ರೂರವಾಗಿದೆಯೋ ಅದರ ಪೂಜೆ,ಜಪ,ಧಾನ್ಯ,ವಸ್ತ್ರ ದಾನ ಮಾಡುವುದರಿಂದ ದೋಷವು ಪರಿಹಾರವಾಗುವುದು. ಈ ಕೆಳಗಿನ ಗ್ರಹ ಮಂತ್ರದೊಂದಿಗೆ ಗ್ರಹಶಾಂತಿ ಮಾಡಿಕೊಳ್ಳಿ. ನವಗ್ರಹ ಸ್ತೋತ್ರ ಸೂರ್ಯ ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ| ತಮೋಘ್ನಂ ಪ್ರಣತೋಸ್ಮಿ ದಿವಾಕರಂ| ಕಾಶ್ಯಪ ಮುನಿಗಳ ವಂಶದಲ್ಲಿ ಜನಿಸಿ ಕೆಂಪು ದಾಸವಾಳ ಹೂವಿನಂತೆ ರಕ್ತವರ್ಣವುಳ್ಳವನಾಗಿ ಪ್ರಚಂಡ ಪ್ರಕಾಶಪುಂಜನಾಗಿ ದರ್ಶನ ವಿತ್ತು ತನ್ನನ್ನು ಪೂಜಿಸುವವರ ಪಾಪರಾಶಿಯನ್ನು ಭಸ್ಮಮಾಡುವ ಅಂಧಕಾರಕ್ಕೆ ವೈರಿಯಾದ ಸೂರ್ಯದೇವನಿಗೆ ನಮಸ್ಕರಿಸುತ್ತೇನೆ. ಚಂದ್ರ ಧದಿಶಂಖ ತುಷಾರಾಭಂಕ್ಷೀರೋದಾರ್ಣವ ಸಂಭವಂ| ನಮಾಮಿ ಶಶಿನಂ ದೇವಂ ಶಂಭೋ ಮುರ್ಕುಟಭೂಷಣಂ|| ಕ್ಷೀರ ಸಾಗರದಲ್ಲಿ ಉದಿಸಿ ಧದಿ ಶಂಖ ಹಿಮ ಬಿಂದುಗಳಂತೆ ಬಿಳುಪಾದ ಕಾಂತಿಯುಳ್ಳವನಾಗಿ ಪರಮೇಶ್ವರನ ಶಿರೋಭರಣನಾಗಿ ಸಕಲ ಸಂಪತ್ತನ್ನೂ ನೀಡುವ ಚಂದ್ರನನ್ನು ನಮಸ್ಕರಿಸುತ್ತೇನೆ. ಮಂಗಳ ಧರಣೀಗರ್ಭ ಸಂಭೂತಂ ವಿಧ್ಯುತ್ಕಾಂತಿ ಸಮಪ್ರಭಂ| ಕುಮಾರಂ ಶಕ್ತಿಹಸ್ತಂಚ ಮಂಗಳಂ ಪ್ರಣಮಾಮ್ಯಹಂ|| ಭೂದೇವಿಯ ಗರ್ಭದಲ್ಲಿ ಜನಿಸಿ ಮಿಂಚಿನಂತೆ ಪ್ರಕಾಶವುಳ್ಳವನಾಗಿ ಹಸ್ತದಲ್ಲಿ ಶಕ್ತ್ಯಾಯುಧವನ್ನು ಧರಿಸಿ ಕುಮಾರ ರೂಪವುಳ್ಳವನಾಗಿ "ಮಂಗಳ"ಎಂಬ ನಾಮಧ್ಯೇಯನಾಗಿರುವ ಅಂಗಾರಕನನ್ನು ನಮಸ್ಕರಿಸುತ್ತೇನೆ. ಬುಧ ಪ್ರಿಯಾಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಾ ಬುಧಂ| ಸೌಮ್ಯಂ ಸೌಮ್ಯ ಗುಣೋಪೇತಂ ನಮಾಮಿ ಶಶಿನ ಸುತಂ|| ಪ್ರಿಯಾಂಗು ಪುಷ್ಪದ ಮೊಗ್ಗಿನಂತೆ ಕೃಷ್ಣವರ್ಣನಾಗಿ ಅನುಪಮನಾಗಿ ಅತಿ ಸುಂದರಾಕಾರನಾಗಿ ಉತ್ತಮ ಜ್ಞನವೇ ಮೊದಲಾದ ಗುಣಗಳಿಗೆಲ್ಲಾ ಕಾರಣ ಭೂತನಾಗಿ ಇರುವ ಚಂದ್ರನ ಪುತ್ರನಾದ ಬುಧನನ್ನು ನಮಸ್ಕರಿಸುತ್ತೇನೆ. ಗುರು ದೇವಾನಾಂಚ ಋಷೀಣಾಂಚ ಗುರುಕಾಂಚನ ಸನ್ನಿಭಂ| ಗುರುಚೈವ ತ್ರಿಲೋಕಸ್ಯ ತಂಗುರು ಪ್ರಣಮಾಮ್ಯಹಂ|| ದೇವತೆಗಳಿಗೂ ಋಷಿಗಳಿಗೂ ಗುರುವಾಗಿ ಪರಿಶುದ್ದವಾದ ಸ್ವರ್ಣದಂತೆ ಕಾಂತಿಯುತನಾಗಿ ಜ್ಞಾನರೂಪನಾಗಿ ತ್ರಿಲೋಕೇಶನಾಗಿ ದರ್ಶನವೀವ ಬೃಹಸ್ಪತಿಯನ್ನು ನಮಸ್ಕರಿಸುತ್ತೇನೆ. ಶುಕ್ರ ಹಿಮಕುಂದ ಮೃಣಲಾಭಂ ದೈತ್ಯಾನಾಂ ಪರಮಗುರುಂ| ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ|| ಬೃಗು ವಂಶೋದ್ಬವನಾಹಿ ಹಿಮಕಿರಣ ಕುಂದಪುಷ್ಪ ಕಮಲನಾಳ ಮೊದಲಾದವುಗಳಂತೆ ಕಾಂತಿಯುತನಾಗಿ ರಾಕ್ಷಸರಿಗೆ ಶ್ರೇಷ್ಟವಾದ ಆಚಾರ್ಯನಾಗಿ ಎಲ್ಲಾ ಶಾಸ್ತ್ರಗಳನ್ನು ಭೋದಿಸುವ ಪ್ರತಿಭೆಯನ್ನು ಪಡೆದಿರುವ ಶುಕ್ರಾಚಾರ್ಯನನ್ನು ನಮಸ್ಕರಿಸುತ್ತೇನೆ. ಶನಿ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ| ಛಾಯಾ ಮಾರ್ತಾಂಡ ಸಂಭೂತಂ ವಂದೇಹಂ ತಂಶನೈಶ್ಚರಂ|| ಛಾಯಾ ದೇವಿಯಲ್ಲಿ ಸೂರ್ಯನಿಂದ ಜನಿಸಿದ ಸುಪುತ್ರನಾಗಿ ನೀಲಾಂಜನದಂತೆ ಕಾಂತಿಯಿಂದ ಕೂಡಿದ ಶರೀರವುಳ್ಳವನಾಗಿ ಯಮನಿಗೆ ಅಗ್ರಜನಾದ ಶ್ರೀ ಶನೀಶ್ವರನನ್ನು ನಮಸ್ಕರಿಸುತ್ತೇನೆ. ರಾಹು ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯಾದಿ ಮರ್ದನಂ| ಸಿಂಹಿಕಾಗರ್ಭ ಸಂಭೂತಂ ತಂರಾಹುಂ ಪ್ರಣಮಾಮ್ಯಹಂ|| ಸಿಂಹಿಕೆಯ ಗರ್ಭದಲ್ಲಿ ಉದಿಸಿ ತಲೆಯಯೊಂದಿಗೆ ಶೋಭಿಸುವ ಅರ್ಧಕಾಯನಾದರೂ ಮಹಾವೀರನಾಗಿ ಚಂದ್ರ-ಸೂರ್ಯರನ್ನು ತೊಂದರೆಗೊಳಿಸುವ ರಾಹುಗ್ರಹವನ್ನು ನಾನು ನಮಸ್ಕರಿಸುತ್ತೇನೆ. ಕೇತು ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಂ| ರೌದ್ರಂ ರೌದ್ರಾತ್ಮಕಂ ಘೋರಂ ತಂಕೇತುಂ ಪ್ರಣಮಾಮ್ಯಹಂ|| ಪಲಾಶಪುಷ್ಪಕ್ಕೆ ಸಮಾನವಾದ ರಕ್ತಕಾಂತಿಯುಳ್ಳವನಾಗಿ ಶಿರೋಭಾಗನಾಗಿ ನಕ್ಷತ್ರಗಳನ್ನು ಗ್ರಹಗಳನ್ನು ಉಳ್ಳವನಾಗಿ ರೌದ್ರನಾಗಿ ಪಾಪಿಗಳಲ್ಲಿ ಅತ್ಯಂತ ಕುಪಿತನಾಗಿ ಭಯಂಕರಾಕಾರಕನಾಗಿ ತೋರುವ ಕೇತುವನ್ನು ನಮಸ್ಕರಿಸುತ್ತೇನೆ. ವಧೂ-ವರರಿಗೆ ವಿವಾಹಕ್ಕೆ ಶುಭಾ-ಅಶುಭ ಹೊಂದಾಣಿಕೆ:- ಘಟನೆಯನ್ನು ನೋಡುವ ವಿಧಾನ:- ಒಂದು ನಿರ್ದಿಷ್ಟವಾದ ಸಂಖ್ಯೆಯವರಿಗೆ ಇನ್ನೊಂದು ಸಂಖ್ಯೆಯವರೊಡನೆ ಘಟನೆಯನ್ನು ನೋಡಬೇಕಾದರೆ ಅವರು ಇಬ್ಬರೂ ಹುಟ್ಟಿದ ಇಂಗ್ಲೀಷ್ ದಿನಾಂಕದ ಮೂಲಕ ನೇಡಬಹುದು.ಅಲ್ಲದೆ ಅವರು ಹುಟ್ಟಿದ ದಿನಾಂಕ+ತಿಂಗಳು+ವರ್ಷ ಇವುಗಳ ನೆಲ್ಲಾ ಕೂಡಿಸಿದರೆ ಬರುವ ಸಮುಷ್ಟಿ ಸಂಖ್ಯೆಯ ಮೂಲಕ ಘಟನೆಯನ್ನು ಹೊಂದಿಸಿ ಕೊಳ್ಳುವುದು ಉತ್ತಮವೆಂದು ಸಂಖ್ಯಾ ಶಾಸ್ತ್ರಜ್ಞರು ನಿರ್ಣಯಿಸಿದ್ದಾರೆ. ಉದಾ:- ವರನು ಹುಟ್ಟಿದ ದಿನಾಂಕ ೨೦-೦೫-೧೯೭೦ ವಧುವಿನ ಹುಟ್ಟಿದ ದಿನಾಂಕ ೨೧-೯-೧೦೮೧ ಇದರಲ್ಲಿ ಎರಡನೇ ದಿನಾಂಕದಲ್ಲಿ ಹುಟ್ಟಿದ ಸಂಖ್ಯೆಯುಳ್ಳ ವರನಿಗೆ ೨,೭ನೇ ದಿನಾಂಕದಂದು ಹುಟ್ಟಿದ ಕನ್ಯೆಯು ಸರಿಹೋಗುತ್ತಾಳೆ ಏಕೆಂದರೆ ೨ ಸಂಖ್ಯೆಗೆ ೨,೭ ಅನುಕೂಲ ಸಂಖ್ಯೆಯಾಗಿವೆ. ಆದುದರಿಂದ ದಿನಾಂಕ ಸಂಖ್ಯೆಯನ್ನು ಮಾತ್ರ ಇಟ್ಟುಕೊಂಡರೆ ಈ ವಿವಾಹವು ಕೂಡಿಬರುವುದು.ಇದರ ದಿನಾಂಕ,ತಿಂಗಳು,ವರ್ಷದ ಸಮುಷ್ಟಿ ಸಂಖ್ಯೆಯು ಈ ಕೆಳಗಿನಂತೆ ಇರುವುದು:- ವರ ೨+೦+೦+೫+೧+೯+೭+೦=೨೪=೬ ವಧು೨+೧+೯+೧+೯+೮+೧=೪=೩೫=೮ ಹೀಗೆ ೬ ಸಂಖ್ಯೆಯುಳ್ಳವರಿಗೆ ೩,೬,೯ ಸಂಖ್ಯೆಯುಳ್ಳವರು ಅನುಕೂಲಳು ೮ ಸಂಖ್ಯೆಯ ವರು ಅನುಕೂಲರಲ್ಲ. ಅದೇ ರೀತಿ ೮ ಸಂಖ್ಯೆಯವರಿಗೆ ೨,೪,೫ ಸಂಖ್ಯೆಯುಳ್ಳವರು ಅನುಕೂಲವಾಗಿರುವರು.ಈ ರೀತಿಯಲ್ಲಿ ಎರಡೂ ರೀತಿಯಲ್ಲಿ ನೋಡಬಹುದು. ಒಂದು ಸಂಖ್ಯೆಗೆ ಜನ್ಮ ದಿನಾಂಕ೧ ಹಾಗು ಜನ್ಮದಿನಾಂಕ,ಮಾಸ,ವರ್ಷಗಳ ಸಮುಷ್ಟಿ ಸಂಖ್ಯೆ ೧ ವುಳ್ಳವರ ವರ ಅಥವ ವಧು ವಿಗೆ ೪,೬,೭ ಸಂಖ್ಯೆಯವರು ಘಟನೆಯು ಸರಿಯಾಗುವುದು.೨,೩,೫,೮,೯ಈ ಸಂಖ್ಯೆಯವರು ಸರಿಹೊಂದುವುದಿಲ್ಲ.ಇಂತಹವರೊಂದಿಗೆ ವಿವಾಹ ಮಾಡಿದರೆ ಆಗಾತವಾಗುತ್ತದೆ. ಎರಡು ೨:- ೩,೫,೮ ಸಂಖ್ಯೆಯವರು ಅನುಕೂಲರು ೧,೨,೪,೬,೭,೯ ಈ ಸಂಖ್ಯೆಯವರು ಅನಾನುಕೂಲರು ಆದ್ದರಿಂದ ೨ ಸಂಖ್ಯೆಯವರಿಗೆ ೩,೫,೮ ಸಂಖ್ಯೆಯವರನ್ನು ವಿವಾಹ ಮಾಡಬೇಕು ಆಗ ಅವರ ಜೀವನ ಬಹಳ ಉತ್ತಮವಾಗಿರುತ್ತದೆ. ೩ ಮೂರು:- ಸಮುಷ್ಟಿ ಸಂಖ್ಯೆ ೩ ಉಳ್ಳವರಿಗೆ ಅನುಕೂಲ ಸಂಖ್ಯೆಗಳು ೬,೮,೯ ಅನಾನುಕೂಲ ಸಂಖ್ಯೆಗಳು ೧,೨,೩,೪,೫.೭( ೬,೮ ರ ಸಂಖ್ಯೆಯವರು ವಿಶೇಷವಾಗಿ ಶುಭ.) ೪ನಾಲ್ಕು:- ಸಮುಷ್ಟಿ ಸಂಖ್ಯೆ ೪ಕ್ಕೆ ಅನುಕೂಲ ಸಂಖ್ಯೆಗಳು ೧,೭,೯ ಅನಾನುಕೂಲ ಸಂಖ್ಯೆಗಳು ೨,೩,೫,೬,೮. ೫ ಐದು:- ಸಮುಷ್ಟಿ ಸಂಖ್ಯೆ ೫ಕ್ಕೆ ಅನುಕೂಲಸಂಖ್ಯೆಗಳು,೨,೩,೮ ಯೋಗ್ಯರು. ಅನಾನುಕೂಲ ಸಂಖ್ಯೆಗಳು,೧,೪,,೫,೬,೯.(೨,೩ ವಿಶೇಷ ಲಾಭ) ಆರು ಸಂಖ್ಯೆಯವರು ೬:- ಸಮುಷ್ಟಿ ಸಂಖ್ಯೆ ೬ ಕ್ಕೆ ೩,೬,೯ ಉತ್ತಮ.ಅನಾನುಕೂಲ ಸಂಖ್ಯೆಗಳು.೧,೨,೪,೫,೭,೮.(೬ವಿಶೇಷ ಶುಭ) ೭ ಏಳು :- ಸಮುಷ್ಟಿ ಸಂಖ್ಯೆ ೭ಕ್ಕೆ ೧,೪,೮ ಅನುಕೂಲ,೨,೩,೫,೭,೯ ಅನಾನುಕೂಲ (೧ವಿಶೇಷ) ಎಂಟು ೮:= ಸಮುಷ್ಟಿ ಸಂಖ್ಯೆ ೮ಕ್ಕೆ ೨,೪,೫ ಅನುಕೂಲ, ೧,೩,೬,೭,೮,೯ ಅನಾನುಕೂಲ. ಒಂಬತ್ತು ೯:- ಸಮುಷ್ಟಿ ಸಂಖ್ಯೆ ೯ಕ್ಕೆ ೩,೬,೭ ಅನುಕೂಲ,೧,೨,೪,೫,೮,೯ ಅನಾನುಕೂಲ. ***** ****** ******* ****** ******* ಕೆಲವು ಉಪಯುಕ್ತ ಮಂತ್ರಗಳು. ಸರಸ್ವತಿ ಸ್ತೋತ್ರ ನಿತ್ಯ ಪ್ರಾರ್ಥನೆಗೆ ಸರ್ವ ಸ್ವರೂಪೇ ಸರ್ವೇಶೆ ಸರ್ವಶಕ್ತಿ ಸಮನಿತೆ ಭಯೋಭ್ಯಶ್ತ್ರಾಹಿ ನೋ ದೇವಿ ದುರ್ಗೆದೇವಿ ನಮೋಸ್ತುತೆ ರೋಗಾನಾಶೇನ ಪಹಂಸಿತುಷ್ಟಾ ರೋಷ್ಟಾತುಕಾಮಾನ್ ಸಕಲಾನಭೀಷ್ಟಾನ್ ಸರ್ವಭಾಧಾ ಪ್ರಕಾಶಮಾನಾ ತ್ರೈಲೋಕ್ಯಾಸಾಬಿಲೇಶ್ವರಿ ಏವ ಮೇವತ್ವ ಯಾಕಾರ್ಯ ಸುಸ್ಮದ್ವರಿ ವಿನಾಶನಮ್. ಅಥವ ಓದಲು ಕುಳಿತುಕೊಳ್ಳುವ ಮುನ್ನ ಬರೆಯುವ ಮುನ್ನ ೧೧ಸಲ ಈ ಮಂತ್ರವನ್ನು ಜಪಿಸುವುದು. *ಓಂ ವವ ವದ ವಾಗ್ದೇವಿಯೇ ಸ್ವಾಹಾ* ಸರ್ವಗ್ರಹ ಪೀಡೆ ನಿವಾರಣೆಗೆ ಗ್ರಹದೋಷಗಳಿಗೆ ದರಿದ್ರನಾಶಕ್ಕೆ ಜನ್ಮಪರ್ಯಂತ ಯಾವುದೇ ದೋಷ ಇರದಂತೆ ಮಾಡಲು. "ಓಂನಮೋ ಭಾಸ್ಕರಾಯ ಮಮ ಸರ್ವ ಗ್ರಹಪೀಡಾ ನಿವಾರಣಂ ಕುರುಕುರು ಸ್ವಾಹಾ" ೧೦೮ಸಲ ಜಪಿಸಿರಿ ನಂತರಈ ಕೆಳಗಿನ ವಸ್ತುಗಳನ್ನು ಒಂದು ಮುಚ್ಚಳ ಸಹಿತ ಗಡಿಗೆ ಅಥವ ಮಡಿಕೆಯಲ್ಲಿ ಹಾಕಿ ಅರಳಿ ಮರದ ಬುಡದಲ್ಲಿ ಶನಿವಾರ ಸಾಯಂಕಾಲದ ನಂತರ ಇಟ್ಟು ಬರಬೇಕು.ಅಥವ ಅರಳಿ ಮರದ ಬೇರಿನ ಕೆಳಗೆ ಗುಂಡಿ ತೆಗೆದು ಮುಚ್ಚಬೇಕು. ಗಡಿಗೆ ಅಥವ ಮಡಿಕೆಯಲ್ಲಿ ಹಾಕಬೇಕಾದ ವಸ್ತುಗಳು. ಎಕ್ಕದಬೇರು,ಉಮ್ಮತ್ತಿ ಬೇರು,ಉತ್ತರಾಣಿ ಬೇರು,ಧರ್ಭೆಬೇರು,ರಾಗಿ ಬೇರು,ನೇರಳೇಬೆರು,ಮತ್ತು ಎಲೆ ಅತ್ತಿ ಎಲೆ ಮಾವಿನ ಎಲೆ ಒಂದು ಹೊಸ ಗಡಿಗೆ ಅಥವ ಮಡಿಕೆ ಹಾಲು ತುಪ್ಪ ಜೇನು, ಅಕ್ಕಿ ಗೋದಿ ಹೆಸರುಕಾಳು,ಎಳ್ಳು, ಬಿಳಿಸಾಸಿವೆ,ಧರ್ಭೆ,ಚಂದನ,ಗೋಮೂತ್ರ ಎಲ್ಲವನ್ನು ಸೇರಿಸಿ ಶನಿವಾರ ಸಾಯಂಕಾಲ ಸ್ನಾನ ಮಾಡಿ ದೇವರ ಮುಂದಿಟ್ಟು ಮೇಲಿನ ಮಂತ್ರವನ್ನು ೧೦೮ಸಲ ಜಪಿಸುತ್ತಾ ಈ ಎಲ್ಲಾ ವಸ್ತುಗಳನ್ನು ಗಡಿಗೆಯಲ್ಲಿ ಹಾಕಿ ಕೊನೆಯಲ್ಲಿ ಮಂಗಳಾರತಿ ಮಾಡಿ ಮನೆಯವರೆಲ್ಲರೂ ಅದಕ್ಕೆ ನಮಿಸಿ ನಂತರ ಅದನ್ನು ಅರಳಿ ಮರದ ಬುಡದಲ್ಲಿ ಇಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಯಾವುದೇ ಗ್ರಹದೋಶ ಮತ್ತು ದರಿದ್ರತೆ ನಿವಾರಣೆಯಾಗುತ್ತದೆ.ಜನ್ಮಾಂತರದಲ್ಲಿ ಇನ್ನುಮುಂದೆ ಯಾವುದೇ ಕಾಟ ತಟ್ಟುವುದಿಲ್ಲ. ಜೊತೆಯಲ್ಲಿ ಈ ರೀತಿ ಮಾಡುವುದು, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಈ ಕೆಳಗಿನ ವಸ್ತುಗಳಿಂದ ದೂಪದ ಹೊಗೆಹಾಕಿದರೆ ದುಷ್ಟಶಕ್ತಿಗಳ ಕಾಟ,ಭೂತ,ಪ್ರೇತ,ಶಾಕಿನಿ,ಡಾಕಿಣಿ,ಮಾಟ,ಇತ್ಯಾದಿಗಳಕಾಟ ದೂರವಾಗುತ್ತದೆ. ವಸ್ತುಗಳು:- ಗರಿಕೆ,ಧರ್ಬೆ,ಬಿಳಿಸಾಸಿವೆ,ಹಿಪ್ಪೇಬೀಜ(ಬೀಜ ಸಿಗದಿದ್ದಾಗ ಹಿಪ್ಪೆ ಎಣ್ಣೆ)ಧಶಾಂಗಧೂಪ,ಕವಡೆ ಸಾಂಬ್ರಾಣಿ,ಪಚ್ಚಕರ್ಪೂರ,(ಇಲ್ಲವೇ ಬಿಲ್ಲೆ ಕರ್ಪೂರ)ಎಲ್ಲವನ್ನೂ ಸೇರಿಸಿ ಒಂದು ಅಗಲವಾದ ತಾಮ್ರದ ಬಟ್ಟಲಲ್ಲಿ ಹಾಕಿ ಕರ್ಪೂರ ಹಚ್ಚಿ ಹೊಗೆಯನ್ನು ಮನೆಯಲ್ಲಿ ಎಲ್ಲಾಕಡೆ ಹರಡಬೇಕು ಸ್ವಲ್ಪ ಸಮಯ ಈ ದೂಪವನ್ನು ಹಾಕಿ ನಂತರ ಕದ ಮುಚ್ಚಿ ಒಂದೆರಡು ನಿಮಿಷದನಂತರ ಕಿಟಕಿ ಬಾಗಿಲು ತೆರೆಯುವುದು.
Subscribe to:
Posts (Atom)