Thursday, 10 January 2019

ಸಕಲ ಗೃಹ ಬಲ,ಗುರುವಿನ ಕೃಪೆಯಾಗದ ತನಕ

ಸಕಲ ಗೃಹ ಬಲ ನೀನೇ ಸರಸಿಜಾಕ್ಷ ಜಾತಕದಲ್ಲಿ ಚತುರ್ಥಾಧಿಪತಿಯು ಯಾವುದಾದರೊಂದು ಶುಭ ಗ್ರಹದ ಜತೆಯಲ್ಲಿದ್ದು 1-4-7-10-5-9ನೇ ಭಾವಗಳಲ್ಲಿ ಹಾಗೂ ಚತುರ್ಥಾಧಿಪತಿ ಜತೆಯಲ್ಲಿರುವ ಗ್ರಹ ಮಿತ್ರರಾಗಿದ್ದರೆ ಮತ್ತು ಮಿತ್ರ - ಸ್ವ ಕ್ಷೇತ್ರದಲ್ಲಿ ಇದ್ದರೆ ಉತ್ತಮವಾದ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ ಹಾಗೂ ಆ ಮನೆಯಲ್ಲಿ ಎಲ್ಲ ಪ್ರಕಾರದ ಅನುಕೂಲತೆಗಳು ಇರುತ್ತದೆ. ಸ್ವಕಷ್ಟರ್ಜಿತ ಮನೆಯ ಯೋಗ : ಲಗ್ನಾಧಿಪತಿ 4ನೇ ಭಾಗದಲ್ಲಿದ್ದು 4ನೇ ಅಧಿಪತಿ ಲಗ್ನದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗದಲ್ಲಿ ಹುಟ್ಟಿದ ಜಾತಕನು ಸ್ವಕಷ್ಟದಿಂದ ುರುಷಾರ್ಥದಿಂದ ಸ್ವಂತ ಸಂಪಾದನೆಯಿಂದ ಸಂಪಾದಿಸಿದ ಹಣದಿಂದ ಮನೆಯನ್ನು ಕಟ್ಟಿಕೊಳ್ಳುವುದು. ವೈಶಿಷ್ಟ ಪೂರ್ಣ ಮನೆಯ ಯೋಗ : 4ನೇ ಅಧಿಪತಿ ಮತ್ತು 10ನೇ ಅಧಿಪತಿ ಹಾಗೂ ಚಂದ್ರ ಜತೆಯಲ್ಲಿ ಇದ್ದು ನಾಲ್ಕನೇ ಸ್ಥಾನದಲ್ಲಿ ಶುಭಗ್ರಹ ಇದ್ದರೆ. ವೈಶಿಷ್ಟ ಪೂರ್ಣ ಮನೆಯ ಯೋಗ ಉಂಟಾಗುತ್ತಿದೆ. ಈ ಯೋಗದಲ್ಲಿ ಹುಟ್ಟಿದ ಜಾತಕರು ಮನೆಯನ್ನು ಆಧುನಿಕ ರೀತಿಯಲ್ಲಿ ಸಜ್ಜುಗೊಳಿಸಲ್ಪಟ್ಟು ಪರಿಪೂರ್ಣ ಎನಿಸಿದ್ದು ಮತ್ತು ಸಾಮಾನ್ಯ ಜನರ ಮನೆುವರಿಗಿಂತ ಬೇರೆಯೇ ರೀತಿಯಾಗಿ ಇರುತ್ತದೆ. ದೊಡ್ಡ ಬಂಗಲೆಯ ಯೋಗ : ನಿಮ್ಮ ಜಾತಕದ ನಾಲ್ಕನೇ ಭಾವದಲ್ಲಿ ಚಂದ್ರ ಮತ್ತು ಶುಕ್ರ ಇಲ್ಲವೇ ನಾಲ್ಕನೇ ಭಾವದಲ್ಲಿ ಉಚ್ಚರಾಶಿಯ ಯಾವುದಾದರೂ ಒಂದು ಗ್ರಹ ಇದ್ದರೂ ಅರಂತೆ 4ನೇ ಅಧಿಪತಿಯು ಕೇಂದ್ರ ತ್ರಿಕೋಣ ಸ್ಥಾನದಲ್ಲಿ ಶುಭ ಸ್ಥಾನದಲ್ಲಿ ಇದ್ದರೆ ಈ ಯೋಗ ಉಂಟಾಗುತ್ತದೆ. ಇಂತಹ ಯೋಗವುಳ್ಳ ಜಾತಕರು ದೊಡ್ಡ ಬಂಗಲೆಯ ಮಾಲೀಕರಾಗುವರು. ಇಂತಹ ಜನರ ಮನೆಯ ಹೊರಗೆ ತೋಟ, ಗಾರ್ಡನ್, ಈಜುಕೊಳ ಇನ್ನು ಇತ್ಯಾದಿ ಇರುತ್ತದೆ. ಕಲಾತ್ಮಕ ರೀತಿಯಿಂದ ಈ ಮನೆಯನ್ನು ಕಟ್ಟಿರುತ್ತಾರೆ. ಅಕಸ್ಮಾತ್ ಮನೆ ಹೊಂದುವ ಯೋಗ : ನಿಮ್ಮ ಜಾತಕದಲ್ಲಿ 4ನೇ ಭಾವಾಧಿಪತಿ ಮತ್ತು ಲಗ್ನಾಧಿಪತಿ ಇಬ್ಬರು ನಾಲ್ಕನೇ ಭಾವದಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಈ ಯೋಗವುಳ್ಳ ಜಾತಕರಿಗೆ ಕಲ್ಪನೆಯೇ ಇರದೆ ಸ್ವಂತ ಮನೆಯನ್ನು ಹೊಂದುವರು ಇಂತಹ ಜಾತಕರು ಬೇರೆಯವರು ಕಟ್ಟಿಸಿದ ಮನೆಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಲಗ್ನಾಧಿಪತಿ ಮತ್ತು ಚತುರ್ಥ ಸ್ಥಾನಾಧಿಪತಿ ಇಬ್ಬರು ಮಿತ್ರ ಗ್ರಹಗಳಾಗಿದ್ದು ನಾಲ್ಕನೇ ಸ್ಥಾನ ಸ್ವಕ್ಷೇತ್ರ ಅಥವಾ ಮಿತ್ರ ಕ್ಷೇತ್ರ ಆಗಿರಬೇಕು. ಅನಾಯಸ ಮನೆ ಹೊಂದುವ ಯೋಗ : ಜಾತಕದಲ್ಲಿ ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿ ಲಗ್ನದಲ್ಲಿದ್ದರೆ ಮತ್ತು ನಾಲ್ಕನೇ ಭಾವದ ಮೇಲೆ ಶುಭ ಗ್ರಹಗಳಾದ ಬುಧ, ಗುರು, ಶುಕ್ರ,ಚಂ್ರರ ದೃಷ್ಟಿ ಇದ್ದರೆ ಈ ಯೋಗ ಇದ್ದವರು ವಿಶೇಷ ಪ್ರಯತ್ನ ಇಲ್ಲದೆಯೇ ಮನೆ ದೊರಕುತ್ತದೆ. ಲಗ್ನಾಧಿಪತಿ ಮತ್ತು ಚತುರ್ಥಾಧಿಪತಿ ಲಗ್ನದಲ್ಲಿದ್ದರೆ ಮತ್ತು ಚತುರ್ಥ ಸ್ಥಾನದ ಮೇಲೆ ಶುಭ ಗ್ರಹಗಳ ದೃಷ್ಟಿ ಇದ್ದರೆ ಅನಾಯಾಸದ ಮನೆ ದೊರಕುತ್ತದೆ. ಇಂತಹ ಜಾತಕರಿಗೆ ವಿಶೇಷ ಪ್ರಯತ್ನ ಇಲ್ಲದೆಯೇ ಮನೆ ದೊರಕುತ್ತದೆ. 4ನೇ ಅಧಿಪತಿ ಉಚ್ಚ ಸ್ಥಾನದಲ್ಲಿ ಅಥವಾ ಮೂಲ ತ್ರಿಕೋಣದಲ್ಲಿ ಇಲ್ಲವೇ ಸ್ವ ಕ್ಷೇತ್ರದಲ್ಲಿ ಇದ್ದರೆ 9ನೇ ಅಧಿಪತಿ ಕೇಂದ್ರದಲ್ಲಿ ಇದ್ದರೆ ಅನಾಯಸದ ಮನೆ ದೊರಕುತ್ತದೆ. ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದುವ ಯೋಗ : ನಿಮ್ಮ ಜಾತಕದಲ್ಲಿ 4ನೇ ಸ್ಥಾನ ಮತ್ತು 4ನೇ ಅಧಿಪತಿ ಇಬ್ಬರು ಚರ ರಾಶಿಯಲ್ಲಿ (ಮೇಷ,ಕಟಕ,ತುಲಾ,ಮಕರ) ಇದ್ದು 4ನೇ ಅಧಿತಿಯು ಶುಭ ಗ್ರಹದಿಂದ ಕೂಡಿದ್ದು ಇಲ್ಲವೇ ಶುಭ ಗ್ರಹಗಳಾದ ಬುಧ, ಗುರು, ಶುಕ್ರ, ಚ0ದ್ರರ ದೃಷ್ಟಿ ಇದ್ದರೆ ಒಂದಕ್ಕಿಂತ ಹೆಚ್ಚು ಮನೆಯನ್ನು ಹೊಂದುವ ಯೋಗ ಇರುತ್ತದೆ. ಇಂತಹ ಯೋಗದ ಜಾತಕರು ಹೆಚ್ಚು ಮನೆಯಲ್ಲಿ ಇರುತ್ತಾರೆ. ಮತ್ತು ಮೇಲೆಂದ ಮೇಲೆ ಮನೆಯನ್ನು ಬದಲಾಯಿಸುತ್ತಾರೆ. ಚತುರ್ಥ ಸ್ಥಾನ ಮತ್ತು ಚತುರ್ಥಾಧಿಪತಿ ಸ್ಥಿರ ರಾಶಿಯಲ್ಲಿ (ವೃಷಭ, ಸಿಂಹ, ವೃಶ್ಚಿಕ, ಕುಂಭ) ಇದ್ದರೆ ಜಾತಕರಿಗೆ ಅನೇಕ ಸ್ಥಳಗಳಲ್ಲಿ ಮನೆ ಇರುತ್ತದೆ. 4ನೇ ಅಧಿಪತಿ ಬಲಿಷ್ಠನಾಗಿದ್ದು ಮತ್ತು ಲಗ್ನಾಧಿಪತಿ 4ನೇ ಅಧಿಪತಿ ಧನಾಧಿಪತಿ ಈ ಮೂವರಲ್ಲಿ ಎಷ್ಟು ಗ್ರಹಗಳು ಮೂಲ ತ್ರಿಕೋಣದಲ್ಲಿದ್ದರೆ ಹೆಚ್ಚಿನ ಸಂಖ್ಯೆಯ ಮನೆಯನ್ನು ಹೊಂದಿರುತ್ತಾರೆ. ಉತ್ತಮ ಮನೆಯ ಯೋಗ : ಜಾತಕದಲ್ಲಿ 4ನೇ ಅಧಿಪತಿ ಮತ್ತು 10ನೇ ಅಧಿಪತಿ ಇಬ್ಬರು ಕೇಂದ್ರ ತ್ರಿಕೋಣಗಳಲ್ಲಿದ್ದರೆ ಉತ್ತಮ ಮನೆಯ ಯೋಗ ಇರುತ್ತದೆ. ಈ ಯೋಗದಿಂದ ಜಾತಕರಿಗೆ ಉತ್ತಮ ದರ್ಜೆಯ ಮನೆ ಲಭಿಸುತ್ತದೆ. ದಿಕ್ಕು ದೆಸೆ: ಗುರುವಿನ ಕೃಪೆಯಾಗದ ತನಕ ಮನೆ ಕಟ್ಟಲು ಗುರುವಿನ ಅನುಗ್ರಹ ಬೇಕು. ಇಲ್ಲಿ ಗುರುವಿನ ಅನುಗ್ರಹ ಎಂದರೆ, ಜಾತಕದಲ್ಲಿರುವ ಗುರು ಬಲ ಎಂದರ್ಥ. ಕಾಂಚಾಣಂ ಕಾರ್ಯ ಸಿದ್ಧಿಃ ಎನ್ನುವ ಕಾಲದಲ್ಲಿ ಗುರುವಿನಿಂದ ಆಗುವ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳೋಣ. ಮನೆ ಕಟ್ಟುವ ಮುಂಚೆ ಮನೆಯನ್ನು ಯಾರ ಹೆಸರಿನಲ್ಲಿ ಕಟ್ಟಿಸಬೇಕಾಗಿ ಇರುತ್ತದೆಯೋ ಅವರು ಒಳ್ಳೆಯ ಜ್ಯೋತಿಷರ ಹತ್ತಿರ ತಮ್ಮ ಜಾತಕವನ್ನು ತೋರಿಸಬೇಕು. ತಮ್ಮ ಜಾತಕದಲ್ಲಿ ಗ್ರಹಗತಿಗಳ ಪ್ರಭಾವ ಹೇಗಿದೆ ಎಂದು ತಿಳಿದುಕೊಂಡು ನಿಮಗೆ ಗುರುಬಲ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ನಿಮಗೆ ಆ ವರ್ಷ ಗುರುವಿನ ಬಲ ಇಲ್ಲದಿದ್ದರೆ ಆ ವರ್ಷ ಯಾವುದೇ ಶುಭ ಕಾರ್ಯವನ್ನು ಅಂದರೆ ಮನೆ ಕಟ್ಟುವುದು, ಅಂಗಡಿ, ಹೋಟೆಲ್, ಬೇಕರಿ, ಫ್ಯಾನ್ಸಿ ಸ್ಟೋರ್, ಇತ್ಯಾದಿ ಹೊಸ ಕಾರ್ಯಗಳನ್ನು ಮಾಡದೆ ಇರುವುದೇ ಬಹಳ ಒಳ್ಳೆಯದು. ಒಂದು ವೇಳೆ ನೀವು ಹೊಸ ಕಾರ್ಯಗಳನ್ನು ಪ್ರಾರಂಭಿಸಿದರೆ ಎರಡು ಮೂರು ತಿಂಗಳಿನಲ್ಲಿಯೇ ಹಣ ಕಾಸಿನ ತೊಂದರೆಗಳು ಬಂದು ನಿಮ್ಮಲ್ಲಿರುವ ಹಣ ಖಾಲಿಯಾಗಿ ಬೇರೆ ಯಾರಿಂದಲೂ ಸರಿಯಾದ ಸಮಯಕ್ಕೆ ಹಣ ದೊರೆಯದೆ ನಿಮ್ಮ ಕೆಲಸ ಕಾರ್ಯಗಳು ಅರ್ಧದಲ್ಲಿಯೇ ನಿಂತು ಹೋಗುತ್ತವೆ ಹಾಗೂ ನೀವು ಪುನಃ ಕೆಲಸ ಪ್ರಾರಂಭಿಸುವಾಗ ಅದೇ ಕೆಲಸಕ್ಕೆ ಎರಡರಷ್ಟು ಹಣ ಖರ್ಚು ಬರುತ್ತದೆ ಹಾಗೂ ಮನಸ್ಸಿನ ನೆಮ್ಮದಿಯು ಹಾಳಾಗಿ ಸಾಲದ ಬಾಧೆಗೆ ಒಳಗಾಗಿ ಸಾಲ ತೀರಿಸಲಾರದೆ ಕಂಗಲಾಗುತ್ತೀರಿ. ಆದ್ದರಿಂದ ನಿಮ್ಮ ಎಲ್ಲ ಕೆಲಸ ಕಾರ್ಯಗಳಿಗೂ ಎಲ್ಲ ಗ್ರಹಗಳಿಗಿಂತ ಗುರುವಿನ ಬಲ ಅತಿ ಮುಖ್ಯವಾಗಿ ಇರಬೇಕಾಗುತ್ತದೆ. ಯಾರೇ ಆಗಲಿ ಒಳ್ಳೆಯ ಜ್ಯೋತಿಷಿಗಳಲ್ಲಿ ಜಾತಕವನ್ನು ತೋರಿಸಿದಾಗ ನಿಮ್ಮ ಜಾತಕದಲ್ಲಿ ಜನ್ಮ ಲಗ್ನದಿಂದ 1-4-7-10-5-9 ಕೇಂದ್ರ ತ್ರಿಕೋಣದಲ್ಲಿ ಶುಭ ಗ್ರಹಗಳು ಇದ್ದು ಈ ಸ್ಥಾನಗಳು ಉಚ್ಚವಿದ್ದು ಸ್ವಕ್ಷೇತ್ರವಾಗಿದ್ದರೆ ಹಾಗೂ ಗೋಚಾರ ಗ್ರಹ ಗತಿಗಳು ಶುಭವಾಗಿದ್ದರೆ ಅತ್ಯಧಿಕ ಶುಭ ಫಲವೆಂದು ತಿಳಿಯಬೇಕು. ಅದೇ ರೀತಿ ದಶಾ ಭುಕ್ತಿಗಳು ಶುಭವಾಗಿದ್ದರೆ ನಿಮ್ಮ ಕಾರ್ಯಗಳಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದೆ ನೆರವೇರುತ್ತವೆ ಎಂದು ತಿಳಿಯಬೇಕು. ಮನೆ ಕಟ್ಟುವ ಮುಂಚೆ ನಿಮಗೆ ಗುರುವಿನ ಬಲ ಇದ್ದರೆ ಮನೆಯ ಕಾರ್ಯಕ್ಕೆ ಎಷ್ಟೇ ಅಡ್ಡಿ, ಆತಂಕ, ತೊಂದರೆಗಳು ಬಂದರೂ ಒಂದುವೇಳೆ ಮಧ್ಯದಲ್ಲಿ ಹಣಕಾಸಿನ ತೊಂದರೆ ಬಂದರೂ ಬೇರೆ ಮಾರ್ಗದಿಂದ ಹಣ ದೊರೆತು ಮನೆ ಕಟ್ಟುವಿಕೆಯ ಕಾರ್ಯವು ಪರಿಪೂರ್ಣವಾಗಿ ನೆರವೇರುತ್ತದೆ. ಒಂದು ವೇಳೆ ನಿಮ್ಮ ಜಾತಕ ಇಲ್ಲದಿದ್ದರೆ ಗೋಚಾರ ರೀತಿಯಿಂದಲಾದರೂ ನಿಮ್ಮನ್ನು ಕರೆಯುವ ಹೆಸರಿಗೆ ಗುರುವಿನ ಬಲ ಅತಿ ಅಗತ್ಯವಾಗಿ ಬೇಕಾಗಿರುತ್ತದೆ. ಹೀಗೆ ಗುರುಬಲ ಇರುವಾಗ ಶುಭದಿನ ಶುಭಲಗ್ನ, ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ, ಅಭಿಲಾಷೆಗಳು ನೆರವೇರುತ್ತವೆ. ಇದೇ ಗುರುಬಲದ ಜತೆಗೆ ಗೋಚರದಲ್ಲಿ ಇತರೆ ಗ್ರಹಗಳ ಪ್ರಭಾವ ಶುಭವಾಗಿ ಇದೆಯೇ ಇಲ್ಲವೇ ತಿಳಿದುಕೊಂಡು ಕಾರ್ಯ ಆರಂಭಿಸಿದರೆ ಯಾವುದೇ ತೊಂದರೆಗಳು ಬರದೆ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ.

No comments:

Post a Comment