Thursday 10 January 2019

ಸಂಖ್ಯಾಶಾಸ್ತ್ರದ ಯೋಗಾಯೋಗ

ಸಂಖ್ಯಾಶಾಸ್ತ್ರದ ಯೋಗಾಯೋಗ ವಿ.ನಾರಾಯಣ ಶೆಟ್ಟಿ ಪದ್ಮಸಾಲಿ ನಭೋ ಮಂಡಲದ ಸೃಷ್ಟಿಯ ಚಿದಂಬರ ರಹಸ್ಯಗಳು ಸಂಖ್ಯಾಶಾಸ್ತ್ರದಿಂದ ಕರಾರುವಾಕ್ಕು ರೂಪುಗೊಂಡಿರುತ್ತವೆ. ಕಾಲಗಣನಾ ಚಕ್ರದಲ್ಲಿ ಭೂತ, ಭವಿಷ್ಯತ್ ಮತ್ತು ವರ್ತಮಾನ ಕಾಲಗಳ ಅದೃಷ್ಟ ಮತ್ತು ದೆಸೆಗಳು ಸಂಖ್ಯೆಗಳಲ್ಲಿ ಹುದುಗಿಗೊಂಡಿರುತ್ತವೆ. ಇದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಅಸ್ತ್ರ ಎನಿಸಿಕೊಂಡಿರುತ್ತದೆ. ಪುರಾತನ ಖಗೋಳ, ಜ್ಯೋತಿಷ್ಯ ಮತ್ತು ಗಣಿತ ಶಾಸ್ತ್ರಜ್ಞರು ತಮ್ಮದೇ ಆದ ಸಂಖ್ಯಾಶಾಸ್ತ್ರಗಳನ್ನು ರೂಪಿಸಿದ್ದಾರೆ. ಪ್ರಮುಖ ಗಣಿತ ಶಾಸ್ತ್ರಜ್ಞ ಪೈಥಾಗಾರ್ ತಮ್ಮದೇ ಆದ ಸಂಖ್ಯಾಶಾಸ್ತ್ರವನ್ನು ವಿವರಿಸಿದ್ದಾರೆ. ಮನೋ ವೈಜ್ಞಾನಿಕಶಾಸ್ತ್ರ ಮತ್ತು ದೈವಚಿತ್ರ ಪ್ರಸಾರ ಗಣಕ ಸೂತ್ರಗಳೊಂದಿಗೆ 'ಕರಣಿಕ' ಸಂಖ್ಯಾಶಾಸ್ತ್ರವನ್ನು ರಚಿಸಲಾಗಿದೆ. ಆಸಕ್ತರು ಹಲವು ಬಾರಿ ಪ್ರಯತ್ನಿಸಿದರೆ ಉತ್ತಮ ಫಲಿತಾಂಶ ಸಿಗುವುದರಲ್ಲಿ ಸಂಶಯವೇ ಇಲ್ಲ. ಇವುಗಳನ್ನು ಮೂರು ಹಂತಗಳಲ್ಲಿ ತಿಳಿಸಲಾಗಿದೆ. 1ನೇ ಹಂತ: ಜನ್ಮ ದಿನಾಂಕ ಕರಣಿಕ ಸಂಖ್ಯೆ ಉದಾಹರಣೆಗೆ ನಾರಾಯಣ ( NARAYANA)ನ ಜನ್ಮ ದಿನಾಂಕ 1949, ಅಕ್ಟೋಬರ್ 6. ದಿನಾಂಕವನ್ನು ಸಂಖ್ಯೆಗಳಾಗಿ ಪರಿವರ್ತಿಸಿ, ಎಲ್ಲ ಸಂಖ್ಯೆಗಳನ್ನು ಕೂಡಿಸಿ ಏಕ ಸಂಖ್ಯೆಗೆ ತರುವುದು. 1+9+4+9+1+0+0+6=30=3+0=3 ಕರಣಿಕ ಸಂಖ್ಯೆ 2ನೇ ಹಂತ: ಪ್ರಸಕ್ತ ದಿನಾಂಕದ ಕರಣಿಕ ಸಂಖ್ಯೆ:2+0+1+3+0+6+0+1=1+3=4 ಕರಣಿಕ ಸಂಖ್ಯೆ. 3 ನೇ ಹಂತ: ಜನ್ಮನಾಮ ಕರಣಿಕ ಸಂಖ್ಯೆ (ಅಕ್ಷರ ಕೋಷ್ಟಕದಿಂದ) NARAYANA =8+5+6+5+3+5+8+5=45=4+5=9 ಕರಣಿಕ ಸಂಖ್ಯೆ ಎಲ್ಲ ಕರಣಿಕ ಸಂಖ್ಯೆಗಳನ್ನು ಒಟ್ಟು ಕೂಡಿಸಿದಾಗ 3+4+9=16=1+6=7 ಕರಣಿಕ ಸಂಖ್ಯೆ ದಿನಂಪ್ರತಿ ಕಾಲಮಾನದ ಯೋಗ ತಿಳಿಯಲು ಕರಣಿಕ ಸಂಖ್ಯೆ ಮತ್ತು ಪ್ರಸಕ್ತ ದಿನಾಂಕದ ವೇಳೆಯನ್ನು ಒಟ್ಟು ಕೂಡಿಸಿದರೆ ಯೋಗ ಸಂಖ್ಯೆ ಬರುವುದು ಯೋಗ ಸಂಖ್ಯೆ + ಕಾಲಮಾನ= (ಬೆಳಗ್ಗೆ 10:30) 7+10.30=7+1+0+3+0=11 1+1+2 (ಯೋಗ ಸಂಖ್ಯೆ) ಯೋಗ ಸಂಖ್ಯೆ1-4-7 ಬಂದರೆ ರಾಜಯೋಗ, 2-5-8 ಉಳಿದರೆ ಶುಭಯೋಗ ಮತ್ತು 3-6-9 ಬಂದರೆ ಅಶುಭ ಯೋಗ. ಜನ್ಮನಾಮ ಅಕ್ಷರ ಕರಣಿಕ ಕೋಷ್ಠಕವು 1:VWX, 2:STU, 3:YZY, 4:DEF, 5:ABC, 6:PQR, 7:JKL, 8:MNO ಮತ್ತು 9:GHI.

No comments:

Post a Comment