Thursday 10 January 2019

ಕರಣಿಕ ಯೋಗಾದಿಗಳು

ಕರಣಿಕ ಯೋಗಾದಿಗಳು *ದೆಸೆ ಗ್ರಹ ಚಂದ್ರ: ಜೀವನದ ಅಚಲ ನಿರ್ಧಾರಗಳು ಫಲಕಾರಿ. ಜೀವಿತ ವೈಭವೀಕರಣ ದೇವರ ಇಚ್ಛೆಯಂತೆ, ಆಕಸ್ಮಿಕ ಅದೃಷ್ಟಗಳು, ಐಶ್ವರ್ಯ ಮತ್ತು ರಾಜ ಯೋಗಗಳು ಜೀವಿತ ಮಧ್ಯ ಭಾಗದಲ್ಲಿ ಮಾತ್ರ. ಸಂಶೋಧನೆ, ಅನ್ವೇಷಣೆ ಪ್ರಗತಿ, ಛಲದಿಂದ ಮಾತ್ರ ಸಾಧನೆಗಳು ಸಾಧ್ಯ. ಪಂಚಭೂತಗಳು ತಮ್ಮನ್ನು ಸದಾ ಸುತ್ತಿವೆ ಎಚ್ಚರಿಕೆಯಿಂದಿರಿ. *ಮಂಗಳ: ಪೂರ್ವಜರ ಆಶೀರ್ವಾದದಿಂದ ಜೀವನವು ಸದಾ ಜ್ಞಾನ, ಬಲ, ಐಶ್ವರ್ಯ, ವೀರ್ಯ, ಶಕ್ತಿ ಮತ್ತು ತೇಜಸ್ಸುಗಳಿಂದ ಕೂಡಿರುತ್ತವೆ. ದೇಹ ಬೆಳೆದಂತೆಲ್ಲ ಅಧಿಕ ಜ್ಞಾಪಕಶಕ್ತಿ, ಧೀರತ್ವ ರಾಜಯೋಗಗಳು ಲಭಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಜೀವನ ಕಾಮಧೇನು ಕಲ್ಪವೃಕ್ಷ. * ಬುಧ: ಜೀವನವಿಡೀ ಪಂಚೇಂದ್ರಿಯಗಳು ತಮ್ಮ ಅಧೀನದಲ್ಲಿ ಇಡಲು ಸಾಧ್ಯವಿಲ್ಲ. ಸದಾ ಚಂಚಲ ಸ್ವಭಾವ, ಕಾಮ, ಕ್ರೋಧ, ಮಧ ಮತ್ತು ಮಾತ್ಸರ್ಯಗಳು ಸದಾ ಸುತ್ತುತ್ತಿರುತ್ತವೆ. ಬುದ್ಧಿ ಬ್ರಹ್ಮಾಂಡ ದೈವಚೇತನ, ಸಮಾಜೋದ್ಧಾರ ಮತ್ತು ವಿದ್ಯಾದಾನದಲ್ಲಿ ಸಂಪೂರ್ಣ ಆಸಕ್ತಿ ಸಂಗೀತ, ನೃತ್ಯ ಕಲಾಸೇವೆಯಲ್ಲಿ ಆಸಕ್ತಿ. *ಗುರು: ವಿಶ್ವವಿಖ್ಯಾತಿ ಮಹಾಜ್ಞಾನ ಮಹಾ ವಿಜ್ಞಾನ ತಮ್ಮಲ್ಲಿ ಮೂಡಲಿದೆ. ಜೀವನದಲ್ಲಿ ಉನ್ನತ ಪದವಿ, ಆಕಸ್ಮಿಕ ಅದೃಷ್ಟಗಳು, ವಿದೇಶ ವಾಸ್ತವ್ಯ, ಉತ್ತುಂಗ ಪುರಸ್ಕಾರ, ಅಮೃತ ಸಿದ್ಧ ಯೋಗಗಳು ಆಕಸ್ಮಿಕ, ಬೆಂಕಿಯಲ್ಲಿ ಸುಟ್ಟು ಹೊರಬರುವ ಪೀನಿಕ್ ಪಕ್ಷಿಯಂತೆ ಕಾಲಗಣನಾ ಚಕ್ರ. *ಶುಕ್ರ: ಜೀವನವಿಡೀ ಸುಖಮಯ ಸಂಸಾರ ಯಾವುದೇ ಆಘಾತ ಮತ್ತು ಅವಗಢಗಳಿಗೆ ಸಿಲುಕಲಾರರು, ಸಾಗರ ಸಂಶೋಧನೆ, ಜಲ ಕ್ರೀಡೆಗಳು, ಸಂಘಟನೆ, ವಾಯುಯಾನ, ಸಂಶೋಧನೆ, ವಿಜ್ಞಾನಗಳಲ್ಲಿ ಪ್ರಗತಿ, ತಮ್ಮಲ್ಲಿ ಒಂದು ದೈವಶಕ್ತಿ ಅಡಕವಾಗಿದೆ. ಅದೇ ಶಕ್ತಿ ತಮ್ಮ ಜೀವನದ ದಾರಿ ಉದ್ದಕ್ಕೂ ಭವಿಷ್ಯ ರೂಪಿಸಲಿದೆ. *ಶನಿ: ಜೀವನದಲ್ಲಿ ಬಾಧೆಗಳ ಬಿಗಿ ಮುಷ್ಠಿಯಲ್ಲಿ ಸಿಕ್ಕಿ ಬೇಯುವುದು. ಅಚಲ ನಿರ್ಧಾರಗಳು ಫಲಕಾರಿ ರಾಷ್ಟ್ರ ಹಾಗೂ ರಾಜ್ಯದ ಉನ್ನತ ಹುದ್ದೆ ಲಭ್ಯ. ಮಹಿಳೆಯರು ಮಹಾ ವಿಜ್ಞಾನಿ ಹಾಗೂ ಸಮಾಜ ಸುಧಾರಕರು ಆಗಬಹುದು. ಸಮಾಜದ ಬಿಗಿ ಮುಷ್ಠಿಯಿಂದ ತುಂಬಾ ಎಚ್ಚರ. *ರವಿ: ನಭೋಮಂಡಲದಲ್ಲಿ ಆತ್ಮವು ಎರಡು ನಭೋ ನಿಲ್ದಾಣಗಳನ್ನು ಹೊಂದಿರುವ ನಿರಂತರ ಪ್ರಯಾಣಿಕ ಎರಡು ನಿಲ್ದಾಣಗಳು ಮಧ್ಯೆ ಸಂಭವಿಸುವ ಭೌತಿಕ ಗುಣಗಳು ಮಾತ್ರ ತಮ್ಮ ಭವಿಷ್ಯವನ್ನು ರೂಪಿಸುತ್ತಿರುತ್ತವೆ. ನಿಮ್ಮ ಭವಿಷ್ಯ ನಿರ್ಧಾರಗಳ ಮೇಲೆ ನಿಂತಿದೆ. *ಪೃಥ್ವಿ: ಕಾಲಗಣನಾಚಕ್ರದಲ್ಲಿ ಯೋಗ-ಯೋಗಾದಿಗಳು ಬರುತ್ತಲೇ ಇರುತ್ತವೆ. ಇದರಿಂದ ದೈವಚೇತನ ಜ್ಞಾನಮಾರ್ಗ ವೃದ್ಧಿಸುತ್ತಲೇ ಇರುತ್ತದೆ. ತನ್ನ ದೇಹ ತನ್ನ ಹಿಡಿತದಲ್ಲಿ ಎಂದಿಗೂ ಇರುವುದಿಲ್ಲ. ಸುಖ-ಸಂತೋಷ ಸರಿ ಸಮನಾಗಿರುತ್ತವೆ. ಜೀವನ ಇಡೀ ಯಾವುದೇ ಗ್ರಹ ದೋಷಗಳು ಇರಲಾರವು. *ಪ್ಲೂಟೋ: ಜೀವಿತ ಚಿದಂಬರ ರಹಸ್ಯಗಳು ತಮಗೆ ತಿಳಿಯುತ್ತಲೇ ಇರುತ್ತವೆ. ತಮ್ಮ ದೇಹವೇ ಒಂದು ಭವಿಷ್ಯ ದೇಹ. ದೃಢ ಮನಸ್ಸುಳ್ಳ ಸ್ವಭಾವ ಸಮಾಜ ಉದ್ದಾರಕ್ಕೆ ತಮ್ಮ ದೇಹವು ಸದಾ ಮೀಸಲು ಪಂಚ ಭೂತಗಳು ತಮ್ಮನ್ನು ಸದಾ ಉತ್ತುಂಗಕ್ಕೆ ಏರಿಸುತ್ತಿರುತ್ತವೆ.

No comments:

Post a Comment