Thursday, 10 January 2019

ಜ್ಯೋತಿಷಶಾಸ್ತ್ರ ಆಧರಿತ ಪ್ರತಿ ಕ್ಷಣವೂ ಹೊಸತನ

ಜನವರಿ ಒಂದನೇ ದಿನಾಂಕವನ್ನು ಹೊಸ ವರ್ಷದ ಹೊಸ ದಿನ ಎಂದು ಎಲ್ಲರೂ ಆಚರಿಸುತ್ತಾರೆ. ಹಿಂದೂ ಪಂಚಾಂಗದ ಜ್ಯೋತಿಷಶಾಸ್ತ್ರ ಆಧರಿತದಲ್ಲಿ ಜ.1 ಮಾತ್ರ ಹೊಸ ದಿನವಲ್ಲ. ಅದಕ್ಕೆ ಕೆಲವು ಕಾರಣಗಳೂ ಇವೆ. ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಎಂಬ 5 ಅಂಶಗಳು ಇರುವುದು. ತಿಥಿಯಾಗಲಿ, ಯೋಗವಾಗಲಿ, ಕರಣವಾಗಲಿ, ವಾರವಾಗಲಿ, ನಕ್ಷತ್ರವಾಗಲಿ ಅವು ಒಂದು ಕಳೆದು ಮತ್ತೊಂದು ಬಂದಾಗ ಹೊಸದಾಗಿರುತ್ತದೆ. ಈ ದಿನದ ವಾರ ಮುಂದಿನ ವಾರ ಬಂದರೆ ತಿಥಿ, ಯೋಗ ಬೇರೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ದಿನದ ಕ್ಷಣ ಕ್ಷಣವೂ ಹೊಸದಾಗಿರುತ್ತದೆ. ಈ ಕಾರಣದಿಂದ ಜ್ಯೋತಿಷದ ಪಂಚಾಂಗದ ಪ್ರಕಾರ ಪ್ರತಿ ದಿನವೂ ಹೊಸ ದಿನವೇ ಆಗುವುದು. ತಿಥಿಗಳು:ಒಟ್ಟು 15 ತಿಥಿಗಳಿವೆ. ಈ 15 ತಿಥಿಗಳು ಪ್ರತಿ ದಿನವೂ ಬದಲಾವಣೆ ಆಗುತ್ತದೆ. ಹೀಗಾಗಿ ದಿನವೂ ಹೊಸ ದಿನವೇ ಆಗುವುದು.

No comments:

Post a Comment