Tuesday, 22 October 2019

ನಾಡಿ_ಅಂಶಗಳು

ನಾಡಿ_ಅಂಶಗಳು ... #ಜಾತಕನಿಗೆ ... #ಚಂದ್ರನ_ಜೊತೆ_ರವಿ ಇದ್ದರೆ... ತಂದೆಗೆ ಆಗಾಗ ಪ್ರಯಾಣ , ತಂದೆ-ತಾಯಿ ಇಬ್ಬರಲ್ಲಿಯೂ ಅನ್ಯೋನ್ಯತೆ , ತಾಯಿ ಸ್ವಾಭಿಮಾನಿ ಹಾಗೂ ದೊಡ್ಡ ಸಂಸ್ಕಾರವಂತ ಕುಟುಂಬದಿಂದ ಬಂದಿರುತ್ತಾಳೆ. #ಚಂದ್ರನ_ಜೊತೆ_ಕುಜ ನಿದ್ದರೆ... ತಾಯಿಯ ದೇಹ ಉಷ್ಣಯುತವಾಗಿದ್ದು ,ಅದರಿಂದಲೇ ದೇಹಕ್ಕೆ ತೊಂದರೆಗಳು. ಚಿಕ್ಕ ವ್ರಣ ಅಥವಾ ಗುಳ್ಳೆಗಳಿಂದ ತೊಂದರೆ. #ಚಂದ್ರನ_ಜೊತೆ_ಬುಧ ನಿದ್ದರೆ... ತಾಯಿ ಬುದ್ಧಿವಂತಳು , ವಿದ್ಯಾವಂತಳು , ಬರಹಗಾರಳು. ತಾಯಿಗೆ ಭೂಮಿಯಿಂದ ಲಾಭ , ಸಹೋದರಿಯಿಂದ ಸಹಕಾರ. ಜಾತಕನು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುವವನು. #ಚಂದ್ರನ_ಜೊತೆ_ಗುರು ಇದ್ದರೆ... ಜಾತಕನಿಗೆ ಶೀತ ಸಂಬಂಧಿತ ಅನಾರೋಗ್ಯ, ಪರಸ್ಥಳಗಳಿಗೆ ಆಗಾಗ ಭೇಟಿ. ತಾಯಿಗೆ ಪೂಜೆ ವ್ರತಗಳಲ್ಲಿ ಆಸಕ್ತಿ. #ಚಂದ್ರನ_ಜೊತೆ_ಶುಕ್ರ ನಿದ್ದರೆ... ಜಾತಕನಿಗೆ ವಿನಾಕಾರಣ ಹಣವ್ಯಯ. ಮನೆ, ವೈಭವ ವಸ್ತುಗಳ ಮಾರಾಟ. ತಾಯಿಗೆ ತುಂಬಾ ಧಾರಾಳತನ. ಪತ್ನಿಗೆ ಊರೂರು ತಿರುಗುವ ಬಯಕೆ. #ಚಂದ್ರನ_ಜೊತೆ_ಶನಿ ಇದ್ದರೆ... ತಾಯಿಗೆ ಶೀತ ಸಂಬಂಧಿತ ಕಫ , ವಾತ , ಶ್ರಮ . ತಾಯಿ ಕೆಲಸದಲ್ಲಿ ಬೇರೆ ಊರುಗಳಿಗೆ ಹೋಗಬೇಕಾದ ಪ್ರಮೇಯ. ಜಾತಕನಿಗೆ ಚಿಕ್ಕಂದಿನಲ್ಲಿ ಕಷ್ಟ. #ಚಂದ್ರನ_ಜೊತೆ_ರಾಹು ಇದ್ದರೆ... ತಾಯಿಗೆ ಭೀತಿ , ಶಂಕೆ , ಆಗಾಗ ಕಂಟಕ. ಜಾತಕನಿಗೆ ಅಸ್ಥಿರ ಮನಸ್ಸು. ಬೃಹತ್ ಆಲೋಚನೆಗಳು. #ಚಂದ್ರನ_ಜೊತೆ_ಕೇತು ಇದ್ದರೆ... ತಾಯಿಗೆ ಆಧ್ಯಾತ್ಮಿಕ ಮನಸ್ಸು. ಗಣಪತಿಯ ಪೂಜೆಯಿಂದ ಯಶಸ್ಸು , ವಿಘ್ನಗಳ ನಿವಾರಣೆ. ಜಾತಕನಿಗೆ ಇಕ್ಕಟ್ಟಿನ ಪರಿಸ್ಥಿತಿ.

!!!ಎಲ್ಲಾ_ರಾಶಿಗಳಲ್ಲೂ_ಚಂದ್ರ ಇದ್ದಾಗಿನ_ಫಲ!!!

ಎಲ್ಲಾ_ರಾಶಿಗಳಲ್ಲೂ_#ಚಂದ್ರ ಇದ್ದಾಗಿನ_ಫಲ ಇದು ಯಾರದೇ ವೈಯುಕ್ತಿಕ ಜಾತಕದ ವಿಶ್ಲೇಷಣೆ ಅಲ್ಲ...!! #ಮೇಷ ..... ಕಡಿಮೆ ತಿನ್ನುವವರು , ಒಣ ಪದಾರ್ಥಗಳನ್ನು ಇಷ್ಟಪಡುವರು , ಹೆಚ್ಚು ಕೋಪವುಳ್ಳವರು , ಅಹಂಕಾರದ ನಡೆ , ಸ್ತ್ರೀಯೆಡೆಗೆ ಬೇಗ ಆಕರ್ಷಿತರಾಗುವರು, ಜೀವನದ ಸ್ಥಿತಿಯಲ್ಲಿ ಏರುಪೇರುಗಳನ್ನು ಹೊಂದುವವರು. ವಗರು ಪದಾರ್ಥಗಳ ಸೇವನೆ ಹೆಚ್ಚು. #ವೃಷಭ .....ಸಂಗೀತ-ಕಲೆಗಳಲ್ಲಿ ಆಸಕ್ತಿಯುಳ್ಳವರು , ವಿಚಾರವಂತರು , ಹೊಸ ವಿಷಯ ಶೋಧಕರು ,ರುಚಿಯಾಗಿ ಅಡಿಗೆ ಮಾಡಬಲ್ಲವರು , ಹೋಟೆಲ್ ಪದಾರ್ಥಗಳ ಮೇಲೆ ಆಸೆ , ದೂರದರ್ಶಿತ್ವವುಳ್ಳವರು , ಪರೋಪಕಾರಿಗಳು , ನ್ಯಾಯವಂತರು. #ಮಿಥುನ ......ಸೂಕ್ಷ್ಮ ಬುದ್ದಿಯವರು, ತಾಂತ್ರಿಕತೆಯಲ್ಲಿ ಆಸಕ್ತಿ , ಜ್ಯೋತಿಷ್ಯದಲ್ಲಿ ಅಭಿರುಚಿ , ಚರ್ಮಸಮಸ್ಯೆ , ಸಾಮೋಪಾಯಗಳನ್ನು ಬಲ್ಲವರು. ಹಾಸ್ಯ-ವಿನೋದ ಚಿತ್ತರು. ವೈಜ್ಞಾನಿಕ ಮನೋಭಾವ. ಸೊಪ್ಪು ತರಕಾರಿಗಳ ಬಳಕೆ ಹೆಚ್ಚು. #ಕಟಕ ..... ಹೆಚ್ಚು ಸ್ನೇಹಿತರು , ಆರಾಮವಾದ ಜೀವನವನ್ನು ಇಷ್ಟಪಡುವರು , ಅದೃಷ್ಟವಂತರು , ಪ್ರವಾಸ ಪ್ರಿಯರು , ದೃಢ ಮನಸ್ಸಿಲ್ಲ , ಪರೋಪಕಾರಿಗಳು , ಶಾಸ್ತ್ರಾಭಿಮಾನಿಗಳು , ಕರ್ತವ್ಯಶೀಲರು. ಸರ್ವ ವಿಧ ತಿಂಡಿ-ತಿನಸುಗಳ ಆಸಕ್ತಿ. #ಸಿಂಹ....ಸ್ಥಿರ ಬುದ್ಧಿವುಳ್ಳವರು , ಪರಾಕ್ರಮಿಗಳು , ಸಾಹಸಿಗಳು , ರಾಜಕೀಯ ಆಸಕ್ತಿ , ಮುನ್ನಡೆಯುವ ಧೈರ್ಯ , ದೂರಾಲೋಚನೆ , ವ್ಯಾಕುಲತೆ , ವಿಲಾಸ ಜೀವನ , ಆತ್ಮಾಭಿಮಾನಿ. ಖಾರದ ಪದಾರ್ಥಗಳಲ್ಲಿ ಆಸಕ್ತಿ. #ಕನ್ಯಾ .....ತೀಕ್ಷ್ಣ ಬುದ್ಧಿ , ತಮ್ಮ ಬುದ್ಧಿಯ ಪ್ರದರ್ಶನ ಮಾಡದವರು , ಎಲ್ಲಾ ರಂಗಗಳಲ್ಲೂ ಆಸಕ್ತಿ , ಧೈರ್ಯ-ಅಧೈರ್ಯದ ಸಮ್ಮಿಶ್ರ ಮನಸ್ಸು. ಸಲಹೆಗಾರರು. ಮಿತವಾದ ಆಹಾರ ಹಾಗೂ ಮಾತು. #ತುಲಾ.....ಗುರು ಹಿರಿಯರಲ್ಲಿ ಭಕ್ತಿ , ದೇವರಲ್ಲಿ ನಂಬಿಕೆ , ನ್ಯಾಯವಾದಿಗಳು , ಕುಶಲ ವಿದ್ಯಾ ನಿಪುಣರು , ಉಪಕಾರಿಗಳು ಹೆಂಗಸರನ್ನು ಆಕರ್ಷಿಸುವರು. ಗೊಜ್ಜು ಉಪ್ಪಿನಕಾಯಿ ಪ್ರಿಯರು. #ವೃಶ್ಚಿಕ.....ಮೊಂಡು ಸ್ವಭಾವ. ಕಠಿಣ ಮನಸ್ಸು , ಯುದ್ಧವಾಡಿದರೆ ಪರಾಭವವೇ ಇಲ್ಲ , ರೀತಿ-ನೀತಿಗಳ ಅನುಕರಣೆಯಿಂದ ಕುಟುಂಬದಲ್ಲಿ ಅಸಹಕಾರ. ಗುಪ್ತ ವ್ಯವಹಾರ ಹೆಚ್ಚು. ಸಂಶೋದನೆಯಲ್ಲಿ ಆಸಕ್ತಿ. ತಾವೇ ಬಾಣಿಗರಾಗುವ ಅವಕಾಶ. #ಧನುರ್ ....ಔದಾರ್ಯಗುಣ , ನಿಷ್ಕಪಟ, ಉದ್ವೇಗಿಗಳು , ಹೆಚ್ಚು ಕೋಪ , ದೊಡ್ಡ ಕಾರ್ಯಗಳ ಅಪೇಕ್ಷೆ. ಸಮಾಜಪ್ರಿಯರು , ಪುರಾಣ ಪುಣ್ಯಕಥೆಗಳು ಹಾಗೂ ಆಧ್ಯಾತ್ಮದ ಉಪನ್ಯಾಸ ಮಾಡುವವರು. ಸಿಹಿ ಪದಾರ್ಥಗಳ ಪ್ರಿಯರು. #ಮಕರ .....ಆಲಸಿಗಳು , ಕಡಿಮೆ ಚಟುವಟಿಕೆಯುಳ್ಳವರು , ಸ್ವಾರ್ಥಿಗಳು‌, ಸಂಚರಿಸುವ ಆಸೆ , ಧನ ಹಾಗೂ ಯಶಸ್ಸು... ಎರಡರ ಮೇಲೂ ಆಸಕ್ತಿ. ಕೃಪಣರು ಆದರೆ ಭಾಗ್ಯವಂತರು. ಹೊರಗಿನ ಪದಾರ್ಥಗಳ ಮೇಲೆ ಆಸೆ. #ಕುಂಭ.....ಘನವಂತರು , ದೊಡ್ಡಸ್ತಿಕೆ ಹೆಚ್ಚು , ಸಂಸಾರ ಗುಟ್ಟು , ಸೂಕ್ಷ್ಮ ಬುದ್ಧಿ , ಶಾಸ್ತ್ರ ಪ್ರಿಯರು , ಲೈಂಗಿಕ ಆಸಕ್ತಿ ಹೆಚ್ಚು , ವಿಷಯಾಸಕ್ತರು. ಆಯುರ್ವೇದದಲ್ಲಿ ನಂಬಿಕೆ. #ಮೀನ.....ತಿನ್ನುವ ಆಸೆ ಹೆಚ್ಚು , ಸಮಯಕ್ಕೆ ತಕ್ಕ ಮಾತು , ಅಲಂಕಾರ ಪ್ರಿಯರು , ಜ್ಞಾನವಂತರು. ಅಲೌಕಿಕ ಭಾಷಣಗಳನ್ನು ಚೆನ್ನಾಗಿ ನೀಡುವರು. ಕಾಂತಿಯುತರು , ಸ್ನೇಹವಂತರು.

ಶುಕ್ರ ನ ಪರಿಚಯ

ಶುಕ್ರ - ವಜ್ರದಂಗಳದ ಒಂದರಿವು...! ಸೌರವ್ಯೂಹದಲ್ಲಿ ಸೂರ್ಯನಿಗೆ, ಬುಧ ಗ್ರಹದ ನಂತರ ತಿರುಗಾಡುವ ಎರಡನೆಯ ಗ್ರಹ *ಶುಕ್ರ* . ಸೂರ್ಯೋದಯ , ಸೂರ್ಯಾಸ್ತದ ಸಮಯದಲ್ಲಿ ಹೆಚ್ಚಾಗಿ ಕಾಣುವುದು. [ Morning Star , Evening Star - ಎಂದೇ ಪ್ರಖ್ಯಾತ ] ನಾಸಾ ಪ್ರಕಾರ *ಶುಕ್ರ* ಗ್ರಹವು ಭೂಮಿಯಿಂದ 261 ಮಿಲಿಯನ್ ಕಿ.ಮೀ.ದೂರದಲ್ಲಿದೆ. ಭೂಮಿಗೂ , ಶುಕ್ರನಿಗೂ ಪರಿಭ್ರಮಣದ ವ್ಯತ್ಯಾಸ ಬಹಳ ಇರುವುದರಿಂದ , ಅವೆರಡರ ಅಂತರದಲ್ಲಿ ಹಲವು ಬಾರಿ ವ್ಯತ್ಯಯಗಳಾಗುವುದು. #ಶುಕ್ರ ಗ್ರಹದ ಸುತ್ತಲೂ ದಟ್ಟವಾದ ಮೋಡಗಳಿದ್ದು , ಎಲ್ಲಾ ಸೂರ್ಯನ ಕಿರಣಗಳನ್ನು ಪ್ರತಿಫಲನ ಮಾಡುತ್ತದೆ. ಹಾಗಾಗಿ ವಜ್ರದ ತರಹ ಅತ್ಯಂತ ಪ್ರಕಾಶಮಾನವಾಗಿ ಕಾಣುವುದು. ಐಹಿಕ ಸುಖ-ಸಂಪತ್ತುಗಳಿಗೆ ಬಹಳ ಮಾನ್ಯತೆ ಕೊಡುವ ಮನುಜರಿಗೆ *ಶುಕ್ರ* ಎಂದರೆ ಕಿವಿ ನಿಮಿರುವುದು. ಶುಕ್ರದಶೆ ಎಂದರೆ ಮುಗಿಯಿತು. ತಾನೊಬ್ಬ ಆಗರ್ಭ ಶ್ರೀಮಂತನಾಗುವ ಕನಸನ್ನು ಕಾಣತೊಡಗುವನು. ಅದರಲ್ಲಿ ತಪ್ಪೇನಿಲ್ಲ. ಏಕೆಂದರೆ ಆ ಎಲ್ಲಾ ರಜೋಗುಣಗಳಿಗೆ ಶುಕ್ರನೇ ಕಾರಕನು. ಪೌರಾಣಿಕವಾಗಿ #ಶುಕ್ರ ನ ಪರಿಚಯ....! ಇವನು ಭೃಗುಪುತ್ರ. ಅಸುರರ ಗುರು. ಧರ್ಮಶಾಸ್ತ್ರಗಳನ್ನು ಅಭ್ಯಸಿಸಿ , ಮೃತಸಂಜೀವಿನಿ ಮಂತ್ರವನ್ನು ವಶಪಡಿಸಿಕೊಂಡವನು. ದೈತ್ಯರೆಲ್ಲಾ ಶರಣು ಬಂದಾಗ ಅವರನ್ನು ರಕ್ಷಿಸುತ್ತಿದ್ದ ಮಹಾಋಷಿ. ಮಹಾತೇಜಸ್ಸಿನಿಂದ ಕೂಡಿದ್ದವನು , ಕಾಂತಿಯುಕ್ತನು. #ಶುಕ್ರ ನ ಕಾರಕತ್ವಗಳು...! ಶುಭ ಕಾರಕನು ಹಾಗೂ ಕಳತ್ರಕಾರಕನು. ಸುಖ , ಸಂಪತ್ತು , ಗೃಹ , ವಾಹನ , ಪ್ರೇಮ, ಸೌಂದರ್ಯ , ಅಲಂಕಾರ , ರೇಶ್ಮೆ ಉಡುಪು, ಆಡಂಬರ , ಸಂಗೀತ , ನಾಟ್ಯ , ನಟನೆ , ಹೂವು , ಫಲವೃಕ್ಷ , ಕುದುರೆಜೂಜು , ಮದ್ಯ , ವ್ಯಭಿಚಾರ , ಕಾಮ ,ವ್ಯಾಮೋಹ - ಹೀಗೆ ಅನೇಕ ಕಾರಕತ್ವಗಳಿವೆ. ಸ್ತ್ರೀ ದೇಹದಲ್ಲಿನ ಗರ್ಭಕೋಶ , ಅಂಡಾಶಯ , ಸ್ತ್ರೀತ್ವ , ಪುರುಷದೇಹದಲ್ಲಿನ ವೀರ್ಯ , ಬೀಜ ಕೋಶ - ಇವುಗಳಿಗೂ ಶುಕ್ರನೇ ಕಾರಕ. #ಶುಕ್ರ ನ ಜೊತೆ ಇತರ ಗ್ರಹಗಳ ಸಂಯೋಗ. #ರವಿಯ ಜೊತೆಯಲ್ಲಿ....ಹೆಣ್ಣಿಗೆ ಅಹಂಕಾರ , ಒಳ್ಳೆಮನೆತನದ ಪತ್ನಿ , ಹೆಣ್ಣಿಗೆ ಗರ್ಭಾಶಯದ ತೊಂದರೆ , ಗಂಡಸಿಗೆ ವೀರ್ಯಾಣುಗಳ ಕೊರತೆ . ತಂದೆಗೆ ಹೆಣ್ಮಕ್ಕಳ ಜನನದ ನಂತರ ಅಭಿವೃದ್ಧಿ. #ಚಂದ್ರನ ಜೊತೆ....ಸುಂದರ ಮೃದುಭಾಷಿ ತಾಯಿ , ಹೆಣ್ಣಿನಿಂದ ಮೋಸ ,ಅಸ್ಥಿರ ಮನಸ್ಸಿನ ಹೆಂಡತಿ , ತಾಯಿ ಸ್ತ್ರೀ ರೋಗತಜ್ಞೆಯಾಗಿರಬಹುದು, ಪತ್ನಿ ಮನಃಶಾಸ್ತ್ರ ತಜ್ಞೆಯಾಗಬಹುದು. #ಕುಜ ನ ಜೊತೆ....ವೈವಾಹಿಕ ಜೀವನದಲ್ಲಿ ಸರಸ-ವಿರಸ ಹಾಗೂ ಅತೃಪ್ತಿ ,ಪರಸ್ತ್ರೀ ವ್ಯಾಮೋಹ , ಜೂಜುಕೋರತನ. #ಬುಧನ ಜೊತೆ...ಹೆಣ್ಣುಗಳ ಸ್ನೇಹ , ವ್ಯವಹಾರ ಜಾಣ್ಮೆ , ಒಳ್ಳೆಯ ವಾಗ್ಮಿ ,ಬುದ್ಧಿ ವಂತ ಹಾಗೂ ತಾಳ್ಮೆಯುಳ್ಳ ಪತ್ನಿ , ಸಿನಿಮಾರಂಗದ ಸಾಹಿತ್ಯ , ಸಂಭಾಷಣೆ , ಸಂಗೀತ , ನಾಟ್ಯ. #ಗುರು ವಿನೊಂದಿಗೆ....ಒಳ್ಳೆಯ ವಿದ್ವಾಂಸ , ವಿದ್ಯೆಯಿಂದ ಧನಸಂಪನ್ನತೆ , ಶಾಸ್ತ್ರಗಳಲ್ಲಿ ಸಾಧನೆ , ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಹಾಗೂ ಬೆಂಬಲ. #ಶನಿ ಯ ಜೊತೆ....ಕಷ್ಟಪಟ್ಟು ಹಣ ಸಂಪಾದನೆ , ಕೆಲಸದಲ್ಲಿ ನಿರತ ಪತ್ನಿ , ಹಳೆಯ ಮನೆ , ಹಳೆಯ ವಾಹನದ ಪ್ರಾಪ್ತಿ , ವಿವಾಹ ವಿಳಂಬ , ನೀರಸ ದಾಂಪತ್ಯ . #ರಾಹು ವಿನ ಜೊತೆ.....ಆಸೆಗಳ ಮಹಾಪೂರ , ಅತಿ ಐಶ್ವರ್ಯ , ಜೂಜು-ಸಟ್ಟದ ಬದುಕು , ಮೋಜಿಗಾಗಿ ತಂಬಾಕಿನ ಅಭ್ಯಾಸ , ಅತಿ ಕಾಮಿ , ಅಂತಸ್ತಿನ ಮನೆಗಳ ಲಭ್ಯ. #ಕೇತುವಿನ ಜೊತೆ...ಐಶ್ವರ್ಯವಿದ್ದರೂ ಅನುಭವಿಸುವುದಿಲ್ಲ , ಆಡಂಬರ ಇಷ್ಟ ಪಡುವುದಿಲ್ಲ , ಐಹಿಕ ಸುಖಾಸಕ್ತಿ ಕಡಿಮೆ, ಪತ್ನಿ ವಿಚಾರದಲ್ಲಿ ವಾದ-ವಿವಾದ , ದೂರವಾಗುವಿಕೆ , ವಿಚ್ಛೇದನ. ಜಾತಕನ ಕುಂಡಲಿಯಲ್ಲಿ #ಶುಕ್ರನ ಸ್ಥಾನ , ಯುತಿ - ಚೆನ್ನಾಗಿದ್ದರೆ , ಇಹಜೀವನದಲ್ಲಿ ಬೇಕಾದ್ದೆಲ್ಲವನ್ನೂ ಪಡೆದು , ನೆಮ್ಮದಿಯ ಜೀವನವನ್ನು ಗಳಿಸಬಹುದು.

ದ್ವಾದಶ_ಲಗ್ನಗಳಲ್ಲಿ_ಜನಿಸಿದ #ಫಲ

ದ್ವಾದಶ_ಲಗ್ನಗಳಲ್ಲಿ_ಜನಿಸಿದ #ಫಲ #ಮೇಷ_ಲಗ್ನ .... ಕೋಪಿಷ್ಟನು , ಸ್ನೇಹಿತರಲ್ಲಿ ಭೇದ ಹುಡುಕುವವನು. ಇಷ್ಟವಾದವರ ಮಾತನ್ನು ಶಿರಸಾವಹಿಸಿ ನಡೆಸಿಕೊಡುವನು. ಹೆಚ್ಚು ಕೆಲಸಗಳನ್ನು ತಾನೇ ಮುತುವರ್ಜಿಯಿಂದ ಮಾಡುವನು. #ವೃಷಭ_ಲಗ್ನ .....ಉಬ್ಬಿದ ಕೆನ್ನೆಗಳು , ಅಗಲ ಹಣೆ , ಆಕರ್ಷಕ ಮುಖ , ‌ಉದಾರಗುಣ , ಸಮಯವ ಅರಿತು ಹೆಚ್ಚು ಖರ್ಚುಮಾಡುವವ , ಸೌಂದರ್ಯಕ್ಕೆ ಹೆಚ್ಚು ಗಮನ , ಬಂಗಾರ ಹಾಗೂ ರೇಶ್ಮೆಯ ಆಸೆ. ಕಷ್ಟಪಟ್ಟು ಕೆಲಸ ಮಾಡುವವ ಆದರೆ ಆಗಾಗ ಸೋಮಾರಿತನ. ನೆನೆಸಿಕೊಂಡು, ಚಪಲಗೊಂಡು ತಿನ್ನುವವನು. #ಮಿಥುನ_ಲಗ್ನ ....ಒಳ್ಳೆಯ ಸುಮಧುರ ಮಾತುಗಳು , ಅತಿಶಯದ ಕೆಲಸಗಳ ನಿರ್ವಹಣೆ , ಎಲ್ಲರನ್ನೂ ಸಮವಾಗಿ ಕಾಣುವವನು , ಮಾತಿನಿಂದ ಶತ್ರುವನ್ನು ಜಯಿಸತಕ್ಕವನು , ಧರ್ಮಕಾರ್ಯ ಕೈಗೊಳ್ಳುವವನು , ಬಹಳ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕುವವನು. #ಕಟಕ_ಲಗ್ನ .... ಹಿಂದಿನ , ವರ್ತಮಾನದ , ಮುಂದಿನ ಕಾಲದ ಬಗ್ಗೆ ಹೆಚ್ಚು ಆಲೋಚನೆ. ತಮ್ಮ ಕುಟುಂಬವೆಂದರೆ ಬಹಳ ಹೆಮ್ಮೆಯುಳ್ಳವರು .ಇವರಿಂದ ಹಣ ಹರಿದುಹೋಗುವುದು. ಎಲ್ಲರಲ್ಲಿಯೂ ಪ್ರೀತಿ ತೋರುವರು . ಉಪಚಾರ ಚೆನ್ನಾಗಿ ಮಾಡುವರು. #ಸಿಂಹ_ಲಗ್ನ.... ಹೃದಯವಂತರು , ನಿಷ್ಕಪಟಿಗಳು , ಆತ್ಮವಿಶ್ವಾಸವುಳ್ಳವರು , ದೊಡ್ಡಸ್ತಿಕೆಯ ತೋರ್ಪಡಿಕೆ , ಇತರರಿಗೆ ಸಹಾಯ ಮಾಡುವವರು. ಧೀಮಂತ ನಡವಳಿಕೆ . ಉದಾರ ಮನೋಭಾವ. #ಕನ್ಯಾ_ಲಗ್ನ .... ಸೂಕ್ಷ್ಮಗ್ರಾಹಿಗಳು , ತಮಗೆ ಇಂತಹುದು ಬೇಕೆಂದು ಎಂದೂ ಹಠ ಹಿಡಿಯರು , ಮೃದು ಮಾತು , ತೀವ್ರ ಬುದ್ಧಿ , ಆಲೋಚಿಸಿಯೇ ಕೆಲಸ , ಕಲ್ಪನೆಯ ಬರಹ , ನೈಜ ಬರಹ , ಯಾರನ್ನೂ ಸುಲಭವಾಗಿ ನಂಬುವುದಿಲ್ಲ. #ತುಲಾ_ಲಗ್ನ... ಸತ್ಯವಂತರು , ನ್ಯಾಯಶೀಲರು , ಹೆಚ್ಚಿನ ಗೆಳೆಯರ ಬಳಗ, ಸಂಗೀತ , ಚಿತ್ರಕಲೆ , ನಾಟಕ , ಸಿನಿಮಾದಲ್ಲಿ ಪ್ರೀತಿಯುಳ್ಳವರು. ತಮ್ಮ ಪ್ರತಿಭೆಯಿಂದ ಹೆಸರು ಗಳಿಸುವರು. #ವೃಶ್ಚಿಕ_ಲಗ್ನ ..... ದೃಢ ಮನಸ್ಸುಳ್ಳವರು , ವಾದವಿವಾದಗಳಲ್ಲಿ ಗೆಲ್ಲುವವರು , ಅಭಿಪ್ರಾಯಗಳ ಹೇರುವಿಕೆ ಇರುತ್ತದೆ. ರಹಸ್ಯ ಇಲಾಖೆಗಳಲ್ಲಿ ಕೆಲಸ ಮಾಡುವುದರಲ್ಲಿ ಅಗ್ರಗಣ್ಯರು. #ಧನಸ್ಸು_ಲಗ್ನ ... ಉದಾರ ಮನಸ್ಸು , ಶುದ್ಧ ಅಂತಃಕರಣ , ಎಲ್ಲರೂ ಇವರನ್ನು ಇಷ್ಟಪಡುವರು. ದಾನ, ಧರ್ಮ , ಸಹಾನುಭೂತಿ ಇರುತ್ತದೆ. ನೀತಿನಿಪುಣರು, ತತ್ವಜ್ಞಾನಿಗಳು , ಕಾನೂನು ಬಲ್ಲವರು. #ಮಕರ_ಲಗ್ನ ....ಶಾಂತ ಸ್ವಭಾವ , ಸ್ಥಿರ ಮನ , ಗಂಭೀರ ಮುಖ , ದಕ್ಷತೆಯ ಕಾರ್ಯ , ಆಗಾಗ ಉದಾಸೀನತ್ವ , ಭಾವೋದ್ವೇಗಕ್ಕೆ ಬೇಗ ಒಳಗಾಗುವರು. ಅಲ್ಪ ಸ್ನೇಹಿತರು. #ಕುಂಭ_ಲಗ್ನ ....ಶಾಸ್ತ್ರೀಯ ವಿಷಯಾಸಕ್ತಿ. ಸತ್ಯ ನುಡಿ ,ಸಹನ ಶೀಲರು ತಾವು ಮಾಡುವ ಅನೇಕ ಒಳ್ಳೆಯ ಕೆಲಸಗಳನ್ನು ಯಾರಿಗೂ ಹೇಳುವುದಿಲ್ಲ. ಪ್ರಭಲ ಆಕಾಂಕ್ಷಿಗಳು , ಕೆಲವೊಮ್ಮೆ ವ್ಯಸನಿಗಳು. #ಮೀನ_ಲಗ್ನ ...ಸಮಾಜದಲ್ಲಿ ಒಳ್ಳೆಯ ಹೆಸರು , ಭೋಜನ ಪ್ರಿಯರು , ಉತ್ತಮ ಗ್ರಹಣ ಶಕ್ತಿಯುಳ್ಳವರು , ಅನೇಕ ಕಲೆಗಳಲ್ಲಿ ಆಸಕ್ತಿ. ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸುವರು , ಒಳ್ಳೆಯ ಲೇಖಕರು. ವ್ಯವಹಾರ ಚತುರರು.

#ಶುಕ್ರ_ಮಹಾದಶಾಫಲ #೨೦_ವರ್ಷ

#ಶುಕ್ರ_ಮಹಾದಶಾಫಲ #೨೦_ವರ್ಷ ಶುಕ್ರಮಹಾದಶೆಯಲ್ಲಿ ಶುಕ್ರನು #ಸ್ಥಾನಬಲವುಳ್ಳನಾಗಿದ್ದರೆ ರಾಜಸನ್ಮಾನ, ವಸ್ತ್ರಾಭರಣ , ವಿದ್ಯಾವ್ಯಾಸಂಗ , ಕುಟುಂಬದಲ್ಲಿ ಸುಖ-ಸಂತೋಷ , ಧನಲಾಭ, ವಾಹನಲಾಭ ಇರುತ್ತದೆ. ಶುಕ್ರನು #ಸ್ವಕ್ಷೇತ್ರದಲ್ಲಿದ್ದರೆ ಅಧಿಕಾರ ಪ್ರಾಪ್ತಿ , ಹೊಲ,ಮನೆ,ಗದ್ದೆ , ಧನ-ಧಾನ್ಯ ಸಮೃದ್ಧಿ , ಭೂಮಿಯಿಂದ ಲಾಭ ಇರುತ್ತದೆ. ಶುಕ್ರನು #ಮೂಲತ್ರಿಕೋಣ ದಲ್ಲಿದ್ದರೆ ವಿದ್ಯಾಲಾಭ , ವಾಹನ ಲಾಭ , ಸಂಪತ್ತಿನ ಅಭಿವೃದ್ಧಿ ಇರುತ್ತದೆ. ಶುಕ್ರನು #ಉಚ್ಚರಾಶಿ ಯಲ್ಲಿದ್ದರೆ ಅಥವಾ ಉಚ್ಚಗ್ರಹಗಳೊಡನೆ ಇದ್ದರೆ ಅಧಿಕಾರ ಪ್ರಾಪ್ತಿ , ಸಂಗೀತ ಹಾಗು ನಾಟ್ಯ ಕಲೆಗಳಲ್ಲಿ ಆಸಕ್ತಿ ,ವಿಹಾರಕ್ಕಾಗಿ ವಿದೇಶಯಾತ್ರೆ , ಅಮೂಲ್ಯ ವಸ್ತುಗಳ ಪ್ರಾಪ್ತಿ ಇರುತ್ತದೆ. ಶುಕ್ರನು #ನೀಚರಾಶಿ ಯಲ್ಲಿದ್ದರೆ ಅಥವಾ ನೀಚಗ್ರಹಗಳೊಡನೆ ಇದ್ದರೆ ಅಧಿಕ ಭೀತಿ , ಧನಧಾನ್ಯ ನಾಶ , ಅಪವಾದ , ವೈವಾಹಿಕ ಜೀವನದಲ್ಲಿ ಏರು-ಪೇರು , ಕಾರ್ಯವಿಘ್ನ ಇರುತ್ತದೆ. ಶುಕ್ರನು #ಸಮಗ್ರಹ ಗಳ ರಾಶಿಯಲ್ಲಿದ್ದರೆ ಅಲ್ಪ ಧನ ಸಂಗ್ರಹ , ಮಿತ್ರರಾಶಿಯಲ್ಲಿ ಹೇರಳ ಧನಲಾಭ ಇರುತ್ತದೆ. ಶುಕ್ರನು #ಶತ್ರುಗ್ರಹಗಳ ರಾಶಿಯಲ್ಲಿದ್ದರೆ ಹೆಂಡತಿ-ಮಕ್ಕಳ ಯೋಚನೆ , ಪತ್ನಿಯಲ್ಲಿ ವಿರಸ , ಹೆಣ್ಣುಮಕ್ಕಳು ಎದುರು ಮಾತನಾಡುವುದು ,ಧನಹಾನಿ , ಸ್ವಜನ ವಿರೋಧ , ಅಧಿಕಾರ ಚ್ಯುತಿ ಇರುತ್ತದೆ. ಶುಕ್ರನು #ಪಾಪಗ್ರಹ ಗಳಿಂದ ಕೂಡಿದ್ದರೆ ಅಥವಾ ಪಾಪಗ್ರಹಗಳ ದೃಷ್ಟಿ ಇದ್ದರೆ ಊರು ಬಿಟ್ಟು ತಿರುಗಾಡುವುದು , ಧರ್ಮಾಚರಣೆ ಇಲ್ಲದೆ ಇರುವುದು , ಪತ್ನಿಗೆ ರೋಗವು ಇರುತ್ತದೆ. ಶುಕ್ರನು #ಶುಭಗ್ರಹದ ಜೊತೆಯಲ್ಲಿದ್ದರೆ ಅಥವಾ ನೋಡಿದರೆ ಮರ್ಯಾದೆ , ಮನ್ನಣೆ , ಆರೋಗ್ಯ , ಸೌಖ್ಯ , ವಿದ್ಯಾಲಾಭ , ಸ್ನೇಹಲಾಭ ಇರುತ್ತದೆ. ಶುಕ್ರನು ೬-೮ ಸ್ಥಾನಗಳಲ್ಲಿದ್ದರೆ ಹೆಂಡತಿ- ಮಕ್ಕಳಿಗೆ ಪೀಡೆಯು , ಹೆಣ್ಣು ಮಕ್ಕಳಿಂದ ವಿರೋಧವು ಇರುತ್ತದೆ. ೧೨ ನೆಯ ಸ್ಥಾನದಲ್ಲಿದ್ದರೆ ಪತ್ನಿಗಾಗಿ ಹೇರಳ ಖರ್ಚು. ಶುಕ್ರನು #ಆರೋಹಣದಲ್ಲಿದ್ದರೆ ಅಂದರೆ ಜನನ ಲಗ್ನದಿಂದ ೬ ನೆಯ ಸ್ಥಾನದವರೆಗೂ ಇದ್ದರೆ ಅಥವಾ ತುಲಾರಾಶಿಯಿಂದ ಮೀನರಾಶಿಯವರೆಗೆ ಇದ್ದರೆ , ಶುಕ್ರನ ದಶಾಕಾಲದಲ್ಲಿ ಅಧಿಕಾರ ಪ್ರಾಪ್ತಿ , ಧನಸಂಗ್ರಹ , ಬಂಧುಬಾಂಧವರ ಪ್ರೀತಿ , ಸಮಸ್ತ ರೀತಿಯ ಸುಖ ಇರುತ್ತದೆ. ಶುಕ್ರನು #ಅವರೋಹಣದಲ್ಲಿದ್ದರೆ ಅಂದರೆ ಜನನ ಲಗ್ನದಿಂದ ೭ ನೆಯ ಸ್ಥಾನದಿಂದ ೧೨ ನೆಯ ಸ್ಥಾನದವರೆಗೂ ಅಥವಾ ಮೇಷ ರಾಶಿಯಿಂದ ಕನ್ಯಾ ರಾಶಿಯವರೆಗೂ ಇದ್ದರೆ , ಜಾತಕನಿಗೆ ಕಷ್ಟ ಫಲಗಳು , ಜನವಿರೋಧವು , ಮನಸ್ತಾಪಗಳು , ಸುಖಸಂತೋಷಗಳು ಕಡಿಮೆ ಆಗುವವು.

ಕೇತು_ಮಹಾದಶಾ_ಫಲ

ಕೇತು_ಮಹಾದಶಾ_ಫಲ (ಏಳು ವರುಷ) ಈ ದಶೆಯಲ್ಲಿ ಸಾಮಾನ್ಯವಾಗಿ ದುಃಖ , ಭಯ , ಜನಗಳಿಂದ ವಿರೋಧ , ಕಷ್ಟ-ನಷ್ಟ ಭೂಮಿ-ಆಸ್ತಿ ಹಾನಿ , ಅರಿಷ್ಟ , ತಿರುಗಾಟ, ಅಧಿಕಾರಿಗಳೊಡನೆ ವೈಷಮ್ಯ ...ಫಲಗಳನ್ನು ಕಾಣಬಹುದು. ಕೇತುವು ೩ , ೬ , ೧೦, ೧೧ ನೆಯ ಸ್ಥಾನಗಳಲ್ಲಿ ಇದ್ದಾಗ , ಜಾತಕನಿಗೆ ಕೀರ್ತಿ, ಭಾಗ್ಯಲಾಭ , ಧನ-ಧಾನ್ಯ ಸಂಪದವಾಗುತ್ತದೆ. ಆದರೆ ಅದರ ಅಧಿಪತಿಗಳ ಭುಕ್ತಿಗಳಲ್ಲಿ , ಆ ಮನೆಗಳ ಕಾರಕತ್ವಗಳಿಗೆ ಏಟು ಬೀಳುತ್ತದೆ. ಕೇತುವು ವಕ್ರೀಗ್ರಹಗಳೊಡನೆ ಇದ್ದರೆ ಶಿಕ್ಷೆ , ಸೆರೆಮನೆವಾಸ , ಗ್ರಹಣಕಾಲದಲ್ಲಿದ್ದರೆ ಮರಣಭೀತಿ , ಶಸ್ತ್ರಾಸ್ತ್ರಗಳಿಂದ ಅಪಾಯ, ವಿಷಜಂತು ಹಾಗೂ ಸರ್ಪ ಭೀತಿ ಇರುತ್ತದೆ. ಕೇತುವು ಉಚ್ಚ ಸ್ಥಾನದಲ್ಲಿ ಇದ್ದು ಶುಭಗ್ರಹಗಳಿಂದ ವೀಕ್ಷಿಸಲ್ಪಟ್ಟರೆ #ಕೀರ್ತಿಯು , ವ್ಯಾಜ್ಯದಲ್ಲಿ ಜಯ , ನಾಯಿಗಳ ಸಾಕಣಿಕೆ , ಪಶುಸಂಗ್ರಹ , ವಸ್ತ್ರ ಲಾಭ , ರಾಜಸನ್ಮಾನ , ಅಧಿಕಾರಯೋಗ , ಪುರಾಣ ಪುಣ್ಯ ಕಥಾಶ್ರವಣ , ಆಸ್ತಿಪ್ರಾಪ್ತಿ ,ಸಂತಾನಲಾಭ...ಫಲ ಸಿಗುತ್ತದೆ. ಕೇತುವು ನೀಚಸ್ಥಾನದಲ್ಲಿದ್ದು ಅಶುಭಗ್ರಹಗಳ ವೀಕ್ಷಣೆಯಲ್ಲಿದ್ದರೆ ಬಂಧನ ಯೋಗ , ತಂದೆಗೆ ಹಾಗೂ ಸಂಬಂಧಿಕರಿಗೆ ದುಃಖ , ದೇಹ ಬಳಲಿಕೆ, ರೋಗಪೀಡೆ , ಕಳ್ಳರಕಾಟ , ಧನಹಾನಿ... ಈ ತರಹದ ಫಲಗಳು. ಕೇತುವನ್ನು ಶುಭಗ್ರಹ ನೋಡಿದರೆ ತೀರ್ಥಯಾತ್ರೆ , ಪುಣ್ಯಕ್ಷೇತ್ರಗಳ ದರ್ಶನ , ನೆಂಟರಿಷ್ಟರ ಪ್ರೀತಿ ಆದರತೆಗಳು ಇರುತ್ತವೆ. ಕೇತುವನ್ನು ಅಶುಭಗ್ರಹಗಳು ನೋಡಿದರೆ ಸಂತಾನ ಹೀನತೆ , ಅಪಘಾತಗಳು , ಕೆಲಸಗಳಲ್ಲಿ ವಿಘ್ನ , ವಿವಾಹದಲ್ಲಿ ತಡೆ , ನೆಮ್ಮದಿ ಇಲ್ಲದಿರುವುದು , ಆತ್ಮಹತ್ಯೆಯ ಪ್ರಯತ್ನ...ಈ ತರಹ ಫಲ ಒದಗುವುದು. ಕೇತುವಿನ ಅಶುಭಫಲಗಳಿಂದ ದೂರವಾಗಲು ವಿವಿಧ ಪರಿಹಾರಗಳು. #ಕೇತುಭುಕ್ತಿಗೆ -- #ಮೃತ್ಯುಂಜಯ_ಜಪ #ಶುಕ್ರ_ಭುಕ್ತಿಗೆ ... #ದುರ್ಗಾ_ಜಪ . #ರವಿಭುಕ್ತಿಗೆ ... #ಶಿವ ಸಹಸ್ರನಾಮ #ಚಂದ್ರಭುಕ್ತಿಗೆ ... #ದುರ್ಗಾಹೋಮ #ಬೆಳ್ಳಿ_ದಾನ . #ಕುಜಭುಕ್ತಿಗೆ... #ಸುಬ್ರಹ್ಮಣ್ಯ #ಜಪ , #ಸುಬ್ರಹ್ಮಣ್ಯ_ಭುಜಂಗಸ್ತೋತ್ರ #ಪಾರಾಯಣ #ರಾಹುಭುಕ್ತಿಗೆ...ಕಾಳಹಸ್ತೇಶ್ವರನಿಗೆ ಅಭಿಷೇಕ. ದೊಡ್ಡ ಬೂದು ಕುಂಬಳಕಾಯಿ ಯ ದಕ್ಷಿಣೆ ಸಮೇತ ದಾನ. (ಕಾಳಹಸ್ತಿಯಲ್ಲೂ ಮಾಡಿಸಬಹುದು. ಆಗದಿದ್ದವರು ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನದ ಹಿಂಬದಿಯಲ್ಲಿ ಕಾಳಹಸ್ತೇಶ್ವರನ ದೇವಾಲಯವಿದೆ.ಅಲ್ಲೂ ಮಾಡಿಸಬಹುದು) #ಗುರುಭುಕ್ತಿಗೆ.. ಮುಕ್ತಿನಾಥನಲ್ಲಿ ಬೇಡಿಕೆ , ತಮಿಳುನಾಡು ಗುರು ಕ್ಷೇತ್ರಕ್ಕೆ ಭೇಟಿ. #ಶನಿಭುಕ್ತಿಗೆ ... ನಂಜುಂಡೇಶ್ವರನ ದರ್ಶನ ಹಾಗೂ ಸೇವೆ. ಜಿಂಕೆಚರ್ಮದ ದಾನ. #ಬುಧಭುಕ್ತಿಗೆ ...ವಿಷ್ಣುಸಹಸ್ರನಾಮ ಪಾರಾಯಣ. ವಿಷ್ಣು ಪ್ರತಿಮೆ ದಾನ. #ಬುಧ_ದಶೆಯ ಅಂತ್ಯದಲ್ಲಿ ಕೇತುದಶೆ ಇನ್ನೇನು ಆರಂಭ ಅನ್ನುವ ವೇಳೆಗೆ #ಗಣಪತಿ_ಹೋಮ ಹಾಗೂ #ಅನ್ನದಾನ ಮಾಡಿದರೆ ತುಂಬಾ ಒಳ್ಳೆಯದು.

27 ನಕ್ಷತ್ರ.ವಿಚಾರ..

#ಅಶ್ವಿನೀ_ನಕ್ಷತ್ರ.ವಿಚಾರ... #ಅಶ್ವಿನೀ ನಕ್ಷತ್ರಕ್ಕಿರುವ ಬೇರೆ ಹೆಸರುಗಳು...ಅಶ್ವ , ತುರಗ , ಅಶ್ವೀ , ತುರಂಗ , ಹಯಾಃ , ಅಸ್ರಸ್ , ವಾಜೀ, ಹರಿಃ . #ಅಶ್ವಿನೀ ನಕ್ಷತ್ರದ ದೇವತೆಗಳು...ಅಶ್ವಿನೀ ದೇವತೆಗಳು. ಅಧಿದೇವತೆ...ಪೂಷಣ ಪ್ರತ್ಯಧಿದೇವತೆ...ಯಮ ನಕ್ಷತ್ರಸ್ವರೂಪ....ಕುದುರೆಯಾಕೃತಿಯ ಮುಖ ಇರುವ ಮೂರು ನಕ್ಷತ್ರಗಳು. ಇದು ಪುರುಷ . ಸಣಕಲು ದೇಹ , ದೃಷ್ಟಿ ಕಡಿಮೆ ,ಸ್ವಲ್ಪ ಕಪ್ಪು ಛಾಯೆ. ನಕ್ಷತ್ರದ ಅಧಿಪತಿ ಕೇತು. ರಾಶಿ-ಮೇಷ , ರಾಶ್ಯಾಧಿಪತಿ-ಕುಜ , ದೇವ ಗಣ , ಕುದುರೆ ಯೋನಿ , ರಜ್ಜು ಪಾದ , ವೈಶ್ಯ ವರ್ಣ , ಆದಿ ನಾಡಿ , ಪಕ್ಷಿ ಭೇರುಂಡ , ವೈರಿ ಎಮ್ಮೆ , ಹರಳು-ವೈಡೂರ್ಯ, ದೆಶೆ- ಏಳು ವರ್ಷ. ಅಕ್ಷರಗಳು...ಚು-ಚೆ-ಚೊ-ಲ. ಈ ನಕ್ಷತ್ರದಲ್ಲಿ ಜನನವಾದವರಿಗೆ ಒಳ್ಳೆಯ ಕಣ್ಣುಗಳು , ಆಕರ್ಷಕ ದೇಹವು ಇರುತ್ತದೆ. ಕಠಿಣ ಮನಸ್ಸು , ಗಂಡಾಂತರಗಳನ್ನು ಎದುರಿಸುವವರು , ಸೇವಾ ಮನೋಭಾವ ಉಳ್ಳವರು , ಸ್ಥಿತ ಪ್ರಜ್ಞೆ , ಚುರುಕುಬುದ್ದಿ , ವ್ಯವಹಾರಗಳಲ್ಲಿ ಆಸಕ್ತಿ , ಹಣಕಾಸಿನ ಲೆಕ್ಕಾಚಾರ , ಉತ್ತಮ ಸಾಧಕರು ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ಮೊದಲನೇ ಪಾದ ಮೇಷಾಂಶವಾಗಿ , ಕುಜನು ಅಧಿಪತಿಯಾಗಿದ್ದು , ಶೀಘ್ರಕೋಪಿ , ಶೂರ , ಸಾಹಸಿ , ಅಹಂಕಾರಿ ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ಎರಡನೇ ಪಾದ ವೃಷಭಾಂಶವಾಗಿದ್ದು , ಶುಕ್ರನು ಅದಕ್ಕೆ ಅಧಿಪತಿಯಾಗಿದ್ದು , ಧಾರ್ಮಿಕ , ಗುಣಸಂಪನ್ನರು , ಶ್ರದ್ಧಾಭಕ್ತಿಯುಳ್ಳವರು , ದೈವಭಕ್ತರು , ಎತ್ತರದವರು ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ಮೂರನೇ ಪಾದ ಮಿಥುನಾಂಶವಾಗಿದ್ದು , ಬುಧ ಅಧಿಪತಿಯಾಗಿದ್ದು , ಇವರು ಬುದ್ದಿವಂತರು, ಸರ್ವವಿದ್ಯಾಪಾರಂಗತರು , ಒಳ್ಳೆಯ ಮಾತುಗಾರರು , ವಿವೇಕಿಗಳು , ಶಾಂತಿಪ್ರಿಯರು , ಜೀವನೋಪಾಯ ಬಲ್ಲವರು ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ನಾಲ್ಕನೇ ಪಾದ ಕಟಕಾಂಶವಾಗಿದ್ದು , ಚಂದ್ರನು ಇದಕ್ಕೆ ಅಧಿಪತಿಯಾಗಿದ್ದು , ಜಾತಕರು ಪರೋಪಕಾರಿಯೂ , ಬುದ್ದಿವಂತರು , ಸುಖಾಕಾಂಕ್ಷಿಯೂ , ಪ್ರಯಾಣಗಳಲ್ಲಿ ಅಭಿಲಾಷೆ ಉಳ್ಳವರು , ಚಿತ್ತ ಚಾಂಚಲ್ಯದವರು ಆಗಿರುತ್ತಾರೆ. #ಅಶ್ವಿನೀ_ನಕ್ಷತ್ರದಲ್ಲಿ #ಮಾಡಬಹುದಾದ_ಕೆಲಸಗಳು... ವಿವಾಹ , ನಾಮಕರಣ , ಚೌಲ ,ಉಪನಯನ , ಔಷಧಿಸೇವನೆ , ಅಕ್ಷರಾಭ್ಯಾಸ , ಹೊಸನೌಕರಿ ಸೇರಲು , ಶಸ್ತ್ರಚಿಕಿತ್ಸೆ , ಹೊಲದ ಕೆಲಸಗಳು , ಪ್ರಯಾಣ , ಸಾಲವನ್ನು ಕೊಟ್ಟು-ತಂದು , ವ್ಯಾಪಾರ. #ವಾರಾನುಸಾರ_ಯೋಗ ಅಶ್ವಿನಿ ನಕ್ಷತ್ರವು ಭಾನುವಾರ , ಸೋಮವಾರ ಹಾಗೂ ಶನಿವಾರ ಬಂದರೆ #ಸಿದ್ಧಿಯೋಗ ಅಶ್ವಿನೀ ನಕ್ಷತ್ರವು ಮಂಗಳವಾರ ಬಂದರೆ #ಅಮೃತ_ಸಿದ್ಧಿ_ಯೋಗ*. ಅಶ್ವಿನೀ ನಕ್ಷತ್ರವು ಬುಧವಾರ ಬಂದರೆ #ಮೃತ್ಯು_ಯೋಗ*. ಅಶ್ವಿನೀ ನಕ್ಷತ್ರವು ಗುರುವಾರ ಹಾಗೂ ಶುಕ್ರವಾರ ಬಂದರೆ #ಅಮೃತಯೋಗ. ಅಶ್ವಿನೀ ನಕ್ಷತ್ರವು ಸಪ್ತಮಿಯ ದಿನ ಬಂದರೆ #ದಾನಯೋಗ. ಅಶ್ವಿನೀ ನಕ್ಷತ್ರವು ಅಮಾವಾಸ್ಯೆಯ ದಿನ ಬಂದರೆ #ಅಗ್ನಿಭಯ*. #ಭರಣೀ_ನಕ್ಷತ್ರ #ಭರಣೀ ನಕ್ಷತ್ರದ ಇತರ ಹೆಸರು... ಭರಣೀ , ಯಮೋ , ಯಾವ್ಯ , ಯಮಃ #ಭರಣೀ_ನಕ್ಷತ್ರದ ದೇವತೆ...ಯಮ ಅಧಿ ದೇವತೆ....ಅಶ್ವಿನಿ ಪ್ರತ್ಯಧಿ ದೇವತೆ....ಅಗ್ನಿ ನಕ್ಷತ್ರ ಸ್ವರೂಪ...ತ್ರಿಕೋಣದ ಆಕೃತಿಯ ಮೂರು ನಕ್ಷತ್ರಗಳು. ಇದು ಚಂದ್ರನ ನಕ್ಷತ್ರ. ಪುರುಷ . ಅಧಿಪತಿ - ಶುಕ್ರ. ಮೇಷ ರಾಶಿ. ರಾಶ್ಯಾಧಿಪತಿ ಕುಜ. ಉಗ್ರ ಗುಣ , ಮನುಷ್ಯ ಗಣ , ಆನೆ ಯೋನಿ , ಸಿಂಹ ವೈರಿ , ಚಂಡಾಲ ಜಾತಿ , ಕಟಿ ರಜ್ಜು , ಮಧ್ಯ ನಾಡಿ , ವೈಶ್ಯ ವರ್ಣ , ಹರಳು ವಜ್ರ , ದೆಶೆ- 20 ವರುಷಗಳು. ಅಕ್ಷರಗಳು - ಲಿ-ಲು-ಲೆ-ಲೊ ಭರಣಿಯು ಉಗ್ರ ನಕ್ಷತ್ರ. ಈ ನಕ್ಷತ್ರದವರು ಉಷ್ಣ ದೇಹಿಗಳು , ಅಲಂಕಾರದಲ್ಲಿ ಆಸಕ್ತರು , ಆಚಾರ ಕಡಿಮೆ , ಶ್ರಮಜೀವಿಗಳು , ಸತ್ಯವನ್ನು ಇಷ್ಟಪಡುವರು , ರಸಿಕರು , ಸುಖಾಸಕ್ತರು, ಅಭಿಲಾಷಿಗಳು. #ಭರಣೀ ನಕ್ಷತ್ರದ ಮೊದಲನೇ ಪಾದ ಸಿಂಹಾಂಶವಾಗಿದ್ದು ರವಿ ಅದಕ್ಕೆ ಅಧಿಪತಿ. ಜಾತಕರು ಶೂರರು ಸಾಹಸಿಗಳೂ ಆಗಿದ್ದು ವೈರಿಗಳನ್ನು ನಿಗ್ರಹಿಸುವರು. ಮಾನವಂತರು , ಸ್ವಾಭಿಮಾನಿಗಳು ಆಗಿರುತ್ತಾರೆ. #ಭರಣೀ ನಕ್ಷತ್ರದ ಎರಡನೇ ಪಾದವು ಕನ್ಯಾಂಶವಾಗಿದ್ದು ಬುಧ ಅದಕ್ಕೆ ಅಧಿಪತಿ. ಜಾತಕರು ಆಚಾರವಂತರು , ಅಹಿಂಸಾಪರರು , ಬರಹಗಾರರು , ರೋಗಿಗಳು ಆಗಿರುತ್ತಾರೆ. #ಭರಣೀ ನಕ್ಷತ್ರದ ಮೂರನೆಯ ಪಾದವು ತುಲಾಂಶವಾಗಿದ್ದು ಶುಕ್ರನು ಅಧಿಪತಿ. ಜಾತಕರು ವಿವೇಕಿಗಳು , ಕಲಾವಿದರು , ವೇದವನ್ನು ಅಭ್ಯಾಸ ಮಾಡುವವರು , ಜ್ಞಾನಿಗಳು , ಸತ್ಯವಂತರು ಆಗಿರುತ್ತಾರೆ. #ಭರಣೀ ನಕ್ಷತ್ರದ ನಾಲ್ಕನೇ ಪಾದಾಂಶವು ವೃಶ್ಚಿಕಾಂಶವಾಗಿದ್ದು , ಕುಜನು ಅಧಿಪತಿ. ಜಾತಕರು ಕೋಪಿಷ್ಠರು, ಹಿಂಸಾ ಪ್ರವೃತ್ತಿಯವರು , ನಿಷ್ಠುರವಾಗಿ ಮಾತನಾಡುವವರು ಆಗಿರುತ್ತಾರೆ. #ಭರಣೀ ನಕ್ಷತ್ರದಲ್ಲಿ ಮಾಡುಬಹುದಾದ ಕೆಲಸಗಳು... ಈ ನಕ್ಷತ್ರದಲ್ಲಿ ಒಳ್ಳೆಯ ಕಾರ್ಯಗಳು ನಿಷಿದ್ಧ. ಆದರೆ ಕೆರೆ - ಬಾವಿ, ಬೇಲಿ ಹಾಕಿಸುವುದು , ಕುಯಿಲು ಮಾಡುವುದು - ಮಾಡಬಹುದು. #ವಾರಾನುಸಾರ_ಫಲಗಳು ಭರಣೀ ನಕ್ಷತ್ರವು ಭಾನುವಾರ ಬಂದರೆ #ಪ್ರಭಲಾನಿಷ್ಟಯೋಗ. ಭರಣೀ ನಕ್ಷತ್ರವು ಸೋಮವಾರ, ಮಂಗಳವಾರ, ಬುಧವಾರ , ಶುಕ್ರವಾರ ಹಾಗೂ ಶನಿವಾರ ಬಂದರೆ #ಸಿದ್ಧಿಯೋಗ. *ಭರಣೀ* ನಕ್ಷತ್ರವು ಗುರುವಾರ ಬಂದರೆ #ಅಮೃತಯೋಗ. #ವಿಶೇಷ_ಸೂಚನೆ . ಯೋಗಗಳಲ್ಲಿ ಸಿದ್ಧಿ ಯೋಗ , ಅಮೃತ ಯೋಗ , ಅಮೃತ ಸಿದ್ಧಿ- ಈ ಯೋಗಗಳಲ್ಲಿ ಮಾತ್ರ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು. ಉಳಿದ ಯೋಗಗಳಲ್ಲಿ ಶುಭ ಕಾರ್ಯ ಸಲ್ಲದು ಎಂದು ಶಾಸ್ತ್ರ ಹೇಳುತ್ತದೆ. *ಇದು ಎಲ್ಲಾ ನಕ್ಷತ್ರಗಳಿಗೂ ಅನ್ವಯ*. #ಕೃತ್ತಿಕಾ_ನಕ್ಷತ್ರ #ಕೃತ್ತಿಕಾ_ನಕ್ಷತ್ರದ_ಇತರ #ಹೆಸರುಗಳು. ಬಹುಳಾ , ವಹ್ನಿ , ಪಾವಕ , ಉಜ್ವಲ, ನಲ. *ಕೃತ್ತಿಕಾ ನಕ್ಷತ್ರದ ದೇವತೆ*...ಅಗ್ನಿ *ಅಧಿದೇವತೆ* ...ಯಮ *ಪ್ರತ್ಯಧಿದೇವತೆ*...ಪ್ರಜಾಪತಿ #ನಕ್ಷತ್ರ_ಸ್ವರೂಪ...ಆರು ನಕ್ಷತ್ರಗಳ ಪುಂಜ,ಕೊಡಲಿ ಆಕಾರದಲ್ಲಿರುತ್ತದೆ. #ನಕ್ಷತ್ರದ_ವಿವರ. ಚಂದ್ರನ ನಕ್ಷತ್ರ. ನಕ್ಷತ್ರಾಧಿಪತಿ ರವಿ , ರಾಶ್ಯಾಧಿಪತಿ (೧-ಪಾದ)-ಕುಜ , ಮೇಷ ರಾಶಿ, ರಾಶ್ಯಾಧಿಪತಿ (೨,೩,೪-ಪಾದ)-ಶುಕ್ರ ವೃಷಭ ರಾಶಿ , ರಾಕ್ಷಸ-ಗಣ , ಯೋನಿ- ಮೇಕೆ , ವೈರಿ -ಕೋತಿ , ಪಕ್ಷಿ-ನವಿಲು , ನಾಡಿ ಅಂತ್ಯ , ವರ್ಣ-ವೈಶ್ಯ , ರಜ್ಜು-ಉದರ , ವೃಕ್ಷ-ಬನ್ನಿ, ಅಕ್ಷರಗಳು - ಆ-ಈ-ಊ-ಏ #ಸ್ವಭಾವ ....ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಉತ್ತಮರು , ಕಳೆಯುಳ್ಳವರು , ಕೀರ್ತಿ ಯಶಸ್ಸು ಗಳಿಸುವವರು , ಬುದ್ಧಿವಂತರು , ಹೆಚ್ಚಿನ ಮನೋಬಲವುಳ್ಳವರು , ಆರೋಗ್ಯದಲ್ಲಿ ಜಾಗ್ರತೆ , ಮಾರ್ಗದರ್ಶಿಗಳು ಆಗಿರುತ್ತಾರೆ. ಕೃತ್ತಿಕಾ ನಕ್ಷತ್ರದ ಮೊದಲನೆಯ ಪಾದ ಧನುರಾಂಶವಾಗಿದ್ದು , ಗುರು ಅದರ ಅಧಿಪತಿ. ಜಾತಕರು ಸದ್ಗುಣಿಗಳು , ಆಚಾರವಂತರು , ವಿಚಾರವಂತರು , ಸಹೃದಯಿಗಳು ಆಗಿರುತ್ತಾರೆ‌. ಕೃತ್ತಿಕಾ ನಕ್ಷತ್ರದ ಎರಡನೇ ಪಾದ ಮಕರಾಂಶವಾಗಿದ್ದು , ಶನಿ ಅದರ ಅಧಿಪತಿ. ಸ್ವಲ್ಪ ಖರ್ಚು ಮಾಡಲು ಹಿಂದು ಮುಂದು ನೋಡುವರು , ಸಿಡುಕು,ಕೋಪ, ಕೊಟ್ಟ ಕೆಲಸ ಚೆನ್ನಾಗಿ ಮಾಡುವರು. ಕೃತ್ತಿಕಾ ನಕ್ಷತ್ರದ ಮೂರನೇ ಪಾದ ಕುಂಭಾಂಶವಾಗಿದ್ದು , ಶನಿಯು ಅಧಿಪತಿ ಆಗುತ್ತಾನೆ.ಗುಟ್ಟಿನ ಕೆಲಸಗಳನ್ನು ಮಾಡುವವರು , ಅಷ್ಟಾಗಿ ಆಚಾರ-ವಿಚಾರಗಳಲ್ಲಿ ಗಮನವಿರುವುದಿಲ್ಲ . ಕೃತ್ತಿಕಾ ನಕ್ಷತ್ರದ ನಾಲ್ಕನೇ ಪಾದ ಮೀನಾಂಶವಾಗಿದ್ದು ಗುರು ಅದರ ಅಧಿಪತಿ. ಜಾತಕರು ಸದ್ಗುಣವಂತರು, ಶ್ರೇಷ್ಠ ವ್ಯಕ್ತಿತ್ವ , ಉದಾರಿಗಳು , ವಿದ್ವಾಂಸರು, ಕೀರ್ತಿಶಾಲಿಗಳು ಆಗಿರುತ್ತಾರೆ. #ಕೃತ್ತಿಕಾ_ನಕ್ಷತ್ರದಲ್ಲಿ ಮಾಡಬಹುದಾದ ಕೆಲಸಗಳು. ಅಗ್ನಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನೂ ಮಾಡಬಹುದು. ಯಾಗ , ಯಜ್ಞ , ...ಹಾಗೆಯೇ ಕುಯಿಲು , ಪಶು ವಿಕ್ರಯ ಮಾಡಬಹುದು. #ವಾರಾನುಸಾರ_ಫಲಗಳು ಕೃತ್ತಿಕಾ ನಕ್ಷತ್ರ ಭಾನುವಾರ , ಮಂಗಳವಾರ, ಶುಕ್ರವಾರ ಬಂದರೆ ಸಿದ್ಧಿಯೋಗ. ಕೃತ್ತಿಕಾ ನಕ್ಷತ್ರ ಸೋಮವಾರ , ಗುರುವಾರ ಬಂದರೆ ಮೃತಸಿದ್ಧಿಯೋಗ. ಕೃತ್ತಿಕಾ ನಕ್ಷತ್ರ ಬುಧವಾರ ಬಂದರೆ ಅಮೃತಸಿದ್ಧಿಯೋಗ. ಕೃತ್ತಿಕಾ ನಕ್ಷತ್ರ ಶನಿವಾರ ಬಂದರೆ ಅಮೃತಯೋಗ. ಆದರೆ ಆ ದಿನ ಪಂಚಮೀ ತಿಥಿ ಬಂದರೆ ಮೃತಯೋಗವಾಗುತ್ತದೆ. #ವಿಶೇಷ_ಸೂಚನೆ *ಯೋಗಗಳಲ್ಲಿ ಸಿದ್ಧಿ ಯೋಗ , ಅಮೃತ ಯೋಗ , ಅಮೃತ ಸಿದ್ಧಿ ಯೋಗ* ಗಳಲ್ಲಿ ಮಾತ್ರ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು. ಉಳಿದ ಯೋಗಗಳಲ್ಲಿ ಶುಭ ಕಾರ್ಯ ಸಲ್ಲದು ಎಂದು ಶಾಸ್ತ್ರ ಹೇಳುತ್ತದೆ. #ರೋಹಿಣೀ_ನಕ್ಷತ್ರ #ರೋಹಿಣೀ ನಕ್ಷತ್ರದ ಇತರ ಹೆಸರುಗಳು ರೋಹಿಣೀ , ಬ್ರಹ್ಮ , ಪ್ರಜಾಪತಿ , ಚತುರ್ಮುಖ , ವಿಧಾತಾ , ಆತ್ಮಭೂಃ , ಪದ್ಮಯೋನಿ. #ರೋಹಿಣೀ_ನಕ್ಷತ್ರದ ದೇವತೆ....ಪ್ರಜಾಪತಿ ಅಧಿದೇವತೆ...ಅಗ್ನಿ ಪ್ರತ್ಯಧಿದೇವತೆ... ಚಂದ್ರ #ನಕ್ಷತ್ರದ_ಸ್ವರೂಪ ...ಐದು ನಕ್ಷತ್ರಗಳ ಪುಂಜ ರಥಾಕಾರದಲ್ಲಿದೆ. #ನಕ್ಷತ್ರದ_ವಿವರಗಳು...! ಸೂರ್ಯನ ನಕ್ಷತ್ರ , ಪುರುಷ , ನಕ್ಷತ್ರಾಧಿಪತಿ ಚಂದ್ರ , ಮನುಷ್ಯ ಗಣ , ಸರ್ಪ ಯೋನಿ , ಮುಂಗುಸಿ ವೈರಿ , ರಜ್ಜು ಕಂಠ , ಅಂತ್ಯ ನಾಡಿ , ಶೂದ್ರ ವರ್ಣ , ಹರಳು ಮುತ್ತು , ದೆಶೆ- 10 ವರ್ಷಗಳು ಅಕ್ಷರಗಳು...ಓ-ವ-ವೀ-ವೂ ರೋಹಿಣಿಯು ಸ್ಥಿರ ನಕ್ಷತ್ರ. ಜಾತಕರು ಉತ್ತಮನು , ಬುದ್ಧಿವಂತರು , ಒಳ್ಳೆಯ ಮನಸ್ಸುಳ್ಳವರು , ಸುಂದರರು , ಬಂಧು ಮಿತ್ರರಿಗೆ ಪ್ರಿಯರಾದವರು , ಬಲಶಾಲಿಯೂ ಆಗಿರುತ್ತಾರೆ. ರೋಹಿಣೀ ನಕ್ಷತ್ರದ ಮೊದಲನೆಯ ಪಾದವು ಮೇಷಾಂಶವಾಗಿದ್ದು ಕುಜನು ಅಧಿಪತಿ. ಜಾತಕರು ಶೀಘ್ರಕೋಪಿಗಳು, ಸಾಹಸಿಗಳು , ಶೂರರು , ಆಲೋಚನೆ ಮಾಡುವುದರಲ್ಲಿ ವ್ಯತ್ಯಯವಾಗಿ ತಮಗೆ ತಾವೇ ನಷ್ಟ ಉಂಟುಮಾಡಿಕೊಳ್ಳುವರು. ರೋಹಿಣೀ ನಕ್ಷತ್ರದ ಎರಡನೆಯ ಪಾದ ವೃಷಭಾಂಶವಾಗಿದ್ದು ಶುಕ್ರನು ಅಧಿಪತಿ. ಜಾತಕರಲ್ಲಿ ಧಾರ್ಮಿಕ ಗುಣ, ಹಿತ ನಡವಳಿಕೆ , ದೈವಭಕ್ತರು , ಗುರು ಹಿರಿಯರಲ್ಲಿ ಭಕ್ತಿಯುಳ್ಳವರು ಆಗಿರುತ್ತಾರೆ. ರೋಹಿಣೀ ನಕ್ಷತ್ರದ ಮೂರನೆಯ ಪಾದವು ಮಿಥುನಾಂಶವಾಗಿದ್ದು ಬುಧ ಅಧಿಪತಿ. ಸಕಲ ವಿದ್ಯೆಗಳ ಅರಿವು , ವಿವೇಕಿಗಳು , ಸಮರ್ಥ ಭಾಷಣಕಾರರು , ಸುಖ ಶಾಂತಿಯನ್ನು ಅಪೇಕ್ಷಿಸುವವರು ಆಗಿರುತ್ತಾರೆ. ರೋಹಿಣೀ ನಕ್ಷತ್ರದ ನಾಲ್ಕನೆಯ ಪಾದ ಕಟಕಾಂಶವಾಗಿದ್ದು ಚಂದ್ರ ಅಧಿಪತಿ. ಜಾತಕರು ಪರೋಪಕಾರಿ , ಆಚಾರವಂತನು , ಯೋಚನಾಪರರು , ಸದಾ ಸುಖಿಗಳು ಆಗಿರುತ್ತಾರೆ. #ರೋಹಿಣೀ ನಕ್ಷತ್ರದಲ್ಲಿ ಮಾಡಬಹುದಾದ ಕಾರ್ಯಗಳು. ವಿವಾಹ , ಗರ್ಭದಾನ , ವಧೂಪ್ರವೇಶ , ಗೃಹಾರಂಭ , ಗೃಹಪ್ರವೇಶ , ವಿದ್ಯಾರಂಭ, ಸಂಗೀತ ನಾಟ್ಯಕಲಾ ಪ್ರಾರಂಭ....ಮುಂತಾದ ಶುಭ ಕಾರ್ಯಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು ರೋಹಿಣೀ ನಕ್ಷತ್ರವು ಭಾನುವಾರ , ಬುಧವಾರ ಬಂದರೆ ಸಿದ್ಧಿಯೋಗ. ರೋಹಿಣೀ ನಕ್ಷತ್ರ ಸೋಮವಾರ, ಮಂಗಳವಾರ ಬಂದರೆ ಅಮೃತಯೋಗ. ರೋಹಿಣೀ ನಕ್ಷತ್ರ ಗುರುವಾರ ಬಂದರೆ ಉತ್ಪಾತಯೋಗ. ರೋಹಿಣೀ ನಕ್ಷತ್ರ ಶುಕ್ರವಾರ ಬಂದರೆ ಮೃತಯೋಗ. ರೋಹಿಣೀ ನಕ್ಷತ್ರ ಶನಿವಾರ ಬಂದರೆ ಅಮೃತಸಿದ್ಧಿಯೋಗ. ರೋಹಿಣೀ ನಕ್ಷತ್ರ ಬುಧವಾರ ಷಷ್ಠಿಯಾದರೆ ಸಾಲಯೋಗ. ರೋಹಿಣೀ ನಕ್ಷತ್ರ ಬುಧವಾರ ಅಷ್ಟಮೀ ಬಂದರೆ ಮಹಾಸಿದ್ಧಿಯೋಗ. #ವಿಶೇಷ_ಸೂಚನೆ..*ಯೋಗಗಳಲ್ಲಿ ಸಿದ್ಧಿ ಯೋಗ , ಅಮೃತ ಯೋಗ , ಅಮೃತ ಸಿದ್ಧಿ ಯೋಗ* ಗಳಲ್ಲಿ ಮಾತ್ರ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು. ಉಳಿದ ಯೋಗಗಳಲ್ಲಿ ಶುಭ ಕಾರ್ಯ ಸಲ್ಲದು ಎಂದು ಶಾಸ್ತ್ರ ಹೇಳುತ್ತದೆ. *ಇದು ಎಲ್ಲಾ ನಕ್ಷತ್ರಗಳಿಗೂ ಅನ್ವಯ*. #ಮೃಗಶಿರಾ_ನಕ್ಷತ್ರ...!! #ಮೃಗಶಿರಾ ನಕ್ಷತ್ರದ ಇತರ ಹೆಸರುಗಳು..! ಮೃಗಶೀರ್ಷಾ , ಮೃಗಶ್ಚಂದ್ರ , ಸೌಮ್ಯ , ನಿಶಾನಾಥ , ಹಿಮ , ಶಶಿ , ನಿಶಾಕರ. #ಮೃಗಶಿರಾ ನಕ್ಷತ್ರದ ದೇವತೆಗಳು. ನಕ್ಷತ್ರ ದೇವತೆ...ಚಂದ್ರ ಅಧಿದೇವತೆ...ಪ್ರಜಾಪತಿ ಪ್ರತ್ಯಧಿದೇವತೆ... ರುದ್ರ #ಮೃಗಶಿರಾ ನಕ್ಷತ್ರದ ಸ್ವರೂಪ... ಮೂರು ನಕ್ಷತ್ರಗಳು ಕೂಡಿದ್ದು ಮನುಷ್ಯನ ಶಿರಸ್ಸಿನ ರೂಪದಲ್ಲಿದೆ. #ವಿವರಗಳು ... ಸೂರ್ಯನ ನಕ್ಷತ್ರ , ಪುರುಷ ನಕ್ಷತ್ರ , ಅಧಿಪತಿ - ಕುಜ , ಗಣ- ದೇವ , ಯೋನಿ-ಸರ್ಪ , ವೈರಿ- ಮುಂಗುಸಿ , ರಜ್ಜು - ಕಂಠ ವರ್ಣ- ಶೂದ್ರ , ನಾಡಿ- ಮಧ್ಯ ,ಹರಳು-ಹವಳ , ಅಕ್ಷರಗಳು- ವೆ-ವೊ-ಕಾ-ಕಿ. #ಸ್ವಭಾವಗಳು ...ಜಾತಕರು ಮೇಲ್ನೋಟಕ್ಕೆ ಸೌಮ್ಯರು , ಗುರು ಹಿರಿಯರಲ್ಲಿ ಭಕ್ತಿ , ತೇಜಸ್ವಿಗಳು , ಉತ್ಸಾಹಿಗಳು , ಗಣ್ಯವ್ಯಕ್ತಿಗಳು , ಹಲವು ವಿದ್ಯೆಗಳ ಪಾಂಡಿತ್ಯ , ವಾಕ್ಚಾತುರ್ಯ , ಸ್ವಪ್ರತಿಷ್ಠೆಯುಳ್ಳವರು. #ಮೃಗಶಿರಾ ನಕ್ಷತ್ರದ ಪ್ರಥಮ ಪಾದವು ಸಿಂಹಾಂಶವಾಗಿದ್ದು ರವಿ ಅದರ ಅಧಿಪತಿ. ಜಾತಕರು ಶೂರರು , ಧೀರರು , ಸಾಹಸಿಗಳು , ರಾಜಸಮಾನರು , ಸ್ವಾಭಿಮಾನಿಗಳು ಆಗಿರುತ್ತಾರೆ. #ಮೃಗಶಿರಾ ನಕ್ಷತ್ರದ ಎರಡನೆಯ ಪಾದ ಕನ್ಯಾಂಶವಾಗಿದ್ದು ಬುಧ ಅದರ ಅಧಿಪತಿ. ಜಾತಕರು ಬುದ್ಧಿವಂತರು , ಮುಂದಾಲೋಚನೆಯಿದ್ದು ನೇರ ನುಡಿಯವರು. ಹೇಳಿದಂತೆ ಮಾಡುವವರು , ಶಾಂತಿ ಪ್ರಿಯರು ಆಗಿರುತ್ತಾರೆ. #ಮೃಗಶಿರಾ ನಕ್ಷತ್ರದ ಮೂರನೇ ಪಾದವು ತುಲಾಂಶವಾಗಿದ್ದು , ಶುಕ್ರ ಅದಕ್ಕೆ ಅಧಿಪತಿ. ಜಾತಕರು ವಿವೇಕಿಯು , ನ್ಯಾಯವಂತರು , ಸತ್ಯವಂತರು ,ಶಾಸ್ತ್ರ ಗಳನ್ನು ತಿಳಿದವರು ಆಗಿರುತ್ತಾರೆ. #ಮೃಗಶಿರಾ ನಕ್ಷತ್ರದ ನಾಲ್ಕನೆಯ ಪಾದ ವೃಶ್ಚಿಕಾಂಶವಾಗಿದ್ದು ಕುಜನು ಅಧಿಪತಿ. ಜಾತಕರು ಕೋಪೋದ್ರಿಕ್ತರು , ಕ್ರೂರಿಗಳು , ಕಟು ನುಡಿಗಳಾಡುವವರು , ಹೆಚ್ಚು ವೈರಿಗಳುಳ್ಳವರು ಆಗಿರುತ್ತಾರೆ. #ಮೃಗಶಿರಾ_ನಕ್ಷತ್ರದಲ್ಲಿ #ಮಾಡಬಹುದಾದ_ಕಾರ್ಯಗಳು... ಸೀಮಂತ , ನಾಮಕರಣ , ಉಪನಯನ , ವಿವಾಹ , ಚೌಲ , ವಿದ್ಯಾರಂಭ , ಹೊಸ ಉದ್ಯೋಗ , ಹೋಮ-ಹವನಗಳು , ನೂತನ ಅಂಗಡಿ ಪ್ರಾರಂಭ , ಶಸ್ತ್ರ ಚಿಕಿತ್ಸೆ, ಪ್ರಯಾಣ , ..ಎಲ್ಲಾ ತರಹದ ಶುಭ ಕಾರ್ಯಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು ಮೃಗಶಿರಾ ನಕ್ಷತ್ರವು ಭಾನುವಾರ , ಮಂಗಳವಾರ , ಬುಧವಾರ , ಶುಕ್ರವಾರ , ಶನಿವಾರ ಬಂದರೆ ಸಿದ್ಧಿ ಯೋಗ. ಮೃಗಶಿರಾ ನಕ್ಷತ್ರ ಸೋಮವಾರ ಬಂದರೆ ಅಮೃತಯೋಗ. ಮೃಗಶಿರಾ ನಕ್ಷತ್ರ ಗುರುವಾರ ಬಂದರೆ ಮೃತಯೋಗವಾಗುತ್ತದೆ. ಸಿದ್ಧಿ , ಅಮೃತ , ಅಮೃತಸಿದ್ಧಿ ಯೋಗ ಗಳನ್ನು ಬಳಸಿಕೊಂಡು ಕಾರ್ಯಮಾಡುವುದು ಒಳ್ಳೆಯದು. ಉಳಿದ ಯೋಗಗಳು ಒಳ್ಳೆಯದಲ್ಲ. #ಆರಿದ್ರಾ_ನಕ್ಷತ್ರ #ಈ_ನಕ್ಷತ್ರದ_ಇತರ_ಹೆಸರುಗಳು... ಆರಿದ್ರಾ , ಸ್ಥಾಣುಃ , ರೌದ್ರಾ , ಪುರೋಜಿತ್. #ಈ_ನಕ್ಷತ್ರದ_ದೇವತೆ...ರುದ್ರ #ಅಧಿ_ದೇವತೆ.......ಚಂದ್ರ #ಪ್ರತ್ಯಧಿ_ದೇವತೆ ..ಅದಿತಿ #ಈ_ನಕ್ಷತ್ರದ_ರೂಪ...ಹವಳಾಕಾರದ ಒಂದು ನಕ್ಷತ್ರ. ಇದು ಚಂದ್ರನಿಗೆ ಸೇರಿದ ನಕ್ಷತ್ರವಾಗಿದ್ದು , ಇದಕ್ಕೆ ಅಧಿಪತಿ ರಾಹು ಆಗಿದ್ದಾನೆ. ದಶೆ ೧೮ ವರುಷಗಳು , ಗಣ-ಮನುಷ್ಯ , ಯೋನಿ-ಶ್ವಾನ , ವೈರಿ-ಜಿಂಕೆ , ರಜ್ಜು-ಕಂಠ , ನಾಡಿ-ಆದಿ , ವರ್ಣ-ವೈಶ್ಯ , ಹರಳು-ಗೋಮೇಧಿಕ ಅಕ್ಷರಗಳು...ಕು-ಘ-ಞ-ಚ #ಈ_ನಕ್ಷತ್ರವಿರುವ_ದಿನ .. ಲಿಂಗ ಪ್ರತಿಷ್ಠಾಪನೆ , ಮಂತ್ರ-ತಂತ್ರ ಸಿದ್ಧಿಗೆ , ಭೂತ-ಪಿಶಾಚಿ ಬಿಡಿಸುವುದಕ್ಕೆ , ಶತ್ರು ನಾಶದ ಕಾರ್ಯ , ಹೋಮ-ಹವನ ...ಮಾಡಬಹುದು. #ಈ_ನಕ್ಷತ್ರದಲ್ಲಿ_ಜನಿಸಿರುವವರು.. ಚಪಲ ಚಿತ್ತರು,ದಿಟ್ಟತನದವರು , ಹಠವಾದಿಗಳು , ಧೈರ್ಯ-ಸ್ಥೈರ್ಯವುಳ್ಳವರು , ನ್ಯಾಯದ ತೀರ್ಮಾನ ತೆಗೆದುಕೊಳ್ಳುವವರು , ವ್ಯವಹಾರ ನಿಪುಣರು ಆಗಿರುವರು. ಆರಿದ್ರಾ ನಕ್ಷತ್ರದ ಮೊದಲನೆಯ ಪಾದ ಧನುರಾಂಶವಾಗಿದ್ದು ಗುರುವು ಅದಕ್ಕೆ ಅಧಿಪತಿಯು. ಜಾತಕರು ಸದಾಚಾರರು , ಸದ್ಗುಣರು , ಧನವಂತರು , ಆಚಾರ ವಿಚಾರವಂತರು ಆಗುತ್ತಾರೆ. ಆರಿದ್ರಾ ನಕ್ಷತ್ರದ ಎರಡನೆಯ ಪಾದ , ಮಕರಾಂಶವಾಗಿದ್ದು ಶನಿಯು ಅದಕ್ಕೆ ಅಧಿಪತಿಯು. ಮಿತ ವ್ಯಯಿಗಳು , ಶೀಘ್ರಕೋಪಿಗಳು , ಕಷ್ಟ ಪಟ್ಟು ಕೆಲಸ ಮಾಡುವವರು ಆಗಿರುತ್ತಾರೆ. ಆರಿದ್ರಾ ನಕ್ಷತ್ರದ ಮೂರನೆಯ ಪಾದ , ಕುಂಭಾಂಶವಾಗಿದ್ದು , ಶನಿಯು ಅದಕ್ಕೆ ಅಧಿಪತಿಯು. ಜಾತಕರು ನಾಸ್ತಿಕರು , ಉಗ್ರಸ್ವಭಾವದವರು , ವ್ಯಸನಿಗಳು , ಸಮಯಕ್ಕೆ ಸರಿಯಾಗಿ ವಿವೇಕವನ್ನು ಉಪಯೋಗಿಸದವರು , ಗುಟ್ಟು ವ್ಯವಹಾರದವರು ಆಗಿರುತ್ತಾರೆ. ಆರಿದ್ರಾ ನಕ್ಷತ್ರದ ನಾಲ್ಕನೆಯ ಪಾದ , ಮೀನಾಂಶವಾಗಿದ್ದು , ಗುರುವು ಅದಕ್ಕೆ ಅಧಿಪತಿಯು. ಜಾತಕರು ಉದಾರಿಯು , ವಿಶಾಲ ಹೃದಯದವರು , ಸಕಲಗುಣಸಂಪನ್ನದವರು , ಉನ್ನತ ವ್ಯಕ್ತಿತ್ವ ಉಳ್ಳವರು ಆಗಿರುತ್ತಾರೆ. #ವಾರಾನುಸಾರ_ಫಲಗಳು .. ಆರಿದ್ರಾ ನಕ್ಷತ್ರ ಭಾನುವಾರ, ಸೋಮವಾರ, ಬುಧವಾರ , ಶುಕ್ರವಾರ, ಶನಿವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಈ ನಕ್ಷತ್ರವು ಮಂಗಳವಾರ , ಗುರುವಾರ ಬಂದರೆ ಮೃತಯೋಗವಾಗುತ್ತದೆ. #ಪುನರ್ವಸು _ನಕ್ಷತ್ರ... #ಈ_ನಕ್ಷತ್ರದ_ಇತರ_ಹೆಸರುಗಳು... ಅದಿತಿ , ಆದಿತ್ಯಾ , ದೇವಮಾತಾ. #ಈ_ನಕ್ಷತ್ರದ_ದೇವತೆ...ಅದಿತಿ #ಅಧಿದೇವತೆ........ರುದ್ರ #ಪ್ರತ್ಯಧಿದೇವತೆ..ಬೃಹಸ್ಪತಿ #ಈ_ನಕ್ಷತ್ರದ_ಸ್ವರೂಪ...ಐದು ನಕ್ಷತ್ರಗಳಿಂದ ಚಕ್ರಾಕಾರದಲ್ಲಿ ಆಗಿದೆ. ಪುನರ್ವಸು ನಕ್ಷತ್ರವು ಚಂದ್ರನ ನಕ್ಷತ್ರವಾಗಿದ್ದು, ಸ್ತ್ರೀ ನಕ್ಷತ್ರವೆನಿಸಿದೆ. ಈ ನಕ್ಷತ್ರಕ್ಕೆ ಗುರು ಅಧಿಪತಿಯಾಗಿದ್ದಾನೆ. ದೆಶೆ ..16 ವರ್ಷ , ಗಣ - ದೇವ , ಯೋನಿ-ಬೆಕ್ಕು, ವೈರಿ - ಇಲಿ , ರಜ್ಜು - ಉದರ , ನಾಡಿ - ಆದಿ , ವರ್ಣ - ವೈಶ್ಯ , ಹರಳು - ಪುಷ್ಪರಾಗ , ಅಕ್ಷರಗಳು...ಕೆ-ಕೊ-ಹ-ಹಿ ಈ ನಕ್ಷತ್ರದಲ್ಲಿ ಜನಿಸಿದವರು ಔದಾರ್ಯ ಗುಣವುಳ್ಳವರು , ಅಲ್ಪ ತೃಪ್ತರು , ಮಧುರ ನುಡಿಗಳಾಡುವವರು , ಕಷ್ಟಗಳನ್ನು ಎದುರಿಸತಕ್ಕವರು , ಮನೋಸ್ಥೈರ್ಯವುಳ್ಳವರು , ಆದರ್ಶ ವ್ಯಕ್ತಿಗಳು , ಪಂಡಿತರು ಆಗಿರುತ್ತಾರೆ. ಪುನರ್ವಸು ನಕ್ಷತ್ರದ ಮೊದಲನೇ ಪಾದ , ಮೇಷಾಂಶವಾಗಿದ್ದು , #ಕುಜನು ಅಧಿಪತಿಯಾಗುತ್ತಾನೆ. ಜಾತಕರು ಶೂರರು , ಸಾಹಸಿಗಳು , ಶೀಘ್ರ ಕೋಪಿಗಳು , ರೀತಿ-ನೀತಿಗಳನ್ನು ಜಾರಿಗೆ ತಂದುಕೊಂಡು ಕಷ್ಟಕ್ಕೆ ಒಳಗಾಗುತ್ತಾರೆ. ಪುನರ್ವಸು ನಕ್ಷತ್ರದ ಎರಡನೆಯ ಪಾದ , ವೃಷಭಾಂಶವಾಗಿದ್ದು , #ಶುಕ್ರನು ಅಧಿಪತಿಯಾಗುತ್ತಾನೆ. ಜಾತಕರು ಧಾರ್ಮಿಕರು, ಗುಣಶೀಲರು , ಮನೋನಿಗ್ರಹಿಗಳು , ದೈವಭಕ್ತರು , ಶ್ರದ್ಧಾಭಕ್ತಿಯುಳ್ಳವರು ಆಗಿರುತ್ತಾರೆ. ಪುನರ್ವಸು ನಕ್ಷತ್ರದ ಮೂರನೆಯ ಪಾದ , ಮಿಥುನಾಂಶವಾಗಿದ್ದು , #ಬುಧ ಅಧಿಪತಿಯಾಗುತ್ತಾನೆ. ಜಾತಕರು ಧೈರ್ಯಶಾಲಿಗಳು , ವಿದ್ಯಾಪ್ರವೀಣರು , ವಿವೇಕಿಗಳು , ಸರ್ವಸಮರ್ಥರು , ಉತ್ತಮವಾಗ್ಮಿಗಳು , ಶಾಂತಿಪ್ರಿಯರು ಆಗಿರುತ್ತಾರೆ. ಪುನರ್ವಸು ನಕ್ಷತ್ರದ ನಾಲ್ಕನೆಯ ಪಾದ , ಕಟಕಾಂಶವಾಗಿದ್ದು #ಚಂದ್ರ ಅಧಿಪತಿಯಾಗುತ್ತಾನೆ. ಜಾತಕರು ಪರೋಪಕಾರಿಯು , ಬುದ್ಧಿವಂತರು , ಊರುಗಳನ್ನು ಸುತ್ತುವವನು , ಯೋಚನಾಪರನು , ಸುಖಾಭಿಲಾಷಿಯು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು... ಪುಂಸವನ , ಉಪನಯನ, ಸೀಮಂತ ,ನಾಮಕರಣ , ತೊಟ್ಟಿಲಿಗೆ ಹಾಕುವುದು , ಅನ್ನಪ್ರಾಶನ , ವಿದ್ಯಾರಂಭ , ನೂತನವಸ್ತ್ರ ಧಾರಣೆ , ಅಂಗಡಿ ಆರಂಭ , ಔಷಧಿ ಸೇವನೆ , ನೇಗಿಲು ಉಳುವುದು , ಪ್ರಯಾಣ , ಸಾಲ ತರುವುದು - ಕೊಡುವುದು ಮಾಡಬಹುದು. #ವಾರಾನುಸಾರ_ಯೋಗ_ಫಲಗಳು.. ಪುನರ್ವಸು ನಕ್ಷತ್ರವು ಭಾನುವಾರ , ಮಂಗಳವಾರ , ಬುಧವಾರ , ಶುಕ್ರವಾರ , ಶನಿವಾರ ಬಂದರೆ *#ಸಿದ್ಧಿಯೋಗ ವಾಗುತ್ತದೆ. ಈ ನಕ್ಷತ್ರವು ಸೋಮವಾರ , ಗುರುವಾರ ಬಂದರೆ *#ಅಮೃತಯೋಗ ವಾಗುತ್ತದೆ. #ಪುಷ್ಯಮೀ_ನಕ್ಷತ್ರ #ಪುಷ್ಯಮೀ_ನಕ್ಷತ್ರದ_ಇತರ #ಹೆಸರುಗಳು... ಪುರೋಹಿತ , ವಾಗೀಶ , ಇಜ್ಯಾ , ಜೀವೋ , ಅಮರೇ , ಪುಷ್ಯಾ. #ಈ_ನಕ್ಷತ್ರದ_ದೇವತೆ..ಬೃಹಸ್ಪತಿ #ಅಧಿದೇವತೆ........... ಅದಿತಿ #ಪ್ರತ್ಯಧಿ_ದೇವತೆ......ಸರ್ಪ #ನಕ್ಷತ್ರದ_ಸ್ವರೂಪ...ಮೂರು ನಕ್ಷತ್ರಗಳಿಂದ ಕೂಡಿದ್ದು ಹಾವರಾಣೀ ಆಕಾರದಲ್ಲಿದೆ. ಈ ನಕ್ಷತ್ರವು ಚಂದ್ರನಿಗೆ ಸೇರಿದ್ದು , ಸ್ತ್ರೀ ನಕ್ಷತ್ರವಾಗಿ , ಶನಿಯು ಇದಕ್ಕೆ ಅಧಿಕಾರಿ. ದೆಶೆಯು 19 ವರುಷಗಳದ್ದಾಗಿದೆ. ಗಣ- ದೇವ, ಯೋನಿ-ಮೇಕೆ , ವೈರಿ-ಕೋತಿ , ರಜ್ಜು - ಕಟಿ ನಾಡಿ - ಮಧ್ಯ , ವರ್ಣ - ಬ್ರಾಹ್ಮಣ , ಹರಳು- ನೀಲ. ಅಕ್ಷರಗಳು...ಹು-ಹೆ-ಹೊ-ಡ ಈ ನಕ್ಷತ್ರದಲ್ಲಿ ಜನಿಸಿದವರು ಶಾಂತ ಸ್ವರೂಪರು ವಿಶಾಲ ಹೃದಯದವರು , ಎಲ್ಲರೊಂದಿಗೆ ಬೆರೆಯುವವರು , ಸುಗುಣವಂತರು, ವಿನಯವಂತರು , ಸತ್ಯಶೀಲರು , ವಿದ್ವಾಂಸರು, ಮಾರ್ಗದರ್ಶಿಗಳು , ವಿದ್ಯಾಸಕ್ತಿಯುಳ್ಳವರು ಆಗಿರುತ್ತಾರೆ. ಪುಷ್ಯಮೀ #ಮೊದಲನೆಯ_ಪಾದ ಸಿಂಹಾಂಶವಾಗಿದ್ದು ರವಿ ಅದರ ಅಧಿಪತಿ. ಜಾತಕರು ಸಹಜವಾಗಿ ಶೂರರು , ರಾಜಮರ್ಯಾದೆಗೆ ಯೋಗ್ಯರು , ಸ್ವಾಭಿಮಾನಿಗಳು ಆಗಿರುತ್ತಾರೆ. ಪುಷ್ಯಮೀ #ಎರಡನೆಯ_ಪಾದ ಕನ್ಯಾಂಶವಾಗಿದ್ದು , ಬುಧ ಅಧಿಪತಿಯಾಗಿರುವುದರಿಂದ ಜಾತಕರು ವ್ಯಾಪಾರಸ್ಥರು , ಅಹಿಂಸಾಪರರು , ಅಲ್ಪತೃಪ್ತರು , ರೋಗಿಗಳು ಆಗಿರುತ್ತಾರೆ. ಪುಷ್ಯಮೀ #ಮೂರನೆಯ_ಪಾದ ತುಲಾಂಶವಾಗಿದ್ದು ಶುಕ್ರನ ಇದಕ್ಕೆ ಅಧಿಪತಿ. ಜಾತಕರು ವಿವೇಕಿಯು , ಕಲಾವಿದರು , ಸತ್ಯವಂತರು , ಶಾಸ್ತ್ರ ಹಾಗೂ ಇತಿಹಾಸವನ್ನು ಬಲ್ಲವರು , ಪ್ರೀತಿಗೆ ಪಾತ್ರರು ಆಗಿರುತ್ತಾರೆ. ಪುಷ್ಯಮೀ #ನಾಲ್ಕನೆಯ_ಪಾದ ವೃಶ್ಚಿಕಾಂಶವಾಗಿದ್ದು ಕುಜನು ಅದಕ್ಕೆ ಅಧಿಪತಿ. ಜಾತಕರು ಕಟುವಾಗಿ ಮಾತನಾಡುವವರು, ಕೋಪಿಷ್ಟರು , ವೈರಿಗಳನ್ನು ಎದುರಿಸುವವರು, ಅಧಿಕಾರಕ್ಕಾಗಿ ಹಂಬಲಿಸುವವರು ಆಗಿರುತ್ತಾರೆ. #ಪುಷ್ಯಮೀ_ನಕ್ಷತ್ರವಿದ್ದಾಗ_ #ಮಾಡಬಹುದಾದ_ಕಾರ್ಯಗಳು ಸೀಮಂತ , ನಾಮಕರಣ , ಅನ್ನಪ್ರಾಶನ , ವಿದ್ಯಾರಂಭ , ನೂತನ ವಾಹನ ತೆಗೆದುಕೊಳ್ಳುವುದು , ಸಂಗೀತ , ನಾಟ್ಯ ಕಲೆಗಳ ಪ್ರಾರಂಭ , ಪ್ರಯಾಣ , ಗದ್ದೆ ಕೆಲಸ , ಶಸ್ತ್ರ ಚಿಕಿತ್ಸೆ , ಅಂಗಡಿ ಆರಂಭ...ಮುಂತಾದ ಕಾರ್ಯಗಳಿಗೆ ಶುಭವು. ( *ವಿವಾಹಕ್ಕೆ ಈ ನಕ್ಷತ್ರವನ್ನು ಕೆಲವರು ನಿಷೇಧಿಸುತ್ತಾರೆ* ) #ವಾರಾನುಸಾರ_ಯೋಗಫಲಗಳು .. ಪುಷ್ಯಮೀ ನಕ್ಷತ್ರ ಭಾನುವಾರ , ಸೋಮವಾರ , ಮಂಗಳವಾರ , ಬುಧವಾರ ,ಶನಿವಾರ ದಂದು ಬಂದರೆ ಸಿದ್ದಿಯೋಗವಾಗುತ್ತದೆ. ಪುಷ್ಯಮೀ ನಕ್ಷತ್ರ ಗುರುವಾರ ಬಂದರೆ ಅಮೃತಸಿದ್ದಿಯೋಗವಾಗುತ್ತದೆ. ಪುಷ್ಯಮೀ ನಕ್ಷತ್ರ ಶುಕ್ರವಾರ ಬಂದರೆ ಉತ್ಪಾತಯೋಗವಾಗುತ್ತದೆ. #ಪುಷ್ಯಮೀ_ನಕ್ಷತ್ರದ_ವೈಶಿಷ್ಟ್ಯ ... ಗುರುವಾರ , ಪುಷ್ಯಮೀ ನಕ್ಷತ್ರ ಬಂದಾಗ ಅಮೃತ ಸಿದ್ಧಿ ಯೋಗ ಬರುವುದಲ್ಲದೆ ಗುರು-ಪುಷ್ಯ ಯೋಗ ಉಂಟಾಗುವುದು. ಅಂದು ಯಾವುದೇ ವಿದ್ಯೆಯನ್ನು ಕಲಿತಾಗ ಅದು ಕರಗತವಾಗುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬಂಗಾರದಿಂದ ತಯಾರಿಸಿದ ಸ್ವರ್ಣಬಿಂಧು ಪ್ರಾಶನವನ್ನು ಪ್ರತಿ ತಿಂಗಳು ಪುಷ್ಯಮೀ ನಕ್ಷತ್ರದ ದಿನ ಮಕ್ಕಳಿಗೆ ಕೊಡುತ್ತಾರೆ. ಇದರಿಂದ ಮಕ್ಕಳಿಗೆ ಒಳ್ಳೆಯ ಜ್ಞಾಪಕ ಶಕ್ತಿ , ಜಾಣ್ಮೆ , ವ್ಯಾಧಿನಿವಾರಣಾ ಶಕ್ತಿಯನ್ನು ವೃದ್ಧಿಸುತ್ತದೆ. #ಆಶ್ಲೇಷಾ_ನಕ್ಷತ್ರ .. #ಆಶ್ಲೇಷಾ_ನಕ್ಷತ್ರದ_ಇತರ #ಹೆಸರುಗಳು ... ಆಶ್ಲೇಷಾ , ಉರಗ , ಸರ್ಪ , ಭುಜಂಗಾ , ವ್ಯಾಳಾ #ಈ_ನಕ್ಷತ್ರದ_ದೇವತೆ ...ಸರ್ಪ #ಅಧಿದೇವತೆ ....... ಬೃಹಸ್ಪತಿ #ಪ್ರತ್ಯಧಿದೇವತೆ .....ಪಿತೃದೇವತೆ #ಈ_ನಕ್ಷತ್ರದ_ಸ್ವರೂಪ ..! ಆರು ನಕ್ಷತ್ರಗಳ ಸರ್ಪಾಕಾರದ ರೂಪ. #ನಕ್ಷತ್ರದ_ವಿವರಗಳು ...! ಇದು ಚಂದ್ರನಿಗೆ ಸೇರಿದ ನಕ್ಷತ್ರ. ಸ್ತ್ರೀ ನಕ್ಷತ್ರ. ನಕ್ಷತ್ರಾಧಿಪತಿ...ಬುಧ , ದೆಶೆ...17 ವರುಷಗಳು ಗಣ- ರಾಕ್ಷಸ , ಯೋನಿ - ಬೆಕ್ಕು , ವೈರಿ- ಇಲಿ ರಜ್ಜು- ಪಾದ , ನಾಡಿ - ಅಂತ್ಯ , ವರ್ಣ - ಬ್ರಾಹ್ಮಣ , ಹರಳು - ಪಚ್ಚೆ , ಅಕ್ಷರಗಳು-ಡಿ-ಡು-ಡೆ-ಡೊ ಈ ನಕ್ಷತ್ರದಲ್ಲಿ ಜನಿಸಿದವರು ಪರಾಕ್ರಮಿಗಳು , ಹಿಡಿದ ಕಾರ್ಯ ಸಾಧಿಸುವವರು , ಯಾರ ಮಾತೂ ಕೇಳದವರು , ಗಟ್ಟಿಗರು , ತಾಳ್ಮೆಯುಳ್ಳವರು , ಮಿತವ್ಯಯಿಗಳು , ಆದರ್ಶ ವ್ಯಕ್ತಿಗಳು , ಭಕ್ತಿ ಗೌರವವುಳ್ಳವರು ಆಗಿರುತ್ತಾರೆ. ಈ ನಕ್ಷತ್ರದ #ಮೊದಲನೆಯ_ಪಾದವು #ಧನುರಾಂಶವಾಗಿದ್ದು , ಗುರು ಅಧಿಪತಿಯಾಗುವನು . ಜಾತಕರು ಧನವಂತರು , ಸದ್ಗುಣವಂತರು , ಸಹೃದಯರು, ಕಾರ್ಯನಿಷ್ಠರು , ಆಚಾರವಂತರು ಆಗಿರುತ್ತಾರೆ. ಈ ನಕ್ಷತ್ರದ #ಎರಡನೆಯ_ಪಾದವು* #ಮಕರಾಂಶವಾಗಿದ್ದು , ಶನಿಯು ಅಧಿಪತಿಯಾಗುತ್ತಾನೆ. ಜಾತಕರು ಶೀಘ್ರಕೋಪಿಗಳು , ಹೆಚ್ಚು ಖರ್ಚುಮಾಡದವರು , ಕಣ್ಣಿನ ಸಮಸ್ಯೆಯುಳ್ಳವರು , ತಮ್ಮ ಕೆಲಸಕ್ಕೆ ಹೆಚ್ಚು ಮಹತ್ವ ಕೊಡುವವರು ಆಗಿರುತ್ತಾರೆ. ಈ ನಕ್ಷತ್ರದ #ಮೂರನೆಯ_ಪಾದವು #ಕುಂಭಾಂಶವಾಗಿದ್ದು, ಶನಿಯು ಅದಕ್ಕೆ ಅಧಿಪತಿಯು. ಜಾತಕರು ದೇವರಲ್ಲಿ ಅಷ್ಟಾಗಿ ನಂಬಿಕೆಯಿಲ್ಲದವರು , ಸತ್ವರಹಿತ ಮಾತುಗಳು, ವಿಭಿನ್ನ ಚಟಗಳುಳ್ಳವರು , ವಿವೇಕ ಕಡಿಮೆಯುಳ್ಳವರು ಆಗಿರುತ್ತಾರೆ. ಈ ನಕ್ಷತ್ರದ #ನಾಲ್ಕನೆಯ_ಪಾದವು #ಮೀನಾಂಶವಾಗಿದ್ದು , ಗುರು ಅದಕ್ಕೆ ಅಧಿಪತಿಯು. ಜಾತಕರು ಸದ್ಗುಣಿಯೂ , ಶ್ರೇಷ್ಠ ವ್ಯಕ್ತಿತ್ವ , ಗುಣ ಸಂಪನ್ನರು , ವಿಶಾಲಹೃದಯದವರು , ಕೀರ್ತಿಶಾಲಿಗಳು ಆಗಿರುತ್ತಾರೆ. #ಆಶ್ಲೇಷಾ_ನಕ್ಷತ್ರದಲ್ಲಿ #ಮಾಡಬಹುದಾದ_ಕಾರ್ಯಗಳು ... ಎಲ್ಲಾ ವಸ್ತುಗಳ ಕ್ರಯ-ವಿಕ್ರಯ , ಮಂತ್ರಸಿದ್ಧಿ, ಶಸ್ತ್ರಾಸ್ತ್ರ ಸಂಗ್ರಣೆ , ಗರಡೀ ವಿದ್ಯೆಗೆ ಒಳ್ಳೆಯದು. #ವಾರಾನುಸಾರ_ಯೋಗಫಲಗಳು ... ಈ ನಕ್ಷತ್ರವು ಭಾನುವಾರ , ಸೋಮವಾರ , ಮಂಗಳವಾರ , ಬುಧವಾರ , ಗುರುವಾರ ಬಂದರೆ #ಸಿದ್ಧಿಯೋಗವಾಗುತ್ತದೆ . ಈ ನಕ್ಷತ್ರವು ಶುಕ್ರವಾರ , ಶನಿವಾರ ಬಂದರೆ #ಮೃತಯೋಗವಾಗುತ್ತದೆ. #ಮಖಾ_ನಕ್ಷತ್ರ #ಮಖಾ_ನಕ್ಷತ್ರದ_ಇತರ #ಹೆಸರುಗಳು ... ಮೇಖಲಾ , ಪೈತ್ರ , ಪಿತೃಭಂ , #ಈ_ನಕ್ಷತ್ರದ_ದೇವತೆ.. ಪಿತೃದೇವತೆ #ಅಧಿದೇವತೆ..... ಸರ್ಪ #ಪ್ರತ್ಯಧಿದೇವತೆ.... ರವಿ #ಈ_ನಕ್ಷತ್ರದ_ವಿವರ ...! ಇದು ಚಂದ್ರನಿಗೆ ಸೇರಿದ ನಕ್ಷತ್ರ. ಸ್ತ್ರೀ ನಕ್ಷತ್ರ. ನಕ್ಷತ್ರಾಧಿಪತಿ ಕೇತು. ದೆಶೆ..7 ವರ್ಷ , ಗುಣ-ರಾಕ್ಷಸ , ಯೋನಿ-ಇಲಿ , ವೈರಿ-ಬೆಕ್ಕು , ರಜ್ಜು-ಪಾದ , ನಾಡಿ-ಅಂತ್ಯ , ವರ್ಣ- ಕ್ಷತ್ರಿಯ, ಹರಳು-ವೈಡೂರ್ಯ , ಅಕ್ಷರಗಳು..ಮ-ಮಿ-ಮು-ಮೆ ಈ ನಕ್ಷತ್ರದಲ್ಲಿ ಹುಟ್ಟಿದ ಜಾತಕರು ಉಪಕಾರಿಯು , ಗುಣವಂತರು , ಒಳ್ಳೆಯ ವಾಗ್ಮಿಗಳು , ಸತ್ಯವಂತರು , ಶತ್ರುರಹಿತರು, ವಿಚಾರವಂತರು , ಭಕ್ತಿಯುಳ್ಳವರು , ಸಂಚಾರಿಗಳು , ಧೈರ್ಯವಂತರು ಆಗಿರುತ್ತಾರೆ. ಮಖಾ ನಕ್ಷತ್ರದ #ಮೊದಲನೆಯ #ಪಾದವು_ಮೇಷಾಂಶವಾಗಿದ್ದು , ಕುಜ ಅಧಿಪತಿಯಾಗುತ್ತಾನೆ . ಜಾತಕರು ಮನೋನಿಗ್ರಹಿಗಳು , ಕಠಿಣ ಸ್ವಭಾವದವರು, ಶಕ್ತಿಶಾಲಿಗಳು , ಧೈರ್ಯವಂತರು ಆಗಿರುತ್ತಾರೆ. ಮಖಾ ನಕ್ಷತ್ರದ #ಎರಡನೆಯ #ಪಾದವು_ವೃಷಭಾಂಶವಾಗಿದ್ದು* , ಶುಕ್ರ ಅಧಿಪತಿಯಾಗುತ್ತಾನೆ ,ಜಾತಕರು ಧಾರ್ಮಿಕರು, ಶೀಲಗುಣಸಂಪನ್ನರು , ವಿವೇಕಿಗಳು , ದೈವಭಕ್ತರು , ಸ್ನೇಹಪರರು ಆಗಿರುತ್ತಾರೆ. ಮಖಾ ನಕ್ಷತ್ರದ #ಮೂರನೆಯ #ಪಾದವು_ಮಿಥುನಾಂಶವಾಗಿದ್ದು, ಬುಧ ಅಧಿಪತಿ ಆಗುತ್ತಾನೆ.ಜಾತಕರು ಸಕಲವ ವಿದ್ಯಾಪ್ರವೀಣರು, ವಿವೇಕಿಗಳು , ಸರ್ವಕಾರ್ಯ ಸಮರ್ಥರು ಆಗಿರುತ್ತಾರೆ. ಮಖಾ ನಕ್ಷತ್ರದ #ನಾಲ್ಕನೆಯ #ಪಾದವು #ಕಟಕಾಂಶವಾಗಿದ್ದು , ಚಂದ್ರನು ಅಧಿಪತಿಯಾಗುತ್ತಾನೆ. ಜಾತಕರು ಸದಾಚಾರಿಯು , ಪರೋಪಕಾರಿಯು , ಬುದ್ಧಿವಂತರು , ಮುಂದಾಲೋಚನೆಯುಳ್ಳವರು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು . ನಾಮಕರಣ , ಲಗ್ನ ಪತ್ರಿಕೆ , ವಿವಾಹ , ಹೊಸ ವ್ಯಾಪಾರ , ಪ್ರಯಾಣ , ಹೊಲ-ಗದ್ದೆ ಕೆಲಸಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು ಮಖಾ ನಕ್ಷತ್ರವು ಭಾನುವಾರ , ಸೋಮವಾರ, ಶುಕ್ರವಾರ ಬಂದರೆ #ಮೃತಯೋಗವಾಗುತ್ತದೆ . ಮಖಾ ನಕ್ಷತ್ರವು ಮಂಗಳವಾರ, ಬುಧವಾರ , ಶನಿವಾರ ಬಂದರೆ #ಸಿದ್ಧಿಯೋಗವಾಗುತ್ತದೆ . ಮಖಾ ನಕ್ಷತ್ರವು ಗುರುವಾರ ಬಂದರೆ #ಅಮೃತಸಿದ್ಧಿಯೋಗವಾಗುತ್ತದೆ .. #ಪುಬ್ಬಾ_ನಕ್ಷತ್ರ #ಪುಬ್ಬಾ ನಕ್ಷತ್ರದ ಇತರ ಹೆಸರುಗಳು ... ಭಗ , ಭಾಗ್ಯ , ಪೂರ್ವಫಲ್ಗುಣಿ , ಭಗಾಖ್ಯ *ಈ ನಕ್ಷತ್ರದ ದೇವತೆ* ...ಸೂರ್ಯ *ಅಧಿ ದೇವತೆ* .....ಪಿತೃದೇವತೆ *ಪ್ರತ್ಯಧಿ ದೇವತೆ*...ಭಗ #ಈ_ನಕ್ಷತ್ರದ_ಸ್ವರೂಪ... ಎರಡು ನಕ್ಷತ್ರಗಳಿಂದ ಕೂಡಿದ್ದು ಮಾನವನ ಕಣ್ಣಿನ ಆಕಾರದಲ್ಲಿದೆ. #ಈ_ನಕ್ಷತ್ರದ_ವಿವರಗಳು ..! ಈ ನಕ್ಷತ್ರವು ಸೂರ್ಯನಿಗೆ ಸೇರಿದೆ. ಸ್ತ್ರೀ ನಕ್ಷತ್ರವಾಗಿದೆ. ಇದರ ಅಧಿಪತಿ ಶುಕ್ರ. ದೆಶೆ - 20 ವರುಷಗಳು. ಗಣ- ಮನುಷ್ಯ , ಯೋನಿ-ಇಲಿ, ವೈರಿ-ಬೆಕ್ಕು , ರಜ್ಜು- ಕಟಿ , ನಾಡಿ-ಮಧ್ಯ , ವರ್ಣ-ಕ್ಷತ್ರಿಯ , ಹರಳು-ವಜ್ರ , ಅಕ್ಷರಗಳು-ಮೊ-ಟ-ಟೀ-ಟು. #ಈ_ನಕ್ಷತ್ರದವರ_ಸ್ವಭಾವ ... ಜಾತಕರು ಗಂಭೀರ ಸ್ವಭಾವದವರು , ಎತ್ತರ ಸದೃಢ ದೇಹವುಳ್ಳವರು , ತಲೆ ಎತ್ತಿ ನಡೆಯುವವರು , ಕಲ್ಮಶವಿಲ್ಲದವರು , ಸಾತ್ವಿಕರು , ಗೌರವಾನ್ವಿತರು , ಸೇವಾಸಕ್ತರು , ಉಪಕಾರಿಗಳು , ವಿನಯವಂತರು , ದಾನಿಗಳು ಆಗಿರುತ್ತಾರೆ. ಪುಬ್ಬಾ ನಕ್ಷತ್ರದ ಮೊದಲನೆಯ ಪಾದವು #ಸಿಂಹಾಂಶವಾಗಿದ್ದು , ರವಿ ಅದಕ್ಕೆ ಅಧಿಪತಿ. ಜಾತಕರು ಭೋಗಾಸಕ್ತರು , ಧೈರ್ಯವಂತರು, ಸಾಹಸಿಗಳು , ಸ್ವಾಭಿಮಾನಿಯು , ವೈರಿಗಳನ್ನು ನಿಗ್ರಹಿಸುವವರು ಆಗಿರುತ್ತಾರೆ. ಪುಬ್ಬಾ ನಕ್ಷತ್ರದ ಎರಡನೆಯ ಪಾದವು #ಕನ್ಯಾಂಶವಾಗಿದ್ದು ಬುಧ ಅದಕ್ಕೆ ಅಧಿಪತಿ ಆಗುತ್ತಾನೆ. ಜಾತಕರು ಅಹಿಂಸಾಪರರಾಗಿ , ಜಗಳ-ಯುದ್ಧಗಳನ್ನು ಇಷ್ಟಪಡುವುದಿಲ್ಲ. ಇವರ ಮನೋಧರ್ಮವು ಲೆಕ್ಕಾಚಾರವನ್ನು ಮಾಡುವಂತಹುದು. ಪುಬ್ಬಾ ನಕ್ಷತ್ರದ ಮೂರನೆಯ ಪಾದವು #ತುಲಾಂಶವಾಗಿದ್ದು , ಶುಕ್ರ ಅದಕ್ಕೆ ಅಧಿಪತಿ. ಜಾತಕರು ನ್ಯಾಯವಂತರು , ಕಲಾವಿಧರು , ತೇಜಸ್ವಿಗಳು , ಶಾಸ್ತ್ರಗಳನ್ನು ಬಲ್ಲವರು , ಜ್ಞಾನಿಯು ಆಗಿರುತ್ತಾರೆ. ಪುಬ್ಬಾ ನಕ್ಷತ್ರದ ನಾಲ್ಕನೆಯ ಪಾದವು #ವೃಶ್ಚಿಕಾಂಶವಾಗಿದ್ದು , ಕುಜನು ಅಧಿಪತಿಯು. ಜಾತಕರು ಕೋಪ ಉಳ್ಳವರು, ಹರಿತಾಗಿ ಮಾತನಾಡುವವರು , ಆಳವಾದ ಅಧ್ಯಯನ ಶೀಲರು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು ... ಪುಬ್ಬಾ ನಕ್ಷತ್ರವು #ಉಗ್ರ ನಕ್ಷತ್ರ ಎನಿಸಿಕೊಂಡಿದ್ದು ಉಗ್ರ ಕಾರ್ಯಗಳನ್ನು ಮಾತ್ರ ಈ ನಕ್ಷತ್ರದಲ್ಲಿ ಮಾಡಬಹುದಾಗಿದೆ. ಯುದ್ಧ ಮಾಡಲು , ಗಣಿ ತೋಡಲು , ಕಣ ಮಾಡುವುದಕ್ಕೆ ಒಳ್ಳೆಯದು. #ವಾರಾನುಸಾರ_ಯೋಗಫಲಗಳು ... ಪುಬ್ಬಾ ನಕ್ಷತ್ರವು ಭಾನುವಾರ , ಸೋಮವಾರ , ಮಂಗಳವಾರ , ಗುರುವಾರ , ಶುಕ್ರವಾರ, ಶನಿವಾರ ಬಂದರೆ #ಸಿದ್ಧಿಯೋಗವಾಗುತ್ತದೆ. ಪುಬ್ಬಾ ನಕ್ಷತ್ರವು ಬುಧವಾರ ಬಂದರೆ #ಅಮೃತ_ಸಿದ್ಧಿಯೋಗವಾಗುತ್ತದೆ . ಪುಬ್ಬಾ ನಕ್ಷತ್ರವು ಶನಿವಾರ ಬಂದು , ಅದು ತ್ರಯೋದಶಿಯಾದರೆ #ಉಗ್ರಯೋಗವಾಗುತ್ತದೆ #ಉತ್ತರಾ_ನಕ್ಷತ್ರ... #ಈ_ನಕ್ಷತ್ರದ_ಇತರ_ಹೆಸರುಗಳು .. ಉತ್ತರ , ಆರ್ಯಮ , ಆರ್ಯ ಉತ್ತರಾ ನಕ್ಷತ್ರದ ದೇವತೆ... *ಭಗ* ಅಧಿದೇವತೆ..... *ಸೂರ್ಯ* ಪ್ರತ್ಯಧಿ ದೇವತೆ... *ಆರ್ಯಮಣ* #ಈ_ನಕ್ಷತ್ರದ_ವಿವರಗಳು ... ಇದು ಸೂರ್ಯನಿಗೆ ಸೇರಿದ ನಕ್ಷತ್ರ. ಇದರ ಅಧಿಪತಿ - ರವಿ , ದೆಶೆ- 6 ವರುಷಗಳು. ಗಣ-ಮನುಷ್ಯ , ಯೋನಿ-ಆಕಳು , ರಜ್ಜು-ಉದರ , ನಾಡಿ-ಆದಿ , ವರ್ಣ- ಕ್ಷತ್ರಿಯ ಹರಳು- ಮಾಣಿಕ್ಯ , ಅಕ್ಷರಗಳು-ಟೆ-ಟೋ-ಪಾ-ಪೀ. ಉತ್ತರ ನಕ್ಷತ್ರವು ಸ್ಥಿರ ನಕ್ಷತ್ರ. ಈ ನಕ್ಷತ್ರದಲ್ಲಿ ಹುಟ್ಟಿದ ಜಾತಕರು ಗುಣ-ಗಾಂಭೀರ್ಯವುಳ್ಳವರು, ಕಲಾ ಪ್ರೇಮಿಗಳು, ನಮ್ರತೆ-ವಿಧೇಯತೆಯುಳ್ಳವರು, ಉಪಕಾರಿಗಳು , ಸರ್ವಕಾರ್ಯ ಸಮರ್ಥರು, ಶತ್ರುಗಳನ್ನು ಜಯಿಸುವವರು , ಅಪಾರ ಹಿಂಬಾಲಕರನ್ನು ಹೊಂದಿದವರು , ವಿದ್ಯಾವಂತರು , ಧೀರ್ಘಾಯುಷ್ಯವುಳ್ಳವರು ಆಗಿರುತ್ತಾರೆ. ಉತ್ತರಾ ನಕ್ಷತ್ರದ *ಮೊದಲನೆಯ ಪಾದವು #ಧನುರಾಂಶವಾಗಿದ್ದು* ಗುರು ಅಧಿಪತಿ ಆಗುತ್ತಾನೆ. ಜಾತಕನು ಐಶ್ವರ್ಯವಂತನು , ಗುಣವಂತನು , ಸದ್ವಿಚಾರಿಯು , ಸಹೃದಯಿಯು ಆಗಿರುತ್ತಾನೆ. ಉತ್ತರಾ ನಕ್ಷತ್ರದ *ಎರಡನೆಯ ಪಾದವು #ಮಕರಾಂಶವಾಗಿದ್ದು* ಶನಿಯು ಅಧಿಪತಿಯಾಗುತ್ತಾನೆ. ಜಾತಕರು ನಿಧಾನಸ್ಥರು, ಕೋಪಿಷ್ಟರು , ಅಲ್ಪ ಖರ್ಚಿನವರು , ಕೆಲಸಕಾರ್ಯಗಳನ್ನು ತಾವೇ ಮಾಡುವವರು ಆಗಿರುತ್ತಾರೆ. ಉತ್ತರಾ ನಕ್ಷತ್ರದ *ಮೂರನೆಯ ಪಾದವು #ಕುಂಭಾಂಶವಾಗಿದ್ದು , ಶನಿಯು ಅದಕ್ಕೆ ಅಧಿಪತಿ. ಜಾತಕನು ವ್ಯಸನಗಳಿಗೆ ಬೇಗ ಗುರಿಯಾಗುವನು. ಸಂಧರ್ಭಗಳು ಮನಸ್ಸನ್ನು ಕಠಿಣವಾಗಿಸುವುದು , ಮುಂದಾಲೋಚನೆ ಕಡಿಮೆ. ಉತ್ತರಾ ನಕ್ಷತ್ರದ *ನಾಲ್ಕನೆಯ ಪಾದವು #ಮೀನಾಂಶವಾಗಿದ್ದು ಗುರು ಅಧಿಪತಿ ಆಗುತ್ತಾನೆ. ಜಾತಕರು ಶ್ರೇಷ್ಠ ವ್ಯಕ್ತಿತ್ವವನ್ನು , ವಿಶಾಲ ಹೃದಯವುಳ್ಳವರು ಆಗುತ್ತಾರೆ. ಕೀರ್ತಿವಂತರು, ವಿದ್ವಾಂಸರು ಆಗುತ್ತಾರೆ. #ಉತ್ತರಾ_ನಕ್ಷತ್ರದಲ್ಲಿ #ಮಾಡಬಹುದಾದ_ಕಾರ್ಯಗಳು . ನಿಷೇಕ , ಪುಂಸವನ , ನಾಮಕರಣ , ಅನ್ನಪ್ರಾಶನ , ಕಿವಿ ಚುಚ್ಚುವುದು , ಉಪನಯನ , ವಿವಾಹ , ಗೃಹಪ್ರವೇಶ , ಪ್ರಯಾಣ , ಶಂಖುಸ್ಥಾಪನೆ..ಮುಂತಾದ ಎಲ್ಲಾ ಶುಭಕಾರ್ಯಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು .. ಉತ್ತರಾ ನಕ್ಷತ್ರವು ಭಾನುವಾರ ಬಂದರೆ *#ಅಮೃತಸಿದ್ಧಿಯೋಗ . ಉತ್ತರಾ ನಕ್ಷತ್ರವು ಸೋಮವಾರ , ಶುಕ್ರವಾರ ಬಂದರೆ *#ಸಿದ್ಧಿಯೋಗ. ಉತ್ತರಾ ನಕ್ಷತ್ರವು ಮಂಗಳವಾರ, ಬುಧವಾರ ಬಂದರೆ #ಅಮೃತಯೋಗ . ಉತ್ತರಾ ನಕ್ಷತ್ರವು ಗುರುವಾರ ಬಂದರೆ *#ಮೃತಯೋಗ . ಉತ್ತರಾ ನಕ್ಷತ್ರವು ಶನಿವಾರ ಬಂದರೆ *#ಉತ್ಪಾತಯೋಗ . #ಹಸ್ತಾ_ನಕ್ಷತ್ರ .. #ಈ_ನಕ್ಷತ್ರದ_ಇತರ_ಹೆಸರುಗಳು ... ಸಾವಿತ್ರ , ಅರ್ಕ , ದಿವಾಕರ , ಸೂರ್ಯ #ಈ_ನಕ್ಷತ್ರದ_ದೇವತೆ ... ಆರ್ಯಮಣ *ಅಧಿದೇವತೆ* ..... ಭಗ *ಪ್ರತ್ಯಧಿ ದೇವತೆ* ...ತ್ವಷ್ಟ್ರಾರ #ಇದರ_ಸ್ವರೂಪ ...ಕೈಬೆರಳಿನಾಕಾರದಲಿ ಐದು ನಕ್ಷತ್ರಗಳು. #ವಿವರಗಳು ... ಇದು ಸೂರ್ಯನಿಗೆ ಸೇರಿದ ನಕ್ಷತ್ರ‌. ಇದರ ಅಧಿಪತಿ ಚಂದ್ರ. ಇದು ಸ್ತ್ರೀ ನಕ್ಷತ್ರವಾಗಿದ್ದು , ದೆಶೆ 10 ವರುಷಗಳು. ಗಣ- ದೇವ , ಯೋನಿ - ಎಮ್ಮೆ , ವೈರಿ- ಕುದುರೆ, ರಜ್ಜು - ಕಂಠ , ನಾಡಿ - ಆದಿ , ವರ್ಣ- ಶೂದ್ರ ಹರಳು- ಮುತ್ತು. ಅಕ್ಷರಗಳು..ಪು-ಷ-ಣ-ಠ ಈ ನಕ್ಷತ್ರದಲ್ಲಿ ಜನಿಸಿದವರು , ನಿತ್ಯ ಉತ್ಸಾಹಿಗಳು , ಆಕರ್ಷಣೆಯುಳ್ಳವರು , ಪರೋಪಕಾರಿಗಳು , ವಿಶಾಲ ಮನೋಭಾವದವರು , ಗುಪ್ತ ವಿದ್ಯೆಯಲ್ಲಿ ಆಸಕ್ತರು , ಸ್ನೇಹಪರರು , ಗೌರವಾನ್ವಿತರು ಆಗಿರುತ್ತಾರೆ. ಹಸ್ತಾ ನಕ್ಷತ್ರದ ಮೊದಲನೆಯ ಪಾದ *ಮೇಷಾಂಶವಾಗಿದ್ದು* , ಕುಜನು ಅಧಿಪತಿಯಾಗುತ್ತಾನೆ. ಕೋಪಿಷ್ಟರು , ಖಡಾಖಂಡಿತವಾಗಿ ಮಾತನಾಡುವವರು , ದೇಶಾಭಿಮಾನಿಗಳು , ಆಡಳಿತ ಸಲಹೆಗಾರರು , ಭೂವ್ಯವಹಾರ ಮಾಡುವವರು ಆಗಿರುತ್ತಾರೆ. ಹಸ್ತಾ ನಕ್ಷತ್ರದ ಎರಡನೆಯ ಪಾದ *ವೃಷಭಾಂಶವಾಗಿದ್ದು* , ಶುಕ್ರನು ಅಧಿಪತಿಯಾಗುತ್ತಾನೆ.ಜಾತಕರು ಧಾರ್ಮಿಕರು. ಗುಣಸಂಪನ್ನರು , ದೈವಭಕ್ತರು , ಸ್ನೇಹಜೀವಿಗಳು , ತಮಗೆ ತಾವೇ ಮೋಸಹೋಗುವವರು. ಹಸ್ತಾ ನಕ್ಷತ್ರದ ಮೂರನೆಯ ಪಾದ , *ಮಿಥುನಾಂಶವಾಗಿದ್ದು* ,ಬುಧ ಅಧಿಪತಿಯಾಗುತ್ತಾನೆ. ಜಾತಕರು ಬುದ್ಧಿವಂತರು , ವ್ಯಾಪಾರ ಮನೋಭಾವದವರು , ಮುಂದಾಲೋಚನೆ ಮಾಡುವವರು , ವಿಜ್ಞಾನಿಗಳು , ಸಕಲವಿಷಯಗಳಲ್ಲೂ ಆಸಕ್ತರು ಆಗಿರುತ್ತಾರೆ. ಹಸ್ತಾ ನಕ್ಷತ್ರದ ನಾಲ್ಕನೆಯ ಪಾದ , *ಕಟಕಾಂಶವಾಗಿದ್ದು* ಚಂದ್ರನು ಅಧಿಪತಿಯಾಗುತ್ತಾನೆ. ಜಾತಕರು ಪರೋಪಕಾರಿಯು , ಯಾತ್ರೆಗಳಲ್ಲಿ ಆಸಕ್ತಿ, ಸುಖಾಪೇಕ್ಷಿಗಳು , ತಾಯಿಯಲ್ಲಿ ಬಹಳ ಪ್ರೀತಿ ಉಳ್ಳವರು ಆಗಿರುತ್ತಾರೆ. #ಹಸ್ತಾ_ನಕ್ಷತ್ರದಲ್ಲಿ_ಮಾಡಬಹುದಾದ_ಕಾರ್ಯಗಳು . ಸೀಮಂತ , ಶಿಶುವಿಗೆ ಅನ್ನಪ್ರಾಶನ , ಕಿವಿ ಚುಚ್ಚುವುದು , ಚೌಲ , ಅಕ್ಷರಾಭ್ಯಾಸ , ಉಪನಯನ , ವಿವಾಹ , ವಧೂಪ್ರವೇಶ , ಹೊಸಬಟ್ಟೆ ಧರಿಸುವುದು , ಗೃಹ ಪ್ರವೇಶ , ನೂತನ ಅಂಗಡಿಯ ಪ್ರಾರಂಭ , ಸಂಗೀತ- ನಾಟ್ಯ ಪ್ರಾರಂಭ , ಕುಯಿಲು ಮಾಡುವುದು, ಪ್ರಯಾಣ ಹೊರಡುವುದು - ಈ ಕಾರ್ಯಗಳಿಗೆ ಶುಭಕರ‌ವಾಗಿರುತ್ತದೆ. #ವಾರಾನುಸಾರ_ಯೋಗಫಲಗಳು.. ಹಸ್ತಾ ನಕ್ಷತ್ರವು ಭಾನುವಾರ ಬಂದರೆ ಅಮೃತಸಿದ್ಧಿಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಭಾನುವಾರ ಬಂದಿದ್ದು , ಪಂಚಮೀ ತಿಥಿಯಿದ್ದರೆ , ವಿಷಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಸೋಮವಾರ , ಮಂಗಳವಾರ, ಗುರುವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಬುಧವಾರ, ಶನಿವಾರ ಬಂದರೆ ಮೃತಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಶುಕ್ರವಾರ ಬಂದರೆ ಅಮೃತಯೋಗವಾಗುತ್ತದೆ. #ಚಿತ್ತಾ_ನಕ್ಷತ್ರ... *ಈ ನಕ್ಷತ್ರದ ಇತರ ಹೆಸರುಗಳು* ... ಇಂದ್ರ , ದೈವತ್ವ , ತ್ವಷ್ತ್ರ , ತ್ವಾಷ್ತ್ರ. *ಈ ನಕ್ಷತ್ರದ ದೇವತೆ* ..ತ್ವಷ್ಟ್ರಾರ *ಈ ನಕ್ಷತ್ರದ ಅಧಿದೇವತೆ* ...ಆರ್ಯಮಣ *ಈ ನಕ್ಷತ್ರದ ಪ್ರತ್ಯಧಿದೇವತೆ* ...ವಾಯು *ಇದರ ಸ್ವರೂಪ* ...ಮುತ್ತಿನಾಕಾರದ ಒಂದು ನಕ್ಷತ್ರ. *ಇತರ ವಿವರಗಳು* ಈ ನಕ್ಷತ್ರ ಸೂರ್ಯನಿಗೆ ಸೇರಿದ್ದು. ಸ್ತ್ರೀ ನಕ್ಷತ್ರ. ನಕ್ಷತ್ರಾಧಿಪತಿ - ಕುಜ , ದೆಶೆ - 7 ವರುಷಗಳು ಗಣ - ರಾಕ್ಷಸ , ಯೋನಿ - ಹುಲಿ , ವೈರಿ - ಆಕಳು ರಜ್ಜು - ಶಿರೋ , ನಾಡಿ - ಮಧ್ಯ , ವರ್ಣ - ಶೂದ್ರ ಹರಳು - ಹವಳ. ಅಕ್ಷರಗಳು - ಪೆ - ಪೋ - ರಾ - ರೀ ಈ ನಕ್ಷತ್ರದ ಜಾತಕರು ಧನಿಕರು , ವಿದ್ಯಾವಂತರು, ವಿನಯವಂತರು , ಸುಂದರರು, ಸ್ವಲ್ಪ ದುಡುಕು ಸ್ವಭಾವದವರು , ಸಾಹಸಿಗಳು, ಒಳ್ಳೆಯ ಮಾತನಾಡುವವರು , ಭೋಜನಪ್ರಿಯರು , ಕರ್ತವ್ಯನಿಷ್ಠರು , ಆಶ್ರಯದಾತರು , ಸರಳತನದವರು ಆಗಿರುತ್ತಾರೆ. ಚಿತ್ತಾ ನಕ್ಷತ್ರದ ಮೊದಲನೆಯ ಪಾದ *ಸಿಂಹಾಂಶವಾಗಿದ್ದು* , ರವಿ ಅದಕ್ಕೆ ಅಧಿಪತಿ. ಜಾತಕರು ಸನ್ಮಾನಪೂರ್ಣರು , ವೈರಿನಿಗ್ರಹಿಗಳು , ಸ್ವಾಭಿಮಾನಿಗಳು , ಸಾಹಸಿಗಳು , ಧೀರರು , ರಾಜಭೋಗಿಗಳು ಆಗಿರುತ್ತಾರೆ‌ ಚಿತ್ತಾ ನಕ್ಷತ್ರದ ಎರಡನೆಯ ಪಾದ *ಕನ್ಯಾಂಶವಾಗಿದ್ದು* , ಬುಧ ಅಧಿಪತಿಯಾಗುತ್ತಾನೆ. ಜಾತಕರು ಆಚಾರವಂತರು , ಅಹಿಂಸಾಪರರು , ಅಲ್ಪತೃಪ್ತರು , ವ್ಯಾಪಾರ ಮನೋಭಾವ ಉಳ್ಳವರು , ರೋಗಿಗಳು ಆಗಿರುತ್ತಾರೆ. ಚಿತ್ತಾ ನಕ್ಷತ್ರದ ಮೂರನೆಯ ಪಾದ *ತುಲಾಂಶವಾಗಿದ್ದು* , ಶುಕ್ರ ಅಧಿಪತಿಯಾಗುತ್ತಾನೆ. ಜಾತಕರು ವಿವೇಕಿಗಳು, ಉದಾರಿಗಳು , ಕಲಾವಿಧರು , ವೇದೋತ್ತಮರು , ಜ್ಞಾನಿಗಳು ಆಗಿರುತ್ತಾರೆ. ಚಿತ್ತಾ ನಕ್ಷತ್ರದ ನಾಲ್ಕನೆಯ ಪಾದ *ವೃಶ್ಚಿಕಾಂಶವಾಗಿದ್ದು* ಕುಜ ಅಧಿಪತಿಯಾಗುತ್ತಾನೆ. ಜಾತಕರಿಗೆ ವೈರಿಗಳಿದ್ದು, ಕಟುವಾಗಿ ಮಾತನಾಡುವವರು , ಆಳವಾದ ಅಭ್ಯಾಸ ಮಾಡುವವರು , ವೈದ್ಯಕೀಯದಲ್ಲಿ ಇಷ್ಟವುಳ್ಳವರು ಆಗಿರುತ್ತಾರೆ. *ವಾರಾನುಸಾರ ಯೋಗಫಲಗಳು* ಚಿತ್ತಾ ನಕ್ಷತ್ರವು ಭಾನುವಾರ , ಮಂಗಳವಾರ, ಬುಧವಾರ, ಗುರುವಾರ , ಶುಕ್ರವಾರ ಬಂದರೆ *ಸಿದ್ಧಿ ಯೋಗ* ವಾಗುತ್ತದೆ. ಚಿತ್ತಾ ನಕ್ಷತ್ರವು ಸೋಮವಾರ , ಬಿದಿಗೆಯಲ್ಲಿ ಬಂದರೆ *ಪ್ರಬಲನಷ್ಟಯೋಗ* ವಾಗುತ್ತದೆ. ಚಿತ್ತಾ ನಕ್ಷತ್ರವು ಶನಿವಾರ ಬಂದರೆ *ಮೃತಯೋಗವಾಗುತ್ತದೆ* . ಸಿದ್ಧಿ , ಅಮೃತ , ಅಮೃತಸಿದ್ಧಿ ಯೋಗಗಳನ್ನು , ಸಾಧಿಸಿ ಕೆಲಸಗಳನ್ನು ಮಾಡಿಕೊಂಡರೆ ಶ್ರೇಷ್ಠವಾಗಿರುತ್ತದೆ. #ಸ್ವಾತೀ_ನಕ್ಷತ್ರ... #ಈ_ನಕ್ಷತ್ರದ_ಇತರ_ಹೆಸರುಗಳು. ಸ್ವಾತೀ , ವಾಯು , ಪವನ , ಮರುತ್ , ಸಮೀರಣ. *ಈ ನಕ್ಷತ್ರದ ದೇವತೆ*... ವಾಯು *ಅಧಿದೇವತೆ* ....ತ್ವಷ್ಟ್ರಾರ *ಪ್ರತ್ಯಧಿದೇವತೆ* .‌..ಇಂದ್ರಾಗ್ನಿ #ಈ_ನಕ್ಷತ್ರದ_ಸ್ವರೂಪ ನೀಲಾಕಾರದ ಒಂದು ನಕ್ಷತ್ರ #ಇತರ_ವಿವರಗಳು... ಇದು ಸೂರ್ಯನಿಗೆ ಸೇರಿದ ನಕ್ಷತ್ರ. ಇದರ ಅಧಿಪತಿ *ರಾಹು* . ದೆಶೆ..18 ವರುಷಗಳು. ಗಣ-ದೇವ , ಯೋನಿ-ಎಮ್ಮೆ , ವೈರಿ- ಕುದುರೆ, ರಜ್ಜು - ಕಂಠ , ನಾಡಿ - ಅಂತ್ಯ ವರ್ಣ - ಕ್ಷತ್ರಿಯ , ಹರಳು - ಗೋಮೇಧಿಕ ಅಕ್ಷರಗಳು..ರು- ರೇ- ರೋ-ತ ಸ್ವಾತೀ ನಕ್ಷತ್ರದ ಜಾತಕರು ವಿದ್ಯಾವಂತರು, ಪ್ರಬಲ ಸಾಹಸಿಗರು, ಸಂಶೋಧಕರು , ಹೆಚ್ಚು ಮಾತನಾಡುವವರು , ಆಕರ್ಷಕ ಶರೀರವುಳ್ಳವರು , ಎತ್ತರ ಶರೀರ ಹಾಗೂ ಸುಂದರ ಕಣ್ಣುಗಳುಳ್ಳವರು, ನ್ಯಾಯ ಶಾಂತಿ ಜೀವನ ಇಷ್ಟಪಡುವವರು , ಎಲ್ಲರಿಗೂ ಬೇಕಾದವರು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ಮೊದಲನೆಯ ಪಾದವು* ಧನುರಾಂಶವಾಗಿದ್ದು , ಗುರು ಅದರ ಅಧಿಪತಿ ಆಗುತ್ತಾನೆ. ಜಾತಕರು ಧನವಂತರು, ಸಹೃದಯವಂತರು, ಕಾರ್ಯತತ್ಪರರು , ಸದಾಚಾರ ಸಂಪನ್ನರು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ಎರಡನೆಯ ಪಾದವು* ಮಕರಾಂಶವಾಗಿದ್ದು , ಶನಿಯು ಅದರ ಅಧಿಪತಿಯಾಗುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವವರು , ಶೀಘ್ರಕೋಪಿಗಳು , ಚಿಕ್ಕಂದಿನಲ್ಲಿ ಬಹಳ ಕಷ್ಟಪಡುವವರು , ಹೆಚ್ಚು ಖರ್ಚುಮಾಡದವರು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ಮೂರನೆಯ ಪಾದವು* ಕುಂಭಾಂಶವಾಗಿದ್ದು , ಶನಿಯು ಅದಕ್ಕೆ ಅಧಿಪತಿ. ಜಾತಕರು ನಾಸ್ತಿಕರು , ಅತಿ ಕೋಪಿಷ್ಟರು , ಕಠೋರಮನಸ್ಸಿನವರು, ವ್ಯಸನಿಗಳು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ನಾಲ್ಕನೆಯ ಪಾದವು* ಮೀನಾಂಶವಾಗಿದ್ದು , ಗುರು ಅದರ ಅಧಿಪತಿ. ಜಾತಕರು ಸದ್ಗುಣವಂತರು , ಒಳ್ಳೆಯ ವ್ಯಕ್ತಿತ್ವದವರು , ವಿದ್ವಾಂಸರು, ಕೀರ್ತಿಶಾಲಿಗಳು , ವಿಶಾಲಹೃದಯದವರು ಆಗಿರುತ್ತಾರೆ. #ವಾರಾನುಸಾರ_ಯೋಗಫಲ ... *ಸ್ವಾತೀ ನಕ್ಷತ್ರವು* ಭಾನುವಾರ , ಮಂಗಳವಾರ , ಬುಧವಾರ , ಶುಕ್ರವಾರ ಬಂದರೆ *ಸಿದ್ಧಿಯೋಗ* ವಾಗುತ್ತದೆ. *ಸ್ವಾತೀ ನಕ್ಷತ್ರವು* ಸೋಮವಾರ , ಗುರುವಾರ, ಶನಿವಾರ ಬಂದರೆ *ಅಮೃತಯೋಗ* ವಾಗುತ್ತದೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು ಸ್ವಾತೀ ನಕ್ಷತ್ರದ ದಿವಸ ಸೀಮಂತ , ನಾಮಕರಣ , ಹೊಸಬಟ್ಟೆ ಧಾರಣಾ , ಶಿಶುವನ್ನು ತೊಟ್ಟಿಲಿಗೆ ಹಾಕುವುದು, ಅನ್ನಪ್ರಾಶನ , ವಿದ್ಯಾರಂಭ , ಉಪನಯನ, ವಿವಾಹ , ವಧೂಪ್ರವೇಶ , ಕುಯಿಲು ಮಾಡುವುದು , ಲಲಿತಾಕಲಾ ಅಭ್ಯಾಸಾರಂಭ , ಪ್ರಯಾಣ , ಹೊಸವಾಹನ ತರುವುದು...ಮುಂತಾದ ಶುಭಕಾರ್ಯಗಳನ್ನು ಮಾಡಬಹುದು. #ವಿಶಾಖಾ_ನಕ್ಷತ್ರ ಈ ನಕ್ಷತ್ರದ ಇತರ ಹೆಸರುಗಳು.. #ಇಂದ್ರಾಗ್ನಿ_ದೈವತ್ವ_ವಿಶಾಖಭಂ_ಶೂರ್ಪ ಈ ನಕ್ಷತ್ರದ ದೇವತೆ.. #ಇಂದ್ರಾಗ್ನಿ ಅಧಿದೇವತೆ..... #ವಾಯು ಪ್ರತ್ಯಧಿದೇವತೆ... #ಮಿತ್ರ #ನಕ್ಷತ್ರದ_ಸ್ವರೂಪ ಚಕ್ರಾಕಾರದಲ್ಲಿರುವ ಐದು ನಕ್ಷತ್ರಗಳು. #ವಿವರಗಳು... ಇದು ಸೂರ್ಯನಿಗೆ ಸೇರಿದ ನಕ್ಷತ್ರ. ಇದರ ಅಧಿಪತಿ... #ಗುರು ದೆಶೆ.... #16_ವರುಷಗಳು ಗಣ... #ರಾಕ್ಷಸ ಯೋನಿ... #ಹುಲಿ ವೈರಿ.... #ಆಕಳು ನಾಡಿ... #ಅಂತ್ಯ ವರ್ಣ... #ಕ್ಷತ್ರಿಯ ಹರಳು... #ಪುಷ್ಯರಾಗ ಅಕ್ಷರಗಳು... #ತಿ_ತು_ತೇ_ತೋ #ವಿಶಾಖ_ನಕ್ಷತ್ರದ ಜಾತಕರು ಸಿರಿವಂತರು, ಎಲ್ಲೆಡೆ ಆದರಣೀಯರು, ಸಾತ್ವಿಕ ಗುಣವುಳ್ಳವರು , ಕಾಂತಿಯುತರು , ಕಾರ್ಯ ಸಮರ್ಥರು , ವಾಗ್ಮಿಗಳು , ಧೈರ್ಯವಂತರು , ಸಂಚಾರಿಗಳು , ಉಪಕಾರಿಗಳು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ಮೊದಲನೆಯ ಪಾದ ಮೇಷಾಂಶ* ವಾಗಿದ್ದು ಕುಜ ಅದಕ್ಕೆ ಅಧಿಪತಿ. ಜಾತಕರು ಒಮ್ಮೊಮ್ಮೆ ಜಗಳ ಮಾಡುವವರು, ಕೋಪಿಷ್ಟರು , ಶೂರರು , ಸಾಹಸಿಗಳು , ಸ್ವಾಭಿಮಾನಿಗಳು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ಎರಡನೆಯ ಪಾದ ವೃಷಭಾಂಶ* ವಾಗಿದ್ದು ಶುಕ್ರ ಅದಕ್ಕೆ ಅಧಿಪತಿ. ಜಾತಕರು ಧಾರ್ಮಿಕರು , ದೈವ ಭಕ್ತರು, ಗುಣಸಂಪನ್ನರು , ಭಾಗ್ಯಶಾಲಿಗಳು , ಅಪಾರ ಜ್ಞಾನವಂತರು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ಮೂರನೆಯ ಪಾದ ಮಿಥುನಾಂಶ* ವಾಗಿದ್ದು ಬುಧ ಅದಕ್ಕೆ ಅಧಿಪತಿ. ಜಾತಕರು ಧೈರ್ಯಶಾಲಿಗಳು , ಸಕಲವಿದ್ಯಾ ಪ್ರವೀಣರು , ವಿವೇಕಿಗಳು , ಕರುಣೆಯುಳ್ಳವರು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ನಾಲ್ಕನೆಯ ಪಾದ ಕಟಕಾಂಶ* ವಾಗಿದ್ದು ಚಂದ್ರ ಅದಕ್ಕೆ ಅಧಿಪತಿ. ಜಾತಕರು ಪರೋಪಕಾರಿಗಳು , ಬುದ್ಧಿವಂತರು, ಸದಾಚಾರಿಯೂ , ಸುಖಾಪೇಕ್ಷಿಗಳು ಆಗಿರುತ್ತಾರೆ. #ವಿಶಾಖ_ನಕ್ಷತ್ರದಲ್ಲಿ ಮಾಡಬಹುದಾದ ಕಾರ್ಯಗಳು* ಶಿಶುವನ್ನು ತೊಟ್ಟಿಲಿಗೆ ಹಾಕುವುದು, ವಿದ್ಯಾರಂಭ, ಯಾಗಯಜ್ಞಗಳು , ಅಗ್ನಿಸಂಬಂಧ ಕಾರ್ಯ , ಮಂತ್ರಸಿದ್ದಿ , ಶಿಲ್ಪಕಲೆಗೆ ಆರಂಭ...ಮಾಡಬಹುದು. #ವಾರಾನುಸಾರ_ಯೋಗಫಲಗಳು ವಿಶಾಖ ನಕ್ಷತ್ರ ಭಾನುವಾರ ಬಂದರೆ #ಉತ್ಪಾತಯೋಗ ವಾಗುತ್ತದೆ. ಸೋಮವಾರ , ಮಂಗಳವಾರ ಬಂದರೆ #ಮೃತಯೋಗ ವಾಗುತ್ತದೆ. ಬುಧವಾರ , ಗುರುವಾರ , ಶುಕ್ರವಾರ , ಶನಿವಾರ ಬಂದರೆ #ಸಿದ್ಧಿಯೋಗ ವಾಗುತ್ತದೆ. #ವಿಶಾಖ ನಕ್ಷತ್ರದಲ್ಲಿ ಜನಿಸಿದವರು ತಮಗೆ ಕಷ್ಟಕಾಲ ಬಂದಿದೆಯೆಂದು ಅನಿಸಿದಾಗ ಶುಕ್ಲಪಕ್ಷದ ಶುಕ್ರವಾರಗಳಲ್ಲಿ ದೇವಿಪೂಜೆ, ಪಾರಾಯಣ, ಷೋಡಶೋಪಚಾರಗಳನ್ನು ಮಾಡಿ , ಅನ್ನದಾನವನ್ನು ಮಾಡಿದರೆ ಒಳ್ಳೆಯದಾಗುತ್ತದೆ #ಅನೂರಾಧಾ_ನಕ್ಷತ್ರ... *ಇದರ ಬೇರೆ ಹೆಸರುಗಳು* ... ಮಿತ್ರ , ಮೈತ್ರ *ಇದರ ದೇವತೆ* ... ಮಿತ್ರ *ಅಧಿದೇವತೆ* .. ಇಂದ್ರಾಗ್ನಿ *ಪ್ರತ್ಯಧಿ ದೇವತೆ* ...ಇಂದ್ರ *ಇದರ ಸ್ವರೂಪ* ... ಮೂರು ನಕ್ಷತ್ರಗಳು ಸೇರಿ ಛತ್ರಾಕಾರದಲ್ಲಿದೆ. *ವಿವರಗಳು*... ಇದು ಸೂರ್ಯನಿಗೆ ಸೇರಿದ ನಕ್ಷತ್ರವಾಗಿದೆ. ನಕ್ಷತ್ರಾಧಿಪತಿ... ಶನಿ ದೆಶೆ... 19 ವರುಷಗಳು ಗಣ...ದೇವ ಯೋನಿ...ಜಿಂಕೆ ವೈರಿ...ಶ್ವಾನ ರಜ್ಜು...ಕಟಿ ನಾಡಿ...ಮಧ್ಯ ವರ್ಣ...ಬ್ರಾಹ್ಮಣ ಹರಳು...ನೀಲ ಅಕ್ಷರಗಳು... ನಾ_ನಿ_ನು_ನೆ ಈ ನಕ್ಷತ್ರದ ಜಾತಕರು ಹುಟ್ಟಿದಾಗಕ್ಕಿಂತಲೂ ನಂತರದ ದಿನಗಳಲ್ಲಿ ಧನವಂತರಾಗುತ್ತಾರೆ. ಮೇಧಾವಿಗಳು , ಸನ್ಮಾರ್ಗಿಗಳು , ಆಕರ್ಷಕ ವ್ಯಕ್ತಿಗಳು , ಗುರು ಹಿರಿಯರಲ್ಲಿ ಭಯಭಕ್ತಿಯುಳ್ಳವರು ಆಗಿರುತ್ತಾರೆ. ಈ ನಕ್ಷತ್ರದ ಮೊದಲನೆಯ ಪಾದ ಸಿಂಹಾಂಶವಾಗಿದ್ದು ರವಿ ಅದಕ್ಕೆ ಅಧಿಪತಿ. ಜಾತಕರು ಸಾಹಸಿಗಳು , ಶೂರರು , ರಾಜಸನ್ಮಾತಿರು , ಸ್ವಾಭಿಮಾನಿಗಳು ಆಗಿರುತ್ತಾರೆ. ಈ ನಕ್ಷತ್ರದ ಎರಡನೆಯ ಪಾದ ಕನ್ಯಾಂಶವಾಗಿದ್ದು , ಬುಧ ಅಧಿಪತಿಯಾಗುತ್ತಾನೆ. ಜಾತಕರು ಸಮಯೋಚಿತವಾದ ವರ್ತನೆಯನ್ನು ಮಾಡುತ್ತಾರೆ.ಜಗಳಗಳನ್ನು ಇಷ್ಟಪಡದೆ , ಆಚಾರ-ವಿಚಾರಗಳ ಬಲ್ಲವರಾಗಿರುತ್ತಾರೆ. ಈ ನಕ್ಷತ್ರದ ಮೂರನೆಯ ಪಾದ ತುಲಾಂಶವಾಗಿದ್ದು , ಶುಕ್ರನು ಅಧಿಪತಿಯಾಗುತ್ತಾನೆ. ಜಾತಕರು ಧರ್ಮಪರರು, ಉದಾರಿಗಳು , ವೇದ-ಶಾಸ್ತ್ರ ಬಲ್ಲವರು , ಜ್ಞಾನಿಗಳು , ಕಲಾವಿದರು ಆಗಿರುತ್ತಾರೆ. ಈ ನಕ್ಷತ್ರದ ನಾಲ್ಕನೆಯ ಪಾದ ವೃಶ್ಚಿಕಾಂಶವಾಗಿದ್ದು , ಕುಜನು ಅದಕ್ಕೆ ಅಧಿಪತಿಯಾಗುತ್ತಾನೆ. ಜಾತಕರು ಕಟುಮಾತನಾಡುವವರು , ಸಾಹಸವಂತರು, ಕಷ್ಟಗಳನ್ನು ಎದುರಿಸುವವರು ಆಗಿರುತ್ತಾರೆ. *ಈ ನಕ್ಷತ್ರದಲ್ಲಿ ಮಾಡಬಹುದಾದ ಕಾರ್ಯಗಳು* ... ನಿಷೇಕ , ವಿವಾಹ , ಸೀಮಂತ , ನಾಮಕರಣ, ಶಿಶುವಿಗೆ ನಾಮಕರಣ, ಅನ್ನಪ್ರಾಶನ, ಚೌಲ, ಅಕ್ಷರಾಭ್ಯಾಸ , ಉಪನಯನ , ರೋಗಚಿಕಿತ್ಸೆ, ಸಂಗೀತ-ನಾಟ್ಯ ಆರಂಭ , ಪ್ರಯಾಣ , ಹೊಲದ ಕೆಲಸಗಳು , ಸಾಲ ಕೊಡುವುದು-ತರುವುದು ...ಮುಂತಾದ ಕಾರ್ಯಗಳನ್ನು ಮಾಡಬಹುದು. *ವಾರಾನುಸಾರ ಯೋಗಫಲಗಳು* ಈ ನಕ್ಷತ್ರವು ಭಾನುವಾರ ಬಂದರೆ ಮೃತಯೋಗವಾಗುತ್ತದೆ. ಈ ನಕ್ಷತ್ರವು ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಈ ನಕ್ಷತ್ರವು ಬುಧವಾರ ಬಂದರೆ ಅಮೃತ ಸಿದ್ಧಿ ಯೋಗವಾಗುತ್ತದೆ. ~~~~~~~~~~ *ಅನೂರಾಧ ನಕ್ಷತ್ರಗಳಲ್ಲಿ ಜನಿಸಿದವರು ತಮಗೆ ತೀವ್ರಕಷ್ಟಗಳು ಬಂದಿದೆ ಎಂದೆನಿಸಿದಾಗ ಶುಕ್ಲಪಕ್ಷದ ಮಂಗಳವಾರಗಳಲ್ಲಿ ಶ್ರೀ ಸುಬ್ರಹ್ಮಣ್ಯನ ಆರಾಧನೆ* , *ಅಭಿಷೇಕ ಹಾಗೂ ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರವನ್ನು ಪಾರಾಯಣ, ಅನ್ನದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ* . #ಜ್ಯೇಷ್ಠಾ_ನಕ್ಷತ್ರ ... #ಈ_ನಕ್ಷತ್ರದ_ಇತರ_ಹೆಸರುಗಳು ..‌. ಇಂದ್ರ , ಪುರೂಹೂತ , ಶತಮುಖ #ಈ_ನಕ್ಷತ್ರದ_ದೇವತೆ...ಇಂದ್ರ #ಅಧಿದೇವತೆ.. ಮಿತ್ರಃ #ಪ್ರತ್ಯಧಿದೇವತೆ.. ಅಸುರಃ *#ಇದರ _ಸ್ವರೂಪ ...ಮೂರು ನಕ್ಷತ್ರಗಳು ಕೂಡಿ ಛತ್ರಾಕಾರದಲ್ಲಿದೆ. #ವಿವರಗಳು ... ಈ ನಕ್ಷತ್ರ ಸೂರ್ಯನಿಗೆ ಸೇರಿದೆ. ಇದರ ಅಧಿಪತಿ...ಬುಧ ದೆಶೆ...17 ವರುಷಗಳು ಗಣ... ರಾಕ್ಷಸ ಯೋನಿ....ಜಿಂಕೆ ವೈರಿ....ಶ್ವಾನ ರಜ್ಜು...ಪಾದ ನಾಡಿ...ಆದಿ ವರ್ಣ...ಬ್ರಾಹ್ಮಣ ಹರಳು... ಪಚ್ಚೆ ಅಕ್ಷರಗಳು... ನೋ_ಯ_ಯಿ_ಯು ~~~~~~~~~~~~ ಈ ನಕ್ಷತ್ರದಲ್ಲಿ ಜನಿಸಿರುವವರು ವಿಶೇಷ ಜ್ಞಾನಿಗಳು , ವಿದ್ಯಾವಂತರು , ಸ್ನೇಹಪರರು , ಸತ್ಯವನ್ನು ನುಡಿಯುವವರು , ಧರ್ಮಾಭಿಮಾನಿಗಳು , ನ್ಯಾಯವಂತರು , ಒಳ್ಳೆಯ ವಾಗ್ಮಿಗಳು ಆಗಿರುತ್ತಾರೆ. ~~~~~~~~~~~~~ ಜ್ಯೇಷ್ಠಾ ನಕ್ಷತ್ರದ ಮೊದಲನೆಯ ಪಾದ ಧನುರಾಂಶವಾಗಿದ್ದು , ಗುರು ಅದಕ್ಕೆ ಅಧಿಪತಿ. ಜಾತಕರು ದಾನಿಗಳು , ಸದ್ಗುಣವಂತರು , ಸಹೃದಯರು , ಕಾರ್ಯತತ್ಪರು ಆಗಿರುತ್ತಾರೆ. ಈ ನಕ್ಷತ್ರದ ಎರಡನೆಯ ಪಾದ ಮಕರಾಂಶವಾಗಿದ್ದು , ಶನಿ ಅದಕ್ಕೆ ಅಧಿಪತಿ.ಈ ಜಾತಕರು ಹೆಚ್ಚು ಖರ್ಚು ಮಾಡದವರು, ಶೀಘ್ರಕೋಪಿಗಳು , ಚೇಷ್ಟೆ ಸ್ವಭಾವದವರು, ಹೆಚ್ಚು ಕೆಲಸ ಮಾಡುವವರು ಆಗಿರುತ್ತಾರೆ. ಈ ನಕ್ಷತ್ರದ ಮೂರನೆಯ ಪಾದ ಕುಂಭಾಂಶವಾಗಿದ್ದು , ಶನಿ ಅದಕ್ಕೆ ಅಧಿಪತಿ. ಈ ಜಾತಕರು ನಾಸ್ತಿಕರು , ಮುಂದಾಲೋಚನೆ ಇಲ್ಲದವರು , ವ್ಯಸನಿಗಳು , ಗುಟ್ಟು ಮಾಡುವವರು ಆಗಿರುತ್ತಾರೆ. ಈ ನಕ್ಷತ್ರದ ನಾಲ್ಕನೆಯ ಪಾದ ಮೀನಾಂಶವಾಗಿದ್ದು ,ಗುರು ಅದಕ್ಕೆ ಅಧಿಪತಿ. ಈ ಜಾತಕರು ಸದ್ಗುಣವುಳ್ಳವರು , ಶ್ರೇಷ್ಠ ವ್ಯಕ್ತಿತ್ವದವರು , ಉದಾರಿಗಳು , ವಿದ್ವಾಂಸರು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ #ಮಾಡಬಹುದಾದ #ಕಾರ್ಯಗಳು... ಶಿಶುವನ್ನು ತೊಟ್ಟಿಲಿಗೆ ಹಾಕುವುದು , ಸಂಗೀತ-ನಾಟ್ಯಕಲೆಯ ಪ್ರಾರಂಭ , ವಿಗ್ರಹ ಕೆತ್ತನೆ , ಪಶುಸಂಗೋಪನಾ ಕಾರ್ಯ, ಕೆಲವು ಭೀಷಣ ಕಾರ್ಯಗಳಿಗೆ ಉತ್ತಮವು, ಶಸ್ತಾಸ್ತ್ರ ಸಂಗ್ರಣೆ...ಇವುಗಳನ್ನು ಮಾಡಬಹುದು. ~~~~~~~~~~~~~ ಜ್ಯೇಷ್ಠಾ ನಕ್ಷತ್ರ ಭಾನುವಾರ ಮತ್ತು ಶುಕ್ರವಾರ ಬಂದರೆ ಮೃತಯೋಗವಾಗುತ್ತದೆ. ಸೋಮವಾರ, ಬುಧವಾರ ಮತ್ತು ಶನಿವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಮಂಗಳವಾರ ಬಂದರೆ ಉತ್ಪಾತಯೋಗವಾಗುತ್ತದೆ. ಗುರುವಾರ ಬಂದರೆ ಪ್ರಭಲ ನಷ್ಟಯೋಗವಾಗುತ್ತದೆ. ~~~~~~~~~~~~~ ಜ್ಯೇಷ್ಠಾ ನಕ್ಷತ್ರದವರು ತಮಗೆ ತೀವ್ರವಾದ ಕಷ್ಟಗಳು ಬಂದೊದಗಿದೆ ಎಂದು ಅನಿಸಿದರೆ ಶುಕ್ಲ ಪಕ್ಷದ ಮಂಗಳವಾರಗಳಲ್ಲಿ ದುರ್ಗಾದೇವಿಯನ್ನು ಷೋಡಶೋಪಚಾರಗಳಿಂದ ಪೂಜಿಸಿ , ಪಾರಾಯಣ ಮಾಡಿ , ಅನ್ನದಾನ ಮಾಡತಕ್ಕದ್ದು.

Sunday, 29 September 2019

ನೀಲಸರಸ್ವತಿ ಮಂತ್ರ: ತ್ರಿಪುರ ಸುಂದರಿ ಮೂಲ ಮಂತ್ರ:

ನೀಲಸರಸ್ವತಿ ಮಂತ್ರ: !!!ಓಂ ಕ್ರೀಂ ಶ್ರೀಂ ಹುಂ ಫಟ್!!! ನೀಲಸರಸ್ವತಿ ಸ್ತೋತ್ರ: ಘೋರರೂಪೇ ಮಹಾರವೇ ಸರ್ವ ಶತೃಭಯಂಕರಿ ಭಕ್ತೇಭ್ಯೋವರದೇ ದೇವಿ ತಾರಾಹೀಮಾಂ ಶರಣಾಗತಂ ಸುರಾಸುರಚರಿತೇ ದೇವಿ ಸಿದ್ದಗಂದರ್ವ ಸೇವಿತೇ ಜಾಡ್ಯಾಪಹರೇ ದೇವಿ ತಾರಾಹೀಮಾಂ ಶರಣಾಗತಂ ಜಟಾಜೂಟಸಂಯುಕ್ತೇ ಮೋಹ ಜಿಹ್ವಾಂತಕಾರಿಣಿ ದೃತ ಬುದ್ದಿಕರೇ ದೇವಿ ತಾರಾಹೀಮಾಂ ಶರಣಾಗತಂ ಸೌಮ್ಯ ಕ್ರೋದಧರೇ ರೂಪೇ ಚಂಡಮುಂಡ ನಮೋಸ್ತುತೇ ಸೃಷ್ಟಿರೂಪೇ ನಮಸ್ತುಭ್ಯಂ ತಾರಾಹೀಮಾಂ ಶರಣಾಗತಂ ಜಡಾನಾಂ ಜಡತಾಂಹಂತಿ ಭಕ್ತನಾಂ ಭಕ್ತವತ್ಸಲ ಮೂಡಾತ್ಮ ಹರೇ ದೇವಿ ತಾರಾಹೀಮಾಂ ಶರಣಾಗತಂ ವಂ ಹ್ರೂಂ ಹ್ರೂಂ ಕಾಮ್ಯೇ ದೇವಿ ಬಲಿ ಹೋಮ ಪ್ರಿಯೇ ನಮಃ ಉಗ್ರತರೇ ನಮೋನಿತ್ಯಂ ತಾರಾಹೀಮಾಂ ಶರಣಾಗತಂ ಬುದ್ದಿ ದೇಹಿ ಯಶೋ ದೇಹಿ ಕವಿತ್ವಂ ದೇಹಿ ದೇಹಿ ಮೇ ಮೂಡತ್ವಂಚ ಹರೇ ದೇವಿ ತಾರಾಹೀಮಾಂ ಶರಣಾಗತಂ ಇಂದ್ರಾದಿ ವಿಲಾಸನವಂದ ವಂದಿತೇ ಶರಣಾಮಯಿ ತಾರೇ ತಾರವೇ ನಾದಸ್ಯೇ ತಾರಾಹೀಮಾಂ ಶರಣಾಗತಂ ಇದಂ ಸ್ತೋತ್ರಂ ಪಠೇತ್ ಯಶಸ್ತು ಸತತಂ ಶ್ರದ್ದಾಯೋನ್ವಿತ ತಸ್ಯಾ ಶತೃಕ್ಷಯಂ ಯತಿ ಮಹಾಪ್ರಜ್ಞಾಪ್ರಜಾಯತೇ ಮಂತ್ರ ಸಾಧನೆಯ ಸಲಹೆ: ದಿಕ್ಕು:ಪೂರ್ವ/ಉತ್ತರ/ಈಶಾನ್ಯ ವಾರ:ಬುಧವಾರ/ಗುರುವಾರ/ಹುಣ್ಣಿಮೆ/ಗ್ರಹಣಕಾಲ.ನವರಾತ್ರಿ ಸಮಯ ಮೂಲ ನಕ್ಷತ್ರ ಇರುವ ದಿನ.ವಸಂತ ಪಂಚಮಿ. ಸಮಯ:ಬೆಳಗ್ಗೆ ೬.೦೦ರಿಂದ೭.೦೦ ಬುಧಹೋರದಲ್ಲಿ ಶುಕ್ಲಪಕ್ಷದಲ್ಲಿ. ಜಪಮಣಿ:ಸ್ಪಟಿಕಮಣಿ ಮಾಲೆ,ಮುತ್ತಿನ ಮಣಿ ಮಾಲೆ,ಕಮಲ ಮಾಲೆ, ವಸ್ತ್ರ:ಬಿಳಿ ವಸ್ತ್ರ ಹೂವು: ಮಲ್ಲಿಗೆ,ಸಂಪಿಗೆ,ಗುಲಾಬಿ ನೈವೇದ್ಯ:ಸಿಹಿಪೊಂಗಲ್,ಹಾಲಿನ ಪಾಯಸ,ಗಿಣ್ಣು,ಕಲ್ಲುಸಕ್ಕರೆ. ಜಪಸಂಖ್ಯೆ:೯,೧೮,೪೫,೧೦೮(ಸಿದ್ದಿಗಾಗಿ೧೦೦೮ ಸಲ ೪೮ ದಿನಗಳಕಾಲ ಜಪ ಅಗತ್ಯ) ಸಿದ್ದಿಗಾಗಿ ಮಂತ್ರ ಜಪ ಅನುಷ್ಟಾನ: ಶುಭವಾರ,ಸಮಯ ಇತ್ಯಾದಿ ನೋಡಿಕೊಂಡು ಮೇಲೆ ತಿಳಿಸಿರುವಂತೆ ಸರಸ್ವತಿ ಬಾವಚಿತ್ರ/ಯಂತ್ರ ಮಾಡಿಕೊಂಡು ಅವುಗಳನ್ನು ಪ್ರತಿಸ್ಠಾಪಿಸಿ ಪೂಜೆಮಾಡಿ ಮಂತ್ರವನ್ನು ಜಪಿಸಿ ಸಿದ್ದಿಮಾಡಿಕೊಳ್ಳಬೇಕು. ಸೂಚನೆ:(ಸ್ತ್ರೀಯರು ಮಾಸಿಕ ಋತು ಸ್ರಾವದಲ್ಲಿ ಈ ಮಂತ್ರ ಜಪವನ್ನು ಮಾಡಬಾರದು) ತ್ರಿಪುರ ಸುಂದರಿ ಮೂಲ ಮಂತ್ರ: !!!ಓಂ ಐಂ ಕ್ಲೀಂ ಸೌ ಕ್ಲೀಂ ಐಂ ಐಂ ಕ್ಲೀಂ ಸೌ!!! ತ್ರಿಪುರಸುಂದರಿ ಮಹಾ ಮಂತ್ರ: ಹೌಂ ಐಂ ಹ್ರೀಂ ಶ್ರೀಂ ಐಂ ಕ್ಲೀಂ ಸೌಂ ಕ್ಲೀಂ ಐಂ ಹೌಂ ನಮೋ ಭಗವತಿ ತ್ರಿಪುರಸುಂದರಿ ದೇವೀ ಮಮ ವಶಂ ಕುರು ಕುರು ಸ್ವಾಹಾ!!! ಈ ಮಂತ್ರವನ್ನು ಮಂಗಳವಾರ/ಶುಕ್ರವಾರ/ಅಷ್ಟಮಿ/ನವಮಿ/ಹುಣ್ಣಿಮೆ ಇರುವಾಗ ಚಂದ್ರಹೋರಾದಲ್ಲಿ ೯,೪೫,೧೦೮ ಸಲ ಪೂರ್ವ/ಈಶಾನ್ಯ ದಿಕ್ಕಿಗೆ ಮುಖಮಾಡಿಕೊಂಡು ಜಪಿಸಬೇಕು ನೈವೇದ್ಯಕ್ಕೆ ಗಿಣ್ಣು/ಕಲ್ಲಿಸಕ್ಕರೆಹಾಲು,ಸಿಹಿಪೊಂಗಲ್ ಮಾಡಬೇಕು.ಮಲ್ಲಿಗೆ ಸಂಪಿಗೆ,ಗುಲಾಬಿ,ಲಿಲ್ಲಿ, ಬಳಾಸಬೇಕು ಮಾಲೆ:ಸ್ಪಟಿಕ ಮಾಲೆ ರೋಸರಿ ಬೀಜದ ಮಾಲೆ ಉಪಯೋಗಿಸಬೇಕು.

ಶ್ರೀ ಸರಸ್ವತಿ ಸ್ತ್ರೋತ್ರ(ಅಗಸ್ತ್ಯಮುನಿ ವಿರಚಿತ)

ಶ್ರೀ ಸರಸ್ವತಿ ಸ್ತ್ರೋತ್ರ(ಅಗಸ್ತ್ಯಮುನಿ ವಿರಚಿತ) ಯಾ ಕುಂದೇಂದು ತುಷಾರಹಾರಧವಲಾ ಯಾ ಶುಭ್ರವಸ್ತ್ರಾವೃತಾ ಯಾ ವೀಣಾವರದಂಡಮಂದಿತಕರಾ ಯಾ ಶ್ವೇತಪದ್ಮಾಸನ| ಯಾ ಬ್ರಹ್ಮಾಚ್ಚ್ಯುತ ಶಂಕರಪ್ರಭೃತಿಭಿರ್ದೇವೈಸ್ಸದಾ ಪೂಜಿತಾ ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಯೇಷಜಾಡ್ಯಾಪಹಾ||೧|| ದೋರ್ಭಿರ್ಯುಕಾ ಚತುರ್ಬಿಂ ಸ್ಪಟಿಕಮಣಿನಿಭೈ ರಕ್ಷಮಾಲಾಂದಧಾನಾ ಹಸ್ತೇನೈಕೇನ ಪದ್ಮಂ ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ| ಭಾಸಾ ಕುಂದೇಂದು ಶಂಖಸ್ಪಟಿಕಮಣಿನಿಭಾ ಭಸಮಾನಾಅಸಮಾನಾ ಸಾ ಮೇ ವಾಗ್ದೇವತೇಯಂ ನಿವಸತು ವದನೇ ಸರ್ವದಾ ಸುಪ್ರಸನ್ನಾ||೨|| ಸುರಾಸುರ ಸೇವಿತ ಪಾದ ಪ್ಂಕಜಾ ಕರೇ ವಿರಾಜತ್ಕಮುನೀಯ ಪುಸ್ತಕಾ| ವಿರಿಂಚಿ ಪತ್ನೀ ಕಮಲಾಸನಸ್ಥಿತಾ ಸರಸ್ವತೀ ನೃತ್ಯತು ವಾಚಿ ಮೇ ಸದಾ||೩|| ಸರಸ್ವತೀ ಸರಸಿಜಕೇಸರಪ್ರಭಾ ತಪಸ್ವಿನೀ ಸಿತಕಮಲಾಸನಪ್ರಿಯಾ| ಅನಸ್ತನೀ ಕಮಲವಿಲೋಲಲೋಚನಾ ಮನಸ್ವಿನೀ ಭವತು ವರಪ್ರಸಾದಿನೀ||೪|| ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ| ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ||೫|| ಸರಸ್ವತಿ ನಮಸ್ತುಭ್ಯಂ ಸರ್ವದೇವಿ ನಮೋ ನಮಃ| ಶಾಂತರೂಪೇ ಶಶಿಧರೇ ಸರ್ವಯೋಗೇ ನಮೋ ನಮಃ||೬|| ನಿತ್ಯಾನಂದೇ ನಿರಾಧಾರೇ ನಿಷ್ಕಲಾಯೈ ನಮೋ ನಮಃ| ವಿದ್ಯಾಧರೇ ವಿಶಾಲಾಕ್ಷಿ ಶುದ್ದಜ್ಞಾನೇ ನಮೋ ನಮಃ||೭|| ಶುದ್ದ ಸ್ಪಟಿಕರೂಪಾಯೈ ಸೂಕ್ಷ್ಮರೂಪೇ ನಮೋ ನಮಃ| ಶಬ್ದಬ್ರಹ್ಮಿ ಚತುರ್ಹಸ್ತೇ ಸರ್ವಸಿದ್ದಯೈ ನಮೋ ನಮಃ||೮|| ಮುಕ್ತಾಲಂಕೃತ ಸರ್ವಾಂಗ್ಯೈ ಮೂಲಾಧಾರೇ ನಮೋ ನಮಃ| ಮೂಲಮಂತ್ರ ಸ್ವರೂಪಾಯೈ ಮೂಲಶಕ್ತ್ಯೈ ನಮೋ ನಮಃ||೯|| ಮನೋನ್ಮಣಿ ಮಹಾಯೋಗೇ ವಾಗೀಶ್ವರೀ ನಮೋ ನಮಃ| ವಾಗ್ಚ್ಯೈ ವರದಹಸ್ತಾಯೈ ವರದಾಯೈ ನಮೋ ನಮಃ||೧೦|| ವೇದಾಯೈ ವೇದರೂಪಾಯೈ ವೇದಾಂತಾಯೈ ನಮೋ ನಮಃ| ಗುಣದೋಷವಿವರ್ಜಿನೈ ಗುಣದೀಪ್ತ್ಯೈ ನಮೋ ನಮಃ||೧೧|| ಸರ್ವ ಜ್ಞಾನೇ ಸದಾನಂದೇ ಸರ್ವರೂಪೇ ನಮೋ ನಮಃ| ಸಂಪನ್ನಾಯೈ ಕುಮಾರ್ಯೈಚ ಸರ್ವಜ್ಞತೇ ನಮೋ ನಮಃ||೧೨|| ಯೋಗಾನಾರ್ಯ ಉಮಾದೇವ್ಯೈ ಯೋಗಾನಂದೇ ನಮೋ ನಮಃ| ದಿವ್ಯಜ್ಞಾನ ತ್ರಿನೇತ್ರಾಯೈ ದಿವ್ಯಮೂರ್ತಯೈ ನಮೋ ನಮಃ||೧೩ ಅರ್ಧಚಂದ್ರಜಟಾಧಾರಿ ಚಂದ್ರಬಿಂಬೇ ನಮೋ ನಮಃ| ಚಂದ್ರಾದಿತ್ಯಜಟಾಧಾರಿ ಚಂದ್ರಬಿಂಬೇ ನಮೋ ನಮಃ||೧೪|| ಅಣುರೂಪೇ ಮಹಾರೂಪೇ ವಿಶ್ವರೂಪೇ ನಮೋ ನಮಃ| ಅಣಿಮಾದ್ಯಷ್ಟಸಿದ್ದಾಯೈ ಆನಂದಾಯೈ ನಮೋ ನಮಃ||೧೫|| ಜ್ಞಾನ ವಿಜ್ಞಾನ ರೂಪಾಯೈ ಜ್ಞಾನಮೂರ್ತೇ ನಮೋ ನಮಃ| ನಾನಾ ಶಾಸ್ತ್ರ ಸ್ವರೂಪಾಯೈ ನಾನಾ ರೂಪೇ ನಮೋ ನಮಃ||೧೬|| ಪದ್ಮದಾ ಪದ್ಮವಂಶಾ ಚ ಪದ್ಮರೂಪೇ ನಮೋ ನಮಃ| ಪರಮೇಷ್ಟ್ಯೈ ಪರಾಮೂರ್ತ್ಯೈ ನಮಸ್ತೇ ಪಾಪನಾಶಿನೀ||೧೭|| ಮಹಾದೇವ್ಯೈ ಮಹಾಕಾಲ್ಯೈ ಮಕಾಲಕ್ಷ್ಮೈ ನಮೋ ನಮಃ| ಬ್ರಹ್ಮವಿಷ್ಣುಶಿವಾಯೈ ಚ ಬ್ರಹ್ಮನಾರ್ಯೈ ನಮೋ ನಮಃ||೧೮|| ಕಮಲಾಕರಪುಷ್ಪ ಚ ಕಾಮರೂಪೇ ನಮೋ ನಮಃ| ಕಪಾಲಿ ಕರ್ಮದೀಪ್ತಾಯೈ ಕರ್ಮದಾಯೈ ನಮೋ ನಮಃ||೧೯|| ಸಾಯಂ ಪ್ರಾತಃ ಪಠೇನಿತ್ಯಂ ಷಾಣ್ಮಾಸಾತ್ಸಿದ್ದಿರುಚ್ಚತೇ| ಚೋರವ್ಯಾಘ್ರಭಯಂ ನಾಸ್ತಿ ಪಠತಾಂ ಶೃಣ್ವತಾಮಪಿ||೨೦|| ಇತ್ತಂ ಸರಸ್ವತೀ ಸ್ತೋತ್ರಮಗಸ್ತ್ಯಮುನಿವಾಚಕಮ್| ಸರ್ವಸಿದ್ದಿಕರಂ ನೃಣಾಂ ಸರ್ಪಪಾಪಪ್ರಣಾಶನಮ್||೨೧|| ||ಇತಿ ಅಗಸ್ತ್ಯಮುನಿ ಪ್ರೋಕ್ತಂ ಸರಸ್ವತೀಸ್ತೋತ್ರಂ ಸಂಪೂರ್ಣಂ||

ವಿಹಾಹಯೋಗ

ವಿಹಾಹಯೋಗ *ಜಾತಕದಲ್ಲಿ ಲಗ್ನ,ಚಂದ್ರ,ಕಳತ್ರಕಾರಕನಾದ ಶುಕ್ರ ಪ್ರಬಲವಾಗಿದ್ದರೆ ಒಳ್ಳೆಯ ವಿವಾಹಯೋಗವನ್ನು ಹೇಳಬಹುದು. *ವಿವಾಹಯೋಗವನ್ನು ನೋಡುವಾಗ ಪ್ರಮುಖವಾಗಿ ವಿವಾಹಸ್ಥಾನಗಳಾದ೧,೨,೪,೭,೮,೧೨ನೇ ಭಾವಗಳನ್ನು ಲಗ್ನ,ಚಂದ್ರ ಮತ್ತು ಶುಕ್ರರಿಂದ ನಿರ್ಣಯಿಸಬೇಕು. ೧.ಲಗ್ನಭಾವ:- ಜಾತಕನ ಗುಣ,ಆತನ ಸುಖವನ್ನು ಸೂಚಿಸುತ್ತದೆ. ೨.ಕುಟುಂಬ ಭಾವ: ಜಾತಕನ ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ. ೪.ಸುಖಭಾವ:- ಜಾತಕನ ವೈವಾಹಿಕ ಸುಖವನ್ನು ಸೂಚಿಸುತ್ತದೆ. ೭.ಕಳತ್ರಭಾವ:- ಜಾತಕನ ಸಂಗಾತಿಯ ಗುಣ,ಅವರಿಂದ ಜಾತಕನಿಗೆ ಸಿಗುವ ಸುಖ,ದುಃಖಗಳನ್ನು ಸೂಚಿಸುತ್ತದೆ. ೮.ಮಾಂಗಲ್ಯ ಭಾವ:- ಜಾತಕನ ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ. ೧೨.ಶಯನ ಸುಖ:- ಜಾತಕನಿಗೆ ತನ್ನ ಸತಿಯಿಂದ ದೊರೆಯ ಬಹುದಾದ ಶಯನಸುಖವನ್ನು,ಪರಸ್ಪರರಲ್ಲಿ ಪ್ರೀತಿಯನ್ನು ಸೂಚಿಸುತ್ತದೆ. ಈ ಎಲ್ಲಾ ಭಾವಗಳಲ್ಲಿ ಶುಭಗ್ರಹಗಳು ಸ್ಥಿತವಾಗಿದ್ದಾಗ ಉತ್ತಮವೈವಾಹಿಕ ಜೀವನ ಉಂಟಾಗುತ್ತದೆ.ಅಶುಭ,ಪೀಡಿತ,ಅಸ್ತ,ನೀಚ,ಗ್ರಹಗಳೇನಾದರು ಸ್ಥಿತವಾಗಿದ್ದರೆ ಆಯಾಗ್ರಹಗಳ ಪ್ರಭಾವಕ್ಕನುಗುಣವಾಗಿ ಜಾತಕನ ಜೀವನದಲ್ಲಿ ಏರಿಳಿತಗಳು(ಕಷ್ಟ,ಸುಖಗಳು)ಇರುತ್ತವೆ. *ವಿವಾಹ ಜೀವನಕ್ಕೆ ಶುಭಗ್ರಹಗಳು-ಚಂದ್ರ,ಶುಕ್ರ,ಗುರು *ವೈವಾಹಿಕ ಜೀವನಕ್ಕೆ ಅಶುಭಗ್ರಹಗಳು:-ರವಿ,ರಾಹು ಶನಿ *ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಗ್ರಹಗಳು:-ಕುಜ,ಕೇತು,ಬುಧ.(ಈಗ್ರಹಗಳು ಶುಭಗ್ರಹಗಳ ಸಂಪರ್ಕ ವಿದ್ದರೆ ಶುಭ,ಅಶುಭಗ್ರಹಗಳ ಸಂಪರ್ಕ ವಾದರೆ ಅಶುಭ) *ವಿವಾಹ ವಾಗಲು:-ಸಪ್ತಮಮತ್ತು ಲಾಭ ಸ್ತ ಹಾಗು ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತಾರೆ ಹಾಗು ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು. *ಯಾವುದೇಜಾತಕದಲ್ಲಿ೨.೭.೧೧ನೇ ಭಾವಾದಿಪತಿಗಳು ಬಲಿಷ್ಟರಾಗಿ ವಿವಾಹ ಸೂಚಕಗ್ರಹಗಳಾದ ಶುಕ್ರ,ಗುರು,ಚಂದ್ರರು ಬಲಿಷ್ಟರಾಗಿದ್ದರೆ ಉತ್ತಮ ವಿವಾಹಯೋಗ.ಜಾತಕದಲ್ಲಿಸಪ್ತಮಾಧಿಪತಿಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭವಿವಾಹ ಯೋಗ ಕಳತ್ರಕಾರಕನಾದ ಶುಕ್ರನು ಶುಭನು ಗುರುದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗೌಂಟಾಗುತ್ತದೆ. *ಪುರುಷರ ಜಾತಕದಲ್ಲಿ ಚಂದ್ರ೨ಅಥವ೪ನೇ ಸ್ಥಾನದಲ್ಲಿದ್ದರೆವಿವಾಹ ವಿಳಂಭ(ತಡ,ಆಲಸ್ಯ ವಿವಾಹ)ಉಂಟಾಗುತ್ತದೆ, *ಸ್ತ್ರೀಯರ ಜಾತಕದಲ್ಲಿ ರವಿಯು೨ಅಥವ೪ರಲ್ಲಿದ್ದರೆ ಆಲಸ್ಯ ವಿವಾಹ(ವಿಳಂಬ,ತಡ)ಉಂಟಾಗುತ್ತದೆ.ಮೇಷ,ಸಿಂಹ,ಕನ್ಯ,ದನಸ್ಸು,ಮಕರ ಲಗ್ನದಲ್ಲಿ ಶುಕ್ರನಿದ್ದರೆ(ಸ್ತ್ರೀ/ಪುರುಷರ ಜಾತಕಗಳೆರಡರಲ್ಲೂ)ಆಲಸ್ಯ ವಿವಾಹಯೋಗ ಉಂಟಾಗುತ್ತದೆ.

Friday, 30 August 2019

ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು?

ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ. ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ. ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ. 1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ ಮತ್ತು ಮಕರ ಇದು ಸ್ಥಿರ ರಾಶಿ. ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಯೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ ಇಲ್ಲವೇ ಮೇಷ, ಕರ್ಕಾಟಕ, ತುಲಾ ಮತ್ತು ಧನು ಈ ಚರ ರಾಶಿಯಲ್ಲಿ ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದರೆ ಆ ಗ್ರಹಗಳ ದೆಸೆಯಲ್ಲಿ ಜಾತಕನಿಗೆ ಬಹಳ ಸಂಪತ್ತು ಬರುತ್ತದೆ. ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿ ಇದ್ದರೆ ಒಳ್ಳೆಯ ಫಲವು ಸಿಗುವುದಿಲ್ಲ. ರಾಹು ಕೇತುಗಳು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಕೇತುಗಳು ಮೇಷ, ವಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕರು ಬಹಳ ಹಣವಂತರಾಗುತ್ತಾರೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ. ತತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿಶನಿ ಇದ್ದರೆ ಜಾತಕನು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತದೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು ಸರಕಾರದ ದಂಡಕ್ಕೆ ಗುರಿಯಾಗುತ್ತಾರೆ. -Sangraha (FB)

ಸಾಡೇಸಾತಿ

ಸಾಡೇಸಾತಿ(ಏಳುವರೆ ವರ್ಷ ಶನಿ ಕಾಟ(ಜನ್ಮ ರಾಶಿಯಿಂದ ಗೋಚಾರದಲ್ಲಿ(೧,೨,೧೨,ಈ ಮನೆಗಳಲ್ಲಿ ಸಂಚರಿಸುವುದನ್ನು ಸಾಡೇಸಾತಿ ಎನ್ನುತ್ತಾರೆ) ಚಂದ್ರನಿಂದ 12, 1 ಮತ್ತು 2 ನೇ ಮನೆಯಲ್ಲಿ ಶನಿ, ಇದರೆ ಇದನ್ನುಸಡೆ ಸಾತಿ ಎಂದು ಕರೆಯುತ್ತಾರೆ ಇದು ಏಳೂವರೆ ವರ್ಷಗಳು ಇರುತ್ತದೆ. ಚಂದ್ರನಿಂದ 8 ನೇ ಮನೆಯಲ್ಲಿ ಶನಿ ಇದರೆ ಅಷ್ಟಮ ಶನಿ ಎಂದು ಕರೆಯುತ್ತಾರೆ. ಅರ್ಹ ಅಷ್ಟಮ ಶನಿ ಎಂಬ 4 ನೇ ಮನೆಯಲ್ಲಿ ಇದರೆ ಶನಿ. ಶನಿವಾರದಂದು ಹನುಮಾನ್ ಚಾಲಿಸಾ ಓದುವುದು ಗ್ರಹದ ದುಷ್ಪರಿಣಾಮಗಳಿಂದ ಪಾರಾಗಲು ಸಹಾಯ ಮಾಡುತ್ತದೆ. ಜೀರಿಗೆಯೊಂದಿಗೆ ಮೊಸರು ಅನ್ನ ಮಾಡಿ ಮತ್ತು ಶನಿವಾರದಂದು ದೇವಾಲಯವೊಂದರಲ್ಲಿ ಶನಿಗ್ರಹಕ್ಕೆ ಅರ್ಪಿಸಿ ನಂತರ ಕಾಗೆಗಳಿಗೆ ಆಹಾರವನ್ನು ನೀಡಿ. ಶನಿವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕೇವಲ ದ್ರವಗಳೊಂದಿಗೆ ಉಪವಾಸ ಮಾಡುವುದು ಅವನನ್ನು ಹೆಚ್ಚು ಮೆಚ್ಚಿಸುತ್ತದೆ. ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಿ ಅಥವಾ ಶನಿವಾರದಂದು ಶನಿ ಗ್ರಹಕ್ಕೆ ತೀಲ್ ಎಣ್ಣೆ ದೀಪವನ್ನು ಬೆಳಗಿಸಿ. ಅಂಗವಿಕಲರಿಗೆ ಶನಿವಾರದಂದು ಆಹಾರ ನೀಡುವುದರಿಂದ ಶನಿಯು ಹೆಚ್ಚು ಸಂತೋಷವಾಗುತ್ತದೆ. ಶನಿವಾರ ಬೆಳಿಗ್ಗೆ ಪೀಪಲ್ ಮರದ(ಅರಳಿ ಮರದ) ಕೆಳಗೆ (ಎಳ್ಳೇಣ್ಣೆಯ)ತೀಲ್ ಎಣ್ಣೆ ದೀಪವನ್ನು ಅರ್ಪಿಸಿ ಮತ್ತು ಶನಿ ಸ್ತೂತಿ ಪಠಿಸಿ: -Sangraha (FB)

ಸರ್ಪದೋಷಗಳಲ್ಲಿ ಎಷ್ಟು ವಿಧವಾದ ಸರ್ಪದೋಷಗಳಿವೆ ?

1) 3ನೆ ಮನೆಯಲ್ಲಿ ರಾಹು 9ನೆ ಮನೆಯಲ್ಲಿ ಕೇತು ಇದ್ರೆ ವಾಸುಕಿ ಕಾಲ ಸರ್ಪ ಯೋಗ ಬರುತ್ತದೆ. 2) ರಾಹು 1ನೆ ಮನೆಯಲ್ಲಿದ್ದು ಕೇತು 7ನೆ ಮನೆಯಲ್ಲಿದ್ರೆ ಅನಂತ ಕಾಳ ಸರ್ಪ ಯೋಗ ಬರುತ್ತದೆ. 3) ರಾಹು 2ನೆ ಮನೆಯಲ್ಲಿದ್ದು ಕೇತು 8ನೆ ಮನೆಯಲ್ಲಿದ್ರೆ ಕುಳಿಕ ಕಾಳ ಸರ್ಪ ಯೋಗ ಬರುತ್ತದೆ. 4)4ನೆ ಮನೆಯಲ್ಲಿ ರಾಹು 10ನೆ ಮನೆಯಲ್ಲಿ ಕೇತು ಇದ್ದಾಗ ಶಂಖ ಫಲ ಕಾಳ ಸರ್ಪ ಯೋಗ ಬರುತ್ತದೆ. 5) 5ನೆ ಮನೆಯಲ್ಲಿ ರಾಹು 11ನೆ ಮನೆಯಲ್ಲಿ ಕೇತು ಇದ್ದಾಗ ಪದ್ಮಕಾಳ ಸರ್ಪ ಯೋಗ ಬರುತ್ತದೆ. 6) 6ನೆ ಮನೆಯಲ್ಲಿ ರಾಹು 12 ನೆ ಮನೆಯಲ್ಲಿ ಕೇತು ಇದ್ದಾಗ ಮಹಾ ಪದ್ಮ ಕಾಳ ಸರ್ಪ ಯೋಗ ಬರುತ್ತದೆ. 7)ರಾಹು 7ನೆ ಮನೆಯಲ್ಲಿ ಕೇತು 1ನೆ ಮನೆಯಲ್ಲಿ ಇದ್ರೆ ತಕ್ಷಕ ಕಾಳ ಸರ್ಪ ಯೋಗ ಬರುತ್ತದೆ. 8) 8ನೆ ಮನೆಯಲ್ಲಿ ರಾಹು 2ನೆ ಮನೆಯಲ್ಲಿ ಕೇತು ಇದ್ರೆ ಕಾರ್ಕೋಟಕ ಕಾಳ ಸರ್ಪ ಯೋಗ ಬರುತ್ತದೆ. 9)9ನೆ ಮನೆಯಲ್ಲಿ ರಾಹು 3ನೆ ಮನೆಯಲ್ಲಿ ಕೇತು ಇದ್ರೆ ಶಂಖ ಚೂಡ ಕಾಳ ಸರ್ಪ ದೋಷ ಬರುತ್ತದೆ. 10)ಯೋಗರಾಹು ಹತ್ತನೇ ಮನೆಯಲ್ಲಿ ಕೇತು ನಾಲ್ಕನೇ ಮನೆಯಲ್ಲಿ ಇದ್ರೆ ಘಾತಕ ಅಥವಾ ಪಾತಕ ಕಾಳ ಸರ್ಪ ಯೋಗ ಬರುತ್ತದೆ. ರಾಹು ಮತ್ತು ಕೇತು ಗ್ರಹಗಳ ಮಧ್ಯೆ ಮಿಕ್ಕ 7 ಗ್ರಹಗಳಿದ್ದರೆ 11) ರಾಹು 11ನೆ ಮನೆ ಯಲ್ಲಿದ್ದು ಕೇತು 5ನೆ ಮನೆಯಲ್ಲಿ ಇದ್ರೆ ವಿಷ ಧರ ಕಾಳ ಸರ್ಪ ಯೋಗ ಬರುತ್ತದೆ. 12) ರಾಹು 12ನೆ ಮನೆಯಲ್ಲಿ ಇದ್ಧು ಕೇತು 6ನೆ ಮನೆಯಲ್ಲಿ ಇದ್ರೆ ಶೇಷ ನಾಗ ಕಾಳ ಸರ್ಪ ಯೋಗ ಬರುತ್ತದೆ. ಜೀವನಾವಧಿಯ 42ವರ್ಷಧ ವರೆಗೂ ಕಾಳಸರ್ಪ ಯೋಗವು ತೊಂದರೆ ನೀಡುತ್ತದೆ. ತಿಳಿದಿರುವ ಪ್ರಕಾರ .....ಕೇತು (ಬಾಲ) ವಿನಿಂದ ರಾಹು ಮಧ್ಯೆ ಎಲ್ಲಾ ಗ್ರಹಗಳು ಸೇರಿದಾಗ..ಇದು ಕಾಳಸರ್ಪ ಯೋಗ...ಎನ್ನುತ್ತಾರೆ.. ರಾಹು (ಬಾಯಿಂದ) ವಿನಿಂದ. ಕೇತು (ಬಾಲ ) ....ವಿನೊಳಗೆ ಎಲ್ಲಾ ಗ್ರಹಗಳು ಬಂದರೆ ಇದು ಕಾಳ ಸರ್ಪ ದೋಷ ಎನ್ನುತ್ತಾರೆ.... -Sangraha (FB)

ಗ್ರಹ ಎ೦ದರೇನು ? ಸೂರ್ಯ ಚಂದ್ರಾದಿ ನವಗ್ರಹಗಳ ಕಾರಕತ್ವದ ವಿವರಗಳು -ಕೃಪೆ ಅಂತರಜಾಲ ತಾಣ

ಗ್ರಹ ಎ೦ದರೇನು ? ಗ್ರಹ ಎ೦ಬುದು ಸಂಸ್ಕೃತದಲ್ಲಿ ಐದಾರು ಅರ್ಥಗಳುಳ್ಳ ಶಬ್ದ. “ಗ್ರಹ ಬಡಿದವನಂತೆ” ನಿಂತ ಅನ್ನುತ್ತೇವೆ. ಇಲ್ಲಿ ಗ್ರಹ ಎ೦ದರೆ ಭೂತ, ಪಿಶಾಚಿ ಎ೦ದರ್ಥ. ಶಕ್ತಿಗ್ರಹ, ಪಾಣಿಗ್ರಹ, ನೀಚಗ್ರಹ ಎ೦ಬಲ್ಲೆಲ್ಲಾ ಗ್ರಹ ಶಬ್ದವು ಬೇರೆ ಬೇರೆ ಅರ್ಥವನ್ನು ಹೇಳುತ್ತದೆ. “ನನಗೆ ಯಾಕೆ ಬೇಕಿತ್ತು ? ನನ್ನ ಗ್ರಹಚಾರ ಮಾರಾಯ” ಎನ್ನುತ್ತಾರೆ ಉಡುಪರು. ಗ್ರಹಗತಿ ಸರಿಯಿತ್ತು, ಅಪಘಾತದಿಂದ ಪಾರಾದೆ. ಅನ್ನುತ್ತಾರೆ ಕಲ್ಬುರ್ಗಿಯವರು. ಗ್ರಹಾನುಕೂಲಕ್ಕಾಗಿ ಗ್ರಹಯಜ್ಞವನ್ನು ಮಾಡಿ ಎನ್ನುತ್ತಾರೆ ಪುರೋಹಿತರು. ಇಲ್ಲಿ ಗ್ರಹವೆಂದರೆ ಆದಿತ್ಯಾದಿ ನವಗ್ರಹಗಳು. ಗ್ರಹಣ ಎ೦ದರೆ ಹಿಡಿಯುವುದು ಎ೦ದರ್ಥ. ಯಾವುದು ಹಿದಿಯುವವು? ಅವು ಗ್ರಹಗಳು (ಗೃಹ್ಣಂತಿ ಇತಿ ಗ್ರಹಾಃ) ಸೂರ್ಯಚಂದ್ರರನ್ನು ಹಿಡಿಯುವ ರಾಹು ಕೇತುಗಳಷ್ಟೇ ಗ್ರಹರಲ್ಲ. ಆಯಾಯ ದಶಾಕಾಲದಲ್ಲಿ ನಮ್ಮನ್ನೆಲ್ಲ ಹಿಡಿಯುವ ಆದಿತ್ಯಾದಿಗಳೂ ಗ್ರಹರೇ. ಈ ಗ್ರಹಗಳು ಸಕಲ ಪ್ರಾಣಿ ಜಾತದ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತಿದ್ದು ತಮ್ಮ ಪ್ರಭಾವವನ್ನು ಬೀರುತ್ತವೆ. ಪರಮೋತ್ಕರ್ಷವನ್ನು ಹೊಂದಿ ಗದ್ದುಗೆಯನ್ನು ಏರುವುದಕ್ಕೂ,ನೆಲಕಚ್ಚಿ ಪ್ರಪಾತಕ್ಕೆ ಬೀಳುವುದಕ್ಕೂ ಗ್ರಹದ ಸ್ಥಿತಿಗತಿಗಳು ಕಾರಣವಾಗುತ್ತವೆ. ಕಾರಿಕೆಯೊಂದು ಹೀಗೆ ಹೇಳುತ್ತದೆ. ಗ್ರಹಾ ಗಾವೋ ನರೇಂದ್ರಶ್ಚ ಬ್ರಾಹ್ಮಣಶ್ಚ ವಿಶೇಷತಃ | ಪೂಜಿತಾಃಪೂಜಯಿಷ್ಯಂತಿ ನಿರ್ದಹಂತ್ಯನಮಾನಿತಾ || ಗ್ರಹಗಳು ಗೋವುಗಳು ರಾಜ ಮತ್ತು ಬ್ರಾಹ್ಮಣರು ಈ ನಾಲ್ವರು ಪೂಜಿತರಾದರೆ ಸದಭೀಷ್ಟ ಪ್ರದರು, ಅವಮಾನಿತವಾದರೆ ಸರ್ವನಾಶಕರು ಎ೦ದೂ ಜ್ಯೋತಿಶ್ಶಾಸ್ತ್ರ ಒಂಬತ್ತು ಗ್ರಹಗಳನ್ನು ಹೆಸರಿಸುತ್ತದೆ. ಸೂರ್ಯ, ಚಂದ್ರ, ಕುಜ, ಬುಧ, ಗುರು ಶುಕ್ರ, ಶನಿ, ರಾಹು, ಕೇತುಗಳೇ ಈ ನವಗ್ರಹರು. ರವಿ :- · ರವಿಯು ಸಿಂಹ ರಾಶಿಯ ಅಧಿಪತಿ · ಇದು ಅಗ್ನಿ ತತ್ವದ ಗ್ರಹ. · ಪುರುಷ ಗ್ರಹ. · ಸರ್ಕಾರಿ ನೌಕರಿಯಲ್ಲಿ ಇರುವವರು. · ಅಧಿಕಾರವನ್ನ ನಡೆಸುವವರು. · ದರ್ಪದಿಂದ ಸದಾ ಇರುವವರು. · ಅಹಂಕಾರದಿಂದ ಮೆರೆಯುವವರು. · ಆಡಳಿತ (ಇವರು ಆಡಳಿತವನ್ನ ಚೆನ್ನಾಗಿ ಮಾಡುತ್ತಾರೆ.) · ನಾಯಕತ್ವವನ್ನ ಬಯಸುವವರು. · ಒಂಟಿಯಾಗಿ ಕುಳಿತು ಯೋಚನೆಯನ್ನ ಮಾಡುವವರು · ನ್ಯಾಯ ತೀರ್ಮಾನವನ್ನ ಮಾಡುವವರು. · ಗುಂಡಾದ ಮುಖವಿರುವವರು · ಇಅವ್ರುಗಳ ಮುಖ, ಅಸ್ಟೊಂದು ಆಕರ್ಷಣೆ ಇರೋದಿಲ್ಲ(ಕಾರಣ ಸಿಂಹದ ಮುಖವೇ ಹಾಗೆ). · ಉಗ್ರ ಮನಸ್ಸಿರುವವರು. · ಬಹಳ ಕೋಪಿಸ್ಟರು · ಕಠಿಣ ಹೃದಯ ಇರುವವರು. · ಶಿಕ್ಷೆಯನ್ನ ಕೊಡುವವರು.ಕಾರಣ ಇದು ರಾಜನ ರಾಶಿ. · ಹೆಚ್ಚಿಗೆ ಕ್ಷಮಾಯಾಚನೆ ಇರೋಲ್ಲ ಇವರಲ್ಲಿ. · ಗಂಭೀರ ನಡಿಗೆ ಉಳ್ಳವರು. · ಒಳ್ಳೇ ಶ್ರೀಮಂತ ಗ್ರಹ · ಸದಾ ಗೆಲ್ಲುವ ಹಂಬಲ · ಇವರಿಗೆ ವಾಹನ ಸುಖವಿರುತ್ತದೆ. · ಯಾವಾಗಲೂ ಡೋಮಿನೇಷನ್ ನೇಚರ್ ಇರುವವರು. · ಮುಖ್ಯ ಮಂತ್ರಿ, ಮಂತ್ರಿ, ಎಮ್.ಎಲ್.ಏ ಎಲ್ಲಾ ಸಿಂಹ ರಾಶಿಯವರು. · ರವಿಯನ್ನ ಕ್ರೂರ ಗ್ರಹವೆಂದೂ ಕರೆಯುತ್ತಾರೆ. · ರವಿಯು ಜ್ನಾನವಂತ ಗ್ರಹ. ಆದರೆ ವಿದ್ಯಾವಂತ ಗ್ರಹವಲ್ಲ. · ರವಿಯ ಸಂಖೆ ೧. · ಪಿತೃ ಕಾರಕ. · ಉಚ್ಚ ಸ್ಥಾನ ಮೇಷ ರಾಶಿ · ಉಚ್ಚಾಂಶ ೧೦ * · ಮೂಲ ತ್ರಿಕೋಣ ಸಿಂಹ ರಾಶಿ · ದಶಾ ಅವಧಿ ೬ ವರುಷ. · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು. · ಧಾನ್ಯ ಗೋಧಿ. · ದಿಕ್ಕು ಪೂರ್ವ · ಕಾರಕ ಪಿತ್ಥ · ನೀಚ ಸ್ಥಾನ ತುಲಾ ರಾಶಿ · ರವಿಯು ಮೂಳೆಯ ಕಾರಕ. · ಇಂದ್ರಿಯ :- ಕಣ್ಣು. · ಗೃಹ ಮಿತ್ರ :-ಚಂದ್ರ, ಕುಜ,ಗುರು, ಕೇತು. · ಶತ್ರು :- ಶನಿ,ಶುಕ್ರ, ರಾಹು. · ಸಮ ಗ್ರಹ :- ಬುಧ · ರವಿಯ ರತ್ನ ಮಾಣಿಕ್ಯ · ರವಿಯ ಬಣ್ಣ ಕೆಂಪು ಮತ್ತು ಗುಲಾಬಿ. · ಪೀತಾಂಬರ ಇವರ ಮೆಟಲ್. ಚಂದ್ರ :- · ಕಟಕ ರಾಶಿಯ ಅಧಿಪತಿ. · ಜಲತತ್ವದ ಗ್ರಹ. · ಶಾಂತ ಸ್ವಭಾವದ ಗ್ರಹ. · ಸುಂದರ ಕಣ್ಣುಗಳು ಇರುವವರು. · ಕರುಣೆ ಇರುವವರು. · ಸ್ತ್ರೀ ಗ್ರಹ. · ಸಭ್ಯತೆ ಜಾಸ್ತಿ. · ಮಾತೃ ಹೃದಯ ಇರುವವರು. · ಚಂದ್ರನೂ ಸೂರ್ಯನಂತೆ ಅಧಿಕಾರ ಗ್ರಹ. · ಇವರು ದಕ್ಷ ಆಡಳಿತಕಾರರು. · ಆದರೆ ಇವರು ಹೊಂದಾಣಿಕೆಯನ್ನ ಮಾಡುವಂತಹವರು. ಕಾರಣ ಶಾಂತತೆಯೇ ಪ್ರಾಧಾನ್ಯ ಇವರಿಗೆ. · ಕಠಿಣ ಹೃದಯ ಇರುವವರು. ( ಯಾಕೆಂದರೆ ತಾಯಿ ಮಕ್ಕಳನ್ನ ಹೊಡೆಯುತ್ತಿರುತ್ತಾರೆ) · ಪರರಿಗೆ ಉಪಕಾರವನ್ನ ಮಾಡುವರು. · ಜನರಿಗೆ ಸಹಾಯವನ್ನ ಮಾಡುವವರು. · ಶ್ರೀಮಂತ, ಜ್ನಾನವಂತ, ಹಾಗೂ ವಿದ್ಯಾವಂತ ಗ್ರಹ. · ಓದದೇನೇ ಜ್ನಾನವನ್ನ ಪಡೆಯುವವರೆಂದರೆ, ಇವರುಗಳು. ಎಲ್ಲಾ ವಿಷಯಗಳಲ್ಲಿ ಒಳ್ಳೇ ಮಾಹಿರತೆ ಉಂಟು. · ಒಳ್ಳೇ ಜ್ಯೋತಿಷ್ಯಗಾರನಿಗೆ ಚಂದ್ರನು ಒಳ್ಳೆಯವನಾಗಿರಬೇಕು. · ಚಂದ್ರನು ಕ್ಷಮಾದಾಯಕ ಗ್ರಹ. · ಇವರುಗಳು ಆಭರಣ ಪ್ರಿಯರು. · ವಿವಿಧ ವಸ್ತುಗಳ ಪ್ರಿಯರು. · ವೈಭವ ಜೀವನವನ್ನ ನಡೆಸುವವರು. · ಇವರಿಗೆ ವಾಹನ ಸುಖವಿರುತ್ತದೆ. · ಆದರೆ ಇಲ್ಲಿ ಸೇವಕರು ಡ್ರೈವ್ ಮಾಡಲು ಇರುತ್ತಾರೆ. ಇವರುಗಳು ಸಾಮಾನ್ಯವಾಗಿ ಮಾಡೋಲ್ಲ. · ಇಲ್ಲಿ ಹೆಚ್ಚಿಗೆ ಸ್ವತಂತ್ರ ಮನೋಭಾವನೆ ಇರುತ್ತದೆ. · ಇವರು ಕುಟುಂಬ ನಿರ್ವಹಣೆಯಲ್ಲಿ ನಿಸ್ಸೀಮರು. ಪೈಸ ಪೈಸ ಲೆಕ್ಕ ಹಾಕುತ್ತಾರೆ. · ಒಳ್ಳೇ ಆಹಾರವನ್ನ ತಯ್ಯಾರು ಮಾಡುವವರು. · ಇವರುಗಳು ಒಳ್ಳೇ ಭೋಜನ ಪ್ರಿಯರು ಕೂಡ. ಆಲ್ತು, ಫ಼ಾಲ್ತು ತಿನ್ನೋಲ್ಲ. · ಇವರುಗಳಿಗೆ ಅಡಿಗೆ ಪರ್ಫ಼ೆಕ್ಟ್ ಆಗಬೇಕು. · ಚಂದ್ರನ ಸಂಖೆ ೨ · ಚಂದ್ರನ ಮಿತ್ರರು ರವಿ ಮತ್ತು ಬುಧ ಹಾಗೂ ಕೇತು. · ಶತ್ರು ರಾಹು. · ಸಮ ಗ್ರಹಗಳು ಕುಜ, ಗುರು, ಶುಕ್ರ ಮತ್ತು ಶನಿ. · ಚಂದ್ರ ಮಾತೃ ಕಾರಕ. · ಉಛ್ಛ ಸ್ಥಾನ :- ವೃಷಭ ರಾಶಿ. · ನೀಚ ಸ್ಥಾನ :- ವೃಸ್ಚಿಕ ರಾಶಿ. · ದಶಾ ವರ್ಷ :- ೧೦ · ಮೂಲ ತ್ರಿಕೋಣ :- ಕರ್ಕ ರಾಶಿ. · ಉಛ್ಚಾಂಶ :- ೩ * · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅವಧಿ ೨ ೧/೨ ದಿನ · ದಿಕ್ಕು :- ವಾಯೂವ್ಯ. · ಕಾರಕ :- ಕಫ · ಲೋಹ :- ಬೆಳ್ಳಿ. · ಅಂಗಾಂಗ :- ರಕ್ತ. · ಇಂದ್ರಿಯ :- ನಾಲಿಗೆ. · ಧಾನ್ಯ :- ಅಕ್ಕಿ · ಇವರ ರತ್ನ ಮುತ್ತು. · ಇದೇ ಚಂದ್ರ ಋಣಾ ಧಾನ್ಯ :- ಅಕ್ಕಿ · ಇವರ ರತ್ನ ಮುತ್ತು. · ಇದೇ ಚಂದ್ರ ಋಣಾತ್ಮಕನಾದಲ್ಲಿ, ಹೊಟ್ಟೇ ಕಿಚ್ಚು ಬಹಳ. · ಇವರಲ್ಲಿ ಶಕ್ತಿ ಹೀನತೆ ಉಂಟಾಗುತ್ತದೆ. · ಅಜೀರ್ಣತೆ ಜಾಸ್ತಿ · ಆವಾಗಾವಾಗ ಟಾಯಿಲೆಟ್ಟಿಗೆ ಹೋಗುತ್ತಿರುತ್ತಾರೆ. · ಹೊಟ್ಟೇ ಸಂಬಂಧಿತ, ಅಂದರೆ ಜಲ ಸಂಬಂಧಿತ ಕಾಹಿಲೆಗಳು ಜಾಸ್ತಿ. · ಅದೇ ಚಂದ್ರ ಕೆಟ್ಟಲ್ಲಿ, ವಾಮಾಚಾರಕ್ಕೆ ಇಳಿಯುತ್ತಾರೆ. · ಇವರು ಚಂದ್ರನಂತೆ ಬಳುಕು ದೇಹ. ಇವರ ಕಟ್ಟಿ ಹಿಂದೆ ಬಂದಿರುತ್ತದೆ. ಕುಜ ಗ್ರಹ :- · ಮೇಷ ಹಾಗೂ ವೃಸ್ಚಿಕ ರಾಶಿಗಳ ಅಧಿಪತಿ. · ಅಗ್ನಿ ತತ್ವದ ಗ್ರಹ. ಅದಕ್ಕೇ ಮೇಷ ರಾಶಿಯ ಕುಜನಿಗೆ ಪ್ರಾಮುಖ್ಯತೆ ಜಾಸ್ತಿ. · ವೃಸ್ಚಿಕ ರಾಶಿಯ ಕುಜನ ಜಲ ತತ್ವಕ್ಕೆ ಅಸ್ಟೇನೂ ಪ್ರಾಮುಖ್ಯತೆ ಕೊಡೋಲ್ಲ. · ಕುಜನು ಪುರುಷ ಗ್ರಹ. · ಈತ ಉಗ್ರ ಗ್ರಹನೂ ಹೌದು. · ಒಳ್ಳೇ ಕೋಪಿಸ್ಠರು. · ಬಣ್ಣ ರಕ್ತ ಕೆಂಪು. · ದೇಹದಲ್ಲಿಯ ರಕ್ತ ಸೂಚಕ ಗ್ರಹ. · ಹೊಡೆದಾಟಕ್ಕೆ, ಬಡಿದಾಟಕ್ಕೆ ಕಾರಕ ಗ್ರಹ. · ಆದರೆ ಪರೋಪಕಾರಿ ಗ್ರಹ. · ಸಾಮಾನ್ಯವಾಗಿ ಗೆಲ್ಲುವ ಗ್ರಹ. · ಅಸ್ತ್ರ ಶಸ್ತ್ರಗಳ ಬಳಕೆಯನ್ನ ಮಾಡುವಂತಹ ಗ್ರಹ. · ಪರರನ್ನ ಪೀಡಿಸುವ ಗ್ರಹ. · ಸಮಾಜ ಘಾತಕ ಕೆಲಸಗಳನ್ನ ಮಾಡುವಂತಹ ಗ್ರಹ. · ಆಕ್ರೋಷದ ಗ್ರಹ. · ಒಂದು ಸಾಲಿನಲ್ಲಿ ನಿಂತಲ್ಲಿ, ಹಿಂದಿದ್ದವ ಕ್ರಮ ತಪ್ಪಿ ಮುಂದೆ ಹೋಗಿ ನಿಂತಿರುತ್ತಾನೆ. · ಶರೀರ ಶಕ್ತಿಯನ್ನ ಉಪಯೋಗಿಸುವವ. ಯುಕ್ತಿಯನ್ನಲ್ಲ. · ಕಿರುಚಿ ಅಥವಾ ಜೋರಾಗಿ ಮಾತನಾಡುವ ಗ್ರಹ. · ಶರೀರ ಬಹಳ ಕಟ್ಟು ಮಸ್ತಾಗಿರುತ್ತೆ. · ಆರೋಗ್ಯವಂತ ಗ್ರಹ. · ನ್ಯಾಯವನ್ನ ಕೊಡಿಸುತ್ತಾರೆ. · ಸಮಾಜ ಸೇವೆಯೇ ಇವರ ಗುರಿ. (ಪೋಲೀಸ್ ಹುದ್ದೆ, ಮಿಲಿಟರಿ ಹುದ್ದೆ, ನೇವ್ವಿ ಹುದ್ದೆ, ಆರ್ಮ ಗಾಡ್ಸ್ ಹುದ್ದೆ ಹೀಗೆ ಎಲ್ಲಿ ಡ್ರೆಸ್ಸ್ ಕೋಡ್ ಇರುತ್ತವೆಯೋ ಅಲ್ಲಿ ಇವರದ್ದೇ ಗುಂಪು. ಖಾದಿ ಧರಿಸುವವರೂ ಹೆಚ್ಚು ಇವರೇ. ಅಂದರೆ ಮಂಗಲ್ ಬಹಳ ಸ್ಟ್ರೋಂಗ್) · ಇವರದ್ದು ಕುಟುಂಬ, ನಾಡು, ದೇಷದ ರಕ್ಷಣೆಯೇ ಗುರಿ. · ಹಿಟ್ಲರ್ ಅಂದಾಕ್ಷಣ ಕುಜನ ನೆನಪಾಗಬೇಕು ನಿಮಗೆಲ್ಲಾ. · ಟೆರ್ರೋರಿಸ್ಟ್ಸಗಳೆಲ್ಲಾ ಯುವಕರೇ, ಹಾಗೂ ಇವರಲ್ಲಿ ಕುಜನು ಬಹಳ ಸ್ಟ್ರೋಂಗ್. · ಕೆಂಪು ಬಣ್ಣದ ಹವಳ ಇವರ ರತ್ನ. · ಇವರಿಗೆ ಆಟಕ್ಕೆ ಬೇಕಾಗುವ ಶಕ್ತಿ ಕುಜನು ಕೊಡುತ್ತಾನೆ. ಆದರೆ ಆಟಕ್ಕೆ ಕಾರಕನಲ್ಲ. · ಸಂಖೆ ೯ · ಕಾರಕತ್ವ ಭ್ರಾತೃ · ಉಛ್ಛಕ್ಷೇತ್ರ ಮಕರ ರಾಶಿ. · ನೀಚ ಕ್ಷೇತ್ರ ಕರ್ಕ ರಾಶಿ. · ದಶಾ ವರ್ಷ ೭. · ಅಂಗಾಂಗ :- ಮಜ್ಜೆ. · ಉಛ್ಚಾಂಶ :- ೨೮* · ಓಮ್ದು ರಾಶಿಯಿಂದ ಇನ್ನೊಂದು ರಾಶಿಗೆ ೪೫ ದಿನಗಳು. · ದಿಕ್ಕು :- ದಕ್ಷಿಣ · ಲೋಹ : ತಾಮ್ರ · ದೃಸ್ಟಿ :- ೪,೭ ಮತ್ತು ೮. · ಮಿತ್ರ ಗ್ರಹಗಳಿ :- ಗುರು, ರವಿ ಮತ್ತು ಚಂದ್ರ · ಶತ್ರುಗಳು :- ಬುಧ · ಸಮ ಗ್ರಹಗಳು :- ಶುಕ ಬುಧ ಗ್ರಹ:- · ಮಿಥುನ ಮತ್ತು ಕನ್ಯಾ ಅಧಿಪತಿ. · ಇವರುಗಳು ಪಾದರಸದಂತೆ ಬಹಳ ಚುರುಕು ಸ್ವಭಾವ. · ಎಲ್ಲವುದರಲ್ಲಿಯೂ ಚುರುಕುತನ. ಬರೇ ೫ ನಿಮಿಷಗಳಲ್ಲಿ ಇವರ ಸ್ನಾನ ಮುಗಿಯುತ್ತದೆ. · ಬರೇ ೩ ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ. · ಮಾತು ಕೂಡ ಹಾಗೆಯೇ, ಒಳ್ಳೇ ಅರಳು ಹೊಟ್ಟಿದ ಹಾಗೆ ಮಾತನಾಡುತ್ತಾರೆ. · ಕಾರಣ ಬುಧನು ಕಮ್ಯುನಿಕೇಷನ್ ಗ್ರಹ. · ಮಿಥುನದಲ್ಲಿ ಧನಾತ್ಮಕ(+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ (-ವ್) · ಆದ್ದರಿಂದ ಮಿಥುನದ ವಾಯು ತತ್ವಕ್ಕೇ ಪ್ರಾಧಾನ್ಯ ಜಾಸ್ತಿ. · ಕನ್ಯಾದ ಪ್ರಥ್ವೀ ತತ್ವಕ್ಕೆ ಅಸ್ಟೇನೂ ಪ್ರಾಧಾನ್ಯ ಕೊಡೋಲ್ಲ. · ಎಲ್ಲಾ ಪುರುಷ ರಾಶಿಗಳಲ್ಲಿ ಗ್ರಹಗಳು ಶಕ್ತಿಶಾಲಿಗಳಾಗಿರುತ್ತವೆ. · ಎಲ್ಲಾ ಸ್ತ್ರೀ ರಾಶಿಗಳಲ್ಲಿ ಅವುಗಳು ಋಣಾತ್ಮಕವಾಗಿರುತ್ತವೆ. · ಇವರುಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ. · ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಸ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ. · ಒಳ್ಳೇ ಶೇಪ್ ಇರುವಂತಹವರು ಬುಧ ಗ್ರಹ. · ಇವರಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ. · ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ. ವರದಕ್ಷಿಣೆ ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ. · ಬಹು ಬುದ್ಧಿವಂತ ಗ್ರಹ. (Extra Ordinary Brilliance.) · ಗೂಢ ವಿದ್ಯಗಳನ್ನ ಅಧ್ಯಯನ ಮಾಡುವುದು ಇವರುಗಳು ಜಾಸ್ತಿ. · ಸಂಶೋಧನಾ ಮನೋಭಾವನೆ ಜಾಸ್ತಿ.(Researech Oriented.) · ಇವರುಗಳು ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು. ಅದೇ ಗುರು ಗ್ರಹವು ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು. · ಯಾವಾಗಲೂ ಹೊಸತನ್ನೇ ಬಯಸುವರು. · ಹಳೇದಲ್ಲ ಇಸ್ಟ ಆಗೋಲ್ಲ ಇವರಿಗೆ. · ಎಲ್ಲಾ ಕಲೆಗಳಲ್ಲಿ(ನೃತ್ಯ, ಸಂಗೀತ, ಇತ್ಯಾದಿ) ಅಭಿರುಚಿ ಜಾಸ್ತಿ. · ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವರು. · ಒಳ್ಳೇ ಬರೆವಣಿಕೆಗಾರರು. · ಒಳ್ಳೇ ಜ್ಯೋತಿಷ್ಯಗಾರರು. · ಆಟಗಳಲ್ಲಿ , ಅದೂ (Indoor or Outdoor Activities) ಯಾವುದೇ ಆಟ ಇರಬಹುದು. · ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ. · ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ ಹೋದವರಂತೆ ಕಾಣಿಸುತ್ತಾರೆ. ಬುಧ ಗ್ರಹ:- · ಮಿಥುನ ಮತ್ತು ಕನ್ಯಾ ಅಧಿಪತಿ. · ಇವರುಗಳು ಪಾದರಸದಂತೆ ಬಹಳ ಚುರುಕು ಸ್ವಭಾವ. · ಎಲ್ಲವುದರಲ್ಲಿಯೂ ಚುರುಕುತನ. ಬರೇ ೫ ನಿಮಿಷಗಳಲ್ಲಿ ಇವರ ಸ್ನಾನ ಮುಗಿಯುತ್ತದೆ. · ಬರೇ ೩ ನಿಮಿಷಗಳಲ್ಲಿ ಇವರ ಊಟ ಮುಗಿಯುತ್ತೆ. · ಮಾತು ಕೂಡ ಹಾಗೆಯೇ, ಒಳ್ಳೇ ಅರಳು ಹೊಟ್ಟಿದ ಹಾಗೆ ಮಾತನಾಡುತ್ತಾರೆ. · ಕಾರಣ ಬುಧನು ಕಮ್ಯುನಿಕೇಷನ್ ಗ್ರಹ. · ಮಿಥುನದಲ್ಲಿ ಧನಾತ್ಮಕ(+ವ್) ಮತ್ತು ಕನ್ಯಾದಲ್ಲಿ ಋಣಾತ್ಮಕ (-ವ್) · ಆದ್ದರಿಂದ ಮಿಥುನದ ವಾಯು ತತ್ವಕ್ಕೇ ಪ್ರಾಧಾನ್ಯ ಜಾಸ್ತಿ. · ಕನ್ಯಾದ ಪ್ರಥ್ವೀ ತತ್ವಕ್ಕೆ ಅಸ್ಟೇನೂ ಪ್ರಾಧಾನ್ಯ ಕೊಡೋಲ್ಲ. · ಎಲ್ಲಾ ಪುರುಷ ರಾಶಿಗಳಲ್ಲಿ ಗ್ರಹಗಳು ಶಕ್ತಿಶಾಲಿಗಳಾಗಿರುತ್ತವೆ. · ಎಲ್ಲಾ ಸ್ತ್ರೀ ರಾಶಿಗಳಲ್ಲಿ ಅವುಗಳು ಋಣಾತ್ಮಕವಾಗಿರುತ್ತವೆ. · ಇವರುಗಳಲ್ಲಿ ಸದಾ ಎನಾದರೊಂದು ಕಲಿಯುವ ಚಟ ಜಾಸ್ತಿ. · ಆದರೆ ಬುಧನದ್ದು ಮಕ್ಕಳ ಸ್ವಭಾವ. ಎಸ್ಟೇ ವಯಸ್ಸಾದರೂ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ. · ಒಳ್ಳೇ ಶೇಪ್ ಇರುವಂತಹವರು ಬುಧ ಗ್ರಹ. · ಇವರಲ್ಲಿ ಕಾಲು ಮತ್ತು ದೇಹ ಒಂದೇ ಅಳತೆಯದ್ದಾಗಿರುತ್ತದೆ. · ವ್ಯಾಪಾರ ಮನೋಭಾವ ಪ್ರತಿಯೊಂದರಲ್ಲಿಯೂ. ವರದಕ್ಷಿಣೆ ವಿಚಾರದಲ್ಲಿಯೂ ಕೂಡ ವ್ಯಾಪಾರ ಭಾವನೆ ಜಾಸ್ತಿ. · ಬಹು ಬುದ್ಧಿವಂತ ಗ್ರಹ. (Extra Ordinary Brilliance.) · ಗೂಢ ವಿದ್ಯಗಳನ್ನ ಅಧ್ಯಯನ ಮಾಡುವುದು ಇವರುಗಳು ಜಾಸ್ತಿ. · ಸಂಶೋಧನಾ ಮನೋಭಾವನೆ ಜಾಸ್ತಿ.(Researech Oriented.) · ಇವರುಗಳು ಹಣ ಕಾಸಿನ ವ್ಯವಹಾರಗಳನ್ನ ಮಾಡುವವರು. ಅದೇ ಗುರು ಗ್ರಹವು ಹಣ ಕಾಸಿನ ಸಂಸ್ಥೆಯಲ್ಲಿ ಕೆಲಸವನ್ನ ಮಾಡುವವರು. · ಯಾವಾಗಲೂ ಹೊಸತನ್ನೇ ಬಯಸುವರು. · ಹಳೇದಲ್ಲ ಇಸ್ಟ ಆಗೋಲ್ಲ ಇವರಿಗೆ. · ಎಲ್ಲಾ ಕಲೆಗಳಲ್ಲಿ(ನೃತ್ಯ, ಸಂಗೀತ, ಇತ್ಯಾದಿ) ಅಭಿರುಚಿ ಜಾಸ್ತಿ. · ಸಾಹಿತ್ಯದಲ್ಲಿಯೂ ಇವರುಗಳು ಅಭಿರುಚಿಯನ್ನ ತೋರಿಸುವರು. · ಒಳ್ಳೇ ಬರೆವಣಿಕೆಗಾರರು. · ಒಳ್ಳೇ ಜ್ಯೋತಿಷ್ಯಗಾರರು. · ಆಟಗಳಲ್ಲಿ , ಅದೂ (Indoor or Outdoor Activities) ಯಾವುದೇ ಆಟ ಇರಬಹುದು. · ಈ ಆಟಗಳಿಗೆ ಬೇಕಾಗುವ ಎನರ್ಜಿಯನ್ನ ಕೊಡುವ ಗ್ರಹ ಮಾತ್ರ ಕುಜ. · ಇವರು ಕಾಣಲು ಸಣ್ಣಕ್ಕೆ, ಉದ್ದಕ್ಕೆ ಇರುತ್ತಾರೆ. ಸೊರಗಿ ಹೋದವರಂತೆ ಕಾಣಿಸುತ್ತಾರೆ. · Experts in Fine Arts (ಇವುಗಳಲ್ಲಿ ಬುಧ ಮತ್ತು ಶುಕ್ರನ ಪಾತ್ರ ಬಹು ದೊಡ್ಡದು.) · ಇವರೊಬ್ಬರು ಉತ್ತಮ ಪ್ರಾಧ್ಯಾಪಕರು. · ಅಧಿಕ ಭೂಮಿ, ಹಣ, ಒಡವೆಗಳ ಸಂಗ್ರಹ ಜಾಸ್ತಿ ಇವರುಗಳಿಗೆ. · ವಾಹನಗಳನ್ನೂ ಸಂಗ್ರಹ ಮಾಡುವಲ್ಲಿ ಇವನದ್ದೇ ಎತ್ತಿದ ಕೈ. · ಮ್ರಧು ಭಾಷಿ. · ಜಗಳ ಆಡೋಲ್ಲ. ಕಾರಣ ನಪುಂಸಕ ಗ್ರಹ. ಆದರೆ ಮೋಸ ಮಾಡುವುದರಲ್ಲಿ ಎತ್ತಿದ ಕೈ. · ಇವರ ಮುಖದಲ್ಲಿ ಮುಗ್ಧತೆ ಜಾಸ್ತಿ. · ಇದೇ ಬುಧನು ಋಣಾತ್ಮಕನಾಗಿದ್ದಲ್ಲಿ:- ಚರ್ಮ ರೋಗ, ಅಜೀರ್ಣತೆ ಜಾಸ್ತಿ. · -ವ್ ಬುಧನು ಅವರನ್ನ ಕುಂತಲ್ಲೇ ಕುಳಿತಿರುವಂತೆ ಮಾಡುತ್ತಾನೆ. · ಸಿಕ್ಕಾಪಟ್ಟೆ ಅಶುತ್ವವಾಗಿರುತ್ತಾರೆ. · ಬಣ್ಣ ಗಿಳಿ ಹಸಿರು. · ರತ್ನ ಪಚ್ಚೆ ಅಥವಾ ಪನ್ನ. · ದೊಡ್ಡ ತರದ ಮೋಡೆಲಿಂಗಿಗೆ ಬುಧನೇ ಅಧಿಪತಿ. · ಸಂಖೆ ೫. · ಕಾರಕತ್ವ :- ಕರ್ಮ · ಉಛ್ಚ ಕ್ಷೇತ್ರ :- ಕನ್ಯಾ ರಾಶಿ. · ಉಛ್ಚಾಂಶ :- ೧೫* · ನೀಚ ಕ್ಷೇತ್ರ :- ಮೀನ ರಾಶಿ. · ದಶಾ ವರ್ಷ :- ೧೭ · ಮೂಲ ತ್ರಿಕೋಣ :- ಕನ್ಯಾ ರಾಶಿ. · ಅಂಗಾಂಗ :- ಚರ್ಮ. · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ೧ ತಿಂಗಳು. · ಧಾನ್ಯ :- ಹೆಸರು ಕಾಳು. · ದಿಕ್ಕು :- ಉತ್ತರ. · ಕಾರಕ ತ್ರಿದೋಷ. · ಲೋಹ :- ಸೀಸ · ಮಿತ್ರ ಗ್ರಹಗಳು :- ಸೂರ್ಯ ಮತ್ತು ಶುಕ್ರ · ಶತ್ರು :- ಚಂದ್ರ · ಸಮ ಗ್ರಹ :- ಶನಿ, ಕುಜ ಮತ್ತು ಗುರು ಗುರು ಗ್ರಹ :- · ಮೀನದಲ್ಲಿ ಆಕಾಶ ತತ್ವ ಹಾಗೂ ಧನುಸ್ಸನಲ್ಲಿ ಅಗ್ನಿ ತತ್ವ · ಇಲ್ಲಿ ಧನುಸ್ಸಿನ ಅಗ್ನಿಗೇ ಪ್ರಾಮುಖ್ಯತೆಯನ್ನ ಕೊಡುತ್ತೇವೆ. · ಇದು ದೊಡ್ಡ ಅಗ್ನಿ. · ಗಾತ್ರದಲ್ಲಿ ದೊಡ್ಡ ಗ್ರಹ. ಅಂತೆಯೇ ಮನುಷ್ಯರೂ ಗುಂಡಾಗಿ ದಪ್ಪವಾಗಿರುತ್ತಾರೆ. · ಒಳ್ಳೇ ವಿದ್ಯಾವಂತರು. · ಬಹಳ ತೇಜಸ್ವಿಗಳು · ಧರ್ಮ ಪ್ರಚಾರಕರು ಹಾಗೂ ಧರ್ಮ ಭೋದಕರು. · ಆದ್ದರಿಂದ ಇವರುಗಳಲ್ಲಿ ಧರ್ಮ ಗುರುಗಳೇ ಜಾಸ್ತಿ. · ಉಪಾಧ್ಯಾಯ ವೃತ್ತಿಯಲ್ಲಿ ಇವರೇ ಜಾಸ್ತಿ ಕಾಣಿಸುತ್ತಾರೆ. · ಇವರುಗಳು ಧರ್ಮ ಛತ್ರಗಳನ್ನ ಕಟ್ಟುವರು. · ಜನತಾ ಸೇವೆ ಜಾಸ್ತಿ. ಇವರು ಸಮಾಜ ಸೇವೆ ಅಲ್ಲ, ಸಮಾಜ ಕಲ್ಯಾಣ ಜಾಸ್ತಿ ಮಾಡುತ್ತಾರೆ. · ಇವರು ಇರುವುದೇ ಲೋಕ ಕಲ್ಯಾಣ ಹಾಗೂ ಸಮಾಜ ಕಲ್ಯಾಣಕ್ಕಾಗಿ. · ಬಡವರಿಗೆ, ಜನರಿಗೆ ಆಶ್ರಯಗಳನ್ನ ಕಟ್ಟಿಸಿ ಕೊಡುತ್ತಾರೆ. · ಬೇರವರ ತಪ್ಪನ್ನ ತಿದ್ದುವಂತಹವರು. ಇದೇ ಬುದ್ಧಿ ಕುಂಭ ರಾಶಿಯವರಿಗುಂಟು. · ಪ್ರಪಂಚಕ್ಕೇ ಕಾನೂನನ್ನ ಬದಲಾವಣೆ ಮಾಡುವವರು. ಬಾಬಾ ಸಾಹೇಬ ಅಂಬೇಡಕರನಂತೆ. · ಪರಮ ದೈವ ಭಕ್ತರು. · ಜ್ಯೋತಿಷ್ಯಗಾರರಿಗೆ ಗುರುವಿನ ಅನುಗ್ರಹ ಇದ್ದಲ್ಲಿ ಬಹಳ ಒಳ್ಳೆಯದು. · ಪುರೋಹಿತ ಕೆಲಸವನ್ನು ಮಾಡುವವರು ಇವರೇ ಜಾಸ್ತಿ. · ಇವರು ಹಣ ಕಾಸು ಸಂಸ್ಥೆಯಾದ ರೆಸರ್ವ್ ಬೇಂಕ್, ಬ್ಯಾಕಿಂಗ್ ಕ್ಷೇತ್ರ ದಲ್ಲಿ ಜಾಸ್ತಿ ಕಾಣ ಸಿಗುತ್ತಾರೆ. · ಬುಧ ಗ್ರಹ ಹಣ ಕಾಸಿನ ವ್ಯವಹಾರವನ್ನ ಮಾಡುತ್ತಾರೆ. ಆದರೆ ಇವರುಗಳು ಈ ಸಂಸ್ಥೆಯಲ್ಲಿ ಕೆಲಸವನ್ನ ಮಾಡುತ್ತಿರುತ್ತಾರೆ. · ಇವರುಗಳು ವೈದ್ಯಕೀಯ ವೃತ್ತಿಯಲ್ಲಿ ಕೂಡ ಜಾಸ್ತಿ ಕಾಣ ಸಿಗುತ್ತಾರೆ. ಕಾರಣ ಜನತಾ ಸೇವೆಯೇ ಜನಾರ್ಧನ ಸೇವೆ. ಆದರೆ ಅದೇ ಗುರು ಋಣಾತ್ಮಕವಾದಲ್ಲಿ:- ಬೇರವರನ್ನ ಬಯ್ಯುತ್ತಾರೆ. · ಬೇರವರಿಗೆ ಶ್ರಾಪ ಹಾಕುತ್ತಾರೆ. · ಇವರಿಗೆ ಹಳದಿ ಬಣ್ಣ ಹೆಚ್ಚು ಇಸ್ಟ. · ಹೊಟ್ಟೇ ಕಿಚ್ಚನ್ನ ಪಡುತ್ತಿರುತ್ತಾರೆ. · ಇನ್ನೊಬ್ಬರಿಗೆ ತೊಂದರೆಗಳನ್ನ ಕೊಡುವುದು ಜಾಸ್ತಿ ಆಗುತ್ತದೆ. · ಪುಷ್ಯರಾಗ ಇವರ ಪ್ರೀತಿಯ ರತ್ನ. · ಇವರುಗಳು ತುಂಬಾ ಲಕ್ಷಣವಂತರು. · ಒಂದೇ ಶೇಪಿನಲ್ಲಿರುತ್ತಾರೆ. ಆದರೆ ಹೊಟ್ಟೆ ಮುಂದು ಬರುತ್ತದೆ. · ಸಂಖೆ ೩ · ಕಾರಕತ್ವ :- ಪುತ್ರ · ಉಛ್ಚ ರಾಶಿ ಕರ್ಕ · ನೀಚ ರಾಶಿ ಮಕರ · ಉಛ್ಚಾಂಶ :೫* · ದಶಾ ವರ್ಷ ೧೬ · ಒಂದು ರಾಶಿಯಿಂದ ಇನ್ನೊಂದು ರಾಶಿಯ ಅವಧಿ ೧೨ ತಿಂಗಳು. · ದಿಕ್ಕು :- ಈಶಾನ್ಯ. · ಧಾನ್ಯ :- ಕಡ್ಲೆ · ಅಂಗಾಂಗ :- ಕಿವಿ. · ಕಾರಕ :- ಕಫ. · ದೃಸ್ಟಿ :- ೫,೭ ಮತ್ತು ೯. · ಮಿತ್ರ ಗ್ರಹಗಳು :- ಸೂರ್ಯ, ಚಂದ್ರ ಮತ್ತು ಕುಜ · ಶತ್ರು ಗ್ರಹಗಳು :- ಶುಕ್ರ ಮತ್ತು ಬುಧ · ಸಮ ಗ್ರಹಗಳು :- ಶನಿ. ಶುಕ್ರ ಗ್ರಹ :- · ಶುಕ್ರನು ವೃಷಭ ಮತ್ತು ತುಲಾದ ಅಧಿಪತಿ. · ವೃಷಭದಲ್ಲಿ ಪ್ರಥ್ವೀ ತತ್ವದಲ್ಲಿದ್ದರೆ, ತುಲಾದಲ್ಲಿ ವಾಯು ತತ್ವದಲ್ಲಿರುವನು. · ತುಲಾ ಶುಕ್ರನು ಬಹಳ ಧನಾತ್ಮಕನಾಗಿರುತ್ತಾರೆ. ಕಾರಣ ಅದು ಪುರುಷ ರಾಶಿ. · ಅದಕ್ಕೇ ತುಲಾ ಶುಕ್ರನಿಗೆ ಪ್ರಾಧಾನ್ಯ ಜಾಸ್ತಿ. · ಅದೇ ವೃಷಭದಲ್ಲಿ ಋಣಾತ್ಮಕನಾದುದರಿಂದ, ಶಕ್ತಿ ಹೀನ. · ಶುಕ್ರನು ಚಂದ್ರನಂತೆ ಸ್ತ್ರೀ ಗ್ರಹ. · ಚಂದ್ರನಂತೆಯೇ ಸೌಂದರ್ಯಕ್ಕೆ ಕಾರಕ ಗ್ರಹ. · ಒಳ್ಳೇ ಜ್ಯೋತಿಷ್ಯಗಾರರು. ಜ್ಯೋತಿಷ್ಯದಲ್ಲಿ ಪರಿಣಿತರು. · ಇವರಿಗೆ ಒಂದು ಒಳ್ಳೇ ಸ್ಟೇಂಡರ್ಡ್ ಉಂಟು. · ಶ್ರೀಮಂತ ಗ್ರಹ. · ಯಾರನ್ನೂ ಅತಿಯಾಗಿ ನಂಬೋಲ್ಲ ಹಾಗೂ ಹತ್ತಿರಕ್ಕೆ ಸೇರಿಸೋಲ್ಲ. · ಸದಾ ಸಂಶಯವನ್ನ ಪಡುವವರು. · ಇವರು ಜನರನ್ನ ಜಾಸ್ತಿ ಸ್ನೇಹಿತರನ್ನಾಗಿ ಮಾಡಿಕೊಳ್ಳೋಲ್ಲ. · ಇವರದ್ದು ಯಾವಾಗಲೂ ಒನ್ ವೇ ಟ್ರಾಫ಼ಿಕ್. ತಮ್ಮ ಕುದುರೆಗೆ ಮೂರೇ ಕಾಲು ಎನ್ನುವವರು. · ಕಾರಣ ಶುಕ್ರಚಾರ್ಯರಿಗೆ ಒಂದೇ ಕಣ್ಣು. · ಇವರುಗಳು ಹೇಳಿದ್ದೇ ಸರಿ. · ಇವರು ಶುಕ್ರಾಚಾರ್ಯನಂತೆ ಹಟ ಮಾಡುತ್ತಿರುತ್ತಾರೆ. · ಲಗ್ನದಲ್ಲಿ ಶುಕ್ರ ಇದ್ದಲ್ಲಿ ಅವರು ನೂರಕ್ಕೆ ನೂರು ಟ್ರಾಫ಼ಿಕ್ ಕೆಡಿಸುತ್ತಾರೆ. · ಶ್ರೀಮಂತ ವಸ್ತುಗಳ ಸಂಗ್ರಹವನ್ನ ಮಾಡುತ್ತಾರೆ. · ಮನೆಯನ್ನ ಅಲಂಕಾರ ಮಾಡುವ ಗ್ರಹ. · ಸುಗಂಧ ವಸ್ತುಗಳ ಸಂಗ್ರಹವನ್ನ ಮಾಡುವವರು. ಇವರದ್ದು ಅದ್ಧೂರಿತನದ, ಆಡಂಬರದ ಮನೆ. · ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ. · ಇವರಲ್ಲಿ ದೊಡ್ಡ ಗಾಡಿ ಇದೆ ಎಂದರೆ ಇವರ ಶುಕ್ರ ಬಹಳ ಒಳ್ಳೆಯದು. · ಇವರಲ್ಲಿಯ ಗಾಡಿ ಬಹಳ ನೀಟ್ ಎಂಡ್ ಕ್ಲೀನ್ ಆಗಿರುತ್ತದೆ. · ಇವರುಗಳು ಒಳ್ಳೇ ನ್ಯಾಯವಂತರು. · ಬಹಳ ಒಳ್ಳೆಯ ಹೊಂದಾಣಿಕೆಯನ್ನ ಮಾಡುವವರು. · ಇವರುಗಳು ಭಾವನಾತ್ಮಕ ಜೀವಿಗಳು. · ಇವರೂ ಕೂಡ ಶುಕ್ರಾಚಾರ್ಯನಂತೆ ಯಾರೊಂದಿಗೂ ಸೇರೋಲ್ಲ.ಒಂಟಿ ಜೀವಿಗಳು. · ವದ್ಯಕೀಯ ವೃತ್ತಿಯನ್ನ ಮಾಡುವವರು. · ಒಳ್ಳೇ ಪ್ರಾಧ್ಯಾಪಕ ವೃತ್ತಿಯನ್ನ ಮಾಡುವವರು. · ಶ್ರಂಗಾರ ವಿದ್ಯಗಳಲ್ಲಿ ಪ್ರವೀಣರು. · ನವ ರಸ ವಿದ್ಯಗಳಲ್ಲಿ ಪರಿಣಿತರು. · ೬೪ ಕಲೆಗಳ ರಾಜ. · ಶುಕ್ರನು ಒಳ್ಳೇ ದಿದ್ದರೆ ಮನೆಯಲ್ಲಿ ಘಂ ಅನ್ನುವ ಸುಗಂಧದ ಪರಿಮಳ ಬರುತ್ತೆ. · ಅದೇ ಬುಧನು ಒಳ್ಳೆಯದಿದ್ದಲ್ಲಿ, ಮನೆ ತುಂಬಾ ಪೇಪರ್, ಗಲೀಜು ಇರುತ್ತೆ. · ಅದೇ ಸೂರ್ಯನು ಸ್ಟ್ರೋಂಗ ಇದ್ದಲ್ಲಿ, ಕೆಲಸಗಾರು ಹೋಗಿ ಬಾಗಿಲನ್ನ ತೆಗೆಯುತ್ತಾರೆ. · ಅದೇ ಚಂದ್ರನು ಸ್ಟ್ರೋಂಗ್ ಇದ್ದಲ್ಲಿ, ಮನೆ ಒಡತಿ (ಹೆಂಡತಿ) ಬಾಗಿಲನ್ನ ತೆಗೆಯುತ್ತಾರೆ. · ಅದೇ ಮನೆ ತುಂಬಾ ಗಲೀಜುಗಳ ರಾಶಿ ಇದ್ದಲ್ಲಿ, ಶನಿ ಗ್ರಹ ಶಕ್ತಿಶಾಲಿಯಾಗಿರುತ್ತೆ. · ಕೆಟ್ಟ ಗುಣಾಗಳ ಶುಕ್ರ · ಅದೇ ಶುಕ್ರನಲ್ಲಿ ಕೆಟ್ಟ ಗುಣವಿದ್ದಲ್ಲಿ, ಹೊಟ್ಟೇ ಕಿಚ್ಚು ಜಾಸ್ತಿ. · ಜನರ ಜೊತೆಗೆ ಸೇರೋದಿಲ್ಲ! · ತನಗಿಂತಾ ಹೆಚ್ಚಿಗೆ ವಿದ್ಯ ಇತ್ತೆಂದರೆ, ಹೊಟ್ಟೇ ಕಿಚ್ಚು ಜಾಸ್ತಿ ಬರುತ್ತೆ! · ಒಂಟೀ ಜೀವಿಗಳು. ಇದಕ್ಕೆ ಕಾರಣ ಶುಕ್ರಾಚಾರ್ಯರು ಯಾರೊಂದಿಗೂ ಸೇರೋಲ್ಲ! ಇದಕ್ಕೆ ಮತ್ತೊಂದು ಕಾರಣ ತನಗೇ ಎಲ್ಲಾ ೬೪ ಕಲೆಗಳೂ ಗೊತ್ತೆನ್ನುವ ಅಹಂ! · ಆದರೆ ಇವರುಗಳು ಅತೀ ಉತ್ತಮ ರೀತಿಯಿಂದ ಹೊಂದಾಣಿಕೆಯನ್ನ ಮಾಡಿಕೊಳ್ಳುವರು. · ವಜ್ರ ಇವರ ರತ್ನ. ಪ್ಲೇಟಿನಮ್ ಸಿಲ್ವರ್ · ಬಿಳಿ ಬಣ್ಣ ಇವರ ಫೇವರೇಟ್ · ಒಳ್ಳೇ ಸುಂದರವಾದ ಕೋಮಲ ಶರೀರ. · · ಇವರುಗಳ ಸಂಖೆ ೬ ಕಾರಕತ್ವ :- ಕಳತ್ರ · ಉಛ್ಚ ರಾಶಿ :- ಮೀನ · ನೀಚ ರಾಶಿ :- ಕನ್ಯಾ · ದಶಾ ವರ್ಷ:- ೨೦ · ಮೂಲತ್ರಿಕೋಣ :-ತುಲಾ ರಾಶಿ. · ಉಛ್ಛಾಂಶ :-೨೭* · ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬೇಕಾಗುವ ಅವಧಿ :- ೧ ತಿಂಗಳು. · ದಿಕ್ಕು :- ಆಗ್ನೇಯ · ಧಾನ್ಯ :- ಅವರೆ · ಇಂದ್ರಿಯ :- ನಾಲಿಗೆ · ಕಾತ್ರಕ :- ಕಫ · ದೃಸ್ಟಿ :- ೭ · ಮಿತ್ರ ಗ್ರಹಗಳು :- ಬುಧ, ಶನಿ · ಶತ್ರು ಗ್ರಹ :- ಸೂರ್ಯ ಮತ್ತು ಚಂದ್ರ · ಸಮ ಗ್ರಹ :- ಕುಜ, ಗುರು ಶನಿ ಗ್ರಹ :- · ಮಕರ ಮತ್ತು ಕುಂಭದ ಅಧಿಪತಿ ಶನಿ ದೇವ. · ಪ್ರಥ್ವಿ ತತ್ವ ಹಾಗೂ ವಾಯು ತತ್ವದ ಅಧಿಪತಿ. · ಇಲ್ಲಿ ಕುಂಭದ ಶನಿಗೆ ಬಹಳ ಮಹತ್ವ ಉಂಟು. ಅಂದರೆ ವಾಯು ತತ್ವದ ಶನಿ ದೇವನಿಗೆ. · ಹಾಗೆಯೇ ಮಿಥುನದ ವಾಯು ತತ್ವದ ಬುಧನಿಗೆ ಮಹತ್ವ ಕೊಟ್ಟಿರುತ್ತಾರೆ. · ಇವರುಗಳು ಬಡಕಲು ಶರೀರದವರು. · ಬಣ್ಣ ಕಪ್ಪು. · ರೋಗಗ್ರಸ್ಥರಾಗಿ ಕಾಣಿಸುತ್ತಾರೆ. · ಒಳ್ಳೇ ಶ್ರಮ ಜೀವಿಗಳು ಇವರುಗಳು. · ತತ್ವ ಜ್ನಾನಿಗಳು. ಅದೂ ಕುಂಭ ರಾಶಿಯವರು ತತ್ವಜಾನಿಗಳು (ಫಿಲೋಸಫರ್ಸ್). · ಇವರುಗಳಿಗೆ ಸಿದ್ಧಾಂತದ ಮೇಲೆ ನಂಬಿಕೆಯನ್ನ ಇಡುವವರು. · ಯಾರೂ ಮಾಡದ ಕೆಲಸವನ್ನ ಇವರು ಮಾಡುತ್ತಾರೆ. · ಇವರು ತಾಂತ್ರಿಕ ವರ್ಗದಲ್ಲಿ ಕೆಲಸವನ್ನ ಮಾಡುವವರು. · ಯಾವಾಗಲೋ ಮನೆಗೆ ಬರುತ್ತಾರೆಂದರೆ, ಅವರುಗಳು ಶನಿ ತತ್ವದವರು. · ಇವರುಗಳು ಒಳ್ಳೇ ಸಮಾಜ ಸೇವಕರು. ಅದೇ ಗುರು ತತ್ವದವರು, ಸಮಾಜ ಕಲ್ಯಾಣರು. · ಇವರುಗಳು ಒಳ್ಳೇ ನ್ಯಾಯವಾದಿಗಳು. · ಗೆಲ್ಲುವ ತನಕ ಹೋರಾಟವನ್ನ ಮಾಡುವಂತಹ ನಿಧಾನಿಗಳು. ಕಾರಣ ಶನಿಯು ಮಂದ ಗ್ರಹ. ತಾಳ್ಮೆ ಬಹಳ. · ಅದೇ ಬುಧ ಗ್ರಹ ಫಟ್ಟನೆ ಹೋಗಿ ಕೆಲಸವನ್ನ ಮುಗಿಸಿಯೇ ಬಿಡುತ್ತಾರೆ. · ಶನಿಯು ಮಂದ ಗ್ರಹ. ತಾಳ್ಮೆಯ ಗ್ರಹ. · ಕೆಟ್ಟ ಶನಿ ಇದ್ದಲ್ಲಿ ಅವರು ಬಹಳ ಮೋಸಗಾರರು. ಕಳ್ಳ ತನ ಮಾಡುವವರು. · ಕೆಟ್ಟ ಚಟಗಳಿಗೆ ಬಲಿಯಾಗುವವರು. · ಇವರುಗಳು ಕೆಟ್ಟದ್ದನ್ನ ಮಾಡಲೂ ಒಳ್ಳೇ ತಾಳ್ಮೆಯಿರುತ್ತದೆ. · ಟೆಕ್ನೋಲಜಿಯನ್ನ ಒಳ್ಳೇ ರೀತಿಯಲ್ಲಿ ನಿಭಾಯಿಸುವವರು, ಹಾಗೂ ಸಂಶೋಧನೆಯನ್ನ ಮಾಡುವವರು. · ಬಡಕಲು ಶರೀರವಾದರೂ ಒಳ್ಳೇ ಬಲವಿರುವಂತಹ ಮೂಳೆಗಳನ್ನ ಹೊಂದಿದವರು. ಆದರೆ ಅದೇ ಮೂಳೆಯಲ್ಲಿ ಶಕ್ತಿ ಹೀನತೆಯನ್ನೂ ಕಾಣುವವರು. · ಇವರಿಗೆ ಮೊಣಕಾಲಿನ ನೋವು ಕಾಣಿಸಿಕೊಳ್ಳುತ್ತವೆ. · ಹೊಟ್ಟೇ ಸಂಬಂಧಿತ ತೊಂದರೆಗಳು ಸರ್ವೇ ಸಾಮಾನ್ಯ. · ಜನ ಸಂಘಟನೆಯನ್ನ ಮಾಡುವವರು. · ಅದೇ ಮುಷ್ಕರವನ್ನೂ ಮಾಡುವವರು ಇವರೇ. · ಕೊಳಕು ವಸ್ತ್ರ್ವನ್ನ ಧರಿಸುವವರು. · ಕೊಳಕು ಮನೆಯಲ್ಲಿ ನೆಲೆಸುವವರು. · ಯಾರಿಗೆ ಶನಿಯು ಪ್ರಬಲವಾಗಿದ್ದಾನೋ, ಅವರುಗಳು ಕಲ್ಲಿನ ಇಟ್ಟಿಗೆಯ ಮನೆಯನ್ನ ಕಟ್ಟುವವರು. · ಅದೇ ಕೆಟ್ಟ ಶನಿ ಇದ್ದಲ್ಲಿ, ಹಂಚಿನ ಮನೆಯಲ್ಲಿ ತಂಗುವವರು. · ಬಾಗಿಲು ತೂತಾಗಿ ಕಾಣಿಸೋದು. · ಹೊದೆಯುವ ಬಟ್ಟೆಗಳು ಕೊಳಕಾಗಿ ಕಾಣಿಸೋದು. · ಕಬ್ಬಿಣ ಇವರ ಲೋಹ. · ಸಂಖೆ :- ೮ · ಕಾರಕತ್ವ:- ಆಯುಷ್ಯ · ಉಚ್ಚರಾಶಿ :- ತುಲಾ · ನೀಚ ರಾಶಿ :- ಮೇಷ · ಉಚ್ಚಾಂಷ :- ೨೦* · ದಿಕ್ಕು :- ಪಸ್ಚಿಮ · ಅಂಗಾಂಗ :- ಸ್ನಾಯು · ಇಂದ್ರಿಯ :- ಚರ್ಮ · ಧಾನ್ಯ :- ಎಳ್ಳು. · ಕಾರಕ :- ವಾತ · ದೃಸ್ಟಿ :- ೩,೭ ಮತ್ತು ೧೦. · ಮಿತ್ರ ಗ್ರಶಗಳು :- ಶುಕ್ರ ಮತ್ತು ಬುಧ. · ಶತ್ರು ಗ್ರಹ :- ಸೂರ್ಯ ಮತ್ತು ಕುಜ. · ಸಮ ಗ್ರಹ :- ಚಂದ್ರ ಮತ್ತು ಗುರು ··"ಶನಿವತ್ ರಾಹು-ಕುಜವತ್ ಕೇತು" ರಾಹು ಗ್ರಹವು ಶನಿ ತತ್ವದ ಮೇಲೆಯೇ ನಿರ್ದರಿಸಿದೆ. ಅಂದರೆ ರಾಹುವಿನ ತತ್ವಗಳೆಲ್ಲಾ ಶನಿಯ ತತ್ವದ್ದು. ಅದೇ ಕೇತು ಗ್ರಹವು, ಕುಜ ಗ್ರಹದ ಮೇಲೆಯೇ ನಿರ್ದರಿಸಿದೆ. ಕೇತುವಿನ ತತ್ವಗಳೆಲ್ಲಾ ಕುಜನ ತತ್ವದ್ದು. -ಕೃಪೆ ಅಂತರಜಾಲ ತಾಣ(FB)

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ ಪ್ರಮುಖ ನಾಲ್ಕು ದಿಕ್ಕುಗಳಂತೆಯೇ ಉಪದಿಕ್ಕುಗಳೂ ಸಹ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮೊದಲಿಗೆ ಆಗ್ನೇಯ ದಿಕ್ಕಿನ ಫಲಾಫಲಗಳು ನೋಡೋಣ. ಪೂರ್ವ ದಿಕ್ಕು ಹಾಗೂ ದಕ್ಷಿಣದ ದಿಕ್ಕಿನ ಮೂಲೆಯೇ ಆಗ್ನೇಯ ದಿಕ್ಕು, ಈ ದಿಕ್ಕಿಗೆ ಅಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ಈ ಭಾಗವು ಮನೆಯ ಸ್ತ್ರೀಯರು ಹಾಗೂ ಮನೆಯ ಎರಡನೇ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ, ಹಾಗಾಗಿಯೇ ನಮ್ಮ ಪೂರ್ವಿಕರು ಆಗ್ನೇಯ ಭಾಗದಲ್ಲಿಯೇ ಅಡುಗೆ ಮನೆಯನ್ನು ನಿರ್ಮಿಸುವಂತೆ ಹೇಳಿದ್ದಾರೆ. ಆಗ್ನೇಯ ದಿಕ್ಕು ಬೆಳೆದರೂ, ಹೆಚ್ಚು ಖಾಲಿ ಜಾಗವಿದ್ದರೂ ಪರಿಣಾಮ ಕೆಟ್ಟದಿರುತ್ತದೆ, ನೈಋತ್ಯ ದಿಕ್ಕಿಗಿಂತ ತಗ್ಗಾಗಿಯೂ, ಈಶಾನ್ಯ ದಿಕ್ಕಿಗಿಂತ ಎತ್ತರವಾಗಿಯೂ ಇರುವಂತೆ ನೋಡಿಕೊಳ್ಳಬೇಕು, ಆಗ್ನೇಯ ದಿಕ್ಕಿನಲ್ಲಿ ಹಳ್ಳ, ಭಾವಿ ಮುಂತಾದುವಿದ್ದರೆ ಮನೆಯ ಹೆಣ್ಣು ಮಕ್ಕಳು(ಎರಡನೇ) ನಡತೆಗೆಡುತ್ತಾರೆ, ಎರಡನೆಯ ಮಗ ಅಕಾಲ ಮರಣಕ್ಕೀಡಾಗುತ್ತಾನೆ. ಆಗ್ನೇಯ ದಿಕ್ಕಿನಲ್ಲೂ ಎರಡು ರೀತಿಯಾಗಿ ವಿಂಗಡಿಸಬಹುದು, ಪೂರ್ವ ಆಗ್ನೇಯ ಹಾಗೂ ದಕ್ಷಿಣ ಆಗ್ನೇಯ. ಪೂರ್ವ ಆಗ್ನೇಯ ದೋಷಪೂರಿತವಾಗಿದ್ದು ಲೋಪವಾದರೆ ಮನೆಯ ಯಜಮಾನಿ/ ಪತ್ನಿ ಗೆ ಅನಾರೋಗ್ಯ , ಆಯುಷ್ಯ ಕ್ಕೆ ತೊಂದರೆ, ದ್ವಿತೀಯ ಪುತ್ರಿಯ ವೈವಾಹಿಕ ಜೀವನಕ್ಕೆ ತೊಂದರೆ,ದಾಂಪತ್ಯ ದಲ್ಲಿ ವಿರಸ ಮುಂತಾದ ದುಷ್ಫಲಗಳು. ದಕ್ಷಿಣ ಆಗ್ನೇಯ ಲೋಪವಾಗಿ ದೋಷಪೂರಿತವಾಗಿದ್ದರೆ, ಯಜಮಾನ ನಿಗೆ ದುರಾಭ್ಯಾಸ, ದುರ್ವ್ಯಸನಗಳು,ಸಾಂಸಾರಿಕ ಕಲಹ, ವಿವಾಹದ ವಿಷಯದಲ್ಲಿ ತೊಂದರೆ, ಸ್ತ್ರೀ ಪ್ರಾಭಲ್ಯ ಹೆಚ್ಚು. ಆಗ್ನೇಯ ದಿಕ್ಕು ಪ್ರಭಲವಾಗಿ , ವಾಸ್ತು ರೀತ್ಯಾ ಶುದ್ಧವಾಗಿದ್ದರೆ, ದಾಂಪತ್ಯ ದಲ್ಲಿ ಅನ್ಯೋನ್ಯತೆ, ಸಾಮರಸ್ಯವಿರುತ್ತದೆ. ಈ ದಿಕ್ಕು ಅಗ್ನಿ ಪ್ರಾಧಾನ್ಯವಾದ್ದರಿಂದ ಈ ದಿಕ್ಕಿನಲ್ಲಿಯೇ ಅಡುಗೆ ಮನೆ, .ಟ್ರಾನ್ಸ್ಫಾರ್ಮರ್, ಜನರೇಟರ್, ಬಾಯ್ಲರ್ ಮುಂತಾದ ಅಗ್ನಿ ಸಂಭದಿ ವಸ್ತುಗಳಿದ್ದರೆ ಒಳ್ಳೆಯದು. ಪೂರ್ವದಿಕ್ಕು :--- ಪೂರ್ವ ದಿಕ್ಕಿಗೆ ಅಧಿಪತಿ ಸೂರ್ಯ, ಸೌರವ್ಯೂಹದ ಕೇಂದ್ರ ಬಿಂದುವೇ ಸೂರ್ಯ. ಸೂರ್ಯ ಅಗಾಧ ಶಕ್ತಿಯ ಕಣಜ ಎಂಬ ಅಂಶವನ್ನು ವಾಸ್ತು ತಜ್ಞರು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಸೂರ್ಯನಲ್ಲಿರುವ ಸಪ್ತವರ್ಣಗಳು ಹಾಗೂ ಸೂರ್ಯ ಕಿರಣಗಳು ಹೊರಸೂಸುವ ಅತಿ ನೇರಳೆ ಕಿರಣಗಳು, ಅವುಗಳಿಂದಾಗುವ ಒಳಿತು-ಕೆಡಕುಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯನ್ನು ವಾಸ್ತು ವಿಜ್ಞಾನ ಬಹಳ ಹಿಂದೆಯೇ ತಿಳಿಸಿದೆ. ಆದ್ದರಿಂದಲೇ ವಾಸ್ತು ಪೂರ್ವ ದಿಕ್ಕಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಿದೆ. ಪೂರ್ವ ದಿಕ್ಕು ಹಾಗೂ ಸೂರ್ಯನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. ಪೂರ್ವ ದಿಕ್ಕಿಗೆ ರವಿಯ ಉಚ್ಚಸ್ಥಾನವಾದ ಮಧ್ಯದಲ್ಲಿ ಮುಖ್ಯದ್ವಾರ ಇಡುವುದರಿಂದ ಉತ್ತಮ ಮತ್ತು ಅನುಕೂಲ. ಪೂರ್ವದ್ವಾರದ ಮುಂಬಾಗದಲ್ಲಿ ಖಾಲಿ ಜಾಗ ಹೆಚ್ಚಿದ್ದು ತಗ್ಗಾಗಿದ್ದರೆ ಮನೆಯ ಯಜಮಾನನು ಆರೋಗ್ಯವಂತನೂ, ಎಲ್ಲಾ ಕಾರ್ಯಗಳಲ್ಲಿ ಯಶಸ್ಸು, ಅಭಿವೃದ್ಧಿ , ಉನ್ನತ ಪದವಿ, ನಾಯಕತ್ವ ಗುಣ, ಕೀರ್ತಿ ಗೌರವಗಳು ಲಭಿಸುತ್ತದೆ. ದಕ್ಷಿಣ ದಿಕ್ಕು ದಕ್ಷಿಣದ ದಿಕ್ಕಿಗೆ ಅಧಿಪತಿ ಕುಜಗ್ರಹ, ದಿಕ್ಪಾಲಕ ಯಮ , ಕುಜಗ್ರಹ ವು ಧೈರ್ಯಕ್ಕೆ ಬ್ರಾತ್ರುವಿಗೆ ಕಾರಕನು, ಮುಂಗೋಪ, ಮನೆಯ ಯಜಮಾನ ನಿಗೆ ಧೈರ್ಯ ಸಾಹಸಗಳನ್ನು ತುಂಬುತ್ತಾನೆ, ಕ್ರೀಡಾಭಿಮಾನಿ, ಅಚಲ ನಿರ್ಧಾರಗಳನ್ನು ತೆಗೆದುಕೊಳ್ಳುವರೂ ಆಗುತ್ತಾರೆ. ಉತ್ತರ ದಿಕ್ಕು ಸ್ತ್ರೀ ಭಾಗವಾದಾಗ ಅದರ ವಿರುದ್ದದ ದಕ್ಷಿಣ ವೂ ಸಹ ಸ್ತ್ರೀ ಭಾಗವಾಗುತ್ತದೆ, ಹಾಗಾಗಿ ಈ ದಿಕ್ಕು ಮನೆಯ ಹೆಂಗಸರ ಮೇಲೂ ಪರಿಣಾಮ ಬೀರುತ್ತದೆ, ಜೊತೆಗೆ ಸಾಹಸ ಉತ್ಸಾಹ ಗಳನ್ನು ಪ್ರತಿನಿಧಿಸುತ್ತದೆ. ದಕ್ಷಿಣದ ದಿಕ್ಕು ಎತ್ತರವಾಗಿದ್ದರೆ, ಆ ಮನೆಯಲ್ಲಿ ವಾಸಿಸುವವರು ಆರೋಗ್ಯವಂತರು, ಹಣಬಲವುಳ್ಳವರೂ ಆಗುತ್ತಾರೆ, ಆದ್ದರಿಂದ ದಕ್ಷಿಣ ವನ್ನು ಎತ್ತರವಾಗಿರಿಸಿ ಮನೆಯಲ್ಲಿ ಬೇಡವಾದ , ಉಪಯೋಗಿಸದ ವಸ್ತುಗಳನ್ನು ಈ ಭಾಗದಲ್ಲಿ ಹಾಕಿದರೆ ಶುಭ, ಈ .ಭಾಗದಲ್ಲಿ ಎತ್ತರದಲ್ಲಿ ಕೋಣೆಗಳನ್ನು ಕಟ್ಟಿದರೆ ಹಣವಂತರಾಗುತ್ತಾರೆ. ದಕ್ಷಿಣದ ದಿಕ್ಕಿನಲ್ಲಿ ಹೆಚ್ಚು ಖಾಲಿ ಜಾಗ ವಿರಬಾರದು, ಹೆಚ್ಚು ತಗ್ಗಿರಬಾರದು, ಯಾವುದೇ ರೀತಿಯ ಹಳ್ಳ, ಶೌಚಾಲಯ ಇರಬಾರದು, ಈ ದಿಕ್ಕಿನ ದಿಕ್ಪಾಲಕ ಯಮ ನಾದ್ದರಿಂದ, ವಾಸ್ತು ಲೋಪವಿದ್ದಲ್ಲಿ ಮನೆಯ ಸ್ತ್ರೀ, ಯಜಮಾನ ಅಕಾಲ ಮರಣಕ್ಕೀಡಾಗುವ ಸಂಭವ, ಆರ್ಥಿಕ ನಷ್ಟ, ಕಳ್ಳತನ ವಾಗುವ ಸಂಭವವೂ ಇರುತ್ತದೆ, ಈ ದಿಕ್ಕು ಎತ್ತರವಿದ್ದು, ಭವನವೂ ಎತ್ತರವಿದ್ದು, ಸಾಕಷ್ಟು ಭಾರವಾಗಿದ್ದಲ್ಲಿ ಮನೆಯ ಯಜಮಾನ ಹಾಗೂ ಮನೆಯ ಸ್ತ್ರೀಯರು ಸುಖವಾಗಿಯೂ ನಿರೋಗಿಗಳಾಗಿಯೂ ಇರುತ್ತಾರೆ, ಈ ದಿಕ್ಕಿನಲ್ಲಿ ಎತ್ತರದ ಮರಗಳನ್ನು ಬೆಳೆಸಬಹುದು, ಈ ದಿಕ್ಕಿನಲ್ಲಿ ಹಣ ಇರಿಸುವುದರಿಂದ ಆರ್ಥಿಕ ಒಳ ಹರಿವು ಹೆಚ್ಚಾಗುತ್ತದೆ. *ನೈಋತ್ಯ ದಿಕ್ಕು : ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಮೂಲೆಯೇ ನೈಋತ್ಯ. ದಿಕ್ಕು. ನೈಋತ್ಯ ದಿಕ್ಕಿಗೆ ರಾಹು ಅಧಿಪತಿ, (ಕೆಲವರ ಪ್ರಕಾರ ರಾಹು ಕೇತುಗಳಿಬ್ಬರೂ ಈ ದಿಕ್ಕಿಗೆ ಅಧಿಪತಿ ) ಅಷ್ಟದಿಕ್ಪಾಲಕ ರಲ್ಲಿ ನಿರುಋತಿ ಈ ಭಾಗದ ದಿಕ್ಪಾಲಕ. ವಾಸ್ತು ನಿಯಮದ.ಪ್ರಕಾರ ಈ ದಿಕ್ಕು ರಾಕ್ಷಸರ ದಿಕ್ಕೆಂದು ಕರೆಯಲ್ಪಟ್ಟಿದೆ. ಈ ದಿಕ್ಕು ಮನೆಯ ಯಜಮಾನನ ಆಳ್ವಿಕೆ, ಧನಾಗಮ, ನೆಮ್ಮದಿ, ಸುಖ ಸಂತೋಷ ಇವುಗಳನ್ನು ಪ್ರತಿನಿಧಿಸುತ್ತದೆ. ಈ ದಿಕ್ಕಿನ ಅಧಿಪತಿ ರಾಹು ಪಾಪಗ್ರಹವಾದ್ದರಿಂದ, ಈ ದಿಕ್ಕಿನ ಮೇಲೆ ಹೆಚ್ಚು ಭಾರ ಮತ್ತು ಹೊರೆಯನ್ನು ಇಡಬೇಕೆಂಬ ದೃಷ್ಟಿಯಿಂದ ಈ ದಿಕ್ಕು ಎತ್ತರವಾಗಿರಬೇಕು, ಈ ದಿಕ್ಕಿನಲ್ಲಿ ಹೆಚ್ಚಿನ ಭಾರ ಇರುವಂತೆ ಮನೆಯ ಮೇಲೆ ಎತ್ತರವಾಗಿ ಕಟ್ಟಿಸಬೇಕು, ನೀರಿನ ಟ್ಯಾಂಕ್ ಈ.ದಿಕ್ಕಿನಲ್ಲಿಯೇ ಇಡಬೇಕು. ಇದಲ್ಲದೆ ಮೆಟ್ಟಿಲುಗಳನ್ನೂ ಈ ದಿಕ್ಕಿನಲ್ಲಿ ನಿರ್ಮಿಸ ಬಹುದು. ಮನೆಯ ಯಜಮಾನ ನ ಕೋಣೆಯು ಈ ದಿಕ್ಕಿನಲ್ಲಿಯೇ ಇರಬೇಕು, ಕಚ್ಚಾ ಸಾಮಗ್ರಿ ಗಳನ್ನಿರಿಸಲು ಮೆಶೀನು, ಹಣದ ಗಲ್ಲಾಪೆಟ್ಟಿಗೆ ( ಉತ್ತರದಿಕ್ಕಿಗೆ ಮುಖವಿರುವಂತೆ) ಯನ್ನೂ ಈ ದಿಕ್ಕಿನಲ್ಲಿಯೇ ಇರಿಸಬೇಕು. ಹೀಗೆ ಯಾವುದೇ ರೀತಿಯ ಲೋಪವಿಲ್ಲದೆ ಶುದ್ಧವಾಗಿದ್ದರೆ ಮನೆಯ ಯಜಮಾನನಿಗೆ ಉತ್ತಮ ಆರೋಗ್ಯ, ಧನಾಗಮ, ನೆಮ್ಮದಿ ಸುಖ ಸಂತೋಷ ವಿರುತ್ತದೆ. ನೈಋತ್ಯ ದಿಕ್ಕಿನಲ್ಲಿ ಹಳ್ಳ, ಭಾವಿ, ಕೆರೆ, ಕುಂಟೆ ಇದ್ದರೆ, ನಿವೇಶನ ನೈಋತ್ಯ ಭಾಗದಲ್ಲಿ ತಗ್ಗಿದ್ದರೆ ತೊಂದರೆ, ಪಾಪಗ್ರಹಗಳ ಬಲ ಹೆಚ್ಚಾಗಿ, ಕ್ರೂರ ಫಲಗಳನ್ನು ಪಡೆಯಬೇಕಾಗುತ್ತದೆ. ನೈರುತ್ಯ ದಿಕ್ಕಿನಲ್ಲೂ ಎರಡು ಭಾಗವಾಗಿ ವಿಂಗಡಿಸಬಹುದು *, ದಕ್ಷಿಣ ನೈಋತ್ಯ ಹಾಗೂ ಪಶ್ಚಿಮ ನೈಋತ್ಯ.* ದಕ್ಷಿಣದ ನೈಋತ್ಯ ಲೋಪವಾಗಿದ್ದಲ್ಲಿ ಮನೆಯ ಯಜಮಾನನಿಗೆ ಆಯುಷ್ಯದ ತೊಂದರೆ, ಆಕಸ್ಮಿಕ ಅಪಘಾತಗಳು, ಮೃತ್ಯು, ಆತ್ಮಹತ್ಯೆ ಪ್ರಯತ್ನ ಗಳು ನಡೆಯುತ್ತವೆ. ಪಶ್ಚಿಮ ನೈಋತ್ಯ ಲೋಪವಾಗಿದ್ದರೆ, ಯಜಮಾನನಿಗೆ ದುಶ್ಚಟಗಳು, ಕಾನೂನಿನ ಉಲ್ಲಂಘನೆ, ಗೌರವ ಮರ್ಯಾದೆಗೆ ಧಕ್ಕೆ, ಅನಾರೋಗ್ಯ , ದುರ್ಮರಣಕ್ಕೀಡಾಗುವುದು, ಹತ್ಯೆ, ಪುತ್ರಸಂತತಿ ಇಲ್ಲದಿರುವಿಕೆ, ಸ್ರೀಸ್ವತ್ತು, ಸ್ತ್ರೀಯರ ಪ್ರಭಾವ ಜಾಸ್ತಿಯಾಗುತ್ತದೆ. ಈ ದಿಕ್ಕಿನಲ್ಲಿ ತೆರೆದಿಡುವಿಕೆ ಅಂದರೆ.ಕಿಟಿಕಿಗಳು ಬಾಗಿಲುಗಳು ಇರಬಾರದು, ಶೌಚಾಲಯ, ಬೋರ್ವೆಲ್ ಗಳೂ ಇರಬಾರದು. ನೈಋತ್ಯ ದಿಕ್ಕಿನಲ್ಲಿ ಆವರಣದಲ್ಲಿ ಖಾಲಿ ಜಾಗವಿದ್ದರೆ ಎತ್ತರವಾದ ಗಿಡಮರಗಳನ್ನು ಬೆಳೆಸುವ ಮೂಲಕ ದೋಷವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ವಾಯುವ್ಯ ದಿಕ್ಕು :---- ಪಶ್ಚಿಮ ಹಾಗೂ ಉತ್ತರದಿಕ್ಕಿನ ಮೂಲೆಯೇ ವಾಯುವ್ಯದಿಕ್ಕು. ಈ ದಿಕ್ಕಿನ ದಿಕ್ಪಾಲಕ ವಾಯುದೇವ, ಅಧಿಪತಿ ಚಂದ್ರ, ಚಂದ್ರನ ಸ್ವಭಾವ ನಡತೆ, ಗುಣಗಳನ್ನು ಈಭಾವ ಪ್ರತಿನಿಧಿಸುತ್ತದೆ. ಚಂದ್ರನು ಸ್ರೀಗ್ರಹವಾದ್ದರಿಂದ ಈ ಭಾಗದ ಫಲಾಪಲಗಳು ಮನೆಯ ಹೆಂಗಸರ ಮೇಲೆ ಹಾಗೂ ಮೂರನೆಯ ಸಂತಾನದ ಮೇಲೆ , ಮನೆಯವರ ನಡತೆ ಹಾಗೂ ವ್ಯವಹಾರವನ್ನು ಪ್ರತಿಬಿಂಬಿಸುತ್ತದೆ. ವಾಯುವ್ಯ ದಿಕ್ಕಿನಲ್ಲಿಯೂ ಎರಡು ಭಾಗವಾಗಿ ವಿಂಗಡಿಸಬಹುದು, *ಪಶ್ಚಿಮ ವಾಯುವ್ಯ ಹಾಗೂ ಉತ್ತರ ವಾಯುವ್ಯ*. *ಪಶ್ಚಿಮ ವಾಯುವ್ಯ :---* ಪಶ್ಚಿಮ ವಾಯುವ್ಯ ದಿಕ್ಕಿಗೆ ಶನಿ ಮತ್ತು ಚಂದ್ರರ ಅಧಿಪತ್ಯ ಉಂಟಾಗುತ್ತದೆ. ಶನಿಯು ಕರ್ಮ ಕಾರಕ ಹಾಗೂ ಅಧ್ಯಾತ್ಮ ಕಾರಕ, ಹಾಗೂ ಸೇವಾ ಮನೋಭಾವವನ್ನು ಸೂಚಿಸುತ್ತಾನೆ. ಚಂದ್ರನು ಮನಃಕಾರಕ, ಸದಾ ಅಲೋಚನೆಯುಳ್ಳವನು, ವಾಯುವ್ಯ ಮೂಲೆಯು ಬೆಳೆದಿರುವುದಾಗಲೀ, ಕಡಿತವಾಗಿರುವುದಾಗಲೀ ಆಗಿರಬಾರದು, ಸಮವಾಗಿರಬೇಕು, ಹಾಗಿದ್ದಲ್ಲಿ ಮನೆಯ ಯಜಮಾನ ಕರ್ಮದಲ್ಲಿ ಆಸಕ್ತಿ ಯುಳ್ಳವನು ಸದಾ ಕರ್ಮನಿರತನು, ಅಧ್ಯಾತ್ಮಕ್ಕೆ ಹೆಚ್ಚು ಆಸಕ್ತಿ, ಒಲವನ್ನು ತೋರಿಸುವವು, ಈ ದಿಕ್ಕು ಲೋಪವಿಲ್ಲದೆ ಶುದ್ಧವಾಗಿದ್ದಲ್ಲಿ ಯಜಮಾನನ ವ್ಯವಹಾರ ಉತ್ತಮವಾಗಿರುತ್ತದೆ, ಸಿರಿತನವಿರುತ್ತದೆ. ಈ ದಿಕ್ಕು ಲೋಪವಾಗಿದ್ದಲ್ಲಿ ದುರ್ವ್ಯಸನಗಳಿಗೆ ಒಳಗಾಗಿ ಸಂಸಾರದಲ್ಲಿ ನಿರಾಸಕ್ತಿ ಉಂಟಾಗಿ ಸನ್ಯಾಸ ಸ್ವೀಕರಿಸುವ ಸಂಭವ ಅಥವಾ ಅಪಮೃತ್ಯುವಿಗೆ ತುತ್ತಾಗಬಹುದು. *ಉತ್ತರ ವಾಯುವ್ಯ :---*ಉತ್ತರ ವಾಯುವ್ಯ ವನ್ನು ಪ್ರತಿನಿಧಿಸುವ ಗ್ರಹರು ಬುಧ ಮತ್ತು ಚಂದ್ರರು. ಈ ದಿಕ್ಕು ಪ್ರಭಲವಾಗಿದ್ದಲ್ಲಿ ಮನೆಯ ಯಜಮಾನಿ ಹಾಗೂ ಮನೆಯ ಹೆಣ್ಣುಮಕ್ಕಳು ಬುದ್ಧಿವಂತರು ಆರೋಗ್ಯವಂತರು ಆಗಿರುತ್ತಾರೆ. ಈ ದಿಕ್ಕು ಲೋಪವಾಗಿದ್ದಲ್ಲಿ ಮನೆಯ ಹೆಂಗಸರ ಅನಾರೋಗ್ಯ, ಮಾನಸಿಕ ಅಸ್ವಸ್ಥತೆ, ಕೃತ್ರಿಮ ವ್ಯವಹಾರಗಳು ವ್ಯವಹಾರದಲ್ಲಿ ಅಪಜಯ, ಹಲವು ದುರಭ್ಯಾಸಕ್ಕೆ ತುತ್ತಾಗುವುದು, ಕೋರ್ಟ್ ಕೇಸು, ಕಳ್ಳರ ಭಯ, ಮನಃಶಾಂತಿ ಇಲ್ಲದಿರುವುದು ಚಂಚಲತೆ, ಕಷ್ಟನಷ್ಟಗಳು, ಪರಾಧೀನತೆ ಉಂಟಾಗುತ್ತದೆ. ಈ ದಿಕ್ಕು ತಗ್ಗಾಗಿದ್ದು, ಭಾವಿ , ಹಳ್ಳ ಮುಂತಾದುವಿದ್ದರೆ, ವ್ಯಾಧಿ ಹಾಗೂ ಜಗಳಗಳು, ಮನೆಯ ಯಜಮಾನಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೇ. ವಾಯುವ್ಯ ಭಾಗವು ಎತ್ತರವಾಗಿದ್ದರೆ ಯಜಮಾನನು ಸಾಲಗಾರನಾಗಬೇಕಾಗುತ್ತದೆ. ವಾಯುವ್ಯ ದೊಷವಿರುವ ಮನೆಯಲ್ಲಿ ಹುಟ್ಟಿದ ಮಕ್ಕಳು ಅಂಗಹೀನರಾಗುತ್ತಾರೆ. ವಾಯುವ್ಯ ಭಾಗವು ಈಶಾನ್ಯ ಕ್ಕಿಂತ ಸ್ವಲ್ಪ ಎತ್ತರವಾಗಿರಬೇಕು, ನೈಋತ್ಯ ಭಾಗಕ್ಕಿಂತ ತಗ್ಗಾಗಿರಬೇಕು. ವಾಯುವ್ಯ ಭಾಗವು ಬೆಳೆದಿರಬಾರದು ಹಾಗೂ ಕಡಿತವಾಗಿರಬಾರದು, 90° ಸಮವಾಗಿರಬೇಕು. ಈ ದಿಕ್ಕಿನಲ್ಲಿ ಮಲಗುವ ಕೋಣೆ, ದನದಕೊಟ್ಟಿಗೆ, ಗ್ಯಾರೇಜ್, ಅತಿಥಿ ಹಾಗೂ ನೌಕರರ ಕೋಣೆಗಳೂ ನಿರ್ಮಾಣ ಮಾಡಬಹುದು, ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಲಾಗದ ಸಂದರ್ಭದಲ್ಲಿ ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಬಹುದು. -SangrahaMahiti (FB)

*ಚಂದ್ರ - ರಾಹು ಸಂಯೋಗ :

ಈ ಸಂಯೋಗ ಇರುವ ಜಾತಕರದು ಸ್ವಾರ್ಥ ಪರತೆ, ಹಠ, ಛಲ, ಯಾವುದೇ ವ್ಯವಹಾರವಾಗಲಿ ತಮಗೇ ಮೊದಲು ಸಿಗಬೇಕು, ಅಗಣಿತ ಲಾಭವಾಗಬೇಕು ಎಂಬಾಸೆಯುಳ್ಳವರು. ರಾಹುವಿನಿಂದ ಪೈಶಾಚಿಕ ಮನಸ್ಸು, ಇವರನ್ನು ಸುಮ್ಮನಿರಲೂ ಬಿಡುವುದಿಲ್ಲ. ಸದಾ ಗ್ರಹಬಡಿದವರಂತೆ ಕಾಣುತ್ತಾರೆ. ಶಕ್ತಿ ದೇವಸ್ಥಾನಗಳಿಗೆ ಹೋಗುತ್ತಾರೆ, ನಿಂಬೆ ಹಣ್ಣಿನ ದೀಪ ಹಚ್ಚುವುದು, ದೇವಿಯ ಅಖಂಡ ಪೂಜೆ, ಮೈಮೇಲೆ.ದೇವರು ಬಂದಂತೆ ಕುಣಿಯುವುದು, ಹರಿಸಿನ - ಕುಂಕುಮ - ವಿಧವಿಧವಾದ ಎಲೆ, ಕಾಯಿಗಳನ್ನು ಅಗಿದು ತಿನ್ನುವುದು, ಮೈಕೈಗೆಲ್ಲಾ ಶಸ್ತ್ರಗಳಿಂದ ಚುಚ್ಚಿಕೊಂಡು, ಕುಣಿದು ಭಕ್ತಿ ಪ್ರದರ್ಶನ ಮಾಡುವುದು, ಕೆಲವೊಮ್ಮೆ ಮೈಮೇಲಿನ ಬಟ್ಟೆಯ ಪರಿವೆಯೂ ಇರುವುದಿಲ್ಲ. ಇವರುಗಳು ಪ್ರೇತ, ಭೂತ, ಭಾನಾಮತಿ ಮುಂತಾದುವುಗಳ ವಶಕ್ಕೆ ಬೇಗ ಒಳಗಾಗುತ್ತಾರೆ, ಗಾಳಿ ಸಂಬಂಧ, ಪ್ರೇತ ಸಂಭಂದ ಗ್ರಹಗಳು ಇವರ ಶರೀರದಲ್ಲಿ ಸೇರಿ ಇವರ ಬುದ್ಧಿ, ಮನಸ್ಸು, ಶರೀರ, ನರಗಳನ್ನು ದೌರ್ಬಲ್ಯ ಮಾಡಿ ಯಾವ ಕೆಲಸಕ್ಕೂ ಬರದವರಂತೆ ಮಾಡುತ್ತವೆ. ಇದರಿಂದಲೇ ದೇವರು ಮೈಮೇಲೆ ಬಂದವರಂತೆ ಕುಣಿದು, ದಣಿದು ನೆಲಕ್ಕೆ ಬೀಳುತ್ತಾರೆ. ಈ ಸಂಯೋಗಕ್ಕೆ ಕುಜನ ಸಂಬಂದ ಬಂದರೆ ಪರಿಸ್ಥಿತಿ ಕ್ರೂರವಾಗಿ ಶರೀರಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಶನಿ ಸಂಬಂದ ಬಂದ್ರೆ ಮಂಕಾಗಿ, ಮನೋರೋಗದವರ ಹಾಗೆ ಮೂಲೆಯಲ್ಲಿ ಕುಳಿತುಬಿಡುತ್ತಾರೆ, ಇಲ್ಲವೇ ಮನೆ ಬಿಟ್ಟು ಹೋಗುತ್ತಾರೆ. ಚಂದ್ರನು ಬಲಿಷ್ಠ ನಾಗಿದ್ದರೆ ಇಂತಹ ಪರಿಸ್ಥಿತಿ ಬರುವುದಿಲ್ಲ, ಬಂದರೂ ಶಾಂತರಾಗಿರುತ್ತಾರೆ, ಪರಿಸ್ಥಿತಿ ವಿಕೋಪಕ್ಕೆ ಹೋಗದಿದ್ದರೂ, ಆ ಛಾಯೆ ಹೋಗುವುದಿಲ್ಲ, ಒಂದಲ್ಲ ಒಂದು ದಿನ ಮನೋರೋಗಕ್ಕೆ ತುತ್ತಾಗುತ್ತಾರೆ. ರಾಹು ಬಲಿಷ್ಟ ನಾದರೆ ಒಂದು ರೀತಿಯ ಗ್ರಹಣಯೋಗವುಂಟಾಗಿ ಬಳಲುವರು. ರಾಹು - ಸರ್ಪ, ಬಾಯಿ. ಚಂದ್ರನನ್ನು ನುಂಗಿ ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವನು, ಹಾಗಾಗಿ ಮನಸ್ಸೂ, ಜೀವನ ಎರಡೂ ಕಾಣದೆ, ಸಂಘರ್ಷದ ಜೀವನದಿಂದ ತೊಳಲಾಡುವರು. ಕಷ್ಟಗಳಿಗೆ ಹೆದರಿ , ಜೀವನವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ವಿಷಪ್ರಾಶನದಿಂದ ಆತ್ಮಹತ್ಯೆ ಮಾಡಿಕೊಳ್ಳುವರು. ರಾಹು - ಚಂದ್ರನ ಸಂಯೋಗ, ನೀಚ ರಾಶಿ - ನವಾಂಶ, ಪಾಪ ರಾಶಿ -ನವಾಂಶ, ಕ್ರೂರ ರಾಶಿ - ನಮಾಂಶ ದಲ್ಲಿದ್ದು ಕುಜನ ಸಂಪರ್ಕ ದಲ್ಲಿದ್ದರೆ, ನೀಚರ ಸಹವಾಸದಿಂದ ಜೀವನ ಹಾಳು ಮಾಡಿಕೊಳ್ಳುವರು. ಈ ಮೂರರ ಸಂಯೋಗದ ಜೊತೆ ಶುಕ್ರನೇನಾದರೂ ಸೇರಿದರೆ, ಅತ್ಯಾಚಾರ - ಕೊಲೆಗೀಡಾಗುವರು. ದೇಹದ ಅಂಗಗಳನ್ನು ಕತ್ತರಿಸಿಕೊಳ್ಳೋದು, ವಾಹಣಗಳಡಿಗೆ ತಲೆ ಕೊಟ್ಟು ಸಾಯೋದು, ಉದ್ದೇಶಪೂರ್ವಕವಾಗೇ ಅಪಘಾತ ಮಾಡುವುದು. ಜೈಲುವಾಸ, ಅಲೆಮಾರಿ ಜೀವನ, ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯಾ ನಿರ್ಧಾರ ಮಾಡುವುದು. ದುಶ್ಚಟಗಳಿಗೆ ಬಲಿಯಾಗುವುದು. ಅಫೀಮು, ಗಾಂಜಾ, ಡ್ರಗ್ಸ್ ತೆಗೆದುಕೊಳ್ಳುವುದು ಮಾಡುತ್ತಾರೆ. ಇಂತಹವರಿಗೆ ಶನಿ ಸಂಪರ್ಕ ಬಂದರೆ ಎತ್ತರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು, ಅಂಗಾ0ಗಗಳಿಗೆ ಊನ ಮಾಡಿಕೊಳ್ಳುವುದು, ಹಿರಿಯರು - ಕಿರಿಯರು, ಬಂಧುಗಳು ಎಂಬ ತಾರತಮ್ಯವೂ ಇಲ್ಲದೆ ಎಲ್ಲರನ್ನೂ ಹೆದ್ರಿಸಿ, ಬೆದರಿಸಿ ಕೊಲೆ ಮಾಡಲು ಸಜ್ಜಾಗುವುದು. ಒಟ್ಟಿನಲ್ಲಿ... ಭಯಂಕರ, ವಿಕೃತ ಮನಸ್ಸಿನವರಾಗಿರುತ್ತಾರೆ. ಚಂದ್ರ ಬಲವಾಗಿ ಶುಭದೃಷ್ಟಿಇದ್ದರೆ ಫಲಗಳಲ್ಲಿ ವ್ಯತ್ಯಾಸವಿರುತ್ತೆ... -SangrahaMahiti(FB)

ಅಭಿಜಿನ್ಮಹೂರ್ತ(ಅಭಿಜಿನ್ ಮುಹೂರ್ತ)

ಅಭಿಜಿನ್ಮಹೂರ್ತ 1, *ನಕ್ಷತ್ರ ದೋಷಮ್ ತಿಥಿವಾರ ದೋಷಮ್ ಗಂಡಾಂತ ದೋಷಮ್ ಕುಮುಹೂರ್ತ ದೋಷಮ್ ಲಗ್ನಾದಿ ಪಂಚಾಂಗ ವಿರುದ್ಧ ದೋಷಮ್ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* 2. ಅವಗಣ ಶತ ದೋಷಮ್ ಲಕ್ಷಕೋಟಿ ಪ್ರದೋಷಮ್ ಆಯುತ ವಿಯುತ ದೋಷಮ್ ಶಂಖಪದ್ಮಾದಿದೋಷಮ್ ರವಿ ಶನಿ ಕುಜ ದೋಷಮ್ ಹರತು ಸಕಲ ದೋಷಮ್ ಅಂತ್ಯ ಮಧ್ಯಾಹ್ನ ಲಗ್ನಮ್ 3. *ವಿಷ ವ್ಯತೀಪಾತ ಕುಜಾರ್ಥ ದೋಷಮ್ ಏಕಾರ್ಗಳಾವೀನ ಭವ ಸಂಭವಾಶ್ಚ ಖಮದ್ಯದೋಷಮ್ ಮಪಿ ಚಂಡರಶ್ಮಿ ನಿಹಂತ್ಯ ದೋಷಾಮ್ ಅಭಿಜಿನ್ಮಹೂರ್ತಮ್* ಇವು ಜ್ಯೋತಿಷ್ಯ ನಿಘಂಟು ವಿನಲ್ಲಿ ಇರುವ ಶ್ಲೋಕಗಳು ಈ ಮೇಲಿನ ಶ್ಲೋಕಗಳೆಲ್ಲಾ ಅಭಿಜಿನ್ಮಹೂರ್ತದ ಮಹತ್ವವನ್ನು ಸಾರುತ್ತಾ ಇವೆ. ಎಷ್ಟೆಲ್ಲಾ ದೋಷಗಳು ಅಭಿಜಿನ್ ಮಹೂರ್ತದಿಂದ ನಾಶವಾಗುತ್ತೆ ಅಂದಾಗ ಈ ಅಭಿಜಿನ್ ಮಹೂರ್ತ ಎಂದರೇನು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ ಅಲ್ವಾ...? ಈ ಅಭಿಜಿನ್ಮಹೂರ್ತ ಪ್ರತಿದಿನವೂ ಬರುತ್ತೆ. ಪ್ರತಿದಿನ ಮಧ್ಯಾಹ್ನ 12 ರಿಂದ 12 - 30 ರ ಒಳಗಿನ ಈ 20 ರಿಂದ 30 ನಿಮಿಷಗಳ ಕಾಲವನ್ನ ಅಭಿಜಿನ್ಮಹೂರ್ತ ಅನ್ನುತ್ತಾರೆ. ಈ ಮಹೂರ್ತ ಲಗ್ನಕ್ಕೆ ದಶಮದಲ್ಲಿ ಸೂರ್ಯ ಬರುವುದರಿಂದ, ಸೂರ್ಯನು ದಶಮದಲ್ಲಿ ದಿಗ್ಬಲನಾಗಿರುವುದರಿಂದ ಈ ಅಭಿಜಿನ್ಮಹೂರ್ತಕ್ಕೆ ಬಲವಿರುವುದು. ಹಾಗಾಗಿ ಈ ಮಹೂರ್ತ ಶ್ರೇಷ್ಠ ಎನ್ನಲಾಗಿದೆ. ಆದ್ರೆ ಸೂರ್ಯ ನೀಚನಾಗಿರಬಾರದು, ಮತ್ತು ಪಾಪಗ್ರಹಗಳ ಸಂಬಂಧ ಬರಬಾರದು ಹಾಗೂ ಮೂಲ ಜಾತಕದ ಸೂರ್ಯ ನೀಚನಾಗಿರಬಾರದು. -SangrahaMuhurtha(FB)

ಕುಂಡಲಿಯಲ್ಲಿ ಧನಯೋಗ

ಹೋರಾ ಕುಂಡಲಿಯಲ್ಲಿ ಧನಯೋಗ 30° ಯ ರಾಶಿಯನ್ನು ಸಮಭಾಗ ಮಾಡಿದಾಗ ಪ್ರತಿ ಭಾಗ ಒಂದೊಂದು ಹೋರೆಯಾಗುತ್ತದೆ. ಅಂದರೆ ಒಂದು ರಾಶಿಯಲ್ಲಿ ಎರಡು ಹೋರೆಗಳು. ಸಮರಾಶಿಯಲ್ಲಿ ಮೊದಲ 15° ಯ ವರೆಗಿನದ್ಧು ಚಂದ್ರಹೋರೆ, ನಂತರದ 15° (15° -30°) ವರೆಗೆ ರವಿಹೋರೆ. ಬೆಸರಾಶಿಗಳಲ್ಲಿ ಮೊದಲ 15° ಯವರೆಗೆ ರವಿ ಹೋರೆ, ನಂತರದ 15° (15° -30°) ವರೆಗೆ ಚಂದ್ರ ಹೋರೆ. ಚಂದ್ರ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ, ಕಡಿಮೆ ಪ್ರಯತ್ನ ಕ್ಕೇ ಹೆಚ್ಚು ಸಂಪಾದನೆ. ರವಿ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ ಪ್ರಯತ್ನಕ್ಕೆ ತಕ್ಕಂತೆ ಫಲ. ಒಳ್ಳೇ ಗ್ರಹಗಳಿದ್ದರೆ ಒಳ್ಳೇ ದಾರಿಯಲ್ಲಿ ಸಂಪಾದನೆ. ಇದು ಮೇಲ್ನೋಟಕ್ಕೆ ಕಾಣುವ ವಿಚಾರ, ಆಳ ಅಧ್ಯಯನದ ಮೂಲಕ ಯಾವ ಪ್ರಮಾಣದಲ್ಲಿ ಧನ ಸಂಪಾದನೆ ಅಥವಾ ಧನಲಾಭ ಅನ್ನುವ ವಿಚಾರವನ್ಮು ತಿಳಿಯಬಹುದು.. ಅವುಗಳೆಂದರೆ.... ★ ಪುರುಷ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ.... ★ ಸ್ತ್ರೀ ರಾಶಿಯಲ್ಲಿನ ಸ್ರೀಗ್ರಹಗಳು ಚಂದ್ರಹೋರೆಯಲ್ಲಿದ್ದರೆ 100% ಶುಭಫಲ ( ಅನಾಯಾಸ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ... ★ ಪುರುಷ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..75% ಫಲ ( ಕಡಿಮೆ ಪರಿಶ್ರಮದಿಂದ ಅಧಿಕ ಧನಲಾಭ ). ★ ಪುರುಷ ರಾಶಿಯಲ್ಲಿನ ಪುರುಷ ಗ್ರಹ ಚಂದ್ರ ಹೋರೆ ಯಲ್ಲಿದ್ದರೆ... ★ ಸ್ತ್ರೀ ರಾಶಿಯಲ್ಲಿನ ಸ್ತ್ರೀ ಗ್ರಹ ರವಿ ಹೋರೆ ಯಲ್ಲಿದ್ದರೆ.. 50% ಫಲ ( ಶ್ರಮಕ್ಕೆ ತಕ್ಕಂತೆ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ ... ★ ಪುರುಶ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..25% ಫಲ ( ಅಧಿಕ ಶ್ರಮ ಅಲ್ಪಲಾಭ ). ಜಾತಕದಲ್ಲಿ ಈ ರೀತಿಯ ಗ್ರಹ ಸಂಯೋಜನೆ ಯಿಂದ ನಮ್ಮ ಧನ ಸಂಪಾದನೆಯನ್ನು ನಿರ್ಧರಿಸಬಹುದು. ಧನಯೋಗ ಮೊದಲನೆಯದಾಗಿ... 1) ಭಾವ 2) ಭಾವಾಧಿಪತಿ 3) ಭಾವಾಧಿಪತಿ ಸ್ಥಿತ ಸ್ಥಾನ 4) ಭಾವಾಧಿಪತಿಯನ್ನು ದೃಷ್ಟಿಸುವ ಗ್ರಹ 5) ಯುತಿ 6) ಧನಕಾರಕ 7) ಧನಯೋಗ... ಇವಿಷ್ಟನ್ನೂ ಪರಿಶೀಲಿಸಬೇಕಾಗುತ್ತದೆ. 2ನೇ ಭಾವಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ .. ಏಕೆಂದರೆ 80% ರಿಸಲ್ಟ್ ಬಾವದಿಂದ ಸಿಗುತ್ತೆ. ನಂತರ ಧನಕಾರಕ(ಗುರು) ವನ್ನು ನೋಡಬೇಕು, ಗುರು ಉತ್ತಮ ಸ್ಥಾನದಲ್ಲಿ ಸ್ಥಿತನಾಗಿದ್ರೆ ಒಳ್ಳೆಯ ಫಲ... ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸ. ನಂತರ ಧನಭಾವ ಯಾವ ಸ್ವಭಾವ ಅನ್ನೋದನ್ನ ತಿಳಿಬೇಕು. ಧನಭಾವ ಚರರಾಶಿಯಾದರೆ.. ಒಮ್ಮೆಗೇ ಧಿಡೀರ್ ಹಣದ ಹರಿವು, ಉತ್ತಮ ಸಂಪಾದನೆ. ಧನಭಾವ ಸ್ಥಿರರಾಶಿಯದರೆ..ಜೀವನ ಪೂರ್ತಿ ನಿಶ್ಚಿತ ಹಣದ ಹರಿವು . ದ್ವಿಸ್ವಭಾವ ರಾಶಿಯಾದರೆ.. ಧನದ ಹರಿವಿನಲ್ಲಿ ಏರಿಳಿತವಿರುತ್ತದೆ. ನಂತರ ಧನಸ್ಥಾನ ಅಥವಾ ಧನಾಧಿಪತಿ ಇರುವ ದಿಕ್ಕು.. ತತ್ವ.. ಇವುಗಳ ಆಧಾರದ ಮೇಲೆ ಧನದ ಮೂಲ ಯಾವುದರಿಂದ ಅನ್ನುವುದನ್ನು ತಿಳಿಯಬಹುದು. 12 ಭಾವಗಳಿಂದಲೂ ಹಣದ ಹರಿವನ್ನು ತಿಳಿಯಬಹುದು. ಆದ್ರೆ 1, 2, 9, 10, 11 , 12 ನೇ ಭಾವಗಳು ಮುಖ್ಯ. ದಾರಿದ್ರ್ಯಭಾವ.. 3, 6, 8, 12. ಇಲ್ಲಿ ..ಧನ - ಹಾಗೂ ದಾರಿದ್ರ್ಯಭಾವಗಳೆರದರಲ್ಲೂ 12 ಮನೆಯನ್ನು ಪರಿಗಣಿಸಬೇಕು. 12ನೇ ಮನೆ ಧನಭಾವಗಳ ಜೊತೆ ಸಂಬಂಧ ಬಂದರೆ ಧನಭಾವ... 12ನೇ ಮನೆ ದರಿದ್ರಭಾವಗಳ ಜೊತೆ ಸಂಬಂಧ ಬಂದರೆ ದರಿದ್ರಭಾವ. ( 12 ನೇ ಭಾವ ದೂರಪ್ರಯಾಣ - ವಿದೇಶಿಪ್ರಯಾಣವನ್ನು ಸೂಚಿಸುತ್ತೇ) ನಕ್ಷತ್ರ ಗಳೂ... ಎಷ್ಟು ಪ್ರಮಾಣದಲ್ಲಿ ಧನಲಾಭವಾಗುತ್ತೆ ಅನ್ನುವುದನ್ನು ತಿಳಿಸುತ್ತೆ, ಯಾವರೀತಿಯ ಧನಾಗಮ... ಶೀಘ್ರ, ಲಘು, ಚರ, ಸ್ಥಿರ ಫಲಗಳು ..ಯಾವ ಸಮಯದಲ್ಲಿ ಅನ್ನುವುದನ್ನು ನಕ್ಷತ್ರ ಗಳಿಂದಲೂ ತಿಯಬಹುದು. ಧನಭಾವಾಧಿಪತಿಗಳು ಕೆಲವೊಮ್ಮೆ ಎರಡು ರೀತಿಯಲ್ಲಿ ವರ್ತಿಸುತ್ತೆ ಉತ್ಪತ್ತಿ ಇಲ್ಲ ಉತ್ಪತ್ತಿ ನಿಲ್ಲುತ್ತಿಲ್ಲ.. ಧನಭಾವಾಧಿಪತಿಗಳು ದಾರಿದ್ರ್ಯ ಭಾವದಲ್ಲಿದ್ದರೆ. ಅಥವಾ ದಾರಿದ್ರ್ಯಭಾವಾಧಿಪತಿಗಳು ಧನಭಾವದಲ್ಲಿದ್ದರೆ, ಹಣದ ಹರಿವು ಇರೋಲ್ಲ. ಧನಭಾವಾಧಿಪತಿಗಳ ಸಂಬಂಧ ಧನಭಾವದಲ್ಲೇ ಇದ್ದರೆ ಹಣದ ಉತ್ಪತ್ತಿ ಚೆನ್ನಾಗಿರುತ್ತೆ ಧನದ ಅಭಾವ :-- ೧). ಜಾತಕದಲ್ಲಿ ಲಗ್ನಾಧಿಪತಿ ದ್ವಾದಶದಲ್ಲಿದ್ದು, ದ್ವಾದಶಾಧಿಪತಿ ಲಗ್ನದಲ್ಲಿದ್ದರೆ... 2). ಧನಾಧಿಪತಿ ವ್ಯಯದಲ್ಲಿದ್ದು, ದ್ವಾದಶಾಧಿಪತಿ ಧನಭಾವದಲ್ಲಿದ್ದರೆ... 3). ದುರ್ಬಲ ನಾದ ದ್ವಿತೀಯಾಧಿಪತಿ ಪಾಪಮಧ್ಯದಲ್ಲಿದ್ದರೆ... 3). ದ್ವಿತೀಯ ಹಾಗೂ ಲಾಭಾಧಿಪತಿಗಳು, ಷಷ್ಟ , ಅಷ್ಟಮದಲ್ಲಿದ್ದರೆ... 4). ಲಗ್ನಾಧಿಪತಿ ವ್ಯಯಭಾವದಲ್ಲಿದ್ದು ಮಾರಕಾಧಿಪತಿಯ ದೃಷ್ಟಿ ಯಲ್ಲಿದ್ದರೆ... 5). 6, 8, 12 ನೇ ಭಾವಾಧಿಪತಿಗಳು ಧನಸ್ಥಾನದಲ್ಲಿದ್ದರೆ... 6). ಧನ, ಸುಖ, ಪೂರ್ವಪುಣ್ಯಾಧಿಪತಿ, ಭಾಗ್ಯಾಧಿಪತಿ, ದಶಮಾಧಿಪಗಳು 6 ಅಥವಾ 12 ನೇ ಭಾವದಲ್ಲಿದ್ದರೆ... 7). ಜಾತಕರು ಕೆಮದೃಮ ಹಾಗೂ ಶಟಕ ಯೋಗಗಳಲ್ಲಿ ಜನಿಸಿದ್ದರೆ... 8). ಲಗ್ನಾಧಿಪತಿ 6.8.12 ರಲ್ಲಿ ಪಾಪಗ್ರಹಗಳ ಯುತಿಯಲ್ಲಿದ್ದು, ಅಷ್ಟಮಾಧಿಪತಿಯಿಂದ ವೀಕ್ಷಿಸಲ್ಪಟ್ಟರೆ.. ಜಾತಕರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡತನದಲ್ಲಿ ನರಳುತ್ತಾರೆ. -Sangraha MAhiti(FB)

ಪ್ರಸವ ಮತ್ತು ಆರೋಗ್ಯ

ನಭೋಮಂಡಲದಲ್ಲಿ ಸಂಚರಿಸುತ್ತಿರುವ ಗ್ರಹಗಳ ಶಕ್ತಿಯು ಭೂಮಿಯನ್ನು ಸ್ಪರ್ಶಿಸಿ, ಜೀವಿಗಳ ಜೀವನದಲ್ಲಿ ವ್ಯತ್ಯಾಸವನ್ನು ತರುತ್ತದೆ. ಈ ಗ್ರಹಗಳು ಜನ್ಮಸ್ಥಳದ ಅಕ್ಷಾಂಶ ರೇಖಾಂಶ ಗಳಿಗೆ ತಕ್ಕಂತೆ ಉದಯವಾಗುವ ಲಗ್ನ ಬಿಂದುವಿಗೆ ಯಾವ ಭಾವದಲ್ಲಿ ಸ್ಥಿತರಾಗಿರುತ್ತಾರೋ ಅದರಂತೆ ಶುಭಾಶುಭ ಫಲಗಳನ್ನು ಕೊಡುತ್ತಾರೆ. ಈ ಗ್ರಹಗಳು ಭಚಕ್ರದ ಯಾವ ಯಾವ ರಾಶಿಯಲ್ಲಿ, ಯಾವ ನಕ್ಷತ್ರ ದಲ್ಲಿ, ಸ್ಥಿತರಾಗಿರುತ್ತಾರೋ ಅದರಂತೆ ಫಲಗಳಲ್ಲಿ ವ್ಯತ್ಯಾಸವುಂಟಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪೂರ್ವಜನ್ಮ ಕೃತ ಫಲದಂತೆ ಈ ಜನ್ಮವನ್ನು ಪಡೆಯುತ್ತಾರೆ, ಪೂರ್ವಜನ್ಮ ದಲ್ಲಿ ಮಾಡಿದ ಕರ್ಮಫಲವನ್ನು ಈ ಜನ್ಮದಲ್ಲಿ ಅನುಭವಿಸುವುದನ್ನು ಪ್ರಸವಕಾಲದ ಕುಂಡಲಿಯಲ್ಲಿ ನವಗ್ರಹರು ಸ್ಥಿತರಾದ ರೀತಿಯಲ್ಲಿ ತಿಳಿಯಬಹುದು. ಪೂರ್ವಜನ್ಮದ ಪಾಪ ಅಥವಾ ಪುಣ್ಯಫಲದಂತೆ ಮನುಷ್ಯಜನ್ಮ ಪಡೆದಮೇಲೆ ಅತ್ಯಂತ ದುಃಖ, ಸುಖ, ಕಷ್ಟಗಳನ್ನು ಅನುಭವಿಸುತ್ತೇವೆ. ಅದರೆ ಕೆಲವುವೇಳೆ ಜನ್ಮ ತಾಳುವುದಕ್ಕೆ ಅನೇಕ ಕಷ್ಟಗಳನ್ನು ಅನುಭವಿಸುವುದು ಮಾತೃ ಗರ್ಭದಿಂದಲೇ ಪ್ರಾರಂಭವಾಗುತ್ತದೆ. ಪ್ರಸವ ಕಾಲದಲ್ಲಿ ಬದುಕುಳಿದರೆ ಅದು ನಮ್ಮ ಜನ್ಮ, ಜನ್ಮಕೊಟ್ಟ ತಾಯಿ ಬದುಕುಳಿದರೆ ಅದು ಅವರ ಪುನರ್ಜನ್ಮ. ಗರ್ಭಧಾರಣೆಯ ನಂತರ ಗರ್ಭಸ್ರಾವ, ಗರ್ಭದಲ್ಲೇ ಮರಣ (ಮೃತ ಶಿಶು ಜನನ) ಅವಧಿಗೆ ಮೊದಲೇ ಜನನ, ಕಷ್ಟಪ್ರಸವ ಇವು ಜನನ ಪೂರ್ವ ಸಂಕಟಗಳು. ಗುರು, ಶುಕ್ರ, ಚಂದ್ರ, ಬುಧರು ಸುಖ (ಶುಭ) ಪ್ರಸವವನ್ನು ಸೂಚಿಸುತ್ತಾರೆ. ರವಿ, ಶನಿ, ಕುಜ, ರಾಹು ಕೇತುಗಳು ಕಷ್ಟ ( ಅಶುಭ ) ಪ್ರಸವವನ್ನು ಸೂಚಿಸುತ್ತಾರೆ. ರಕ್ತ ಅಥವಾ ಜಲಸ್ರಾವ, ಶಸ್ತ್ರ ಚಿಕಿತ್ಸೆಯ ಮೂಲಕ ಪ್ರಸವವನ್ನು ಕುಜನಿಂದಲೂ, ತಡೆಗಳನ್ನು ಶನಿಯಿಂದಲೂ, ರಕ್ತಸ್ರಾವವನ್ನು ರಾಹುವಿನಿಂದಲೂ ತಿಳಿಯಬಹುದು. ಯಾವುದೇ ಜಾತಕದಲ್ಲಿ ಮುಖ್ಯವಾಗಿ ಕುಜ, ಶನಿಯಿಂದ ನಂತರ ರವಿ ಕೇತುಗಳಿಂದ ಕಷ್ಟಪ್ರಸವವನ್ನು ನಿರ್ಣಯಿಸಬಹುದು. ಯಾವುದೇ ಜಾತಕದಲ್ಲಿ ರವಿ ಚಂದ್ರರು, ಲಗ್ನ, ಲಗ್ನಾಧಿಪತಿ, ಷಷ್ಟ, ಷಷ್ಟಾಧಿಪತಿ, ಅಷ್ಟಮ, ಅಷ್ಠಮಾಧಿಪತಿ, ಪೀಡಿತ - ಪಾಪಕರ್ತರಿಯೋಗ - ನೀಚ - ಅಸ್ತ - ಪಾಪಗ್ರಹಗಳ ಯುತಿ - ದೃಷ್ಟಿಯಿದ್ದರೆ ಆರೋಗ್ಯ ಕೆಡುತ್ತದೆ. ಈ ಭಾವ - ಭಾವಾಧಿಪತಿ ಗಳು ಬಲವಾಗಿದ್ದು, ಸುಸ್ಥಿಯಲ್ಲಿದ್ದರೆ ಜಾತಕರು ಆರೋಗ್ಯವಾಗಿರುತ್ತಾರೆ. ಪುರುಷರ ಆರೋಗ್ಯವನ್ನು ರವಿಯಿಂದಲೂ, ಸ್ತ್ರೀಯರ ಆರೋಗ್ಯವನ್ನು ಚಂದ್ರನಿಂದಲೂ ಅವರುಗಳ ಬಲಾಬಲದಿಂದ ತಿಳಿಯಬಹುದು. ಜಾತಕದಲ್ಲಿ ರವಿ ಪೀಡಿತನಾದ್ರೆ ಪ್ರಕೃತಿದತ್ತವಾದ ರೋಗಗಳು, ಚಂದ್ರನು ಪೀಡಿತನಾಗಿದ್ದರೆ, ಬಲಹೀನನಾಗಿದ್ದರೆ ಮಾನಸಿಕ ರೋಗಿಯಾಗುತ್ತಾರೆ. ಲಗ್ನ - ಲಗ್ನಾಧಿಪತಿ ಪೀಡಿತನಾಗಿದ್ದರೆ ಸದಾ ರೋಗಿಯಾಗಿದ್ದು ಸಣ್ಣಪುಟ್ಟ ರೋಗಗಳು ಕಾಡುತ್ತಿರುತ್ತವೆ. ಷಷ್ಟ - ಷಷ್ಟಾಧಿಪತಿ ಗಳು ಪೀಡಿತರಾಗಿದ್ದರೆ, ಅತೀವ ಬಾಧೆಯ ರೋಗಗಳು ಮೇಲಿಂದ ಮೇಲೆ ಬರುತ್ತಿರುತ್ತದೆ. ಅಷ್ಟಮ - ಅಷ್ಟಮಾಧಿಪತಿಗಳು ಪೀಡಿತರಾಗಿದ್ರೆ ತೀವ್ರ ಮರಣ ಸೂಚಕ ರೋಗಗಳು - ಸಾಂಕ್ರಾಮಿಕ ರೋಗಗಳು, ಭಯಂಕರ ವ್ಯಾಧಿಗಳು, ದುರ್ಮರಣಗಳು ಉಂಟಾಗುತ್ತದೆ. ದ್ವಾದಶ - ದ್ವಾದಶಾಧಿಪತಿಗಳು ಪೀಡಿತರಾದ್ರೆ ಸದಾ ಆಸ್ಪತ್ರೆ ವಾಸ, ಹಾಸಿಗೆ ಹಿಡಿಯುವ ವ್ಯಾಧಿಗಳು ಬರುತ್ತವೆ. -SangrahaMahiti(FB)

ವಿದ್ಯಾಭ್ಯಾಸ (Education in Astrology)

ವಿದ್ಯಾರ್ಜನೆಗೆ ಲಗ್ನದಿಂದ ಚತುರ್ಥ ಸ್ಥಾನವನ್ನೂ, ಜ್ಞಾನಾರ್ಜನೆಗೆ ಪಂಚಮ ಸ್ಥಾನವನ್ನೂ ಪರಿಶೀಲಿಸಬೇಕು. ಆದ್ರೆ ಯಾವುದೇ ವಿದ್ಯೆಗೆ ಪ್ರಾಥಮಿಕ ವಿದ್ಯಾರ್ಜನೆಗೆ 2ನೇ ಮನೆಯನ್ನು ನೋಡಬೇಕು. ಏಕೆಂದರೆ ವಾಕ್ ಸ್ಥಾನವಾದ ಧನಸ್ಥಾನವು ಮಗುವಿನ ತೊದಲ್ನುಡಿಗಳಿಂದಿಡಿದು ಹೇಳಿಕೊಟ್ಟದ್ದನ್ನು ಕಲಿತು ಮತ್ತೆ ನೆನಪಿಸಿಕೊಂಡು ಹೇಳುವುದನ್ನು ಸೂಚಿಸುತ್ತೆ. ಎಲ್ಲಾ ವಿದ್ಯೆಗೂ ಮೂಲ ಸ್ಥಾನ ಧನಭಾವ ( 2ನೇ ಮನೆ ) ವೇ ಆಗಿದೆ. ಅಕ್ಷರದ ಪರಿಚಯವಿಲ್ಲದೆ ವಿದ್ಯಾವಂತನಾಗಲು ಸಾಧ್ಯವಿಲ್ಲ. ಧನಭಾವ ಚನ್ನಾಗಿದ್ದರೆ ಅಕ್ಷರಜ್ಞಾನ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಗಳಿಸಿರುತ್ತಾನೆ. ಧನಭಾವ ಬಲವಿಲ್ಲದೆ 5, 9 ನೇ ಸ್ಥಾನಗಳು ಪ್ರಭಲವಾಗಿದ್ದರೂ ವಿದ್ಯಾವಂತರಾಗಲಾರರು, ಧನಭಾವ ಪ್ರಬಲವಾಗಿದ್ದು 5, 9th ಬಲಹೀನವಾಗಿದ್ರೆ ಪೂರ್ಣಪ್ರಮಾಣದಲ್ಲಿ ವಿದ್ಯಾವಂತನಾಗದಿದ್ದರೂ, ಅಕ್ಷರಸ್ಥರಾಗಿ ವ್ಯಾವಹಾರಿಕ ಜ್ಞಾನವನ್ನು ಪಡೆಯಬಹುದು. ಹಾಗಾಗಿ ಜಾತಕದಲ್ಲಿ ವಿದ್ಯಾಭ್ಯಾಸವನ್ನು ಪರಿಶೀಲಿಸಬೇಕಾದರೆ... ಮೊದಲು 2, 5 ನೇ ಭಾವಗಳನ್ನು, ಅದರ ಭಾವಾಧಿಪತಿಗಳನ್ನ, ಮತ್ತವುಗಳ ಬಲಾಬಲಗಳನ್ನು ತಿಳಿಯಬೇಕಾಗುತ್ತದೆ. ■ ಬುಧ, ಗುರು, ಶುಕ್ರರು ವಿದ್ಯಾಕಾರಕರು. ■ ಬುಧ ---- ವಿದ್ಯಾಗ್ರಹಣ ಶಕ್ತಿ ■ ಗುರು ---- ಜ್ಞಾನಾರ್ಜನಾ ಶಕ್ತಿ ■ ಶುಕ್ರ ---- ಮೇಧಾ ಶಕ್ತಿ. ಜಾತಕದಲ್ಲಿ ಈ ವಿದ್ಯಾಸಂಬಂಧ ಗ್ರಹಗಳಾದ ಬುಧ , ಗುರು, ಶುಕ್ರರು ಪೀಡಿತರಾದಾಗ ವಿದ್ಯಾರ್ಜನಗೆ ಅಡಚಣೆ, ತೊಂದರೆಗಳಾಗುತ್ತವೆ. ★ ಧನ(೨), ಚತುರ್ಥ(೪), ಪಂಚಮಭಾವಗಳು(೫) --- ವಿದ್ಯಾಭಾವಗಳು. ★ ಧನಭಾವ ---- ಗ್ರಹಣಶಕ್ತಿ, ಬರವಣಿಗೆ. ★ ಚತುರ್ಥ ಭಾವ ---- ಮನಸ್ಸಿಟ್ಟು ಕಲಿಕೆ, ಮಧ್ಯಮ ಹಾಗೂ ಉನ್ನತ ಶಿಕ್ಷಣ ★ ಪಂಚಮಭಾವ ---- ಬುದ್ಧಿಶಕ್ತಿ, ಜ್ಞಾನ ಸಂಪಾದನಾ ದಾಹ. ★ ನವಮಭಾವ --- ಉನ್ನತವಿದ್ಯೆ. ★ ದಶಮ ಭಾವ ---- ವಿದ್ಯಾವರ್ಗ ( ಶ್ರೇಣಿ). ವಿದ್ಯೆಗೆ ತೊಂದರೆ ಮಾಡುವ ಗ್ರಹಗಳು ★ ಕುಜ, ರವಿ, ಶನಿ, ರಾಹು, ಕೇತು ಮತ್ತು ಬಲಹೀನ ಶುಕ್ರ, ಪೀಡಿತ ಬುಧ. ★ ಕುಜ -- ಮರೆವು ★ ರವಿ -- ವಿದ್ಯಾಕಾಲದಲ್ಲಿ ದೈಹಿಕ ತೊಂದರೆ ★ ಶುಕ್ರ ಹಾಗೂ ಪೀಡಿತ ಬುಧ -- ಬುದ್ಧಿ ಮಾಂದ್ಯತೆ, ಅಲ್ಪಗ್ರಹಣಶಕ್ತಿ. ★ ಶನಿ -- ಸೋಮಾರಿತನ, ನಿಧಾನ, ಗಮನ ನೀಡದೆ ಇರುವುದು. ★ ರಾಹು - ಕೇತುಗಳು -- ವಿಷಯದಲ್ಲಿ ಅಲ್ಪಜ್ಞಾನ ವಿದ್ಯೆ ಪರಿಶೀಲನೆಗೆ ನಿಯಮಗಳು ◆ 2, 5 ನೇ ಅಧಿಪತಿಗಳು ವಕ್ರೀ, ಅಸ್ತ, ನೀಚ, ಪಾಪಕರ್ತರಿ, ಪಾಪಗ್ರಹ ಯುತಿ, ದೃಷ್ಟಿ, ಹಾಗೂ ದುಸ್ಥಾನ ಗಳಲ್ಲಿ ಸ್ಥಿತರಾದಲ್ಲಿ ವಿದ್ಯಾದೋಷ. ◆ ವಿದ್ಯಾಕಾರಕ ಬುಧ, ಗುರುಗಳು ದುಸ್ಥಾನ ಸ್ಥಿತ, ಬಲಹೀನ, ಪಾಪಗ್ರಹಗಳಿಂದ ಪೀಡಿತರಾದಾಗ ವಿದ್ಯೆಯಲ್ಲಿ ಕುಂಠಿತ ( ಬುಧ - ಗ್ರಹಣಶಕ್ತಿ, ಗುರು - ಶ್ರದ್ಧೆ ). ,◆ ವಿದ್ಯಾಸ್ಥಾನದಲ್ಲಿ ರಾಹುಕೇತುಗಳು ಸ್ಥಿತರಾಗಿ ಪಾಪಗ್ರಹಗಳ ಸಂಬಂಧ ಬಂದಾಗ ವಿದ್ಯಾಹೀನ. ◆ ಕೇಂದ್ರಾದಿಪತ್ಯ ದೋಷ, ದುಸ್ಥಾನಾಧಿಪತ್ಯ, ವಕ್ರ, ನೀಚ, ಅಸ್ತ, ರಾಶಿ - ಭಾವ ಸಂಧಿಸ್ಥಿತ ನೈಸರ್ಗಿಕ ಶುಭಗ್ರಹಗಳಾದರೂ ವಿದ್ಯೆಗೆ ಅಡಚಣೆ. ◆ ನೈಸರ್ಗಿಕ ಪಾಪಗ್ರಹನಾದರೂ ಯೋಗಕಾರಕನು ವಿದ್ಯಾಸ್ಥಾನದಲ್ಲಿದ್ದಾಗ ವಿದ್ಯಾಭಿವೃದ್ಧಿ. - SangrahaMahiti(FB)

ಪರಮಾಯುರ್ಯೋಗ

ಬೃಹತ್ಪರಾಶರ ಹೋರಾಶಾಸ್ತ್ರ, ಜಾತಕ ಪಾರಿಜಾತ, ಸರ್ವಾರ್ಥ ಚಿಂತಾಮಣಿ ಮುಂತಾದ ಪ್ರಸಿದ್ಧ ಜ್ಯೋತಿಷ ಗ್ರಂಥಗಳಲ್ಲಿ ವಿಭಿನ್ನ ಪ್ರಮಾಣದ ಆಯಸ್ಸಿನ ಕುರಿತಾದ ವರ್ಣನೆಯಿದ್ದು, ಅವುಗಳಲ್ಲಿ ಶತಾಯುಸ್ಸಿನ ನಂತರ *ಪರಮಾಯು* ಶಬ್ದದ ವರ್ಣನೆಯನ್ನು ಮಾಡಲಾಗಿದೆ. ನೂರು ವರ್ಷಕ್ಕಿಂತಲೂ ಹೆಚ್ಚಿನ ಆಯಸ್ಸಿಗೆ *ಪರಮಾಯು* ಎನ್ನಲಾಗಿದೆ. ಕೆಲವೆಡೆ ಪರಮಾಯುವಿಗೆ *108* ವರ್ಷವೆಂದೂ ಉಲ್ಲೇಖಿಸಲಾಗಿದೆ. ಆದರೆ ಪರಮಾಯು ಅಂದರೆ ನೂರು ವರ್ಷಕ್ಕಿಂತ ಹೆಚ್ಚಿನದು, ಹಾಗೂ ಮನುಷ್ಯನ ಆಯಸ್ಸಿನ ಗರಿಷ್ಠ ಅವಧಿ 120 ವರ್ಷಗಳಾದ್ದರಿಂದ ಇಲ್ಲಿ ಪರಮಾಯುವನ್ನು 100 ರಿಂದ 120 ವರ್ಷ ಎಂದು ತಿಳಿಯಬೇಕಾಗುತ್ತೆ. *ಸರ್ವಾರ್ಥ ಚಿಂತಾಮಣಿ* ಜ್ಯೋತಿಷ ಗ್ರಂಥದಲ್ಲಿ ಪರಮಾಯುವಿನ ಯೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗಿದೆ, ಇಲ್ಲಿ ಒಂದೆರಡು ಶ್ಲೋಕಗಳನ್ನು ಪ್ರಸ್ತುತಪಡಿಸುತ್ತೇನೆ. *ಸರ್ವಾರ್ಥ ಚಿಂತಾಮಣಿ ಯ 12ನೇ ಅಧ್ಯಾಯದ 43 ನೇ ಶ್ಲೋಕ :----* *ತ್ರಿಭಿಗ್ರರ್ಹೈಃ ಸ್ನೋಚ್ಚಗತೈಃ ವಿಲಗ್ನೇ ವೃಷೇ ಕುಲೀರೇ ಸಗುರೌ ತಥೈವ |* *ಮೃಗೇ ಕುಜೇ ಕರ್ಕಿಣಿ ದೇವಪೂಜ್ಯ ಕೇಂದ್ರೆಷು ಶೇಷಾಃ ಪರಮಾಯುರತ್ರ ||* ಅರ್ಥ :-- ಲಗ್ನದಲ್ಲಿ ಉಚ್ಚ ಗುರುವಿದ್ದು, ಮಕರದಲ್ಲಿ ಕುಜನಿದ್ದು, ಶುಕ್ತನು ಉಚ್ಚನಾಗಿ ಅಥವಾ ವೃಷಭದಲ್ಲಿದ್ದರೆ, ಅಂದರೆ ಮೂರು ಗ್ರಹಗಳು ಉಚ್ಛವಾಗಿದ್ದು , ಉಳಿದ ಗ್ರಹಗಳು ಕೇಂದ್ರದಲ್ಲಿದ್ದರೆ (1. 4. 7. 10 ) ಇಂಥ ಜಾತಕರು 108 ವರ್ಷದಿಂದ 120 ವರ್ಷಗಳ ಆಯಸ್ಸನ್ನು ಅನುಭವಿಸುತ್ತಾರೆ. *ಸರ್ವಾರ್ಥ ಚಿಂತಾಮಣಿ ಯ 12 ನೇ ಅಧ್ಯಾಯದ 45 ನೇ ಶ್ಲೋಕ :--* *ಲಗ್ನೇ ಮೃಗಾಪರಾರ್ದ್ಧೆ ತು ಪೂರ್ವಾರ್ದ್ಧೆ ಭೌಮ ಸಂಯುತೇ |* *ಲಗ್ನೇ ಶಶಾಂಕ ಸಹಿತೇ ಗುರೌ ಕೇಂದ್ರೆ ಪರಂವಯಃ ||* ಅರ್ಥ :--- ಮಕರ ಲಗ್ನ 15 ಅಂಶಗಳಲ್ಲಿದ್ದು, ಚತುರ್ಥ ಭಾವದಲ್ಲಿ ಕುಜನಿದ್ದು, ಲಗ್ನದಲ್ಲಿ ಚಂದ್ರನಿದ್ದು ಉಚ್ಚ ಗುರುವಿದ್ದರೆ ಇಂಥ ಜಾತಕರು ಪರಮಾಯುಷ್ಯವನ್ನು ಹೊಂದಿ 108 ರಿಂದ 120 ವರ್ಷಗಳ ವರೆಗೆ ಜೀವಿಸುತ್ತಾರೆ. *ಭೃಗೌ ಚತುರ್ಥೇ ಸಗುರೌ ವಿಲಗ್ನೇ ಸೇಂದೌ ಶನೌ ಕರ್ಮಣಿ ಪಾಪಹೀನೆ|* *ಜಾತೋ ನರೋಸ್ಮಿನ್ ಸಮುಪೈತಿ ಧೀರ್ಘಯಾಯುಷ್ಯ ವಿದ್ಯಾo ಯಶಸಾ ಸಮತಾಂ ||* ಅರ್ಥ :--- ಗುರುವು ಲಗ್ನದಲ್ಲಿದ್ದು, ಚತುರ್ಥದಲ್ಲಿ ಶುಕ್ರನಿದ್ದು, .ಶನಿಯೊಡನೆ ಚಂದ್ರನು ಶುಭಸ್ಥಾನದಲ್ಲಿ ಸ್ಥಿತನಿದ್ದು, ದಶಮ ಸ್ಥಾನದಲ್ಲಿ ಯಾವುದೇ ಪಾಪ ಗ್ರಹವಿರದಿದ್ದರೆ... ಈ ಜಾತಕರು ವಿದ್ವಾಂಸರಾಗಿ ಪರಮಾಯುಷ್ಯವನ್ನು ಹೊಂದಿ ಯಶಸ್ವೀ ಜೀವನ ನಡೆಸುತ್ತಾರೆ. -Sangraha Mahiti(FB)

*ಜಾತಕನ ಕುಂಡಲಿಯಲ್ಲಿ ಗ್ರಹಗಳು ಬಲಹೀನರಾಗಿದ್ದರೆ ಉಂಟಾಗುವ ತೊಂದರೆಗಳು* *ಮತ್ತು ಇವುಗಳ ಪರಿಹಾರಗಳು* ( ಲಾಲ್ ಕಿತಾಬ್ ಪರಿಹಾರಗಳು)

*ಗ್ರಹಗಳು* ೧)ನೀಚತ್ವದಲ್ಲಿ ೨)ಶತೃಕ್ಷೇತ್ರಗಳಲ್ಲಿ ೩)ದುಸ್ಥಾನಗಳಲ್ಲಿ ಅಶುಭರ ಸಂಪರ್ಕದಲ್ಲಿದ್ದರೆ ೪)ಅಸ್ತಂಗತ 5) ೬, ೮೧೨ನೇ ಸ್ಥಾನಗಳಲ್ಲಿದ್ದರೆ. ೬)ಕೇಂದ್ರಾದಿಪತಿಯಾಗಿ ತನ್ನದಲ್ಲದ ಮತ್ತೊಂದು ಕೇಂದ್ರದಲ್ಲಿದ್ದರೆ. ೭)ಗ್ರಹ ಯುದ್ದದಲ್ಲಿ ಪರಾಜಿತ ಈ ರೀತಿ ಇದ್ದಾಗ ಗ್ರಹಗಳು ಬಲಹೀನರೆಂದು ಪರಿಗಣಿಸಲಾಗುತ್ತದೆ. *ರವಿಯಿಂದ ಉಂಟಾಗುವ ತೊದರೆಗಳು ಮತ್ತು ಅದಕ್ಕೆ ಪರಿಹಾರಗಳು* *ತೊಂದರೆಗಳು* :- ಆತ್ಮ ವಿಶ್ವಾಸದ ಗೌರವದ ಕೊರತೆ,ದೈರ್ಯ,ಉತ್ಸಾಹಗಳು ಇಲ್ಲದಿರುವಿಕೆ,ಇತರರ ಬಗ್ಗೆ ಹೆದರಿಕೆ. ಮುನ್ನುಗ್ಗುವವರಲ್ಲ. ಎಲ್ಲದಕ್ಕೂ ಇತರರ ಮೇಲೆ ಸದಾ ಅವಲಂಬನೆ ಜೀವನದಲ್ಲಿ ಸೋಲು,ಮೇಲಾಧಿಕಾರಿಗಳಲ್ಲಿ ಸದಾವಿರಸ,ತಂದೆಯ ಅಸಹಕಾರ,ಮಗನಿಂದ ಮಾನಸಿಕ ಹಿಂಸೆ,ಬಲಗಣ್ಣಿನಲ್ಲಿ ತೊಂದರೆ,ಜೀವನದಲ್ಲಿ ಸಮಸ್ಯೆಗಳಿಂದ ನೊಂದು ಸಂಸಾರದಲ್ಲಿ ಯಾರಾದರು ಸನ್ಯಾಸಿಯಾಗುತ್ತಾರೆ,ಕಳ್ಳ ತನ ಅಥವ ಸರ್ಕಾರದಿಂದ ಶಿಕ್ಷೆ, ಪತ್ನಿಯ ಸಮಸ್ಯೆ,ಇದರಿಂದಾಗಿ ಮಾನಸಿಕನೋವು, ಉತ್ಸಾಹಹೀನತೆ,ಅಶಕ್ತತೆ, ಹಸಿವು ಇಲ್ಲದಿರುವಿಕೆ,ಹಾಗು ಅಜೀರ್ಣತೆ ಕ್ಷೀಣನಾಡಿಬಡಿತ,ಹೃದಯದೌರ್ಬಲ್ಯತೆ,ರಕ್ತ ಚಲನೆಯಲ್ಲಿ ಕೊರತೆ,ನರದೌರ್ಬಲ್ಯ,ದೃಷ್ಟಿದೋಷ,ಸಂದಿವಾತ ಮತ್ತು ಮೂಳೆಗಳು ದುರ್ಬಲವಾಗಿರುತ್ತವೆ. *ಪರಿಹಾರಗಳು:-* ಶಿವಮತ್ತು ರವಿಯನ್ನು ಆರಾಧಿಸಿ, ೨೩ರಿಂದ೨೪ನೇ ವಯಸ್ಸಿನೊಳಗೆ ವಿವಾಹವಾಗಿ, ರವಿಗೆ ಸಂಬಂದಿಸಿದ ಇತರರು ನೀಡಿದ ವಸ್ತುಗಳನ್ನು ದೇವಸ್ಥಾನಕ್ಕೆ ದಾನಮಾಡಿ, ಬಿಳಿ ಅಥವ ಗುಲಾಬಿಬಣ್ಣದ ವಸ್ತುಗಳನ್ನು ಉಪಯೋಗಿಸಿ, ಸಕ್ಕರೆನೀರನ್ನು ಗುಲಾಬಿ ಪುಷ್ಪಗಳೊಂದಿಗೆ ಉದಯಿಸುತ್ತಿರುವ ರವಿಗೆ ಅರ್ಪಿಸಿ. ಸರ್ಕಾರದಲ್ಲಿನ ಉದ್ಯೋಗಿಯನ್ನು ಅಥವ ವೈದ್ಯರನ್ನು ಆದರಿಸಿ. ಕುರುಡರಿಗೆ,ಕೋತಿ,ಅಥವ ಹುಂಜಕ್ಕೆ ಆಹಾರವನ್ನು ನೀಡಿ. ಸಂಜೆ ಇರುವೆಗಳಿಗೆ ಅಕ್ಕಿ,ಸಕ್ಕರೆ ಎಳ್ಲನ್ನು ಕೊಡಿ. ಆಹಾರ ತೆಗೆದುಕೊಳ್ಲುವುದಕ್ಕೆ ಮುಂಚೆ ಅಗ್ನಿಗೆ ಸ್ವಲ್ಪ ಅರ್ಪಿಸಿ. ಬೆಲ್ಲ,ತಾಮ್ರ,ಚಿನ್ನವನ್ನು ದಾನಮಾಡಿ. ತಾಮ್ರದ ಅಥವ ಲೋಹದ ನಾಣ್ಯವನ್ನು ಹರಿಯುವ ನೀರಿನಲ್ಲಿ ಹಾಕಿ ಸೂರ್ಯಗ್ರಹಣದ ದಿನ ಹರಿಯುವ ನೀರಲ್ಲಿ ಇದ್ದಿಲು,ಸಾಸಿವೆಕಾಳು ಅಥವ ಬಾರ್ಲಿಯನ್ನು ಹಾಕಿ. ಕೆಲಸವನ್ನು ಆರಂಬಿಸುವ ಮೊದಲು ಸ್ವಲ್ಪ ಸಿಹಿಯನ್ನು ತಿಂದು ನೀರುಕುಡಿಯಿರಿ. ಮನೆಯಲ್ಲಿ ಅಡುಗೆ ಮನೆ ಪೂರ್ವದ ಗೋಡೆಯ ಕಡೆ ಇರಲಿ. ಸುಳ್ಳು ಸಕ್ಷ್ಯ ಹೇಳದಿರಿ,ಮಾಂಸ ಮತ್ತು ಮದ್ಯಗಳನ್ನು ಬಿಡಿ. ಉಪ್ಪನ್ನು ಕಡಿಮೆ ಉಪಯೋಗಿಸಿ ಮತ್ತು ಭಾನುವಾರಗಳಂದು ಉಪವಾಸಮಾಡಿ. ವಿಷ್ಣುವನ್ನು ಆರಾಧಿಸಿ ಮತ್ತು ಹರಿವಂಶವನ್ನು ಓದಿ. -Sangra Mahiti(FB)

ಕೋಪ :--ಜ್ಯೋತಿಷ್ಯದ ಕಾರಣಗಳು :---

ಕೋಪ ಅಥವಾ ಕ್ರೋಧ ವ್ಯಕ್ತ ಪಡಿಸುವಿದು ಮನುಷ್ಯನ ಅಸಾಮಾನ್ಯ ನಡತೆ. ಈ ಅಸಾಮಾನ್ಯ ನಡತೆ ಕೆಲವರಲ್ಲಿ ಹೆಚ್ಚಾಗಿದ್ದರೆ ಕೆಲವರಲ್ಲಿ ಸಾಧಾರಣವಾಗಿರುತ್ತದೆ. ಕೆಲವರಲ್ಲಂತೂ ಕೋಪಬಂದರೆ ಮುಖ ಕೆಂಪಾಗಿ ಮುಖದ ಆಕಾರವೇ ಬದಲಾಗಿ ನೋಡಲು ತುಂಬಾ ವ್ಯಗ್ರ ರಂತೆ ಕಾಣುತ್ತಾರೆ ಇಂಥವರನ್ನು " ಕೋಪಿಷ್ಟ " ಎಂದೇ ಗುರುತಿಸುತ್ತಾರೆ. ಜ್ಯೋತಿಷ್ಯ ದ ದೃಷ್ಟಿಯಿಂದ ಈ ಅಧಿಕ ಸಿಟ್ಟಿಗೆ ಕಾರಣವೇನು ಎಂಬುದನ್ನು ತಿಳಿಯೋಣ. ಜ್ಯೋತಿಷ್ಯದಲ್ಲಿ ಮನುಷ್ಯನ ಪ್ರವೃತ್ತಿಯ ಅಧ್ಯಯನವನ್ನು ಸಾಮಾನ್ಯವಾಗಿ ಲಗ್ನ, ಲಗ್ನಾಧಿಪತಿ, ಸೂರ್ಯ, ಚಂದ್ರ ಹಾಗೂ ಕುಜನ ಆಧಾರದ ಮೇಲೆ ಮಾಡಲಾಗುತ್ತದೆ. ಮನುಷ್ಯನ ಪ್ರವೃತ್ತಿ ತುಂಬಾ ಕ್ಲಿಷ್ಟವಾದುದು, ಹಾಗೆ ನೋಡಿದರೆ ಇದರ ಅಧ್ಯಯನವನ್ನು ಒಂದೆರಡು ಭಾವ ಅಥವಾ ಒಂದೆರಡು ಗ್ರಹಗಳ ಆಧಾರದಿಂದ ಮಾಡಲಾಗದು. ಇದನ್ನು ಹನ್ನೆರಡು ಭಾವಗಳು ಹಾಗೂ ಒಂಬತ್ತು ಗ್ರಹಗಳ ಸಂಯೋಗದಿಂದ ಅರ್ಥೈಸಬಹುದು, ಯಾವುದೇ ವ್ಯಕ್ತಿಗೆ ಅಧಿಕ ಕೋಪ ಬರಲು ಈ ಕೆಲವು ಜ್ಯೋತಿಷ್ಯ ಕಾರಣಗಳಿರುತ್ತವೆ.ಅವುಗಳು ಯಾವುವು ಎಂಬುದನ್ನು ನೋಡೋಣ 1. ಮೇಷ, ಸಿಂಹ, ವೃಶ್ಚಿಕ ಲಗ್ನದ ಜಾತಕರಿಗೆ ಸಾಮಾನ್ಯ ಕೋಪ ಹೆಚ್ಚು. 2. ಲಗ್ನದಲ್ಲಿ ಕುಜ ಅಥವಾ ರವಿ ಸ್ಥಿತರಿದ್ದರೆ ಜಾತಕ ರಿಗೆ ಅಧಿಕ ಕೋಪ, ಇಂಥವರನ್ನು ಕೋಪ ಪ್ರವೃತ್ತಿಯವರೆಂದೇ ಪರಿಗಣಿಸಲಾಗುತ್ತೆ. 3. ಕುಂಡಲಿಯ ಸಪ್ತಮಭಾವದಲ್ಲಿ ಕುಜ ಅಥವಾ ರವಿ ಸ್ಥಿತವಾಗಿದ್ದರೂ ಕೋಪ ಜಾಸ್ತಿ. 4. ಷಷ್ಟ ಭಾವದಲ್ಲಿ ಕುಜ ಸ್ಥಿತನಾಗಿದ್ದರೂ ಕೋಪ ಜಾಸ್ತಿ. 5. ಲಗ್ನಾಧಿಪತಿ ದುರ್ಬಲನಾಗಿದ್ದು ಮತ್ತು ಕುಜನ ಯುತಿ ಅಥವಾ ದೃಷ್ಟಿಯಿದ್ದರೆ ಸಾಮಾನ್ಯಕ್ಕಿಂತ ಅಧಿಕ ಕೋಪ. 6. ಜಾತಕದಲ್ಲಿ ಚಂದ್ರನಿಗೆ ಕುಜನ ಸಂಬಂಧ ಬಂದರೂ ( ದೃಷ್ಟಿ ಅಥವಾ ಯುತಿ) ಜಾತಕನಿಗೆ ಅಧಿಕ ಕೋಪ. 7. ಕುಜನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಸ್ಥಿತನಿದ್ದರೆ, ಅಥವಾ ಕುಜನೊಂದಿಗೆ ಯುತಿ ಪಡೆದ ಗ್ರಹದ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೂ ಜಾತಕನಿಗೆ ಕೋಪ ಬರುವ ಸಂಭವ ಜಾಸ್ತಿ. 8. ಚಂದ್ರನು ಷಷ್ಟ ಅಥವಾ ಅಷ್ಟಮದಲ್ಲಿದ್ದರೆ ಅಥವಾ ಷಷ್ಟಾಷ್ಟಮ ಭಾವಾಧಿಪತಿಗಳ ಯುತಿಯಲ್ಲಿದ್ದರೆ ಜಾತಕನಿಗೆ ಕೋಪ ಬರುತ್ತದೆ, ಈ ಕೋಪ ಅಲ್ಪಕಾಲವಿದ್ದರೂ... ಇದರ ತೀವ್ರತೆ ಮಾತ್ರ ಅಧಿಕವಾಗಿರುತ್ತದೆ. 9. ಜಾತಕದಲ್ಲಿ ಶುಭ ಯೋಗಗಳಿಗಿಂತ ಅಶುಭಯೋಗಗಳು ಜಾಸ್ತಿಯಿದ್ದರೂ ಕೂಡ ಜಾತಕನು ಕೋಪಾವಿಷ್ಟನಾಗುತ್ತಾನೆ. 10. ಜಾತಕದಲ್ಲಿ ಲಗ್ನಾಧಿಪತಿಯೊಂದಿಗೆ 2, 9, 10 ನೇ ಅಧಿಪತಿಗಳು ದುರ್ಬಲರಾಗಿದ್ದರೂ ಕೂಡ ಜಾತಕನಿಗೆ ಕೋಪ. 11. ಜನ್ಮ ಕುಂಡಲಿಯ ಸಪ್ತಮ ಭಾವದಲ್ಲಿ ಪಾಪಗ್ರಹಗಳು ಸ್ಥಿತರಾಗಿದ್ದರೆ, ಜಾತಕನಿಗೆ ಕುಜದೋಷವಿದ್ದರೂ ಸಹ ಅಧಿಕ ಕೋಪ. 12. ಸಪ್ತಮಾಧಿಪತಿ ದುರ್ಬಲನಾಗಿದ್ದರೂ, ಸಪ್ತಮಾಧಿಪತಿ ಪಂಚಮದಲ್ಲಿದ್ದರೂ ಅಥವಾ ಪಾಪ ಗ್ರಹಗಳ ಸಂಪರ್ಕ ಪಡೆದಿದ್ದರೂ ಜಾತಕನಿಗೆ ಕೋಪವಿರುತ್ತದೆ. 13. ಲಗ್ನಾಧಿಪತಿ 6, 8 ರಲ್ಲಿ ಸ್ಥಿತರಾದರೂ ಜಾತಕನಿಗೆ ಕೋಪ ಬರುವ ಸಂಭವ ಹೆಚ್ಚು. 14. ರಾಹುವಿನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೆ ಅಧಿಕ ಕೋಪ. 15. ಒಂದು ವೇಳೆ ಷಷ್ಟಾಧಿಪತಿ, ಅಷ್ಟಮಾಧಿಪತಿ, ಅಥವಾ ಮಾರಕ ಗ್ರಹಗಳಿಂದ ಜಾತಕನು ಪೀಡಿತನಾಗಿದ್ದರೂ ಕೂಡ ಜಾತಕನಿಗೆ ಅಧಿಕ ಕೋಪವಿರುತ್ತದೆ. 16. ಗೋಚಾರ ದಲ್ಲಿ ರವಿಯು ಲಗ್ನ, ಷಷ್ಟ, ಸಪ್ತಮ, ಅಷ್ಟಮ, ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದರೆ ಮತ್ತು ಲಗ್ನದ ಮೇಲೆ ಕುಜನ, ರಾಹುವಿನ ಅಥವಾ ಶನಿಯ ಗೋಚಾರದ ಪ್ರಭಾವವಿದ್ದರೆ, ಆ ಸಮಯದಲ್ಲಿ ಜಾತಕನಿಗೆ ಅಧಿಕ ಕೋಪವಿರುತ್ತದೆ. 17. ಗೋಚಾರದಲ್ಲಿ ಕುಜನು 1, 4, 6, 7, 8, 12 ನೇ ಮನೆಯಲ್ಲಿ ಸಂಚರಿಸುತ್ತಿದ್ದರೆ. ಮತ್ತು ಜಾತಕನಿಗೆ ಸಾಡೇಸಾತಿ ನಡೆಯುವಾಗ ಅಧಿಕ ಕೋಪ ಬರುತ್ತದೆ. 18. ಲಗ್ನಾಧಿಪತಿ ದುರ್ಬಲನಾಗಿದ್ದು, ಗೋಚಾರದಲ್ಲಿ ಚಂದ್ರನು 4, 8, 12 ನೇ ಭಾವದ ಮೇಲೆ ಪರಿಭ್ರಮಣ ಮಾಡುವಾಗ ಜಾತಕನಿಗೆ ಅಧಿಕ ಕೋಪ ಬರುತ್ತದೆ. ಕೋಪವು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಯಾವ ಜಾತಕರು ಪ್ರತೀಕೂಲ ಗ್ರಹಗಳ ದೆಸೆಯಿಂದ ಕೋಪಾವಿಷ್ಟರಾಗುತ್ತಾರೋ ಆಗ ಅದರಿಂದ ಆಗುವ ಹಾನಿಯಿಂದ ರಕ್ಷಣೆ ಪಡೆಯಲು ಈ ಕೆಳಗಂಡ ಪರಿಹಾರವನ್ನು ಮಾಡಬಹುದು. ◆ ಲಗ್ನಾಧಿಪತಿಯ ರತ್ನ ಧರಿಸಬಹುದು. ◆ ಏಕಮುಖಿ ರುದ್ರಾಕ್ಷಿ ಧಾರಣೆ ಮಾಡಬಹುದು ◆ ಯಾವ ಗ್ರಹದ ಕಾರಣದಿಂದ ಕೋಪ ಉತ್ಪನ್ನಗೊಳ್ಳುತ್ತಿದೆಯೋ ಆ ಗ್ರಹದ ಮಂತ್ರಜಪ ಮಾಡಬೇಕು. -SangrahaMahiti

ನೀವು ಸಹಿ ಮಾಡುವ ಶೈಲಿಯಿಂದ ನಿಮ್ಮ ವಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ

ಫೇಸ್ ಈಸ್ ದ ಇಂಡೆಕ್ಸ್ ಆಫ್ ಮೈಂಡ್ ಅಂದರೆ ಮುಖ ಮನಸ್ಸಿನ ಸೂಚಕ.ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ತಿಳಿದುಕೊಳ್ಳಬಹುದಂತೆ.ಅದೇ ರೀತಿ ನೀವು ಮಾಡುವ ಸಹಿಯನ್ನು ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ಹೇಳಬಹುದಂತೆ.ಅದೇ ಗ್ರಾಫಾಲಜಿ.ನಿಮ್ಮ ಸಹಿಯ ಶೈಲಿಯಿಂದ ನಿಮ್ಮ ಮನಸ್ತತ್ವ,ನೀವು ಮಾಡುವ ಕೆಲಸಗಳು,ನಿಮ್ಮ ಮನೋವೃತ್ತಿ ಹೇಗಿರುತ್ತದೆಂದು ಕರಾರುವಾಕ್ಕಾಗಿ ಹೇಳಬಹುದಂತೆ.ಇದರ ಕುರಿತಾಗಿ ಎಲ್ಲರಿಗೂ ಅಲ್ಪ ಸ್ವಲ್ಪ ತಿಳಿದೇಯಿರುತ್ತದೆ.ಆದರೆ,ನಾವು ಸಾಮಾನ್ಯವಾಗಿ ಹಲವು ರೀತಿಯಾಗಿ ಸಹಿ ಮಾಡುತ್ತಿರುತ್ತೇವೆ. ಅವುಗಳನ್ನೇ ಆಧಾರವನ್ನಾಗಿರಿಸಿಕೊಂಡು ನಮ್ಮ ವ್ಯಕ್ತಿತ್ವ ಹೇಗಿರುತ್ತದೆಂದು ಪರಿಶೀಲಿಸೋಣ. *ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು:* ಇಂತಹವರಿಗೆ ವಿಶ್ವಾಸ ಹೆಚ್ಚಾಗಿರುತ್ತದೆ.ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ.ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು.ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು.ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ. *ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ:* ಸಮಾಜದಲ್ಲಿ ಗೌರವ,ಮರ್ಯಾದೆಗಳನ್ನು ಗಳಿಸುತ್ತಾರೆ.ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ.ಎಲ್ಲ ವಿಷಯಗಳಿಗೂ ಮುಂದಿರುತ್ತಾರೆ.ದೈರ್ಯವಂತರು. *ಸಹಿ ಕೆಳಮುಖವಾಗಿದ್ದರೆ:* ಸ್ವಾರ್ಥ ಹೆಚ್ಚಾಗಿರುತ್ತದಂತೆ. *ಸಹಿ ಮೇಲ್ಮುಖವಾಗಿದ್ದರೆ:* ನಿಮಗೆ ತೀಕ್ಷ್ಣ ಬುದ್ಧಿಯಿರುತ್ತದೆ.ಧನಾತಕ ವ್ಯಕ್ತಿತ್ವ, ಯಾವುದೆ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುತ್ತಿರ. ಅಭಿವೃದ್ಧಿ ಪಥದಕಡೆ ನಿಮ್ಮ ಪಯಣ. *ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ:* ಹೆಚ್ಚಾಗಿ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತೀರಿ(ಮಹಾತ್ಮ ಗಾಂಧಿ ಸಹಿಯಲ್ಲಿ ಮೊದಲ ಅಕ್ಷರದ ಗಾತ್ರ ದೊಡ್ಡದಾಗಿತ್ತು) *ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ:* ಎಂದೆಂದಿಗೂ ನಿಮಗೆ ಜಯ ಲಭಿಸುತ್ತದೆ. *ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ;* ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತೀರಿ. ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ. *ಸಹಿಯಲ್ಲಿ ಚುಕ್ಕೆಗಳಿದ್ದರೆ:* ನಾನು ಯಾವಾಗಲೂ ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರು. *ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ:* ಆರಂಭ ಶೂರತ್ವ ಹೆಚ್ಚಾಗಿರುತ್ತದೆ.ಒಳ್ಳೆಯ ಐಡಿಯಾ ಗಳಿರುತ್ತವೆ.ಆದರೆ,ಆಚರಣೆಗೆ ತರುವುದರಲ್ಲಿ ಮಾತ್ರ ವಿಫಲರಾಗುತ್ತೀರ. -Sangraha Mahiti

ವಿವಾಹಯೋಗ

ಜಾತಕದಲ್ಲಿ ಲಗ್ನ, ಚಂದ್ರ, ಕಲತ್ರಕಾರಕನಾದ ಶುಕ್ರ ಪ್ರಬಲವಾಗಿದ್ದರೆ ಉತ್ತಮ ವಿವಾಹಯೋಗ. ವಿವಾಹಯೋಗಕ್ಕೆ ಪ್ರಮುಖವಾಗಿ ವಿವಾಹ ಸ್ಥಾನಗಳಾದ 1, 2, 4, 7, 8, 12 ಭಾವಗಳನ್ನು ಲಗ್ನ, ಚಂದ್ರ ಹಾಗೂ ಶುಕ್ರರಿಂದ ನಿರ್ಣಯ ಮಾಡಬೇಕು. 1. ಲಗ್ನಭಾವ - ಜಾತಕನ ಗುಣ, ಆತನ ಸುಖವನ್ನು ಸೂಚಿಸುತ್ತದೆ. 2. ಕುಟುಂಬ ಭಾವ - ಜಾತಕನ ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ. 4. ಸುಖಭಾವ - ವೈವಾಹಿಕ ಸುಖವನ್ನು ಸೂಚಿಸುತ್ತದೆ. 7. ಕಳತ್ರಭಾವ - ಸಂಗಾತಿಯ ಗುಣ, ಅವರಿಂದ ಸಿಗುವ ಸುಖ ದುಃಖಗಳನ್ನು ಸೂಚಿಸುತ್ತದೆ. 8. ಮಾಂಗಲ್ಯ ಭಾವ - ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ. 12. ಪತಿ - ಪತ್ನಿಯರಲ್ಲಿ ಪರಸ್ಪರ ಪ್ರೀತಿ, ಶಯನಸುಖವನ್ನು ಸೂಚಿಸುತ್ತದೆ. ಈ ಎಲ್ಲಾ ಭಾವಗಳಲ್ಲಿ ಶುಭಗ್ರಹರು ಸ್ಥಿತರಾದಾಗ ಉತ್ತಮ ವೈವಾಹಿಕ ಜೀವನ. ಅಶುಭ, ಪೀಡಿತ, ಅಸ್ತ, ನೀಚ ಗ್ರಹಗಳೇನಾದರೂ ಸ್ಥಿತವಾಗಿದ್ರೆ, ಆಯಾ ಗ್ರಹಗಳ ಪ್ರಭಾವಕ್ಕನುಗುಣವಾಗಿ ಜೀವನದಲ್ಲಿ ಏರುಪೇರುಗಳು ಇರುತ್ತದೆ. ವಿವಾಹ ಜೀವನಕ್ಕೆ ಶುಭಗ್ರಹರು - ಚಂದ್ರ, ಶುಕ್ರ, ಗುರು. ವಿವಾಹ ಜೀವನಕ್ಕೆ ಅಶುಭರು- ರವಿ, ರಾಹು, ಶನಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವವರು ಕುಜ, ಕೇತು ಬುಧ ( ಶುಭಗ್ರಹರ ಸಂಪರ್ಕ ವಿದ್ದರೆ ಶುಭ, ಅಶುಭರ ಸಂಪರ್ಕ ವಾದರೆ ಅಶುಭ ) ವಿವಾಹವಾಗಲು ಕುಟುಂಬ,.ಸಪ್ತಮ, ಮತ್ತು ಲಾಭ ಸ್ಥಾನ ಹಾಗೂ ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತೆ, ಹಾಗೂ ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು. ಯಾವುದೇ ಜಾತಕದಲ್ಲಿ 2, 7, 11 ನೇ ಭಾವಾಧಿಪತಿಗಳು ಬಲಿಷ್ಠರಾಗಿ ವಿವಾಹ ಸೂಚಕ ಗ್ರಹರಾದ ಶುಕ್ರ, ಗುರು, ಚಂದ್ರರು ಬಲಿಷ್ಠರಾಗಿದ್ದರೆ ಉತ್ತಮ ವಿವಾಹ ಯೋಗ. ಜಾತಕದಲ್ಲಿ ಸಪ್ತಮಾಧಿಪತಿ ಬಲಯುತನಾಗಿ ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರ ದಲ್ಲಿದ್ದರೆ ವಿವಾಹಯೋಗ ಹಾಗೂ ಉತ್ತಮ ಸಂಗಾತಿ. ಸಪ್ತಮಾಧಿಪತಿ ಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭ ವಿವಾಹ ಯೋಹ. ಕಲತ್ರಕಾರಕನಾದ ಶುಕ್ರನು ಶುಭ ಗುರು ದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗ. ಪುರುಷರ ಜಾತಕದಲ್ಲಿ. ಚಂದ್ರ 2 ಅಥವಾ 4 ನೇ ಸ್ಥಾನದಲ್ಲಿದ್ದಾರೆ ತಡ (ಆಲಸ್ಯ )ವಿವಾಹಯೋಗ ಸ್ತ್ರೀಯರ ಜಾತಕನಿಗೆ ರವಿಯು 2 ಅಥವಾ 4 ರಲ್ಲಿದ್ದರೆ ಆಲಸ್ಯ ವಿವಾಹಯೋಗ. ಮೇಷ, ಸಿಂಹ, ಕನ್ಯಾ, ಧನಸ್ಸು, ಮಕರ ಲಗ್ನದಲ್ಲಿ ಶುಕ್ರನಿದ್ದರೆ ( ಸ್ತ್ರೀ ಪುರುಷರ ಜಾತಕಗಳೆರಡರಲ್ಲೂ ) ಆಲಸ್ಯ ವಿವಾಹಯೋಗ. Sangraha maahiti

Monday, 29 July 2019

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು?

ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಕುಜ ಅಂದರೆ ಅಗ್ನಿ ತತ್ವದ ಗ್ರಹ. ಜನ್ಮ ಜಾತಕದಲ್ಲಿ ಯಾವ ಸ್ಥಾನಗಳಲ್ಲಿ ಕುಜ ಗ್ರಹ ಇದ್ದರೆ ದೋಷಪೂರಿತ ಆಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಮುನ್ನ ಕುಜ ದೋಷ ಇದೆ ಎಂದಾಕ್ಷಣ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಧೈರ್ಯಗೆಡಬೇಡಿ. ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ಅದೇ ರೀತಿಯಾಗಿ ದೋಷವು ಪರಿಹಾರ ಕೂಡ ಆಗಿರುತ್ತದೆ. ಆದರೆ ಆ ದೋಷ ಪರಿಹಾರ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಂಡರೆ ಆಯಿತು. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಕುಜ ದೋಷ ಎಂದರೇನು? ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು. ಲಗ್ನದಿಂದ ೨, ೪, ೭, ೮ ಅಥವಾ ೧೨ನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವೆ. ಸ್ವಾಭಾವಿಕ ಪರಿಹಾರಗಳೇನು? ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ. ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ? ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ. ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ? ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ. ಕುಜ ದೋಷದ ಪರಿಹಾರ ಮಾರ್ಗಗಳೇನು? ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಸ್ವಯಂ ವೈದ್ಯ ಹೇಗೆ ಅಪಾಯಕಾರಿ ಹಾಗೂ ನಿರುಪಯೋಗಿಯೋ ಸ್ವಯಂ ಜ್ಯೋತಿಷ್ಯವೂ ಹಾಗೆಯೇ. ಆದ್ದರಿಂದ ನಿಮ್ಮ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಳ್ಳಿ. ಯೋಗವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಿ. ದೋಷ ಪರಿಹಾರ ಮಾಡಿಸಿಕೊಳ್ಳಿ ಕುಜ ದೋಷ ಪರಿಹಾರ ಸೂತ್ರಗಳು ಪೌರ್ಣಮಿ ಅಮಾವಾಸ್ಯೆ, ಗ್ರಹಣ ಕಾಲದಲ್ಲಿ ಸೂರ್ಯೋದಯ-ಸೂರ್ಯಾಸ್ತಮ ಜನಿಸಿದರೆ ಕುಜ ದೋಷ ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಸೂಕಾರ್ಯ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ. ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು. ಕುಜ ದೋಷಗಳು ಬರಲು ಕಾರಣ: ಜನನ ಕಾಲದಲ್ಲಿ ಗ್ರಹಗಳು, ಉಪಗ್ರಹಗಳು, ಉಲ್ಕಶಿಲೆಗಳು, ಧೂಮಕೇತುಗಳು ಮತ್ತು ಯಾವುದಾದರೊಂದು ಕ್ಷುದ್ರವಸ್ತು ಸೂರ್ಯನಿಗೆ ಅಡ್ಡಬಂದಾಗ ಸಂಕ್ರಮಣ ಏರ್ಪಟ್ಟು ಸೂರ್ಯನಿಂದ ಎರಕ ಹೊಯ್ಯುವ ನಭೋಕಿರಣಗಳು ವಕ್ರಸ್ಥಿತಿಯಲ್ಲಿ ಪೃಥ್ವಿಯ ಮೇಲೆ ಬಿದ್ದಾಗ, ಜ್ಯೋತಿಷ್ಯಶಾಸ್ತ್ರದ ರೀತ್ಯ ತನ್ನ ಜನ್ಮಕುಂಡಲಿಯಲ್ಲಿ ಕುಜ (ಅಂಗಾರಕ) ಮತ್ತು ಶನಿಗ್ರಹಗಳು ಅಷ್ಟಮ ಸ್ಥಾನಕ್ಕೆ ಬಂದಾಗ, ನಿವಾಸ ಮತ್ತು ಪರಿಸರದ ನೈರ್ಮಲ್ಯ ಕೆಟ್ಟು ವಾಸ್ತು ದೋಷಗಳು ಉದ್ಭವಿಸಿದರೆ, ಕುಲದೇವರನ್ನು ಪೂಜಿಸುವುದು ಮರೆತರೆ, ಪೌರ್ಣಮಿ ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ. ಯಾವಾಗ ಹೇಗೆ? ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ ಹಾಗೂ ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು. ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು. ಕುಜದೋಷ, ಮಂಗಳ ದೋಷ, ಅಂಗಾರಕ ದೋಷ ಎಂದರೆ ಎಲ್ಲವೂ ಒಂದೇ ಅರ್ಥ. ಕುಜನು ಲಗ್ನ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ವ್ಯಯ ಅಂದರೆ ಕುಜನ 1,2,4,5,7,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಹಾಗೂ ಈ ದೋಷವನ್ನು ಲಗ್ನದಿಂದ, ಚಂದ್ರನಿಂದ ಹಾಗೂ ಶುಕ್ರನಿಂದ ಸಹ ನೋಡಲಾಗುತ್ತದೆ. ಲಗ್ನವು ನಿರ್ದಿಷ್ಟ ಸಮಯದ, ವಿಶೇಷ ನಿರ್ದಿಷ್ಟ ಬಿಂದುವಾಗಿರುವುದರಿಂದ ಲಗ್ನದಿಂದ ನೋಡಬೇಕು. ಚಂದ್ರನು ಮನೋಕಾರಕನಾದ್ದರಿಂದ ಮತ್ತು ಲಗ್ನದ ನಂತರ ಇದನ್ನು ವಿಚಾರಿಸುವುದರಿಂದ ಚಂದ್ರನಿಂದ ನೋಡಲಾಗುತ್ತದೆ ಮತ್ತು ಶುಕ್ರನು ವೀರ್ಯ ಮತ್ತು ಕಳತ್ರ ಕಾರಕನಾದ್ದರಿಂದ ಆತನಿಂದ ಕುಜದೋಷ ಅವಲೋಕಿಸುವುದು ಯುಕ್ತಿಕರ. ಆದರೆ, ಲಗ್ನಕ್ಕೆ ವಿಶೇಷ ಬಲವಿರುವುದರಿಂದ ಮಂಗಳ ದೋಷವನ್ನು ಲಗ್ನದಿಂದ ನೋಡುವುದು ಹೆಚ್ಚು ಫಲದಾಯಕ. ಸೂಕ್ತ ಸಮಯ ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವಯೋಧರ್ವುದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ. ಒಬ್ಬೊಬ್ಬರ ಜಾತಕದಲ್ಲಿ ಕುಜದಶಾ ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು ಕಡಿಮೆಯಾಗುತ್ತದೆ. ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ (ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು. ಕುಜದೋಷ ಯಾವಾಗ ಇಲ್ಲ? ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ. ವಧು-ವರರಿಬ್ಬರ ಜಾತಕದಲ್ಲಿ ಕುಜದೋಷವಿದ್ದರೆ ಕುಜದೋಷ ಪರಿಹಾರವಾಗುತ್ತದೆ. ಶನಿ 4,6,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಕುಜ ದೋಷ ಬರುವುದಿಲ್ಲ. ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ. ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ. ದೋಷ ಪರಿಹಾರ * ಶುದ್ಧ ಪಾತ್ರೆಯಲ್ಲಿ ನೀರನ್ನು ಕಾಯಿಸಿ ಪೌರ್ಣಮಿಯ ಪ್ರಾತಃಕಾಲ 8-15 ರಿಂದ 8-45 ನಿಮಿಷಗಳ ಕಾಲಮಾನದಲ್ಲಿ ಸೂರ್ಯನ ಕಿರಣಗಳು ಬೀಳುವಂತೆ ಹೊರಗಿನ ವರಾಂಡದಲ್ಲಿ ಇಟ್ಟು ತಣ್ಣಗಾದ ನಂತರ ಶುದ್ಧ ಪಾತ್ರೆಯಲ್ಲಿ ಶೇಖರಿಸಿ 9 ದಿನಗಳ ಕಾಲ ದಿನಕ್ಕೆ ಮೂರು ಹೊತ್ತು ಒಂದು ಗ್ಲಾಸ್ ನೀರನ್ನು ಸೇವಿಸಿ ಒಂದು ಬಾಳೆಹಣ್ಣು ತಿನ್ನುವುದು. ಅದೇ ನೀರಿನಿಂದ ಸಂಜ್ಞಾ ಸಮಯದಲ್ಲಿ ನಿವಾಸದಲ್ಲಿ ಬೇವಿನ ಸೊಪ್ಪಿನಿಂದ ಪ್ರೋಕ್ಷ ಮಾಡುವುದು. * ಮನೆಯ ಯಜಮಾನ ಮತ್ತು ನೂತನ ದಂಪತಿಯು ನಿವಾಸದಲ್ಲಿ 3 ಪೌರ್ಣಮಿಗಳಂದು ಮಲಗಬಾರದು.ಈ ಪರ್ವಕಾಲದಲ್ಲಿ ಮದ್ಯಪಾನ ಮತ್ತು ಮಾಂಸಾಹಾರ ಸೇವಿಸಬಾರದು. ನಿವಾಸದಲ್ಲಿ ಹಬ್ಬದ ವಾತಾವರಣ ಇರಬೇಕು. * ಪ್ರಾತಃಕಾಲ ನಿವಾಸದ ಪ್ರಧಾನ ಬಾಗಿಲನ್ನು ಕೆಂಪು ಗುಲಾಬಿ ಹೂವುಗಳಿಂದ ಪೂಜಿಸಿ; ನಂತರ ಹಲವು ಹೂವುಗಳ ದಳಗಳನ್ನು ಬಿಡಿಸಿ ತಮ್ಮ ಶುದ್ಧ ಕೈಯಲ್ಲಿ ಇಟ್ಟು ಸೂರ್ಯನ ಕಿರಣಗಳನ್ನು ಬೀಳಿಸಿ ನಂತರ ತಮ್ಮ ದೇವರ ಮೇಲೆ ಹಾಕುವುದು. 4) ಮೂರು ಶನಿವಾರ ಅಥವಾ ಮಂಗಳವಾರದಂದು ಪ್ರಾತಃಕಾಲ 7.45ಕ್ಕೆ ದೇವರ ಕೋಣೆಯಲ್ಲಿ ಎರಡು ದೀಪಗಳನ್ನು ಬೆಳಗಿಸಿ ನಂತರ ಸೂರ್ಯನಿಗೆ ನಮಸ್ಕರಿ ಸೂರ್ಯನು ಕೆಂಪು ವರ್ಣಕ್ಕೆ ಬರುವವರೆಗೆ ನೋಡಿ ನಂತರ ದೇವರ ಕೋಣೆಯಲ್ಲಿರುವ ದೀಪಗಳ ಪ್ರಜ್ವಲನಾ ಕಿರಣಗಳನ್ನು ನೋಡಿದಾಗ ಕಂಡರಿಯದ ಕೆಂಪು ವರ್ಣಕ್ಕೆ ತಿರುಗುತ್ತವೆ. ಹಲವು ಸಲ ಪ್ರಯತ್ನಿಸುವುದು ನಂತರ ಹತ್ತಿರದಲ್ಲಿರುವ ನವಗ್ರಹಗಳಿಗೆ ಪೂಜೆ ಸಲ್ಲಿಸಿ ಅಂದು ಸಂಜೆ ಉಪವಾಸ ವ್ರತ ಆಚರಿಸಿ, ವಸ್ತ್ರದಾನ ಮಾಡುವುದು. ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!! ಭಾರತವು ಮೂಢನಂಬಿಕೆಗಳ ತವರು ಎಂದರೆ ತಪ್ಪಾಗದು. ಯಾಕೆಂದರೆ ಭಾರತವು ವಿವಿಧ ಧರ್ಮಗಳಲ್ಲಿ ಹಲವಾರು ರೀತಿಯ ಮೂಢನಂಬಿಕೆಗಳು ಇವೆ. ಇಂದಿಗೂ ಕೆಲವೊಂದು ನಂಬಿಕೆಗಳು ಹಾಗೆ ಉಳಿದುಕೊಂಡಿದೆ. ಇದರಲ್ಲಿ ಕೆಲವು ವೈಜ್ಞಾನಿಕ ಕಾರಣಗಳು ಇರುವಂತಹ ನಂಬಿಕೆಗಳು. ಆದರೆ ಇನ್ನು ಕೆಲವು ನಂಬಿಕೆಗಳಿಗೆ ಯಾವುದೇ ತಲೆಬುಡವೇ ಇರಲ್ಲ. ಉದಾಹರಣೆಗೆ ಮಾಂಗಲಿಕ ಇರುವಂತಹ ಮಹಿಳೆ ಅಥವಾ ಪುರುಷರು ಮಾಂಗಲಿಕ ಇಲ್ಲದೆ ಇರುವಂತವರನ್ನು ಮದುವೆಯಾದರೆ ಆಗ ಕೆಲವೇ ದಿನಗಳಲ್ಲಿ ಸಂಗಾತಿಯು ಮರಣವನ್ನಪ್ಪುವರು ಎಂದು ಹೇಳಲಾಗುತ್ತದೆ. ಅದರಲ್ಲೂ ಪುರುಷ ಪ್ರಧಾನವಾಗಿರುವಂತಹ ನಮ್ಮ ದೇಶದಲ್ಲಿ ಮಹಿಳೆಯ ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ (ಕುಜ ದೋಷ) ಆಗ ಆಕೆಗೆ ಮದುವೆಯೆನ್ನುವುದು ಕನಸಿನ ಮಾತೇ ಸರಿ. ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಲಿಕ ದೋಷವನ್ನು ಜ್ಯೋತಿಷ್ಯದಲ್ಲಿ ತುಂಬಾ ಗಂಭೀರ ದೋಷವೆಂದು ಪರಿಗಣಿಸಲಾಗಿದೆ. ಇದು ಒಬ್ಬ ವ್ಯಕ್ತಿಯ ಜೀವನ, ಮದುವೆ ಮೇಲೆ ಪರಿಣಾಮ ಬೀರುವುದು ಮತ್ತು ಆತನಿಗೆ ದುರಾದೃಷ್ಟವನ್ನೇ ಉಂಟು ಮಾಡುವುದು. ಮಾಂಗಲಿಕ ದೋಷವನ್ನು ಕುಜ ದೋಷ, ಭೋಮ ದೋಷ ಅಥವಾ ಅಂಗಾರಖ ದೋಷವೆಂದು ಕರೆಯಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ವ್ಯಕ್ತಿಯ ಕುಂಡಲಿಯ 1,2,4,7,8 ಮತ್ತು 12ನೇ ಮನೆಯಲ್ಲಿ ಕುಳಿತಿರುವುದು. 12 ಮನೆಗಳಲ್ಲಿ ಈ ಮೇಲಿನ ಯಾವುದಾದರೂ ಒಂದು ಮನೆಯಲ್ಲಿ ಮಂಗಳ ಗ್ರಹವು ಇದ್ದರೆ ಆಗ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಬಾಲಿವುಡ್ ನಟಿ ಐಶ್ವರ್ಯ ರೈಗೆ ಮಾಂಗಲಿಕ ದೋಷವಿತ್ತು ಎಂದು ಹೇಳಲಾಗಿತ್ತು. ಆಕೆ ಅಭಿಷೇಕ್ ಬಚ್ಚನ್ ನ್ನು ಮದುವೆಯಾಗುವ ಮೊದಲು ಒಂದು ಬಾಳೆಗಿಡಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇದರಿಂದ ಮಾಂಗಲಿಕ ದೋಷವು ಕಡಿಮೆಯಾಗುವುದು. ಮಾಂಗಲಿಕ ದೋಷದ ಬಗ್ಗೆ ತಿಳಿಯಬೇಕಾದರೆ ನಾವು ಇದರ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಇರುವಂತಹ ಪರಿಹಾರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಮಾಂಗಲಿಕ ದೋಷ ವೆಂದರೇನು? ಕುಂಡಲಿಯಲ್ಲಿ 12 ಮನೆಗಳು ಇರುವುದು. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು 1,2,4,7, 8 ಮತ್ತು 12ನೇ ಮನೆಯಲ್ಲಿ ಇದ್ದರೆ ಆಗ ಆ ವ್ಯಕ್ತಿಗೆ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮಂಗಳ ಗ್ರಹದ ನಕಾರಾತ್ಮಕ ಪರಿಣಾಮವು ಇರುವುದು. ಇದು ಮದುವೆ ವಿಚಾರದಲ್ಲಿ ಹೆಚ್ಚಿನ ಪ್ರಭಾವ ಬೀರುವುದು. ಯಾಕೆಂದರೆ ಮದುವೆ ಸಂದರ್ಭದಲ್ಲಿ ಹುಡುಗ ಹಾಗೂ ಹುಡುಗಿಯ ಕುಂಡಲಿಯು ಹೊಂದಾಣಿಕೆಯಾಗಬೇಕು. ಮದುವೆಗೆ ಮೊದಲು ಜ್ಯೋತಿಷಿಗಳು ಕುಂಡಲಿಯಲ್ಲಿ ಮಂಗಳ ದೋಷವಿದೆಯಾ ಎಂದು ನೋಡುವರು ಮತ್ತು ಇದರ ಬಳಿಕ ಮದುವೆ ಹೊಂದಾಣಿಕೆಯಾಗುವುದೇ ಎಂದು ತಿಳಿಸುವರು. ಮಾಂಗಲಿಕ ದೋಷದ ಗುಣಲಕ್ಷಣಗಳು ಕುಂಡಲಿಯಲ್ಲಿ ಎರಡೂ ಲಿಂಗದವರಿಗೆ ಮಾಂಗಲಿಕ ದೋಷವು ಕಾಣಿಸಬಹುದು. ಮಂಗಳ ಗ್ರಹವು ತುಂಬಾ ಆಕ್ರಮಣಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಬೇಗನೆ ತಾಳ್ಮೆ ಕಳೆದುಕೊಳ್ಳುವರು. ಯಾವುದೇ ಸಮಸ್ಯೆಯನ್ನು ತಡೆಯಲು ಮಾಂಗಲಿಕ ದೋಷವಿರುವವರು ತಮ್ಮಲ್ಲಿರುವ ಬೆಂಕಿಯಂತಹ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಾಂಗಲಿಕ ದೋಷದಿಂದಾಗಿ ಮದುವೆಯಲ್ಲಿ ವಿಳಂಬವಾಗಬಹುದು. ಮಾಂಗಲಿಕ ದೋಷವು ಮದುವೆಯಲ್ಲಿ ಒತ್ತಡ ಮತ್ತು ಅಪಸ್ವರ ಕಾಣಿಸುವಂತೆ ಮಾಡುವುದು. ಮಾಂಗಲಿಕ ದೋಷವಿರುವಂತಹ ಇಬ್ಬರು ಮದುವೆಯಾದರೆ ಗ್ರಹ ಪ್ರಭಾವ ತಗ್ಗಿಸಬಹುದು. ಹಿಂದಿನ ಜನ್ಮದಲ್ಲಿ ಸಂಗಾತಿಯೊಂದಿಗೆ ಸರಿಯಾಗಿ ವರ್ತಿಸದೆ ಇರುವಂತಹ ವ್ಯಕ್ತಿಗಳಿಗೆ ಮಾಂಗಲಿಕ ದೋಷವು ಬರುವುದು. ಸಮಸ್ಯೆಯುಂಟು ಮಾಡುವನು? ಮಂಗಳನು ಮೊದಲ ಮನೆಯಲ್ಲಿ ಇರುವಾಗ ವೈವಾಹಿಕ ಜೀವನದಲ್ಲಿ ಜಗಳ ಹಾಗು ಹಿಂಸೆಯು ಉಂಟಾಗುವುದು. ಎರಡನೇ ಮನೆಯಲ್ಲಿ ಮಂಗಳನಿದ್ದರೆ ಆಗ ವ್ಯಕ್ತಿಯ ಮದುವೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು. ನಾಲ್ಕನೇ ಮನೆಯಲ್ಲಿ ಮಂಗಳನಿದ್ದರೆ ಆಗ ವೃತ್ತಿಯಲ್ಲಿ ಆ ವ್ಯಕ್ತಿಗೆ ಯಶಸ್ಸು ಸಿಗದು. ಉದ್ಯೋಗವನ್ನು ಪದೇ ಪದೇ ಬದಲಿಸುತ್ತಿರುತ್ತಾನೆ ಮಂಗಳನು 7ನೇ ಮನೆಯಲ್ಲಿ ಇದ್ದರೆ ಮಂಗಳನು 7ನೇ ಮನೆಯಲ್ಲಿ ಇದ್ದರೆ ಆ ವ್ಯಕ್ತಿಯಲ್ಲಿನ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು. ತನ್ನಲ್ಲಿರುವಂತಹ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಕುಟುಂಬದವರೊಂದಿಗೆ ಸರಿಯಾದ ಹೊಂದಾಣಿಕೆಯಾಗದು. 8ನೇ ಮನೆಯಲ್ಲಿ ಮಂಗಳನು ಕುಳಿತಿದ್ದರೆ ಆಗ ವ್ಯಕ್ತಿಯ ಷೋಷಕರಿಂದ ದೂರವಾಗುವನು ಮತ್ತು ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವನು. ಮಂಗಳನು 12ನೇ ಮನೆಯಲ್ಲಿ ಇದ್ದರೆ ಆಗ ವ್ಯಕ್ತಿ ಮಾನಸಿಕ ಸಮಸ್ಯೆ, ಆರ್ಥಿಕ ನಷ್ಟ ಮತ್ತು ಶತ್ರುಗಳು ಹೆಚ್ಚಾಗುವರು. ಮಾಂಗಲಿಕ ದೋಷ ನಿವಾರಣೆಗೆ ಕೆಲವು ವಿಧಾನಗಳು ಮಾಂಗಲಿಕ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ದೂರವಾಗುವುದು. ಮಾಂಗಲಿಕ ದೋಷ ನಿವಾರಣೆ ಮಾಡಲು ಕುಂಭ ವಿವಾಹವಾದರೆ ಸಾಧ್ಯವಾಗುವುದು. ಈ ವಿಧದ ಮದುವೆಯಲ್ಲಿ ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮರದೊಂದಿಗೆ ಮದುವೆ ಮಾಡಿ ದೋಷ ದೂರ ಮಾಡಲಾಗುವುದು. ಮಾಂಗಲಿಕ ದೋಷ ನಿವಾರಣೆ ಮಾಡಲು ಪ್ರತೀ ಮಂಗಳವಾರ ಉಪವಾಸ ಮಾಡಬೇಕು. ಉಪವಾಸದ ವೇಳೆ ಮಾಂಗಲಿಕ ದೋಷವಿರುವವರು ಕೇವಲ ತೊಗರಿ ಬೇಳೆ ಮಾತ್ರ ಸೇವಿಸಬೇಕು. ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿ ಮಾಂಗಲಿಕ ಇರುವವರು ಮಂಗಳವಾರದಂದು ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿದರೆ ದೋಷ ದೂರವಾಗುವುದು. ಮಂಗಳವಾರದಂದು ಪೂಜೆಗಳನ್ನು ಮಾಡುವುದು ಮತ್ತು ಆಂಜನೇಯ ದೇವಸ್ಥಾನಕ್ಕೆ ಹೋಗುವುದರಿಂದ ಮಾಂಗಲಿಕ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು. ಜ್ಯೋತಿಷಿಗಳ ಪ್ರಕಾರ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು. ಮಾಂಗಲಿಕ ದೋಷವಿರುವಂತಹ ವ್ಯಕ್ತಿಗಳು 28ರ ಹರೆಯದ ಬಳಿಕ ಮದುವೆಯಾಗಬೇಕು. ಯಾಕೆಂದರೆ ವಯಸ್ಸಾದಂತೆ ದೋಷದ ಪ್ರಭಾವ ಕೂಡ ತಗ್ಗುವುದು. ಜಾತಕದಲ್ಲಿ ಕಾಡುವ ಕುಜ ದೋಷ! ಹೀಗೂ ಸಮಸ್ಯೆ ಬರಬಹುದು! ಜಾತಕದಲ್ಲಿ ಕೆಲವೊಂದು ದೋಷಗಳು ಇದ್ದರೆ ಮದುವೆಯಾಗಲು ಹಿಂಜರಿಯುತ್ತಾರೆ. ಅದರಲ್ಲೂ ಮಂಗಳಿಕ ದೋಷ ಪ್ರಮುಖವಾಗಿರುವಂತದ್ದು. ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಮಂಗಳವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳವು 1, 2, 4, 7, 8 ಮತ್ತು 12ನೇ ಮನೆಯಲ್ಲಿದ್ದಾಗ ಇದನ್ನು ಮಂಗಳ ದೋಷವೆಂದು ಕರೆಯಲಾಗುವುದು ಮತ್ತು ಜನರು ಇದನ್ನು ಮಂಗಳಿಕ ಎಂದು ಕರೆಯುತ್ತಾರೆ. ಈ ದೋಷವು ಯಾರಿಗೂ ಬರಬಹುದು. ಗೌರವ, ಅಹಂ, ಸ್ವಾಭಿಮಾನ ಮತ್ತು ಶಕ್ತಿಯ ಸಂಕೇತವೇ ಮಂಗಳ. ಆದರೆ ಮಂಗಳ ದೋಷದಲ್ಲಿ ಸಂಬಂಧವು ದುರ್ಬಲವಾಗುವ ಸಾಧ್ಯತೆಗಳು ಹೆಚ್ಚಿರುವುದು. ಇದನ್ನು ಸರಿಯಾಗಿ ಬಳಸಿಕೊಂಡರೆ ಮಂಗಳ ದೋಷವು ಶಕ್ತಿಯನ್ನು ನೀಡುವುದು. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರಿಂದ ವೈವಾಹಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮ ಉಂಟಾಗಬಹುದು. ಮಂಗಳ ದೋಷದ ಪರಿಣಾಮ ಜನ್ಮ ಜಾತಕದಲ್ಲಿ ಮಂಗಳಗ್ರಹ ಯಾವ ಮನೆಯಲ್ಲಿದೆ ಎಂದು ಅರ್ಥಮಾಡಿಕೊಂಡರೆ ಮಂಗಳ ದೋಷದ ಪರಿಣಾಮವು ತಿಳಿದುಬರುವುದು. 12ರಲ್ಲಿ ಆರು ಮನೆಗಳಲ್ಲಿ ಮಂಗಳವಿದ್ದರೆ ಆಗ ಅದು ಮಂಗಳನ ಕೆಟ್ಟ ಪ್ರಭಾವವೆಂದು ಭಾವಿಸಲಾಗುತ್ತದೆ. ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಜಾತಕದಲ್ಲಿ ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ತುಂಬಾ ಕ್ಷೋಬೆಗೊಳಗಾದವರು, ಆಕ್ರಮಣಕಾರಿಗಳು ಮತ್ತು ಅಸಭ್ಯರಾಗಿರುವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು 1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ. ಇದರ 7ನೇ ಅಂಶವೆಂದರೆ ಚಿಂತೆ ಹಾಗೂ ತೊಂದರೆಯುಂಟು ಮಾಡಿ ಪತಿ ಮತ್ತು ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡಬಹುದು. 8ನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯದ ಸಂಭವವಿದೆ ಎನ್ನುವ ಸೂಚನೆ. 2ನೇ ಮನೆಯಲ್ಲಿ ಮಂಗಳನ ದೋಷ ಎರಡನೇ ಮನೆಯು ಸಂಪತ್ತು ಮತ್ತು ಕುಟುಂಬದ ಮನೆಯಾಗಿದೆ. ಮಂಗಳವು ಈ ಗ್ರಹದಲ್ಲಿ ಇದ್ದರೆ ಅದರಿಂದ ಆ ವ್ಯಕ್ತಿಯ ಕುಟುಂಬದೊಂದಿಗೆ ಸಂಬಂಧದ ಮೇಲೆ ಪರಿಣಾಮ ಬೀರುವುದು. ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳ ಮತ್ತು ಆತಂಕ ಉಂಟು ಮಾಡಬಹುದು. 2ನೇ ಮನೆಯಲ್ಲಿರುವ ಮಂಗಳನು ವ್ಯಕ್ತಿಯ ಕುಂಡಲಿಯಲ್ಲಿ 5, 8 ಮತ್ತು 9ನೇ ಮನೆಯ ಮೇಲೂ ಪ್ರಭಾವ ಬೀರಬಹುದು. ಮಂಗಳಿಕ ಹೊಂದಿರುವ ವ್ಯಕ್ತಿಯ ಮಕ್ಕಳ ಮೇಲೂ ಇದರ ಪರಿಣಾಮವಾಗಬಹುದು. 4ನೇ ಮನೆಯಲ್ಲಿ ಮಂಗಳ ಮಂಗಳವು ನಾಲ್ಕನೇ ಮನೆಯಲ್ಲಿದ್ದರೆ ಅದರ ಅಂಶವು ಕುಂಡಲಿಯ 7, 10 ಮತ್ತು 11ನೇ ಮನೆಯಲ್ಲಿರುವುದು. ಮಂಗಳವು ನಾಲ್ಕನೇ ಮನೆಯಲ್ಲಿ ಇದ್ದರೆ ಅದರಿಂದ ಸ್ಥಿರ ಸಂಪತ್ತು ಮತ್ತು ಸಮೃದ್ಧಿ ಸಿಗುವುದು. ಆದರೆ ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸುವುದು. ಕುಂಡಲಿಯ ವ್ಯಕ್ತಿಯು ಹೊಂದಾಣಿಕೆ ಮಾಡಿಕೊಳ್ಳದೆ ಇರುವುದರಿಂದ ಹೀಗೆ ಆಗುವುದು. ಆದರೆ ಇದರಿಂದ ಸಂಬಂಧಿಗಳಿಗೆ ಯಾವುದೇ ಅಪಾಯವಿಲ್ಲ. 7ನೇ ಮನೆಯಲ್ಲಿ ಮಂಗಳ ದೋಷ ಇದು ಮದುವೆ ಮತ್ತು ಜತೆಗಾರಿಕೆಯ ಮನೆಯಾಗಿದೆ. 7ನೇ ಮನೆಯಲ್ಲಿ ಮಂಗಳ ದೋಷವಿದ್ದರೆ ಅದರಿಂದ ಮದುವೆಗೆ ಹಾನಿಯಾಗಬಹುದು. ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ತುಂಬಾ ಕೋಪಿಷ್ಠ ಪತಿ ಸಿಗಬಹುದು. 8ನೇ ಮನೆಯಲ್ಲಿ ಮಂಗಳ ದೋಷ ಇದು ಜೀವನದಲ್ಲಿ ಸುಖದುಃಖ ಮತ್ತು ಪರಿಸ್ಥಿತಿಯ ಸಂಕೇತ. ಈ ಮನೆಯಲ್ಲಿ ಮಂಗಳ ದೋಷವಿದ್ದರೆ ಅದು ತುಂಬಾ ಕೆಟ್ಟದು. ಇದು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟು ಮಾಡಬಹುದು. ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇತರ ಕೆಲವೊಂದು ಕಾರಣಗಳಿಂದ ಖಿನ್ನತೆ ಉಂಟಾಗಬಹುದು. ಕವಚಮ್: ನೀಲಾಂಬರಶ್ಮಿರಃ ಪಾತು ಲಲಾಟಂ ಲೋಕವಂದಿತಃ | ಚಕ್ಷುಷೀ ಪಾತು ಮೇ ರಾಹುಃ ಶ್ರೋತ್ರಮರ್ಧಶರೀರವಾನ್|| ನಾಸಿಕೇ ಮೇ ಕರಾಳಸ್ಯ ಶ್ಯೂಲಪಾಣಿರ್ಮುಖಂ ಮಮ | ಜಿಹ್ವಾಂ ಮೇ ಸಿಂಹಿಕಾಸೂನುಃ ಕಣ್ಠಂಮೇ ಕಷ್ಟನಾಶನಃ|| ಫಲ ಶೃತಿಃ ಯ ಇದಂ ಕವಚಂ ದಿವ್ಯಂ ಸರ್ವಶತೃವಿನಾಶನಮ್| ಭೂತಪ್ರೇತಪಿಶಾಚಾನಾಂ ನಾಶನಂ ಸರ್ವ ಸಿದ್ದಿದಮ್|| ಸರ್ವ ರೋಗ ಹರಂಚೈವ ಸರ್ವ ಸಂಪತ್ಪದಂ ಶುಭಮ್| ಭುಕ್ತಿ ಮುಕ್ತಿಪ್ರದಂ ನೃಣಾಂ ಸರ್ವಸೌಭಾಗ್ಯವರ್ಧನಮ್|| "ಧರ ಸುತಾಯ ವಿದ್ಮಹೇ | ಋಣ ಹರಾಯ ಧೀಮಹೀ | ತನ್ನೋ ಕುಜಃ ಪ್ರಚೋದಯಾತ್" *ಸಕಲ ರೀತಿಯ ಸರ್ಪದೋಷಕ್ಕೆ(ಕಾಳಸರ್ಪ ದೋಷಕ್ಕೆ ಈ ಸಣ್ಣ ಪ್ರಯೋಗ ಮಾಡಿದರೆ ಖಚಿತ ವಾಗಿ ಎಲ್ಲಾ ರೀತಿಯ ದೋಷಗಳು ಪರಿಹಾರವಾಗುತ್ತವೆ* ಹುಣ್ಣಿಮೆಯಂದು ಬೆಳಗ್ಗೆ ಸ್ನಾನಾ ನಂತರ ನಾಲ್ಕು ಬಾವಿಗಳಿಂದ ಬೇರೆ ಬೇರೆ ಪಾತ್ರೆ ಅಥವ ಬಿಂದಿಗೆಗಳಲ್ಲಿ ನೀರನ್ನು ತರಬೇಕು ತಂದು ಯಾವುದಾದರು ಮೃತ್ತಿಕೆಯ ಬಳಿ ಈ ನಾಲ್ಕು ಕೊಡ ನೀರಿನೊಂದಿಗೆ ಮೃತ್ತಿಕೆಗೆ ಪೂಜಿಸಬೇಕು ಈ ಮಂತ್ರ ಹೇಳುತ್ತಾ ೨೧ ಪ್ರದಕ್ಷಿಣೆ ಹಾಕಿ ನೀರಿನೊಂದಿಗೆ ಮನೆಗೆ ಹಿಂತಿರುಗುಗಬೇಕು ಈ ಕಾರ್ಯ ಬೆಳಗ್ಗೆ ೭ಗಂಟೆಯೊಳಗೆ ಆಗಬೇಕು ಪೂಜಾ ನಂತರ ಮೃತ್ತಿಕೆಯಿಂದ ಸ್ವಲ್ಪ ಮಣ್ಣನ್ನು ಜೊತೆಯಲ್ಲಿ ತರಬೇಕು.ಮನೆಗೆ ಬಂದು ಆದಿನ ಸಂಜೆ ವರೆಗೂ ಉಪವಾಸ ಮಾಡಬೇಕು (ಹಾಲನ್ನು ಸೇವಿಸ ಬಹುದು ಆದರೆ ಬೇರೆ ಏನನ್ನೂ ಅದಕ್ಕೆ ಸೇರಿಸಿ ಸೇವಿಸಬಾರದು.) ಸಂಜೆ ನೀವು ತಂದಿರುವ ಮಣ್ಣನ್ನು ನೀವು ಪೂಜಿಸಿ ತಂದಿರುವ ಸ್ವಲ್ಪನೀರಿನಲ್ಲಿ ಬೆರೆಸಿ ನಿಮ್ಮ ಮೈಮೇಲಿರುವ ಎಲ್ಲಾ ಬಟ್ಟೆಯನ್ನು ತೆಗೆದಿಟ್ಟು ದೇಹದ ಎಲ್ಲಾ ಬಾಗಕ್ಕೂ ಈ ಮಣ್ಣಿನಿಂದ ಲೇಪನ ಮಾಡಿಕೊಳ್ಳಬೇಕು ಈಗ ನಿರ್ವಾಣದಲ್ಲೇ ಇರುವಂತೆಯೇ ಮಣ್ಣನ್ನು ಹಚ್ಚಿಕೊಂಡಮೇಲೆ ಕುಳಿತುಕೊಂಡು ಈ ಕೆಳಗಿನ ಮಂತ್ರವನ್ನು ೧೦೮ ಸಲ ಜಪಿಸಿ ನನ್ನ ಸಕಲ ಸರ್ಪದೋಷವು ನಿವಾರಣೆಯಾಗಲಿ ಎಂದು ಪ್ರಾಥನೆ ಮಾಡಿಕೊಂಡು ನೀವು ಪೂಜೆಮಾಡಿತಂದ ನಾಲ್ಕು ಬಾವಿಯ ನೀರನ್ನು ಉಪಯೋಗಿಸಿ ಸ್ನಾನ ಮಾಡುವುದು. ಆನಂತರ ನಿಮ್ಮ ಕುಲದೇವತಾರಾಧನೆ ಮಾಡಿ ಬೇಳೆಯಿಂದ ಮಾಡಿದ ಊಟವನ್ನು ಸೇವಿಸಬೇಕು.ಅನಾಥರಿಗೆ,ಬಡವರಿಗೆ ಯತಾ ಶಕ್ತಿದಾನ ಮಾಡುವುದು. ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತಯೇ ಸ್ವಾಹಾಃ ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು. ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ. -Sangraha mahiti(krupe F B)