Sunday, 29 September 2019
ವಿಹಾಹಯೋಗ
ವಿಹಾಹಯೋಗ
*ಜಾತಕದಲ್ಲಿ ಲಗ್ನ,ಚಂದ್ರ,ಕಳತ್ರಕಾರಕನಾದ ಶುಕ್ರ ಪ್ರಬಲವಾಗಿದ್ದರೆ ಒಳ್ಳೆಯ ವಿವಾಹಯೋಗವನ್ನು ಹೇಳಬಹುದು.
*ವಿವಾಹಯೋಗವನ್ನು ನೋಡುವಾಗ ಪ್ರಮುಖವಾಗಿ ವಿವಾಹಸ್ಥಾನಗಳಾದ೧,೨,೪,೭,೮,೧೨ನೇ ಭಾವಗಳನ್ನು ಲಗ್ನ,ಚಂದ್ರ ಮತ್ತು ಶುಕ್ರರಿಂದ ನಿರ್ಣಯಿಸಬೇಕು.
೧.ಲಗ್ನಭಾವ:-
ಜಾತಕನ ಗುಣ,ಆತನ ಸುಖವನ್ನು ಸೂಚಿಸುತ್ತದೆ.
೨.ಕುಟುಂಬ ಭಾವ:
ಜಾತಕನ ಕುಟುಂಬ ಸೌಖ್ಯವನ್ನು ಸೂಚಿಸುತ್ತದೆ.
೪.ಸುಖಭಾವ:-
ಜಾತಕನ ವೈವಾಹಿಕ ಸುಖವನ್ನು ಸೂಚಿಸುತ್ತದೆ.
೭.ಕಳತ್ರಭಾವ:-
ಜಾತಕನ ಸಂಗಾತಿಯ ಗುಣ,ಅವರಿಂದ ಜಾತಕನಿಗೆ ಸಿಗುವ ಸುಖ,ದುಃಖಗಳನ್ನು ಸೂಚಿಸುತ್ತದೆ.
೮.ಮಾಂಗಲ್ಯ ಭಾವ:-
ಜಾತಕನ ಸಂಗಾತಿಯ ಆಯುಷ್ಯವನ್ನು ಸೂಚಿಸುತ್ತದೆ.
೧೨.ಶಯನ ಸುಖ:-
ಜಾತಕನಿಗೆ ತನ್ನ ಸತಿಯಿಂದ ದೊರೆಯ ಬಹುದಾದ ಶಯನಸುಖವನ್ನು,ಪರಸ್ಪರರಲ್ಲಿ ಪ್ರೀತಿಯನ್ನು ಸೂಚಿಸುತ್ತದೆ.
ಈ ಎಲ್ಲಾ ಭಾವಗಳಲ್ಲಿ ಶುಭಗ್ರಹಗಳು ಸ್ಥಿತವಾಗಿದ್ದಾಗ ಉತ್ತಮವೈವಾಹಿಕ ಜೀವನ ಉಂಟಾಗುತ್ತದೆ.ಅಶುಭ,ಪೀಡಿತ,ಅಸ್ತ,ನೀಚ,ಗ್ರಹಗಳೇನಾದರು ಸ್ಥಿತವಾಗಿದ್ದರೆ ಆಯಾಗ್ರಹಗಳ ಪ್ರಭಾವಕ್ಕನುಗುಣವಾಗಿ ಜಾತಕನ ಜೀವನದಲ್ಲಿ ಏರಿಳಿತಗಳು(ಕಷ್ಟ,ಸುಖಗಳು)ಇರುತ್ತವೆ.
*ವಿವಾಹ ಜೀವನಕ್ಕೆ ಶುಭಗ್ರಹಗಳು-ಚಂದ್ರ,ಶುಕ್ರ,ಗುರು
*ವೈವಾಹಿಕ ಜೀವನಕ್ಕೆ ಅಶುಭಗ್ರಹಗಳು:-ರವಿ,ರಾಹು ಶನಿ
*ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಗ್ರಹಗಳು:-ಕುಜ,ಕೇತು,ಬುಧ.(ಈಗ್ರಹಗಳು ಶುಭಗ್ರಹಗಳ ಸಂಪರ್ಕ ವಿದ್ದರೆ ಶುಭ,ಅಶುಭಗ್ರಹಗಳ ಸಂಪರ್ಕ ವಾದರೆ ಅಶುಭ)
*ವಿವಾಹ ವಾಗಲು:-ಸಪ್ತಮಮತ್ತು ಲಾಭ ಸ್ತ ಹಾಗು ಆ ಸ್ಥಾನಾಧಿಪತಿಗಳು ಅತ್ಯಂತ ಮುಖ್ಯವಾಗುತ್ತಾರೆ ಹಾಗು ವಿವಾಹ ಕಾರಕನ ಸ್ಥಿತಿಯೂ ಸಹ ಉತ್ತಮವಿರಬೇಕು.
*ಯಾವುದೇಜಾತಕದಲ್ಲಿ೨.೭.೧೧ನೇ ಭಾವಾದಿಪತಿಗಳು ಬಲಿಷ್ಟರಾಗಿ ವಿವಾಹ ಸೂಚಕಗ್ರಹಗಳಾದ ಶುಕ್ರ,ಗುರು,ಚಂದ್ರರು ಬಲಿಷ್ಟರಾಗಿದ್ದರೆ ಉತ್ತಮ ವಿವಾಹಯೋಗ.ಜಾತಕದಲ್ಲಿಸಪ್ತಮಾಧಿಪತಿಯು ಬಲಯುತನಾಗಿ ಶುಭಗ್ರಹರ ದೃಷ್ಟಿಯಲ್ಲಿದ್ದರೆ ಶುಭವಿವಾಹ ಯೋಗ ಕಳತ್ರಕಾರಕನಾದ ಶುಕ್ರನು ಶುಭನು ಗುರುದೃಷ್ಟಿಯಲ್ಲಿದ್ದರೆ ಉತ್ತಮ ಸಂಗಾತಿಯೊಡನೆ ಶುಭವಿವಾಹ ಯೋಗೌಂಟಾಗುತ್ತದೆ.
*ಪುರುಷರ ಜಾತಕದಲ್ಲಿ ಚಂದ್ರ೨ಅಥವ೪ನೇ ಸ್ಥಾನದಲ್ಲಿದ್ದರೆವಿವಾಹ ವಿಳಂಭ(ತಡ,ಆಲಸ್ಯ ವಿವಾಹ)ಉಂಟಾಗುತ್ತದೆ,
*ಸ್ತ್ರೀಯರ ಜಾತಕದಲ್ಲಿ ರವಿಯು೨ಅಥವ೪ರಲ್ಲಿದ್ದರೆ ಆಲಸ್ಯ ವಿವಾಹ(ವಿಳಂಬ,ತಡ)ಉಂಟಾಗುತ್ತದೆ.ಮೇಷ,ಸಿಂಹ,ಕನ್ಯ,ದನಸ್ಸು,ಮಕರ ಲಗ್ನದಲ್ಲಿ ಶುಕ್ರನಿದ್ದರೆ(ಸ್ತ್ರೀ/ಪುರುಷರ ಜಾತಕಗಳೆರಡರಲ್ಲೂ)ಆಲಸ್ಯ ವಿವಾಹಯೋಗ ಉಂಟಾಗುತ್ತದೆ.
Subscribe to:
Post Comments (Atom)
No comments:
Post a Comment