Friday 30 August 2019

*ಚಂದ್ರ - ರಾಹು ಸಂಯೋಗ :

ಈ ಸಂಯೋಗ ಇರುವ ಜಾತಕರದು ಸ್ವಾರ್ಥ ಪರತೆ, ಹಠ, ಛಲ, ಯಾವುದೇ ವ್ಯವಹಾರವಾಗಲಿ ತಮಗೇ ಮೊದಲು ಸಿಗಬೇಕು, ಅಗಣಿತ ಲಾಭವಾಗಬೇಕು ಎಂಬಾಸೆಯುಳ್ಳವರು. ರಾಹುವಿನಿಂದ ಪೈಶಾಚಿಕ ಮನಸ್ಸು, ಇವರನ್ನು ಸುಮ್ಮನಿರಲೂ ಬಿಡುವುದಿಲ್ಲ. ಸದಾ ಗ್ರಹಬಡಿದವರಂತೆ ಕಾಣುತ್ತಾರೆ. ಶಕ್ತಿ ದೇವಸ್ಥಾನಗಳಿಗೆ ಹೋಗುತ್ತಾರೆ, ನಿಂಬೆ ಹಣ್ಣಿನ ದೀಪ ಹಚ್ಚುವುದು, ದೇವಿಯ ಅಖಂಡ ಪೂಜೆ, ಮೈಮೇಲೆ.ದೇವರು ಬಂದಂತೆ ಕುಣಿಯುವುದು, ಹರಿಸಿನ - ಕುಂಕುಮ - ವಿಧವಿಧವಾದ ಎಲೆ, ಕಾಯಿಗಳನ್ನು ಅಗಿದು ತಿನ್ನುವುದು, ಮೈಕೈಗೆಲ್ಲಾ ಶಸ್ತ್ರಗಳಿಂದ ಚುಚ್ಚಿಕೊಂಡು, ಕುಣಿದು ಭಕ್ತಿ ಪ್ರದರ್ಶನ ಮಾಡುವುದು, ಕೆಲವೊಮ್ಮೆ ಮೈಮೇಲಿನ ಬಟ್ಟೆಯ ಪರಿವೆಯೂ ಇರುವುದಿಲ್ಲ. ಇವರುಗಳು ಪ್ರೇತ, ಭೂತ, ಭಾನಾಮತಿ ಮುಂತಾದುವುಗಳ ವಶಕ್ಕೆ ಬೇಗ ಒಳಗಾಗುತ್ತಾರೆ, ಗಾಳಿ ಸಂಬಂಧ, ಪ್ರೇತ ಸಂಭಂದ ಗ್ರಹಗಳು ಇವರ ಶರೀರದಲ್ಲಿ ಸೇರಿ ಇವರ ಬುದ್ಧಿ, ಮನಸ್ಸು, ಶರೀರ, ನರಗಳನ್ನು ದೌರ್ಬಲ್ಯ ಮಾಡಿ ಯಾವ ಕೆಲಸಕ್ಕೂ ಬರದವರಂತೆ ಮಾಡುತ್ತವೆ. ಇದರಿಂದಲೇ ದೇವರು ಮೈಮೇಲೆ ಬಂದವರಂತೆ ಕುಣಿದು, ದಣಿದು ನೆಲಕ್ಕೆ ಬೀಳುತ್ತಾರೆ. ಈ ಸಂಯೋಗಕ್ಕೆ ಕುಜನ ಸಂಬಂದ ಬಂದರೆ ಪರಿಸ್ಥಿತಿ ಕ್ರೂರವಾಗಿ ಶರೀರಕ್ಕೆ ಹಾನಿ ಮಾಡಿಕೊಳ್ಳುತ್ತಾರೆ. ಶನಿ ಸಂಬಂದ ಬಂದ್ರೆ ಮಂಕಾಗಿ, ಮನೋರೋಗದವರ ಹಾಗೆ ಮೂಲೆಯಲ್ಲಿ ಕುಳಿತುಬಿಡುತ್ತಾರೆ, ಇಲ್ಲವೇ ಮನೆ ಬಿಟ್ಟು ಹೋಗುತ್ತಾರೆ. ಚಂದ್ರನು ಬಲಿಷ್ಠ ನಾಗಿದ್ದರೆ ಇಂತಹ ಪರಿಸ್ಥಿತಿ ಬರುವುದಿಲ್ಲ, ಬಂದರೂ ಶಾಂತರಾಗಿರುತ್ತಾರೆ, ಪರಿಸ್ಥಿತಿ ವಿಕೋಪಕ್ಕೆ ಹೋಗದಿದ್ದರೂ, ಆ ಛಾಯೆ ಹೋಗುವುದಿಲ್ಲ, ಒಂದಲ್ಲ ಒಂದು ದಿನ ಮನೋರೋಗಕ್ಕೆ ತುತ್ತಾಗುತ್ತಾರೆ. ರಾಹು ಬಲಿಷ್ಟ ನಾದರೆ ಒಂದು ರೀತಿಯ ಗ್ರಹಣಯೋಗವುಂಟಾಗಿ ಬಳಲುವರು. ರಾಹು - ಸರ್ಪ, ಬಾಯಿ. ಚಂದ್ರನನ್ನು ನುಂಗಿ ತನ್ನ ಹೊಟ್ಟೆಯಲ್ಲಿ ಸೇರಿಸಿಕೊಳ್ಳುವನು, ಹಾಗಾಗಿ ಮನಸ್ಸೂ, ಜೀವನ ಎರಡೂ ಕಾಣದೆ, ಸಂಘರ್ಷದ ಜೀವನದಿಂದ ತೊಳಲಾಡುವರು. ಕಷ್ಟಗಳಿಗೆ ಹೆದರಿ , ಜೀವನವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದು ವಿಷಪ್ರಾಶನದಿಂದ ಆತ್ಮಹತ್ಯೆ ಮಾಡಿಕೊಳ್ಳುವರು. ರಾಹು - ಚಂದ್ರನ ಸಂಯೋಗ, ನೀಚ ರಾಶಿ - ನವಾಂಶ, ಪಾಪ ರಾಶಿ -ನವಾಂಶ, ಕ್ರೂರ ರಾಶಿ - ನಮಾಂಶ ದಲ್ಲಿದ್ದು ಕುಜನ ಸಂಪರ್ಕ ದಲ್ಲಿದ್ದರೆ, ನೀಚರ ಸಹವಾಸದಿಂದ ಜೀವನ ಹಾಳು ಮಾಡಿಕೊಳ್ಳುವರು. ಈ ಮೂರರ ಸಂಯೋಗದ ಜೊತೆ ಶುಕ್ರನೇನಾದರೂ ಸೇರಿದರೆ, ಅತ್ಯಾಚಾರ - ಕೊಲೆಗೀಡಾಗುವರು. ದೇಹದ ಅಂಗಗಳನ್ನು ಕತ್ತರಿಸಿಕೊಳ್ಳೋದು, ವಾಹಣಗಳಡಿಗೆ ತಲೆ ಕೊಟ್ಟು ಸಾಯೋದು, ಉದ್ದೇಶಪೂರ್ವಕವಾಗೇ ಅಪಘಾತ ಮಾಡುವುದು. ಜೈಲುವಾಸ, ಅಲೆಮಾರಿ ಜೀವನ, ಎಲ್ಲವನ್ನೂ ಕಳೆದುಕೊಂಡು ಆತ್ಮಹತ್ಯಾ ನಿರ್ಧಾರ ಮಾಡುವುದು. ದುಶ್ಚಟಗಳಿಗೆ ಬಲಿಯಾಗುವುದು. ಅಫೀಮು, ಗಾಂಜಾ, ಡ್ರಗ್ಸ್ ತೆಗೆದುಕೊಳ್ಳುವುದು ಮಾಡುತ್ತಾರೆ. ಇಂತಹವರಿಗೆ ಶನಿ ಸಂಪರ್ಕ ಬಂದರೆ ಎತ್ತರದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದು, ಅಂಗಾ0ಗಗಳಿಗೆ ಊನ ಮಾಡಿಕೊಳ್ಳುವುದು, ಹಿರಿಯರು - ಕಿರಿಯರು, ಬಂಧುಗಳು ಎಂಬ ತಾರತಮ್ಯವೂ ಇಲ್ಲದೆ ಎಲ್ಲರನ್ನೂ ಹೆದ್ರಿಸಿ, ಬೆದರಿಸಿ ಕೊಲೆ ಮಾಡಲು ಸಜ್ಜಾಗುವುದು. ಒಟ್ಟಿನಲ್ಲಿ... ಭಯಂಕರ, ವಿಕೃತ ಮನಸ್ಸಿನವರಾಗಿರುತ್ತಾರೆ. ಚಂದ್ರ ಬಲವಾಗಿ ಶುಭದೃಷ್ಟಿಇದ್ದರೆ ಫಲಗಳಲ್ಲಿ ವ್ಯತ್ಯಾಸವಿರುತ್ತೆ... -SangrahaMahiti(FB)

No comments:

Post a Comment