Friday, 30 August 2019
ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು?
ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ.
ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ.
ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ.
1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ ಮತ್ತು ಮಕರ ಇದು ಸ್ಥಿರ ರಾಶಿ. ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಯೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ ಇಲ್ಲವೇ ಮೇಷ, ಕರ್ಕಾಟಕ, ತುಲಾ ಮತ್ತು ಧನು ಈ ಚರ ರಾಶಿಯಲ್ಲಿ ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದರೆ ಆ ಗ್ರಹಗಳ ದೆಸೆಯಲ್ಲಿ ಜಾತಕನಿಗೆ ಬಹಳ ಸಂಪತ್ತು ಬರುತ್ತದೆ. ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿ ಇದ್ದರೆ ಒಳ್ಳೆಯ ಫಲವು ಸಿಗುವುದಿಲ್ಲ. ರಾಹು ಕೇತುಗಳು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಕೇತುಗಳು ಮೇಷ, ವಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕರು ಬಹಳ ಹಣವಂತರಾಗುತ್ತಾರೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ. ತತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿಶನಿ ಇದ್ದರೆ ಜಾತಕನು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತದೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು ಸರಕಾರದ ದಂಡಕ್ಕೆ ಗುರಿಯಾಗುತ್ತಾರೆ.
-Sangraha (FB)
Subscribe to:
Post Comments (Atom)
No comments:
Post a Comment