Friday, 30 August 2019

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ದಿಕ್ಕುಗಳ ಮಹತ್ವ ಪ್ರಮುಖ ನಾಲ್ಕು ದಿಕ್ಕುಗಳಂತೆಯೇ ಉಪದಿಕ್ಕುಗಳೂ ಸಹ ವಾಸ್ತು ಶಾಸ್ತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮೊದಲಿಗೆ ಆಗ್ನೇಯ ದಿಕ್ಕಿನ ಫಲಾಫಲಗಳು ನೋಡೋಣ. ಪೂರ್ವ ದಿಕ್ಕು ಹಾಗೂ ದಕ್ಷಿಣದ ದಿಕ್ಕಿನ ಮೂಲೆಯೇ ಆಗ್ನೇಯ ದಿಕ್ಕು, ಈ ದಿಕ್ಕಿಗೆ ಅಧಿಪತಿ ಶುಕ್ರ, ದಿಕ್ಪಾಲಕ ಅಗ್ನಿ, ಈ ಭಾಗವು ಮನೆಯ ಸ್ತ್ರೀಯರು ಹಾಗೂ ಮನೆಯ ಎರಡನೇ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ, ಹಾಗಾಗಿಯೇ ನಮ್ಮ ಪೂರ್ವಿಕರು ಆಗ್ನೇಯ ಭಾಗದಲ್ಲಿಯೇ ಅಡುಗೆ ಮನೆಯನ್ನು ನಿರ್ಮಿಸುವಂತೆ ಹೇಳಿದ್ದಾರೆ. ಆಗ್ನೇಯ ದಿಕ್ಕು ಬೆಳೆದರೂ, ಹೆಚ್ಚು ಖಾಲಿ ಜಾಗವಿದ್ದರೂ ಪರಿಣಾಮ ಕೆಟ್ಟದಿರುತ್ತದೆ, ನೈಋತ್ಯ ದಿಕ್ಕಿಗಿಂತ ತಗ್ಗಾಗಿಯೂ, ಈಶಾನ್ಯ ದಿಕ್ಕಿಗಿಂತ ಎತ್ತರವಾಗಿಯೂ ಇರುವಂತೆ ನೋಡಿಕೊಳ್ಳಬೇಕು, ಆಗ್ನೇಯ ದಿಕ್ಕಿನಲ್ಲಿ ಹಳ್ಳ, ಭಾವಿ ಮುಂತಾದುವಿದ್ದರೆ ಮನೆಯ ಹೆಣ್ಣು ಮಕ್ಕಳು(ಎರಡನೇ) ನಡತೆಗೆಡುತ್ತಾರೆ, ಎರಡನೆಯ ಮಗ ಅಕಾಲ ಮರಣಕ್ಕೀಡಾಗುತ್ತಾನೆ. ಆಗ್ನೇಯ ದಿಕ್ಕಿನಲ್ಲೂ ಎರಡು ರೀತಿಯಾಗಿ ವಿಂಗಡಿಸಬಹುದು, ಪೂರ್ವ ಆಗ್ನೇಯ ಹಾಗೂ ದಕ್ಷಿಣ ಆಗ್ನೇಯ. ಪೂರ್ವ ಆಗ್ನೇಯ ದೋಷಪೂರಿತವಾಗಿದ್ದು ಲೋಪವಾದರೆ ಮನೆಯ ಯಜಮಾನಿ/ ಪತ್ನಿ ಗೆ ಅನಾರೋಗ್ಯ , ಆಯುಷ್ಯ ಕ್ಕೆ ತೊಂದರೆ, ದ್ವಿತೀಯ ಪುತ್ರಿಯ ವೈವಾಹಿಕ ಜೀವನಕ್ಕೆ ತೊಂದರೆ,ದಾಂಪತ್ಯ ದಲ್ಲಿ ವಿರಸ ಮುಂತಾದ ದುಷ್ಫಲಗಳು. ದಕ್ಷಿಣ ಆಗ್ನೇಯ ಲೋಪವಾಗಿ ದೋಷಪೂರಿತವಾಗಿದ್ದರೆ, ಯಜಮಾನ ನಿಗೆ ದುರಾಭ್ಯಾಸ, ದುರ್ವ್ಯಸನಗಳು,ಸಾಂಸಾರಿಕ ಕಲಹ, ವಿವಾಹದ ವಿಷಯದಲ್ಲಿ ತೊಂದರೆ, ಸ್ತ್ರೀ ಪ್ರಾಭಲ್ಯ ಹೆಚ್ಚು. ಆಗ್ನೇಯ ದಿಕ್ಕು ಪ್ರಭಲವಾಗಿ , ವಾಸ್ತು ರೀತ್ಯಾ ಶುದ್ಧವಾಗಿದ್ದರೆ, ದಾಂಪತ್ಯ ದಲ್ಲಿ ಅನ್ಯೋನ್ಯತೆ, ಸಾಮರಸ್ಯವಿರುತ್ತದೆ. ಈ ದಿಕ್ಕು ಅಗ್ನಿ ಪ್ರಾಧಾನ್ಯವಾದ್ದರಿಂದ ಈ ದಿಕ್ಕಿನಲ್ಲಿಯೇ ಅಡುಗೆ ಮನೆ, .ಟ್ರಾನ್ಸ್ಫಾರ್ಮರ್, ಜನರೇಟರ್, ಬಾಯ್ಲರ್ ಮುಂತಾದ ಅಗ್ನಿ ಸಂಭದಿ ವಸ್ತುಗಳಿದ್ದರೆ ಒಳ್ಳೆಯದು. ಪೂರ್ವದಿಕ್ಕು :--- ಪೂರ್ವ ದಿಕ್ಕಿಗೆ ಅಧಿಪತಿ ಸೂರ್ಯ, ಸೌರವ್ಯೂಹದ ಕೇಂದ್ರ ಬಿಂದುವೇ ಸೂರ್ಯ. ಸೂರ್ಯ ಅಗಾಧ ಶಕ್ತಿಯ ಕಣಜ ಎಂಬ ಅಂಶವನ್ನು ವಾಸ್ತು ತಜ್ಞರು ಸಹಸ್ರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಸೂರ್ಯನಲ್ಲಿರುವ ಸಪ್ತವರ್ಣಗಳು ಹಾಗೂ ಸೂರ್ಯ ಕಿರಣಗಳು ಹೊರಸೂಸುವ ಅತಿ ನೇರಳೆ ಕಿರಣಗಳು, ಅವುಗಳಿಂದಾಗುವ ಒಳಿತು-ಕೆಡಕುಗಳು ಹಾಗೂ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯನ್ನು ವಾಸ್ತು ವಿಜ್ಞಾನ ಬಹಳ ಹಿಂದೆಯೇ ತಿಳಿಸಿದೆ. ಆದ್ದರಿಂದಲೇ ವಾಸ್ತು ಪೂರ್ವ ದಿಕ್ಕಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಿದೆ. ಪೂರ್ವ ದಿಕ್ಕು ಹಾಗೂ ಸೂರ್ಯನ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ಹೇಗೆ ಪ್ರಯೋಜನವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ. ಪೂರ್ವ ದಿಕ್ಕಿಗೆ ರವಿಯ ಉಚ್ಚಸ್ಥಾನವಾದ ಮಧ್ಯದಲ್ಲಿ ಮುಖ್ಯದ್ವಾರ ಇಡುವುದರಿಂದ ಉತ್ತಮ ಮತ್ತು ಅನುಕೂಲ. ಪೂರ್ವದ್ವಾರದ ಮುಂಬಾಗದಲ್ಲಿ ಖಾಲಿ ಜಾಗ ಹೆಚ್ಚಿದ್ದು ತಗ್ಗಾಗಿದ್ದರೆ ಮನೆಯ ಯಜಮಾನನು ಆರೋಗ್ಯವಂತನೂ, ಎಲ್ಲಾ ಕಾರ್ಯಗಳಲ್ಲಿ ಯಶಸ್ಸು, ಅಭಿವೃದ್ಧಿ , ಉನ್ನತ ಪದವಿ, ನಾಯಕತ್ವ ಗುಣ, ಕೀರ್ತಿ ಗೌರವಗಳು ಲಭಿಸುತ್ತದೆ. ದಕ್ಷಿಣ ದಿಕ್ಕು ದಕ್ಷಿಣದ ದಿಕ್ಕಿಗೆ ಅಧಿಪತಿ ಕುಜಗ್ರಹ, ದಿಕ್ಪಾಲಕ ಯಮ , ಕುಜಗ್ರಹ ವು ಧೈರ್ಯಕ್ಕೆ ಬ್ರಾತ್ರುವಿಗೆ ಕಾರಕನು, ಮುಂಗೋಪ, ಮನೆಯ ಯಜಮಾನ ನಿಗೆ ಧೈರ್ಯ ಸಾಹಸಗಳನ್ನು ತುಂಬುತ್ತಾನೆ, ಕ್ರೀಡಾಭಿಮಾನಿ, ಅಚಲ ನಿರ್ಧಾರಗಳನ್ನು ತೆಗೆದುಕೊಳ್ಳುವರೂ ಆಗುತ್ತಾರೆ. ಉತ್ತರ ದಿಕ್ಕು ಸ್ತ್ರೀ ಭಾಗವಾದಾಗ ಅದರ ವಿರುದ್ದದ ದಕ್ಷಿಣ ವೂ ಸಹ ಸ್ತ್ರೀ ಭಾಗವಾಗುತ್ತದೆ, ಹಾಗಾಗಿ ಈ ದಿಕ್ಕು ಮನೆಯ ಹೆಂಗಸರ ಮೇಲೂ ಪರಿಣಾಮ ಬೀರುತ್ತದೆ, ಜೊತೆಗೆ ಸಾಹಸ ಉತ್ಸಾಹ ಗಳನ್ನು ಪ್ರತಿನಿಧಿಸುತ್ತದೆ. ದಕ್ಷಿಣದ ದಿಕ್ಕು ಎತ್ತರವಾಗಿದ್ದರೆ, ಆ ಮನೆಯಲ್ಲಿ ವಾಸಿಸುವವರು ಆರೋಗ್ಯವಂತರು, ಹಣಬಲವುಳ್ಳವರೂ ಆಗುತ್ತಾರೆ, ಆದ್ದರಿಂದ ದಕ್ಷಿಣ ವನ್ನು ಎತ್ತರವಾಗಿರಿಸಿ ಮನೆಯಲ್ಲಿ ಬೇಡವಾದ , ಉಪಯೋಗಿಸದ ವಸ್ತುಗಳನ್ನು ಈ ಭಾಗದಲ್ಲಿ ಹಾಕಿದರೆ ಶುಭ, ಈ .ಭಾಗದಲ್ಲಿ ಎತ್ತರದಲ್ಲಿ ಕೋಣೆಗಳನ್ನು ಕಟ್ಟಿದರೆ ಹಣವಂತರಾಗುತ್ತಾರೆ. ದಕ್ಷಿಣದ ದಿಕ್ಕಿನಲ್ಲಿ ಹೆಚ್ಚು ಖಾಲಿ ಜಾಗ ವಿರಬಾರದು, ಹೆಚ್ಚು ತಗ್ಗಿರಬಾರದು, ಯಾವುದೇ ರೀತಿಯ ಹಳ್ಳ, ಶೌಚಾಲಯ ಇರಬಾರದು, ಈ ದಿಕ್ಕಿನ ದಿಕ್ಪಾಲಕ ಯಮ ನಾದ್ದರಿಂದ, ವಾಸ್ತು ಲೋಪವಿದ್ದಲ್ಲಿ ಮನೆಯ ಸ್ತ್ರೀ, ಯಜಮಾನ ಅಕಾಲ ಮರಣಕ್ಕೀಡಾಗುವ ಸಂಭವ, ಆರ್ಥಿಕ ನಷ್ಟ, ಕಳ್ಳತನ ವಾಗುವ ಸಂಭವವೂ ಇರುತ್ತದೆ, ಈ ದಿಕ್ಕು ಎತ್ತರವಿದ್ದು, ಭವನವೂ ಎತ್ತರವಿದ್ದು, ಸಾಕಷ್ಟು ಭಾರವಾಗಿದ್ದಲ್ಲಿ ಮನೆಯ ಯಜಮಾನ ಹಾಗೂ ಮನೆಯ ಸ್ತ್ರೀಯರು ಸುಖವಾಗಿಯೂ ನಿರೋಗಿಗಳಾಗಿಯೂ ಇರುತ್ತಾರೆ, ಈ ದಿಕ್ಕಿನಲ್ಲಿ ಎತ್ತರದ ಮರಗಳನ್ನು ಬೆಳೆಸಬಹುದು, ಈ ದಿಕ್ಕಿನಲ್ಲಿ ಹಣ ಇರಿಸುವುದರಿಂದ ಆರ್ಥಿಕ ಒಳ ಹರಿವು ಹೆಚ್ಚಾಗುತ್ತದೆ. *ನೈಋತ್ಯ ದಿಕ್ಕು : ದಕ್ಷಿಣ ಹಾಗೂ ಪಶ್ಚಿಮ ದಿಕ್ಕಿನ ಮೂಲೆಯೇ ನೈಋತ್ಯ. ದಿಕ್ಕು. ನೈಋತ್ಯ ದಿಕ್ಕಿಗೆ ರಾಹು ಅಧಿಪತಿ, (ಕೆಲವರ ಪ್ರಕಾರ ರಾಹು ಕೇತುಗಳಿಬ್ಬರೂ ಈ ದಿಕ್ಕಿಗೆ ಅಧಿಪತಿ ) ಅಷ್ಟದಿಕ್ಪಾಲಕ ರಲ್ಲಿ ನಿರುಋತಿ ಈ ಭಾಗದ ದಿಕ್ಪಾಲಕ. ವಾಸ್ತು ನಿಯಮದ.ಪ್ರಕಾರ ಈ ದಿಕ್ಕು ರಾಕ್ಷಸರ ದಿಕ್ಕೆಂದು ಕರೆಯಲ್ಪಟ್ಟಿದೆ. ಈ ದಿಕ್ಕು ಮನೆಯ ಯಜಮಾನನ ಆಳ್ವಿಕೆ, ಧನಾಗಮ, ನೆಮ್ಮದಿ, ಸುಖ ಸಂತೋಷ ಇವುಗಳನ್ನು ಪ್ರತಿನಿಧಿಸುತ್ತದೆ. ಈ ದಿಕ್ಕಿನ ಅಧಿಪತಿ ರಾಹು ಪಾಪಗ್ರಹವಾದ್ದರಿಂದ, ಈ ದಿಕ್ಕಿನ ಮೇಲೆ ಹೆಚ್ಚು ಭಾರ ಮತ್ತು ಹೊರೆಯನ್ನು ಇಡಬೇಕೆಂಬ ದೃಷ್ಟಿಯಿಂದ ಈ ದಿಕ್ಕು ಎತ್ತರವಾಗಿರಬೇಕು, ಈ ದಿಕ್ಕಿನಲ್ಲಿ ಹೆಚ್ಚಿನ ಭಾರ ಇರುವಂತೆ ಮನೆಯ ಮೇಲೆ ಎತ್ತರವಾಗಿ ಕಟ್ಟಿಸಬೇಕು, ನೀರಿನ ಟ್ಯಾಂಕ್ ಈ.ದಿಕ್ಕಿನಲ್ಲಿಯೇ ಇಡಬೇಕು. ಇದಲ್ಲದೆ ಮೆಟ್ಟಿಲುಗಳನ್ನೂ ಈ ದಿಕ್ಕಿನಲ್ಲಿ ನಿರ್ಮಿಸ ಬಹುದು. ಮನೆಯ ಯಜಮಾನ ನ ಕೋಣೆಯು ಈ ದಿಕ್ಕಿನಲ್ಲಿಯೇ ಇರಬೇಕು, ಕಚ್ಚಾ ಸಾಮಗ್ರಿ ಗಳನ್ನಿರಿಸಲು ಮೆಶೀನು, ಹಣದ ಗಲ್ಲಾಪೆಟ್ಟಿಗೆ ( ಉತ್ತರದಿಕ್ಕಿಗೆ ಮುಖವಿರುವಂತೆ) ಯನ್ನೂ ಈ ದಿಕ್ಕಿನಲ್ಲಿಯೇ ಇರಿಸಬೇಕು. ಹೀಗೆ ಯಾವುದೇ ರೀತಿಯ ಲೋಪವಿಲ್ಲದೆ ಶುದ್ಧವಾಗಿದ್ದರೆ ಮನೆಯ ಯಜಮಾನನಿಗೆ ಉತ್ತಮ ಆರೋಗ್ಯ, ಧನಾಗಮ, ನೆಮ್ಮದಿ ಸುಖ ಸಂತೋಷ ವಿರುತ್ತದೆ. ನೈಋತ್ಯ ದಿಕ್ಕಿನಲ್ಲಿ ಹಳ್ಳ, ಭಾವಿ, ಕೆರೆ, ಕುಂಟೆ ಇದ್ದರೆ, ನಿವೇಶನ ನೈಋತ್ಯ ಭಾಗದಲ್ಲಿ ತಗ್ಗಿದ್ದರೆ ತೊಂದರೆ, ಪಾಪಗ್ರಹಗಳ ಬಲ ಹೆಚ್ಚಾಗಿ, ಕ್ರೂರ ಫಲಗಳನ್ನು ಪಡೆಯಬೇಕಾಗುತ್ತದೆ. ನೈರುತ್ಯ ದಿಕ್ಕಿನಲ್ಲೂ ಎರಡು ಭಾಗವಾಗಿ ವಿಂಗಡಿಸಬಹುದು *, ದಕ್ಷಿಣ ನೈಋತ್ಯ ಹಾಗೂ ಪಶ್ಚಿಮ ನೈಋತ್ಯ.* ದಕ್ಷಿಣದ ನೈಋತ್ಯ ಲೋಪವಾಗಿದ್ದಲ್ಲಿ ಮನೆಯ ಯಜಮಾನನಿಗೆ ಆಯುಷ್ಯದ ತೊಂದರೆ, ಆಕಸ್ಮಿಕ ಅಪಘಾತಗಳು, ಮೃತ್ಯು, ಆತ್ಮಹತ್ಯೆ ಪ್ರಯತ್ನ ಗಳು ನಡೆಯುತ್ತವೆ. ಪಶ್ಚಿಮ ನೈಋತ್ಯ ಲೋಪವಾಗಿದ್ದರೆ, ಯಜಮಾನನಿಗೆ ದುಶ್ಚಟಗಳು, ಕಾನೂನಿನ ಉಲ್ಲಂಘನೆ, ಗೌರವ ಮರ್ಯಾದೆಗೆ ಧಕ್ಕೆ, ಅನಾರೋಗ್ಯ , ದುರ್ಮರಣಕ್ಕೀಡಾಗುವುದು, ಹತ್ಯೆ, ಪುತ್ರಸಂತತಿ ಇಲ್ಲದಿರುವಿಕೆ, ಸ್ರೀಸ್ವತ್ತು, ಸ್ತ್ರೀಯರ ಪ್ರಭಾವ ಜಾಸ್ತಿಯಾಗುತ್ತದೆ. ಈ ದಿಕ್ಕಿನಲ್ಲಿ ತೆರೆದಿಡುವಿಕೆ ಅಂದರೆ.ಕಿಟಿಕಿಗಳು ಬಾಗಿಲುಗಳು ಇರಬಾರದು, ಶೌಚಾಲಯ, ಬೋರ್ವೆಲ್ ಗಳೂ ಇರಬಾರದು. ನೈಋತ್ಯ ದಿಕ್ಕಿನಲ್ಲಿ ಆವರಣದಲ್ಲಿ ಖಾಲಿ ಜಾಗವಿದ್ದರೆ ಎತ್ತರವಾದ ಗಿಡಮರಗಳನ್ನು ಬೆಳೆಸುವ ಮೂಲಕ ದೋಷವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ವಾಯುವ್ಯ ದಿಕ್ಕು :---- ಪಶ್ಚಿಮ ಹಾಗೂ ಉತ್ತರದಿಕ್ಕಿನ ಮೂಲೆಯೇ ವಾಯುವ್ಯದಿಕ್ಕು. ಈ ದಿಕ್ಕಿನ ದಿಕ್ಪಾಲಕ ವಾಯುದೇವ, ಅಧಿಪತಿ ಚಂದ್ರ, ಚಂದ್ರನ ಸ್ವಭಾವ ನಡತೆ, ಗುಣಗಳನ್ನು ಈಭಾವ ಪ್ರತಿನಿಧಿಸುತ್ತದೆ. ಚಂದ್ರನು ಸ್ರೀಗ್ರಹವಾದ್ದರಿಂದ ಈ ಭಾಗದ ಫಲಾಪಲಗಳು ಮನೆಯ ಹೆಂಗಸರ ಮೇಲೆ ಹಾಗೂ ಮೂರನೆಯ ಸಂತಾನದ ಮೇಲೆ , ಮನೆಯವರ ನಡತೆ ಹಾಗೂ ವ್ಯವಹಾರವನ್ನು ಪ್ರತಿಬಿಂಬಿಸುತ್ತದೆ. ವಾಯುವ್ಯ ದಿಕ್ಕಿನಲ್ಲಿಯೂ ಎರಡು ಭಾಗವಾಗಿ ವಿಂಗಡಿಸಬಹುದು, *ಪಶ್ಚಿಮ ವಾಯುವ್ಯ ಹಾಗೂ ಉತ್ತರ ವಾಯುವ್ಯ*. *ಪಶ್ಚಿಮ ವಾಯುವ್ಯ :---* ಪಶ್ಚಿಮ ವಾಯುವ್ಯ ದಿಕ್ಕಿಗೆ ಶನಿ ಮತ್ತು ಚಂದ್ರರ ಅಧಿಪತ್ಯ ಉಂಟಾಗುತ್ತದೆ. ಶನಿಯು ಕರ್ಮ ಕಾರಕ ಹಾಗೂ ಅಧ್ಯಾತ್ಮ ಕಾರಕ, ಹಾಗೂ ಸೇವಾ ಮನೋಭಾವವನ್ನು ಸೂಚಿಸುತ್ತಾನೆ. ಚಂದ್ರನು ಮನಃಕಾರಕ, ಸದಾ ಅಲೋಚನೆಯುಳ್ಳವನು, ವಾಯುವ್ಯ ಮೂಲೆಯು ಬೆಳೆದಿರುವುದಾಗಲೀ, ಕಡಿತವಾಗಿರುವುದಾಗಲೀ ಆಗಿರಬಾರದು, ಸಮವಾಗಿರಬೇಕು, ಹಾಗಿದ್ದಲ್ಲಿ ಮನೆಯ ಯಜಮಾನ ಕರ್ಮದಲ್ಲಿ ಆಸಕ್ತಿ ಯುಳ್ಳವನು ಸದಾ ಕರ್ಮನಿರತನು, ಅಧ್ಯಾತ್ಮಕ್ಕೆ ಹೆಚ್ಚು ಆಸಕ್ತಿ, ಒಲವನ್ನು ತೋರಿಸುವವು, ಈ ದಿಕ್ಕು ಲೋಪವಿಲ್ಲದೆ ಶುದ್ಧವಾಗಿದ್ದಲ್ಲಿ ಯಜಮಾನನ ವ್ಯವಹಾರ ಉತ್ತಮವಾಗಿರುತ್ತದೆ, ಸಿರಿತನವಿರುತ್ತದೆ. ಈ ದಿಕ್ಕು ಲೋಪವಾಗಿದ್ದಲ್ಲಿ ದುರ್ವ್ಯಸನಗಳಿಗೆ ಒಳಗಾಗಿ ಸಂಸಾರದಲ್ಲಿ ನಿರಾಸಕ್ತಿ ಉಂಟಾಗಿ ಸನ್ಯಾಸ ಸ್ವೀಕರಿಸುವ ಸಂಭವ ಅಥವಾ ಅಪಮೃತ್ಯುವಿಗೆ ತುತ್ತಾಗಬಹುದು. *ಉತ್ತರ ವಾಯುವ್ಯ :---*ಉತ್ತರ ವಾಯುವ್ಯ ವನ್ನು ಪ್ರತಿನಿಧಿಸುವ ಗ್ರಹರು ಬುಧ ಮತ್ತು ಚಂದ್ರರು. ಈ ದಿಕ್ಕು ಪ್ರಭಲವಾಗಿದ್ದಲ್ಲಿ ಮನೆಯ ಯಜಮಾನಿ ಹಾಗೂ ಮನೆಯ ಹೆಣ್ಣುಮಕ್ಕಳು ಬುದ್ಧಿವಂತರು ಆರೋಗ್ಯವಂತರು ಆಗಿರುತ್ತಾರೆ. ಈ ದಿಕ್ಕು ಲೋಪವಾಗಿದ್ದಲ್ಲಿ ಮನೆಯ ಹೆಂಗಸರ ಅನಾರೋಗ್ಯ, ಮಾನಸಿಕ ಅಸ್ವಸ್ಥತೆ, ಕೃತ್ರಿಮ ವ್ಯವಹಾರಗಳು ವ್ಯವಹಾರದಲ್ಲಿ ಅಪಜಯ, ಹಲವು ದುರಭ್ಯಾಸಕ್ಕೆ ತುತ್ತಾಗುವುದು, ಕೋರ್ಟ್ ಕೇಸು, ಕಳ್ಳರ ಭಯ, ಮನಃಶಾಂತಿ ಇಲ್ಲದಿರುವುದು ಚಂಚಲತೆ, ಕಷ್ಟನಷ್ಟಗಳು, ಪರಾಧೀನತೆ ಉಂಟಾಗುತ್ತದೆ. ಈ ದಿಕ್ಕು ತಗ್ಗಾಗಿದ್ದು, ಭಾವಿ , ಹಳ್ಳ ಮುಂತಾದುವಿದ್ದರೆ, ವ್ಯಾಧಿ ಹಾಗೂ ಜಗಳಗಳು, ಮನೆಯ ಯಜಮಾನಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೇ. ವಾಯುವ್ಯ ಭಾಗವು ಎತ್ತರವಾಗಿದ್ದರೆ ಯಜಮಾನನು ಸಾಲಗಾರನಾಗಬೇಕಾಗುತ್ತದೆ. ವಾಯುವ್ಯ ದೊಷವಿರುವ ಮನೆಯಲ್ಲಿ ಹುಟ್ಟಿದ ಮಕ್ಕಳು ಅಂಗಹೀನರಾಗುತ್ತಾರೆ. ವಾಯುವ್ಯ ಭಾಗವು ಈಶಾನ್ಯ ಕ್ಕಿಂತ ಸ್ವಲ್ಪ ಎತ್ತರವಾಗಿರಬೇಕು, ನೈಋತ್ಯ ಭಾಗಕ್ಕಿಂತ ತಗ್ಗಾಗಿರಬೇಕು. ವಾಯುವ್ಯ ಭಾಗವು ಬೆಳೆದಿರಬಾರದು ಹಾಗೂ ಕಡಿತವಾಗಿರಬಾರದು, 90° ಸಮವಾಗಿರಬೇಕು. ಈ ದಿಕ್ಕಿನಲ್ಲಿ ಮಲಗುವ ಕೋಣೆ, ದನದಕೊಟ್ಟಿಗೆ, ಗ್ಯಾರೇಜ್, ಅತಿಥಿ ಹಾಗೂ ನೌಕರರ ಕೋಣೆಗಳೂ ನಿರ್ಮಾಣ ಮಾಡಬಹುದು, ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಲಾಗದ ಸಂದರ್ಭದಲ್ಲಿ ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಬಹುದು. -SangrahaMahiti (FB)

No comments:

Post a Comment