Friday, 30 August 2019

ಕುಂಡಲಿಯಲ್ಲಿ ಧನಯೋಗ

ಹೋರಾ ಕುಂಡಲಿಯಲ್ಲಿ ಧನಯೋಗ 30° ಯ ರಾಶಿಯನ್ನು ಸಮಭಾಗ ಮಾಡಿದಾಗ ಪ್ರತಿ ಭಾಗ ಒಂದೊಂದು ಹೋರೆಯಾಗುತ್ತದೆ. ಅಂದರೆ ಒಂದು ರಾಶಿಯಲ್ಲಿ ಎರಡು ಹೋರೆಗಳು. ಸಮರಾಶಿಯಲ್ಲಿ ಮೊದಲ 15° ಯ ವರೆಗಿನದ್ಧು ಚಂದ್ರಹೋರೆ, ನಂತರದ 15° (15° -30°) ವರೆಗೆ ರವಿಹೋರೆ. ಬೆಸರಾಶಿಗಳಲ್ಲಿ ಮೊದಲ 15° ಯವರೆಗೆ ರವಿ ಹೋರೆ, ನಂತರದ 15° (15° -30°) ವರೆಗೆ ಚಂದ್ರ ಹೋರೆ. ಚಂದ್ರ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ, ಕಡಿಮೆ ಪ್ರಯತ್ನ ಕ್ಕೇ ಹೆಚ್ಚು ಸಂಪಾದನೆ. ರವಿ ಹೋರೆಯಲ್ಲಿ ಜಾಸ್ತಿ ಗ್ರಹಗಳಿದ್ದರೆ ಪ್ರಯತ್ನಕ್ಕೆ ತಕ್ಕಂತೆ ಫಲ. ಒಳ್ಳೇ ಗ್ರಹಗಳಿದ್ದರೆ ಒಳ್ಳೇ ದಾರಿಯಲ್ಲಿ ಸಂಪಾದನೆ. ಇದು ಮೇಲ್ನೋಟಕ್ಕೆ ಕಾಣುವ ವಿಚಾರ, ಆಳ ಅಧ್ಯಯನದ ಮೂಲಕ ಯಾವ ಪ್ರಮಾಣದಲ್ಲಿ ಧನ ಸಂಪಾದನೆ ಅಥವಾ ಧನಲಾಭ ಅನ್ನುವ ವಿಚಾರವನ್ಮು ತಿಳಿಯಬಹುದು.. ಅವುಗಳೆಂದರೆ.... ★ ಪುರುಷ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ.... ★ ಸ್ತ್ರೀ ರಾಶಿಯಲ್ಲಿನ ಸ್ರೀಗ್ರಹಗಳು ಚಂದ್ರಹೋರೆಯಲ್ಲಿದ್ದರೆ 100% ಶುಭಫಲ ( ಅನಾಯಾಸ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ... ★ ಪುರುಷ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..75% ಫಲ ( ಕಡಿಮೆ ಪರಿಶ್ರಮದಿಂದ ಅಧಿಕ ಧನಲಾಭ ). ★ ಪುರುಷ ರಾಶಿಯಲ್ಲಿನ ಪುರುಷ ಗ್ರಹ ಚಂದ್ರ ಹೋರೆ ಯಲ್ಲಿದ್ದರೆ... ★ ಸ್ತ್ರೀ ರಾಶಿಯಲ್ಲಿನ ಸ್ತ್ರೀ ಗ್ರಹ ರವಿ ಹೋರೆ ಯಲ್ಲಿದ್ದರೆ.. 50% ಫಲ ( ಶ್ರಮಕ್ಕೆ ತಕ್ಕಂತೆ ಧನಲಾಭ ). ★ ಸ್ತ್ರೀ ರಾಶಿಯಲ್ಲಿನ ಪುರುಷ ಗ್ರಹಗಳು ರವಿ ಹೋರೆಯಲ್ಲಿದ್ದರೆ ... ★ ಪುರುಶ ರಾಶಿಯಲ್ಲಿನ ಸ್ತ್ರೀ ಗ್ರಹಗಳು ಚಂದ್ರ ಹೋರೆ ಯಲ್ಲಿದ್ದರೆ..25% ಫಲ ( ಅಧಿಕ ಶ್ರಮ ಅಲ್ಪಲಾಭ ). ಜಾತಕದಲ್ಲಿ ಈ ರೀತಿಯ ಗ್ರಹ ಸಂಯೋಜನೆ ಯಿಂದ ನಮ್ಮ ಧನ ಸಂಪಾದನೆಯನ್ನು ನಿರ್ಧರಿಸಬಹುದು. ಧನಯೋಗ ಮೊದಲನೆಯದಾಗಿ... 1) ಭಾವ 2) ಭಾವಾಧಿಪತಿ 3) ಭಾವಾಧಿಪತಿ ಸ್ಥಿತ ಸ್ಥಾನ 4) ಭಾವಾಧಿಪತಿಯನ್ನು ದೃಷ್ಟಿಸುವ ಗ್ರಹ 5) ಯುತಿ 6) ಧನಕಾರಕ 7) ಧನಯೋಗ... ಇವಿಷ್ಟನ್ನೂ ಪರಿಶೀಲಿಸಬೇಕಾಗುತ್ತದೆ. 2ನೇ ಭಾವಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ .. ಏಕೆಂದರೆ 80% ರಿಸಲ್ಟ್ ಬಾವದಿಂದ ಸಿಗುತ್ತೆ. ನಂತರ ಧನಕಾರಕ(ಗುರು) ವನ್ನು ನೋಡಬೇಕು, ಗುರು ಉತ್ತಮ ಸ್ಥಾನದಲ್ಲಿ ಸ್ಥಿತನಾಗಿದ್ರೆ ಒಳ್ಳೆಯ ಫಲ... ಇಲ್ಲದಿದ್ದರೆ ಫಲದಲ್ಲಿ ವ್ಯತ್ಯಾಸ. ನಂತರ ಧನಭಾವ ಯಾವ ಸ್ವಭಾವ ಅನ್ನೋದನ್ನ ತಿಳಿಬೇಕು. ಧನಭಾವ ಚರರಾಶಿಯಾದರೆ.. ಒಮ್ಮೆಗೇ ಧಿಡೀರ್ ಹಣದ ಹರಿವು, ಉತ್ತಮ ಸಂಪಾದನೆ. ಧನಭಾವ ಸ್ಥಿರರಾಶಿಯದರೆ..ಜೀವನ ಪೂರ್ತಿ ನಿಶ್ಚಿತ ಹಣದ ಹರಿವು . ದ್ವಿಸ್ವಭಾವ ರಾಶಿಯಾದರೆ.. ಧನದ ಹರಿವಿನಲ್ಲಿ ಏರಿಳಿತವಿರುತ್ತದೆ. ನಂತರ ಧನಸ್ಥಾನ ಅಥವಾ ಧನಾಧಿಪತಿ ಇರುವ ದಿಕ್ಕು.. ತತ್ವ.. ಇವುಗಳ ಆಧಾರದ ಮೇಲೆ ಧನದ ಮೂಲ ಯಾವುದರಿಂದ ಅನ್ನುವುದನ್ನು ತಿಳಿಯಬಹುದು. 12 ಭಾವಗಳಿಂದಲೂ ಹಣದ ಹರಿವನ್ನು ತಿಳಿಯಬಹುದು. ಆದ್ರೆ 1, 2, 9, 10, 11 , 12 ನೇ ಭಾವಗಳು ಮುಖ್ಯ. ದಾರಿದ್ರ್ಯಭಾವ.. 3, 6, 8, 12. ಇಲ್ಲಿ ..ಧನ - ಹಾಗೂ ದಾರಿದ್ರ್ಯಭಾವಗಳೆರದರಲ್ಲೂ 12 ಮನೆಯನ್ನು ಪರಿಗಣಿಸಬೇಕು. 12ನೇ ಮನೆ ಧನಭಾವಗಳ ಜೊತೆ ಸಂಬಂಧ ಬಂದರೆ ಧನಭಾವ... 12ನೇ ಮನೆ ದರಿದ್ರಭಾವಗಳ ಜೊತೆ ಸಂಬಂಧ ಬಂದರೆ ದರಿದ್ರಭಾವ. ( 12 ನೇ ಭಾವ ದೂರಪ್ರಯಾಣ - ವಿದೇಶಿಪ್ರಯಾಣವನ್ನು ಸೂಚಿಸುತ್ತೇ) ನಕ್ಷತ್ರ ಗಳೂ... ಎಷ್ಟು ಪ್ರಮಾಣದಲ್ಲಿ ಧನಲಾಭವಾಗುತ್ತೆ ಅನ್ನುವುದನ್ನು ತಿಳಿಸುತ್ತೆ, ಯಾವರೀತಿಯ ಧನಾಗಮ... ಶೀಘ್ರ, ಲಘು, ಚರ, ಸ್ಥಿರ ಫಲಗಳು ..ಯಾವ ಸಮಯದಲ್ಲಿ ಅನ್ನುವುದನ್ನು ನಕ್ಷತ್ರ ಗಳಿಂದಲೂ ತಿಯಬಹುದು. ಧನಭಾವಾಧಿಪತಿಗಳು ಕೆಲವೊಮ್ಮೆ ಎರಡು ರೀತಿಯಲ್ಲಿ ವರ್ತಿಸುತ್ತೆ ಉತ್ಪತ್ತಿ ಇಲ್ಲ ಉತ್ಪತ್ತಿ ನಿಲ್ಲುತ್ತಿಲ್ಲ.. ಧನಭಾವಾಧಿಪತಿಗಳು ದಾರಿದ್ರ್ಯ ಭಾವದಲ್ಲಿದ್ದರೆ. ಅಥವಾ ದಾರಿದ್ರ್ಯಭಾವಾಧಿಪತಿಗಳು ಧನಭಾವದಲ್ಲಿದ್ದರೆ, ಹಣದ ಹರಿವು ಇರೋಲ್ಲ. ಧನಭಾವಾಧಿಪತಿಗಳ ಸಂಬಂಧ ಧನಭಾವದಲ್ಲೇ ಇದ್ದರೆ ಹಣದ ಉತ್ಪತ್ತಿ ಚೆನ್ನಾಗಿರುತ್ತೆ ಧನದ ಅಭಾವ :-- ೧). ಜಾತಕದಲ್ಲಿ ಲಗ್ನಾಧಿಪತಿ ದ್ವಾದಶದಲ್ಲಿದ್ದು, ದ್ವಾದಶಾಧಿಪತಿ ಲಗ್ನದಲ್ಲಿದ್ದರೆ... 2). ಧನಾಧಿಪತಿ ವ್ಯಯದಲ್ಲಿದ್ದು, ದ್ವಾದಶಾಧಿಪತಿ ಧನಭಾವದಲ್ಲಿದ್ದರೆ... 3). ದುರ್ಬಲ ನಾದ ದ್ವಿತೀಯಾಧಿಪತಿ ಪಾಪಮಧ್ಯದಲ್ಲಿದ್ದರೆ... 3). ದ್ವಿತೀಯ ಹಾಗೂ ಲಾಭಾಧಿಪತಿಗಳು, ಷಷ್ಟ , ಅಷ್ಟಮದಲ್ಲಿದ್ದರೆ... 4). ಲಗ್ನಾಧಿಪತಿ ವ್ಯಯಭಾವದಲ್ಲಿದ್ದು ಮಾರಕಾಧಿಪತಿಯ ದೃಷ್ಟಿ ಯಲ್ಲಿದ್ದರೆ... 5). 6, 8, 12 ನೇ ಭಾವಾಧಿಪತಿಗಳು ಧನಸ್ಥಾನದಲ್ಲಿದ್ದರೆ... 6). ಧನ, ಸುಖ, ಪೂರ್ವಪುಣ್ಯಾಧಿಪತಿ, ಭಾಗ್ಯಾಧಿಪತಿ, ದಶಮಾಧಿಪಗಳು 6 ಅಥವಾ 12 ನೇ ಭಾವದಲ್ಲಿದ್ದರೆ... 7). ಜಾತಕರು ಕೆಮದೃಮ ಹಾಗೂ ಶಟಕ ಯೋಗಗಳಲ್ಲಿ ಜನಿಸಿದ್ದರೆ... 8). ಲಗ್ನಾಧಿಪತಿ 6.8.12 ರಲ್ಲಿ ಪಾಪಗ್ರಹಗಳ ಯುತಿಯಲ್ಲಿದ್ದು, ಅಷ್ಟಮಾಧಿಪತಿಯಿಂದ ವೀಕ್ಷಿಸಲ್ಪಟ್ಟರೆ.. ಜಾತಕರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬಡತನದಲ್ಲಿ ನರಳುತ್ತಾರೆ. -Sangraha MAhiti(FB)

No comments:

Post a Comment