Tuesday, 22 October 2019

27 ನಕ್ಷತ್ರ.ವಿಚಾರ..

#ಅಶ್ವಿನೀ_ನಕ್ಷತ್ರ.ವಿಚಾರ... #ಅಶ್ವಿನೀ ನಕ್ಷತ್ರಕ್ಕಿರುವ ಬೇರೆ ಹೆಸರುಗಳು...ಅಶ್ವ , ತುರಗ , ಅಶ್ವೀ , ತುರಂಗ , ಹಯಾಃ , ಅಸ್ರಸ್ , ವಾಜೀ, ಹರಿಃ . #ಅಶ್ವಿನೀ ನಕ್ಷತ್ರದ ದೇವತೆಗಳು...ಅಶ್ವಿನೀ ದೇವತೆಗಳು. ಅಧಿದೇವತೆ...ಪೂಷಣ ಪ್ರತ್ಯಧಿದೇವತೆ...ಯಮ ನಕ್ಷತ್ರಸ್ವರೂಪ....ಕುದುರೆಯಾಕೃತಿಯ ಮುಖ ಇರುವ ಮೂರು ನಕ್ಷತ್ರಗಳು. ಇದು ಪುರುಷ . ಸಣಕಲು ದೇಹ , ದೃಷ್ಟಿ ಕಡಿಮೆ ,ಸ್ವಲ್ಪ ಕಪ್ಪು ಛಾಯೆ. ನಕ್ಷತ್ರದ ಅಧಿಪತಿ ಕೇತು. ರಾಶಿ-ಮೇಷ , ರಾಶ್ಯಾಧಿಪತಿ-ಕುಜ , ದೇವ ಗಣ , ಕುದುರೆ ಯೋನಿ , ರಜ್ಜು ಪಾದ , ವೈಶ್ಯ ವರ್ಣ , ಆದಿ ನಾಡಿ , ಪಕ್ಷಿ ಭೇರುಂಡ , ವೈರಿ ಎಮ್ಮೆ , ಹರಳು-ವೈಡೂರ್ಯ, ದೆಶೆ- ಏಳು ವರ್ಷ. ಅಕ್ಷರಗಳು...ಚು-ಚೆ-ಚೊ-ಲ. ಈ ನಕ್ಷತ್ರದಲ್ಲಿ ಜನನವಾದವರಿಗೆ ಒಳ್ಳೆಯ ಕಣ್ಣುಗಳು , ಆಕರ್ಷಕ ದೇಹವು ಇರುತ್ತದೆ. ಕಠಿಣ ಮನಸ್ಸು , ಗಂಡಾಂತರಗಳನ್ನು ಎದುರಿಸುವವರು , ಸೇವಾ ಮನೋಭಾವ ಉಳ್ಳವರು , ಸ್ಥಿತ ಪ್ರಜ್ಞೆ , ಚುರುಕುಬುದ್ದಿ , ವ್ಯವಹಾರಗಳಲ್ಲಿ ಆಸಕ್ತಿ , ಹಣಕಾಸಿನ ಲೆಕ್ಕಾಚಾರ , ಉತ್ತಮ ಸಾಧಕರು ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ಮೊದಲನೇ ಪಾದ ಮೇಷಾಂಶವಾಗಿ , ಕುಜನು ಅಧಿಪತಿಯಾಗಿದ್ದು , ಶೀಘ್ರಕೋಪಿ , ಶೂರ , ಸಾಹಸಿ , ಅಹಂಕಾರಿ ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ಎರಡನೇ ಪಾದ ವೃಷಭಾಂಶವಾಗಿದ್ದು , ಶುಕ್ರನು ಅದಕ್ಕೆ ಅಧಿಪತಿಯಾಗಿದ್ದು , ಧಾರ್ಮಿಕ , ಗುಣಸಂಪನ್ನರು , ಶ್ರದ್ಧಾಭಕ್ತಿಯುಳ್ಳವರು , ದೈವಭಕ್ತರು , ಎತ್ತರದವರು ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ಮೂರನೇ ಪಾದ ಮಿಥುನಾಂಶವಾಗಿದ್ದು , ಬುಧ ಅಧಿಪತಿಯಾಗಿದ್ದು , ಇವರು ಬುದ್ದಿವಂತರು, ಸರ್ವವಿದ್ಯಾಪಾರಂಗತರು , ಒಳ್ಳೆಯ ಮಾತುಗಾರರು , ವಿವೇಕಿಗಳು , ಶಾಂತಿಪ್ರಿಯರು , ಜೀವನೋಪಾಯ ಬಲ್ಲವರು ಆಗಿರುತ್ತಾರೆ. ಅಶ್ವಿನೀ ನಕ್ಷತ್ರದ ನಾಲ್ಕನೇ ಪಾದ ಕಟಕಾಂಶವಾಗಿದ್ದು , ಚಂದ್ರನು ಇದಕ್ಕೆ ಅಧಿಪತಿಯಾಗಿದ್ದು , ಜಾತಕರು ಪರೋಪಕಾರಿಯೂ , ಬುದ್ದಿವಂತರು , ಸುಖಾಕಾಂಕ್ಷಿಯೂ , ಪ್ರಯಾಣಗಳಲ್ಲಿ ಅಭಿಲಾಷೆ ಉಳ್ಳವರು , ಚಿತ್ತ ಚಾಂಚಲ್ಯದವರು ಆಗಿರುತ್ತಾರೆ. #ಅಶ್ವಿನೀ_ನಕ್ಷತ್ರದಲ್ಲಿ #ಮಾಡಬಹುದಾದ_ಕೆಲಸಗಳು... ವಿವಾಹ , ನಾಮಕರಣ , ಚೌಲ ,ಉಪನಯನ , ಔಷಧಿಸೇವನೆ , ಅಕ್ಷರಾಭ್ಯಾಸ , ಹೊಸನೌಕರಿ ಸೇರಲು , ಶಸ್ತ್ರಚಿಕಿತ್ಸೆ , ಹೊಲದ ಕೆಲಸಗಳು , ಪ್ರಯಾಣ , ಸಾಲವನ್ನು ಕೊಟ್ಟು-ತಂದು , ವ್ಯಾಪಾರ. #ವಾರಾನುಸಾರ_ಯೋಗ ಅಶ್ವಿನಿ ನಕ್ಷತ್ರವು ಭಾನುವಾರ , ಸೋಮವಾರ ಹಾಗೂ ಶನಿವಾರ ಬಂದರೆ #ಸಿದ್ಧಿಯೋಗ ಅಶ್ವಿನೀ ನಕ್ಷತ್ರವು ಮಂಗಳವಾರ ಬಂದರೆ #ಅಮೃತ_ಸಿದ್ಧಿ_ಯೋಗ*. ಅಶ್ವಿನೀ ನಕ್ಷತ್ರವು ಬುಧವಾರ ಬಂದರೆ #ಮೃತ್ಯು_ಯೋಗ*. ಅಶ್ವಿನೀ ನಕ್ಷತ್ರವು ಗುರುವಾರ ಹಾಗೂ ಶುಕ್ರವಾರ ಬಂದರೆ #ಅಮೃತಯೋಗ. ಅಶ್ವಿನೀ ನಕ್ಷತ್ರವು ಸಪ್ತಮಿಯ ದಿನ ಬಂದರೆ #ದಾನಯೋಗ. ಅಶ್ವಿನೀ ನಕ್ಷತ್ರವು ಅಮಾವಾಸ್ಯೆಯ ದಿನ ಬಂದರೆ #ಅಗ್ನಿಭಯ*. #ಭರಣೀ_ನಕ್ಷತ್ರ #ಭರಣೀ ನಕ್ಷತ್ರದ ಇತರ ಹೆಸರು... ಭರಣೀ , ಯಮೋ , ಯಾವ್ಯ , ಯಮಃ #ಭರಣೀ_ನಕ್ಷತ್ರದ ದೇವತೆ...ಯಮ ಅಧಿ ದೇವತೆ....ಅಶ್ವಿನಿ ಪ್ರತ್ಯಧಿ ದೇವತೆ....ಅಗ್ನಿ ನಕ್ಷತ್ರ ಸ್ವರೂಪ...ತ್ರಿಕೋಣದ ಆಕೃತಿಯ ಮೂರು ನಕ್ಷತ್ರಗಳು. ಇದು ಚಂದ್ರನ ನಕ್ಷತ್ರ. ಪುರುಷ . ಅಧಿಪತಿ - ಶುಕ್ರ. ಮೇಷ ರಾಶಿ. ರಾಶ್ಯಾಧಿಪತಿ ಕುಜ. ಉಗ್ರ ಗುಣ , ಮನುಷ್ಯ ಗಣ , ಆನೆ ಯೋನಿ , ಸಿಂಹ ವೈರಿ , ಚಂಡಾಲ ಜಾತಿ , ಕಟಿ ರಜ್ಜು , ಮಧ್ಯ ನಾಡಿ , ವೈಶ್ಯ ವರ್ಣ , ಹರಳು ವಜ್ರ , ದೆಶೆ- 20 ವರುಷಗಳು. ಅಕ್ಷರಗಳು - ಲಿ-ಲು-ಲೆ-ಲೊ ಭರಣಿಯು ಉಗ್ರ ನಕ್ಷತ್ರ. ಈ ನಕ್ಷತ್ರದವರು ಉಷ್ಣ ದೇಹಿಗಳು , ಅಲಂಕಾರದಲ್ಲಿ ಆಸಕ್ತರು , ಆಚಾರ ಕಡಿಮೆ , ಶ್ರಮಜೀವಿಗಳು , ಸತ್ಯವನ್ನು ಇಷ್ಟಪಡುವರು , ರಸಿಕರು , ಸುಖಾಸಕ್ತರು, ಅಭಿಲಾಷಿಗಳು. #ಭರಣೀ ನಕ್ಷತ್ರದ ಮೊದಲನೇ ಪಾದ ಸಿಂಹಾಂಶವಾಗಿದ್ದು ರವಿ ಅದಕ್ಕೆ ಅಧಿಪತಿ. ಜಾತಕರು ಶೂರರು ಸಾಹಸಿಗಳೂ ಆಗಿದ್ದು ವೈರಿಗಳನ್ನು ನಿಗ್ರಹಿಸುವರು. ಮಾನವಂತರು , ಸ್ವಾಭಿಮಾನಿಗಳು ಆಗಿರುತ್ತಾರೆ. #ಭರಣೀ ನಕ್ಷತ್ರದ ಎರಡನೇ ಪಾದವು ಕನ್ಯಾಂಶವಾಗಿದ್ದು ಬುಧ ಅದಕ್ಕೆ ಅಧಿಪತಿ. ಜಾತಕರು ಆಚಾರವಂತರು , ಅಹಿಂಸಾಪರರು , ಬರಹಗಾರರು , ರೋಗಿಗಳು ಆಗಿರುತ್ತಾರೆ. #ಭರಣೀ ನಕ್ಷತ್ರದ ಮೂರನೆಯ ಪಾದವು ತುಲಾಂಶವಾಗಿದ್ದು ಶುಕ್ರನು ಅಧಿಪತಿ. ಜಾತಕರು ವಿವೇಕಿಗಳು , ಕಲಾವಿದರು , ವೇದವನ್ನು ಅಭ್ಯಾಸ ಮಾಡುವವರು , ಜ್ಞಾನಿಗಳು , ಸತ್ಯವಂತರು ಆಗಿರುತ್ತಾರೆ. #ಭರಣೀ ನಕ್ಷತ್ರದ ನಾಲ್ಕನೇ ಪಾದಾಂಶವು ವೃಶ್ಚಿಕಾಂಶವಾಗಿದ್ದು , ಕುಜನು ಅಧಿಪತಿ. ಜಾತಕರು ಕೋಪಿಷ್ಠರು, ಹಿಂಸಾ ಪ್ರವೃತ್ತಿಯವರು , ನಿಷ್ಠುರವಾಗಿ ಮಾತನಾಡುವವರು ಆಗಿರುತ್ತಾರೆ. #ಭರಣೀ ನಕ್ಷತ್ರದಲ್ಲಿ ಮಾಡುಬಹುದಾದ ಕೆಲಸಗಳು... ಈ ನಕ್ಷತ್ರದಲ್ಲಿ ಒಳ್ಳೆಯ ಕಾರ್ಯಗಳು ನಿಷಿದ್ಧ. ಆದರೆ ಕೆರೆ - ಬಾವಿ, ಬೇಲಿ ಹಾಕಿಸುವುದು , ಕುಯಿಲು ಮಾಡುವುದು - ಮಾಡಬಹುದು. #ವಾರಾನುಸಾರ_ಫಲಗಳು ಭರಣೀ ನಕ್ಷತ್ರವು ಭಾನುವಾರ ಬಂದರೆ #ಪ್ರಭಲಾನಿಷ್ಟಯೋಗ. ಭರಣೀ ನಕ್ಷತ್ರವು ಸೋಮವಾರ, ಮಂಗಳವಾರ, ಬುಧವಾರ , ಶುಕ್ರವಾರ ಹಾಗೂ ಶನಿವಾರ ಬಂದರೆ #ಸಿದ್ಧಿಯೋಗ. *ಭರಣೀ* ನಕ್ಷತ್ರವು ಗುರುವಾರ ಬಂದರೆ #ಅಮೃತಯೋಗ. #ವಿಶೇಷ_ಸೂಚನೆ . ಯೋಗಗಳಲ್ಲಿ ಸಿದ್ಧಿ ಯೋಗ , ಅಮೃತ ಯೋಗ , ಅಮೃತ ಸಿದ್ಧಿ- ಈ ಯೋಗಗಳಲ್ಲಿ ಮಾತ್ರ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು. ಉಳಿದ ಯೋಗಗಳಲ್ಲಿ ಶುಭ ಕಾರ್ಯ ಸಲ್ಲದು ಎಂದು ಶಾಸ್ತ್ರ ಹೇಳುತ್ತದೆ. *ಇದು ಎಲ್ಲಾ ನಕ್ಷತ್ರಗಳಿಗೂ ಅನ್ವಯ*. #ಕೃತ್ತಿಕಾ_ನಕ್ಷತ್ರ #ಕೃತ್ತಿಕಾ_ನಕ್ಷತ್ರದ_ಇತರ #ಹೆಸರುಗಳು. ಬಹುಳಾ , ವಹ್ನಿ , ಪಾವಕ , ಉಜ್ವಲ, ನಲ. *ಕೃತ್ತಿಕಾ ನಕ್ಷತ್ರದ ದೇವತೆ*...ಅಗ್ನಿ *ಅಧಿದೇವತೆ* ...ಯಮ *ಪ್ರತ್ಯಧಿದೇವತೆ*...ಪ್ರಜಾಪತಿ #ನಕ್ಷತ್ರ_ಸ್ವರೂಪ...ಆರು ನಕ್ಷತ್ರಗಳ ಪುಂಜ,ಕೊಡಲಿ ಆಕಾರದಲ್ಲಿರುತ್ತದೆ. #ನಕ್ಷತ್ರದ_ವಿವರ. ಚಂದ್ರನ ನಕ್ಷತ್ರ. ನಕ್ಷತ್ರಾಧಿಪತಿ ರವಿ , ರಾಶ್ಯಾಧಿಪತಿ (೧-ಪಾದ)-ಕುಜ , ಮೇಷ ರಾಶಿ, ರಾಶ್ಯಾಧಿಪತಿ (೨,೩,೪-ಪಾದ)-ಶುಕ್ರ ವೃಷಭ ರಾಶಿ , ರಾಕ್ಷಸ-ಗಣ , ಯೋನಿ- ಮೇಕೆ , ವೈರಿ -ಕೋತಿ , ಪಕ್ಷಿ-ನವಿಲು , ನಾಡಿ ಅಂತ್ಯ , ವರ್ಣ-ವೈಶ್ಯ , ರಜ್ಜು-ಉದರ , ವೃಕ್ಷ-ಬನ್ನಿ, ಅಕ್ಷರಗಳು - ಆ-ಈ-ಊ-ಏ #ಸ್ವಭಾವ ....ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಉತ್ತಮರು , ಕಳೆಯುಳ್ಳವರು , ಕೀರ್ತಿ ಯಶಸ್ಸು ಗಳಿಸುವವರು , ಬುದ್ಧಿವಂತರು , ಹೆಚ್ಚಿನ ಮನೋಬಲವುಳ್ಳವರು , ಆರೋಗ್ಯದಲ್ಲಿ ಜಾಗ್ರತೆ , ಮಾರ್ಗದರ್ಶಿಗಳು ಆಗಿರುತ್ತಾರೆ. ಕೃತ್ತಿಕಾ ನಕ್ಷತ್ರದ ಮೊದಲನೆಯ ಪಾದ ಧನುರಾಂಶವಾಗಿದ್ದು , ಗುರು ಅದರ ಅಧಿಪತಿ. ಜಾತಕರು ಸದ್ಗುಣಿಗಳು , ಆಚಾರವಂತರು , ವಿಚಾರವಂತರು , ಸಹೃದಯಿಗಳು ಆಗಿರುತ್ತಾರೆ‌. ಕೃತ್ತಿಕಾ ನಕ್ಷತ್ರದ ಎರಡನೇ ಪಾದ ಮಕರಾಂಶವಾಗಿದ್ದು , ಶನಿ ಅದರ ಅಧಿಪತಿ. ಸ್ವಲ್ಪ ಖರ್ಚು ಮಾಡಲು ಹಿಂದು ಮುಂದು ನೋಡುವರು , ಸಿಡುಕು,ಕೋಪ, ಕೊಟ್ಟ ಕೆಲಸ ಚೆನ್ನಾಗಿ ಮಾಡುವರು. ಕೃತ್ತಿಕಾ ನಕ್ಷತ್ರದ ಮೂರನೇ ಪಾದ ಕುಂಭಾಂಶವಾಗಿದ್ದು , ಶನಿಯು ಅಧಿಪತಿ ಆಗುತ್ತಾನೆ.ಗುಟ್ಟಿನ ಕೆಲಸಗಳನ್ನು ಮಾಡುವವರು , ಅಷ್ಟಾಗಿ ಆಚಾರ-ವಿಚಾರಗಳಲ್ಲಿ ಗಮನವಿರುವುದಿಲ್ಲ . ಕೃತ್ತಿಕಾ ನಕ್ಷತ್ರದ ನಾಲ್ಕನೇ ಪಾದ ಮೀನಾಂಶವಾಗಿದ್ದು ಗುರು ಅದರ ಅಧಿಪತಿ. ಜಾತಕರು ಸದ್ಗುಣವಂತರು, ಶ್ರೇಷ್ಠ ವ್ಯಕ್ತಿತ್ವ , ಉದಾರಿಗಳು , ವಿದ್ವಾಂಸರು, ಕೀರ್ತಿಶಾಲಿಗಳು ಆಗಿರುತ್ತಾರೆ. #ಕೃತ್ತಿಕಾ_ನಕ್ಷತ್ರದಲ್ಲಿ ಮಾಡಬಹುದಾದ ಕೆಲಸಗಳು. ಅಗ್ನಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನೂ ಮಾಡಬಹುದು. ಯಾಗ , ಯಜ್ಞ , ...ಹಾಗೆಯೇ ಕುಯಿಲು , ಪಶು ವಿಕ್ರಯ ಮಾಡಬಹುದು. #ವಾರಾನುಸಾರ_ಫಲಗಳು ಕೃತ್ತಿಕಾ ನಕ್ಷತ್ರ ಭಾನುವಾರ , ಮಂಗಳವಾರ, ಶುಕ್ರವಾರ ಬಂದರೆ ಸಿದ್ಧಿಯೋಗ. ಕೃತ್ತಿಕಾ ನಕ್ಷತ್ರ ಸೋಮವಾರ , ಗುರುವಾರ ಬಂದರೆ ಮೃತಸಿದ್ಧಿಯೋಗ. ಕೃತ್ತಿಕಾ ನಕ್ಷತ್ರ ಬುಧವಾರ ಬಂದರೆ ಅಮೃತಸಿದ್ಧಿಯೋಗ. ಕೃತ್ತಿಕಾ ನಕ್ಷತ್ರ ಶನಿವಾರ ಬಂದರೆ ಅಮೃತಯೋಗ. ಆದರೆ ಆ ದಿನ ಪಂಚಮೀ ತಿಥಿ ಬಂದರೆ ಮೃತಯೋಗವಾಗುತ್ತದೆ. #ವಿಶೇಷ_ಸೂಚನೆ *ಯೋಗಗಳಲ್ಲಿ ಸಿದ್ಧಿ ಯೋಗ , ಅಮೃತ ಯೋಗ , ಅಮೃತ ಸಿದ್ಧಿ ಯೋಗ* ಗಳಲ್ಲಿ ಮಾತ್ರ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು. ಉಳಿದ ಯೋಗಗಳಲ್ಲಿ ಶುಭ ಕಾರ್ಯ ಸಲ್ಲದು ಎಂದು ಶಾಸ್ತ್ರ ಹೇಳುತ್ತದೆ. #ರೋಹಿಣೀ_ನಕ್ಷತ್ರ #ರೋಹಿಣೀ ನಕ್ಷತ್ರದ ಇತರ ಹೆಸರುಗಳು ರೋಹಿಣೀ , ಬ್ರಹ್ಮ , ಪ್ರಜಾಪತಿ , ಚತುರ್ಮುಖ , ವಿಧಾತಾ , ಆತ್ಮಭೂಃ , ಪದ್ಮಯೋನಿ. #ರೋಹಿಣೀ_ನಕ್ಷತ್ರದ ದೇವತೆ....ಪ್ರಜಾಪತಿ ಅಧಿದೇವತೆ...ಅಗ್ನಿ ಪ್ರತ್ಯಧಿದೇವತೆ... ಚಂದ್ರ #ನಕ್ಷತ್ರದ_ಸ್ವರೂಪ ...ಐದು ನಕ್ಷತ್ರಗಳ ಪುಂಜ ರಥಾಕಾರದಲ್ಲಿದೆ. #ನಕ್ಷತ್ರದ_ವಿವರಗಳು...! ಸೂರ್ಯನ ನಕ್ಷತ್ರ , ಪುರುಷ , ನಕ್ಷತ್ರಾಧಿಪತಿ ಚಂದ್ರ , ಮನುಷ್ಯ ಗಣ , ಸರ್ಪ ಯೋನಿ , ಮುಂಗುಸಿ ವೈರಿ , ರಜ್ಜು ಕಂಠ , ಅಂತ್ಯ ನಾಡಿ , ಶೂದ್ರ ವರ್ಣ , ಹರಳು ಮುತ್ತು , ದೆಶೆ- 10 ವರ್ಷಗಳು ಅಕ್ಷರಗಳು...ಓ-ವ-ವೀ-ವೂ ರೋಹಿಣಿಯು ಸ್ಥಿರ ನಕ್ಷತ್ರ. ಜಾತಕರು ಉತ್ತಮನು , ಬುದ್ಧಿವಂತರು , ಒಳ್ಳೆಯ ಮನಸ್ಸುಳ್ಳವರು , ಸುಂದರರು , ಬಂಧು ಮಿತ್ರರಿಗೆ ಪ್ರಿಯರಾದವರು , ಬಲಶಾಲಿಯೂ ಆಗಿರುತ್ತಾರೆ. ರೋಹಿಣೀ ನಕ್ಷತ್ರದ ಮೊದಲನೆಯ ಪಾದವು ಮೇಷಾಂಶವಾಗಿದ್ದು ಕುಜನು ಅಧಿಪತಿ. ಜಾತಕರು ಶೀಘ್ರಕೋಪಿಗಳು, ಸಾಹಸಿಗಳು , ಶೂರರು , ಆಲೋಚನೆ ಮಾಡುವುದರಲ್ಲಿ ವ್ಯತ್ಯಯವಾಗಿ ತಮಗೆ ತಾವೇ ನಷ್ಟ ಉಂಟುಮಾಡಿಕೊಳ್ಳುವರು. ರೋಹಿಣೀ ನಕ್ಷತ್ರದ ಎರಡನೆಯ ಪಾದ ವೃಷಭಾಂಶವಾಗಿದ್ದು ಶುಕ್ರನು ಅಧಿಪತಿ. ಜಾತಕರಲ್ಲಿ ಧಾರ್ಮಿಕ ಗುಣ, ಹಿತ ನಡವಳಿಕೆ , ದೈವಭಕ್ತರು , ಗುರು ಹಿರಿಯರಲ್ಲಿ ಭಕ್ತಿಯುಳ್ಳವರು ಆಗಿರುತ್ತಾರೆ. ರೋಹಿಣೀ ನಕ್ಷತ್ರದ ಮೂರನೆಯ ಪಾದವು ಮಿಥುನಾಂಶವಾಗಿದ್ದು ಬುಧ ಅಧಿಪತಿ. ಸಕಲ ವಿದ್ಯೆಗಳ ಅರಿವು , ವಿವೇಕಿಗಳು , ಸಮರ್ಥ ಭಾಷಣಕಾರರು , ಸುಖ ಶಾಂತಿಯನ್ನು ಅಪೇಕ್ಷಿಸುವವರು ಆಗಿರುತ್ತಾರೆ. ರೋಹಿಣೀ ನಕ್ಷತ್ರದ ನಾಲ್ಕನೆಯ ಪಾದ ಕಟಕಾಂಶವಾಗಿದ್ದು ಚಂದ್ರ ಅಧಿಪತಿ. ಜಾತಕರು ಪರೋಪಕಾರಿ , ಆಚಾರವಂತನು , ಯೋಚನಾಪರರು , ಸದಾ ಸುಖಿಗಳು ಆಗಿರುತ್ತಾರೆ. #ರೋಹಿಣೀ ನಕ್ಷತ್ರದಲ್ಲಿ ಮಾಡಬಹುದಾದ ಕಾರ್ಯಗಳು. ವಿವಾಹ , ಗರ್ಭದಾನ , ವಧೂಪ್ರವೇಶ , ಗೃಹಾರಂಭ , ಗೃಹಪ್ರವೇಶ , ವಿದ್ಯಾರಂಭ, ಸಂಗೀತ ನಾಟ್ಯಕಲಾ ಪ್ರಾರಂಭ....ಮುಂತಾದ ಶುಭ ಕಾರ್ಯಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು ರೋಹಿಣೀ ನಕ್ಷತ್ರವು ಭಾನುವಾರ , ಬುಧವಾರ ಬಂದರೆ ಸಿದ್ಧಿಯೋಗ. ರೋಹಿಣೀ ನಕ್ಷತ್ರ ಸೋಮವಾರ, ಮಂಗಳವಾರ ಬಂದರೆ ಅಮೃತಯೋಗ. ರೋಹಿಣೀ ನಕ್ಷತ್ರ ಗುರುವಾರ ಬಂದರೆ ಉತ್ಪಾತಯೋಗ. ರೋಹಿಣೀ ನಕ್ಷತ್ರ ಶುಕ್ರವಾರ ಬಂದರೆ ಮೃತಯೋಗ. ರೋಹಿಣೀ ನಕ್ಷತ್ರ ಶನಿವಾರ ಬಂದರೆ ಅಮೃತಸಿದ್ಧಿಯೋಗ. ರೋಹಿಣೀ ನಕ್ಷತ್ರ ಬುಧವಾರ ಷಷ್ಠಿಯಾದರೆ ಸಾಲಯೋಗ. ರೋಹಿಣೀ ನಕ್ಷತ್ರ ಬುಧವಾರ ಅಷ್ಟಮೀ ಬಂದರೆ ಮಹಾಸಿದ್ಧಿಯೋಗ. #ವಿಶೇಷ_ಸೂಚನೆ..*ಯೋಗಗಳಲ್ಲಿ ಸಿದ್ಧಿ ಯೋಗ , ಅಮೃತ ಯೋಗ , ಅಮೃತ ಸಿದ್ಧಿ ಯೋಗ* ಗಳಲ್ಲಿ ಮಾತ್ರ ಯಾವುದೇ ಶುಭ ಕಾರ್ಯವನ್ನು ಮಾಡುವುದು ಒಳ್ಳೆಯದು. ಉಳಿದ ಯೋಗಗಳಲ್ಲಿ ಶುಭ ಕಾರ್ಯ ಸಲ್ಲದು ಎಂದು ಶಾಸ್ತ್ರ ಹೇಳುತ್ತದೆ. *ಇದು ಎಲ್ಲಾ ನಕ್ಷತ್ರಗಳಿಗೂ ಅನ್ವಯ*. #ಮೃಗಶಿರಾ_ನಕ್ಷತ್ರ...!! #ಮೃಗಶಿರಾ ನಕ್ಷತ್ರದ ಇತರ ಹೆಸರುಗಳು..! ಮೃಗಶೀರ್ಷಾ , ಮೃಗಶ್ಚಂದ್ರ , ಸೌಮ್ಯ , ನಿಶಾನಾಥ , ಹಿಮ , ಶಶಿ , ನಿಶಾಕರ. #ಮೃಗಶಿರಾ ನಕ್ಷತ್ರದ ದೇವತೆಗಳು. ನಕ್ಷತ್ರ ದೇವತೆ...ಚಂದ್ರ ಅಧಿದೇವತೆ...ಪ್ರಜಾಪತಿ ಪ್ರತ್ಯಧಿದೇವತೆ... ರುದ್ರ #ಮೃಗಶಿರಾ ನಕ್ಷತ್ರದ ಸ್ವರೂಪ... ಮೂರು ನಕ್ಷತ್ರಗಳು ಕೂಡಿದ್ದು ಮನುಷ್ಯನ ಶಿರಸ್ಸಿನ ರೂಪದಲ್ಲಿದೆ. #ವಿವರಗಳು ... ಸೂರ್ಯನ ನಕ್ಷತ್ರ , ಪುರುಷ ನಕ್ಷತ್ರ , ಅಧಿಪತಿ - ಕುಜ , ಗಣ- ದೇವ , ಯೋನಿ-ಸರ್ಪ , ವೈರಿ- ಮುಂಗುಸಿ , ರಜ್ಜು - ಕಂಠ ವರ್ಣ- ಶೂದ್ರ , ನಾಡಿ- ಮಧ್ಯ ,ಹರಳು-ಹವಳ , ಅಕ್ಷರಗಳು- ವೆ-ವೊ-ಕಾ-ಕಿ. #ಸ್ವಭಾವಗಳು ...ಜಾತಕರು ಮೇಲ್ನೋಟಕ್ಕೆ ಸೌಮ್ಯರು , ಗುರು ಹಿರಿಯರಲ್ಲಿ ಭಕ್ತಿ , ತೇಜಸ್ವಿಗಳು , ಉತ್ಸಾಹಿಗಳು , ಗಣ್ಯವ್ಯಕ್ತಿಗಳು , ಹಲವು ವಿದ್ಯೆಗಳ ಪಾಂಡಿತ್ಯ , ವಾಕ್ಚಾತುರ್ಯ , ಸ್ವಪ್ರತಿಷ್ಠೆಯುಳ್ಳವರು. #ಮೃಗಶಿರಾ ನಕ್ಷತ್ರದ ಪ್ರಥಮ ಪಾದವು ಸಿಂಹಾಂಶವಾಗಿದ್ದು ರವಿ ಅದರ ಅಧಿಪತಿ. ಜಾತಕರು ಶೂರರು , ಧೀರರು , ಸಾಹಸಿಗಳು , ರಾಜಸಮಾನರು , ಸ್ವಾಭಿಮಾನಿಗಳು ಆಗಿರುತ್ತಾರೆ. #ಮೃಗಶಿರಾ ನಕ್ಷತ್ರದ ಎರಡನೆಯ ಪಾದ ಕನ್ಯಾಂಶವಾಗಿದ್ದು ಬುಧ ಅದರ ಅಧಿಪತಿ. ಜಾತಕರು ಬುದ್ಧಿವಂತರು , ಮುಂದಾಲೋಚನೆಯಿದ್ದು ನೇರ ನುಡಿಯವರು. ಹೇಳಿದಂತೆ ಮಾಡುವವರು , ಶಾಂತಿ ಪ್ರಿಯರು ಆಗಿರುತ್ತಾರೆ. #ಮೃಗಶಿರಾ ನಕ್ಷತ್ರದ ಮೂರನೇ ಪಾದವು ತುಲಾಂಶವಾಗಿದ್ದು , ಶುಕ್ರ ಅದಕ್ಕೆ ಅಧಿಪತಿ. ಜಾತಕರು ವಿವೇಕಿಯು , ನ್ಯಾಯವಂತರು , ಸತ್ಯವಂತರು ,ಶಾಸ್ತ್ರ ಗಳನ್ನು ತಿಳಿದವರು ಆಗಿರುತ್ತಾರೆ. #ಮೃಗಶಿರಾ ನಕ್ಷತ್ರದ ನಾಲ್ಕನೆಯ ಪಾದ ವೃಶ್ಚಿಕಾಂಶವಾಗಿದ್ದು ಕುಜನು ಅಧಿಪತಿ. ಜಾತಕರು ಕೋಪೋದ್ರಿಕ್ತರು , ಕ್ರೂರಿಗಳು , ಕಟು ನುಡಿಗಳಾಡುವವರು , ಹೆಚ್ಚು ವೈರಿಗಳುಳ್ಳವರು ಆಗಿರುತ್ತಾರೆ. #ಮೃಗಶಿರಾ_ನಕ್ಷತ್ರದಲ್ಲಿ #ಮಾಡಬಹುದಾದ_ಕಾರ್ಯಗಳು... ಸೀಮಂತ , ನಾಮಕರಣ , ಉಪನಯನ , ವಿವಾಹ , ಚೌಲ , ವಿದ್ಯಾರಂಭ , ಹೊಸ ಉದ್ಯೋಗ , ಹೋಮ-ಹವನಗಳು , ನೂತನ ಅಂಗಡಿ ಪ್ರಾರಂಭ , ಶಸ್ತ್ರ ಚಿಕಿತ್ಸೆ, ಪ್ರಯಾಣ , ..ಎಲ್ಲಾ ತರಹದ ಶುಭ ಕಾರ್ಯಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು ಮೃಗಶಿರಾ ನಕ್ಷತ್ರವು ಭಾನುವಾರ , ಮಂಗಳವಾರ , ಬುಧವಾರ , ಶುಕ್ರವಾರ , ಶನಿವಾರ ಬಂದರೆ ಸಿದ್ಧಿ ಯೋಗ. ಮೃಗಶಿರಾ ನಕ್ಷತ್ರ ಸೋಮವಾರ ಬಂದರೆ ಅಮೃತಯೋಗ. ಮೃಗಶಿರಾ ನಕ್ಷತ್ರ ಗುರುವಾರ ಬಂದರೆ ಮೃತಯೋಗವಾಗುತ್ತದೆ. ಸಿದ್ಧಿ , ಅಮೃತ , ಅಮೃತಸಿದ್ಧಿ ಯೋಗ ಗಳನ್ನು ಬಳಸಿಕೊಂಡು ಕಾರ್ಯಮಾಡುವುದು ಒಳ್ಳೆಯದು. ಉಳಿದ ಯೋಗಗಳು ಒಳ್ಳೆಯದಲ್ಲ. #ಆರಿದ್ರಾ_ನಕ್ಷತ್ರ #ಈ_ನಕ್ಷತ್ರದ_ಇತರ_ಹೆಸರುಗಳು... ಆರಿದ್ರಾ , ಸ್ಥಾಣುಃ , ರೌದ್ರಾ , ಪುರೋಜಿತ್. #ಈ_ನಕ್ಷತ್ರದ_ದೇವತೆ...ರುದ್ರ #ಅಧಿ_ದೇವತೆ.......ಚಂದ್ರ #ಪ್ರತ್ಯಧಿ_ದೇವತೆ ..ಅದಿತಿ #ಈ_ನಕ್ಷತ್ರದ_ರೂಪ...ಹವಳಾಕಾರದ ಒಂದು ನಕ್ಷತ್ರ. ಇದು ಚಂದ್ರನಿಗೆ ಸೇರಿದ ನಕ್ಷತ್ರವಾಗಿದ್ದು , ಇದಕ್ಕೆ ಅಧಿಪತಿ ರಾಹು ಆಗಿದ್ದಾನೆ. ದಶೆ ೧೮ ವರುಷಗಳು , ಗಣ-ಮನುಷ್ಯ , ಯೋನಿ-ಶ್ವಾನ , ವೈರಿ-ಜಿಂಕೆ , ರಜ್ಜು-ಕಂಠ , ನಾಡಿ-ಆದಿ , ವರ್ಣ-ವೈಶ್ಯ , ಹರಳು-ಗೋಮೇಧಿಕ ಅಕ್ಷರಗಳು...ಕು-ಘ-ಞ-ಚ #ಈ_ನಕ್ಷತ್ರವಿರುವ_ದಿನ .. ಲಿಂಗ ಪ್ರತಿಷ್ಠಾಪನೆ , ಮಂತ್ರ-ತಂತ್ರ ಸಿದ್ಧಿಗೆ , ಭೂತ-ಪಿಶಾಚಿ ಬಿಡಿಸುವುದಕ್ಕೆ , ಶತ್ರು ನಾಶದ ಕಾರ್ಯ , ಹೋಮ-ಹವನ ...ಮಾಡಬಹುದು. #ಈ_ನಕ್ಷತ್ರದಲ್ಲಿ_ಜನಿಸಿರುವವರು.. ಚಪಲ ಚಿತ್ತರು,ದಿಟ್ಟತನದವರು , ಹಠವಾದಿಗಳು , ಧೈರ್ಯ-ಸ್ಥೈರ್ಯವುಳ್ಳವರು , ನ್ಯಾಯದ ತೀರ್ಮಾನ ತೆಗೆದುಕೊಳ್ಳುವವರು , ವ್ಯವಹಾರ ನಿಪುಣರು ಆಗಿರುವರು. ಆರಿದ್ರಾ ನಕ್ಷತ್ರದ ಮೊದಲನೆಯ ಪಾದ ಧನುರಾಂಶವಾಗಿದ್ದು ಗುರುವು ಅದಕ್ಕೆ ಅಧಿಪತಿಯು. ಜಾತಕರು ಸದಾಚಾರರು , ಸದ್ಗುಣರು , ಧನವಂತರು , ಆಚಾರ ವಿಚಾರವಂತರು ಆಗುತ್ತಾರೆ. ಆರಿದ್ರಾ ನಕ್ಷತ್ರದ ಎರಡನೆಯ ಪಾದ , ಮಕರಾಂಶವಾಗಿದ್ದು ಶನಿಯು ಅದಕ್ಕೆ ಅಧಿಪತಿಯು. ಮಿತ ವ್ಯಯಿಗಳು , ಶೀಘ್ರಕೋಪಿಗಳು , ಕಷ್ಟ ಪಟ್ಟು ಕೆಲಸ ಮಾಡುವವರು ಆಗಿರುತ್ತಾರೆ. ಆರಿದ್ರಾ ನಕ್ಷತ್ರದ ಮೂರನೆಯ ಪಾದ , ಕುಂಭಾಂಶವಾಗಿದ್ದು , ಶನಿಯು ಅದಕ್ಕೆ ಅಧಿಪತಿಯು. ಜಾತಕರು ನಾಸ್ತಿಕರು , ಉಗ್ರಸ್ವಭಾವದವರು , ವ್ಯಸನಿಗಳು , ಸಮಯಕ್ಕೆ ಸರಿಯಾಗಿ ವಿವೇಕವನ್ನು ಉಪಯೋಗಿಸದವರು , ಗುಟ್ಟು ವ್ಯವಹಾರದವರು ಆಗಿರುತ್ತಾರೆ. ಆರಿದ್ರಾ ನಕ್ಷತ್ರದ ನಾಲ್ಕನೆಯ ಪಾದ , ಮೀನಾಂಶವಾಗಿದ್ದು , ಗುರುವು ಅದಕ್ಕೆ ಅಧಿಪತಿಯು. ಜಾತಕರು ಉದಾರಿಯು , ವಿಶಾಲ ಹೃದಯದವರು , ಸಕಲಗುಣಸಂಪನ್ನದವರು , ಉನ್ನತ ವ್ಯಕ್ತಿತ್ವ ಉಳ್ಳವರು ಆಗಿರುತ್ತಾರೆ. #ವಾರಾನುಸಾರ_ಫಲಗಳು .. ಆರಿದ್ರಾ ನಕ್ಷತ್ರ ಭಾನುವಾರ, ಸೋಮವಾರ, ಬುಧವಾರ , ಶುಕ್ರವಾರ, ಶನಿವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಈ ನಕ್ಷತ್ರವು ಮಂಗಳವಾರ , ಗುರುವಾರ ಬಂದರೆ ಮೃತಯೋಗವಾಗುತ್ತದೆ. #ಪುನರ್ವಸು _ನಕ್ಷತ್ರ... #ಈ_ನಕ್ಷತ್ರದ_ಇತರ_ಹೆಸರುಗಳು... ಅದಿತಿ , ಆದಿತ್ಯಾ , ದೇವಮಾತಾ. #ಈ_ನಕ್ಷತ್ರದ_ದೇವತೆ...ಅದಿತಿ #ಅಧಿದೇವತೆ........ರುದ್ರ #ಪ್ರತ್ಯಧಿದೇವತೆ..ಬೃಹಸ್ಪತಿ #ಈ_ನಕ್ಷತ್ರದ_ಸ್ವರೂಪ...ಐದು ನಕ್ಷತ್ರಗಳಿಂದ ಚಕ್ರಾಕಾರದಲ್ಲಿ ಆಗಿದೆ. ಪುನರ್ವಸು ನಕ್ಷತ್ರವು ಚಂದ್ರನ ನಕ್ಷತ್ರವಾಗಿದ್ದು, ಸ್ತ್ರೀ ನಕ್ಷತ್ರವೆನಿಸಿದೆ. ಈ ನಕ್ಷತ್ರಕ್ಕೆ ಗುರು ಅಧಿಪತಿಯಾಗಿದ್ದಾನೆ. ದೆಶೆ ..16 ವರ್ಷ , ಗಣ - ದೇವ , ಯೋನಿ-ಬೆಕ್ಕು, ವೈರಿ - ಇಲಿ , ರಜ್ಜು - ಉದರ , ನಾಡಿ - ಆದಿ , ವರ್ಣ - ವೈಶ್ಯ , ಹರಳು - ಪುಷ್ಪರಾಗ , ಅಕ್ಷರಗಳು...ಕೆ-ಕೊ-ಹ-ಹಿ ಈ ನಕ್ಷತ್ರದಲ್ಲಿ ಜನಿಸಿದವರು ಔದಾರ್ಯ ಗುಣವುಳ್ಳವರು , ಅಲ್ಪ ತೃಪ್ತರು , ಮಧುರ ನುಡಿಗಳಾಡುವವರು , ಕಷ್ಟಗಳನ್ನು ಎದುರಿಸತಕ್ಕವರು , ಮನೋಸ್ಥೈರ್ಯವುಳ್ಳವರು , ಆದರ್ಶ ವ್ಯಕ್ತಿಗಳು , ಪಂಡಿತರು ಆಗಿರುತ್ತಾರೆ. ಪುನರ್ವಸು ನಕ್ಷತ್ರದ ಮೊದಲನೇ ಪಾದ , ಮೇಷಾಂಶವಾಗಿದ್ದು , #ಕುಜನು ಅಧಿಪತಿಯಾಗುತ್ತಾನೆ. ಜಾತಕರು ಶೂರರು , ಸಾಹಸಿಗಳು , ಶೀಘ್ರ ಕೋಪಿಗಳು , ರೀತಿ-ನೀತಿಗಳನ್ನು ಜಾರಿಗೆ ತಂದುಕೊಂಡು ಕಷ್ಟಕ್ಕೆ ಒಳಗಾಗುತ್ತಾರೆ. ಪುನರ್ವಸು ನಕ್ಷತ್ರದ ಎರಡನೆಯ ಪಾದ , ವೃಷಭಾಂಶವಾಗಿದ್ದು , #ಶುಕ್ರನು ಅಧಿಪತಿಯಾಗುತ್ತಾನೆ. ಜಾತಕರು ಧಾರ್ಮಿಕರು, ಗುಣಶೀಲರು , ಮನೋನಿಗ್ರಹಿಗಳು , ದೈವಭಕ್ತರು , ಶ್ರದ್ಧಾಭಕ್ತಿಯುಳ್ಳವರು ಆಗಿರುತ್ತಾರೆ. ಪುನರ್ವಸು ನಕ್ಷತ್ರದ ಮೂರನೆಯ ಪಾದ , ಮಿಥುನಾಂಶವಾಗಿದ್ದು , #ಬುಧ ಅಧಿಪತಿಯಾಗುತ್ತಾನೆ. ಜಾತಕರು ಧೈರ್ಯಶಾಲಿಗಳು , ವಿದ್ಯಾಪ್ರವೀಣರು , ವಿವೇಕಿಗಳು , ಸರ್ವಸಮರ್ಥರು , ಉತ್ತಮವಾಗ್ಮಿಗಳು , ಶಾಂತಿಪ್ರಿಯರು ಆಗಿರುತ್ತಾರೆ. ಪುನರ್ವಸು ನಕ್ಷತ್ರದ ನಾಲ್ಕನೆಯ ಪಾದ , ಕಟಕಾಂಶವಾಗಿದ್ದು #ಚಂದ್ರ ಅಧಿಪತಿಯಾಗುತ್ತಾನೆ. ಜಾತಕರು ಪರೋಪಕಾರಿಯು , ಬುದ್ಧಿವಂತರು , ಊರುಗಳನ್ನು ಸುತ್ತುವವನು , ಯೋಚನಾಪರನು , ಸುಖಾಭಿಲಾಷಿಯು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು... ಪುಂಸವನ , ಉಪನಯನ, ಸೀಮಂತ ,ನಾಮಕರಣ , ತೊಟ್ಟಿಲಿಗೆ ಹಾಕುವುದು , ಅನ್ನಪ್ರಾಶನ , ವಿದ್ಯಾರಂಭ , ನೂತನವಸ್ತ್ರ ಧಾರಣೆ , ಅಂಗಡಿ ಆರಂಭ , ಔಷಧಿ ಸೇವನೆ , ನೇಗಿಲು ಉಳುವುದು , ಪ್ರಯಾಣ , ಸಾಲ ತರುವುದು - ಕೊಡುವುದು ಮಾಡಬಹುದು. #ವಾರಾನುಸಾರ_ಯೋಗ_ಫಲಗಳು.. ಪುನರ್ವಸು ನಕ್ಷತ್ರವು ಭಾನುವಾರ , ಮಂಗಳವಾರ , ಬುಧವಾರ , ಶುಕ್ರವಾರ , ಶನಿವಾರ ಬಂದರೆ *#ಸಿದ್ಧಿಯೋಗ ವಾಗುತ್ತದೆ. ಈ ನಕ್ಷತ್ರವು ಸೋಮವಾರ , ಗುರುವಾರ ಬಂದರೆ *#ಅಮೃತಯೋಗ ವಾಗುತ್ತದೆ. #ಪುಷ್ಯಮೀ_ನಕ್ಷತ್ರ #ಪುಷ್ಯಮೀ_ನಕ್ಷತ್ರದ_ಇತರ #ಹೆಸರುಗಳು... ಪುರೋಹಿತ , ವಾಗೀಶ , ಇಜ್ಯಾ , ಜೀವೋ , ಅಮರೇ , ಪುಷ್ಯಾ. #ಈ_ನಕ್ಷತ್ರದ_ದೇವತೆ..ಬೃಹಸ್ಪತಿ #ಅಧಿದೇವತೆ........... ಅದಿತಿ #ಪ್ರತ್ಯಧಿ_ದೇವತೆ......ಸರ್ಪ #ನಕ್ಷತ್ರದ_ಸ್ವರೂಪ...ಮೂರು ನಕ್ಷತ್ರಗಳಿಂದ ಕೂಡಿದ್ದು ಹಾವರಾಣೀ ಆಕಾರದಲ್ಲಿದೆ. ಈ ನಕ್ಷತ್ರವು ಚಂದ್ರನಿಗೆ ಸೇರಿದ್ದು , ಸ್ತ್ರೀ ನಕ್ಷತ್ರವಾಗಿ , ಶನಿಯು ಇದಕ್ಕೆ ಅಧಿಕಾರಿ. ದೆಶೆಯು 19 ವರುಷಗಳದ್ದಾಗಿದೆ. ಗಣ- ದೇವ, ಯೋನಿ-ಮೇಕೆ , ವೈರಿ-ಕೋತಿ , ರಜ್ಜು - ಕಟಿ ನಾಡಿ - ಮಧ್ಯ , ವರ್ಣ - ಬ್ರಾಹ್ಮಣ , ಹರಳು- ನೀಲ. ಅಕ್ಷರಗಳು...ಹು-ಹೆ-ಹೊ-ಡ ಈ ನಕ್ಷತ್ರದಲ್ಲಿ ಜನಿಸಿದವರು ಶಾಂತ ಸ್ವರೂಪರು ವಿಶಾಲ ಹೃದಯದವರು , ಎಲ್ಲರೊಂದಿಗೆ ಬೆರೆಯುವವರು , ಸುಗುಣವಂತರು, ವಿನಯವಂತರು , ಸತ್ಯಶೀಲರು , ವಿದ್ವಾಂಸರು, ಮಾರ್ಗದರ್ಶಿಗಳು , ವಿದ್ಯಾಸಕ್ತಿಯುಳ್ಳವರು ಆಗಿರುತ್ತಾರೆ. ಪುಷ್ಯಮೀ #ಮೊದಲನೆಯ_ಪಾದ ಸಿಂಹಾಂಶವಾಗಿದ್ದು ರವಿ ಅದರ ಅಧಿಪತಿ. ಜಾತಕರು ಸಹಜವಾಗಿ ಶೂರರು , ರಾಜಮರ್ಯಾದೆಗೆ ಯೋಗ್ಯರು , ಸ್ವಾಭಿಮಾನಿಗಳು ಆಗಿರುತ್ತಾರೆ. ಪುಷ್ಯಮೀ #ಎರಡನೆಯ_ಪಾದ ಕನ್ಯಾಂಶವಾಗಿದ್ದು , ಬುಧ ಅಧಿಪತಿಯಾಗಿರುವುದರಿಂದ ಜಾತಕರು ವ್ಯಾಪಾರಸ್ಥರು , ಅಹಿಂಸಾಪರರು , ಅಲ್ಪತೃಪ್ತರು , ರೋಗಿಗಳು ಆಗಿರುತ್ತಾರೆ. ಪುಷ್ಯಮೀ #ಮೂರನೆಯ_ಪಾದ ತುಲಾಂಶವಾಗಿದ್ದು ಶುಕ್ರನ ಇದಕ್ಕೆ ಅಧಿಪತಿ. ಜಾತಕರು ವಿವೇಕಿಯು , ಕಲಾವಿದರು , ಸತ್ಯವಂತರು , ಶಾಸ್ತ್ರ ಹಾಗೂ ಇತಿಹಾಸವನ್ನು ಬಲ್ಲವರು , ಪ್ರೀತಿಗೆ ಪಾತ್ರರು ಆಗಿರುತ್ತಾರೆ. ಪುಷ್ಯಮೀ #ನಾಲ್ಕನೆಯ_ಪಾದ ವೃಶ್ಚಿಕಾಂಶವಾಗಿದ್ದು ಕುಜನು ಅದಕ್ಕೆ ಅಧಿಪತಿ. ಜಾತಕರು ಕಟುವಾಗಿ ಮಾತನಾಡುವವರು, ಕೋಪಿಷ್ಟರು , ವೈರಿಗಳನ್ನು ಎದುರಿಸುವವರು, ಅಧಿಕಾರಕ್ಕಾಗಿ ಹಂಬಲಿಸುವವರು ಆಗಿರುತ್ತಾರೆ. #ಪುಷ್ಯಮೀ_ನಕ್ಷತ್ರವಿದ್ದಾಗ_ #ಮಾಡಬಹುದಾದ_ಕಾರ್ಯಗಳು ಸೀಮಂತ , ನಾಮಕರಣ , ಅನ್ನಪ್ರಾಶನ , ವಿದ್ಯಾರಂಭ , ನೂತನ ವಾಹನ ತೆಗೆದುಕೊಳ್ಳುವುದು , ಸಂಗೀತ , ನಾಟ್ಯ ಕಲೆಗಳ ಪ್ರಾರಂಭ , ಪ್ರಯಾಣ , ಗದ್ದೆ ಕೆಲಸ , ಶಸ್ತ್ರ ಚಿಕಿತ್ಸೆ , ಅಂಗಡಿ ಆರಂಭ...ಮುಂತಾದ ಕಾರ್ಯಗಳಿಗೆ ಶುಭವು. ( *ವಿವಾಹಕ್ಕೆ ಈ ನಕ್ಷತ್ರವನ್ನು ಕೆಲವರು ನಿಷೇಧಿಸುತ್ತಾರೆ* ) #ವಾರಾನುಸಾರ_ಯೋಗಫಲಗಳು .. ಪುಷ್ಯಮೀ ನಕ್ಷತ್ರ ಭಾನುವಾರ , ಸೋಮವಾರ , ಮಂಗಳವಾರ , ಬುಧವಾರ ,ಶನಿವಾರ ದಂದು ಬಂದರೆ ಸಿದ್ದಿಯೋಗವಾಗುತ್ತದೆ. ಪುಷ್ಯಮೀ ನಕ್ಷತ್ರ ಗುರುವಾರ ಬಂದರೆ ಅಮೃತಸಿದ್ದಿಯೋಗವಾಗುತ್ತದೆ. ಪುಷ್ಯಮೀ ನಕ್ಷತ್ರ ಶುಕ್ರವಾರ ಬಂದರೆ ಉತ್ಪಾತಯೋಗವಾಗುತ್ತದೆ. #ಪುಷ್ಯಮೀ_ನಕ್ಷತ್ರದ_ವೈಶಿಷ್ಟ್ಯ ... ಗುರುವಾರ , ಪುಷ್ಯಮೀ ನಕ್ಷತ್ರ ಬಂದಾಗ ಅಮೃತ ಸಿದ್ಧಿ ಯೋಗ ಬರುವುದಲ್ಲದೆ ಗುರು-ಪುಷ್ಯ ಯೋಗ ಉಂಟಾಗುವುದು. ಅಂದು ಯಾವುದೇ ವಿದ್ಯೆಯನ್ನು ಕಲಿತಾಗ ಅದು ಕರಗತವಾಗುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬಂಗಾರದಿಂದ ತಯಾರಿಸಿದ ಸ್ವರ್ಣಬಿಂಧು ಪ್ರಾಶನವನ್ನು ಪ್ರತಿ ತಿಂಗಳು ಪುಷ್ಯಮೀ ನಕ್ಷತ್ರದ ದಿನ ಮಕ್ಕಳಿಗೆ ಕೊಡುತ್ತಾರೆ. ಇದರಿಂದ ಮಕ್ಕಳಿಗೆ ಒಳ್ಳೆಯ ಜ್ಞಾಪಕ ಶಕ್ತಿ , ಜಾಣ್ಮೆ , ವ್ಯಾಧಿನಿವಾರಣಾ ಶಕ್ತಿಯನ್ನು ವೃದ್ಧಿಸುತ್ತದೆ. #ಆಶ್ಲೇಷಾ_ನಕ್ಷತ್ರ .. #ಆಶ್ಲೇಷಾ_ನಕ್ಷತ್ರದ_ಇತರ #ಹೆಸರುಗಳು ... ಆಶ್ಲೇಷಾ , ಉರಗ , ಸರ್ಪ , ಭುಜಂಗಾ , ವ್ಯಾಳಾ #ಈ_ನಕ್ಷತ್ರದ_ದೇವತೆ ...ಸರ್ಪ #ಅಧಿದೇವತೆ ....... ಬೃಹಸ್ಪತಿ #ಪ್ರತ್ಯಧಿದೇವತೆ .....ಪಿತೃದೇವತೆ #ಈ_ನಕ್ಷತ್ರದ_ಸ್ವರೂಪ ..! ಆರು ನಕ್ಷತ್ರಗಳ ಸರ್ಪಾಕಾರದ ರೂಪ. #ನಕ್ಷತ್ರದ_ವಿವರಗಳು ...! ಇದು ಚಂದ್ರನಿಗೆ ಸೇರಿದ ನಕ್ಷತ್ರ. ಸ್ತ್ರೀ ನಕ್ಷತ್ರ. ನಕ್ಷತ್ರಾಧಿಪತಿ...ಬುಧ , ದೆಶೆ...17 ವರುಷಗಳು ಗಣ- ರಾಕ್ಷಸ , ಯೋನಿ - ಬೆಕ್ಕು , ವೈರಿ- ಇಲಿ ರಜ್ಜು- ಪಾದ , ನಾಡಿ - ಅಂತ್ಯ , ವರ್ಣ - ಬ್ರಾಹ್ಮಣ , ಹರಳು - ಪಚ್ಚೆ , ಅಕ್ಷರಗಳು-ಡಿ-ಡು-ಡೆ-ಡೊ ಈ ನಕ್ಷತ್ರದಲ್ಲಿ ಜನಿಸಿದವರು ಪರಾಕ್ರಮಿಗಳು , ಹಿಡಿದ ಕಾರ್ಯ ಸಾಧಿಸುವವರು , ಯಾರ ಮಾತೂ ಕೇಳದವರು , ಗಟ್ಟಿಗರು , ತಾಳ್ಮೆಯುಳ್ಳವರು , ಮಿತವ್ಯಯಿಗಳು , ಆದರ್ಶ ವ್ಯಕ್ತಿಗಳು , ಭಕ್ತಿ ಗೌರವವುಳ್ಳವರು ಆಗಿರುತ್ತಾರೆ. ಈ ನಕ್ಷತ್ರದ #ಮೊದಲನೆಯ_ಪಾದವು #ಧನುರಾಂಶವಾಗಿದ್ದು , ಗುರು ಅಧಿಪತಿಯಾಗುವನು . ಜಾತಕರು ಧನವಂತರು , ಸದ್ಗುಣವಂತರು , ಸಹೃದಯರು, ಕಾರ್ಯನಿಷ್ಠರು , ಆಚಾರವಂತರು ಆಗಿರುತ್ತಾರೆ. ಈ ನಕ್ಷತ್ರದ #ಎರಡನೆಯ_ಪಾದವು* #ಮಕರಾಂಶವಾಗಿದ್ದು , ಶನಿಯು ಅಧಿಪತಿಯಾಗುತ್ತಾನೆ. ಜಾತಕರು ಶೀಘ್ರಕೋಪಿಗಳು , ಹೆಚ್ಚು ಖರ್ಚುಮಾಡದವರು , ಕಣ್ಣಿನ ಸಮಸ್ಯೆಯುಳ್ಳವರು , ತಮ್ಮ ಕೆಲಸಕ್ಕೆ ಹೆಚ್ಚು ಮಹತ್ವ ಕೊಡುವವರು ಆಗಿರುತ್ತಾರೆ. ಈ ನಕ್ಷತ್ರದ #ಮೂರನೆಯ_ಪಾದವು #ಕುಂಭಾಂಶವಾಗಿದ್ದು, ಶನಿಯು ಅದಕ್ಕೆ ಅಧಿಪತಿಯು. ಜಾತಕರು ದೇವರಲ್ಲಿ ಅಷ್ಟಾಗಿ ನಂಬಿಕೆಯಿಲ್ಲದವರು , ಸತ್ವರಹಿತ ಮಾತುಗಳು, ವಿಭಿನ್ನ ಚಟಗಳುಳ್ಳವರು , ವಿವೇಕ ಕಡಿಮೆಯುಳ್ಳವರು ಆಗಿರುತ್ತಾರೆ. ಈ ನಕ್ಷತ್ರದ #ನಾಲ್ಕನೆಯ_ಪಾದವು #ಮೀನಾಂಶವಾಗಿದ್ದು , ಗುರು ಅದಕ್ಕೆ ಅಧಿಪತಿಯು. ಜಾತಕರು ಸದ್ಗುಣಿಯೂ , ಶ್ರೇಷ್ಠ ವ್ಯಕ್ತಿತ್ವ , ಗುಣ ಸಂಪನ್ನರು , ವಿಶಾಲಹೃದಯದವರು , ಕೀರ್ತಿಶಾಲಿಗಳು ಆಗಿರುತ್ತಾರೆ. #ಆಶ್ಲೇಷಾ_ನಕ್ಷತ್ರದಲ್ಲಿ #ಮಾಡಬಹುದಾದ_ಕಾರ್ಯಗಳು ... ಎಲ್ಲಾ ವಸ್ತುಗಳ ಕ್ರಯ-ವಿಕ್ರಯ , ಮಂತ್ರಸಿದ್ಧಿ, ಶಸ್ತ್ರಾಸ್ತ್ರ ಸಂಗ್ರಣೆ , ಗರಡೀ ವಿದ್ಯೆಗೆ ಒಳ್ಳೆಯದು. #ವಾರಾನುಸಾರ_ಯೋಗಫಲಗಳು ... ಈ ನಕ್ಷತ್ರವು ಭಾನುವಾರ , ಸೋಮವಾರ , ಮಂಗಳವಾರ , ಬುಧವಾರ , ಗುರುವಾರ ಬಂದರೆ #ಸಿದ್ಧಿಯೋಗವಾಗುತ್ತದೆ . ಈ ನಕ್ಷತ್ರವು ಶುಕ್ರವಾರ , ಶನಿವಾರ ಬಂದರೆ #ಮೃತಯೋಗವಾಗುತ್ತದೆ. #ಮಖಾ_ನಕ್ಷತ್ರ #ಮಖಾ_ನಕ್ಷತ್ರದ_ಇತರ #ಹೆಸರುಗಳು ... ಮೇಖಲಾ , ಪೈತ್ರ , ಪಿತೃಭಂ , #ಈ_ನಕ್ಷತ್ರದ_ದೇವತೆ.. ಪಿತೃದೇವತೆ #ಅಧಿದೇವತೆ..... ಸರ್ಪ #ಪ್ರತ್ಯಧಿದೇವತೆ.... ರವಿ #ಈ_ನಕ್ಷತ್ರದ_ವಿವರ ...! ಇದು ಚಂದ್ರನಿಗೆ ಸೇರಿದ ನಕ್ಷತ್ರ. ಸ್ತ್ರೀ ನಕ್ಷತ್ರ. ನಕ್ಷತ್ರಾಧಿಪತಿ ಕೇತು. ದೆಶೆ..7 ವರ್ಷ , ಗುಣ-ರಾಕ್ಷಸ , ಯೋನಿ-ಇಲಿ , ವೈರಿ-ಬೆಕ್ಕು , ರಜ್ಜು-ಪಾದ , ನಾಡಿ-ಅಂತ್ಯ , ವರ್ಣ- ಕ್ಷತ್ರಿಯ, ಹರಳು-ವೈಡೂರ್ಯ , ಅಕ್ಷರಗಳು..ಮ-ಮಿ-ಮು-ಮೆ ಈ ನಕ್ಷತ್ರದಲ್ಲಿ ಹುಟ್ಟಿದ ಜಾತಕರು ಉಪಕಾರಿಯು , ಗುಣವಂತರು , ಒಳ್ಳೆಯ ವಾಗ್ಮಿಗಳು , ಸತ್ಯವಂತರು , ಶತ್ರುರಹಿತರು, ವಿಚಾರವಂತರು , ಭಕ್ತಿಯುಳ್ಳವರು , ಸಂಚಾರಿಗಳು , ಧೈರ್ಯವಂತರು ಆಗಿರುತ್ತಾರೆ. ಮಖಾ ನಕ್ಷತ್ರದ #ಮೊದಲನೆಯ #ಪಾದವು_ಮೇಷಾಂಶವಾಗಿದ್ದು , ಕುಜ ಅಧಿಪತಿಯಾಗುತ್ತಾನೆ . ಜಾತಕರು ಮನೋನಿಗ್ರಹಿಗಳು , ಕಠಿಣ ಸ್ವಭಾವದವರು, ಶಕ್ತಿಶಾಲಿಗಳು , ಧೈರ್ಯವಂತರು ಆಗಿರುತ್ತಾರೆ. ಮಖಾ ನಕ್ಷತ್ರದ #ಎರಡನೆಯ #ಪಾದವು_ವೃಷಭಾಂಶವಾಗಿದ್ದು* , ಶುಕ್ರ ಅಧಿಪತಿಯಾಗುತ್ತಾನೆ ,ಜಾತಕರು ಧಾರ್ಮಿಕರು, ಶೀಲಗುಣಸಂಪನ್ನರು , ವಿವೇಕಿಗಳು , ದೈವಭಕ್ತರು , ಸ್ನೇಹಪರರು ಆಗಿರುತ್ತಾರೆ. ಮಖಾ ನಕ್ಷತ್ರದ #ಮೂರನೆಯ #ಪಾದವು_ಮಿಥುನಾಂಶವಾಗಿದ್ದು, ಬುಧ ಅಧಿಪತಿ ಆಗುತ್ತಾನೆ.ಜಾತಕರು ಸಕಲವ ವಿದ್ಯಾಪ್ರವೀಣರು, ವಿವೇಕಿಗಳು , ಸರ್ವಕಾರ್ಯ ಸಮರ್ಥರು ಆಗಿರುತ್ತಾರೆ. ಮಖಾ ನಕ್ಷತ್ರದ #ನಾಲ್ಕನೆಯ #ಪಾದವು #ಕಟಕಾಂಶವಾಗಿದ್ದು , ಚಂದ್ರನು ಅಧಿಪತಿಯಾಗುತ್ತಾನೆ. ಜಾತಕರು ಸದಾಚಾರಿಯು , ಪರೋಪಕಾರಿಯು , ಬುದ್ಧಿವಂತರು , ಮುಂದಾಲೋಚನೆಯುಳ್ಳವರು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು . ನಾಮಕರಣ , ಲಗ್ನ ಪತ್ರಿಕೆ , ವಿವಾಹ , ಹೊಸ ವ್ಯಾಪಾರ , ಪ್ರಯಾಣ , ಹೊಲ-ಗದ್ದೆ ಕೆಲಸಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು ಮಖಾ ನಕ್ಷತ್ರವು ಭಾನುವಾರ , ಸೋಮವಾರ, ಶುಕ್ರವಾರ ಬಂದರೆ #ಮೃತಯೋಗವಾಗುತ್ತದೆ . ಮಖಾ ನಕ್ಷತ್ರವು ಮಂಗಳವಾರ, ಬುಧವಾರ , ಶನಿವಾರ ಬಂದರೆ #ಸಿದ್ಧಿಯೋಗವಾಗುತ್ತದೆ . ಮಖಾ ನಕ್ಷತ್ರವು ಗುರುವಾರ ಬಂದರೆ #ಅಮೃತಸಿದ್ಧಿಯೋಗವಾಗುತ್ತದೆ .. #ಪುಬ್ಬಾ_ನಕ್ಷತ್ರ #ಪುಬ್ಬಾ ನಕ್ಷತ್ರದ ಇತರ ಹೆಸರುಗಳು ... ಭಗ , ಭಾಗ್ಯ , ಪೂರ್ವಫಲ್ಗುಣಿ , ಭಗಾಖ್ಯ *ಈ ನಕ್ಷತ್ರದ ದೇವತೆ* ...ಸೂರ್ಯ *ಅಧಿ ದೇವತೆ* .....ಪಿತೃದೇವತೆ *ಪ್ರತ್ಯಧಿ ದೇವತೆ*...ಭಗ #ಈ_ನಕ್ಷತ್ರದ_ಸ್ವರೂಪ... ಎರಡು ನಕ್ಷತ್ರಗಳಿಂದ ಕೂಡಿದ್ದು ಮಾನವನ ಕಣ್ಣಿನ ಆಕಾರದಲ್ಲಿದೆ. #ಈ_ನಕ್ಷತ್ರದ_ವಿವರಗಳು ..! ಈ ನಕ್ಷತ್ರವು ಸೂರ್ಯನಿಗೆ ಸೇರಿದೆ. ಸ್ತ್ರೀ ನಕ್ಷತ್ರವಾಗಿದೆ. ಇದರ ಅಧಿಪತಿ ಶುಕ್ರ. ದೆಶೆ - 20 ವರುಷಗಳು. ಗಣ- ಮನುಷ್ಯ , ಯೋನಿ-ಇಲಿ, ವೈರಿ-ಬೆಕ್ಕು , ರಜ್ಜು- ಕಟಿ , ನಾಡಿ-ಮಧ್ಯ , ವರ್ಣ-ಕ್ಷತ್ರಿಯ , ಹರಳು-ವಜ್ರ , ಅಕ್ಷರಗಳು-ಮೊ-ಟ-ಟೀ-ಟು. #ಈ_ನಕ್ಷತ್ರದವರ_ಸ್ವಭಾವ ... ಜಾತಕರು ಗಂಭೀರ ಸ್ವಭಾವದವರು , ಎತ್ತರ ಸದೃಢ ದೇಹವುಳ್ಳವರು , ತಲೆ ಎತ್ತಿ ನಡೆಯುವವರು , ಕಲ್ಮಶವಿಲ್ಲದವರು , ಸಾತ್ವಿಕರು , ಗೌರವಾನ್ವಿತರು , ಸೇವಾಸಕ್ತರು , ಉಪಕಾರಿಗಳು , ವಿನಯವಂತರು , ದಾನಿಗಳು ಆಗಿರುತ್ತಾರೆ. ಪುಬ್ಬಾ ನಕ್ಷತ್ರದ ಮೊದಲನೆಯ ಪಾದವು #ಸಿಂಹಾಂಶವಾಗಿದ್ದು , ರವಿ ಅದಕ್ಕೆ ಅಧಿಪತಿ. ಜಾತಕರು ಭೋಗಾಸಕ್ತರು , ಧೈರ್ಯವಂತರು, ಸಾಹಸಿಗಳು , ಸ್ವಾಭಿಮಾನಿಯು , ವೈರಿಗಳನ್ನು ನಿಗ್ರಹಿಸುವವರು ಆಗಿರುತ್ತಾರೆ. ಪುಬ್ಬಾ ನಕ್ಷತ್ರದ ಎರಡನೆಯ ಪಾದವು #ಕನ್ಯಾಂಶವಾಗಿದ್ದು ಬುಧ ಅದಕ್ಕೆ ಅಧಿಪತಿ ಆಗುತ್ತಾನೆ. ಜಾತಕರು ಅಹಿಂಸಾಪರರಾಗಿ , ಜಗಳ-ಯುದ್ಧಗಳನ್ನು ಇಷ್ಟಪಡುವುದಿಲ್ಲ. ಇವರ ಮನೋಧರ್ಮವು ಲೆಕ್ಕಾಚಾರವನ್ನು ಮಾಡುವಂತಹುದು. ಪುಬ್ಬಾ ನಕ್ಷತ್ರದ ಮೂರನೆಯ ಪಾದವು #ತುಲಾಂಶವಾಗಿದ್ದು , ಶುಕ್ರ ಅದಕ್ಕೆ ಅಧಿಪತಿ. ಜಾತಕರು ನ್ಯಾಯವಂತರು , ಕಲಾವಿಧರು , ತೇಜಸ್ವಿಗಳು , ಶಾಸ್ತ್ರಗಳನ್ನು ಬಲ್ಲವರು , ಜ್ಞಾನಿಯು ಆಗಿರುತ್ತಾರೆ. ಪುಬ್ಬಾ ನಕ್ಷತ್ರದ ನಾಲ್ಕನೆಯ ಪಾದವು #ವೃಶ್ಚಿಕಾಂಶವಾಗಿದ್ದು , ಕುಜನು ಅಧಿಪತಿಯು. ಜಾತಕರು ಕೋಪ ಉಳ್ಳವರು, ಹರಿತಾಗಿ ಮಾತನಾಡುವವರು , ಆಳವಾದ ಅಧ್ಯಯನ ಶೀಲರು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು ... ಪುಬ್ಬಾ ನಕ್ಷತ್ರವು #ಉಗ್ರ ನಕ್ಷತ್ರ ಎನಿಸಿಕೊಂಡಿದ್ದು ಉಗ್ರ ಕಾರ್ಯಗಳನ್ನು ಮಾತ್ರ ಈ ನಕ್ಷತ್ರದಲ್ಲಿ ಮಾಡಬಹುದಾಗಿದೆ. ಯುದ್ಧ ಮಾಡಲು , ಗಣಿ ತೋಡಲು , ಕಣ ಮಾಡುವುದಕ್ಕೆ ಒಳ್ಳೆಯದು. #ವಾರಾನುಸಾರ_ಯೋಗಫಲಗಳು ... ಪುಬ್ಬಾ ನಕ್ಷತ್ರವು ಭಾನುವಾರ , ಸೋಮವಾರ , ಮಂಗಳವಾರ , ಗುರುವಾರ , ಶುಕ್ರವಾರ, ಶನಿವಾರ ಬಂದರೆ #ಸಿದ್ಧಿಯೋಗವಾಗುತ್ತದೆ. ಪುಬ್ಬಾ ನಕ್ಷತ್ರವು ಬುಧವಾರ ಬಂದರೆ #ಅಮೃತ_ಸಿದ್ಧಿಯೋಗವಾಗುತ್ತದೆ . ಪುಬ್ಬಾ ನಕ್ಷತ್ರವು ಶನಿವಾರ ಬಂದು , ಅದು ತ್ರಯೋದಶಿಯಾದರೆ #ಉಗ್ರಯೋಗವಾಗುತ್ತದೆ #ಉತ್ತರಾ_ನಕ್ಷತ್ರ... #ಈ_ನಕ್ಷತ್ರದ_ಇತರ_ಹೆಸರುಗಳು .. ಉತ್ತರ , ಆರ್ಯಮ , ಆರ್ಯ ಉತ್ತರಾ ನಕ್ಷತ್ರದ ದೇವತೆ... *ಭಗ* ಅಧಿದೇವತೆ..... *ಸೂರ್ಯ* ಪ್ರತ್ಯಧಿ ದೇವತೆ... *ಆರ್ಯಮಣ* #ಈ_ನಕ್ಷತ್ರದ_ವಿವರಗಳು ... ಇದು ಸೂರ್ಯನಿಗೆ ಸೇರಿದ ನಕ್ಷತ್ರ. ಇದರ ಅಧಿಪತಿ - ರವಿ , ದೆಶೆ- 6 ವರುಷಗಳು. ಗಣ-ಮನುಷ್ಯ , ಯೋನಿ-ಆಕಳು , ರಜ್ಜು-ಉದರ , ನಾಡಿ-ಆದಿ , ವರ್ಣ- ಕ್ಷತ್ರಿಯ ಹರಳು- ಮಾಣಿಕ್ಯ , ಅಕ್ಷರಗಳು-ಟೆ-ಟೋ-ಪಾ-ಪೀ. ಉತ್ತರ ನಕ್ಷತ್ರವು ಸ್ಥಿರ ನಕ್ಷತ್ರ. ಈ ನಕ್ಷತ್ರದಲ್ಲಿ ಹುಟ್ಟಿದ ಜಾತಕರು ಗುಣ-ಗಾಂಭೀರ್ಯವುಳ್ಳವರು, ಕಲಾ ಪ್ರೇಮಿಗಳು, ನಮ್ರತೆ-ವಿಧೇಯತೆಯುಳ್ಳವರು, ಉಪಕಾರಿಗಳು , ಸರ್ವಕಾರ್ಯ ಸಮರ್ಥರು, ಶತ್ರುಗಳನ್ನು ಜಯಿಸುವವರು , ಅಪಾರ ಹಿಂಬಾಲಕರನ್ನು ಹೊಂದಿದವರು , ವಿದ್ಯಾವಂತರು , ಧೀರ್ಘಾಯುಷ್ಯವುಳ್ಳವರು ಆಗಿರುತ್ತಾರೆ. ಉತ್ತರಾ ನಕ್ಷತ್ರದ *ಮೊದಲನೆಯ ಪಾದವು #ಧನುರಾಂಶವಾಗಿದ್ದು* ಗುರು ಅಧಿಪತಿ ಆಗುತ್ತಾನೆ. ಜಾತಕನು ಐಶ್ವರ್ಯವಂತನು , ಗುಣವಂತನು , ಸದ್ವಿಚಾರಿಯು , ಸಹೃದಯಿಯು ಆಗಿರುತ್ತಾನೆ. ಉತ್ತರಾ ನಕ್ಷತ್ರದ *ಎರಡನೆಯ ಪಾದವು #ಮಕರಾಂಶವಾಗಿದ್ದು* ಶನಿಯು ಅಧಿಪತಿಯಾಗುತ್ತಾನೆ. ಜಾತಕರು ನಿಧಾನಸ್ಥರು, ಕೋಪಿಷ್ಟರು , ಅಲ್ಪ ಖರ್ಚಿನವರು , ಕೆಲಸಕಾರ್ಯಗಳನ್ನು ತಾವೇ ಮಾಡುವವರು ಆಗಿರುತ್ತಾರೆ. ಉತ್ತರಾ ನಕ್ಷತ್ರದ *ಮೂರನೆಯ ಪಾದವು #ಕುಂಭಾಂಶವಾಗಿದ್ದು , ಶನಿಯು ಅದಕ್ಕೆ ಅಧಿಪತಿ. ಜಾತಕನು ವ್ಯಸನಗಳಿಗೆ ಬೇಗ ಗುರಿಯಾಗುವನು. ಸಂಧರ್ಭಗಳು ಮನಸ್ಸನ್ನು ಕಠಿಣವಾಗಿಸುವುದು , ಮುಂದಾಲೋಚನೆ ಕಡಿಮೆ. ಉತ್ತರಾ ನಕ್ಷತ್ರದ *ನಾಲ್ಕನೆಯ ಪಾದವು #ಮೀನಾಂಶವಾಗಿದ್ದು ಗುರು ಅಧಿಪತಿ ಆಗುತ್ತಾನೆ. ಜಾತಕರು ಶ್ರೇಷ್ಠ ವ್ಯಕ್ತಿತ್ವವನ್ನು , ವಿಶಾಲ ಹೃದಯವುಳ್ಳವರು ಆಗುತ್ತಾರೆ. ಕೀರ್ತಿವಂತರು, ವಿದ್ವಾಂಸರು ಆಗುತ್ತಾರೆ. #ಉತ್ತರಾ_ನಕ್ಷತ್ರದಲ್ಲಿ #ಮಾಡಬಹುದಾದ_ಕಾರ್ಯಗಳು . ನಿಷೇಕ , ಪುಂಸವನ , ನಾಮಕರಣ , ಅನ್ನಪ್ರಾಶನ , ಕಿವಿ ಚುಚ್ಚುವುದು , ಉಪನಯನ , ವಿವಾಹ , ಗೃಹಪ್ರವೇಶ , ಪ್ರಯಾಣ , ಶಂಖುಸ್ಥಾಪನೆ..ಮುಂತಾದ ಎಲ್ಲಾ ಶುಭಕಾರ್ಯಗಳನ್ನು ಮಾಡಬಹುದು. #ವಾರಾನುಸಾರ_ಯೋಗಫಲಗಳು .. ಉತ್ತರಾ ನಕ್ಷತ್ರವು ಭಾನುವಾರ ಬಂದರೆ *#ಅಮೃತಸಿದ್ಧಿಯೋಗ . ಉತ್ತರಾ ನಕ್ಷತ್ರವು ಸೋಮವಾರ , ಶುಕ್ರವಾರ ಬಂದರೆ *#ಸಿದ್ಧಿಯೋಗ. ಉತ್ತರಾ ನಕ್ಷತ್ರವು ಮಂಗಳವಾರ, ಬುಧವಾರ ಬಂದರೆ #ಅಮೃತಯೋಗ . ಉತ್ತರಾ ನಕ್ಷತ್ರವು ಗುರುವಾರ ಬಂದರೆ *#ಮೃತಯೋಗ . ಉತ್ತರಾ ನಕ್ಷತ್ರವು ಶನಿವಾರ ಬಂದರೆ *#ಉತ್ಪಾತಯೋಗ . #ಹಸ್ತಾ_ನಕ್ಷತ್ರ .. #ಈ_ನಕ್ಷತ್ರದ_ಇತರ_ಹೆಸರುಗಳು ... ಸಾವಿತ್ರ , ಅರ್ಕ , ದಿವಾಕರ , ಸೂರ್ಯ #ಈ_ನಕ್ಷತ್ರದ_ದೇವತೆ ... ಆರ್ಯಮಣ *ಅಧಿದೇವತೆ* ..... ಭಗ *ಪ್ರತ್ಯಧಿ ದೇವತೆ* ...ತ್ವಷ್ಟ್ರಾರ #ಇದರ_ಸ್ವರೂಪ ...ಕೈಬೆರಳಿನಾಕಾರದಲಿ ಐದು ನಕ್ಷತ್ರಗಳು. #ವಿವರಗಳು ... ಇದು ಸೂರ್ಯನಿಗೆ ಸೇರಿದ ನಕ್ಷತ್ರ‌. ಇದರ ಅಧಿಪತಿ ಚಂದ್ರ. ಇದು ಸ್ತ್ರೀ ನಕ್ಷತ್ರವಾಗಿದ್ದು , ದೆಶೆ 10 ವರುಷಗಳು. ಗಣ- ದೇವ , ಯೋನಿ - ಎಮ್ಮೆ , ವೈರಿ- ಕುದುರೆ, ರಜ್ಜು - ಕಂಠ , ನಾಡಿ - ಆದಿ , ವರ್ಣ- ಶೂದ್ರ ಹರಳು- ಮುತ್ತು. ಅಕ್ಷರಗಳು..ಪು-ಷ-ಣ-ಠ ಈ ನಕ್ಷತ್ರದಲ್ಲಿ ಜನಿಸಿದವರು , ನಿತ್ಯ ಉತ್ಸಾಹಿಗಳು , ಆಕರ್ಷಣೆಯುಳ್ಳವರು , ಪರೋಪಕಾರಿಗಳು , ವಿಶಾಲ ಮನೋಭಾವದವರು , ಗುಪ್ತ ವಿದ್ಯೆಯಲ್ಲಿ ಆಸಕ್ತರು , ಸ್ನೇಹಪರರು , ಗೌರವಾನ್ವಿತರು ಆಗಿರುತ್ತಾರೆ. ಹಸ್ತಾ ನಕ್ಷತ್ರದ ಮೊದಲನೆಯ ಪಾದ *ಮೇಷಾಂಶವಾಗಿದ್ದು* , ಕುಜನು ಅಧಿಪತಿಯಾಗುತ್ತಾನೆ. ಕೋಪಿಷ್ಟರು , ಖಡಾಖಂಡಿತವಾಗಿ ಮಾತನಾಡುವವರು , ದೇಶಾಭಿಮಾನಿಗಳು , ಆಡಳಿತ ಸಲಹೆಗಾರರು , ಭೂವ್ಯವಹಾರ ಮಾಡುವವರು ಆಗಿರುತ್ತಾರೆ. ಹಸ್ತಾ ನಕ್ಷತ್ರದ ಎರಡನೆಯ ಪಾದ *ವೃಷಭಾಂಶವಾಗಿದ್ದು* , ಶುಕ್ರನು ಅಧಿಪತಿಯಾಗುತ್ತಾನೆ.ಜಾತಕರು ಧಾರ್ಮಿಕರು. ಗುಣಸಂಪನ್ನರು , ದೈವಭಕ್ತರು , ಸ್ನೇಹಜೀವಿಗಳು , ತಮಗೆ ತಾವೇ ಮೋಸಹೋಗುವವರು. ಹಸ್ತಾ ನಕ್ಷತ್ರದ ಮೂರನೆಯ ಪಾದ , *ಮಿಥುನಾಂಶವಾಗಿದ್ದು* ,ಬುಧ ಅಧಿಪತಿಯಾಗುತ್ತಾನೆ. ಜಾತಕರು ಬುದ್ಧಿವಂತರು , ವ್ಯಾಪಾರ ಮನೋಭಾವದವರು , ಮುಂದಾಲೋಚನೆ ಮಾಡುವವರು , ವಿಜ್ಞಾನಿಗಳು , ಸಕಲವಿಷಯಗಳಲ್ಲೂ ಆಸಕ್ತರು ಆಗಿರುತ್ತಾರೆ. ಹಸ್ತಾ ನಕ್ಷತ್ರದ ನಾಲ್ಕನೆಯ ಪಾದ , *ಕಟಕಾಂಶವಾಗಿದ್ದು* ಚಂದ್ರನು ಅಧಿಪತಿಯಾಗುತ್ತಾನೆ. ಜಾತಕರು ಪರೋಪಕಾರಿಯು , ಯಾತ್ರೆಗಳಲ್ಲಿ ಆಸಕ್ತಿ, ಸುಖಾಪೇಕ್ಷಿಗಳು , ತಾಯಿಯಲ್ಲಿ ಬಹಳ ಪ್ರೀತಿ ಉಳ್ಳವರು ಆಗಿರುತ್ತಾರೆ. #ಹಸ್ತಾ_ನಕ್ಷತ್ರದಲ್ಲಿ_ಮಾಡಬಹುದಾದ_ಕಾರ್ಯಗಳು . ಸೀಮಂತ , ಶಿಶುವಿಗೆ ಅನ್ನಪ್ರಾಶನ , ಕಿವಿ ಚುಚ್ಚುವುದು , ಚೌಲ , ಅಕ್ಷರಾಭ್ಯಾಸ , ಉಪನಯನ , ವಿವಾಹ , ವಧೂಪ್ರವೇಶ , ಹೊಸಬಟ್ಟೆ ಧರಿಸುವುದು , ಗೃಹ ಪ್ರವೇಶ , ನೂತನ ಅಂಗಡಿಯ ಪ್ರಾರಂಭ , ಸಂಗೀತ- ನಾಟ್ಯ ಪ್ರಾರಂಭ , ಕುಯಿಲು ಮಾಡುವುದು, ಪ್ರಯಾಣ ಹೊರಡುವುದು - ಈ ಕಾರ್ಯಗಳಿಗೆ ಶುಭಕರ‌ವಾಗಿರುತ್ತದೆ. #ವಾರಾನುಸಾರ_ಯೋಗಫಲಗಳು.. ಹಸ್ತಾ ನಕ್ಷತ್ರವು ಭಾನುವಾರ ಬಂದರೆ ಅಮೃತಸಿದ್ಧಿಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಭಾನುವಾರ ಬಂದಿದ್ದು , ಪಂಚಮೀ ತಿಥಿಯಿದ್ದರೆ , ವಿಷಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಸೋಮವಾರ , ಮಂಗಳವಾರ, ಗುರುವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಬುಧವಾರ, ಶನಿವಾರ ಬಂದರೆ ಮೃತಯೋಗವಾಗುತ್ತದೆ. ಹಸ್ತಾ ನಕ್ಷತ್ರವು ಶುಕ್ರವಾರ ಬಂದರೆ ಅಮೃತಯೋಗವಾಗುತ್ತದೆ. #ಚಿತ್ತಾ_ನಕ್ಷತ್ರ... *ಈ ನಕ್ಷತ್ರದ ಇತರ ಹೆಸರುಗಳು* ... ಇಂದ್ರ , ದೈವತ್ವ , ತ್ವಷ್ತ್ರ , ತ್ವಾಷ್ತ್ರ. *ಈ ನಕ್ಷತ್ರದ ದೇವತೆ* ..ತ್ವಷ್ಟ್ರಾರ *ಈ ನಕ್ಷತ್ರದ ಅಧಿದೇವತೆ* ...ಆರ್ಯಮಣ *ಈ ನಕ್ಷತ್ರದ ಪ್ರತ್ಯಧಿದೇವತೆ* ...ವಾಯು *ಇದರ ಸ್ವರೂಪ* ...ಮುತ್ತಿನಾಕಾರದ ಒಂದು ನಕ್ಷತ್ರ. *ಇತರ ವಿವರಗಳು* ಈ ನಕ್ಷತ್ರ ಸೂರ್ಯನಿಗೆ ಸೇರಿದ್ದು. ಸ್ತ್ರೀ ನಕ್ಷತ್ರ. ನಕ್ಷತ್ರಾಧಿಪತಿ - ಕುಜ , ದೆಶೆ - 7 ವರುಷಗಳು ಗಣ - ರಾಕ್ಷಸ , ಯೋನಿ - ಹುಲಿ , ವೈರಿ - ಆಕಳು ರಜ್ಜು - ಶಿರೋ , ನಾಡಿ - ಮಧ್ಯ , ವರ್ಣ - ಶೂದ್ರ ಹರಳು - ಹವಳ. ಅಕ್ಷರಗಳು - ಪೆ - ಪೋ - ರಾ - ರೀ ಈ ನಕ್ಷತ್ರದ ಜಾತಕರು ಧನಿಕರು , ವಿದ್ಯಾವಂತರು, ವಿನಯವಂತರು , ಸುಂದರರು, ಸ್ವಲ್ಪ ದುಡುಕು ಸ್ವಭಾವದವರು , ಸಾಹಸಿಗಳು, ಒಳ್ಳೆಯ ಮಾತನಾಡುವವರು , ಭೋಜನಪ್ರಿಯರು , ಕರ್ತವ್ಯನಿಷ್ಠರು , ಆಶ್ರಯದಾತರು , ಸರಳತನದವರು ಆಗಿರುತ್ತಾರೆ. ಚಿತ್ತಾ ನಕ್ಷತ್ರದ ಮೊದಲನೆಯ ಪಾದ *ಸಿಂಹಾಂಶವಾಗಿದ್ದು* , ರವಿ ಅದಕ್ಕೆ ಅಧಿಪತಿ. ಜಾತಕರು ಸನ್ಮಾನಪೂರ್ಣರು , ವೈರಿನಿಗ್ರಹಿಗಳು , ಸ್ವಾಭಿಮಾನಿಗಳು , ಸಾಹಸಿಗಳು , ಧೀರರು , ರಾಜಭೋಗಿಗಳು ಆಗಿರುತ್ತಾರೆ‌ ಚಿತ್ತಾ ನಕ್ಷತ್ರದ ಎರಡನೆಯ ಪಾದ *ಕನ್ಯಾಂಶವಾಗಿದ್ದು* , ಬುಧ ಅಧಿಪತಿಯಾಗುತ್ತಾನೆ. ಜಾತಕರು ಆಚಾರವಂತರು , ಅಹಿಂಸಾಪರರು , ಅಲ್ಪತೃಪ್ತರು , ವ್ಯಾಪಾರ ಮನೋಭಾವ ಉಳ್ಳವರು , ರೋಗಿಗಳು ಆಗಿರುತ್ತಾರೆ. ಚಿತ್ತಾ ನಕ್ಷತ್ರದ ಮೂರನೆಯ ಪಾದ *ತುಲಾಂಶವಾಗಿದ್ದು* , ಶುಕ್ರ ಅಧಿಪತಿಯಾಗುತ್ತಾನೆ. ಜಾತಕರು ವಿವೇಕಿಗಳು, ಉದಾರಿಗಳು , ಕಲಾವಿಧರು , ವೇದೋತ್ತಮರು , ಜ್ಞಾನಿಗಳು ಆಗಿರುತ್ತಾರೆ. ಚಿತ್ತಾ ನಕ್ಷತ್ರದ ನಾಲ್ಕನೆಯ ಪಾದ *ವೃಶ್ಚಿಕಾಂಶವಾಗಿದ್ದು* ಕುಜ ಅಧಿಪತಿಯಾಗುತ್ತಾನೆ. ಜಾತಕರಿಗೆ ವೈರಿಗಳಿದ್ದು, ಕಟುವಾಗಿ ಮಾತನಾಡುವವರು , ಆಳವಾದ ಅಭ್ಯಾಸ ಮಾಡುವವರು , ವೈದ್ಯಕೀಯದಲ್ಲಿ ಇಷ್ಟವುಳ್ಳವರು ಆಗಿರುತ್ತಾರೆ. *ವಾರಾನುಸಾರ ಯೋಗಫಲಗಳು* ಚಿತ್ತಾ ನಕ್ಷತ್ರವು ಭಾನುವಾರ , ಮಂಗಳವಾರ, ಬುಧವಾರ, ಗುರುವಾರ , ಶುಕ್ರವಾರ ಬಂದರೆ *ಸಿದ್ಧಿ ಯೋಗ* ವಾಗುತ್ತದೆ. ಚಿತ್ತಾ ನಕ್ಷತ್ರವು ಸೋಮವಾರ , ಬಿದಿಗೆಯಲ್ಲಿ ಬಂದರೆ *ಪ್ರಬಲನಷ್ಟಯೋಗ* ವಾಗುತ್ತದೆ. ಚಿತ್ತಾ ನಕ್ಷತ್ರವು ಶನಿವಾರ ಬಂದರೆ *ಮೃತಯೋಗವಾಗುತ್ತದೆ* . ಸಿದ್ಧಿ , ಅಮೃತ , ಅಮೃತಸಿದ್ಧಿ ಯೋಗಗಳನ್ನು , ಸಾಧಿಸಿ ಕೆಲಸಗಳನ್ನು ಮಾಡಿಕೊಂಡರೆ ಶ್ರೇಷ್ಠವಾಗಿರುತ್ತದೆ. #ಸ್ವಾತೀ_ನಕ್ಷತ್ರ... #ಈ_ನಕ್ಷತ್ರದ_ಇತರ_ಹೆಸರುಗಳು. ಸ್ವಾತೀ , ವಾಯು , ಪವನ , ಮರುತ್ , ಸಮೀರಣ. *ಈ ನಕ್ಷತ್ರದ ದೇವತೆ*... ವಾಯು *ಅಧಿದೇವತೆ* ....ತ್ವಷ್ಟ್ರಾರ *ಪ್ರತ್ಯಧಿದೇವತೆ* .‌..ಇಂದ್ರಾಗ್ನಿ #ಈ_ನಕ್ಷತ್ರದ_ಸ್ವರೂಪ ನೀಲಾಕಾರದ ಒಂದು ನಕ್ಷತ್ರ #ಇತರ_ವಿವರಗಳು... ಇದು ಸೂರ್ಯನಿಗೆ ಸೇರಿದ ನಕ್ಷತ್ರ. ಇದರ ಅಧಿಪತಿ *ರಾಹು* . ದೆಶೆ..18 ವರುಷಗಳು. ಗಣ-ದೇವ , ಯೋನಿ-ಎಮ್ಮೆ , ವೈರಿ- ಕುದುರೆ, ರಜ್ಜು - ಕಂಠ , ನಾಡಿ - ಅಂತ್ಯ ವರ್ಣ - ಕ್ಷತ್ರಿಯ , ಹರಳು - ಗೋಮೇಧಿಕ ಅಕ್ಷರಗಳು..ರು- ರೇ- ರೋ-ತ ಸ್ವಾತೀ ನಕ್ಷತ್ರದ ಜಾತಕರು ವಿದ್ಯಾವಂತರು, ಪ್ರಬಲ ಸಾಹಸಿಗರು, ಸಂಶೋಧಕರು , ಹೆಚ್ಚು ಮಾತನಾಡುವವರು , ಆಕರ್ಷಕ ಶರೀರವುಳ್ಳವರು , ಎತ್ತರ ಶರೀರ ಹಾಗೂ ಸುಂದರ ಕಣ್ಣುಗಳುಳ್ಳವರು, ನ್ಯಾಯ ಶಾಂತಿ ಜೀವನ ಇಷ್ಟಪಡುವವರು , ಎಲ್ಲರಿಗೂ ಬೇಕಾದವರು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ಮೊದಲನೆಯ ಪಾದವು* ಧನುರಾಂಶವಾಗಿದ್ದು , ಗುರು ಅದರ ಅಧಿಪತಿ ಆಗುತ್ತಾನೆ. ಜಾತಕರು ಧನವಂತರು, ಸಹೃದಯವಂತರು, ಕಾರ್ಯತತ್ಪರರು , ಸದಾಚಾರ ಸಂಪನ್ನರು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ಎರಡನೆಯ ಪಾದವು* ಮಕರಾಂಶವಾಗಿದ್ದು , ಶನಿಯು ಅದರ ಅಧಿಪತಿಯಾಗುತ್ತಾನೆ. ಕಷ್ಟಪಟ್ಟು ಕೆಲಸ ಮಾಡುವವರು , ಶೀಘ್ರಕೋಪಿಗಳು , ಚಿಕ್ಕಂದಿನಲ್ಲಿ ಬಹಳ ಕಷ್ಟಪಡುವವರು , ಹೆಚ್ಚು ಖರ್ಚುಮಾಡದವರು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ಮೂರನೆಯ ಪಾದವು* ಕುಂಭಾಂಶವಾಗಿದ್ದು , ಶನಿಯು ಅದಕ್ಕೆ ಅಧಿಪತಿ. ಜಾತಕರು ನಾಸ್ತಿಕರು , ಅತಿ ಕೋಪಿಷ್ಟರು , ಕಠೋರಮನಸ್ಸಿನವರು, ವ್ಯಸನಿಗಳು ಆಗಿರುತ್ತಾರೆ. *ಸ್ವಾತೀ ನಕ್ಷತ್ರದ* *ನಾಲ್ಕನೆಯ ಪಾದವು* ಮೀನಾಂಶವಾಗಿದ್ದು , ಗುರು ಅದರ ಅಧಿಪತಿ. ಜಾತಕರು ಸದ್ಗುಣವಂತರು , ಒಳ್ಳೆಯ ವ್ಯಕ್ತಿತ್ವದವರು , ವಿದ್ವಾಂಸರು, ಕೀರ್ತಿಶಾಲಿಗಳು , ವಿಶಾಲಹೃದಯದವರು ಆಗಿರುತ್ತಾರೆ. #ವಾರಾನುಸಾರ_ಯೋಗಫಲ ... *ಸ್ವಾತೀ ನಕ್ಷತ್ರವು* ಭಾನುವಾರ , ಮಂಗಳವಾರ , ಬುಧವಾರ , ಶುಕ್ರವಾರ ಬಂದರೆ *ಸಿದ್ಧಿಯೋಗ* ವಾಗುತ್ತದೆ. *ಸ್ವಾತೀ ನಕ್ಷತ್ರವು* ಸೋಮವಾರ , ಗುರುವಾರ, ಶನಿವಾರ ಬಂದರೆ *ಅಮೃತಯೋಗ* ವಾಗುತ್ತದೆ. #ಈ_ನಕ್ಷತ್ರದಲ್ಲಿ_ಮಾಡಬಹುದಾದ #ಕಾರ್ಯಗಳು ಸ್ವಾತೀ ನಕ್ಷತ್ರದ ದಿವಸ ಸೀಮಂತ , ನಾಮಕರಣ , ಹೊಸಬಟ್ಟೆ ಧಾರಣಾ , ಶಿಶುವನ್ನು ತೊಟ್ಟಿಲಿಗೆ ಹಾಕುವುದು, ಅನ್ನಪ್ರಾಶನ , ವಿದ್ಯಾರಂಭ , ಉಪನಯನ, ವಿವಾಹ , ವಧೂಪ್ರವೇಶ , ಕುಯಿಲು ಮಾಡುವುದು , ಲಲಿತಾಕಲಾ ಅಭ್ಯಾಸಾರಂಭ , ಪ್ರಯಾಣ , ಹೊಸವಾಹನ ತರುವುದು...ಮುಂತಾದ ಶುಭಕಾರ್ಯಗಳನ್ನು ಮಾಡಬಹುದು. #ವಿಶಾಖಾ_ನಕ್ಷತ್ರ ಈ ನಕ್ಷತ್ರದ ಇತರ ಹೆಸರುಗಳು.. #ಇಂದ್ರಾಗ್ನಿ_ದೈವತ್ವ_ವಿಶಾಖಭಂ_ಶೂರ್ಪ ಈ ನಕ್ಷತ್ರದ ದೇವತೆ.. #ಇಂದ್ರಾಗ್ನಿ ಅಧಿದೇವತೆ..... #ವಾಯು ಪ್ರತ್ಯಧಿದೇವತೆ... #ಮಿತ್ರ #ನಕ್ಷತ್ರದ_ಸ್ವರೂಪ ಚಕ್ರಾಕಾರದಲ್ಲಿರುವ ಐದು ನಕ್ಷತ್ರಗಳು. #ವಿವರಗಳು... ಇದು ಸೂರ್ಯನಿಗೆ ಸೇರಿದ ನಕ್ಷತ್ರ. ಇದರ ಅಧಿಪತಿ... #ಗುರು ದೆಶೆ.... #16_ವರುಷಗಳು ಗಣ... #ರಾಕ್ಷಸ ಯೋನಿ... #ಹುಲಿ ವೈರಿ.... #ಆಕಳು ನಾಡಿ... #ಅಂತ್ಯ ವರ್ಣ... #ಕ್ಷತ್ರಿಯ ಹರಳು... #ಪುಷ್ಯರಾಗ ಅಕ್ಷರಗಳು... #ತಿ_ತು_ತೇ_ತೋ #ವಿಶಾಖ_ನಕ್ಷತ್ರದ ಜಾತಕರು ಸಿರಿವಂತರು, ಎಲ್ಲೆಡೆ ಆದರಣೀಯರು, ಸಾತ್ವಿಕ ಗುಣವುಳ್ಳವರು , ಕಾಂತಿಯುತರು , ಕಾರ್ಯ ಸಮರ್ಥರು , ವಾಗ್ಮಿಗಳು , ಧೈರ್ಯವಂತರು , ಸಂಚಾರಿಗಳು , ಉಪಕಾರಿಗಳು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ಮೊದಲನೆಯ ಪಾದ ಮೇಷಾಂಶ* ವಾಗಿದ್ದು ಕುಜ ಅದಕ್ಕೆ ಅಧಿಪತಿ. ಜಾತಕರು ಒಮ್ಮೊಮ್ಮೆ ಜಗಳ ಮಾಡುವವರು, ಕೋಪಿಷ್ಟರು , ಶೂರರು , ಸಾಹಸಿಗಳು , ಸ್ವಾಭಿಮಾನಿಗಳು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ಎರಡನೆಯ ಪಾದ ವೃಷಭಾಂಶ* ವಾಗಿದ್ದು ಶುಕ್ರ ಅದಕ್ಕೆ ಅಧಿಪತಿ. ಜಾತಕರು ಧಾರ್ಮಿಕರು , ದೈವ ಭಕ್ತರು, ಗುಣಸಂಪನ್ನರು , ಭಾಗ್ಯಶಾಲಿಗಳು , ಅಪಾರ ಜ್ಞಾನವಂತರು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ಮೂರನೆಯ ಪಾದ ಮಿಥುನಾಂಶ* ವಾಗಿದ್ದು ಬುಧ ಅದಕ್ಕೆ ಅಧಿಪತಿ. ಜಾತಕರು ಧೈರ್ಯಶಾಲಿಗಳು , ಸಕಲವಿದ್ಯಾ ಪ್ರವೀಣರು , ವಿವೇಕಿಗಳು , ಕರುಣೆಯುಳ್ಳವರು ಆಗಿರುತ್ತಾರೆ. #ವಿಶಾಖ_ನಕ್ಷತ್ರದ ನಾಲ್ಕನೆಯ ಪಾದ ಕಟಕಾಂಶ* ವಾಗಿದ್ದು ಚಂದ್ರ ಅದಕ್ಕೆ ಅಧಿಪತಿ. ಜಾತಕರು ಪರೋಪಕಾರಿಗಳು , ಬುದ್ಧಿವಂತರು, ಸದಾಚಾರಿಯೂ , ಸುಖಾಪೇಕ್ಷಿಗಳು ಆಗಿರುತ್ತಾರೆ. #ವಿಶಾಖ_ನಕ್ಷತ್ರದಲ್ಲಿ ಮಾಡಬಹುದಾದ ಕಾರ್ಯಗಳು* ಶಿಶುವನ್ನು ತೊಟ್ಟಿಲಿಗೆ ಹಾಕುವುದು, ವಿದ್ಯಾರಂಭ, ಯಾಗಯಜ್ಞಗಳು , ಅಗ್ನಿಸಂಬಂಧ ಕಾರ್ಯ , ಮಂತ್ರಸಿದ್ದಿ , ಶಿಲ್ಪಕಲೆಗೆ ಆರಂಭ...ಮಾಡಬಹುದು. #ವಾರಾನುಸಾರ_ಯೋಗಫಲಗಳು ವಿಶಾಖ ನಕ್ಷತ್ರ ಭಾನುವಾರ ಬಂದರೆ #ಉತ್ಪಾತಯೋಗ ವಾಗುತ್ತದೆ. ಸೋಮವಾರ , ಮಂಗಳವಾರ ಬಂದರೆ #ಮೃತಯೋಗ ವಾಗುತ್ತದೆ. ಬುಧವಾರ , ಗುರುವಾರ , ಶುಕ್ರವಾರ , ಶನಿವಾರ ಬಂದರೆ #ಸಿದ್ಧಿಯೋಗ ವಾಗುತ್ತದೆ. #ವಿಶಾಖ ನಕ್ಷತ್ರದಲ್ಲಿ ಜನಿಸಿದವರು ತಮಗೆ ಕಷ್ಟಕಾಲ ಬಂದಿದೆಯೆಂದು ಅನಿಸಿದಾಗ ಶುಕ್ಲಪಕ್ಷದ ಶುಕ್ರವಾರಗಳಲ್ಲಿ ದೇವಿಪೂಜೆ, ಪಾರಾಯಣ, ಷೋಡಶೋಪಚಾರಗಳನ್ನು ಮಾಡಿ , ಅನ್ನದಾನವನ್ನು ಮಾಡಿದರೆ ಒಳ್ಳೆಯದಾಗುತ್ತದೆ #ಅನೂರಾಧಾ_ನಕ್ಷತ್ರ... *ಇದರ ಬೇರೆ ಹೆಸರುಗಳು* ... ಮಿತ್ರ , ಮೈತ್ರ *ಇದರ ದೇವತೆ* ... ಮಿತ್ರ *ಅಧಿದೇವತೆ* .. ಇಂದ್ರಾಗ್ನಿ *ಪ್ರತ್ಯಧಿ ದೇವತೆ* ...ಇಂದ್ರ *ಇದರ ಸ್ವರೂಪ* ... ಮೂರು ನಕ್ಷತ್ರಗಳು ಸೇರಿ ಛತ್ರಾಕಾರದಲ್ಲಿದೆ. *ವಿವರಗಳು*... ಇದು ಸೂರ್ಯನಿಗೆ ಸೇರಿದ ನಕ್ಷತ್ರವಾಗಿದೆ. ನಕ್ಷತ್ರಾಧಿಪತಿ... ಶನಿ ದೆಶೆ... 19 ವರುಷಗಳು ಗಣ...ದೇವ ಯೋನಿ...ಜಿಂಕೆ ವೈರಿ...ಶ್ವಾನ ರಜ್ಜು...ಕಟಿ ನಾಡಿ...ಮಧ್ಯ ವರ್ಣ...ಬ್ರಾಹ್ಮಣ ಹರಳು...ನೀಲ ಅಕ್ಷರಗಳು... ನಾ_ನಿ_ನು_ನೆ ಈ ನಕ್ಷತ್ರದ ಜಾತಕರು ಹುಟ್ಟಿದಾಗಕ್ಕಿಂತಲೂ ನಂತರದ ದಿನಗಳಲ್ಲಿ ಧನವಂತರಾಗುತ್ತಾರೆ. ಮೇಧಾವಿಗಳು , ಸನ್ಮಾರ್ಗಿಗಳು , ಆಕರ್ಷಕ ವ್ಯಕ್ತಿಗಳು , ಗುರು ಹಿರಿಯರಲ್ಲಿ ಭಯಭಕ್ತಿಯುಳ್ಳವರು ಆಗಿರುತ್ತಾರೆ. ಈ ನಕ್ಷತ್ರದ ಮೊದಲನೆಯ ಪಾದ ಸಿಂಹಾಂಶವಾಗಿದ್ದು ರವಿ ಅದಕ್ಕೆ ಅಧಿಪತಿ. ಜಾತಕರು ಸಾಹಸಿಗಳು , ಶೂರರು , ರಾಜಸನ್ಮಾತಿರು , ಸ್ವಾಭಿಮಾನಿಗಳು ಆಗಿರುತ್ತಾರೆ. ಈ ನಕ್ಷತ್ರದ ಎರಡನೆಯ ಪಾದ ಕನ್ಯಾಂಶವಾಗಿದ್ದು , ಬುಧ ಅಧಿಪತಿಯಾಗುತ್ತಾನೆ. ಜಾತಕರು ಸಮಯೋಚಿತವಾದ ವರ್ತನೆಯನ್ನು ಮಾಡುತ್ತಾರೆ.ಜಗಳಗಳನ್ನು ಇಷ್ಟಪಡದೆ , ಆಚಾರ-ವಿಚಾರಗಳ ಬಲ್ಲವರಾಗಿರುತ್ತಾರೆ. ಈ ನಕ್ಷತ್ರದ ಮೂರನೆಯ ಪಾದ ತುಲಾಂಶವಾಗಿದ್ದು , ಶುಕ್ರನು ಅಧಿಪತಿಯಾಗುತ್ತಾನೆ. ಜಾತಕರು ಧರ್ಮಪರರು, ಉದಾರಿಗಳು , ವೇದ-ಶಾಸ್ತ್ರ ಬಲ್ಲವರು , ಜ್ಞಾನಿಗಳು , ಕಲಾವಿದರು ಆಗಿರುತ್ತಾರೆ. ಈ ನಕ್ಷತ್ರದ ನಾಲ್ಕನೆಯ ಪಾದ ವೃಶ್ಚಿಕಾಂಶವಾಗಿದ್ದು , ಕುಜನು ಅದಕ್ಕೆ ಅಧಿಪತಿಯಾಗುತ್ತಾನೆ. ಜಾತಕರು ಕಟುಮಾತನಾಡುವವರು , ಸಾಹಸವಂತರು, ಕಷ್ಟಗಳನ್ನು ಎದುರಿಸುವವರು ಆಗಿರುತ್ತಾರೆ. *ಈ ನಕ್ಷತ್ರದಲ್ಲಿ ಮಾಡಬಹುದಾದ ಕಾರ್ಯಗಳು* ... ನಿಷೇಕ , ವಿವಾಹ , ಸೀಮಂತ , ನಾಮಕರಣ, ಶಿಶುವಿಗೆ ನಾಮಕರಣ, ಅನ್ನಪ್ರಾಶನ, ಚೌಲ, ಅಕ್ಷರಾಭ್ಯಾಸ , ಉಪನಯನ , ರೋಗಚಿಕಿತ್ಸೆ, ಸಂಗೀತ-ನಾಟ್ಯ ಆರಂಭ , ಪ್ರಯಾಣ , ಹೊಲದ ಕೆಲಸಗಳು , ಸಾಲ ಕೊಡುವುದು-ತರುವುದು ...ಮುಂತಾದ ಕಾರ್ಯಗಳನ್ನು ಮಾಡಬಹುದು. *ವಾರಾನುಸಾರ ಯೋಗಫಲಗಳು* ಈ ನಕ್ಷತ್ರವು ಭಾನುವಾರ ಬಂದರೆ ಮೃತಯೋಗವಾಗುತ್ತದೆ. ಈ ನಕ್ಷತ್ರವು ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಈ ನಕ್ಷತ್ರವು ಬುಧವಾರ ಬಂದರೆ ಅಮೃತ ಸಿದ್ಧಿ ಯೋಗವಾಗುತ್ತದೆ. ~~~~~~~~~~ *ಅನೂರಾಧ ನಕ್ಷತ್ರಗಳಲ್ಲಿ ಜನಿಸಿದವರು ತಮಗೆ ತೀವ್ರಕಷ್ಟಗಳು ಬಂದಿದೆ ಎಂದೆನಿಸಿದಾಗ ಶುಕ್ಲಪಕ್ಷದ ಮಂಗಳವಾರಗಳಲ್ಲಿ ಶ್ರೀ ಸುಬ್ರಹ್ಮಣ್ಯನ ಆರಾಧನೆ* , *ಅಭಿಷೇಕ ಹಾಗೂ ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರವನ್ನು ಪಾರಾಯಣ, ಅನ್ನದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ* . #ಜ್ಯೇಷ್ಠಾ_ನಕ್ಷತ್ರ ... #ಈ_ನಕ್ಷತ್ರದ_ಇತರ_ಹೆಸರುಗಳು ..‌. ಇಂದ್ರ , ಪುರೂಹೂತ , ಶತಮುಖ #ಈ_ನಕ್ಷತ್ರದ_ದೇವತೆ...ಇಂದ್ರ #ಅಧಿದೇವತೆ.. ಮಿತ್ರಃ #ಪ್ರತ್ಯಧಿದೇವತೆ.. ಅಸುರಃ *#ಇದರ _ಸ್ವರೂಪ ...ಮೂರು ನಕ್ಷತ್ರಗಳು ಕೂಡಿ ಛತ್ರಾಕಾರದಲ್ಲಿದೆ. #ವಿವರಗಳು ... ಈ ನಕ್ಷತ್ರ ಸೂರ್ಯನಿಗೆ ಸೇರಿದೆ. ಇದರ ಅಧಿಪತಿ...ಬುಧ ದೆಶೆ...17 ವರುಷಗಳು ಗಣ... ರಾಕ್ಷಸ ಯೋನಿ....ಜಿಂಕೆ ವೈರಿ....ಶ್ವಾನ ರಜ್ಜು...ಪಾದ ನಾಡಿ...ಆದಿ ವರ್ಣ...ಬ್ರಾಹ್ಮಣ ಹರಳು... ಪಚ್ಚೆ ಅಕ್ಷರಗಳು... ನೋ_ಯ_ಯಿ_ಯು ~~~~~~~~~~~~ ಈ ನಕ್ಷತ್ರದಲ್ಲಿ ಜನಿಸಿರುವವರು ವಿಶೇಷ ಜ್ಞಾನಿಗಳು , ವಿದ್ಯಾವಂತರು , ಸ್ನೇಹಪರರು , ಸತ್ಯವನ್ನು ನುಡಿಯುವವರು , ಧರ್ಮಾಭಿಮಾನಿಗಳು , ನ್ಯಾಯವಂತರು , ಒಳ್ಳೆಯ ವಾಗ್ಮಿಗಳು ಆಗಿರುತ್ತಾರೆ. ~~~~~~~~~~~~~ ಜ್ಯೇಷ್ಠಾ ನಕ್ಷತ್ರದ ಮೊದಲನೆಯ ಪಾದ ಧನುರಾಂಶವಾಗಿದ್ದು , ಗುರು ಅದಕ್ಕೆ ಅಧಿಪತಿ. ಜಾತಕರು ದಾನಿಗಳು , ಸದ್ಗುಣವಂತರು , ಸಹೃದಯರು , ಕಾರ್ಯತತ್ಪರು ಆಗಿರುತ್ತಾರೆ. ಈ ನಕ್ಷತ್ರದ ಎರಡನೆಯ ಪಾದ ಮಕರಾಂಶವಾಗಿದ್ದು , ಶನಿ ಅದಕ್ಕೆ ಅಧಿಪತಿ.ಈ ಜಾತಕರು ಹೆಚ್ಚು ಖರ್ಚು ಮಾಡದವರು, ಶೀಘ್ರಕೋಪಿಗಳು , ಚೇಷ್ಟೆ ಸ್ವಭಾವದವರು, ಹೆಚ್ಚು ಕೆಲಸ ಮಾಡುವವರು ಆಗಿರುತ್ತಾರೆ. ಈ ನಕ್ಷತ್ರದ ಮೂರನೆಯ ಪಾದ ಕುಂಭಾಂಶವಾಗಿದ್ದು , ಶನಿ ಅದಕ್ಕೆ ಅಧಿಪತಿ. ಈ ಜಾತಕರು ನಾಸ್ತಿಕರು , ಮುಂದಾಲೋಚನೆ ಇಲ್ಲದವರು , ವ್ಯಸನಿಗಳು , ಗುಟ್ಟು ಮಾಡುವವರು ಆಗಿರುತ್ತಾರೆ. ಈ ನಕ್ಷತ್ರದ ನಾಲ್ಕನೆಯ ಪಾದ ಮೀನಾಂಶವಾಗಿದ್ದು ,ಗುರು ಅದಕ್ಕೆ ಅಧಿಪತಿ. ಈ ಜಾತಕರು ಸದ್ಗುಣವುಳ್ಳವರು , ಶ್ರೇಷ್ಠ ವ್ಯಕ್ತಿತ್ವದವರು , ಉದಾರಿಗಳು , ವಿದ್ವಾಂಸರು ಆಗಿರುತ್ತಾರೆ. #ಈ_ನಕ್ಷತ್ರದಲ್ಲಿ #ಮಾಡಬಹುದಾದ #ಕಾರ್ಯಗಳು... ಶಿಶುವನ್ನು ತೊಟ್ಟಿಲಿಗೆ ಹಾಕುವುದು , ಸಂಗೀತ-ನಾಟ್ಯಕಲೆಯ ಪ್ರಾರಂಭ , ವಿಗ್ರಹ ಕೆತ್ತನೆ , ಪಶುಸಂಗೋಪನಾ ಕಾರ್ಯ, ಕೆಲವು ಭೀಷಣ ಕಾರ್ಯಗಳಿಗೆ ಉತ್ತಮವು, ಶಸ್ತಾಸ್ತ್ರ ಸಂಗ್ರಣೆ...ಇವುಗಳನ್ನು ಮಾಡಬಹುದು. ~~~~~~~~~~~~~ ಜ್ಯೇಷ್ಠಾ ನಕ್ಷತ್ರ ಭಾನುವಾರ ಮತ್ತು ಶುಕ್ರವಾರ ಬಂದರೆ ಮೃತಯೋಗವಾಗುತ್ತದೆ. ಸೋಮವಾರ, ಬುಧವಾರ ಮತ್ತು ಶನಿವಾರ ಬಂದರೆ ಸಿದ್ಧಿಯೋಗವಾಗುತ್ತದೆ. ಮಂಗಳವಾರ ಬಂದರೆ ಉತ್ಪಾತಯೋಗವಾಗುತ್ತದೆ. ಗುರುವಾರ ಬಂದರೆ ಪ್ರಭಲ ನಷ್ಟಯೋಗವಾಗುತ್ತದೆ. ~~~~~~~~~~~~~ ಜ್ಯೇಷ್ಠಾ ನಕ್ಷತ್ರದವರು ತಮಗೆ ತೀವ್ರವಾದ ಕಷ್ಟಗಳು ಬಂದೊದಗಿದೆ ಎಂದು ಅನಿಸಿದರೆ ಶುಕ್ಲ ಪಕ್ಷದ ಮಂಗಳವಾರಗಳಲ್ಲಿ ದುರ್ಗಾದೇವಿಯನ್ನು ಷೋಡಶೋಪಚಾರಗಳಿಂದ ಪೂಜಿಸಿ , ಪಾರಾಯಣ ಮಾಡಿ , ಅನ್ನದಾನ ಮಾಡತಕ್ಕದ್ದು.

3 comments:

  1. ಮುಂದಿನ ನಕ್ಷತ್ರಗಳ ವಿಚಾರ ತಿಳಿಸಿಕೊಡಿ 🙏🙏

    ReplyDelete
  2. ಮುಂದಿನ ನಕ್ಷತ್ರಗಳ ವಿಚಾರ ತಿಳಿಸಿಕೊಡಿ 🙏🙏

    ReplyDelete