Monday, 29 July 2019
ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು?
ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು?
ಕುಜ ಅಂದರೆ ಅಗ್ನಿ ತತ್ವದ ಗ್ರಹ. ಜನ್ಮ ಜಾತಕದಲ್ಲಿ ಯಾವ ಸ್ಥಾನಗಳಲ್ಲಿ ಕುಜ ಗ್ರಹ ಇದ್ದರೆ ದೋಷಪೂರಿತ ಆಗುತ್ತದೆ ಎಂಬುದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು. ಅದಕ್ಕೆ ಮುನ್ನ ಕುಜ ದೋಷ ಇದೆ ಎಂದಾಕ್ಷಣ ಭಯ ಪಡುವ ಅಗತ್ಯ ಇಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಧೈರ್ಯಗೆಡಬೇಡಿ.
ಭಾರತದಲ್ಲಿ ಜನಿಸುವವರ ಪೈಕಿ ಶೇಕಡಾ ಅರವತ್ತರಿಂದ ಎಪ್ಪತ್ತರಷ್ಟು ಮಂದಿಗೆ ಕುಜ ದೋಷಕಾರಿಯಾಗಿ ಇದ್ದೇ ಇರುತ್ತದೆ. ಅದೇ ರೀತಿಯಾಗಿ ದೋಷವು ಪರಿಹಾರ ಕೂಡ ಆಗಿರುತ್ತದೆ. ಆದರೆ ಆ ದೋಷ ಪರಿಹಾರ ಆಗಿದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಂಡರೆ ಆಯಿತು. ದೋಷಕಾರಿ ಹೌದು ಎಂದಾದರೆ ಅದನ್ನು ಪರಿಹರಿಸಿಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.
ಕುಜ ದೋಷ ಎಂದರೇನು? ಕುಜ ದೋಷವನ್ನು ಜನ್ಮ ಕುಂಡಲಿಯಲ್ಲಿನ ಲಗ್ನದಿಂದ ನೋಡಬೇಕು.
ಲಗ್ನದಿಂದ ೨, ೪, ೭, ೮ ಅಥವಾ ೧೨ನೇ ಸ್ಥಾನಗಳ ಪೈಕಿ ಯಾವುದೇ ಮನೆಯಲ್ಲಿ ಕುಜ ಗ್ರಹ ಇದ್ದರೆ ಅದು ದೋಷವಾಗಿ ಮಾರ್ಪಾಡಾಗುತ್ತದೆ. ಈ ರೀತಿ ದೋಷ ಇರುವವರಿಗೆ ಕುಜ ದೋಷ ಇರುವವರ ಜತೆಗೇ ವಿವಾಹ ಮಾಡಬೇಕು. ಆಗ ಅವರ ಜೀವನ ಚೆನ್ನಾಗಿರುತ್ತದೆ. ಸಂತಾನದಲ್ಲಿ ಸಮಸ್ಯೆಗಳಾಗುವುದಿಲ್ಲ. ಯಾವುದೇ ಸಮಸ್ಯೆಗಳಾಗುವುದಿಲ್ಲ. ಪುರುಷರ ಜಾತಕದಲ್ಲಿ ಲಗ್ನದಿಂದ ಎರಡು, ಏಳು ಅಥವಾ ಎಂಟರಲ್ಲಿ ಇರುವ ಕುಜ ಉಗ್ರ ಸ್ವರೂಪದ ದೋಷವನ್ನು ನೀಡಿದರೆ, ಸ್ತ್ರೀಯರಿಗೆ ಏಳು, ಎಂಟು ಹಾಗೂ ಹನ್ನೆರಡು ಕುಜ ದೋಷ ಉಗ್ರವಾದ ಸ್ಥಾನ. ಆದರೆ ಇದಕ್ಕೆ ಸ್ವಾಭಾವಿಕವಾಗಿಯೇ ಪರಿಹಾರಗಳಿರುತ್ತವೆ.
ಸ್ವಾಭಾವಿಕ ಪರಿಹಾರಗಳೇನು? ನಿಮ್ಮ ಜನ್ಮ ಜಾತಕದಲ್ಲಿ ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭ ರಾಶಿಗಳಲ್ಲಿ ಕುಜ ಗ್ರಹ ಇದ್ದರೆ, ಅದು ಲಗ್ನದಿಂದ 1, 4, 7, 8, 12ನೇ ಸ್ಥಾನಗಳೇ ಆಗಿದ್ದರೂ ದೋಷವು ಸ್ವಾಭಾವಿಕವಾಗಿಯೇ ನಿವಾರಣೆ ಆಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತ್ಯೇಕವಾಗಿ ದೋಷ ಪರಿಹಾರ ಪೂಜೆಗಳನ್ನೇನೂ ಮಾಡುವ ಅಗತ್ಯವಿಲ್ಲ. ಕರ್ಕಾಟಕ, ಸಿಂಹ ಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ. ವೃಶ್ಚಿಕ, ಮಿಥುನ ಲಗ್ನದವರಿಗೆ ಹನ್ನೆರಡನೇ ಸ್ಥಾನದಲ್ಲಿ ಕುಜನಿದ್ದರೂ ದೋಷವಿಲ್ಲ.
ಪರಿಹಾರ ಮಾಡಿಕೊಳ್ಳಲಿಲ್ಲ ಅಂದರೆ ಏನಾಗುತ್ತದೆ?
ವಿವಾಹದಲ್ಲಿ ಸಮಸ್ಯೆಗಳಾಗುತ್ತವೆ. ವಿವಾಹ ವಿಚ್ಛೇದನ ಆಗಬಹುದು. ದಂಪತಿ ಮಧ್ಯೆ ಮನಸ್ತಾಪ ಆಗುತ್ತದೆ. ಒಂದೇ ಮನೆಯಲ್ಲಿದ್ದರೂ ವೈವಾಹಿಕ ಸುಖ ಅನುಭವಿಸಲು ಆಗುವುದಿಲ್ಲ. ಸಂತಾನ ಸಮಸ್ಯೆಗಳಾಗುತ್ತವೆ. ಇನ್ನು ಕುಜನನ್ನು ಭೂಮಿ ಪುತ್ರ ಎನ್ನುತ್ತಾರೆ. ಭೂಮಿಗೆ ಸಂಬಂಧಿಸಿದ ಯಾವುದೇ ಕೆಲಸ ಕೈ ಹಿಡಿಯುವುದಿಲ್ಲ. ರಿಯಲ್ ಎಸ್ಟೇಟ್, ಕೃಷಿ ಪ್ರಗತಿ ಆಗುವುದಿಲ್ಲ. ಆದ್ದರಿಂದ ಕುಜ ದೋಷವುಳ್ಳವರ ಹೆಸರಲ್ಲಿ ಭೂಮಿ ನೋಂದಣಿ ಮಾಡಿಕೊಂಡರೆ ಅದು ಉಳಿಯದೆ, ಮಾರಾಟ ಆಗಿಬಿಡುತ್ತದೆ. ಕಾಯಿಲೆ ಕಾಣಿಸಿಕೊಂಡು, ಅದರ ನಿವಾರಣೆಗಾಗಿ ಹಣಕಾಸಿನ ಅಗತ್ಯ ಕಂಡುಬಂದು, ಆ ಭೂಮಿ ಮಾರಾಟ ಮಾಡಬೇಕಾದ ಸಂದರ್ಭ ಬರುತ್ತದೆ.
ಯಾವ ನಕ್ಷತ್ರಗಳಿಗೆ ಕುಜ ದೋಷ ಇರುವುದಿಲ್ಲ?
ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಉತ್ತರಾ, ಸ್ವಾತಿ, ಅನೂರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭಾದ್ರಾ ನಕ್ಷತ್ರದವರಿಗೆ ಕುಜ ದೋಷವಿದ್ದರೂ ಶಾಂತಿ ಮಾಡಿಕೊಳ್ಳುವ ಅಗತ್ಯವಿಲ್ಲ. ಕೆಲವರು ವಿವಾಹ ಜೀವನದಲ್ಲಿ ತೊಂದರೆ ಅನುಭವಿಸುತ್ತಲೇ ಇರುತ್ತಾರೆ. ಕೆಲವರು ನಲವತ್ತು-ಐವತ್ತನೇ ವರ್ಷದಲ್ಲಿ ವಿವಾಹ ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ಮಾಡುತ್ತಾರೆ. ಹಾಗಂತ ಕುಜ ದೋಷದ ಪರಿಣಾಮ ಕುಜ ದಶೆ, ಕುಜ ಭುಕ್ತಿ, ಗೋಚಾರದಲ್ಲಿ ನಿಮ್ಮ ನಕ್ಷತ್ರಕ್ಕೆ ಕುಜ ಪರಿಣಾಮ ಬೀರುವ ಸ್ಥಿತಿಯಲ್ಲಿ ಬಂದಾಗ ತೊಂದರೆ ಆಗುತ್ತದೆ.
ಕುಜ ದೋಷದ ಪರಿಹಾರ ಮಾರ್ಗಗಳೇನು?
ಕುಜನ ಗಾಯತ್ರಿ ಮಂತ್ರವಾದ ಧರುಸುತಾಯ ವಿದ್ಮಹೇ ಋಣಹರಾಯ ಧೀಮಹಿ ತನ್ನಃ ಕುಜಃ ಪ್ರಚೋದಯಾತ್ ಅನ್ನು ನಿತ್ಯವೂ ಹೇಳಿಕೊಂಡರೆ ಕುಜ ದೋಷದ ಪ್ರಭಾವ ಕಡಿಮೆ ಆಗುತ್ತದೆ. ಕೆಂಪು ವಸ್ತ್ರ ದಾನ ಮಾಡುವುದರಿಂದ, ಯಥಾ ಶಕ್ತಿ ತೊಗರಿಬೇಳೆ ಧಾನ್ಯ ಮಾಡುವುದರಿಂದ, ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದರ್ಶನ ಹಾಗೂ ಅಲ್ಲಿ ಸೇವೆ ಮಾಡುವುದರಿಂದ, ಲಕ್ಷ್ಮಿ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ಹಾಗೂ ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದ ಕೂಡ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಆದರೆ ಸ್ವಯಂ ವೈದ್ಯ ಹೇಗೆ ಅಪಾಯಕಾರಿ ಹಾಗೂ ನಿರುಪಯೋಗಿಯೋ ಸ್ವಯಂ ಜ್ಯೋತಿಷ್ಯವೂ ಹಾಗೆಯೇ. ಆದ್ದರಿಂದ ನಿಮ್ಮ ಜಾತಕವನ್ನು ಒಮ್ಮೆ ತಜ್ಞ ಜ್ಯೋತಿಷಿಗಳಲ್ಲಿ ತೋರಿಸಿ. ಯೋಗ-ದೋಷಗಳ ಬಗ್ಗೆ ತಿಳಿದುಕೊಳ್ಳಿ. ಯೋಗವನ್ನು ಸರಿಯಾದ ಸಮಯಕ್ಕೆ ಬಳಸಿಕೊಳ್ಳಿ. ದೋಷ ಪರಿಹಾರ ಮಾಡಿಸಿಕೊಳ್ಳಿ
ಕುಜ ದೋಷ ಪರಿಹಾರ ಸೂತ್ರಗಳು
ಪೌರ್ಣಮಿ ಅಮಾವಾಸ್ಯೆ, ಗ್ರಹಣ ಕಾಲದಲ್ಲಿ ಸೂರ್ಯೋದಯ-ಸೂರ್ಯಾಸ್ತಮ ಜನಿಸಿದರೆ ಕುಜ ದೋಷ
ಮದುವೆ ಎಂಬುದು ಮನುಷ್ಯನ ಜೀವನವನ್ನೇ ಬದಲಿಸುವ ಕಾಲ ಘಟ್ಟ. ಇದು ಎರಡು ಜೀವಗಳು ಸಮ್ಮಿಳಿತಗೊಳ್ಳುವ ಸೂಕಾರ್ಯ. ಇಲ್ಲಿ ಸ್ವಲ್ಪ ಎಡವಿದರೂ ಜೀವನ ಪರ್ಯಂತ ದುಃಖ ಪಡಬೇಕಾಗುತ್ತದೆ. ಇಂಥದರಲ್ಲಿ ಕುಜದೋಷ ಎಷ್ಟಿದೆ ಎಂದು ಇಬ್ಬರ ಜಾತಕವನ್ನು (ವಧು-ವರ) ಕೂಲಂಕಷವಾಗಿ ಪರಿಶೀಲಿಸಿ ವಿವಾಹ ಮಾಡುವುದರಿಂದ ದಾಂಪತ್ಯ ಜೀವನ ಸುಖವಾಗಿರಲು ಸಹಾಯವಾಗುತ್ತದೆ.
ದಾಂಪತ್ಯ ಯೋಗ ನಿರ್ಧರಿಸುವಾಗ ವಧು-ವರರ ದಿನಾದಿಕೂಟಗಳನ್ನು ಸೂಕ್ತವಾಗಿ ಪರಿಶೀಲಿಸುವುದರೊಂದಿಗೆ, ಜನ್ಮ ಜಾತಕದಲ್ಲಿ ಬರುವ ಕುಜದೋಷ, ವಿಷಕನ್ಯಾಯೋಗವನ್ನು ಪರಿಶೀಲಿಸಿ ವಿವಾಹವನ್ನು ನಿರ್ಧರಿಸಬೇಕಾಗಿರುವುದರಿಂದ ಈ ಕುಜದೋಷ ನೋಡಬೇಕು.
ಕುಜ ದೋಷಗಳು ಬರಲು ಕಾರಣ:
ಜನನ ಕಾಲದಲ್ಲಿ ಗ್ರಹಗಳು, ಉಪಗ್ರಹಗಳು, ಉಲ್ಕಶಿಲೆಗಳು, ಧೂಮಕೇತುಗಳು ಮತ್ತು ಯಾವುದಾದರೊಂದು ಕ್ಷುದ್ರವಸ್ತು ಸೂರ್ಯನಿಗೆ ಅಡ್ಡಬಂದಾಗ ಸಂಕ್ರಮಣ ಏರ್ಪಟ್ಟು ಸೂರ್ಯನಿಂದ ಎರಕ ಹೊಯ್ಯುವ ನಭೋಕಿರಣಗಳು ವಕ್ರಸ್ಥಿತಿಯಲ್ಲಿ ಪೃಥ್ವಿಯ ಮೇಲೆ ಬಿದ್ದಾಗ, ಜ್ಯೋತಿಷ್ಯಶಾಸ್ತ್ರದ ರೀತ್ಯ ತನ್ನ ಜನ್ಮಕುಂಡಲಿಯಲ್ಲಿ ಕುಜ (ಅಂಗಾರಕ) ಮತ್ತು ಶನಿಗ್ರಹಗಳು ಅಷ್ಟಮ ಸ್ಥಾನಕ್ಕೆ ಬಂದಾಗ, ನಿವಾಸ ಮತ್ತು ಪರಿಸರದ ನೈರ್ಮಲ್ಯ ಕೆಟ್ಟು ವಾಸ್ತು ದೋಷಗಳು ಉದ್ಭವಿಸಿದರೆ, ಕುಲದೇವರನ್ನು ಪೂಜಿಸುವುದು ಮರೆತರೆ, ಪೌರ್ಣಮಿ ಅಮಾವಾಸ್ಯೆ ಮತ್ತು ಗ್ರಹಣ ಕಾಲದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಮ ಸಮಯದಲ್ಲಿ ಜನಿಸಿದವರು ಕುಜ ದೋಷಕ್ಕೆ ತುತ್ತಾಗುತ್ತಾರೆ.
ಯಾವಾಗ ಹೇಗೆ?
ಮೊದಲನೆಯದಾಗಿ ಜನ್ಮ ಜಾತಕದಲ್ಲಿ ಬರುವ ಕುಜದೋಷ ಹಾಗೂ ಎರಡನೆಯದಾಗಿ ವಿವಾಹ ಸಮಯದ ಲಗ್ನಕುಂಡಲಿಯಲ್ಲಿ ದೋಷಯುತ ಮಂಗಳನಿರದಂತೆ ಎಚ್ಚರವಹಿಸಬೇಕು. ಮೂರನೆಯದಾಗಿ ಸ್ತ್ರೀಯ ಪ್ರಥಮ ರಜೋದರ್ಶನ ಕಾಲದಲ್ಲಿ ಸ್ಪಷ್ಟ ಲಗ್ನ ಕುಂಡಲಿಯಲ್ಲಿ ಕುಜದೋಷ ಅತಿ ಮಹತ್ವದ್ದು.
ಕುಜದೋಷ, ಮಂಗಳ ದೋಷ, ಅಂಗಾರಕ ದೋಷ ಎಂದರೆ ಎಲ್ಲವೂ ಒಂದೇ ಅರ್ಥ. ಕುಜನು ಲಗ್ನ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ ಮತ್ತು ವ್ಯಯ ಅಂದರೆ ಕುಜನ 1,2,4,5,7,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಹಾಗೂ ಈ ದೋಷವನ್ನು ಲಗ್ನದಿಂದ, ಚಂದ್ರನಿಂದ ಹಾಗೂ ಶುಕ್ರನಿಂದ ಸಹ ನೋಡಲಾಗುತ್ತದೆ. ಲಗ್ನವು ನಿರ್ದಿಷ್ಟ ಸಮಯದ, ವಿಶೇಷ ನಿರ್ದಿಷ್ಟ ಬಿಂದುವಾಗಿರುವುದರಿಂದ ಲಗ್ನದಿಂದ ನೋಡಬೇಕು. ಚಂದ್ರನು ಮನೋಕಾರಕನಾದ್ದರಿಂದ ಮತ್ತು ಲಗ್ನದ ನಂತರ ಇದನ್ನು ವಿಚಾರಿಸುವುದರಿಂದ ಚಂದ್ರನಿಂದ ನೋಡಲಾಗುತ್ತದೆ ಮತ್ತು ಶುಕ್ರನು ವೀರ್ಯ ಮತ್ತು ಕಳತ್ರ ಕಾರಕನಾದ್ದರಿಂದ ಆತನಿಂದ ಕುಜದೋಷ ಅವಲೋಕಿಸುವುದು ಯುಕ್ತಿಕರ.
ಆದರೆ, ಲಗ್ನಕ್ಕೆ ವಿಶೇಷ ಬಲವಿರುವುದರಿಂದ ಮಂಗಳ ದೋಷವನ್ನು ಲಗ್ನದಿಂದ ನೋಡುವುದು ಹೆಚ್ಚು ಫಲದಾಯಕ.
ಸೂಕ್ತ ಸಮಯ
ಈ ಕುಜದೋಷ ಉಂಟಾಗುವುದಕ್ಕೂ ಸಮಯವುಂಟು. ಕುಜ ಬಲಿಷ್ಠನಿದ್ದರೆ ಅಥವಾ ಮಾರಕನಾಗಿದ್ದರೆ 28ನೇ ವಯಸ್ಸಿನಿಂದ 32ನೇ ವಯೋಧರ್ವುದವರೆಗೆ ತನ್ನ ಇಷ್ಟ- ಅನಿಷ್ಟಾದಿ ಫಲಗಳನ್ನು ಕೊಡುವನು. ಅಂದಿನ ಗೋಚಾರ ಸ್ಥಾನ ಮತ್ತು ಅಷ್ಟಕವರ್ಗ ಬಿಂದುಗಳನ್ನು ಗಮನಿಸಬೇಕು. ಇದರೊಂದಿಗೆ ದಶಾಕಾಲ ಬಹಳ ಮಹತ್ವದಾಗಿದೆ. ಈ ಅನಿಷ್ಟ ಫಲಗಳು ದಶಾಕಾಲದಲ್ಲೇ ಹೆಚ್ಚಾಗಿ ನೀಡುತ್ತಾನೆ.
ಒಬ್ಬೊಬ್ಬರ ಜಾತಕದಲ್ಲಿ ಕುಜದಶಾ ಬರದೇ ಹೋಗಬಹುದುದು. ಆಗ ಕುಜನ ಅನಿಷ್ಟ ಫಲಗಳು ಕಡಿಮೆಯಾಗುತ್ತದೆ.
ವಿವಾಹ ಸಮಯದಲ್ಲಿ ವಧು- ವರರ ಸಾಲಾವಳಿಗೆ ತೆಗೆದುಕೊಂಡಾಗ ಗಂಡಿನ ಜಾತಕದಲ್ಲಿ
(ವರ) ಕುಜನ 2,5,7ನೇ ಭಾವಗಳಲ್ಲಿ ಕುಜನಿದ್ದರೆ ಬಲಿಷ್ಠ ಕುಜದೋಷ. ಗಂಡಿನ ಜಾತಕದಲ್ಲಿ ಹೆಚ್ಚು ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದರೆ ವಿವಾಹ ಮಾಡಬಹುದು. ಆದರೆ, ಗಂಡಿನ ಜಾತಕದಲ್ಲಿ ಕಡಿಮೆ ಕುಜದೋಷವಿದ್ದು, ಹೆಣ್ಣಿನ ಜಾತಕದಲ್ಲಿ ಹೆಚ್ಚಿನ ಕುಜದೋಷವಿದ್ದರೆ ವಿವಾಹ ಮಾಡಬಾರದು.
ಕುಜದೋಷ ಯಾವಾಗ ಇಲ್ಲ?
ಕಟಕ ಮತ್ತು ಸಿಂಹ ಲಗ್ನದವರಿಗೆ ಕುಜದೋಷವಿಲ್ಲ. ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಷಾಢಾ, ಉತ್ತರಾಷಾಢಾ, ಶ್ರವಣ, ಉತ್ತರಾಭಾದ್ರ, ರೇವತಿ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಕುಜದೋಷವಿಲ್ಲ.
ವಧು-ವರರಿಬ್ಬರ ಜಾತಕದಲ್ಲಿ ಕುಜದೋಷವಿದ್ದರೆ ಕುಜದೋಷ ಪರಿಹಾರವಾಗುತ್ತದೆ. ಶನಿ 4,6,8,12ನೇ ಭಾವಗಳಲ್ಲಿ ಸ್ಥಿತನಾಗಿದ್ದರೆ ಕುಜ ದೋಷ ಬರುವುದಿಲ್ಲ.
ಪಂಚಮಹಾಪುರುಷ ಯೋಗದಲ್ಲಿ ರುಚಿಕಯೋಗವಿದ್ದರೆ ಕುಜದೋಷವಿಲ್ಲ.
ರವಿ, ಚಂದ್ರ, ಕುಜ ಉಚ್ಚರಾಶಿಗಳಲ್ಲಿದ್ದರೆ ಹಾಗೂ ಕುಜನು ಶನಿರಾಹು, ರವಿಯ ಯುತಿಯಲ್ಲಿದ್ದರೂ ಕುಜದೋಷವಿಲ್ಲ.
ದೋಷ ಪರಿಹಾರ
* ಶುದ್ಧ ಪಾತ್ರೆಯಲ್ಲಿ ನೀರನ್ನು ಕಾಯಿಸಿ ಪೌರ್ಣಮಿಯ ಪ್ರಾತಃಕಾಲ 8-15 ರಿಂದ 8-45 ನಿಮಿಷಗಳ ಕಾಲಮಾನದಲ್ಲಿ ಸೂರ್ಯನ ಕಿರಣಗಳು ಬೀಳುವಂತೆ ಹೊರಗಿನ ವರಾಂಡದಲ್ಲಿ ಇಟ್ಟು ತಣ್ಣಗಾದ ನಂತರ ಶುದ್ಧ ಪಾತ್ರೆಯಲ್ಲಿ ಶೇಖರಿಸಿ 9 ದಿನಗಳ ಕಾಲ ದಿನಕ್ಕೆ ಮೂರು ಹೊತ್ತು ಒಂದು ಗ್ಲಾಸ್ ನೀರನ್ನು ಸೇವಿಸಿ ಒಂದು
ಬಾಳೆಹಣ್ಣು ತಿನ್ನುವುದು. ಅದೇ ನೀರಿನಿಂದ ಸಂಜ್ಞಾ ಸಮಯದಲ್ಲಿ ನಿವಾಸದಲ್ಲಿ ಬೇವಿನ ಸೊಪ್ಪಿನಿಂದ ಪ್ರೋಕ್ಷ ಮಾಡುವುದು.
* ಮನೆಯ ಯಜಮಾನ ಮತ್ತು ನೂತನ ದಂಪತಿಯು ನಿವಾಸದಲ್ಲಿ 3 ಪೌರ್ಣಮಿಗಳಂದು ಮಲಗಬಾರದು.ಈ ಪರ್ವಕಾಲದಲ್ಲಿ ಮದ್ಯಪಾನ ಮತ್ತು ಮಾಂಸಾಹಾರ ಸೇವಿಸಬಾರದು. ನಿವಾಸದಲ್ಲಿ ಹಬ್ಬದ ವಾತಾವರಣ ಇರಬೇಕು.
* ಪ್ರಾತಃಕಾಲ ನಿವಾಸದ ಪ್ರಧಾನ ಬಾಗಿಲನ್ನು ಕೆಂಪು ಗುಲಾಬಿ ಹೂವುಗಳಿಂದ ಪೂಜಿಸಿ; ನಂತರ ಹಲವು ಹೂವುಗಳ ದಳಗಳನ್ನು ಬಿಡಿಸಿ ತಮ್ಮ ಶುದ್ಧ ಕೈಯಲ್ಲಿ ಇಟ್ಟು ಸೂರ್ಯನ ಕಿರಣಗಳನ್ನು ಬೀಳಿಸಿ ನಂತರ ತಮ್ಮ ದೇವರ ಮೇಲೆ ಹಾಕುವುದು.
4) ಮೂರು ಶನಿವಾರ ಅಥವಾ ಮಂಗಳವಾರದಂದು ಪ್ರಾತಃಕಾಲ 7.45ಕ್ಕೆ ದೇವರ ಕೋಣೆಯಲ್ಲಿ ಎರಡು ದೀಪಗಳನ್ನು ಬೆಳಗಿಸಿ ನಂತರ ಸೂರ್ಯನಿಗೆ ನಮಸ್ಕರಿ ಸೂರ್ಯನು ಕೆಂಪು ವರ್ಣಕ್ಕೆ ಬರುವವರೆಗೆ ನೋಡಿ ನಂತರ ದೇವರ ಕೋಣೆಯಲ್ಲಿರುವ ದೀಪಗಳ ಪ್ರಜ್ವಲನಾ ಕಿರಣಗಳನ್ನು ನೋಡಿದಾಗ ಕಂಡರಿಯದ ಕೆಂಪು ವರ್ಣಕ್ಕೆ ತಿರುಗುತ್ತವೆ. ಹಲವು ಸಲ ಪ್ರಯತ್ನಿಸುವುದು ನಂತರ ಹತ್ತಿರದಲ್ಲಿರುವ ನವಗ್ರಹಗಳಿಗೆ ಪೂಜೆ ಸಲ್ಲಿಸಿ ಅಂದು ಸಂಜೆ ಉಪವಾಸ ವ್ರತ ಆಚರಿಸಿ, ವಸ್ತ್ರದಾನ ಮಾಡುವುದು.
ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ- ಮದುವೆಯ ಸಂದರ್ಭದಲ್ಲಿ ಸಮಸ್ಯೆ ಬರಲಿದೆ!!
ಭಾರತವು ಮೂಢನಂಬಿಕೆಗಳ ತವರು ಎಂದರೆ ತಪ್ಪಾಗದು. ಯಾಕೆಂದರೆ ಭಾರತವು ವಿವಿಧ ಧರ್ಮಗಳಲ್ಲಿ ಹಲವಾರು ರೀತಿಯ ಮೂಢನಂಬಿಕೆಗಳು ಇವೆ. ಇಂದಿಗೂ ಕೆಲವೊಂದು ನಂಬಿಕೆಗಳು ಹಾಗೆ ಉಳಿದುಕೊಂಡಿದೆ. ಇದರಲ್ಲಿ ಕೆಲವು ವೈಜ್ಞಾನಿಕ ಕಾರಣಗಳು ಇರುವಂತಹ ನಂಬಿಕೆಗಳು. ಆದರೆ ಇನ್ನು ಕೆಲವು ನಂಬಿಕೆಗಳಿಗೆ ಯಾವುದೇ ತಲೆಬುಡವೇ ಇರಲ್ಲ. ಉದಾಹರಣೆಗೆ ಮಾಂಗಲಿಕ ಇರುವಂತಹ ಮಹಿಳೆ ಅಥವಾ ಪುರುಷರು ಮಾಂಗಲಿಕ ಇಲ್ಲದೆ ಇರುವಂತವರನ್ನು ಮದುವೆಯಾದರೆ ಆಗ ಕೆಲವೇ ದಿನಗಳಲ್ಲಿ ಸಂಗಾತಿಯು ಮರಣವನ್ನಪ್ಪುವರು ಎಂದು ಹೇಳಲಾಗುತ್ತದೆ. ಅದರಲ್ಲೂ ಪುರುಷ ಪ್ರಧಾನವಾಗಿರುವಂತಹ ನಮ್ಮ ದೇಶದಲ್ಲಿ ಮಹಿಳೆಯ ಜಾತಕದಲ್ಲಿ ಮಾಂಗಲಿಕ ದೋಷವಿದ್ದರೆ (ಕುಜ ದೋಷ) ಆಗ ಆಕೆಗೆ ಮದುವೆಯೆನ್ನುವುದು ಕನಸಿನ ಮಾತೇ ಸರಿ.
ವೈದಿಕ ಜ್ಯೋತಿಷ್ಯದ ಪ್ರಕಾರ ಮಂಗಲಿಕ ದೋಷವನ್ನು ಜ್ಯೋತಿಷ್ಯದಲ್ಲಿ ತುಂಬಾ ಗಂಭೀರ ದೋಷವೆಂದು ಪರಿಗಣಿಸಲಾಗಿದೆ.
ಇದು ಒಬ್ಬ ವ್ಯಕ್ತಿಯ ಜೀವನ, ಮದುವೆ ಮೇಲೆ ಪರಿಣಾಮ ಬೀರುವುದು ಮತ್ತು ಆತನಿಗೆ ದುರಾದೃಷ್ಟವನ್ನೇ ಉಂಟು ಮಾಡುವುದು. ಮಾಂಗಲಿಕ ದೋಷವನ್ನು ಕುಜ ದೋಷ, ಭೋಮ ದೋಷ ಅಥವಾ ಅಂಗಾರಖ ದೋಷವೆಂದು ಕರೆಯಲಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವು ವ್ಯಕ್ತಿಯ ಕುಂಡಲಿಯ 1,2,4,7,8 ಮತ್ತು 12ನೇ ಮನೆಯಲ್ಲಿ ಕುಳಿತಿರುವುದು. 12 ಮನೆಗಳಲ್ಲಿ ಈ ಮೇಲಿನ ಯಾವುದಾದರೂ ಒಂದು ಮನೆಯಲ್ಲಿ ಮಂಗಳ ಗ್ರಹವು ಇದ್ದರೆ ಆಗ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಬಾಲಿವುಡ್ ನಟಿ ಐಶ್ವರ್ಯ ರೈಗೆ ಮಾಂಗಲಿಕ ದೋಷವಿತ್ತು ಎಂದು ಹೇಳಲಾಗಿತ್ತು. ಆಕೆ ಅಭಿಷೇಕ್ ಬಚ್ಚನ್ ನ್ನು ಮದುವೆಯಾಗುವ ಮೊದಲು ಒಂದು ಬಾಳೆಗಿಡಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇದರಿಂದ ಮಾಂಗಲಿಕ ದೋಷವು ಕಡಿಮೆಯಾಗುವುದು. ಮಾಂಗಲಿಕ ದೋಷದ ಬಗ್ಗೆ ತಿಳಿಯಬೇಕಾದರೆ ನಾವು ಇದರ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಅದಕ್ಕೆ ಇರುವಂತಹ ಪರಿಹಾರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
ಮಾಂಗಲಿಕ ದೋಷ ವೆಂದರೇನು? ಕುಂಡಲಿಯಲ್ಲಿ 12 ಮನೆಗಳು ಇರುವುದು. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು 1,2,4,7, 8 ಮತ್ತು 12ನೇ ಮನೆಯಲ್ಲಿ ಇದ್ದರೆ ಆಗ ಆ ವ್ಯಕ್ತಿಗೆ ಮಾಂಗಲಿಕ ದೋಷವಿದೆ ಎಂದು ಹೇಳಬಹುದು. ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮಂಗಳ ಗ್ರಹದ ನಕಾರಾತ್ಮಕ ಪರಿಣಾಮವು ಇರುವುದು. ಇದು ಮದುವೆ ವಿಚಾರದಲ್ಲಿ ಹೆಚ್ಚಿನ ಪ್ರಭಾವ ಬೀರುವುದು. ಯಾಕೆಂದರೆ ಮದುವೆ ಸಂದರ್ಭದಲ್ಲಿ ಹುಡುಗ ಹಾಗೂ ಹುಡುಗಿಯ ಕುಂಡಲಿಯು ಹೊಂದಾಣಿಕೆಯಾಗಬೇಕು. ಮದುವೆಗೆ ಮೊದಲು ಜ್ಯೋತಿಷಿಗಳು ಕುಂಡಲಿಯಲ್ಲಿ ಮಂಗಳ ದೋಷವಿದೆಯಾ ಎಂದು ನೋಡುವರು ಮತ್ತು ಇದರ ಬಳಿಕ ಮದುವೆ ಹೊಂದಾಣಿಕೆಯಾಗುವುದೇ ಎಂದು ತಿಳಿಸುವರು.
ಮಾಂಗಲಿಕ ದೋಷದ ಗುಣಲಕ್ಷಣಗಳು
ಕುಂಡಲಿಯಲ್ಲಿ ಎರಡೂ ಲಿಂಗದವರಿಗೆ ಮಾಂಗಲಿಕ ದೋಷವು ಕಾಣಿಸಬಹುದು. ಮಂಗಳ ಗ್ರಹವು ತುಂಬಾ ಆಕ್ರಮಣಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಬೇಗನೆ ತಾಳ್ಮೆ ಕಳೆದುಕೊಳ್ಳುವರು. ಯಾವುದೇ ಸಮಸ್ಯೆಯನ್ನು ತಡೆಯಲು ಮಾಂಗಲಿಕ ದೋಷವಿರುವವರು ತಮ್ಮಲ್ಲಿರುವ ಬೆಂಕಿಯಂತಹ ಶಕ್ತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಾಂಗಲಿಕ ದೋಷದಿಂದಾಗಿ ಮದುವೆಯಲ್ಲಿ ವಿಳಂಬವಾಗಬಹುದು. ಮಾಂಗಲಿಕ ದೋಷವು ಮದುವೆಯಲ್ಲಿ ಒತ್ತಡ ಮತ್ತು ಅಪಸ್ವರ ಕಾಣಿಸುವಂತೆ ಮಾಡುವುದು. ಮಾಂಗಲಿಕ ದೋಷವಿರುವಂತಹ ಇಬ್ಬರು ಮದುವೆಯಾದರೆ ಗ್ರಹ ಪ್ರಭಾವ ತಗ್ಗಿಸಬಹುದು. ಹಿಂದಿನ ಜನ್ಮದಲ್ಲಿ ಸಂಗಾತಿಯೊಂದಿಗೆ ಸರಿಯಾಗಿ ವರ್ತಿಸದೆ ಇರುವಂತಹ ವ್ಯಕ್ತಿಗಳಿಗೆ ಮಾಂಗಲಿಕ ದೋಷವು ಬರುವುದು.
ಸಮಸ್ಯೆಯುಂಟು ಮಾಡುವನು? ಮಂಗಳನು ಮೊದಲ ಮನೆಯಲ್ಲಿ ಇರುವಾಗ
ವೈವಾಹಿಕ ಜೀವನದಲ್ಲಿ ಜಗಳ ಹಾಗು ಹಿಂಸೆಯು ಉಂಟಾಗುವುದು. ಎರಡನೇ ಮನೆಯಲ್ಲಿ ಮಂಗಳನಿದ್ದರೆ ಆಗ ವ್ಯಕ್ತಿಯ ಮದುವೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಸಮಸ್ಯೆಯಾಗಬಹುದು. ನಾಲ್ಕನೇ ಮನೆಯಲ್ಲಿ ಮಂಗಳನಿದ್ದರೆ ಆಗ ವೃತ್ತಿಯಲ್ಲಿ ಆ ವ್ಯಕ್ತಿಗೆ ಯಶಸ್ಸು ಸಿಗದು. ಉದ್ಯೋಗವನ್ನು ಪದೇ ಪದೇ ಬದಲಿಸುತ್ತಿರುತ್ತಾನೆ
ಮಂಗಳನು 7ನೇ ಮನೆಯಲ್ಲಿ ಇದ್ದರೆ ಮಂಗಳನು 7ನೇ ಮನೆಯಲ್ಲಿ ಇದ್ದರೆ ಆ ವ್ಯಕ್ತಿಯಲ್ಲಿನ ಶಕ್ತಿಯು ಕ್ರೋಧದಲ್ಲಿ ವ್ಯಯವಾಗುವುದು. ತನ್ನಲ್ಲಿರುವಂತಹ ಅಧಿಕಾರ ಸ್ಥಾಪಿಸುವ ಗುಣದಿಂದಾಗಿ ಕುಟುಂಬದವರೊಂದಿಗೆ ಸರಿಯಾದ ಹೊಂದಾಣಿಕೆಯಾಗದು. 8ನೇ ಮನೆಯಲ್ಲಿ ಮಂಗಳನು ಕುಳಿತಿದ್ದರೆ ಆಗ ವ್ಯಕ್ತಿಯ ಷೋಷಕರಿಂದ ದೂರವಾಗುವನು ಮತ್ತು ಪಿತ್ರಾರ್ಜಿತ ಆಸ್ತಿ ಕಳೆದುಕೊಳ್ಳುವನು. ಮಂಗಳನು 12ನೇ ಮನೆಯಲ್ಲಿ ಇದ್ದರೆ ಆಗ ವ್ಯಕ್ತಿ ಮಾನಸಿಕ ಸಮಸ್ಯೆ, ಆರ್ಥಿಕ ನಷ್ಟ ಮತ್ತು ಶತ್ರುಗಳು ಹೆಚ್ಚಾಗುವರು.
ಮಾಂಗಲಿಕ ದೋಷ ನಿವಾರಣೆಗೆ ಕೆಲವು ವಿಧಾನಗಳು
ಮಾಂಗಲಿಕ ದೋಷವಿರುವ ಹುಡುಗ ಮತ್ತು ಹುಡುಗಿ ಮದುವೆಯಾದರೆ ದೋಷವು ದೂರವಾಗುವುದು. ಮಾಂಗಲಿಕ ದೋಷ ನಿವಾರಣೆ ಮಾಡಲು ಕುಂಭ ವಿವಾಹವಾದರೆ ಸಾಧ್ಯವಾಗುವುದು. ಈ ವಿಧದ ಮದುವೆಯಲ್ಲಿ ಮಾಂಗಲಿಕ ದೋಷವಿರುವ ವ್ಯಕ್ತಿಗೆ ಮರದೊಂದಿಗೆ ಮದುವೆ ಮಾಡಿ ದೋಷ ದೂರ ಮಾಡಲಾಗುವುದು. ಮಾಂಗಲಿಕ ದೋಷ ನಿವಾರಣೆ ಮಾಡಲು ಪ್ರತೀ ಮಂಗಳವಾರ ಉಪವಾಸ ಮಾಡಬೇಕು. ಉಪವಾಸದ ವೇಳೆ ಮಾಂಗಲಿಕ ದೋಷವಿರುವವರು ಕೇವಲ ತೊಗರಿ ಬೇಳೆ ಮಾತ್ರ ಸೇವಿಸಬೇಕು.
ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿ
ಮಾಂಗಲಿಕ ಇರುವವರು ಮಂಗಳವಾರದಂದು ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ ಪಠಿಸಿದರೆ ದೋಷ ದೂರವಾಗುವುದು. ಮಂಗಳವಾರದಂದು ಪೂಜೆಗಳನ್ನು ಮಾಡುವುದು ಮತ್ತು ಆಂಜನೇಯ ದೇವಸ್ಥಾನಕ್ಕೆ ಹೋಗುವುದರಿಂದ ಮಾಂಗಲಿಕ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು. ಜ್ಯೋತಿಷಿಗಳ ಪ್ರಕಾರ ಮಾಂಗಲಿಕ ದೋಷವಿರುವ ವ್ಯಕ್ತಿಗಳು ಕೆಂಪು ಹವಳವಿರುವ ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ ಧರಿಸಬೇಕು. ಮಾಂಗಲಿಕ ದೋಷವಿರುವಂತಹ ವ್ಯಕ್ತಿಗಳು 28ರ ಹರೆಯದ ಬಳಿಕ ಮದುವೆಯಾಗಬೇಕು. ಯಾಕೆಂದರೆ ವಯಸ್ಸಾದಂತೆ ದೋಷದ ಪ್ರಭಾವ ಕೂಡ ತಗ್ಗುವುದು.
ಜಾತಕದಲ್ಲಿ ಕಾಡುವ ಕುಜ ದೋಷ! ಹೀಗೂ ಸಮಸ್ಯೆ ಬರಬಹುದು!
ಜಾತಕದಲ್ಲಿ ಕೆಲವೊಂದು ದೋಷಗಳು ಇದ್ದರೆ ಮದುವೆಯಾಗಲು ಹಿಂಜರಿಯುತ್ತಾರೆ. ಅದರಲ್ಲೂ ಮಂಗಳಿಕ ದೋಷ ಪ್ರಮುಖವಾಗಿರುವಂತದ್ದು. ಸಂಸ್ಕೃತದಲ್ಲಿ ಮಂಗಳ ಗ್ರಹಕ್ಕೆ ಮಂಗಳವೆಂದು ಕರೆಯಲಾಗುತ್ತದೆ. ಜಾತಕದಲ್ಲಿ ಮಂಗಳವು 1, 2, 4, 7, 8 ಮತ್ತು 12ನೇ ಮನೆಯಲ್ಲಿದ್ದಾಗ ಇದನ್ನು ಮಂಗಳ ದೋಷವೆಂದು ಕರೆಯಲಾಗುವುದು ಮತ್ತು ಜನರು ಇದನ್ನು ಮಂಗಳಿಕ ಎಂದು ಕರೆಯುತ್ತಾರೆ. ಈ ದೋಷವು ಯಾರಿಗೂ ಬರಬಹುದು. ಗೌರವ, ಅಹಂ, ಸ್ವಾಭಿಮಾನ ಮತ್ತು ಶಕ್ತಿಯ ಸಂಕೇತವೇ ಮಂಗಳ. ಆದರೆ ಮಂಗಳ ದೋಷದಲ್ಲಿ ಸಂಬಂಧವು ದುರ್ಬಲವಾಗುವ ಸಾಧ್ಯತೆಗಳು ಹೆಚ್ಚಿರುವುದು. ಇದನ್ನು ಸರಿಯಾಗಿ ಬಳಸಿಕೊಂಡರೆ ಮಂಗಳ ದೋಷವು ಶಕ್ತಿಯನ್ನು ನೀಡುವುದು. ಜಾತಕದಲ್ಲಿ ಮಂಗಳ ದೋಷವಿದ್ದರೆ ಅದರಿಂದ ವೈವಾಹಿಕ ಜೀವನ, ಮಾನಸಿಕ ಆರೋಗ್ಯ ಮತ್ತು ಹಣಕಾಸಿನ ಮೇಲೆ ಪರಿಣಾಮ ಉಂಟಾಗಬಹುದು.
ಮಂಗಳ ದೋಷದ ಪರಿಣಾಮ ಜನ್ಮ ಜಾತಕದಲ್ಲಿ ಮಂಗಳಗ್ರಹ ಯಾವ ಮನೆಯಲ್ಲಿದೆ ಎಂದು ಅರ್ಥಮಾಡಿಕೊಂಡರೆ ಮಂಗಳ ದೋಷದ ಪರಿಣಾಮವು ತಿಳಿದುಬರುವುದು.
12ರಲ್ಲಿ ಆರು ಮನೆಗಳಲ್ಲಿ ಮಂಗಳವಿದ್ದರೆ ಆಗ ಅದು ಮಂಗಳನ ಕೆಟ್ಟ ಪ್ರಭಾವವೆಂದು ಭಾವಿಸಲಾಗುತ್ತದೆ.
ಒಂದನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಜಾತಕದಲ್ಲಿ
ಒಂದನೇ ಮನೆಯಲ್ಲಿ ಮಂಗಳ ಗ್ರಹವಿರುವವರು ತುಂಬಾ ಕ್ಷೋಬೆಗೊಳಗಾದವರು,
ಆಕ್ರಮಣಕಾರಿಗಳು ಮತ್ತು ಅಸಭ್ಯರಾಗಿರುವರು. ಜೀವನದಲ್ಲಿ ಸಂತೋಷ ಕಳೆದುಕೊಳ್ಳುವುದು
1ನೇ ಮನೆಯಲ್ಲಿ ಮಂಗಳವಿರುವ 4ನೇ ಅಂಶದ ಲಕ್ಷಣ. ಇದರ 7ನೇ ಅಂಶವೆಂದರೆ ಚಿಂತೆ ಹಾಗೂ ತೊಂದರೆಯುಂಟು ಮಾಡಿ ಪತಿ ಮತ್ತು ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡಬಹುದು.
8ನೇ ಅಂಶವೆಂದರೆ ನಿಮ್ಮ ಸುಖ ಜೀವನದ ಮೇಲೆ ಅಪಾಯದ ಸಂಭವವಿದೆ ಎನ್ನುವ ಸೂಚನೆ.
2ನೇ ಮನೆಯಲ್ಲಿ ಮಂಗಳನ ದೋಷ ಎರಡನೇ ಮನೆಯು ಸಂಪತ್ತು ಮತ್ತು ಕುಟುಂಬದ ಮನೆಯಾಗಿದೆ.
ಮಂಗಳವು ಈ ಗ್ರಹದಲ್ಲಿ ಇದ್ದರೆ ಅದರಿಂದ ಆ ವ್ಯಕ್ತಿಯ ಕುಟುಂಬದೊಂದಿಗೆ ಸಂಬಂಧದ ಮೇಲೆ ಪರಿಣಾಮ ಬೀರುವುದು.
ಇದು ಸಂಗಾತಿಗಳನ್ನು ಬೇರ್ಪಡಿಸಬಹುದು ಅಥವಾ ಪದೇ ಪದೇ ಜಗಳ ಮತ್ತು ಆತಂಕ ಉಂಟು ಮಾಡಬಹುದು.
2ನೇ ಮನೆಯಲ್ಲಿರುವ ಮಂಗಳನು ವ್ಯಕ್ತಿಯ ಕುಂಡಲಿಯಲ್ಲಿ 5, 8 ಮತ್ತು 9ನೇ ಮನೆಯ ಮೇಲೂ ಪ್ರಭಾವ ಬೀರಬಹುದು.
ಮಂಗಳಿಕ ಹೊಂದಿರುವ ವ್ಯಕ್ತಿಯ ಮಕ್ಕಳ ಮೇಲೂ ಇದರ ಪರಿಣಾಮವಾಗಬಹುದು.
4ನೇ ಮನೆಯಲ್ಲಿ ಮಂಗಳ ಮಂಗಳವು ನಾಲ್ಕನೇ ಮನೆಯಲ್ಲಿದ್ದರೆ ಅದರ ಅಂಶವು ಕುಂಡಲಿಯ 7, 10 ಮತ್ತು 11ನೇ ಮನೆಯಲ್ಲಿರುವುದು.
ಮಂಗಳವು ನಾಲ್ಕನೇ ಮನೆಯಲ್ಲಿ ಇದ್ದರೆ ಅದರಿಂದ ಸ್ಥಿರ ಸಂಪತ್ತು ಮತ್ತು ಸಮೃದ್ಧಿ ಸಿಗುವುದು.
ಆದರೆ ವೈವಾಹಿಕ ಜೀವನದಲ್ಲಿ ತೊಂದರೆ ಕಾಣಿಸುವುದು. ಕುಂಡಲಿಯ ವ್ಯಕ್ತಿಯು ಹೊಂದಾಣಿಕೆ ಮಾಡಿಕೊಳ್ಳದೆ ಇರುವುದರಿಂದ ಹೀಗೆ ಆಗುವುದು.
ಆದರೆ ಇದರಿಂದ ಸಂಬಂಧಿಗಳಿಗೆ ಯಾವುದೇ ಅಪಾಯವಿಲ್ಲ.
7ನೇ ಮನೆಯಲ್ಲಿ ಮಂಗಳ ದೋಷ ಇದು ಮದುವೆ ಮತ್ತು ಜತೆಗಾರಿಕೆಯ ಮನೆಯಾಗಿದೆ.
7ನೇ ಮನೆಯಲ್ಲಿ ಮಂಗಳ ದೋಷವಿದ್ದರೆ ಅದರಿಂದ ಮದುವೆಗೆ ಹಾನಿಯಾಗಬಹುದು.
ಈ ದೋಷವಿರುವವರು ಅನಾರೋಗ್ಯ ಹೊಂದಿರುವ ಪತ್ನಿಯನ್ನು ಪಡೆಯಬಹುದು ಅಥವಾ ಮಹಿಳೆಯರಿಗೆ ತುಂಬಾ ಕೋಪಿಷ್ಠ ಪತಿ ಸಿಗಬಹುದು.
8ನೇ ಮನೆಯಲ್ಲಿ ಮಂಗಳ ದೋಷ ಇದು ಜೀವನದಲ್ಲಿ ಸುಖದುಃಖ ಮತ್ತು ಪರಿಸ್ಥಿತಿಯ ಸಂಕೇತ.
ಈ ಮನೆಯಲ್ಲಿ ಮಂಗಳ ದೋಷವಿದ್ದರೆ ಅದು ತುಂಬಾ ಕೆಟ್ಟದು. ಇದು ವೈವಾಹಿಕ ಜೀವನದಲ್ಲಿ ಖಿನ್ನತೆ ಉಂಟು ಮಾಡಬಹುದು.
ಆರ್ಥಿಕ ಪರಿಸ್ಥಿತಿ, ಸಂಗಾತಿಯ ಅನಾರೋಗ್ಯ ಮತ್ತು ಇತರ ಕೆಲವೊಂದು ಕಾರಣಗಳಿಂದ ಖಿನ್ನತೆ ಉಂಟಾಗಬಹುದು.
ಕವಚಮ್:
ನೀಲಾಂಬರಶ್ಮಿರಃ ಪಾತು ಲಲಾಟಂ
ಲೋಕವಂದಿತಃ | ಚಕ್ಷುಷೀ ಪಾತು ಮೇ
ರಾಹುಃ ಶ್ರೋತ್ರಮರ್ಧಶರೀರವಾನ್||
ನಾಸಿಕೇ ಮೇ ಕರಾಳಸ್ಯ ಶ್ಯೂಲಪಾಣಿರ್ಮುಖಂ
ಮಮ | ಜಿಹ್ವಾಂ ಮೇ ಸಿಂಹಿಕಾಸೂನುಃ
ಕಣ್ಠಂಮೇ ಕಷ್ಟನಾಶನಃ||
ಫಲ ಶೃತಿಃ ಯ ಇದಂ ಕವಚಂ ದಿವ್ಯಂ
ಸರ್ವಶತೃವಿನಾಶನಮ್|
ಭೂತಪ್ರೇತಪಿಶಾಚಾನಾಂ ನಾಶನಂ
ಸರ್ವ ಸಿದ್ದಿದಮ್||
ಸರ್ವ ರೋಗ ಹರಂಚೈವ ಸರ್ವ ಸಂಪತ್ಪದಂ
ಶುಭಮ್| ಭುಕ್ತಿ ಮುಕ್ತಿಪ್ರದಂ ನೃಣಾಂ
ಸರ್ವಸೌಭಾಗ್ಯವರ್ಧನಮ್||
"ಧರ ಸುತಾಯ ವಿದ್ಮಹೇ | ಋಣ ಹರಾಯ ಧೀಮಹೀ | ತನ್ನೋ ಕುಜಃ ಪ್ರಚೋದಯಾತ್"
*ಸಕಲ ರೀತಿಯ ಸರ್ಪದೋಷಕ್ಕೆ(ಕಾಳಸರ್ಪ ದೋಷಕ್ಕೆ ಈ ಸಣ್ಣ ಪ್ರಯೋಗ ಮಾಡಿದರೆ ಖಚಿತ ವಾಗಿ
ಎಲ್ಲಾ ರೀತಿಯ ದೋಷಗಳು ಪರಿಹಾರವಾಗುತ್ತವೆ*
ಹುಣ್ಣಿಮೆಯಂದು ಬೆಳಗ್ಗೆ ಸ್ನಾನಾ ನಂತರ ನಾಲ್ಕು ಬಾವಿಗಳಿಂದ ಬೇರೆ ಬೇರೆ ಪಾತ್ರೆ ಅಥವ ಬಿಂದಿಗೆಗಳಲ್ಲಿ ನೀರನ್ನು ತರಬೇಕು ತಂದು ಯಾವುದಾದರು ಮೃತ್ತಿಕೆಯ ಬಳಿ ಈ ನಾಲ್ಕು ಕೊಡ ನೀರಿನೊಂದಿಗೆ ಮೃತ್ತಿಕೆಗೆ ಪೂಜಿಸಬೇಕು ಈ ಮಂತ್ರ ಹೇಳುತ್ತಾ ೨೧ ಪ್ರದಕ್ಷಿಣೆ ಹಾಕಿ ನೀರಿನೊಂದಿಗೆ ಮನೆಗೆ ಹಿಂತಿರುಗುಗಬೇಕು ಈ ಕಾರ್ಯ ಬೆಳಗ್ಗೆ ೭ಗಂಟೆಯೊಳಗೆ ಆಗಬೇಕು ಪೂಜಾ ನಂತರ ಮೃತ್ತಿಕೆಯಿಂದ ಸ್ವಲ್ಪ ಮಣ್ಣನ್ನು ಜೊತೆಯಲ್ಲಿ ತರಬೇಕು.ಮನೆಗೆ ಬಂದು ಆದಿನ ಸಂಜೆ ವರೆಗೂ ಉಪವಾಸ ಮಾಡಬೇಕು (ಹಾಲನ್ನು ಸೇವಿಸ ಬಹುದು ಆದರೆ ಬೇರೆ ಏನನ್ನೂ ಅದಕ್ಕೆ ಸೇರಿಸಿ ಸೇವಿಸಬಾರದು.) ಸಂಜೆ ನೀವು ತಂದಿರುವ ಮಣ್ಣನ್ನು ನೀವು ಪೂಜಿಸಿ ತಂದಿರುವ ಸ್ವಲ್ಪನೀರಿನಲ್ಲಿ ಬೆರೆಸಿ ನಿಮ್ಮ ಮೈಮೇಲಿರುವ ಎಲ್ಲಾ ಬಟ್ಟೆಯನ್ನು ತೆಗೆದಿಟ್ಟು ದೇಹದ ಎಲ್ಲಾ ಬಾಗಕ್ಕೂ ಈ ಮಣ್ಣಿನಿಂದ ಲೇಪನ ಮಾಡಿಕೊಳ್ಳಬೇಕು ಈಗ ನಿರ್ವಾಣದಲ್ಲೇ ಇರುವಂತೆಯೇ ಮಣ್ಣನ್ನು ಹಚ್ಚಿಕೊಂಡಮೇಲೆ ಕುಳಿತುಕೊಂಡು ಈ ಕೆಳಗಿನ ಮಂತ್ರವನ್ನು ೧೦೮ ಸಲ ಜಪಿಸಿ ನನ್ನ ಸಕಲ ಸರ್ಪದೋಷವು ನಿವಾರಣೆಯಾಗಲಿ ಎಂದು ಪ್ರಾಥನೆ ಮಾಡಿಕೊಂಡು ನೀವು ಪೂಜೆಮಾಡಿತಂದ ನಾಲ್ಕು ಬಾವಿಯ ನೀರನ್ನು ಉಪಯೋಗಿಸಿ ಸ್ನಾನ ಮಾಡುವುದು. ಆನಂತರ ನಿಮ್ಮ ಕುಲದೇವತಾರಾಧನೆ ಮಾಡಿ ಬೇಳೆಯಿಂದ ಮಾಡಿದ ಊಟವನ್ನು ಸೇವಿಸಬೇಕು.ಅನಾಥರಿಗೆ,ಬಡವರಿಗೆ ಯತಾ ಶಕ್ತಿದಾನ ಮಾಡುವುದು.
ಓಂ ನಮೋ ಭಗವತೇ ಕಾಮರೂಪಿಣೇ ಮಹಾಬಲಾಯ ನಾಗಾಧಿಪತಯೇ ಸ್ವಾಹಾಃ
ಅಶ್ವತ್ಥ ಮರವನ್ನು ಪೂಜಿಸಿದರೆ ಕಾಲಸರ್ಪ ದೋಷ ನಿವಾರಣೆಯಾಗುವುದು. ಹಿಂದೂ ಧರ್ಮಿಯರಿಗೆ ಅಶ್ವತ್ಥ ಮರವೆಂದರೆ ತುಂಬಾ ಪೂಜ್ಯನೀಯವಾಗಿದೆ. ಅಶ್ವತ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೂ ಬಳಸಲಾಗುತ್ತದೆ. ಶನಿವಾರದಂದು ಅಶ್ವತ್ಥ ಮರಕ್ಕೆ ಸುತ್ತು ಬಂದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜತೆಗೆ ಲಕ್ಷ್ಮೀಯು ನೆಲೆಸಿರುತ್ತಾಳೆ ಎಂದು ಪುರಾಣಗಳು ಹೇಳುತ್ತವೆ.
-Sangraha mahiti(krupe F B)
Subscribe to:
Post Comments (Atom)
No comments:
Post a Comment