Tuesday, 22 October 2019

ಶುಕ್ರ ನ ಪರಿಚಯ

ಶುಕ್ರ - ವಜ್ರದಂಗಳದ ಒಂದರಿವು...! ಸೌರವ್ಯೂಹದಲ್ಲಿ ಸೂರ್ಯನಿಗೆ, ಬುಧ ಗ್ರಹದ ನಂತರ ತಿರುಗಾಡುವ ಎರಡನೆಯ ಗ್ರಹ *ಶುಕ್ರ* . ಸೂರ್ಯೋದಯ , ಸೂರ್ಯಾಸ್ತದ ಸಮಯದಲ್ಲಿ ಹೆಚ್ಚಾಗಿ ಕಾಣುವುದು. [ Morning Star , Evening Star - ಎಂದೇ ಪ್ರಖ್ಯಾತ ] ನಾಸಾ ಪ್ರಕಾರ *ಶುಕ್ರ* ಗ್ರಹವು ಭೂಮಿಯಿಂದ 261 ಮಿಲಿಯನ್ ಕಿ.ಮೀ.ದೂರದಲ್ಲಿದೆ. ಭೂಮಿಗೂ , ಶುಕ್ರನಿಗೂ ಪರಿಭ್ರಮಣದ ವ್ಯತ್ಯಾಸ ಬಹಳ ಇರುವುದರಿಂದ , ಅವೆರಡರ ಅಂತರದಲ್ಲಿ ಹಲವು ಬಾರಿ ವ್ಯತ್ಯಯಗಳಾಗುವುದು. #ಶುಕ್ರ ಗ್ರಹದ ಸುತ್ತಲೂ ದಟ್ಟವಾದ ಮೋಡಗಳಿದ್ದು , ಎಲ್ಲಾ ಸೂರ್ಯನ ಕಿರಣಗಳನ್ನು ಪ್ರತಿಫಲನ ಮಾಡುತ್ತದೆ. ಹಾಗಾಗಿ ವಜ್ರದ ತರಹ ಅತ್ಯಂತ ಪ್ರಕಾಶಮಾನವಾಗಿ ಕಾಣುವುದು. ಐಹಿಕ ಸುಖ-ಸಂಪತ್ತುಗಳಿಗೆ ಬಹಳ ಮಾನ್ಯತೆ ಕೊಡುವ ಮನುಜರಿಗೆ *ಶುಕ್ರ* ಎಂದರೆ ಕಿವಿ ನಿಮಿರುವುದು. ಶುಕ್ರದಶೆ ಎಂದರೆ ಮುಗಿಯಿತು. ತಾನೊಬ್ಬ ಆಗರ್ಭ ಶ್ರೀಮಂತನಾಗುವ ಕನಸನ್ನು ಕಾಣತೊಡಗುವನು. ಅದರಲ್ಲಿ ತಪ್ಪೇನಿಲ್ಲ. ಏಕೆಂದರೆ ಆ ಎಲ್ಲಾ ರಜೋಗುಣಗಳಿಗೆ ಶುಕ್ರನೇ ಕಾರಕನು. ಪೌರಾಣಿಕವಾಗಿ #ಶುಕ್ರ ನ ಪರಿಚಯ....! ಇವನು ಭೃಗುಪುತ್ರ. ಅಸುರರ ಗುರು. ಧರ್ಮಶಾಸ್ತ್ರಗಳನ್ನು ಅಭ್ಯಸಿಸಿ , ಮೃತಸಂಜೀವಿನಿ ಮಂತ್ರವನ್ನು ವಶಪಡಿಸಿಕೊಂಡವನು. ದೈತ್ಯರೆಲ್ಲಾ ಶರಣು ಬಂದಾಗ ಅವರನ್ನು ರಕ್ಷಿಸುತ್ತಿದ್ದ ಮಹಾಋಷಿ. ಮಹಾತೇಜಸ್ಸಿನಿಂದ ಕೂಡಿದ್ದವನು , ಕಾಂತಿಯುಕ್ತನು. #ಶುಕ್ರ ನ ಕಾರಕತ್ವಗಳು...! ಶುಭ ಕಾರಕನು ಹಾಗೂ ಕಳತ್ರಕಾರಕನು. ಸುಖ , ಸಂಪತ್ತು , ಗೃಹ , ವಾಹನ , ಪ್ರೇಮ, ಸೌಂದರ್ಯ , ಅಲಂಕಾರ , ರೇಶ್ಮೆ ಉಡುಪು, ಆಡಂಬರ , ಸಂಗೀತ , ನಾಟ್ಯ , ನಟನೆ , ಹೂವು , ಫಲವೃಕ್ಷ , ಕುದುರೆಜೂಜು , ಮದ್ಯ , ವ್ಯಭಿಚಾರ , ಕಾಮ ,ವ್ಯಾಮೋಹ - ಹೀಗೆ ಅನೇಕ ಕಾರಕತ್ವಗಳಿವೆ. ಸ್ತ್ರೀ ದೇಹದಲ್ಲಿನ ಗರ್ಭಕೋಶ , ಅಂಡಾಶಯ , ಸ್ತ್ರೀತ್ವ , ಪುರುಷದೇಹದಲ್ಲಿನ ವೀರ್ಯ , ಬೀಜ ಕೋಶ - ಇವುಗಳಿಗೂ ಶುಕ್ರನೇ ಕಾರಕ. #ಶುಕ್ರ ನ ಜೊತೆ ಇತರ ಗ್ರಹಗಳ ಸಂಯೋಗ. #ರವಿಯ ಜೊತೆಯಲ್ಲಿ....ಹೆಣ್ಣಿಗೆ ಅಹಂಕಾರ , ಒಳ್ಳೆಮನೆತನದ ಪತ್ನಿ , ಹೆಣ್ಣಿಗೆ ಗರ್ಭಾಶಯದ ತೊಂದರೆ , ಗಂಡಸಿಗೆ ವೀರ್ಯಾಣುಗಳ ಕೊರತೆ . ತಂದೆಗೆ ಹೆಣ್ಮಕ್ಕಳ ಜನನದ ನಂತರ ಅಭಿವೃದ್ಧಿ. #ಚಂದ್ರನ ಜೊತೆ....ಸುಂದರ ಮೃದುಭಾಷಿ ತಾಯಿ , ಹೆಣ್ಣಿನಿಂದ ಮೋಸ ,ಅಸ್ಥಿರ ಮನಸ್ಸಿನ ಹೆಂಡತಿ , ತಾಯಿ ಸ್ತ್ರೀ ರೋಗತಜ್ಞೆಯಾಗಿರಬಹುದು, ಪತ್ನಿ ಮನಃಶಾಸ್ತ್ರ ತಜ್ಞೆಯಾಗಬಹುದು. #ಕುಜ ನ ಜೊತೆ....ವೈವಾಹಿಕ ಜೀವನದಲ್ಲಿ ಸರಸ-ವಿರಸ ಹಾಗೂ ಅತೃಪ್ತಿ ,ಪರಸ್ತ್ರೀ ವ್ಯಾಮೋಹ , ಜೂಜುಕೋರತನ. #ಬುಧನ ಜೊತೆ...ಹೆಣ್ಣುಗಳ ಸ್ನೇಹ , ವ್ಯವಹಾರ ಜಾಣ್ಮೆ , ಒಳ್ಳೆಯ ವಾಗ್ಮಿ ,ಬುದ್ಧಿ ವಂತ ಹಾಗೂ ತಾಳ್ಮೆಯುಳ್ಳ ಪತ್ನಿ , ಸಿನಿಮಾರಂಗದ ಸಾಹಿತ್ಯ , ಸಂಭಾಷಣೆ , ಸಂಗೀತ , ನಾಟ್ಯ. #ಗುರು ವಿನೊಂದಿಗೆ....ಒಳ್ಳೆಯ ವಿದ್ವಾಂಸ , ವಿದ್ಯೆಯಿಂದ ಧನಸಂಪನ್ನತೆ , ಶಾಸ್ತ್ರಗಳಲ್ಲಿ ಸಾಧನೆ , ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಹಾಗೂ ಬೆಂಬಲ. #ಶನಿ ಯ ಜೊತೆ....ಕಷ್ಟಪಟ್ಟು ಹಣ ಸಂಪಾದನೆ , ಕೆಲಸದಲ್ಲಿ ನಿರತ ಪತ್ನಿ , ಹಳೆಯ ಮನೆ , ಹಳೆಯ ವಾಹನದ ಪ್ರಾಪ್ತಿ , ವಿವಾಹ ವಿಳಂಬ , ನೀರಸ ದಾಂಪತ್ಯ . #ರಾಹು ವಿನ ಜೊತೆ.....ಆಸೆಗಳ ಮಹಾಪೂರ , ಅತಿ ಐಶ್ವರ್ಯ , ಜೂಜು-ಸಟ್ಟದ ಬದುಕು , ಮೋಜಿಗಾಗಿ ತಂಬಾಕಿನ ಅಭ್ಯಾಸ , ಅತಿ ಕಾಮಿ , ಅಂತಸ್ತಿನ ಮನೆಗಳ ಲಭ್ಯ. #ಕೇತುವಿನ ಜೊತೆ...ಐಶ್ವರ್ಯವಿದ್ದರೂ ಅನುಭವಿಸುವುದಿಲ್ಲ , ಆಡಂಬರ ಇಷ್ಟ ಪಡುವುದಿಲ್ಲ , ಐಹಿಕ ಸುಖಾಸಕ್ತಿ ಕಡಿಮೆ, ಪತ್ನಿ ವಿಚಾರದಲ್ಲಿ ವಾದ-ವಿವಾದ , ದೂರವಾಗುವಿಕೆ , ವಿಚ್ಛೇದನ. ಜಾತಕನ ಕುಂಡಲಿಯಲ್ಲಿ #ಶುಕ್ರನ ಸ್ಥಾನ , ಯುತಿ - ಚೆನ್ನಾಗಿದ್ದರೆ , ಇಹಜೀವನದಲ್ಲಿ ಬೇಕಾದ್ದೆಲ್ಲವನ್ನೂ ಪಡೆದು , ನೆಮ್ಮದಿಯ ಜೀವನವನ್ನು ಗಳಿಸಬಹುದು.

1 comment:

  1. Best casinos 2021: online slots with real dealers
    The Best Online Slots Games · Top Slots luckyclub · Casino Queen · Live Casino · Royal Panda Slots · Top Jackpot Slots · Live Casino · Play Roulette

    ReplyDelete