Tuesday 22 October 2019

#ಶುಕ್ರ_ಮಹಾದಶಾಫಲ #೨೦_ವರ್ಷ

#ಶುಕ್ರ_ಮಹಾದಶಾಫಲ #೨೦_ವರ್ಷ ಶುಕ್ರಮಹಾದಶೆಯಲ್ಲಿ ಶುಕ್ರನು #ಸ್ಥಾನಬಲವುಳ್ಳನಾಗಿದ್ದರೆ ರಾಜಸನ್ಮಾನ, ವಸ್ತ್ರಾಭರಣ , ವಿದ್ಯಾವ್ಯಾಸಂಗ , ಕುಟುಂಬದಲ್ಲಿ ಸುಖ-ಸಂತೋಷ , ಧನಲಾಭ, ವಾಹನಲಾಭ ಇರುತ್ತದೆ. ಶುಕ್ರನು #ಸ್ವಕ್ಷೇತ್ರದಲ್ಲಿದ್ದರೆ ಅಧಿಕಾರ ಪ್ರಾಪ್ತಿ , ಹೊಲ,ಮನೆ,ಗದ್ದೆ , ಧನ-ಧಾನ್ಯ ಸಮೃದ್ಧಿ , ಭೂಮಿಯಿಂದ ಲಾಭ ಇರುತ್ತದೆ. ಶುಕ್ರನು #ಮೂಲತ್ರಿಕೋಣ ದಲ್ಲಿದ್ದರೆ ವಿದ್ಯಾಲಾಭ , ವಾಹನ ಲಾಭ , ಸಂಪತ್ತಿನ ಅಭಿವೃದ್ಧಿ ಇರುತ್ತದೆ. ಶುಕ್ರನು #ಉಚ್ಚರಾಶಿ ಯಲ್ಲಿದ್ದರೆ ಅಥವಾ ಉಚ್ಚಗ್ರಹಗಳೊಡನೆ ಇದ್ದರೆ ಅಧಿಕಾರ ಪ್ರಾಪ್ತಿ , ಸಂಗೀತ ಹಾಗು ನಾಟ್ಯ ಕಲೆಗಳಲ್ಲಿ ಆಸಕ್ತಿ ,ವಿಹಾರಕ್ಕಾಗಿ ವಿದೇಶಯಾತ್ರೆ , ಅಮೂಲ್ಯ ವಸ್ತುಗಳ ಪ್ರಾಪ್ತಿ ಇರುತ್ತದೆ. ಶುಕ್ರನು #ನೀಚರಾಶಿ ಯಲ್ಲಿದ್ದರೆ ಅಥವಾ ನೀಚಗ್ರಹಗಳೊಡನೆ ಇದ್ದರೆ ಅಧಿಕ ಭೀತಿ , ಧನಧಾನ್ಯ ನಾಶ , ಅಪವಾದ , ವೈವಾಹಿಕ ಜೀವನದಲ್ಲಿ ಏರು-ಪೇರು , ಕಾರ್ಯವಿಘ್ನ ಇರುತ್ತದೆ. ಶುಕ್ರನು #ಸಮಗ್ರಹ ಗಳ ರಾಶಿಯಲ್ಲಿದ್ದರೆ ಅಲ್ಪ ಧನ ಸಂಗ್ರಹ , ಮಿತ್ರರಾಶಿಯಲ್ಲಿ ಹೇರಳ ಧನಲಾಭ ಇರುತ್ತದೆ. ಶುಕ್ರನು #ಶತ್ರುಗ್ರಹಗಳ ರಾಶಿಯಲ್ಲಿದ್ದರೆ ಹೆಂಡತಿ-ಮಕ್ಕಳ ಯೋಚನೆ , ಪತ್ನಿಯಲ್ಲಿ ವಿರಸ , ಹೆಣ್ಣುಮಕ್ಕಳು ಎದುರು ಮಾತನಾಡುವುದು ,ಧನಹಾನಿ , ಸ್ವಜನ ವಿರೋಧ , ಅಧಿಕಾರ ಚ್ಯುತಿ ಇರುತ್ತದೆ. ಶುಕ್ರನು #ಪಾಪಗ್ರಹ ಗಳಿಂದ ಕೂಡಿದ್ದರೆ ಅಥವಾ ಪಾಪಗ್ರಹಗಳ ದೃಷ್ಟಿ ಇದ್ದರೆ ಊರು ಬಿಟ್ಟು ತಿರುಗಾಡುವುದು , ಧರ್ಮಾಚರಣೆ ಇಲ್ಲದೆ ಇರುವುದು , ಪತ್ನಿಗೆ ರೋಗವು ಇರುತ್ತದೆ. ಶುಕ್ರನು #ಶುಭಗ್ರಹದ ಜೊತೆಯಲ್ಲಿದ್ದರೆ ಅಥವಾ ನೋಡಿದರೆ ಮರ್ಯಾದೆ , ಮನ್ನಣೆ , ಆರೋಗ್ಯ , ಸೌಖ್ಯ , ವಿದ್ಯಾಲಾಭ , ಸ್ನೇಹಲಾಭ ಇರುತ್ತದೆ. ಶುಕ್ರನು ೬-೮ ಸ್ಥಾನಗಳಲ್ಲಿದ್ದರೆ ಹೆಂಡತಿ- ಮಕ್ಕಳಿಗೆ ಪೀಡೆಯು , ಹೆಣ್ಣು ಮಕ್ಕಳಿಂದ ವಿರೋಧವು ಇರುತ್ತದೆ. ೧೨ ನೆಯ ಸ್ಥಾನದಲ್ಲಿದ್ದರೆ ಪತ್ನಿಗಾಗಿ ಹೇರಳ ಖರ್ಚು. ಶುಕ್ರನು #ಆರೋಹಣದಲ್ಲಿದ್ದರೆ ಅಂದರೆ ಜನನ ಲಗ್ನದಿಂದ ೬ ನೆಯ ಸ್ಥಾನದವರೆಗೂ ಇದ್ದರೆ ಅಥವಾ ತುಲಾರಾಶಿಯಿಂದ ಮೀನರಾಶಿಯವರೆಗೆ ಇದ್ದರೆ , ಶುಕ್ರನ ದಶಾಕಾಲದಲ್ಲಿ ಅಧಿಕಾರ ಪ್ರಾಪ್ತಿ , ಧನಸಂಗ್ರಹ , ಬಂಧುಬಾಂಧವರ ಪ್ರೀತಿ , ಸಮಸ್ತ ರೀತಿಯ ಸುಖ ಇರುತ್ತದೆ. ಶುಕ್ರನು #ಅವರೋಹಣದಲ್ಲಿದ್ದರೆ ಅಂದರೆ ಜನನ ಲಗ್ನದಿಂದ ೭ ನೆಯ ಸ್ಥಾನದಿಂದ ೧೨ ನೆಯ ಸ್ಥಾನದವರೆಗೂ ಅಥವಾ ಮೇಷ ರಾಶಿಯಿಂದ ಕನ್ಯಾ ರಾಶಿಯವರೆಗೂ ಇದ್ದರೆ , ಜಾತಕನಿಗೆ ಕಷ್ಟ ಫಲಗಳು , ಜನವಿರೋಧವು , ಮನಸ್ತಾಪಗಳು , ಸುಖಸಂತೋಷಗಳು ಕಡಿಮೆ ಆಗುವವು.

No comments:

Post a Comment