Thursday, 13 December 2018

ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕ್ಕೊಂಡರೆ ಧನ ಪ್ರಾಪ್ತಿಯಾಗುತ್ತೆ?

ನಾವು ಧರಿಸುವ ಚಪ್ಪಲಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅದರೊಟ್ಟಿಗೆ ನಮಗೊಂದು ವಿಶೇಷ ಅನುಬಂಧ ಬೆಸೆದುಕೊಂಡಿರುತ್ತದೆ. ಅದರಲ್ಲಿಯೂ ನಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಸದಾ ಚಪ್ಪಲಿ ಧರಿಸಿಕೊಂಡೇ ಇರುವುದರಿಂದ, ಕೆಲಸಕ್ಕೆ ಹೋಗುವಾಗ ಧರಿಸುವ ಚಪ್ಪಲಿ, ಅದರ ಬಣ್ಣ, ಕ್ವಾಲಿಟಿ ಎಲ್ಲವೂ ನಮ್ಮ ಜಾತಕದ ಮೇಲೂ ಪ್ರಭಾವ ಬೀರುತ್ತೆ. ಹೇಗೆ? ಏನಿದು? ನೋಡೋಕೆ ದೊಡ್ಡ ಬಂಗಲೆ. ಆ ಮನೆಯಲ್ಲಿ ದಿನಾ ಪೂಜೆ ಪುನಸ್ಕಾರಗಳು ತಪ್ಪದೇ ನಡೆಯುತ್ತದೆ. ಆದರೆ, ಮನೆಯವರ ಯಾರ ಆರೋಗ್ಯವೂ ಸರಿ ಇರೋಲ್ಲ. ಅಲ್ಲದೇ ಅವರ ಆಸ್ತಿ ಹಾಗೂ ಉದ್ಯೋಗದ ಮೇಲೂ ದುಷ್ಟ ಪರಿಣಾಮಗಳು ಬೀರುತ್ತಿರುತ್ತದೆ. ಇದಕ್ಕೆ ಅವರು ಹಾಕುವ ಚಪ್ಪಲಿಯೂ ಕಾರಣವಾಗಿರಬಹುದು. ಇದು ಏಕೆ, ಪರಿಹಾರವೇನು? ಮನುಷ್ಯನ ದೈನಂದಿನ ಚಟುವಟಿಕೆಗಳು, ಆಗು ಹೋಗುಗಳು ನಿರ್ದಿಷ್ಟ ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲದೇ ಚಪ್ಪಲಿ ಮೇಲೂ ಈ ಅದೃಷ್ಟ ಮತ್ತು ನತದೃಷ್ಟಗಳನ್ನು ತಾಳೆ ಹಾಕಬಹುದು! ಏಕೆ ಗೊತ್ತಾ? ನಮ್ಮ ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತೆ. ಯಾರು ಶನಿ ದೋಷದಿಂದ ಬಳಲುತ್ತಿರುತ್ತಾರೋ, ಅವರು ಚಪ್ಪಲಿ ದಾನ ಮಾಡುವುದೊಳಿತು. ಕೆಲವೊಮ್ಮೆ ಯಾವುದು ನಮ್ಮ ಕೈಯಲ್ಲಿ ಇರುವುದೇ ಇಲ್ಲ. ನಿರೀಕ್ಷೆ ಮೀರಿ ಜೀವನದಲ್ಲಿ ಕೆಲವು ಘಟನೆಗಳು ಸಂಭವಿಸುತ್ತವೆ. ಜೀವನದಲ್ಲಿ ಹೋರಾಟ ಮುಗಿಯುವುದೇ ಇಲ್ಲ. ಇದೂ ನಾವು ಧರಿಸುವ ಚಪ್ಪಲಿ ಅಥವಾ ಶ್ಯೂಸ್‌ ಕಾರಣವಾಗಿರಬಹುದೆಂದು ಶಾಸ್ತ್ರ ಪುರಾಣಗಳು ಹೇಳುತ್ತವೆ. - ಕೈ ನೋಡಿ ಜಾತಕ ನೋಡುವುದು ಗೊತ್ತು. ಆದರೆ, ಅಂಗಾಲು ಸಹ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಗೊತ್ತಾ? ನಮ್ಮ ಹಣೆ ಬರಹಕ್ಕೆ ನಮ್ಮ ಅಂಗಾಲೂ ಕಾರಣವಾಗಬಲ್ಲದು. ಕಾಲಿನ ಆರೋಗ್ಯ ಹಾಗೂ ಸೌಂದರ್ಯವನ್ನು ಯಾರು ಚೆಂದವಾಗಿ ಮ್ಯಾನೇಜ್ ಮಾಡುತ್ತಾರೋ ಅವರಿಗೆ, ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇಲ್ಲವಾದಲ್ಲಿ ಜೀವನದಲ್ಲಿ ಕೆಲವು ಅವಘಡಗಳು ಸಂಭವಿಸಬಲ್ಲದು. - ಹಿಂದಿನ ಕಾಲದಲ್ಲಿ ಚಪ್ಪಲಿಗಳೇ ಇರುತ್ತಿರಲಿಲ್ಲ. ಇದ್ದರೂ ಮರದ ಚಪ್ಪಲಿಗಳನ್ನು ಅವರು ಹಾಕುತ್ತಿದ್ದರು. ಚರ್ಮದ್ದು, ಒಳ್ಳೆ ಕ್ವಾಲಿಟಿಯದ್ದು ಎಂದು ತರುವ ಚಪ್ಪಲಿಗಳೂ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲದು. ಯಾವಾಗ, ಯಾವ ರೀತಿಯ ಚಪ್ಪಲಿಗಳನ್ನು ಧರಿಸಬೇಕೆಂದೂ ಶಾಸ್ತ್ರ ಪುರಾಣಗಳು ಸಲಹೆ ನೀಡುತ್ತವೆ. ಸರಿ ಹಾಗಾದರೆ, ಚಪ್ಪಲಿಯಿಂದ ಯಾವುದೇ ದೋಷಗಳು ಕಾಡಬಾರದೆಂದರೆ ಏನು ಮಾಡಬೇಕು. ಇಲ್ಲಿವೆ ಟಿಪ್ಸ್. - ಕದ್ದ ಅಥವಾ ಉಡುಗೊರೆಯಾಗಿ ಸಿಕ್ಕ ಚಪ್ಪಲಿಯನ್ನು ಧರಿಸಲೇ ಬಾರದು. ಕದ್ದ ಅಥವಾ ದಾನವಾಗಿ ಬಂದ ಚಪ್ಪಲಿಯನ್ನು ಧರಿಸಿದರೆ ಜೀವನದಲ್ಲಿ ಅಂದು ಕೊಂಡ ತಲುಪಲು ಸಾಧ್ಯವಿಲ್ಲ. ನತದೃಷ್ಟವೇ ನಿಮ್ಮ ಕೈ ಹಿಡಿಯಲಿದೆ. - ಹರಿದ ಅಥವಾ ಕಳೆಗುಂದಿದ ಚಪ್ಪಲಿಯನ್ನು ಹಾಕಬೇಡಿ. ಇದು ಅದೃಷ್ಟವನ್ನು ದುರಾದೃಷ್ಟವಾಗಿ ಪರಿವರ್ತಿಸಲಿದೆ. ಹರಿದ ಚಪ್ಪಲಿ ಯಶಸ್ಸನ್ನು ಹತ್ತಿಕ್ಕಲ್ಲಿದೆ. ಚಪ್ಪಲಿ ಕದ್ದರೆ ಗ್ರಹಚಾರ ಕಟ್ಟಿಟ್ಟ ಬುತ್ತಿ. - ಉದ್ಯೋಗ ಸ್ಥಳದಲ್ಲಿ ಕಂದು ಅಥವಾ ಮರದ ಬಣ್ಣದ ಚಪ್ಪಲಿ ಧರಿಸಬಾರದು. ಪರಿಸ್ಥಿತಿ ಹದಗೆಟ್ಟಿದ್ದರೆ, ಈ ಚಪ್ಪಲಿಯಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. - ಅಕಸ್ಮಾತ್ ಉದ್ಯೋಗ ಸಂದರ್ಶನಕ್ಕೆ ಹೋಗುತ್ತಿದ್ದರೆ, ಹರಿದ ಅಥವಾ ಮಾಸಿದ ಚಪ್ಪಲಿಗಳನ್ನು ಧರಿಸಿಕೊಂಡು ಹೋಗಬೇಡಿ. ಇದು ಅದೃಷ್ಟವನ್ನು ದುರಾದೃಷ್ಟವನ್ನಾಗಿ ಬದಲಾಯಿಸುತ್ತೆ. ಹರಿದ ಚಪ್ಪಲಿ ಯಶಸ್ಸ ಓಟವನ್ನೇ ತಡೆಯಬಲ್ಲದು. - ಬ್ಯಾಂಕಿಂಗ್ ಹಾಗೂ ಶೈಕ್ಷಿಣಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಸ್ಥರು ಕಾಫಿ ಬಣ್ಣದ ಅಥವಾ ಡಾರ್ಕ್ ಕಂದು ಬಣ್ಣದ ಚಪ್ಪಲಿಗಳನ್ನು ಧರಿಸಬಾರದು. ಆದಾಯ ಮೂಲಕ್ಕೆ ಇದು ಧಕ್ಕೆ ತರಬಲ್ಲದು. - ವೈದ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಕಬ್ಬಿಣ ಸಂಬಂಧಿ ಕಾರ್ಯ ನಿರ್ವಹಿಸುವವರು ಶ್ವೇತ ವರ್ಣದ ಶೂಸ್ ಅನ್ನು ಧರಿಸಲೇ ಬಾರದು. ಇದರಿಂದ ಅವರಿಗೆ ಲಕ್ ಕೈ ಕೊಡಲಿದ್ದು, ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ. - ಆಯುರ್ವೇದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ನೀಲಿ ಬಣ್ಣದ ಚಪ್ಪಲಿಯನ್ನು ಧರಿಸಬಾರದು. ಅಲ್ಲದೇ ಬಟ್ಟೆಯಿಂದ ಮಾಡಿರುವ ಪಾದರಕ್ಷೆಗಳನ್ನೂ ಧರಿಸಬಾರದು. ಇಂಥವರಿಗೆ ನೀಲಿ ಬಣ್ಣ ಹೇಳಿ ಮಾಡಿಸಿದ್ದಲ್ಲ. - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಸ್ಲಿಪ್ಪರ್ ಸ್ಟ್ಯಾಂಡ್ ಇಡಬಾರದು. ಈ ದಿಕ್ಕಿನಲ್ಲಿ ಸೂರ್ಯನ ಮೊದಲ ಕಿರಣಗಳು ಬೀಳಲಿದ್ದು, ಮನೆಗೆ ಧನಾತ್ಮಕ ಶಕ್ತಿ ಪ್ರವೇಶವಾಗುವ ಸ್ಥಳದಲ್ಲಿ ಚಪ್ಪಲಿಯಿರಬಾರದು.

No comments:

Post a Comment