Wednesday, 3 July 2019
ದಾಂಪತ್ಯದಲ್ಲಿ ಅನ್ಯೋನ್ಯತೆ ಕಡಿಮೆಯಾಗಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳು, ದರಿದ್ರಗಳು ಕಂಡು ಬರುತ್ತಿದೆ.
ದಾಂಪತ್ಯ ಜೀವನ ಮತ್ತು ಕಳತ್ರ ಕಾರಕ ಶುಕ್ರ ದೂಷೀತನಾದಲ್ಲಿ ಹಾಗೂ ಯಾವ ಯಾವ ಗ್ರಹ ಸಂಯೋಗ ದಿಂದ ಹೇಗೆ ಸಮಸ್ಯೆ ಗಳು , ಬರುತ್ತದೆ ಮತ್ತು ಅದಕ್ಕೆ ಪರಿಹಾರ !
ಮೊದಲಿಗೆ . . . . . . . . . . .ಹರಿ ಓಂ ಹರೇ ಶ್ರೀನಿವಾಸ.
ಯಾರೇ ಆಗಿರಲಿ ಜಾತಕವನ್ನು ಕೇಳಬೇಕು ಎಂದುಕೊಂಡಿರುವವರು ಕಷ್ಟದಲ್ಲಿ ಇರುವವರೇ ಹೇಚ್ಚು ಕೇಳುವುದು ಚನ್ನಾಗಿ ಇದ್ದಾಗ ಯಾರು ಕೇಳುವುದಿಲ್ಲ, ರೋಗ ಬಂದಾಗಲೇ ಡಾಕ್ಟರ್ ಬಳಿ ಓಡಿ ಹೋಗುವುದು ,
ಮುಖ್ಯವಾಗಿ ಪ್ರತಿಯೊಬ್ಬ ಮನುಷ್ಯರು ಕೂಡ ಸುಖವನ್ನೇ ಅಪೇಕ್ಷೆ ಪಡುತ್ತಾರೆ .
ನಮ್ಮ ಜಾತಕದಲ್ಲಿ ಸುಖ ಸ್ಥಾನಾಧಿಪತಿ ಆಗಿರುವವನು ರಾಹುವಿನ ಜೊತೆಯಲ್ಲಿ ಇದ್ದರೆ ಅಥವಾ ಕುಜ ರಾಹು ಸಂಯೋಗದಲ್ಲಿ ಇದ್ದರೆ ಅಥವಾ ಶುಕ್ರ ರಾಹು ಸಂಯೋಗದಲ್ಲಿ ಇದ್ದರೆ ದಾಂಪತ್ಯ ಜೀವನದಲ್ಲಿ ಅನಾನುಕೂಲ, ಮಾಡುವ ಕೆಲಸ ಕಾರ್ಯಗಳಲ್ಲಿ ದರಿದ್ರತೆ, ಎಷ್ಟೇ ಪ್ರಯತ್ನವನ್ನು ಪಟ್ಟರು ಕೂಡ ವಿಘ್ನಗಳು ಎದುರಾಗುತ್ತಾ ಇರುತ್ತವೆ.
ಬಹಳಷ್ಟು ಜನ ಏನು ಮಾಡುತ್ತಾರೆ ಎಂದರೆ ಜ್ಯೋತಿಷ್ಯರ ಬಳಿ ಹೋಗುತ್ತೀರ.
ಶುಕ್ರನ ದೆಸೆ ನೆಡೆಯುತ್ತಿದೆ ನೀವು ಚೆನ್ನಾಗಿ ಇರುತ್ತೀರ ಎಂದು ಜ್ಯೋತಿಷ್ಯರು ಸಹ ಹೇಳಿ ಬಿಡುತ್ತಾರೆ.
ಆದರೆ ನಿಮ್ಮ ಜಾತಕದಲ್ಲಿ ಶುಕ್ರ ಮತ್ತು ರಾಹು ಸಂಯೋಗದಲ್ಲಿ ಇದ್ದರೆ ಅಥವಾ ಕುಜ ಮತ್ತು ರಾಹು ಸಂಯೋಗದಲ್ಲಿ ಇದ್ದರೆ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.
ಇಂತಹ ಸಂಕಷ್ಟಗಳನ್ನು ಜಾತಕಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಿ ನಿಮ್ಮ ಜಾತಕದಲ್ಲಿ ಶುಕ್ರ -ರಾಹು ಮತ್ತು ಕುಜ- ರಾಹು ಸಂಯೋಗದಲ್ಲಿ ಇದ್ದರೆ, ದಾಂಪತ್ಯ ಜೀವನದಲ್ಲಿ ವಿಚ್ಛೇದನದವರೆಗೂ ಕೂಡ ಹೋಗಿರುವಂತಹ ಸಾಧ್ಯತೆಗಳು ಮತ್ತು ಈ ರೀತಿಯ ಬಹಳಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.
ಇದರ ಜೊತೆಗೆ ಶುಕ್ರ – ರಾಹು ಸಂಯೋಗದಲ್ಲಿ ಇದ್ದರೆ ಬಹಳಷ್ಟು ಹಣವನ್ನು ಸಂಪಾದನೆ ಮಾಡಲು ಹೋಗುತ್ತೀರಾ ಮತ್ತು ಎಲ್ಲೋ ಒಂದು ಕಡೆ ದಂಡವನ್ನು ಸಹ ಕಟ್ಟುತ್ತೀರಾ, ಅಪರಾಧಗಳನ್ನು ನಿಮ್ಮ ಮೇಲೆ ಹಾಕಿಕೊಳ್ಳುತ್ತೀರಿ.
ಇಂತಹ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತವೆ. ಇಂತಹ ಜಾತಕದವರಿಗೆ ಶುಕ್ರ-ರಾಹು ಸಂಯೋಗದಲ್ಲಿ ಇದ್ದರೆ ಏನು ಮಾಡಬೇಕು ?
ಪರಿಹಾರ
ಪ್ರತಿ ಶುಕ್ರವಾರ ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡಬೇಕು.
ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಬೇಕು.
ಯಾವುದೇ ಕಾರಣಕ್ಕೂ ಶನಿವಾರದ ದಿನ ಮಾಸ ಧಾನ್ಯವನ್ನು ಅಂದರೆ ಉದ್ದಿನ ಬೇಳೆಯಿಂದ ಮಾಡಿದ ಯಾವುದೇ ಆಹಾರ ಪದಾರ್ಥವನ್ನು ಸಹ ಸೇವಿಸಬಾರದು.
ಜೊತೆಗೆ ಜಾತಕವನ್ನು ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಬೇಕು.
ಈ ರೀತಿ ಪರಿಶೀಲಿಸಿ ಕೊಂಡಾಗ ಜಾತಕದಲ್ಲಿ ಕುಜ-ರಾಹು ಸಂಯೋಗದಲ್ಲಿ ಇದ್ದರೆ, ಅದೆಷ್ಟೋ ಅನೇಕ ಜನರು ಕುಜ ಶಾಂತಿ ಮತ್ತು ರಾಹು ಶಾಂತಿಯನ್ನು ಮಾಡಿಕೊಳ್ಳುತ್ತಾರೆ .
ಆದರೂ ಕೂಡ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಬಹಳಷ್ಟು ಜನ ಬಂದು ಹೀಗೆ ಹೇಳುತ್ತಾರೆ. ಎಲ್ಲ ಹೋಮ. ಪೂಜೆಗಳನ್ನು ಮಾಡಿಸಿದ್ದೇವೆ, ಜಾತಕವನ್ನು ತೋರಿಸಿದ್ದೇವೆ. ಆದರೂ ಕೂಡ ನಮ್ಮ ಸಮಸ್ಯೆ ಪರಿಹಾರವಾಗಿಲ್ಲ ಎಂದು ಹೇಳುತ್ತಾರೆ.
ನಮ್ಮ ದಾಂಪತ್ಯದಲ್ಲಿ ಅನ್ಯೋನ್ಯತೆ ಕಡಿಮೆಯಾಗಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳಷ್ಟು ವಿಘ್ನಗಳು, ದರಿದ್ರಗಳು ಕಂಡು ಬರುತ್ತಿದೆ.
ನಾವು ನೂರು ರುಪಾಯಿಯನ್ನು ದುಡಿದರೆ, ಇನ್ನೂರು ರೂಪಾಯಿಯನ್ನು ಖರ್ಚು ಮಾಡಬೇಕಾಗಿದೆ.
ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಇದರಿಂದ ಸಾಲ ಮುಕ್ತರಾಗಲು ನಾವು ಏನು ಮಾಡಬೇಕು ? ಇದಕ್ಕೆ ಪರಿಹಾರ ಏನು ಎಂದು ಕೇಳುತ್ತಾರೆ ? ಎಲ್ಲರಿಗೂ ಕೂಡ ಗ್ರಹಚಾರ ದೋಷ ಎನ್ನುವುದು ಇರುತ್ತದೆ.
ಕುಜ- ರಾಹು ಸಂಯೋಗ ಅಥವಾ ಶುಕ್ರ -ರಾಹು ಸಮ ಸಂಯೋಗ ಬಂದ ತಕ್ಷಣ ಧೈರ್ಯ ಗೆಡುವವರು ಬಹಳಷ್ಟು ಜನ ಇದ್ದಾರೆ. ಬರುವ ಕಷ್ಟಗಳನ್ನು ವ್ಯವಸ್ಥಿತವಾಗಿ ನಿಯಮಬದ್ಧವಾಗಿ ಪರಿಹಾರವನ್ನು ಮಾಡಬೇಕು.
ಪ್ರತಿಯೊಬ್ಬರಿಗೂ ಕೂಡ ವ್ಯವಸ್ಥಿತವಾಗಿ ಗ್ರಹಚಾರ ದೋಷ ಎನ್ನುವುದು ಇರುತ್ತದೆ.
ಕುಜ -ರಾಹು ಸಂಯೋಗ ಅಥವಾ ಶುಕ್ರ- ರಾಹು ಸಂಯೋಗ ಬಂದ ತಕ್ಷಣ ಧೈರ್ಯ ಗೆಡುವುದು ಬೇಡ. ಬರುವ ಕಷ್ಟ ಕಾರ್ಪಣ್ಯಗಳನ್ನು ವ್ಯವಸ್ಥಿತವಾಗಿ, ನಿಯಮಬದ್ಧವಾಗಿ ಪರಿಹಾರವನ್ನು ಮಾಡಿಕೊಳ್ಳಬೇಕು.
ನಿಮ್ಮ ಜಾತಕವನ್ನು ನೀವೇ ಕೂತು ಸ್ವತಃ ಸಂಕಲ್ಪ ಮಾಡಿ ಗ್ರಹದೋಷ ವಿವರಣೆಗಳನ್ನು ಮಾಡಿಕೊಳ್ಳಬಹುದು ಅಥವಾ ನಮ್ಮ ಬಳಿ ಜಾತಕ ಪರಿಶೀಲನೆ ಮಾಡಿಸಿ ಸೂಕ್ತ ಹಾಗೂ ಸರಳ ಪರಿಹಾರ ನೀಡಲಾಗುವುದು ಒಂದು ವೇಳೆ ನಿಮ್ಮ ಜಾತಕದಲ್ಲಿ ದೋಷಗಳು ಸಮಸ್ಯೆ ಗಳು ಜಾಸ್ತಿ ಇದ್ದಾಗ, ಗ್ರಹ ಶಾಂತಿ , ಹೋಮ, ತಿಳಿಸಲಾಗುವುದು , ಪರಿಹಾರ, ಮಾಡಿ
ಆಗ ವ್ಯವಸ್ಥಿತವಾಗಿ ಅನುಕೂಲಗಳು ನಿಮಗೆ ಪ್ರಾಪ್ತಿಯಾಗುತ್ತದೆ.
ನೀವು ಯಾರಿಗೋ ಹಣವನ್ನು ಕೊಟ್ಟು ಗ್ರಹ ಶಾಂತಿ ಮಾಡಿಸುವುದು ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ.
ನೀವು ಒಂದು ಏಕಾಂತವಾಗಿರುವ ಸ್ಥಳಕ್ಕೆ ಸಾಮೂಹಿಕ ಗ್ರಹಶಾಂತಿ ಮಾಡುವ ಸ್ಥಳಕ್ಕೆ ಹೋಗಬೇಡಿ. ಯಾಕೆಂದರೆ ನೀವು ಬೇರೆ ಲಗ್ನದಲ್ಲಿ ಜನನ ವಾಗಿರುತ್ತೀರಿ. ಅವರು ಬೇರೆ ಲಗ್ನದಲ್ಲಿ ಜನನವಾಗಿರುತ್ತಾರೆ.
ನಿಮ್ಮ ನಕ್ಷತ್ರ ಬೇರೆ, ಅವರ ನಕ್ಷತ್ರ ಬೇರೆ ,ಆದ್ದರಿಂದ ಸಾಮೂಹಿಕವಾಗಿ ಗ್ರಹ ಶಾಂತಿಗಳನ್ನು ಮಾಡಿಕೊಳ್ಳಬೇಡಿ.
ಪ್ರತ್ಯೇಕವಾಗಿ ಗ್ರಹ ಶಾಂತಿಗಳನ್ನು ಮಾಡಿಕೊಳ್ಳಿ.
ಸಾಮೂಹಿಕ ಗ್ರಹ ಶಾಂತಿ ಮಾಡಿಸಿಕೊಂಡು
ಅದು ಪ್ರಯೋಜನ ಆಗದೆ , ಜ್ಯೋತಿಷೀಯರನ್ನು ದೂರುವುದು ಬೇಡ ಆಂದರಿಂದ ಮೊದಲೆ ನಿಮ್ಮ ಜಾತಕದಲ್ಲಿ ರುವ ಸಮಸ್ಯೆ ಯನ್ನು ತಿಳಿದು ಅದಕ್ಕೆ ಮಾಡಬೇಕಾದ ಪರಿಹಾರದ ಬಗ್ಗೆ ಪೂರ್ಣ ಮಾಹಿತಿ ಪಡೆದು ಮಾಡಿ .
ಕಟಾಚಾರಕ್ಕೆ ಪರಿಹಾರ ಮಾಡುವುದು ಮನಸ್ಸಿನಲ್ಲಿ ಹಲವಾರು ಸಂದೇಹ ಬೇರೆಯವರಿಗೆ ಕೆಡುಕು ಮಾಡುವ ಯೋಚನೆ ಇಟ್ಟುಕೊಂಡು ಮಾಡುವುದು , ಫಲಿಸುವುದಿಲ್ಲ
ಶುದ್ಧ ಮನಸ್ಸಿನಿಂದ ಶಾಸ್ತ್ರ ದಂತೆ ವಿಧಾನವನ್ನು ತಿಳಿದು ಮಾಡಿ ಖಂಡಿತ ನಿಮ್ಮ ಕಷ್ಟ ಕ್ಕೆ ಪರಿಹಾರ ಸಿಗುತ್ತದೆ
ಇನ್ನೊಂದು ವಿಚಾರ ಯಾರ ಜಾತಕದಲ್ಲಿ ವ್ಯಯ ಸ್ಥಾನ, ಮತ್ತು ಪಂಚಮ ಸ್ಥಾನ ಕೆಟ್ಟಿದ್ದರೇ ದೂಷೀತವಾದರೇ ಅಥವಾ ಚಂದ್ರ ಗ್ರಹ ಕೆಟ್ಟಿದ್ದರೂ ಅವರು ಜಾತಕ ಪರಿಶೀಲನೆ ಮಾಡಿಸುತ್ತಾರೆ , ಅಷ್ಟೇ ಆದರೇ ಪರಿಹಾರ ಮಾಡುವುದಿಲ್ಲ, ಪೆಟ್ಟು ತಿಂದ ನಂತರ ಮಾಡಿಸಲು ಯೋಚಿಸುತ್ತಾರೆ.
ಧನ್ಯವಾದಗಳು .
ಯಾವ ರಾಶಿಯಲ್ಲಿ ಚಂದ್ರನಿದ್ದರೆ ಅವರು ಪ್ರಸಿದ್ಧರು!
ಲಗ್ನದಿಂದ ಹನ್ನೊಂದನೆ ಮನೆ ಲಾಭಸ್ಥಾನ. ಈ ರಾಶಿಯಲ್ಲಿ ಚಂದ್ರನಿದ್ದರೆ ಅವರು ಪ್ರಸಿದ್ಧರೂ, ಭಾವಗುಣಗಳಿಂದ ಕೂಡಿದವರಾಗುತ್ತಾರೆ.
ಇವರಿಗೆ ಹಣಕಾಸಿನ ಲಾಭ ಇದೆ. ವಾಹನಗಳನ್ನು ಹೊಂದುತ್ತಾರೆ, ಸುಂದರ ರೂಪವು ಇರುತ್ತದೆ ದೃಢವಾಗಿ ಕೀರ್ತಿ ಇರುತ್ತದೆ.
ಆರೋಗ್ಯವು ಏರುಪೇರಾಗುತ್ತದೆ. ಬುದ್ಧಿವಂತವರೂ ಜ್ಞಾನವಂತರೂ ಆಗುತ್ತಾರೆ. ಸನ್ಮಾರ್ಗದಲ್ಲಿ ನಡೆದು ನಡೆನುಡಿ ಒಳ್ಳೆಯದಿರುತ್ತದೆ. ವಿಖ್ಯಾತ ಗುಣವಂತರಾಗುತ್ತಾರೆ. ಭೋಗ ಸಂಪತ್ತು ಹೊಂದುತ್ತಾರೆ. ಇವರ ದೇಹ ಬಿಳುಪು ಇರುತ್ತದೆ, ಮಾನವೀಯತೆ ಇರುತ್ತದೆ. ಮಿತ್ರರರು ಬಹಳ ಮಂದಿ ಇರುತ್ತಾರೆ, ಹಣಕಾಸು, ಕೀರ್ತಿ, ಒಳ್ಳೆಯಗುಣಗಳಿಂದ ಮತ್ತು ವಾಹನಗಳನ್ನು ಹೊಂದಿರುತ್ತಾರೆ.
ಸಮಾಜದಲ್ಲಿ ಪ್ರತಿಷ್ಠೆಯ ಅಧಿಕಾರ ಹೊಂದುತ್ತಾರೆ. ಹನ್ನೊಂದರಿಂದ ಇಪ್ಪತ್ತೇಳನೆ. ಪ್ರಾಯದಲ್ಲಿ ಗೌರವ ಸಿಗುತ್ತದೆ. ಇವರು ಒಳ್ಳೆಯ ಮಾತುಗಳನ್ನು ಮಾತನಾಡುತ್ತಾರೆ. ಉದಾರ ಮನೋಭಾವದವರು. ತುಂಬಾ ಒಳ್ಳೆಯ ಗೆಳೆಯರನ್ನು ಹೊಂದುತ್ತಾರೆ, ಜನಪ್ರಿಯರಾಗುತ್ತಾರೆ.
ಸಾಂಸಾರಿಕ ಸುಖ ಚೆನ್ನಾಗಿರುವುದು, ಸಾರ್ವಜನಿಕ ಸಂಸ್ಥೆಯ ಮುಖಂಡರಾಗುತ್ತಾರೆ. ಹೆಚ್ಚಿನ ಅನುಭವಿ ಜ್ಯೋತಿಷಿಗಳು ಲಾಭದ ಚಂದ್ರ ಶುಭ ಫಲವನ್ನೇ ಕೊಡುತ್ತದೆ ಎಂದು ಹೇಳಿದ್ದಾರೆ.
ಶುಭ ಫಲಗಳು ಪುರುಷ ರಾಶಿಯಲ್ಲಿ ಜಾಸ್ತಿಯಾಗಿರುತ್ತದೆ ರೋಗ ಫಲ ಸ್ತ್ರೀ ರಾಶಿಯ ಚಂದ್ರನಿಂದ ಜಾಸ್ತಿ ಇರುತ್ತದೆ. ಲಾಭದ ಚಂದ್ರನಿರುವವರು ವೈದ್ಯರಾಗುವವರು ಇದ್ದಾರೆ. ಲಾಭದ ಚಂದ್ರನಿಂದ ಯಶಸ್ವಿಯಾದ ಜೀವನ ನಡೆಸುತ್ತಾರೆ ಇವರು ಸ್ವತಂತ್ರದ ಕಡೆ ಗಮನ ಕೊಡುತ್ತಾರೆ ರಕ್ಷ ಣಾ ಸಿಬ್ಬಂದಿಗಳಾಗುವವರು ಇದ್ದಾರೆ.
ಚಂದ್ರ ಬಾದಿತನಾದರೇ ಪೂರ್ಣ ಫಲ ಸಿಗುವುದಿಲ್ಲ ಲಗ್ನ ದಿಂದ 11 ನೇ ಮನೆಯಲ್ಲಿ ಸೂರ್ಯನಿದ್ದರೂ ದೊಡ್ಡ ವ್ಯಕ್ತಿ ಅಥವಾ ಪ್ರಭಾವಿ ವ್ಯಕ್ತಿಗಳು ರಾಜಕೀಯ ವ್ಯಕ್ತಿಗಳು ಅಧಿಕಾರಿಗಳು ಆಗಿರುತ್ತಾರೆ. ಧನ್ಯವಾದಗಳು
*ದಾನದ ಮಹತ್ವ ಸಂಪೂರ್ಣ ಮಾಹಿತಿ *
ದಾನ ಅಂದರೆ ಏನು..? ದಾನ ಮಾಡಿದರೆ
ಏನು ಫಲ..? ಯಾವ ದಾನ ಶ್ರೇಷ್ಠ..?
ದಾನ ಮಾಡಲೇ ಬೇಕಾ..? ಅನ್ನೋ ಪ್ರಶ್ನೆಗಳು ನಿಮ್ಮನ್ನೂ ಕಾಡಿರತ್ವೆ. ನನ್ನನ್ನೂ ಕಾಡಿತ್ತು ಉತ್ತರ ಕಂಡುಕೊಂಡೆ ಸತ್ಯ ಅನ್ನಿಸಿತು. ನಿಮಗೂ ಹೌದು ಅನ್ನಿಸಿದರೆ ಒಪ್ಪಿಕೊಳ್ಳಬಹುದು..ಒಂದು ಸುಭಾಷಿತ ಇದೆ
ಅನ್ನದಾನಂ ಪರಂದಾನಂ ವಿದ್ಯಾದಾನ ಮದ: ಪರ:ಅನ್ನೇನ ಕ್ಷಣಿಕ: ತೃಪ್ತಿ: ಯಾವಜ್ಜೀವಂಚ ವಿದ್ಯಯಾ " ಅಂತ. ಹಾಗಂದ್ರೆ ಅನ್ನ ದಾನ ಪರಮ ಶ್ರೇಷ್ಠ ದಾನವಂತೆ. ಆದರೆ ವಿದ್ಯಾದಾನ ಅದಕ್ಕಿಂತ ಶ್ರೇಷ್ಠ ದಾನವಂತೆ. ಯಾಕಪ್ಪಾ ಅಂದ್ರೆ ಅನ್ನ ದಾನ ಕ್ಷಣಿಕ ತೃಪ್ತಿಯನ್ನ ಕೊಡತ್ತೆ. ಮತ್ತೆ ಹಸಿವು ಶುರುವಾಗತ್ತೆ. ಆದರೆ ವಿದ್ಯಾ ದಾನ ಮಾಡಿಬಿಟ್ಟರೆ ಯಾವಜ್ಜೀವ, ಬದುಕಿರುವವರೆಗೂ ಅವನಿಗೆ ನೆರವಾಗಿರತ್ತೆ ಅಂತ. ಹಾಗಾದರೆ ನಾವು ಮಾಡೋ ಇತರೆ ದಾನಗಳೆಲ್ಲ ಹುರುಳಾ..? ಗೋದಾನ, ಭೂದಾನ, ಸುವರ್ಣ ದಾನ ಇವೆಲ್ಲ ಮಾಹಾದಾನಗಳು ಅನ್ನಿಸಿಕೊಂಡಿವೆಯಲ್ಲ ಇದೆಲ್ಲವುಗಳಿಗಿಂತ ವಿದ್ಯಾ ದಾನವೇ ಶ್ರೇಷ್ಠವಲ್ಲವಾ ಅನ್ನಿಸಿಬಿಡತ್ತೆ. ವಾಸ್ತವವಾಗಿ ದಾನಕ್ಕೆ ಶಾಸ್ತ್ರೀಯ ಅರ್ಥವಿದೆಯಾ ಅಂತ ಕೆಲ ಪುಸ್ತಕಗಳಲ್ಲಿ ಹುಡುಕಿದೆ. ನಿಜ ದಾನ ಅಂತ ಅನ್ನಿಸಿದ ಮಾಹಿತಿಯೊಂದು ಸಿಕ್ಕಿತು ನಿಮ್ಮ ಮುಂದಿಡುತ್ತಿದ್ದೇನೆ..ನಮ್ಮ ಶಾಸ್ತ್ರ ಚೌಕಟ್ಟಲ್ಲಿ 4 ಬಗೆಯ ದಾನಗಳಿವೆಯಂತೆ. ಆ ನಾಲ್ಕೂ ದಾನಗಳನ್ನ ಅರಿತು ಮಾಡುವ ದಾನ ಮಾನ್ಯವಾದದ್ದು.
1. ನಿತ್ಯದಾನ :
"ಅಹನ್ಯಹನಿ ಯತ್ಕಿಂಚೇತ್ ದದ್ಯಾತ್ ಅನುಪಕಾರಿಣೇಅನುದ್ದಿಶ್ಯ ಫಲಂ ತಸ್ಮಾತ್ ಬ್ರಾಹ್ಮಣಾಯತು ನಿತ್ಯಕಂ"ಇದು ಮೊದಲನೇ ದಾನ. ನಿತ್ಯದಾನ ಅಂದ್ರೆ ಏನು..? ಪ್ರತಿದಿನ, ಅನುದಿನವೂ ಏನನ್ನಾದರೂ ಒಬ್ಬರಿಗೆ ದಾನ ಮಾಡು. ಅನುದ್ದಿಶ್ಯ ಯಾವುದೇ ಉದ್ದೇಶವಿಲ್ಲದೆ ಪ್ರತಿದಿನವೂ ದಾನ ಮಾಡು. ನಾನು ಕಂಡ ಒಂದು ನಿತ್ಯದಾನದ ಘಟನೆ ಇದು: ನಮ್ಮ ಊರಿನ ಸಮೀಪದಲ್ಲಿ ಒಂದು ಶಾಲೆ ಇತ್ತು. ಆಗ ನಾನು ITI ಓದ್ತಾಇದ್ದೆ. ಶಾಲೆಯಿಂದ ಅರ್ಧ ಕಿ. ಮೀ ದೂರದಲ್ಲಿ ಒಂದು ಗುಡಿಸಲು. ಅಲ್ಲೊಬ್ಬ ಯೋಗಿಗಳಿದ್ರು. ಅವರು ಪ್ರತಿನಿತ್ಯ ಶಾಲೆ ಹತ್ರ ಬರ್ತಿದ್ರು. ಅವರು ಹೆಚ್ಚು ಮಾತ್ನಾಡೋರಲ್ಲ. ನೋಡೋಕೆ ಉಗ್ರ ಸ್ವರೂಪ. ಎಲ್ರೂ ಹುಚ್ಚ ಅಂದ್ಕೋತಿದ್ರು. ಏನೇ ಇರ್ಲಿ ಬಿಡಿ ಮುಂದಿನ ವಾಕ್ಯ ಓದಿ..ಅವ್ರು ಶಾಲೆಗೆ ಬಂದವ್ರು ಒಬ್ಬ ಹುಡುಗನ್ನ ಕರೀತಿದ್ರು ಹೋದ್ರೆ ಒಂದಿನ ಊಟ ಕೊಡುಸ್ತಿದ್ರು, ಒಂದಿನ ಬುಕ್ ಕೊಡುಸ್ತಿದ್ರು, ಒಂದಿನ ಬಟ್ಟೆ, ಒಂದಿನ ಪೆನ್ನು, ಹೀಗೆ ಪ್ರತೀ ದಿನ ಒಬ್ಬಲ್ಲ ಒಬ್ಬನ್ನ ಕರೆದು ಏನೋ ಒಂದು ಕೊಡ್ತಿದ್ರು. ಮತ್ತು ಅವ್ರು ಆ ಹುಡುಗರಿಂದ ಏನನ್ನೂ ನಿರೀಕ್ಷಿಸ್ತಾ ಇರ್ಲಿಲ್ಲ.
ಪ್ರತೀ ದಿನವೂ ಈ ಕಾರ್ಯ ನಡೀತಿತ್ತು ಒಂದು ವರೆ ವರ್ಷ ಹೀಗೇ ಮಾಡಿದ್ರು ಆಮೇಲೆ ಒಂದಿನ ಅವ್ರು ಬರ್ಲಿಲ್ಲ. ಹುಡುಗ್ರೆಲ್ಲ ಅಲ್ಲಿ ಹೋಗಿ ನೋಡಿದ್ರೆ ಗುಡಿಸಲೇ ಛಿದ್ರ ವಾಗಿತ್ತು. ಎಲ್ಲಿ ಹೋದ್ರೋ ಪಾಪ.. ಎಷ್ಟು ಹುಡುಕಿದ್ರೂ ಸಿಗ್ಲಿಲ್ಲ.. ಅವರು ಮಾಡಿದ್ದು ಅನುದ್ದಿಶ್ಯ ನಿತ್ಯದಾನ ಅನ್ನಿಸ್ತು.
2. ಇನ್ನು ಎರಡನೇ ದಾನ ನೈಮಿತ್ತಿಕ ದಾನ : " ಯತ್ತು ಪಾಪೋಪ ಶಾಂತ್ಯರ್ಥಂ ಜೀಯತೇ ವಿದುಷಾಂ ಕರೇನೈಮಿತ್ತಿಕಂ ತದುದ್ದಿಷ್ಟಂ ದಾನಂ ಸದ್ಧಿರನುತ್ತಮಂ "ಅಂದ್ರೆ ಯಾವುದಾದರೂ ಪಾಪ ಪರಿಹಾರಕ್ಕಾಗಿ, ಪ್ರಾಯಶ್ಚಿತ್ತಕ್ಕಾಗಿ ಜ್ಯೋತಿಷಿಗಳು ಹೇಳೋ ದಾನ ಇದೆಯಲ್ಲ ಅದು ನೈಮಿತ್ತಿಕ ದಾನ. ಆದರೆ ನೆನಪಿರಲಿ ನೀವು ಕೊಡುವ ದಾನ ಎಷ್ಟು ಪಾತ್ರವೂ ದಾನ ಕೊಡುವ ವ್ಯಕ್ತಿಯೂ ಅಷ್ಟೇಸತ್ಪಾತ್ರನಾಗಿರಬೇಕು. ಬೀದಿಯಲ್ಲಿ ಬೋರ್ಡ್ ಇಟ್ಕೊಂಡ್ ಕೂತವರೆಲ್ಲ ಜ್ಯೋತಿಷಿಗಳಲ್ಲ, ಕಾವಿ ಉಟ್ಟವರೆಲ್ಲ ಸನ್ಯಾಸಿಗಳಲ್ಲ. ದೊಡ್ಡ ಹಣೆ, ಬಿರುಸಾದ ವಿಭೂತಿ ಪಟ್ಟಿ ಬಳಿದ ಮಾತ್ರಕ್ಕೇ ಸತ್ಪಾತ್ರನಲ್ಲ.
ಅದು ನಿಮಗೆ ತಿಳಿಸಬೇಕಿಲ್ಲ ಬಿಡಿ ನೀವೇನ್ ದಡ್ಡರಲ್ಲ..!
3. ಇನ್ನು ಮೂರನೇ ದಾನ ಕಾಮ್ಯದಾನ :ಕಾಮ್ಯ ಹೆಸರೇ ಹೇಳುವಂತೆ ಯಾವುದಾದರೂ ಬೇಡಿಕೆ ಈಡೇರಲಿ ಅನ್ನೋ ಕಾರಣಕ್ಕೆ ಕೊಡುವ ದಾನ. ಸುಖಕ್ಕಾಗಿ ಮಾಡುವ ದಾನ. ಇವೆಲ್ಲ ದಾನಗಳು ಶಾಸ್ತ್ರ ವಿಧಿಯಲ್ಲಿವೆಯಾದರೂ ಅಂಥಾ ಶ್ರೇಷ್ಠ ದಾನಗಳು ಅನ್ನಿಸೊಲ್ಲ. ಮುಂದಿನ ದಾನ ಇದೆಯಲ್ಲ ಅದು ಸ್ವಲ್ಪ ಧನ್ಯತೆಯನ್ನ ತುಂಬುವ ದಾನ ಅನ್ನಿಸತ್ತೆ.
4. ನಾಲ್ಕನೆಯ ದಾನ ವಿಮಲ ದಾನ :ವಿಮಲ ಅಂದ್ರೆ ಪರಿಶುದ್ಧ ಅಂತ. ಪರಿಶುದ್ಧ ದಾನ. ಹಾಗಂದ್ರೆ ಏನು..?" ಯದೀಶ್ವರಸ್ಯ ಪ್ರೀತ್ಯರ್ಥಂ ಬ್ರಹ್ಮವಿತ್ಸುಪ್ರದೀಯತೇಚೇತಸಾ ಧರ್ಮಯುಕ್ತೇನ ತದ್ದಾನಂ ವಿಮಲಂ ಸ್ಮೃತಂ "ಯದೀಶ್ವರಸ್ಯ ಪ್ರೀತ್ಯರ್ಥಂ : ಯಾವ ಕಾರಣಕ್ಕೆ.. ಈಶ್ವರಸ್ಯ ಪ್ರೀತ್ಯರ್ಥಂ ಈಶ್ವರನ ಪ್ರೀತಿಗೋಸ್ಕರ, ಭಗವಂತನ ಪ್ರೀತಿಗೋಸ್ಕರ ಮಾಡುವ ದಾನ ಹೇಗೆ ಬ್ರಹ್ಮನಿಗಾಗಿ ದಾನ ಮಾಡೋದು..? ಸ್ವಾಮೀ ಈದಾನ ಯಾರ್ಯಾರಿಗೋ ಕೊಡೋದಲ್ಲ ಈ ದಾನ ಪರಮ ಜ್ಞಾನಿಗೆ ಪ್ರಿವಾದದ್ದನ್ನ ಕೊಡಬೇಕು.
ಆತನಿಗೆ ಏನು ಉಪಯೋಗಕ್ಕೆ ಬೇಕೋ ಅದನ್ನ ಕೊಟ್ಟರೆ ಭಗವಂತನಿಗೆ ಕೊಟ್ಟಂತಾಗತ್ತೆ ಅನ್ನೋದು ಶಾಸ್ತ್ರದ ಮಾತು ಹಾಗಾಗಿ ಶ್ರೇಷ್ಠ ಜ್ಞಾನಿಗೆ ಉಕ್ತವಾದದ್ದನ್ನ ದಾನ ಮಾಡಿದರೆ ಅದು ವಿಮಲ ದಾನ ಅನ್ನಿಸಿಕೊಳ್ಳತ್ತೆ. ಅದೇ ಪರಿಶುದ್ಧ ದಾನ. ಆ ಪರಿಶುದ್ಧ ದಾನವೇ ಪರಮಾತ್ಮನಿಗೆ ಪ್ರೀಯವಾದ ದಾನ. ಹೀಗಾಗಿ ದಾನ ಮಾಡುವ ಮುನ್ನ ಯೋಚಿಸಿ,
ದಾನದಿಂದ ಮನುಷ್ಯ ದೊಡ್ಡವನಾಗುತ್ತಾನೆ. ಇದರಿಂದಲೇ ಶ್ರೇಯಸ್ಸು ಲಭಿಸುತ್ತದೆ. ದಾನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗುತ್ತದೆ. ದಾನದ ಹಿಂದೆ ಇಲ್ಲದವರಿಗೆ ಇರುವವರು ನೀಡುವ ಮೂಲಕ ಮತ್ತೊಬ್ಬರ ಅಗತ್ಯ ಪೂರೈಕೆಯಾಗುವ ಆಶಯವಿರುವುದು ಸತ್ಯ.
ಅನೇಕ ಬಗೆಯ ದಾನಗಳನ್ನು ನಾವು ಗುರುತಿಸಬಹುದು.
ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ಉಪಯೋಗವಾಗುವಂತೆ ಇರಬೇಕು. ಯಾವ ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಸಿಗುತ್ತದೆ, ಹಾಗೂ
ಜ್ಯೋತಿಷ್ಯ ಶಾಸ್ತ್ರ ದ ಪ್ರಕಾರ ಯಾವ ರೀತಿಯ ಲಾಭವಾಗುತ್ತದೆ ಎಂದು ನೋಡೋಣ
1. ವಸ್ತ್ರದಾನದಿಂದ ಆಯಸ್ಸುವೃದ್ಧಿಯಾಗುತ್ತದೆ.
2 ಭೂ ದಾನ – ಬ್ರಹ್ಮ ಲೋಕ ಪ್ರಾಪ್ತಿ
3. ಜೇನು ದಾನ – ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು – ಪುತ್ರ ಭಾಗ್ಯ
4. ಗೋದಾನ – ಋಷಿ ದೇವ ಪಿತೃ ಪ್ರೀತಿ
5. ಬೆಟ್ಟದನೆಲ್ಲಿ ಕಾಯಿ ದಾನ – ಜ್ಞಾನ ಪ್ರಾಪ್ತಿ
6.ದೇವಾಲಯದಲ್ಲಿ ದೀಪ ದಾನ – ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ
7. ದೀಪ ದಾನ – ಲೋಪ ಹರಣ
8. ಬೇಳೆ ಕಾಳಿನ ದಾನ – ದೀರ್ಘಾಯುಸ್ಸು ಸಿದ್ಧಿ
9.ಅಕ್ಕಿ – ಎಲ್ಲಾ ವಿಧವಾದ ಪಾಪ ನಾಶ
10. ತಾಂಬೂಲ – ಸ್ವರ್ಗ ಪ್ರಾಪ್ತಿ
11. ಕಂಬಳಿ ದಾನ – ವಾಯುರೋಗ ನಾಶ
12. ಹತ್ತಿ ದಾನ – ಕುಷ್ಠ ರೋಗ ನಿವಾರಣೆ
13. ಜನಿವಾರ ದಾನ – ಬ್ರಾಹ್ಮಣ ಜನ್ಮ ಲಭಿಸುತ್ತದೆ
14. ತುಲಸಿ ಪುಷ್ಪ – ಸ್ವರ್ಗ ಪ್ರಾಪ್ತಿ
15. ತುಪ್ಪ ದಾನ – ರೋಗ ನಿವಾರಣೆ
16. ಅನ್ನ ದಾನ ಮಾಡಿದರೆ: ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ.
17. ವಸ್ತು ದಾನ ಮಾಡಿದರೆ ಆಯುಷ್ಯ ಹೆಚ್ಚುತ್ತದೆ.
18. .ದೀಪ ದಾನಮಾಡಿದರೆ ಕಣ್ಣು ಚನ್ನಾಗಿ ಕಾಣಿಸುತ್ತದೆ.
19. ತುಪ್ಪ ದಾನಮಾಡಿದರೆ ರೋಗ ನಿವಾರಣೆಯಾಗುತ್ತದೆ.
20. ಹಾಲು ದಾನಮಾಡಿದರೆ ದುಖಃ ತೀರುತ್ತದೆ.
21. ಮೊಸರು ದಾನಮಾಡಿದರೆ ಇಂದ್ರಿಯಗಳು ವೃದ್ಧಿಯಾಗುತ್ತವೆ.
22. ಹಣ್ಣು ಗಳನ್ನು ದಾನಮಾಡಿದರೆ ಬುದ್ಧಿ,ಸಿದ್ಧಿಯು ಲಭಿಸುತ್ತದೆ.
23. ಬಂಗಾರ ದಾನಮಾಡಿದರೆ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ.
24. ಬೆಳ್ಳಿ ದಾನಮಾಡಿದರೆ ಮನಸ್ಸಿನಚಿಂತೆ ನೀಗುತ್ತದೆ.
25.ಹಸು(ಗೋವು) ದಾನಮಾಡಿದರೆ ಖುಷಿ,ದೇವರುಗಳು,ಪಿತೃಗಳಿಂದ ವಿಮೋಚನೆ
26.ತೆಂಗಿನಕಾಯಿ ದಾನಮಾಡಿದರೆ ನೆನೆದ ಕಾರ‌್ಯ ಸಿದ್ಧಿಸುತ್ತದೆ.
27. ನೆಲ್ಲಿಕಾಯಿ ದಾನಮಾಡಿದರೆ ಜ್ಞಾನ ದಕ್ಕುತ್ತದೆ.
28. ಭೂಮಿ ದಾನಮಾಡಿದರೆ ಈಶ್ವರ ದರ್ಶನವಾಗುತ್ತದೆ.
ನಿಮ್ಮ ಜಾತಕದಲ್ಲಿ ಯಾವ ಗ್ರಹ ದೂಷೀತವಾಗಿದೆ. ಎಂದು ತಿಳಿದುಕೊಂಡು, ಆ ಗ್ರಹಕ್ಕೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡುವುದು ಸೂಕ್ತ.
ಧನ್ಯವಾದಗಳು .
ವಿವಾಹಯೋಗ: ಸುಲಗ್ನ ಸಾವಧಾನ
ಮದುವೆ ಆಗಬೇಕಾದ್ರೆ ಎರಡು ಮನಸ್ಸುಗಳ ನಡುವಿನ ಸಂಬಂಧ, ಅನುಬಂಧ ಗಟ್ಟಿಯಾಗಿರಬೇಕು. ಸ್ವಲ್ಪ ಹಿಂದಿರುಗಿ ನೋಡಿದ್ರೂ ಜೀವನದಲ್ಲಿ ಹೀನಾಯ ಸೋಲು ಗ್ಯಾರಂಟಿ.
ಬದಲಾದ ಕಾಲಮಾನದಲ್ಲಿ ನಮ್ಮ ಆಸೆ, ಆಕಾಂಕ್ಷೆ, ನಿರೀಕ್ಷೆ ಮತ್ತು ಸ್ವಭಾವಗಳು ಸಾಕಷ್ಟು ರೂಪಾಂತರಗೊಂಡಿವೆ. ಮದುವೆಗೆ ಮುನ್ನ ಸರಸ ಬಯಸೋ ಮನಸ್ಸು ನಂತರ ವಿರಸದ ದಾರಿ ಹಿಡಿಯೋದು ಏಕೆ? ಹೋರಾಶಾಸ್ತ್ರದ ರೀತ್ಯ ಜಾತಕದ ಗಣಕೂಟವನ್ನು ಪರಿಶೀಲಿಸಿದಾಗ ಅದಕ್ಕೊಂದು ಉತ್ತರ ಕಂಡುಕೊಳ್ಳಬಹುದು. ಜಾತಕನ ಕುಂಡಲಿಯಲ್ಲಿ ಲಗ್ನಾಧಿಪತಿಯಿಂದ 7 ಮತ್ತು 5ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದರ ಮೇಲೆ ಸಂಸಾರ ಸೌಖ್ಯ ಅಥವಾ ಕಲ್ಯಾಣ ಲಕ್ಷಣವನ್ನು ಅರ್ಥ ಮಾಡಿಕೊಳ್ಳಬಹುದು. ಅದರ ಆಧಾರದಲ್ಲೇ ಹೊಂದಾಣಿಕೆಯ ಲೆಕ್ಕಾಚಾರ ಹಾಕಬಹುದು.
ದೋಷದ ಸೂಚನೆಗಳು
* ಸಪ್ತಮಾಧಿಪತಿ ಅಥವಾ ಏಳನೇ ಮನೆಯ ಗ್ರಹವು ಯಾವುದೇ ಕ್ಲೇಶಗಳಿಂದ ಬಾಧಿತನಾಗಿರಬಾರದು.
* ಸಪ್ತಮಾಧಿಪತಿ ಅಥವಾ ಏಳನೇ ಮನೆಯಲ್ಲಿರುವ ಗ್ರಹಕ್ಕೆ ಪಾಪಕರ್ತಾರಿ ಯೋಗದಿಂದ ಬಾಧಿತನಾಗಿರಬಾರದು.
* ಸಪ್ತಮಾಧಿಪತಿ ನೀಚ ನವಾಂಶದಿಂದ ಕೂಡಿರಬಾರದು.
* ಅವಯೋಗವೇನಾದರೂ ಲಗ್ನವನ್ನು ಬಾಧಿಸಿದರೆ ಅದರಿಂದಾಗಿ ಆರೋಗ್ಯ ಅಥವಾ ಕುಟುಂಬ ಅಸೌಖ್ಯ ಉಂಟಾಗುತ್ತದೆ.
* ಎರಡೂ ಜಾತಕಗಳಲ್ಲಿನ ಅವಯೋಗಗಳು ಒಂದಾದರೆ, ಸಂಸಾರ ಸಾಮರಸ್ಯಕ್ಕೆ ತೊಂದರೆಯಾಗುತ್ತದೆ. ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು.
* ಶನಿ, ಬುಧ ಮತ್ತು ರಾಹು ಗ್ರಹಗಳು 12ನೇ ಮನೆಯಲ್ಲಿರಬಾರದು. ಕಾರಣ ಈ ಮನೆಯನ್ನು ಶಯನ ಸ್ಥಾನ ಎನ್ನುತ್ತಾರೆ.
* ಮಹಿಳೆಯ ಜಾತಕದ ಎಂಟನೆ ಮನೆ ಮಾಂಗಲ್ಯ ಸ್ಥಾನವನ್ನು ಸೂಚಿಸುತ್ತದೆ. ಈ ಮನೆಯು ಯಾವುದೇ ರೀತಿಯಿಂದ ಬಾಧಿತವಾಗಿರಬಾರದು.
* ಜಾತಕನ ಕುಂಡಲಿಯ 3,7 ಮತ್ತು 11ನೇ ಮನೆಗಳನ್ನು, ಅದರೊಳಗಿನ ಗ್ರಹಗಳನ್ನು, ಭಾವಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.
* ಕುಟುಂಬ ಸೌಖ್ಯ ಲೆಕ್ಕಾಚಾರ ಹಾಕಲು ನವಾಂಶ ಕುಂಡಲಿಯನ್ನು ಪ್ರತ್ಯೇಕವಾಗಿ ಗಮನಿಸಬೇಕು. ಈ ಕುಂಡಲಿಯಲ್ಲಿ ಲಗ್ನ, ಲಗ್ನಾಧಿಪತಿ, ಶುಕ್ರನ ಸ್ಥಾನವನ್ನು ವಿಶೇಷವಾಗಿ ಗಮನಿಸಬೇಕು.
ಶುಭ ಯೋಗದ ಸೂಚನೆಗಳು
* ಸಪ್ತಮ ಸ್ಥಾನದಲ್ಲಿ ಶುಭ ಗ್ರಹವಿರಬೇಕು, ಶುಭ ನಕ್ಷತ್ರದ ದೃಷ್ಟಿ ಇರಬೇಕು ಮತ್ತು ಶುಭ ನವಾಂಶವನ್ನು (ಉಚ್ಛ ನವಾಂಶ, ಸ್ವ ನವಾಂಶ, ಮಿತ್ರ ನವಾಂಶ ಕೇಂದ್ರ ಮತ್ತು ರಾಶಿಲಗ್ನದಿಂದ ತ್ರಿಕೋಣಗಳ ಭಾವ) ಹೊಂದಿರಬೇಕು.
* ಅತ್ಯುತ್ತಮ ಕುಟುಂಬ ಸೌಖ್ಯಕ್ಕಾಗಿ ಯಾವುದಾದರೂ ಒಂದು ಜಾತಕದಲ್ಲಿ ಯೋಗಗಳು ಕೂಡಿರಬೇಕು.
* ಐದನೇ ಮನೆಗೆ ಹೋಲಿಸಿದರೆ ಏಳನೇ ಮನೆಯ ಸರ್ವಾಷ್ಟಕವರ್ಗದಲ್ಲಿ ಕಡಿಮೆ ಬಿಂದುಗಳಿರಬೇಕು.
* ಏಳನೇ ಮನೆಯ ಶುಕ್ರಾಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿರಬೇಕು.
* ಏಳನೇ ಮನೆ ಮತ್ತು ಸಪ್ತಮಾಧಿಪತಿಯ ಮೇಲೆ ಗುರುವಿನ ದೃಷ್ಟಿ ಇರಬೇಕು.
* ಏಳನೇ ಮನೆ ಮತ್ತು ಸಪ್ತಮಾಧಿಪತಿಗೆ ಶುಭಕರ್ತಾರಿ ಯೋಗವಿದ್ದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು.
* ಸಪ್ತಮಾಧಿಪತಿ ಪುಷ್ಕರ ನವಾಂಶವನ್ನು ಹೊಂದಿದ್ದರೆ ಅತ್ಯುತ್ತಮ ಕುಟುಂಬ ಸೌಖ್ಯವನ್ನು ನಿರೀಕ್ಷಿಸಬಹುದು.
* ಕುಜನ ಲಕ್ಷಣಗಳು ತೀವ್ರವಾಗಿದ್ದರೆ ಜಾತಕನ ಸ್ವಭಾವ ಆಕ್ರಮಣಕಾರಿಯಾಗಿರುತ್ತದೆ. ಅದರ ನೇರ ಪರಿಣಾಮ ಕುಟುಂಬದ ಮೇಲಾಗುತ್ತದೆ.
* ಶನಿ ಚಂದ್ರ ಯೋಗದ ಕಾರಣ ಸ್ವಭಾವಗಳು ಚಿತ್ರವಾಗಿರುತ್ತವೆ. ಅದರ ಪರಿಣಾಮ ಕುಟುಂಬದ ಮೇಲಾಗುತ್ತದೆ. ಶುಕ್ರನಲ್ಲಿ ಜಲ ಲಕ್ಷಣವಿದ್ದರೆ ಅಂತಹವರು ಸೂಕ್ಷ್ಮ ಪ್ರವೃತ್ತಿಯುಳ್ಳವರಾಗಿರುತ್ತಾರೆ.
ಷಂಡತ್ವ ಮತ್ತು ಸಂತಾನಶಕ್ತಿ
* ಶನಿಯೊಂದಿಗೆ ಬುಧ ಏಳನೇ ಮನೆಯಲ್ಲಿ ಅಥವಾ ತುಲಾ ರಾಶಿಯಲ್ಲಿದ್ದರೆ ಒಳ್ಳೆಯದಲ್ಲ.
* ಮಂಗಳ ಮತ್ತು ಶುಕ್ರಗ್ರಹವು ಬಾಧಿತವಾಗಿದ್ದರೆ ಮತ್ತು ಎಂಟನೆ ಮನೆಯು ಹಾನಿಕಾರಕವಾಗಿದ್ದರೆ ಜಾತಕನಿಗೆ ಲೈಂಗಿಕ ಆಸಕ್ತಿ ಅಷ್ಟಾಗಿ ಇರುವುದಿಲ್ಲ.
* ರಾಶಿ ಚಕ್ರದಲ್ಲಿ ಬೀಜ ಸ್ಪುಟ ಮತ್ತು ಕ್ಷೇತ್ರ ಸ್ಪುಟವು ಬಾಧಿತವಾಗಿದ್ದರೆ ಲೈಂಗಿಕ ಜೀವನ ಅಷ್ಟೊಂದು ತೃಪ್ತಿಕರವಾಗಿರುವುದಿಲ್ಲ.
* ಕುಂಡಲಿಯಲ್ಲಿ ಶುಕ್ರ ಮತ್ತು ಚಂದ್ರ ಬಾಧಿತನಾಗಿದ್ದರೆ ವೀರಾರಯಣುಗಳ ಸಂಖ್ಯೆ ಕಡಿಮೆಯಾಗುತ್ತದೆ.
* ಏಳನೇ ಮನೆಯಲ್ಲಿ ಉಪಕೇತು, 12ನೇ ಮನೆಯಲ್ಲಿ ಧೂಮ ಲಕ್ಷಣಗಳಿದ್ದರೆ ಷಂಡತ್ವವನ್ನು ಸೂಚಿಸುತ್ತದೆ.
ಉತ್ತಮ ಬಾಂಧವ್ಯ
'ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯಚ' ಎನ್ನುವಂತೆ ಋುಣಾನುಬಂಧವನ್ನು ಜಾತಕ ಕುಂಡಲಿಯ ಲಗ್ನಾಧಿಪತಿ ಅಥವಾ ಏಳನೇ ಮನೆಯಲ್ಲಿರುವ ಗ್ರಹ ಶುಭವಾಗಿದೆಯೇ ಎಂದು ನೋಡುವ ಮೂಲಕ ಲೆಕ್ಕ ಹಾಕಬಹುದು. ಮುಖ್ಯವಾಗಿ ನವಾಂಶ ಕುಂಡಲಿ ಸಂಗಾತಿಯ ಜೀವನ ದರ್ಪಣವಾಗಿರುತ್ತದೆ.
ಕುಜ ದೋಷ
ಕೆಲವೊಂದು ಲಗ್ನಗಳನ್ನು ಹೊರತುಪಡಿಸಿ ಕುಜ ದೋಷವು ಕನ್ಯಾ, ಮಿಥುನ, ತುಲಾ ಮತ್ತು ವೃಶ್ಚಿಕ ಲಗ್ನಗಳನ್ನು ಬಾಧಿಸುತ್ತದೆ. ಶನಿಗ್ರಹವೇನಾದರೂ 1, 4, 7, 8 ಮತ್ತು 12ನೇ ಸ್ಥಾನದಲ್ಲಿದ್ದರೆ ಕುಜದೋಷವು ಬಾಧಿಸುವುದಿಲ್ಲ. ಒಂದೊಮ್ಮೆ ಕುಜನೇನಾದರೂ ಚಂದ್ರ, ಬುಧ ಮತ್ತು ಗುರುವಿನೊಂದಿಗೆ ಇದ್ದರೆ ದೋಷವು ಗಣನೆಗೆ ಬರುವುದಿಲ್ಲ. ಜಾತಕನ ಲಗ್ನ ಅಥವಾ 7ನೇ ಮನೆಯಲ್ಲಿ ಗುರು ಮತ್ತು ಶುಕ್ರ ಗ್ರಹವಿದ್ದರೆ ಕುಜದೋಷ ನಿವಾರಣೆಯಾಗುತ್ತದೆ. ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಚಿತ್ತಾ, ಸ್ವಾತಿ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರಗಳಿಗೆ ಕುಜದೋಷವಿಲ್ಲ.
ಧನ್ಯವಾದಗಳು
*ನಿಮ್ಮ ಜನ್ಮ ಲಗ್ನದಿಂದ ಸ್ತೀ ಸ್ವಭಾವ*
ಮಹಿಳೆಯರ ಜನ್ಮ ಸಮಯದಲ್ಲಿ ಲಗ್ನದಲ್ಲಿ ಸೂರ್ಯ ಗ್ರಹ ಸ್ಥಿತಗೊಂಡಿದ್ದರೆ ಆಕೆ ಕಠಿಣ ಸ್ವಭಾವ ಉಳ್ಳವಳು, ಪರಧನಾಪೇಕ್ಷೆಯುಳ್ಳವಳು ಆಗಿರುತ್ತಾಳೆ.
ಒಂದೊಮ್ಮೆ ಉಚ್ಛರಾಶಿಯಲ್ಲಿ ಸೂರ್ಯನಿದ್ದರೆ ಸುಖವಂತಳಾಗಿರುತ್ತಾಳೆ.
ಎರಡನೇ ಭಾವದಲ್ಲಿದ್ದರೆ ನೇತ್ರ ರೋಗ ಉಂಟಾಗಬಹುದು. ತೃತೀಯ ಭಾವದಲ್ಲಿ ರವಿ ಸ್ಥಿತನಾಗಿದ್ದರೆ ಆಕೆ ಪ್ರಸನ್ನಚಿತ್ತಳು ಆಗಿರುತ್ತಾಳೆ.
ಚತುರ್ಥ ಭಾವದಲ್ಲಿ ಅಷ್ಟಾಗಿ ಸುಖವಿರುವುದಿಲ್ಲ.
ಪಂಚಮದಲ್ಲಿ ರವಿ ಸ್ಥಿತನಾಗಿದ್ದರೆ ದೇವತಾ ಆರಾಧನೆ ಮಾಡುವವಳಾಗಿರುತ್ತಾಳೆ.
ಒಂದೊಮ್ಮೆ ಸೂರ್ಯ ಮೇಷ ಸಿಂಹರಾಶಿಯಲ್ಲಿದ್ದರೆ ಬಾಲ್ಯಾವಸ್ಥೆಯಲ್ಲಿ ಈಕೆ ರೋಗದಿಂದ ನರಳಿರುವ ಸಾಧ್ಯತೆ ಇರುತ್ತದೆ.
ಷಷ್ಠ ಭಾವದಲ್ಲಿ ರವಿ ಸ್ಥಿತನಾಗಿದ್ದರೆ ಶತ್ರುಗಳನ್ನು ಗೆಲ್ಲುವವಳು, ದಕ್ಷ ಳೂ, ಧನಪುತ್ರಾದಿ ಸುಖವುಳ್ಳವಳೂ, ಸಾಧು-ಸಂತರ ಸೇವೆ ಮಾಡುವವಳೂ, ಪ್ರಬಲಳೂ, ಚತುರೆ, ಸುಂದರ ಆಕೃತಿ, ಪತಿಭಕ್ತಳೂ, ಉತ್ತಮ ಜ್ಞಾನ ಬುದ್ಧಿ ಉಳ್ಳವಳೂ, ಶಾಂತ ಸ್ವಭಾವದವಳೂ ಆಗಿರುತ್ತಾಳೆ.
ರವಿಯು ಸಪ್ತಮ ಭಾವದಲ್ಲಿದ್ದರೆ ಪತಿಯಿಂದ ತಾತ್ಸಾರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು,
ಅಷ್ಟಮ ಭಾವದಲ್ಲಿ ರವಿ ಗ್ರಹವು ಸ್ಥಿತವಾಗಿದ್ದರೆ ಬಾಲ್ಯದಲ್ಲಿ ಅನಾರೋಗ್ಯದಿಂದ ನರಳಿರುವ ಸಾಧ್ಯತೆ ಹೆಚ್ಚು. ರಕ್ತದೋಷ ಕಾಣಿಸಿಕೊಳ್ಳಬಹುದು.
ನವಮ ಭಾವದಲ್ಲಿ ಸೂರ್ಯನಿದ್ದರೆ ಆಕೆ ಸಾಹಸಪ್ರಿಯಳಾಗಿರುತ್ತಾಳೆ,ಕೋಪದ ಸ್ವಭಾವ ಹೊಂದಿರುತ್ತಾಳೆ.
ಸೂರ್ಯ ನೇನಾದರೂ ದಶಮ ಭಾವದಲ್ಲಿದ್ದರೆ ದುಷ್ಕರ್ಮಗಳಲ್ಲಿ ಪ್ರೀತಿಯುಳ್ಳವಳಾಗಿರುವ ಸಾಧ್ಯತೆ ಹೆಚ್ಚು.
ಏಕಾದಶ ಭಾವದಲ್ಲಿ ರವಿ ಸ್ಥಿತನಾಗಿದ್ದರೆ ಜಿತೇಂದ್ರಿಯಳು, ಕ್ಷ ಮಾಶೀಲೆ, ಬಂಧುಸಮ್ಮಾನಿತೆ, ಅನೇಕ ಕಲೆಗಳಲ್ಲಿ ಪ್ರವೀಣೆ, ಅನೇಕ ಮೂಲಗಳಿಂದ ಲಾಭ ಪಡೆಯುವಾಕೆ, ದಾನಧರ್ಮ ಮಾಡುವ ಪ್ರವೃತ್ತಿ, ಮಕ್ಕಳು, ಮೊಮ್ಮಕ್ಕಳನ್ನು ಹೊಂದುತ್ತಾಳೆ.
ದ್ವಾದಶ ಭಾವದಲ್ಲಿ ರವಿಯಿದ್ದರೆ ಅನಗತ್ಯವಾಗಿ ಹಣವನ್ನು ಪೋಲು ಮಾಡುತ್ತಾಳೆ. ವಾತದೋಷ ಆಕೆಯನ್ನು ಕಾಡಬಹುದು. ಇನ್ನೂ
ಪುರುಷರ ಜಾತಕದಲ್ಲಿ ಶುಕ್ರ ನ ಸ್ಥಾನ ದಿಂದ ಸಪ್ತಮ ಸ್ಥಾನದಿಂದ ಅವರ ಸ್ವಭಾವ, ಮುಂದೆ ಇರುವ ದಾಂಪತ್ಯ ಜೀವನದ ರಹಸ್ಯ ಒಡುಕು ಕೆಡೆಕು , ಗಳನ್ನು ತಿಳಿಯಬಹುದು ದಶಮ ಭಾವದ ಆಧಾರದಿಂದಲೂ ಅವರ ನಡತೆ ತಿಳಿಯಬಹುದು ಜಾತಕ ವಿಲ್ಲದಿದ್ದರೂ ಅವರ ನಡಿಗೆ ಕಾಲುಬೆರಳುಗಳಿಂದ ಮುಂದಿನ ಜೀವನದ ಕಷ್ಟ ನಷ್ಟ, ಸುಖ ಸಂತೋಷ ಗಳನ್ನು ಸಹ ತಿಳಿಸಬಹುದು .
ನಾನು ಸಪ್ತಮ ಭಾವ ಮತ್ತು ವಿವಾಹ ದಾಂಪತ್ಯ ಜೀವನಕ್ಕೆ ಸಂಬಂಧ ಇರುವ ಎಲ್ಲಾ ರೀತಿಯ ಜ್ಯೋತಿಷ್ಯ ವಿಷಯಗಳನ್ನು ಕುರಿತು ಉಪನ್ಯಾಸ ಮತ್ತು ತುಂಬಾ ಆಳವಾಗಿ ಅಧ್ಯಯನ ನಡೆಸುತ್ತಿದ್ದೆನೆ ,
ಯಾವ ಕಾರಣಕ್ಕಾಗಿ ವಿವಾಹ ಜೀವನ ದುಃಖ ವಿಚ್ಛೇದನ, ಕಿರುಕುಳ, ಅತೀಜಗಳ, ಏಕೆಂದರೆ ನನ್ನ ಪ್ರಕಾರ ಮನುಷ್ಯನ ಜೀವನ 70% ಭಾಗ ಮದುವೆ ಜೀವನದಲ್ಲೆ ಇರುತ್ತದೆ , ಶೇಕಡ 50% ಜನ ಮದುವೆ ನಂತರ ಕೆಟ್ಟ ಚಟ ಹಣದ ಸಮಸ್ಯೆ , ಮಾನಸಿಕ ಒತ್ತಡ, ತುಂಬಾ ಕಷ್ಟ ಅನುಭವಿಸುತ್ತಾರೆ , ಆಂದರಿಂದ ಇದಕ್ಕೆ ಪರಿಹಾರ ನಮ್ಮ ಕೈಯಲ್ಲೆ ಇದೆ , ನಾವು ಯಾವುದಾದರು ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳುವಾಗಲು, ಅದರ ಗುಣಮಟ್ಟ, ಅನೇಕ ರೀತಿಯಲ್ಲಿ ವಿಚಾರಿಸಿ ನಂತರ ತಗೆದುಕೊಳ್ಳುತ್ತೆವೆ, ಆದರೇ ನಮ್ಮ ಜೀವನದ ಅಮೂಲ್ಯ ಸಮಯ ಬಂದಾಗ ನಾವು ಎಡವಟ್ಟು ಎಡುವುತ್ತೆವೆ, ನಮ್ಮ ಆಯ್ಕೆ ತಪ್ಪು ಎಂದು ಮದುವೆಯ ನಂತರ ಕೊರಗುತ್ತೆವೆ, ಆಂದರಿಂದ ಮದುವೆ ಕಿಂತ ಮುಂಚೆ ಜಾತಕ ಪರಿಶೀಲನೆ, ಅವರ, ನಡೆ, ಅವರ ಕಾಲು ಬೆರಳು ಆಕಾರ, ನೋಡಬೇಕು , ಕೇವಲ ಸಲಾವಳಿ ಬಂದ ತಕ್ಷಣ ಎಲ್ಲವೂ ಶುಭ ಎನ್ನುವುದು ತಪ್ಪು ಮಾಹಿತಿ ಸಲಾವಳಿಯಲ್ಲಿ 34/ 30 ಗುಣ ಬಂದರು ಮದುವೆ ಜೀವನ ಮುರಿದಿರುವ ಘಟನೆ, ನಮ್ಮ ಮುಂದೆ ನಡೆದಿದೆ ಆಂದರಿಂದ ತುಂಬಾ ಆಳವಾಗಿ ಜಾತಕ ಪರಿಶೀಲನೆ ಅಗತ್ಯ ಹಾಗೂ ಮದುವೆ ಮೂಹುರ್ತ ತುಂಬಾ ಮುಖ್ಯ, ಎನೇ ನೋಡಿ ಎನೇ ಮಾಡಿದರು ಜೀವನದಲ್ಲಿ ಕಷ್ಟ ಅನ್ನುವುದಾದರೆ ,,,,ಗೊತ್ತೊ ಗೊತ್ತಿಲದಹಾಗೆ ತಪ್ಪು ನೀವು ಎಡುವುತ್ತಿರಾ, ಏನುಮಾಡಲು ಸಾದ್ಯವಿಲ್ಲ ನಿಮ್ಮ ಹಿಂದಿನ ಜನ್ಮದ ಕರ್ಮಫಲ ಅಷ್ಟೇ ಅನುಭವಿಸಬೇಕು , ಅದೇ ಹಣೆಬರಹ,
ಇನ್ನೊಂದು ವಿಚಾರ ನೀವು ಮದುವೆ ಮಾಡುವಾಗ ಎಷ್ಟೋ ಲಕ್ಷಗಟ್ಟಲೆ ಖರ್ಚು ಮಾಡಿ ಮಾಡುತ್ತಿರಾ ಏತಕ್ಕಾಗಿ?
ವಧು ವರರು ಸುಖ ಸಂತೋಷದಿಂದ ಇರಲು ತಾನೇ ಆದರೇ ಇಬ್ಬರ ಜಾತಕ ಹೊಂದಾಣಿಕೆ ಬಗ್ಗೆ ತಿಳಿಯಲು, ಜ್ಯೋತಿಷ್ಯ ರ ಬಳಿ ಚೌಕಾಸಿ ಮಾಡುತ್ತಿರಾ ಅಥವಾ ಸರಿಯಾಗಿ ಕೇಳುವುದಿಲ್ಲ ಕಟಾಚಾರಕ್ಕಾಗಿಯೊ, ಅಥವಾ ಭಯಕ್ಕಾಗಿಯೊ ಗೊತ್ತಿಲ್ಲ, ಇನ್ನೂ ಕೆಲವರು ಎಲ್ಲಿ ಹಣ ಜಾಸ್ತಿ ಆಗುತ್ತದೆಯೊ ಅನ್ನುವ ಭಯ ಲಕ್ಷಗಟ್ಟಲೇ ಹಣ ಖರ್ಚು ಮಾಡುವವರಿಗೆ, ಅವರ ಶುಲ್ಕ 1000 ಇರಬಹುದು ಅದನ್ನು ಕೊಡಲು ಹಿದೆ ಮುಂದೆ ನೊಡುತ್ತಾರೆ, ಕೆಲವು ಜನ,
ಆಂದರಿಂದ
ಪ್ರೀ ಯಾಗಿ ಎನು ಕೇಳುತ್ತಿಲ್ಲವಲ್ಲ ಸರಿಯಾದ ಮಾಹಿತಿ ಪಡೆಯಬೇಕು ಅದು ನಿಮ್ಮ ಹಕ್ಕು ಅದೇ ಜಾತಕವನ್ನು ಹಲವು ಕಡೆ ಜ್ಯೋತಿಷ್ಯಶಾಸ್ತ್ರಜ್ಞರ ಬಳಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಮುನ್ನಡೆಯಬೇಕು ಅದು ನಿಮ್ಮ ಕರ್ತವ್ಯ, ಕೇಲವು ಭಾರಿ ಎಷ್ಟೇ ಅನುಭವಿ ಜ್ಯೋತಿಷ್ಯರು ಎಡುವುತ್ತಾರೆ, ಆಂದರಿಂದ 10 ಭಾರಿ ಯೋಚಿಸಿ , 10 ಕಡೆ ತೋರಿಸಬೇಕು, ನಾವು ಯಾವುದೇ ವಸ್ತುವನ್ನು ತರುವ ಮುಂಚೆ ಹತ್ತು ಕಡೆ ವಿಚಾರಿಸುವುದಿಲ್ಲವೆ ? ಹಾಗೆ
ಎಲ್ಲ ಮುಗಿದ ನಂತರ ಯಾರೂ ಬರುವುದಿಲ್ಲ
ಇನ್ನೂ ನಿಮಗೆ ಬಿಟ್ಟದ್ದು ,
*ಜಾತಕದಲ್ಲಿ ಗುರು ಸ್ಥಾನ ದ ಫಲ ಹಾಗೂ ಗುರು ಗ್ರಹ ಮತ್ತು ಗುರುವಿನ ಮಹತ್ವ*
ಪ್ರಥಮವಾಗಿ ಎಲ್ಲರಿಗೂ ಗುರುವಾರದ ಶುಭಾಶಯಗಳು .
ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಅವಶ್ಯಕತೆ ಇದ್ದೆ ಇದೆ.
ಏಕೆಂದರೆ ಗುರುವಿಲ್ಲದೆ ಕಲಿತ ವಿದ್ಯೆ ಶೂನ್ಯ ಎನ್ನುತ್ತಾರೆ. ಒಬ್ಬ ಕಳ್ಳನಿಗೂ ಗುರು ಬೇಕು ಎನ್ನುತ್ತಾರೆ
ಶ್ರೀ ರಾಮಕೃಷ್ಣ ಪರಮಹಂಸರು. ಶ್ರೀಕೃಷ್ಣನಿಗೆ ಸಾಂದೀಪನಿ ಗುರು, ಶ್ರೀ ಶಂಕರಾಚಾರ‍್ಯರಿಗೆ ಶ್ರೀ ಗೋವಿಂದ ಭಗವತ್ಪಾದರು ಗುರು, ಶ್ರೀ ರಾಮಕೃಷ್ಣ ಪರಮಹಂಸರಿಗೆ ತೋತಾಪುರಿ ಗುರು, ಪಾಂಡವರಿಗೆ ಮತ್ತು ಕೌರವರಿಗೆ ದ್ರೋಣಾಚಾರ‍್ಯರು ಗುರು, ಶ್ರೀರಾಮ ಲಕ್ಷ್ಮಣರಿಗೆ ವಿಶ್ವಾಮಿತ್ರರು ಗುರು.
ಗುರುವಿನಲ್ಲಿ ಮೂರು ವಿಧ.
1. ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವ ಗುರು.
2. ಶೈಕ್ಷಣಿಕ, ವ್ಯಾವಹಾರಿಕ ಬದುಕಿಗೆ ಬೇಕಾದ ಶಿಕ್ಷಣ ನೀಡುವ ಗುರು.
3. ಅಂಗೀರಸ ಪುತ್ರನಾದ ಬೃಹಸ್ಪತಿ ಅಥವಾ ಗುರು.
ಈತ ನವಗ್ರಹಗಳಲ್ಲಿ ಒಂದಾದ ಗ್ರಹ ಮತ್ತು ಜ್ಯೊತಿಷ್ಯ ಶಾಸ್ತ್ರದಲ್ಲಿ ಈ ಗುರುವಿನ ಸ್ಥಾನಕ್ಕೆ ಬಹಳ ಮಹತ್ವವಿದೆ.
ಈ ಗುರು ನಮ್ಮ ನಿತ್ಯ ಜೀವನದಲ್ಲಿ ಯಾವ ರೀತಿ ಪರಿಣಾಮ ಬೀರುತ್ತಾನೆ ಎಂದು ವ್ಯಕ್ತಿಯ ಜಾತಕ ಅಥವಾ ಕುಂಡಲಿ ಮತ್ತು ರಾಶಿಯ ಮೂಲಕ ತಿಳಿಯಬಹುದು.
ಗುರು ಗ್ರಹ: ನವಗ್ರಹಗಳಲ್ಲಿ ಅತಿ ಶುಭ ಹಾಗೂಶಾಂತ ಗ್ರಹ ಎಂದರೆ ಗುರು.
ಈತನ ಸ್ವಕ್ಷೇತ್ರ ಧನುಸ್ಸು ಮತ್ತು ಮೀನ ರಾಶಿ. ಕಟಕರಾಶಿ ಉಚ್ಚರಾಶಿಯಾದರೆ ಮಕರ ನೀಚರಾಶಿಯಾಗಿದೆ. ಗುರು ವಿದ್ಯಾವಂತನು, ಶಾಂತ ಸ್ವಭಾವದವನು, ಅಧ್ಯಾತ್ಮಿಕ ಶಾಸ್ತ್ರ ನಿಪುಣನು, ಸಮಾಜ ಕಾರ‍್ಯದಲ್ಲಿ ಪ್ರವೀಣ, ಬುದ್ಧಿವಂತನು, ಪರೋಪಕಾರಿ, ಹಣದ ವಿಷಯದಲ್ಲಿ ಉದಾರಿ, ಪುತ್ರಕಾರಕ, ಶಿಕ್ಷಣ ನೀಡುವವನೂ ಆಗಿರುವನು.
ಜಾತಕದಲ್ಲಿ ಗುರು
ಕುಂಡಲಿಯಲ್ಲಿ ಗುರುವು ಲಗ್ನ ಅಥವಾ ಮೊದಲನೆ ಭಾವದಲ್ಲಿ ಇದ್ದರೆ ಆ ಜಾತಕದವರು ಸುಂದರ ದೇಹವುಳ್ಳವರು, ಅವರು ದೀರ್ಘ ಆಯುಸ್ಸು ಉಳ್ಳವರು, ಪಂಡಿತರೂ, ಧೀರರೂ, ಶ್ರೇಷ್ಠ ವ್ಯಕ್ತಿಯೂ ಆಗಿರುತ್ತಾರೆ.
ಕುಂಡಲಿಯಲ್ಲಿ ಗುರುವು ಎರಡನೇ ಮನೆಯಲ್ಲಿದ್ದರೆ ಆ ಜಾತಕದವರು ಧನಿಕರೂ, ಉತ್ತಮ ಆಹಾರ ಸೇವಿಸುವವರೂ, ವಾಕ್ ಚಾತುರ‍್ಯ ಹೊಂದಿರುವವರೂ, ಮೃದುಭಾಷಿಗಳೂ ಆಗಿರುತ್ತಾರೆ.
ಮೂರನೇ ಮನೆಯಲ್ಲಿದ್ದರೆ ಬೇರೆಯವರಿಂದ ತಿರಸ್ಕರಿಸಲ್ಪಡುವವರೂ, ಕೃಪಣರೂ, ಸ್ತ್ರೀಯರಿಂದ ಪರಾಜಿತನೂ, ಹೆಚ್ಚು ಪಾಪ ಕಾರ್ಯ ಮಾಡುವವರೂ ಆಗಿರುತ್ತಾರೆ.
ಕುಂಡಲಿಯಲ್ಲಿ ಗುರು 4ನೇ ಮನೆಯಲ್ಲಿದ್ದರೆ ಆ ಜಾತಕರು ವಾಹನ ಸುಖವನ್ನು ಹೊಂದುವರು, ಬುದ್ಧಿವಂತರೂ, ಭೋಗವಂತರೂ, ಶ್ರೇಷ್ಠರೂ, ಶತ್ರುಗಳನ್ನು ಜಯಿಸುವವರೂ ಆಗಿರುತ್ತಾರೆ.
ಗುರು ಐದನೇ ಮನೆಯಲ್ಲಿದ್ದರೆ ಪುತ್ರ ಸಂತಾನ, ಉತ್ತಮ ಮಿತ್ರರನ್ನು ಹೊಂದುವರು. ಧೈರ‍್ಯವಂತರಾಗಿದ್ದು ಎಲ್ಲಾ ವಿಧದ ಸುಖವನ್ನು ಹೊಂದುತ್ತಾರೆ.
ಆರನೇ ಮನೆಯಲ್ಲಿದ್ದರೆ ಕೊಟ್ಟ ಮಾತಿನಂತೆ ನಡೆಯುವವರು, ಯಾವಾಗಲೂ ಹೊಟ್ಟೆಗೆ ಸಂಬಂಧಪಟ್ಟ ತೊಂದರೆ ಅನುಭವಿಸುವರು. ಪತ್ನಿಯಿಂದ ಕೀರ್ತಿಯನ್ನು ಹೊಂದುವರು.
7ನೇ ಮನೆಯಲ್ಲಿದ್ದರೆ ಭಾಗ್ಯವಂತರಾಗಿ ಉತ್ತಮ ಪತ್ನಿ ಅಥವಾ ಪತಿಯನ್ನು ಹೊಂದುತ್ತಾರೆ. ಸಂಸಾರದಲ್ಲಿ ನೆಮ್ಮದಿಯಿಂದ ಇರುವವರೂ, ಸಮಯಕ್ಕೆ ಸರಿಯಾಗಿ ಮಾತಾಡುವವರೂ ಕವಿಯೂ, ಲೇಖಕರೂ ಆಗಿರುತ್ತಾರೆ.
ಗುರು 8 ನೇ ಮನೆಯಲ್ಲಿದ್ದರೆ ಆಯಸ್ಸು ಕಡಿಮೆ ಇರುತ್ತದೆ. ಸಾಲಗಾರರೂ, ಆರೋಗ್ಯದಲ್ಲಿ ಆಗಾಗ ತೊಂದರೆ ಅನುಭವಿಸುವವರೂ, ಉತ್ತಮ ಕೆಲಸದಲ್ಲಿ ಇರುವವರೂ ಆಗಿರುತ್ತಾರೆ.
9ನೇ ಮನೆಯಲ್ಲಿದ್ದರೆ ದೇವರಲ್ಲಿ, ಗುರುಹಿರಿಯರಲ್ಲಿ ಅಪಾರ ಭಕ್ತಿ ಹೊಂದಿರುವವರೂ, ವಿದ್ಯಾವಂತರೂ, ಮಂತ್ರಿಗಳ ಭಾಗ್ಯ ಹೊಂದಿರುವವರೂ,
10ನೇ ಮನೆಯಲ್ಲಿದ್ದರೆ ಪ್ರಾರಂಭಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡುವವರೂ, ಸಕಲ ಉಪಾಯ ಮತ್ತು ಕುಶಲತೆಯನ್ನು ಹೊಂದಿರುವವರೂ, ವಾಹನ, ಧನ, ಭಾಗ್ಯ, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿ ಮಾಡುವವರು ಆಗಿರುತ್ತಾರೆ.
11ನೇ ಮನೆಯಲ್ಲಿದ್ದರೆ ಅಧಿಕ ಲಾಭ ಗಳಿಸುವವರು, ಅನೇಕ ಸೇವಕರನ್ನು ಹೊಂದಿರುವವರು, ಜನಗಳಿಂದ ಪ್ರೀತಿ ಹೊಂದುವವರು, ಅಲ್ಪ ಸಂತಾನ ಹೊಂದಿರುವವರು ಆಗಿರುತ್ತಾರೆ.
12ನೇ ಮನೆಯಲ್ಲಿದ್ದರೆ ಆಲಸಿಯೂ, ಜಗಳಗಂಟರೂ, ಜನಗಳಲ್ಲಿ ದ್ವೇಷ ಹೊಂದಿದವರೂ, ಯಾವ ಕೆಲಸಕ್ಕೂ ಹೇಸದವರೂ ಆಗಿರುತ್ತಾರೆ.
ನಿಮ್ಮ ಜಾತಕದಲ್ಲಿ ಗುರುಗ್ರಹ ಬಲ ವಿಲ್ಲದಿದ್ದರೇ ಅಥವಾ ನೀಚ ಅಥವಾ ಆಗ್ರಹ ದ ದೋಷ ತಿಳಿದು ಸೂಕ್ತ ವಾದ ಪರಿಹಾರ ಮಾಡಿ ಎಲ್ಲವೂ ಶುಭ ವಾಗುತ್ತದೆ.
ಗುರುಗ್ರಹದ ಅನುಗ್ರಹಕ್ಕೆ.
* ಗುರುಗ್ರಹದ ವಿಗ್ರಹಕ್ಕೆ ಪ್ರತಿದಿನ ಹಳದಿ ಬಟ್ಟೆ ಅಥವಾ ಹಳದಿ ಬಣ್ಣದ ಹೂ ಅರ್ಪಿಸಿ.
* ಮಾನಸಿಕ ಅಸ್ವಸ್ಥರಿಗೆ ಆಹಾರವನ್ನು ನೀಡಿ.
* ಬಡಮಕ್ಕಳಿಗೆ ವಿದ್ಯಾಭ್ಯಾಸದ ಸಾಮಗ್ರಿಗಳನ್ನು ನೀಡಿ.
ಪುಷ್ಯರಾಗದ ಉಂಗುರವನ್ನು ಧರಿಸಿ.ಧರಿಸಿ.
ಇದು ನಿಮ್ಮ ಜನ್ಮ ಲಗ್ನ ದಿಂದ ನೋಡಬೇಕು
* ಗುರು ಅಷ್ಟೋತ್ತರ ಪಠಿಸಿ
* ಗುರುವಾರ ಗುರವಿನ ದೇವಾಲಯಕ್ಕೆ ಹೋಗುವುದು.
* ಗೋವುಗಳಿಗೆ ಪ್ರತಿದಿನ ಅಕ್ಕಿ ಮತ್ತು ಬೆಲ್ಲವನ್ನು ಕೊಡಿ.
* ಗುರು ಜಪ ಅಥವಾ ಗುರು ಶಾಂತಿ ಮಾಡಿಸಿ.
* ಗುರು ದತ್ತಾತ್ರೇಯ ಅಷ್ಟೋತ್ತರ ಪಠಿಸಿ.
ಧನ್ಯವಾದಗಳು .
ಹರುಷ ಜ್ಯೋತಿಷ್ಯ. ಜಾತಕ ಮಾಡಿಸಲು ಅಥವಾ ಯಾವುದೇ ಭವಿಷ್ಯ ದ ಬಗ್ಗೆ ಪ್ರಶ್ನೆ , ಸಂಖ್ಯಾಶಾಸ್ತ್ರ Numerology ಗಾಗಿ ಸಂಪರ್ಕಿಸಿ :7676761586,9591372555
Subscribe to:
Post Comments (Atom)
No comments:
Post a Comment