Wednesday, 3 July 2019

ಅಭೀಂದ್ರ ರಾಮಮೂರ್ತಿ 9845347963 9341035841 Naadi Astrologer

ಶುಕ್ರ ಮತ್ತು ಚಂದ್ರನ ಯುತಿಯು ಜಾತಕನನ್ನು ಮೇಲಿನಿಂದ ಒಮ್ಮೆಗೆ ಕೆಳಗೆ ತಳ್ಳಿ ಬಿಡುತ್ತದೆ . ಚಂದ್ರನು ಶುಕ್ರನ ಮನೆ ಅಥವಾ ಶುಕ್ರನ ನಕ್ಷತ್ರಗಳಲ್ಲಿ ಸ್ಥಿತವಾಗಿದ್ರೆ ಅಥವಾ ಶುಕ್ರನು ಚಂದ್ರನ ನಕ್ಷತ್ರ ಅಥವಾ ಚಂದ್ರನ ಮನೆಯಲ್ಲಿ ಇರುವುದು , ಇಲ್ಲಾ ಶುಕ್ರ ಚಂದ್ರರಿಗೆ ಪರಿವರ್ತನಾ ಯೋಗ ಜಾತಕದಲ್ಲಿದ್ರೆ , ಅವರು ತಮಗೆ ಗೊತ್ತಿಲ್ಲದೇ ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ . ಸಾಲವನ್ನು ಏಕೆ ಮಾಡಿದೆ ಎಂಬುದು ಗೊತ್ತಾಗುವ ಹೊತ್ತಿಗೆ ಹೊರಗೆ ಬಾರದ ಹಾಗೇ ಆಗಿರುತ್ತಾರೆ . ಇಲ್ಲಿ ಒಂದು ಮುಖ್ಯವಾಗಿರುವ ಪಾಯಿಂಟ್ ಶುಕ್ರ ಚಂದ್ರ ಯೋಗದವರು ಎಲ್ಲಿಯೇ ಹೋದ್ರು ಇವರಿಗೆ ಕರೆದು ಹಣ ಕೊಡುವವರು ಸಿಕ್ಕುತ್ತಾರೆ . ಅದರಿಂದ ಇವರು ಒಬ್ಬರಾದ ಮೇಲೆ ಒಬ್ಬರು ಅಂತ ಎಲ್ಲಿಯೆಲ್ಲಿ ಹಣ ಸಿಕ್ಕುತ್ತೆ ಅಲ್ಲೆಲ್ಲ ಹಣವನ್ನು ಪಡೆದು ಕೊಂಡು ಸಾಲಗಾರರಾಗುತ್ತಾರೆ . ಎಷ್ಟೋ ಸಾರಿ ಈ ಯೋಗದವರು ಯಾರಿಗೋ ಶೂರಿಟಿ ಹಾಕಿ ತಮ್ಮೆಲ್ಲ ಆಸ್ತಿಯನ್ನು ಕಳೆದು ಕೊಳ್ಳೋದೇ ಹೆಚ್ಚು . ಯಾರಮನೆಯಲ್ಲಿ ನೀರು ಹೆಚ್ಚಾಗಿ ಸೋರಿಹೋಗುತ್ತೋ ಅವರಿಗೆ ಶುಕ್ರ ಚಂದ್ರ ಯೋಗವಿರುತ್ತೆ . ಇಲ್ಲಾ ಅಗ್ನಿ ಮೂಲೆಯಲ್ಲಿ ನೀರಿನ ಟ್ಯಾಪ್ ಇರಬಹುದು . ಅಥವಾ ನೈರುತ್ಯದಲ್ಲಿ ಬಚ್ಚಲು ಇರುತ್ತೆ ಇಂದಿನ ಪ್ರಶ್ನೆ , ಹಿತಶತ್ರುಗಳು . ಮುಖ್ಯವಾಗಿ ಪರಾಶರ ಪದ್ಧತಿ ಪ್ರಕಾರ 6 ನೇ ಅಧಿಪತಿ ಮತ್ತು 6 ನೇ ಭಾವ ಶತ್ರುವನ್ನು ಸೂಚಿಸುತ್ತಾರೆ . 6 ನೇ ಅಧಿಪತಿಯ ಸ್ಥಿತಿಯನ್ನು ನೋಡಿ ಯಾವ ರೀತಿಯ ಶತೃ ಅಂತ ತಿಳಿಯಬೇಕು . ಲಗ್ನಾಧಿಪತಿ 6 ನೇ ಭಾವದಲ್ಲಿದ್ರೆ ಜಾತಕನು ತನಗೆ ತಾನೇ ಶತೃವಾಗುತ್ತಾನೆ . ಅಂದ್ರೆ ಜಾತಕನು ಮಾಡುವ ಯಡವಟ್ಟೇ ಅವನಿಗೆ ಶತ್ರುವಾಗುತ್ತೆ . ರವಿ 6 ರಾಲಿದ್ರೆ ತಂದೆಯೇ ಶತ್ರುವಾಗುತ್ತಾರೆ . ಚಂದ್ರನಿದ್ರೆ ಅಮ್ಮ , ಶುಕ್ರನಿದ್ರೆ ಹೆಂಡತಿ ಮತ್ತು ಮಗಳು , ಶನಿ ಆದ್ರೆ ಕೆಲಸಗಾರರು , ರವಿಯಿದ್ರೆ ಮೇಲಾಧಿಕಾರಿಯೂ ಶತೃ ಆಗುತ್ತಾರೆ . ಹೀಗೇ ಯಾರು ಶತೃ ಅಂತ ನೋಡಬೇಕು . ನಾಡಿ ಪ್ರಕಾರ ಕುಜನು ಗುರುವಿನ ಜ್ಯೋತೆ ಇದ್ರೆ ಇವರಿಗೆ ಹಿತಾ ಶತ್ರುಗಳು ಜಾಸ್ತಿ . ಕುಜನ ಜ್ಯೋತೆ ಬುಧನಿದ್ರೆ ಬಂದುಗಳು ಶತ್ರುಗಳು , ಕುಜನ ಜ್ಯೋತೆ ಶುಕ್ರನಿದ್ರೆ ಗಂಡನಿಗೆ ಹೆಂಡತಿ ಹೆಂಡತಿಗೆ ಗಂಡ ಶತೃ ಆಗುತ್ತಾರೆ . ಕುಜನ ಜ್ಯೋತೆ ಶನಿ ಇದ್ರೆ ಜ್ಯೋತೆಯಲ್ಲಿ ಕೆಲಸ ಮಾಡುವವರು ಶತ್ರುವಾಗಿರುತ್ತಾರೆ ಸ್ನೇಹಿತರೇ , ಜಿಪುಣ ಗ್ರಹ ಅಂದ್ರೆ ಶನಿ ಮಹಾರಾಜ್ . ಶನಿ ಲಗ್ನದಲ್ಲಿದ್ರೆ ಜಾತಕನು ಜಿಪುಣ , ಶನಿ ಪಂಚಮ ಮಕ್ಕಳು ಜಿಪುಣರು , ಚತುರ್ಥ ಅಮ್ಮ , ನವಮ ತಂದೆ , ಸಪ್ತಮ ಹೆಂಡತಿ , ಹೀಗೆ ಜಿಪುಣತನವನ್ನು ಶನಿ ಕೊಡುತ್ತಾನೆ . ಗುರುವಿನ ಜ್ಯೋತೆ ಇದ್ರೆ ಜಾತಕನು ಜಿಪುಣ ಆಗಿರುತ್ತಾನೆ ಇಲಂದ್ರೆ ಅವನ ಹತ್ರ ಕೊಡೋಕೆ ಹಣವಿರೋದಿಲ್ಲ . ಹಾಗೆಯೇ ಶುಕ್ರನ ಜ್ಯೋತೆ ಶನಿ ಇದ್ರೆ ಹೆಂಡತಿ ಅಥವಾ ಮಗಳು ಜಿಪುಣಿ . ಶನಿ ಚಂದ್ರನ ಜ್ಯೋತೆ ಇದ್ರೆ ಅಮ್ಮ ಜಿಪುಣಿ ಆಗಿರುತ್ತಾಳೆ ಯಾರದೇ ಜಾತಕದಲ್ಲಿ ಕುಜ ಮತ್ತು ಚಂದ್ರರು ಸೇರಿದರೆ ಅಥವಾ ಚಂದ್ರನ ನಕ್ಶತ್ರದಲ್ಲಿ ಕುಜನಿದ್ರೆ , ಅಥವಾ ಕುಜನ ನಕ್ಷತ್ರದಲ್ಲಿ ಚಂದ್ರನಿದ್ರೆ ಅಥವಾ ಕುಜನು ಚಂದ್ರನ ಮನೆಯಲ್ಲಿದ್ರೆ ಅಥವಾ ಚಂದ್ರನು ಕುಜನ ಮನೆಯಲ್ಲಿದ್ರೆ ಶಶಿ ಮಂಗಳ ಯೋಗವಾಗುತ್ತೆ . ಹಾಗೆಯೆ ಆ ಜಾತಕನ ಹಸ್ತದಲ್ಲಿ ಎಮ್ ಮಾರ್ಕ್ ಇರುತ್ತೆ . ಅಂದ್ರೆ ಇವರು ಯಾವಾಗ ದುಡ್ಡಿನ ಬಗ್ಗೆ ಹೆಚ್ಚಾಗಿ ಚಿಂತೆ ಮಾಡುತ್ತಾರೆ ಆಗ ಅವರಿಗೆ ಹಣ ಒದಗಿ ಬರುತ್ತೆ . ಸಮಯಕ್ಕೆ ಸರಿಯಾಗಿ ಹಣ ಬರುತ್ತೆ . ಜಾತಕನಿಗೆ ಲಗ್ನ , ಪಂಚಮ ಮತ್ತು ನವಮ ಭಾವದಲ್ಲಿ ಸ್ಥಿತ ಗ್ರಹ ಯಾವುದೇ ಇರಬಹುದು ಅಂದ್ರೆ ಬಾಧಕಾಧಿಪತಿ ಇರಬಹುದು , ಮಾರಕಾಧಿಪತಿ ಇರಬಹುದು ಅಥವಾ ಯೋಗ ಕಾರಕ ಗ್ರಹವೇ ಇರಬಹುದು ಅವರ ಭುಕ್ತಿಯಲ್ಲಿ ಜಾತಕನಿಗೆ ಅರೋಗ್ಯ ತೊಂದ್ರೆ ಬರುವುದಿಲ್ಲ . ಒಂದುವೇಳೆ ಹಳೆಯ ಯಾವುದೇ ಖಾಯಿಲೆ ಇದ್ದರು ಕೂಡ ಅದು ವಾಸಿಯಾಗುತ್ತೆ . ಆದ್ರೆ ಈ ಭುಕ್ತಿ ನಡೆಯುವಾಗ ಜಾತಕನಿಗೆ ಹಣಕಾಸಿನ ತೊಂದ್ರೆ ಮಾತ್ರ ಜಾಸ್ತಿ ಇರುತ್ತೆ ಹಾಗೆಯೇ ಮಾನಸಿಕ ಟೆನ್ಷನ್ ಇರುತ್ತೆ . ರಾಹು ಕೇತು ಬಗ್ಗೆ ಹೇಳಬೇಕಂದ್ರೆ , ಯಾರಿಗೆ ಮೋಕ್ಷದ ಕಡೆ ಹೆಚ್ಚು ಒಲವು ಇರುತ್ತೋ ಅವರಿಗೆ ಕೇತು ಗ್ರಹವು ಬೆನೆಫಿಕ್ ಗ್ರಹವಾಗಿ ಕಾಣುತ್ತಾನೆ ಯಾಕಂದ್ರೆ ಕೇತುವು ಜಾತಕನ ಆಸೆಗಳನ್ನು ಆದಷ್ಟು ಕಟ್ ಮಾಡಿ ಅವನನ್ನು ಮೋಕ್ಷದ ದಾರಿಯಲ್ಲಿ ಕರೆದು ಕೊಂಡು ಹೋಗುತ್ತಾನೆ . ಕೇತುವಿಗೆ ಗುರುವಿನ ಸಂಬಂಧ ಇದ್ರೆ ಇನ್ನು ಸುಲಭವಾಗಿ ಮೋಕ್ಷದ ದಾರಿಯಲ್ಲಿ ಕರೆದೊಯುತ್ತಾನೆ . ಗುರು ಕೇತು ಒಟ್ಟಿಗೆ ಇದ್ದಾಗ ಜಾತಕನನ್ನು ಬಲವಂತವಾಗಿ ಮೋಕ್ಷದ ಕಡೆಗೆ ಕರೆದೊಯುತ್ತಾರೆ . ಆಗ ನಮಗೆ ಕೇತು ಗ್ರಹವು ಪಾಪ ಗ್ರಹವಾಗಿ ಕಾಣುತ್ತದೆ . ಶುಭೋಧಯ ಸ್ನೇಹಿತರೇ , ನಾನೂ ಇಂದು ನಿಮಗೆ ಹೇಳಹೊರಟಿರೋದು ಜಾತಕದಲ್ಲಿಯ ವಿಷ ಯೋಗದ ಬಗ್ಯೆ . ನಾನು ಪಾಠಮಾಡುವಾಗ ನನಗೆ ಮೊದಲು ನೆನಪಿಗೆ ಬರೋದೇ ಶನಿ ಚಂದ್ರ ಯೋಗ . ಇದು ಒಂದು ವಿಷ ಯೋಗ . ನನ್ನ ಹಿಂದಿನಿಂದ ನನ್ನ ಶಿಷ್ಯರು ಮಾತಾಡಿದು ಕೇಳಿಸಿ ಕೊಂಡಿದ್ದೇನೆ , ಅದು ನಮ್ಮ ಗುರುಗಳಿಗೆ ಶನಿ ಚಂದ್ರ ಯೋಗ ಬಿಟ್ರೆ ಬೇರೆ ಮಾತಾಡೋದಿಲ್ಲ ಅಂತ . ಅದು ಕೂಡ ಸರಿ . ಯಾಕಂದ್ರೆ ಎಲ್ಲಾ ಯೋಗಗಳನ್ನು ತುಳಿದು ಮೇಲೆ ನಿಲ್ಲುವ ಯೋಗವೇ ಈ ವಿಷ ಯೋಗ . ನನ್ನ ಪ್ರತಿ ಕ್ಲಾಸ್ ನಲ್ಲಿ ಇದನ್ನು ಹೇಳುತ್ತೇನೆ . ನನ್ನ ಹದಿನೈದು ವರುಷದ ಜ್ಯೋತಿಷ್ಯ ಶಾಸ್ತ್ರದ ಅನುಭವ ಕೂಡ ಆಗಿದೆ . ಹಾಗಾದ್ರೆ ಏನು ಇದು ವಿಷ ಯೋಗ ಮತ್ತು ಹೇಗೆ ನಮ್ಮಗಳ ಮೇಲೆ ಹೇಗೆ ಪರಿಣಾಮ ಉಂಟಾಗುತ್ತೆ ನೋಡೋಣ ಅಲ್ವ? . ಶನಿ ಮತ್ತು ಚಂದ್ರರ ಯುತಿಯೇ ಶನಿ ಚಂದ್ರ ಯೋಗ ಅಥವಾ ವಿಷ ಯೋಗ . ಬೇರೆ ಬೇರೆ ರೀತಿಯಲ್ಲಿ ಈ ಯೋಗ ಉಂಟಾಗುತ್ತೆ ಹಾಗಾಗಿ ಇದರ ಪರಿಣಾಮ ಕೂಡ ಬೇರೆ ಬೇರೆ ತರಹ ಇರುತ್ತೆ . ಶನಿ ಚಂದ್ರನ ನಕ್ಷತ್ರದಲ್ಲಿ ಇದ್ರೆ ಅಥವಾ ಚಂದ್ರ ಶನಿ ನಕ್ಷತ್ರದಲ್ಲಿದ್ರೆ , ಶನಿ ಚಂದ್ರನ ಮನೇಲಿದ್ರೆ ಅಥವಾ ಚಂದ್ರ ಶನಿ ಮನೇಲಿದ್ರೆ . ಶನಿ ಮತ್ತು ಚಂದ್ರನಿಗೆ ಪರಿವರ್ತನಾ ಯೋಗವಿದ್ರೆ , ಶನಿಯ ದೃಷ್ಟಿಯು ಚಂದ್ರನ ಮೇಲಿದ್ರೆ ಹೀಗೆ ಅನೇಕ ರೀತಿಯ ಶನಿ ಚಂದ್ರ ಯೋಗ ಜಾತಕದಲ್ಲಿ ಉಂಟಾಗುತ್ತೆ . ಈ ಯೋಗವು ಗಂಡನ ಜಾತಕದಲ್ಲೇ ಇರಲಿ ಅಥವಾ ಹೆಂಡತಿಯ ಜಾತಕದಲ್ಲೇ ಇರಲಿ ಒಟ್ಟಾರೆಯಾಗಿ ಹೆಂಡತಿಯು ದಿನ ಕಣ್ಣೀರಿನಲ್ಲಿ ಕೈ ತೊಳೆಯುತ್ತಾಳೆ . ಈ ಯೋಗವು ಪೂರ್ತಿ ಕುಟುಂಬವನ್ನೇ ದುಃಖಕ್ಕೆ ಗುರಿ ಮಾಡುತ್ತೆ . ಈ ಯೋಗವಿರುವ ಕುಟುಂಬಕ್ಕೆ ಹೆಣ್ಣು ಕೊಟ್ಟ ತಂದೆ ತಾಯಿಯರು ತಮ್ಮ ಮಗಳ ಮದುವೆಯಾದ ಮೇಲೆ ಬೀಗರ ಮನೆಗೆ ಹೋಗುವುದೇ ಕಮ್ಮಿ ಕಾರಣ ಹೆಣ್ಣಿನ ಮಾತಾ ಪಿತೃಗಳಿಗೆ ಅಲ್ಲಿ ಗೌರವ ಕಮ್ಮಿ , ಹಾಗಾಗಿ ಅವರು ಮಗಳ ಅಳಿಯನ ಮನೆಗೆ ಹೋಗೋದು ಕಮ್ಮಿ ಮಾಡುತ್ತಾರೆ . ಎಷ್ಟೋ ಸಾರಿ ಮಗಳೇ ಅಪ್ಪ ಅಮ್ಮನಿಗೆ ನಮ್ಮ ಮನೆಗೆ ಬರಬೇಡಿ ಅಂತ ಹೇಳುವ ಸಂಭವ ಕೂಡ ಜಾಸ್ತಿ ಇರುತ್ತೆ . ಈ ಯೋಗವಿದ್ರೆ ಆ ಮನೆಯ ಸ್ತ್ರೀಯರಿಗೆ ಮಂಡಿ ನೋವು ಹೆಚ್ಚಾಗಿ ಕಾಡಿಸುತ್ತೆ . ಸೊಸೆ ಕೊಟ್ಟ ಯಾವುದೇ ತೀರ್ಥ ಪ್ರಸಾದವಾಗಲಿ ಅತ್ತೆ ಮಾವ ತಿನ್ನೋದಿಲ್ಲ . ಎಷ್ಟೋಸಾರಿ ಸೊಸೆ ಅವರ ತಂದೆ ಮನೆಯಿಂದ ತಂದ ಪದಾರ್ಥಗಳನ್ನು ಹಾಗೇ ಹಾಳುಮಾಡಿ ಸೊಸೆಯ ಕಣ್ಣು ಮುಂದೆಯೇ ಎಸೆಯುತ್ತಾರೆ . ಈ ಯೋಗವಿದ್ರೆ ಗಂಡನು ತನ್ನ ಅಕ್ಕ ತಂಗಿಯರು ಮತ್ತು ಅಮ್ಮನ ಮಾತಿಗೆ ಹೆಚ್ಚಿನ ಬೆಲೆಯನ್ನು ಕೊಟ್ಟು ಹೆಂಡತಿಯನ್ನು ತಿರಸ್ಕಾರ ವಾಗಿ ನೋಡುತ್ತಾರೆ . ಎಷ್ಟೋ ಸಾರಿ ಸೊಸೆಯು ಬೇಜಾರಾಗಿ ಉಪವಾಸ ಮಲುಗೋದೇ ಹೆಚ್ಚು ಇರುತ್ತೆ . ಸರಿಯಾಗಿ ಹೇಳಬೇಕಂದ್ರೆ ಅತ್ತೆಗೆ ಸೊಸೆ ಮತ್ತು ಸೊಸೆಯ ಮನೆಯವರನ್ನು ದೂರೋದೇ ಹೆಚ್ಚಾಗಿರುತ್ತೆ . ಈ ಯೋಗವಿರುವ ಗಂಡಂದಿರು ತಮ್ಮ ಹೆಂಡತಿಯನ್ನು ಕೆಲಸಕ್ಕೆ ಕಳಿಸೋದಿಲ್ಲ ಅವರಿಗೆ ತುಂಬಾ ಅನುಮಾನದ ಮನಸು . ಹೆಂಡತಿಯನ್ನು ಹೊರಗಡೆ ಕಳಿಸಲ್ಲ . ತವರು ಮನೆಗೆ ಕೂಡ . ಇವರಿಗೆ ಫ್ಯೂಚರ್ ಅಂದ್ರೆ ಭಯ ಜಾಸ್ತಿ . ಹೆಚ್ಚಾಗಿ ಈ ಯೋಗವಿರುವ ಸ್ತ್ರೀಯರು ಗಂಡನ ಮನೆಯಿಂದ ಒಂದು ಸಾರಿ ತಪ್ಪಿಸಿ ಕೊಂಡ್ರೆ ಸಾಕು ಅನ್ನುವ ರೀತಿಯಲ್ಲಿ ಇರುತ್ತಾರೆ . ತಂದೆಯ ಮನೆಯಲ್ಲಿ ಸ್ವಲ್ಪ ಅನುಕೂಲವಿದ್ರೆ ತವರಿಗೆ ಬಂದ ಹೆಣ್ಣು ಮಗಳು ವಾಪಸು ಗಂಡನ ಮನೆಗೆ ಹೋಗೋದಿಲ್ಲ . ಅವರು ನೆಕ್ಸ್ಟ್ ಹೋಗೋದು ಕೋರ್ಟಿಗೆ . ಈ ಯೋಗವಿರುವವರು ಧರಿಸುವ ಚಪ್ಪಲಿಯಲ್ಲಿ ಎಡಗಾಲಿನ ಚಪ್ಪಲಿಯೂ ಹೆಚ್ಚಾಗಿ ಸವೆದಿರುತ್ತೆ ಅಂದ್ರೆ ಚಪ್ಪಲಿಯನ್ನು ನೋಡಿಯೂ ಕೂಡ ನಾವು ಇವರಿಗೆ ವಿಷ ಯೋಗವಿದೆಯೇ ಅಂತ ಹೇಳಬಹುದು . ಶನಿ ಚಂದ್ರ ಯೋಗವನ್ನು ಬೇರೆ ರೀತಿಯಲ್ಲೂ ಕೂಡ ವಿವರಣೆ ಕೊಡಬಹುದು . ನಾನು ನೋಡಿರುವ ಬಹುತೇಕ ಯೋಗಿಗಳ , ಸನ್ಯಾಸಿಗಳ ಮತ್ತು ಯತಿಗಳ ಕುಂಡಲಿಯಲ್ಲಿ ಈ ಯೋಗವು ತುಂಭಾ ಸ್ಟ್ರಾಂಗ್ ಆಗಿ ಕಂಡು ಬಂದಿರುತ್ತೆ . ಈ ಯೋಗವು ಯಾವುದೇ ಸನ್ಯಾಸಿ ಅಥವಾ ಯತಿಗಳಿಗೆ ಕೆಟ್ಟದನ್ನು ಮಾಡುವುದಿಲ್ಲ . ಶನಿ ಚಂದ್ರ ಯೋಗವೇ ಒಂದು ಸನ್ಯಾಸಿ ಯೋಗ . ಹಾಗಾಗಿ ಇದು ಸಂಸಾರಿಗಳಿಗೆ ದುಃಖವನ್ನು ಕೊಡುತ್ತೆ . ಕಾರಣಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ . ಕರ್ಮಕಾರಕ ಶನಿಯೇ ಆದ್ರೂ ಕೂಡ ನಮ್ಮ ಕರ್ಮಗಳನ್ನು ಮುಂದಿನ ಜನ್ಮಕ್ಕೆ ತೆಗೆದು ಕೊಂಡು ಹೋಗುವವನು ಚಂದ್ರನೇ ಆಗಿದ್ದಾನೆ . ಶನಿ ಚಂದ್ರ ಯೋಗಕ್ಕೆ ಪರಿಹಾರಗಳು . ಶನಿ ದೇವರು ತಾಯಿಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಆದ್ದರಿಂದ ತಾಯಿ ಅಥವಾ ತಾಯಿಸಮಾನರಾದ ಸ್ತ್ರೀಗೆ ಪಾದ ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು . ಚಂದ್ರ ಅಂದ್ರೆ ಹಾಲು , ಮೊಸರು , ಉಪ್ಪು , ಬೆಳ್ಳಿ , ನೀರು ಹೀಗೆ , ನೀರನ್ನು ಬೆಳ್ಳಿ ಲೋಟದಲ್ಲಿ ಕುಡಿಯುವುದು , ಚಂದ್ರಮಣಿ ಉಂಗುರ ದರಿಸೋದು , ಶನಿವಾರದ ದಿವಸ ಸ್ನಾನ ಮಾಡೋ ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿಕೊಂಡು ಸ್ನಾನ ಮಾಡೋದು . ಶನಿ ದೇವರು ಈಶ್ವರನ ಅಂಶ ಚಂದ್ರನ ವಾರ ಸೋಮವಾರ ಹಾಗಾಗಿ ಸೋಮವಾರದ ದಿವಸ ಈಶ್ವರನಿಗೆ ಹಾಲು ಮೊಸರು ರುದ್ರಾಭಿಷೇಕ ಮಾಡಿಸೋದು . ಚಂದ್ರನು ಮುಖ್ಯವಾಗಿ ಮನಸ್ಸಿಗೆ ಕಾರಕ ಆದ್ದರಿಂದ ಮನಸ್ಸನ್ನು ಶುದ್ಧವಾಗಿಟ್ಟು ಕೊಳ್ಳೋದು , ಹಾಗೆ ಶನಿಯು ಹಳೆಯ ಮತ್ತು ಕಳೆದು ಹೋದ ವಿಚಾರಗಳಿಗೆ ಕಾರಕ ಆದ್ದರಿಂದ ನಾವು ಮುಗಿದು ಹೋದ ಘಟನೆಗಳನ್ನು ನೆನಪು ಮಾಡಿಕೊಂಡು ದುಃಖ ಪಡಬಾರದು . ಶನಿಯು ಮನೆಯಲ್ಲಿಯ ಬೇಡವಾದ ವಸ್ತುಗಳಿಗೆ ಕಾರಕನು ಆದ್ದರಿಂದ ಬೇಡವಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕುವುದು , ಹೀಗೆ ಅನೇಕ ಪರಿಹಾರಗಳು ಇವೆ . ಮಾಡಿ ನೋಡಿ , ಎಲ್ಲರಿಗೂ ಒಳ್ಳೆಯದಾಗಲಿ ಒಂಬತ್ತನೇ ಅಧಿಪತಿ ಲಗ್ನದಲ್ಲಿ ಅಥವಾ ಲಗ್ನಾಧಿಪತಿ ಒಂಬತ್ತನೇ ಮನೆಯಲ್ಲಿ ಇದ್ದರೆ ಅಥವಾ ಒಂಬತ್ತನೇ ಅಧಿಪತಿ ಲಗ್ನ ಅಥವಾ ಲಗ್ನಾಧಿಪತಿಯನ್ನು ನೋಡಿದ್ರೆ , ಜಾತಕನಿಗೆ ಜೀವದಲ್ಲಿ ಸುಖಕ್ಕಿಂತ ದುಃಖವೇ ಜಾಸ್ತಿ ಇರುತ್ತೆ . ಜಾತಕನಿಗೆ ಮೋಕ್ಷ ಯೋಗವಿರುತ್ತೆ ಸ್ತ್ರೀ ಜಾತಕದಲ್ಲಿ ಶನಿಯು ಕುಜನನ್ನು ನೋಡಿದ್ರೆ ಮತ್ತು ಗಂಡನ ಜಾತಕದಲ್ಲಿ ಶನಿಯು ಶುಕ್ರನನ್ನು ನೋಡಿದ್ರೆ ಅವಳ ಗಂಡನಿಗೆ ಎರಡನೇ ಸಂಬಂಧವಿರುವ ಸಾಧ್ಯತೆ ಹೆಚ್ಚು ಇರುತ್ತೆ ಸ್ತ್ರೀ ಜಾತಕದಲ್ಲಿ ಕುಜನು ರಾಹುವಿನ ಸಂಬಂಧ ಹೊಂದಿದ್ದು ಶನಿಯಿಂದ ನೋಡಲ್ಪಟ್ಟರೆ , ಜಾತಕಳಿಗೆ ಗಂಡನಿಂದ ಸಂಸಾರ ಸುಖ ಕಮ್ಮಿ ಇರುತ್ತೆ . ಅದೇ ಕುಜನಿಗೆ ಗುರು ಅಥವಾ ಬುಧನ ಸಂಬಂಧ ಬಂದಾಗ ಜಾತಕಿಯು ಮನೆಯಲ್ಲಿ ಸಿಗದ ಸುಖವನ್ನು ಬೇರೆಕಡೆಯಿಂದ ಪಡೆದು ಕೊಳ್ಳುತ್ತಾಳೆ . ಆದ್ರೆ ಕುಜನಿಗೆ ರಾಹು ಸಂಬಂಧ ಬಂದಾಗ ಗಂಡನು ಹೆಂಡತಿಯನ್ನು ನಂಬುವುದು ಕಮ್ಮಿಯಾಗುತ್ತೆ . ಯಾವಾಗಲು ಅನುಮಾನ ಪಡುತ್ತಾನೆ . ಒಂದು ವೇಳೆ ಕುಜನಿಗೆ ರಾಹು ಸಂಬಂಧ ಇದ್ದು ಅದಕ್ಕೆ ಶನಿ ಚಂದ್ರರ ಸಂಬಂಧವು ಬಂದಾಗ ಹೆಂಡತಿಯನ್ನು ತುಂಭಾ ಕೀಳಾಗಿ ಕಾಣುತ್ತಾರೆ . ರಾಹು ನಕ್ಷತ್ರ ಮತ್ತು ಕೇತು ನಕ್ಷತ್ರ ದವರು ಹೆಚ್ಚಿನ ಆಯಸ್ಸು ಹೊಂದಿರುತ್ತಾರೆ . ಕಾರಣ ಅವರುಗಳು ತಮ್ಮ ಹಿಂದಿನ ಜನುಮದಲ್ಲಿ ತಮ್ಮ ಕರ್ಮಗಳನ್ನು ಮುಗಿಸಿರೋದಿಲ್ಲ . ಅವರುಗಳು ಆಕ್ಸಿಡೆಂಟಲ್ ಡೆತ್ ಆಗಿರುತ್ತಾರೆ . ಈ ಜನುಮದಲ್ಲಿಯೂ ಕೂಡ ಅವರುಗಳು ತಮ್ಮ ಸಂತಾನ ತಮ್ಮ ಕಣ್ಣೆದಿರಿಗೆ ಹಾಳಾಗುವುದನ್ನು ಕಂಡು ಕೊರಗುತ್ತಾರೆ . ಅಥವಾ ಎಷ್ಟೋ ಸಾರಿ ಮಕ್ಕಳು ಅಪಘಾತವಾಗುವುದು ಕೂಡ ಅವರ ಕಣ್ಣೆದಿರಿಗೆ ನಡೆಯುತ್ತೆ . ಆ ನೋವ್ವು ಅವರಿಗೆ ಮಾತ್ರವೇ ಗೊತ್ತಿರುತ್ತೆ . ಅಂದ್ರೆ ನಾನು ಹೇಳ ಹೊರಟಿರೋದು ಯಾರೇ ಆಗಲಿ ಸುಯಿಸೈಡ್ ಮಾಡಿಕೊಂಡ್ರೆ ಅವರು ಮುಂದಿನ ಜನುಮದಲ್ಲಿ ರಾಹು ಕೇತು ನಕ್ಷತ್ರದಲ್ಲಿ ಹುಟ್ಟುತ್ತಾರೆ ಮತ್ತು ಜೀವನವೆಲ್ಲ ದುಃಖ ಪಡುತ್ತಾರೆ . 4 - 13 - 22 - 31 ತಾರೀಕು ರಾಹು ಗ್ರಹವನ್ನು ಸೂಚಿಸುತ್ತೆ . ರಾಹು ಗ್ರಹವು ನಮಗೆ ಬ್ರಮೆಯನ್ನುಂಟು ಮಾಡುತ್ತೆ . ಆದ್ದರಿಂದ ಯಾವುದೇ ಶುಭ ಕಾರ್ಯಗಳಿಗೆ ಈ ಸಂಖ್ಯೆ ಒಳ್ಳೆಯದಲ್ಲ . ರಾಹುವೆಂದ್ರೆ ಊಹಾಪೋಹ ಅಂದ್ರೆ ಮೋಸ ಹೋಗುವ ಸಂಭವವೇ ಹೆಚ್ಚು . ಆದ್ದರಿಂದಲೇ ಹಿರಿಯರು ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುತ್ತಿರಲಿಲ್ಲ . ರಾಹುವಿನ ಸಂಖ್ಯೆಯಾದ 4 - 13 - 22 - 31 ತಾರೀಕಿನಂದು ಒಂದಲ್ಲ ಒಂದು ಘಟನೆಗಳು ನಡೆದೇ ನಡೆಯುತ್ತೆ . ಬಸ್ ಬಂದು , ರಸ್ತೆ ಬಂದು , ಸ್ಟ್ರೈಕ್ , ಯಾರೋ ಸತ್ತಿರೋ ಸುದ್ದಿಗಳಿಂದ ಕಾರ್ಯಕ್ರಮ ನಿಲ್ಲೋದು , ಅಂದ್ರೆ ಒಂದಲ್ಲ ಒಂದು ಭಯದ ವಾತಾವರಣ ಇರುತ್ತೆ . ಈ ರಾಹುವಿನ ಸಂಖ್ಯೆಯಲ್ಲಿ ಮದುವೆ ಮಾಡಿಕೊಂಡ್ರೆ ಅನಾರೋಗ್ಯವೇ ಹೆಚ್ಚು . ಇವರು ಹೆಚ್ಚಾಗಿ ಆಸ್ಪತ್ರೆಗಳಿಗೆ ಅಲೆಯುವ ಪರಿಸ್ಥಿತಿ ಬರುತ್ತೆ . ರಾಹು ಕಾಲ ಇರಬಹುದು ಅಥವಾ ರಾಹುವಿನ ತಾರೀಕು ಇರಬಹುದು ಆ ವೇಳೆಯಲ್ಲಿ ಋಣಾತ್ಮಕ ಶಕ್ತಿ ಸಂಚಾರ ಹೆಚ್ಚು ಇರುತ್ತೆ . ಆದ್ದರಿಂದಲೇ ಈ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಲು ರಾಹುಕಾಲದಲ್ಲಿ ದೇವಿ ಪೂಜೆ ಮಾಡೋದು ಒಂದು ಕಾರಣ . 14 ತಾರೀಕು ಅಂದ್ರೆ ರವಿ ಮತ್ತು ರಾಹು , ಇಲ್ಲಿ ತಂದೆಯು ಅನಾವಶ್ಯಕವಾಗಿ ಕೆಲಸವಿಲ್ಲದೇ ಓಡಾಡೋದು ಹೆಳ್ಳುತ್ತೆ . ಇಲ್ಲಾಂದ್ರೆ ತಂದೆಯು ಸ್ವಲ್ಪ ದೊಡ್ಡ ಬಾಯಿಯವರು , ರೌಡಿ ಹಾಗೆ ಮಾತು ಅಂತ . 24 ಅಂದ್ರೆ ಚಂದ್ರ ಮತ್ತು ರಾಹು , ಇಲ್ಲಿ ಜಾತಕನು ಅಮಾವಾಸ್ಯೆ ಹುಣ್ಣಿಮೆ ಬಂದಾಗ ತುಂಭಾ ಕೋಪಮಾಡಿಕೊಳ್ಳೋದು , ತಲೆಕೆಡಿಸಿಕೊಂಡು ಕೂರೋದು ಇಲ್ಲಾ ಸುಮ್ಮನೆ ಮಂಕಾಗಿ ಇರೋದು ಮಾಡುತ್ತಾರೆ . ತಾಯಿ ಯಾವಾಗಲು ಕಿರಿಕಿರಿ ಮಾತು , ಅರೋಗ್ಯ ಸರಿಯಿರೋಲ್ಲ ಗಂಡ ಮತ್ತು ಹೆಂಡತಿಯ ಜಾತಕದಲ್ಲಿ ಶುಕ್ರನು ಒಂದೇ ತತ್ವದಲ್ಲಿ ಇದ್ರೆ ಅವರಲ್ಲಿ ಸಾಮರಸ್ಯವಿರುತ್ತೆ . ಯಾವತ್ತೂ ಅಗ್ನಿ ತತ್ವದಲ್ಲಿ ಶುಕ್ರನಿದ್ರೆ ಅವರಿಗೆ ಅಗ್ನಿತತ್ವದ ಸುಕ್ರನ್ನೇ ಮದುವೆ ಮಾಡಿದ್ರೆ ಗಂಡ ಹೆಂಡತಿ ಒಬ್ಬರನ್ನು ಒಬ್ಬರು ಬಿಟ್ಟು ಇರೋದಿಲ್ಲ . ಇತ್ತೀಚಿನ ದಿನಗಳಲ್ಲಿ ಮನೆಗೆ ಹೋದ್ರೆ ನೆಮ್ಮದಿನೇ ಇಲ್ಲ . ಹೊರಗಡೆ ಇದ್ದಷ್ಟು ಹೊತ್ತು ನೆಮ್ಮದಿ ಇರುತ್ತೆ ಅನ್ನೋರೆ ಜಾಸ್ತಿ ಆಗಿದ್ದಾರೆ . ಇದಕ್ಕೆಲ್ಲ ಕಾರಣ ಏನಿರಬಹುದು . ಯೋಚಿಸಿ ನೋಡಿ . ಜಾತಕ ಸರಿ ಇಲ್ಲಾಂದ್ರೆ ಎಲ್ಲಿ ಹೋದ್ರು ನೆಮ್ಮದಿ ಇರೋಲ್ಲ ಮನೇಲಿದ್ರು ನೆಮ್ಮದಿ ಇರೋಲ್ಲ . ಹಾಗಾದ್ರೆ ಏಕೆ ಹೀಗೆ ? ವಾಸ್ತು ದೋಷ ಇರಬಹುದಾ ಅಂತ ಒಂದು ಸಾರಿ ಯೋಚಿಸಿ ನೋಡಿ . ಇತೀಚಿನ ದಿನಗಳಲ್ಲಿ ಮನೆಯಲ್ಲಿ ಬೇಡವಾದ ವಸ್ತುಗಳನ್ನು ತುಂಬಿಕೊಂಡಿರುವುದೇ ಹೆಚ್ಚಾಗಿದೆ . ಮನೆ ತುಂಬಾ ಹಳೆ ಬಟ್ಟೆಗಳು , ಚಪ್ಪಲಿಗಳು , ಹಳೆ ಪಾತ್ರೆ , ಖಾಲಿ ಡಬ್ಬಗಳು , ಗುಜರಿ ಸಾಮಾನು , ಕೆಟ್ಟು ಹೋಗಿರುವ ವಾಚುಗಳು , ಕೆಟ್ಟಿರುವ ಇಲೆಕ್ಟ್ರಾನಿಕ್ ವಸ್ತುಗಳು ಹೀಗೆ ಹಲವು , ಇವುಗಳು ನೆಗೆಟಿವ್ ಎನೆರ್ಜಿಸ್ . ಇದರಿಂದ ಮನೆಯಲ್ಲಿ ಯಾವಾಗಲು ಕಿರಿಕಿರಿ ಇರುತ್ತೆ . ಆದ್ದರಿಂದ ಮನೆಯನ್ನು ಮೊದಲು ಸ್ವಚ್ಛವಾಗಿಡಿ . ಆದಷ್ಟು ಹಸಿರು ಗಿಡಗಳನ್ನು ಇಡಿ . ವಾಸ್ತು ಕರೆಕ್ಷನ್ ಬೇಕಿದ್ರೆ ತಿಳಿಸಿ . ಹೆಚ್ಚಿನ ದೇವರ ಫೋಟೋಗಳನ್ನು ಮನೆಯಲ್ಲಿ ಇಡಬೇಡಿ . ಮನೆಯ ಗೋಡೆಗಳ ಮೇಲೆ ದೇವರ ಕ್ಯಾಲೆಂಡರ್ ಹೆಚ್ಚಾಗಿ ಹಾಕಬೇಡಿ . ಯಾರಿಗೆ ಗುರು ಗ್ರಹ ವಕ್ರೀ ಇರುತ್ತಾರೆ ಅವರು ಮನೆಯಲ್ಲಿ ಎಲ್ಲಾದೇವರ ಫೋಟೋ ತೂಗು ಹಾಕಿರುತ್ತಾರೆ . ಇದು ಬೇಡ . ಮನೆಯನ್ನು ದೇವಸ್ಥಾನ ಮಾಡಬಾರದು . ಪ್ರಶ್ನೆಯನ್ನು ಕೇಳುವಾಗ ಯಾವ ಭಾವಗಳು ಕೆಲಸ ಮಾಡುತ್ತಿವೆ ನೋಡಬೇಕು . ಆರನೇ ಭಾವವು ಸಾಲಮಾಡುವುದನ್ನು ಮತ್ತು ಹನ್ನೆರಡನೇ ಭಾವವು ಸಾಲವನ್ನು ಹಿಂದಿರುಗಿಸುವುದನ್ನು ಸೂಚಿಸುತ್ತೆ . 3-5-10 ಯಾವುದೇ ಸ್ವತ್ತನ್ನು ಮಾರುವುದನ್ನು ಸೂಚಿಸುತ್ತೆ . ಹಾಗೂ ಒಳ್ಳೆಯ ಬೆಲೆಯೂ ಕೂಡ ಬರುತ್ತೆ . 5-9-11 ಭಾವಕ್ಕೆ ಸಂಬಂಧ ಬಂದ್ರೆ ಜಾತಕನು ಒಂದು ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಸೂಚಿಸುತ್ತೆ . ಹನ್ನೆರಡನೇ ಅಧಿಪತಿಯು ಶುಭನಾಗಿದ್ರೆ ಅನೇಕ ಕಡೆ ಅಸ್ತಿ ಮಾಡುವ ಯೋಗವಿರುತ್ತೆ . ಹನ್ನೆರಡನೇ ಭಾವದಲ್ಲಿ ಗ್ರಹ ಸಂಚಾರ ಮಾಡುವಾಗ ಸ್ಥಿರ ಆಸ್ತಿಯನ್ನು ಮಾಡುತ್ತಾರೆ . 2-6-10 ಭಾವವು ಜಾತಕನ ವೃತ್ತಿಯ ಬಗ್ಯೆ ಹೇಳುತ್ತೆ ಹಾಗೆಯೇ 1-5-9 ವೃತ್ತಿಯನ್ನು ಬಿಡುವ ಬಗ್ಯೆ ತಿಳಿಸುತ್ತೆ . 2-6-10-11 ಭಾವಗಳು ಸೇರಿದಾಗ ಪ್ರಮೋಷನ್ ಬಗ್ಯೆ ಸೂಚಿಸುತ್ತೆ . ಶನಿ ರಾಹು ಚಂದ್ರ ವಿದೇಶ ಪ್ರಯಾಣ ಸೂಚಿಸುವ ಗ್ರಹರು ಹಾಗೆಯೆ 3-7-9-12 ಭಾವವು ವಿದೇಶ ಪ್ರಯಾಣವನ್ನು ಸೂಚಿಸುತ್ತೆ . 8-12 ಭಾವಗಳು ವಿದೇಶದಲ್ಲಿ ತಂಗುವ ವಿಚಾರವನ್ನು ತಿಳಿಸುತ್ತೆ . 12 ನೇ ಭಾವವು ವಿದೇಶ ಪ್ರಯಾಣ ಮತ್ತು ಸುಖವನ್ನು ಸೂಚಿಸುತ್ತೆ . ಶನಿಯ ನಕ್ಷತ್ರಗಳಾದ ಪುಷ್ಯ , ಅನುರಾಧ ಮತ್ತು ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಅರ್ಧ ಆಯಸ್ಸು ಮುಗಿದ ಮೇಲೆ ಹೆಸರು , ಕೀರ್ತಿ ಮತ್ತು ಸಂಪತ್ತು ಗಳಿಸುತ್ತಾರೆ . ಆದ್ರೆ ಇವರಿಗೆ ಸಂಸಾರ ಸುಖ ಕಮ್ಮಿ . ಇವರಿಗೆ ಹೊರಗಡೆ ಸಿಕ್ಕುವ ಗೌರವ ಪ್ರೀತಿ ಇವರ ಗಂಡ ಅಥವಾ ಹೆಂಡತಿ , ಮಕ್ಕಳು ಕೊಡುವುದಿಲ್ಲ . ಇವರಿಗೆ ಆಡಂಬರದ ಪ್ರೀತಿ ಗೊತ್ತಿರುವುದಿಲ್ಲ , ಏನೆ ಇದ್ದರು ಇವರು ತಮ್ಮ ಪ್ರೀತಿಯನ್ನು ಹೃದಯದಿಂದ ಮಾತ್ರ ತೋರ್ಪಡಿಸುತ್ತಾರೆ ಹೊರತು ಹಾವಭಾವದಿಂದಲ್ಲ , ಇವರ ನೇರನುಡಿಯಿಂದಗಿ ಇವರಿಗೆ ಶತ್ರುಗಳೇ ಹೆಚ್ಚು . ಇವರು ಹೆಚ್ಚಾಗಿ ದೇವರ ಮೇಲೆ ನಂಬಿಕೆ ಇಟ್ಟವರು . ಎಷ್ಟೋಸಾರಿ ಇವರಿಗೆ ಸ್ನೇಹಿತರೆ ಸಹಾಯ ಮಾಡುತ್ತಾರೆ ಹೊರತು ಕುಟುಂಬದರು ಇವರನ್ನು ಕೀಳಾಗಿ ನೋಡುತ್ತಾರೆ . ಶನಿಯ ನಕ್ಷತ್ರ ವದರಿಂದ ಇವರಿಗೆ ಸಂಸಾರದಲ್ಲಿ ದುಃಖವೇ ಹೆಚ್ಚು . ಸ್ನೇಹಿತರೆ ನಿಮ್ಮ ಅಭಿಪ್ರಾಯ ತಿಳಿಸಿ . ಉದಾಹರಣೆ ಮೋದಿಜಿಯವರ ಜಾತಕ ನೋಡಿ . ಮೋದಿಜಿಯವರಿಗೆ ಹೊರದೇಶದಲ್ಲಿ ಎಷ್ಟೊಂದು ಹೆಸರು ಇದೆ , ಎಲ್ಲಾ ದೇಶದವರು ಮೋದಿಜಿಯವರನ್ನು ಮೆಚ್ಚಿ ಕೊಂಡಿದ್ದಾರೆ ಆದ್ರೆ ನಮ್ಮ ದೇಶದವರು ಮೋದಿಜಿಯವರನ್ನು ದೂರುತ್ತಾರೆ ಅಲ್ವಾ . ಮೋದಿಯವರದು ಕೂಡ ಅನುರಾಧ ನಕ್ಷತ್ರ . ಕುಜ ಚಂದ್ರ ಶುಕ್ರ ಒಟ್ಟಿಗೆ ಇದ್ರೆ ಹೆಂಡತಿಯು ಲಕ್ಷಣವಾಗಿರುತ್ತಾಳೆ . ಕೋಪದಿಂದ ಮಾತನಾಡುತ್ತಲೇ . ಹಣ ಬರುತ್ತೆ ಹೋಗುತ್ತೆ . ಪ್ರತಿಯೊಂದು ಕೆಲಸವನ್ನು ಹಟದಿಂದ ಸಾದಿಸುತ್ತಾಳೆ . ಯಾವಾಗಲು ಸುತ್ತಾಡಲು ಇಷ್ಟಪಡುತ್ತಾಳೆ . ಗಂಡನು ಕೂಡ ಸುತ್ತಾಡುತ್ತಾರೆ ಗುರುವಿಗೆ ಸಂಬಂಧ ಇರುವಷ್ಟು ಅಣ್ಣ ತಮ್ಮ ಅಕ್ಕ ತಂಗಿಯರು ಇರುತ್ತಾರೆ . ಅಂದ್ರೆ ಗುರುವಿನ ಯುತಿಯಲ್ಲಿ , ಗುರುವಿನ ದೃಷ್ಟಿಯಲ್ಲಿ . ಹಾಗೇಯೇ ಕುಜನ ಸಂಬಂಧ ಇರುವಷ್ಟು ಗಂಡಂದಿರು ಅಥವಾ ಶುಕ್ರನ ಸಂಬಂಧ ಇರುವಷ್ಟು ಹೆಂಡತಿಯರು ಇರುತ್ತಾರೆ . ಇರಲೇ ಬೇಕು ಅಂತ ಇಲ್ಲ . ಆದ್ರೆ ಅವರ ಮನಸಿನಲ್ಲಿ ಅವರುಗಳು ಬಂದು ಹೋಗುತ್ತಾರೆ . ಅಥವಾ ತಮ್ಮ ಜೀವನದಲ್ಲಿ ಅವರಿಗೆ ಒಂದು ಸ್ಥಾನ ಕೊಟ್ಟಿರುತ್ತಾರೆ . ಪುರುಷ ಜಾತಕದಲ್ಲಿ ಶುಕ್ರನಿಂದ ಎರಡನೇ ಮನೆಯಲ್ಲಿ ಕುಜ ಇದ್ರೆ ಅಥವಾ ಶುಕ್ರನ ಜ್ಯೋತೆ ಕುಜ ಇದ್ರೆ ಜಾತಕನ ಹೆಂಡತಿಯು ತುಂಭಾ ಗರ್ವ ಮತ್ತು ದಬ್ಬಾಳಿಕೆ ಮಾಡುವವಳು ಆಗಿರುತ್ತಾಳೆ . ಇದರಿಂದ ಸಂಸಾರ ಬೇಗ ಕೆಟ್ಟು ಹೋಗುತ್ತೆ ಹುಡುಗನ ಶುಕ್ರನಿಂದ ಹುಡುಗಿ ಶುಕ್ರನು 1-5-9 ಅಥವಾ 3-11 ನಲ್ಲಿದ್ರೆ ಆವರಿಬ್ಬರು ತಮ್ಮೆಲ್ಲ ಗುಪ್ತ ವಿಚಾರಗಳನ್ನು ಮನಸು ಬಿಚ್ಚಿ ಮಾತನಾಡುತ್ತಾರೆ ಜಾತಕದಲ್ಲಿ ಪಂಚಮಾಧಿಪತಿಯು ಜ್ಯೋತೆ ರವಿ ಸ್ಥಿತವಿದ್ರೆ ತಂದೆಯು ಲವ್ ಮ್ಯಾರೇಜ್ ಆಗಿರುತ್ತಾರೆ . ಪಂಚಮಾಧಿಪತಿಯು ಕುಜನ ಯುತಿಯಲ್ಲಿದ್ರೆ ತಮ್ಮನು ಲವ್ ಮ್ಯಾರೇಜ್ ಆಗಿರುತ್ತಾರೆ . ಪಂಚಮಾಧಿಪತಿಯು ಶನಿಯ ಯುತಿಯಲ್ಲಿದ್ರೆ ಅಣ್ಣನು ಲವ್ ಮ್ಯಾರೇಜ್ ಆಗಿರುತ್ತಾರೆ . ಶುಕ್ರನು ಪಂಚಮಾಧಿಪತಿಯು ಒಟ್ಟಿಗೆಯಿದ್ರೆ ತಂಗಿ ಅಥವಾ ಮಗಳು ಲವ್ ಮ್ಯಾರೇಜ್ ಆಗಿರುತ್ತಾರೆ . ಅಥವಾ ಪಂಚಮದಲ್ಲಿ ರವಿ ತಂದೆಯು ಲವ್ ಮ್ಯಾರೀಡ್ , ಪಂಚಮದಲ್ಲಿ ಚಂದ್ರ ಅಮ್ಮ , ಪಂಚಮದಲ್ಲಿ ಬುಧ ಅಥವಾ ಕುಜ ತಂಗಿ ಅಥವಾ ತಮ್ಮ ಹೀಗೆ ಜಾತಕವನ್ನು ವಿಮರ್ಶಿಸ ಬಹುದು . ಬುಧ ಕೇತು ಸಂಬಂಧ ಇದ್ರೆ ಜಾತಕನು ತಾನು ಮಾಡುತ್ತಿರುವ ವೃತ್ತಿಯ ಜ್ಯೋತೆಗೆ ಪಾರ್ಟ್ ಟೈಮ್ ವೃತ್ತಿಯನ್ನು ಕೂಡ ಮಾಡುತ್ತಾನೆ . ಕಾಲಾನಂತರ ತನ್ನ ಉದ್ಯೋಗವನ್ನು ಬಿಟ್ಟು ಪಾರ್ಟ್ ಟೈಮ್ ವೃತ್ತಿಯನ್ನು ಫುಲ್ ಟೈಮ್ ವೃತ್ತಿಯಾಗಿ ಮಾಡುತ್ತಾನೆ . ಬುಧ ಕೇತು ಇದ್ರೆ ಜಾತಕನು ಎಲ್ಲಾ ತರದ ವೃತ್ತಿಯಲ್ಲಿ ಪಳಗಿರುತ್ತಾನೆ . ಬುಧಕೇತು - ಕೋರ್ಟ್ ನಲ್ಲಿ ಗುಮಾಸ್ತನಾಗಿರಬಹುದು , ಟೈಪಿಸ್ಟ್ ಆಗಿರಬಹುದು , ಲಾಯರ್ ಆಗಿರಬಹುದು , ಜಿರಾಕ್ಸ್ ಅಂಗಡಿ ಇರಬಹುದು , ಸ್ಟೇಷನರಿ ಅಂಗಡಿ ಇರಬಹುದು , ಟೈಲರ್ ಆಗಿರಬಹುದು ಅಥವಾ ಬುಧ ಕೇತುವಿಗೆ ಕುಜನ ಸಂಬಂಧ ಬಂದ್ರೆ ಕಟಿಂಗ್ ಶಾಪ್ ಇರಬಹುದು ಹೀಗೆ ಅನೇಕ ವೃತ್ತಿಗಳು . ಲವ್ ಕೇಸ್ ಫೇಲ್ ಕೂಡ ಆಗಿರಬಹುದು ಲಗ್ನಾಧಿಪತಿ ಲಗ್ನದಲ್ಲಿ ಇದ್ರೆ ಜಾತಕನು ಇವತ್ತಿನ ಬಗ್ಯೆ ಮಾತ್ರ ಚಿಂತೆ ಮಾಡುತ್ತಾನೆ , ನಿನ್ನೆಯದು ಅಥವಾ ನಾಳೆಯ ಚಿಂತೆ ಮಾಡುವುದಿಲ್ಲ . ಹಾಗೇ ಲಗ್ನಾದಿಪತಿಯು ಪಂಚಮದಲ್ಲಿದ್ರೆ ನಾಳೆಯ ಚಿಂತೆ ಮಾಡುತ್ತಾನೆ ಮತ್ತು ಲಗ್ನಾಧಿಪತಿ ನವಮದಲ್ಲಿದ್ರೆ ಹಳೆಯದನ್ನು ಚಿಂತೆ ಮಾಡುತ್ತಾನೆ ಹೊರತು ಇಂದಿನ ಅಥವಾ ನಾಳೆಯ ಚಿಂತೆ ಮಾಡುವುದಿಲ್ಲ . ಈಗ ಹೇಳಿ ನಿಮಲ್ಲಿ ಎಷ್ಟು ಜನರಿಗೆ ಇದು ಸರಿ ಅನ್ನಿಸುತ್ತಿದೆ . ಜಾತಕದಲ್ಲಿ ಶನಿಯು ಯಾರ ಯುತಿಯಲ್ಲಿ ಇರುತನ್ನೂ ಆ ಗ್ರಹಕ್ಕೆ ಸಂಬಂಧ ಪಟ್ಟ ಕಾರಕತ್ವದಿಂದ ದುಃಖವನ್ನು ಪಡುತ್ತಾನೆ . ಶನಿಯು ಶುಕ್ರನ ಯುತಿಯಲ್ಲಿ ಇದ್ದಾಗ ಶುಕ್ರನು ಹಣಕ್ಕೆ ಕಾರಕ , ಆಸ್ತಿಗೆ ಕಾರಕ , ಮನೆಗೆ ಕಾರಕ , ಸ್ತ್ರೀ ಕಾರಕ , ಸೊಸೆಗೆ ಕಾರಕ , ಅಕ್ಕ ತಂಗಿಯರಿಗೆ ಕಾರಕ , ಹೀಗೆ ಶನಿಯು ಶುಕ್ರನ ಜ್ಯೋತೆ ಅಥವಾ ಶುಕ್ರನಿಂದ ೧-೫-೯ ರಲ್ಲಿ ಶನಿ ಇದ್ರೆ ಅಥವಾ ಶುಕ್ರನು ಶನಿಯ ನಕ್ಷತ್ರವಾದ ಪುಷ್ಯ , ಅನುರಾಧ , ಉತ್ತರಭಾದ್ರ ನಕ್ಷತ್ರ ದಲ್ಲಿ ಇದ್ರೆ ಅಗಾ ಜಾತಕನು ಶುಕ್ರನವಿಚಾರವಾಗಿ ದುಃಖವನ್ನು ಪಡುತ್ತಾನೆ . ರವಿ ಕುಜ ಶನಿ ಮತ್ತು ಚಂದ್ರರು ಲಗ್ನದಲ್ಲಿಸ್ತಿತವಾಗಿದ್ರೆ ವ್ಯಕ್ತಿಯನ್ನು ಕೊಲೆಗಾರನ್ನಾಗಿ ಮಾಡಿ ಜೈಲು ಶಿಕ್ಷೆಗೆ ಗುರಿ ಮಾಡುತ್ತಾರೆ . ಇವರಿಗೆ ಶುಭಗ್ರಹರ ದೃಷ್ಟಿ ಇದ್ದಾಗ ತೊಂದ್ರೆ ಸ್ವಲ್ಪ ಕಮ್ಮಿಯಾಗುತ್ತೆ . ಈ ಗ್ರಹರು ದ್ವಿತೀಯದಲ್ಲಿ ಇದ್ದಾಗ ಸಂಪತ್ತನ್ನು ಕ್ಷೀಣಿಸುವಂತೆ ಮಾಡುತ್ತಾರೆ . ಇವರು ಮೂರನೇ ಭಾವದಲ್ಲಿದ್ರೆ ಒಳ್ಳೆಯಫಲವನ್ನು ಕೊಡುತ್ತಾರೆ . ಅಂದ್ರೆ ವ್ಯಕ್ತಿಗೆ ಧೈರ್ಯ ಮತ್ತು ಕೀರ್ತಿಯನ್ನು ಕೊಡುತ್ತಾರೆ . ನಾಲ್ಕನೇ ಭಾವದಲ್ಲಿದ್ರೆ ಮಿತ್ರರಿಂದ ಮತ್ತು ವಾಹನದಿಂದ ಹಾನಿಯಾಗುತ್ತೆ ಅಥವಾ ಮಿತ್ರರು ನಮ್ಮಿಂದ ದೂರ ಸರಿಯುತ್ತಾರೆ . ಪಂಚಮದಲ್ಲಿದ್ರೆ ಜಾತಕನ ಗುಪ್ತಾ ವಿಚಾರಗಳು ಹೊರಗೆ ಬಂದು ಅವಮಾನವಾಗುತ್ತೆ . ಷಷ್ಠ ಭಾವದಲ್ಲಿದ್ರೆ ಶುಭ ಫಲಗಳನ್ನು ಕೊಡುತ್ತಾರೆ . ಪಾಪ ಗ್ರಹರು ಸಪ್ತಮದಲ್ಲಿದ್ರೆ ಕಳತ್ರ ಸುಖ ನಾಶವಾಗುತ್ತೆ . ಶುಭ ಗ್ರಹವಾದ ಶುಕ್ರ ಸಪ್ತಮದಲ್ಲಿದ್ರು ಕೂಡ ಕಳತ್ರ ಸುಖ ನಾಶವಾಗುತ್ತೆ . ಅಷ್ಟಮದಲ್ಲಿದ್ರೆ ವ್ಯಕ್ತಿಯು ಚಿಕ್ಕವಯಸ್ಸಿನಲ್ಲಿಯೇ ಮರಣ ಅಥವಾ ಮರಣಕ್ಕೆ ಸಮಾನವಾದ ದುಃಖವನ್ನು ಅನುಭವಿಸುತ್ತಾರೆ . ಭಾಗ್ಯದಲ್ಲಿದ್ರೆ ತಂದೆ ಅಥವಾ ತಂದೆ ಸಮಾನರಾದವರು ದುಃಖವನ್ನು ಅನುಭವಿಸುತ್ತಾರೆ ಮತ್ತು ಜಾತಕನು ಪಿತ್ರಾರ್ಜಿತ ಆಸ್ತಿಯನ್ನು ಕಳೆದು ಕೊಳ್ಳುತ್ತಾನೆ . ದಶಮದಲ್ಲಿ ರವಿ ಕುಜರು ಒಳ್ಳೆಯ ಉನ್ನತಿಯನ್ನು ಹಾಗೇ ಶನಿಯು ಜಾತಕನು ತನ್ನ ಉಸಿರಿರುವವರೆಗೆ ಕಷ್ಟ ಪಟ್ಟು ದುಡಿದು ತಿನ್ನುವಂತೆ ಮಾಡುತ್ತಾನೆ . ಶನಿಯು ದುಡಿಮೆಗೆ ತಕ್ಕ ಫಲವನ್ನು ಕೊಡುತ್ತಾನೆ . ಲಾಭಸ್ಥಿತ ಪಾಪಗ್ರಹರು ಮತ್ತು ಶುಭಗ್ರಹರು ಜಾತಕನಿಗೆ ಅಭಿವೃದ್ಧಿಯನ್ನು ಕೊಡುತ್ತಾರೆ . ಹನ್ನೆರಡನೇ ಭಾವಸ್ಥಿತ ಪಾಪಗ್ರಹರು ಜೈಲುವಾಸ , ಚಿಂತೆ ಮತ್ತು ದುಃಖ ಮರಣವನ್ನು ನೀಡುತ್ತಾರೆ . ಅಶ್ವಿನಿ ಮಖ ಮೂಲ ನಕ್ಷತ್ರದವರಿಗೆ ರಾಹು ದೆಶೆಯು ಮಾರಕವಾಗುತ್ತೆ . ಭರಣಿ ಮತ್ತು ಧನಿಷ್ಠ ನಕ್ಷತ್ರದವರಿಗೆ ಗುರು ಮತ್ತು ರವಿ ದೆಶೆಯು ಮಾರಕವಾಗುತ್ತೆ . ಕೃತ್ತಿಕಾ , ಮೃಗಶಿರ , ಉತ್ತರ ೧ ಇವರಿಗೆ ಶನಿದೆಶೆಯು ಮಾರಕವಾಗುತ್ತೆ . ರೋಹಿಣಿ , ಪುಬ್ಬ , ಹಸ್ತ , ಪೂರ್ವಭಾದ್ರ 123 ಇವರಿಗೆ ಬುಧ ದೆಶೆಯು ಮಾರಕವಾಗುತ್ತೆ . ಪುನರ್ವಸು ನಕ್ಷತ್ರದವರಿಗೆ ಬುಧ ಅಥವಾ ಶುಕ್ರ ದೆಶೆಯು ಮಾರಕವಾಗುತ್ತೆ . ಪುಷ್ಯ ನಕ್ಷತ್ರದವರಿಗೆ ಶುಕ್ರ ಅಥವಾ ಚಂದ್ರ ದೆಶೆಯು ಮಾರಕವಾಗುತ್ತೆ . ಆಶ್ಲೇಷ ನಕ್ಷತ್ರಕ್ಕೆ ರಾಹುದೆಶೆಯು ಒಳ್ಳೆಯದಲ್ಲ . ಉತ್ತರಾ 123 ನಕ್ಷತ್ರದವರಿಗೆ ಗುರು ಅಥವಾ ಬುಧ ದೆಶೆಯು ಮಾರಕವಾಗುತ್ತೆ . ಚಿತ್ತಾ ನಕ್ಷತ್ರದವರಿಗೆ ಗುರುದೆಶೆ ಅಥವಾ ಶನಿದೆಸೆ ಅಥವಾ ಬುಧ ದೆಸೆಯು ಮಾರಕವಾಗುತ್ತೆ . ಸ್ವಾತಿಗೆ ಬುಧ ಅಥವಾ ರವಿದೆಶೆಯು ಮಾರಕ . ವಿಶಾಖ ನಕ್ಷತ್ರಕೆ ಕೇತು ಅಥವಾ ರವಿದೆಶೆಯು ಮಾರಕ . ಅನುರಾದಕ್ಕೆ ಬುಧ ಚಂದ್ರ ಕುಜ ದೆಸೆಯು ಆಗಿಬರೋದಿಲ್ಲ . ಜೇಷ್ಠ ನಕ್ಷತ್ರಕ್ಕೆ ರವಿ ಅಥವಾ ಚಂದ್ರ ಅಥವಾ ರಾಹು ದೆಸೆಯು ಮಾರಕವಾಗುತ್ತೆ . ಪೂರ್ವಾಷಾಢಕ್ಕೆ ರವಿ ಅಥವಾ ಚಂದ್ರ ಅಥವಾ ಶನಿ ದೆಶೆಯು ಒಳ್ಳೆಯದಲ್ಲ . ಉತ್ತರಾಷಾಡಕ್ಕೆ ಶನಿ ಅಥವಾ ಬುಧ ದೆಶೆಯು ಮಾರಕ . ಶ್ರಾವಣಕ್ಕೆ ರಾಹು ಅಥವಾ ಗುರು ಅಥವಾ ಬುಧ ದೆಶೆಯು ಕೆಟ್ಟದು . ಪೂರ್ವಬಾದ್ರ 4 ರವಿದೆಸೆಯು ಕೆಟ್ಟದು . ಉತ್ತರಾಭಾದ್ರಕ್ಕೆ ಶುಕ್ರ ದೆಶೆಯು ಕೆಟ್ಟದು . ರೇವತಿಗೆ ಶುಕ್ರ ಅಥವಾ ರಾಹುದೆಶೆಯು ಮಾರಕ . ರಾಹು ಗ್ರಹವು ಆಸೆಯನ್ನು ಹುಟ್ಟಿಸುವ ಗ್ರಹವಾಗಿದೆ . ರಾಹು ಶುಕ್ರನ ಜೊತೆ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದು ಆಸೆಯನ್ನು ಹೆಚ್ಚು ಮಾಡುತ್ತಾನೆ . ಆದ್ರೆ ಕೇತು ಶನಿಯ ಜೊತೆ ಹೆಚ್ಚಿನ ಬಾಂದವ್ಯ ಹೊಂದಿದ್ದಾನೆ . ರಾಹು ಬದುಕಬೇಕು ಅಂದ್ರೆ ಕೇತು ಜೀವನ ಸಾಕು ಅನಿಸುತ್ತಾನೆ . ರಾಹು ಕೇತು ಇಬ್ಬರು ರಾತ್ರಿಯಲ್ಲಿ ಬಲಾಢ್ಯರು . ಸೂರ್ಯಾಸ್ತದಿಂದ ಮಧ್ಯರಾತ್ರಿಯವರೆಗೆ ರಾಹು ಕೆಲಸ ಮಾಡುತ್ತಾನೆ . ಹಾಗಾಗಿ ರಾತ್ರಿಯವೇಳೆನೇ ಬಾರು ಪಬ್ಬು ಡಾನ್ಸ್ ಸೆಕ್ಸ್ ವರ್ಕ್ಸ್ ರಾತ್ರಿ ಹೆಚ್ಚಾಗಿರುತ್ತೆ . ಗುರುವಿಗೆ ರಾಹು ಸಂಬಂಧ ಇದ್ರೆ ಮತ್ತೆ ನಾವು ಹುಟ್ಟಬೇಕಾಗುತ್ತೆ . ರಾಹು ಕರ್ಮ ಕಳೆಯಲು ಬಿಡುವುದಿಲ್ಲ . ಮೂಲ ಜಾತಕದಲ್ಲಿ ಶನೈಶ್ಚರನು ಲಗ್ನದಲ್ಲಿ ಸ್ಥಿತನಿದ್ರೆ ಜಾತಕನು ಅನುಭದ ಮಾತುಗಳನ್ನೇ ಆಡುತ್ತಾನೆ . ಯಾವಾಗಲು ಕಳೆದು ಹೋದ ವಿಚಾರಗಳನ್ನೇ ಮತ್ತೆ ಮತ್ತೆ ಹೇಳಿ ಸಂಸಾರದಲ್ಲಿ ಕಿರಿಕಿರಿ ಉಂಟು ಮಾಡುತ್ತಾನೆ . ದ್ವಿತೀಯದಲ್ಲಿ ಶನಿ ಇದ್ರೆ ಕುಟುಂಬದವರು , ಚತುರ್ಥದಲ್ಲಿ ತಾಯಿಯು , ಪಂಚಮದಲ್ಲಿ ಮಕ್ಕಳು , ಸಪ್ತಮದಲ್ಲಿ ಹೆಂಡತಿಯು ಅಥವಾ ಗಂಡನು , ನವಮದಲ್ಲಿ ತಂದೆಯು ಮೇಲಿನಂತೆ ಮಾತನಾಡುತ್ತಾರೆ . ಸ್ನೇಹಿತರೇ , ಅಮೃತಬಳ್ಳಿ ಎಲ್ಲರಿಗೂ ಗೊತ್ತಿರೋ ಔಷಧಿ ಸಸ್ಯ ಅಲ್ವಾ . ತುಂಭಾ ಜನರು ಇದನ್ನು ಮನೆಯಲ್ಲಿ ಬೆಳೆಸಿರುತ್ತಾರೆ . ಇನ್ನೂ ಕೆಲವರು ಇದನ್ನು ತಮ್ಮ ಮನೆಯ ಮೇಲೆಯೇ ಹಬ್ಬಿಸಿರುತ್ತಾರೆ . ಯಾರೆಲ್ಲ ಅಮೃತ ಬಳ್ಳಿಯನ್ನು ಮನೆಮೇಲೆ ಹಬ್ಬಿಸಿದ್ದಾರೆ ಅವರ ಮನೆಗೆ ಒಮ್ಮೆ ಹೋಗಿ ನೋಡಿಬನ್ನಿ . ಚೆನ್ನಾಗಿ ಇದ್ದ ಮನೆಯವರು ಬಳ್ಳಿಯನ್ನು ಹಬ್ಬಿಸಿದ ಮೇಲೆ ಅಭಿವೃದ್ಧಿ ಇರುವುದಿಲ್ಲ . ಕೊನೆಗೆ ಮನೆಗೆ ಬಣ್ಣ ಹೊಡಿಸೋದು ಕಷ್ಟವಾಗುತ್ತೆ . ಮನೆ ಮಾರಾಟಕ್ಕೆ ಬರುತ್ತೆ . ಮನೆಯಲ್ಲಿ ಯಾವುದೇ ಶುಭ ಕಾರ್ಯಾ ನಡೆಯುವುದಿಲ್ಲ . ಇದನ್ನು ನೀವು ಗಮನಿಸಿ ನನಗೆ ತಿಳಿಸಿ . ಯಾವುದೇ ಕಾರಣದಿಂದ ಮನೆಯ ಮೇಲೆ ಅಮೃತ ಬಳ್ಳಿ ಬೆಳೆಸಬೇಡಿ . ವಾಸ್ತು ದೋಷವಾಗುತ್ತೆ . ನೈರುತ್ಯದಲ್ಲಿ ಬಚ್ಚಲು ಮನೆ ಇದ್ದರೆ ಅವರಿಗೆ ಯಾವಾಗಲು ಹಣದ ಕೊರತೆ ಉಂಟಾಗುತ್ತೆ . ಸಾಲಗಾರ ಆಗುತ್ತಾರೆ . ಇದು ವಾಸ್ತು ದೋಷವಾಗುತ್ತೆ . ಮನೆಯಲ್ಲಿ ಸೋರುವ ನಲ್ಲಿಗಳೂ ಇದ್ದರೆ ಅವರಿಗೆ ಹಣದ ಕೊರತೆ ಉಂಟಾಗುತ್ತೆ . ಜಾತಕದಲ್ಲಿ ಶುಕ್ರನಿಗೆ ಚಂದ್ರನ ಸಂಬಂಧ ಇದ್ದರೆ ಸಾಲಗಾರರಾಗುತ್ತಾರೆ ಜನ್ಮ ಲಗ್ನದಿಂದ ಜಾತಕನ ಆಗುಹೋಗುಗಳನ್ನು , ರವಿ ಲಗ್ನದಿಂದ ತಂದೆಯ ಉನ್ನತಿಯನ್ನು , ಚಂದ್ರ ಲಗ್ನದಿಂದ ತಾಯಿಯ ಸ್ಥಿತಿಗತಿಯನ್ನು , ಕುಜನ ಲಗ್ನದಿಂದ ಅಣ್ಣತಮ್ಮಂದಿರ ಅಕ್ಕತಂಗಿಯರ ವಿಚಾರವನ್ನು . ಶುಕ್ರನಿಂದ ಹೆಂಡತಿಯ ವಿಚಾರವನ್ನು , ಬುಧನಿಂದ ಬಂದುಗಳ ವಿಚಾರವನ್ನು , ಗುರುವಿನಿಂದ ಜಾತಕನ ಅಭಿವೃದ್ಧಿಯನ್ನು ಮತ್ತು ಶನಿ ಲಗ್ನದಿಂದ ಸೇವಕರ ವಿಚಾರವನ್ನು ತಿಳಿಯಬಹುದು . ಶುಕ್ರನಿಂದ ಹಿಂದಿನ ಡಿಗ್ರಿ ಅಥವಾ ಹಿಂದಿನ ರಾಶಿಯಲ್ಲಿ ಕುಜನಿದ್ರೆ , ಹಿಂದಿನ ಜನ್ಮದ ಗಂಡನೇ ಈ ಜನ್ಮದಲ್ಲಿಯೂ ಸಿಕ್ಕುತ್ತಾನೆ . ಹಾಗೇ ಶುಕ್ರನ ಮುಂದಿನ ಡಿಗ್ರಿ ಅಥವಾ ಮುಂದಿನ ರಾಶಿಯಲ್ಲಿ ಕುಜನಿದ್ರೆ ಈಗಿನ ಗಂಡನೇ ಮುಂದಿನ ಜನ್ಮಕ್ಕೂ ಸಿಕ್ಕುತ್ತಾನೆ . ಜಾತಕದಲ್ಲಿ ಶುಕ್ರನು ಗುರುವಿನ ಹಿಂದಿನ ಡಿಗ್ರಿ ಅಥವಾ ಹಿಂದಿನ ಮನೆಯಲ್ಲಿದ್ರೆ , ಹಿಂದಿನ ಜನ್ಮದ ಹೆಂಡತಿಯೇ ಈ ಜನ್ಮದಲ್ಲಿಯೂ ಇರುತ್ತಾಳೆ . ಹಾಗೇ ಗುರುವಿಗೆ ಮುಂದಿನ ಡಿಗ್ರಿ ಅಥವಾ ಮುಂದಿನ ರಾಶಿಯಲ್ಲಿ ಶುಕ್ರನಿದ್ರೆ , ಈ ಜನ್ಮದ ಹೆಂಡತಿಯೇ ಮುಂದಿನ ಜನ್ಮಕ್ಕೂ ಬರುತ್ತಾಳೆ . ಗುರು ಶನಿ ಯುತಿ ಇದ್ರೆ ಅಥವಾ ಗುರು ಶನಿ ಮನೆಯಲ್ಲಿ ಇದ್ರು ಅಥವಾ ಶನಿ ಗುರುವಿನ ಮನೆಯಲ್ಲಿದ್ರು ಅಥವಾ ಶನಿ ನಕ್ಷತ್ರದಲ್ಲಿ ಗುರು , ಗುರು ನಕ್ಷತ್ರದಲ್ಲಿ ಶನಿ ಇದ್ರು ಕೂಡ ಜಾತಕನು ಕಷ್ಟಪಟ್ಟು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾನೆ ಮತ್ತು ತನಗೆ ಏನು ಅನಿಸುತ್ತದೆಯೋ ಅದನ್ನೇ ಮಾಡುತ್ತಾನೆ . ಇವರು ಯಾವುದೇ ತಂಟೆ ತಕರಾರು ಗಳಿಗೆ ಸಿಕ್ಕಿ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ ಬುಧ ಅಂದ್ರೆ ವಿದ್ಯೆ , ಕೇತು ಅಂದ್ರೆ ಅಂತರಜಾಲ , ಬುಧ ಮತ್ತು ಕೇತು ಸೇರಿದ್ರೆ ಜಾತಕನು ಅಂತರಜಾಲ ವಿದ್ಯೆ ಪರಿಣಿತನಾಗುತ್ತಾನೆ . ಬುಧಕೇತು ಜಾತಕನಿಗೆ ಸಿಕ್ಸ್ತ್ ಸೆನ್ಸ್ ಇರುತ್ತೆ . ತಂತ್ರಾಜ್ಞಾನ ವಿದ್ಯೆ , ಕಂಪ್ಯೂಟರ್ ವಿದ್ಯೆ , ಟೈಪಿಂಗ್ ಕಲಿತವ , ಬುಧ ಭೂಮಿ ಕಾರಕ ಕೇತು ಲಿಟಿಗೇಷನ್ ಅಂದ್ರೆ ಬುಧ ಕೇತು ಸೇರಿದ್ರೆ ಭೂಮಿ ವಿಚಾರದಲ್ಲಿ ಲಿಟಿಗೇಷನ್ ಆಗುತ್ತೆ . ಬುಧ ವಿದ್ಯೆ ಕೇತು ದಾರದ ಉಂಡೆ ಅಂದ್ರೆ ಇವರಲ್ಲಿ ಎಳೆದಷ್ಟು ಎಳೆದಷ್ಟು ಜ್ಞಾನ ವಿರುತ್ತೆ . ಯಾವ ವಿದ್ಯೆ ಗೊತ್ತಿಲ್ಲಾಂತ ಇಲ್ಲ . ಶನಿಯು ರವಿಯ ಸಂಭಂದ ಹೊಂದಿದ್ರೆ ಜಾತಕನು 35 ವರ್ಷಗಳ ನಂತ್ರ ಆತ್ಮ ಜ್ಞಾನವನ್ನು ಹೊಂದುತ್ತಾನೆ . ಶನಿ ಮತ್ತು ರವಿಯ ಜ್ಯೋತೆಗೆ ಗುರುವಿನ ಸಂಭಂದವಿದ್ರೆ ಜಾತಕನು ಆಧ್ಯಾತ್ಮಿಕ ಜ್ಞಾನವನ್ನು ಹೊಂದುತ್ತಾನೆ . ಶನಿ ರವಿ ಗುರು ಜ್ಯೋತೆಗೆ ಕುಜನ ಸಂಬಂಧ ಇದ್ರೆ ಜಾತಕನು ತನ್ನ ಹಠದಿಂದ ಜೀವನದಲ್ಲಿ ಜಯವನ್ನು ಸಾಧಿಸುತ್ತಾನೆ ಮತ್ತು ದೇವರನ್ನು ಕಾಣಲು ಹಂಬಲಿಸುತ್ತಾನೆ . ಶನಿ ರವಿ ಗುರು ಕುಜನ ಜ್ಯೋತೆಗೆ ಚಂದ್ರ ಸಂಬಂಧ ಉಂಟಾದ್ರೆ ಮನಸ್ಸು ಆತ್ಮ ಒಟ್ಟಿಗೆ ಸೇರಿದಾಗ ದೇವರು ಕಾಣಿಸುತ್ತಾನೆ . ಇವರ ಜ್ಯೋತೆಗೆ ಕೇತು ಸೇರಿದ್ರೆ ಮೋಕ್ಷ ಕಾಣುತ್ತಾನೆ , ಮುಂದಿನ ಜನ್ಮ ಇರೋದು ಕಮ್ಮಿ . ಶನಿ ಕುಜ ಯುತಿಯಿಂದ ಯಾವಾಗಲು ವೃತ್ತಿಯಲ್ಲಿ ಚಿಂತೆ ಕಾಡುತ್ತೆ . ಯಾವ ಕೆಲಸದಲ್ಲಿಯೂ ಕೂಡ ನೆಮ್ಮದಿ ಇರೋಲ್ಲ . ಇದು ಶನಿ ಕುಜ ಒಟ್ಟಿಗೆ ಇದ್ರು ಅಥವಾ ಶನಿಯು ಕುಜನ ಮನೆಯಲ್ಲಿದ್ರು ಅಥವಾ ಶನಿ ಕುಜ ೧-೫-೯ ನಲ್ಲಿದ್ರು ಒಂದೇ ರಿಸಲ್ಟ್ಸ್. ಇವರು ಟೆಕ್ನಿಕಲ್ ಜಾಬ್ ಮಾಡಿದ್ರೆ ಅಥವಾ ಸಿವಿಲ್ ಇಂಜಿನಿಯರ್ ಆದ್ರೆ ಅಥವಾ ಮೆಕ್ಯಾನಿಕ್ ಆದ್ರೆ ಸ್ವಲ್ಪ ನೆಮ್ಮದಿ ಇರುತ್ತೆ . ಕುಜ ಅಂದ್ರೆ ಗಂಡ ಶನಿ ಅಂದ್ರೆ ಸೋಮಾರಿ ಅಥವಾ ಯಾವಾಗಲು ಹಳೆಯ ವಿಚಾರವನ್ನೇ ಮಾತನಾಡುವವ ಆಗಿರುತ್ತಾರೆ . ಏನೇ ಆಗಲಿ ಗಂಡನಿಂದ ದುಃಖ . ನಿಖರವಾದ ಕೆಲಸ ವಿರೋಲ್ಲ . ಶನಿ ಕೆಲಸದವರು ಕುಜ ದರ್ಪ - ಕೆಲಸದವರು ಯಾವಾಗಲು ಜೋರಾಗಿರುತ್ತಾರೆ . ಅವರು ಹೇಳಿದ ಹಾಗೇ ಇವರು ಕೇಳಬೇಕು . ಕುಜ ಶನಿ ಸಂಬಂಧ ಇದ್ರೆ ಹೆಂಡತಿಗೆ ಗಂಡನ ಸುಖ ಕಮ್ಮಿ . ಶನಿ ಅಂದ್ರೆ ಕೆಲಸ ಕುಜ ಮೆಶಿನರಿ ಜಾಬ್ . ಶನಿಯು ಚಂದ್ರನ ಜ್ಯೋತೆ ಇದ್ರೆ , ತಾಯಿಗೆ ಯಾವಾಗಲು ದುಃಖ . ಚಂದ್ರ ಅಂದ್ರೆ ಮನಸ್ಸು ಜಾತಕನು ಯಾವಾಗಲು ಮನಸ್ಸಿಗೆ ಹುಳಬಿಟ್ಟುಕೊಂಡ ಹಾಗೆ ಚಿಂತೆ ಕಾಡುತ್ತೆ . ಶನಿ ಅಂದ್ರೆ ಪಾಸ್ಟ್ ವಿಚಾರಗಳು , ಹಾಗೆ ಜಾತಕನು ಯಾವಾಗಲು ಹಳೆಯ ವಿಚಾರವನ್ನು ಮಾತನಾಡುತ್ತಾನೆ . ಜಾತಕನಿಗೆ ಫ್ಯೂಚರ್ ಅಂದ್ರೆ ಭಯ ಪಡುತ್ತಾರೆ . ಶನಿ ಅಂದ್ರೆ ಮೊಣಕಾಲು ಜಾತಕನ ತಾಯಿಗೆ ಯಾವಾಗಲು ಮಂಡಿ ನೋವ್ವು ಇರುತ್ತೆ . ಶನಿ ಅಂದ್ರೆ ದೊಡ್ಡ ಮಗ , ಚಂದ್ರ ಅಂದ್ರೆ ತಾಯಿ ಹಾಗಾಗಿ ತಾಯಿ ಯಾವಾಗಲು ದೊಡ್ಡ ಮಗನನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಾಳೆ . ಶನಿ ಚಂದ್ರ ಯುತಿ ಇದ್ರೆ ಅತ್ತೆ ಸೊಸೆಗೆ ಆಗೋದಿಲ್ಲ . ಸೊಸೆ ತನ್ನ ತವರು ಮನೆಗೆ ಹೋದ್ರೆ ವಾಪಸ್ಸು ಬರೋದಿಲ್ಲ . ಶನಿ ಚಂದ್ರ ಯೋಗದವರು ಸ್ವಾರ್ಥಿಗಳು ಆಗಿರುತ್ತಾರೆ . ಶನಿ ಅಂದ್ರೆ ಜಿಪುಣ ಹಾಗೆ ಜಾತಕನು ಮತ್ತು ಅವನ ಅಮ್ಮ ಕೂಡ ಜಿಪುಣರು . ಶನಿ ಚಂದ್ರ ಯೋಗದವರು ಯಾರನ್ನು ನಂಬೋದಿಲ್ಲ . ಶನಿ ಚಂದ್ರ ಯುತಿ ಇದ್ರೆ ಅವರಿಗೆ ಯಾವ ಹೋಟೆಲ್ನಲ್ಲಿ ಏನೇನು ಸ್ಪೆಷಲ್ ಸಿಕುತ್ತೆ ಅಂತ ಗೊತ್ತಿರುತ್ತೆ . ಶನಿಯು ರವಿಯ ಜ್ಯೋತೆ ಇದ್ರೆ , ರವಿ ತಂದೆ ಶನಿ ಮಗ , ತಂದೆ ಮಗನಿಗೆ ಆಗೋದಿಲ್ಲ , ಯಾವಾಗಲು ಕಿರಿಕಿರಿ . ಇಬ್ಬರಿಗೂ ಅಭಿವೃದ್ಧಿ ಇರೋದಿಲ್ಲ . ತಂದೆ ಯಾವಾಗಲು ಬುದ್ದಿವಾದ ಹೇಳುತ್ತಾರೆ ಮಗನಿಗೆ ಹಿಡಿಸೋದಿಲ್ಲ . ಇವರು ಬೇರೆಬೇರೆ ಇದ್ರೆ ಒಳ್ಳೆಯದು . ಶನಿ ಅಂದ್ರೆ ಅಣ್ಣ , ರವಿ ಸರ್ಕಾರ ಅಣ್ಣನಿಗೆ ಸರ್ಕಾರೀ ಉದ್ಯೋಗ . ಜಾತಕದವನು ತುಂಬಾ ಕಷ್ಟ ಪಟ್ಟು ಮೇಲೆ ಬರುತ್ತಾನೆ ಮತ್ತು ತನ್ನ ಕಾಲಮೇಲೆ ನಿಂತುಕೊಳ್ಳುತ್ತಾನೆ . ಜಾತಕನನ್ನು ಮೊದಲು ನಿಂದಿಸಿದ ಜನರೇ ಇವನನ್ನು ಗೌರವಿಸುತ್ತಾರೆ . ಗೌರವ ಅಂದ್ರೆ ರವಿ . ತಂದೆಯಿಂದ ಮಗನಿಗೆ ದುಃಖ , ಮಗನಿಂದ ತಂದೆಗೆ ದುಃಖವಾಗುತ್ತೆ . ರವಿ ಶಾಂತಿ ಮತ್ತು ಶನಿ ಶಾಂತಿ ಮಾಡಬೇಕು . ತಂದೆ ಯಾವಾಗಲು ಆಕ್ಟಿವ್ ಮಗ ಸೋಮಾರಿ . ಜಾತಕದ ಶುಕ್ರನಿಗೆ ಗೋಚಾರದ ಶನಿಯು 11-1-3ರಲ್ಲಿ ಬಂದಾಗ ಜಾತಕನು ವಾಹನವನ್ನು ಕೊಂಡುಕೊಳ್ಳುತ್ತಾನೆ ಅಥವಾ ಮನೆಯನ್ನು ಕೊಂಡುಕೊಳ್ಳುತಾನೆ ಅಥವಾ ಮನೆಯನ್ನು ಕಟ್ಟಿಸುತ್ತಾನೆ . ಸ್ನೇಹಿತರೇ ಪ್ರಪಂಚದಲ್ಲಿ ಪ್ರತಿಯೊಬ್ಬರ ಗುಣಗಳು ವಿಭಿನ್ನವಾಗಿರುತ್ತೆ ಅಲ್ವಾ . ಯಾಕೇ ಈರೀತಿ ಅಂತ ನೋಡಿದಾಗ , ಪ್ರತಿಯೊಬ್ಬರ ಗುಣಗಳು ಅವರು ಜನಿಸಿದ ನಕ್ಷತ್ರದ ಮೇಲೆ ನಿರ್ಧಾರವಾಗುತ್ತೆ ನೋಡಿ . ಅಶ್ವಿನಿ , ಪುಷ್ಯ , ಆಶ್ಲೇಷ , ವಿಶಾಖ , ಅನುರಾಧ , ಧನಿಷ್ಠ , ಶತಭಿಷಾ ನಕ್ಷತ್ರದಲ್ಲಿ ಜನಿಸಿದವರು ಧರ್ಮದ ಬಗ್ಯೆ ಹೆಚ್ಚು ಒಲವು . ಇವರು ಯಾವುದೇ ಕೆಟ್ಟ ಕೆಲಸ ಮಾಡುವುದಕ್ಕೂ ಹೆದರುತ್ತಾರೆ . ದೇವರ ಬಗ್ಯೆ ಹೆಚ್ಚು ಭಯ ಮತ್ತು ಭಕ್ತಿ ಇರುತ್ತದೆ . ಕೃತಿಕಾ , ಆರಿದ್ರಾ , ಪುಬ್ಬಾ , ಚಿತ್ತಾ , ಮೂಲ , ಉತ್ತರಾಭಾದ್ರ ನಕ್ಷತ್ರದಲ್ಲಿ ಜನಿಸಿದವರು ತಾವಾಯಿತು ತಮ್ಮ ಕೆಲಸವಾಯಿತು ಅನ್ನುವವರು. ಮತ್ತು ಅತಿಯಾದ ಆಸೆ ಉಳ್ಳವರು ಆಗಿರುತ್ತಾರೆ . ತಮಗೆ ಬೇಕಾಗಿದ್ದನ್ನು ಪಡಿಯಲು ಹೆಣಗುತ್ತಾರೆ . ಅಲ್ವಾ ? ಭರಣಿ , ಮಖಾ , ಸ್ವಾತಿ , ಜ್ಯೇಷ್ಠ , ಶ್ರವಣ , ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದವರು ಯಾವಾಗಲು ಹಣಕಾಸಿನ ಬಗ್ಯೆನೆ ಚಿಂತೆ ಮಾಡುತ್ತಾರೆ . ತಾನು ಎಲ್ಲರಿಗಿಂತ ಚೆನ್ನಾಗಿರಬೇಕು ಅಂತ . ಬೇರೆಯವರ ಬಗ್ಯೆ ಕಾಳಜಿ ಕಮ್ಮಿ . ಯಾರು ಏನಾದ್ರು ನನಗೇನೂ , ನಾನು ಚೆನ್ನಾಗಿರಬೇಕು ಅನ್ನುವವರು . ಅಲ್ವಾ ? ರೋಹಿಣಿ , ಮೃಗಶಿರಾ , ಉತ್ತರ ಪಲ್ಗುಣಿ ಹಸ್ತಾ , ಪೂರ್ವಾಷಾಢ , ಉತ್ತರಾಷಾಡ , ರೇವತಿ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಾಗಿ ಮೋಕ್ಷ ಚಿಂತನೆ ಮಾಡುತ್ತಾರೆ . ಯಾರ ಹಂಗು ತಮಗೆ ಬೇಡ ಅನ್ನುವವರು ಆಗಿರುತ್ತಾರೆ .ಜಾತಕದಲ್ಲಿ ಗುರು ಮತ್ತು ಕುಜನ ಸಂಬಂಧವಿರುವವರು ತುಂಭಾ ಹಠವಾದಿಗಳು ಮತ್ತು ದೇವರನ್ನು ಕೂಡ ಒಲಿಸಿಕೊಳ್ಳುವ ಶಕ್ತಿವಂತರು ಆಗಿರುತ್ತಾರೆ . ಜಾತಕದಲ್ಲಿ ಕುಜ ಮತ್ತು ಚಂದ್ರನ ಸಂಬಂಧ ಇದ್ರೆ , ಜಾತಕನ್ನು ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳುತ್ತಾನೆ . ಜಾತಕದ ಶನಿಯಿರುವ ನಕ್ಷತ್ರಾಧಿಪತಿಯ ಯಾವುದೇ ನಕ್ಷತ್ರದಲ್ಲಿ ಗೋಚಾರದ ಕೇತು ಬಂದಾಗ ಉದ್ಯೋಗದಲ್ಲಿ ಅಡೆ ತಡೆ ಉಂಟಾಗುತ್ತೆ . ಚಂದ್ರ ಮತ್ತು ಕುಜ ಸಂಬಂಧ ಇರುವವರು ಅಸಾಧ್ಯವಾದದ್ದನ್ನು ಮಾಡಿ ತೋರಿಸುವ ಗುಣ ಹೊಂದಿರುತ್ತಾರೆ . ಇವರು ಜೀವನದಲ್ಲಿ ಏನಾದ್ರು ಸಾಧನೆ ಮಾಡಲೇ ಬೇಕು ಎನ್ನುವ ಆಸೆ ಉಳ್ಳವರು . ಇವರು ಯಾವುದೇ ಒಂದು ವಿಚಾರವನ್ನು ಮನಸ್ಸಿನಲ್ಲಿ ಪದೇ ಪದೇ ಮೇಲಕು ಹಾಕಿದಾಗ ಅದು ಕಾರ್ಯಗತವಾಗುತ್ತೆ . ಇವರಿಗೆ ಹಣಕಾಸಿನ ವಿಚಾರದಲ್ಲಿಯೂ ಕೂಡ ಅನುಕೂಲವಾಗುತ್ತೆ . ದೇವಿ ಆರಾಧನೆ ಇಂದ ಅನುಕೂಲ ಹೆಚ್ಚು . ಮದುವೆಯಾ ವಿಚಾರದಲ್ಲಿ ಒಂದು ಪ್ರಶ್ನೆ ? ನಮ್ಮ ಅಕ್ಕಪಕ್ಕದ ಮನೆಯವರನ್ನೆ ಮದುವೆಯಾಗುತೇವೆ ಅಂತ ಹೇಗೆ ಹೇಳೋದು . ಜಾತಕದಲ್ಲಿ ಮೂರನೇ ಅಧಿಪತಿಯೂ ಏಳನೇ ಅಧಿಪತಿಯ ಜೋತೆ ಪರಿವರ್ತನೆ ಇದ್ದರೆ ಅಥವಾ 3 ಅಧಿಪತಿ 7 ನೇ ಮನೆಯಲ್ಲಿ ಇದ್ದರೆ ಅಥವಾ 7 ನೇ ಅಧಿಪತಿ 3 ನೇ ಮನೆಯನ್ನು ನೋಡಿದರೆ , ಜಾತಕನು ತನಗೆ ಗೊತ್ತಿರುವವರನ್ನೇ ಮದುವೆ ಆಗುತ್ತಾರೆ . ಶನಿಯು ದುಃಖ ಕಾರಕನು . ಶನಿಯು ಯಾವಗ್ರಹದ ಸಂಬಂಧ ಹೊಂದುತ್ತಾನೋ , ಆ ಗ್ರಹ ದಿಂದ ಅಥವಾ ಆ ಗ್ರಹಕ್ಕೆ ಸಂಬಂಧ ಪಟ್ಟ ಕಾರಕತ್ವದಿಂದ ಜಾತಕನು ದುಃಖ ಪಡುತ್ತಾನೆ . ರವಿ ಜ್ಯೋತೆ ಇದ್ರೆ ತಂದೆ ಅಥವಾ ಮಗನಿಂದ ದುಃಖ . ಚಂದ್ರನ ಜ್ಯೋತೆ ಇದ್ರೆ ತಾಯೀ ಅಥವಾ ಅತ್ತೆಯಿಂದ ದುಃಖ . ಗುರುವಿನ ಜ್ಯೋತೆ ಇದ್ರೆ ಹಳೆಯದನ್ನು ಯೋಚಿಸುತ್ತಾ ತನಗೆ ತಾನೇ ದುಃಖ ಪಡುತ್ತಾನೆ . ಶುಕ್ರನ ಜ್ಯೋತೆ ಇದ್ರೆ ಹೆಂಡತಿಯಿಂದ ಇಲ್ಲ ಮಗಳಿಂದ ಅಥವಾ ಮನೆಯ ತೊಂದ್ರೆಯಿಂದ ದುಃಖವಾಗುತ್ತೆ . ಬುಧನ ಜ್ಯೋತೆ ಇದ್ರೆ ಬಂದುಗಳಿಂದ ಅಥವಾ ಸ್ನೇಹಿತರಿಂದ ದುಃಖವಾಗುತ್ತೆ. ಕುಜನ ಜ್ಯೋತೆ ಇದ್ರೆ ಗಂಡನಿಂದ ಅಥವಾ ಒಡಹುಟ್ಟಿದವರಿಂದ ದುಃಖವಾಗುತ್ತೆ . ಶನಿಯು ಕೇತುವಿನ ಜ್ಯೋತೆ ಇದ್ರೆ ಕೆಲಸಮಾಡುವ ವಿಚಾರದಿಂದ ದುಃಖ ಪಡುತ್ತಾನೆ . ಯಾವ ನಕ್ಷತ್ರದ ಹುಡುಗ ಹುಡುಗಿ ಆಗಿ ಬರುತ್ತಾರೆ ಅಂತ . ಈಗ ನೋಡೋಣ ಯಾರು ಆಗೋಲ್ಲ ಅಂತ . ರವಿ ನಕ್ಷತ್ರದಲ್ಲಿ ಜನಿಸಿದವರಿಗೆ ಶನಿ , ರಾಹು ಮತ್ತು ಕೇತು ನಕ್ಷತ್ರ ಒಳ್ಳೆಯದಲ್ಲ . ಚಂದ್ರ ನಕ್ಷತ್ರದಲ್ಲಿ ಜನಿಸಿದವರಿಗೆ ಎಲ್ಲಾ ನಕ್ಷತ್ರದವರು ಆಗುತ್ತಾರೆ ಅದ್ರೆ ಶನಿ ನಕ್ಷತ್ರ ಸ್ವಲ್ಪ ಮಧ್ಯಮ . ಕುಜನ ನಕ್ಷತ್ರದಲ್ಲಿ ಜನಿಸಿದವರಿಗೆ ಶುಕ್ರ , ರಾಹು ಮತ್ತು ಕೇತು ಅಶುಭವಾಗುತ್ತೆ . ಬುಧನ ನಕ್ಷತ್ರದಲ್ಲಿ ಹುಟ್ಟಿದವರಿಗೆ ಗುರು ಮತ್ತು ಕುಜನ ನಕ್ಷತ್ರ ಅಶುಭ . ಗುರುವಿನ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧನ ಮತ್ತು ಶುಕ್ರನ ನಕ್ಷತ್ರ ಆಗೋಲ್ಲ . ಶುಕ್ರನ ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ , ಗುರು ಮತ್ತು ಶುಕ್ರನ ನಕ್ಷತ್ರ ಆಗೋಲ್ಲ . ಶನಿಯ ನಕ್ಷತ್ರದಲ್ಲಿ ಜನಿಸಿದವರಿಗೆ ಎಲ್ಲಾ ನಕ್ಷತ್ರವು ಆಗುತ್ತೆ ಅದ್ರೆ ರವಿ ಮತ್ತು ಕುಜ ಮಧ್ಯಮ . ರಾಹು ನಕ್ಷತ್ರದಲ್ಲಿ ಹುಟ್ಟಿದವರಿಗೆ ರವಿ , ಕುಜ ಮತ್ತು ಶನಿ ಅಶುಭ . ಕೇತುವಿನ ನಕ್ಷತ್ರದವರಿಗೆ ರವಿ ಮತ್ತು ಕುಜ ಆಗೋಲ್ಲ . ರವಿಯ ಗುಣಗಳಲ್ಲಿ ಒಂದು ಮುಖ್ಯವಾದ ಗುಣ ಅಂದ್ರೆ ಬೇರ್ಪಡಿಸೋದು . ರವಿಯು ಲಗ್ನದಲ್ಲಿದ್ರೆ ಜಾತಕನು ತಾನು ಎಲ್ಲರಿಂದ ಬೇರೆಯಾಗಿರೋದಕ್ಕೆ ಇಷ್ಟಪಡುತ್ತಾನೆ . ಕುಟುಂಭ ಭಾವದಲ್ಲಿದ್ರೆ ಜಾತಕನು ಮನೆಯರಿಂದ್ರ ದೂರ ವಿರುತ್ತಾನೆ . ನಾಲ್ಕನೇ ಭಾವದಲ್ಲಿ ರವಿಯಿದ್ರೆ ತಾಯಿಯಿಂದ ದೂರವಿರುತ್ತಾನೆ . ಐದನೇ ಮನೆಯಲ್ಲಿ ರವಿಯಿದ್ರೆ ಮಕ್ಕಳಿಂದ ದೂರವಿರುತ್ತಾನೆ . ಸಪ್ತಮದಲ್ಲಿ ರವಿಯಿದ್ರೆ ಮದುಯಾಗಿದ್ರು ಗಂಡ ಒಂದು ಕಡೆ ಹೆಂಡತಿ ಒಂದು ಕಡೆ ಇರುತ್ತಾರೆ . ಒಂದೇ ಮನೆಯಲ್ಲಿದ್ರು ಗಂಡ ಒಂದು ಕಡೆ ಹೆಂಡತಿ ಒಂದು ಕಡೆ ಮಲಗುತ್ತಾರೆ . ನವಮದಲ್ಲಿ ರವಿಯಿದ್ರೆ ಹೆಂಡತಿ ಮಕ್ಕಳಿಂದ ದೂರವಾಗುತ್ತಾನೆ ಅಪ್ಪ ಆರನೇಯ ಅಧಿಪತಿಯನ್ನು ಅಥವಾ 6 ನೇ ಭಾವವನ್ನು ಶತ್ರು ಸೂಚಕರು ಅನ್ನುತ್ತೇವೆ . ಹಾಗೇ ೬ನೇ ಅಧಿಪತಿಯು ಲಗ್ನದಲ್ಲಿದ್ರೆ ಅಥವಾ ಲಗ್ನಾದಿಪತಿಯು 6 ನೇ ಭಾವದಲ್ಲಿದ್ರೆ ಹಿತ ಶತ್ರುಗಳು ಜಾಸ್ತಿ . 4 ನೇ ಭಾವದಲ್ಲಿದ್ರೆ ತಾಯಿ ಶತ್ರು . 9 ನೇ ಭಾವದಲ್ಲಿದ್ರೆ ತಂದೆ ಶತ್ರು . ಕುಟುಂಭ ಭಾವದಲ್ಲಿದ್ರೆ ಕುಟುಂಬದವರು ಶತ್ರುಗಳು . ೬ನೇ ಅಧಿಪತಿಯು 7 ರಲ್ಲಿ ಅಥವಾ 7 ರ ಅಧಿಪತಿಯು 6 ರಲ್ಲಿ ಇದ್ರೆ ಹೆಂಡತಿಯು ಶತ್ರು . ಶುಕ್ರನು ರಸಿಕತೆಗೆ ಕಾರಕನು . ಶುಕ್ರನು ಲಗ್ನದಲ್ಲಿ ಇದ್ದರೆ ಅಥವಾ ಲಗ್ನಾದಿಪತಿಯ ಜ್ಯೋತೆ ಇದ್ದರು ಜಾತಕನು ರಸಿಕನೂ . ಚತುರ್ಥದಲ್ಲಿ ಇದ್ದರೆ ತಾಯಿ ರಸಿಕಳು . ಸಪ್ತಮದಲ್ಲಿ ಇದ್ದರೆ ಹೆಂಡತಿಯು ರಸಿಕಳು . ಲಗ್ನಾಧಿಪತಿ ಮತ್ತು ಸಪ್ತಮಾಧಿಪತಿಯ ಒಟ್ಟಿಗೆ ಶುಕ್ರ ಇದ್ದರೆ ಗಂಡ ಹೆಂಡತಿ ಇಬ್ಬರು ರಸಿಕರು . ನವಮದಲ್ಲಿದ್ದರೆ ತಂದೆ ರಸಿಕ . ದ್ವಿತಿಯಾದಲ್ಲಿದ್ದರೆ ಕುಟುಂಬದ ಎಲ್ಲರೂ ರಸಿಕರೇ . ಚಂದ್ರ ಶುಕ್ರ ಒಟ್ಟಿಗೆ ಇದ್ರೆ ಹಣಕಾಸಿಗೆ ಕೊರತೆ ಆದ್ರೆ ರಸಿಕತೆಗೆ ಕೊರತೆ ಇಲ್ಲ . ಯಾರ ಜಾತಕದಲ್ಲಿ ಶುಕ್ರನು ಶನಿಯಿಂದ 1-5-9-7-3-11-2-12 ಈ ಭಾವದಲ್ಲಿದ್ರೆ ಆತನು ಸ್ವಂತ ಮನೆಯನ್ನು ಹೊಂದಿರುತ್ತಾನೆ . ಇಲ್ಲ ಸ್ವಂತ ಮನೆ ಮಾಡುವ ಯೋಗ ಉಂಟಾಗುತ್ತದೆ . ಯಾರಿಗೆಲ್ಲ ಲಗ್ನಾಧಿಪತಿ ಆರನೇ ಭಾವದಲ್ಲಿ ಅಥವಾ ಆರನೇ ಭಾವಾಧಿಪತಿ ಲಗ್ನದಲ್ಲಿ ಇದ್ರೆ ಅವರು ಸಾಲಮಾಡಿಯೇ ವಾಹನ ಕೊಳ್ಳಬೇಕು ಅಥವಾ ಸಾಲಮಾಡಿಯೇ ಮನೆ ಕಟ್ಟಬೇಕು . ಯಾವುದೇ ವಸ್ತು ಕೊಳ್ಳಬೇಕಾದ್ರು ಹಾಗೇ ಮಾಡಿದ್ರೇನೇ ಅವರು ಅಭಿವೃದ್ಧಿ ಆಗೋದು . ಶುಕ್ರ ರಾಹು ಯೋಗ : ಯಾರಿಗೆ ಶುಕ್ರ ರಾಹುವಿನ ನಕ್ಶತ್ರದಲ್ಲಿ ಇರೋದು ಅಥವಾ ರಾಹು ಶುಕ್ರನ ನಕ್ಶತ್ರದಲ್ಲಿ ಇರೋದು ಅಥವಾ ಶುಕ್ರಾರಾಹು ಒಟ್ಟಿಗೆ ಇರೋದು ಅಥವಾ ಶುಕ್ರಾರಾಹು 1-5-9 ನಲ್ಲಿ ಇರೋದು ಆದ್ರೆ ಇದು ಶುಕ್ರಾರಾಹು ಯೋಗವಾಗುತ್ತೆ . ಇವರು ಎಂದಿಗೂ ಗ್ರೌಂಡ್ ಫ್ಲೋರ್ ನಲ್ಲಿ ವಾಸಮಾಡಬಾರದು . ಗ್ರೌಂಡ್ ಫ್ಲೋರ್ ನಲ್ಲಿ ಇದ್ರೆ ಇವರಿಗೆ ಅಭಿರುದ್ದಿ ಕಮ್ಮಿ ಮತ್ತು ಹಣಕಾಸಿನ ಮುಗ್ಗಟ್ಟು ಉಂಟಾಗುತ್ತೆ . ಇವರು ಸೆಕೆಂಡ್ ಫ್ಲೋರ್ ನಲ್ಲಿ ವಾಸಮಾಡಿದ್ರೆ ತುಂಬಾ ಚೆನ್ನಾಗಿ ಅಭಿವೃದ್ಧಿ ಆಗುತ್ತಾರೆ . ಆಗ ಹಣ ತಾನಾಗಿಯೇ ಹರಿದು ಬರುತ್ತದೆ. ಒಂದು ಪದದ ಜ್ಯೋತಿಷ್ಯ . ಲಗ್ನದಲ್ಲಿ ಸ್ಥಿತವಿರುವ ಗ್ರಹಗಳು . ರವಿ - ಅಧಿಕಾರಿ ಮನೋಭಾವನೆ . ಚಂದ್ರ - ಅನುಮಾನ ಪಡುವ ಸ್ವಭಾವ . ಬುಧ - ಯಾವಾಗಲು ತಮಾಸೆ ಮಾಡುವವ . ಗುರು - ನಾನು ಹೇಳಿದ್ದು ಮಾಡು ಎನ್ನುವವ . ಶುಕ್ರ - ನಾನು ಬಯಸಿದ್ದೆ ಬೇಕು ಎನ್ನುವವ . ಶನಿ - ತನಗೆ ಎಲ್ಲಾ ತಿಳಿದಿದೆ ಎನ್ನುವವ . ರಾಹು - ಅಸೆ ಪಡುವವ . ಕೇತು - ಬೇರೆಯವರ ಹುಳುಕು ಹುಡುಕುವವ . ನಾಡಿ ಜ್ಯೋತಿಷ್ಯ ಮತ್ತು ಸಂಖ್ಯಾ ಶಾಸ್ತ್ರ . ದಿನಾಂಕ 1-10-19-28. ತಾರೀಖಿನಂದು ಹುಟ್ಟಿದವರ ಗುಣಗಳು . ಈ ತಾರೀಖಿನವರು ಸೂರ್ಯನ ಗುಣಗಳನ್ನು ಹೊಂದಿರುತ್ತಾರೆ . ನಾನು ಎಂಬಾ ಅಹಂ ಜಾಸ್ತಿ , ಯಾವುದೇ ಗುಟ್ಟಿನ ವಿಚಾರ ಇವರಲ್ಲಿ ಗೌಪ್ಯವಾಗಿರೋಲ್ಲ . ಆಡಳಿತ ಬೇಕು ಅನ್ನುವ ಭಾವನೆ ಹೆಚ್ಚು . ಯಾರ ಕೈಯ ಕೆಳಗೆ ಕೆಲಸ ಮಾಡೋದು ಕಷ್ಟ . 6 ಮತ್ತು 8 ತಾರೀಖಿನವರ ಜ್ಯೋತೆ ಹೊಂದಾಣಿಕೆ ಕಷ್ಟವಾಗುತ್ತೆ . ಇವರಿಗೆ ಬೇರೆಯವರು ಹೇಳೋದನ್ನು ಕೇಳಿಸಿಕೊಳ್ಳೋ ತಾಳ್ಮೆ ಕಮ್ಮಿ . ಇವರು ನವಿಲು ಗರಿಯನ್ನು ತಮ್ಮ ಹತ್ತಿರ ಇಟ್ಟುಕೊಂಡ್ರೆ ಅದೃಷ್ಟ ಬರುತ್ತೆ .ಭಾನುವಾರಗಳಲ್ಲಿ ಗೋಧಿ ದಾನ ಮಾಡುವುದರಿಂದ ಒಳ್ಳೆಯದಾಗುತ್ತೆ . ಆದಿತ್ಯ ಹೃದಯ ಪಠನೆ ಮಾಡುವುದು ತುಂಬಾ ಒಳ್ಳೆಯದಾಗುತ್ತೆ . 1-10-19-28 ದಿನಾಂಕ ದಂದು ಹುಟ್ಟಿರುವವರು , ಭಾನುವಾರ , ಬುಧವಾರ ಅಥವಾ ಗುರುವಾರಗಳಲ್ಲಿ ಆರಂಭಿಸುವ ಕೆಲಸಗಳು ಸುಗಮವಾಗುತ್ತೆ . ಇವರಿಗೆ ಕೇಸರಿ , ಅರೇಂಜ್ , ಹಳದಿ ಕಲ್ಲರ್ ಒಳ್ಳೆಯದು . ಇವರು ಅರುಣೋದಯದ ಫೋಟೋವನ್ನು ತಮ್ಮ ಮನೆ ಅಥವಾ ಆಫೀಸ್ನಲ್ಲಿ ಹಾಕೋದು ಒಳ್ಳೆಯದು . ಈಶ್ವರನ ಪೂಜೇ , ಅಶ್ವಥ ಮರದ ಪೂಜೇ ಒಳ್ಳೆಯ ಫಲ ಕೊಡುತ್ತದೆ . 1-10-19-28 ತಾರೀಕಿನಂದು ಹುಟ್ಟಿದವರ ನೆಗಿಟಿವ್ ಗುಣಗಳು ಅಂದ್ರೆ ಯಾರು ಹೇಳಿದ್ದು ಕೇಳಿಸಿಕೊಳ್ಳೋ ಮನಸ್ಥಿತಿ ಕಮ್ಮಿ . ನಾನು ಹೇಳಿದ್ದೆ ನಡೆಯಬೇಕು ಅನ್ನೋದು . ಯಾವುದೇ ಕೆಲಸ ಮಾಡಿದ್ರು ಅಲ್ಲಿ ನಾನೇ ಲೀಡರ್ ಅನ್ನೋದು , ಯಾವಾಗಲು ಅಧಿಕಾರಿಗೆ ಎದಿರು ಮಾತಾಡೋದು , ಯಾವುದೇ ವಿಚಾರವನ್ನು ಗೌಪ್ಯವಾಗಿ ಇಟ್ಟುಕೊಳ್ಳಲು ಆಗದೆ ಇರೋದು , ಮುಖದ ಮೇಲೆ ಹೊಡೆದ ಹಾಗೇ ಮಾತಾಡೋದು , ಸಹಾಯ ಮಾಡಿದವರನ್ನು ತಕ್ಷಣವೇ ಮರೆತು ಬಿಡೋದು ಇವರ ಮೈನಸ್ ಪಾಯಿಂಟ್ಸ್ . ಇವುಗಳನ್ನು ಸರಿ ಪಡಿಸಿಕೊಂಡ್ರೆ ಇವರ ಜೀವನ ಸುಗಮವಾಗುತ್ತೆ . ವಾಸ್ತು ದೋಷಗಳು . ನಿಮ್ಮ ಮನೆಯ ಅಡಿಗೆ ಮನೆ ಬೇಡದ ವಸ್ತುಗಳಿಂದ ತುಂಬಿದ್ರೆ ಅಥವಾ ರಾತ್ರಿ ಊಟ ಮಾಡಿದ ಪಾತ್ರೆಗಳು ತೊಳೆಯದೆ ಹಾಗೇ ಇದ್ರೆ ಅಥವಾ ಅಡಿಗೆ ಮನೆಯಲ್ಲಿ ಒಗ್ಗರೆಣೆ ಡಬ್ಬ ಖಾಲಿ ಖಾಲಿ ಇದ್ರೆ , ಆ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಗುತ್ತೆ ಅಥವಾ ಮನೆಯ ಸ್ತ್ರೀಯರು ಕಾಯಿಲೆಯಿಂದ ಬಳಲುತ್ತಾರೆ ವಾಸ್ತು ದೋಷ ಕಾರಣದಿಂದ ನೀವು ಹಣಕಾಸಿನ ತೊಂದ್ರೆ ಅನುಭವಿಸಿದ್ದೀರಾ , ಹಾಗಾದ್ರೆ ನಿಮ್ಮ ಜಾತಕದಲ್ಲಿ ಶುಕ್ರನಿಗೆ ಯಾರ ಸಂಬಂಧ ಇದೆ ನೋಡಿ . ಶುಕ್ರ ಏನಾದ್ರು ರಾಹುವಿನ ನಕ್ಷತ್ರದಲ್ಲಿ ಇದ್ರೆ ಅಥವಾ ರಾಹುವಿನ ಯುತಿಯಲ್ಲಿದ್ರೆ ನೀವು ಏನಾದ್ರು ಗ್ರೌಂಡ್ ಫ್ಲೋರ್ ನಲ್ಲಿ ವಾಸಮಾಡಿದ್ರೆ ಸಾಲಗಾರಗುವುದು ಗ್ಯಾರಂಟಿ . ಮಹಡಿ ಮನೆಯಲ್ಲಿ ವಾಸಮಾಡಿದ್ರೆ ಈ ದೋಷಾ ಪರಿಹಾರವಾಗುತ್ತೆ ಸ್ತ್ರೀ ಜಾತಕದಲ್ಲಿ ರಾಹು ಏನಾದ್ರು ಕುಜನ್ನ ನೋಡಿದ್ರೆ , ಮದುವೆ ನಿಧಾನವಾಗಬಹುದು ಅಥವಾ ಮದುವೆ ಆಗದೆ ಇರಬಹುದು . ಒಂದು ವೇಳೆ ಮದುವೆ ಆದ್ರೂ ಸಹ ಅವಳು ತನ್ನ ಗಂಡನನ್ನು ಇಷ್ಟಪಡೋದಿಲ್ಲ . ಶುಕ್ರನು ಮೇಷದಲ್ಲಿ ಗುರುವಿನ ಜ್ಯೋತೆ ಇದ್ದಾಗ , ಹೆಂಡತಿಯು ನೋಡಲು ಸುಂದರಳು ಮತ್ತು ಎಲ್ಲರಿಗೂ ಗೊತ್ತಿರುವ ಲೇಡಿ ಆಗಿರುತ್ತಾಳೆ . ತುಂಬಾ ದೈರ್ಯವಂತಳು ಆಗಿರುತ್ತಾಳೆ . ಸ್ಪಷ್ಟವಾಗಿ ಮಾತನಾಡುತ್ತಾಳೆ . ಕಣ್ಣಿನಲ್ಲೇ ಹೆದರಿಸುವವಳು . ಔಷದಿಬಲ್ಲವಳು ಆಗಿರುತ್ತಾಳೆ . ಜಿಪುಣತನವನ್ನು ಸೂಚಿಸುವ ಗ್ರಹ ಶನಿ . ಯಾರಿಗಾದರೂ ಮೇಷ , ತುಲಾ , ಮಕರ ಅಥವಾ ಕುಂಭ ದಲ್ಲಿ ಶನಿ ಇದ್ದರೆ ಅವರು ತುಂಬಾ ಜಿಪುಣರು . ಲಗ್ನ ಅಥವಾ ದ್ವಿತೀಯದಲ್ಲಿ ಶನಿಯಿದ್ದರೂ ಕೂಡ ಜಿಪುಣರಾಗಿರುತ್ತಾರೆ . ನಿಮ್ಮ ಮಗಳ ಅಥವಾ ಮಗನ ಜಾತಕದಲ್ಲಿ ಶುಕ್ರಚಂದ್ರರ ಯುತಿ ಇದ್ರೆ , ಆ ಮಗುವಿನ ಜನನವಾದ ಮೇಲೆ ತಂದೆತಾಯೀ ಸಾಲಗಾರರಾಗುವ ಸಂಭವ ಜಾಸ್ತಿ ಇರುತ್ತೆ . ಒಂದು ವೇಳೆ ಸ್ತ್ರೀ ಜಾತಕದಲ್ಲಿ ಶುಕ್ರನು ಚಂದ್ರನ ನಕ್ಷತ್ರದಲ್ಲಿ ಇದ್ರೆ ಅಥವಾ ಶುಕ್ರಾಚಂದ್ರ ಯುತಿ ಇದ್ರೆ , ಆ ಸ್ತ್ರೀ ಯಾ ಮದುವೆಯ ನಂತರ , ಅವಳ ಪತಿಯು ತನ್ನೆಲ್ಲ ಆಸ್ತಿಯನ್ನು ಮೋಸದಿಂದ ಕಳೆದುಕೊಳ್ಳುತಾನೆ. ಮೋಸಹೋಗುವುದು ಗೊತ್ತಾಗುವುದಿಲ್ಲ . ಗೊತ್ತಾಗುವ ಹೊತ್ತಿಗೆ ಕೈ ಮೀರಿಹೋಗಿರುತ್ತೆ . ಡಾ .ರಾಮಮೂರ್ತಿ . ಬೃಹಸ್ಪತಿ ನಕ್ಷತ್ರ ನಾಡಿ . ಗೋಚರ ರವಿಯು ಜಾತಕದ ರವಿಯ ಮೇಲೆ ೧-೫-೯-೭ ರಲ್ಲಿ ಸಂಚರಿಸುವಾಗ ಜಾತಕದವರಿಗೆ ಜ್ವರ , ಸುಸ್ತು , ಪಿತ್ತ ಜಾಸ್ತಿಯಾಗಿ ತಲೆ ಸುತ್ತೋದು ಮತ್ತು ಎಲ್ಲಾ ವಿಚಾರದಲ್ಲಿ ಕೋಪ ಬರುತ್ತೆ . ನಿಮ್ಮ ಜಾತಕದ ಶನಿಯ ಮೇಲೆ ಗೋಚರ ಕುಜ ಏನಾದ್ರು 1-5-9-7 ನಲ್ಲಿ ಇದ್ರೆ ನಿಮಗೆ ಹಲ್ಲು ನೋವ್ವು ಕಂಡಿತಾ . ನೀವು ಎಷ್ಟೇ ದೊಡಿದ್ರು ಸಾಲಗಾರರೇ ಹಾಗಾದ್ರೆ ನಿಮ್ಮ ಜಾತಕದಲ್ಲಿ ಶುಕ್ರನು ಚಂದ್ರ ಸಂಬಂಧದಲ್ಲಿ ಇರಬಹುದು .ಚೆಕ್ ಮಾಡಿ ಗುರುವಿಗೆ ಕುಜನ ಸಂಬಂಧವಿದ್ದವರಿಗೆ ಹಣ ಕಾಯಲ್ಲಿರುವಾಗ ನಿದ್ರೇನೇ ಬರೋಲ್ಲ . ನಿಜಾನಾ ? ಏನು ಮಾಡಬೇಕು ಅನ್ನೋ ಚಿಂತೆ ಶುಕ್ರ ರಾಹು ಸಂಬಂಧ ಇದ್ರೆ ವೈವಾಯಿಕ ಜೀವನ ಚೆನ್ನಾಗಿರೋದಿಲ್ಲ . ಹೆಂಡತಿ ತುಂಬಾ ಮಾತನಾಡುವವಳು ಆಗಿರುತ್ತಾಳೆ ಇಲ್ಲ ಹೇಳಿದ್ದೆ ಹೇಳುತ್ತಾಳೆ ಕುಜ ರಾಹು ಸಂಬಂಧ ಬಂದ್ರೆ ಮಾತುಮಾತಿಗೂ ಪ್ರಮಾಣ ಮಾಡುತ್ತೇನೆ ಅಂತ ಹೇಳೋದು . ಕರ್ಪುರ ಹತ್ತಿಸುತ್ತೆನೆ ಅಂತ ಹೇಳೋದು . ಇಲ್ಲ ಬೇರೆಯವರ ಕೈಯಲ್ಲಿ ಕರ್ಪುರ ಹತ್ತಿಸಿ ಪ್ರಮಾಣ ಮಾಡಿಸೋದು ಮಾಡುತ್ತಾರೆ . ಶನಿ ಚಂದ್ರ ಯೋಗ . ಚಂದ್ರನು ಶನಿ ನಕ್ಷತ್ರದಲ್ಲಿ ಸ್ಥಿತವಿದ್ರೆ ಅಥವಾ ಶನಿ ಮತ್ತು ಚಂದ್ರ ಪರಿವರ್ತನಾ ಯೋಗವಿದ್ರೆ ಅಥವಾ ಶನಿಯು ಚಂದ್ರನನ್ನು ೩-೭-೧೦ ನೇ ದೃಷ್ಟಿಯಿಂದ ನೋಡಿದ್ರೆ ಶನಿ ಚಂದ್ರ ಯೋಗವಾಗುತ್ತೆ . ಈ ಯೋಗವಿದ್ರೆ ಅತ್ತೆ ಸೊಸೆಗೆ ಆಗೋದಿಲ್ಲ . ಮನೆಯಲ್ಲಿ ನೆಮ್ಮದಿಯಿರೋದಿಲ್ಲ . ಜಾತಕನು ಯಾವಾಗಲೂ ಹಳೆಯವಿಚಾರವನ್ನೇ ಹೇಳುತ್ತಿರುತ್ತಾನೆ . ಅಭಿವೃದ್ಧಿ ಕಮ್ಮಿ . ಪರಿಹಾರ ಶನಿಗೆ ತಾಯಿ ಅಂದ್ರೆ ಪ್ರೀತಿ ಅದ್ರಿಂದ ತಾಯಿಗೆ ಯಾವಾಗಲು ನಮಸ್ಕಾರ ಮಾಡಿರಿ . ಚಂದ್ರಮಣಿ ಉಂಗುರ ಧರಿಸಿರಿ . ಓಂ ನಮಃ ಶಿವಾಯಃ ಮಂತ್ರ ಜಪಿಸಿ . ಶನಿಗೆ ಸ್ತ್ರೀಯರನ್ನು ಕಂಡ್ರೆ ಗೌರವ ಅದ್ರಿಂದ ಸ್ತ್ರೀಯರಿಗೆ ದುಃಖ ಕೊಡಬೇಡಿ . ನಿಮ್ಮ ಜಾತಕದಲ್ಲಿ ಶುಕ್ರನು ಈ ಕೆಳಗಿನ ರಾಶಿಯಲ್ಲಿ ಇದ್ದರೆ ನಿಮಗೆ ಮನೆ ಕೊಳ್ಳುವಯೋಗ , ವಾಹನ ಕೊಳ್ಳುವಯೋಗ , ಒಡವೆ ಕೊಳ್ಳುವಯೋಗ , ಮದುವೆಯಾಗದವರಿಗೆ ಮದುವೆಯೋಗ , ಒಟ್ಟಾರೆ ನಿಮಗೆ ಅದೃಷ್ಟವೇ ಅದೃಷ್ಟ . ಮೇಷ - ಮಿಥುನ - ಸಿಂಹ - ತುಲಾ - ಧನಸು - ಕುಂಭ . ನೀವು ಈಗಲೇ ರೆಡಿಯಾಗಿರಿ . ವಾಹನ ತಗೋಬೇಕಾದ್ರೆ ಯೋಗ ಇದೆಯೋ ಇಲ್ಲವೋ ಅಂತ ಹೇಗೆ ಗೊತ್ತಾಗುತ್ತೆ ? ಯೋಗವನ್ನು ಹೇಗೆ ನೋಡೋದು ? ಶುಕ್ರನ ಸ್ಥಾನ ಬಲವಾಗಿದ್ದು, ಶನಿಯ ಸಂಯೋಗ ಅಥವಾ ಗೋಚಾರ ಶನಿಯು ಶುಕ್ರನಿಗೆ ೧,೫ ,೯ ಗೆ ಬಂದರೂ ವಾಹನ ಲಭ್ಯ. ಶನಿ ಬಲವಾಗಿದ್ದರೆ ಹಳೆಯ ಅಥವಾ ದೊಡ್ಡದಾದ ವಾಹನ , ಶುಕ್ರ ಬಲವಾಗಿದ್ದರೆ ಹೊಸ ಮಾಡಲ್ ಗಳು ದೊರೆಯುತ್ತವೆ.ಗೋಚಾರದಲ್ಲಿ ಶುಕ್ರನ ಮನೆಗೆ ಶನಿಯ ಸಂಚಾರವಿದ್ದು , ಗೋಚಾರ ಗುರು ದೃಷ್ಟಿ ಇದ್ದರೂ ಒಳ್ಳೆಯ ವಾಹನದ ಲಭ್ಯವಿರುತ್ತದೆ. ರಾಹು ಯಾವ ರಾಶಿಯಲ್ಲಿ ಸ್ಥಿತವಿರುತ್ತಾನೋ , ಆ ರಾಶಿಗೆ ಸಂಬಂಧಪಟ್ಟ ದಿಕ್ಕಿನಲ್ಲಿ ಅವರ ಮನೆಗೆ ರಸ್ತೆ ಇರುತ್ತದೆ . ಇಲ್ಲ ಮನೆಯ ಬಾಗಿಲು ಇರುತ್ತದೆ ರವಿ ಕುಜ - ಅಧಿಕಾರವುಳ್ಳ ಗಂಡ . ಬುಧ ಕುಜ - ಬುದ್ದಿವಂತ ಮತ್ತು ಲೆಕ್ಕಾಚಾರದ ಗಂಡ . ಗುರು ಕುಜ - ಹಠಮಾರಿ ಮತ್ತು ಬೇರೆಯವರಿಗೆ ಉಪದೇಶ ಮಾಡುವ ಗಂಡ . ಶುಕ್ರ ಕುಜ - ಯಾವಾಗಲು ಹಣದಬಗ್ಯೆ ಯೋಚಿಸುವ ಗಂಡ . ಶನಿ ಕುಜ - ಟೆಕ್ನಿಕಲ್ ಗಂಡ . ರಾಹು ಕುಜ - ದೊಡ್ಡ ದೊಡ್ಡ ಮಾತಾಡುವ ಗಂಡ . ಕೇತು ಕುಜ - ಯಾವುದಕ್ಕೂ ತಲೆಕೆಡಿಸಿ ಕೊಳ್ಳದ ಗಂಡ ರವಿ ಶುಕ್ರ -ಅಹಂಕಾರದ ಹೆಂಡತಿ . ಕುಜ ಶುಕ್ರ - ಕೋಪಿಷ್ಠ ಹೆಂಡತಿ . ಚಂದ್ರ ಶುಕ್ರ - ಧಾರಾಳ ಹೆಂಡತಿ . ಬುಧ ಶುಕ್ರ - ಬುದ್ದಿವಂಥ ಹೆಂಡತಿ . ಗುರು ಶುಕ್ರ - ಜ್ಞಾನವಂತೆ ಹೆಂಡತಿ . ಶನಿ ಶುಕ್ರ ಆಸೆಯುಳ್ಳ ಹೆಂಡತಿ . ರಾಹು ಶುಕ್ರ - ಜೋರುಬಾಯಿಯ ಹೆಂಡತಿ . ಕೇತು ಶುಕ್ರ -ವೈರಾಗ್ಯದ ಹೆಂಡತಿ . ರವಿ ಶುಕ್ರ - ಅದೃಷ್ಟವಂತ ತಂದೆ , ಅಧಿಕಾರವಂಥ ಹೆಂಡತಿ . ಭಾಗ್ಯವಂತ ಮಗಳು . ಚಂದ್ರ ಶುಕ್ರ - ಅನುಮಾನ ಪಡುವ ಹೆಂಡತಿ. ರವಿ ರಾಹು ಸುಖವಾಗಿರುವ ತಂದೆ . ರವಿ ಕೇತು ಕಷ್ಟಪಟ್ಟಿರುವ ತಂದೆ . ಕುಜ ಶುಕ್ರ ಯಾವಾಗಲು ಕಣ್ಣಲ್ಲಿ ನೀರುತುಂಬಿರುವ ಪತ್ನಿ . ಗುರು ಶುಕ್ರ ಯಾವಾಗಲು ಉಪದೇಶಮಾಡುತ್ತಿರುವ ಪತ್ನಿ . ಯಾರಿಗೆ ಲಗ್ನ ಅಥವಾ ದ್ವಿತೀಯ ಭಾವದಲ್ಲಿ ರವಿ ಇದ್ರೆ ಅವರು ಬೇರೆಯವರು ಮಾಡಿದ ಸಹಾಯವನ್ನು ಬೇಗ ಮರೆತುಬಿಡುತ್ತಾರೆ . ಇವರು ಯಾರನ್ನು ಜಾಸ್ತಿ ಹಚ್ಚಿಕೊಳ್ಳೋದಿಲ್ಲ . ರವಿ ಬುಧ ರಾಹು ಒಟ್ಟಿಗೆ ಇದ್ರೆ ಜಾತಕದವರಿಗೆ ಪಿತ್ರಾಜಿತ ಅಸ್ತಿ ಬರುತ್ತೆ . ಹೆಣ್ಣಿನ ಜಾತಕದಲ್ಲಿ ಶುಕ್ರನನ್ನು ಜೀವಕಾರಕ ಎಂದು ಪರಿಗಣಿಸಬೇಕು . ಶುಕ್ರ ರವಿಯ ಯುತಿ ಇದ್ರೆ ಅವಳು ಸ್ವಲ್ಪ ಅಹಂ ಉಳ್ಳವಳು . ಸ್ವಾಭಿಮಾನಿ , ಇದ್ದದನ್ನು ಇದ್ದಂಗೆ ಹೇಳುವವಳು . ಅವಳಲ್ಲಿ ಯಾವುದೇ ಗುಪ್ತಾ ವಿಚಾರಗಳು ಉಳಿಯುವುದಿಲ್ಲ ಶುಕ್ರನ ಹಿಂದೆ ಅಥವಾ ಮುಂದೆ ರವಿ ಇದ್ರೆ , ಹೆಂಡತಿಗೆ ಕಣ್ಣಿನ ತೊಂದ್ರೆ ಇರುತ್ತೆ . ಗುರುವಿನಿಂದ ಶನಿಯು ಎರಡನೇ ಮನೆಯಲ್ಲಿ ಇದ್ದರೆ ಜಾತಕನು ಚಿಕ್ಕವಯಸ್ಸಿನಲ್ಲೇ ಕೆಲಸಕ್ಕೆ ಸೇರುತ್ತಾನೆ ಶುಕ್ರನಿಂದ ಎರಡನೇ ಮನೆಯಲ್ಲಿ ಬುಧ ಇದ್ರೆ . ಹೆಂಡತಿಯು ಬುದ್ದಿವಂತಳು ಆಗಿರುತ್ತಾಳೆ . ಗುರುವಿದ್ರೆ ಜ್ಞಾನವಂತಳು . ಕುಜನಿದ್ರೆ ಲೆಕ್ಕಾಚಾರದವಳು ಶುಕ್ರನ ಹಿಂದೆ ಅಥವಾ ಮುಂದೆ ರಾಹು ಇದ್ರೆ ಹೆಂಡತಿಯು ತುಂಬಾ ಮಾತನಾಡುವವಳು ಶುಕ್ರನ ಮುಂದೆ ಬುಧ ಕೇತು ಇದ್ರೆ ಹೆಂಡತಿಯು ಬುದ್ದಿವಂತಳು ಮತ್ತು ನಿಷ್ಟೂರವಾಗಿ ಮಾತನಾಡುವವಳು ಜಾತಕದಲ್ಲಿ ಶುಕ್ರನಿಗೆ ಗುರುವಿನ ಸಂಬಂಧ ಇದ್ದರೆ , ಜಾತಕನಿಗೆ ಬೇಗ ಮದುವೆ ಆಗುತ್ತೆ . ನೀವು ಯಾವ ಯೋಗದಲ್ಲಿ ಹುಟ್ಟಿರುತ್ತೀರಿ ನೋಡಿ , ಅದೇ ಯೋಗ ಯಾವ ವಾರ ಬರುತ್ತೆ ನೀಡಿಕೊಳ್ಳಿ , ಆ ದಿನ ನಿಮಗೆ ಧನ ಯೋಗವಿರುತ್ತೆ . ರವಿ ಯಿಂದ ಶನಿಯು 2 ನೆ ಮನೆಯಲ್ಲಿದ್ದರೆ ಜಾತಕನ ತಂದೆಯು ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟ (ಶ್ರಮ ) ಪಟ್ಟಿರುತ್ತಾರೆ. 7 ನೇ ಅಧಿಪತಿ 6 ನೇ ಮನೆಯಲ್ಲಿ ಇದ್ದರೆ ಹೋದ ಜನ್ಮದಲ್ಲಿಯ ಪತಿ ಅಥವಾ ಪತ್ನಿ ಯೇ , ಈ ಜನ್ಮದಲ್ಲಿ ಇರುತ್ತಾರೆ 7 ನೇ ಅಧಿಪತಿಯು 8 ನೇ ಮನೆಯಲ್ಲಿ ಇದ್ದರೆ , ಮುಂದಿನ ಜನ್ಮದಲ್ಲಿಯೂ ಇವರೇ ನಿಮ್ಮ ಪತಿ ಅಥವಾ ಪತ್ನಿ ಆಗುತ್ತಾರೆ . ರವಿ ಮತ್ತು ಗುರುವಿಗೆ ಪರಿವರ್ತನೆ ಯೋಗ ವಿದ್ದು ಗೋಚಾರ ಶನಿ ಅಥವಾ ಗುರು , ರವಿ ಸ್ಥಿತ ರಾಶಿಗೆ ಬಂದಾಗ ಕೆಲಸದಲ್ಲಿ ಬಡ್ತಿ ಸಿಗುತ್ತದೆ ಜೊತೆಗೆ ಹೆಸರು ಮತ್ತು ಕೀರ್ತಿಯನ್ನು ಸಹಾ ಗಳಿಸುತ್ತಾರೆ. "ಬಂಧನ ಯೋಗ" ಕುಜ - ಪೊಲೀಸ್ ಕೇತು - ಕೈ ಬೇಡಿ ಯಾರ ಜಾತಕದಲ್ಲಿ ಕುಜ ಮತ್ತು ಕೇತು ಸಂಯೋಗ ಇರುತ್ತೆ ಅವರಿಗೆ "ಬಂಧನ ಯೋಗ" ಇರುತ್ತೆ. ರಾಹು ತನ್ನ ಮಿತ್ರ ಗ್ರಹಗಳ ರಾಶಿಗಳಲ್ಲಿ ಸ್ಥಿತನಾಗಿದ್ದು, ಆ ರಾಶ್ಯಾಧಿಪತಿ ರಾಹುವಿನ ಜೊತೆ ಸಂಯೋಗ ಹೊಂದಿದ್ದರೆ, ಆ ರಾಶ್ಯಾಧಿಪತಿ ಪ್ರಭಲವಾದ ರಾಜಯೋಗ ವನ್ನು ಕೊಡುತ್ತೆ ಮತ್ತು ಜೀವನದಲ್ಲಿ ಅತ್ಯಂತ ಮಹತ್ತರವಾದ ತಿರುವನ್ನು ಆ ಗ್ರಹ ಕೊಡುತ್ತೆ. ಉದಾ: ಕನ್ಯಾದಲ್ಲಿ ಬುಧ ನ ಜೊತೆ ರಾಹು ಸಂಯೋಗ. ರವಿ ,ಶುಕ್ರ ಮತ್ತು ಚಂದ್ರ ಈ ಮೂರು ಗ್ರಹಗಳ ಸಂಯೋಗವಿದ್ದರೆ ಅಥವಾ ಸಂಬಂದ ಬಂದರೆ , ಜಾತಕ/ಜಾತಕಿ ಯ ಮುಖವು ತುಂಬಾ ತೇಜಸ್ಸಿನಿಂದ ಕೂಡಿದ್ದು, ನೋಡಲು ತುಂಬಾ ಆಕರ್ಷಕ ರಾಗಿರುತ್ತಾರೆ. =ಅಭೀಂದ್ರ ರಾಮಮೂರ್ತಿ 9845347963 9341035841 Naadi Astrologer

No comments:

Post a Comment