Thursday, 13 December 2018

ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕ್ಕೊಂಡರೆ ಧನ ಪ್ರಾಪ್ತಿಯಾಗುತ್ತೆ?

ನಾವು ಧರಿಸುವ ಚಪ್ಪಲಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅದರೊಟ್ಟಿಗೆ ನಮಗೊಂದು ವಿಶೇಷ ಅನುಬಂಧ ಬೆಸೆದುಕೊಂಡಿರುತ್ತದೆ. ಅದರಲ್ಲಿಯೂ ನಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಸದಾ ಚಪ್ಪಲಿ ಧರಿಸಿಕೊಂಡೇ ಇರುವುದರಿಂದ, ಕೆಲಸಕ್ಕೆ ಹೋಗುವಾಗ ಧರಿಸುವ ಚಪ್ಪಲಿ, ಅದರ ಬಣ್ಣ, ಕ್ವಾಲಿಟಿ ಎಲ್ಲವೂ ನಮ್ಮ ಜಾತಕದ ಮೇಲೂ ಪ್ರಭಾವ ಬೀರುತ್ತೆ. ಹೇಗೆ? ಏನಿದು? ನೋಡೋಕೆ ದೊಡ್ಡ ಬಂಗಲೆ. ಆ ಮನೆಯಲ್ಲಿ ದಿನಾ ಪೂಜೆ ಪುನಸ್ಕಾರಗಳು ತಪ್ಪದೇ ನಡೆಯುತ್ತದೆ. ಆದರೆ, ಮನೆಯವರ ಯಾರ ಆರೋಗ್ಯವೂ ಸರಿ ಇರೋಲ್ಲ. ಅಲ್ಲದೇ ಅವರ ಆಸ್ತಿ ಹಾಗೂ ಉದ್ಯೋಗದ ಮೇಲೂ ದುಷ್ಟ ಪರಿಣಾಮಗಳು ಬೀರುತ್ತಿರುತ್ತದೆ. ಇದಕ್ಕೆ ಅವರು ಹಾಕುವ ಚಪ್ಪಲಿಯೂ ಕಾರಣವಾಗಿರಬಹುದು. ಇದು ಏಕೆ, ಪರಿಹಾರವೇನು? ಮನುಷ್ಯನ ದೈನಂದಿನ ಚಟುವಟಿಕೆಗಳು, ಆಗು ಹೋಗುಗಳು ನಿರ್ದಿಷ್ಟ ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲದೇ ಚಪ್ಪಲಿ ಮೇಲೂ ಈ ಅದೃಷ್ಟ ಮತ್ತು ನತದೃಷ್ಟಗಳನ್ನು ತಾಳೆ ಹಾಕಬಹುದು! ಏಕೆ ಗೊತ್ತಾ? ನಮ್ಮ ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತೆ. ಯಾರು ಶನಿ ದೋಷದಿಂದ ಬಳಲುತ್ತಿರುತ್ತಾರೋ, ಅವರು ಚಪ್ಪಲಿ ದಾನ ಮಾಡುವುದೊಳಿತು. ಕೆಲವೊಮ್ಮೆ ಯಾವುದು ನಮ್ಮ ಕೈಯಲ್ಲಿ ಇರುವುದೇ ಇಲ್ಲ. ನಿರೀಕ್ಷೆ ಮೀರಿ ಜೀವನದಲ್ಲಿ ಕೆಲವು ಘಟನೆಗಳು ಸಂಭವಿಸುತ್ತವೆ. ಜೀವನದಲ್ಲಿ ಹೋರಾಟ ಮುಗಿಯುವುದೇ ಇಲ್ಲ. ಇದೂ ನಾವು ಧರಿಸುವ ಚಪ್ಪಲಿ ಅಥವಾ ಶ್ಯೂಸ್‌ ಕಾರಣವಾಗಿರಬಹುದೆಂದು ಶಾಸ್ತ್ರ ಪುರಾಣಗಳು ಹೇಳುತ್ತವೆ. - ಕೈ ನೋಡಿ ಜಾತಕ ನೋಡುವುದು ಗೊತ್ತು. ಆದರೆ, ಅಂಗಾಲು ಸಹ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಗೊತ್ತಾ? ನಮ್ಮ ಹಣೆ ಬರಹಕ್ಕೆ ನಮ್ಮ ಅಂಗಾಲೂ ಕಾರಣವಾಗಬಲ್ಲದು. ಕಾಲಿನ ಆರೋಗ್ಯ ಹಾಗೂ ಸೌಂದರ್ಯವನ್ನು ಯಾರು ಚೆಂದವಾಗಿ ಮ್ಯಾನೇಜ್ ಮಾಡುತ್ತಾರೋ ಅವರಿಗೆ, ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇಲ್ಲವಾದಲ್ಲಿ ಜೀವನದಲ್ಲಿ ಕೆಲವು ಅವಘಡಗಳು ಸಂಭವಿಸಬಲ್ಲದು. - ಹಿಂದಿನ ಕಾಲದಲ್ಲಿ ಚಪ್ಪಲಿಗಳೇ ಇರುತ್ತಿರಲಿಲ್ಲ. ಇದ್ದರೂ ಮರದ ಚಪ್ಪಲಿಗಳನ್ನು ಅವರು ಹಾಕುತ್ತಿದ್ದರು. ಚರ್ಮದ್ದು, ಒಳ್ಳೆ ಕ್ವಾಲಿಟಿಯದ್ದು ಎಂದು ತರುವ ಚಪ್ಪಲಿಗಳೂ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲದು. ಯಾವಾಗ, ಯಾವ ರೀತಿಯ ಚಪ್ಪಲಿಗಳನ್ನು ಧರಿಸಬೇಕೆಂದೂ ಶಾಸ್ತ್ರ ಪುರಾಣಗಳು ಸಲಹೆ ನೀಡುತ್ತವೆ. ಸರಿ ಹಾಗಾದರೆ, ಚಪ್ಪಲಿಯಿಂದ ಯಾವುದೇ ದೋಷಗಳು ಕಾಡಬಾರದೆಂದರೆ ಏನು ಮಾಡಬೇಕು. ಇಲ್ಲಿವೆ ಟಿಪ್ಸ್. - ಕದ್ದ ಅಥವಾ ಉಡುಗೊರೆಯಾಗಿ ಸಿಕ್ಕ ಚಪ್ಪಲಿಯನ್ನು ಧರಿಸಲೇ ಬಾರದು. ಕದ್ದ ಅಥವಾ ದಾನವಾಗಿ ಬಂದ ಚಪ್ಪಲಿಯನ್ನು ಧರಿಸಿದರೆ ಜೀವನದಲ್ಲಿ ಅಂದು ಕೊಂಡ ತಲುಪಲು ಸಾಧ್ಯವಿಲ್ಲ. ನತದೃಷ್ಟವೇ ನಿಮ್ಮ ಕೈ ಹಿಡಿಯಲಿದೆ. - ಹರಿದ ಅಥವಾ ಕಳೆಗುಂದಿದ ಚಪ್ಪಲಿಯನ್ನು ಹಾಕಬೇಡಿ. ಇದು ಅದೃಷ್ಟವನ್ನು ದುರಾದೃಷ್ಟವಾಗಿ ಪರಿವರ್ತಿಸಲಿದೆ. ಹರಿದ ಚಪ್ಪಲಿ ಯಶಸ್ಸನ್ನು ಹತ್ತಿಕ್ಕಲ್ಲಿದೆ. ಚಪ್ಪಲಿ ಕದ್ದರೆ ಗ್ರಹಚಾರ ಕಟ್ಟಿಟ್ಟ ಬುತ್ತಿ. - ಉದ್ಯೋಗ ಸ್ಥಳದಲ್ಲಿ ಕಂದು ಅಥವಾ ಮರದ ಬಣ್ಣದ ಚಪ್ಪಲಿ ಧರಿಸಬಾರದು. ಪರಿಸ್ಥಿತಿ ಹದಗೆಟ್ಟಿದ್ದರೆ, ಈ ಚಪ್ಪಲಿಯಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. - ಅಕಸ್ಮಾತ್ ಉದ್ಯೋಗ ಸಂದರ್ಶನಕ್ಕೆ ಹೋಗುತ್ತಿದ್ದರೆ, ಹರಿದ ಅಥವಾ ಮಾಸಿದ ಚಪ್ಪಲಿಗಳನ್ನು ಧರಿಸಿಕೊಂಡು ಹೋಗಬೇಡಿ. ಇದು ಅದೃಷ್ಟವನ್ನು ದುರಾದೃಷ್ಟವನ್ನಾಗಿ ಬದಲಾಯಿಸುತ್ತೆ. ಹರಿದ ಚಪ್ಪಲಿ ಯಶಸ್ಸ ಓಟವನ್ನೇ ತಡೆಯಬಲ್ಲದು. - ಬ್ಯಾಂಕಿಂಗ್ ಹಾಗೂ ಶೈಕ್ಷಿಣಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಸ್ಥರು ಕಾಫಿ ಬಣ್ಣದ ಅಥವಾ ಡಾರ್ಕ್ ಕಂದು ಬಣ್ಣದ ಚಪ್ಪಲಿಗಳನ್ನು ಧರಿಸಬಾರದು. ಆದಾಯ ಮೂಲಕ್ಕೆ ಇದು ಧಕ್ಕೆ ತರಬಲ್ಲದು. - ವೈದ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಕಬ್ಬಿಣ ಸಂಬಂಧಿ ಕಾರ್ಯ ನಿರ್ವಹಿಸುವವರು ಶ್ವೇತ ವರ್ಣದ ಶೂಸ್ ಅನ್ನು ಧರಿಸಲೇ ಬಾರದು. ಇದರಿಂದ ಅವರಿಗೆ ಲಕ್ ಕೈ ಕೊಡಲಿದ್ದು, ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ. - ಆಯುರ್ವೇದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ನೀಲಿ ಬಣ್ಣದ ಚಪ್ಪಲಿಯನ್ನು ಧರಿಸಬಾರದು. ಅಲ್ಲದೇ ಬಟ್ಟೆಯಿಂದ ಮಾಡಿರುವ ಪಾದರಕ್ಷೆಗಳನ್ನೂ ಧರಿಸಬಾರದು. ಇಂಥವರಿಗೆ ನೀಲಿ ಬಣ್ಣ ಹೇಳಿ ಮಾಡಿಸಿದ್ದಲ್ಲ. - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಸ್ಲಿಪ್ಪರ್ ಸ್ಟ್ಯಾಂಡ್ ಇಡಬಾರದು. ಈ ದಿಕ್ಕಿನಲ್ಲಿ ಸೂರ್ಯನ ಮೊದಲ ಕಿರಣಗಳು ಬೀಳಲಿದ್ದು, ಮನೆಗೆ ಧನಾತ್ಮಕ ಶಕ್ತಿ ಪ್ರವೇಶವಾಗುವ ಸ್ಥಳದಲ್ಲಿ ಚಪ್ಪಲಿಯಿರಬಾರದು.

ಶ್ರೀಕ್ಷೇತ್ರ ಗಾಣಗಾಪುರ ಮಠ ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರ

ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಗುರು ಪೌರ್ಣಿಮಯೆಂದು ಆಚರಿಸುವ ಪರಂಪರೆ ನಮ್ಮ ದೇಶದಲ್ಲಿದೆ. ಗುರು ಪರಂಪರೆಯಲ್ಲಿ ದತ್ತ ಸಂಪ್ರದಾಯವು ಮಹಾನ್ ಸಂಪ್ರದಾಯವೆಂದು ಬಣ್ಣಿಸಲ್ಪಡುತ್ತದೆ. ಶ್ರೀಪಾದ ಶ್ರೀವಲ್ಲಭರು ಹಾಗೂ ಶ್ರೀಗುರು ನೃಸಿಂಹಸರಸ್ವತಿ ಸ್ವಾಮಿ ಮಹಾರಾಜರು ದತ್ತ ಸಂಪ್ರದಾಯದಲ್ಲಿನ ಸರ್ವಶ್ರೇಷ್ಠ ಮತ್ತು ವಂದನೀಯ ಅವತಾರಿಗಳಾಗಿದ್ದಾರೆ. ಪ್ರಾಚೀನ ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಬ್ರಹ್ಮಚಾರಿಗಳು ಆಶ್ರಮ ಇಲ್ಲದೆ ಗುರುಕುಲಗಳಲ್ಲಿ ವಿದ್ಯೆಯನ್ನುಕಲಿಯುತ್ತಿದ್ದರು. ವಿದ್ಯಾರ್ಥಿಗಳು ಈದಿವಸದಂದು ತಮ್ಮ ಗುರುವಿಗೆ ಪೂಜಿಸಿ ಗುರುದಕ್ಷಿಣೆಯನ್ನು ತಮ್ಮ ಶಕ್ತ್ಯಾನುಸಾರ ನೀಡುತ್ತಿದ್ದರು. ಜೀವನದಲ್ಲಿ ಮಾರ್ಗದರ್ಶನವನ್ನು ಮಾಡುವ ಗುರುವನ್ನು ಸ್ಮರಿಸುವ ಮತ್ತು ಪೂಜಿಸುವ ದಿನವೇ ಇದಾಗಿದೆ. ಈ ದಿವಸದಂದು ಭಕ್ತಾಧಿಗಳು ಹಾಗೂ ಶಿಷ್ಯರು ಗುರುಗಳ ಆಶೀರ್ವಾದವನ್ನು ಪಡೆಯಲು ಉಪವಾಸ ವೃತವನ್ನು ಆರಿಸುವರು. ನಮ್ಮ ಗುರುಗಳು ಸದಾಕಾಲ ನಮ್ಮ ಯೋಗಕ್ಷೇಮದ ಕಾಳಜಿಯನ್ನು ಮಾಡುವರು. ಎಂದೆಂದಿಗೂ ಮುಗಿಯದ ಅವರ ಋಣವನ್ನು ತೀರಿಸುವುದಾರೂ ಹೇಗೆ? ಇವರಿಗೆ ನಾವು ಕೊಡುವುದಾದರೂ ಏನು? ಅವರ ಋಣವನ್ನು ಅಲ್ಪವೇ ಆಗಲಿ ಅವರ ನೆನಪಿಗಾಗಿ ಪ್ರತೀವರ್ಷ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಿಮೆ ಎಂದು ಆರಿ ಸುತ್ತಾರೆ. ನಮಗೆ ಜ್ಞಾನವನ್ನು ಕೊಡುವ ಮತ್ತು ಸುಸಂಸ್ಕೃತರನ್ನಾಗಿ ಮಾಡುವ ಗುರುವಿಗೆ ಕೃತಜ್ಞತೆಯಿಂದ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಅವರು ಮಾಡಿಸ ಮಹಾನ್ ಉಪಕಾರ ನೆನಪಿಸಿ ಜೀವನದಲ್ಲಿ ಮಾರ್ಗ ಸಫಲತೆಯಿಂದ ಗತಿಮಾನವಾಗಿ ಮಾಡುವ ಸಲುವಾಗಿ ನಮ್ಮ ಸಂಸ್ಕೃತಿಯು ಗುರು ಪೂಜನದ ಪರಂಪರೆಯ ನಿರ್ಮಾಣಮಾಡಿದೆ. ಮಾನವನ ಜೀವನ ಮಾರ್ಗದರ್ಶನವಿಲ್ಲದೆ ವಿಕಾಸವಾಗುವುದಿಲ್ಲ. ಈ ಮಾರ್ಗದರ್ಶನ ತಾಯಿ, ತಂದೆ, ಶಿಕ್ಷಕ,ಆಚಾರ್ಯ ಹಾಗೂಸಂತ-ಸಜ್ಜನ ರಿಂದ ಪಡೆಯುತ್ತಿರುವನಾದರುದರಿಂದ ಇವರೆಲ್ಲರ ಸ್ಮರಣೆ, ಪೂಜನೆ ಮಾಡಿ ಕೃತಜ್ಞತೆಯನ್ನು ಪ್ರಕಟಿಸುವುದು. ಈ ದಿವಸದ ಆಚರಣೆಯಿಂದಲೇ, ನಮ್ಮ ಜೀವನ ಸರ್ವಾರ್ಥದಿಂದ ಉಪಯುಕ್ತವಾಗಿಸಲು ಗುರುಗಳು ಮಾರ್ಗದರ್ಶನ ಮಾಡುವರು. ನಮ್ಮ ಸಂಕಟಗಳನ್ನು ನಿವಾರಿಸಿ ಭಕ್ತಿಯ ಜ್ಞಾನವನ್ನು ಕೊಡುವ ಶಕ್ತಿಯ ಗುರುಗಳಲ್ಲಿರುತ್ತದೆ. ಈ ಪೌರ್ಣಿಮೆಯನ್ನು ವ್ಯಾಸ-ಪೌರ್ಣಿಮೆ ಯೆಂದೂ ಕರೆಯುತ್ತಾರೆ. ಜಗದ್ ವೃಂದ್ಯ ಹಾಗೂ ಜಗದ್ಗುರುಗಳಾದ ವೇದ ಮಹರ್ಷಿ ವ್ಯಾಸಋಷಿಗಳ ಪೂಜೆಯನ್ನು ಈ ದಿನವೇ ನೆರವೇರಿಸುತ್ತಾರೆ. ದತ್ತಾವಿಚಾರಿಗಳಾದ ಶ್ರೀಗುರು ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರು ನೆಲೆಸಿರುವ ಭೀಮಾಮತ್ತು ಅಮರಜಾ ನದಿಗಳ ಸಂಗಮವಾಗಿರುವ ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ (ಗುಲ್ಬರ್ಗಾ ಜಿಲ್ಲೆ) ನಿರ್ಗುಣ ಮಠದಲ್ಲಿ ಗುರುಪೌರ್ಣಿಮೆಯಂದು ಬೆಳಗ್ಗೆ ೧೧ ಗಂಟೆಗೆ ವ್ಯಾಸಪೂಜೆ ಸಡಗರದಿಂದ ಹಾಗೂ ಭೈವಯುತವಾಗಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಉಪಸ್ಥಿತ ಭಕ್ತ ವೃಂದದವರೆಲ್ಲರೂ ಶ್ರೀಗುರುಗಳ ಹಾಗೂ ನಿರ್ಗುಣ ಪಾದಗಳ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ.

ಪೂಜಾ ಕೋಣೆಗೆ ಯಾವ್ ಬಣ್ಣವಿದ್ದರೆ ಕೈಗೆ ಸೇರುತ್ತೆ ದುಡ್ಡು?

ಬೆಡ್ ರೂಂ, ಅಡುಗೆ ಮನೆ ಹಾಗೂ ಬಚ್ಚಲಷ್ಟೇ ದೇವರ ಕೋಣೆಗೂ ವಿಶೇಷ ಮಾನ್ಯತೆ ನೀಡೋದು ಅಗತ್ಯ. ಮನಸ್ಸಿನ ನೆಮ್ಮದಿಗೆ ಇದು ಅತ್ಯಗತ್ಯ. ಭಕ್ತಿ ಎಂದು ಹೇಳಿ ದೇವರನ್ನು ಎಲ್ಲಿಯಾಯಿತೋ ಅಲ್ಲಿಟ್ಟು ಪೂಜಿಸಬಾರದು. ದೇವರ ಕೋಣೆ ಹೇಗಿರಬೇಕೆಂಬುದಕ್ಕೆ ಇಲ್ಲಿವೆ ವಾಸ್ತು ಟಿಪ್ಸ್... ಮನೆಯಲ್ಲಿ ಸುಮ್ಮನೆ ದೇವರನ್ನಿಟ್ಟು, ಪೂಜಿಸದಿದ್ದರೆ ನೆಗಟಿವ್ ಎನರ್ಜಿ ಸ್ಪ್ರೆಡ್ ಆಗುತ್ತೆ. ಆದುದರಿಂದ ದೇವರನ್ನು ಮನೆಯಲ್ಲಿಟ್ಟರೆ, ಪೂಜಿಸಲೇ ಬೇಕು. ಇಲ್ಲಿವೆ ದೇವರ ಕೋಣೆಗೆ ಸಂಬಂಧಿಸಿದೆ ಕೆಲವು ವಾಸ್ತು ಟಿಪ್ಸ್... - ಪ್ರತಿದಿನ ಪೂಜಿಸುವುದಾದರೆ ಮಾತ್ರ ಮನೆಯಲ್ಲಿ ದೇವರ ಮೂರ್ತಿ, ಸಾಲಿಗ್ರಾಮ ಮತ್ತು ಶ್ರೀಚಕ್ರವನ್ನಿಡಬೇಕು. ಇಲ್ಲವಾದರೆ ಮನೆ ಹಾಗೂ ಮನೆ ಮಂದಿಗೂ ಶ್ರೇಯಸ್ಸಲ್ಲ. - ಪಶ್ಚಿಮಕ್ಕೆ ಮುಖ ಮಾಡಿ ಕುಳಿತು, ಪೂಜಿಸಬೇಕು. ದೇವರ ಕೋಣೆ ಅಥವಾ ಗೂಡು ಪೂರ್ವ ದಿಕ್ಕಿಗೆ ಮುಖ ಮಾಡಿದರೊಳಿತು. - ದೊಡ್ಡದಾದ ಮನೆ ಅಥವಾ ಕಚೇರಿಯಲ್ಲಿ ದೇವರ ಕೋಣೆ ನಿರ್ಮಿಸುವಾಗ ಅದು ಮಧ್ಯದಲ್ಲಿರಲಿ. ಇದರಿಂದ ಪೂರ್ತಿ ಮನೆಗೆ ಪಾಸಿಟಿವ್ ಎನರ್ಜಿ ಹರಡುತ್ತದೆ. - ತುಂಡಾದ ಅಥವಾ ಹಾಳಾದ ಯಾವುದೇ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಡಿ. - ಪೂಜಾ ಕೋಣೆಗೆ ಬಿಳಿ, ತಿಳಿ ಹಳದಿ ಅಥವಾ ತಿಳಿ ನೀಲಿ ಬಣ್ಣವನ್ನು ಹಚ್ಚಿ. - ಪೂಜಾ ಗೃಹ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಅಲ್ಲದೆ ಸ್ಟೋರ್ ರೂಮ್ ಅಥವಾ ಬೆಡ್ ರೂಮಿನಲ್ಲೂ ದೇವರನ್ನಿಟ್ಟು ಪೂಜಿಸಬಾರದು. - ಧ್ಯಾನ ಮಾಡುವಾಗ ಅಥವಾ ಪೂಜಿಸುವಾಗ ಮ್ಯಾಟ್ ಅಥವಾ ಮಣೆ ಮೇಲೆಯೇ ಕುಳಿತುಕೊಳ್ಳಿ. - ಸುಗಂಧಿತ ಅಗರಬತ್ತಿಗಳನ್ನು ಹಚ್ಚಿಡುವುದರಿಂದ ಮನೆ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. - ಮೃತ ಪಟ್ಟವರ ಫೋಟೊವನ್ನು ದೇವರ ಫೋಟೊದೊಂದಿಗಿಡುವುದು ಕೆಟ್ಟದ್ದು. - ದೇವರ ಮೂರ್ತಿಗಳು ನೇರವಾಗಿ ಮುಖ್ಯ ದ್ವಾರಕ್ಕೆ ಮುಖ ಮಾಡಿ ಇರದಿರಲಿ. - ಪೂಜಾ ಗೃಹದಲ್ಲಿ ಡಸ್ಟ್ ಬಿನ್ ಇಡಬೇಡಿ. ಇದರಿಂದ ಪಾಸಿಟಿವ್ ಎನರ್ಜಿ ಕಡಿಮೆಯಾಗುತ್ತದೆ. -ಪೂಜಾ ಕೋಣೆಯ ವಾಲ್ ಯಾವುದೇ ಟಾಯ್ಲೆಟ್‌, ಬಾತ್‌ರೂಮ್‌ ಗೋಡೆಗೆ ಅಟ್ಯಾಚ್‌ ಆಗಿರಾಬಾರದು.

ನವರಾತ್ರಿ, ದೇವಿ ಪೂಜೆ, ಉಪವಾಸ, ವ್ಯಕ್ತಿತ್ವ ವಿಕಸನ

ಮೊದಲ ಮೂರು ದಿನಗಳು ಮಹಾಕಾಳಿಯನ್ನು ಪೂಜಿಸಿದ ನಂತರ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕೊನೆಯ ಮೂರು ದಿನಗಳು ಮಹಾ ಸರಸ್ವತಿಗೆ ಮೀಸಲಿಡಲಾಗಿದೆ. ಮತ್ತಿನ್ನೇನು ನವರಾತ್ರಿ ವಿಶೇಷ? ದೇವಿಯನ್ನು ವಿಧವಿಧವಾಗಿ ಅಲಂಕರಿಸಿ, ವಿಭಿನ್ನ ನೇವೈಧ್ಯವನ್ನಿಟ್ಟು ಪೂಜಿಸುವ ನವರಾತ್ರಿ ಉಪವಾಸವೂ ಅಷ್ಟೇ ಶ್ರೇಷ್ಠ. ದಿನದಲ್ಲಿ ಒಮ್ಮೆ ಕೇವಲ ಸಾತ್ವಿಕ ಆಹಾರ ಸೇವಿಸಿ, ಉಪವಾಸ ಮಾಡೋ ಹಿಂದೆಯೂ ಇದೆ ವಿಶೇಷ ಅರ್ಥ. ಆತ್ಮ ಶುದ್ಧೀಕರಿಸುವ ಕಾರ್ಯಕ್ಕೆ ಈ ಕಾಲ ಮೀಸಲು.ಒಂಬತ್ತು ದಿನಗಳ ಈ ಉಪವಾಸಕ್ಕೂ ಒಂದೊಂದು ಅರ್ಥವಿದೆ. ಆ ಮೂಲಕ ನಮ್ಮ ವ್ಯಕ್ತಿತ್ವ ಶುದ್ಧಿಗೂ ಸಮಯ ಮೀಸಲು. ಊಟ ಬಿಡುವುದರೊಂದಿಗೆ, ಜೀವನದಲ್ಲಿ ಯಾವ ಋಣಾತ್ಮಕ ಶಕ್ತಿಯನ್ನು ನಾವು ಬಿಡಬೇಕು? ಈ ಆಧುನಿಕ ಜೀವನ ಒತ್ತಡದ ಬದುಕಲ್ಲಿ ಏನು ಬಿಟ್ಟರೊಳಿತು? ಕಾಮ, ಮೋಕ್ಷ, ಕ್ರೋಧ, ಮದ, ಮತ್ಸರ...ಎಂಬ ಅರಿಷಡ್ವರ್ಗಗಳನ್ನು ತ್ಯಜಿಸುವ ಜತೆ ಕೆಲವು ಸರಳವಾದ, ಸಣ್ಣ ಪುಟ್ಟ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬೇಕೆನ್ನುವುದು ಈ ಉಪವಾಸ ಮಾಡುವ ಉದ್ದೇಶ... ದಿನ 1: ಸಿಟ್ಟನ್ನು ತ್ಯಜಿಸಬೇಕು. ದಿನ 2: ಜನರ ಬಗ್ಗೆ ತೀರ್ಮಾನಕ್ಕೆ ಬರೋದನ್ನು ನಿಲ್ಲಿಸಬೇಕು. ದಿನ 3: ದ್ವೇಷವನ್ನು ಬಿಟ್ಟು ಬಿಡಬೇಕು. ದಿನ 4: ನನ್ನನ್ನು ಕ್ಷಮಿಸಿಕೊಳ್ಳುವುದರೊಂದಿಗೆ, ಎಲ್ಲರನ್ನೂ ಕ್ಷಮಿಸುವ ಗುಣ ಬೆಳೆಯಿಸಿಕೊಳ್ಳುವೆ. ದಿನ 5: ಯಾರು ಹೇಗಿರುತ್ತಾರೋ, ಹಾಗೆಯೇ ಸ್ವೀಕರಿಸುತ್ತೇನೆ. ದಿನ 6: ನನ್ನನ್ನು ನಾನು ಪ್ರೀತಿಸುವುದರೊಂದಿಗೆ, ಎಲ್ಲರನ್ನೂ ಯಾವುದೇ ಷರತ್ತುಗಳಿಲ್ಲದೇ ಪ್ರೀತಿಸುವೆ. ದಿನ 7: ತಪ್ಪಿತಸ್ಥ ಭಾವ ಹಾಗೂ ಹೊಟ್ಟೆಕಿಚ್ಚಿನಂಥ ಬುದ್ಧಿಯನ್ನು ತ್ಯಜಿಸುವೆ. ದಿನ 8: ಭಯದೊಂದಿಗಿನ ಬದುಕನ್ನು ದೂರ ಮಾಡುತ್ತೇನೆ. ದಿನ 9: ನನ್ನಲ್ಲಿ ಏನಿದೆಯೋ ಅದನ್ನು ಅನುಭವಿಸುತ್ತೇನೆ. ಏನು ಸಿಗುತ್ತೋ ಅದಕ್ಕೆ ದೇವರನ್ನು ವಂದಿಸುತ್ತೇನೆ. ದಿನ 10: ವಿಶ್ವದಲ್ಲಿ ಪ್ರೀತಿ, ಪ್ರೇಮಗಳು ತುಂಬಿ ತುಳುಕುತ್ತಿದ್ದು, ನಾನೇನು ಬಯಸುತ್ತೇನೋ, ಅದನ್ನು ಇನ್ನೊಬ್ಬರಿಗೆ ನೀಡುತ್ತೇನೆ. ಸಾಧನೆ, ನಿಷ್ಕಲ್ಮಷ ಸೇವೆಯಲ್ಲಿ ನಂಬಿಕೆ ಇಡುತ್ತೇನೆ. ಯಾವ ಆಹಾರ ಸೇವಿಸಬಹುದು? - ಬೇಯಿಸಿರುವ ಆಲೂಗಡ್ಡೆ ಕುಟ್ಟು ಹಿಟ್ಟು ಮತ್ತು ಪಾಯಸ ಆಲೂ ಟಿಕ್ಕಾ ಬಾಳೆ ಚಿಪ್ಸ್ ಹಣ್ಣು ಮತ್ತು ಹಣ್ಣಿನ ಜೂಸ್ ಸಾಬುದಾನ ವಡೆ ಮೊಸರು ಲಸ್ಸಿ ದೇವಿ ಶಕ್ತಿಯ ಪ್ರತೀಕ: ನವರಾತ್ರಿ ತಾಯಿ ದುರ್ಗಾದೇವಿಯನ್ನು ಪೂಜಿಸುವ ಕಾಲ. ಈ ದಿನಗಳಲ್ಲಿ ಎಲ್ಲಾ ದೇವತೆಗಳಿಗೂ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ತಾಯಿ ದುರ್ಗೆಯು ಮಹಿಷಾಸುರ ಸಂಹಾರ ಮಾಡಿದಂದು ದಸರಾ ಮುಕ್ತಾಯವಾಗುತ್ತದೆ. ಪ್ರತಿ ದಿನವೂ ಒಂದೊಂದು ಬಣ್ಣದ ಬಟ್ಟೆ ಧರಿಸಿ, ದೇವಿಗೆ ಪ್ರಿಯವಾದ ನೇವೈಧ್ಯವಿಟ್ಟು ಪೂಜಿಸುವುದು ನವರಾತ್ರಿ ವಿಶೇಷ. ಯಾವ ದೇವಿಗೆ, ಹೇಗೆ ಪೂಜಿಸಲಾಗುತ್ತದೆ? ದಿನ 1 - ಶೈಲು ಪುತ್ರಿ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಸ್ವರೂಪಕ್ಕೆ ಮೊದಲ ದಿನದ ಪೂಜೆ. ಈ ದಿನ ಕೆಂಪು ಬಣ್ಣದ ಬಟ್ಟೆ ಧರಿಸುತ್ತಾರೆ. ದಿನ 2 - ಬ್ರಾಹ್ಮಚಾರಿಣಿ ಮಹಾಮಾತೆಯ ಶಕ್ತಿ, ಶಾಂತಿ ಮತ್ತು ಸಮೃದ್ಧಿ ತೋರುವ ದಿನ. ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸುವರು. ದಿನ 3 - ಚಂದ್ರಾಘಂಚಾ ಸೌಂದರ್ಯ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ದೇವಿಗೆ ಹಳದಿ ವರ್ಣ ಮೀಸಲು. ದಿನ 4 - ಕುಷ್ಮುಂಡಾ ಸೃಷ್ಟಿಕರ್ತೆ ಬ್ರಾಹ್ಮ ರೂಪಿಯನ್ನು ತರಕಾರಿಯಿಂದ ಅಲಂಕರಿಸುವುದು ಈ ದಿನದ ವಿಶೇಷ. ಅದಕ್ಕೆ ಸಮೃದ್ಧಿಯ ಪ್ರತೀಕವಾದ ಹಸಿರು ವಸ್ತ್ರ ಧರಿಸಬೇಕು. ದಿನ 5 - ಸ್ಕಂದಾ ಮಾತಾ ಸ್ಕಂದಾ/ ಕಾರ್ತಿಕೇಯನ ತಾಯಿ ಶಾಂತ ಸ್ವರೂಪಿಯಿಂದ ರೌದ್ರ ರೂಪಕ್ಕೆ ಬರುತ್ತಾಳೆ. ಈ ದಿನ ಬೂದು ಬಣ್ಣ ಧರಿಸಬೇಕು. ದಿನ 6 - ಕಾತ್ಯಾಯನಿ ಋಷಿ ಮಗಳಾಗಿ ಹುಟ್ಟಿದ ಕಾತ್ಯಾಯನಿ ದುರ್ಗಿಯಾಗಿ ಅವತರಿಸುತ್ತಾಳೆ. ಈ ಉಗ್ರ ಸ್ವರೂಪಿ ತಾಯಿಗೆ ಕೇಸರಿ ಇಷ್ಟ. ದಿನ 7 - ಕಾಳರಾತ್ರಿ ಕಪ್ಪಾಗಿರುವ ಕಾಳಿಗೆ ಕೆದರಿದ ಕೂದಲು, ಮೂರು ಕಣ್ಣು ಹಾಗೂ ಗಾಳಿ ಬೀಸಿದರೆ ಎಂಥ ಅನುಭವವಾಗುತ್ತೋ, ಹಾಗೆ ಉಸಿರಾಡುತ್ತಾಳೆ. ಈ ಉಗ್ರ ಮಾತೆಯನ್ನು ಶಾಂತವಾಗಿಸಲು ಶ್ವೇತ ವಸ್ತ್ರಕ್ಕೆ ಆದ್ಯತೆ ನೀಡಬೇಕು. ದಿನ 8 - ಮಹಾ ಗೌರಿ ಬುದ್ಧಿವಂತೆ ಹಾಗೂ ಶಾಂತ ಸ್ವರೂಪಿ ಗೌರಿಯನ್ನು ಪೂಜಿಸುವ ದಿನ. ಈ ದಿನ ಗುಲಾಬಿ ಬಣ್ಣದ ಬಟ್ಟೆಗೆ ಆದ್ಯತೆ. ದಿನ 9 - ಸಿದ್ಧಿದಾತ್ರಿ ನಾಲ್ಕು ಕೈ ಹೊಂದಿರುವ ಸಿದ್ಧಿ ಶಕ್ತಿಶಾಲಿ ದೇವತೆ. ಎಲ್ಲ ನೋವನ್ನೂ ಗುಣ ಪಡಿಸೋ ಶಕ್ತಿ ಇರೋ ಈಕೆಗೆ ಆಕಾಶ ನೀಲಿ ಬಣ್ಣದ ವಸ್ತ್ರ ಅಚ್ಚುಮೆಚ್ಚು.

ನಿಮ್ಮ ಅದೃಷ್ಟ! ಖುಲಾಯಿಸುತ್ತದೆ ಮನೆಯಲ್ಲಿ ಶಂಖವಿದ್ದರೆ

ವಿಷ್ಣುವಿನ ಸ್ವರೂಪವಾದ ಶಂಖವನ್ನುಮನೆಯಲ್ಲಿಟ್ಟುಕೊಂಡರೆ, ಮನೆಗೆ, ಮನೆಯವರಿಗೆ ಒಳ್ಳೆಯದು. ಅದರಿಂದ ಬರುವ ‘ಓಂ’ ಶಬ್ದ ಎಲ್ಲಾಋಣಾತ್ಮಕ ಶಕ್ತಿಯನ್ನು ದೂರವಾಗಿಸಬಲ್ಲದು. ಮನೆಗೊಂದು ದೇವರ ಕೋಣೆ ಹಾಗೂ ಅಲ್ಲೊಂದು ಶಂಖವಿದ್ದರೆ ಮನೆಯ ವರ್ಚಸ್ಸು ಹೆಚ್ಚಿಸುತ್ತದೆ. ಇಂಥ ಶಂಖ ತರುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಶಂಖ ತರಲು, ಮನೆಯಲ್ಲಿ ಇಟ್ಟುಕೊಳ್ಳಲು ಏನು ಟಿಪ್ಸ್? ಶಾಸ್ತ್ರದ ಪ್ರಕಾರ ಎರಡು ಶಂಖಗಳನ್ನು ತರಬೇಕು. ಶಂಖವನ್ನು ಹಳದಿ ಬಟ್ಟೆ ಮೇಲಿಟ್ಟು ದೇವರ ಕೋಣೆಯಲ್ಲಿ ಮಾತ್ರ ಇಡಬೇಕು. ಶಂಖವನ್ನು ಶಿವ ಲಿಂಗದಿಂದ ದೂರವಿಡಬೇಕು. ಯಾವುದೇ ಕಾರಣಕ್ಕೂ ಇದರಿಂದ ನೀರನ್ನು ಎತ್ತಿ ಲಿಂಗದ ಮೇಲೆ ಹಾಕಬಾರದು. ಪೂಜಿಸುವ ಶಂಖ ಮತ್ತು ಊದುವ ಶಂಖ ಬೇರೆ ಬೇರೆಯಾಗಿರಬೇಕು. ಪೂಜಿಸುವ ಶಂಖವನ್ನು ಊದುವ ಶಂಖಕ್ಕಿಂತ ಎತ್ತರದ ಜಾಗದಲ್ಲಿಡಬೇಕು. ಮನೆಯ ಹಿರಿಯರು ಶಂಖವನ್ನು ಬೆಳಗ್ಗೆ ಹಾಗೂ ಸಂಜೆ ಊದಬೇಕು. ಬಳಸದ ಸಮಯದಲ್ಲಿ ಅದನ್ನು ಗಂಗಾಜಲದಲ್ಲಿ ತೂಳೆದು ಬಿಳಿ ಬಟ್ಟೆಯಲ್ಲಿ ಸುತ್ತಿಡಬೇಕು. ಉಪಯೋಗವೇನು? ಶಂಖವನ್ನು ಊದುವವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ. ಇದನ್ನು ಊದಿದಾಗ ಅದರಲ್ಲಿ ‘ಓಂ’ ಶಬ್ದ ಹೊರ ಬರುತ್ತದೆ. ಇದು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ತೊದಲು ಮಾತಾಡುವ ಮಗುವಿಗೆ ದಿನ ಶಂಖ ಊದುವುದನ್ನು ಹೇಳಿಕೊಟ್ಟರೆ, ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತದೆ. ಮೈ ಚರ್ಮದ ಮೇಲೆ ಬಿಳಿ ದದ್ದಾದರೆ ಶಂಖದ ನೀರಿನಿಂದ ಮಸಾಜ್ ಮಾಡಿಕೊಂಡರೆ, ಸರಿ ಹೋಗುತ್ತದೆ.

ತುಳಸಿ ಎಲೆ ತೀರ್ಥದಲ್ಲೇಕೆ ಹಾಕಿರುತ್ತಾರೆ?

ಕೆಲವು ಆಚಾರ, ವಿಚಾರಗಳನ್ನು ಮೂಢ ನಂಬಿಕೆಗಳು ಎಂದುಕೊಳ್ಳುವುದು ಇದೆ. ಖಂಡಿತ ಅಲ್ಲ. ಇವುಗಳ ಹಿಂದೆ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿವೆ. ನಮ್ಮೆಲ್ಲಾ ಆಚಾರ ಹಾಗೂ ನಂಬಿಕೆಯ ಹಿಂದೆಯೂ ಒಂದೊಂದು ಲಾಜಿಕ್ ಇದೆ. ಕೆಲವು ಅಚ್ಚರಿ ಹುಟ್ಟಿಸುವಂತಿವೆ, ಇನ್ನು ಕೆಲವು ನಿಗೂಢವಾಗಿವೆ. ಏನವು? ಇಂದಿನಿಂದ ಪ್ರತಿದಿನ ಒಂದೊಂದನ್ನು ಇಲ್ಲಿ ಓದಿ. ಹಳೆ ಆಚಾರ, ಹೊಸ ವಿಚಾರ-1 ತುಳಸಿ ಹಾಕದೆ ದೇವರ ತೀರ್ಥವಿಲ್ಲ. ತೀರ್ಥಕ್ಕೆ ತುಳಸಿ ಹಾಕುವುದಕ್ಕೆ ಧಾರ್ಮಿಕ ಕಾರಣವೂ ಇದೆ, ಆರೋಗ್ಯ ಸಂಬಂಧಿ ಹಿನ್ನೆಲೆಯೂ ಇದೆ. ಧಾರ್ಮಿಕ ಕಾರಣ- ತುಳಸಿ ದೇವಪತ್ರೆ. ಸ್ಕಂದಪುರಾಣದ ಪ್ರಕಾರ, ದೇವತೆಗಳು ಸಮುದ್ರಮಥನ ಮಾಡುವಾಗ ಅಮೃತದ ಕೆಲ ಹನಿಗಳು ಭೂಮಿ ಮೇಲೆ ಬಿದ್ದವಂತೆ. ಅಲ್ಲಿ ತುಳಸಿ ಹುಟ್ಟಿತಂತೆ. ಅಂದರೆ, ತುಳಸಿಯಲ್ಲಿ ಅಮೃತದ ಗುಣವಿದೆ ಎಂದರ್ಥ. ನಂತರ ಬ್ರಹ್ಮನು ಈ ತುಳಸಿಯನ್ನು ವಿಷ್ಣುವಿಗೆ ಒಪ್ಪಿಸಿದನಂತೆ. ವಿಷ್ಣುವಿಗೆ ಇದು ಬಹಳ ಇಷ್ಟವಾಯಿತಂತೆ. ತುಳಸಿ ಗಿಡದಲ್ಲಿ ಎಲ್ಲಾ ದೇವತೆಗಳೂ ನೆಲೆಸಿದ್ದಾರಂತೆ. ಆ ಕಾರಣಕ್ಕೇ ಪ್ರತಿ ಮನೆಯಲ್ಲೂ ತುಳಸಿ ಗಿಡ ಇಟ್ಟು ಪೂಜಿಸುತ್ತಾರೆ. ಔಷಧಿಯ ಆಗರ ತುಳಸಿ ಆರೋಗ್ಯ ಸಂಬಂಧಿ ಕಾರಣ- ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. -ತುಳಸಿ ಎಲೆ ಅಥವಾ ಅದನ್ನು ನೆನೆಸಿದ ನೀರನ್ನು ಸೇವಿಸಿದರೆ ಉಸಿರಾಟ ಸುಗಮವಾಗುತ್ತದೆ. - ತುಳಸಿಯ ನೀರು ಕುಡಿದರೆ ಕಫ ನಿವಾರಣೆಯಾಗುತ್ತದೆ. - ಸಣ್ಣಪುಟ್ಟ ಜ್ವರ, ಫಂಗಸ್ ಹಾಗೂ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ ಸೋಂಕುಗಳನ್ನು, ಕೆಮ್ಮನ್ನು ನಿವಾರಿಸುವ ಶಕ್ತಿ ಹಾಗೂ ಚರ್ಮ ಸಂಬಂಧಿ ತೊಂದರೆಗಳನ್ನು ದೂರ ಮಾಡುವ ಗುಣ ತುಳಸಿಗಿದೆ. - ಒತ್ತಡ ನಿವಾರಣೆಗೆ, ಕಿಡ್ನಿ ಸ್ಟೋನ್, ಹೃದ್ರೋಗ ಹಾಗೂ ಮಧುಮೇಹ ತಡೆಯಲು ಕೂಡ ತುಳಸಿ ಪ್ರಶಸ್ತ. - ತುಳಸಿಯಲ್ಲಿರುವ ಓಲಿಯೋನಿಕ್ ಆಸಿಡ್ ಯಕೃತ್ ರಕ್ಷಕ. ಗಂತಿರೋಧಕ ಹಾಗೂ ವೈರಸ್ ರೋಧಕ ಗುಣಗಳೂ ತುಳಸಿಯಲ್ಲಿವೆ. - ಆರ್ಸೋಲಿಕ್ ಆಸಿಡ್ ಕ್ಯಾನ್ಸರ್ ನಿಗ್ರಾಹಕ. ಕ್ಯಾನ್ಸರ್ ಕೋಶಗಳ ಸ್ವಯಂಭಕ್ಷಣೆಗೆ ಇದು ಪ್ರೇರೇಪಿಸುತ್ತದೆ. - ರೋಸ್ಮೆರಿನಿಕ್ ಆಮ್ಲವು ಆತಂಕಲಯ (ಆಂಕ್ಸಿಯೋಲೈಟಿಕ್) ಕಾರಕ ಗುಣವುಳ್ಳದ್ದು. ಕಾರ್ವಕ್ರಾಲ್ ಬ್ಯಾಕ್ಟೀರಿಯ ನಾಶಕ. - ಚರಕಸಂಹಿತೆಯು ತುಳಸಿಯ ಬಗ್ಗೆ ಪ್ರಸ್ತಾಪಿಸಿ ಮನೋ ಒತ್ತಡವನ್ನು ನಿಗ್ರಹಿಸುವುದರ ಜೊತೆಗೆ ಶರೀರ ಕ್ರಿಯೆಯಲ್ಲಿ ಸಮತೋಲನೆ ತರುತ್ತದೆ ಎನ್ನುತ್ತದೆ. - ಇದು ಒಂದು ಅರ್ಥದಲ್ಲಿ ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ. ಹೀಗಾಗಿ ಪ್ರತಿದಿನ ತೀರ್ಥದ ರೂಪದಲ್ಲಾದರೂ ತುಳಸಿಯ ಅಂಶ ದೇಹಕ್ಕೆ ಹೋಗಲಿ ಎಂದು ತೀರ್ಥದಲ್ಲಿ ತುಳಸಿ ಕಡ್ಡಾಯ ಮಾಡಲಾಗಿದೆ.

ಮನೆಯಲ್ಲಿ ನವಿಲುಗರಿ ಇದ್ದರೆ! ಶನಿ ದೋಷ ನಿವಾರಿಸುತ್ತೆ

ವಾಸ್ತು ಶಾಸ್ತ್ರದಲ್ಲಿ ಮನೆ ಹಾಗೂ ಮನೆಯವರ ಏಳ್ಗೆಗಾಗಿ ಸಾಕಷ್ಟು ಸಲಹೆ, ಸೂಚನೆಗಳಿರುತ್ತವೆ. ಕೆಲವೊಂದನ್ನು ಮನೆಯಲ್ಲಿಟ್ಟುಕೊಂಡರೆ ಒಳ್ಳೆಯದು. ಮತ್ತೆ ಕೆಲವನ್ನು ಇಟ್ಟುಕೊಳ್ಳಬಾರದು. ಅಂಥದ್ರಲ್ಲಿ ನವಿಲಿನ ಗರಿ ಬಗ್ಗೆ ಈ ಶಾಸ್ತ್ರ ಹೇಳುವುದೇನು? ಎಲ್ಲರನ್ನೂ ಮೋಡಿ ಮಾಡುವ ನವಿರಾದ ನವಿಲು ಗರಿಗೆ ಮಾರು ಹೋಗದವರು ಯಾರು? ಬೀಸಣಿಗೆಯಲ್ಲಿಯೋ, ಕೃಷ್ಣನ ಫೋಟೋ ಅಥವಾ ಮೂರ್ತಿ ಮೇಲೋ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾರೆ ಹಲವರು. ಆದರೆ, ಇದಕ್ಕೆ ಮನೆಯ ದೋಷವನ್ನೂ ಪರಿಹರಿಸೋ ಶಕ್ತಿ ಇದೆ ಎಂಬ ಸತ್ಯ ಗೊತ್ತಾ? ನವಿಲುಗರಿ ಮನೆಯಲ್ಲಿದ್ದರೆ ಹೇಗೆ ವಾಸ್ತು ದೋಷ ನಿವಾರಣೆಯಾಗುತ್ತೆ. ಎಂಟು ನವಿಲು ಗರಿಗಳನ್ನು ಒಟ್ಟಾಗಿ ಬಿಳಿ ದಾರದಿಂದ ಕಟ್ಟಿ ಓಂ ಸೋಮಯಾ ನಮಃ ಎಂದು ಮಂತ್ರ ಹೇಳಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಮೂರು ನವಿಲು ಗರಿಗಳನ್ನು ಕಟ್ಟಿ, ಅದರ ಜೊತೆ ಅಡಿಕೆ ಇಟ್ಟು, ಅದರ ಮೇಲೆ ನೀರು ಸಿಂಪಡಿಸುವಾಗ ಓಂ ಶನೀಶ್ವರಾಯ ನಮಃ ಜಪಿಸಿದರೆ ಶನಿ ದೋಷವೂ ದೂರವಾಗುತ್ತದೆ. ನವಿಲುಗರಿಯನ್ನು ಲಾಕರ್ ಬಳಿ ಇಟ್ಟರೆ ಸಂಪತ್ತು ಹೆಚ್ಚುತ್ತದೆ. ಮನೆ ಮುಂಭಾಗದಲ್ಲಿಟ್ಟರೆ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಆಫೀಸ್‌ನಲ್ಲಿ ನಾಟ್ಯ ಮಾಡುವ ನವಿಲಿನ ಚಿತ್ರವನ್ನಿಟ್ಟರೆ, ಆದಾಯ ಹೆಚ್ಚುತ್ತದೆ. ಹಿಂದೆ ದೇಹದಿಂದ ವಿಷ ತೆಗೆಯಲೂ ನವಿಲು ಗರಿಯನ್ನು ಬಳಸುತ್ತಿದ್ದರು. ದೇಹದ ವಿಷವನ್ನೂ ತೆಗೆಯುವಷ್ಟು ಶಕ್ತಿ ನವಿಲು ಗರಿಗಿದೆ. ಮನೆಯಲ್ಲಿರುವ ಹಲ್ಲಿ ಓಡಿಸಲೂ ಈ ನವಿಲು ಗರಿ ಬೆಸ್ಟ್. ಬೆಡ್‌ರೂಮಿನಲ್ಲಿ ಗರಿ ಬಿಚ್ಚಿರುವ ನವಿಲಿನ ಚಿತ್ರವಿದ್ದರೆ, ದಾಂಪತ್ಯದ ಬಾಂಧವ್ಯ ಗಟ್ಟಿಗೊಳ್ಳುತ್ತದೆ.

ಜಾತಕದಲ್ಲಿರುವ ಮನೆಗಳ ಅರ್ಥವೇನು?

ಜಾತಕದಲ್ಲಿರುವ ಮನೆಗಳ ಅರ್ಥವೇನು? ಜ್ಯೋತಿಷ ಶಾಸ್ತ್ರದ ಮಹಾ ಜ್ಞಾನಿ, ಋಷಿ ಸದೃಷ ವ್ಯಕ್ತಿ ವರಾಹ ಮಿಹಿರರು. ಅವರು ಬೃಹಜ್ಜಾತಕವನ್ನು ಬರೆಯುವಾಗ ಒಂದು ಮಾತನ್ನ ಹೇಳ್ತಾರೆ : ‘ಭೂಯೋಭಿ: ಪಟುಬುದ್ಧಿ: ಪಟುಧಿಯಾಂ ಹೋರಾ ಫಲಜ್ಞಪ್ತಯೇ ಶಬ್ದ ನ್ಯಾಯ ಸಮನ್ವಿತೇಷು ಬಹುಶ:ಶಾಸ್ತ್ರೇಷು ದೃಷ್ಟೇಶ್ವಪಿ, ಹೋರಾತಂತ್ರ ಮಹಾರ್ಣವ ಪ್ರತರಣೇ ಭಗ್ನೋದ್ಯಮಾನಾಮಹಂ ಸ್ವಲ್ಪಂ ವೃತ್ತ ವಿಚಿತ್ರಂ ಅರ್ಥ ಬಹುಲಂ ಶಾಸ್ತ್ರಂ ಪ್ಲವಂ ಪ್ರಾರಭೇ’ ಅಂತ. ಏನು ಇದರ ಅರ್ಥ? ನೋಡಿ ನಮ್ಮಲ್ಲಿ ಆರು ಶಾಸ್ತ್ರಗಳಿವೆ 1. ಶಿಕ್ಷಾ 2 ವ್ಯಾಕರಣ 3 ಛಂದಸ್ಸು 4 ನಿರುಕ್ತ 5 ಜ್ಯೋತಿಷ್ಯ 6 ಕಲ್ಪ ಅಂತ ಇವುಗಳನ್ನ ವೇದಗಳ ಅಂಗಗಳು ಅಂತ ಕರೀತಾರೆ. ಇವುಗಳ ಸಹಾಯ ಇಲ್ಲದೆ ವೇದವನ್ನ ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಆರು ಶಾಸ್ತ್ರಗಳಲ್ಲಿ ಮೊದಲನೆಯದಾದ ಶಿಕ್ಷಾ. ಇದು ವೇದಗಳ ವರ್ಣ, ಸ್ವರ, ಉದಾತ್ತ ಅನುದಾತ್ತ ಸ್ವರಿತ ಇವುಗಳ ಸ್ಪಷ್ಟತೆಯನ್ನ ಹಾಗೂ ಇವುಗಳ ಮಹತ್ವವನ್ನ ತಿಳಿಹೇಳತ್ತೆ. ಅಂದ್ರೆ ವೇದವನ್ನ ಹೇಗೆ ಹೇಳಬೇಕೆ ಎಷ್ಟು ಪ್ರಮಾಣದಲ್ಲಿ ಧ್ವನಿಸಬೇಕು ಇತ್ಯಾದಿ ಮಾಹಿತಿ ತಿಳಿಸುತ್ತೆ. ಇನ್ನು ಎರಡನೆಯದ್ದು ವ್ಯಾಕರಣ. ಈ ಶಬ್ದವೇ ಹೇಳತ್ತೆ ವೇದದೊಳಗಿನ ಗ್ರಾಮರ್ ಹೇಳುವ ಶಾಸ್ತ್ರ. ಮೂರನೆಯದ್ದು ಛಂದಶ್ಶಾಸ್ತ್ರ ಅಕ್ಷರ ಸಮೂಹವನ್ನ ವಿವರಿಸುತ್ತೆ. ಮಂತ್ರಕ್ಕೆ ಎಷ್ಟು ಅಕ್ಷರಗಳ ಜೋಡಣೆ ಇರಬೇಕು. ಆ ಜೋಡಣೆಯ ಕ್ರಮ ಹಾಗೂ ಅದರ ಮಹತ್ವವನ್ನ ವಿವರಿಸುವ ಶಾಸ್ತ್ರ. ಗಾಯತ್ರೀ ಛಂದಸ್ಸಲ್ಲಿ ಎಂಟು ಅಕ್ಷರಗಳ ಮೂರು ಸಾಲಿನದ್ದು ಒಟ್ಟು 24 ಅಕ್ಷರಗಳ ಮಾಲೆ ಅದು. ಬೃಹತೀ ಛಂದಸ್ಸು, ಅನುಷ್ಟುಪ್, ತ್ರಷ್ಟುಪ್ ಹೀಗೆ ಸಾಕಷ್ಟು ಛಂದಸ್ಸುಗಳಿವೆ. ನಿರುಕ್ತ ಶಾಸ್ತ್ರವು ಒಂದು ರೀತಿಯ ನಿಘಂಟು ಇದ್ದಹಾಗೆ. ಡಿಕ್ಷನರಿ ಅಂತೀರಲ್ಲ ಅದು. ವೇದಗಳಲ್ಲಿರುವ ಕ್ಲಿಷ್ಟಪದಗಳಿಗೆ ಇದು ಅರ್ಥವನ್ನ ಹೇಳತ್ತೆ. ಮುಂದಿನದ್ದೇ ಜ್ಯೋತಿಷ್ಯ ಅದನ್ನ ಕೊನೆಯಲ್ಲಿ ವಿಸ್ತಾರವಾಗಿ ವಿವರಿಸ್ತೇನೆ. ಈಗ ಆರನೇ ಶಾಸ್ತ್ರ ಕಲ್ಪ. ಈ ಕಲ್ಪ ನಮ್ಮ ಎಲ್ಲ ಆಚರಣೆಗಳ ವಿವರಣೆ ಕೊಡತ್ತೆ. ನಾಮಕರಣ, ಮದುವೆ, ಗೃಹಪ್ರವೇಶ, ಇಂಥ ಆಚರಣೆಗಳ ಸ್ಪಷ್ಟ ಮಾಹಿತಿ ಕೊಡುವ ಶಾಸ್ತ್ರ ಅದು. ಈಗ ನಾವು ಗಮನಿಸ ಬೇಕಾದ್ದು ಜ್ಯೋತಿಷ್ಯ. ನೋಡಿ ಬೇರೆಲ್ಲ ಶಾಸ್ತ್ರಗಳ ಗುರಿ ಒಂದೇ. ಒಂದು ವಸ್ತುವನ್ನ ಸವಿವರವಾಗಿ ವಿವರಿಸೋದು. ಆದರೆ ಈ ಜ್ಯೋತಿಷ್ಯ ಇದೆಯಲ್ಲ. ಇದು ಮಹತ್ವತವಾದ ಶಾಸ್ತ್ರ. ಯಾಕೆ ಗೊತ್ತಾ..? ಈ ಜ್ಯೋತಿಷ್ಯದಲ್ಲಿ ಒಂದು ವಿಷ್ಯ ಅಲ್ಲ ಜೀವನಕ್ಕೆ ಬೇಕಾದ ಸಮಸ್ತವನ್ನೂ ತೆರೆದಿಡುವ ಶಾಸ್ತ್ರವಾಗಿದೆ. ಹೇಗೆ..? ಇಲ್ಲಿ ಹನ್ನೆರಡು ಮನೆಗಳಿವೆ. ಒಂದೊಂದು ಮನೆಯೂ ನಮ್ಮ ಬದುಕಿನ ಸ್ವಾರಸ್ಯವನ್ನ ತೆರೆದಿಡುವ ಮನೆಯಾಗಿದೆ. - ಒಂದನೇ ಮನೆಯನ್ನು ಲಗ್ನ ಅಂತಾರೆ. ಒಂದು ಮಗು ಹುಟ್ಟಿದ ಸಮಯಕ್ಕೆ ಸರಿಯಾಗಿ ಉದಯಕ್ಕೆ ಬರುವ ರಾಶಿಯೇ ಲಗ್ನವಾಗತ್ತೆ. ಆ ಲಗ್ನದಿಂದ ದೇಹವನ್ನು, ಆತ್ಮವನ್ನು, ರೂಪ, ಗುಣ, ತಲೆ, ವರ್ತಮಾನ, ಇತ್ಯಾದಿ ವಿಚಾರವನ್ನ ತಿಳಿಸುತ್ತೆ, - ಎರಡನೇ ಮನೆಯಿಂದ - ಕುಟುಂಬ, ಹಣ, ಮಾತು, ಅನ್ನ, ನೀರು, ಬಲಗಣ್ಣು, ಪತ್ರಿಕೆ ಇತ್ಯಾದಿ ವಿಷಯಗಳನ್ನ ವಿವರಿಸುತ್ತೆ. - ಮೂರನೇ ಮನೆ - ಕಷ್ಟ, ಎದೆ ಭಾಗ, ಬಲಕಿವಿ, ಧೈರ್ಯ, ಸಾಹಸ, ಪರಾಕ್ರಮ, ಇತ್ಯಾದಿಗಳನ್ನ ವಿವರಿಸುತ್ತೆ. - ನಾಲ್ಕನೇ ಮನೆ - ಮನೆ, ಸುಖ, ನಿವೇಶನ, ಕಟ್ಟಡ, ಮಾವ, ಸೋದರಿಕೆ, ಬಂಧು, ವಾಹನ, ತಾಯಿ, ರಾಜ್ಯ, ಪಶು ಸಂಪತ್ತು, ಪರಿಮಳ ದ್ರವ್ಯ, ನೀರು, ಸೇತುವೆ, ಇತ್ಯಾದಿಗಳನ್ನ ವಿವರಿಸುತ್ತೆ. - ಐದನೇ ಮನೆ - ರಾಜಚಿಹ್ನೆ, ಹಸ್ತ, ಆತ್ಮ, ಬುದ್ಧಿ, ಧೀ ಶಕ್ತಿ, ಸಂತಾನ, ಭವಿಷ್ಯ ಜ್ಞಾನ, ಶೃತಿ, ಇತ್ಯದಿ ವಿಷಯಗಳನ್ನ ವಿವರಿಸುತ್ತೆ. - ಆರನೇ ಮನೆ - ಸಾಲ, ಅಸ್ತ್ರ, ಕಳ್ಳತನದ ವಿಷಯ, ರೋಗ, ಶತ್ರು, ಗೋತ್ರಜರು, ವಾದ-ವಿವಾದ, ಪಾಪ ಕರ್ಮ ಇದ್ಯಾದಿಗಳನ್ನು ವಿವರಿಸುತ್ತೆ. -ಏಳನೇ ಮನೆ - ಹೆಂಡತಿ, ಬಯಕೆ, ಕಾಮ, ಆನಂದ, ವ್ಯಾಪಾರ, ಇತ್ಯಾದಿಗಳನ್ನ ವಿವರಿಸುತ್ತೆ. - ಎಂಟನೇ ಮನೆ - ಮಾಂಗಲ್ಯ ಸೌಭಾಗ್ಯ, ಮಲಿನತೆ, ಆಯುಷ್ಯ, ಕ್ಲೇಶ, ಅಪವಾದ, ಅಶುಚಿ, ದಾಸ್ಯ, ವಿಘ್ನಗಳ ವಿವರ ನೀಡತ್ತೆ. - ಒಂಭತ್ತನೇ ಮನೆ - ಗುರು, ದೇವತೆ, ಅದೃಷ್ಟ, ತಂದೆ, ಸುಕೃತ, ಮೊಮ್ಮಗ, ಜಪ, ಶ್ರೇಷ್ಠತೆ ಕುಲದೇವರ ಚಿಂತನೆಗಳ ವಿವರವನ್ನ ನೀಡುತ್ತೆ. - ಹತ್ತನೇ ಮನೆ - ಪದವಿ, ವೃತ್ತಿ, ಸ್ಥಾನ-ಮಾನ, ಆಕಾಶ, ಗಮನ ಇತ್ಯಾದಿ ವಿಚಾರ ತಿಳಿಸುತ್ತದೆ. - ಹನ್ನೊಂದನೆ ಮನೆ - ಪ್ರಾಪ್ತಿ, ಲಾಭ, ಸಿದ್ಧಿ, ಹಿರಿಯಣ್ಣ, ಅಕ್ಕ, ಶುಭವಾರ್ತೆ ಇತ್ಯಾದಿಗಳ ವಿವರ ನೀಡುತ್ತೆ. - ಹನ್ನೆರಡನೇ ಮನೆ ದು:ಖ, ಎಡಗಣ್ಣು, ವ್ಯಯ, ಶಯನ, ಅಂತ್ಯ, ದಾರಿದ್ರ್ಯ ಇತ್ಯಾದಿಗಳ ವಿವರ ನೀಡತ್ತೆ. ಹೀಗೆ ಮನುಷ್ಯ ತನ್ನ ಜೀವನದಲ್ಲಿ ಏನೆಲ್ಲ ಭಾವಗಳನ್ನು ಅನುಭವಿಸುತ್ತಾನೋ ಆ ಸರ್ವ ಭಾವವನ್ನೂ ಈ ಜ್ಯೋತಿಷ್ಯ ವಿವರವಾಗಿ ತೆರೆದಿಡತ್ತೆ. ಇದೇ ಇತರೆ ಶಾಸ್ತ್ರಗಳಿಗೂ ಜ್ಯೋತಿಷ್ಯಕ್ಕೂ ಇರುವ ವ್ಯತ್ಯಾಸ. ನಮ್ಮ ಬದುಕಿಗೆ ಬೇಕಾದ ಸರ್ವ ವಿಷಯವೂ ಈ ಶಾಸ್ತ್ರದಲ್ಲಿದೆ. ಇದನ್ನೇ ಮೇಲಿನ ಶ್ಲೋಕದಲ್ಲಿ ವರಾಹ ಮಿಹಿರರು ಹೇಳಿದ್ದು. ಮನುಷ್ಯ ತನ್ನ ಕರ್ಮ ಫಲಗಳಿಗೆ ಅನುಸಾರವಾಗಿ ಜೀವನದಲ್ಲಿ ಏರು ಪೇರುಗಳನ್ನ ಹೊಂದುತ್ತಾರೆ. ಇಂಥ ಏರು ಪೇರುಗಳನ್ನ ವಿವರಿಸಲಿಕ್ಕೆ ಗರ್ಗಾ, ಪರಾಶರಾದಿ ಅನೇಕ ಋಷಿಗಳು ಅನೇಕ ಗ್ರಂಥಗಳನ್ನ ರಚಿಸಿದ್ದಾರೆ, ಆದರೆ ಆ ಗ್ರಂಥಗಳನ್ನ ಓದಿ ಅರ್ಥೈಸುವಲ್ಲಿ ವಿಫುಲರಾದ ಕೆಲ ಮಂದಿಗೆ ನಾನು ಬೃಹಜ್ಜಾತಕ ಎಂಬ ಪುಟ್ಟ ಗ್ರಂಥವನ್ನ ರಚಿಸಿದ್ದೇನೆ. ಆ ಗ್ರಂಥ ದೋಣಿಯ ಸಹಾಯದಿಂದ ಈ ಕರ್ಮ ಸಾಗರವನ್ನ ದಾಟಲಿ ಅಂತ ವಿವರಿಸಿದ್ದಾರೆ. ಅವರ ಬೃಹಜ್ಜಾತಕವೊಂದನ್ನ ಸರಿಯಾಗಿ ಅರ್ಥಮಾಡಿಕೊಂಡರೆ ನಮ್ಮ ಭವಿಷ್ಯ ನಮ್ಮ ಕೈಯಲ್ಲಿರತ್ತೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಆದರೆ ಅದನ್ನ ಸೂಕ್ಷ್ಮವಾಗಿ ಗಮನಿಸುವ ಅನುಷ್ಠಾನ ಶಕ್ತಿ ನಮ್ಮಲ್ಲಿ ವೃದ್ಧಿಯಾಗಬೇಕು. ಈ ರಹಸ್ಯ ಬಗೆಯಲಿಕ್ಕೆ ನಿಮ್ಮಲ್ಲಿ ನಿತ್ಯ ಅನುಷ್ಠಾನ ಇರಲೇ ಬೇಕು. ಆ ದೈವ ಬಲವಿಲ್ಲದೆ ಹೋದರೆ ಯಾವ ವಿಚಾರವೂ ಹೊಳೆಯುವುದಿಲ್ಲ. ಹೇಗೆ ಅರ್ಥೈಸಬೇಕು ತೋಚುವುದಿಲ್ಲ. ಇರಲಿ. ಈಗ ಗ್ರಹಗಳ ಸ್ವರೂಪ ಅವುಗಳ ಬಲ, ಪ್ರಭಾವಾದಿಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯದಲ್ಲಿ ಮೊತ್ತಮೊದಲ ಗ್ರಹ. ಈ ಸೂರ್ಯನನ್ನ ಗ್ರಹರಾಜ ಅಂತ ಕರೀತಾರೆ. ಜೊತೆಗೆ ಆತನನ್ನ ಆತ್ಮ ಕಾರಕ ಅಂತಲೂ ಕರೀತಾರೆ. ಅಷ್ಟೇ ಅಲ್ಲ ನೀವೇನಾದ್ರೂ ಜ್ಯೋತಿಷ್ಯ ಕಲೀಬೇಕು, ಜ್ಯೋತಿಷ್ಯವನ್ನು ಕರಗತ ಮಾಡ್ಕೋಬೇಕು, ಈ ಶಾಸ್ತ್ರದ ತಳಸ್ಪರ್ಶವಾಗಬೇಕು ಅಂದ್ರೆ ರ್ಸೂನ ಅನುಗ್ರಹ ಬೇಕೇ ಬೇಕು. ಸೂರ್ಯನಿಲ್ಲದೇ ಜಗತ್ತೇ ಕತ್ತಲು. ಯಾರು ಸೂರ್ಯೋಪಾಸಕರೋ ಅವರಿಗಷ್ಟೇ ಜ್ಯೋತಿಷ್ಯ ಒಲಿಯೋದು.

ಜಾತಕದಲ್ಲಿ ಸೂರ್ಯನ ಪ್ರಭಾವ

ಜಾತಕದಲ್ಲಿ ಸೂರ್ಯನ ಪ್ರಭಾವ ಏಕೆ ಮುಖ್ಯ? ಜಾತಕದಲ್ಲಿ ನವ ಗ್ರಹಗಳ ಪಾತ್ರ ಪ್ರಮುಖವಾದದ್ದು. ಅದರಲ್ಲಿಯೂ ಸೂರ್ಯ ಎಲ್ಲರ ಜಾತಕದಲ್ಲಿಯೂ ಮಹತ್ವದ ಪ್ರಭಾವ ಬೀರುತ್ತಾನೆ. ಹೇಗೆ? ಏಕೆ? ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಿನಿಗಿರೋ ಪ್ರಾಮುಖ್ಯತೆ ಏನು? ಓದಿ ಜಾತಕ ನೋಡುವುದ ಕಲಿಯಿರಿ... ಅದು ವಿಕ್ರಮಾದಿತ್ಯನ ಆಸ್ಥಾನ. ರಾಜ ಸಭೆ ಪ್ರಾರಂಭವಾಗಿತ್ತು. ಸಭೆಯಲ್ಲಿ ಮಂತ್ರಿ ಒಂದು ವಿಷಯ ಪ್ರಸ್ತಾಪ ಮಾಡಿದ. ರಾಜನ್ ನಾವು ಸರಿಯಾದ ರೀತಿಯಲ್ಲಿ ಪ್ರಜೆಗಳ ಯೋಗಕ್ಷೇಮ ವಿಚಾರಿಸಬೇಕಿದ್ದರೆ ನಾವೇ ಮಾರುವೇಶದಲ್ಲಿ ದೇಶ ಪರ್ಯಟನೆ ಮಾಡಬೇಕು. ಆಗಷ್ಟೇ ಪ್ರಜೆಗಳ ಸ್ಥಿತಿಗತಿಗಳನ್ನ ಯಥಾವತ್ತಾಗಿ ಅರ್ಥೈಸಲಿಕ್ಕೆ ಸಾಧ್ಯ ಅಂತ ಒಂದು ಸಲಹೆ ಕೊಟ್ಟ. ಮಂತ್ರಿಯ ಮಾತು ನಿಜ ಅನ್ನಿಸಿ ಮಾರನೇ ದಿನವೇ ಮಾರುವೇಶದಲ್ಲಿ ಕುದುರೆಗಳನ್ನ ಹತ್ತಿ ಹೊರಟರು. ಪ್ರಯಾಣ ಮಧ್ಯದಲ್ಲಿ ಓರ್ವ ಭವಿಷ್ಯ ಹೇಳುವ ವ್ಯಕ್ತಿಯ ಬಗ್ಗೆ ಹಲವಾರು ಜನ ಮಾತನಾಡಿಕೊಳ್ಳುವುದು ಕೇಳಿಸಿತು. ಊರವರ ಮಾತುಗಳಿಂದ ರಾಜನಿಗೆ ಆ ವ್ಯಕ್ತಿಯ ಬಗೆಗೆ ಕುತೂಹಲ ಹುಟ್ಟಿತು. ಆ ಭವಿಷ್ಯ ಪ್ರವೀಣನ ಹುಡುಕಾಟಕ್ಕೆ ನಿಂತ ರಾಜನಿಗೆ ಉಜ್ಜೈನಿ ಸಮೀಪದ ಅವನ ಊರು ಸಿಕ್ಕಿತು. ಅಲ್ಲಿ ಈ ಭವಿಷ್ಯ ಪ್ರವೀಣ ಇವರನ್ನು ಕಂಡು ನೀವು ಮಾರುವೇಶದಲ್ಲಿ ಬಂದಂತೆ ಕಾಣುತ್ತಿದೆ. ನೀವು ಇಂಥ ಕಡೆಯವರು ಇಂಥ ಉದ್ದೇಶದಲ್ಲಿ ಬಂದಿದ್ದೀರಿ ಅಂತೆಲ್ಲವನ್ನ ಇದ್ದಹಾಗೆ ವಿವರಿಸಿಬಿಟ್ಟ. ಅದನ್ನ ಕೇಳಿ ರಾಜನಿಗೆ ಪರಮಾಶ್ಚರ್ಯ..! ರಾಜ ಮರು ಮಾತನಾಡದೆ ಆಸ್ಥಾನಕ್ಕೆ ಬಂದು ಮಂತ್ರಿಯ ಬಳಿ ಆ ವ್ಯಕ್ತಿಯನ್ನು ಸಭೆಗೆ ಕರೆತರಲು ಹೇಳಿದ. ಮಾರನೇ ದಿನ ಆ ಭವಿಷ್ಯ ಪ್ರವೀಣ ಆಸ್ಥಾನಕ್ಕೆ ಬಂದ. ಆತನ ಮುಂದೆ ರಾಜ ತನ್ನ ಮಗನ ಜಾತಕವನ್ನ ಇಟ್ಟ. ಬಂದ ವ್ಯಕ್ತಿ ಆ ಜಾತಕವನ್ನ ಕೂಲಂಕಷವಾಗಿ ಪರಿಗಣಿಸಿ ಈ ಜಾತಕದವನು ಇಂಥ ದಿವಸ, ಇಂಥ ಘಳಿಗೆಯಲ್ಲಿ ಒಂದು ಹಂದಿಯಿಂದ ಮರಣವನ್ನಪ್ಪುತ್ತಾನೆ ಎಂದು ಭವಿಷ್ಯ ನುಡಿದ. ಕೂತಿದ್ದ ರಾಜ ಎದ್ದು ನಿಂತ. ಆ ಭವಿಷ್ಯ ಪ್ರವೀಣನನ್ನು ಕುರಿತು ಬಾಯಿಗೆ ಬಂದಂತ ಬೈದ : ಅದು ನನ್ನ ಮಗನ ಜಾತಕ. ನಾನು ಇರುವಾಗಲೇ ಅವನ ಸಾವು ಸಾಧ್ಯವೇ? ಅದೂ ಯ:ಕಶ್ಚಿತ್ ಹಂದಿಯಿಂದ. ನೋಡೇ ಬಿಡೋಣ. ಭಟರೇ ಈ ಅಪವಾಣಿಯನ್ನು ನುಡಿದ ಈ ಅವಿವೇಕಿಯನ್ನು ಸೆರೆಯಲ್ಲಿಡಿ ಅಂತ ಆಜ್ಞಾಪಿಸಿದ. ಅಷ್ಟರಲ್ಲಿ ಮಂತ್ರಿ ರಾಜನನ್ನು ಸಮಾಧಾನಿಸಿ. ಆ ಭವಿಷ್ಯ ನಿಜವಾದರೆ ಓರ್ವ ನಿರಪರಾಧಿಯನ್ನು ಶಿಕ್ಷಿಸಿದ ಹಾಗಾಗುವುದಿಲ್ಲವೇ? ತಾಳ್ಮೆಯಿಂದ ಕಾಯೋಣ ಅಂತ ಸಮಾಧಾನ ಮಾಡಿದ. ಆ ದಿನ ಬಂದೇ ಬಿಟ್ಟಿತು. ತನ್ನ ಮಗನ ಕಾವಲಿಗೆ ರಾಜನೇ ನಿಂತ. ಎಲ್ಲ ಭಟರೂ, ಆಳು ಕಾಳು ಸರ್ವರೂ ಆ ಮಗುವಿನ ರಕ್ಷಣೆಗೆ ನಿಂತರು. ಒಂದು ಇರುವೆಯೂ ಅವನನ್ನು ಮುತ್ತಲು ಸಾಧ್ಯವಿಲ್ಲ, ಅಷ್ಟು ಭದ್ರತೆ ಇತ್ತು ಆ ಅರಮನೆಯಲ್ಲಿ. ಇನ್ನೇನು ಆ ಸಮಯ ಹತ್ತಿರವಾಗುತ್ತಿದೆ. ರಾಜ ತದೇಕಚಿತ್ತದಿಂದಿ ಆ ಸಮಯವನ್ನೇ ಎದಿರು ನೋಡುತ್ತಿದ್ದ. ಆ ಸಮಯ ಬಂದೇ ಬಿಟ್ಟಿತು ರಾಜನ ಮಗ ಚಿಟಾರನೆ ಚೀರಿದ. ಇದ್ದ ಸ್ಥಳದಿಂದಲೇ ರಾಜ ಬೆವರಿ ಮಗುವಿನ ಬಳಿ ಓಡಿದ. ನೋಡಿದರೆ ಮಗುವಿನ ತಲೆಗೆ ಭೀಕರವಾದ ಪೆಟ್ಟು ಬಿದ್ದು ಮಗು ಸ್ಥಳದಲ್ಲೇ ಮೃತಪಟ್ಟಿತ್ತು. ರಾಜ ಬಂದು ನೋಡಿದರೆ ಬಲವಾದ ಕಬ್ಬಿಣದ ವಸ್ತು ಮಗುವಿನ ತಲೆ ಮೇಲೆ ಬಿದ್ದತ್ತು. ಬಿದ್ದ ವಸ್ತು ಏನು ಅಂತ ನೋಡಿದರೆ ಅದು ಆ ರಾಜ್ಯದ ಲಾಂಛನವಾಗಿತ್ತು. ಆ ಲಾಂಛನವನ್ನೇ ನೋಡುತ್ತಾ ಎಷ್ಟು ಕಾವಲಿದ್ದರೂ ಮಗನ ರಕ್ಷಣೆ ಮಾಡಲಾಗಲಿಲ್ಲವಲ್ಲಾ ಎಂದುಕೊಂಡ ರಾಜ ತುಂಬ ಮರುಗಿದ. ನಾನು ಹಂದಿ ಅಂಧರೆ ಪ್ರಾಣಿ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಮ್ಮ ಲಾಂಛನವೇ ಮಗನ ಮೃತ್ಯವಾಯಿತಲ್ಲಾ ಎಂದು ಗೋಳಿಟ್ಟ. ಜ್ಯೋತಿಷ್ಯಗೆ ಮರ್ಯಾದೆ ನೀಡಿದ ರಾಜ:ತಕ್ಷಣ ರಾಜ ಆ ಭವಿಷ್ಯ ಪ್ರವೀಣನನ್ನು ಕರೆಸಿ ಸಂಭಾವ್ಯ ಮರ್ಯಾದೆ ಮಾಡಿದ. ಆ ಭವಿಷ್ಯ ಪ್ರವೀಣನೇ ಮಿಹಿರಾಚಾರ್ಯ. ನಿನ್ನ ಭವಿಷ್ಯ ನಿಜವಾಯಿತು. ನೀನು ಗೆದ್ದೆ. ಇನ್ನು ಮುಂದೆ ನಿನ್ನ ಹೆಸರು 'ವರಾಹಮಿಹಿರ' ಅಂತ ಪ್ರಸಿದ್ಧವಾಗಲಿ ಅಂತ ಘೋಷಿಸಿದ. ಇದು ವರಾಹಮಿಹಿರರ ಭವಿಷ್ಯ ದೃಷ್ಟಿಯ ಸಾಮರ್ಥ್ಯ. ಈ ಸಾಮರ್ಥ್ಯ ಅವರಲ್ಲಿ ಬರಲಿಕ್ಕೆ ಕಾರಣವೇ ಸೂರ್ಯ. ಮಿಹಿರರ ತಂದೆ ಆದಿತ್ಯ ದಾಸ ಅಂತ. ಅಂದರೆ ಸೂರ್ಯನ ದಾಸ ಅಂತ. ಆ ತಂದೆಯ ತಪ:ಶಕ್ತಿ ಮಗನಲ್ಲಿ ಪ್ರಕಾಶವಾಗಿತ್ತು. ಹಾಗಾಗಿ ಮಿಹಿರಾಚಾರ್ಯ ಅನ್ನುವ ಹೆಸರಿಟ್ಟಿದ್ದ. ಈತನೂ ಮಹಾ ಸೂರ್ಯೋಪಾಸಕನಾಗಿದ್ದ. ಇಂಥ ಮಹನೀಯರೇ ಮುಂದೆ ಪಂಚಸಿದ್ಧಾಂತ ಕೋವಿದ, ಬೃಹಜ್ಜಾತಕ, ಬೃಹತ್ಸಂಹಿತಾ ಮೊದಲಾದ ಮಹಾ ಗ್ರಂಥಗಳನ್ನ ರಚಿಸಿ ಮಾನವ ಕುಲಕ್ಕೆ ಉಪಕಾರ ಮಾಡಿಕೊಟ್ಟಿದ್ದಾರೆ. ಇಂಥ ಸಮರ್ಥತೆ ಬರಬೇಕೆಂದರೆ ಅವರು ಸೂರ್ಯನ ಉಪಾಸಕರಾಗಿರಲೇ ಬೇಕು. ಸೂರ್ಯ ಆತ್ಮಕಾರಕ ಹೇಗೆ..? ಸೂರ್ಯಗ್ರಹದ ಅನುಗ್ರಹವಿದ್ದರಷ್ಟೇ ನಮ್ಮ ಆತ್ಮೋನ್ನತಿ ಸಾಧ್ಯ. ನಮ್ಮೊಳಗಿನ ಶಕ್ತಿ ಬೆಳಗ ಬೇಕಿದ್ದರೆ ಸೂರ್ಯ ಬೇಕು. ಸೂರ್ಯನನ್ನು ಆತ್ಮ ಕಾರಕ ಅಂತಲೂ ಕರೀತಾರೆ. ಸೂರ್ಯನನ್ನ ಸುಮ್ಮನೆ ಆತ್ಮಕಾರಕ ಅಂತ ಹೇಳಿಲ್ಲ. ಇದು ಅರ್ಥವಾಗಬೇಕಿದ್ದರೆ ನಾವು ಸ್ವಲ್ಪ ಅಂತರಾಳಕ್ಕೆ ಇಳಿಯಬೇಕು. ಮೇಲ್ಮೈ ತಡಕಿದರೆ ಸಿಗದ ಮಾಹಿತಿ ಅದು. ಅದು ಅರ್ಥವಾಗಬೇಕಿದ್ದರೆ ನಾವು ವೇದಾಂತ ಅಂತ ಕರೆಯುವ ಉಪನಿಷತ್ತುಗಳಿಗೆ ಹೋಗಬೇಕು. ಅಲ್ಲಿ ಸೂರ್ಯನನ್ನು ಯಾಕೆ ಆತ್ಮ ಶಕ್ತಿ ಅಂತಾರೆ ಅನ್ನೋದು ಸ್ಪಷ್ಟವಾಗತ್ತೆ. ವಿಜ್ಞಾನಕ್ಕೂ - ಉಪನಿಷತ್ತಿಗೂ ನಂಟೇನು..? ಈ ಪ್ರಪಂಚ ಹೇಗಾಯಿತು ಅಂತ ಪ್ರಶ್ನೆ ಹಾಕಿಕೊಂಡರೆ. ವಿಜ್ಞಾನ ಉತ್ತರಿಸುವುದು ಬಿಗ್ ಬ್ಯಾಂಗ್ ಥಿಯರಿಯನ್ನು. ಈಗಿನವರು ಬಿಗ್ ಬ್ಯಾಂಗ್ ಥಿಯರಿ ಅಂತಾರೆ. ಹಿಂದಿನವರು ಅದನ್ನೇ ಆಸ್ಫೋಟ ಅಂತಾರೆ. ಇದರ ಮಾಹಿತಿ ಸಿಗೋದು ಛಾಂದೋಗ್ಯೋಪನಿಷತ್‌ನಲ್ಲಿ. ಅಲ್ಲಿ ಆರುಣಿ ಉದ್ಧಾಲಕ ಎಂಬ ಋಷಿ ತನ್ನ ಮಗ ಶ್ವೇತಕೇತುವಿಗೆ ಹೇಳುವ ಉಪದೇಶದಲ್ಲಿ ಈ ಆತ್ಮ ಎನ್ನುವುದರ ಸ್ಪಷ್ಟ ವಿವರ ಇದೆ. ಅದರ ಪ್ರಕಾರ : ಪೂರ್ವದಲ್ಲಿ ಸತ್ ಅನ್ನುವ ವಸ್ತು ಇತ್ತು. ಅದನ್ನೇ ಆತ್ಮ ಶಕ್ತಿ ಅಂತಾರೆ. ಸೂರ್ಯ ಸೃಷ್ಟಿಯಾಗಿದ್ದು ಹೇಗೆ? ಅದು ಆಸ್ಫೋಟವಾಗಿ ಅದರಿಂದ ಬೃಹತ್ ಬೆಳಕಿನ ಉಂಡೆ ( ಬೆಂಕಿ ಉಂಡೆ ) ಹೊರಬಂತು. ಅದೇ ಸೂರ್ಯ. ಅದನ್ನ ತೇಜಸ್ ಅಂತ ಕರೆದ್ರು. ( ನಮ್ಮ ಮಿಲ್ಕಿ ವೇ ನಲ್ಲಿ ಸಾಕಷ್ಟು ಇಂಥ ಬೆಳಕಿನ ಉಂಡೆಗಳಿವೆ. ಅದನ್ನು ಹೊರತು ಪಡಿಸಿಯೂ ಅನೇಕಾನಿಕ ಉಂಡೆಗಳಿವೆ. ಅವುಗಳಲ್ಲಿ ನಮ್ಮ ಸೂರ್ಯ ಕೂಡ ಒಂದು ) ಆ ಸೂರ್ಯನಿಂದ ಬಂದದ್ದು ನೀರು ( ವಿಜ್ಞಾನದಲ್ಲಿ ನಾವು ಓದಿದ್ದೇವೆ. ಈ ಭೂಮಿ ಮುಂಚೆ ದ್ರವರೂಪದಲ್ಲಿತ್ತು ಇದೇ ಘನೀಕೃತವಾಯ್ತು ಅಂತ ). ಆ ನೀರಿನಿಂದ ಅನ್ನ ಉತ್ಪತ್ತಿಯಾಯ್ತು. ಮತ್ತೊಮ್ಮೆ ಗಮನಿಸೋಣ, ಸತ್ ನಿಂದ ಸೂರ್ಯ, ಸೂರ್ಯನಿಂದ ನೀರು, ನೀರಿನಿಂದ ಅನ್ನ ಬಂತು. ಈ ಅನ್ನ ನಮ್ಮ ದೇಹ ಸೇರಿದ ಮೇಲೆ ಮೂರು ವಿಭಾಗವಾಗತ್ತೆ. ಹೇಗೆ ಅಂದ್ರೆ ಅನ್ನದ ಸ್ಥೂಲ ರೂಪ ವಿಸರ್ಜನೆಯಾಗತ್ತೆ. ಅದರ ಮಧ್ಯ ರೂಪ ಮಾಂಸವಾಗತ್ತೆ ಅದರ ಸೂಕ್ಷ್ಮ ರೂಪ ಮನಸ್ಸಾಗತ್ತೆ. ( ಮತ್ತೊಮ್ಮೆ ಓದಿಕೊಳ್ಳಿ ಅನ್ನ ಸೂಕ್ಷ್ಮದಲ್ಲಿ ಮನಸ್ಸಾಗತ್ತೆ. ) ಅನ್ನದ ಮೇಲಿನ ಅಂಶ ನೀರು. ನೀರಿನ ಸ್ಥೂಲ ರೂಪ ಮೂತ್ರವಾಗತ್ತೆ. ಮಧ್ಯಮ ರೂಪ ರಕ್ತವಾಗತ್ತೆ. ಸೂಕ್ಷ್ಮ ರೂಪ ಪ್ರಾಣವಾಗತ್ತೆ. (ಅಂದ್ರೆ ನೀರು ಪ್ರಾಣ ವಸ್ತು ಮತ್ತೊಮ್ಮೆ ಓದಿಕೊಳ್ಳಿ ). ಇನ್ನು ನೀರಿಗೂ ಮೇಲಿನ ಅಂಶ ತೇಜಸ್ ಅದೇ ಸೂರ್ಯ. ಆ ತೇಜಸ್ಸಿನ ಸ್ಥೂಲ ರೂಪ ಮೂಳೆಯಾಗುತ್ತೆ. ಮಧ್ಯಮ ರೂಪ ಕೊಬ್ಬು ಅನ್ನಿಸಿಕೊಳ್ಳತ್ತೆ. ಸೂಕ್ಷ್ಮ ರೂಪ ವಾಕ್ ಆಗತ್ತೆ. ಅಂದ್ರೆ ಈಗ ಗಮನಿಸಿ ಸತ್ ಎಂಬ ಆತ್ಮವೇ ತೇಜಸ್ಸಾಯ್ತು ( ಸೂರ್ಯ ಶಕ್ತಿ ). ಆ ತೇಜೋ ಶಕ್ತಿಯಿಂದಲೇ ನಾವು ಕುಡಿಯುವ ನೀರು ( ಅಂದ್ರೆ ಪ್ರಾಣ ಶಕ್ತಿ ) ಆ ತೇಜೋ ಶಕ್ತಿಯಿಂದಲೇ ಅನ್ನವೂ ಬಂತು ಅದೇ ಮನಸ್ಸಾಯ್ತು. ಅದೇ ತೇಜೋ ಶಕ್ತಿಯಿಂದ ವಾಕ್ ಶಕ್ತಿ ಬಂತು. ಇದೆಲ್ಲವೂ ಸೇರಿ ಮನುಷ್ಯನ ಅಂತ: ತೇಜಸ್ಸು ಸೃಷ್ಟಿಯಾಯ್ತು. ಇದನ್ನೇ ಆತ್ಮ ಶಕ್ತಿ ಅಂತ ಕರೆಯುವುದು. ಈಗ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳೋಣ ನಾವು ಯಾರು..? ಉತ್ತರ ಹುಡುಕಿ ಹೊರಟರೆ ಅದರ ಮೂಲ ಸಿಗುತ್ತದೆ. ಗಮನಿಸಿ ಪ್ರಾಥಮಿಕವಾಗಿ ನಾವು ಅನ್ನ, ಅನ್ನದ ಮೂಲ ನೀರು, ನೀರಿನ ಮೂಲ ತೇಜಸ್ಸು, ತೇಜಸ್ಸಿನ ಮೂಲ ಆತ್ಮಶಕ್ತಿ. ಇದು ಬಂದದ್ದು ಎಲ್ಲಿಂದ ಆತ್ಮದಿಂದ. ಆತ್ಮದಿಂದ ತೇಜಸ್ಸು ಬಂತು, ತೇಜಸ್ಸಿನಿಂದ ಉಳಿದೆಲ್ಲವೂ ಬಂದವು. ಸೂರ್ಯ ಮನುಷ್ಯನ ಜೀವಾಳ ಸೂರ್ಯನೇ ಮನುಷ್ಯನ ಒಳ-ಹೊರಗಿನ ಜೀವಾಳ. ಇದಕ್ಕಾಗಿಯೇ ಸೂರ್ಯನನ್ನ ಆತ್ಮ ಕಾರಕ ಅಂದ್ರು. ವೇದಗಳಲ್ಲಿ ಸೂರ್ಯನ ಕುರಿತಾಗಿ ಅರುಣ ಪ್ರಶ್ನ, ಸೌರ ಸೂಕ್ತ ಇತ್ಯಾದಿ ಇತ್ಯಾದಿ ಮಹಾ ಮಂತ್ರ ಸಮುಚ್ಛಯವೇ ಇದೆ. ಅಲ್ಲಿ ಇನ್ನೂ ವಿಸ್ತಾರವಾಗಿ ಸೂರ್ಯ ವಿವರ ಬರುತ್ತದೆ. ಋಗ್ವೇದವಂತೂ ಸೂರ್ಯ ಆತ್ಮಾ ಜಗತತ್ಸತ್ಥುಷಶ್ಚ ಅನ್ನುತ್ತೆ. ಹಾಗಂದರೆ ಈ ಗತಿಶೀಲವಾದ ಜಗತ್ತಿನ ಸ್ಥಾವರ ಜಂಗಮಗಳಿಗೆ ಅವನೇ ಆತ್ಮ ಅಂತ. ಇಂಥ ಪರಮ ಗ್ರಹ ಸೂರ್ಯ. ಇಂಥ ಸೂರ್ಯನಿಗೆ ಜ್ಯೋತಿಷ್ಯದಲ್ಲಿ ಕೆಲ ಗುಣ ಲಕ್ಷಣ ಹೇಳಿದೆ. ಯಾರ ಜಾತಕದಲ್ಲಿ ಸೂರ್ಯ ಚೆನ್ನಾಗಿರ್ತಾನೋ ಅಂತವರಿಗೆ ಆ ಗುಣಗಳನ್ನು ಧಾರಾಳವಾಗಿ ಕೊಡ್ತಾನೆ. ಯಾರಿಗೆ ಅನುಕೂಲಕರವಾಗಿಲ್ಲವೋ ಅವರಿಗೆ ಆ ಗುಣಗಳ ಲೋಪ ಮಾಡ್ತಾನೆ ಅಂತ ಹೇಳತ್ತೆ.

ಜಾತಕ ನೋಡಲು ಕಲಿಯಿರಿ

ಜಾತಕ ನೋಡಲು ಕಲಿಯಿರಿ ಶಾಸ್ತ್ರ ರೀತಿಯಲ್ಲಿ ಜಾತಕ ಅಧ್ಯಯನ ಮಾಡಿದರೆ ಅದು ತೋರಿಸುವ ಭವಿಷ್ಯದ ದಾರಿ ಅರ್ಥವಾಗುತ್ತದೆಯೇ ವಿನಾ ಇಲ್ಲದೇ ಹೋದರೆ ಅದು ಶಾಸ್ತ್ರವಾಗುವುದಿಲ್ಲ. ಅದರ ಹೂರಣವೂ ಸಿಗುವುದಿಲ್ಲ. ಜ್ಯೋತಿಷ್ಯವೆಂಬುವುದು ಕುತೂಹಲ ಶಾಸ್ತ್ರ. ಇಲ್ಲಿ ಎಲ್ಲವೂ ಇದೆ. ಅರ್ಥ ಮಾಡಿಕೊಳ್ಳುವ ಶ್ರದ್ಧೆ, ನಂಬಿಕೆ ಎರಡೂ ಬೇಕು. ಒಂದು ಜಾತಕ ನೋಡಿದಾಗ ಅದರಲ್ಲಿ 12 ಮನೆ ಹಾಗೂ 9 ಗ್ರಹಗಳ ಸ್ಥಿತಿ ಕಾಣ್ಸತ್ತೆ. ಆದರೆ ಅದರ ಅರ್ಥ ಏನು..? ಆ ರಾಶಿಗೂ ನಮ್ಮ ಭವಿಷ್ಯಕ್ಕೂ ಹೇಗೆ ನಂಟು ಎಂಬುವುದು ಯಾವುದೂ ಅರ್ಥ ಆಗೋದಿಲ್ಲ. ಆದರೆ ಆ ಜಾತಕದಲ್ಲಿ ನಮ್ಮ ಇಡೀ ಜೀವನ ಭವಿಷ್ಯವೇ ಅಡಗಿರತ್ತೆ. ಆ ಭವಿಷ್ಯವನ್ನು ತಿಳಿಯುವ ಬಗೆ ಹೇಗೆ..? ಒಂದು ಜಾತಕ ಕೂಲಂಕಶವಾಗಿ ನೋಡುವಾಗ ಕ್ಷೇತ್ರ ಬಲ, ಹೋರಾ ಬಲ, ದ್ರೇಕ್ಕಾಣ ಬಲ, ನವಾಂಶ, ತ್ರಿಂಶಾಂಶ, ದ್ವಾದಶಾಂಶ ಬಲ ಇಷ್ಟನ್ನು ಗಮನಿಸಲೇಬೇಕು. ಇದನ್ನೂ ಮೀರಿ ಪರಿಶೀಲಿಸುವುದು ಇನ್ನೂ ಹಲವು ಇರುತ್ತೆ. ಮುಖ್ಯವಾಗಿ ಇಷ್ಟನ್ನು ನಾವು ಗಮನಿಸದೇ ಹೋದರೆ ಆ ಜಾತಕದ ಭವಿಷ್ಯ ತಿಳಿಯುವುದಾದರೂ ಹೇಗೆ..? ಜಾತಕದ ಭವಿಷ್ಯ ಬಿಡಿಸೋದು ಹೇಗೆ? ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜಾತಕ ನೋಡಿಕೊಳ್ಳುವುದು ಹೇಗೆ..? ಹೇಗೆ ಆತ ತನ್ನ ಜಾತಕದೊಳಗೆ ಕಾಣುವ ಭವಿಷ್ಯವನ್ನ ಬಿಡಿಸಿ ನೋಡಿಕೊಳ್ಳಬೇಕು..? ಈ ರಹಸ್ಯ ಗೊತ್ತಾಗಿಬಿಟ್ಟರೆ ನಿಮ್ಮ ಭವಿಷ್ಯವನ್ನ ನೀವೇ ನೋಡಿಕೊಳ್ಳಬಹುದು. ಒಂದು ಜಾತಕ ಅಂದ್ರೆ ಹನ್ನೆರಡು ಮನೆಗಳಿದ್ದು, ಕಾಲಾನ್ವಯ ಆ ಮನೆಗಳಲ್ಲಿ ಒಂಭತ್ತು ಗ್ರಹಗಳಿರುತ್ತವೆ. 1. ಮೇಷ ರಾಶಿ 2. ವೃಷಭ ರಾಶಿ 3. ಮಿಥುನ ರಾಶಿ 4. ಕರ್ಕಟಕ ರಾಶಿ 5.ಸಿಂಹ ರಾಶಿ 6. ಕನ್ಯಾ ರಾಶಿ 7. ತುಲಾ ರಾಶಿ 8. ವೃಶ್ಚಿಕ ರಾಶಿ 9. ಧನಸ್ಸು ರಾಶಿ 10. ಮಕರ ರಾಶಿ 11. ಕುಂಭ ರಾಶಿ 12. ಮೀನ ರಾಶಿ ಹೀಗೆ ಒಂದು ಜಾತಕದಲ್ಲಿ 12 ರಾಶಿಗಳಿರ್ತವೆ. ಒಂದೊಂದು ರಾಶಿಗೂ ಒಬ್ಬೊಬ್ಬ ಅಧಿಪತಿ ಇರುತ್ತಾನೆ. ಆ ಅಧಿಪತಿಗಳನ್ನೇ ಗ್ರಹಗಳು ಅಂತ ಕರಿಯೋದು. ಗ್ರಹಗಳು: ಸಂಸ್ಕೃತದಲ್ಲಿ ಗ್ರಹವನ್ನು ಗೃಹ್ಣಾತೀತಿ ಗ್ರಹ. ಗ್ರಹಗ್ರಹಣೇ ಅದು ಅರ್ಥೈಸಲಾಗುತ್ತದೆ. ಅಂದರೆ ಯಾವುದು ಹಿಡಿದುಕೊಳ್ಳುತ್ತದೆಯೋ, ಯಾವುದು ಆವರಿಸಿಕೊಳ್ಳುತ್ತದೆಯೋ ಅದು ಗ್ರಹ. ಇದು ಶಾಸ್ತ್ರೀಯವಾಗಿ ಸಮ್ಮತವಾದ ವಿವೇಚನೆ. ಗ್ರಹಗಳು ಮನುಷ್ಯನನ್ನು ತಮ್ಮ ಪ್ರಭಾವದಿಂದ ಹಿಡಿದುಹಾಕುತ್ತವೆ, ಆವರಿಸಿಬಿಡುತ್ತವೆ. ಗ್ರಹಗಳ ಪ್ರಭಾವದಲ್ಲಿ ಸಿಲುಕಿರುವ ವ್ಯಕ್ತಿಯು ತನ್ನ ಸ್ವಸ್ವಾತಂತ್ರ್ಯ, ಬುದ್ಧಿ, ವಿಚಾರಶಕ್ತಿಯನ್ನು ಗ್ರಹಗಳ ಗುಣಗಳಿಗೆ ಅನ್ವಯವಾಗಿ ಅನುಭವಿಸುತ್ತಾನೆ. ಅವು ಆಡಿಸಿದಂತೆ, ನಡೆಸಿದಂತೆ ವರ್ತಿಸುತ್ತಾನೆ. ಆಂಗ್ಲ ಭಾಷೆಯಲ್ಲಿ ಗ್ರಹಕ್ಕೆ ಪ್ಲಾನೆಟ್ ಎಂದು ಕರೆಯುತ್ತಾರೆ. ಗ್ರಹಗಳನ್ನು ಕೇವಲ ಆಕಾಶೀಯ ಕಾಯಗಳು ಎಂದು ಪಾಶ್ಚಾತ್ಯ ರೀತ್ಯಾ ಅರ್ಥೈಸಿದರೆ ಅವುಗಳ ಪ್ರಭಾವದ ವಿವರಣೆಯು ಸಮಂಜಸವಾಗುವುದಿಲ್ಲ. ಗ್ರಹಗಳು ಮನುಷ್ಯನ ಕರ್ಮಗಳಿಗನುವಾಗಿ ತಮ್ಮ ಪ್ರಭಾವವನ್ನು ಬೀರುತ್ತಾ ನಮ್ಮ ಆಯುರ್ಮಾನವಿಡೀ ಪ್ರೇರಕಶಕ್ತಿಗಳಾಗಿರುತ್ತವೆ. ಹಾಗಾದರೆ ಆ ಗ್ರಹಗಳು ಯಾವುವು..? ಪ್ರಕಾಶ ಗ್ರಹಗಳು 1. ಸೂರ್ಯ - 2. ಚಂದ್ರ ತಾರಾ ಗ್ರಹಗಳು 3. ಕುಜ (ಮಂಗಳ ) 4. ಬುಧ 5. ಗುರು 6. ಶುಕ್ರ 7. ಶನಿ. ಛಾಯಾ ಗ್ರಹಗಳು 8. ರಾಹು 9. ಕೇತು ಈ ಒಂಭತ್ತು ಗ್ರಹಗಳಲ್ಲಿ ರಾಹು ಕೇತುಗಳನ್ನು ಬಿಟ್ಟು ಉಳಿದ 7 ಗ್ರಹಗಳಿಗೆ ರಾಶಿ ಅಧಿಪತ್ಯವನ್ನು ಕೊಟ್ಟಿದ್ದಾರೆ. ಈ ರಾಹು ಕೇತುಗಳು ಛಾಯಾಗ್ರಹಗಳು. ಆದರೆ ಅವುಗಳಿಗೆ ಮನೆ ಇಲ್ಲದಿದ್ದರೂ ಅವು ಫಲ ಕೊಡುವಲ್ಲಿ ಪ್ರಭಾವ ಗ್ರಹಗಳಾಗಿವೆ. ಯಾವ ರಾಶಿಗೆ ಯಾರು ಅಧಿಪತಿ? 12 ರಾಶಿಗಳಿಗೆ ಅಧಿಪತಿಗಳಿದ್ದಾರೆ. ಆಯಾ ರಾಶಿಗೆ ಈ ಗ್ರಹಗಳೇ ಸ್ಥಾನಾಧಿಪತಿಗಳಾಗಿರುತ್ತಾರೆ. ಮೇಷ - ಕುಜ / ಮಂಗಳ ವೃಷಭ - ಶುಕ್ರ ಮಿಥುನ - ಬುಧ ಕಟಕ - ಚಂದ್ರ ಸಿಂಹ - ರವಿ ಕನ್ಯಾ - ಬುಧ ತುಲಾ - ಶುಕ್ರ ವೃಶ್ಚಿಕ - ಕುಜ / ಮಂಗಳ ಧನಸ್ಸು - ಗುರು ಮಕರ - ಶನಿ ಕುಂಭ- ಶನಿ ಮೀನ - ಗುರು

Saturday, 1 December 2018

ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್‌

ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್‌ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷ$ರ ಮಹಾಮಂತ್ರ ಹಾಗೂ ಅಷ್ಟಾಕ್ಷ$ರ ಮೂಲಮಂತ್ರಗಳನ್ನು ಒಳಗೊಂಡಿದೆ. ಗಣಪತಿ ಅಥರ್ವಶೀರ್ಷ ಅಥವಾ ಗಣೇಶೋಪನಿಷತ್‌ ಎಂದು ಕರೆಯಲ್ಪಡುವ ಗಣಪತಿಸ್ತುತಿಯ ಮಂತ್ರ ಪ್ರಸಿದ್ಧವಾದುದು. ಇದನ್ನು ಕೇಳುತ್ತಿದ್ದರೆ, ಕರ್ಣಾನಂದದ ಜೊತೆಗೆ ಮನಸ್ಸಿಗೂ ಆನಂದವಾಗುತ್ತದೆ. ನಿರ್ವಿಘ್ನದಾಯಕನಾದ ಗಣಪತಿ ಆದಿಪೂಜಿತನಾಗಿರುವುದರ ಜೊತೆಗೆ, ಹೆಚ್ಚಿನ ಜನರು ಇಷ್ಟಪಡುವ ದೇವನಾಗಿದ್ದಾನೆ. ಹಾಗಾಗಿಯೇ ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್‌ | ಅನೇಕ ದಂತಂ ಭಕ್ತಾನಾಮ್‌ ಏಕದಂತಮುಪಾಸ್ಮಹೇ ||, ಎಂಬ ಶ್ಲೋಕ ಹುಟ್ಟಿಕೊಂಡಿದ್ದು. ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಗಣೇಶೋಪನಿಷತ್‌ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷ$ರ ಮಹಾಮಂತ್ರ ಹಾಗೂ ಅಷ್ಟಾಕ್ಷ$ರ ಮೂಲಮಂತ್ರಗಳನ್ನು ಒಳಗೊಂಡಿದೆ. ಕೊನೆಯಲ್ಲಿ ಗಣಪತಿ ಧ್ಯಾನ ಅಥವಾ ಶ್ಲೋಕ ಮತ್ತು ಮಾಲಾಮಂತ್ರದ ಮೂಲಕ ಇದು ಪೂರ್ಣಗೊಳ್ಳುತ್ತದೆ. ಸ್ವರಪೂರ್ವಕವಾಗಿ ಇದನ್ನು ಉಚ್ಚರಿಸಿದರೆ ಕೇಳುಗರೂ ತನ್ಮಯತೆಯನ್ನು ಹೊಂದಿ ಗಣಪತಿಯ ಕೃಪೆಗೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ. ಉಪನಿಷತ್ತಿನ ಮುಂದುವರಿದ ಭಾಗವಾಗಿ ಇದರ ಫ‌ಲಗಳನ್ನೂ ಹೇಳಲಾಗಿದೆ. ಈ ಅಥರ್ವಶೀರ್ಷವನ್ನು ಯಾರು ಅಧ್ಯಯನ ಮಾಡುತ್ತಾರೋ ಅವರು ಬ್ರಹ್ಮಸಾûಾತ್ಕಾರಕ್ಕೆ ಅರ್ಹರಾಗುತ್ತಾರೆ ಎನ್ನಲಾಗಿದೆ. ಅವರು ವಿಘ್ನಗಳಿಗೊಳಗಾದರೆ, ವಿಘ್ನಗಳೇ ಅವರಿಂದ ದೂರವಾಗಿಬಿಡುತ್ತವೆ. ಅವರು ಎÇÉಾ ಕಡೆಯಿಂಲೂ ಸುಖವನ್ನೇ ಹೊಂದುವವರಾಗುತ್ತಾರೆ. ಪಂಚ ಮಹಾಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಸಂಜೆ ಇದನ್ನು ಪಠಿಸಿದರೆ ಹಗಲಿನಲ್ಲಿ ಮಾಡಿದ ಪಾಪಗಳನೂ,° ಬೆಳಗ್ಗೆ ಪಠಿಸಿದರೆ ರಾತ್ರಿಯಲ್ಲಿ ಮಾಡಿದ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ. ಸಂಜೆ ಮತ್ತು ಬೆಳಗ್ಗೆ ಎರಡೂ ಸಮಯದಲ್ಲಿ ಪಠಿಸಿದರೆ ಪಾಪರಹಿತರಾಗುತ್ತಾರೆ. ಸದಾ ಇದನ್ನು ಪಠಿಸುವವರು ವಿಘ್ನರಹಿತರಾಗುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ$ ಎಂಬ ಪುರುಷಾರ್ಥಗಳನ್ನು ಹೊಂದುತ್ತಾರೆ. ಅಥರ್ವೋಪನಿಷತ್‌ ವಿN°àಶನನ್ನು ಪಠಿಸಲು ಇರುವ ಮಹಾನ್‌ ಮಂತ್ರವಾದುದರಿಂದ ಸಾವಿರಕ್ಕೂ ಹೆಚ್ಚು ಬಾರಿ ಪಠಿಸಿದರೆ ನಮ್ಮೆಲ್ಲ ಇಷ್ಟಾರ್ಥಗಳು ನೆರವೇರುತ್ತದೆ. ಈ ಮಂತ್ರ ಪಠಣದಿಂದ, ವಿದ್ಯಾವಂತ, ಗುಣವಂತ ಮತ್ತು ಉತ್ತಮ ವಾಗ್ಮಿಯಾಗಲು ಸಾಧ್ಯ. ವ್ಯಕ್ತಿಯೊಬ್ಬ ಅಥರ್ವಶೀರ್ಷ ಮುಖೇನ ಯಜ್ಞವನ್ನು ಮಾಡುವುದರಿಂದ, ಐಶ್ವರ್ಯವಂತನೂ, ಕೀರ್ತಿವಂತನೂ, ಮೇಧಾವಿಯೂ ಆಗುತ್ತಾನಲ್ಲದೆ ಸಕಲ ಸುಫ‌ಲಗಳನ್ನು ಹೊಂದುತ್ತಾನೆ. ಹೀಗೆ ಸಕಲ ಸಿದ್ಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಿದ್ಧಿಯನ್ನು ಪಡೆಯಲು ಸಾಧನೆ ಬೇಕೇಬೇಕು. ದೇವರ ನಂಬಿಕೆಯೂ ಅಂತಹ ಸಾಧನೆಯನ್ನೇ ಹೇಳುತ್ತದೆ. ಮಂತ್ರಗಳಲ್ಲಿನ ತಲ್ಲೀನತೆಯೂ ಒಂದು ಸಾಧನೆಯೇ. ಯಾಕೆಂದರೆ ಮರ್ಕಟನಂತಾಡುವ ಮನಸ್ಸನ್ನು ನಿಯಂತ್ರಿಸಿದರಷ್ಟೇ ಪಠಣ, ತಲ್ಲೀನತೆ ಎಲ್ಲವೂ ಸಾಧ್ಯ. ನಾವು ಗೊತ್ತಿ¨ªೋ, ಗೊತ್ತಿಲ್ಲದೆಯೋ ಬದುಕಿನ ಅನಿವಾರ್ಯತೆಗಾಗಿಯೋ ಒಂದಲ್ಲ ಒಂದು ಪಾಪಕಾರ್ಯದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಳ್ಳುತ್ತೇವೆ. ಅಂತಹ ಪಾಪಗಳನ್ನು ಕಳೆಯುವವನು ಗಣನಾಯಕ. ಆತನನ್ನು ಪಠಿಸುವ ಮೂಲಕ ನಮ್ಮ ಮನಸ್ಸನ್ನು ಶುದ್ಧವಾಗಿಸಿಕೊಳ್ಳಲು ಈ ಉಪನಿಷತ್ತು ಸಹಕಾರಿಯಾಗಿದೆ. ಪರಮಾತ್ಮನ ಸ್ವರೂಪವನ್ನು ಹಲವು ಬಗೆಗಳಲ್ಲಿ ನಾವು ಕಾಣುವವರು. ಮತ್ತು ಮಂತ್ರ ತಂತ್ರ ಮುಖೇನ ಪೂಜಿಸುವವರು. ಮನುಷ್ಯನ ಪ್ರಾರ್ಥನೆಯೆಂದರೆ ಮುಖ್ಯವಾಗಿ ಇಷ್ಟಾರ್ಥ ಸಿದ್ಧಿ. ಇಂತಹ ಉಪನಿಷತ್ತುಗಳನ್ನು ದೇವರು ತೋರಿದದಾರಿ ಎಂದು ಪರಿಗಣಿಸಿ ಪಠಿಸಿದರೆ, ಆಲಿಸಿದರೆ ನಾವು ವಿಘ್ನರಹಿತವಾದ ಜೀವನ ನಡೆಸಬಹುದು. ಓಂ ನಮೋ ವ್ರಾತಪತಯೇ ನಮೋ ಗಣಪತೆಯೇ ನಮಃ ಪ್ರಮಥಪತೆಯೇ ನಮಸ್ತೇಸ್ತು ಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀ ವರವರದಮೂರ್ತಯೇ ನಮಃ|| ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆತ್ಮವು ದೇವರನ್ನು ಸೇರಲು ಏನು ಮಾಡಬೇಕು? ಆತ್ಮವು ದೇಹದ ಒಳಗೆ ಇದ್ದಷ್ಟು ಹೊತ್ತು ಮಾತ್ರ ನಮ್ಮ ದೇಹಕ್ಕೆ ಬೆಲೆ. ಆತ್ಮವು ದೇಹವನ್ನು ತ್ಯಜಿಸಿದ ತಕ್ಷಣ ಅದು ಜೀವ ಎಂದು ಕರೆಸಿಕೊಳ್ಳದೆ ಶವ, ಕಳೇಬರ ಮೊದಲಾದ ಶಬ್ದಗಳಿಂದ ಕರೆಸಿಕೊಳ್ಳುತ್ತದೆ. ಆ ಕ್ಷಣದಿಂದ, ಅದೊಂದು ಬೇಗನೆ ಕೆಡುವ ವಸ್ತುವಾಗಿಬಿಡುತ್ತದೆ. ಆತ್ಮವೆಂಬುದೇ ನಮ್ಮ ಅಸ್ತಿತ್ವ. ಹಾಗಾಗಿ, ಜೀವನದ ಅಂತ್ಯದಲ್ಲಿ ಆತ್ಮವು ದೇವರನ್ನು ಸೇರಲಿ ಎಂದು ಪ್ರತಿಯೊಬ್ಬನೂ ಪ್ರಾರ್ಥಿಸುತ್ತಾನೆ. ಯೋಚಿಸುತ್ತಾನೆ. ಮತ್ತೂಂದು ಜನ್ಮ ಈ ಭುವಿಯಲ್ಲಿ ಬೇಡ ಎಂಬ ನಿರ್ಧಾರ ತಳೆಯುವವರೇ ಹೆಚ್ಚು. ಮಾನವ ಜನ್ಮ ದೊಡ್ಡದು ಎಂಬ ಮಾತಿದೆ. ಆದರೂ, ಮಾನವನು ಕೊನೆಯಲ್ಲಿ ಬಯಸುವುದು ಈ ದೇಹದಿಂದ ಬಿಡುಗಡೆ ಪಡೆಯುವುದು ಮತ್ತು ತನ್ನ ಆತ್ಮ ದೇವರನ್ನು ಸೇರುವುದು. ನಮ್ಮ ಆತ್ಮ ದೇವರನ್ನು ಸೇರಲು ಏನು ಮಾಡಬೇಕು? ಎಂಬ ಪ್ರಶ್ನೆ ಕೊನೆಯ ಘಳಿಗೆಯಲ್ಲಿ ಎಲ್ಲರಿಗೂ ಬರುವಂಥದ್ದು. ಪ್ರತಿಯೊಬ್ಬ ಹಿರಿಯರೂ ಅಂದರೆ ಸಾವಿನಂಚಿನಲ್ಲಿರುವವರು ದೇವರಪಾದವನ್ನು ಸೇರಿದರೆ ಸಾಕಪ್ಪ! ಎಂದು ಉದ್ಗರಿಸುವುದೇ ಇದಕ್ಕೆ ಉದಾಹರಣೆ. ಬದುಕಿನ ಕೊನೆಯಲ್ಲಿರುವ ಹಿರಿಯರು ಯಾವಾಗಲೂ ಶಿವಶಿವ ಅಂತಲೋ, ರಾಮರಾಮ ಅಂತಲೋ, ಕೃಷ್ಣಕೃಷ್ಣ ಅಂತಲೋ ಪ್ರಾಣ ಬಿಟ್ಟರೆ ಸಾಕು ಎಂದುಕೊಳ್ಳುವುದನ್ನು ಕೇಳಿರುತ್ತೇವೆ. ಜಗತ್ತಿನ ಪರಮಸತ್ಯ ಸಾವು. ಅಂತಹ ಸಾವು ಬರುತ್ತದೆಂಬುದು ಎಲ್ಲರಿಗೂ ಗೊತ್ತು. ಆದರೆ ಹೇಗೆ? ಯಾವಾಗ? ಎಲ್ಲಿ? ಎಂಬುದು ಯಾರಿಗೂ ಗೊತ್ತಿಲ್ಲ! ಆದರೂ ಸಾವು ನಮ್ಮನ್ನು ದೇವರ ಬಳಿ ಸೇರಿಸಲಿ ಎಂದುಕೊಳ್ಳುತ್ತೇವೆ. ಸಾವಿನ ಘಳಿಗೆಯಲ್ಲಿ ದೇವರನ್ನು ಸ್ಮರಿಸಿದರೆ ಸ್ವರ್ಗಪ್ರಾಪ್ತಿಯೋ ಪುನರ್ಜನ್ಮದಿಂದ ಮುಕ್ತಿಯೋ ದೊರೆಯುವುದೆಂಬ ನಂಬಿಕೆ ಹಿಂದಿನಿಂದಲೂ ಬಂದಿದೆ. ಆದರೆ, ಈ ದೇವರ ಸಾನಿಧ್ಯವನ್ನು ಸೇರಲು ಮಾಡಬೇಕಾದುದಾದರೂ ಏನು? ಹಿರಿಯರು ಅಂದುಕೊಂಡಂತೆ, ಪರಿಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸುತ್ತ ಸದ್ಭಾವವನ್ನು ಹೊಂದಿದ್ದಾಗ ಮಾತ್ರವೇ ನಮ್ಮ ಆತ್ಮ ದೇವರನ್ನ ಸೇರಲು ಸಾಧ್ಯ.

ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು,

ನಿಮ್ಮ ಜಾತಕದಲ್ಲೂ ಇಂಥ ಯೋಗಾಯೋಗ ಇರಬಹುದು, ನೋಡಿಕೊಳ್ಳಿ... ಜನ್ಮ ಕುಂಡಲಿಯ ವಿಷಯದಲ್ಲಿ ಒಳ್ಳೆಯದೆಷ್ಟು ಕೆಟ್ಟದು ಎಷ್ಟು ಎಂಬ ಲೆಕ್ಕಾಚಾರ ಜಾತಕದಲ್ಲಿನ ಯೋಗಗಳು ಯೋಗಗಳ ಶಕ್ತಿ ಯೋಗಗಳನ್ನು ನಿರ್ಮಿಸಿದ ಗ್ರಹಗಳ ಒಟ್ಟೂ ಶಕ್ತಿ ಏನು, ಯಾವಾಗ, ಇಂಥದೊಂದು ಒಳ್ಳೆಯ ಶಕ್ತಿಯನ್ನು ಪಡೆಯುತ್ತವೆ ಇತ್ಯಾದಿ ಇತ್ಯಾದಿ ವಿಚಾರಗಳನ್ನು ಪರಿಶೀಲಿಸಬೇಕು. ಯೋಗಗಳು ಇದ್ದ ಮಾತ್ರಕ್ಕೆ ಎಲ್ಲವೂ ಸರಿಹೋಗುತ್ತದೆ ಎಂದಲ್ಲ. ಆ ಯೋಗದ ಪರಮಾವಧಿ ಶಕ್ತಿ ಏನು, ಎಷ್ಟು ? ಎಂಬುದನ್ನು ತೀರ್ಮಾನಿಸಬೇಕು. ಈ ಯೋಗಗಳ ಸಂದರ್ಭದಲ್ಲಿ ಶನಿಕಾಟಗಳು ಬಾಧಿಸಬಾರದು. ಗಜಕೇಸರಿ ಯೋಗ ಗುರುಗ್ರಹ ಹಾಗೂ ಚಂದ್ರ ಗ್ರಹದ ಸ್ಥಿತಿ ಪೂರ್ವಕ ಜೋಡಣೆ ಈ ಯೋಗಕ್ಕೆ ಮುಖ್ಯ. ಚಂದ್ರನಿಂದ ಗುರುಗ್ರಹ ಕೇಂದ್ರದಲ್ಲಿರಬೇಕು. ಗುರುವಿಗೂ, ಚಂದ್ರನಿಗೂ ಉತ್ತಮ ಶಕ್ತಿ, ಉತ್ತಮ ಸ್ಥಳಗಳು ಉತ್ತಮ ಅಧಿಪತ್ಯಗಳು ದೊರೆತಿದ್ದಲ್ಲಿ ಗಜಕೇಸರಿ ಯೋಗಕ್ಕೆ ಹೆಚ್ಚಿನ ತೂಕ ಬರುತ್ತದೆ. ನಮ್ಮ ಸಂದರ್ಭದಲ್ಲಿ ಯಶಸ್ಸು ಪಡೆದು ಖ್ಯಾತಿವಂತರಾದ ರಾಹುಲ್‌, ಹೇಮಾ ಮಾಲಿನಿ, ಮಹೇಂದ್ರಸಿಂಗ್‌ ಧೋನಿ, ಕಳೆದ ಶತಮಾನದಲ್ಲಿ ನವ್ಯ ಕಾವ್ಯ ಪರಂಪರೆಗೆ ತೆರೆದುಕೊಂಡು ಹೊಸ ಅಲೆ ಎಬ್ಬಿಸಿದ ನೊಬೆಲ್‌ ಪ್ರ„ಸ್‌ ಪಡೆದ ಎಲಿಯಟ್‌, ನಮ್ಮ ಮಾಜಿ ಪ್ರಧಾನಿ ವಾಜಪೇಯಿ, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಮುಂತಾದವರು ಗಜಕೇಸರಿ ಯೋಗ ಹೊಂದಿದ್ದರು. ಇವರೆಲ್ಲರ ಬದುಕಿನ ಏಳುಬೀಳುಗಳನ್ನು ರೂಪಿಸುವಲ್ಲಿ ಗಜಕೇಸರಿ ಯೋಗ ತನ್ನ ಪಾಲನ್ನು ನೀಡಿದೆ ಎಂಬುದು ಗಮನಾರ್ಹ. ಶಶಿಮಂಗಳ ಯೋಗ ಕುಜನೂ, ಚಂದ್ರನೂ ಈ ಯೋಗಕ್ಕೆ ಕಾರಣರಾಗುತ್ತಾರೆ. ಕುಜ ಚಂದ್ರರು ಪರಸ್ಪರ ದೃಷ್ಟಿಸಿದ್ದರೆ ಒಂದೇ ಮನೆಯಲ್ಲಿ ಕೂಡಿದ್ದರೆ ಈ ಯೋಗ ಉಂಟಾಗುತ್ತದೆ. ಅನಿರೀಕ್ಷಿತ ಮೂಲದಿಂದ ಧನ ಸಂಪಾದನೆಗೆ ದೊಡ್ಡ ಮಟ್ಟದಲ್ಲಿ ಸಾಧ್ಯವಾಗುವ ಯೋಗ ಇದು. ಕುಜ ಯಾವಾಗಲೂ ಪಾಪ ಗ್ರಹ. ಹೀಗಾಗಿ ಕುಜನು ದುಷ್ಟ ಪ್ರವೃತ್ತಿಯನ್ನು ವ್ಯಕ್ತಿಯೊಳಗೆ ಕೆಲವು ವಿಷಮ ಸಂದರ್ಭದಲ್ಲಿ ರೂಪಿಸುವುದರಿಂದ ಪಾಪದ ಕೆಲಸಗಳ ಮೂಲಕವೂ ಧನಾರ್ಜನೆಯಾಗುತ್ತದೆ. ಕೆಟ್ಟ ಸ್ಥಳಗಳಲ್ಲಿ ಈ ಯೋಗ ಅಥವಾ ಇನ್ನಷ್ಟು ಕೆಟ್ಟಗ್ರಹಗಳ ಸಾಮೀಪ್ಯದಿಂದಾಗಿ ಈ ಯೋಗ ಒದಗಿ ಬಂದಿದ್ದರೆ ಹಣ ಬಂದಷ್ಟೇ ವೇಗದಲ್ಲಿ ಹರಿದು ಖರ್ಚಾಗಿ ಮೋಸಹೊಂದಿ ಹೊರಟೂ ಹೋಗುತ್ತದೆ. ಬರಬೇಕಾದ ಹಣವೇ ಬಾರದಿರುವ ದಾರುಣತೆ ಕೂಡಾ ಸಂಭವಿಸಬಹುದು. ಈ ಯೋಗವನ್ನು ಹೊಂದಿದ ಜನರಯಾದಿ ನಾನಿಲ್ಲಿ ಕೊಡಹೋಗುವುದಿಲ್ಲ. ಭ್ರಷ್ಟಾಚಾರ ಪಾಪಮೂಲ, ತೋಳ್ಬಲ, ದುಷ್ಟ ಜನಬಲಗಳಿಂದ ಧನ ಸಂಪಾದಿಸಿದ ವಿಚಾರ ಇವರುಗಳ ವಿಚಾರದಲ್ಲಿ ಸ್ಪಷ್ಟವಾಗಿರುವುದರಿಂದ ಉದಾಹರಣೆಗಳನ್ನು ದಯಮಾಡಿ ನಿರೀಕ್ಷಿಸಬೇಡಿ. ಒಳ್ಳೆಯ ರೀತಿಯಲ್ಲಿ ಸಂಪಾದನೆಯಾಗಲಾರದು ಎಂದೇನಲ್ಲ. ಕಟಕ ಲಗ್ನ ಜಾತಕದವನಿಗೆ ವೃಷಭದಲ್ಲಿ ಬಲಾಡ್ಯ ಚಂದ್ರ, ಮಕರದಲ್ಲಿ ಯೋಗಕಾರಕ ಅಂಗಾರಕ ಇದ್ದಲ್ಲಿ ಸನ್ನಡತೆ, ಹಿರಿಯ ಸ್ಥಾನಗಳಿಂದಲೂ ಧನಾರ್ಜನೆಗೆ ನ್ಯಾಯ ಮಾರ್ಗದಲ್ಲೇ ಸಾಧ್ಯತೆ ಹೇರಳ. ರಾಜಲಕ್ಷಣ ಯೋಗ ಗುರು, ಶುಕ್ರ, ಬುಧ, ಚಂದ್ರರು ವ್ಯಕ್ತಿಯ ಜಾತಕದಲ್ಲಿ ಲಗ್ನಭಾವದಲ್ಲಾಗಲೀ ಪರಸ್ಪರ ಕೇಂದ್ರಗಳಲ್ಲಾಗಲೀ ಸಂಯೋಜನೆಗೊಂಡಿರಬೇಕು. ಆಕರ್ಷಕ ರೂಪವೂ ರಾಜಯೋಗಗಳು ಕೂಡಿ ಬರುತ್ತದೆ. ಇದು ಈ ಯೋಗದ ಸಿದ್ಧಿ. ಘನತೆ ಹಾಗೂ ಗೌರವಗಳನ್ನು ಒದಗಿಸುತ್ತದೆ. ಬಹುಮಂದಿಯಿಂದ ಶ್ಲಾ ಸಲ್ಪಡುವವರಾಗುತ್ತಾರೆ. ಉದಾಹರಣೆಯಾಗಿ ರಾಹುಲ್‌ ದ್ರಾವಿಡ್‌ ಜಾತಕವನ್ನು ಪರೀಕ್ಷಿಸಬಹುದು. ದ್ರಾವಿಡ್‌ ಜಾತಕದಲ್ಲಿ ಚಂದ್ರನಿಗೆ ಶಕ್ತಿಯೇ ಇರದೇ ಹೋಗಿದ್ದಲ್ಲಿ ಇವರ ಜಾತಕಕ್ಕೆ ಯಾವ ತೂಕವೂ ಒದಗಿ ಬರುವ ಸಾಧ್ಯತೆ ಇದ್ದಿರಲಿಲ್ಲ. ಮೇಲಿಂದ ಭಾಗ್ಯಾಧಿಪತಿ ಕುಜ ಶನೈಶ್ಚರನ ಹಾಗೂ ರಾಹುವಿನ ಕರಿನೆರಳಿನ ಹೊರಗುಳಿದು ಬಲಾಡ್ಯತೆ ನೀಡಿದ. ಹೀಗಾಗಿ ಇವರ ಜಾತಕದ ರಾಜಲಕ್ಷಣ ಯೋಗಕ್ಕೆ ದೊಡ್ಡ ಶಕ್ತಿ ಕೂಡಿಬಂತು. ಇಷ್ಟಾದರೂ ದ್ರಾವಿಡ್‌ ಇಂಡಿಯಾದ ತಂಡದಲ್ಲಿ ಸೇರಿದ ಹೊಸದರಲ್ಲಿ ಶನಿಕಾಟವಿದ್ದುದರಿಂದ ಆರಂಭದ ದಿನಗಳಲ್ಲಿ ಒಳ್ಳೆಯ ಯೋಗವಿದ್ದೂ ಪರದಾಡಿದ್ದರು. ಒನ್‌ ಡೇ ಪಂದ್ಯಗಳಿಗೆ ನಾಲಾಯಕ್‌ ಎಂಬ ಟೀಕೆಗಳು ನಾಗರ ಹೆಡೆಯಂತೆ ಎದ್ದು ಅಪ್ಪಳಿಸಿದ್ದವು. ಆದರೆ ಶುಕ್ರ ದಶಾಕಾಲ ಎಷ್ಟರ ಮಟ್ಟಿಗೆ ಎತ್ತಿ ಹಿಡಿಯಿತೆಂದರೆ ದ್ರಾವಿಡ್‌ ರಕ್ಷಣೆಯ ಗೋಡೆಯೆಂದು ಹೆಸರಾದುದು. ಏಕದಿನ ಟೆಸ್ಟ್‌ ಪಂದ್ಯ ಈ ಎರಡೂ ಪ್ರಕಾರಗಳಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ರನ್‌ ಗಳಿಸಿದರು. ಚತುಸ್ಸಾಗರ ಯೋಗ ಜಾತಕದ ಎಲ್ಲಾ ಕೇಂದ್ರಗಳಲ್ಲೂ ಗ್ರಹಗಳಿದ್ದರೆ ಚತುಸ್ಸಾಗರ ಯೋಗ ಎನ್ನುತ್ತಾರೆ. ಖ್ಯಾತಿ, ಹಣ, ವರ್ಚಸ್ಸು ಒದಗಿ ಬರುತ್ತದೆ. ರಾಜನ ಸಮಾನ ಅಥವಾ ರಾಜನೇ ಆಗುವ ಸಿದ್ಧಿ ಕೂಡಿ ಬರುತ್ತದೆ. ಈ ಯೋಗಕ್ಕೆ ಉದಾಹರಣೆಯಾಗಿ ಭಾರತೀಯ ಕ್ರಿಕೆಟ್‌ನ ಶೈಶವಾವಸ್ಥೆ ದಾಟಿ ಕುಡಿ ಮೀಸೆಯ ಎಳಸು ತಾರುಣ್ಯದ ಅವಸ್ಥೆ ಬಂದಾಗ ಭಾರತೀಯ ಕ್ರಿಕೆಟ್‌ಗೆ ಉತ್ತಮ ಶಕ್ತಿಯನ್ನು ಹಂತಹಂತವಾಗಿ ಒದಗಿಸಿಕೊಟ್ಟ ಮನ್ಸೂರ್‌ ಆಲಿಖಾನ್‌ ಪಟೌಡಿ ಹಾಗೂ ಹಿಂದಿನ ಯುಗದ ಚಲನಚಿತ್ರರಂಗದ ಪ್ರಸಿದ್ಧ ನಾಯಕಿ ಶರ್ಮಿಳಾ ಟ್ಯಾಗೋರ್‌ ಪುತ್ರ ಸೈಫ್ ಆಲಿ ಖಾನ್‌ಗೆ ಚತುಸ್ಸಾಗರ ಯೋಗವಿದೆ. ಬಲಾಡ್ಯನಾದ ಚಂದ್ರ ತಾರುಣ್ಯಾವಸ್ಥೆಯಲ್ಲಿ ಸಂಭವಿಸಿದ ತೀವ್ರ ಅನಾರೋಗ್ಯದಲ್ಲೂ ಇವರನ್ನು ಬದುಕಿಸಿದ. ಇಂದು ಹಿಂದಿ ಚಿತ್ರರಂಗದ ಪ್ರಥಮ ಸಾಲಿನ ತಾರೆ ಸೈಫ್. ರಾಜ ಮನೆತನಕ್ಕೆ ಸೇರಿದ ಪ್ರಸಿದ್ಧ ದಂಪತಿಗಳ ಪುತ್ರ. ನೀಚಶುಕ್ರ ಮೊದಲ ಪತ್ನಿಯಿಂದ ವಿಚ್ಛೇದನಕ್ಕೆ ಕಾರಣನಾದರೂ ಬಾಳ ಸಂಗಾತಿಯ ವಿಷಯದಲ್ಲಿ ಸಮತೋಲನ ತಂದ ಗುರು ಈಗ ಕರೀನಾ ಕಪೂರ್‌ ಜೊತೆಯಲ್ಲಿ ಉತ್ತಮ ಸಂಬಂಧ ಒದಗಿಸಿದ್ದಾನೆ. ಜಾಹೀರಾತು ಪ್ರಪಂಚದಲ್ಲಿ ಮಿಲಿಯನ್‌ ಗಟ್ಟಲೆ ಹಣ ಸಂಪಾದಿಸುತ್ತಿರುವ ಬಾಕ್ಸ್‌ ಆಫೀಸಿನಲ್ಲಿ ತೂಕ ಎತ್ತರಿಸಿಕೊಂಡ ವರ್ಚಸ್ವೀ ವ್ಯಕ್ತಿ ಸೈಫ್. ಪದ್ಮಶ್ರೀ ಪ್ರಶಸ್ತಿ ಕೂಡಾ ಕಿರಿಯ ವಯಸ್ಸಿನಲ್ಲೇ ಒದಗಿ ಬಂತು. ನಮ್ಮವರಾದ ರಾಮಕೃಷ್ಣ ಹೆಗಡೆಯವರಿಗೆ ಕೂಡಾ ಚತುಸ್ಸಾಗರ ಯೋಗವಿತ್ತು. ಕೇವಲ 28ನೇ ವಯಸ್ಸಿನಲ್ಲೇ ಮೈಸೂರು ರಾಜ್ಯದ ಕಿರಿಯ ಮಂತ್ರಿಗಳಾಗಿದ್ದು ಇವರ ಹೆಗ್ಗಳಿಕೆ ಏಳುಬೀಳುಗಳು ಬಂದರೂ ಹೆಗಡೆಯವರದ್ದು ವರ್ಚಸ್ಸು ಹಾಗೂ ಆಕರ್ಷಣೆಯ ವಿಷಯದಲ್ಲಿ ಎರಡು ಮಾತಿಲ್ಲ. ಪ್ರಧಾನಿಯಾಗುವ ಯೋಗ ಇತ್ತೆಂಬುದು ಬೇರೆ ಮಾತು. ಆಗಿದ್ದರೆ ಅವರಿಗೆ ಯೋಗ್ಯತೆ ಇತ್ತು ಎಂಬುದು ರಾಜಕೀಯ ವ್ಯಾಖ್ಯಾನಕಾರರ ಮಾತು. ಆದರೆ ಒಕ್ಕರಿಸುವ ಶನಿಕಾಟ ಆ ಸಂದರ್ಭದ ಅನಾನುಕೂಲ ಸಂಧಿ ಘಾತಕಗಳು ಮನುಷ್ಯನನ್ನು ಹಿಂದಕ್ಕೆ ಎಳೆಯುತ್ತವೆ. ಎಲ್ಲ ಇದ್ದೂ ಹೆಗಡೆ ಪ್ರಧಾನಿಯಾಗಲಿಲ್ಲ. ಆದರೂ ಹೆಗಡೆ ಇತಿಹಾಸದಲ್ಲಿ ಅಪರೂಪದ ವ್ಯಕ್ತಿಯಾಗಿಯೇ ಉಳಿಯುತ್ತಾರೆ. ಅದರಲ್ಲಿ ಸಂಶಯಲ್ಲ.

ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು!

ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು! ಭಾರತೀಯ ಸಂಸ್ಕೃತಿಯಲ್ಲಿ ಸರ್ಪಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸರ್ಪ ನಾಶದ ಸಂಕೇತವೂ ಹೌದು. ಫ‌ಲವಂತಿಕೆಗೆ ಕೂಡಾ ಸರ್ಪ ಸಂಕೇತವಾಗಿದೆ. ನಮ್ಮ ಪುರಾಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ನಂತರದ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ವಿಷ್ಣು ಮಹೇಶ್ವರರು ಕ್ರಮವಾಗಿ ಸರ್ಪವನ್ನು ಹಾಸಿಗೆಯನ್ನಾಗಿಯೂ, ಸರ್ಪವನ್ನೇ ಅಲಂಕಾರವಾಗಿ ಕೊರಳಿಗೆ ಹಾರವನ್ನಾಗಿಯೂ ಉಪಯೋಗಿಸಿಕೊಂಡಿದ್ದಾರೆ. ಹಾಲ್ಗಡಲಲ್ಲಿ ತಣ್ಣನೆಯ ಮೈ ಆದಿಶೇಷನೆಂಬ ಹಾವಿನ ಮೇಲೆ ಮಲಗಿದ ವಿಷ್ಣುವಿಗೆ ಲಕ್ಷ್ಮೀ ದೇವಿ ಯಾವಾಗಲೂ ಕಾಲು ಒತ್ತುತ್ತಿರುತ್ತಾಳೆ. ತಣ್ಣನೆಯ ಮೈಯ ಆದಿಶೇಷನ ತಣ್ಣನೆಯ ತಟಸ್ಥ ಸ್ಥಿತಿ ವಿಷ್ಣುವಿಗೆ ಬಾಧಿಸಬಾರದೆಂದಾರೆ ಕಾಲೊತ್ತುತ್ತ ಕಾವಿನ ಜೀವಂತಿಕೆಯ ಘಟಕಗಳನ್ನು ವಿಷ್ಣುವಿನಲ್ಲಿ ಅಭಾದಿತಳಾಗಿಸುತ್ತಾಳೆ. ಹಾಗೆಯೇ ನಂಜುಂಡ ನಂಜನ್ನು ಕುಡಿದಾಗ ಪಾರ್ವತಿ ಶಿವನ ಕಂಠ ಸವರುತ್ತ ವಿಷವು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತಾಳೆ. ಇದರಿಂದ ಶಿವನಿಗೆ ವಿಷದಿಂದ ಉಂಟಾಗುವ ಕಂಟಕ ತಪ್ಪುತ್ತದೆ. ಒಟ್ಟಿನಲ್ಲಿ ವಿಷಮಯವಾದ ಸರ್ಪ ಸೃಷ್ಟಿಯ ಸ್ಥಿತಿ ಹಾಗೂ ಲಯಗಳ ನಡುವೆ ಒಂದು ಸಮತೋಲನವನ್ನು ನೆರವೇರಿಸಿದೆ. ನೋಡಿ, ನಮ್ಮ ಪುರಾಣದ ಪ್ರಕಾರ ಆದಿಶೇಷ ಭೂಮಿಯನ್ನು ನೆತ್ತಿಯ ಮೇಲೆ ಹೊತ್ತಿದ್ದಾನೆ. ಅದಕ್ಕೆ ಒಂದೆಡೆ ಒಂದೇ ಭಂಗಿಯಿಂದ ಎತ್ತಿದ ಹಾಗೆ ಚಡಪಡಿಕೆಯಾದಾಗ ಕೊರಳು ಕೊಂಕಿಸುತ್ತದೆ. ಆಗ ನಮಗೆ ಭೂಕಂಪನದ ಅನುಭವವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇಲ್ಲೂ ವಿನಾಶಕ್ಕೆ ಮತ್ತೆ ಸರ್ಪವೇ ಕಾರಣ. ಭೂಕಂಪ ಸರ್ಪದ ಕಾರಣದಿಂದಾಗಿ ಆಗುತ್ತದೆ. ಏನು ಈ ಸರ್ಪ ಶಾಪ? ಜಾತಕ ಶಾಸ್ತ್ರದಲ್ಲಿ 5ನೇ ಮನೆ ಸಂತಾನದ ಮನೆಯಾಗಿದೆ. ರಾಹು ಸರ್ಪದ ಸಂಕೇತವಾಗಿದ್ದಾನೆ. ಜಾತಕದಲ್ಲಿ ದೋಷ ಕಾರಕನಾದ ರಾಹುವು ಸಂತಾನದ ಮನೆಯನ್ನು ಬಾಧಿಸಿದ್ದಲ್ಲಿ ಹುಟ್ಟಿದ ಮಕ್ಕಳು ಸಾಯುವುದು, ಬಾಧೆ ಪಡುವುದು, ತಂದೆತಾಯಿಗಳನ್ನು ಗೋಳು ಹೊಯ್ದುಕೊಳ್ಳುವುದು ಸಂಭವಿಸುತ್ತದೆ. ಈ ರಾಹುವಿನ ಜೊತೆಗೆ ಕುಜ ಶನಿಗಳು ಕ್ಷೀಣ ಚಂದ್ರರು ಅಸ್ತಂಗತ ದೋಷ ಇರುವ ಸೂರ್ಯ ಇತ್ಯಾದಿ ವಿಚಾರಗಳಿಂದಾದ ಬಾಧೆ ಅಗಾಧವಾಗಿದ್ದಾಗ ಸಂತಾನ ಹೀನತೆ ಸಂತಾನನಾಶ ಮಕ್ಕಳಿಂದ ನಿರಂತರ ನೋವುಗಳು ಇತ್ಯಾದಿ ಸಂಭವಿಸುತ್ತ ಜೀವನಕ್ಕೆ ಅರ್ಥ ಕಳೆದುಬಿಡುತ್ತದೆ. ಬೇರೆಯವರ ಬಲಿ ಹೇಳಿಕೊಳ್ಳಲಾಗದ ತಮಗೆ ತಾವೇ ನಿಭಾಯಿಸಲಾಗದ ಸಮಸ್ಯೆಗಳಲ್ಲಿ ವ್ಯಕ್ತಿ ತೊಳಲಾಡುತ್ತಾನೆ. ಸಂತಾನಭಾಗ್ಯಕ್ಕೆ ತೊಂದರೆ ಹಾಗೂ ವಿಳಂಬಕ್ಕೆ ಸರ್ಪಶಾಪ ಮುಖ್ಯವಾಗಿ ಸಂತಾನ ಸ್ಥಾನಕ್ಕೆ ಸರ್ಪಶಾಪ ಅಂಟಿದಾಗ ಮಕ್ಕಳೂ ಹುಟ್ಟಿ ಬಾಧೆ ಹೊಂದುವುದು ಮಕ್ಕಳು ಸಾಯುವುದು ಇತ್ಯಾದಿಯಲ್ಲದೆ ಮಕ್ಕಳೇ ಆಗದಿರುವ ತಾಪತ್ರಯ ಎದುರಾಗಬಹುದು. ಸಂತಾನ ಸ್ಥಾನಕ್ಕೆ ದೋಷವಿದ್ದಾಗ ಎಂಬುದೇ ಅಲ್ಲ. ಭಾಗ್ಯ ಹಾಗೂ ಸುಖಸ್ಥಾನಗಳ ಸಂಬಂಧ ತಾನು ಪಡೆದ ದೋಷದಿಂದಾಗಿ ಯಾವುದೇ ರೀತಿಯಲ್ಲಿ, ಸಂತಾನ ಸ್ಥಾನದೊಂದಿಗೆ ಏನಾದರೂ ಬಹು ಮುಖ್ಯವಾದ ಕಿಂಚತ್‌ ಸಂಬಂದ ಹೊಂದಿದ್ದರೆ ಸಂತಾನ ಹೀನತೆ ಉಟಾಗಬಹುದು. ಹುಟ್ಟಿದ ಮಕ್ಕಳಿಂದ ಬಹುವಿಧವಾದ ಕಿರುಕುಳಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಶನೈಶ್ಚರನೂ ಚಂದ್ರನೂ, ತಂತಮ್ಮ ಒಟ್ಟಾಗಿರುವ ಸ್ಥಿತಿ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದಾಗಲೂ ಸಂತಾನದ ವಿಷಯದಲ್ಲಿ ಕಿರುಕುಳಗಳು ಕಟ್ಟಿಟ್ಟ ಬುತ್ತಿ. ಯಾವಾಗಲೂ ಶನೈಶ್ಚರನ ಜೊತೆಗಿನ ಚಂದ್ರಯುತಿ ಅನೇಕ ಕಿರಿಕಿರಿಗಳನ್ನು ಎದುರಿಗಿಡುತ್ತದೆ. ಶನಿಕಾಟದ ಸಂದರ್ಭದಲ್ಲಿ ವಿಪರೀತವಾಗಿ ಸಂತಾನದ ವಿಷಯದಲ್ಲಿ ಕಿರುಕುಳಗಳು ಎದುರಾದೀತು. ಅನೇಕ ಉದಾಹರಣೆಗಳೊಂದಿಗೆ ಈ ವಿಚಾರಗಳನ್ನು ಶ್ರುತಪಡಿಸಬಹುದಾಗಿದೆ. ಸ್ಪಷ್ಟವಾಗಿ ಇಂತ ಬವಣೆ, ಕಿರಕಿರಿ ಹೊಂದಿದವರ ಜಾತಕದಲ್ಲಿ ರಾಹು ದೋಷ, ಸರ್ಪದೋಷ ಖಂಡಿತಾ ಇರುತ್ತದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಸರ್ಪಶಾಪ ಅಥವಾ ಸರ್ಪದೋಷವನ್ನು ಬಹು ಪ್ರಮುಖವಾಗಿ ಪರಿಗಣಿಸುತ್ತಾರೆ. ಸರ್ಪ ಪ್ರತಿಷ್ಠೆ, ಸರ್ಪ ಸಂಸ್ಕಾರ ಇತ್ಯಾದಿ ರಾಹು ಜಪ, ಸಂತಾನ ಗೋಪಾಲ ಜಪ ಇತ್ಯಾದಿ ಪರಿಹಾರ ಸ್ವರೂಪವಾಗಿ ನೆರವೇರಿಸುತ್ತಾರೆ. ಈ ಸರ್ಪಶಾಪ ಜನ್ಮ, ಜನ್ಮಾಂತರದಿಂದ ಅಂಟಿಕೊಂಡು ಬಂದ ಸೂಚನೆಗಳು ಜಾತಕದಲ್ಲಿ ದೊರಕುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಹಾವು ಹೊಡೆಯುವುದನ್ನಾಗಲೀ, ನೋಡುವುದಾಗಲೀ ಪಾಪ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇಂಥದೊಂದು ಮೂಢನಂಬಿಕೆಯಲ್ಲಿ ನಖಶಿಖಾಂಥವಾಗಿ ಮುಳುಗುವುದೂ ಬೇಡ. ಅನಿವಾರ್ಯವಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸರ್ಪವನ್ನು ಹೊಡೆಯಲೇ ಬೇಕಾಗುತ್ತದೆ. ಹೀಗೆ ಹೊಡೆದಿದ್ದರಿಂದಾಗಿ ಸರ್ರನೆ ಒಬ್ಬನ ಜಾತಕದಲ್ಲಿ ಸರ್ಪ ಶಾಪ ಬಂದು ಬೇರು ಬಿಟ್ಟಿತು ಎಂದು ಅರ್ಥವಲ್ಲ. ಸರ್ಪಶಾಪದ ಕಲ್ಪನೆಯೇ ಬೇರೆ. ಆ ಕಲ್ಪನೆಯ ಪ್ರಕಾರ ಸರ್ಪವನ್ನು ಸಂಕೇತಿಸುವ ರಾಹು, ರಾಹುವನ್ನು ಒಳಗೊಳ್ಳುವ ಗ್ರಹಗಳು ಒಟ್ಟಾರೆಯಾದ ಅವರ ದುರ್ಬಲ ಸ್ಥಿತಿಯ ಸಂದರ್ಭದಲ್ಲಿ ಒಂದಿಷ್ಟು ತಡೆಯಲು ತೊಡಕಾಗುವ ಅಗಾಧ ಚಡಪಡಿಕೆ ಅಸಹಾಯಕತೆಗಳಿಗೆ ಕಾರಣವಾಗುತ್ತದೆ. ಇದು ಸತ್ಯ. ಯಾರು ಮಕ್ಕಳಿಂದ ತೊಂದರೆಗೊಳಗಾಗಿದ್ದಾರೆ ? ಇಲ್ಲಿ ಅವರೆಲ್ಲ ಯಾರೆಂಬ ಹೆಸರುಗಳು ಬೇಡ. ಸೂಕ್ಷ್ಮವಾಗಿ ಅವರನ್ನು ಪ್ರಸ್ಥಾಪಿಸುತ್ತೇನೆ. ಜಾತಕಶಾಸ್ತ್ರದಲ್ಲಿ ಸರ್ಪದೋಷ ಶಾಪ ಹಾಗೂ ಇದನ್ನು ಸುತ್ತವರಿದು ಕಾಡುವ ಗ್ರಹಗಳು ಹೇಗೆ ಸಂತಾನದ ವಿಷಯದಲ್ಲಿ ವಿಳಂಬ, ಸಂತಾನಹೀನತೆ, ಮಕ್ಕಳ ಕಾಟ, ತಮ್ಮೆದುರೇ ಮಕ್ಕಳು ಪರದಾಡುವ ವಿಚಾರ ಗಮನಿಸುತ್ತಾರೆ. ಪರದಾಡುತ್ತಾರೆಂಬುದನ್ನು ಉದಾಹರಿಸಲು ಸರ್ಪಶಾಪ ಎಂಬುದು ಒಂದು ಕಟ್ಟುಕಥೆಯಲ್ಲ. ಬಹಳ ಪ್ರಮುಖ ಹೆಸರು ಗಳಿಸಿದ ನಮ್ಮ ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳೊಬ್ಬರಿಗೆ ಸಂತಾನ ಭಾಗ್ಯವಿರಲಿಲ್ಲ. ಚಾಣಾಕ್ಯ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಜನಾಕರ್ಷಣೆಯಿಂದ ಮಿಂಚಿದ ಮತ್ತೂಂದು ರಾಜ್ಯದ ಮುಖ್ಯಮಂತ್ರಿ ಮಗನಿಂದ ಅಂತ್ಯಕಾಲದಲ್ಲಿ ಯಾತನೆ ಪಟ್ಟರು. ಬಹು ಪ್ರಖ್ಯಾತ ಮಹಿಳೆಯೊಬ್ಬರು ಮಗನಿಂದ ಇನ್ನಿಲ್ಲದ ಸಂಕಟಗಳನ್ನು ಎದುರುಹಾಕಿಕೊಂಡರು. ಜನಪ್ರಿಯ ನಟರೊಬ್ಬರಿಗೆ ಸಂತಾನ ಭಾಗ್ಯ ಕೂಡಿಬರಲೇ ಇಲ್ಲ. ಇನ್ನೊಬ್ಬರು ಇದೇ ರೀತಿಯ ಪ್ರಖ್ಯಾತ ನಟ ತನ್ನ ಸಾವಿನ ದಿನಗಳ ವರೆಗೂ ತಮ್ಮ ಮಗನಿಂದಾಗಿ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಸಾಹಿತಿಗಳು ಮಾಜಿ ಮುಖ್ಯಮಂತ್ರಿಗಳು ಸಾಂಸ್ಕೃತಿಕ ವಕ್ತಾರರು ಎಂಬೆಲ್ಲಾ ದೊಡ್ಡ ಯಾದಿಯೇ ಇದೆ. ಸರ್ಪದೋಷ ಸರ್ಪಶಾಪ ಇವರನ್ನೆಲ್ಲ ಕಾಡಿ ಹಣ್ಣುಗಾಯಿ ನೀರುಗಾಯಿಯಾಗಿಸಿದೆ.

ಜನ್ಮ ಕುಂಡಲಿಯಲ್ಲಿ ವೈವಾಹಿಕ ವೈಫ‌ಲ್ಯ ಏಕೆ ಗೊತ್ತಾ?

ಜನ್ಮ ಕುಂಡಲಿಯಲ್ಲಿ ವೈವಾಹಿಕ ವೈಫ‌ಲ್ಯ ಏಕೆ ಗೊತ್ತಾ? ಶ್ರೀ ಭಗವದ್ಗೀತೆಯ ಜ್ಞಾನಯೋಗ ಅಧ್ಯಾಯನದಲ್ಲಿ 39 ನೇ ಶ್ಲೋಕ ಬಹು ಮುಖ್ಯವಾದ ವಿಚಾರವೊಂದನ್ನು ಪರಮಶಾಂತಿಯನ್ನು ಪಡೆಯುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ. ಶ್ರದ್ಧಾವಲಂಬತೇ ನಂ ತತ್ಪರಃ ಸಂಯತೇಂದ್ರಿಯ ಜ್ಞಾನಂ ಲಬ್ಧಾಪರಾಂ ಶಾಂತಿಚಿರೇಣಾನಿಗಚ್ಛತಿ ಇದರ ಅರ್ಥ ಸರಳವಾಗಿದೆ. ಶ್ರದ್ಧೆ ಎಂಬುದು ಯಾರಿಗಿದೆಯೋ ಶ್ರದ್ಧೆಯಲ್ಲಿ ನಿರತನೂ, ತತ್ಪರನೂ ಆಗುತ್ತಾನೋ, ಅವನು ಜಿತೇಂದ್ರಿಯನಾಗಿ ಜ್ಞಾನವನ್ನು ಸಂಪಾದಿಸುತ್ತಾನೆ. ಜ್ಞಾನವನ್ನು ಪಡೆದಾಗ ಪರಮ ಅನುಭೂತಿಯನ್ನು ಹೊಂದುವ ದಿವ್ಯಶಾಂತಿಯನ್ನು ಅವನು ಪಡೆಯುತ್ತಾನೆ. ಗೀತೆಯನ್ನು ಓದಿಯೇ ಈ ಮೇಲಿನ ವಿಚಾರವನ್ನು ತಿಳಿಯಬೇಕಾಗಿಲ್ಲ. ನಮ್ಮ ನಮ್ಮ ಅನುಭವಗಳ ನೆಲೆಯಲ್ಲಿ ಯಾವಾಗಲೂ ನಮ್ಮ ಕ್ರಿಯಾಶೀಲತೆಗಳ ಸೋಲಿಂದ ನಾವು ನಾವೇ ಪಾರ್ಥರಾದಾಗ, ಅರ್ಜುನರಾದಾಗ ವಿವೇಕ ಎಂಬ ನಮ್ಮೊಳಗಿನ ದ್ರವ್ಯ ಶ್ರೀಕೃಷ್ಣನಾಗಿ ಗೀತೆಯನ್ನು ನಿರಂತರವಾಗಿ ನಮ್ಮ ಜೀವನ ಸಂಗ್ರಾಮದ ಸಂದರ್ಭದಲ್ಲಿ ಬೋಧಿಸುತ್ತಲೇ ಇರುತ್ತದೆ. ಒಂದು ಕಾಲವಿತ್ತು ಹೆಣ್ಣುಗಂಡು ಒಂದಾಗಿ ಬಾಳದಾರಿಯಲ್ಲಿ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಸತಿಪತಿಗಳಾದ ಮೇಲೆ ಈ ಬಂಧನವನ್ನು ಪರಮ ಪಾವಿತ್ರ್ಯದಿಂದ ಕಾಣುವ ವಿಚಾರ. ನಮ್ಮಗಳ ಮೇಲೆ ನಾವೇ ಹೇರಿಕೊಂಡ ಒಂದು ಸೂಕ್ಷ್ಮ ಹಾಗೂ ಜವಾಬ್ದಾರಿಯುತ ಕರ್ತವ್ಯವಾಗಿತ್ತು. ಈ ನಿಟ್ಟಿನಲ್ಲಿ ಹೆಣ್ಣು ಹಾಗೂ ಗಂಡಿನ ನಕ್ಷತ್ರಗಳ ವಿಶ್ಲೇಷಣೆಯಲ್ಲಿ ರಚಿತವಾದ ಕೋಷ್ಟಕದ ಪ್ರಕಾರ ಅಂಕಗಳ ಮೇಲಿಂದ ಈ ಮದುವೆಯನ್ನು ನಡೆಸಬಹುದು. ಈ ವಿಚಾರವನ್ನು ಮನೆಯ ಹಿರಿಯರು ಜೋತಿಷಿ ಹಾಗೂ ಪುರೋಹಿತರ ಸನ್ನಿಧಿಯಲ್ಲಿ ನಡೆಸುತ್ತಿದ್ದರು. ಆದರೆ ಇಂದು ಈ ವಿಧಾನ ಸರಿಯೇ? ಇಂದು ಇಂಥದೊಂದು ಕೋಷ್ಟಕದ ಪರಿಣಾಮವಾಗಿ ದೊರೆತ ಅಂಕಗಳು ಒಂದು ವಿವಾಹದ ಗಟ್ಟಿತನವನ್ನು, ತನ್ನ ಅರಿಕೆಗೆ ಒಳಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಹು ಪುರಾತನವಾದ ವೈವಾಹಿಕ ಪಾವಿತ್ರ್ಯ ಬಸವಳಿದಿದೆ. ಅಂದರೆ ಈ ಕೋಷ್ಟಕ ತಪ್ಪಿದೆ. ಒಂದು ನಮ್ಮದಾದ ಸಂಸ್ಕೃತಿಯ ಬೇರುಗಳಿಗೆ ಬಂಧಕ್ಕೆ ಇನ್ನೊಂದು ಹೆಣ್ಣು ಹಾಗೂ ಗಂಡು ಸಮಾನ ಎಂಬ ಧೋರಣೆ. ನಾವು ಬಹುವಾಗಿ ನಂಬಿಕೆ ಇಟ್ಟ ಋತುಮಾನಗಳಲ್ಲೇ ಏರುಪೇರುಗಳು ಸಂಭವಿಸುತ್ತಿರುವಾಗ, ಸರಿಯಾದ ಕಾಲದಲ್ಲಿ, ಸರಿಯಾದ ಮಳೆಗಾಳಿ ಚಳಿ ಹಾಗೂ ಬೇಸಿಗೆಯ ಕಾಲ ಧರ್ಮ ದಾರಿ ತಪ್ಪಿರುವಾಗ ವೈವಾಹಿಕ ಜೀವನದ ಪಾವಿತ್ರ್ಯ ಹಾಗೂ ಸಂಯಮ ದಾರಿ ತಪ್ಪಬಾರದು ಎಂದರೆ ಹೇಗೆ? ಹೀಗಾಗಿ ನಕ್ಷತ್ರಗಳ ವಿಶ್ಲೇಷಣೆಯೊಂದಿಗೆ ಬಳಸಿಕೊಂಡ ಕೋಷ್ಟಕದ ಮೂಲಕವಾದ ಅಂಕಗಳನ್ನು ಪಡೆದು ಹಾಂ, ಇದು ಸರಿಹೊಂದಿತು ಎಂಬ ವಿಚಾರವನ್ನು ಮೀರಿ ಇನ್ನೂ ಇತರ ಅಂಶಗಳನ್ನು ಸೂಕ್ಷ್ಮವಾಗಿ ಹೆಣ್ಣುಗಂಡುಗಳ ಜಾತಕದ ಹೊಂದಾಣಿಕೆಗಾಗಿ ಅನುಸರಿಸುವುದು ಈಗ ಈ ಬದಲಾದ ಕಾಲಕ್ಕೆ ಅನಿವಾರ್ಯವಾಗಿದೆ. ಹಾಗಾದರೆ ಮಿಕ್ಕಿದ್ದು ಯಾವ ದಾರಿ, ಯಾವ ವಿಧಾನ? ಹೆಣ್ಣು ಗಂಡು ಸಮಾನರು ಎಂಬುದು ಈಗಿನ ವರ್ತಮಾನದಲ್ಲಿ ಹೌದು. ಇದು ಸತ್ಯ ಎಂಬಠಸ್ಸೆ ಒತ್ತಿಬಿಟ್ಟಿದೆ. ಈ ವಿಚಾರದಲ್ಲೀಗ ಚರ್ಚೆ, ಅಸಹನೆ, ವಿರೋಧ, ಗೊಣಗುವಿಕೆಗಳಿಗೆ ಅರ್ಥವಿಲ್ಲ. ಕೆಲವು ಬಾರಿ ಆಖೈರಾದ ಸತ್ಯವನ್ನು ಹೇಳಲಿಕ್ಕೆ ಆಗುವುದಿಲ್ಲ. ಈ ಹಿಂಜರಿಕೆಯಿಂದ ನಮ್ಮ ವೇದ ಹಾಗೂ ಸುಭಾಷಿತಗಳು ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ ಎಂಬ ಮಾತನ್ನು ಉದ್ಘೋಷಿಸಿದೆ. ಅಂತೆಯೇ ನಸ್ತ್ರೀ ಸ್ವಾತಂತ್ರ್ಯ ಮರ್ಹತಿ ಎಂಬ ಮಾತೂ ಇದೆ. ಈ ವಿಭಿನ್ನ ಮಾತುಗಳು ಕೇವಲ ಸ್ತ್ರೀಯರನ್ನು ದೇವರೆಂದು ಉಬ್ಬಿಸಿ, ಅವರಿಂದ ಕೆಲಸ ಮಾಡಿಸಿಕೊಳ್ಳಲಾಗಲೀ, ಮಹಿಳೆಯರನ್ನು ಗೌಣವಾಗಿ ಕಾಣುವುದಕ್ಕಾಗಲೀ ಬಂದ ಮಾತುಗಳಲ್ಲ. ನಿಜಕ್ಕೂ ಈ ಮಾತುಗಳು ಬೇರೆ ಬೇರೆ ನೆಲೆಯಲ್ಲಿ ಬಂದ ಮಾತುಗಳು. ಒಂದರ್ಥದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪುರುಷರು ಸ್ವಲ್ಪ ಶ್ರೇಷ್ಠ. ಮಹಿಳೆಯರು ತಗ್ಗಿ ನಡೆಯುವ ಸೂಕ್ಷ್ಮ ಅರಿಯಬೇಕು ಎಂಬುದನ್ನು ಶಾಸನ ಎಂದಲ್ಲದಿದ್ದರೂ ಒಳನಿಯಮವನ್ನಾಗಿ ಸ್ವೀಕರಿಸಿಬಿಟ್ಟಿತ್ತು. ಅದೇ ಈಗ ಕಾಲ ಬದಲಾಗಿದೆ. ಸಂವಿಧಾನದ ಚೌಕಟ್ಟುಗಳು ಬೇರೆಯಾಗಿವೆ. ಆಧುನಿಕತೆ ಜಗತ್ತಿನ ವ್ಯಾಖ್ಯೆಯನ್ನು ಬದಲಾಯಿಸಿದೆ. ಜಾತಕದ ಮೊದಲ ಹಾಗೂ ಎರಡನೇ ಮನೆ ಪರಿಶೀಲನೆ ಮುಖ್ಯ ಜಾತಕ ಕುಂಡಲಿಯಲ್ಲಿ ಮೊದಲ ಮನೆ ಒಬ್ಬರ ಮನೋಭಾವಗಳನ್ನು, ಎರಡನೇ ಮನೆ ತಾಳ್ಮೆ ಹಾಗೂ ಸೂಕ್ಷ್ಮತೆಗಳೊಂದಿಗೆ ಮಾತನಾಡುವ ವಿಧಾನಗಳನ್ನು ಸೂಚಿಸುತ್ತದೆ. ಮನೋಭಾವದಲ್ಲಿ, ಮಾತಿನ ಮೃದುತ್ವ ಹಾಗೂ ಕಟುತನಗಳಲ್ಲಿ ಚಂದ್ರನ ಅಪಾರವಾದ ಪ್ರಭಾವವೂ ಸೇರ್ಪಡೆಗೊಳ್ಳುತ್ತದೆ. ಹೀಗಾಗಿ ಚಂದ್ರನ ಕಾರಣಕ್ಕಾಗಿ ಹೆಣ್ಣೂ ಗಂಡುಗಳ ನಕ್ಷತ್ರ ಜೋಡಣೆಗೆ ನಮ್ಮ ಹಿಂದಿನ ಕ್ರಮ ಯುಕ್ತವಾಗಿದೆಯಾದರೂ, ಈಗಿನ ಹೊಸ ಸಂವಿಧಾನಕ್ಕೂ ಗಮನ ನೀಡಬೇಕಾಗಿದೆ. ಹೊಸ ಸಂವಿಧಾನದಲ್ಲಿ ಹೆಣ್ಣು ಹಾಗೂ ಗಂಡು ಸಮಾನರು ಎಂಬ ನಿಯಮ ಪ್ರಧಾನವಾದುದರಿಂದ ಹೆಣ್ಣು ಹಾಗೂ ಗಂಡಿನ ಜಾತಕ ಜೋಡಣೆಯ ಸಂದಭದಲ್ಲಿ ಜೋತಿಷಿಯ ಜವಾಬ್ದಾರಿ ಹೆಚ್ಚಾಗಿದೆ. ಬರೇ ನಕ್ಷತ್ರ ಜೋಡಣೆಯೊಂದೇ ಅಲ್ಲದೆ ಒಬ್ಬರ ಮನೋವೇದಿಕೆಯ ಶಕ್ತಿ ಹಾಗೂ ಮಿತಿ ಅಂತೆಯೇ ಅಭಿವ್ಯಕ್ತಿಗೆ ಬೇಕಾದ ಮಾತಿನ ಶಕ್ತಿ, ಅದರ ಮಿತಿಗಳನ್ನು ವಿಶ್ಲೇಷಿಸಲೇ ಬೇಕಾಗುತ್ತದೆ. ಮನೋವೈಜಾnನಿಕ ವಿಚಾರಗಳ ಕುರಿತಂತೆ ಜೋತಿಷಿ ಜಾತಕದಲ್ಲಿರುವ ಹೆಣ್ಣು ಹಾಗೂ ಗಂಡಿನ ಸೂಕ್ಷ್ಮಗಳನ್ನು ವಿಶ್ಲೇಷಿಸಿಯೇ ಜಾತಕಗಳನ್ನು ಹೊಂದಿಸಬೇಕಾಗುತ್ತದೆ. ಮನುಷ್ಯ ಧರ್ಮ, ಮಾನವೀಯತೆಗಳ ನಿಕ್ಷೇಪಕ್ಕೆ ಹೆಣ್ಣು ಗಂಡುಗಳಲ್ಲಿ ಒಂದು ಜೀವಂತಿಕೆ ದೊರೆತಾಗ ಅಹಂ ಕೆಲಸ ಮಾಡುವುದಿಲ್ಲ. ಅಹಂ ಎಂಬ ಘಟಕದ ಹೆಡೆ ನಾಗರ ವಿಷವನ್ನು ಕಕ್ಕಲು ಮುಂದಾಗದಿದ್ದರೆ ದಾಂಪತ್ಯ ಉಳಿಯುತ್ತದೆ ಸಂಸ್ಕೃತಿ ಅವಶ್ಯ ಎಂದಾದರೆ ಸ್ವಂತಿಕೆ ಬೇಕು ಭಾರತೀಯ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆಗೆ ದಾಂಪತ್ಯದಲ್ಲಿನ ಸಂಪನ್ನತೆಗೆ ಶಕ್ತಿ ಬೇಕು. ಭಾರತದ ಮೇಲೆ ಅನ್ಯರ ದಾಳಿ, ಬ್ರಿಟೀಷರು ಹೇರಿದ ದಾಸ್ಯ ಎಲ್ಲಾ ಇತರ ಸಂಕಟಗಳು ಕಾಲಕಾಲಕ್ಕೆ ಎರಗಿ ನಮ್ಮನ್ನು ಘಾಸಿ ಗೊಳಿಸಿದ್ದರೂ, ಭಾರತೀಯ ಸಂಸ್ಕೃತಿಯ ಬೇರುಗಳು ಅದುರಿರಲಿಲ್ಲ. ಆದರೆ ಇಂದಿನ ಜಾಗತೀಕರಣದ ಕ್ರಿಯೆಯಲ್ಲಿ ಜಗತ್ತೆಲ್ಲಾ ಅಮೆರಿಕಾ ಆಗುತ್ತಿದೆ. ಕೇವಲ ಹಣ ಮಾತ್ರ ಮುಖ್ಯವಾಗಿದೆ. ಹಣಕ್ಕಾಗಿ ಪ್ರತಿಯೊಂದು ವಿದ್ಯೆಯನ್ನು, ಸಂಸ್ಕಾರವನ್ನು, ಭಾಷಾಶಕ್ತಿಯನ್ನು ಕೊಂಡುಕೊಳ್ಳುತ್ತಿದ್ದೇವೆ. ಹಿಂದೆ ವಿದ್ಯೆಎಂಬುದು ಭಾರತದಲ್ಲಿ ಮಾರಾಟದ ಸರಕಾಗಿರಲಿಲ್ಲ. ಆದರೆ ತಂದೆತಾಯಿಗಳು ವಿದ್ಯೆಯನ್ನು ಖರೀದಿಸುತ್ತಿದ್ದಾರೆ. ಟಿವಿ, ಮೋಬೈಲ್‌, ಕಂಪ್ಯೂಟರ್‌ಗಳು ಅನ್ಯವಾದ ಒಂದು ಮಾಯಾಜಾಲ ಬೀಸಿದೆ. ಮಾಯೆಯ ವಿನಾ ಜಗತ್ತಿಲ್ಲ. ಆದರೆ ಜಾnನಕ್ಕೆ ಸಮಾನವಾದುದು ಯಾವುದಿದೂ ಇಲ್ಲ ಹೀಗಾಗಿ ಮಾಯೆಯನ್ನೂ ಜಾnನವನ್ನೂ ಯುಕ್ತವಾಗಿ ಸಂಭಾಳಿಸಬೇಕಾಗಿದೆ. ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಮಾಯೆಯಾಗಿರುವುದರಿಂದಲೇ ಜಾnನದ ಅಂಕುಶ ದಾಂಪತ್ಯಕ್ಕೆ ಬೇಕು.

ದತ್ತಾತ್ರೇಯನು ಶಕ್ತಿ ಕೊಡುವ ಬಗೆ

ದತ್ತಾತ್ರೇಯನು ಶಕ್ತಿ ಕೊಡುವ ಬಗೆ ಒಂದು ಕತೆಯಿದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ ಕೃತವೀರ್ಯನ ಅರಸೊತ್ತಿಗೆಗೆ ಒಳಪಟ್ಟಿದ್ದು ಮಧ್ಯ ಪ್ರದೇಶದಲ್ಲಿ ಹೈಹಯ ರಾಜವಂಶದ ಅರಸರು ನರ್ಮದಾ ನದಿಯ ತೀರದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮ ದಿಂದಲೂ ಜನರಿಗೆ ಪ್ರಿಯರಾದವರಿಂದಲೂ ಆಡಳಿತ ಅರಸೊತ್ತಿಗೆಯನ್ನು ನಡೆಸಿಕೊಂಡು ಬಂದರು. ಕೃತವೀರ್ಯನಿಗೆ ಮಕ್ಕಳಿಲ್ಲದೆ ಚಿಂತೆಯಾದಾಗ ಸುಕೃತ ಫ‌ಲವಾಗಿ ಎಂಬಂತೆ ಕಾರ್ತವೀಯಾರ್ಜುನನ ಜನನವಾಗುತ್ತದೆ. ವಿಳಂಬದಿಂದಲಾದರೂ ಪುತ್ರರತ್ನವೊಂದನ್ನು ಪಡೆದೆವು ಎಂಬ ಸಂತೋಷ ಕೃತವೀರ್ಯ ದಂಪತಿಗಳಿಗೆ ತುಂಬಿಕೊಂಡಿತಾದರೂ ಹುಟ್ಟಿದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೇ ಇದ್ದಿರದ ಮಗುವನ್ನು ಕಂಡು ಅವರಿಗೆ ಅಪಾರವಾದ ಬೇಸರ ಜಿಗುಪ್ಸೆಗಳು ಮೂಡಿದವು. ಈ ವಿಪ್ಲವಕ್ಕೆ ಪರಿಹಾರವನ್ನು ದತ್ತಾತ್ರೇಯ ಮುನಿಗಳೆ ಒದಗಿಸಿಕೊಡಬೇಕು ಎಂದು ಯೋಚಿಸಿ, ಮುನಿಗಳ ಪಾದ ಕಮಲದ ಬಳಿ ಮಗುವನ್ನು ಇಡುತ್ತಾರೆ. ದತ್ತ ಗುರುಗಳಿಗೆ ದಂಪತಿಗಳ ದುಃಖ ಅರ್ಥವಾಗುತ್ತದೆ. ಸಾಧಕರಾದ ಅವರಿಗೆ ಪಂಚಭೂತಗಳನ್ನು ನಿಯಂತ್ರಿಸುವ ವಿದ್ಯೆ ಗೊತ್ತಿತ್ತು. ಯಾಕೆಂದರೆ ಅವರು ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ ಸ್ಥಿತಿ-ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ನಿಯಂತ್ರಿಸುತ್ತಾರೆ. ದತ್ತಾತ್ರೇಯ ಮುನಿಗಳು ಬ್ರಹ್ಮ ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ತ್ರಿಮೂರ್ತಿಗಳ ರೂಪ. ಒಂದೇ ದೇಹವಾಗಿ ಮೂರು ಪ್ರತ್ಯೇಕ ತ್ರಿಮೂರ್ತಿಗಳ ಶಿರಗಳನ್ನು ಪಡೆದು ದತ್ತಾತ್ರೇಯರೆನಿಸಿಕೊಂಡಿದ್ದಾರೆ. ಈ ಸ್ವರೂಪ ಒದಗುವಾಗ ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣಿಯ ಸಂಕಲ್ಪ$ಶಕ್ತಿಯ ಬಲದಿಂದಾಗಿ ತ್ರಿಮೂರ್ತಿಗಳನ್ನು ಜಗತ್ತು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ನೋಡುವಂತಾಯಿತು. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡುಗಡೆಗೊಳಿಸಿಕೊಳ್ಳಲು ಚಡಪಡಿಸಿ ತಮ್ಮ ನಯ ವಿನಯಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗತರಾಗಿ ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ. ಆದರೆ ತ್ರಿಮೂರ್ತಿಗಳ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಮಾಹಿಷ್ಮತಿಯ ಅರಸ ಕೃತವೀರ್ಯ ಮುನಿ ಗಳನ್ನು ಆರಾಧಿಸಿ ಪ್ರಸನ್ನಗೊಳಿಸಿ ಅವರಿಂದ ಕೈಗಳೇ ಇರದ ಮಗ ಕಾರ್ತವೀರ್ಯಾರ್ಜುನನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ. ರಾವಣ ನನ್ನು ಮೀರಿದ ಶಕ್ತಿ ಕಾರ್ತವೀರ್ಯನಿಗೆ ಬರುತ್ತೆ. ಮುಂದೆ, ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತವೀರ್ಯಾರ್ಜುನ ಹೆಡೆಮುರಿ ಕಟ್ಟುತ್ತಾನೆ. ದತ್ತಾತ್ರೇಯನಿಂದ ಪರಿಹಾರ ಸಾಧ್ಯ ವಾಮಾಚಾರ, ಯಕ್ಷಿಣಿ ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಮಿತಿ ಇರುತ್ತದೆ. ಆದರೆ ದತ್ತಾತ್ರೇಯನ ಆರಾಧನೆಯಿಂದ ಕ್ಷುದ್ರ ದೇವತೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಧ್ಯವಿದೆ. ಕುಂಡಲಿನಿ ಶಕ್ತಿ ಸಂಪ್ರಾಪ್ತಿಯಾದಾಗ ದೇಹ ಮತ್ತು ಆತ್ಮಗಳ ನಡುವಣ ಅಂತರ ಸಮತೋಲನ ತಪ್ಪದ ರೀತಿಯಲ್ಲಿ ಇಚ್ಛಾಶಕ್ತಿಯ ಮೂಲಕ ಪಡೆಯಬೇಕಾದ್ದನ್ನು ಪಡೆಯಲು ಸಾಧ್ಯ. ಹಾಗಂದ ಮಾತ್ರಕ್ಕೆ ನ್ಯಾಯದ ಹಳಿಗಳನ್ನು ಮೀರುವ ಕುಹಕತನಗಳು ಶಕ್ತಿ ಒದಗಿಸಲಾರವು. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಅನಾಹಾ°ನ ಚಕ್ರ, ಮಣಿಪುರ ಚಕ್ರ, ವಿಶುದ್ಧ ಚಕ್ರ, ಆಜಾn ಚಕ್ರ, ಸಹಸ್ರಾರ ಚಕ್ರ. ಸಹಸ್ರಾರ ಚಕ್ರವು ಮಿಕ್ಕ ಚಕ್ರಗಳನ್ನು ಒಂದು ಗೂಡಿಸುವ ಸ್ಥಳವಾಗಿದೆ. ಅದು ಮೆದುಳನ್ನು ಪೂರ್ತಿಯಾಗಿ ಆವರಿಸಿರುತ್ತದೆ. ಹೃದಯದಷ್ಟೇ ಮುಖ್ಯವಾದ ಅಂಗವಾಗಿ ಮೆದುಳು ರೂಪುಗೊಳ್ಳುವುದೇ ಈ ಕಾರಣಕ್ಕಾಗಿ. ದತ್ತಾತ್ರೇಯನ ಬಗೆಗಿನ ಧ್ಯಾನ ಅವಧೂತ ಶಕ್ತಿಯನ್ನು ಪ್ರಾಪ್ತಿಗೊಳಿಸುತ್ತದೆ. ಮಾಯೆಯ ಫ‌ಲವಾದ ಜಗತ್ತು ಮೂಲ ಬೀಜಾಕ್ಷರ ಮಂತ್ರಗಳು ನಮಗೆ ಪುಟ್ಟದಾದ ಶಕ್ತಿಕೋಶಗಳನ್ನು ಒದಗಿಸುತ್ತದೆ. ಇಡಿಯಾದ ದೇಹದ ಮೂಲದ ಬಿಂದು ಸ್ವರೂಪದ, ಪುಟ್ಟ ಜೀವಕೋಶ. ಪ್ರತಿಜೀವ ಕೋಶಗಳೂ ಬಲಗೊಂಡಾಗ ದೇಹದಲ್ಲಿ ಹುರುಪು, ಉತ್ಸಾಹ ಹಾಗೂ ಚೈತನ್ಯಗಳು ವೃದ್ಧಿಗೊಳ್ಳುತ್ತವೆ. ಆಸೆಗಳು, ಕಾಮನೆಗಳು ಆತ್ಮವನ್ನು ನೀಚತನಕ್ಕೆ ಒಯ್ಯುತ್ತವೆ. ಆತ್ಮ ಶುದ್ಧ ವಸ್ತುವಾದಾಗ ಪರಮಾತ್ಮ ನೆಲೆಸುತ್ತಾನೆ. ಜಿತೇಂದ್ರಿಯ ಶಕ್ತಿಯಿಂದಾಗಿ ದೇಹ ಸೊರಗಲಾರದು. ಧರ್ಮಾರ್ಥ ಕಾಮ ಮೋಕ್ಷಗಳು ಜೀವನವನ್ನು ಅರ್ಥಪೂರ್ಣವಾಗಿಸುತ್ತವೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿಗಳು ನಮ್ಮನ್ನು ನಾಶಕ್ಕೆ ತಳ್ಳುತ್ತವೆ. ಜಗದಲ್ಲಿನ ಪುರುಷಾರ್ಥಗಳನ್ನು ಸಾಧಿಸಲು ಹಿಂಜರಿಯದೆ ಜಿತೇಂದ್ರಿಯನಾದಾಗ ಚಂ ತತ್‌ ಸತ್‌ ಗಳ ಮೂಲಕ ಅತುಲ ಬಲ ಪಡೆಯುತ್ತಾರೆ. ಈ ಮೂರೂ ಅವಿಚ್ಛಿನ್ನವಾದಾಗ ಬೇರೆ ಬೇರೆಯಾದಾಗ ಬ್ರಹ್ಮ ವಿಷ್ಣು ಮಹೇಶ್ವರರಾಗುತ್ತಾರೆ. ಪರಬ್ರಹ್ಮನನ್ನು ಒಗ್ಗೂಡಿಸುವ ಕೆಲಸವನ್ನು ಧ್ಯಾನದಿಂದ ಮಾಡಬೇಕು. ಇದು ಸಾಧ್ಯವಾದಾಗ ಮಾತ್ರ ಬದುಕಿನ ಜಂಜಡ ಖನ್ನತೆ ಸೋಲು ನಿರಾಸೆಗಳಿಂದ ಹೊರಬರಲು ಸಾಧ್ಯ.

ದತ್ತಾತ್ರೇಯನು ಶಕ್ತಿ ಕೊಡುವ ಬಗೆ

ದತ್ತಾತ್ರೇಯನು ಶಕ್ತಿ ಕೊಡುವ ಬಗೆ ಒಂದು ಕತೆ ಇದೆ. ಮಾಹಿಷ್ಮತಿಯ ಅರಸು ಕೃತವೀರ್ಯನ ಮಗ ಕಾರ್ತವೀರ್ಯಾರ್ಜುನ. ಹೈಹಯಸ ರಾಜ್ಯದ ಅಧಿಪತಿ. ಮಧ್ಯ ಪ್ರದೇಶದಲ್ಲಿ ಹೈಹಯಸ ರಾಜವಂಶ ನರ್ಮದಾ ನದಿ ತೀರೆದ ಗುಂಟ ತಮ್ಮ ರಾಜ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಕೃತಯುಗದ ಕಾಲಘಟ್ಟದಲ್ಲಿ ಪರಾಕ್ರಮದಿಂದಲೂ ಜನರಿಗೆ ಪ್ರಿಯರಾದವರಾಗಿಯೂ ಆಡಳಿತ ನಡೆಸಿಕೊಂಡು ಬಂದಿದ್ದರು. ಕೃತವೀರ್ಯನಿಗೆ ಮಕ್ಕಳಿರದೆ ಚಿಂತೆಯಾದಾಗ ಸುಕೃತ ಫ‌ಲವಾಗಿ ಎಂಬಂತೆ ಕಾರ್ತವೀರ್ಯಾರ್ಜುನನ ಜನನವಾಯಿತು. ದುರ್ದೈವವಶಾತ್‌ ವಿಳಂಬದಿಂದ ಮಗುವಿಗೆ ಅಂಗ ಊನವಾಗಿತ್ತು. ಕೈಗಳೆ ಇದ್ದಿರದ ಮಗುವನ್ನು ಕಂಡು ಕೃತವರ್ಮ ದಂಪತಿಗೆ ಅಪಾರವಾದ ಬೇಸರ, ಜುಗುಪ್ಸೆಗಳು ಮೂಡಿ ಇನ್ನು ಈ ವಿಪ್ಲವಕ್ಕೆ ಪರಿಹಾರವೆಂದರೆ ದತ್ತಾತ್ರೇಯ ಮುನಿಗಳೆ ಪರಿಹಾರ ಮಾಡಿಸಿ ಕೊರತೆಯನ್ನು ದೂರಮಾಡುವ ಅನುಪಮವಾದ ತಂತ್ರಶಕ್ತಿ ಪಡೆದ ಮಹಾದೈವ ಎಂಬುದನ್ನು ಮನಗಂಡು ದತ್ತಾತ್ರೇಯ ಮುನಿಗಳ ಬಳಿ ಮಗುವನ್ನು ಎತ್ತೋಯ್ದರು. ಅವರ ಪಾದಕಮಲದ ಬಳಿ ಇಡುತ್ತಾರೆ. ದತ್ತ ಗುರುಗಳಿಗೆ ದಂಪತಿಯ ದುಃಖವು ಅರ್ಥವಾಗುತ್ತದೆ. ಸಾಧಕರಾದ ಮುನಿಗಳಿಗೆ ಪಂಚಭೂತಗಳನ್ನು ನಿಯಂತ್ರಿಸುವ ಮಹಾನ್‌ ವಿದ್ಯೆ ಗೊತ್ತು. ಏಕೆಂದರೆ ಅವರು ಲೀಲಾ ಚರಿತನಾದ ದೇವರು. ಬ್ರಹ್ಮ ಜಿಜಾnಸೆಯನ್ನು ಅರಿತವರು. ಸೃಷ್ಟಿ, ಸ್ಥಿತಿ, ಲಯಗಳನ್ನು ಪ್ರತ್ಯೇಕವಾಗಿ ನಡೆಸಿ ಯಂತ್ರಿಸುತ್ತಾರೆ. ದತ್ತಾತ್ರೇಯ ಮುನಿಗಳು ಬ್ರಹ್ಮ,ವಿಷ್ಣು ಮಹೇಶ್ವರರು ಒಗ್ಗೂಡಿದಾಗ ಒಡಮೂಡಿದ ರೂಪ. ತ್ರಿಮೂರ್ತಿಗಳು ಒಂದೇ ದೇಹವಾಗಿ ಶಿರೋಭಾಗದಲ್ಲಿ ಮೂರು ಪ್ರತ್ಯೇಕ ಸ್ವರೂಪಗಳನ್ನು ತಳೆದಿದ್ದಾರೆ. ಈ ಸ್ವರೂಪವೇ ದತ್ತಾತ್ರೇಯ ಸ್ವರೂಪ. ಈ ಸ್ವರೂಪವನ್ನು ಪಡೆಯುವುದು ಅವರ ಶಕ್ತಿಯ ಫ‌ಲವಾಗಿ ಅಲ್ಲ. ಅತ್ರಿ ಮುನಿಯ ಪತ್ನಿ ಅನಸೂಯಾ ಎಂಬ ಪತಿವ್ರತಾ ಶಿರೋಮಣೀಯ ಸಂಕಲ್ಪ ಶಕ್ತಿಯ ಬಲದಿಂದಾಗಿ. ತ್ರಿಮೂರ್ತಿಗಳನ್ನು ಎಳೆಯ ಕಂದಮ್ಮಗಳ ಸ್ವರೂಪದಲ್ಲಿ ಪರಿವರ್ತನೆಗೊಳ್ಳುವ ಸ್ಥಿತಿ ಕೂಡಿ ಬರುತ್ತದೆ. ತ್ರಿಮೂರ್ತಿಯರ ಪತ್ನಿಯರು ಕಂಗಾಲಾಗಿ ತಂತಮ್ಮ ಗಂಡಂದಿರನ್ನು ಅನಸೂಯಾಳಿಂದ ಬಿಡಿಸಿಕೊಳ್ಳಬೇಕೆಂದು ಚಡಪಡಿಸಿ ತಮ್ಮ ವಿನಯನಯ ಪೂರ್ವಕ ನಡೆಯಿಂದ ಅನಸೂಯೆಗೆ ಶರಣಾಗಿ, ತಮ್ಮ ಗಂಡಂದಿರನ್ನು ವಾಪಸ್ಸು ಪಡೆಯುತ್ತಾರೆ. ಆದರೆ ತ್ರಿಮೂರ್ತಿ ಅಂಶಗಳು ಸೇರಿ ದತ್ತಾತ್ರೇಯ ರೂಪುಗೊಳ್ಳುತ್ತಾನೆ. ಕಷ್ಟದಲ್ಲಿರುವವರಿಗೆ ವರ ಕೊಡುವವನೆ ದತ್ತಾತ್ರೇಯ.ಮಾಹಿಷ್ಮತಿಯ ಅರಸ ಕೃತವೀರ್ಯ ದತ್ತಮುನಿಗಳನ್ನು ಆರಾಧಿಸಿ, ಪ್ರಸನ್ನಗೊಳಿಸಿ, ಅವರಿಂದ ತನ್ನ ಕೈಗಳೇ ಇರದ ಮಗನಿಗೆ ಸಾವಿರ ಬಾಹುಗಳನ್ನು ಅನುಗ್ರಹಿಸಿಕೊಳ್ಳುತ್ತಾನೆ . ರಾವಣನನ್ನೂ ಮೀರಿದ ಶಕ್ತಿ ಕಾರ್ತಿವೀರ್ಯಾರ್ಜುನನಿಗೆ ಬರುತ್ತದೆ. ಸೊಕ್ಕು ಪ್ರದರ್ಶಿಸಿದ ರಾವಣನನ್ನೇ ಕಾರ್ತಿವೀರ್ಯಾರ್ಜುನ ಸೆರೆಡಿಯುತ್ತಾನೆ. ಅನುಪಮವಾದ ಪವಾಡ ಸದೃಶ ಪರಿಹಾರ ದತ್ತಾತ್ರೇಯನಿಂದ ಲಭ್ಯ ವಾಮಾಚಾರ, ಯಕ್ಷಿಣಿ, ಕ್ಷುದ್ರ ದೇವತೆಗಳ ವಶೀಕರಣ ಒಂದು ರೀತಿಯ ಶಕ್ತಿ ಒದಗಿಸಬಹುದು. ಆದರೂ ಇವುಗಳಿಗೆ ಇವುಗಳದ್ದೇ ಆದ ಒಂದು ಮಿತಿ ಇರಲು ಸಾಧ್ಯ. ಆದರೆ ದತ್ತಾತ್ರೇಯನ ಆರಾಧನೆ ತಂತ್ರ ಸಿದ್ಧಿ, ಧ್ಯಾನ ಏಕಾಗ್ರತೆಗಳು ಒಂದು ನಿರ್ದಿಷ್ಟ ಬಗೆಯಲ್ಲಿ ಸಾಧ್ಯವಾದಾಗ ಮನುಷ್ಯನಲ್ಲಿ ಅಂತರ್ಗತವಾದ ಷಟcಕ್ರಗಳನ್ನು ಜಾಗ್ರತಗೊಳಿಸುವ ಯೋಗ ಸಿದ್ಧಿಗೆ ರೂಪಾಂತರಗೊಳ್ಳುತ್ತದೆ. ಬದುಕಿನ ಸಂದರ್ಭದ ಪೀಡೆಗಳಿಂದ ನಮಗೆ ನಾವೇ ರಕ್ಷಣೆ ಪಡೆದು ಹೊರಬರಲು ಚೈತನ್ಯ ಒದಗುತ್ತದೆ.

ಪಿತೃ ದೋಷ; ಹೀಗಂದರೇನು ಗೊತ್ತಾ?

ಪಿತೃ ದೋಷ; ಹೀಗಂದರೇನು ಗೊತ್ತಾ? ಪಿತೃದೋಷದ ಬಗೆಗೆ ಒಬ್ಬ ವ್ಯಕ್ತಿಯ ಜಾತಕದಲ್ಲಿ ಸುಳಿವುಗಳು ಸಿಗುತ್ತದೆ. ಬ್ರಹ್ಮ ಪುರಾಣ, ಗರುಡ ಪುರಾಣ ಮುಂತಾದ ಪುರಾಣಗಳಲ್ಲಿ ದೊರಕುವ ಪಿತೃದೋಷದ ವಿಚಾರಗಳನ್ನು, ಜಾತಕದಲ್ಲಿ ಕೆನೆಗಟ್ಟುವ ಪಿತೃ ದೋಷ ವಿಚಾರ ಸ್ಥಿತಿಗತಿಗಳನ್ನು ಒಟ್ಟಂದದಲ್ಲಿ ಸೂಕ್ಷ್ಮವಾಗಿ ಅರಿಯಬೇಕು. ಮಾನವನ ಸಂಬಂಧವಾಗಿ (ಇತರ ಪ್ರಾಣಿಗಳಿಗಿಂತಲೂ ಬೇರೆಯೇ ಆಗಿ ದೇವರೂ ಆಗಲು ಸಾಧ್ಯವಿಲ್ಲದ, ರಾಕ್ಷಸನಾಗಬಾರದ ಮಾನವೀಯತೆಯ ಅಪ್ಪಟ ಗುಣ ಧರ್ಮಗಳಿಂದ, ನಾಕರೀಕತೆಯ ಕಟ್ಟುಪಾಡುಗಳೊಂದಿಗೆ) ಒಂದು ಜಾತಕ ಕುಂಡಲಿ ತನ್ನ ಗರ್ಭದಲ್ಲಿ ಅವನ ವ್ಯಕ್ತಿತ್ವ ಸಿದ್ಧಿ ಏನು, ವಾಕ್‌ ಚಾತುರ್ಯವೇನು, ಆರ್ಥಿಕ ಬಲವೇನು,ಸ್ಥೈರ್ಯ ಧೈರ್ಯಗಳೇನು, ಸುಖೀದ ವಿಚಾರವಾದ ಒಟ್ಟೂ ಶಕ್ತಿ ಅಥವಾ ಮತಿಗಳೇನು, ಸಂತಾನದ ವಿಷಯದ ಏರಿಳಿತಗಳೇನು, ದರಿದ್ರಾದಿ ಸಕಲ ದುರಾದೃಷ್ಟಗಳ ವಿಚಾರಗಳೇನು, ವೈವಾಹಿಕ ಜೀವನದ ಪಾಲೇನು, ಮರಣ ಯಾವಾಗ, ಹೇಗೆ ಮತ್ತು ಏಕೆ ಸಂಬಂಧಿಸಬಹುದು ಎಂಬುದರ ಚೌಕಟ್ಟುಗಳು ಯಾವ ಬಗೆಯದು, ಭಾಗ್ಯದ ವಿಚಾರವಾಗಿ ಏನು ಪಡೆದು ಬಂದಿರುವುದು, ಮಾಡುವ ಕಾಯಕ ಯಾವುದಾಗಿರುತ್ತದೆ. ಭಾಗ್ಯದ ನಿಕ್ಷೇಪ ಒಳಿತಿನ ಮೊತ್ತ ಕಟ್ಟಿಕೊಟ್ಟಿದೆಯೇ ವಿಧಿ, ನಷ್ಟಗಳ ಯಾದಿ ಹೇಗಿರುತ್ತದೆ ಇತ್ಯಾದಿ ಇತ್ಯಾದಿಗಳ ಬಗೆಗಿನ ಸೂಕ್ಷ್ಮಗಳನ್ನು ಕೆನೆಗಟ್ಟಿಸಿರುತ್ತದೆ. ಇಲ್ಲಾ ಹರಳು ಗಟ್ಟಿಸಿರುತ್ತ¨ ಎಂದೂ ಅನ್ನಬಹುದು. ಜಾತಕ ಕುಂಡಲಿಯ ಗ್ರಹಗಳು ಸೂರ್ಯ, ಚಂದ್ರಾದಿ ನವ ಗ್ರಹಗಳು, ( ರಾಹು ಕೇತುಗಳ ಅಸ್ತಿತ್ವದಲ್ಲಿ ಇರದ ಗ್ರಹಗಳಾದರೂ ಅವು ಸೂರ್ಯ ಹಾಗೂ ಚಂದ್ರರ ಪರಿಭ್ರಮಣದ ವೇಗದ ಛೇದವನೇ ಕಾರಣವಾಗಿ ಅಪಾರವಾದ ಕಂಡು ಕತ್ತಲ ಹೊತ್ತು ಶಕ್ತಿ ಮೂಲವಾಗಿ ಹೊರ ಹೊಮ್ಮುತ್ತವೆ) ತಂತಮ್ಮದೇ ಆದ ರೀತಿಯಲ್ಲಿ ಲೋಕದ ಜೀವಿಗಳ ಮೇಲೆ ತಮ್ಮ ಪ್ರಬಾವ ನೀಡುತ್ತಿರುತ್ತವೆ. ಪ್ರಭಾವದ ಕಾರಣಗಳಿಂದಾಗಿ ಅದೃಷ್ಟ ದುರಾದೃಷ್ಟಗಳು ಕೂಡಿ ಬರುತ್ತವೆ. ಇದನ್ನು ನಂಬಿದವನು ತನ್ನ ದೃಢವಾದ ನಂಬಿಗೆಯಿಂದ ಹೊರಬರಲಾರ. ನಂಬದೇ ಹೋದವನೂ ಎಂದೋ ಒಂದು ದಿನ "ಹೌದು, ನಿಜ. ಏನೋ ಒಂದು ಇದೆ. ತನ್ನನ್ನು ಮೀರಿದ ಅಗೋಚರ ಶಕ್ತಿ ' ನಂಬಿಗೆಗೆ ಬಂದು ತಲುಪುತ್ತಾನೆ. ಕೆಲವೇ ಕೆಲವು ಮಂದಿ ಅದೇನು ಅದೃಷ್ಟ, ಥೂ ಇಂಥದ್ದನ್ನು ನಂಬಲಾರೆ ಎಂಬ ನಂಬಿಗೆಯೊಂದಿಗೇ ನಾಸ್ತಿಕರಾಗಿ ಇರುತ್ತಾರೆ. ನಾಸ್ತಿಕರನ್ನು ನಾವು ಅಗೌರವಿಸಬೇಕಾಗಿಲ್ಲ. ಅವರ ರೀತಿ ಅವರದ್ದು. ಆದರೆ ಅವರು ಆಸ್ತಿಕರನ್ನು ಅಣಕಿಸಿದಿದ್ದರೆ ಸೂಕ್ತ. ಆಸ್ತಿಕರು ನಾಸ್ತಿಕರನ್ನು ದ್ವೇಷಿಸದಿದ್ದರೆ ಸೂಕ್ತ.

ಜಾತಕ ಕುಂಡಲಿಯಲ್ಲಿ ಪ್ರೀತಿ, ಪ್ರೇಮದ ವಿಚಾರ

ಜಾತಕ ಕುಂಡಲಿಯಲ್ಲಿ ಪ್ರೀತಿ, ಪ್ರೇಮದ ವಿಚಾರ ಜೀವನದಲ್ಲಿ ತಂದೆ ತಾಯಿಗಳ ಪ್ರೀತಿ ಬೇರೆ, ಅಣ್ಣ ತಮ್ಮಂದಿರ ಪ್ರೀತಿ ಬೇರೆ. ಗೆಳೆತನದ ಪ್ರೀತಿ ವಿಶ್ವಾಸ ಬೇರೆ. ಸತಿಪತಿಗಳ ವಿಚಾರದಲ್ಲಿನ ಪ್ರೀತಿಯ ಬಗೆಯೇ ಬೇರೆ. ಇಲ್ಲಿಂದಾಚೆಗೆ ಸಲ್ಲುವ ಪ್ರೀತಿಗಳೂ ಬೇರೆ ಬೇರೆ. ಮದುವೆಗಿಂತ ಮುಂಚಿನ ಸಂಬಂಧ, ಮದುವೆಯ ನಂತರದ ಸಂಬಂಧ, ಜೀವನದಲ್ಲಿ ದಾರಿ ತಪ್ಪಿ ನಡೆಯುವ ಲೈಂಗಿಕ ವಿಚಾರ ಇತ್ಯಾದಿ ಎಲ್ಲವೂ ಬಗೆಬಗೆಯ ವಿಧಾನಗಳಿಂದಾಗಿ ವಿಚಿತ್ರವಾದ ಸಂಗತಿಗಳನ್ನು ಹೊರಚೆಲ್ಲುತ್ತಿರುತ್ತವೆ. ಕೆಲವರಿಗೆ ಸಲಿಂಗ ಪ್ರೇಮವೇ ಅನನ್ಯವಾದುದು. ಉಭಯ ರೀತಿಯ ಪ್ರೇಮ ವ್ಯವಹಾರಗಳಲ್ಲಿ ತೊಡಗಿಕೊಂಡವರೂ ಇದ್ದಾರೆ. ಯಾಕೆ ಮದುವೆಗಳು ಭದ್ರವಾಗುವುದು ಅಪರೂಪ? ಮದುವೆ ಎನ್ನುವುದು ಮಾನವನ ಜೀವನದಲ್ಲಿ ಉದಯವಾದ ವಿಧವಿಧವಾದ ನಾಗರಿಕತೆಗಳು ಬೆಳೆದಾದ ಮೇಲೆ ಹುಟ್ಟಿಕೊಂಡ ಸಂಸ್ಕಾರ. ಒಂದು ಗಂಡು ಜೀವನದ ಸಂದರ್ಭದಲ್ಲಿ ಮಧುರವಾದ ಜೀವನವನ್ನು ಪ್ರಾರಂಭಿಸಲು ಮಂಗಲಕಾರ್ಯದ ಚೌಕಟ್ಟಿನಲ್ಲಿ ಹೆಣ್ಣುಗಂಡುಗಳನ್ನು ಅಧಿಕೃತವಾಗಿ ಒಗ್ಗೂಡಿಸುವ ವಿಧಾನವೇ ಮದುವೆ. ಇಲ್ಲಿ ಪ್ರತಿ ಹೆಣ್ಣಿನ, ಗಂಡಿನ ನಕ್ಷತ್ರರಾಶಿಗಳ ಹೊಂದಾಣಿಕೆ ಹಾಗೂ ಹೆಣ್ಣು ಗಂಡಿನ ಜಾತಕ ಕುಂಡಲಿಯಲ್ಲಿ ಕಳತ್ರ ಸ್ಥಾನಗಳ (ಬಾಳ ಸಂಗಾತಿ ಸ್ಥಾನಗಳ) ಬಲಾಬಲಗಳ ಮೇಲಿಂದ ಮದುವೆ ಎಂಬ ಬಾಳಿನ ಮಧುರ ಪಲ್ಲವಿಯನ್ನು ಪ್ರಾರಂಭಿಸಬೇಕಾಗುತ್ತದೆ. ಶುಕ್ರ ಹಾಗೂ ಕುಜರು ತಂತಮ್ಮ ಶಕ್ತಿ ಹಾಗೂ ವಿನಾಶಕ ಶಕ್ತಿಯನ್ನು ಒಬ್ಬನ ಅಥವಾ ಒಬ್ಬಳ ಜಾತಕದಲ್ಲಿ ಸಕಾರಾತ್ಮಕವಾಗಿ ಮಿಡಿಸುವಂತಾದರೆ ಮದುವೆಯ ಬಂಧಕ್ಕೆ ಅನನ್ಯತೆಯ ಸಿದ್ಧಿ ದೊರಕುತ್ತದೆ. ಆದರೆ ಕಳತ್ರ ಸ್ಥಾನದ ಶಕ್ತಿ ಒದಗುವುದು, ಕುಜ ಅಥವಾ ಶುಕ್ರರು ದೋಷಕರಾಗದೇ ಇರುವುದು, ನಕ್ಷತ್ರ ಹಾಗೂ ರಾಶಿಗಳು ಹೆಣ್ಣು ಗಂಡಿನ ಸಂಬಂಧವಾಗಿ ಮುಕ್ತವಾಗಿ ಕೂಡಿ ಬರುವುದು ಸುಲಭದ ಮಾತಲ್ಲ. ಕಷ್ಟದ ವಿಚಾರವಿದು. ಹೆಣ್ಣು ಗಂಡಿನ ಹೊಂದಾಣಿಕೆ ಹಾಗೂ ಆಯ್ಕೆಗಳು ಸ್ವರ್ಗಭಾಗ್ಯ ಸಿದ್ಧಿಯೇ? ಸಾಮಾನ್ಯವಾಗಿ ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಟ್ಟಿರುತ್ತವೆ ಎಂಬ ಮಾತಿದೆ. ನಮ್ಮ ಜೀವನದಲ್ಲಿ ಈ ಮಾತು ಹೌದು ಎಂಬುದನ್ನು ಯಾರೇ ಆಗಲಿ ಒಪ್ಪಿಕೊಳ್ಳಬೇಕು. ಸಿನಿಮಾ ಜೀವನ ಯಾರಿಗೂ ಆದರ್ಶವಾಗಬಾರದು. ಆದರೂ ಉದಾಹರಣೆಗೆ ಸಿನಿಮಾರಂಗದ ವಿಚಾರವನ್ನು ನಾವು ವಿಶ್ಲೇಷಿಸಲೇಬೇಕು. ಸಿನಿಮಾ ವಲಯದಲ್ಲಿ ಯಾರು ಯಾರನ್ನೋ ಮದುವೆಯಾಗುವ ವಿಚಾರವನ್ನು ನಾವು ಕೇಳುತ್ತಿರುತ್ತೇವೆ. ಆದರೆ, ನಂಬಿದ ವಿಚಾರವೇ ಬೇರಾಗಿ, ಒಬ್ಬ ಇನ್ನೊಬ್ಬಳಾÂರನ್ನೋ, ಒಬ್ಬಳು ಇನ್ಯಾರೋ ಒಬ್ಬನನ್ನು ವರಿಸುತ್ತಾರೆ. ಇದಕ್ಕೆ ನೂರಾರು ಉದಾಹರಣೆಗಳನ್ನು ಕೊಡಬಹುದು. ತಿಳಿದದ್ದು ಬೇರೆ ಕತೆ ಇರುತ್ತದೆ. ನಿಜವಾದ ಕತೆ ಹೊಸ ತಿರುವಿಗೆ ಶೀಘ್ರವಾಗಿ ಬದಲಾಗಿ, ತಿಳಿದಿರುವ ಎರಡು ಜೀವಗಳು ಸತಿಪತಿಗಳಾಗಿ ಸಪ್ತಪದಿ ಎಣಿಸುತ್ತಾರೆ. ಜೇನುಗಣ್ಣಿನ ಹುಡುಗಿ ಐಶ್ವರ್ಯಾ ರೈ, ಅಭಿಷೇಕ್‌ ಬಚ್ಚನ್‌ನನ್ನು ಮದುವೆಯಾದದ್ದು ಐಶ್ವರ್ಯಾ ಹಾಗೂ ಅಭಿಷೇಕ್‌ ಬಚ್ಚನ್‌ರ ಮದುವೆಯ ವಿಚಾರವನ್ನು ವಿವರವಾಗಿ ವಿಶ್ಲೇಷಿಸಲಾರೆ. ವೈಯಕ್ತಿಕ ವಿಚಾರಗಳು ಇಲ್ಲಿ ಕಗ್ಗಂಟಾಗಿದೆ. ಅದೇನೇ ಇರಲಿ, ಐಶ್ವರ್ಯಾ ರೈ, ಬಚ್ಚನ್‌ ಕುಟುಂಬದ ಸೊಸೆಯಾದಳು. ಕರ್ನಾಟಕದ ಐಶ್ವರ್ಯಾ ಯಾರು? ಅಲಹಾಬಾದ್‌ ಮೂಲದ ಅಭಿಷೇಕ್‌ ಬಚ್ಚನ್‌ ಯಾರು? ಎತ್ತಣಿಂದೆತ್ತ ಸಂಬಂಧವಯ್ನಾ ಎಂಬ ಅಲ್ಲಮನ ಮಾತು ಇಲ್ಲಿ ನೆನಪಾಗದಿರದು. ಯಾರು ಸೋನಿಯಾ? ಯಾರು ರಾಜೀವ್‌ ಗಾಂಧಿ? ಆದರೂ ಅವರು ಸತಿಪತಿಗಳಾದರು. ಸ್ವತಃ ಸೋದರಮಾವನ, ಸೋದರತ್ತೆಯ ಮಕ್ಕಳು ಮದುವೆಯಾಗುತ್ತಾರೆ. ಇದೂ ಚೋದ್ಯವೇ. ಅಂತೂ ಸಲ್ಮಾನ್‌ ಖಾನ್‌ ಇನ್ನೂ ಒಬ್ಬ ಮಾತ್ರ ಅಧಿಕೃತ, ಅನೇಕ ಹುಡುಗಿಯರು ಮದುವೆಯಾಗಲು ಕಾತರದಲ್ಲಿರುವ ಬೇಡಿಕೆಯ ನಟ. ಸು#ರದ್ರೂಪಿ. ವಯಸ್ಸು ಈಗಾಗಲೇ 51 ನಿಜ. ಆದರೂ ಅವನನ್ನು ಮದುವೆಯಾಗಲು ಕ್ಯೂ ನಿಂತಿರುವವರಿಗೆ ಬರವಿಲ್ಲ. ಹೆಚ್ಚೇಕೆ, ನಮ್ಮ ರಾಹುಲ್‌ ಗಾಂಧಿ ಕೂಡ ಬಹುಬೇಡಿಕೆಯಲ್ಲಿರುವ ಯುವಕನೇ. ಇವರಿಗೆ ಈಗ 42 ವಯಸ್ಸು. 54 ವಯಸ್ಸಾದಾಗ ಖ್ಯಾತಿ ಪಡೆದ ಸಲ್ಮಾನ್‌ ರಷಿª ತನಗಿಂತ 33 ವರ್ಷ ಕಿರಿಯಳಾದ ಪದ್ಮಾಲಕ್ಷಿ$¾ಯನ್ನು ಮದುವೆಯಾಗಿದ್ದರು. ವಯೋವೃದ್ಧ ಎನ್‌.ಟಿ. ರಾಮರಾವ್‌, ತಮ್ಮ ಮಗಳ ವಯಸ್ಸಿನ ಲಕ್ಷಿ$¾ ಸರಸ್ವತಿ ಎಂಬ ಹೆಣ್ಣುಮಗಳನ್ನು ಆರಾಧಿಸಿದರು. ಇನ್ನಿಷ್ಟು ಹೆಸರುಗಳು, ರಾಜ್ಯದ, ಅನ್ಯರಾಜ್ಯದ ಹೆಚ್ಚಿನ ಪ್ರಮಾಣದಲ್ಲಿ ಹಾಲೀ ಚಾಲ್ತಿಯಲ್ಲಿನ ರಾಜಕಾರಣಿಗಳು, ಕಟ್ಟಿಕೊಂಡವರನ್ನು ಬಿಟ್ಟು ಇನ್ನೆಲ್ಲಿಗೋ ದಾರಿ ಮಾಡಿಕೊಂಡ ವ್ಯಕ್ತಿಗಳು... ಇತ್ಯಾದಿ ಇತ್ಯಾದಿ ಹೇಳುತ್ತ ಹೋದರೆ ಈ ಯಾದಿ ಮುಗಿಯುವುದೇ ಇಲ್ಲ. ಮೀನಾಕುಮಾರಿ, ನರ್ಗಿಸ್‌, ರೇಖಾ, ದೀಪಿಕಾ ಪಡುಕೋಣೆ, ಕರೀನಾ, ಅಜರುದ್ದೀನ್‌, ಫ್ರಾನ್ಸ್‌ ಅಧ್ಯಕ್ಷ ಸರ್ಕೋಜಿ, ಸೈಫ್ ಅಲಿ ಖಾನ್‌, ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ, ಇವರೆಲ್ಲ ನೀಗಿಕೊಂಡ, ಬಾಳಸಂಗಾತಿಗಳ ವಿಷಯದಲ್ಲಿನ ತಳಮಳ ಗಮನಾರ್ಹ. ಬದಲಾಗಿರುವ ಕಾಲ ಧರ್ಮ "ಸಾವಿರ ಸುಳ್ಳು ಹೇಳಿ ಒಂದು ಲಗ್ನ ಮಾಡು' ಎಂಬ ನಾಣ್ಣುಡಿ ನಮ್ಮಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ವಾಸ್ತವವಾಗಿ ಜಾತಕ ಕುಂಡಲಿಯನ್ನು ಹೊಂದಾಣಿಕೆ ಮಾಡಿ, ನೂರಕ್ಕೆ ನೂರು ಹೆಣ್ಣು ಗಂಡುಗಳು ಸತಿಪತಿಗಳಾಗುವಂತೆ ಜಾತಕ ಜೋಡಿಸುವುದೆಂದರೆ ನೂರರಲ್ಲಿ ಕೇವಲ 40ರಿಂದ 45 ಶೇಕಡಾ ಮಂದಿಗೆ ಮಾತ್ರ ಮದುವೆ ಯೋಗ, ಸಂಸಾರವನ್ನು ಶಾಂತಿಯುತವಾಗಿ ನಡೆಸಿಕೊಂಡು ಹೋಗುವ ಯೋಗ ಇರುತ್ತಿತ್ತು. ಉಳಿದಂತೆ ನೂರಕ್ಕೆ 55ರಿಂದ 60ರಷ್ಟು ಮಂದಿಗೆ ಹಿರಿಯರು, ದಲ್ಲಾಳಿಗಳು, ಇನ್ಯಾರೋ ಸಂಬಂಧಿಸಿದವರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಲ್ಪಡುತ್ತಿತ್ತು. ನಂತರ ಅವರ ಹಣೆಬರಹ, ನಾವಂತೂ ಮಾಡಿದ್ದೇವೆ ಎಂದು ಹಿರಿಯರು ಕೈತೊಳೆದುಕೊಳ್ಳುತ್ತಿದ್ದರು. ಇಂದು ಕಾಲ ಬದಲಾಗಿದೆ. ಸತಿಪತಿಯರಾದ ಮೇಲೆ ಬಹಳಷ್ಟು ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯ ಕಾಣುತ್ತಿವೆ. ಸಾಮಾನ್ಯವಾಗಿ ಜಾತಕ ಕುಂಡಲಿಯಲ್ಲಿ ಬಾಳಸಂಗಾತಿಯ ಮನೆಯ ಅಧಿಪತಿ ಅಂದರೆ ಜಾತಕದಲ್ಲಿನ ಏಳನೇ ಮನೆ ಅಧಿಪತಿಯು ಪ್ರತಿಯೊಬ್ಬರ ಜಾತಕದಲ್ಲಿಯೂ ಮಾರಕ ಶಕ್ತಿ ಪಡೆದಿರುತ್ತಾನೆ. ಈ ಮಾರಕ ಶಕ್ತಿಯು ವಿಕೃತ ಸ್ವರೂಪಕ್ಕೆ ಸಂಬಂಧಿಸಿದ ವಿಚಾರ ಹೆಚ್ಚು ಬಲ ಪಡೆದಾಗ ದಾಂಪತ್ಯ ಕುಸಿಯುವ ಮಟ್ಟಕ್ಕೆ ಹೋಗುತ್ತಿರುತ್ತದೆ. ಹಿಂದಿನ ಸಮಾಜ ಹೆಣ್ಣನ್ನು ಅಬಲೆ ಎಂದು ಕರೆಯಿತು. ಇಂದು ಅಬಲೆ ಎಂಬ ವಿಚಾರ ನಿಧಾನವಾಗಿ ತನ್ನ ಅರ್ಥದ ವ್ಯಾಪ್ತಿಯನ್ನು ಮೀರಿ, ಸ್ವತಂತ್ರವಾಗಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ವಿಚಾರಕ್ಕೆ ಕಾಲಿರಿಸಿದೆ. ಜಾತಕ ಕುಂಡಲಿಯಲ್ಲಿನ ಪ್ರೀತಿ, ಪ್ರೇಮದ, ಸತ್ಪತಿಗಳ ಸಂಬಂಧದ ಮಗ್ಗುಲುಗಳು ಹೊಸತೊಂದು ಆಯಾಮ ಸೃಷ್ಟಿಗೆ ಮುಂದಾಗಿವೆ. ಬದಲಾಗುತ್ತಿರುವ ಸಂಸ್ಕೃತಿಯ ಚೌಕಟ್ಟು ಸಂಸ್ಕಾರದ, ಉತ್ತಮ ಕುಟುಂಬ ವ್ಯವಸ್ತೆಯ ಬೇರುಗಳನ್ನು ಕಿತ್ತೆಸೆದಿದೆ. ಈಗಲೂ ಜಾತಕ ಕುಂಡಲಿಗಳ ಸಂಯೋಜನೆ ಬೇರೆ ಬೇರೆ ಅಂಶಗಳ ನೆಲೆಯಲ್ಲಿ ಸಂಭವಿಸುವಂತಾದರೆ ಮುರಿದು ಬೀಳುತ್ತಿರುವ ಸಂಸಾರದ, ಕುಟುಂಬ ವ್ಯವಸ್ಥೆಯನ್ನು ಸರಿಪಡಿಸಬಹುದು. ಸಾವಿರ ಸುಳ್ಳುಗಳನ್ನು ಹೇಳಿ ಮದುವೆ ಮಾಡಬೇಕಾಗಿಲ್ಲ. ಮನಸ್ಸುಗಳ ಹೊಂದಾಣಿಕೆ ಮಾಡಲು ಜನ್ಮಕುಂಡಲಿಗಳ ಜೋಡಣೆಯೇ ರಾಮಬಾಣ. ಆದರೆ ಸರಿಯಾಗಿ ಆಗಬೇಕು.

ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ?

ಜಾತಕದಲ್ಲಿ ವಿದೇಶಯೋಗ ತಿಳಿಯುವುದು ಹೇಗೆ? ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ? ವಿದೇಶಕ್ಕೆ ಹೋಗುವ ಆಸೆ ಯಾರಿಗೆ ಇಲ್ಲ. ಆದರೆ ಎಲ್ಲದಕ್ಕೂ ಯೋಗವಿರಬೇಕು ಎನ್ನುವುದು ಜ್ಯೋತಿಷ ಶಾಸ್ತ್ರದ ಖಚಿತ ಅಭಿಪ್ರಾಯ. ಹಾಗಾದರೆ ವಿದೇಶಯೋಗ ತಿಳಿವ ಬಗೆ ಹೇಗೆ? ಈಗಿನ ಪೀಳಿಗೆಯಲ್ಲಿ ಎಲ್ಲರಿಗೂ ತಮ್ಮ ಮಕ್ಕಳು ವಿದೇಶದಲ್ಲಿ ನೆಲೆಸಬೇಕು. ಅಲ್ಲಿಯೇ ಉದ್ಯೋಗ ಮಾಡಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವಾಸೆ. ಅವರಾಸೆ ಕೈಗೂಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜಾತಕದಲ್ಲಿನ ಗ್ರಹಗಳ ಸಂಬಂಧದಿಂದ ತಿಳಿಯುತ್ತದೆ. ಜಾತಕ ಕುಂಡಲಿಯ ಮೂರನೆಯ ಸ್ಥಾನದಿಂದ ಚಿಕ್ಕ ಪ್ರಯಾಣಗಳನ್ನು 9 ಮತ್ತು 12 ನೇ ಸ್ಥಾನದಿಂದ ದೂರದ ಪ್ರಯಾಣಗಳನ್ನು ಗುರುತಿಸಬಹುದು. ತೃತೀಯ ಭಾವ, ತೃತಿಹಯೇಶ ಮತ್ತು ಮಂಗಳನ ಯುತಿ ಲಗ್ನೇಶನೊಡನೆ ಇರುವುದರಿಂದ ಅಥವಾ ಸಮ ಸಪ್ತಕ ಯೋಗವಿದ್ದರೆ ವಿದೇಶ ಪ್ರವಾಸ ಮಾಡುವ ಯೋಗವಿರುತ್ತದೆ. ತೃತೀಯೇಶ ತೃತೀಯ ಭಾವದಲ್ಲಿ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ಇವರ ರಾಶಿಯಾದರೂ ತೃತೀಯ ಭಾವವಾಗಿರಬೇಕು. ಲಗ್ನದಲ್ಲಿ ತೃತೀಯೇಶ ಅಥವಾ ಮಂಗಳ ಅಥವಾ ಚಂದ್ರನಿರಬೇಕು. ತೃತೀಯ ಭಾವದಲ್ಲಿ ಮಂಗಳ ಸ್ಥಿತನಿರಬೇಕು. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೆ ವಿದೇಶ ಯಾತ್ರೆ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ ವಿದೇಶ ಯೋಗ ನಿಶ್ಚಿತ. ನವಮ-ದ್ವಾದಶ ಭಾವಗಳು ಚರರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರರಾಶಿಯಲ್ಲಿ ಸ್ಥಿತರಿದ್ದಾಗಲೂ ಯೋಗವಿರುತ್ತದೆ. ಹಾಗೆಯೇ ಲಗ್ನೇಶ ಮತ್ತು ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತಿಯಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೆ, ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋಣವಾಗಿ ಚರರಾಶಿಯಾಗಿದ್ದರೂ ವಿದೇಶಯೋಗ ಪ್ರಾಪ್ತವಾಗುತ್ತದೆ. ನಿಮ್ಮ ಜಾತಕದಲ್ಲಿ ವಿದೇಶ ಯೋಗ ಇದೆಯೋ ಇಲ್ಲವೋ? ಎಲ್ಲರಿಗೂ ಜೀವನದಲ್ಲಿ ಒಮ್ಮೆಯಾದರೂ ವಿದೇಶಕ್ಕೆ ಹೋಗುವಾಸೆ. ತಮಗೆ ಸಾಧ್ಯವಾಗದಿದ್ದರೆ ತಮ್ಮ ಮಕ್ಕಳನ್ನಾದರೂ ಕಳುಹಿಸುವ ಆಸೆ. ಆಸೆ, ನಿರೀಕ್ಷೆ ತಪ್ಪಲ್ಲ. ಆದರೆ ಜಾತಕದ ಫಲಾಫಲಗಳು ಹೇಳುವುದೇನು? ವಿದೇಶಕ್ಕೆ ಹೋಗಬೇಕು ಅಂದ್ರೆ ಜಾತಕ ಏಕೆ ನೋಡಬೇಕು. ಸುಮ್ಮನೆ ಹೋಗಿ ಯಾವುದಾದ್ರೂ ಟ್ರಾವಲ್‌ ಕಂಪನೀಲಿ ಟಿಕೆಟ್‌ ಬುಕ್‌ ಮಾಡಿದ್ರೆ ಆಯ್ತು. ಆರಾಮವಾಗಿ ಯೂರೋಪ್‌, ಏಷ್ಯಾ, ಸಿಂಗಪೂರ್‌ ಪ್ರವಾಸ ಮಾಡ್ಕೊಂಡು ಬರಬಹುದು... ಬದಲಾದ ಕಾಲಮಾನದಲ್ಲಿ ವಿದೇಶ ಪ್ರವಾಸ ಪಕ್ಕದಮನೆಗೆ ಹೋದಷ್ಟೇ ಸುಲಭವಾಗಿದೆ. ಪ್ರವಾಸ, ಮೋಜಿಗೆ, ಕಾರ್ಪೊರೇಟ್‌ ಮೀಟಿಂಗ್‌ ಅಥವಾ ಗೆಟ್‌ ಟುಗೆದರ್‌ ಅಂತ ವಿದೇಶ ಪ್ರವಾಸ ಮಾಡೋದು ಒಂದು ಕಡೆಯಾದರೆ ಹೆಚ್ಚಿನ ವ್ಯಾಸಂಗದ ನಿರೀಕ್ಷೆ ಇಟ್ಕೊಂಡಿರೋರು, ಕೈತುಂಬಾ ಸಂಪಾದಿಸಬೇಕು ಅಂತ ಆಸೆ ಇಟ್ಕೊಂಡಿರೋರು, ಈ ಜಂಜಾಟ ಬೇಡಪ್ಪಾ ಗ್ರೀನ್‌ಕಾರ್ಡ್‌ ಸಿಕ್ಕು ಅಲ್ಲೇ ಸೆಟ್ಲ್‌ ಆದ್ರೆ ಸಾಕು ಅಂತ ಬಯಸೋರು ಮತ್ತೊಂದು ಕಡೆ. ಆಸೆ, ನಿರೀಕ್ಷೆ, ಕನಸುಗಳಿಗೇನು ಕಡಿವಾಣವಿಲ್ಲ. ಹಾಗಂತ ಕನಸು ಕಾಣೋರೆಲ್ಲಾ ವಿದೇಶಕ್ಕೆ ಹೋಗಬೇಕು ಅಂದ್ಕೊಂಡ್ರು ಆಗೋಲ್ಲ. ಕೆಲವೊಮ್ಮೆ ಕೈಯಲ್ಲಿ ದುಡ್ಡಿದ್ದರೂ ತಿನ್ನೋಕೆ ಆಹಾರವಿಲ್ಲ ಅಂತಾರಲ್ಲ ಹಾಗೆ... ಹಾಗಾದರೆ ವಿದೇಶಯೋಗ ಇದೆಯೋ, ಇಲ್ಲವೋ ಅನ್ನೋ ವಿಷಯದಲ್ಲಿ ಜಾತಕ ಹೇಳೋದೇನು? ಜಾತಕದಲ್ಲಿ ತೃತೀಯ ಭಾವ ಅಂದರೆ ಮೂರನೆಯ ಸ್ಥಾನ ಸಮೀಪ ಸ್ಥಳದ ಪ್ರಯಾಣವನ್ನು ಸೂಚಿಸಿದರೆ, ಹನ್ನೆರಡನೆಯ ಮನೆ ದೂರದ ಅರ್ಥಾತ್‌ ವಿದೇಶ ಪ್ರಯಾಣವನ್ನು ಸಂಕೇತಿಸುತ್ತದೆ. ತೃತೀಯ ಭಾವ, ತೃತೀಯೇಶ ಮತ್ತು ಮಂಗಳನ ಯುತಿ ಲಗ್ನದ ಜೊತೆ ಇದ್ದಾಗ ವಿದೇಶ ಯೋಗವಿದೆ ಎಂದು ಹೇಳಬಹುದು. ತೃತೀಯೇಶ ತೃತೀಯ ಭಾವದಲ್ಲಿ ಮಂಗಳ ಅಥವಾ ಚಂದ್ರನಿದ್ದರೂ ಯೋಗವಿರುತ್ತದೆ. ನವಮೇಶ ನವಮ ಭಾವದಲ್ಲಿದ್ದು ಲಗ್ನೇಶ ಲಗ್ನದಲ್ಲೇ ಇದ್ದರೂ ವಿದೇಶ ಯೋಗ ಉಂಟಾಗುತ್ತದೆ. ಲಗ್ನೇಶ ನವಮದಲ್ಲೂ ನವಮೇಶ ಲಗ್ನದಲ್ಲಿದ್ದರೂ, ನವಮ - ದ್ವಾದಶ ಭಾವಗಳು ಚರ ರಾಶಿಯಾಗಿ ನವಮೇಶ ದ್ವಾದಶಾಧಿಪತಿ ಚರ ರಾಶಿಯಲ್ಲಿ ಸ್ಥಿತರಿದ್ದರೂ, ಚಂದ್ರ ಚರ ರಾಶಿಯಲ್ಲಿದ್ದು ಮತ್ತು ನವಮ - ದ್ವಾದಶ ಭಾವಗಳೊಡನೆ ಸಂಬಂಧ ಹೊಂದಿದ್ದರೂ ವಿದೇಶ ಯೋಗ ಉಂಟಾಗುತ್ತದೆ. ಲಗ್ನ ಚರರಾಶಿಯಾಗಿ ಲಗ್ನೇಶ ಕೂಡ ಚರರಾಶಿಯಲ್ಲಿ ಸ್ಥಿತನಾಗಿ ಮತ್ತು ಯಾವುದಾದರೂ ಒಂದು ಗ್ರಹ ಚರ ರಾಶಿಯಲ್ಲಿ ಸ್ಥಿತವಾಗಿ ಗ್ರಹದ ದೃಷ್ಟಿ ಲಗ್ನೇಶನ ಮೇಲಿದ್ದರೂ, ಲಗ್ನೇಶ ಅಷ್ಟಮ ಭಾವದಲ್ಲಿದ್ದರೆ ಮತ್ತು ಚತುರ್ಥ ನವಮ ಅಥವಾ ದ್ವಾದಶ ಭಾವದಲ್ಲಿ ರಾಹು ಅಥವಾ ಕೇತುವಿದ್ದರೂ ಜಾತಕನಿಗೆ ವಿದೇಶ ಯೋಗವಿರುತ್ತದೆ. ಜಾತಕನ ಉಚ್ಛ ರಾಶಿಯಲ್ಲಿ ಸ್ಥಿತ ದ್ವಾದಶೇಷನು ಅಷ್ಟಮ ಭಾವದಲ್ಲಿ ಚರರಾಶಿಯಲ್ಲಿ ಸ್ಥಿತನಿದ್ದರೆ, ಲಗ್ನೇಶ ಚತುರ್ಥೇಶ ಇಬ್ಬರೂ ದ್ವಾದಶ ಭಾವದಲ್ಲಿದ್ದರೆ, ತೃತೀಯ ಅಥವಾ ನವಮ ಭಾವದಲ್ಲಿ ರಾಹು ಸ್ಥಿತನಾಗಿದ್ದರೆ, ಲಗ್ನೇಶನ ಸ್ಥಿತನಿಂದ ದ್ವಾದಶ ಭಾವದ ಸ್ವಾಮಿ ಲಗ್ನಕ್ಕೆ ಕೇಂದ್ರ ತ್ರಿಕೋಣದಲ್ಲಿ ಸ್ಥಿತನಾಗಿದ್ದರೂ ಯೋಗವಿರುತ್ತದೆ. ಲಗ್ನಾಧಿಪತಿ, ಭಾಗ್ಯಾಧಿಪತಿ, ವ್ಯಯಾಧಿಪತಿ ಲಗ್ನಕ್ಕೆ ಚರರಾಶಿಯಲ್ಲಿ ಸ್ಥಿತನಾಗಿದ್ದರೆ, ಶುಕ್ರನು ಸ್ವಕ್ಷೇತ್ರ, ಉಚ್ಛಕ್ಷೇತ್ರದಲ್ಲಿದ್ದು ಅದು ಕೇಂದ್ರ ಅಥವಾ ತ್ರಿಕೋನವಾಗಿ ಚರರಾಶಿಯಾಗಿದ್ದರೂ ವಿದೇಶ ಯೋಗವಿರುತ್ತದೆ.

ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ

ಜನ್ಮಕುಂಡಲಿ ಆಧರಿಸಿ ಯಾರಿಗೆ ಯಾವ ಕೋರ್ಸ್ ಸೂಕ್ತ * ಜ್ಯೋತಿಷ ತತ್ತ್ವ ಸಿದ್ಧಾಂತಗಳನ್ನು ಅನುಸರಿಸಿ, ಗ್ರಹಗಳ ಯೋಗ, ಅವಯೋಗಗಳನ್ನು ಆಧರಿಸಿ ಒಬ್ಬ ವ್ಯಕ್ತಿಯ ವಿದ್ಯೆ- ವ್ಯಾಸಂಗ, ಉನ್ನತ ಶಿಕ್ಷಣ, ಸಂಶೋಧನೆ ಇತ್ಯಾದಿ ವಿಷಯಗಳನ್ನು ಅರಿಯಬಹುದು. ಯಾವುದೇ ವ್ಯಕ್ತಿಯ ಶಿಕ್ಷಣ, ಪಾಂಡಿತ್ಯ, ವಿದ್ವತ್‌ ವಿಚಾರಗಳನ್ನು ಆತನ ಜನ್ಮಕುಂಡಲಿಯ ದ್ವಿತೀಯ, ಚತುರ್ಥ, ಪಂಚಮ ಭಾವಗಳಿಂದ ವಿಮರ್ಶಿಸಲಾಗುತ್ತದೆ. ದ್ವಿತೀಯ ಭಾವದಿಂದ ವಾಣಿ ಅಥವಾ ವಾಕ್‌ ಮತ್ತು ಅಭಿವ್ಯಕ್ತ ಸಾಮರ್ಥ್ಯ‌ವನ್ನು ಅರಿಯಬಹುದು. ದ್ವಿತೀಯ ಭಾವವು ಜಾತಕನ ಪ್ರಾರಂಭಿಕ ವಿದ್ಯಾಭ್ಯಾಸದ ಪ್ರಗತಿ ಹಾಗೂ ಬುದ್ಧಿಮತ್ತೆಯ ದ್ಯೋತಕವೆನಿಸಿದೆ. ಚತುರ್ಥ ಭಾವವು ಗ್ರಹಣ ಶಕ್ತಿ, ವಿಶ್ವವಿದ್ಯಾಲಯ ಮಟ್ಟ ಹಾಗೂ ಪಂಚಮ ಭಾವ ಅದಕ್ಕೂ ಮುಂದಿನ ಜ್ಞಾನಪ್ರಾಪ್ತಿಯನ್ನು ಸೂಚಿಸುವ ಭಾವವಾಗಿದೆ. ಜೊತೆಗೆ ಅಧ್ಯಾತ್ಮ, ಅಂತರ್‌‍ಜ್ಞಾನಕ್ಕೂ ಇದು ಕಾರಣೀಭೂತವಾಗುತ್ತದೆ. ಚತುರ್ಥ ಭಾವ ಸುಖಸ್ಥಾನವಾಗಿದೆ. ಆದ್ದರಿಂದ ಜಾತಕನಿಗೆ ವಿದ್ಯಾರ್ಜನೆಯಿಂದ ಐಹಿಕ ಸುಖ ಹಾಗೂ ಖ್ಯಾತಿ ದೊರೆಯುತ್ತದೆ. ಚತುರ್ಥ ಸ್ಥಾನ ವಿದ್ಯಾಸ್ಥಾನವಾಗಿದೆ. ಇದರ ಭಾವಾಧಿಪತಿಯೂ ಇದರ ಭಾವಸ್ಥಿತ ಗ್ರಹನೂ ದಶಮಭಾವವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರ ಫಲ ಸ್ವರೂಪವಾಗಿ ಅದು ವೃತ್ತಿ ಅಥವಾ ಕರ್ಮದ ಗ್ರಹ ಚತುರ್ಥವನ್ನು ಸಂಪೂರ್ಣ ದೃಷ್ಟಿಯಿಂದ ನೋಡುವುದರಿಂದ ಶಿಕ್ಷಣದ ವಿಷಯ ಪ್ರಭಾವಿತವಾಗುತ್ತದೆ. ಆದ್ದರಿಂದ ವಿದ್ಯೆಯ ವಿಷಯವನ್ನು ಆಯ್ಕೆ ಮಾಡುವಾಗ ದಶಮಭಾವ ಸ್ಥಿತ ಗ್ರಹವನ್ನು ಪ್ರಗತಿ ಹಾಗೂ ವೃದ್ಧಿಗೆ ವಿದ್ಯಾಸ್ಥಾನಾಧಿಪತಿಯ ಸಹಕಾರ, ಕೃಪಾಗ್ರಹಗಳಿರುವುದು, ಆ ಗ್ರಹನಿಗೆ ಸ್ವಕ್ಷೇತ್ರವೆನಿಸುವುದು, ಮೂಲ ತ್ರಿಕೋಣ ಸ್ಥಿತಿ, ವರ್ಗೋತ್ತಮ ನವಾಂಶಸ್ಥಿತ ಗ್ರಹರು ಬಲಿಷ್ಠರೆನಿಸುತ್ತಾರೆ. ಅಂತಹ ಗ್ರಹಗಳು ಶುಭಸ್ಥಾನದಲ್ಲಿದ್ದರೆ ಶುಭಗ್ರಹದ ದೃಷ್ಟಿಗೆ ಒಳಪಟ್ಟರೆ, ಶುಭ ಫಲಗಳನ್ನು ನೀಡಲು ಸಮರ್ಥನಾಗಿರುತ್ತಾನೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜ್ಯೋತಿಷ್ಯದ ಮಾನದಂಡದ ಪ್ರಕಾರ ಮೇಷ, ವೃಶ್ಚಿಕ, ಮಕರ, ಕುಂಭ ಮತ್ತು ಕಟಕ ಲಗ್ನ ಜಾತಕರಿಗೆ ಕುಜಗ್ರಹ ಉಚ್ಛನಾಗಿದ್ದು ಸ್ವಗೃಹೀಯವಾಗಿ ಬಂದಲ್ಲಿ ಇಂಜಿನಿಯರಿಂಗ್‌ನ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ರವಿ ಯುತಿಯಲ್ಲಿ ಬಂದಲ್ಲಿ ಚಿಕಿತ್ಸಾ ಕ್ಷೇತ್ರ, ಕುಜ-ಬುಧ ಯುತಿ ಇದ್ದರೆ ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್ಸ್‌, ಕುಜ-ಚಂದ್ರ ಯುತಿ ಇದ್ದರೆ ಆರ್ಕಿಟೆಕ್ಚರ್‌, ಔಷಧಿ ತಯಾರಿಕೆ, ಕುಜ-ಶನಿ ಯುತಿ ಇದ್ದರೆ ಮೆಕ್ಯಾನಿಕಲ್‌, ಆಟೋಮೊಬೈಲ್‌ ಇಂಜಿನಿಯರಿಂಗ್‌ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಜನ್ಮ ಲಗ್ನ, ಕೇಂದ್ರ ತ್ರಿಕೋಣಗಳಲ್ಲಿ ರವಿ-ಶುಕ್ರ ಯುತಿ ಉಂಟಾದಲ್ಲಿ ವೈದ್ಯಕೀಯ ವ್ಯಾಸಂಗ ಉತ್ತಮವೆನಿಸುತ್ತದೆ. ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ ಮತ್ತು ಕುಂಭ ಲಗ್ನಗಳಲ್ಲಿ ಜನಿಸಿದವರು ವಾಣಿಜ್ಯ ಕ್ಷೇತ್ರದಲ್ಲಿ ಸಫಲರೆನಿಸುತ್ತಾರೆ. ಇದಕ್ಕೆ ಬುಧ, ಶುಕ್ರ, ಶನಿಗ್ರಹಗಳು ಬಲಿಷ್ಠರಾಗಿರಬೇಕು. ಈ ಗ್ರಹಗಳಿಗೆ ಪರಸ್ಪರ ಸಂಬಂಧ ಉಂಟಾದರೆ ಅಧಿಕ ಸಫಲತೆ ದೊರೆಯುತ್ತದೆ. ಗ್ರಹದೆಸೆ: ಯಾವ ಗ್ರಹದವರಿಗೆ ಯಾವ ಶಿಕ್ಷಣ ಸೂಕ್ತ *ಟಿ.ಆರ್‌.ವಿಜಯ ಕುಮಾರ್‌ ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು. ಜ್ಯೋತಿಷ್ಯವು ಸೂಚನಾತ್ಮಕ ವಿಜ್ಞಾನ (Astrology is Indicative Science) ಇದರಿಂದ ಜೀವನದ ಎಲ್ಲ ಆಗುಹೋಗುಗಳನ್ನು ತಿಳಿದುಕೊಂಡು, ಅದಕ್ಕೆ ತಕ್ಕಂತೆ ನಮ್ಮ ಜೀವನವನ್ನು ರೂಪಿಸಿಕೊಂಡಲ್ಲಿ ಉತ್ತಮವಾದ ಜೀವನವನ್ನು ನಡೆಸಬಹುದು. ಜೀವನದ ಪ್ರಮುಖ ವಿಷಯಗಳು ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ವೈವಾಹಿಕ ಜೀವನ, ಸಂತಾನ, ಸುಖ ಜೀವನವಾಗಿದ್ದು ಈ ಪೈಕಿ ವಿದ್ಯಾಭ್ಯಾಸವೂ ಒಂದು ಪ್ರಮುಖವಾದ ಅಂಶ. ವ್ಯಕ್ತಿಯು ಆತನ ಜಾತಕಕ್ಕೆ ಅನುಗ್ರಹಿಸಿದ ವಿದ್ಯಾಭ್ಯಾಸವನ್ನು ಮಾಡಿದರೆ, ವಿದ್ಯಾಭ್ಯಾಸ ಮಾಡಿದರೆ, ಸುಗಮವಾಗಿ ಸಾಗುತ್ತದೆ. ಇಲ್ಲವಾದರೆ ಎಡರು-ತೊಡರುಗಳನ್ನು ಅನುಭವಿಸಬೇಕಾಗುತ್ತದೆ. ಅನುಭವದಲ್ಲಿ ಕಂಡಂತೆ ಕೆಲವು ವಿದ್ಯಾರ್ಥಿಗಳು ತಮಗೆ ಇಷ್ಟಬಂದ ವಿಷಯವನ್ನು ಆರಿಸಿಕೊಂಡು, ನಂತರ ಅರ್ಧದಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸುವುದು ಅಥವಾ ಬೇರೆ ವಿಷಯಕ್ಕೆ ಬದಲಾವಣೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದ್ದರಿಂದ ಜ್ಯೋತಿಷ್ಯದ ಪ್ರಕಾರ ಸೂಚಿಸುವ ಶಿಕ್ಷಣವನ್ನು ಆರಿಸಿಕೊಂಡು ಮುಂದುವರಿಯುವುದು ಸೂಕ್ತ. ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿ ಹಂತದ ವಿದ್ಯಾಭ್ಯಾಸಕ್ಕೆ ವ್ಯಕ್ತಿಯ ಜಾತಕದ 4ನೇ ಭಾವ, ವಿದ್ಯಾಕಾರಕರಾದ ಬುಧ, ಗುರು ಮತ್ತು 4ನೇ ಭಾವಸ್ಥಿತ ಗ್ರಹರು ದಶಾಭುಕ್ತಿ ಹಾಗೂ ಇತರೆ ಅಂಶಗಳನ್ನು ಗಮನಿಸಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ದಶಾಭುಕ್ತಿ, ಚತುರ್ಥಾಧಿಪತಿ ಸ್ಥಿತಗ್ರಹ, ಕಾರಕರು ನಿರ್ಬಲ ಅಥವಾ ಅಶುಭರಾಗಿದ್ದಾಗ ಕೆಲವೊಂದು ಪರಿಹಾರಗಳನ್ನು ಆಚರಿಸಬೇಕಾಗುತ್ತದೆ ಮತ್ತು ರತ್ನಗಳನ್ನು ಸಹ ಧರಿಸಬೇಕಾಗುತ್ತದೆ. ಉದಾಹರಣೆಗೆ ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90 ಪಡೆದ ವಿದ್ಯಾರ್ಥಿ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸುವುದು ಅಥವಾ ಅನುತ್ತೀರ್ಣವಾಗುವುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ವಿದ್ಯಾಭ್ಯಾಸದ ವಿಷಯಗಳನ್ನು ಸೂಚಿಸುತ್ತವೆ. ರವಿ: ವೈದ್ಯಶಾಸ್ತ್ರ, ಐಎಎಸ್‌, ಕೆಎಎಸ್‌ ಇತ್ಯಾದಿ. ಚಂದ್ರ: ಮನಃಶಾಸ್ತ್ರ, ಆಯುರ್ವೇದ ವೈದ್ಯಶಾಸ್ತ್ರ, ಸಸ್ಯಶಾಸ್ತ್ರ ಇತ್ಯಾದಿ. ಕುಜ: ತಾಂತ್ರಿಕ ವಿದ್ಯೆ, ರಸಾಯನಶಾಸ್ತ್ರ, ಪಾಕಶಾಸ್ತ್ರ ಇತ್ಯಾದಿ. ಬುಧ: ವಾಣಿಜ್ಯಶಾಸ್ತ್ರ, ಸಂಪರ್ಕ ವಿಜ್ಞಾನ, ನರವಿಜ್ಞಾನ ಇತ್ಯಾದಿ. ಗುರು: ಹಣಕಾಸು ವಿದ್ಯೆ, ಕಾನೂನು, ಆಧ್ಯಾತ್ಮಿಕ ವಿದ್ಯೆ, ವೈದಿಕ ವಿದ್ಯೆ ಇತ್ಯಾದಿ. ಶುಕ್ರ: ಕಲೆ, ಕಾನೂನು, ಸಂಗೀತ, ವೃತ್ತ, ನಾಟಕ, ಪಾಕ ವಿದ್ಯೆ ಇತ್ಯಾದಿ. ಶನಿ: ಗಣಿ ವಿಜ್ಞಾನ, ಭೂವಿಜ್ಞಾನ, ವ್ಯವಸಾಯಶಾಸ್ತ್ರ ಇತ್ಯಾದಿ. ರಾಹು: ವೈದ್ಯ, ಸಂಶೋಧನೆ, ಖಗೋಳ ಇತ್ಯಾದಿ. ಕೇತು: ಆಧ್ಯಾತ್ಮಿಕ ವಿದ್ಯೆ, ಗಿಡಮೂಲಿಕೆ ಶಾಸ್ತ್ರ ಇತ್ಯಾದಿ ವೃಕ್ತಿಯ ಜಾತಕದ ಪ್ರಕಾರ ಯಾವ ಗ್ರಹ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದೆ ಎಂದು ತಿಳಿದು ಆ ಗ್ರಹ ಸೂಚಿಸುವ ವಿದ್ಯೆಗಳನ್ನು ಅಭ್ಯಾಸ ಮಾಡುವುದರಿಂದ, ವಿದ್ಯಾಭ್ಯಾಸವು ಸರಾಗವಾಗಿ ಸಾಗಿ ಉತ್ತಮ ಫಲಿತಾಂಶವನ್ನು ಕೊಡುವುದು. ವ್ಯಕ್ತಿಯ ಜಾತಕವು ಸೂಚಿಸುವ (ಅಷ್ಟಕ ವರ್ಗ ಪ್ರಕಾರ) ದಿಕ್ಕಿಗೆ ಮುಖ ಮಾಡಿ ಅಭ್ಯಾಸ ಮಾಡುವುದು ಶ್ರೇಯಸ್ಕರ. ಸಾಮಾನ್ಯವಾಗಿ ಅಭ್ಯಾಸದ ದಿಕ್ಕು ಉತ್ತರ ಅಥವಾ ಪೂರ್ವವೆಂದು ಪರಿಗಣಿಸುತ್ತಾರೆ. ಆದರೆ ಕೆಲವು ಬಾರಿ ವ್ಯಕ್ತಿಯ ವೈಯಕ್ತಿಕ ಶುಭ ದಿನಕ್ಕೆ ದಕ್ಷಿಣ ಅಥವಾ ಪಶ್ಚಿಮವು ಆಗಿರುತ್ತದೆ. ಆದ್ದರಿಂದ ವೈಯಕ್ತಿಕ ಶುಭ ದಿಕ್ಕನ್ನು ಅಳವಡಿಸಿಕೊಳ್ಳುವುದು ಶುಭಕರ. ವಿದ್ಯಾಭ್ಯಾಸ ಸ್ವದೇಶದಲ್ಲೋ ಅಥವಾ ವಿದೇಶದಲ್ಲೋ ಎನ್ನುವ ಸಂಗತಿಯನ್ನು ಸಹ ಜ್ಯೋತಿಷಶಾಸ್ತ್ರ ತಿಳಿಸುತ್ತದೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಮುಗಿಸಿ ಪಿಯುಸಿ, ಡಿಪ್ಲೊಮಾ, ಜೆಒಸಿ ಇತರೆ ಕೋರ್ಸ್‌ಗಳಿಗೆ ಹೋಗುವ ಮೊದಲು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗವನ್ನು ಜ್ಯೋತಿಷಶಾಸ್ತ್ರ ಪ್ರಕಾರ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಯಾವುದೇ ವಿಷಯದಲ್ಲಾದರೂ ಜ್ಯೋತಿಷಶಾಸ್ತ್ರದ ಸೂಚನೆಯಂತೆ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಾದ ಕ್ರಮ. ಕರಿಯರ್‌ ಗೈಡ್‌ ರವಿ : ರಾಜನೀತಿ ಶಾಸ್ತ್ರ, ಪ್ರಶಾಸನ, ರಾಜಭಾಷೆ, ಚಿಕಿತ್ಸಾ, ಶರೀರ ವಿಜ್ಞಾನ. ಚಂದ್ರ : ಮನೋವಿಜ್ಞಾನ, ವನಸ್ಪತಿ ವಿಜ್ಞಾನ, ನಿಸರ್ಗ ಶಾಸ್ತ್ರ, ಹೋಟೆಲ್‌ ಮ್ಯಾನೇಜ್‌ಮೆಂಟ್‌, ಪತ್ರಿಕೋದ್ಯಮ. ಕುಜ : ಭೂಗೋಳ ಶಾಸ್ತ್ರ, ಖನಿಜ ಶಾಸ್ತ್ರ, ಇತಿಹಾಸ, ಇಂಜಿನಿಯರಿಂಗ್‌, ಐಪಿಎಸ್‌, ಆರ್ಕಿಟೆಕ್ಚರ್‌. ಬುಧ : ಗಣಿತಶಾಸ್ತ್ರ, ವ್ಯಾಕರಣ, ಅಕೌಂಟೆನ್ಸಿ, ಸಿ.ಎ., ಸಂಖ್ಯಾಶಾಸ್ತ್ರ. ಗುರು : ಅರ್ಥಶಾಸ್ತ್ರ, ಸಾಹಿತ್ಯ, ಉಚ್ಛ ಶಿಕ್ಷಣಗಳಾದ ಎಂ.ಲಿಟ್‌, ಡಿ.ಲಿಟ್‌, ಪಿಎಚ್‌ಡಿ. ಶುಕ್ಲ : ಲಲಿತಕಲೆ, ಫ್ಯಾಷನ್‌ ಡಿಸೈನಿಂಗ್‌, ಬ್ಯೂಟೀಷಿಯನ್‌, ಸಾಹಿತ್ಯ. ಶನಿ :ಯಂತ್ರಶಾಸ್ತ್ರ, ಸಿವಿಲ್‌ ಇಂಜಿನಿಯರಿಂಗ್‌, ಮುದ್ರಣಾಲಯ ಜ್ಞಾನ. ರಾಹು : ಕಂಪ್ಯೂಟರ್‌ ವಿಜ್ಞಾನ, ತರ್ಕಶಾಸ್ತ್ರ, ಹಿಪ್ನಾಟಿಸಂ, ಮೆಸ್ಮರಿಸಂ. ಕೇತು : ಅಧ್ಯಾತ್ಮ, ಯಂತ್ರ-ಮಂತ್ರ-ತಂತ್ರ, ವೈಜ್ಞಾನಿಕ ಸಂಶೋಧನೆ. ಕುಂಡಲಿಯಲ್ಲಿದೆ ವಿದ್ಯಾಭ್ಯಾಸ ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಾಗ ಮಕ್ಕಳಿಗೆ ಯಾವ ವಿಭಾಗದ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಬೇಕೆಂಬ ಚಿಂತೆ. ಇತ್ತೀಚೆಗಂತೂ ಕಲಿಕೆಗೆ ಸಾಕಷ್ಟು ಕೋರ್ಸ್‌ಗಳು ಕೂಡ ಲಭ್ಯ ಇವೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅವರವರ ರಾಶಿ ಪ್ರಕಾರ ವಿದ್ಯಾಭ್ಯಾಸವನ್ನು ಆಯ್ಕೆ ಮಾಡಿಕೊಂಡು ಮುಂದುವರಿದರೆ ಆ ವಿದ್ಯೆ ಆತನಿಗೆ ಅಥವಾ ಆಕೆಗೆ ಹೆಚ್ಚಿನ ಫಲಕಾರಿ ಕೊಡುತ್ತವೆ ಎಂದು ಒಂಬತ್ತು ಗ್ರಹಗಳಿಂದ ಹಾಗೂ ಗ್ರಹಕ್ಕೆ ತಕ್ಕಂತೆ ಗುರುತಿಸಬಹುದು. ಯಾವ ರಾಶಿಗೆ ಯಾವ ಕೋರ್ಸ್‌ ಸೂಕ್ತ ಎಂಬ ವಿವರ ಇಲ್ಲಿದೆ. ಮೇಷ: ಈ ರಾಶಿಯ ಅಧಿಪತಿ ಕುಜ. ಇದು ಅಗ್ನಿತತ್ವ ರಾಶಿ. ಈ ರಾಶಿಯವರು ಭೂಗರ್ಭಶಾಸ, ಖಗೋಳಶಾಸ, ಕಂಪ್ಯೂಟರ್‌, ಬಣ್ಣಗಳ ತರಬೇತಿ, ಇತಿಹಾಸ ವಿಷಯವನ್ನು ಆರಿಸಿಕೊಳ್ಳಬಹುದು. ವೃಷಭ:ಈ ರಾಶಿಯ ಅಧಿಪತಿ ಶುಕ್ರ. ಇದು ಭೂತತ್ವ ರಾಶಿ. ಈ ರಾಶಿಯವರು ಫ್ಯಾಷನ್‌ ಡಿಸೈನ್‌ನಿಂಗ್‌, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌, ಇಂಟೀರಿಯರ್‌ ಡಿಸೈನಿಂಗ್‌, ಡಿಪ್ಲೊಮಾ, ಕಾಲ್‌ಸೆಂಟರ್‌, ಜರ್ನಲಿಸಂ, ವಿಜ್ಞಾನ (ಸಸ್ಯ) ವಿಭಾಗ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಮಿಥುನ: ಈ ರಾಶಿಯ ಅಧಿಪತಿ ಬುಧ. ಇದು ವಾಯುತತ್ವ ರಾಶಿ. ಲೆಕ್ಕಪತ್ರಗಳ ಬಗ್ಗೆ, ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌, ಎಂಕಾಮ್‌, ಬಿಎಡ್‌, ಜರ್ನಲಿಸಂ, ಗಗನಸಖಿ, ವಿಮಾನಯಾನ ವಿಭಾಗವನ್ನು ಆರಿಸಿಕೊಳ್ಳಬಹುದು. ಕಟಕ:ಈ ರಾಶಿಯ ಅಧಿಪತಿ ಚಂದ್ರ. ಇದು ಜಲತತ್ವ ರಾಶಿ. ಸಮುದ್ರಯಾನ ತರಬೇತಿ, ಜಲ ಸಂಶೋಧನೆ, ಫ್ಯಾಷನ್‌ ಡಿಸೈನರ್‌, ವಿಜ್ಞಾನದ ವಿಭಾಗ, ಟಿಸಿಎಚ್‌, ಬಿಎಡ್‌, ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಸಿಂಹ:ಈ ರಾಶಿಯ ಅಧಿಪತಿ ರವಿ ಗ್ರಹ. ಇದು ಅಗ್ನಿತತ್ವ ರಾಶಿ. ರಾಜಕೀಯಶಾಸ, ಗಣಕಶಾಸ, ಸಿನಿಮಾ ರಂಗ, ಖಗೋಳಶಾಸ, ಮಾಹಿತಿ ತಂತ್ರಜ್ಞಾನ, ವೃತ್ತಿಪರ ಕೋರ್ಸ್‌, ಪಬ್ಲಿಕ್‌ ರಿಲೇಷನ್‌ ಮ್ಯಾನೇಜ್‌ಮೆಂಟ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಕನ್ಯಾ:ಈ ರಾಶಿಯ ಅಧಿಪತಿ ಬುಧ. ಇದು ಭೂತತ್ವ ರಾಶಿ. ವಾದ ವಿವಾದ ತರಬೇತಿ, ಭೌತಶಾಸ, ಸಂಶೋಧನೆ, ನಾಟ್ಯ, ಚಲನಚಿತ್ರ, ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌, ಬಿಕಾಮ್‌, ಸಿಎ, ಸಾಫ್ಟ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ತುಲಾ:ಈ ರಾಶಿಯ ಅಧಿಪತಿ ಶುಕ್ರ. ಇದು ವಾಯುತತ್ವ ರಾಶಿ. ಹೋಟೆಲ್‌ ಮ್ಯಾನೇಜ್‌ಮೆಂಟ್‌, ಗಣಕಶಾಸ, ಕಲಾರಂಗ, ಚಿತ್ರಕಲೆ, ಸಸ್ಯ ವಿಜ್ಞಾನ, ಮಲ್ಟಿ ಮೀಡಿಯಾ ಕೋರ್ಸ್‌, ಗ್ರಾಫಿಕ್‌ ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ವೃಶ್ಚಿಕ:ಈ ರಾಶಿಯ ಅಧಿಪತಿ ಕುಜ. ಇದು ಜಲತತ್ವ ರಾಶಿ. ಆರ್ಕಿಟೆಕ್‌, ರಸಾಯನಶಾಸ, ರಾಜಕೀಯ ಸಂಬಂಧ ವಿದ್ಯೆ, ಖನಿಜಶಾಸ, ಕಾಲ್‌ಸೆಂಟರ್‌, ವಿದೇಶಿ ಭಾಷೆ ಕಲಿಕೆ, ಹಾರ್ಡ್‌ವೇರ್‌ ವಿಭಾಗವನ್ನು ಆರಿಸಿಕೊಳ್ಳಬಹುದು. ಧನಸ್ಸು:ಈ ರಾಶಿಯ ಅಧಿಪತಿ ಗುರು. ಇದು ಅಗ್ನಿತತ್ವ ರಾಶಿ. ಉಪನ್ಯಾಸ, ಜ್ಯೋತಿಷ, ಮಂತ್ರಶಾಸ, ಗಣಿತಶಾಸ, ತಾಂತ್ರಿಕ ವಿದ್ಯೆ, ವಾಯುಯಾನ, ಸೈನಿಕ ವಿಭಾಗ, ಸಾಫ್ಟ್‌ವೇರ್‌ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮಕರ:ಈ ರಾಶಿಯ ಅಧಿಪತಿ ಶನಿ. ಇದು ಭೂತತ್ವ ರಾಶಿ. ರಹಸ್ಯ ವಿದ್ಯೆ, ವಾಹನ ವಿದ್ಯೆ, ಖಗೋಳಶಾಸ, ರಾಸಾಯನಿಕ, ಮಲ್ಟಿ ಮೀಡಿಯಾ ಕೋರ್ಸ್‌, ಕೈಗಾರಿಕಾ ತರಬೇತಿ, ಚರ್ಮಕ್ಕೆ ಸಂಬಂಧಪಟ್ಟ ವಿದ್ಯೆ, ವೈದ್ಯಕೀಯ ವಿಭಾಗವನ್ನು ಆರಿಸಿಕೊಳ್ಳಬಹುದು. ಕುಂಭ:ಈ ರಾಶಿಯ ಅಧಿಪತಿ ಶನಿ. ಇದು ವಾಯುತತ್ವ ರಾಶಿ. ತರ್ಕಶಾಸ, ಜರ್ನಲಿಸಂ, ಲೈಬ್ರರಿಯನ್‌, ಸೈನಿಕ ವಿಭಾಗ, ಕಲಾ ವಿಭಾಗ, ಸಂಶೋಧನೆ, ಶಿಕ್ಷಣ ವಿದ್ಯೆ ವಿಭಾಗವನ್ನು ಆರಿಸಿಕೊಳ್ಳಬಹುದು. ಮೀನ:ಈ ರಾಶಿಯ ಅಧಿಪತಿ ಗುರು. ಇದು ಜಲತತ್ವ ರಾಶಿ. ವಾಯುಯಾನ, ಉಪನ್ಯಾಸ, ಪಿ.ಟಿ ಟೀಚರ್‌, ಸಿನಿಮಾ ರಂಗ, ಹೋಟೆಲ್‌ ಮ್ಯಾನೇಜ್‌ಮೆಂಟ್‌, ಮೆಡಿಕಲ್‌, ಎಂಜಿನಿಯರಿಂಗ್‌, ಸಾಫ್ಟ್‌ವೇರ್‌, ಈವೆಂಟ್‌ ಮ್ಯಾನೇಜ್‌ಮೆಂಟ್‌, ಡಿಪ್ಲೊಮಾ, ಜರ್ನಲಿಸಂ ಉಪನ್ಯಾಸ, ವಿದೇಶಿ ಭಾಷೆ ಕಲಿಕೆ, ಡಿಸೈನರ್‌ ವಿಭಾಗವನ್ನು ಆರಿಸಿಕೊಳ್ಳಬಹುದು.

Wednesday, 3 October 2018

ಗರುಡ ಪುರಾಣ – ಅಧ್ಯಾಯ 01 – ಭಾಗ 03

ಗರುಡ ಪುರಾಣ – ಅಧ್ಯಾಯ 01 – ಭಾಗ 03 ಸತ್ಸಂಗ ಬಯಸದ, ದೈವೀ ಸಂಪತ್ತಿಲ್ಲಿ ಆಸಕ್ತಿಯಿಲ್ಲದ್ದ, ದುಷ್ಟರ ಸಹವಾಸಲ್ಲಿಪ್ಪ, ಆಶಾಮೋಹಕಾಮಭೋಗಾಸಕ್ತಿಲಿ ಜೀವನ ನಡೆಶುವ ಜೀವಿ, ಪೂರ್ವಕೃತಕರ್ಮದ ಫಲವ ಅನುಭವಿಸ್ಯೊಂಡು ಇಪ್ಪ ಒಂದು ಹಂತಲ್ಲಿ ಯಾವುದೋ ಆಧಿವ್ಯಾಧಿ ರೋಗಕ್ಕೆ ಬಲಿಯಾಗಿ ಹಸೆ ಹಿಡುದು, ಯಮಪಾಶ ಅವನ ಮೇಲೆ ಬಿದ್ದು, ವಿಲಪಿಸುವ ಬಂಧುಜನರ ನಡುಕೆ ತುಚ್ಛೀಕಾರ ದೃಷ್ಟಿಗೆ ತುತ್ತಾಗಿ, ವೇದನೆಂದ ನರಳಿಯೊಂಡು, ಬಾಯಿಲಿ ಜೊಲ್ಲು ಹರುಸಿ, ದೊಂಡೆಲಿ ಕಫಗಟ್ಟಿ, ಶ್ವಾಸೋಚ್ಛಾಸಕ್ಕೇ ಕಷ್ಟ ಪಟ್ಟುಗೊಂಡಿಪ್ಪಗ, ದಿವ್ಯದೃಷ್ಟಿ ಒಂದರಿ ಗೋಚರಿಸಿ, ಏಕಕಾಲಕ್ಕೆ ಇಹಪರ ಲೋಕವ ನೋಡಿ ಬೆರಗಾಗಿ, ಮಾತು ಬಾರದ್ದೆ, ಅಕೇರಿಗೆ ಅಧೋದ್ವಾರಲ್ಲಿ ಪ್ರಾಣವಾಯು ಹೋವ್ತು, ಜೀವಿ ಆ ಶರೀರವ ಬಿಟ್ಟು ಹೆರ ಬತ್ತ° ಹೇದು ಕಳುದ ವಾರದ ಭಾಗಲ್ಲಿ ಓದಿದ್ದದು. ಮುಂದೆ- ಗರುಡ ಪುರಾಣ – ಅಧ್ಯಾಯ 01 – ಭಾಗ 03 ಯಮದೂತೌ ತದಾ ಪ್ರಾಪ್ತೌ ಭೀಮೌ ಸರಭಸೇಕ್ಷಣೌ ।images6 ಪಾಶದಂಡಧರೌ ನಗ್ನೌ ದಂತೈಃ ಕತಕತಾಯತೌ ॥೩೦॥ ಅಂಬಗ ಭಯಂಕರ ಸ್ವರೂಪರಾದ ತೀಕ್ಷ್ಣವಾದ ಕಣ್ಣುಗಳಿಪ್ಪ, ಪಾಶ ಮತ್ತೆ ದಂಡವ ಧರಿಸಿಪ್ಪ ನಗ್ನರಾದ, ಹಲ್ಲುಗಳ ಕಟಕಟನೆ ಕಚ್ಚಿಗೊಂಡಿಪ್ಪ ಇಬ್ರು ಯಮದೂತರುಗೊ ಹತ್ರೆ ಬತ್ತವು. ಊರ್ಧ್ವಕೇಶೌ ಕಾಕಕೃಷ್ಟೌ ವಕ್ರತುಂಡೌ ನಖಾಯುಧೌ । ಸ ದೃಷ್ಟ್ವಾ ತ್ರಸ್ತಹೃದಯಃ ಶಕೃನ್ಮೂತ್ರಂ ವಿಮುಂಚತಿ ॥೩೧॥ ಕೇಶವ ಮೇಗಂತಾಗಿ ನೆಗ್ಗಿ ಕಟ್ಟಿಗೊಂಡಿಪ್ಪ, ಕಾಕೆ ಕಪ್ಪು ಬಣ್ಣದವರಾದ, ವಕ್ರಮೋರೆಯ, ಉಗುರುಗಳನ್ನೇ ಆಯುಧವಾಗಿರಿಸಿಪ್ಪ ಯಮದೂತರ ನೋಡಿ ಅಂವ° ಹೃದಯಂದ ಹೆದರಿ ಮಲಮೂತ್ರ ವಿಸರ್ಜಿಸುತ್ತ°. ಅಂಗುಷ್ಟಮಾತ್ರಃ ಪುರುಷೋ ಹಾಹಾಕುರ್ವನ್ಕಲೇವರಾತ್ । ತದೈವ ಗೃಹ್ಯತೇ ದೂತೈರ್ಯಾಮ್ಯೈ ಪಶ್ಯನ್ಸ್ವಕಂ ಗೃಹಮ್ ॥೩೨॥ ಹಾಹಾಕಾರ ಮಾಡುತ್ತಿಪ್ಪ, ಹೆಬ್ಬೆರಳಗಾತ್ರದ ಪುರುಷ°, ತನ್ನ ಸ್ಥೂಲದೇಹವ ನೋಡುತ್ತಿಪ್ಪಗಳೇ ಯಮದೂತರಿಂದ ಆ ದೇಹಂದ ಎಳೆಯಲ್ಪಡುತ್ತ°. ಯಾತನಾದೇಹ ಆವೃತ್ಯ ಪಾಶೈರ್ಬದ್ಧ್ವಾ ಗಲೇಬಲಾತ್ । ನಯತೋ ದೀರ್ಘಮಧ್ವಾನಂ ದಂಡ್ಯಂ ರಾಜಭಟಾ ಯಥಾ ॥೩೩॥ ಯಾತನಾದೇಹಂದ ಒಡಗೂಡಿದ ಅವನ ಕೊರಳ ಪಾಶಂದ ಬಲವಾಗಿ ಬಂಧಿಸಿ, ರಾಜಭಟರುಗೊ ಅಪರಾಧಿಯ ಎಳಕ್ಕೊಂಡು ಹೋವ್ತಾಂಗೆ ಯಮದೂತರು ದೀರ್ಘವಾದ ಮಾರ್ಗಲ್ಲಿ ಎಳಕ್ಕೊಂಡು ಹೋವ್ತವು. ತಸ್ಯೈವಂ ನೀಯಮಾನಸ್ಯ ದೂತಾಃ ಸತರ್ಜಯಂತಿ ಚ । ಪ್ರವದಂತಿ ಭಯಂ ತೀವ್ರಂ ನರಕಾಣಾಂ ಪುನಃ ಪುನಃ ॥೩೪॥ ಈ ರೀತಿ ಕರಕ್ಕೊಂಡು ಹೋಪಗ ಯಮದೂತರುಗೊ ಅವನ ಹೆದರುಸುತ್ತವು ಹಾಂಗೂ ಹೆದರಿಕೆಯಪ್ಪ ನರಕದ ವರ್ಣನೆಯ ಪುನಃ ಪುನಃ ಮಾಡುತ್ತವು. ಶೀಘ್ರಂ ಪ್ರಚಲ ದುಷ್ಟಾತ್ಮಾನ್ಯಾಸ್ಯಸಿ ತ್ವಂ ಯಮಾಲಯಮ್ । ಕುಂಭೀಪಾಕಾದಿ ನರಕಾಂಸ್ತ್ವಾಂ ನಯಾವಾದ್ಯ ಮಾ ಚಿರಮ್ ॥೩೫॥ “ನೀನು ದುಷ್ಟ°, ಬೇಗ ನೆಡೆ, ಈಗ ನೀನು ಯಮನಾಲಯಕ್ಕೆ ಹೋವ್ತಾ ಇದ್ದೆ. ಕುಂಭೀಪಾಕ ಮೊದಲಾದ ನರಕಂಗೊಕ್ಕೆ ಈಗ ನಿನ್ನ ಕರಕ್ಕೊಂಡು ಹೋವ್ತೆಯೋ°. ತಡವು ಮಾಡೆಡ ಬೇಗ ನಡೆ” ಏವಂ ವಾಚಸ್ತದಾ ಶೃಣ್ವನ್ಬಂಧೂನಾಂ ರುದಿತಂ ತಥಾ । ಉಚ್ಚೈರ್ಹಾಹೇತಿ ವಿಲಪಂಸ್ತಾಡ್ಯತೇ ಯಮಕಿಂಕರೈಃ ॥೩೬॥ ಈ ನಮೂನೆಯ ಮಾತುಗಳನ್ನೂ ಬಂಧುಗಳ ರೋದನವನ್ನೂ ಕೇಳಿಗೊಂಡು, ಗಟ್ಟಿ ಸ್ವರಲ್ಲಿ ಹಾಹಾಕಾರ ಮಾಡ್ಯೊಂಡು ಕೂಗ್ಯೋಂಡಿಪ್ಪಗ ಯಮಕಿಂಕರುಗಳಿಂದ ಜೆಪ್ಪಲ್ಪಡುತ್ತ°. ತಯೋರ್ನಿರ್ಭಿನ್ನಹೃದಯಸ್ತರ್ಜನೈರ್ಜಾತವೇಪಥುಃ । ಪಥಿ ಶ್ವಭಿರ್ಭಕ್ಷ್ಯಮಾಣ ಆರ್ತೋsಘಂ ಸ್ವಮನುಸ್ಮರನ್ ॥೩೭॥ ಹೆದರಿಕೆಂದ ವಿಕೀರ್ಣ ಹೃದಯನಾಗಿ ಹೋಗ್ಯೊಂಡಿಪ್ಪಗ ಮಾರ್ಗಲ್ಲಿ ನಾಯಿಗಳಿಂದ ತಿನ್ನಲ್ಪಡುತ್ತ ಆರ್ತನಾಗಿ ತನ್ನ ಪಾಪಂಗಳ ಸ್ಮರಿಸಿಗೊಂಡು ಮುಂದೆ ಹೋವ್ತ°. ಕ್ಷುತ್ತೃಟ್ ಪರೀತೋsರ್ಕದವಾನಲಾನಿಲೈಃ ಸಂತಪ್ಯಮಾನಃ ಪಥಿ ತಪ್ತವಾಲುಕೇ । ಕೃಚ್ಛ್ರೇಣ ಪೃಷ್ಠೇ ಕಶಯಾ ಚ ತಾಡಿತಶ್ಚಲತ್ಯಶಕ್ತೋsಪಿ ನಿರಾಶ್ರಮೋದಕೇ ॥೩೮॥ ಹಶು ಆಸರಂದ ಕಂಗಾಲಾಗಿ, ಸುಡುವ ಸೂರ್ಯ°, ಕಾಡ್ಗಿಚ್ಚು, ಬೆಶಿಗಾಳಿಂದ ಬೆಂದುಗೊಂಡು, ಬೆನ್ನಮೇಗೆ ಬೀಳುವ ಛಾಟಿಯೇಟುಗಳಿಂದ ಕಡುನೊಂದು, ನೀರು ನೆರಳಿಲ್ಲದೆ, ಕಾದ ಹೊಯಿಗೆ ಮಾರ್ಗಲ್ಲಿ ಅಂವ° ನಿತ್ರಾಣಿಯಾದರೂ ಪ್ರಯಾಸಂದ ನಡೆತ್ತ°. ತತ್ರ ತತ್ರ ಪತನ್ ನಿಶ್ರಾಂತೋ ಮೂರ್ಛಿತಃ ಪುನರುತ್ಥಿತಃ । ಯಥಾ ಪಾಪೀಯಸಾ ನೀತಸ್ತಮಸಾ ಯಮಸಾದನಂ ॥೩೯॥ ಆಯಾಸಂದ ಅಲ್ಲಲ್ಲಿ ಮೂರ್ಛಿತನಾಗಿ ಬಿದ್ದುಗೊಂಡು ಕಷ್ಟಪಟ್ಟುಗೊಂಡು ಎದ್ದುಗೊಂಡು ನಡವ ಅವನ ಈ ರೀತಿಯಾಗಿ ಪಾಪಿಯಾದವನ ಕಸ್ತಲೆಯ ದಾರಿಲಿ ಯಮನ ಮನಗೆ ಕರೆದೊಯ್ಯಲಾವ್ತು°. ತ್ರಿಭಿರ್ಮುಹೂರ್ತೈರ್ದ್ವಾಭ್ಯಾಂ ವಾ ನೀಯತೇ ತತ್ರ ಮಾನವಃ । ಪ್ರದರ್ಶಯಂತಿ ದೂತಾಸ್ತಾ ಘೋರಾ ನರಕಯಾತನಾಃ ॥೪೦॥ ಆ ಜೀವಿಯ (ಮನುಷ್ಯನ) ಎರಡು ವಾ ಮೂರು ಮುಹೂರ್ತಲ್ಲಿ (ಒಂದುವರೆ ಯಾ ಎರಡು ಕಾಲು ಗಂಟೆಲಿ) ಕರಕ್ಕೊಂಡು ಹೋವ್ತವು. ಅಲ್ಲಿ ಘೋರನರಕ ಯಾತನೆಯ ಅವಂಗೆ ಯಮದೂತರುಗೊ ತೋರುಸುತ್ತವು. (1ಮುಹೂರ್ತ = 45 ನಿಮಿಷ) ಮುಹೂರ್ತಮಾತ್ರಾತ್ತ್ವರಿತಂ ಯಮಂ ವೀಕ್ಷ್ಯಭಯಂ ಪುಮಾನ್ । ಯಮಾಜ್ಞಯಾ ಸಮಂ ದೂತೈಃ ಪುನರಾಯಾತಿ ಖೇಚರಃ ॥೪೧॥ ಕೇವಲ ಒಂದು ಮುಹೂರ್ತಲ್ಲಿ ಬೇಗಂದ ಯಮನನ್ನೂ, ಭಯಪ್ರದವಾದ ಯಾತನೆಯನ್ನೂ ನೋಡಿದ ಆ ಜೀವಿ (ಮನುಷ್ಯ) ಯಮನ ಆಜ್ಞಾನುಸಾರವಾಗಿ ದೂತರಿಂದೊಡಗೂಡಿ ಆಕಾಶಮಾರ್ಗಲ್ಲಿ ಹಿಂತುರುಗುತ್ತ°. ಆಗಮ್ಯ ವಾಸನಾಬದ್ಧೋ ದೇಹಮಿಚ್ಛನ್ಯಮಾನುಗೈಃ । ಧೃತಃ ಪಾಶೇನ ರುದತಿ ಕ್ಷುತ್ತೃಡ್ಭ್ಯಾಂ ಪರಿಪೀಡಿತಃ ॥೪೨॥ ಬಂದಪ್ಪದ್ದೇ ತನ್ನ ಸ್ಥೂಲದೇಹವ ಆಶಿಸಿಗೊಂಡು ಆದರೆ ಯಮನ ಪಾಶಂದ ಹಿಂದೆಳೆಯಲ್ಪಟ್ಟು ಹಶು ಆಸರು ಪೀಡಿತನಾಗಿ ಕೂಗುತ್ತ°. ಭುಂಕ್ತೇ ಪಿಂಡಂ ಸುತೈರ್ದತ್ತಂ ದಾನಂ ಚಾತುರಕಾಲಿಕಂ । ತಥಾಪಿ ನಾಸ್ತಿ ಕಸ್ತಾರ್ಕ್ಷ್ಯತೃಪ್ತಿಂ ಯಾತಿ ನ ಪಾತಕೀ ॥೪೩॥ ತನ್ನ ಮಕ್ಕಳಿಂದ ಕೊಡಲ್ಪಟ್ಟ ಪಿಂಡವನ್ನೂ, ದಾನವನ್ನೂ ತಿಂತ°. ಅಂದರೂ ನಾಸ್ತೀಕನಾದ ಆ ಪಾಪಿ ಅದರಿಂದ ತೃಪ್ತಿ ಹೊಂದುತ್ತನಿಲ್ಲೆ. ಪಾಪಿನಾಂ ನೋಪತಿಷ್ಠಂತಿ ದಾನಂ ಶ್ರಾದ್ಧಂ ಜಲಾಂಜಲಿಃ । ಅತಃ ಕ್ಷುದ್ವ್ಯಾಕುಲಾ ಯಾಂತಿ ಪಿಂಡದಾನಭುಜೋsಪಿ ತೇ ॥೪೪॥ ಪಾಪಿಗೊಕ್ಕೆ ದಾನ, ಶ್ರಾದ್ಧ, ಜಲಾಂಜಲಿಗಳಿಂದ ತೃಪ್ತಿಯುಂಟಾವ್ತಿಲ್ಲೆ. ಹಾಂಗಾಗಿ ಪಿಂಡವ ಭುಂಜಿಸಿರೂ ಅವ್ವು ಹಶುವಿಂದ ವ್ಯಾಕುಲರಾಗಿರುತ್ತವು. ಭವಂತಿ ಪ್ರೇತರೂಪಾಸ್ತೇ ಪಿಂಡದಾನ ವಿವರ್ಜಿತಾಃ । ಆಕಲ್ಪಂ ನಿರ್ಜನಾರಣ್ಯೇ ಭ್ರಮಂತಿ ಬಹುದುಃಖಿತಾಃ ॥೪೫॥ ಪಿಂಡದಾನವ ಪಡೆಯದ್ದೆ ಇಪ್ಪವ್ವು ಪ್ರೇತರೂಪವ ಹೊಂದಿ, ಒಂದು ಕಲ್ಪದವರೇಂಗೆ ನಿರ್ಜನವಾದ ಅರಣ್ಯಲ್ಲಿ ಬಹುದುಃಖಿತರಾಗಿ ಅಲೆದಾಡುತ್ತಿರುತ್ತವು. ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ । ಅಭುಕ್ತ್ವಾ ಯಾತನಾಂ ಜಂತುರ್ಮಾನುಷ್ಯಂ ಲಭತೇ ನಹಿ ॥೪೬॥ ನೂರು ಕೋಟಿ ಕಲ್ಪಂಗಳಾದರೂ ಕರ್ಮಫಲವ ಅನುಭವುಸದ್ದೆ ಕ್ಷಯವಾವ್ತಿಲ್ಲೆ. ಯಾತನೆಯ ಅನುಭವುಸದ್ದೆ ಜೀವಿಗೆ ಮನುಷ್ಯ ಜನ್ಮವು ಲಭಿಸುತ್ತಿಲ್ಲೆ. ಅತೋ ದದ್ಯಾತ್ಸುತಃ ಪಿಂಡಾನ್ ದಿನೇಷು ದಶಸು ದ್ವಿಜ । ಪ್ರತ್ಯಹಂ ತೇ ವಿಭಜ್ಯಂತೇ ಚತುರ್ಭಾಗೈಃ ಖಗೋತ್ತಮ ॥೪೭॥ ಹಾಂಗಾಗಿ, ಏ ‘ದ್ವಿಜ’ನಾದವನೇ!, ಪಕ್ಷಿಶ್ರೇಷ್ಠನೇ!, ಮಗನಾದಂವ° ಹತ್ತು ದಿನಂಗಳ ಪಿಂಡವ ಕೊಡೆಕು. ಅವ್ವು ಪ್ರತಿದಿನವೂ ನಾಲ್ಕು ಭಾಗವಾಗಿ ವಿಭಜಿತವಾವ್ತು. (ಅಬ್ಬೆಯ ಹೊಟ್ಟೆಂದ ಒಂದರಿ, ಮೊಟ್ಟೆಂದ ಒಂದರಿ ಹೀಂಗೆ ಎರಡು ಸರ್ತಿ ಹುಟ್ಟುತ್ತರಿಂದ ಪಕ್ಷಿಗೊಕ್ಕೆ ‘ದ್ವಿಜ’ ಹೇಳಿ ಹೆಸರು) ಭಾಗದ್ವಯಂ ತು ದೇಹಸ್ಯ ಪುಷ್ಟಿದಂ ಭೂತಪಂಚಕೇ । ತೃತೀಯಂ ಯಮದೂತಾನಾಂ ಚತುರ್ಥಂ ಸೋಪಜೀವತಿ ॥೪೮॥ (ಅದರಲ್ಲಿ) ಎರಡು ಭಾಗ ದೇಹದ ಪಂಚಭೂತಂಗಳ ಪುಷ್ಟಿದಾಯಕವಾವ್ತು. ಮೂರನೇದು ಯಮದೂತರಿಂಗೆ, ನಾಲ್ಕನೇದರಿಂದ ತಾನು ಜೀವಿಸುತ್ತ°. ಅಹೋರಾತ್ರೈಶ್ಚ ನವಭಿ ಪ್ರೇತಃ ಪಿಂಡಮವಾಪ್ನುಯಾತ್ । ಜಂತುರ್ನಿಷ್ಟನ್ನ ದೇಹಶ್ಚ ದಶಮೇ ಬಲಮಾಪ್ನುಯಾತ್ ॥೪೯॥ ಒಂಬತ್ತು ದಿನ ಹಗಲು ಇರುಳು ಪ್ರೇತವು ಪಿಂಡವ ಪಡೆತ್ತು. ಹತ್ತನೇ ದಿನ ಪೂರ್ಣವಾದ ಅದರ ದೇಹಲ್ಲಿ ಬಲವುಂಟಾವ್ತು. ದಗ್ಧೇ ದೇಹೇ ಪುನರ್ದೇಹಃ ಪಿಂಡೈರುತ್ಪದ್ಯತೇ ಖಗ । ಹಸ್ತಮಾತ್ರಃ ಪುಮಾನ್ಯೇನ ಪಥಿ ಭುಂಕ್ತೇ ಶುಭಾಶುಭಮ್ ॥೫೦॥ ಏ ಪಕ್ಷಿಯೇ!, ಹಿಂದಾಣ ದೇಹ ದಗ್ಧವಾದ ಮತ್ತೆ ಪುನಃ ಕೈಯಷ್ಟು ಗಾತ್ರದ ದೇಹವು ಪಿಂಡಂಗಳಿಂದ ಉಂಟಾವ್ತು. ಅದರ ಸಹಾಯಂದ ಮಾರ್ಗಲ್ಲಿ ಅಂವ ಶುಭಾಶುಭಂಗಳ ಅನುಭವುಸುತ್ತ°. ಪ್ರಥಮೇsಹನಿ ಯಃ ಪಿಂಡಸ್ತೇನ ಮೂರ್ಧಾ ಪ್ರಜಾಯತೇ । ಗ್ರೀವಾಸ್ಕಂಧೌದ್ವಿತೀಯೇನ ತೃತೀಯಾದ್ಧೃದಯಂ ಭವೇತ್ ॥೫೧॥ ಸುರೂವಾಣ ದಿನ ಕೊಡಲ್ಪಟ್ಟ ಪಿಂಡಂದ ತಲೆ ಹುಟ್ಟುತ್ತು. ಎರಡ್ನೇ ದಿನದ್ದರಿಂದ ಕೊರಳು ಮತ್ತು ಭುಜವೂ, ಮೂರ್ನೇ ದಿನದ್ದರಿಂದ ಹೃದಯವು ಉಂಟಾವ್ತು. ಚತುರ್ಥೇನ ಭವೇತ್ಪೃಷ್ಠಂ ಪಂಚಮಾನ್ನಾಭಿರೇವ ಚ । ಷಷ್ಠೇನ ಚ ಕಟೀ ಗುಹ್ಯಂ ಸಪ್ತಮಾತ್ಸಕ್ಥಿನೀ ಭವೇತ್ ॥ ೫೨॥ ನಾಲ್ಕನೇದರಿಂದ ಬೆನ್ನೂ, ಐದನೇದರಿಂದ ಹೊಕ್ಕುಳೂ ಉಂಟಾವ್ತು. ಆರನೇದರಿಂದ ಕಟಿಪ್ರದೇಶ ಮತ್ತೆ ಗುಪ್ತಾಂಗಂಗೊ, ಏಳನೇದರಿಂದ ತೊಡೆಯೂ ಉಂಟಾವ್ತು. ಜಾನು ಪಾದೌ ತಥಾ ದ್ವಾಭ್ಯಾಂ ದಶಮೇsಹ್ನಿಕ್ಷುಧಾತೃಷಾ ॥೫೩॥ ಹಾಂಗೇ ಇನ್ನೆರಡು ದಿನಗಳ ಪಿಂಡಂದ ಮೊಣಕಾಲು ಮತ್ತೆ ಪಾದಂಗಳೂ ಹತ್ತನೇ ದಿನದ ಪಿಂಡಂದ ಹಶು ಆಸರವೂ ಉಂಟಾವ್ತು. ಪಿಂಡಜಂ ದೇಹಮಾಶ್ರಿತ್ಯ ಕ್ಷುಧಾವಿಷ್ಟಸ್ತೃಷಾರ್ದಿತಃ । ಏಕಾದಶಂ ದ್ವಾದಶಂ ಚ ಪ್ರೇತೋ ಭುಂಕ್ತೇ ದಿನದ್ವಯಮ್ ॥ ಪಿಂಡಂಗಳಿಂದ ಉಂಟಾದ ಈ ದೇಹವ ಆಶ್ರಯಿಸಿ ಹಶುವಿಂದ ಕೂಡಿ, ಆಸರಂದ ಬಳಲಿ ಆ ಜೀವ ಹನ್ನೊಂದು ಮತ್ತೆ ಹನ್ನೆರಡ್ನೇ ದಿನಂಗಳಲ್ಲಿ ಉಣ್ತ°. ತ್ರಯೋದಶೇsಹನಿ ಪ್ರೇತೋ ಯಂತ್ರಿತೋ ಯಮಕಿಂಕರೈಃ । ತಸ್ಮಿನ್ ಮಾರ್ಗೇ ವ್ರಜತ್ಯೇಕೋ ಗೃಹೀತ ಇವ ಮರ್ಕಟ ॥೫೫॥ ಹದಿಮೂರ್ನೇ ದಿನ ಜೀವ ಯಮಕಿಂಕರನ ಹಿಡಿತಲ್ಲಿ ಬಂಧಿಸಲ್ಪಟ್ಟು ಮಂಗನಾಂಗೆ ಆ ಮಾರ್ಗಲ್ಲಿ ತಾನೊಬ್ಬನೇ ಹೋವ್ತ°. ಷಡಶೀತಿಸಹಸ್ರಾಣಿ ಯೋಜನಾನಾಂ ಪ್ರಮಾಣತಃ । ಯಮಮಾರ್ಗಸ್ಯ ವಿಸ್ತಾರೋ ವಿನಾ ವೈತರಿಣೀಂ ಖಗ ॥೫೬॥ ಎಲೈ ಪಕ್ಷಿಯೇ!, ವೈತರಿಣೀ ನದಿಯ ಬಿಟ್ಟು ಯಮಮಾರ್ಗದ ಪ್ರಮಾಣವು (ಅಳತೆ) 86000 ಯೋಜನ ದೂರ ಆಗಿದ್ದು. (1 ಯೋಜನ = ಸುಮಾರು 8 – 9 ಮೈಲಪ್ಪಷ್ಟು ದೂರ. ನಿಖರವಾದ ಅಳತೆ ಯಾವ ದಾಖಲೆಲಿಯೂ ಉಲ್ಲೇಖ ಆಯ್ದಿಲ್ಲೆ ) ಅಹನ್ಯಹನಿ ವೈ ಪ್ರೇತೋ ಯೋಜನಾನಾಂ ಶತದ್ವಯಮ್ । ಚತ್ವಾರಿಂಶತ್ತಥಾ ಸಪ್ತ ದಿವಾರಾತ್ರೇಣ ಗಚ್ಛತಿ ॥೫೭॥ ಪ್ರತಿದಿನವೂ ಆ ಜೀವಿ ನಿಶ್ಚಯವಾಗಿಯೂ 247 ಯೋಜನಂಗಳಷ್ಟು ದೂರವ ಹಗಲಿರುಳು ನಡಕ್ಕೊಂಡು ಹೋವ್ತ°. ಅತೀತ್ಯ ಕ್ರಮಶೋ ಮಾರ್ಗೇ ಪುರಾಣೀಮಾನಿ ಷೋಡಶ । ಪ್ರಯಾತಿ ಧರ್ಮರಾಜಸ್ಯ ಭವನಂ ಪಾತಕೀ ಜನಃ ॥೫೮॥ ಮಾರ್ಗಲ್ಲಿ ಕ್ರಮವಾಗಿ 16 ಊರುಗಳ ದಾಂಟಿ ಪಾಪಿ ಧರ್ಮರಾಜನ ಭವನಕ್ಕೆ ಹೋಗಿ ಸೇರುತ್ತ°. ಸೌಮ್ಯಂ ಸೌರಿಪುರಂ ನಗೇಂದ್ರಭವನಂ ಗಂಧರ್ವ ಶೈಲಾಗಮೌ । ಕ್ರೌಂಚಂ ಕ್ರೂರಪುರಂ ವಿಚಿತ್ರಭವನಂ ಬಹ್ವಾಪದಂ ದುಃಖದಮ್ ॥ ನಾನಾಕ್ರಂದಪುರಂ ಸುತಪ್ತಭವನಂ ರೌದ್ರಂ ಪಯೋವರ್ಷಣಮ್ । ಶೀತಾಢ್ಯಂ ಬಹುಭೀತಿ ಧರ್ಮಭವನಂ ಯಾಮ್ಯಂಪುರಂ ಚಾಗ್ರತಃ ॥೫೯॥ ಸೌಮ್ಯ, ಸೌರಿಪುರ, ನಗೇಂದ್ರಭವನ, ಗಂಧರ್ವ, ಶಿಲಾಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ, ಬಹ್ವಾಪದ, ದುಃಖದ, ನಾನಾಕ್ರಂದಪುರ, ಸುತಪ್ತಭವನ, ರೌದ್ರ, ಪಯೋವರ್ಷಣ, ಶೀತಾಢ್ಯ, ಬಹುಭೀತಿ ಇವುಗೊ ಆದಮತ್ತೆ ಯಮನ ಊರಾದ ಧರ್ಮಭವನ ಇದ್ದು. ಯಾಮ್ಯಪಾಶೈರ್ಧೃತಃ ಪಾಪೀ ಹಾಹೇತಿ ಪ್ರರುದನ್ಪಥಿ । ಸ್ವಗೃಹಂ ತು ಪರಿತ್ಯಜ್ಯ ಪುರಂ ಯಾಮ್ಯಮನುವ್ರಜೇತ್ ॥೬೦॥ ಯಮದೂತರ ಪಾಶಂದ ಬಂಧಿಸಲ್ಪಟ್ಟ ಪಾಪಿ ‘ಹಾಹಾ’ ಹೇದು ರೋದಿಸ್ಯೊಂಡು, ತನ್ನ ಮನೆಯ ಬಿಟ್ಟಿಕ್ಕಿ, ಯಮಪುರಿಯ ದಾರಿಲ್ಲಿ ಹೋವುತ್ತ°. ಇತಿ ಶ್ರೀಗರುಡ ಪುರಾಣೇ ಸಾರೋದ್ಧಾರೇ ಪಾಪಿನಾ ಮೈಹಿಕಾಮುಷ್ಮಿಕದುಃಖನಿರೂಪಣಂ ನಾಮ ಪ್ರಥಮೋsಧ್ಯಾಯಃ ॥ ಇಲ್ಲಿಗೆ ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಇಹಪರ ದುಃಖಂಗಳ ನಿರೂಪಣೆ’ ಹೇಳ್ವ ಒಂದನೇ ಅಧ್ಯಾಯ ಮುಗುದತ್ತು. ಗದ್ಯರೂಪಲ್ಲಿ – ಪಾಪಿಯ ಅಧೋದ್ವಾರದ ಮೂಲಕ ಪ್ರಾಣವಾಯು ಹೆರಹೋಪಗ ಎರಡೂಕೈಗಳಲ್ಲಿ ಪಾಶ ಹಾಂಗೂ ದಂಡ ಧಾರಣೆ ಮಾಡಿದ, ನಗ, ಮಸವ ಹಲ್ಲುಗಳಿಂದ, ಕ್ರೋಧಪೂರ್ಣ ಕಣ್ಣುಗಳಿಪ್ಪ ಭಯಾನಕವಾಗಿ ಕಾಂಬ ಯಮನ ಇಬ್ರು ದೂತರು ಹತ್ರೆ ಬತ್ತವು. ಅವರ ಕೇಶ ಮೇಲ್ಮುಖವಾಗಿ ಎದ್ದು ನಿಂದೊಂಡಿರುತ್ತು, ಕಾಕಗಳಾಂಗೆ ಕಪ್ಪು ವರ್ಣದವರಾಗಿದ್ದು, ವಕ್ರಮುಖಂದ ಭಯಾನಕ ರೂಪ/ಆಕಾರವುಳ್ಳವುಳಾಗಿರುತ್ತವು. ಅವರ ಉಗುರುಗೊ ಆಯುಧಂಗಳ ಹಾಂಗೆ ಇರುತ್ತು. ಅದರ ನೋಡಿ ಮರಣಸನ್ನ ಜೀವಿ ಹೇಲುಚ್ಚು ಮಾಡ್ಳೆಸುರುಮಾಡುತ್ತ°. ಹಾಹಾಕಾರಂದ ಆರ್ಭಟಿಸಿ ಬಪ್ಪ ಅವರ ಕಂಡು ಅವರ ಹೆಬ್ಬೆರಳ ಗಾತ್ರಕ್ಕೆ ಸಮಾನನಾಗಿಪ್ಪ ಕಂಡು ತನ್ನ ಸ್ಥೂಲ ದೇಹವ ಯಾತನೆಂದ ಆ ಜೀವಿ ನೋಡುತ್ತಿಪ್ಪಂತೆಯೇ ಯಮದೂತರಿಂದ ಅವನ ಕೊರಳಿಂಗೆ ಪಾಶವ ಬಿಗಿಯಲ್ಪಟ್ಟು ರಾಜಭಟರುಗೊ ಅಪರಾಧಿಗಳ ಎಳಕ್ಕೊಂಡು ಹೋವ್ತಾಂಗೆ ಆ ಜೀವಿ ಆ ಶರೀರಂದ ದೂರದ ಯಮನಾಲಯದ ಮಾರ್ಗಕ್ಕೆ ಎಳೆಯಲ್ಪಡುತ್ತ°. ಹೆದರಿ ಕಂಗಾಲಾಗಿಪ್ಪ ಅವನ ಈ ರೀತಿ ಬಲುಗಿ ಹೆದರಿಸಿ ಎಳಕ್ಕೊಂಡು ಹೋಪಗ ದಾರಿಲಿ ಯಮದೂತರು ಅವಂಗೆ ನರಕದ ಕಠಿಣ ಕಷ್ಟವ ಪುನಃ ಪುನಃ ಹೇಳುತ್ತವು. ‘ಏಯ್ ದುಷ್ಟ! ಬೇಗ ನಡೆ, ನೀನು ಯಮಲೋಕಕ್ಕೆ ಹೋಗಿ ಎತ್ತೆಕು. ನಿನ್ನ ಬೇಗ ಕುಂಭೀಪಾಕಾದಿ ನರಕಕ್ಕೆ ಕರಕ್ಕೊಂಡು ಹೋಪಲಿದ್ದು. ತಡವು ಮಾಡೇಡ, ಬೇಗ ನಡೆ’ ಹೇಳಿ ಅವನ ಯಮದೂತರು ಬೈಯ್ಕೊಂಡು, ಛಾಟಿಲಿ ಬಡುಕ್ಕೊಂಡು ಎಳಕ್ಕೊಂಡು ಹೋವ್ತವು. ಒಂದೊಡೆಲಿ ಈ ಪ್ರಕಾರದ ಯಮದೂತರ ಗರ್ಜನೆಯ ಕೇಳಿಯೊಂಡು ಮತ್ತೊಂದೆಡೆಲಿ ತನ್ನ ಬಂಧುಗಳ ರೋದನವನ್ನೂ ಕೇಳಿಗೊಂಡು ಒಳ್ಳೆತ ಯಾತನೆಯ ಅನುಭವಿಸಿಯೊಂಡು ಪೀಡನೆಲಿ ಯಮದೂತರೊಟ್ಟಿಂಗೆ ಯಮಮಾರ್ಗಲ್ಲಿ ನಡಕ್ಕೊಂಡು ಹೋವ್ತ°. ಯಮಭಟರ ಛಾಟಿಯೇಟಿಂದ ಅವನ ಹೃದಯ ಛಿದ್ರ ಆವ್ತು. ದಾರಿಲ್ಲಿಪ್ಪ ನಾಯಿಗೊ ಅವನ ಮೇಲೆ ಹಾರಿ ಕಚ್ಚುತ್ತವು. ತನ್ನ ಪಾಪಂಗಳ ನೆಂಪುಮಾಡಿ ದುಃಖಿಸಿ ಪರಿತಪಿಸ್ಯೊಂಡು ಯಮದೂತರ ಬಲುಗಾಣದೊಟ್ಟಿಂಗೆ ನಡೆತ್ತ°. ಪೀಡಿತನಾದ ಈ ಜೀವಿ ಹಶು ಆಸರಂದ ಬಳಲಿ ಸುಡು ಬೆಶಿಲು, ಕಾಡ್ಗಿಚ್ಚು, ಬೆಶಿಗಾಳಿಲಿ ಬೆಂದವನಾಂಗಾಗಿ, ಬೀಳ್ವ ಪೆಟ್ಟಿಂದ ಬಸವಳಿದು, ಕೊದಿವ ಹೊಯಿಗೆ ಮಾರ್ಗಲ್ಲಿ ವಿಶ್ರಾಂತಿ ಇಲ್ಲದ್ದೆ ನಡದು, ನೀರಿಲ್ಲದ್ದೆ ಆಸರಾಗಿ ದಣುದು ತತ್ತರಿಸಿ, ಬಹು ಕಠಿಣತೆಂದ ಮುಂದೆ ಮುಂದೆ ಹೋವ್ತ°. ಮಾರ್ಗಲ್ಲಿ ಅಲ್ಲಲ್ಲಿ ಮುಗ್ಗರಿಸಿ ಮೂರ್ಛಿತನಾಗಿ ಬಿದ್ದು ಎದ್ದು ನಡವ ಅವನ ಅಂಧಕಾರಯುಕ್ತ ಯಮನಾಲಯಕ್ಕೆ ಕರೆದೊಯ್ಯಲಾವ್ತು. ಎರಡು ಅಥವಾ ಮೂರು ಮುಹೂರ್ತದಷ್ಟು ಸಮಯಲ್ಲಿ ಆ ಜೀವಿಯ ಅಲ್ಲಿಗೆ ಕರೆದೊಯ್ಯಲಾವ್ತು. ಅಲ್ಲಿ ಅವಂಗೆ ಯಮದೂತರು ಘೋರ ನರಕಯಾತೆನೆಯ ತೋರುಸುತ್ತವು. ಮುಹೂರ್ತ ಮಾತ್ರಲ್ಲಿ ಯಮನನ್ನೂ ನರಕಯತೆನೆಯ ಭಯವನ್ನೂ ದೃಷ್ಟಿಸಿ ನೋಡಿಕ್ಕಿ, ಮತ್ತೆ ಯಮನಾಜ್ಞೆಯಂತೆ ಅವನ ಮತ್ತೆ ಯಮದೂತರೊಟ್ಟಿಂಗೆ ಈ ಲೋಕಕ್ಕೆ ಹಿಂತುರುಗುತ್ತ°. ಮನುಷ್ಯಲೋಕದ ಒಂದು ವಾಸನೆಂದ ಬದ್ಧನಾದ ಆ ಜೀವಿ ಇನ್ನೊಂದು ದೇಹವ ಆಶಿಸುವಾಗಲೇ ಯಮದೂತರಿಂದ ಹಿಂದಂಗೆ ಎಳೆಯಲ್ಪಡುತ್ತ°. ಹಶು ಆಸರಿಂದ ಬಳಲಿಪ್ಪ ಆ ಜೀವಿ ತನ್ನ ಮಕ್ಕಳಿಂದ ಕೊಡಲ್ಪಟ್ಟ ಪಿಂಡ, ದಾನಂಗಳ ತಿಂತನಾದರೂ ಅದರಿಂದ ತೃಪ್ತಿ ಹೊಂದುತ್ತನಿಲ್ಲೆ. ಪುತ್ರಾದಿಗಳಿಂದ ಪಾಪಿಗಳ ಉದ್ದೇಶಕ್ಕಾಗಿ ಮಾಡಿದ ಶ್ರಾದ್ಧ, ದಾನ, ತರ್ಪಣ ಜೀವಿಯ ಬಳಿ ಉಳಿತ್ತಿಲ್ಲೆ. ಹಾಂಗಾಗಿ ಪಿಂಡದಾನ ಮಾಡಿರೂ ಕೂಡ ಜೀವಿಯು ಹಶುವಿಂದ ವ್ಯಾಕುಲನಾಗಿ ಯಮಮಾರ್ಗಲ್ಲಿ ಹೋವುತ್ತ°. ಆರಿಂಗೆ ಪಿಂಡದಾನ ಆವುತ್ತಿಲ್ಯೋ ಅವ್ವು ಪ್ರೇತರೂಪದ ಧಾರಣೆ ಮಾಡಿ ಕಲ್ಪಪರ್ಯಂತ ನಿರ್ಜನ ವನಲ್ಲಿ ದುಃಖಿಗಳಾಗಿ ತಿರಿಗ್ಯೊಂಡಿರುತ್ತವು. ನೂರಾರು ಕೋಟಿ ಕಲ್ಪಂಗೊ ಸಂದುಹೋದರೂ ಕೂಡ ಅನುಭವುಸದ್ದೆ ಕರ್ಮಫಲಂಗೊ ನಾಶ ಆವ್ತಿಲ್ಲೆ, ಎಲ್ಲಿ ವರೇಂಗೆ ಆ ಜೀವಿಗೆ ಅದರ ಅನುಭವಿಸಿ ಮುಗಿತ್ತಿಲ್ಯೋ ಅಲ್ಲಿವರೇಂಗೆ ಆ ಜೀವಿಗೆ ಮನುಷ್ಯ ಶರೀರ ಪ್ರಾಪ್ತಿಯಾವುತ್ತಿಲ್ಲೆ. ಹಾಂಗಾಗಿ ಮಕ್ಕಳಾದವು ನಿಯಮಿತವಾಗಿ ಹತ್ತು ದಿನಂಗಳವರೇಂಗೆ ಪಿಂಡದಾನ ಮಾಡೆಕು. ಆ ಪಿಂಡ ಪ್ರತಿನಿತ್ಯ ನಾಲ್ಕು ಭಾಗಗಳಾಗಿ ವಿಂಗಡನೆ ಆವುತ್ತು. ಅದರಲ್ಲಿ ಎರಡು ಭಾಗ ಪ್ರೇತದೇಹದ ಪಂಚಭೂತಗಳ ಪುಷ್ಟಿಗಾಗಿ ಇರುತ್ತು. ಮೂರನೇ ಭಾಗ ಯಮದೂತರಿಂಗೆ ಹೋವ್ತು, ನಾಲ್ಕನೇ ಭಾಗಂದ ಆ ಜೀವಿಗೆ ಆಹಾರ ಪ್ರಾಪ್ತಿಯಾವ್ತು. ಒಂಬತ್ತು ದಿನ ಹಗಲು ಇರುಳು ಪಿಂಡಪ್ರಾಪ್ತಿಯಾಗಿ ಪ್ರೇತದ ಶರೀರ ನಿರ್ಮಾಣ ಆವ್ತು. ಹತ್ತನೇ ದಿನ ಅದರಲ್ಲಿ ಬಲಪ್ರಾಪ್ತಿಯಾವ್ತು. ಮೃಕ್ತಿವ್ಯಕ್ತಿಯ ದೇಹ ದಹನವಾದ ಮತ್ತೆ ಪಿಂಡದ ಮೂಲಕ ಪುನಃ ಒಂದು ಮೊಳ ಉದ್ದದ ಶರೀರ ಪ್ರಾಪ್ತಿಯಾವ್ತು. ಅದರ ಮೂಲಕ ಈ ಜೀವಿಯು ಯಮಲೋಕದ ದಾರಿಲಿ ಶುಭ ಮತ್ತೆ ಅಶುಭ ಕರ್ಮಂಗಳ ಫಲವ ಭೋಗಿಸುತ್ತ°. ಸುರುವಾಣ ದಿನ ಕೊಟ್ಟ ಪಿಂಡಂದ ಜೀವಿಯ ತಲೆ ನಿರ್ಮಾಣ ಆವ್ತು. ಎರಡ್ನೇ ದಿನದ ಪಿಂಡಂದ ಕೊರಳು ಮತ್ತೆ ಹೆಗಲು ನಿರ್ಮಾಣ ಆವ್ತು, ಮೂರನೇ ದಿನದ ಪಿಂಡಂದ ಹೃದಯ ನಿರ್ಮಾಣ ಆವ್ತು, ನಾಲ್ಕನೇ ದಿನದ ಪಿಂಡಂದ ಬೆನ್ನು, ಐದನೇದರಿಂದ ನಾಭಿ, ಆರು ಮತ್ತೆ ಏಳನೇದರಿಂದ ಸೊಂಟ ಮತ್ತೆ ಗುಹ್ಯಾಂಗ, ಎಂಟನೇದರಿಂದ ತೊಡೆ ಮತ್ತೆ ಒಂಬತ್ತೇನದರಿಂದ ಕಾಲುಗೊ ಪಾದಂಗೊ ನಿರ್ಮಾಣ ಆವ್ತು. ಈ ಪ್ರಕಾರವಾಗಿ ಒಂಬತ್ತು ಪಿಂಡಂಗಳಿಂದ ಶರೀರ ಪ್ರಾಪ್ತಿಹೊಂದಿ ಚೈತನ್ಯವ ಪಡೆತ್ತು. ಹತ್ತನೇ ಪಿಂಡಂದ ಶರೀರದ ಹಶು ಆಸರ ಜಾಗೃತ ಆವ್ತು. ಈ ಪಿಂಡಜ ಶರೀರವ ಹೊಂದಿ ಹಶು ಆಸರು ಪೀಡಿತನಾಗಿ ಹನ್ನೊಂದು ಮತ್ತೆ ಹನ್ನೆರಡನೇ ದಿನ ಭೋಜನವ ಉಣ್ತ°. ಹದಿಮೂರನೇ ದಿನ ಯಮದೂತರಿಂದ ಮಂಗನಾಂಗೆ ಬಂಧನಕ್ಕೊಳಪ್ಪಟ್ಟು ಆ ಜೀವಿ ಏಕಾಂಗಿಯಾಗಿ ಆ ಯಮ ಮಾರ್ಗಲ್ಲಿ ಹೋವ್ತ°. ಮಾರ್ಗಲ್ಲಿ ಎದುರು ಸಿಕ್ಕುವ ವೈತರಿಣೀ ನದಿಯ ಹೊರತುಪಡುಸಿ ಯಮಲೋಕದ ದೂರ 86000 ಯೋಜನಗಳಷ್ಟಿದ್ದು. ಆ ಪ್ರೇತ ಪ್ರತಿನಿತ್ಯ ಹಗಲು ಇರುಳು 247 ಯೋಜನದಷ್ಟು ದೂರ ನಡೆತ್ತು. ಮಾರ್ಗಲ್ಲಿ ಬಪ್ಪ ಸೌಮ್ಯ, ಸೌರಿಪುರ, ನಗೇಂದ್ರಭವನ, ಗಂಧರ್ವ, ಶಿಲಾಗಮ, ಕ್ರೌಂಚ, ಕ್ರೂರಪುರ, ವಿಚಿತ್ರಭವನ, ಬಹ್ವಾಪದ, ದುಃಖದ, ನಾನಾಕ್ರಂದಪುರ, ಸುತಪ್ತಭವನ, ರೌದ್ರ, ಪಯೋವರ್ಷಣ, ಶೀತಾಢ್ಯ, ಬಹುಭೀತಿ ಇವುಗೊ ಆದಮತ್ತೆ ಯಮನ ಊರಾದ ಧರ್ಮಭವನ ಇದ್ದು. ಯಮರಾಜನ ದೂತರ ಪಾಶಂದ ಬಂಧಿಸಲ್ಪಟ್ಟಾ ಪಾಪಿ ಜೀವಿ ಮಾರ್ಗಲ್ಲಿ ಹಾಹಾಕಾರ ಮಾಡಿಗೊಂಡು ರೋದಿಸ್ಯೊಂಡು ತನ್ನ ಮನೆಯ ಬಿಟ್ಟಿಕ್ಕಿ ಯಮಪುರಿಗೆ ಹೋವುತ್ತ°. ಈ ರೀತಿಯಾಗಿ ಗರುಡಂಗೆ ಭಗವಂತ° ಶ್ರೀ ಮಹಾವಿಷ್ಣು ಹೇಳಿದಲ್ಯಂಗೆ – ಗರುಡ ಪುರಾಣಲ್ಲಿ ಸಕಲ ಶಾಸ್ತ್ರಂಗಳ ಸಾರವಾದ ‘ಸಾರೋದ್ಧಾರ’ ವಿಭಾಗಲ್ಲಿ ‘ಪಾಪಿಗಳ ಇಹಪರ ದುಃಖಂಗಳ ನಿರೂಪಣೆ’ ಹೇಳ್ವ ಒಂದನೇ ಅಧ್ಯಾಯ ಮುಗುದತ್ತು. [ಚಿಂತನೀಯಾ – ‘ಪ್ರಪಂಚ’ ಹೇಳ್ವದು ಭಗವಂತನ ಸೃಷ್ಟಿ. ಇಲ್ಲಿ ಜೀವಿಗೊ ಅವನಿಂದ ಕಳುಹಿಸಲ್ಪಟ್ಟದು ಅವನ ಲೀಲೆ. ಜೀವಿಗೊ ಈ ಪ್ರಪಂಚಲ್ಲಿ ಹುಟ್ಟಿ ‘ಧರ್ಮಾರ್ಥಕಾಮಮೋಕ್ಷ’ ಕರ್ಮವ / ಸಿದ್ಧಿಯ ಸಾಧಿಸಿ ಪುನಃ ಭಗವಂತನ ಹೋಗಿ ಸೇರೆಕು. ಹುಟ್ಟಿದ ಕೂಡ್ಳೆ ಮೋಕ್ಷಸಾಧನೆ ಅಲ್ಲ. ಧರ್ಮ ಅರ್ಥ ಕಾಮ ಮೋಕ್ಷ ಹೇಳಿ ಜೀವನದ ನಾಲ್ಕ ಹಂತ. ಇದರ ನಿಯಮಿತವಾಗಿ ಪರಿಶುದ್ಧವಾಗಿ ಭಗವದ್ಪ್ರಜ್ಞೆಂದ ಆಚೆರಿಸಿಗೊಂಡು ಹೋಯೆಕು. ಎಲ್ಲಿಯಾರು ರಜಾರು ತಪ್ಪು ಆತು ಹೇಳಿರೆ ಅದು ಭಗವಂತಂಗೇ ಮಾಡಿದ ಅಪಚಾರವಾವ್ತು. ಅಷ್ಟಪ್ಪಗ ಜೀವಿ ಅಪವಿತ್ರನಾವ್ತ°. ಪವಿತ್ರನಾಗದ್ದೆ ಮೋಕ್ಷ ಸಿದ್ಧಿ ಇಲ್ಲೆ. ಅಪವಿತ್ರನಪ್ಪದರಿಂದ ಪಾಪಾತ್ಮರಾವ್ತವು. ಪಾಪಿಗೊಕ್ಕೆ ಭಗವಂತನಲ್ಲಿ ಹೋಗಿ ಸೇರುವ ಅರ್ಹತೆ ಇಲ್ಲೆ. ತಾನು ಮಾಡಿದ ಪಾಪಕ್ಕೆ ಶಿಕ್ಷೆ ಅನುಭವುಸಲೇ ಬೇಕು. ಆ ನ್ಯಾಯಾನ್ಯಯವ ವಿಚಾರ್ಸುವದು ಯಮಧರ್ಮರಾಯನ ಜವಾಬ್ದಾರಿ. ಹಾಂಗಾಗಿ ಪಾಪಿಗೊ ಮರಣಾನಂತರ ಮದಾಲು ಯಮನಲ್ಲಿಗೇ ಹೋಪದು. ಅಲ್ಲಿ ಅಂವ ಮಾಡಿದ ಪ್ರತಿಯೊಂದು ಕರ್ಮವೂ ವಿಚಾರಣೆಗೆ ಒಳಪ್ಪಡುತ್ತು. ಪುಣ್ಯ ಕಾರ್ಯವು ಮನ್ನಣೆಯಾಗಿ ಪಾಪಕ್ಕೆ ಅಪರಾಧ ಅಲ್ಲಿ ವಿಧಿಸಲ್ಪಡುತ್ತು. 13ನೇ ದಿನಂದ ಜೀವಿ ಯಮಲೋಕಕ್ಕೆ ಪ್ರಯಾಣ ಸುರುಮಾಡುತ್ತ°, ದಿನವೊಂದಕ್ಕೆ ಹಗಲು ಇರುಳು ನಡದು ಸುಮಾರು 247 ಯೋಜನದಷ್ಟು ದೂರವ ಕ್ರಮಿಸುತ್ತ°. ದಾರೀಲಿ ಬಪ್ಪ ವೈತರಿಣಿ ಬಗ್ಗೆ ಆ ಸಂದರ್ಭಲ್ಲಿ ವಿವರ ನೋಡಿಗೊಂಬೊ°. ಇಲ್ಲಿಗೆ ಗರುಡಪುರಾಣ ಉತ್ತರಖಂಡ (‘ಸಾರೋದ್ಧಾರ’)ದ ಒಂದನೇ ಅಧ್ಯಾಯ ಮುಗುದತ್ತು. ಹರೇ ರಾಮ.]