Thursday 28 March 2019

"ಅಭಿಚಾರ ಪರಿಶೀಲನಾ ಪಟ್ಟಿ"(ಮಾಟ-ಮಂತ್ರ ದೋಷ ಶೋದನಾ ಪಟ್ಟಿ)

ಓಂ ನಮೋ ಭಗವತೇ ಶ್ರೀ ಶ್ರೀ ಲಕ್ಷ್ಮಿಶ್ರೀನಿವಾಸ ಗುರುಭ್ಯೋ ನಮಃ "ಅಭಿಚಾರ ಪರಿಶೀಲನಾ ಪಟ್ಟಿ"(ಮಾಟ-ಮಂತ್ರ ದೋಷ ಶೋದನಾ ಪಟ್ಟಿ) ೧. ವ್ಯಕ್ತಿಯು ಸದಾ ಎಲ್ಲರಿಂದ ದೂರವಿರಲು ಮತ್ತು ಒಂಟಿಯಾಗಿರಲು ಬಯಸುವುದು. ೨.ಸದಾ ಕಿರಿಕಿರಿ ಮತ್ತು ಸಿಟ್ಟಾಗುವುದು. ೩.ಉಗುರುಗಳು ಕಪ್ಪಾಗುವುದು. ೪.ಸದಾಕಾಲ ಭುಜ ಮತ್ತು ತಲೆ ನೋವು (ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಹೆಚ್ಚಾಗುವುದು) ೫.ಸುಗಂಧ ಪರಿಮಳದ ವಾಸನೆ ಬರುವುದು. ೬.ಸ್ನಾನಕ್ಕೆ ಮನಸು ಇಲ್ಲದಿರುವುದು. ೭.ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವುದು. ೮.ಕಣ್ಣುಗಳು ಸದಾ ಕೆಂಪಾಗಿರುತ್ತವೆ ೨೭/೭ ೯.ಅಸಿವು ತಿಳಿಯದಂತಾಗುವುದು. ೧೦.ದೇಹದಲ್ಲಿನ ಅಂಗಗಳಲ್ಲಿ ಅಸ್ವಾಬಾವಿಕ ಚಲನವಲನಗಳು ಸದಾ ಬೆರಳುಗಳನ್ನು ಅಗಲಿಸಿರುವುದು/ಉಗುರು ಕಡಿಯುವುದು. ೧೧. ಮನೆಯಲ್ಲಿ ತುಳಸಿಗಿಡವು ತಟ್ಟನೆ ಸುಟ್ಟುಹೋಗುವುದು(ಬಾಡಿಹೋಗುವುದು) ಮತ್ತೆ ಮನೆಗೆ ಸೋಂಕು ಪರಿಣಾಮ ಬೀರುವ ಮುನ್ನವೇ ಗಿಡವು ಬೆಳೆಯುವುದಿಲ್ಲ ೧೨.ವಿವಾಹದಲ್ಲಿ ವಿಳಂಬ(ಸ್ತ್ರೀಗೆ ೩೦ ಪುರುಷರಿಗೆ ೪೦ ದಾಟಿದರು ವಿವಾಹ ಆಗದಿರುವುದು) ೧೩.ವಿದ್ಯಾರ್ಥಿಗಳಿಗೆ ಎಷ್ಟೇ ಪ್ರಯತ್ನ ಪಟ್ಟರು ಯಶ ದೊರೆಯದಂತಾಗುವುದು. ೧೫.ಮನೆಯಲ್ಲಿ ದಟ್ಟ ದಾರಿದ್ಯ ಆವರಿಸುವುದು. ೧೬.ವ್ಯವಸ್ಯಾಯದಲ್ಲಿ ನಷ್ಟ ಉಂಟಾಗುವಿಕೆ. ೧೭.ವ್ಯಾಪಾರ/ವ್ಯವಹಾರಗಳು ಸ್ಥಗಿತಗೊಳ್ಳುವುದು. ೧೮.ಎಷ್ಟೇಪ್ರಯತ್ನ ಪಟ್ಟರು ಕೆಲಸ ಸಿಗದೇ ಇರುವುದು,ಸಿಕ್ಕರು ಸರಿಯಾಗಿ ಮಾಡಲಾಗದಂತಹ ಪರಿಸ್ಥಿತಿ ಉಂಟಾಗುವುದು. ೧೯.ಮನೆಯಲ್ಲಿ ಅಶಾಂತಿ,ಕಲಹ, ನೆಮ್ಮದಿಗೆ ಭಂಗ. ೨೦.ಮನೆಯ ಎದುರು,ಅಕ್ಕ ಪಕ್ಕ ನಿಂಬೆಹಣ್ಣು,ಮೊಟ್ಟೆ,ಬೊಂಬೆ,ಕುಂಕುಮ,ಅಕ್ಷತೆ,ಮೆನಸಿನಕಾಯಿ,ಒಡೆದ ತೆಂಗಿನಕಾಯಿ,ರಕ್ತ, ಯಂತ್ರ,ತಾಮ್ರದ ತಗಡು,ಇತ್ಯಾದಿಗಳು ಬಿದ್ದಿರುವುದು. ೨೧.ಮನೆಯಲ್ಲಿ ಮಕ್ಕಳು ಹಿರಿಯರ ಮಾತನ್ನು ಕೇಳದೆ ವಿಚಿತ್ರವಾದ ವರ್ತನೆಯಲ್ಲಿರುವುದು. ೨೨.ಮನೆಯಲ್ಲಿ ಯಾರಿಗಾದರು ಸೊಂಟ,ಕೈ ಕಾಲು ಬಿಗಿತ,ಸೆಳೆತ,ಉರಿ,ನೋವು (ಇದು ಅಮಾವಾಸ್ಯೆ/ಹುಣ್ಣಿಮೆಯಲ್ಲಿ ಹೆಚ್ಚು) ೨೩.ಮನೆಯಲ್ಲಿ ಸದಾ ಯಾರಾದರೊಬ್ಬರು ಅತೀವವಾದ ಅನಾರೋಗ್ಯದಿಂದ ಇರುವುದು. ೨೪.ವಾಸಿಯಾಗದ ರೋಗಗಳಿಂದ ನರ‍ಳುವುದು ವೈದ್ಯರಿಗೂ ರೋಗ ಯಾವುದೆಂದು ತೀಳಿಯದಾಗುವುದು. ೨೫.ಸಾಕು ಪ್ರಾಣಿಗಳ ಸರಣಿಸಾವು ಅಥವ ಕುಟುಂಬದಲ್ಲಿ ಸರಣಿಸಾವು. ೨೬.ಮನೆಯ ಮೇಲೆ ಕಲ್ಲುಗಳು ಬಿದ್ದಂತಾಗುವುದು, ರಾತ್ರಿ ಸಮಯದಲ್ಲಿ ಇದ್ದಕ್ಕಿದಂತೆ ಮನೆಯಲ್ಲಿ ಬೆಳಕಾಗುವುದು.(ಭೂತ ಪ್ರಯೋಗವಾಗಿದ್ದಾಗ) ೨೭.ಮನೆಯಲ್ಲಿ ಮಾಡಿದ ಅನ್ನವು ಕೆಂಪಾಗುವುದು,ಪೂಜೆಗೆ ಬಳಸಿದ ತೆಂಗಿನಕಾಯಿ ಕೆಂಪಾಗುವುದು. ೨೮.ದೇಹವು ಸೊರಗಿಹೋಗುವುದು.(ಬಡಕಲಾಗುವುದು) ೨೯.ಯಾವುದೇ ಶುಭಕಾರ್ಯವನ್ನು ಕೈಗೊಂಡರು ಮುಗಿಸಲು ಸಾದ್ಯವಾಗದೇ ಇರುವುದು. ೩೦.ವಿಚಿತ್ರ ಆಕಾರಗಳು,ವಿಚಿತ್ರ ಶಬ್ದಗಳು ಕಾಣಿಸುವುದು,ಕೇಳಿಸುವುದು. ೩೧.ಮನೆಯ ಮೇಲೆ ಗುಂಪು ಗುಂಪಾಗಿ ಕಾಗೆಗಳು ಕೂರುವುದು. ೩೨.ಆಕಸ್ಮಿಕವಾಗಿ/ಅನಿರೀಕ್ಷಿತವಾಗಿ ನಮ್ಮ ವೈರಿಗಳು ನಮ್ಮ ಎದುರಾಗುವುದು ಇಲ್ಲವೇ ನಮ್ಮ ಮನೆಗೇ ಬರುವುದು. ೩೩.ದುಶ್ಚಟಕ್ಕೆ ದಾಸರಾಗುವುದು,ಎಲ್ಲವನ್ನು ಕಳೆದುಕೊಳ್ಳುವುದು. ೩೪.ಮುಖದಲ್ಲಿ ವಿಕಾರತೆ,ದೈಹಿಕ ಬದಲಾವಣೆ.(ಜೀವಕಳೆ ಇಲ್ಲದಂತಾಗುತ್ತದೆ) ೩೫.ಊಟದಲ್ಲಿ ಪದೇ ಪದೇ ಕೂದಲು ಸಿಗುತ್ತದೆ. ೩೬.ಪೊಟ್ಟಣ ಕಟ್ಟಿದ ಕುಂಕುಮ ಮನೆಯಲ್ಲಿ ಬಳಕೆಯಾಗದ ಸ್ಥಳದಲ್ಲಿ ಸಿಗುವುದು. ೩೭.ದಾರಸುತ್ತಿಟ್ಟ ಮಡಿಕೆ/ಕುಡಿಕೆ,ಮೊಳೆಗಳು ಮನೆಯ ಸುತ್ತ ಮುತ್ತ ದೊರೆಯುವುದು.ಕಬ್ಬಿಣದ . ೩೮.ಸೂಜಿ ಚುಚ್ಚಿದ ನಿಂಬೆಹಣ್ಣು/ಬೊಂಬೆ,ಭಸ್ಮ ಲೇಪಿತ ವಸುಗಳು,ಮೇಲಿಂದ ಮೇಲೆ ಮನೆಯ ಸುತ್ತ ಮುತ್ತ ದೊರೆಯುವುದು. ೩೯.ವಿನಾಕಾರಣ ಸಿಟ್ಟು ಬರುವುದು. ೪೦.ಕೆಟ್ಟ ಕನಸುಗಳು ಬೀಳುವುದು ಉದಾ: ಕನಸಲ್ಲಿ ಎದೆಯನ್ನು ಯಾರೋ ತುಳಿದಂತೆ ಅಥವ ನಿಮ್ಮ ಕತ್ತು ಹಿಸುಕುವಂತಾಗುವುದು. ೪೧.ಮನೆಯ ಮೇಲೆ ಅಥವ ಸುತ್ತ ಮುತ್ತ ಮೂಳೆಗಳು ನಿಂಬೆಹಣ್ಣಿನೊಂದಿಗೆ ದೊರೆಯುವುದು ಮನಸಿಗೆ ಸಂಬಂದಿಸಿದಂತೆ ಲಕ್ಷಣಗಳು ಜನರು ನಿಮ್ಮನ್ನು ದೂರವಿಡುತ್ತಿದ್ದಾರೆ ಎಂದು ನಿಮಗೆ ಅನ್ನಿಸತೊಡಗುತ್ತದೆ. ನಿಮ್ಮ ಒಳ್ಳೆಯ ಉದ್ದೇಶಗಳನ್ನು ಸದಾ ಅಪಾರ್ಥಮಾಡಿಕೊಳ್ಳಲಾಗುತ್ತದೆ. ನಂಬಿಕೆ ಕಳೆದುಕೊಳ್ಳುವುದು ಮತ್ತು ತೀವ್ರ ಖಿನ್ನತೆ ಉಂಟಾಗುತ್ತದೆ. ಮನಸ್ಸಿಅನ ಸ್ಥಿತಿಯಲ್ಲಿ ತೂರಾಟ-ಅನೈತಿಕ ಕೋಪ,ಕಿರಿಕಿರಿ,ಭಯ,ಉನ್ಮಾದ,ಅಸಹಜ ನಡೆ,ಇದ್ದಕ್ಕಿದಂತೆ ನೆನಪಿನ ಶಕ್ತಿ ಕಳೆದುಹೋಗುವುದು. ಕೆಟ್ಟ ಆಲೋಚನೆಗಳು. ಖಿನ್ನತೆ ಉದ್ಯೊಗ ಅಥವ ಆದಾಯ ಜೀವನದಲ್ಲಿ ನಷ್ಟ ಉಂಟಾಗುವಿಕೆ ಆದಾಯದಲ್ಲಿ ನಿರ್ಭಂದನ.ಆಧ್ಯಾತ್ಮ-ವೈದ್ಯರಿಂದ ಸಹಾಯ ಪಡೆದುದಕ್ಕೆ ಹಣ ಕೊಡಲಾಗುವುದಿಲ್ಲ. ಸತ್ತಿರುವ ಹೆಣದ ಬಗ್ಗೆ ಕನಸುಗಳು ಭಯಂಕರ ವ್ಯಕ್ತಿಗಳು,ಪಿಶಾಚಿಗಳು ಇತರೆ ಜೀವಿಗಳು ನಿಮ್ಮನ್ನು ಸಾಯಿಸಲು ಬಯಸುತ್ತಾರೆ. ಆತ್ಮಹತ್ಯಾ ಆಲೋಚನೆಗಳು/ಆತ್ಮ ಹಾನಿಯ ಯೋಚನೆಗಳು. ದೇಹಕ್ಕೆ ಸಂಬಂದಿಸಿದ ಲಕ್ಷಣಗಳು ಬಿಗಿತ-ಬಾರ,ವಿಶೇಷವಾಗಿ ಭುಜಗಳು ಮತ್ತು ಎದೆಯಲ್ಲಿ ದುಷ್ಟಶಕ್ತಿಗಳು ದೇಹದ ಮೇಲೆ ನಿಯಂತ್ರಣಪಡೆದುಕೊಂಡಿದ್ದಲ್ಲಿ ವಿಪರೀತ ಹಸಿವು ನಿರಂತರ ತಲೆನೋವು ಕನಸಿನ ಮೇಲೆ ದಾಳಿ,ನಿದ್ರಾಹೀನತೆ,ಕುರೂಪಿ ಹಾಗು ಭಯಾನಕ ವ್ಯಕ್ತಿಗಳು ನಿದ್ರಾವಸ್ಥೆಯಲ್ಲಿ.ಲೈಂಗಿಕದಾಳಿ ಅಥವ ಅತ್ಯಾಚಾರ. ಮನಸಿನ ಸ್ಥಿತಿಯಲ್ಲಿ ತೂರಾಟ,ಅನೈತಿಕಕೋಪ-ಕಿರಿ ಕಿರಿ-ಭಯ ಉನ್ಮಾದ ಅಸಹಜ ನಡವಳಿಕೆ. ನಿದ್ದೆಯಿಂದ ಭಯಗೊಂಡು ಎಚ್ಚರವಾಗುವಿಕೆ ಬೆವರುವುಕೆ ಜೋರಾದ ಉಸಿರಾಟ ಕಿರುಚಾಟ ಮೈಬಣ್ಣ ಕಪ್ಪಾಗುವುದು. ಸದಾ ಕಣ್ಣ ಮುಂದೆ ಹೊಗೆ ಬಂದಂತಾಗುವುದು.(ಭೂತಬಾದೆ ಇದ್ದಾಗ) ದೇಹಕ್ಕೆ ಸೂಜಿ ಚಿಚ್ಚಿದಂತಾಗುವುದು ಅಥವ ಮುಳಿನಿಂದ ಚುಚ್ಚಿದಂತಾಗುವುದು ಹಾಗು ಕುಟುಕು ನೋವು,ತುರಿಕೆ,ಉರಿ,ಅಥವ ಇಡೀದೇಹ ಬೆಂಕಿಯಲ್ಲಿ ಬಿದ್ದಹಾಗೆ.ಅನಿರೀಕ್ಷಿತವಾಗಿ ಅಪಘಾತಗಳು ಆಗುವುದು. ಮಲಗುವುದಕ್ಕೆ ಹೊರಡುವಾಗ ಅಥವ ಮಲಗಿ ಏಳುವಾಗ ನಡುಕ ಬರುವುದು/ನುಲಿಕೆ/ದೇಹ ಅಥವದೇಹದಾಂಗಗಳು ಅಲ್ಲಾಡುವುದು(ಹುಣ್ಣಿಮೆ/ಅಮಾವಾಸ್ಯೆಯಲ್ಲಿ ಹೆಚ್ಚಾಗಿ)ರಕ್ತದ ಕ್ಯಾನ್ಸರ್ ಅಥವ ಬೇರೇ ಇನ್ನಾವುದೇ ಕ್ಯಾನ್ಸರ್.ಮೂತ್ರಪಿಂಡವಿಪಲತೆ. ಮದ್ಯಪಾನ/ಇತರೆ ವಸ್ತುಗಳ ದುರ್ಬಳಕೆಯಿಂದ ಯಕೃತ್ (ಲಿವರ್)ವೈಪಲ್ಯತೆ.ಔಷದಿಗಳು ಕೆಲಸ ಮಾಡುವುದಿಲ್ಲವೈದ್ಯರು ಬಲವಾದ ಚಿಕಿತ್ಸೆಯನ್ನು ಬಳಸುವರು. ನಿಮ್ಮ ಕಣ್ಣುಮುಂದೆ ಕಪ್ಪು ಕಲೆಗಳು ಅಥವ ಗಾಡವಾದ ಅಥವ ಬೂದು ಬಣ್ಣದಹೊಗೆ/ವಿಚಿತ್ರ ಆಕಾರಗಳು ತೇಲುವ ಹಾಗೆ ಕಾಣಿಸುವುದು. ಗರ್ಭಿಣಿ ಸ್ತ್ರೀಯರಲ್ಲಿ ಹೊಟ್ಟೆಉಬ್ಬರಿಸುವುದು ಅಥವ ಅನ್ಯ ಬಾಗಗಳಲ್ಲಿ ಹೇಳಲಾಗದಂತಹ ಊತ ಗಡ್ಡೆ ಬಿಗಿತ ಬಾರ ಕುಗ್ಗುವಿಕೆವಿಶೇಷವಾಗಿ ಭುಜಗಳಲ್ಲಿ ಎದೆ ಗಂಟಲು/ಯಾವುದೇ ದೈಹಿಕಪರಿಶ್ರಮವಿಲ್ಲದೆ ಅನಿಯತ ಎದೆಬಡಿತದ ಚಲನೆ. ನಿರಂತರ ತಲೆನೋವು/ಮೈಗ್ರೇನ್(ತೀರ್ವತರವಾದ ತಲೆ ಶೂಲ) ನೀವು ಗಾದವಾದ ಬಣ್ಣಕ್ಕೆ ತಿರುಗುವಿರಿ/ವಿಷ ರಕ್ತದ ಹಾಗೆ ವಿಚಿತ್ರ ಬಣ್ಣವಾಗುವುದು. ತುರಿಕೆ,ಉರಿ,ಕೀಟಗಳ ಕುಟುಕ-ದೇಹದ ವಿವಿಧ ಭಾಗಗಳಲ್ಲಿ ಹರಿದಾಡಿದಂತೆ ಅನುಭವ. ಆತ್ಮಕ್ಕೆ ಸಂಬಂದಿಸಿದ ಲಕ್ಷಣಗಳು ಸಂಬಂಧಗಳಲ್ಲಿ ಸಮಸ್ಯೆಗಳು-ದಂಪತಿಗಳು ಮತ್ತು ಮಕ್ಕಳೊಂದಿಗೆ ಕಾದಾಟ. ನಿಮ್ಮ ಉದ್ಯೋಗ ಅಥವ ಆದಾಯ ಜೀವನದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಬಂಧು ಮಿತ್ರರು ಅಥವ ಸಹೋದ್ಯೋಗಿಗಳು ನಿಮ್ಮನ್ನ ನಂಬುವುದಿಲ್ಲ ಮತ್ತು ವಿಶ್ವಾಸವಿಡುವುದಿಲ್ಲ. ನೀವು ನೆರಳುಗಳನ್ನು ಕಾಣುವಿರಿ ಅಥವ ನಿಮ್ಮ ಹಿಂದೆ ಯಾರೋ ಇರುವ ಹಾಗೆ ಅಥವ ಯಾರದ್ದೋ ದ್ವನಿ ಕೇಳುತ್ತದೆ. ಗೋಡೆ,ಕನ್ನಡಿ, ಬಚ್ಚಲ ಮನೆ,ಮೇಲಟ್ಟ ಅಥವ ತಳಮನೆಯಲ್ಲಿ ಸಿಡಿತ/ಸ್ಪೋಟದ ಶಬ್ದಗಳು. ನಿಮ್ಮ ಸುತ್ತ ಅತಿರೇಕದ ಮಾನಸಿಕ ಚಟುವಟಿಕೆ. ಹಾವು,ಚೇಳು,ಜೇಡ ಅಶುಚಿಯಾದ ಶೌಚಾಲಯಗಳು,ಮತ್ತು ರುದ್ರ ಭೂಮಿಯ ಬಗ್ಗೆ ಕನಸುಗಳು. ಪಶು,ಪಕ್ಷಿ,ವಿಚಿತ್ರ ಚಟುವಟಿಕೆಗಳು,ಬೇರೆ ತರಹದ ಅಸಾದಾರಣ ವಿದ್ಯಮಾಮಾನಗಳು ಅಥವ ನಿಮ್ಮ ಸುತ್ತಮುತ್ತ ಅಥವ ಮುಂದಿರುವ ದೃಶ್ಯಗಳು ಕೇವಲ ನಿಮಗೆ ಕಾಣಿಸುವುದು. ಕಾಣಿಸಿದಂತವು ವಿವರಿಸಲಾಗದಂತಹ ಘಟನೆಗಳು. ಉದಾ:ಕಾಗೆಗಳು ಬಾಯಲ್ಲಿ ಮಾಂಸ ಕಚ್ಚಿಕೊಂಡಿರುವುದನ್ನು ಕಂಡರೆ ನಿಮ್ಮನ್ನು ಸಾಯಿಸಲು ಗಂಬೀರವಾದ ಕಪ್ಪು ಅಭಿಚಾರ ಮಾಡಲಾಗಿದೆ ಎಂಬ ಬಲವಾದ ಸೂಚನೆ ಆಗಿರುತ್ತದೆ. ಶರೀರವಿಲ್ಲದ ಆಕಾರಗಳು,ವಸ್ತ್ಗಳು ವಾಸ್ತವಿಕತೆಯ ಸಂವೇದನೆ ನೋಡುವುದು/ಕೇಳುವುದು ಹೃದಯಾಘಾತಗಳು/ಆಕಸ್ಮಿಕ ಮರಣ. ದೇಹ ಮತ್ತು ಮನಸ್ಸಿಗೆ ಸಂಬಂದಿಸಿದ ಲಕ್ಷಣಗಳು ಕನಸುಗಳು ಬತ್ತಿ ಹೋಗುವುದು.(ಕನಸೇ ಬೀಳದಿರುವುದು) ಬಿದ್ದರೂ ನೆನಪಲ್ಲಿ ಉಳಿಯದಂತಾಗುವುದು,ಮಲಗುವಾಗ ತೊಂದರೆಗಳು ಅಥವ ಅಡಚಣೆಗಳು. ಲೈಂಗಿಕ ಕನಸುಗಳು ನೀರಿಗೆ ಸಂಬಂದಪಟ್ಟ ಕನಸುಗಳು ಮೇಲಿಂದ ಬೀಳುವ ರೀತಿಯ ಕನಸು, ಹೊಲಸು ಸ್ನಾನಗೃಹಗಳು,ಪ್ರಾಣಿಗಳು,ಹಾವುಗಳು. ಇದ್ದಕ್ಕಿದಂತೆ ಭಯದಿಂದ ಅಥವ ತಣ್ಣಗಾದ ಅನುಭವದೀಮ್ದ ಬೆವರುವಿಕೆಯಿಂದ ಎಚ್ಚರವಾಗುವುದು. ತಲೆ ನೋವು ಬಿಟ್ಟು ಬಿಟ್ಟು ಬರುವುದು. ದೀರ್ಘಕಾಲದ ಸುಸ್ತು ಹಾಗು ದುರ್ಬಲತೆ. ಇದ್ದಕ್ಕಿದಂತೆ ನಿರಾಸಕ್ತಿಯ ಪ್ರಾರಂಬ ಅಥವ ಜೀವನದ ಮೇಲೆ ಜಿಪುಪ್ಸೆ. ವಿನಾಕಾರಣ ತೂಕ ಹೆಚ್ಚಾಗುವುದು ಮತ್ತು ಇಳಿಕೆಯಾಗುವುದು. ಅಜ್ಞಾತವಾದ ಭಯ-ಮಬ್ಬು ಆವರಿಸಿಕೊಳ್ಳುವುದು. ಪುರುಷರಿಗೆ ಸಂಬಂದಿಸಿದ ಲಕ್ಷಣಗಳು ಅತಿಯಾದ ಮದ್ಯ ಸೇವನೆ,ಧೂಮಪಾನ ಮತ್ತು ಮದ್ದು ಸೇವಿಸುವುದು,ಅತಿಯಾದ ಲೈಂಗಿಕಾಸಕ್ತಿ. ಕಾಮಾಸಕ್ತಿ ಕುಗ್ಗುವುದು,ಗುಪ್ತ ಜನನಾಂಗವು ಸಪ್ಪೆಯಾಗುವುದು,ಗಾತ್ರ ಕುಗ್ಗುವುದು. ಅತಿಯಾದ ಮನಸಿನ ಚಂಚಲತೆ ಮತ್ತು ಕೋಪ,ಜೀವನ ಮತ್ತು ಉದ್ಯೋಗದಲ್ಲಿ ಜಿಗುಪ್ಸೆ. ಶೀಘ್ರವೃದಾಪ್ಯ ಕೂದಲು ಬೆಳ್ಳಗಾಗಿ ಬೋಳಾಗುವಿಕೆ. ಸ್ತ್ರೀಯರಿಗೆ ಸಂಬಂದಿಸಿದ ಹೆಚ್ಚಿನ ಲಕ್ಷಣಗಳು ದೇಹಕ್ಕೆ ಸಂಬಂದಿಸಿದಂತೆ ಹೈಪೆರ್ಪಿಗ್ಮೆಂಟೇಶನ್,ತೊಡೆಗಳು,ಯೋನಿ ಮತ್ತು ತೋಳುಗಳು ಅಥವ ದೇಹದ ಇತರೆ ಭಾಗಗಳಲ್ಲಿ ಪರಚಿರುವ (ಕಪ್ಪು ನೀಲಿ) ಚಿನ್ಹೆಗಳು ಯೋನಿಯಲ್ಲಿ ಕಿರಿ ಕಿರಿಯ ಜೊತೆಗೆ ಲ್ಯುಕೋರ್ಹಿಯ ಋತು ಚಕ್ರವು ಸಂಪೂರ್ಣ ನಿಂತು ಹೋಗುವುದು,ಅನಿಯಮಿತ ಋತು ಚಕ್ರ ಯಾತನಾಮಯ ಋತು ಚಕ್ರ,ಋತು ಸ್ರಾವ,ದಟ್ಟವಾದ ರಕ್ತಸ್ರಾವ,ಬಿಳಿಸೆರಗು,ಇತ್ಯಾದಿ. ಹಾರ್ಮೋನ್ ಅಸಮತೋಲನ,ಅತೀಂದ್ರಿಯ ಅಡೆತಡೆಗಳಿಂದಗರ್ಭ ಧರಿಸಲು ಸಾದ್ಯವಾಗುವುದಿಲ್ಲ,ಹೀಗಾಗಿ ಆ ಹೆಣ್ಣು ಜೀವನ ವಿಡೀ ಭಂಜೆಯಾಗಿರುವಳು. ದಿಂಬನಾಳಗಳಲ್ಲಿ ನಿರ್ಬಂದನೆ ಮತ್ತು ಅಥವ ಗರ್ಭ ಹಿಡಿದಿಟ್ಟುಕೊಳ್ಳಲು ಆಗದೆ ಗರ್ಭಪಾತ. ವಿವರಿಅಲಾಗದ ಸೆಳೆತಗಳು ಮುಖದಲ್ಲಿ ಕಪ್ಪು ಮಚ್ಚೆಗಳು. ಭಾವನೆಗಳ ಏರಿಳಿತ ಮತ್ತು ನರದೌರ್ಬಲ್ಯ. ಶೀಘ್ರವೃದ್ದಪ್ಯಮತ್ತು ಕುರೂಪಿತನವು ಆಕರ್ಶಕ ವ್ಯಕ್ತಿತ್ವವನ್ನು ಆವರಿಸಿಕೊಳ್ಳುವುದು.(ಮುಖದ ಲಕ್ಷಣಗಳಲ್ಲಿ ವೇಗದ ವಿಕಾರತೆ) ಸ್ತನಗಳ ಗಾತ್ರದ ಕುಗ್ಗುವಿಕೆ,ಸ್ತನಕ್ಯಾನ್ಸರ್,ಕೂದಲು ಉದುರುವುಕೆಮತ್ತು ಬೆಳ್ಳಗಾಗುವುದು. ಮನಸಿಗೆ ಸಂಬಂದಿಸಿದಂತೆ: ವಿಪರೀತ ಭಯಮತ್ತು ಆತಂಕ(ಸನ್ನಿ) ಆತ್ಮಕ್ಕೆ ಸಂಬಂದಿಸಿದಂತೆ: ಕನಸಿನಲ್ಲಿ ಪ್ರೇತಗಳಿಂದ ಬಲಾತ್ಕಾರ ಹಾಗು ನೈಜ ಸಂಬೋಗೋದ್ರೇಕದ ಪರಾಕಾಷ್ಟತೆ,ವಿವರಿಸಲಾಗದ ಮೂರ್ಛೆರೋಗ ಅಥವ ಸೆಳೆತಗಳು. -sangraha

2 comments:

  1. ಇದಕ್ಕೆ ಪರಿಹಾರ ಏನು ತುಂಬಾ ಪರಿಣಾಮಕಾರಿಯಾದ ಪರಿಹಾರ ತಿಳಿಸಿ

    ReplyDelete
  2. ಥ್ಯಾಂಕ್ಸ್ ಒಳ್ಳೆ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು.

    ReplyDelete